March 27, 2021

ಅಹಲ್ಯಾ ದ್ರೌಪದಿ ಸೀತಾ ತಾರಾ ಮಂಡೋದರೀ ತಥಾ

ಪಾಂಡಿತ್ಯಕ್ಕೆ ಸಿಲುಕಿ ನಲುಗುತ್ತಿರುವ ಶ್ರುತಿಸ್ಮೃತಿ ಶ್ಲೋಕಗಳು : ಭಾಗ -೦೧ 

ಭಗವದ್ಗೀತ ಕರ್ಮಯೋಗ : ೦೩.೨೬
ನ ಬುದ್ಧಿಭೇದಂ ಜನಯೇದಜ್ಞಾನಾಂ ಕರ್ಮಸಙ್ಗಿನಾಮ್ |||೩.೨೬||
ಜ್ಞಾನಿಯಾದವನು ಕರ್ಮಸಂಗಿಗಳಾದ ಅಜ್ಞರ ಬುದ್ಧಿಯಲ್ಲಿ ಭೇದವನ್ನುಂಟು ಮಾಡಬಾರದು.

ತಿಳಿದವನು ತನ್ನ ಪಾಂಡಿತ್ಯದಿಂದ ಜನರ ನಂಬಿಕೆಯಲ್ಲಿ ಒಡಕನ್ನು ಉಂಟುಮಾಡಬಾರದು ಎಂಬುವದೇ ಮೇಲಿನ ಸೂತ್ರದ ಅರ್ಥ.

ಮೇಲಿನ ಎರಡೂ ಶ್ಲೋಕಗಳು ಇಂದಿನ ಆಧುನಿಕ ಪಂಡಿತರ ಪಾಂಡಿತ್ಯಕ್ಕೆ ಸಿಲುಕಿ ನಲುಗುತ್ತಿರುವ ಶ್ಲೋಕಗಳು.ಇದರಲ್ಲಿ ಹುದುಗಿರುವ ಆಧ್ಯಾತ್ಮಿಕ ಮತ್ತು ಸಾಮಾಜಿಕ ಕಳಕಳಿಯ ಬಗ್ಗೆ ಪಂಡಿತರಗಿರುವ ನಿರ್ಲಕ್ಷ್ಯ ಮತ್ತು ಪೂರ್ವಾಗ್ರಹ ಪೀಡಿತ ಮನೋಭಾವವೇ ಕಾರಣ ಎಂದು ಹೇಳಿದರೇ ಅತಿಶಯೋಕ್ತಿಯಾಗಲಾರದು.
ನಾನು ನೋಡಿದಂತೆ ಕೇಳಿದಂತೆ ಇಂಥ ಮಹನೀಯರು ನಮ್ಮಲ್ಲೇ ಪ್ರಖ್ಯಾತಿಯನ್ನು ಪಡೆದಿರುವದು ಸೋಜಿಗದ ಸಂಗತಿ. ಶಂಕರಮಠಗಳಲ್ಲಿ ಶಂಕರರ ಪರವಾಗಿಯೂ ಸ್ವಮಠಗಳಲ್ಲಿ ಶಂಕರರನ್ನೂ ದೂಷಿಸುವ ಕಾರ್ಯದಲ್ಲಿಯೂ ನಿರತರಾಗಿರುವ ಇಂಥ ವಿಭಜಿತ ವ್ಯಕ್ತಿತ್ವ ಉಳ್ಳವರು , ಕೃಷ್ಣನು ಹದಿನಾರು ಸಾವಿರಹೆಂಡತಿಯನ್ನು ಹೊಂದಿದ್ದರೂ ಅವನನ್ನು ದೂಷಿಸದೇ ಕಾಮಾಶಾಸ್ತ್ರಕೆ ಭಾಷ್ಯಬರೆಯುವವರನ್ನು ಹೀಯಾಳಿಸುವರು ದುರಾಗ್ರಹವನ್ನು ತಮ್ಮ ಮೇಲೆಯೇ ಹೇರಿಕೊಂಡೂ ನಲುಗುತ್ತಿರುವ ಇಂಥ ಪಂಡಿತರನ್ನೂ ಅವರಮಾತಿಗೆ ಮರುಳು ಹೋಗುವವರನ್ನೂ  ಆ ಭಗವಂತನೇ ಕಾಪಾಡಬೇಕು.

