#ಮೌನಯಾನದಿಂದ_ಮೌನದಾನದೆಡೆಗೆ
ಸತ್ತ ನಂತರವೂ ದೇಹದ ಭಾಗಗಳಲ್ಲಿ ಭಾವಕೋಶಗಳು ಬದುಕಿರತ್ತಾ?
ಹೆಣ ಸುಡೋವಾಗಲೂ ಹೆಣ್ಣಾದರೆ ಸೊಂಟದ ಪ್ರದೇಶ ಸುಡೋದು ನಿಧಾನವಂತೆ. ಗಂಡಾದರೆ ಎದೆಯ ಭಾಗ ಸುಡೋದು ನಿಧಾನವಂತೆ.
ಕಾರಣ ಬಹಳ ವಿಚಿತ್ರ. ಯಾವುದು ಎಲ್ಲವನ್ನೂ ಭರಿಸಿ ಬದುಕಬೇಕಾಗತ್ತೋ ಅದು ಸಾವಿನ ನಂತರವೂ ಖಾಲಿ ಆಗಿರುವುದಿಲ್ಲವಂತೆ. ಹಾಗಾಗಿ ಅಗ್ನಿಯ ನಾಲಿಗೆಯ ಉರಿಗೂ ಆ ಪ್ರದೇಶಗಳು ಸುಡುವುದು ನಿಧಾನವಂತೆ.
ಭಾವವನ್ನೇ ಬಸಿರಾಗಿ ಹೆರುವ ಹೆಣ್ಣು ಸಾಮಾನ್ಯವಾಗಿ ಲೋಕದ ಲೆಕ್ಕಾಚಾರಗಳ ಗಣಿತದಿಂದ ದೂರವೇ.
ಪ್ರತಿ ಋತುಚಕ್ರದಲ್ಲಿ ಹೊಸತನದ ನಿರೀಕ್ಷೆಯಲ್ಲಿ ಅರಳಿ ನಿಲ್ಲುವ ಗರ್ಭಕೋಶದ ವಲಯಕ್ಕೆ ಸಾವು ಹತ್ತಿರದ್ದಲ್ಲ ಅನಿಸಿರಬೇಕು
ಗಂಡು ಎಲ್ಲವನ್ನೂ ಮನಸಿನಲ್ಲೇ ಇಟ್ಟುಕೊಂಡು ಬದುಕಿರುವುದೇ ಬಹಳಷ್ಟು ಆಡದೆ ಉಳಿದ ಅವ್ಯಕ್ತ ಮಾತುಗಳ ಬುನಾದಿ ಏನೋ?
#ಮನಸ್ವಿನಿ
ಇದು ಮೊನ್ನೆ ರಾಧಾಕೃಷ್ಣ Radha Krishna ಅವರು ಹಾಕಿದ ಪೋಸ್ಟ್,
ಅವರ ಬರಹಕ್ಕೆ ಪ್ರತಿಕ್ರಿಯೆ ಅಂದೇ ಬರೆದೆ. ಆದರೆ ಅವರು ಸ್ವಲ್ಪ ವಿವರಿಸಿ ಅಂದದ್ದಕ್ಕೆ ನನ್ನ ವಿವರಣೆ. ನನಗೆ ತಿಳಿದಷ್ಟು ಮಾತ್ರ.
