September 30, 2021

ಅತೀ ವಿನಯಮ್ ಧೂರ್ತ ಲಕ್ಷ್ಮಣಮ್

ಅಪ್ರಾಮಾಣಿಕತೆಯ ಸದ್ದು

ಒಂದು ಊರಿನಲ್ಲಿ ಒಬ್ಬ ಮುಗ್ಧ ಹಾಗೂ ಪ್ರಾಮಾಣಿಕನಾದ ಗೃಹಸ್ಥನಿದ್ದ.  ಆತನಿಗೆ ದೇವರ ಮೇಲೆ, ಸಾಧು ಸಂತರ ಮೇಲೆ ತುಂಬ ನಂಬಿಕೆ.  ಒಬ್ಬ ಕಟು ಹೃದಯದ ಕಪಟ ತಪಸ್ವಿ ಅವನ ಮನೆಗೆ ಬಂದ.  ಅವನ ಮಾತಿನ ಧಾಟಿ, ತೋರಿಕೆಗಳಿಂದ ಈ ಗೃಹಸ್ಥ ತುಂಬ ಪ್ರಭಾವಿತನಾದ.  ಹತ್ತಿರದ ಕಾಡಿನಲ್ಲಿ ಅವನಿಗೊಂದು ಪರ್ಣಶಾಲೆಯನ್ನು ಕಟ್ಟಿಕೊಟ್ಟು ಅವನ ಸಂತೋಷಕ್ಕಾಗಿ ಹಗಲು ರಾತ್ರಿ ದುಡಿದು ಸೇವೆ ಮಾಡುತ್ತಿದ್ದ.  ಸನ್ಯಾಸಿಯನ್ನು ಬಹುದೊಡ್ಡ ತಪಸ್ವಿ ಎಂದು ಭಾವಿಸಿ ಅವನಿಗೆ ಏನೂ ಕಡಿಮೆಯಾಗದಂತೆ ನೋಡಿಕೊಂಡ.

ಈ ಸಮಯದಲ್ಲಿ ಊರಿನಲ್ಲಿ ಕಳ್ಳರ ಹಾವಳಿ ಹೆಚ್ಚಾಯಿತು. ದಿನ ಬಿಟ್ಟು ದಿನ ಮನೆಮನೆಗಳಲ್ಲಿ ಕಳ್ಳತನದ ಸುದ್ದಿಗಳು ಬರತೊಡಗಿದವು.  ಗೃಹಸ್ಥ ತನ್ನ ಮನೆಯಲ್ಲಿದ್ದ ಎಲ್ಲ ಒಡವೆಗಳನ್ನು, ಬಂಗಾರದ ನಾಣ್ಯಗಳನ್ನು ಬಟ್ಟೆಯಲ್ಲಿ ಗಂಟುಕಟ್ಟಿಕೊಂಡು ತಪಸ್ವಿಯ ಪರ್ಣಕುಟಿಗೆ ಹೋದ. ಸನ್ಯಾಸಿಗೆ ಸಮಸ್ಕಾರ ಮಾಡಿ ಹೇಳಿದ, ‘ಸ್ವಾಮಿ, ಊರಿನಲ್ಲಿ ಭದ್ರತೆ ಇಲ್ಲ. ಅದಕ್ಕೆ ನಿಮ್ಮ ಪರ್ಣಕುಟಿಯಲ್ಲಿ ಇವುಗಳನ್ನು ಮುಚ್ಚಿಡಲೇ? ಇಲ್ಲಿ ಕಳ್ಳರು ಬರುವುದು ಸಾಧ್ಯವಿಲ್ಲ’. ಸನ್ಯಾಸಿ ಮೃದುವಾಗಿ ನಕ್ಕು ಹೇಳಿದ, ‘ಅಯ್ಯಾ, ನಮ್ಮಂತಹ ಸನ್ಯಾಸಿಗಳಿಗೆ ಬಂಗಾರವೂ ಅಷ್ಟೇ, ಮಣ್ಣೂ ಅಷ್ಟೇ.  ನೀನು ಅದನ್ನು ಎಲ್ಲಿ ಬೇಕಾದರೂ ಇಡು’. ಗೃಹಸ್ಥ ಪರ್ಣಕುಟಿಯ ಮೂಲೆಯಲ್ಲಿ ನೆಲವನ್ನು ಅಗೆದು ಅಲ್ಲಿ ತನ್ನ ಸಾಮಾನುಗಳನ್ನೆಲ್ಲ ಇಟ್ಟು ಮುಚ್ಚಿದ.

ಇಂಥ ಮಹಾನ್ ಸನ್ಯಾಸಿಗೆ ಆಸೆ, ಲೋಭ ಬರುವುದು ಸಾಧ್ಯವೇ ಇಲ್ಲ ಎಂಬ ನಂಬಿಕೆಯಿಂದ ಮನೆಗೆ ಬಂದ. ನಾಲ್ಕಾರು ದಿನಗಳ ನಂತರ ಕಳ್ಳ ಸನ್ಯಾಸಿ ನೆಲವನ್ನು ಅಗೆದು ಎಲ್ಲ ಬಂಗಾರವನ್ನು ತೆಗೆದುಕೊಂಡು ಮತ್ತೊಂದು ಪರಿಚಿತವಾದ ಜಾಗೆಯಲ್ಲಿ ಇಟ್ಟು ಗೃಹಸ್ಥನ ಮನೆಗೆ ಬಂದ. ‘ಅಯ್ಯಾ, ನಾವು ಎಲ್ಲವನ್ನೂ ತ್ಯಾಗ ಮಾಡಿದವರು. ಒಂದೇ ಜಾಗೆಯಲ್ಲಿ ಬಹಳಷ್ಟು ದಿನ ಇರುವುದು ಸರಿಯಲ್ಲ. ಇಂದು ಮಧ್ಯಾಹ್ನವೇ ಇಲ್ಲಿಂದ ಹೊರಟು ಬಿಡುತ್ತೇವೆ. ನೀನು ಮಾಡಿದ ಸೇವೆ ನಮಗೆ ತೃಪ್ತಿ ತಂದಿದೆ.  ದೇವರು ನಿನಗೆ ಒಳ್ಳೆಯದನ್ನು ಮಾಡಲಿ’ ಎಂದ. ಗೃಹಸ್ಥ ಎಷ್ಟು ಹೇಳಿದರೂ ಒಪ್ಪಲಿಲ್ಲ. ಅನಿವಾರ್ಯವಾಗಿ ಗೃಹಸ್ಥ ಒಪ್ಪಿ ಮಧ್ಯಾಹ್ನ ಅವನನ್ನು ಊರ ಹೊರಗಿನವರೆಗೂ ಹೋಗಿ ಕಳುಹಿಸಿ ಬಂದ.

ಒಂದು ಗಂಟೆಯೊಳಗೆ ಸನ್ಯಾಸಿ ಮರಳಿ ಗೃಹಸ್ಥನ ಮನೆಗೆ ಬಂದ.  ಅವನ ಜೊತೆಯಲ್ಲಿ ಒಂದು ಹುಲ್ಲುಕಡ್ಡಿ. ಸನ್ಯಾಸಿ ಹೇಳಿದ, ‘ನಿನ್ನ ಗುಡಿಸಲಿನಿಂದ ಹೊರಡುವಾಗ ನಮ್ಮ ಜಟೆಯಲ್ಲಿ ನಿನ್ನ ಪರ್ಣಕುಟಿಯ ಒಂದು ಹುಲ್ಲುಕಡ್ಡಿ ಸೇರಿ ಹೋಗಿದೆ.  ನನ್ನದಲ್ಲದ್ದನ್ನು ನಾವು ಎಂದಿಗೂ ತೆಗೆದುಕೊಳ್ಳಲಾರೆವು. ದಯವಿಟ್ಟು ಅದನ್ನು ತೆಗೆದುಕೋ’ ಎಂದು ಕಡ್ಡಿ ತೆಗೆದು ಕೊಟ್ಟ. ಸನ್ಯಾಸಿಯ ಈ ಪ್ರಾಮಾಣಿಕ ನಿಲುವನ್ನು ಕಂಡು ಗೃಹಸ್ಥ ರೋಮಾಂಚಿತನಾದ. ಇದನ್ನು ನೋಡುತ್ತಿದ್ದ ಗೃಹಸ್ಥನ ತಾಯಿ, ‘ಮಗೂ ಈ ಸನ್ಯಾಸಿಗೆ ಏನಾದರೂ ಕೊಟ್ಟಿದ್ದೀಯಾ? ಅಥವಾ ಅವನ ಬಳಿ ಯಾವುದಾದರೂ ವಸ್ತುವನ್ನು ಬಿಟ್ಟಿದ್ದೀಯಾ?’ ಎಂದು ಕೇಳಿದಳು.

‘ಹೌದಮ್ಮ, ಕಳ್ಳತನದ ಹೆದರಿಕೆಯಿಂದ ಮನೆಯ ಒಡವೆಗಳನ್ನೆಲ್ಲ ಸನ್ಯಾಸಿಯವರ ಪರ್ಣಕುಟಿಯಲ್ಲೇ ಮುಚ್ಚಿ ಇಟ್ಟಿದ್ದೇನೆ’ ಎಂದ ಮಗ. ತಾಯಿ ಹೇಳಿದಳು, ‘ತಕ್ಷಣವೇ ಅಲ್ಲಿಗೆ ಹೋಗು, ಇದೆಯಾ ನೋಡು. ಇಲ್ಲದಿದ್ದರೆ ಹೋಗಿ ಸನ್ಯಾಸಿಯನ್ನು ಹಿಡಿ. ಅವನೇ ಕಳವು ಮಾಡಿರಬೇಕು’. ಆತನಿಗೆ ನಂಬಿಕೆಯಾಗದಿದ್ದರೂ ಓಡಿಹೋಗಿ ನೋಡಿದ.

ಆಭರಣಗಳು ಇಲ್ಲದಿದ್ದನ್ನು ನೋಡಿ ಹೇಳಿದಂತೆ ನಾಲ್ಕು ಜನರನ್ನು ಕರೆದುಕೊಂಡು ಹೋಗಿ ಸನ್ಯಾಸಿಯನ್ನು ತದುಕಿದರೆ ಎಲ್ಲವೂ ಸಿಕ್ಕವು. ತಾಯಿಗೆ ಕೇಳಿದ, ‘ಅಮ್ಮಾ, ನಿನಗೆ ಸನ್ಯಾಸಿಯ ಮೇಲೆ ಹೇಗೆ ಸಂಶಯ ಬಂತು?’ ‘ಅವನು ಹುಲ್ಲುಕಡ್ಡಿಯನ್ನು ಮರಳಿ ತಂದಾಗಲೇ ಅವನು ಕಪಟಿ ಎನ್ನಿಸಿತು.

ಯಾರು ಅತಿಯಾದ ಪ್ರಾಮಾಣಿಕತೆ ತೋರಲು ಬಯಸುತ್ತಾರೋ ಅವರು ಆಂತರ್ಯದಲ್ಲಿ ಕಪಟಿಗಳಾಗಿರುತ್ತಾರೆ’. ಪ್ರಾಮಾಣಿಕತೆ ಒಳ್ಳೆಯದು. ನಾನು ತುಂಬ ಪ್ರಾಮಾಣಿಕ, ತನ್ನಷ್ಟು ಪ್ರಾಮಾಣಿಕರು ಯಾರೂ ಇಲ್ಲ ಎಂದು ಮೇಲಿಂದ ಮೇಲೆ ಪ್ರದರ್ಶನ ಮಾಡುವವರಲ್ಲಿ ಅಪ್ರಾಮಾಣಿಕತೆ ಇರುತ್ತದಂತೆ. ನಿಜವಾಗಿಯೂ ಪ್ರಾಮಾಣಿಕವಾಗಿರುವವರು ನಗಾರಿ ಹೊಡೆಯುವುದಿಲ್ಲ, ಕಹಳೆ ಊದುವುದಿಲ್ಲ, ತಮ್ಮ ಪಾಡಿಗೆ ತಾವು ಪ್ರಾಮಾಣಿಕರಾಗಿ ಬದುಕುತ್ತಾರೆ. ಹಾಗಿಲ್ಲದಿದ್ದವರು ಬಹಳ ಸದ್ದು ಮಾಡುತ್ತಾರೆ.

ದೇಹದಾನ ಶ್ರೇಷ್ಠ ದಾನ

ಒಂದು ದಿನ ಒಬ್ಬ ಶ್ರೀಮಂತ ಮಾಧ್ಯಮದವರನ್ನ ಅವನ ಮನೆಗೆ ಬರಲು ಹೇಳಿದ. 