ಅಹಲ್ಯಾ ದ್ರೌಪದಿ ಸೀತಾ ತಾರಾ ಮಂಡೋದರೀ ತಥಾ | ಪಂಚಕನ್ಯಾ ಸ್ಮರೇನ್ನಿತ್ಯಂ ಮಹಾ ಪಾತಕ ನಾಶನಮ್ || ೦೧ ||

ಈಗ ಮೊದಲಿನ ಶ್ಲೋಕದ ಗಹನಾರ್ಥವನ್ನು ತಿಳಿದುಕೊಳ್ಳೋಣ.
ಸಂದರ್ಭ : ಪಂಚಕನ್ಯಾ ಅಥವಾ ಪಂಚಕಂ ನಾ ಎಂಬ ಪದಗಳ ಉಪಯೋಗದ ಬಗ್ಗೆ ಇರುವ ಸಂಶಯ.
ರೂಢಿಯಲ್ಲಿರುವಂತೆ ಪಠಿಸಿದರೆ ಯಾವ ಅರ್ಥವನ್ನು ತಿಳಿಸಿಕೊಡುತ್ತದೆ. 
ಭಾವಾರ್ಥ : 
ಅಹಲ್ಯೆ . ದ್ರೌಪದೀ , ಸೀತಾ , ಮಂಡೋದರೀ ಮುಂತಾದ ಐವರು ಕನ್ಯೆಯರನ್ನು ನಿತ್ಯ ಸ್ಮರಿಸುವುದರಿಂದ ಮಹಾಪಾತಕಗಳು ನಾಶವಾಗುತ್ತವೆ.
ಸಂಶಯಾರ್ಥ :
ಮೇಲಿನ ಸಂದರ್ಭದಲ್ಲಿ ನಮ್ಮ ಆಧುನಿಕ ಪಂಡಿತರಿಗೆ ಬಂದೊದಗಿರುವ ಸಮಸ್ಯೆ ಏನೆಂದರೇ ಮೇಲೆ ಹೇಳಿದವರೆಲ್ಲರೂ ಮದುವೆಯಾದವರಾದ್ದರಿಂದ ಕನ್ಯೆಯರಲ್ಲ ಎಂಬ ಸಂಸ್ಕೃತ ಅರ್ಥವನ್ನಾಧಾರಿಸಿರುವ ಒಂದು ಅಭಿಪ್ರಾಯ. ಇದನ್ನು "ಪಂಚಕನ್ಯಾ" ಎಂಬುದಾಗಿ ಹೇಳದೇ "ಪಂಚಕಂ ನಾ" ಅರ್ಥಾತ್ ಈ ಐವರನ್ನು ಗಂಡಸರು ಸ್ಮರಿಸಬೇಕು ಎಂಬ ಅರ್ಥವನ್ನು ಹೊರಹಾಕಿದ್ದಾರೆ. 
ಈ ಸಂದರ್ಭದಲ್ಲಿ ನಾವು ಮೊದಲು ಕಂಡುಕೊಳ್ಳಬೇಕಾದ ವಿಷಯವೇನೆಂದರೇ "ನಾ" ಎಂಬ ಪದಕ್ಕೆ ಗಂಡಸರು ಎಂಬ ಅರ್ಥವನ್ನು ಯಾವ ನಿಘಂಟುವಿನಲ್ಲಿ ಅಥವಾ ಯಾವ ಪುರಾತನ ಗ್ರಂಥದಲ್ಲಿ ಇದಯೋ ಇಲ್ಲವೋ ಎಂಬುವದನ್ನು ನಿಶ್ಚಯಮಾಡಿಕೊಳ್ಳುವದು.
ವಾಚಸ್ಪತ್ಯಮ್ ಮತ್ತು ಶಬ್ದಕಲ್ಪದ್ರುಮ ಎಂಬ ನಿಘಂಟುವಿನಲ್ಲಿ 
ನಾ = (ನಹ್ ಬಂಧೇ + ಬಾಹುಲಕಾತ್ ) ನಿಷೇಧೇ " ಅಮಾನೋನಾ ನಿಷೇಧವಾಚಕಾಃ "  ನಿಷೇಧ ವಾಚಕ.
ನಾ=ಅಭಾವಃ = ಕೊರತೆ ಅಥವಾ ನ್ಯೂನತೇ ಎಂಬ ಅರ್ಥ 
ಶಬ್ದಕಲ್ಪದ್ರುಮೇ= ನಯತಿ ನೀಯತೇ ವಾ | ನೀ ಪ್ರಮಾಣೇ ||
ಉಣಾದಿ ಕೋಶೇ : ನಯತೇಡಿಚ್ಚ ನಾ
ಸಂದರ್ಭಶ್ಚ 
ನಾ+ ಕೃ ಪ್ರತ್ಯಯಃ + ಸ ಚ ಡಿತ್ ಪುರುಷಃ  || ಇತ್ಯಮರೇ ||  ನಾ ಎಂಬ ಅಕ್ಷರವು ಪ್ರತ್ಯಯ ರೂಪವಾಗಿ ಸೇರಿದಾಗ ಅರ್ಥಾತ್ ಪಂಚಜನಾಃ ಮುಂತಾದ ಸಂದರ್ಭದಲ್ಲಿ ಮಾತ್ರವೇ ಪುರುಷ ಅಥವಾ ಪುಲ್ಲಿಂಗ ಶಬ್ದವಾಗುತ್ತದೆ. ಮೇಲಿನ ಶ್ಲೋಕದಲ್ಲಿ ಇಂಥ ಪ್ರತ್ಯಯದ ಸಂದರ್ಭವೇ ಇಲ್ಲ.ಹಾಗಾಗಿ ಪ್ರತ್ಯಯ ರೂಪದಲ್ಲದೇ "ನಾ" ಎಂಬ ಪದಕ್ಕೆ ಯಾವಕಾಲದಲ್ಲೂ ಪುರುಷ ಅಥವಾ ಗಂಡಸು ಎಂಬ ಅರ್ಥವು ಬರುವುದೇ ಇಲ್ಲ.ಆದ್ದರಿಂದಲೇ "ನಾ" ಎಂಬ ಶಬ್ದವು ಪಂಡಿತರ ಪೂರ್ವಾಗ್ರಹಕ್ಕೆ ಒಳಗಾಗಿ ತಮ್ಮ ಪಾಂಡಿತ್ಯದ ಭ್ರಾಂತಿಯಿಂದುಂಟಾದ ಅಪಭ್ರಂಶವನ್ನು ಹೊರಹಾಕಿದ್ದಾರೇ ಎಂಬುವದೇ ಸಿದ್ಧಾಂತವಾಯಿತು.

