ಒಬ್ಬರು ಒಂದು ಹೆಬ್ಬಾವಿನ ಮರಿಯನ್ನು ಸಾಕುತ್ತಾರೆ.
ತುಂಬಾ ಪ್ರೀತಿಯಿಂದ ಅದನ್ನು ಲಾಲಿಸಿ ಪೋಷಿಸುತ್ತಾರೆ. ದಿನಗಳುರುಳಿದಂತೆ ಆ ಹಾವು ದೊಡ್ಡ ಹೆಬ್ಬಾವಾಗಿ ಬೆಳೆಯಿತು...
ಹೀಗಿರುವಾಗ ಅದು ಮೂರ್ನಾಲ್ಕು ದಿನಗಳಿಂದ ಆಹಾರವನ್ನು ತಿನ್ನದೇ ಹಾಯಾಗಿ ಒಂದು ರೀತಿಯ ಮಂಧತೆಯಿಂದ ಮಲಗುತ್ತಿತ್ತು.
ಆತನಿಗೆ ತುಂಬಾ ಚಿಂತೆ ಕಾಡತೊಡಗಿತು.
ಅದು ಸತ್ತು ಹೋದರೆ ಎಂದು ಭಯಗೊಂಡ ಆತ ಅದನ್ನು ಒಂದು ಪಶು ಡಾಕ್ಟರ್ ಹತ್ತಿರ ತೆಗೊಂಡು ಹೋಗಿ ತೋರಿಸಿ ಸಮಸ್ಯೆಯನ್ನು ಹೇಳುತ್ತಾರೆ...
ಡಾಕ್ಟರು ಅದನ್ನು ಪರೀಕ್ಷಿಸಿ ಆತನತ್ರ ಮೂರು ಪ್ರೆಶ್ನೆಗಳನ್ನು ಕೇಳುತ್ತಾರೆ.
ಎಷ್ಟು ದಿವಸಗಳಿಂದ ಹಾವು ಆಹಾರವನ್ನು ತಿನ್ನುತ್ತಿಲ್ಲ?
*ಆತ:* ಮೂರ್ನಾಲ್ಕು ದಿನಗಳಿಂದ.
ಇದು ನಿಮ್ಮ ಹತ್ತಿರ ಮಲಗುತ್ತಿದೆಯಾ?
*ಆತ:* ಸೌಖ್ಯ ಇಲ್ಲದಾಗಿನಿಂದ ಇದು ನನ್ನ ಜೊತೆ ಮಲಗುತ್ತಿದೆ.
ಅದು ನಿಮ್ಮ ಜೊತೆ ಹೇಗೆ ಮಲಗುತ್ತಿದೆ?
*ಆತ:* ನೀಳವಾಗಿ ಮಲಗುತ್ತಿದೆ.
*ಆತನ ಉತ್ತರವನ್ನು ಕೇಳಿದ ಡಾಕ್ಟರ್ ಹೇಳುತ್ತಾರೆ:*
ಈ ಹಾವಿಗೆ ಯಾವ ಕಾಯಿಲೆಯೂ ಇಲ್ಲ. ಇದು ನಿಮ್ಮನ್ನು ತಿನ್ನಲು ಪ್ರಯತ್ನ ಮಾಡುತ್ತಿದೆ. ನಿಮ್ಮ ಹತ್ತಿರ ಮಲಗಿ ನಿಮ್ಮ ಉದ್ದವನ್ನು ಅಳೆಯುತ್ತಿದೆ. ಉಪವಾಸವಿದ್ದು ದೊಡ್ಡ ಬೇಟೆಗಾಗಿ ತನ್ನ ಶರೀರವನ್ನು ತಯಾರು ಮಾಡುತ್ತಿದೆ.
ಆದಷ್ಟು ಬೇಗ ಇದನ್ನು ಎಲ್ಲಾದರೂ ದೊಡ್ಡ ಕಾಡಲ್ಲಿ ತೆಗೊಂಡೋಗಿ ಬಿಟ್ಟುಬಿಡಿ.
*"ನಾವು ಅರ್ಹತೆ ಇದ್ದದನ್ನು, ಇರುವವರನ್ನು ಮಾತ್ರ ಒಟ್ಟಿಗೆ ಇಟ್ಟುಕೊಳ್ಳಬೇಕು.* *ಸಂಬಂಧವನ್ನು ಬೆಳೆಸುವಾಗ ಬಹಳ ಜಾಗರೂಕತೆಯಿಂದ ಮುಂದುವರಿಯಬೇಕು. ಒಟ್ಟಿಗೆ ಇದ್ದವರು ಯಾವತ್ತಾದರೂ ತಮ್ಮ ಅಸಲಿ ಮುಖವಾಡವನ್ನು ತೋರಿಸಬಹುದು.*
*ನಮ್ಮವರಲ್ಲಿಯೂ ನಾವು ಬೆಳಸಿದ, ಉಪವಾಸವಿರುವ ಹೆಬ್ಬಾವುಗಳಿರುತ್ತವೆ, ಹುಷಾರು..."*
No comments:
Post a Comment
If you have any doubts. please let me know...