March 8, 2021

|| ಶ್ರೀ ಶಿವ ಪಂಚಾಕ್ಷರ ನಕ್ಷತ್ರ ಮಾಲಾ ಸ್ತೋತ್ರಮ್ ||

*****************************************
ಶ್ರೀಮದಾತ್ಮನೇ ಗುಣೈಕಸಿಂಧವೇ ನಮ: ಶಿವಾಯ |
ಧಾಮಲೇಶಧೂತ ಕೋಕಬಂಧವೇ ನಮ: ಶಿವಾಯ |
ನಾಮಶೇಷಿತಾ ನಮಧ್ಭವಾಂದವೇ ನಮ: ಶಿವಾಯ |
ಪಾಮರೇತರ ಪ್ರಧಾನ ಬಂಧವೇ ನಮ: ಶಿವಾಯ ||೧||

ಭಾವಾರ್ಥ:-ಯೋಗ್ಯವಾದ ಮನಸ್ಸನ್ನು ಹೊಂದಿರುವ ಗುಣಾಸಾಗರನೇ ಶಿವನೇ ನಮಸ್ಕಾರಗಳು.ಸೂರ್ಯತನಯನಾಗಿರುವ ಯಮನ ಬಂಧುವೇ ಶಿವನೇ ನಮಸ್ಕಾರಗಳು.ನಾಮ ಸ್ಮರಣೆಯ ಮೂಲಕ ನಮಸ್ಕರಿಸುವವರ ಬಂಧುವೇ ಶಿವನೇ ನಮಸ್ಕಾರಗಳು.ಅತ್ಯಂತ ಮೂಢರಿಗೂ ಬಂಧುವಾಗಿರುವ ಶಿವನೇ ನಮಸ್ಕಾರಗಳು.

ಕಾಲಭೀತವಿಪ್ರಬಾಲಪಾಲತೇ ನಮ: ಶಿವಾಯ |
ಶೂಲಭಿನ್ನದುಷ್ಟದಕ್ಷ ಪಾಲ ನಮ: ಶಿವಾಯ |
ಮೂಲಕಾರಣಾಯ ಕಾಲಕಾಲ ನಮ: ಶಿವಾಯ |
ಪಾಲಯಾಧುನಾ ದಯಾಲವಾಲ ನಮ: ಶಿವಾಯ ||೨||

ಭಾವಾರ್ಥ:-ಯಮನ ಭೀತಿಗೊಳಗಾದ ಬಾಲಕ ನಚಿಕೇತನನ್ನು ರಕ್ಷಿಸಿದ ಶಿವನಿಗೆ ನಮಸ್ಕಾರಗಳು.ತ್ರಿಶೂಲದ ಘಾತದಿಂದ ತತ್ತರಿಸಿದ ದಕ್ಷನನ್ನು ಸಂರಕ್ಷಿಸಿದ ಶಿವನಿಗೆ ನಮಸ್ಕಾರಗಳು.ಸಮಸ್ತಕ್ಕೂ ಮೂಲಕಾರಣನೆನಿಸಿದ ಮಹಾಕಾಲ ಶಿವನಿಗೆ ನಮಸ್ಕಾರಗಳು.ದಯಾಸಾಗರನಾಗಿರುವ ಶಿವನೇ ನಮಸ್ಕಾರಗಳು.ನನ್ನನ್ನು ಪರಿಪಾಲಿಸುವವನಾಗು.

ಇಷ್ಟವಸ್ತು ಮುಖ್ಯದಾನ ಹೇತವೇ ನಮ: ಶಿವಾಯ |
ದುಷ್ಟದೈತ್ಯ ವಂಶ ಧೂಮಕೇತವೇನಮ: ಶಿವಾಯ |
ಸೃಷ್ಟಿರಕ್ಷಣಾಯ ಕಾಲಕಾಲ ತೇ ನಮ: ಶಿವಾಯ |
ಅಷ್ಟಮೂರ್ತಯೇ ವೃಷೇಂದ್ರ ಕೇತವೇನಮ: ಶಿವಾಯ ||೩||

ಭಾವಾರ್ಥ:-ಬೇಡಿದ ವಸ್ತುಗಳನ್ನು ಪಡೆಯಲು ಕಾರಣನಾಗುವ ಶಿವನಿಗೆ ನಮಸ್ಕಾರಗಳು.ದುಷ್ಟ ಅಸುರರ ವಂಶ ನಾಶಕ್ಕೆ ಕಾರಣನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.ಸಮಸ್ತ ಬ್ರಹ್ಮಾಂಡವನ್ನು ಸಂರಕ್ಷಿಸುವ ಶಿವನಿಗೆ ನನ್ನ ನಮಸ್ಕಾರಗಳು. ಎಂಟು ಸ್ವರೂಪವನ್ನು ಹೊಂದಿ ವೃಷಭವನ್ನು ಬಾವುಟವಾಗಿ ಹೊಂದಿರುವ ಶಿವನಿಗೆ ನನ್ನ ನಮಸ್ಕಾರಗಳು.

ಆಪದದ್ರಿ ಭೇಧ ಟಂಕ ಹಸ್ತ ತೇ ನಮ: ಶಿವಾಯ |
ಪಾಪಹಾರಿದಿವ್ಯಸಿಂಧುಮಸ್ತ ತೇ ನಮ: ಶಿವಾಯ |
ಪಾಪಧಾರಿಣೇ ಲಸನ್ನ ಮಸ್ತ ತೇ ನಮ: ಶಿವಾಯ |
ಶಾಪದೋಷ ಖಂಡ ಪ್ರಶಸ್ತ ತೇ ನಮ: ಶಿವಾಯ ||೪||