ಇನ್ನು ಕನ್ಯಾ ಎಂಬ ಶಬ್ದದ ಅರ್ಥವನ್ನು ಪರಾಮರ್ಶೆ ಮಾಡೋಣ.
ಕನ್ಯಾ : 
ಅಮರ ಕೋಶದಲ್ಲಿ ಈ ಪದಕ್ಕೆ ಕುಮಾರೀ ಮಾತ್ರವಲ್ಲದೇ , ಗೌರೀ ಎಂಬುವದೂ ಮುಖ್ಯ ಅರ್ಥವಾಗಿರುತ್ತದೆ.  
ಮಹಾಭಾರತ = " ಯಸ್ಮಾತ್ ಕಾಮಯತೇ ಸರ್ವಾನ್ ಕಮೇರ್ಧಾತೋಶ್ಚ ಭಾವಿನಿ | ತಸ್ಮಾತ್ ಕನ್ಯೇಹ ಸುಶ್ರೇಣಿ | ಸ್ವತಂತ್ರಾ ವರವರ್ಣಿನೀ || 
ಉಣಾದಿ ಕೋಶ: ಕನ್+ದೀಪ್ತೌ ಅಘ್ನ್ಯಾದಿತ್ವಾತ್ ಯಕ್ | 
ಪಾಣಿನೀಮತೇ = ಕನ್ಯಾಯಾಃ  ಕನೀನ್ ಚೇತಿ ನಿರ್ದೋಷಾತ್ || 
ವೈದ್ಯಕ ದ್ರವ್ಯಗುಣ= ಶೋಥಘ್ನೀ ಕಾಸಹಾ ಕನ್ಯಾ ||  
ಕನ್ಯಾ ಎಂಬ ಪದಕ್ಕೆ ವಾಚಸ್ಪತ್ಯದಲ್ಲಿ ಸುಮಾರು ನೂರಕ್ಕೂ ಹೆಚ್ಚು ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತದೆ.ಅದರಲ್ಲಿಯೂ ಮದುವೆ ಆಗದವಳು ಎಂಬುವದು ಗೌಣಾರ್ಥವಾಗಿಯೇ ಇರುತ್ತದೆ.
ಬಹುಷಃ ಕನ್ಯಾ ಎಂಬ ಶಬ್ದಕ್ಕೆ ಮದುವೆಯಾಗದವಳು ಎಂಬುವದು ಕೇವಲ ಗೌಣಾರ್ಥವೇ ಇರುತ್ತದೆಯಾಗಿ ಮುಖ್ಯಾರ್ಥವಾಗಿ ಅದು ಮೇಲೆ ಹೇಳಿದ ಸ್ತ್ರೀಯರ ಅಪ್ರತಿಮ ಗುಣವಿಶೇಷಣವೇ ಆಗಿರುತ್ತದೆ.
ದೋಷಪರಿಹಾರ : 
"ನಾ" ಎಂಬ ಪದಕ್ಕೆ ಸಾಂದರ್ಭಿಕವಾಗಿ ಪಂಡಿತರು  ಗಂಡಸರು ಅಥವಾ ಪುರುಷ ಎಂಬುದಾಗಿ ನಿರ್ವಚನ ಮಾಡಬಹುದು. ಆದರೇ ಹಾಗೆ ಮಾಡಿದಲ್ಲಿ  ಮೇಲಿನ ಶ್ಲೋಕಕ್ಕೆ ಪಕ್ಷಪಾತ ಮತ್ತು ಪ್ರಾಸಂಗಿಕ ದೋಷಗಳು ಬಂದೊದಗುತ್ತವೆ.

