March 15, 2021

ಅರುಂಧತಿ ನಕ್ಷತ್ರ ಏಕೆ ತೋರಿಸುತ್ತಾರೆ ವೈಜ್ಞಾನಿಕ ಕಾರಣಗಳು

ಹೊಸದಾಗಿ ಮದುವೆಯಾದವರಿಗೆ ಅರುಂಧತಿ ನಕ್ಷತ್ರ ಏಕೆ ತೋರಿಸುತ್ತಾರೆ ವೈಜ್ಞಾನಿಕ ಕಾರಣಗಳು !!

ನಮ್ಮ ತಾರಾ ಮಂಡಲದಲ್ಲಿ ಅನೇಕ ನಕ್ಷತ್ರ ಪುಂಜಗಳಿವೆ ನಮಗೆ ತಿಳಿದಿರುವ ಹಾಗೆ ನಕ್ಷತ್ರಗಳು ತಮ್ಮದೇ ಆದ ಬೆಳಕನ್ನು ಪ್ರತಿಫಲಿಸುತ್ತವೆ.
ಗ್ರೇಟ್ ಬೇರ್ (ಅರ್ಸಾ ಮೇಜರ್) – ಎಂದರೆ ನಮ್ಮ ಬರಿಗಣ್ಣಿಗೆ ಸುಲಭವಾಗಿ ಕಾಣಸಿಗುವ ತಾರೆಗಳನ್ನು ಏಳು ಋಷಿಗಳ ಹೆಸರಿನಿಂದ ಗುರುತಿಸುತ್ತಾರೆ
ಅವುಗಳು ಕ್ರತು(Dubhe) , ಪುಲಹ (Merak), ಪುಲಸ್ತ್ಯ(Phecda), ಅತ್ರಿ(Megrez) ,ಅಂಗೀರಸ(Alioth), ವಸಿಷ್ಠ (Mizar), ಮರೀಚಿ(Benetnasch) ಎಂದು, ಈ ಏಳು ಸಪ್ತಋಷಿಗಳು ಮಹಾ ಮಹಿಮರು .
ಪುರಾಣದ ಕಥೆ ಹೀಗಿದೆ :
ಅರುಂಧತಿ ವಶಿಷ್ಠ ಋಷಿಗಳ ಪತ್ನಿಯಾಗಿದ್ದಳು ಒಮ್ಮೆ ಅಗ್ನಿ ದೇವರಿಗೆ ಸಪ್ತರ್ಷಿಯರ ಪತ್ನಿಯರೊಡನೆ ಕಾಮ ಕ್ರೀಡೆಯಲ್ಲಿ ತೊಡಗುವ ಮನಸಾಗುತ್ತದೆ ಆಗ ಅಗ್ನಿ ದೇವನ ಪತ್ನಿ ಸ್ವಾಹಾ ಏಳು ಋಷಿಗಳ ಪತ್ನಿಯರಲ್ಲಿ ಆವಹನೆಯಾಗಿ ತನ್ನ ಪತಿಯ ಕಾಮ ರೋಗವನ್ನು ಈಡೇರಿಸಲು ಪ್ರಯತ್ನಿಸುತ್ತಾಳೆ ಆದರೆ ಪರಮ ಪತಿವ್ರತೆಯಾದ ಅರುಂಧತಿಯ ದೇಹದೊಳಗೆ ಮಾತ್ರ ಪ್ರವೇಶಿಸಲು ಸಾಧ್ಯವಾಗುವುದಿಲ್ಲ ಆಕೆ ಕನಸಲ್ಲೂ ಸಹ ಪರ ಪುರುಷನ ಸಖ್ಯ ಬಯಸುವುದಿಲ್ಲ.ಇಷ್ಟೆಲ್ಲ ಮಹತ್ವ ಹೊಂದಿರುವ ಅರುಂಧತಿಯ ಹೆಸರನ್ನೇ ನಕ್ಷತ್ರಕ್ಕೆ ಇಡಲಾಗಿದೆ .
ಮದುವೆಯಾದ ನೂತನ ವಧು ವರರು ಹಾಗು ಅರುಂಧತಿ ನಕ್ಷತ್ರ:
ಈ ಸಪ್ತಋಷಿ ಮಂಡಲದಲ್ಲಿ ವಸಿಷ್ಠ(Miraz) ನಕ್ಷತ್ರದ ಪಕ್ಕದಲ್ಲಿ ಅರುಂಧತಿ(Al cor) ನಕ್ಷತ್ರ ಇರುತ್ತದೆ ,ಅರುಂಧತಿ ಎಂಬುದು ವಸಿಷ್ಠ ಋಷಿಗಳ ಪತ್ನಿಯ ಹೆಸರು , ಈ ಎರಡು ನಕ್ಷತ್ರಗಳು ಸದಾ ಅಂಟಿಕೊಂಡೇ ಇರುವುದರಿಂದ ಇವುಗಳನ್ನು ಉತ್ತಮ ಜೋಡಿಗಳು ಎಂದು ಪರಿಗಣಿಸಲಾಗುತ್ತದೆ .
ಮದುವೆಯಾದ ನೂತನ ವಧು ವರರಿಗೆ ಸತ್ಯ ,ನೀತಿ ,ಪ್ರೀತಿ , ಸಹಬಾಳ್ವೆ ನಡೆಸಲಿ ಎಂಬ ಉದ್ದೇಶದಿಂದಲೇ ತಾಳಿ ಶಾಸ್ತ್ರ ಮುಗಿದ ಮೇಲೆ ಅರುಂಧತಿ ನಕ್ಷತ್ರವನ್ನು ತೋರಿಸುತ್ತಾರೆ .
(ಕೃಪೆ ಅರಳಿ ಕಟ್ಟೆ)

No comments:

Post a Comment

If you have any doubts. please let me know...