ಭಾವಾರ್ಥ:-ಅಗ್ರಗಣ್ಯ ಪರ್ವತವನ್ನು ತುಂಡರಿಸಿದ ಯೋಗ್ಯವಾಗಿರುವ ಹಸ್ತಗಳನ್ನು ಹೊಂದಿರುವ ಶಿವನಿಗೆ ನನ್ನ ನಮಸ್ಕಾರಗಳು.ಪಾಪಗಳನ್ನು ಹೋಗಲಾಡಿಸುವ ಸಾಗರದಂತಹಾ ಕೈಗಳನ್ನು ಹೊಂದಿರುವ ಶಿವನಿಗೆ ನನ್ನ ನಮಸ್ಕಾರಗಳು.ತಲೆಬಾಗದ ನಾಸ್ತಿಕರಿಗೆ ಆಪತ್ತುಗಳನ್ನು ನೀಡುವ ಶಿವನಿಗೆ ನನ್ನ ನಮಸ್ಕಾರಗಳು.ದೇವತಾ ಶಾಪದಿಂದ ಉದ್ಭವಿಸುವ ಸಮಸ್ತ ದೋಷಗಳನ್ನು ನಿವಾರಿಸುವುದರಲ್ಲಿ ಉತ್ತಮನಾದ ಶಿವನಿಗೆ ನನ್ನ ನಮಸ್ಕಾರಗಳು.

ವ್ಯೋಮಕೇಶ ದಿವ್ಯ ಭವ್ಯ ರೂಪ ತೇ ನಮ: ಶಿವಾಯ |
ಹೇಮಮೇದಿನೀಧರೇಂದ್ರ ಚಾಪ ತೇ ನಮ: ಶಿವಾಯ |
ನಾಮಮಾತ್ರ ದಗ್ಧ ಸರ್ವಪಾಪ ತೇ ನಮ: ಶಿವಾಯ |
ಕಾಮನೈಕತಾನ ಹೃದ್ದುರಾಪ ತೇ ನಮ: ಶಿವಾಯ ||೫||

ಭಾವಾರ್ಥ:-ಉತ್ತಮವಾಗಿರುವ ತಲೆಗೂದಲನ್ನು ಧರಿಸಿರುವ ಶಿವನಿಗೆ ನನ್ನ ನಮಸ್ಕಾರಗಳು. ಮನೋಹರವಾದ ಬೃಹತ್ ಶರೀರವನ್ನು ಹೊಂದಿರುವ ಶಿವನಿಗೆ ನನ್ನ ನಮಸ್ಕಾರಗಳು.ಬಂಗಾರದ ಬೆಟ್ಟದ ಹೊಳಪನ್ನು ಹೊಂದಿರುವ ಶಿವನಿಗೆ ನನ್ನ ನಮಸ್ಕಾರಗಳು.ನಾಮೋಚ್ಚಾರಣೆ ಮಾತ್ರದಿಂದ ಸಮಸ್ತ ಪಾಪಗಳನ್ನು ಭಸ್ಮ ಮಾಡುವ ಶಿವನಿಗೆ ನನ್ನ ನಮಸ್ಕಾರಗಳು.ಒಂದೇ ಗುರಿಯನ್ನು ಹೊಂದಿ ಶ್ರದ್ಧಾಭಕ್ತಿಯಿಂದ ಭಜಿಸಿದವರ ಮನೋಕ್ಲೇಶಗಳನ್ನು ಸಂಹರಿಸುವ ಶಿವನಿಗೆ ನನ್ನ ನಮಸ್ಕಾರಗಳು. ಶಿವನಿಗೆ ನನ್ನ ನಮಸ್ಕಾರಗಳು.

ಬ್ರಹ್ಮಮಸ್ತಕಾವಲೀ ನಿಬದ್ದತೇ ನಮ: ಶಿವಾಯ |
ಜಿಹ್ಮಗೇಂದ್ರಕುಂಡಲ ಪ್ರಸಿದ್ಧ ತೇ ನಮ: ಶಿವಾಯ |
ಬ್ರಹ್ಮಣೇ ಪ್ರಣೀತವೇದಪದ್ಧತೇ ನಮ: ಶಿವಾಯ |
ಜಿಂಹಕಾಲದೇಹದತ್ತ ಪದ್ಧತೇ ನಮ: ಶಿವಾಯ ||೬||

ಭಾವಾರ್ಥ:-ಬ್ರಹ್ಮನ ಶಿರವನ್ನು ಕತ್ತರಿಸಿದ ಶಿವನಿಗೆ ನನ್ನ ನಮಸ್ಕಾರಗಳು.ಸರ್ಪವನ್ನು ಕಿವಿಯಾಭರಣವಾಗಿ ಧರಿಸಿರುವ ಶಿವನಿಗೆ ನನ್ನ ನಮಸ್ಕಾರಗಳು.ವೇದೋಪನಿಷತ್ತುಗಳಿಂದ ಸ್ತುತಿಸಲ್ಪಡುವ ಪರಬ್ರಹ್ಮ ಸ್ವರೂಪನಾದ ಶಿವನಿಗೆ ನನ್ನ ನಮಸ್ಕಾರಗಳು.ಮಹಾಕಾಲ ಸ್ವರೂಪನಾದ ಒಡೆಯ ಶಿವನಿಗೆ ನನ್ನ ನಮಸ್ಕಾರಗಳು.

ಕಾಮನಾಶನಾಯ ಶುದ್ಧ ಕರ್ಮಣೇ ನಮ: ಶಿವಾಯ |
ಸಾಮಗಾನಜಾಯ ಮಾನಶರ್ಮಣೇ ನಮ: ಶಿವಾಯ |
ಹೇಮಕಾಂತಿಚಾಕಚಕ್ಯ ವರ್ಮಣೇ ನಮ: ಶಿವಾಯ |
ಸಾಮಜಾಸುರಾಂಗಲಬ್ಧ ಚರ್ಮಣೇ ನಮ: ಶಿವಾಯ ||೭||

ಭಾವಾರ್ಥ:-ಅಜ್ಞಾನವನ್ನು ನಾಶಗೊಳಿಸುವ ಶಿವನಿಗೆ ನನ್ನ ನಮಸ್ಕಾರಗಳು.ಶುದ್ಧ ಶರೀರದವನಾದ ಶಿವನಿಗೆ ನನ್ನ ನಮಸ್ಕಾರಗಳು.ಸಾಮಗಾನದಿಂದ ಸ್ತುತಿಸಲ್ಪಡುವ ಶಿವನಿಗೆ ನನ್ನ ನಮಸ್ಕಾರಗಳು.ಬಂಗಾರದಂತೆ ಶೋಭಿಸುವ ಶಿವನಿಗೆ ನನ್ನ ನಮಸ್ಕಾರಗಳು.ಗಜಾಸುರನ ಶರೀರದಿಂದ ದೊರಕಿದ ವಸನಧಾರಿಯಾದ ಶಿವನಿಗೆ ನನ್ನ ನಮಸ್ಕಾರಗಳು.

ಜನ್ಮ ಮೃತ್ಯು ಘೋರ ದು:ಖಹಾರಿಣೇ ನಮ: ಶಿವಾಯ |
ಚಿನ್ಮಯೈಕರೂಪದೇಹ ಧಾರಿಣೇ ನಮ: ಶಿವಾಯ |
ಮನ್ಮನೋರಥಾವಪೂರ್ತಿಕಾರಿಣೇ ನಮ: ಶಿವಾಯ |
ಸನ್ಮನೋಗತಾಯ ಕಾಮವೈರಿಣೇ ನಮ: ಶಿವಾಯ ||೮||

ಭಾವಾರ್ಥ:-ಜನ್ಮ ಮೃತ್ಯುಗಳ ಘೋರ ದು:ಖವನ್ನು ಪರಿಹರಿಸುವ ಶಿವನಿಗೆ ನನ್ನ ನಮಸ್ಕಾರಗಳು.ಚಿನ್ಮಯ ರೂಪದ ಶರೀರ ಹೊಂದಿರುವ ಶಿವನಿಗೆ ನನ್ನ ನಮಸ್ಕಾರಗಳು.ಮನೋಭಿಲಾಷೆಗಳನ್ನು ಈಡೇರಿಸುವ ಶಿವನಿಗೆ ನನ್ನ ನಮಸ್ಕಾರಗಳು.ಸಜ್ಜನರ ಮನದ ಕೆಟ್ಟ ಆಶಾಪಾಶಗಳನ್ನು ನಾಶಮಾಡುವ ಶಿವನಿಗೆ ನನ್ನ ನಮಸ್ಕಾರಗಳು.

ಯಕ್ಷ ರಾಜಬಂಧವೇ ದಯಾಲವೇ ನಮ: ಶಿವಾಯ |
ದಕ್ಷ ಪಾಣಿಶೋಭಿಕಾಂಚನಾಲವೇ ನಮ: ಶಿವಾಯ |
ಪಕ್ಷಿರಾಜವಾಹಹೃಚ್ಛಯಾಲವೇ ನಮ: ಶಿವಾಯ |
ಅಕ್ಷಿಪಾಲ ವೇದ ಪೋತತಾಲವೇ ನಮ: ಶಿವಾಯ ||೯||

ಭಾವಾರ್ಥ:-ಯಕ್ಷ ರಾಜನ ಬಂಧುವಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.ದಕ್ಷ ಯಜ್ಞ ನಾಶಕ ಶಿವನಿಗೆ ನನ್ನ ನಮಸ್ಕಾರಗಳು.ವಿಷ್ಣುವಿನ ಹೃತ್ಕಮಲದಲ್ಲಿರುವ ಶಿವನಿಗೆ ನನ್ನ ನಮಸ್ಕಾರಗಳು.ಅಕ್ಷಿಪಾಲನನ್ನು ವೇದಮಂತ್ರಗಳಿಂದ ಪಾವನಗೊಳಿಸಿದ ಶಿವನಿಗೆ ನನ್ನ ನಮಸ್ಕಾರಗಳು.

ದಕ್ಷ ಹಸ್ತ ನಿಷ್ಠ ಜಾತವೇದಸೇ ನಮ: ಶಿವಾಯ |
ಅಕ್ಷರಾತ್ಮನೇ ನಮದ್ಭಿಡೌಜಸೇ ನಮ: ಶಿವಾಯ |
ದೀಕ್ಷಿತ ಪ್ರಕಾಶಿತಾತ್ಮ ತೇಜಸೇ ನಮ: ಶಿವಾಯ |
ಅಕ್ಷರಾಜವಾಹ ತೇ ಸತಾಂ ಗತೇ ನಮ: ಶಿವಾಯ ||೧೦||

ಭಾವಾರ್ಥ:-ದಕ್ಷನ ಕೈಯಲ್ಲಿ ಯಜ್ಞ ಮಾಡಿಸಿದವನಾದ ಶಿವನಿಗೆ ನನ್ನ ನಮಸ್ಕಾರಗಳು.ಅವಿನಾಶಿಯಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.ಸಮಸ್ತ ದಿಸೆಗಳಿಗೆ ವ್ಯಾಪಿಸಿ ಪ್ರಕಾಶ ಬೀರುವ ಶಿವನಿಗೆ ನನ್ನ ನಮಸ್ಕಾರಗಳು.ನಂದಿವಾಹನನಾಗಿ ಸಜ್ಜನರಿಗೆ ಮೋಕ್ಷ ಪ್ರದಾಯಕನಾಗಿರುವ ಆ ಶಿವನಿಗೆ ನನ್ನ ನಮಸ್ಕಾರಗಳು.

ರಾಜತಾಜಲೇಂದ್ರಸಾನು ವಾಸಿನೇ ನಮ: ಶಿವಾಯ |
ರಾಜಮಾನನಿತ್ಯ ಮಂದಹಾಸಿನೇ ನಮ: ಶಿವಾಯ |
ರಾಜಕೋರ ಕಾವತಂಸಭಾಸಿನೇ ನಮ: ಶಿವಾಯ |
ರಾಜರಾಜಮಿತ್ರತಾಪ್ರಕಾಶಿನೇ ನಮ: ಶಿವಾಯ ||೧೧||

ಭಾವಾರ್ಥ:-ರಜತ ಪರ್ವತ ಶಿಖರ[ಹಿಮಾಲಯ ಪರ್ವತ ಶ್ರೇಣಿ]ದಲ್ಲಿ ನೆಲೆಯಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.ಅಗ್ರಗಣ್ಯನಾಗಿ ಸದಾ ಮಂದಹಾಸಭರಿತನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.ನಾಗರಾಜಕುವರರ ಭಯವನ್ನು ನಿವಾರಿಸುವವನಾದ ಶಿವನಿಗೆ ನನ್ನ ನಮಸ್ಕಾರಗಳು.ದೇವೇಂದ್ರ ಸಾಮ್ರಾಟನ ಮಿತ್ರ ಶಿವನಿಗೆ ನನ್ನ ನಮಸ್ಕಾರಗಳು.