ಮಾಧ್ಯಮದವರು ಬಂದು ಸೇರಿದರು ಆಗ ಆ ಶ್ರೀಮಂತ ತನ್ನ ಹತ್ತಿರ ಇದ್ದ ಬಿಲಿಯನ್ ಡಾಲರ್  ಕಾರನ್ನು ನಾಳೆ ಗುಂಡಿಯಲ್ಲಿ ಹೂಳುವುದಾಗಿ ತಿಳಿಸುತ್ತಾನೆ.
ಮಾಧ್ಯಮದವರು ಯಾಕೆ ಎಂದು ಕೇಳಿದಾಗ ನನ್ನ ನಂತರ ಇದನ್ನು ಉಪಯೋಗಿಸಲು ಯಾರು ಇಲ್ಲ ಅದಕ್ಕಾಗಿ ಎನ್ನುತ್ತಾರೆ. ಸರಿ ಈಗ ಹೊರಡಿ ನಾಳೆ ಬನ್ನಿ ಎಂದು ಹೇಳಿ ಎಲ್ಲರನ್ನೂ ಕಳುಹಿಸಿದ.
ನಾಳೆ ಆಯಿತು ಮಾಧ್ಯಮದವರೆಲ್ಲ ಬಂದರು ಶ್ರೀಮಂತನ ಮನೆ ಮುಂದೆ ಒಂದು ಗುಂಡಿಯನ್ನು ತೆಗೆಸಲಾಗಿತ್ತು ಅದರ ಮುಂದೆ ಆ ಶ್ರೀಮಂತನ ಬಿಲಿಯನ್ ಡಾಲರ್ ಬೆಲೆ ಬಾಳುವ ಕಾರು ಕೂಡಾ ನೀಲ್ಲಿಸಲಾಗಿತ್ತು.
ಆಗ ಮಾಧ್ಯಮಗಳ ಜೊತೆಗೆ ಬಂದಿದ್ದ ಜನರೆಲ್ಲಾ ಮಾತಾಡಲು ಶುರುಮಾಡಿದರು..
ಇವನಿಗೆ ಹುಚ್ಚು ಹಿಡಿದುಕೊಂಡಿದೆ ಅನಿಸುತ್ತೆ ಅಷ್ಟು ಬೆಲೆ ಬಾಳುವ ಕಾರು ತನಗೆ ಉಪಯೋಗ ಇಲ್ಲ ಅಂದರೆ ಮಾರಾಟ ಮಾಡಲಿ ಇಲ್ಲ ಅಂದರೆ ಯಾರಿಗಾದರೂ ದಾನ ಮಾಡಲಿ ಅಂತ ಮಾತನಾಡತೊಡಗಿದರು...
ಆಗ ಇದನ್ನೆಲ್ಲ ಕೇಳಿದ ಶ್ರೀಮಂತ ಹೇಳುತ್ತಾನೆ
ನಾನು ಈ ಕಾರನ್ನು ಮಣ್ಣಿನಲ್ಲಿ ಮುಚ್ಚಿಹಾಕಿದರೆ ಹುಚ್ಚುತನ ಅದೆ ದಾನ ಮಾಡಿದರೆ ಮಾನವೀಯತೆ ಅಲ್ಲವೇ ಎಂದ ಹಾಗ ಜನರೆಲ್ಲ ಹೌದು ಹೌದು ಎಂದರು... 
ಆಗ ಆ ಶ್ರೀಮಂತ ಹೇಳ್ತಾನೆ" ಹಾಗಾದರೆ ನಾನು ಮಾತ್ರ ಅಲ್ಲ ಇಲ್ಲಿ ಎಲ್ಲರೂ ಹುಚ್ಚರೆ ಯಾಕೆ ಗೊತ್ತಾ ಒಬ್ಬ ವ್ಯಕ್ತಿ ಮರಣದ ನಂತರ ಆ ವ್ಯಕ್ತಿಯ ಶವ ಹುಳುವ ಬದಲು ದೇಹ ದಾನ ಮಾಡಿದರೆ ಆ ವ್ಯಕ್ತಿಯ ಎಷ್ಟೋ ಅಂಗಗಳು ಉಪಯೋಗಕ್ಕೆ ಬರುತ್ತವೆ ಅದರಿಂದ ಎಷ್ಟೋ ಜೀವಗಳು ಬದುಕುತ್ತವೆ" ನಾನು ಇವತ್ತು ಈ ಕಾರು ಹೂಳಲು ನಿಮ್ಮನ್ನು ಇಲ್ಲಿ ಕರೆದಿಲ್ಲ....
ನಾನು ನಿಮ್ಮನ್ನು ಕರೆದು ಹೇಳಬಯಸಿದ ವಿಷಯ ನಿಮಗೆ ಅರ್ಥ ಆಗಿದೆ ಅಂದುಕೋಳ್ಳತ್ತೇನೆ ಅಂದ....!!

ಶರನ್ನವರಾತ್ರಿ ಆಚರಣೆ ಮತ್ತು ಮಹತ್ವ

*ನವರಾತ್ರಿ ವಿಶೇಷ*

*ಶರನ್ನವರಾತ್ರಿ ಆಚರಣೆ ಮತ್ತು ಮಹತ್ವ*
~~~~~~~~~~~~~~~~~~~~

ನವರಾತ್ರಿ ಎಲ್ಲ ಜನರೂ ಆಚರಿಸುವ ಒಂದು ವಿಶಿಷ್ಟವಾದ ಹಬ್ಬ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನವರಾತ್ರಿ ಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಶಕ್ತಿಯ ಆರಾಧನೆ ಈ ಹಬ್ಬದ ವೈಶಿಷ್ಟ್ಯ. 9 ದಿನಗಳ ಕಾಲ ಆಚರಿಸುವ ಈ ಪರ್ವಕ್ಕೆ ದುರ್ಗೋತ್ಸವ ಎಂದೂ ಕರೆಯುತ್ತಾರೆ.

ನವರಾತ್ರಿ ಒಂಭತ್ತು ರಾತ್ರಿಗಳ ಸಮೂಹ. ಈಗ ಎರಡು ನವರಾತ್ರಿ ವಿಶೇಷವಾಗಿದ್ದು, ಆಚರಣೆಯಲ್ಲಿದೆ. ಒಂದು ಶರನ್ನವರಾತ್ರಿ ಇನ್ನೊಂದು ಚೈತ್ರ ನವರಾತ್ರಿ. ಈಗ ನಾವು ಆಚರಿಸುವುದು ಶರನ್ನವರಾತ್ರಿ.
ನವರಾತ್ರಿಯ ಒಂದೊಂದು ದಿನವೂ ಬಹಳ ವಿಶೇಷವಾಗಿ ನಿಲ್ಲುತ್ತದೆ. 9 ದಿನಗಳ ಕಾಲ ಆದಿ ಶಕ್ತಿಯನ್ನು ನವ ವಿಧದಲ್ಲಿ ಪೂಜಿಸಲಾಗುತ್ತದೆ. ಮೊದಲ ದಿನ ಅಂದರೆ ಪಾಡ್ಯದ ದಿನ ಯೋಗನಿದ್ರಾ ದುರ್ಗಾ ಪೂಜಾ, ಎರಡನೇ ದಿನ ದೇವಜಾತ ದುರ್ಗಾಪೂಜಾ, ಮೂರನೇ ದಿನ ಮಹಿಷಾಸುರ ಮರ್ಧಿನಿ ದುರ್ಗಾಪೂಜಾ, ನಾಲ್ಕನೇ ದಿನ ಶೈಲ ಜಾತಾ ದುರ್ಗಾಪೂಜಾ, ಐದನೇ ದಿನ ದೂಮೃಹಾ ದುರ್ಗಾಪೂಜಾ, ಆರನೇ ದಿನ ಚಂಡ-ಮುಂಡ ಹಾ ದುರ್ಗಾಪೂಜಾ, ಏಳನೇ ದಿನ ರಕ್ತ ಬೀಜ ಹಾ ದುರ್ಗಾಪೂಜಾ, ಎಂಟನೇ ದಿನ ನಿಶುಂಭ ಹಾ ದುರ್ಗಾಪೂಜಾ.(ದುರ್ಗಾಷ್ಠಮಿ), ಒಂಭತ್ತನೇ ದಿನ ಶುಂಭ ಹಾ ದುರ್ಗಾಪೂಜಾ. ಏಳನೇ ದಿನ ಅಂದರೆ ಸಪ್ತಮಿಯಿಂದ ತ್ರಿದಿನ ದುರ್ಗಾಪೂಜಾ ಎಂದೂ ಮಾಡುತ್ತಾರೆ. ಮಹಾಕಾಳಿ, ಮಹಾಲಕ್ಷ್ಮಿ,ಮಹಾಸರಸ್ವತಿ ಪೂಜೆ ಮಾಡಲಾಗುತ್ತದೆ. ನವಮಿಯಂದು ಆಯುಧಗಳನ್ನು ಪೂಜಿಸಲಾಗುತ್ತದೆ, ಹತ್ತನೇ ದಿನ ವಿಜಯದಶಮಿ. ಮಹಾದುರ್ಗೆ ರಾಕ್ಷಸರನ್ನು ಸಂಹರಿಸಿ ವಿಜಯವನ್ನು ಸಾಧಿಸಿದ ದಿನ. ಇದು ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ರಾವಣನನ್ನು ಕೊಂದ ದಿನ ಹಾಗೂ ದ್ವಾಪರ ಯುಗದಲ್ಲಿ ಪಾಂಡವರು ಕೌರವರನ್ನು ಸೋಲಿಸಿದ ದಿನವೂ ಹೌದು. ಆದ್ದರಿಂದ ಇವರೆಲ್ಲರ ವಿಜಯದ ಸಂಕೇತವಾಗಿ ಈ ದಿನವನ್ನು ವಿಜಯದಶಮಿ ಎಂದು ಆಚರಿಸುವುದು ಸಂಪ್ರದಾಯ.

*ಘಟಸ್ಥಾಪನೆಯ ಮಹತ್ವ* :
 ನವರಾತ್ರಿಯನ್ನು ಏಕೆ ಆಚರಿಸುತ್ತೇವೆ? ಬ್ರಹ್ಮಾಂಡವು ಒಂದು ಘಟ(ಮಡಕೆ)ಯಂತಿದೆ. ಈ ಘಟರೂಪಿ ಬ್ರಹ್ಮಾಂಡದಲ್ಲಿ ಅವತರಿಸಿದ ತೇಜಸ್ವೀ ಆದಿಶಕ್ತಿಯನ್ನು, ಒಂಬತ್ತು ದಿನಗಳ ಕಾಲ ನಿರಂತರ ಉರಿಯುವ ನಂದಾದೀಪದ ಮಾಧ್ಯಮದಿಂದ ಪೂಜಿಸುವುದೇ ನವರಾತ್ರಿಯನ್ನು ಆಚರಿಸುವ ಉದ್ದೇಶವಾಗಿದೆ. ಮನೆಯಲ್ಲಿ ಘಟಪೂಜೆಯನ್ನು ಮಾಡಿದರೆ, ಶ್ರೀ ದುರ್ಗಾ ದೇವಿಯ ತತ್ವದ ಲಾಭವಾಗುವುದಲ್ಲದೆ ಮನೆಯ ವಾಸ್ತು ಕೂಡ ಚೈತನ್ಯಮಯವಾಗುತ್ತದೆ.