ಮನುಷ್ಯನ ಅಂತಿಮ ಶ್ವಾಸ ಇರುವ ತನಕ ಮಾತ್ರ ಅವನ ಶರೀರಕ್ಕೆ ಒಂದು ಅಸ್ತಿತ್ವ, ಗೌರವ ಇರುತ್ತದೆ. ಹಾಗಾದರೆ ನಮ್ಮ ಶರೀರ ಗೌಣ ಅದು ಆತ್ಮ ಇರುವ ತನಕದ ಚೈತನ್ಯಕ್ಕೆ ಮಾದ್ಯಮ ಅಲ್ವಾ ? ಆತ್ಮ ದೇಹದಿಂದ ಬೇರೆ ಆದ ತಕ್ಷಣವೇ ಶರೀರಕ್ಕೆ ಗುರುತಿಸುವ ಯಾವುದೇ ಸ್ವಂತಿಕೆ ಇರದೇ ಇಂಥವರ ಹೆಣ ಎನ್ನುವ ಮಟ್ಟಕ್ಕೆ ಬಂದಿರುತ್ತದೆ. ಪುರುಷ ಮತ್ತು ಸ್ತ್ರೀ ಎನ್ನುವ ವಾಚಕಗಳು ಇಲ್ಲವಾಗಿ ನಪುಂಸಕದತ್ತ ಸಾಗುತ್ತವೆ. ಪುರುಷ ಶವವಾಗಿದ್ದರೆ ಬಲಗಿವಿ ಮುಟ್ಟಿಕೊಂಡು(ದರ್ಭೆ) ಹೆಣ್ಣಾಗಿದ್ದರೆ ಎಡಗಿವಿ ದರ್ಭೆಯಿಂದ ಸ್ಪರ್ಷಿಸಿ ಹೇಳುವುದು ಕಾಲೌ . . . ಪಿತುಃ ಪುಣ್ಯಲೋಕ. . . . ಕರ್ಣಸೂಕ್ತ ಮಂತ್ರಪಠಣಂ . .. ಆಯುಷಃ ಪ್ರಾಣಗ್ಂ ಸಂತನುವಿನಿಂದ ಆರಂಭವಾಗುತ್ತದೆ. ವಯಸ್ಸಿನಿಂದ ದೇಹದ ಅಸ್ತಿತವವನ್ನು ಕಳೆದುಕೊಳ್ಳುವ ಪ್ರಕ್ರಿಯೆ ಅದು. . . . ವಾಚ ಆತ್ಮಾನಗ್ಂ ಸಂತನು| ಆತ್ಮನಃ ಪೃಥಿವಿಗ್ಂ ಸಂತನು| ಪೃಥಿವ್ಯಾ ಅಂತರಿಕ್ಷಗ್ಂ ಸಂತನು| ಅಂತರಿಕ್ಷಾದ್ದಿವಗ್ಂ ಸಂತನು| ದಿವಃ ಸುವಃ| ಎಂದು ಕರ್ಣಸೂಕ್ತವನ್ನು ಹೇಳುವುದು ಶರೀರದಲ್ಲಿ ಪ್ರತಿಯೊಂದನ್ನೂ ಕಳೆದುಕೊಳ್ಳುವ ಸ್ಥಿತಿ. ಇಲ್ಲಿ ಇನ್ನೊಂದು ಗಮನಿಸಬೇಕಾದದ್ದು ದಹನಕ್ಕೂ ಮೊದಲು ಕರ್ಣಸೂಕ್ತ ಪಠಿಸುವುದಕ್ಕೂ ಪೂರ್ವದಲ್ಲಿಯೇ ಕ್ರಿಯಾಚರಣೆ ಆರಂಭವಾಗುವುದೇ ಸಂಶಯದಿಂದ ! ಅದು ಮರಣ ಸಂಶಯದಿಂದ. ಅದನ್ನು ಸಂಶಯ ಮರಣ ಎಂದೇ ಕರೆಯಲಾಗುತ್ತದೆ. ಅದಕ್ಕೇ ಮೃತ ಶರೀರ ಅಂದರೆ ಆತ್ಮ ಬಿಟ್ಟು ಹೋದಮೇಲೆ ಪಾರ್ಥಿವ ದೇಹವನ್ನು ದರ್ಭೆಯ ಮೇಲೆ ಮಲಗಿಸುವುದು. ಆತ್ಮ ಕಾಲದ ವಶವಾದ ನಂತರ ಆತನ ದೇಹ ಮತ್ತು ಪ್ರಪಂಚ ಎರಡೂ ಬೇರೆಯಾಗುತ್ತವೆ. ಆತ್ಮ ಅವಿನಾಶಿ ಅದಕ್ಕೆ ಯಾವುದೇ ರೂಪ, ರಸ, ಗಂಧ, ಸ್ಪರ್ಶಗಳ ಅನುಭವ ಇಲ್ಲ. ಅದು ಮುಂದಿನ ದೇಹಕ್ಕೆ ಸೇರುವ ತನಕ ಅದಕ್ಕೆ ಅಸ್ತಿತ್ವ ಇರುವುದಿಲ್ಲ. ಅದು ಜಾಗ್ರತ ಅವಸ್ಥೆ ಪಡೆಯುವುದು ಶರೀರ ಸಿಕ್ಕಾಗ. ಶರೀರವೂ ಸಹ ಚೈತನ್ಯ ಪಡೆಯುವುದು ಆತ್ಮ ಸಿಕ್ಕಾಗ ಮಾತ್ರ. ಇಡೀ ಸಾವು ಮತ್ತು ಮುಂದಿನ ೧೩ದಿನಗಳ ಕ್ರಿಯಾಚರಣೆ ಅದು ಮುಖ್ಯ ! ಹೌದು, ಕರ್ಣಸೂಕ್ತ ಸ್ಪಷ್ಟವಾಗಿ ಅದನ್ನು ಹೇಳುತ್ತದೆ. ಓಂ ಸಂಜ್ಞಾನಂ ವಿಜ್ಞಾನಂ ಪ್ರಜ್ಞಾನಂ ಜಾನದಭಿಜಾನಾತ್ ಆ ಮಂತ್ರಗಳೇ ಹಾಗಿವೆ. ಆಪೂರ್ಯಮಾಣಾ ಪೂರ್ಯಮಾಣಾ ಪೂರಯಂತೀ ಪೂರ್ಣಾಪೌರ್ಣಮಾಸೀ ಎನ್ನುತ್ತವೆ. ಹೆಣಕ್ಕೆ ಬೆಂಕಿ ಇಡುವಲ್ಲಿಯವರೆಗಿನ ಎಲ್ಲಾ ಸ್ತರದಲ್ಲಿ ದೇಶ, ಕಾಲ, ಗೋತ್ರ, ಪ್ರವರಗಳನ್ನು ಹೇಳಿಕೊಳ್ಳುತ್ತೇವಲ್ಲ ಅದು ಮುಖ್ಯವಾಗುತ್ತದೆ. ಎಲ್ಲವೂ ಕಾಲದ ಅಧೀನವಾಗಿರುತ್ತದೆ. ಇವೆಲ್ಲವೂ ಯಜುರ್ವೇದದ ಬೌಧಾಯನ ಸೂತ್ರದಂತೆ ಹೇಳಿದ್ದೇನೆ. ಇದು ಕಾಲಯಾನದಿಂದ ಬರೆದಿರುವೆ. ಇಲ್ಲಿ ಸಂಪೂರ್ಣ ಕರ್ಣ ಸೂಕ್ತವನ್ನು ಬರೆಯುವುದು ಅಸಾಧ್ಯ. ಆದರೆ ಶವ ದಹನ ಕಾಲಕ್ಕೂ ಪೂರ್ವದಲ್ಲಿ ಪ್ರಾಚೀನ ಪರಂಪರೆಯಂತೆ ಶವ ದಹನವನ್ನು ಮೃತಪಟ್ಟು ಕೆಲವೇ ಸಮಯದಲ್ಲಿ ಮುಗಿಸಬೇಕು. ಮತ್ತು ಶವದಹನ ಕಾಲದಲ್ಲಿ ನಮ್ಮ ಅಂಗಾಂಗಗಳ ದಾನ ಪ್ರಕ್ರಿಯೆಯೂ ಇತ್ತು. ಅದಕ್ಕೆ ಪ್ರತ್ಯೇಕ ಮಂತ್ರಗಳಿವೆ. ಅಂದರೆ ಅಂಗಾಂಗದಾನವನ್ನು ಕೆಲವು ಗಂಟೆಗಳ ಒಳಗೆ ಪೂರೈಸಬೇಕೆನ್ನುವ ಸಂದೇಶ ಅಂದಿನಿಂದಲೂ ಇದೆ. ಅಂದರೆ ಕೆಲವು ಜೀವಕೋಶಗಳು ಬದುಕಿರುತ್ತವೆ ಅಂತಾಯ್ತಲ್ಲ. ಇನ್ನು ತಲೆ ಒಡೆಯುತ್ತೆ ಅಂತ ಒಬ್ಬರು ಪ್ರತಿಕ್ರಿಯಿಸಿದ್ದರು. ಆದರೆ ಅದು ವಾಡಿಕೆ ಅಷ್ಟೇ.
Radha Krishna
#ಮನಸ್ವಿನಿಗೆ_ಸುಮನಸ್ವಿನೀ
Sadyojatha
No comments:
Post a Comment
If you have any doubts. please let me know...