ದೀನಮಾನವಾಲಿಕಾಮಧೇನವೇ ನಮ: ಶಿವಾಯ |
ಸೂನಬಾಣದಾಹಕೃತ್ಪ್ಕ್ರಶಾನವೇ ನಮ: ಶಿವಾಯ | 
ಸ್ವಾನುರಾಗಭಕ್ತ ರತ್ನಸಾನವೇ ನಮ: ಶಿವಾಯ |
ದಾನವಾಂಧಕಾರಚಂಡ ಭಾನವೇ ನಮ: ಶಿವಾಯ ||೧೨||

ಭಾವಾರ್ಥ:-ಶರಣಾಗತರ ಮಾನ ರಕ್ಷಣೆಯ ಕಾಮಧೇನುವಿನಂತಿರುವ ಶಿವನಿಗೆ ನನ್ನ ನಮಸ್ಕಾರಗಳು.ಮನ್ಮಥದಹನಾಗ್ನಿಯ ಉರಿಯನ್ನು ಶಾಂತಗೊಳಿಸಿದವನಾದ ಶಿವನಿಗೆ ನನ್ನ ನಮಸ್ಕಾರಗಳು.ಒಲುಮೆಯಿಂದ ಆರಾಧಿಸುವ ಯೋಗ್ಯ ಭಕ್ತರ ಸಂರಕ್ಷಕನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.ಅಸುರರ ಅಜ್ಞಾನಾಂಧಕಾರವನ್ನು ತೊಲಗಿಸುವ ಶಿವನಿಗೆ ನನ್ನ ನಮಸ್ಕಾರಗಳು.

ಸರ್ವಮಂಗಲಾ ಕುಚಾಗ್ರಶಾಯಿನೇ ನಮ: ಶಿವಾಯ |
ಸರ್ವದೇವತಾಗಣಾತಿಶಾಯಿನೇ ನಮ: ಶಿವಾಯ |
ಪೂರ್ವ ದೇವನಾಶ ಸಂವಿಧಾಯಿನೇನಮ: ಶಿವಾಯ |
ಸರ್ವ ಮನ್ಮನೋಜಭಂಗದಾಯಿನೇ ನಮ: ಶಿವಾಯ ||೧೩||

ಭಾವಾರ್ಥ:-ಸಮಸ್ತ ಮಂಗಲದಾಯಿನಿಯಾದ ಪಾರ್ವತಿಯ ಎದೆಯ ಮೇಲೆ ಪವಡಿಸಿರುವ ಶಿವನಿಗೆ ನನ್ನ ನಮಸ್ಕಾರಗಳು.ಸಮಸ್ತ ದೇವತಾ ಸಮೂಹದ ಅಗ್ರಗಣ್ಯನಾಗಿರುವವನಾದ ಶಿವನಿಗೆ ನನ್ನ ನಮಸ್ಕಾರಗಳು.ಸೂರ್ಯದೇವನ ಬೇಗೆಯನ್ನು ಶಾಂತಗೊಳಿಸುವ ಶಿವನಿಗೆ ನನ್ನ ನಮಸ್ಕಾರಗಳು.ಕಾಮದೇವನನ್ನು ಸಂಹರಿಸಿದವನಾದ ಶಿವನಿಗೆ ನನ್ನ ನಮಸ್ಕಾರಗಳು.

ಸ್ತೋತ್ರಭಕ್ತಿತೋsಪಿ ಭಕ್ತ ಪೋಷಿಣೇ ನಮ: ಶಿವಾಯ |
ಮಾಕರಂದಸಾರವರ್ಷಿಭಾಷಿಣೇ ನಮ: ಶಿವಾಯ |
ಏಕಬಿಲ್ವದಾನತೋsಪಿ ತೊಷಿಣೇ ನಮ: ಶಿವಾಯ |
ನೈಕಜನ್ಮ ಪಾಪಜಾಲ ಶೋಷಿಣೇ ನಮ: ಶಿವಾಯ ||೧೪||

ಭಾವಾರ್ಥ:-ಕಿಂಚಿತ್ ಭಕ್ತಿ ಮಾಡಿದರೂ ಕೂಡಾ ಭಕ್ತರನ್ನು ಸಂರಕ್ಷಿಸುವವನಾದ ಶಿವನಿಗೆ ನನ್ನ ನಮಸ್ಕಾರಗಳು.ಅಮೃತಸಮಾನವಾದ ಹಿತವಚನದ ಮಳೆಗರೆಯುವವನಾದ ಶಿವನಿಗೆ ನನ್ನ ನಮಸ್ಕಾರಗಳು.ಏಕ ಮಾತ್ರ ಬಿಲ್ವ ದಳವನ್ನು ಅರ್ಪಿಸಿದರೂ ಮುದಗೊಳ್ಳುವ ಶಿವನಿಗೆ ನನ್ನ ನಮಸ್ಕಾರಗಳು.ಪೂರ್ವ ಜನ್ಮ ಕೃತ ಪಾಪಸಮೂಹಗಳ ಪರಿಹಾರಕನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.