*ಅಖಂಡ ದೀಪಪ್ರಜ್ವಲನೆ:*
 ಭಕ್ತರು ಒಂಬತ್ತು ದಿನಗಳ ಕಾಲ ಉರಿಸುವ ದೀಪ, ನವರಾತ್ರ್ಯೋತ್ಸವದ ವೈಶಿಷ್ಟ್ಯ. ಗುಜರಾತಿನಲ್ಲಿ, ನವರಾತ್ರಿಯ ಸಮಯದಲ್ಲಿ ಅನೇಕ ತೂತುಗಳಿರುವ ಮಣ್ಣಿನ ಮಡಕೆಯಲ್ಲಿ ದೀಪವನ್ನು ಇಟ್ಟು ಪೂಜಿಸಲಾಗುತ್ತದೆ. ಸ್ತ್ರೀಯರ ಮಾತೃಶಕ್ತಿಯ ಪ್ರತೀಕವಾಗಿ ಒಂಬತ್ತು ದಿನಗಳ ಕಾಲ ಈ ‘ದೀಪಗರ್ಭ’ವನ್ನು ಪೂಜಿಸುತ್ತಾರೆ. ನವರಾತ್ರಿ ಮತ್ತು ಇತರ ಧಾರ್ಮಿಕ ವಿಧಿಗಳಲ್ಲಿ ದೀಪವು ಅಖಂಡವಾಗಿ ಉರಿಯುತ್ತಿರುವುದು ಪೂಜಾವಿಧಿಯ ಭಾಗವಾಗಿರುತ್ತದೆ. ಗಾಳಿ, ದೀಪದೆಣ್ಣೆ ಕಮ್ಮಿ ಆಗುವುದು, ‘ಬತ್ತಿ’ಗೆ ಕಾಡಿಗೆ ಹಿಡಿಯುವುದು ಮುಂತಾದ ಕಾರಣಗಳಿಂದ ದೀಪವು ಆರಿ ಹೋದರೆ, ಆ ಕಾರಣಗಳಿಗೆ ಸೂಕ್ತ ಪರಿಹಾರ ಮಾಡಿ, ದೀಪವನ್ನು ಪುನಃ ಉರಿಸಬೇಕು. ಇದಲ್ಲದೇ, ದೀಪವು ಆರಿ ಹೋಗಿದ್ದಕ್ಕೆ, ಪ್ರಾಯಶ್ಚಿತ್ತವಾಗಿ ಪೂಜಿಸಲ್ಪಡುವ ದೇವತೆಯ ನಾಮಜಪವನ್ನು ೧೦೮ ಅಥವಾ ೧೦೦೦ಸಲ ಜಪಿಸಬೇಕು.
ನವರಾತ್ರಿಯ ಸಮಯದಲ್ಲಿ ಶ್ರೀ ದುರ್ಗಾ ದೇವಿಯ ನಾಮಜಪವನ್ನು ಮಾಡುವುದರ ಮಹತ್ವ: ನವರಾತ್ರಿಯ ಸಮಯದಲ್ಲಿ ಹೆಚ್ಚು ಪ್ರಮಾಣದಲ್ಲಿ ಕಾರ್ಯರತವಾಗುವ ಶಕ್ತಿತತ್ವವನ್ನು ಗ್ರಹಿಸಲು ಈ ಸಮಯದಲ್ಲಿ ‘ಶ್ರೀ ದುರ್ಗಾದೇವ್ಯೈ ನಮಃ |’ ನಾಮಜಪವನ್ನು ಸತತವಾಗಿ ಮಾಡಬೇಕು.

*ನವರಾತ್ರಿಯ ಆಚರಣೆ ಮತ್ತು ಮಹತ್ವ*  -:

ನಾರದರು, ರಾಮನಿಂದ ರಾವಣನ ವಧೆಯಾಗಬೇಕೆಂದು ರಾಮನಿಗೆ ಈ ವ್ರತ ವನ್ನು ಮಾಡಲು ಹೇಳಿದ್ದರು. ಈ ವ್ರತವನ್ನು ಮಾಡಿದ ಮೇಲೆಯೇ ರಾಮನು ರಾವಣನನ್ನು ಸಂಹರಿಸಿದನು. ದೇವಿಯು ಮಹಿಷಾಸುರನೆಂಬ ರಾಕ್ಷಸನೊಂದಿಗೆ ಪಾಡ್ಯದಿಂದ ನವಮಿಯವರೆಗೆ ಒಂಬತ್ತು ದಿನಗಳ ಕಾಲ ಯುದ್ಧ ಮಾಡಿ ನವಮಿಯ ರಾತ್ರಿ ಅವನನ್ನು ಸಂಹರಿಸಿದಳು. ಅಂದಿನಿಂದ ಅವಳಿಗೆ ಮಹಿಷಾಸುರ ಮರ್ದಿನಿ ಎಂಬ ಹೆಸರು ಬಂದಿತು.
ಈ ವ್ರತಕ್ಕೆ ಅನೇಕ ಕುಟುಂಬಗಳಲ್ಲಿ ಕುಲಾಚಾರದ ಸ್ವರೂಪವಿರುತ್ತದೆ. ಆಶ್ವಯುಜ ಶುಕ್ಲ ಪಾಡ್ಯದಂದು ಈ ವ್ರತವು ಪ್ರಾರಂಭವಾಗುತ್ತದೆ. ಮನೆಯಲ್ಲಿ ಪವಿತ್ರ ಜಾಗದಲ್ಲಿ ಒಂದು ವೇದಿಕೆಯನ್ನು (ಪೀಠವನ್ನು) ತಯಾರಿಸಿ ಅದರ ಮೇಲೆ ಸಿಂಹಾಸನಾರೂಢಳಾದ ಅಷ್ಟ ಭುಜದೇವಿಯನ್ನು ಹಾಗೂ ದೇವಿಯ ಒಂಬತ್ತು ರೂಪಗಳ ಮಾರಕ ಲಹರಿಗಳ ಸಂಯೋಗದಿಂದ ಘನೀಕರಣವಾದ ನವಾರ್ಣವ ಯಂತ್ರವನ್ನು ಸ್ಥಾಪಿಸುತ್ತಾರೆ. ಯಂತ್ರದ ಪಕ್ಕದಲ್ಲಿ ಕಲಶ ಸ್ಥಾಪನೆ ಮಾಡಿ ಅದಕ್ಕೂ ದೇವಿಗೂ ವಿಧಿವತ್ತಾಗಿ ಪೂಜೆಯನ್ನು ಮಾಡುತ್ತಾರೆ. ನವರಾತ್ರಿ ಮಹೋತ್ಸವದಲ್ಲಿ ಕುಲಾಚಾರದಂತೆ ಕಲಶಸ್ಥಾಪನೆ ಮತ್ತು ಮಾಲಾಬಂಧನ ಮಾಡಬೇಕು. ಹೊಲದಲ್ಲಿನ ಮಣ್ಣನ್ನು ತಂದು ಅದರಿಂದ ಎರಡು ಬೆರಳಿನ ಗಾತ್ರದಷ್ಟು ಚೌಕಾಕಾರವನ್ನು ಮಾಡಿ ಅದರಲ್ಲಿ ಐದು ಅಥವಾ ಏಳು ವಿಧದ ಧಾನ್ಯಗಳನ್ನು ಹಾಕಬೇಕು. (ಜೋಳ, ಗೋಧಿ, ಎಳ್ಳು, ಹೆಸರು, ಅಗಸೆ, ನವಣೆ, ಕಡಲೆ ಇವು ಸಪ್ತಧಾನ್ಯಗಳಾಗಿವೆ.) ಹಾಗೆಯೇ ಮಣ್ಣಿನ ಅಥವಾ ತಾಮ್ರದ ಕಲಶದಲ್ಲಿ ನೀರು, ಗಂಧ, ಹೂವು, ಗರಿಕೆ, ಅಕ್ಷತೆ, ಅಡಿಕೆ, ಪಂಚರತ್ನಗಳು ಅಥವಾ ನಾಣ್ಯ ಮುಂತಾದ ವಸ್ತುಗಳನ್ನು ಹಾಕಬೇಕು ಮತ್ತು ಒಂದು ಮಾಲೆಯನ್ನು ಕಲಶದ ಒಳಗೆ ಬರುವಂತೆ ಕಟ್ಟಬೇಕು. ಈ ವ್ರತವು ಆಶ್ವಯುಜ ಶುಕ್ಲ ನವಮಿಯವರೆಗೆ ನಡೆಯುತ್ತದೆ. ೯ ದಿನವೂ ಕುಮಾರಿಯ ಪೂಜೆಮಾಡಿ ಅವಳಿಗೆ ಭೋಜನವನ್ನು ಕೊಡಬೇಕು. ಮುತ್ತೈದೆಯೆಂದರೆ ಪ್ರಕಟ ಶಕ್ತಿ ಮತ್ತು ಕುಮಾರಿ ಎಂದರೆ ಅಪ್ರಕಟ ಶಕ್ತಿ. ಮುತ್ತೈದೆಯಲ್ಲಿ ಪ್ರಕಟ ಶಕ್ತಿಯು ಸ್ವಲ್ಪ ಅಪವ್ಯಯ ವಾಗುವುದರಿಂದ ಅವಳಿಗಿಂತ ಕುಮಾರಿಯಲ್ಲಿ ಒಟ್ಟು ಶಕ್ತಿಯ ಪ್ರಮಾಣವು ಹೆಚ್ಚಿರುತ್ತದೆ. ಅಖಂಡ ದೀಪಪ್ರಜ್ವಲನ, ಆ ದೇವತೆಯ ಮಹಾತ್ಮೆಯ ಪಠಣ (ಚಂಡೀ ಪಾಠ), ಲಲಿತಾಪೂಜೆ, ಸರಸ್ವತಿ ಪೂಜೆ, ಉಪವಾಸ, ಜಾಗರಣೆ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಅವರವರ ಸಾಮರ್ಥ್ಯಕ್ಕನುಸಾರ ನವರಾತ್ರಿಯನ್ನು ಆಚರಿಸುತ್ತಾರೆ.

*ದಸರಾ*  :-
ಮೂರುವರೆ ಶುಭ ಮುಹೂರ್ತಗಳಲ್ಲಿ ‘ದಸರಾ’ ಕೂಡ ಒಂದಾಗಿದೆ. ದಸರೆ

ಯನ್ನು ‘ದಶಹರಾ’ ಎಂದೂ ಕರೆಯುತ್ತಾರೆ. ‘ದಶ’ ಅಂದರೆ ಹತ್ತು ಮತ್ತು ‘ಹರಾ’ ಅಂದರೆ ಸೋಲಿಸಿದ್ದು ಎಂದು ಅರ್ಥ ಇದೇ. ನವರಾತ್ರಿಯ ಒಂಬತ್ತು ದಿನಗಳಲ್ಲಿ ದೇವಿಯು ಹತ್ತು ದಿಕ್ಕುಗಳಲ್ಲಿ ವಿಜಯವನ್ನು ಸಾಧಿಸಿ, ಆ ಹತ್ತೂ ದಿಕ್ಕುಗಳು ದೇವಿಯ ಆಧಿಪತ್ಯದಲ್ಲಿರುತ್ತವೆ. ಇದರಿಂದ ಆ ಹತ್ತು ದಿಕ್ಕುಗಳಲ್ಲಿ ಶಕ್ತಿಯಿಂದ ಕೂಡಿರುತ್ತದೆ. ದೇವೀ ಶಕ್ತಿಯು ಅಸುರೀ ಶಕ್ತಿಗಳ ಮೇಲೆ ವಿಜಯವನ್ನು ಸಾಧಿಸಿದ ದಿನವೂ ಹೌದು, ಆದುದರಿಂದ ಇದನ್ನು ‘ವಿಜಯದಶಮಿ’ ಎಂದೂ ಕರೆಯುತ್ತಾರೆ. ಈ ದಿನದಂದು ‘ಸೀಮೋಲ್ಲಂಘನೆ’, ‘ಶಮೀ ಪೂಜೆ’, ‘ಅಪರಾಜಿತಾ ಪೂಜೆ’ ಮತ್ತು ಶಸ್ತ್ರಗಳ ಪೂಜೆಯನ್ನು ಮಾಡುತ್ತಾರೆ

*ತಾಯಿಯ ವಿಶ್ವರೂಪ*
ಮಾತೃದೇವೋ ಭವ ಎಂಬುದು ಭಾರತೀಯ ಸಂಸ್ಕೃತಿಯ ತಾರಕ ಮಂತ್ರ. ತಾಯಿಯಲ್ಲಿ ದೈವತ್ವವನ್ನು ದೈವತ್ವದ ಪ್ರೀತಿಯನ್ನು ಕಂಡ, ಅನುಭವಿಸಿದ ಸಂಸ್ಕೃತಿ ನಮ್ಮದು ವ್ಯಾಪಾರಿಕ ಪ್ರಪಂಚದಿಂದ ಅಲೌಕಿಕ ಪ್ರಪಂಚಕ್ಕೆ ಹೋದಾಗ ಈ ಮಾತೃತ್ವ ವಿಶ್ವರೂಪಿಣಿಯಾಗಿ, ಜಗನ್ಮಾತೆ, ಜಗದಂಬೆ, ದುರ್ಗಾಂಬೆ ಹೀಗೆ ಭಕ್ತಿ, ಶ್ರದ್ಧೆಗಳು, ದೈವೋಪಾಸನೆಯ ಶಕ್ತಿಯಾಗುತ್ತಾಳೆ.ವ್ಯಷ್ಟಿಯಾಗಿ ಅಂಬಾಭವಾನಿ, ಸಮಷ್ಠಿಯಾಗಿ ಜಗದ್ರಕ್ಷಕಿ, ದುಷ್ಟಶಿಕ್ಷಕಿ ಜಗತ್ ಕಲ್ಯಾಣಾಕಾಂಕ್ಷಿ. ಈ ಮೂಲದ ಜಗಜ್ಜನನಿಯ ಕಲ್ಪನೆಯೂ ಮೊದಲು ಅಂಧಕಾರಮಯ.ಈ ಅಂಧಕಾರ ಸ್ಫೋಟಗೊಂಡು ಬೆಳಕಿನಿಂದ ವಿಶ್ವ ಸೃಷ್ಟಿಯಾದಂತೆ ಜೀವಿ ವಲಯದ ಪೃಥ್ವಿ, ವಾಯು (ಪ್ರಾಣ) ವಲಯದ ಅಂತರಿಕ್ಷ ಹಾಗೂ ಬೆಳಕು ವಲಯದ ಆಕಾಶ ದೇವತೆಯಾಗಿ ಆಕೆಯು ಸರ್ವಭೂತಗಳ ಹುಟ್ಟು, ಬದುಕು, ಸಾವಿನ ವರ್ತುಲಗಳ ಜೈವಿಕ ಪ್ರಕ್ರಿಯೆಗೆ ಕಾರಕಳೂ, ಕಾರಣಳೂ ಆಗುತ್ತಾಳೆ.ಇದೇ ಪರಾಶಕ್ತಿ-ಆದಿಮಾತೆಯ-ಪರಾಪ್ರಕೃತಿ-ವಿಭವದ ರೂಪ ತಾಳುವ ಮೂರು ಮಜಲುಗಳು. ಈ ಮೂರು ಮಜಲುಗಳಲ್ಲಿ ತ್ರಂಬ್ಯಕೆಯನ್ನು ನಾವು ಗ್ರಹಿಸಬೇಕು.
