March 5, 2021

ಶುದ್ಧ ಸ್ಫಟಿಕದ ವಿಶೇಷತೆ

 ಬಣ್ಣವಿಲ್ಲದಿರುವುದು,ಪಾರದರ್ಶಿಯಾಗಿರುವುದು,ನಿರ್ಮಲವಾಗಿರುವುದು,ಹಾಗೂ ಶೀತಪ್ರಭಾವವನ್ನು ಹೊಂದಿರುವುದು ಸ್ಫಟಿಕದ ಸ್ವಭಾವ.ಹಿಂದಿಯಲ್ಲಿ "ಸಫೇದ್ ಬಿಲ್ಲೌರ್" ಇಂಗ್ಲೀಷಿನಲ್ಲಿ "ರಾಕ್ ಕ್ರಿಸ್ಟಲ್" ಸಂಸ್ಕೃತದಲ್ಲಿ ಸೀತೋಪಲ,ಶಿವಪ್ರಿಯ,ಕಾಂಚಮಣಿ,ಸ್ಫಟಿಕ ಹಾಗೂ ಫಿಟಕ ಮುಂತಾದ ಹೆಸರುಗಳಿಂದ ಗುರುತಿಸಲಾಗುತ್ತದೆ.ಸಾಮಾನ್ಯವಾಗಿ ಸ್ಫಟಿಕ ಗಾಜಿನಂತೇ ಇದ್ದರೂ ಇದರ ಬಾಳಿಕೆ ದೀರ್ಘಾವಧಿಯಾಗಿರುತ್ತದೆ. 

ಸ್ಪಟಿಕದ ಸ್ವಭಾವ ಶೀತಲತೆ.ಆದ್ದರಿಂದ ಜ್ವರ,ಪಿತ್ತವಿಕಾರ,ಅಶಕ್ತತೆ ಹಾಗೂ ರಕ್ತವಿಕಾರ ಮುಂತಾದ ರೋಗಗಳಿಗೆ ಸ್ಫಟಿಕದ ಭಸ್ಮವನ್ನು ಔಷಧಿಯನ್ನಾಗಿ ಬಳಸಲಾಗುತ್ತದೆ.ಆರೋಗ್ಯದ ದೃಷ್ಟಿಯಿಂದ ಸ್ಫಟಿಕಮಾಲೆಯನ್ನು ಧರಿಸುವ ಪದ್ಧತಿ ಅನಾದಿಕಾಲದಿಂದ ನಡೆದುಬಂದಿದೆ.ಸ್ಫಟಿಕ ಮಾಲೆಯನ್ನು ಸಾಕ್ಷಾತ್ ಲಕ್ಷ್ಮೀದೇವಿಯ ಪ್ರತಿರೂಪವೆಂದೇ ನಂಬಲಾಗುತ್ತದೆ.ಜೀವನದಲ್ಲಿ ಯಶಸ್ಸನ್ನು ಪಡೆಯಲು ಹಾಗೂ ಎಲ್ಲ ವಿಘ್ನಗಳ ನಿವಾರಣೆ ಸ್ಪಟಿಕ ಮಾಲೆಯನ್ನು ಧರಿಸುವುದರಿಂದುಂಟಾಗುತ್ತದೆ. 