ಸರ್ವಜೀವರಕ್ಷಣೈಕಶೀಲಿನೇ ನಮ: ಶಿವಾಯ |
ಪಾರ್ವತೀಪ್ರಿಯಾಯ ಭಕ್ತಪಾಲಿನೇ ನಮ: ಶಿವಾಯ |
ದುರ್ವಿದಗ್ಧ ದೈತ್ಯ ಸೈನ್ಯದಾರಿಣೇ ನಮ: ಶಿವಾಯ |
ಶರ್ವರೀಶಧಾರಿಣೇ ಕಪಾಲಿನೇ ನಮ: ಶಿವಾಯ ||೧೫||

ಭಾವಾರ್ಥ:-ಸಮಸ್ತ ಜೀವ ಕೋಟಿಗಳ ಸಂರಕ್ಷಣೆ ಮಾಡುವ ಗುಣ ಹೊಂದಿರುವ ಶಿವನಿಗೆ ನನ್ನ ನಮಸ್ಕಾರಗಳು.ಪಾರ್ವತಿ ದೇವಿಯ ಪ್ರಿಯನಾಗಿ ಭಕ್ತ ಪರಿಪಾಲಕನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.ಮದದಿಂದ ಸೊಕ್ಕಿದ ದೈತ್ಯರ ಸೇನಾಸಮೂಹದ ನಾಶಕನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.ನಾಗಾಭರಣನಾಗಿ ಕಪಾಲಧರನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.

ಪಾಹಿಮಾಮುಮಾಮನೋಜ್ಞ ದೇಹ ತೇ ನಮ: ಶಿವಾಯ |
ದೇಹಿ ಮೇ ವರಂ ಸಿತಾದ್ರಿಗೇಹ ತೇ ನಮ: ಶಿವಾಯ |
ಮೋಹಿತರ್ಷಿಕಾಮಿನೀ ಸಮೂಹ ತೇ ನಮ: ಶಿವಾಯ |
ಸ್ನೇಹಿತ ಪ್ರಸನ್ನ ಕಾಮದೋಹ ತೇ ನಮ: ಶಿವಾಯ ||೧೬||

ಭಾವಾರ್ಥ:-ಉಮಾದೇವಿಗೆ ಸಂತಸವನ್ನೀಯುವ ಶರೀರವನ್ನು ಹೊಂದಿರುವ ಶಿವನಿಗೆ ನನ್ನ ನಮಸ್ಕಾರಗಳು. ಬೆಳ್ಳಿ ಬೆಟ್ಟದ ಮೇಲೆ ನೆಲೆಯಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.ನಲ್ಲೆಯ ಮೋಹಕ್ಕೊಳಗಾಗಿ ವೇಷಧಾರಿಯಾದ ಶಿವನಿಗೆ ನನ್ನ ನಮಸ್ಕಾರಗಳು.ಆಪ್ತರ ಪಾಲಿಗೆ ದಯೆಯುಳ್ಳವನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.

ಮಂಗಲಪ್ರದಾಯ ಗೋತುರಂಗ ತೇ ನಮ: ಶಿವಾಯ |
ಗಂಗಯಾ ತರಂಗಿತೋತ್ತಮಾಂಗ ತೇ ನಮ: ಶಿವಾಯ |
ಸುರಂಗ ಪ್ರವೃತ್ತ ವೈರಿ ಭಂಗ ತೇ ನಮ: ಶಿವಾಯ |
ಅಂಗರಾಜಯೇ ಕುರೇಕುರಂಗ ತೇ ನಮ: ಶಿವಾಯ ||೧೭||

ಭಾವಾರ್ಥ:-ಗೋವು ಕುದುರೆಗಳನ್ನು ರಕ್ಷಿಸುತ್ತಾ ಶುಭವನ್ನು ಕರುಣಿಸುವ ಶಿವನಿಗೆ ನನ್ನ ನಮಸ್ಕಾರಗಳು.ಸುಂದರ ದೇಹದವನಾಗಿ ಭಾಗೀರಥಿಯನ್ನು ಶಿರದಲ್ಲಿ ಧರಿಸಿರುವವನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.ಸಾಗರದದಿಂದ ಉದ್ಭವಿಸಿದ ವೈರಿಯನ್ನು ನಾಶಗೊಳಿಸಿದ ಶಿವನಿಗೆ ನನ್ನ ನಮಸ್ಕಾರಗಳು.ಚಿಗರೆಯ ಚರ್ಮದಿಂದ ಶರೀರವನ್ನು ಅಲಂಕರಿಸಿಕೊಂಡಿರುವ ಶಿವನಿಗೆ ನನ್ನ ನಮಸ್ಕಾರಗಳು.

ಈಹಿತಕ್ಷಣಾಪ್ರದಾನಹೇತವೇ ನಮ: ಶಿವಾಯ |
ಅಹಿತಾಗ್ನಿ ಪಾಲಕೋಕ್ಷ ಕೇತವೇ ನಮ: ಶಿವಾಯ |
ದೇಹಕಾಂತಿಧೂತ ರೌಪ್ಯ ಧಾತವೇ ನಮ: ಶಿವಾಯ |
ಗೇಹದು:ಖ ಪುಂಜಧೂಮಕೇತವೇ ನಮ: ಶಿವಾಯ ||೧೮||

ಭಾವಾರ್ಥ:-ಕಂಡಕೂಡಲೇ ಆಶೆಗಳನ್ನು ಈಡೇರಿಸುವ ಶಿವನಿಗೆ ನನ್ನ ನಮಸ್ಕಾರಗಳು.ಪ್ರಳಯಾಗ್ನಿಗೆ ಕಾರಣವಾಗುವ ಶಿವನಿಗೆ ನನ್ನ ನಮಸ್ಕಾರಗಳು.ರಜತಕಣದಂತೆ ಶರೀರದ ಹೊಳಪುಳ್ಳ ಶಿವನಿಗೆ ನನ್ನ ನಮಸ್ಕಾರಗಳು.ಶರೀರದಲ್ಲಿನ ದು:ಖ ಸಮೂಹಗಳಿಗೆ ಧೂಮಕೇತುವಿನೋಪಾದಿಯಲ್ಲಿ ವಿನಾಶಕರನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.