*ಶ್ರೀವಿದ್ಯಾ ನಮಾಮಿ*

ಶ್ರೀ ಎಂದರೆ ಅಸದೃಶ್ಯಕಾಂತಿ, ಆನಂದ, ರಮಣೀಯತ್ವ, eನರೂಪ ವಿದ್ಯೆ, ಕೀರ್ತಿ, ಸಂಪ್ತತು, ರಾಜತ್ವ, ಗುರುತ್ವ ಇವೆಲ್ಲ ಯಾವ ವಿದ್ಯೆಯಲ್ಲಡಿಗದೆಯೋ ಅದೇ ಶ್ರೀ ವಿದ್ಯೆ.

ಇನ್ನು ಶ್ರೀ ಶಬ್ಧದಲ್ಲಿನ ಶ (ಸತ್) ರ(ಚಿತ್) ಈ (ಆನಂದ) ಇವು ಪರಬ್ರಹ್ಮ ತತ್ವದ ಸಚ್ಚಿದಾನಂದ ತತ್ವವನ್ನು ಸೂಚಿಸುತ್ತದೆ. ಅಂದರೆ ಬ್ರಹ್ಮಾಂಡದ ಸೃಷ್ಟಿ ಸ್ಥಿತಿ ಲಯ ಕಾರ್ಯಗಳನ್ನು ಮಾಡುವ ಪ್ರಧಾನ ಮೂಲಶಕ್ತಿ ಶ್ರೀ ವಿದ್ಯಾಮಾತೆ. ತಂತ್ರವು ಅತೀಂದ್ರಿಯವಾದ, ಶ್ರೇಷ್ಟವಾದ, ನಿರ್ವಿಕಲ್ಪವಾದ, ವರ್ಣಾತೀತವಾದ ಪ್ರಕಾಶವನ್ನು ತನ್ನಿಂತಾನೆ ಹೊರ ಹೊಮ್ಮಲೆತ್ನಿಸಿದಾಗ ವಿಮರ್ಶಾ ಗುಣವು ಕಾಣಿಸುತ್ತದೆ. ಈ ವಿಮರ್ಶೆಯು ಪ್ರೇರಣೆಯ ರೂಪ ತಾಳಿ ಕಾಮವಾಗುತ್ತದೆ. ಈ ಕಾಮವೇ ಮತ್ತೆ ನಿತ್ಯಲಯೆ ಅಂಶವಾಗಿ ವಿಭಜನಗೊಳ್ಳುತ್ತದೆ.ಆದ್ದರಿಂದಲೇ ದೇವಿಗೆ ಕಾಮಕಲಾ ಎಂದು ಹೆಸರು.ಭಗವಂತ ಪ್ರಕೃತಿಗೂ ಅತೀತನಾದವನ ಅರಿವಾಗಲಿ, ಒಲವಾಗಲಿ ತಾಯಿಗೆ ಇರುವಂತೆ ಬೇರಾರಿಗೂ ಇರುವುದು ಸಾಧ್ಯವೇ?

ದಾರ್ಶನಿಕ ಜಗತ್ತಿನಲ್ಲಿ ಹುಟ್ಟಿನ ಹಸಿವಿದೆ. ತಾಯಿಯನ್ನು ಸೇರುವ ಹಸಿವು ಅದು. ತಂದೆಯನ್ನು ಕಾಣಬೇಕೆಂಬ ಹಂಬಲ. ತಂದೆ ಪ್ರವೇಶಿಸಿದ ಮಾರ್ಗವೇ ಮಗುವಿನ ನಿರ್ಗಮನ. ಈ ಮಗು ಮತ್ತೆ ತಂದೆಯ ಹುಡುಕಾಟದಲ್ಲಿದೆ. ಅದು ಅಲ್ಲಿಗೆ ಸೇರಬೇಕು. ಎಲ್ಲಿಂದ ಬಂದಿದೆಯೋ ಅಲ್ಲಿಯೇ ಮುಕ್ತಿ. ಇದು ತಾಯಿಯ ಗರ್ಭಚಕ್ರದ ಕತೆ. ಅದಕ್ಕೆಂದೇ ತಾಯಿ ಭಗವತಿ ಭಗವಂತ ಭಗವತಿಗೆ ಭಗವಂತನನ್ನು ಸೇರುವ ಸಮರ್ಪಣೆ. ತಾಯಿಯನ್ನು ಕಾಣದ ಮಗು ತಂದೆಯನ್ನು ಕಂಡೀತು ಹೇಗೆ?
ತಂದೆಯ ಅರಿವು ತಾಯಿಯಿಂದ, ತಾಯಿಯ ಬಳಿ ಸೇರಿದರೆ ತಂದೆಯ ಬಳಿ ಸೇರಿದಂತೆಯೇ. ಹಾಗಾಗಿಯೇ ಬಲ್ಲವರು ಹೇಳಿದರು ಪ್ರಕೃತಿಯು ಪುರುಷನಿಂದ ಎಂದೆಂದೂ ಆಗಲಿಕೆ ಇಲ್ಲದವಳು.
ಒಂದೆಡೆ ತಾಯಿ ಮಕ್ಕಳನ್ನು ಬಿಟ್ಟಗಲಳು. ಇನ್ನೊಂದೆಡೆ ಒಡೆಯನನ್ನೂ ಬಿಟ್ಟಗಲಳು. ಇಂಥ ಅಸಾಧಾರಣವಾದ ತಾದ್ಯಾತ್ಮ ಇಮ್ಮಡಿಯಾದ ತಾದ್ಯಾತ್ಮ. ಪ್ರಕೃತಿಯ ಧರ್ಮ ಆದುದರಿಂದಲೇ ಎಲ್ಲ ಉಪಾಸನೆಗೆ ಇವಳು ಆಸರೆ.

*ತ್ವಮೇವ ಮಾತಾ ಚ ಪಿತಾ ತ್ವಮೇವ*

ಭಗವಂತ ತಂದೆಯಾದಾಗ ದುರ್ಗೆ ತಾಯಿಯಾಗುತ್ತಾಳೆ. ನಮ್ಮನ್ನು ೧೫ ಸುತ್ತಿನ ಸಂಸಾರದ ಕೋmಯೊಳಗೆ ಬಂಧಿಯಾಗಿಡುವವಳು ಆ ತಾಯಿ; ಆ ಮಾಯೆ. ಕಟ್ಟು ಬಿಚ್ಚಿ, ಬಿಡುಗಡೆಯನ್ನೀಯವನು ೧೮ನೆಯವನಾದ ಮಾಯಾ ಪತಿ ಭಗವಂತ.
೧೮ರತ್ತ, ೧೬ಕ್ಕೆ ದಾರಿ ತೋರುತ್ತ ನೆರವನ್ನೀಯುವ ಮಾಧ್ಯಮವೇ ೧೭. ಇದೇ ದುರ್ಗಾರಾಧನೆಯ ರಹಸ್ಯ. ತಂದೆಯ ಜೊತೆಗೆ ತಾಯಿಯನ್ನು ನೆನೆದರೆ ಅವಳಿಗೆ ತುಂಬಾ ಖುಷಿ.
ದುರ್ಗೆಯ ಜತೆಗೆ ನೆನೆಯಬೇಕಾದ ಭಗವಂತನ ರೂಪ ವಿಶೇಷತಃ ಪರಶುರಾಮ. ಅದಕ್ಕೆಂದೇ ಪರಶುರಾಮ ಕ್ಷೇತ್ರದಲ್ಲಿ ದುರ್ಗೆಯ ವಿಶೇಷ ಸನ್ನಿಧಾನ.
ದುರ್ಗೆಯ ವ್ಯಾಪಕ ಮೂರ್ತಿಗಳಲ್ಲಿ ಮಹಿಷ ಮರ್ಧಿನಿ ಹೆಚ್ಚು. ಮಹಿಷಾಸುರ ಅeನದ ಸಂಕೇತ. ಕನ್ನಡದಲ್ಲೂ, ಎಂಥಾ ಕೋಣನಯ್ಯ ನೀನು? ಎನ್ನುತ್ತೇವೆ ಅಲ್ಲವೇ! ಹಿರಣ್ಯಕಶಿಪುವಿನ ಮೊಮ್ಮಗನಾದ ಈ ಮಹಿಷಾಸುರ ನಮ್ಮೊಳಗೆಯೇ ಇದ್ದಾನೆ. ಗಟ್ಟಿಯಾಗಿ ಕೂತಿರುತ್ತಾನೆ. ಅವನನ್ನೋಡಿಸಲು ಬರಬೇಕು ಮಹಿಷ ಮರ್ಧಿನಿ.
ಶಾಸ್ತ್ರದ ಈ ದುರ್ಗಮ ಪ್ರಮೇಯ ಗೊತ್ತಿರದವರಿಗೆ ದುರ್ಗೆಯೆಂದರೆ ಗೊಂದಲಪುರ. ಗೊತ್ತಾದವರಿಗೆ ದುರ್ಗೆಯೆಂದರೆ ಆನಂದಮಯ.

*ಭಾವುಕರೊಬ್ಬರು ಹೇಳುತ್ತಾರೆ* : 
ಜಗನ್ಮಾತೆ ತನ್ನ ಸಂತಾನವನ್ನು ಕಣ್ಣ ಮೇಲೆ ಕಣ್ಣಿಟ್ಟು ನೋಡಿಕೊಳ್ಳುವುದಕ್ಕಾಗಿಯೇ ಲಕ್ಷ್ಮೀಯಾಗಿ ವಿಷ್ಣುವಿನ ಉದರದಲ್ಲೇ ವಾಸವಾಗಿದ್ದಾಳಂತೆ – ಒಂದು ವೇಳೆ ವಿಷ್ಣು ಕೋಪಿಸಿಕೊಂಡರೆ ಅವನ ಎದೆಯನ್ನು ನೀವಿ ಸಮಾಧಾನಗೊಳಿಸುವುದಕ್ಕೆ. ಶಿವೆಯಾಗಿ ಶಿವನ ಅರ್ಧಶರೀರವೇ ತಾನಾಗಿದ್ದಾಳಂತೆ – ಶಿವ ಕುಪಿತನಾಗಿ ಶಿಕ್ಷಿಸಲು ಬಲಗೈ ಎತ್ತಿದರೆ ಅಲ್ಲೆ ಎಡಗಡೆ ಇರುವ ಮಾತೃಹಸ್ತ ಮಧ್ಯೆ ಬಂದು ಅದನ್ನು ಕೆಳಗಿಳಿಸುತ್ತದಂತೆ. ಕೋಪದಿಂದ ಬ್ರಹ್ಮ ಶಾಪ ಕೊಡಲು ಉದ್ಯುಕ್ತನಾದರೆ ಆ ಶಾಪ ನಾಲಿಗೆಯಿಂದ ಉರುಳುವ ಹೊತ್ತಿಗೆ ಅದನ್ನು ವರವಾಗಿ ಪರಿಣಮಿಸುವಂತೆ ಮಾಡುತ್ತಾಳಂತೆ ವಾಣಿ .