ಸ್ಫಟಿಕದ ರಾಸಾಯನಿಕ ಸಂರಚನೆ "ಸಿಲಿಕಾನ್ ಡೈಯಾಕ್ಸೈಡ್".ಆದ್ದರಿಂದಲೇ ಸ್ಫಟಿಕ ಶುದ್ಧತೆ,ಪಾವಿತ್ರ್ಯತೆ  ಹಾಗೂ ಶಕ್ತಿಯ ಪ್ರತೀಕ.ಯಾರು ಸ್ಫಟಿಕವನ್ನು ಶರೀರದಲ್ಲಿ ಧರಿಸುತ್ತಾರೋ ಅವರು ಸದಾ ಆರೋಗ್ಯವಂತರಾಗಿರುತ್ತಾರೆ.ಇದು ಸ್ಫಟಿಕದ ವಿಶೇಷತೆ.ಸ್ಫಟಿಕಮಾಲೆಯನ್ನು ಧರಿಸುವುದರಿಂದ ಭೂತಪ್ರೇತಭಯ,ದುಃಸ್ವಪ್ನಗಳು ದೂರವಾಗುತ್ತವೆಂಬ ನಂಬಿಕೆಯಿದೆ.ಹಲವು ವಿಧದ ಆಕಾರ-ಪ್ರಕಾರಗಳ ಸ್ಫಟಿಕಗಳಿವೆ.ಸ್ಫಟಿಕಮಾಲೆಯಿಂದ ಶರೀರದಲ್ಲಿರುವ "ಹೀಲಿಂಗ್ ಪವರ್" ಜಾಸ್ತಿಯಾಗುತ್ತದೆಂದು ವೈದ್ಯಶಾಸ್ತ್ರವೂ ಒಪ್ಪಿಕೊಂಡಿದೆ.ಸ್ಫಟಿಕಮಾಲೆಯನ್ನು ಧರಿಸುವುದರಿಂದ ಶರೀರದ "ಇಲೆಕ್ಟ್ರೋಕೆಮಿಕಲ್" ಸಂತುಲಿತವಾಗಿ,ಮನುಷ್ಯ ಒತ್ತಡ ಹಾಗೂ ಖಿನ್ನತೆಗಳಿಂದ ಮುಕ್ತನಾಗುತ್ತಾನೆಂದು ಸಂಶೋಧಕರು ತಿಳಿಸಿದ್ದಾರೆ. 

ಸ್ಫಟಿಕಸರವನ್ನು ಧರಿಸಿ ಪ್ರತಿನಿತ್ಯ ಮುಂಜಾನೆ ಲಕ್ಷ್ಮೀಜಪವನ್ನು ಮಾಡುವುದರಿಂದ ಮನೆಯಲ್ಲಿ ಸಂಪತ್ತು,ಧನ,ಧಾನ್ಯಗಳ ವೃದ್ಧಿಯಾಗುತ್ತದೆಂದು ಪುರಾಣಗಳು ತಿಳಿಸಿವೆ.ಸ್ಫಟಿಕದ ಶಿವಲಿಂಗವನ್ನು ಅರ್ಚಿಸುವುದರಿಂದ ಮನೆಯಲ್ಲಿ ಮಹಾವ್ಯಾಧಿಗಳು ದೂರವಾಗಿ ಸದಾ ಆನಂದ ನೆಲೆಸಿರುತ್ತದೆ. ರುದ್ರಾಕ್ಷಿಯ ಜೊತೆ ಪೊಣಿಸಲಾದ ಸ್ಫಟಿಕದ ಬ್ರೇಸ್ಲೈಟ್ ಧರಿಸುವುದರಿಂದ ಭಯ ಹಾಗೂ ಆತಂಕಗಳು ದೂರವಾಗುತ್ತವೆ.ವ್ಯಕ್ತಿಯ ಚಿಂತನಾಲಹರಿ ಸಾತ್ವಿಕತೆಯನ್ನು ಹೊಂದುತ್ತದೆ. ಸ್ಫಟಿಕಮಾಲೆಯನ್ನು ಧರಿಸುವುದರಿಂದ ವ್ಯಕ್ತಿಯ ಖಿನ್ನತೆ ಹಾಗೂ ಒತ್ತಡಗಳು ದೂರವಾಗುತ್ತವೆ.ಸ್ಫಟಿಕದ ಶಂಖದಿಂದ ಶಿವಲಿಂಗಕ್ಕೆ ಜಲಾಭಿಷೇಕವನ್ನು ಮಾಡಿದರೆ ಮೋಕ್ಷ ಸಿದ್ಧಿಸುತ್ತದೆಂದು ಹೇಳಲಾಗುತ್ತದೆ.ಕಂಪ್ಯೂಟರಿನಿಂದ ಹೊರಹೊಮ್ಮುವ ಕೆಟ್ಟ ವಿಕಿರಣಗಳನ್ನು ಸ್ಫಟಿಕ ತಡೆಯುತ್ತದೆ,ಆದ್ದರಿಂದ ಕಂಪ್ಯೂಟರ್ ಸನಿಹ ಸ್ಫಟಿಕವಿದ್ದರೆ ಒಳಿತೆಂದು ಸಂಶೋಧನೆಗಳಿಂದ ತಿಳಿದುಬಂದಿದೆ. 