ತ್ರ್ಯಕ್ಷದೀನಸತ್ಕೃಪಾಕಟಾಕ್ಷ ತೇ ನಮ: ಶಿವಾಯ |
ದಕ್ಷ ಸಪ್ತ ತಂತುನಾಶದಕ್ಷ ತೇ ನಮ: ಶಿವಾಯ |
ಋಕ್ಷರಾಜಬಾನುಪಾವಕಾಕ್ಷ ತೇ ನಮ: ಶಿವಾಯ |
ರಕ್ಷ ಮಾಂ ಪ್ರಪನ್ನ ಮಾತ್ರ ರಕ್ಷ ತೇ ನಮ: ಶಿವಾಯ ||೧೯||

ಭಾವಾರ್ಥ:-ಭಕ್ತನಾದ ತ್ರ್ಯಕ್ಷನನ್ನು ಅನುಗ್ರಹಿಸಿದವನಾದ ಶಿವನಿಗೆ ನನ್ನ ನಮಸ್ಕಾರಗಳು.ದಕ್ಷರಾಜನ ಏಳು ಸಂತತಿಯನ್ನು ನಾಶ ಮಾಡುವುದರಲ್ಲಿ ಸಮರ್ಥನೆನಿಸಿದ ಶಿವನಿಗೆ ನನ್ನ ನಮಸ್ಕಾರಗಳು.ಋಷ್ಯ ಪರ್ವತದ ಮೇಲ್ಭಾಗದಲ್ಲಿ ಅಗ್ನಿಯೋಪಾದಿಯಲ್ಲಿ ಶೋಭಾಯಮಾನನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.ಆರ್ತ ರಕ್ಷಕನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.

ನ್ಯಂಕುಪಾಣಯೇ ಶಿವಂಕರಾಯ ತೇ ನಮ: ಶಿವಾಯ |
ಸಂಕಟಾಬ್ಧಿತೀರ್ಣಕಿಂಕರಾಯ ತೇ ನಮ: ಶಿವಾಯ |
ಪಂಕಭೀಷಿತಾಭಯಂಕರಾಯ ತೇ ನಮ: ಶಿವಾಯ |
ಪಂಕಜಾನನಾಯ ಶಂಕರಾಯ ತೇ ನಮ: ಶಿವಾಯ ||೨೦||

ಭಾವಾರ್ಥ:-ಕಪಾಲವನ್ನು ಹಸ್ತದಲ್ಲಿ ಹಿಡಿದುಕೊಂಡಿರುವವ ಶಿವನಿಗೆ ನನ್ನ ನಮಸ್ಕಾರಗಳು. ದು:ಖಸಾಗರವನ್ನು ದಾಟುವ ಸೇತುವಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.ಸಂಸಾರವೆನ್ನುವ ಘೋರ ಕೆಸರನ್ನು ತೊಳೆಯುವವನಾದ ಶಿವನಿಗೆ ನನ್ನ ನಮಸ್ಕಾರಗಳು.ತಾವರೆಯಂತಹಾ ಮೊಗವನ್ನು ಹೊಂದಿರುವ ಶಿವನಿಗೆ ನನ್ನ ನಮಸ್ಕಾರಗಳು.

ಕರ್ಮಪಾಶನಾಶ ನೀಲಕಂಠ ತೇ ನಮ: ಶಿವಾಯ |
ಶರ್ಮದಾಯ ನರ್ಮಭಸ್ಮ ಕಂಠ ತೇ ನಮ: ಶಿವಾಯ |
ನಿರ್ಮಮಷ್ಮಿ ಸೇವಿತೋಪಕಂಠ ತೇ ನಮ: ಶಿವಾಯ |
ಕುರ್ಮಹೇ ನತೀರ್ನಮದ್ವಿಕುಂಠ ತೇ ನಮ: ಶಿವಾಯ ||೨೧||

ಭಾವಾರ್ಥ:-ಕರ್ಮಗಳೆನ್ನುವ ಹಗ್ಗವನ್ನು ನಾಶಮಾಡುವವನಾದ ನೀಲಕಂಠನಾದ ಶಿವನಿಗೆ ನನ್ನ ನಮಸ್ಕಾರಗಳು.ಉತ್ತಮವಾಗಿರುವ ಭಸ್ಮವನ್ನು ಧರಿಸಿ ಸುಖವನ್ನು ದಯಪಾಲಿಸುವ ಶಿವನಿಗೆ ನನ್ನ ನಮಸ್ಕಾರಗಳು.ಅಹಂಕಾರ ರಹಿತರಾಗಿರುವ ಋಷಿ ಮುನಿಗಳಿಂದ ಸೇವೆಯನ್ನು ಸ್ವೀಕರಿಸುತ್ತಿರುವ ಶಿವನಿಗೆ ನನ್ನ ನಮಸ್ಕಾರಗಳು.ಆರ್ತರನ್ನು ರಕ್ಷಿಸಿ ಪರಿಪಾಲಿಸುವ ಶಿವನಿಗೆ ನನ್ನ ನಮಸ್ಕಾರಗಳು.

ವಿಷ್ಟಪಾಧಿಪಾಯ ನಮ್ರ ವಿಷ್ಣವೇ ನಮ: ಶಿವಾಯ |
ಶಿಷ್ಟವಿಪ್ರಹೃದ್ಗುಹಾಚರಿಷ್ಟವೇ ನಮ: ಶಿವಾಯ |
ಇಷ್ಟ ವಸ್ತು ನಿತ್ಯ ತುಷ್ಟ ಜಿಷ್ಣವೇ ನಮ: ಶಿವಾಯ |
ಕಷ್ಟನಾಶನಾಯ ಲೋಜಿಷ್ಣವೇ ನಮ: ಶಿವಾಯ ||೨೨||

ಭಾವಾರ್ಥ:-ವೈಕುಂಠಾಧಿಪತಿ ಮಹಾವಿಷ್ಣುವಿನಿಂದ ಪ್ರಣಾಮಗಳನ್ನು ಸ್ವೀಕರಿಸುತ್ತಿರುವ ಶಿವನಿಗೆ ನನ್ನ ನಮಸ್ಕಾರಗಳು.ಜ್ಞಾನಿಗಳಾದ ಬ್ರಾಹ್ಮಣರ ಹೃದಯ ಮಂದಿರದಲ್ಲಿ ಸಂಚರಿಸುತ್ತಿರುವ ಶಿವನಿಗೆ ನನ್ನ ನಮಸ್ಕಾರಗಳು.ಇಷ್ಟ ಪಡುವ ವಸ್ತುಗಳನ್ನು ಅನುದಿನವೂ ಅರ್ಪಿಸುತ್ತಿರುವುದರಿಂದ ಪ್ರಸನ್ನನಾಗುವ ಮನಸ್ಸನ್ನು ಹೊಂದಿರುವ ಶಿವನಿಗೆ ನನ್ನ ನಮಸ್ಕಾರಗಳು.ಕಷ್ಟಗಳನ್ನು ಪರಿಹರಿಸುವ ಕೃಪಾಸಾಗರ ಶಿವನಿಗೆ ನನ್ನ ನಮಸ್ಕಾರಗಳು.