*ಮಾತೃಮರ್ಯಾದೆ*

ಮಾತೃ ಮರ್ಯಾದೆ ತಾಂತ್ರಿಕ ಅಥವಾ ಶಾಕ್ತ ಸಂಪ್ರದಾಯದ ಮೂಲಾಧಾರ. ಈ ಸಂಪ್ರದಾಯ ವೈದಿಕ ಯುಗಕ್ಕಿಂತಲೂ ಪ್ರಾಚೀನವಾದುದು ಎಂಬುದು ನಿರ್ವಿವಾದ. ಇದರಲ್ಲಿ ದಕ್ಷಿಣಾಚಾರವೆಂದೂ ವಾಮಾಚಾರವೆಂದೂ ಎರಡು ಕವಲುಗಳು. ಮೊದಲನೆಯದು ಸಾತ್ವಿಕ, ಎರಡನೆಯದು ರಾಜಸ.ಶಕ್ತಿ ಪೂಜೆಯ ಪ್ರಾಬಲ್ಯ ಎಷ್ಟಿದ್ದಿತೆನ್ನುವುದು ಶಕ್ತಿತೀರ್ಥಗಳ ಸಂಖ್ಯೆಯನ್ನು ಗಮನಿಸಿದರೆ ತಿಳಿಯುತ್ತದೆ. ಕೊಲ್ಲಾಪುರದಲ್ಲಿ ಮಹಾಲಕ್ಷ್ಮೀ, ಪ್ರಯಾಗದಲ್ಲ

ಶ್ರೀಲಲಿತೆ, ಶ್ರೀಶೈಲದಲ್ಲಿ ಮಾಧವಿ, ಬದರಿಯಲ್ಲಿ ಊರ್ವಶಿ, ಜಾಲಂಧರದಲ್ಲಿ ವಿಶ್ವಮುಖೀ, ನೇಪಾಳದಲ್ಲಿ ಗುಹ್ಯಕಾಲಿ, ಗಯೆಯಲ್ಲಿ ಮಂಗಳಾ, ಕಾಮಾಖ್ಯಾದಲ್ಲಿ ಯೋನಿಮಂಡಲ ,ತ್ರಿಪುರ ಭೈರವಿ,ಶ್ರೀನಗರದಲ್ಲಿ ಜಂಬೂನದೇಶ್ವರಿ, ಗಂಧ ಮಾದನದಲ್ಲಿ ಕಾಲುಕಾ, ಹಿಮಾದ್ರಿಯಲ್ಲಿ ಉಮಾ, ಕಿಷ್ಕಿಂಧ ಪರ್ವತದಲ್ಲಿ ತಾರಾ, ದ್ವಾರಕೆಯಲ್ಲಿ ರುಕ್ಮಿಣಿ, ಬಂದಾವನದಲ್ಲಿ ರಾಧೆ, ಮಥುರೆಯಲ್ಲಿ ದೇವಕಿ, ಮಲಯಾಚಲದಲ್ಲಿ ಕಲ್ಯಾಣಿ, ವೇದಾರಣ್ಯದಲ್ಲಿ ಸುಂದರಿ, ಕುರುಕ್ಷೇತ್ರದಲ್ಲಿ ಸ್ಥಾಣುಪ್ರಿಯಾ, ಅವಿಮುಕ್ತ ವಾರಾಣಸಿಯಲ್ಲಿ ವಿಶಾಲಾಕ್ಷಿ, ಕಾಂಚಿಪುರದಲ್ಲಿ ಅನ್ನಪೂರ್ಣ, ಚಿದಂಬರದಲ್ಲಿ ಮೀನಾಕ್ಷಿ, ಏಕಾಂಬರದಲ್ಲಿ ಪರಾಶಕ್ತಿ, ವೈದ್ಯನಾಥದಲ್ಲಿ ಬಗಲಾಮುಖಿ, ಮಣಿದ್ವೀಪದಲ್ಲಿ ಭುವನೇಶ್ವರಿ, ನೈಮಿಶದಲ್ಲಿ ಲಿಂಗಧಾರಿಣಿ, ಪುಷ್ಕರದಲ್ಲಿ ಗಾಯತ್ರಿ, ಕೇದಾರದಲ್ಲಿ ಮಾರ್ಗದಾಯಿನಿ, ಚಿತ್ರಕೂಟದಲ್ಲಿ ಸೀತೆ, ವಿಂಧ್ಯಾಪರ್ವತದಲ್ಲಿ ವಿಂಧ್ಯವಾಸಿನಿ ಇತ್ಯಾದಿ…
ಪರಾಶಕ್ತಿಯ ಹಲವು ರೂಪದಲ್ಲಿ ದುರ್ಗೆ ವಿಶಿಷ್ಟ ದೇವತೆ. ಸರ್ವಶಕ್ತ್ಯಾತ್ಮಿಕೆಯಾದವಳು. ವಿಷ್ಣುವಿನ ಯೋಗಮಾಯೆ ಇವಳು. ಮಹಿಷಾಸುರ ಮರ್ಧಿನಿ, ಶುಂಭ ನಿಶುಂಭರನ್ನು ವಧಿಸಿದ ಮಹಾಸರಸ್ವತಿ. ಸಮಸ್ತ ಪ್ರಾಣಿಗಳಲ್ಲಿ ಚೇನತರೂಪಳಾಗಿ ಶರನ್ನವರಾತ್ರಿಯಲ್ಲಿ ಮಂತ್ರ ಚಾಲನಶಕ್ತಿಯಾಗಿ ವಿಜಯಪ್ರದಳಾಗಿ ಪೂಜೆಗೊಳ್ಳುವ ದುರಿತನಿವಾರಿಣಿಯಾದ ಬಲರೂಪಳಾದ ದುರ್ಗೆಯ ಮಹಿಮೆ ಅನಂತ-ಅಪಾರ-ಅಸದೃಶ.
ವೇದಕಾಲದಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಆರಾಧಿಸಲ್ಪಡುತ್ತಿದ್ದಾಳೆ ಶ್ರೀ ದುರ್ಗಾ, ಕಾಶ್ಮೀರದ ವೈಷ್ಣೋದೇವಿಯಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ ಹಲವು ತೇಜಸ್ಸುಗಳಿಂದ ಅವಿರ್ಭವಿಸಿದ್ದಾಳೆ ಸೌಂದರ್ಯ ಲಹರಿಯಾದ ಈ ಕಾತ್ಯಾಯಿನಿ.

*ಸಪ್ತಮಾತೃಕೆಯರು*

ಮಾತೃಭಾವ ಪಂಥದ ಮೂಲಭೂತ ಗ್ರಂಥಗಳಲ್ಲೊಂದಾದ ದುರ್ಗಾ ಸಪ್ತಶತಿದಲ್ಲಿ ವರ್ಣಿಸಿರುವಂತೆ ಕೌಶಕಿ ದುರ್ಗಿಯು ರಕ್ತ ಬೀಜಾಸುರನೊಡನೆ ಯುದ್ಧ ಮಾಡುವಾಗ ಅವನನ್ನು ಪರಾಭವಗೊಳಿಸಲು ತಾನೇ ತನ್ನ ದೇಹದಿಂದ ಏಳು ರೂಪವಾಗಿ ಹೊರಬಿದ್ದಳು. ಈ ಏಳು ರೂಪವನ್ನೇ ಸಪ್ತ ಮಾತೃಕೆಯರು ಎಂದು ಕರೆಯುತ್ತಾರೆ.
ಮಾತೃಗುಣಗಳನ್ನು ಸಾಮಾನ್ಯವಾಗ ಏಳು ಎಂದು ತಿಳಿದಿದ್ದರೂ ಕೆಲವು ಸಂದರ್ಭದಲ್ಲಿ ಇವರು ಎಂಟು, ಒಂಬತ್ತು, ಹದಿನಾರು ಎಂದು ಹೇಳಲಾಗಿದೆ. ಈ ಮಾತೃ ದೇವತೆಗಳಲ್ಲಿ ಪೂರ್ಣಶಕ್ತಿ, ಅಂಶರೂಪಿಣೆ, ಕಲಾರೂಪಿಣೆ, ಕಲಾಂಶರೂಪಿಣೆ ಎಂಬ ಭೇದವಿದೆ. ತಾರತಮ್ಯ ಕ್ರಮದಲ್ಲ್ಲಿ ಈ ಮಾತೃ ದೇವತೆಗಳು ವಿದ್ಯಾದೇವಿಯರ ತರುವಾಯ ಬರುವವರು.

*ಶಕ್ತಿಪೂಜಕರು – ಶಾಕ್ತೇಯ ಮತ*

ಸಮಸ್ತ ಲೋಕಗಳಿಗೂ ಆಧಾರಶಕ್ತಿಯೆನಿಸಿದ ಮಹತ್ ತತ್ವ ಒಂದಿದೆ. ಇದನ್ನು ಸ್ತ್ರೀಮೂರ್ತಿಯನ್ನಾಗಿ ಆರಾಧಿಸಿ ಆಭೀಷ್ಟ ಸಿದ್ಧಿಯನ್ನು ಹೊಂದುವ ಸಂಪ್ರದಾಯವೇ ನಮ್ಮಲ್ಲಿ ಬೆಳೆದು ಬಂದಿದೆ. ಅದುವೆ ಶಾಕ್ತಪಂಥ ಕಾಲಕ್ರಮದಲ್ಲಿ ತಾಮಸ ಪೂಜೆಯಾಗಿ ಹಿಂಸಾತ್ಮಕವಾಯಿತು. ಶಕ್ತಿಪೀಠದಲ್ಲಿ ಮೂಲರೂಪವಾದದ್ದು ಶ್ರೀ ಚಕ್ರ ಅಥವಾ ಶ್ರೀವಿದ್ಯೆ. . ಇದನ್ನು ಎರಡು ವಿಧಗಳಲ್ಲಿ ಪೂಜಿಸಿರುವ ಸಂಪ್ರದಾಯ ಇಂದಿಗೂ ಉಳಿದುಬಂದಿದೆ. ಅನಾದಿಯಿಂದ ಬಂದ ಶಾಕ್ತ ಸಂಪ್ರದಾಯವು ಮೊದಲು ಶುದ್ಧ ರೂಪದಲ್ಲೇ ಇದ್ದು, ಶುದ್ಧ ವಿಧಿನಿಯಮಗಳಲ್ಲಿ ಪಂಚಮ ಮಕಾರಗಳು ಸೇರಿ ಕ್ರೂರ ರೀತಿಯ ಪೂಜಾ ವಿಧಾನವು ಬಳಕೆಗೆ ಬಂತು. ಅನೈತಿಕ ಆಚರಣೆಗೆ ದಾರಿ ಮಾಡಿಕೊಟ್ಟಿತು. ಅದನ್ನು ಮತ್ತೆ ಶುದ್ಧ ರೂಪಕ್ಕೆ ತಂದವರು ಆಚಾರ್ಯಶಂಕರರು.

*ದುರ್ಗಾರಾಧನೆ*

ಸಾಮಾಜಿಕ ಜೀವನದಲ್ಲಿ ದೇವಿಯ ಪೂಜಾ ಪ್ರಭಾವ ನಿರಾಶಯವಾದದ್ದು, ಎಲ್ಲ ಪ್ರಾಂತದವರೂ ನವರಾತ್ರಿಯ ಪರ್ವಕಾಲದಲ್ಲಿ ದುರ್ಗಾರಾಧನೆಯನ್ನು ನಡೆಸುತ್ತಾರೆ .
