ಪಲ್ಲಕ್ಕಿ ಉತ್ಸವ 12 ನೇ ಶತಮಾನದಲ್ಲೂ ಮಾನ್ಯವಾಗಿದೆ ಎಂದು ಚನ್ನಬಸವಣ್ಣ ವಚನ ಆಧಾರವಾಗಿದೆ, ಗುರುಶಿಷ್ಯ ಪರಂಪರೆಯ ಆದರ ಅಭಿಮಾನಗಳ ಪ್ರತೀಕವಾಗಿ ಬೆಳೆದುಬಂದ ಈ ಉತ್ಸವ, ಪಲ್ಲಕ್ಕಿಯಲ್ಲಿ ಗುರು ಮೆರವಣಿಗೆ ತನ್ನ ಮೆರವಣಿಗೆ ,ಅವರ ಆನಂದವೇ ನನ್ನ ಆನಂದ ಎಂದು ಭಾವನೆಯನ್ನು ಚನ್ನಬಸವಣ್ಣನವರು ವಚನದಲ್ಲಿ ವ್ಯಕ್ತಪಡಿಸುತ್ತಾರೆ.
ಮತ್ತು ಶಿಷ್ಯನು ಗುರುವನ್ನು ಉನ್ನತ ಸ್ಥಾನದಲ್ಲಿಟ್ಟು ಮೆರೆಸುವ ಮೂಲಕ ತನ್ನನ್ನೇ ತಾನು ಮೆರೆಸಿ ಕೊಂಡಂತೆ ಎಂಬುದಾಗಿ ಚನ್ನಬಸವಣ್ಣನವರು ವ್ಯಕ್ತಪಡಿಸುತ್ತಾರೆ.
ತನ್ನ ಗುರುವಿನ ಅಭಿಮಾನವನ್ನು ಪಲ್ಲಕ್ಕಿಯಲ್ಲಿ ಹೊತ್ತು ಮೆರೆಸುವ ಸಂಕೇತವಾಗಿ ಪಲ್ಲಕ್ಕಿ ಉತ್ಸವಗಳು ಶರಣರ ಕಾಲದಲ್ಲಿ ವ್ಯಕ್ತಿ ಸಂಕೇತ ವಾಗಲ್ಲ, ಮೌಲ್ಯ ವಾಸ್ತವಿಕವಾಗಿ ,ಜರುಗುತ್ತಿದ್ದ ವೆಂಬುದು ಗ್ರಹಿಸಬಹುದಾಗಿದೆ.
ಚನ್ನಬಸವಣ್ಣ
ಗುರುಶಿಷ್ಯರಲ್ಲಿ ಭೇದವಿಲ್ಲದ ಕಾರಣ ಗಮಿಸುವುದಯ್ಯಾ
ದ್ವಾರದ ಮುಂದಿಪ್ಪ ಪಲ್ಲಕ್ಕಿಯಲ್ಲಿ.
ಮರುಳಶಂಕರನೇರುವ ಗಜಮಹಾಪೀಠವ,
ಕೂಡಲಚೆನ್ನಸಂಗನ ಶರಣ ಸಿದ್ಧರಾಮನ
ಭಕ್ತಿ ನಿಮಿತ್ತಕ್ಕೇರುವೆನಾಂದೋಲನವ,
ಮತ್ತೊಂದಕ್ಕಲ್ಲ ಪ್ರಭುವೆ
ಸಮಗ್ರ ವಚನ ಸಂಪುಟ: 3 ವಚನದ ಸಂಖ್ಯೆ: 1195
No comments:
Post a Comment
If you have any doubts. please let me know...