ಸ್ಫಟಿಕಕ್ಕೆ ಸ್ಫಟಿಕಮಣಿಯೆಂದು ಕರೆಯಲಾಗುತ್ತದೆ.ಈ ಸ್ಫಟಿಕಮಣಿ ಹಿಮಾಲಯದ ಪರ್ವತಶ್ರೇಣಿಗಳಲ್ಲಿ ಸಿಗುತ್ತದೆ.ಹಿಮದ ಘನರೂಪವೇ ಸ್ಫಟಿಕಮಣಿ.ಹಿಮದಂತೇ ಪಾರದರ್ಶಿ ಹಾಗೂ ಬಿಳುಪಾಗಿರುತ್ತದೆ.ಈ ಸ್ಫಟಿಕಮಣಿಯನ್ನು ಬ್ರಹ್ಮ,ವಿಷ್ಣು,ಮಹೇಶ್ವರರ ಸ್ವರೂಪವೆಂದು ಹೇಳಲಾಗುತ್ತದೆ. ಜೀವನದಲ್ಲಿ ಸಂತೋಷ ಹಾಗೂ ಸಕಾರಾತ್ಮಕ ಶಕ್ತಿ ಬೇಕೆನಿಸಿದರೆ ಮನೆಯಲ್ಲಿ ಸ್ಫಟಿಕ ಶ್ರೀಯಂತ್ರವನ್ನು ಸ್ಥಾಪಿಸಿ ಪೂಜಿಸಬೇಕು.ಈ ಶ್ರೀಯಂತ್ರ ಮನೆಯಲ್ಲಿರುವ ನಕಾರಾತ್ಮಕಶಕ್ತಿಗಳನ್ನು ಹೋಗಲಾಡಿಸುತ್ತದೆ.ಯಾರ ಮನೆಯಲ್ಲಿ ಪ್ರತಿನಿತ್ಯ ಸ್ಫಟಿಕಶ್ರೀಯಂತ್ರದ ಪೂಜೆ ನಡೆಯುವುದೋ ಆ ಮನೆಯಲ್ಲಿ ಸಂಪತ್ತು ತುಂಬಿ ತುಳುಕುತ್ತದೆ.ಶ್ರೀಯಂತ್ರವನ್ನು ಪೂಜಿಸುವ ವ್ಯಕ್ತಿಗೆ ಆಯುರಾರೋಗ್ಯಾಐಶ್ವರ್ಯಗಳು ಲಭಿಸುತ್ತವೆ.ಸ್ಫಟಿಕ ಮಾಲೆಯ ಮೂಲಕ ಯಾರು ಪ್ರತಿನಿತ್ಯ ಲಕ್ಷ್ಮೀಜಪವನ್ನು ಮಾಡುತ್ತಾರೋ ಅವರಿಗೆ ಅಷ್ಟೈಶ್ವರ್ಯಗಳು ಸಿಗುತ್ತವೆ. 