ನಮ್ಮ ಋಷಿಗಳಿಗೆ ವಿಶ್ವದ ಕಲ್ಪನೆ ಎರಡು ಸ್ತರಗಳಲ್ಲಿ ಅಭಿವ್ಯಕ್ತವಾಗಿದೆ. ಮಾನಸಿಕ ಹಾಗೂ ಭೌತಿಕ (Mind & Matter) ಅಂತೆಯೇ ಒಂದು ಮಾನಸೀಸೃಷ್ಟಿ ಮತ್ತು ಇನ್ನೊಂದು ಮೈಥುನೀ ಸೃಷ್ಠಿ. ವಿಶ್ವವು ಅರ್ಥಾತ್ ಎರಡು ಸ್ತರಗಳಲ್ಲಿ ಸೃಷ್ಟಿಗೊಳ್ಳುತ್ತದೆ. ಒಂದು ಮಾನಸ ಪ್ರಪಂಚ ಇನ್ನೊಂದು ಭೌತಿಕ ವಸ್ತು ಪ್ರಪಂಚ. ಭೌತಿಕ ಪ್ರಪಂಚದ ಸೃಷ್ಠಿಗೆ ತಂದೆ-ತಾಯಿ ಇವುಗಳ ಅವಶ್ಯಕತೆಯಿದೆ. ಇದು ಕೂಟಕ ವಿಷಯ. ತಂದೆ-ಮಹಾದೇವ ತಾಯಿ-ಮಹಾದೇವಿ. ಒಂದು ವೃತ್ತದ ಕೇಂದ್ರ; ಇನ್ನೊಂದು ಆವೃತ್ತದ ಸಂಧಿ. (centre & the circumference of a circle) ಇಡಿಯ ಸೃಷ್ಠಿ-ಪ್ರಕೃತಿ ಪುರುಷ ಜೋಡಿ;ಇದನ್ನೇ ದುರ್ಗಾತಂತ್ರeನ ಮುಂತಾಗಿ ತಿಳಿಯಲಾಗುತ್ತದೆ. ಮಹಾವಿದ್ಯಾ ಎಂದೂ ಹೇಳಲಾಗುತ್ತದೆ. ಆದಿಶಕ್ತಿಯ ಹೆಸರುಗಳು ಏನೇ ಇರಲಿ, ಪುರಾಣದ ಕಥೆಗಳು ಏನೇ ಇರಲಿ ದುಷ್ಟ ಶಿಕ್ಷಣ – ಶಿಷ್ಟ ರಕ್ಷಕ ಕಾರ‍್ಯದಲ್ಲಿ ಸದಾ ನಿರತರಾಗಿರುವ ನಿಸರ್ಗ ಶಕ್ತಿಯ ಆರಾಧನೆಯೇ ನವರಾತ್ರಿಯಲ್ಲಿ ಪ್ರಧಾನ.
Dr. Krishna Moorthy D.

ಗಾಳಿಪಟ

ತಂದೆ ಮಗ ಇಬ್ಬರು ಗಾಳಿಪಟ ಹಾರಿಸುತ್ತಿದ್ದರು.

ತಂದೆ ಪಟದ ಸೂತ್ರವನ್ನು ಹಿಡಿದು ನಿಂತಿದ್ದನ್ನು ನೋಡಿದ ಮಗ, " ಈ ದಾರ ಇರುವುದರಿಂದಲೇ, ಪಟ ಇನ್ನೂ ಮೇಲಕ್ಕೆ ಹೋಗುತ್ತಿಲ್ಲ" ಎಂದನು.

ಮಗನ ಮಾತು ಕೇಳಿ ತಂದೆ, ಒಡನೆ ಸೂತ್ರವನ್ನು ಕತ್ತರಿಸಿದನು. ನೋಡನೋಡುತ್ತಿದ್ದಂತೆ ಪಟ ನೆಲಕ್ಕುರುಳಿತು.

ಇದನ್ನು ಕಂಡು ಮಗನಿಗೆ ತುಂಬಾ ದು:ಖವಾಯಿತು. ಅದನ್ನು ಕಂಡ ಅವನ ತಂದೆ, ಮಗನನ್ನು ಕರೆದು-

" ನಮ್ಮ ಜೀವನದಲ್ಲಿ ನಾವು ಬೆಳೆಯುತ್ತಾ ಹೋದಂತೆ, ಒಮ್ಮೊಮ್ಮೆ ನಮಗೆ, ನಮ್ಮ ಬೆಳವಣಿಗೆಯನ್ನು ಯಾವುದೋ ಒಂದು ಶಕ್ತಿ ತಡೆಯುತ್ತಿದೆ ಎಂದು ಅನಿಸುತ್ತದೆ. ನಾವು ಜೀವನದಲ್ಲಿ ಮೇಲೇರಲು ಯಾರೋ ಬಿಡುತ್ತಿಲ್ಲ ಅನಿಸುತ್ತದೆ. ಯೋಚಿಸಿದಾಗ, ನಮ್ಮ ಕುಟುಂಬ, ನಮ್ಮ ಸಮಾಜ, ನಮ್ಮ ಸಂಸ್ಕೃತಿ ನಮ್ಮನ್ನು ಕಟ್ಟಿಹಾಕಿದೆ ಅನಿಸುತ್ತದೆ. ನಾವು ಈ ಬಂಧನಗಳಿಂದ ಬಿಡಿಸಿಕೊಂಡರೆ ಜೀವನದಲ್ಲಿ ಇನ್ನೂ ಮೇಲೆರಬಹುದು ಎಂದು ಅನಿಸುತ್ತದೆ.

ಆದರೆ ನಾವು ಯಾವತ್ತೂ ಈ ಬಂಧನಗಳನ್ನು ಕತ್ತರಿಸಿಕೊಂಡು ಮೇಲೇರಲು ಪ್ರಯತ್ನಿಸುತ್ತೀವೋ, ಆಗ ನಾವು ನೆಲಕ್ಕೆ ಉರುಳುತ್ತೇವೆ.

ನಾವು ಎತ್ತರಕ್ಕೆ ಹೋಗುವುದು ಸುಲಭ, ಆದರೆ ಆ ಎತ್ತರದಲ್ಲೇ ಉಳಿಯುವುದು ಬಹಳ ಕಷ್ಟ. ನಮ್ಮ ಸಂಬಂಧ, ಸಮಾಜ, ಸಂಸ್ಕೃತಿ, ಮೌಲ್ಯಗಳೇ ನಮ್ಮನ್ನು ನಾವು ತಲುಪಿದ ಎತ್ತರದಲ್ಲಿ ಉಳಿಯುವಂತೆ ಮಾಡುತ್ತದೆ.

ಈ ಗಾಳಿಪಟ ನಮಗೆ ಹೇಳಿಕೊಡುವ ಪಾಠವೇ ಇದು " ಎಂದನು....

September 27, 2021

ವನಸುಮದೊಳೆನ್ನ ಜೀವನವು ವಿಕಸಿಸುವಂತೆ

ವನಸುಮದೊಳೆನ್ನ ಜೀವನವು
ವಿಕಸಿಸುವಂತೆ
ಮನವನನುಗೊಳಿಸು ಗುರುವೇ, ಹೇ ದೇವ ||

ಕಾನನದಿ ಮಲ್ಲಿಗೆಯು,
ಮೌನದಿಂ ಬಿರಿದು ನಿಜ-
ಸೌರಭವ ಸೂಸಿ ನಲವಿಂ
ತಾನ್ ಎಲೆಯ ಪಿಂತಿರ್ದು
ದೀನತೆಯ ತೋರಿ ಅಭಿಮಾನವನು ತೊರೆದು
ಕೃತಕೃತ್ಯತೆಯ ಪಡೆವಂತೆ
ಮನವನನುಗೊಳಿಸು ಗುರುವೇ, ಹೇ ದೇವ ||

ಉಪಕಾರಿ ನಾನು ಎನ್-
ಉಪಕೃತಿಯು ಜಗಕೆಂಬ
ವಿಪರೀತ ಮತಿಯನುಳಿದು
ವಿಪುಲಾಶ್ರಯವನೀವ
ಸುಫಲ ಸುಮಭರಿತ ಪಾದಪದಂತೆ
ನೈಜಮಾದೊಲ್ಪಿನಿಂ ಬಾಲ್ವವೊಲು
ಮನವನನುಗೊಳಿಸು ಗುರುವೇ, ಹೇ ದೇವ ||


    ಡಿವಿಜಿಯವರು ತಮ್ಮ ಬದುಕು ವನಸುಮದಂತೆ ಇರಬೇಕೆಂದು ಪ್ರಾರ್ಥಿಸುತ್ತಾರೆ. ವನಸುಮ ಎಂದರೆ ಕಾಡಿನಲ್ಲಿ ಎಲೆಯ ಮರೆಯಲ್ಲಿ ಅರಳುವ ಹೂವಿನಂತೆ ಇರಬೇಕೆನ್ನುವುದು ಅವರ ಆಶಯ. ವನಸುಮ ಅಹಂಕಾರ ಪಡದೇ ತನ್ನ ಬದುಕನ್ನು ಸಾರ್ಥಕಗೊಳಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ನಮ್ಮಲ್ಲಿ ಅಹಂಕಾರ ಅಭಿವ್ಯಕ್ತವಾಗುತ್ತಿರುತ್ತದೆ. ಸದಾ ಕಾಲ ಜನ ನನ್ನನ್ನು ಗುರುತಿಸಲಿ, ನನ್ನ ಬಗ್ಗೆ ಮಾತನಾಡಲಿ ಎಂಬ ಬಯಕೆಯನ್ನು ಹೊಂದಿರುತ್ತದೆ. ಆದರೆ ವನಸುಮ ಅಂತಹದ್ಯಾವ ಆಶೆಯಿಲ್ಲ. 'ಹೇ ಮನಸ್ಸೆ! ನೀನು ವನಸುಮದಂತೆ ಜೀವಿಸು'ಎನ್ನುತ್ತಾರೆ ಡಿ.ವಿ.ಜಿ.


ಯಾವಾಗ ಆಸಕ್ತವಾದ ಮನಸ್ಸು ಹೀಗೆ ಯೋಚಿಸಲು ಆರಂಭಿಸುತ್ತದೆಯೋ ಆಗ ಬದುಕು ಸಾರ್ಥಕವಾಗುತ್ತದೆ. ಮನಸ್ಸು ಒಂದನ್ನು ಇಷ್ಟಪಟ್ಟರೆ, ಖಂಡಿತ ಬೇರೆಯದನ್ನು ದ್ವೇಷಿಸುತ್ತದೆ. ಇದ್ದದ್ದನ್ನು ಇದ್ದಂತೆ ಸ್ವೀಕರಿಸುವ ಕಲೆಯನ್ನು ನಾವು ರೂಢಿಮಾಡಿಕೊಳ್ಳಬೇಕು. ಈ ಜಗತ್ತು ಒಂದೇ ರೀತಿ ಇಲ್ಲ. ಮರದಲ್ಲಿರುವ ಪ್ರತಿಯೊಂದು ಎಲೆಯೂ ಸಹ ಒಂದಕ್ಕಿಂತಲೂ ಮತ್ತೊಂದು ಭಿನ್ನವಾಗಿದೆ. ಒಂದೇ ತಂದೆತಾಯಿಯ ಮಕ್ಕಳಲ್ಲೂ ವಿರುದ್ಧ ಸ್ವಭಾವದ ಗುಣಗಳಿರುತ್ತವೆ. ಯಾರೂ ಯಾರನ್ನೂ ಬದಲಾಯಿಸಲು ಸಾಧ್ಯವಿಲ್ಲ. ನಮ್ಮ ಉದ್ಧಾರವನ್ನು ನಾವೇ ಮಾಡಿಕೊಳ್ಳಬೇಕು. ವನಸುಮದಂತೆ ಆಲೋಚಿಸಿದ ಹೊರತು ಬದುಕು ಧನ್ಯವಾಗುವುದಿಲ್ಲ.

ಜನರು ನಮ್ಮನ್ನು ಹೊಗಳಲಿ ಅಥವಾ ತೆಗಳಲಿ ಬದುಕಿನಲ್ಲೊಂದು ಗುರಿಯನ್ನಿಟ್ಟುಕೊಂಡು ಜೀವಿಸಬೇಕು. ನಮ್ಮ ಬದುಕು ಇತರರನ್ನು ಪ್ರೇರೇಪಿಸುವಂತಿರಬೇಕು. ಪ್ರಕೃತಿಯಲ್ಲಿ ಪ್ರತಿಯೊಂದು ಜೀವಿಯೂ ಈ ನಿಯಮವನ್ನೇ ಪಾಲಿಸುತ್ತಿವೆ. ಆದರೆ ಮನುಷ್ಯ ಮಾತ್ರ ಅಹಂಕಾರಕ್ಕೆ ಬಲಿಪಶುವಾಗಿದ್ದಾನೆ.

