March 24, 2021

ಬ್ರಾಹ್ಮಣನೆಂದರೆ!

ಬ್ರಾಹ್ಮಣನೆಂದರೆ - ಚತ್ವಾರಿವಾಕ್ ಪರಿಮಿತಾನಿ ಪದಾನಿ ತಾನಿ ವಿದುಃ ಬ್ರಾಹ್ಮಣಾ

ಇದೊಂದು ವಿಷಯ ನನ್ನ ಮನಸ್ಸನ್ನು ಹಿಡಿದಿರಿಸಿತು. ಎಲ್ಲಾ ಕಡೆ ಬ್ರಾಹ್ಮಣ ಎನ್ನುವ ಶಬ್ದ ಕೇಳಿದರೆ ಚೇಳು ಕಡಿದಂತೆ ವರ್ತಿಸುವವರಿಗೆ ಇದು ಸ್ವಲ್ಪ ಕಹಿ ಆದರೂ ಆಗಬಹುದು. ಆದರೂ ಚಿಂತೆ ಇಲ್ಲ, ಯಾಕೆಂದರೆ ನಾನೂ . . . . . .;  ಹಾಗಾದರೆ ಬ್ರಾಹ್ಮಣ ಎಂದರೆ ಯಾರು. ಬ್ರಾಹ್ಮಣ ಎನ್ನುವುದು ಯಾವುದೇ ಜಾತಿ ವಾಚಕವಲ್ಲ, ವರ್ಣವಾಚಕವೂ ಅಲ್ಲ. ಅದೊಂದು ಕೇವಲ ಜ್ಞಾನದ ಸಂಕೇತ ಎಂದು ಋಗ್ವೇದ ಹೇಳುತ್ತದೆ. ಅದರಲ್ಲಿ ವೈದ್ಯ ವಿಜ್ಞಾನವನ್ನು ಕಲಿತವರು ಅಂದರೆ ಸಸ್ಯಗಳ ರಸವು ಯಾವ ರೋಗಕ್ಕೆ ಯಾವುದು ರೋಗನಿರೋಧಕವೆಂದು ತಿಳಿದು ಔಷಧ ವಿಜ್ಞಾನ ಬಲ್ಲವನೇ ಬ್ರಾಹ್ಮಣ ಎನ್ನುತ್ತದೆ. ಅಂದರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದದ್ದು ಬ್ರಾಹ್ಮಣ ಅಥವಾ ಬ್ರಹ್ಮ ಎನ್ನುವುದರ ಅರ್ಥವೇ ಜ್ಞಾನ ಅಥವಾ ಅರಿವು ಅಥವಾ ತಿಳಿವಳಿಕೆ ಎಂದು ಅಥರ್ವಾಣ ಮಹರ್ಷಿ ಹೇಳುತ್ತಾರೆ.
ಓಷಧಯಃ ಸಂ ವದಂತೇ ಸೋಮೇನ ಸಹ ರಾಜ್ಞಾ |
ಯಸ್ಮೈ ಕೃಣೋತಿ ಬ್ರಾಹ್ಮಣಸ್ತಂ ರಾಜನ್ಪಾರಯಾಮಸಿ || ಋಗ್ವೇದದ ೧೦ನೇ ಮಂಡಲದ ಈ ಋಕ್ಕಿನಲ್ಲಿ
ಎಲೈ ಋಷಿಯೇ, ಪ್ರಭುವೆ, ಯಾವ ರೋಗಿಗೆ ಓಷಧಿಗಳ ಸ್ವರೂಪವನ್ನು ತಿಳಿದ ವೈದ್ಯನು(ಬ್ರಾಹ್ಮಣನು) ಚಿಕಿತ್ಸೆಯನ್ನು ಮಾಡುವನೋ, ಆ ರೋಗಿಯನ್ನು ಗುಣಪಡಿಸುವ ಜವಾಬ್ದಾರಿ ನಮ್ಮ ಮೇಲಿರುವುದರಿಂದ ನಾವು ಗುಣಪಡಿಸುವೆವು. ಹೀಗೇ ಈ ಜಗತ್ತಿನಲ್ಲಿರುವ ಓಷಧಿಗಳೆಲ್ಲಾ ಸೇರಿ ಸೋಮದೇವನೊಡನೆ ಅಥರ್ವಾಣ ಋಷಿಗೆ ಈ ರೀತಿಯಾಗಿ ಉತ್ತರಿಸುತ್ತವೆ. ಅಂದರೆ, ಬ್ರಾಹ್ಮಣ ಯಾರೂ ಆಗಬಹುದು. ಅದೊಂದು ಅರ್ಹತೆ. ಆ ಅರ್ಹತೆ ಪಡೆದವರೆಲ್ಲ ಬ್ರಾಹ್ಮಣರೇ 

#ವಿಪ್ರನೆಂದರೆ_ವೈದ್ಯ
ಸದ್ಯೋಜಾತರು

No comments:

Post a Comment

If you have any doubts. please let me know...