ಅಪ್ರಮೇಯ ದಿವ್ಯ ಸುಪ್ರಭಾವ ತೇ ನಮ: ಶಿವಾಯ |
ಸತ್ಪ್ರಪನ್ನ ರಕ್ಷಸ್ವಭಾವ ತೇ ನಮ: ಶಿವಾಯ |
ಸ್ವಪ್ರಕಾಶ ನಿಸ್ತುಲಾನುಭಾವ ತೇ ನಮ: ಶಿವಾಯ |
ವಿಪ್ರಡಿಂಭದರ್ಶಿತಾರ್ದ್ರ ಭಾವ ತೇ ನಮ: ಶಿವಾಯ ||೨೩||

ಭಾವಾರ್ಥ:-ಸಾಮನ್ಯರ ಅರಿವಿಗೆ ನಿಲುಕಲಾರದ ದಿವ್ಯಪ್ರಕಾಶವನ್ನು ಹೊಂದಿರುವ ಶಿವನಿಗೆ ನನ್ನ ನಮಸ್ಕಾರಗಳು.ಸದ್ಭಕ್ತರನ್ನು ಪರಿಪಾಲಿಸುತ್ತಾ ಸ್ವಯಂಪ್ರಭೆಯನ್ನು ಹೊಂದಿರುವ ಶಿವನಿಗೆ ನನ್ನ ನಮಸ್ಕಾರಗಳು.ಅಳತೆಗೆ ನಿಲುಕದ ಸಾಮರ್ಥ್ಯವುಳ್ಳವನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.ಬ್ರಾಹ್ಮಣರ ಪಾಲಿನ ದಯಾಸಾಗರನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.

ಸೇವಕಾಯ ಮೇ ಮೃಡ ಪ್ರಸೀದ ತೇ ನಮ: ಶಿವಾಯ |
ಭಾವಲಭ್ಯ ತಾವಕಪ್ರಸಾದ ತೇ ನಮ: ಶಿವಾಯ |
ಪಾವಕಾಕ್ಷ ದೇವಪೂಜ್ಯಪಾದ ತೇ ನಮ: ಶಿವಾಯ |
ತಾವಕಾಂಘ್ರಿ ಭಕ್ತ ದತ್ತ ಮೋದ ತೇ ನಮ: ಶಿವಾಯ ||೨೪||

ಭಾವಾರ್ಥ:-ಸೇವಕನಾಗಿರುವ ನನಗೆ ಪ್ರಸನ್ನನಾಗುವ ಈಶ್ವರನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.ಅಗ್ನಿಯನ್ನು ಕಣ್ಣಲ್ಲಿ ಧರಿಸಿ ಭಕ್ತಿ ಭಾವದಿಂದ ಶರಣಾಗುವರಿಗೆ ಅನುಗ್ರಹಿಸುವ ಶಿವನಿಗೆ ನನ್ನ ನಮಸ್ಕಾರಗಳು.ಸಮಸ್ತ ದೇವಾನುದೇವತೆಗಳಿಂದ ಪೂಜಿಸಿಗೊಂಬ ಪರಮಪಾವನ ಚರಣಗಳನ್ನು ಹೊಂದಿರುವ ಶಿವನಿಗೆ ನನ್ನ ನಮಸ್ಕಾರಗಳು.ತನ್ನ ಪಾದಾರವಿಂದಗಳ ಆಶ್ರಯಹೊಂದಿದ ಭಕ್ತರಿಗೆ ಸುಖವನ್ನು ಅನುಗ್ರಹಿಸುವ ಶಿವನಿಗೆ ನನ್ನ ನಮಸ್ಕಾರಗಳು.

ಭುಕ್ತಿಮುಕ್ತಿ ದಿವ್ಯ ಭೋಗದಾಯಿನೇ ನಮ: ಶಿವಾಯ |
ಶಕ್ತಿಕಲ್ಪಿತ ಪ್ರಪಂಚಭಾಗಿನೇ ನಮ: ಶಿವಾಯ |
ಭಕ್ತಸಂಕಟಾಪಹಾರಯೋಗಿನೇ ನಮ: ಶಿವಾಯ |
ಯುಕ್ತಸನ್ಮನ:ಸರೋಜಯೋಗಿನೇ ನಮ: ಶಿವಾಯ ||೨೫||

ಭಾವಾರ್ಥ:-ಶ್ರೇಷ್ಟವಾಗಿರುವಂತಹ ಸೌಭಾಗ್ಯ ಮತ್ತು ಮೋಕ್ಷತ್ವವನ್ನು ಕರುಣಿಸುವ ಶಿವನಿಗೆ ನನ್ನ ನಮಸ್ಕಾರಗಳು.ಸ್ವಂತ ಶಕ್ತಿಯಿಂದ ಬ್ರಹ್ಮಾಂಡವನ್ನೇ ಸೃಷ್ಟಿಸಿದ ಶಿವನಿಗೆ ನನ್ನ ನಮಸ್ಕಾರಗಳು. ಭಕ್ತರ ಸಂಕಷ್ಟಗಳನ್ನು ಪರಿಹರಿಸುವ ಆತ್ಮಸಾಧಕ ಶಿವನಿಗೆ ನನ್ನ ನಮಸ್ಕಾರಗಳು.ತಪಸ್ವಿಗಳ ಮನೋಹರವಾದ ಮನಸ್ಸಿನ ತಾವರೆಯಂತಿರುವ ಶಿವನಿಗೆ ನನ್ನ ನಮಸ್ಕಾರಗಳು.