ಮಕ್ಕಳು ಅಧ್ಯಯನದಲ್ಲಿ ಹಿಂದುಳಿದಿದ್ದರೆ,ಓದುವಾಗ ಏಕಾಗ್ರತೆ ಇರದಿದ್ದರೆ ಓದುವ ಟೇಬಲ್ ಮೇಲೆ ಸ್ಫಟಿಕದ ಪಿರಾಮಿಡ್ ಇರಿಸಬೇಕು.ಆ ಪಿರಾಮಿಡ್ದಿನಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಬರುತ್ತದೆ.ಹಾಗೇ ಸ್ಫಟಿಕ ಮನೆಯಲ್ಲಿನ ವಾಸ್ತುದೋಷವನ್ನು ನಿವಾರಿಸುತ್ತದೆ.ಅಂಗಡಿಗಳಲ್ಲಿ ಸ್ಫಟಿಕದ ಮಣಿಯನ್ನು ಇರಿಸುವುದರಿಂದ ಉತ್ತಮ ವ್ಯಾಪಾರವಾಗುತ್ತದೆ.ಮನೆಯಲ್ಲಿ ಸ್ಫಟಿಕಮಣಿಯನ್ನು ನಿತ್ಯ ಪೂಜಿಸುವುದರಿಂದ ದಾಂಪತ್ಯಸುಖದ ವೃದ್ಧಿಯಾಗುತ್ತದೆ.ರೋಗಿಗಳು ಮಲಗುವ ಹಾಸಿಗೆಯ ಮೇಲೆ ಸ್ಫಟಿಕವನ್ನು ಇರಿಸುವುದರಿಂದ ಅವರು ಬೇಗ ಗುಣಮುಖರಾಗುತ್ತಾರೆ.ಸ್ಫಟಿಕಮಾಲೆಯನ್ನು ಧರಿಸುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಲಭಿಸುತ್ತದೆ.ವ್ಯಕ್ತಿ ಕಾಯಾವಾಚಾಮನಸಾ ಪರಿಶುದ್ಧನಾಗುತ್ತಾನೆ. ಸ್ಫಟಿಕ ಮಾಲೆಯನ್ನು ಧರಿಸಿದ ವ್ಯಕ್ತಿ ವಾದವಿವಾದ,ಶತ್ರುಭಯಗಳಿಂದ ವಿಮುಕ್ತನಾಗಿರುತ್ತಾನೆ.ಈ ಮಾಲೆಯನ್ನು ಧರಿಸುವುದರಿಂದ ಮನೋಕಾಮನೆಗಳ ಸಿದ್ಧಿಯಾಗುತ್ತದೆ. ಸ್ಫಟಿಕಮಾಲೆಯನ್ನು ಧರಿಸಿದವರು ಸದಾ ಆರೋಗ್ಯವಾಗಿರುತ್ತಾರೆ.ಭೂತ-ಪ್ರೇತ-ಪಿಶಾಚಿಬಾಧೆಗಳಿಂದ ವಿಮುಕ್ತರಾಗಿರುತ್ತಾರೆ.ಗ್ರಹಗಳ ಅಶುಭ ದೂರವಾಗುತ್ತದೆ.ಮನೆಯ ಸರ್ವಕಾರ್ಯಗಳೂ ಯಾವುದೇ ವಿಘ್ನಗಳಿಲ್ಲದೇ ಸಸೂತ್ರವಾಗಿ ನಡೆಯುತ್ತವೆ.ಮನೆಯ ಮುಖ್ಯದ್ವಾರದಲ್ಲಿ ಸ್ಫಟಿಕಗಣೇಶನನ್ನು ಸ್ಥಾಪಿಸುವುದರಿಂದ ಮನೆಯ ಸದಸ್ಯರೆಲ್ಲರಿಗೂ ಒಳಿತಾಗುತ್ತದೆ. 

ಹಾಗಾಗಿ ಸ್ಫಟಿಕಕ್ಕೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷವಾದ ಸ್ಥಾನಮಾನವನ್ನು ನೀಡಲಾಗಿದೆ.ವೈಜ್ಞಾನಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಸ್ಫಟಿಕಕ್ಕೆ ತನ್ನದೇ ಆದ ಹಲವು ವಿಶೇಷತೆಗಳಿವೆ. 

ಲೋಕಾಃ ಸಮಸ್ತಾಃ ಸುಖಿನೋ ಭವಂತು.. 
ಕೃಪೆ:ಪ್ರದೀಪ ಹೆಗಡೆ  ಸನಾತನ ಸಂಸ್ಕೃತಿ,

No comments:

Post a Comment

If you have any doubts. please let me know...