ಜನರನ್ನು ಮೆಚ್ಚಿಸಲಿಕ್ಕೆ ಆಗುವುದಿಲ್ಲ.ಜನಮನ್ನಣೆಯ ಬೆನ್ನಟ್ಟಿ ಸಾಗಿದರೆ ದುಃಖ ಖಂಡಿತ. ನಮ್ಮ ಕರ್ತವ್ಯವನ್ನು ನಾವು ಮಾಡುತ್ತಾ ಸಾಗಬೇಕು. ಸ್ವಾಮೀ ಚಿನ್ಮಯಾನಂದರು 'ಮಕ್ಕಳು ನಮ್ಮ ಮುಖಾಂತರ ಜಗತ್ತಿಗೆ ಬಂದಿದ್ದಾರೆ. ಅವರು ನಮಗೆ ಸೇರಿದವರಲ್ಲ' ಎಂದಿದ್ದಾರೆ. ಪ್ರಾಣಿ ಹಾಗೂ ಪಕ್ಷಿಗಳು ಇದೇರೀತಿ ಜೀವಿಸುತ್ತಿವೆ. ಆದರೆ ನಾವು 'ನನ್ನ ಮಗ', 'ನನ್ನ ಮಗಳು' ಎಂದು ಹೆಮ್ಮೆ ಪಡುತ್ತೇವೆ. ಮುಂದೆ ಅದುವೇ ದುಃಖಕ್ಕೆ ಕಾರಣವಾಗುತ್ತದೆ.ಶ್ರೀರಾಮನನ್ನು ನಿಂದಿಸುವವರೂ ಇದ್ದಾರೆ. ಶ್ರೀರಾಮನನ್ನು ಪೂಜಿಸುವವರೂ ಇದ್ದಾರೆ. ಶ್ರೀರಾಮನ ದೃಷ್ಟಿಯಲ್ಲಿ ಪೂಜಿಸುವವರು ಹಾಗೂ ನಿಂದಿಸುವವರು ಒಂದೇ ಸಮಾನರು.

ಡಿವಿಜಿಯವರು ತಮ್ಮ ಮಂಕುತಿಮ್ಮನ ಕಗ್ಗದ ಕೊನೆಯಲ್ಲಿ ತಪ್ಪನ್ನು ತಿದ್ದಿಕೊಳ್ಳಲು ಸಿದ್ಧರಿದ್ದರೆ ಬದುಕು ಆನಂದಮಯವಾಗುತ್ತದೆ ಎನ್ನುತ್ತಾರೆ.

'ಕಾನನದಿ ಮಲ್ಲಿಗೆಯು ಮೌನದಿಂ ಬಿರಿದು ನಿಜ ಸೌರಭವ ಸೂಸಿನಲವಿಂ' ಎನ್ನುವಂತೆ ಪ್ರಪಂಚದಲ್ಲಿನ ಪ್ರತಿಯೊಂದು ವಸ್ತುವು ಮೌನವಾಗಿಯೇ ತಮ್ಮ ತಮ್ಮ ಕಾರ್ಯಗಳನ್ನು ನಿರ್ವಹಿಸುತ್ತಿವೆ. ಆದರೆ ಮನುಷ್ಯನಲ್ಲಿ ಮಾತ್ರ ಸ್ವಾರ್ಥ ತುಂಬಿ ತುಳುಕುತ್ತಿದೆ. ಈ ಅಂಶವನ್ನೇ ಡಿವಿಜಿಯವರು ತಮ್ಮ ಕಗ್ಗದಲ್ಲಿ ಹೀಗೆನ್ನುತ್ತಾರೆ.

ಇಳೆಯಿಂದ ಮೊಳಕೆಯೊಗವಂದು ತಮಟೆಗಳಿಲ್ಲ
ಫಲಮಾಗುವಂದುತುತ್ತೂರಿದನಿಯಿಲ್ಲ|
ಬೆಳಕೀವ ಸೂರ್ಯ-ಚಂದ್ರರದೊಂದು ಸದ್ದಿಲ್ಲ
ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ

ನಾನು, ನನ್ನಿಂದ, ನಾನೇ ಎಂಬ ಶಬ್ದಗಳು ನಮ್ಮ ಶತ್ರುಗಳು. ನಾನು ಕಲಿಸಿದೆ, ನನ್ನ ಶಿಷ್ಯರು, ಇವು ಕೇವಲ ಅಹಂಕಾರದ ಮಾತುಗಳು. ಕಲಿಸುವ ಗುರುವಿಗಿಂತ ಕಲಿಯುವ ಶಿಷ್ಯನೇ ಮುಖ್ಯ. ಗುರುವು ತಾನು 'ಗುರು' ಎಂದರೆ ಅದು ಅಹಂಕಾರ. ಗುರುವಿನ ಅಸ್ತಿತ್ವ ಕೇವಲ ಶಿಷ್ಯನಿಗೆ ಮಾತ್ರ. ಹೇಗೆ ನಾನು ನನ್ನ ಮಗನಿಗೆ ಮಾತ್ರ ಅಪ್ಪನೋ, ನಾನು ನನ್ನ ಹೆಂಡತಿಗಷ್ಟೇ ಗಂಡನೋ ಹಾಗೇ ಶಿಷ್ಯನಿಗೆ ಅಷ್ಟೇ ಗುರು ಮೀಸಲಾಗಿದ್ದಾನೆ. ನಾವು ಮೌನವನ್ನು ಆಶ್ರಯಿಸಿದರೆ ಬದುಕು ಆನಂದಮಯವಾಗುತ್ತದೆ. ನಿಜದಲ್ಲಿ ಮೌನವೇಆನಂದ. ಮೌನಿಗಳಾಗಿ ಪ್ರಕೃತಿಗೆ ಸುಗಂಧವನ್ನು ಹರಡೋಣ.

ಜೀವನದಲ್ಲಿ ಮನಸ್ಸು ಪ್ರಶಾಂತವಾಗಿದ್ದಾಗ ಮಾತ್ರ ನಮಗೆ ಕೃತಕೃತ್ಯತೆಯ ಭಾವ ಆವಿರ್ಭವಿಸುತ್ತದೆ. ಮಾಡಬೇಕಾದುದನ್ನುತೃಪ್ತಿಯಿಂದ ಮಾಡಿ ಮುಗಿಸಿದ ಭಾವವೇ ಈ ಕೃತಕೃತ್ಯತೆ. ಮಗುವನ್ನು ಬೆಳೆಸಿ ದೊಡ್ಡದನ್ನಾಗಿಸಿ, ತನ್ನ ಕಾಲಮೇಲೆ ತಾನು ನಿಲ್ಲುವಂತೆ ಮಾಡಿದಾಗತಾಯಿ ಕೃತಕೃತ್ಯಳು. ಇದೇ ಭಾವವನ್ನು ಪ್ರಪಂಚದಲ್ಲಿನಎಲ್ಲಜೀವ ಜಂತುಗಳು ಪಾಲಿಸಿ ಕೃತಕೃತ್ಯತೆಯನ್ನು ಹೊಂದಿವೆ.'ತಾನೆಲೆಯ ಪಿಂತಿರ್ದು ದೀನತೆಯ ತೋರಿ ಅಭಿಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ' ನಮ್ಮ ಬದುಕಿಗೆ ವನಸುಮವು ಆದರ್ಶವಾಗಬೇಕು. ಆ ಕಾಡಿನ ಹೂವು ಎಲೆಯ ಹಿಂದಿದ್ದರೂ ದಾರಿಹೋಕರಿಗೆ ಪರಿಮಳವನ್ನು ಬೀರುತ್ತದೆ. ತಾನು ಅವರಿಗೆ ಕಾಣದಿದ್ದರೂ, ಅಹಂಕಾರವನ್ನು ತೊರೆದ ಹೂವು ತನ್ನ ಬದುಕನ್ನು ಸಾರ್ಥಕಗೊಳಿಸಿಕೊಳ್ಳುತ್ತದೆ. ನಾವು ನಮ್ಮ ಬದುಕಿನಲ್ಲಿ ಈ ರೀತಿಯಲ್ಲಿ ಜೀವಿಸಿದ ವ್ಯಕ್ತಿಗಳನ್ನು ಗುರುತಿಸಬೇಕು. ತಾಯಿಯೂ ಸಹ ಇದೇ ಜಾತಿಗೆ ಸೇರಿದವಳಾಗುತ್ತಾಳೆ. ಜಗತ್ತಿನ ಪ್ರತಿಯೊಬ್ಬನೂ ಸಹ ಈ ರೀತಿ ಆಲೋಚಿಸಿದರೆ, ಅವರಿರುವ ಜಾಗ ಆನಂದದ ತಾಣವಾಗುತ್ತದೆ. ಎಲ್ಲರೂ ಭಗವಂತನ ಸ್ವರೂಪವೇ ಎಂಬ ಭಾವವು ನಮ್ಮ ಹೃದಯದಲ್ಲಿ ಮೂಡಿದಾಗ, ನಮ್ಮ ಅಜ್ಞಾನದ ನಿಮಿತ್ತದಿಂದ ಹುಟ್ಟಿದ ಭೇದ ಬುದ್ಧಿಯು ನಾಶವಾಗುತ್ತದೆ. ಭೇದವನ್ನುಕಾಣುವುದು ಸ್ವಾಭಾವಿಕ. ಅದನ್ನು ಮೀರುವುದೇ ಸಾಧನೆ.
ಕೃಪೆ- ವಿಜಯಕರ್ನಾಟಕ

ಒಬ್ಬರು ನಿವೃತ್ತ ಶಿಕ್ಷಕಇನ್ನೋರ್ವ ಜೀವವಿಮಾ ಕಂಪನಿಯ ನೌಕರ..

ಒಂದು ನೀತಿ ಕಥೆ 

ಒಂದಾನೊಂದು ಕಾಲದಲ್ಲಿ ಇಬ್ಬರು ನೆರೆಹೊರೆಯಲ್ಲಿ ವಾಸವಾಗಿದ್ದರು. ಒಬ್ಬರು ನಿವೃತ್ತ ಶಿಕ್ಷಕ. ಇನ್ನೋರ್ವ ಜೀವವಿಮಾ ಕಂಪನಿಯ ನೌಕರ.

ಜೀವ ವಿಮಾ ಕಂಪನಿ ನೌಕರನಿಗೆ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಒಲವಿತ್ತು. ಇವರಿಬ್ಬರೂ ತಮ್ಮ ಮನೆಯ ಹೂದೊಟದಲ್ಲಿ ಸಸಿಗಳನ್ನು ನೆಟ್ಟರು..

ನಿವೃತ್ತ ಶಿಕ್ಷಕ ತನ್ನ ಸಸಿಗಳಿಗೆ ಸ್ವಲ್ಪ ಪ್ರಮಾಣದಲ್ಲಿ ನೀರು ಗೊಬ್ಬರವನ್ನು ನೀಡುತ್ತಿದ್ದರು. ಅವುಗಳ ಬಗ್ಗೆ ಹೆಚ್ಚಿನ ಗಮನ ಸಹ ನೀಡುತ್ತಿರಲಿಲ್ಲ.
ಆದರೆ ಜೀವ ವಿಮಾ ನೌಕರ ತನ್ನ ಸಸಿಗಳಿಗೆ ಯಥೇಚ್ಛವಾಗಿ ನೀರು ಗೊಬ್ಬರವನ್ನು ನೀಡಿ ಅವುಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದರು.

ನಿವೃತ್ತ ಶಿಕ್ಷಕನ ಸಸ್ಯಗಳು ಸಾಧಾರಣವಾಗಿ, ಪರವಾಗಿಲ್ಲ ಅನ್ನುವ ರೀತಿಯಲ್ಲಿ ಬೇಳೆದಿದ್ದವು.
ಆದರೆ ಜೀವ ವಿಮಾ ನೌಕರನ ಸಸ್ಯಗಳು ಸಮೃದ್ಧವಾಗಿ, ಹೆಚ್ಚು ಹಸಿರಾಗಿ ಬೆಳೆದಿದ್ದವು..

ಒಂದು ರಾತ್ರಿ ಚಂಡಮಾರುತದ ಪರಿಣಾಮವಾಗಿ ಬಾರಿ ಮಳೆ ಮತ್ತು ಬಿರುಗಾಳಿ ಉಂಟಾಯಿತು. ಮರುದಿನ ಬೆಳಿಗ್ಗೆ ಇಬ್ಬರೂ ತಮ್ಮ ತಮ್ಮ ಸಸಿಗಳನ್ನು ನೋಡಲು ತಮ್ಮ ಹೂದೋಟಕ್ಕೆ ಹೋದರು..