ಅಂತಕಾಂತಕಾಯ ಪಾಪಹಾರಿಣೇ ನಮ: ಶಿವಾಯ |
ಶಾಂತಮಾಯ ದಂತಿಚರ್ಮಧಾರಿಣೇ ನಮ: ಶಿವಾಯ |
ಸಂತತಾಶ್ರಿತವ್ಯಥಾವಿದಾರಿಣೇ ನಮ: ಶಿವಾಯ |
ಜಂತುಜಾತನಿತ್ಯ ಸೌಖ್ಯಕಾರಿಣೇ ನಮ: ಶಿವಾಯ ||೨೬||

ಭಾವಾರ್ಥ:-ಯಮನಿಗೇ ಯಮನಾಗಿ ಪಾಪಪರಿಹಾರಕನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.ಶಾಂತಮಾಯವೆನ್ನುವ ಆನೆಯ ಚರ್ಮವನ್ನು ಧರಿಸಿದವನಾದ ಶಿವನಿಗೆ ನನ್ನ ನಮಸ್ಕಾರಗಳು.ಸತತವಾಗಿ ತನ್ನನ್ನು ಆಶ್ರಯಿಸಿದವರ ಸಂಕಷ್ಟಗಳನ್ನು ಹೋಗಲಾಡಿಸುವ ಶಿವನಿಗೆ ನನ್ನ ನಮಸ್ಕಾರಗಳು.ಸಮಸ್ತ ಜೀವಿಗಳಿಗೆ ಎಡೆಬಿಡದೆ ಸೌಭಾಗ್ಯವನ್ನು ದಯಪಾಲಿಸುವ ಶಿವನಿಗೆ ನನ್ನ ನಮಸ್ಕಾರಗಳು.

ಶೂಲಿನೇ ನಮೋನಮ:ಕಪಾಲಿನೇ ನಮ: ಶಿವಾಯ |
ಪಾಲಿನೇ ವಿರಿಂಚಿತುಂಡಮಾಲಿನೇ ನಮ: ಶಿವಾಯ |
ಲೀಲಿನೇ ವಿಶೇಷರುಂಡ ಮಾಲಿನೇ ನಮ: ಶಿವಾಯ |
ಶೀಲಿನೇ ನಮ: ಪ್ರಪುಣ್ಯಶಾಲಿನೇ ನಮ: ಶಿವಾಯ ||೨೭||

ಭಾವಾರ್ಥ:-ತ್ರಿಶೂಲಧರನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.ಬ್ರಹ್ಮನ ಕಪಾಲವನ್ನು ಧರಿಸಿಕೊಂಡಿರುವ ಶಿವನಿಗೆ ನನ್ನ ನಮಸ್ಕಾರಗಳು.ಸಮಸ್ತರ ರಕ್ಷಕನಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.ಚತುರ್ಮುಖ ಬ್ರಹ್ಮನ ರುಂಡವನ್ನು ಮಾಲೆಯಾಗಿ ಧರಿಸಿರುವ ಶಿವನಿಗೆ ನನ್ನ ನಮಸ್ಕಾರಗಳು.ಲೀಲಾ ವಿಶೇಷನಾಗಿರುವ ರುಂಡಮಾಲಾಧರ ಶಿವನಿಗೆ ನನ್ನ ನಮಸ್ಕಾರಗಳು.ಸರ್ವಗುಣ ಸಂಪನ್ನ ಶಿವನಿಗೆ ನನ್ನ ನಮಸ್ಕಾರಗಳು.ಅಪರಿಮಿತ ಮಹಾಪುಣ್ಯಶಾಲಿಯಾಗಿರುವ ಶಿವನಿಗೆ ನನ್ನ ನಮಸ್ಕಾರಗಳು.

ಶಿವ ಪಂಚಾಕ್ಷರ ಮುದ್ರಾಂ |
ಚತುಷ್ಟದೋಲ್ಲಾಸ ಪದ್ಮಮಣಿಘಟಿತಾ ||
ನಕ್ಷತ್ರಮಾಲಿಕಾಮಿಹ |
ದಧದುಪಕಂಠಂನರೋ ಭವೇತ್ಸೋಮ: ||೨೮||

ಭಾವಾರ್ಥ:-"ಓಂ ನಮ: ಶಿವಾಯ"ವೆಂಬ ಶಿವಪಂಚಾಕ್ಷರಗಳಿಂದ ಕೂಡಿರುವ ಕಮಲಮಣಿಯಂತೆ ಸಂತಸದಾಯಕವಾಗಿರುವ ನಾಲ್ಕು ಪಂಕ್ತಿಗಳುಳ್ಳ ಈ ನಕ್ಷತ್ರಮಾಲಿಕೆಯ ಹಾರವನ್ನು ಯಾವಾತನು ಕಂಠದಲ್ಲಿ ಧರಿಸುವನೋ [ಕಂಠಸ್ಥನಾಗಿರುವನೋ] ಆತನು ಚಂದ್ರನೋಪಾದಿಯಲ್ಲಿ ವಿರಾಜಿಸುತ್ತಾ ಸಂತಸದಿಂದ ಇರುವನು.
*********************************************************************
|| ಇತಿ ಶ್ರೀ ಶಂಕರಾಚಾರ್ಯ ವಿರಚಿತ ಶ್ರೀ ಶಿವಪಂಚಾಕ್ಷರ ನಕ್ಷತ್ರ ಮಾಲಾಸ್ತೋತ್ರಮ್ ||
|| ಈ ತೆರನಾಗಿ ಶ್ರೀ ಶಂಕರಾಚಾರ್ಯರಿಂದ ರಚಿಸಲ್ಪಟ್ಟ ಶ್ರೀ ಶಿವಪಂಚಾಕ್ಷರ ನಕ್ಷತ್ರ ಮಾಲಾ ಸ್ತೋತ್ರಗಳ ಭಾವಾರ್ಥವಾಗಿದೆ. ||
*********************************************************************

No comments:

Post a Comment

If you have any doubts. please let me know...