March 13, 2021

ಅನುಭವಾಮೃತ

.... 
* ತಪ್ಪು ನಿಮ್ಮ ಅನುಭವಗಳನ್ನು ಹೆಚ್ಚಿಸುತ್ತದೆ, ಅನುಭವ ನಿಮ್ಮ ತಪ್ಪುಗಳನ್ನು ಕಡಿಮೆ ಮಾಡುತ್ತದೆ ನೀವು ತಪ್ಪಿನಿಂದ ಪಾಠ ಕಲಿತರೆ ಜನ ನಿಮ್ಮ ಯಶಸ್ಸು ನೋಡಿ ಪಾಠ ಕಲೀತಾರೆ

* ಒಂದು ನಿಮಿಷದಲ್ಲಿ ಬದುಕು ಬದಲಾಗುತ್ತೆ ಅಂತ ಹೇಳೋಕಾಗಲ್ಲ, ಆದರೆ ಒಂದು ನಿಮಿಷದಲ್ಲಿ ತೆಗೆದುಕೊಂಡ ನಿರ್ಧಾರ ನಮ್ಮ ಬದುಕನ್ನು ಬದಲಾಯಿಸುತ್ತೆ.

* ಒಳ್ಳೆಯ ಅವಕಾಶ ತಪ್ಪಿಹೋಯಿತೆಂದು ಯಾವತ್ತೂ ಕಣ್ಣೀರು ಹಾಕಬೇಡಿ, ಕಣ್ಣೀರು ನಿಮ್ಮ ಮುಂದಿರುವ ಅವಕಾಶವನ್ನು ಮರೆಮಾಚುತ್ತದೆ

* ನೋವು ಬಂದಾಗ ಜೀವನ ಇಷ್ಟ ಆಗುವುದಿಲ್ಲ ನಿಜ, ಆದರೆ – ಇಷ್ಟ ಆದವರು ಜೊತೆಯಾಗಿರುವಾಗ ನೋವಲ್ಲೂ ಕೂಡಾ ಏನೋ ಒಂಥರಾ ಖುಷಿ ಇರುತ್ತದೆ.

ತಪ್ಪಾಯಿತು ಎನ್ನಲು ಎಂದೂ ನಾಚಿಕೆ ಪಡಬೇಡ. ಯಾಕೆಂದರೆ ಹಾಗೆನ್ನುವುದರ ಅರ್ಥ ನಿನ್ನೆಗಿಂತ ಇಂದು ಬುದ್ಧಿ ಹೆಚ್ಚಾಗಿದೆ ಎಂದು.

ಸಂತೋಷದ ಸಮಯದಲ್ಲಿ ಚಪ್ಪಾಳೆ ಹೊಡೆಯುವ ಹತ್ತು ಬೆರಳಿಗಿಂತ, ದುಃಖದ ಸಮಯದಲ್ಲಿ ಕಣ್ಣೀರು ಒರೆಸುವ ಒಂದು ಬೆರಳು ಎಷ್ಟು ಪವಿತ್ರ ಅಲ್ವಾ.?

ಜೀವನದಲ್ಲಿ ನೀನು ಗೆದ್ದರೆ ನೀನು ಯಾರೆಂದು ಎಲ್ಲರಿಗೂ ಗೊತ್ತಾಗುತ್ತದೆ. ಒಂದು ವೇಳೆ ಸೋತರೆ ನಿನ್ನವರು ಯಾರೆಂದು ನಿನಗೆ ಗೊತ್ತಾಗುತ್ತದೆ.

ಬದುಕಿನಲ್ಲಿ ಯಾರನ್ನೂ ನಂಬಬೇಡಿ. ನಿಮ್ಮ ನೆರಳನ್ನೂ ಕೂಡಾ ಯಾಕೆಂದರೆ ಸಂಜೆಯಾಗುತ್ತಲೆ ನೆರಳು ಕೂಡಾ ನಿಮ್ಮನ್ನು ಬಿಟ್ಟು ಹೋಗುತ್ತದೆ.

ನಂಬಿಕೆಗಿಂತ ಸಂದೇಹವೇ ಜಾಸ್ತಿಯಾದರೆ ಯಾವ ಸಂಬಂಧವೂ ಉಳಿಯಲ್ಲ. ಸಂದೇಹದ ನಡುವೆ ನಂಬಿಕೆ ಗಟ್ಟಿ ಆದರೆ ಯಾವ ಮನಸ್ಸೂ ಮುರಿಯಲ್ಲ.

ಚಿತೆಯ ಮೇಲೆ ಕರಿ-ಬಿಳಿ ಎಂಬ ಬೇಧ ಭಾವ ಇಲ್ಲ ಎಲ್ಲರೂ ಕೆಂಪಗೆಯೇ

ನಾನು ನನ್ನ ಬಲಗೈಯಲ್ಲಿ ಏನು ಬೇಕಾದರೂ ಸಾಧಿಸಬಲ್ಲೆ, ಆದರೆ ನನ್ನ ಎಡಗೈಯನ್ನು ಅಮ್ಮ ಹಿಡಿದುಕೊಂಡು ಪ್ರೋತ್ಸಾಹಿಸಿದಾಗ ಮಾತ್ರ

ವಿಶಾಲ ಆಕಾಶವನ್ನು ಚಿಕ್ಕ ಕಣ್ಣಿನಲ್ಲೇ ನೋಡಬಹುದು. ಆದರೆ ಒಂದು ಒಳ್ಳೆ ಹೃದಯವನ್ನು ನೋಡಬೇಕಾದರೆ ನಮ್ಮ ಮನಸ್ಸು ವಿಶಾಲವಾಗಿರಬೇಕು.
ಜೀವನ ಒಂದು ಸುಂದರವಾದ ರಂಗೋಲಿ. ಒಂದು ಚುಕ್ಕಿ ತಪ್ಪಿದರೂ ಹಾಳಾಗುತ್ತದೆ. ಅದಕ್ಕಾಗಿ ಜೀವನದ ಪ್ರತಿ ಹೆಜ್ಜೆಯಲ್ಲೂ ಗಮನ ಇರಲಿ

ಬದುಕು ಟೀಚರ್‌ಗಿಂತ ತುಂಬಾ ಸ್ಟ್ರಿಕ್ಟ್. ಯಾಕೆಂದರೆ ಟೀಚರ್ ಮೊದಲು ಪಾಠ ಮಾಡಿ ನಂತರ ಪರೀಕ್ಷೆ ಮಾಡ್ತಾರೆ. ಆದರೆ ಬದುಕು ಮೊದಲು ಪರೀಕ್ಷೆ ಮಾಡಿ ನಂತರ ಪಾಠ ಕಲಿಸುತ್ತದೆ.

-ಜ್ಞಾನಚೇತನ

No comments:

Post a Comment

If you have any doubts. please let me know...