Good Evening, Happy Sunday
28th March 2021
@ Hiremath, TapOvana, Tumkur
ನಾವು, ನೀವುಗಳು
“ಷಷ್ಠ್ಯಬ್ದಿಪೂರ್ವ”
ಮತ್ತು “ಷಷ್ಠ್ಯಬ್ದ್ಯೋತ್ತರ” ಎಂಬೀ
ಎರಡು ಕಾಲಘಟ್ಟದಲ್ಲಿ ವಿಂಗಡಿಸಲ್ಪಟ್ಟಿದ್ದೇವೆ.
ಮನುಷ್ಯನಿಗೆ ಸರಿಸುಮಾರು
100 ವರುಷಗಳ ಆಯುಷ್ಯವಿದೆ ಎಂದು
ಅಂದಾಜಿಸಲಾಗಿದೆ.
ಹಾಗೆಂದ ಮಾತ್ರಕ್ಕೆ
ಎಲ್ಲರೂ ನೂರು ವರುಷಗಳವರೆಗೆ
ಬದುಕುತ್ತಾರೆ ಎಂದೇನಿಲ್ಲ.
ಕೆಲವರು ನೂರರ ಒಳಗೇನೇ
ದೇವರ ಹತ್ತಿರ ದಯಮಾಡಿಸುತ್ತಾರೆ.
ಇನ್ನು ಕೆಲವರು ನೂರಕ್ಕಿಂತಲೂ
ಹೆಚ್ಚು ವರುಷ ಬದುಕಿ
“ಶತಾಯುಷಿ” ಗೌರವಕ್ಕೆ ಪಾತ್ರರಾಗುತ್ತಾರೆ.
ಸಿದ್ಧಗಂಗೆಯ ಪರಮಪೂಜ್ಯ
ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು 111 ವರುಷ
ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು 102 ವರುಷ.
ಇವರೆಲ್ಲ ನೂರು ವರುಷಗಳಿಗಿಂತಲೂ
ಹೆಚ್ಚುಕಾಲ ಬದುಕಿ
“ಶತಾಯುಷಿ” ಗೌರವಕ್ಕೆ ಭಾಜನರಾದರು.
ನೂರು ವರುಷಗಳ ಮನುಷ್ಯನ ಬದುಕನ್ನು
ನಾವು ಎರಡು ಕಾಲಘಟ್ಟದಲ್ಲಿ
ವಿಂಗಡಿಸುತ್ತಿದ್ದೇವೆ.
ಒಂದು,
“ಷಷ್ಠ್ಯಬ್ದಿಪೂರ್ವ”
ಇನ್ನೊಂದು, “ಷಷ್ಠ್ಯಬ್ದ್ಯೋತ್ತರ”
ಷಷ್ಠ್ಯಬ್ದಿ ಉತ್ತರ
“ಪ್ರಿ ಷಷ್ಠ್ಯಬ್ದಿ” & “ಪೋಸ್ಟ್ ಷಷ್ಠ್ಯಬ್ದಿ”
Pre Shasthyabdi & Post Shasthyabdi
ಕ್ರಿಸ್ತಪೂರ್ವ (ಬಿ. ಸಿ.)
ಮತ್ತು ಕ್ರಿಸ್ತಶಕ ಎಂದ ಹಾಗೆ. (ಎ. ಡಿ.)
ಕ್ರಿಸ್ತನ ಪೂರ್ವದ ಕಾಲ
ಮತ್ತು ಕ್ರಿಸ್ತನ ನಂತರದ ಕಾಲ.
B. C. & A. D.
Before Christ
& After the Death of Christ
ವಚನಸಾಹಿತ್ಯದ ಕುರಿತು ಹೇಳುವ
ಸಂದರ್ಭದಲ್ಲಿ
ಮತ್ತು ವಚನಸಾಹಿತ್ಯವನ್ನು
ವಿಂಗಡಿಸುವ ಸಂದರ್ಭದಲ್ಲಿ
“ಬಸವಪೂರ್ವ” ವಚನಸಾಹಿತ್ಯ
ಮತ್ತು “ಬಸವೋತ್ತರ” ವಚನಸಾಹಿತ್ಯ
ಎಂದು ಹೇಳುವುದಿಲ್ಲವೆ?