ಪಕ್ಷಪಾತ  ದೋಷ : 
ಮೇಲಿನ ಶ್ಲೋಕದಲ್ಲಿ ಒಂದು ಸಾಮಾಜಿಕ ಕಟ್ಟಳೆಯ ಕಳಕಳಿ ಇರುತ್ತದೆ. ಹಾಗಾಗಿ ಈ ಶ್ಲೋಕವು ಕೇವಲ ಗಂಡಸರಿಗೇ ಮೀಸಲು ಎಂಬ ಅಭಿಪ್ರಾಯವಿರದೇ ಎಲ್ಲರಿಗೂ ಸಮಾನವಾದ ಸಂದೇಶವನ್ನು ರವಾನಿಸುತ್ತದೆ. ಹೆಣ್ಣಿನಮೇಲೆ ಶೋಷಣೆಯು ಹಿಂದಿನಕಾಲದಿಂದಲು ನಡೆಯುತ್ತಲೇ ಬಂದಿದೆ.ಹೀಗೆ ಶೊಷಣೆಗೊಳಗಾದವರು ಅತ್ಮಸ್ಥೈರ್ಯವನ್ನು ಕಳೆದುಕೊಳ್ಳದೇ , ಶೋಷಣೆಗೊಳಗಾದ ಈ ಐವರು ಸ್ತ್ರೀಯರನ್ನು ಧ್ಯಾನಿಸುತ್ತಾ ಧೈರ್ಯವಾಗಿ ಜೀವನವನ್ನು ನಡೆಸಬೇಕು.ಒಂದುವೇಳೇ ಅರಿವಿಲ್ಲದೇ ಮಹಾಪಾತಕ ಎಂದರೆ ಭ್ರೂಣಹತ್ಯಾದಿ ಮುಂತಾದ ತಪ್ಪುಗಳನ್ನು ಮಾಡಿದ್ದರೂ ಸಹ ಇಂಥವರನು ನೆನೆಯುವದರಿಂದ ಅಂಥ ಮಹಾಪಾಪಗಳು ದೂರವಾಗುತ್ತದೆ ಎಂಬುದೇ ಭಾವಾರ್ಥವು.

ಪ್ರಾಸಂಗಿಕ ದೋಷ : 
ಸಾಮಾನ್ಯವಾಗಿ ಮೇಲೆ ಹೇಳಿದ ಐವರೂ ಸ್ತ್ರೀಯರ ಮೇಲಲ್ಲದೇ  ಗಂಡಸರೇ ಹೆಣ್ಣಿನ ಮೇಲೆ ಶೋಷಣೆಮಾಡುತ್ತಾ ಬಂದಿರುತ್ತಾರೆ. ಹಾಗೆ ಈಗಲೂ ಯಾವ ಗಂಡಸಾದರೂ ಇಂಥ ಪಾಪಗಳನ್ನು ಮಾಡಿದರೇ ಇಂಥ ಶೋಷಣೆಗೆ ಒಳಗಾದ ಮೇಲೆ ಹೇಳಿದ ಐವರು ಸ್ತ್ರೀಯರನ್ನು ಸ್ಮರಣೆ ಮಾಡಿಕೊಂಡರೆ ಮಾಡಿದ ಮಹಾಪಾತಕಗಳು ಪರಿಹಾರವಾಗುತ್ತದೆ ಎಂಬ    ಹಾಸ್ಯಾಸ್ಪದ ಅಭಿಪ್ರಾಯವನ್ನು ಕೊಡುತ್ತದೆ.ಇಂಥ ಅಭಿಪ್ರಾಯವನ್ನು ಕೊಡುವ ಪಂಡಿತರಿಂದ್ ಸಮಾಜಕ್ಕೆ ಎಳ್ಳಷ್ಟೂ ಒಳ್ಳೆಯದಾಗುವದಿಲ್ಲ.
 
ಮುಂದಿನ ಭಾಗ : 
ಮುಂದಿನ ಶ್ಲೋಕ ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತಿ | ನರ್ಮದಾ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||೦೨ ||

ಸತ್ಯಾರ್ಥ ಪ್ರಕಾಶ

No comments:

Post a Comment

If you have any doubts. please let me know...