Pre Basava & Post Basava
ಹಾಗೆ,
ಈ “ಷಷ್ಠ್ಯಬ್ದಿಪೂರ್ವ”
ಮತ್ತು “ಷಷ್ಠ್ಯಬ್ದ್ಯೋತ್ತರ” ಕಾಲಗಳು!!
ಅಷ್ಟು ಮಾತ್ರವಲ್ಲ,
ಈ “ಷಷ್ಠ್ಯಬ್ದಿಪೂರ್ವ”
ಮತ್ತು “ಷಷ್ಠ್ಯಬ್ದ್ಯೋತ್ತರ” ಈ ಕಾಲಗಳೆರಡೂ
ಸಿದ್ಧಾಂತ ಶಿಖಾಮಣಿಯ
ಅಂಗಸ್ಥಲ ಮತ್ತು ಲಿಂಗಸ್ಥಲವಿದ್ದ ಹಾಗೆ.
ಸಿದ್ಧಾಂತ ಶಿಖಾಮಣಿಯ
ಅಂಗಸ್ಥಲವೂ ಆರು ಸ್ಥಲಗಳನ್ನು
ಒಳಗೊಂಡಿದೆ.
ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ,
ಶರಣ, ಐಕ್ಯ ಎಂದು.
ಸಿದ್ಧಾಂತ ಶಿಖಾಮಣಿಯ
ಲಿಂಗಸ್ಥಲವೂ ಕೂಡ ಆರು ಸ್ಥಲಗಳನ್ನು
ಒಳಗೊಂಡಿದೆ.
ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ,
ಶರಣ, ಐಕ್ಯ ಎಂದು.
ಸಿದ್ಧಾಂತ ಶಿಖಾಮಣಿಯಲ್ಲಿ
ಮತ್ತೆ ಅಂಗಸ್ಥಲಾಂತರ್ಗತ 44 ಸ್ಥಲಗಳುಂಟು.
ಹಾಗೆಯೇ ಲಿಂಗಸ್ಥಲದಲ್ಲೂ
ಲಿಂಗಸ್ಥಲಾಂತರ್ಗತ 57 ಸ್ಥಲಗಳುಂಟು.
ಒಟ್ಟು ಸಿದ್ಧಾಂತ ಶಿಖಾಮಣಿಯಲ್ಲಿ
101 ಅಂದರೆ ``ಏಕೋತ್ತರ'' ಶತಸ್ಥಲಗಳಿವೆ.
“ಕಲಿಯೋದಕ್ಕಾಗಿ” ಅಂಗಸ್ಥಲದ
ಆರುಸ್ಥಲಗಳನ್ನು ನಿಗದಿಗೊಳಿಸಲಾಗಿದೆ.
“ಕಲಿಸೋದಕ್ಕಾಗಿ” ಲಿಂಗಸ್ಥಲದ
ಆರು ಸ್ಥಲಗಳನ್ನು ನಿಯೋಜಿಸಲಾಗಿದೆ.
ಸಾಧಕ,
ಕಲಿಯುವಾಗಲೂ ಆರು ಸ್ಥಲಗಳ ಯಾತ್ರೆ
ಮಾಡಿಕೊಂಡಿರಬೇಕು.
ಹಾಗೆಯೇ
ಆತ ಕಲಿಸುವಾಗಲೂ ಆರು ಸ್ಥಲಗಳ ಯಾತ್ರೆ
ಮಾಡಿಕೊಂಡಿರಬೇಕು.
ಅಂಗಸ್ಥಲಗಳಲ್ಲಿ ಆತ ಸಾಧಕನಾಗಿರಬೇಕು.
ಲಿಂಗಸ್ಥಲಗಳಲ್ಲಿ ಆತ ಶಿಕ್ಷಕನಾಗಬೇಕು.
“ಷಷ್ಠ್ಯಬ್ದಿಪೂರ್ವ”
ಮತ್ತು “ಷಷ್ಠ್ಯಬ್ದ್ಯೋತ್ತರ” ಎಂಬ
ಈ ಎರಡು ಕಾಲಘಟ್ಟಗಳಲ್ಲಿ ವಿಂಗಡಿಸಲ್ಪಟ್ಟಿರುವ
ನಮ್ಮ, ನಿಮ್ಮಗಳ ಬದುಕು ಕೂಡ
ಅಂಗಸ್ಥಲ, ಲಿಂಗಸ್ಥಲವಿದ್ದ ಹಾಗೆ.
ನಮ್ಮ, ನಿಮ್ಮಗಳ ದೈನಂದಿನ ಬದುಕಿನಲ್ಲಿ
ಷಷ್ಠ್ಯಬ್ದಿಪೂರ್ವ ಕಾಲದಲ್ಲೂ
ಊಟ, ಉಪಚಾರ, ವ್ಯವಹಾರ...., ಇತ್ಯಾದಿ
ಇರುತ್ತದೆ.
ಷಷ್ಠ್ಯಬ್ದ್ಯೋತ್ತರ ಕಾಲದಲ್ಲೂ
ಊಟ, ಉಪಚಾರ, ವ್ಯವಹಾರ...., ಇತ್ಯಾದಿ
ಇರುತ್ತದೆ.
ಷಷ್ಠ್ಯಬ್ದಿಪೂರ್ವ ಕಾಲದಲ್ಲಿ
ಊಟ, ಉಪಚಾರ, ವ್ಯವಹಾರಾದಿಗಳು
ಸಾಧಕನಂತೆ ಇರಬೇಕು.
ಷಷ್ಠ್ಯಬ್ದ್ಯೋತ್ತರ ಕಾಲದಲ್ಲಿ
ಊಟ, ಉಪಚಾರ, ವ್ಯವಹಾರಾದಿಗಳು
ಶಿಕ್ಷಕನಂತೆ ಇರಬೇಕು.
ಷಷ್ಠ್ಯಬ್ದಿಪೂರ್ವ ಕಾಲದಲ್ಲಿ
ನಾವು, ನೀವುಗಳು ಭವದ ಸುಪರ್ದಿನಲ್ಲಿದ್ದರೆ
ಷಷ್ಠ್ಯಬ್ದ್ಯೋತ್ತರ ಕಾಲದಲ್ಲಿ ನಾವು, ನೀವುಗಳು
ಅನುಭವದ ಸುಪರ್ದಿನಲ್ಲಿರಬೇಕು.
ಈ ನಮ್ಮ ಬ್ರಹ್ಮಾಂಡ ಬದುಕಿನಲ್ಲಿ
ನಾವು, ನೀವುಗಳು
“ಕಲಿಯೋದಕ್ಕಾಗಿ”
ಅರವತ್ತು ವರುಷಗಳನ್ನು ಮೀಸಲಾಗಿರಿಸಿದರೆ
“ಕಲಿಸೋದಕ್ಕಾಗಿ”
ನಲವತ್ತು ವರುಷಗಳನ್ನು ಮೀಸಲಾಗಿರಿಸಬೇಕು.
ನಲವತ್ತೋ, ಐವತ್ತೋ, ಇನ್ನೇನೋ, ಇನ್ನೊಂದೋ....
ಒಟ್ಟಿನಲ್ಲಿ, ನಾವು, ನೀವುಗಳು ಆಗ್ರಹಿಸಿದಷ್ಟಲ್ಲ,
ಆ ಭಗವಂತ ಅನುಗ್ರಹಿಸಿದಷ್ಟು ಮಾತ್ರ...!!
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು
No comments:
Post a Comment
If you have any doubts. please let me know...