ಜೀವ ವಿಮಾ ನೌಕರನ ಸಸ್ಯಗಳು ಬೇರು ಸಮೇತ ಹಾರಿ ಬಿದ್ದು ಸಂಪೂರ್ಣವಾಗಿ ನಾಶವಾಗಿದ್ದವು..
ಆದರೆ ನಿವೃತ್ತ ಶಿಕ್ಷಕಕನ ಸಸ್ಯಗಳು ದೃಡವಾಗಿ ಭದ್ರವಾಗಿ ನಿಂತಿದ್ದವು.

ಆಶ್ಚರ್ಯ ಚಕಿತನಾಗಿ ಜೀವ ವಿಮಾ ನೌಕರ ನಿವೃತ್ತ ಶಿಕ್ಷಕನ ಬಳಿ ಹೋಗಿ ಕೇಳಿದ,
"ನಾವಿಬ್ಬರು ಒಟ್ಟಾಗಿ ಸಸಿಗಳನ್ನು ನೆಟ್ಟಿದ್ದೆವು, ನಿಮಗಿಂತ ಹೆಚ್ಚಾಗಿ ನೀರು ಗೊಬ್ಬರವನ್ನೂ ನಾ ನೀಡಿ ಹೆಚ್ಚಿನ ಗಮನ ಹರಿಸಿದ್ದೆ, ಆದರೂ ನನ್ನ ಸಸ್ಯಗಳು ನಾಶವಾದವು, ನಿಮ್ಮ ಸಸ್ಯಗಳು ದೃಡವಾಗಿ ನಿಂತಿವೆ ಯಾಕೆ"...?

ಆಗ ಶಿಕ್ಷಕ ಹೇಳಿದ
"ನೀನು ಸಸಿಗಳಿಗೆ ಹೆಚ್ಚು ನೀರು ಗೊಬ್ಬರವನ್ನು ನೀಡಿದೆ, ಹೆಚ್ಚು ಕಾಳಜಿವಹಿಸಿದೆ ಆ ಕಾರಣ ಆ ಸಸಿಗಳಿಗೆ ಯಾವುದೇ ಜವಾಬ್ದಾರಿ ಸ್ವಪ್ರಯತ್ನದ ಅರಿವಾಗಲಿಲ್ಲ. ಆದರೆ ನಾನು ಸ್ವಲ್ಪ ಪ್ರಮಾಣದಲ್ಲಿ ನೀರು ಗೊಬ್ಬರವನ್ನು ನೀಡಿದೆ, ಆ ಬೇರುಗಳು ನೀರಿನ ಹುಡುಕಾಟದಲ್ಲಿ ಹೆಚ್ಚಿನ ಆಳಕ್ಕೆ ಮತ್ತು ಅಗಲವಾಗಿ ಹುಡುಕಾಟದಲ್ಲಿ ತಮ್ಮ ಸ್ಥಾನ ಭದ್ರ ಮಾಡಿಕೊಂಡವು. ಅದಕ್ಕಾಗಿ ಅವು ಯಾವುದೆ ಬಿರುಗಾಳಿ, ಮಳೆಗೆ ಬಗ್ಗದೆ ದೃಡವಾಗಿ ನಿಂತಿವು"....!

*ಈ ಕಥೆಯ ಮೌಲ್ಯ ಇಷ್ಟೆ*
ಪಾಲಕರು/ಶಿಕ್ಷಕರಿಗೆ ಮಕ್ಕಳು ಸಸಿಗಳಿದ್ದ  ಹಾಗೆ.. ಎಲ್ಲವನ್ನೂ ಅವರಿಗೆ ಸುಲಭವಾಗಿ ನೀಡಿದರೆ ಅವರಿಗೆ ಪರಿಶ್ರಮದ ಬೆಲೆ ಗೊತ್ತಾಗುವುದಿಲ್ಲ.. ಅವರು ನಿರ್ವಹಿಸಬೇಕಾದ ಕಾಯಕಕ್ಕೆ ಗೌರವ, ಬೆಲೆ ನೀಡುವುದಿಲ್ಲ.. ಅವರಿಗೆ ಎಲ್ಲವನ್ನು ಸುಲಭವಾಗಿ ನೀಡುವ ಬದಲು ಮಾರ್ಗದರ್ಶನ ಮಾಡೋಣಾ.. ಸಲಹೆ ನೀಡೊಣಾ.. ಅವರಿಗೆ ನಡೆಯುವದನ್ನು ಕಲಿಸೋಣ...!

September 22, 2021

ಕಾಗೆಗೆ ಉತ್ತಿಷ್ಠ ಪಿಂಡವನ್ನು ಇಡುವ ಸಂಪ್ರದಾಯ ಏಕೆ?

" ಕಾಕಬಲಿಏಕೆ*? 

" ಕಾಕ ಬಲಿ " ಎಂದರೆ = #ಕಾಗೆಗಳಿಗೆಅನ್ನನೀಡುವುದು ಎಂದು ಅರ್ಥ!

ಮೃತನಾದ ವ್ಯಕ್ತಿಯ ಸಲುವಾಗಿ 10ನೇ ದಿನ ಈ ಕಾಕ ಬಲಿ ಇಡುವುದುಂಟು.

ಕಾಗೆ ಆ ಬಲಿಯನ್ನು ಮುಟ್ಟದಿದ್ದರೆ ಅಥವಾ ತಿನ್ನದಿದ್ದರೆ ಮೃತನಾದ ವ್ಯಕ್ತಿಗೆ ತೃಪ್ತಿಯಾಗಲಿಲ್ಲ ಎಂದು ಭಾವಿಸುವುದುಂಟು.

ಹಾಗಾದರೆ..

#ಕಾಗೆಗೆ - ಪಿತೃಗಳಿಗೆ ಸಂಬಂಧ ಉಂಟೆ?
ಎಂಬುದಕ್ಕೆ ಉತ್ತರ ಇಲ್ಲಿದೆ.

#ಶ್ರೀರಾಮಾಯಣ ಉತ್ತರಕಾಂಡದಲ್ಲಿ ಒಂದು ಪ್ರಸಂಗ...

ಸೂರ್ಯವಂಶದ ಕ್ಷತ್ರೀಯ ವೀರ " #ಮರುತ್ ". ಅವನು ಶ್ರೀ ಬೃಹಸ್ಪತಿಯ ಸಹೋದರನಾದ ಶ್ರೀ ಸಂವರ್ತನೆಂಬ ಬ್ರಹ್ಮರ್ಷಿಯ ಪೌರೋಹಿತ್ಯದಲ್ಲಿ ದೊಡ್ಡ ಯಜ್ಞವೊಂದನ್ನು ನಡೆಸಿದ.

#ಅದುರಾವಣನಕಾಲ! ಅವನಿಗೆ ಹೆದರಿದ ದೇವತೆಗಳು ಒಬ್ಬೊಬ್ಬರು ಒಂದೊಂದು ಪಕ್ಷಿಯ ರೂಪ ತಾಳಿ ಮರುತ್ತನ ಯಜ್ಞಕ್ಕೆ ಬಂದರು!

ಶ್ರೀ ಬ್ರಹ್ಮದೇವರು " #ಹಂಸ " ರೂಪದಲ್ಲಿ;ಶ್ರೀ ದೇವೇಂದ್ರ " #ನವಿಲು " ರೂಪದಲ್ಲಿ;ಶ್ರೀ ಯಮಧರ್ಮರಾಜರು " #ಕಾಗೆ " ಯ ರೂಪದಲ್ಲಿ ಬಂದರು!

ಹೀಗೆ ಯಜ್ಞದಲ್ಲಿ ಭಾಗವಹಿಸಿದ ಅವರು ತಮ್ಮ ಗೌಪ್ಯತೆಗೆ ಕಾರಣವಾದ ಆ ಪಕ್ಷಿ ಪ್ರಾಣಿಗಳಿಗೆ ಒಂದೊಂದು ವರ ನೀಡಿದರು.

ಶ್ರೀ ಯಮಧರ್ಮರಾಜರು #ಕಾಗೆಗಳಿಗೆದೀರ್ಘಾಯುಷ್ಯವನ್ನು ನೀಡಿದರು. ಯಾವ ರೋಗ ಭಯವೂ ಕಾಗೆಗಳಿಗೆ ಇಲ್ಲ. #ಮನುಷ್ಯನುಕೊಂದರಷ್ಟೇ ಅವುಗಳಿಗೆ ಮರಣ ಬರುತ್ತದೆ.

ಶ್ರೀ ಯಮಧರ್ಮರಾಜರು ಕಾಗೆಗಳಿಗೆ ಇನ್ನೊಂದು ವರವನ್ನು ನೀಡಿದರು...

ಯೇ ಚ ಮದ್ವಿಷಯಸ್ಥಾವೈ ಮಾನವಾ ಕ್ಷುಧಯಾರ್ದಿತಾಃ ।

ತ್ವಯಿ ಭಕ್ತೇ ಸುತೃಪ್ತಾಸ್ತೇ ಭವಿಷ್ಯಂತಿ ಸ ಬಾಂಧವಾ: ।।

#ನನ್ನಲೋಕದಲ್ಲಿರುವಪಿತೃಗಳು, ನೀವು ( ಕಾಗೆಗಳು ) ಅನ್ನವನ್ನು ಸ್ವೀಕರಿಸಿದರೆ ಆ ಮೂಲಕ ಸಂತೃಪ್ತರಾಗುತ್ತಾರೆ. ಈ ಕಾರಣದಿಂದ " ಕಾಕ ಬಲಿ " ಯ ಮೂಲಕ ಪಿತೃಗಳು ತೃಪ್ತರಾಗುವರೆಂಬ ನಂಬಿಕೆ ರೂಢಿಯಲ್ಲಿ ಬಂದಿದೆ.*ಕಾಕಬಲಿ*

#ಶ್ರಾದ್ಧಸಂದರ್ಭದಲ್ಲಿ ಉತ್ತಿಷ್ಠ ಪಿಂಡ ವನ್ನು *#ಕಾಗೆಗೆ* ಇಡುವ ಸಂಪ್ರದಾಯಕ್ಕೆ ಕಾರಣ #ರಾಮಾಯಣಕಾಲದಲ್ಲಿ ಕಾಗೆಗಳಿಗೆ ಪ್ರಾಪ್ತವಾದ ವರಬಲದಿಂದ.  

ಸೂರ್ಯ ವಂಶದ ದೊರೆ ಮರುತ್ ಎಂಬುವವನು ಒಂದು ವಿಶಿಷ್ಟವಾದ ಯಜ್ಜ್ಯವನ್ನು  ಸುವರ್ತನೆಂಬ ಶ್ರೇಷ್ಠ ಮುನಿಯ ಪೌರೋಹಿತ್ಯದಲ್ಲಿ ಮಾಡಿದನು.   ಸುವರ್ತನು ಬೃಹಸ್ಪತಿಯ ಸೋದರ.    ಇಡೀ ವಿಶ್ವವೇ ತನ್ನ ಅಧೀನದಲ್ಲಿರಲಿ ಎಂಬ ಅಪೇಕ್ಷಿತನಾಗಿ ರಾವಣನು ದೇವತೆಗಳನ್ನೂ ಬ್ರಹ್ಮಬಲದಿಂದ ಹೆದರಿಸಿದ್ದನು. 

 ಆ ರಾವಣನ ಉಪಟಳಕ್ಕೆ ಹೆದರಿ ಎಲ್ಲಾ ದೇವತೆಗಳೂ  ವೇಷ ಮರೆಸಿಕೊಂಡು ಕೆಲವು ಪ್ರಾಣಿಗಳ  ರೂಪದಲ್ಲಿ ಯಜ್ಜ್ಞಕ್ಕೆ ಆಗಮಿಸಿದರು.  

ಬ್ರಹ್ಮನು ತನ್ನ ವಾಹನವಾದ ಹಂಸರೂಪದಿ ಬಂದರೆ, ದೇವೇಂದ್ರನು ನವಿಲಿನ ರೂಪದಲ್ಲೂ, ಯಮನು ಕಾಗೆಯ ರೂಪದಲ್ಲೂ, ಕುಬೇರನು ಹಲ್ಲಿಯ ರೂಪದಲ್ಲೂ ಬಂದರು.

ಹೀಗೆ ತಮ್ಮ ಗೌಪ್ಯತೆ ಕಾಪಾಡಲು ಹೊಂದಿದ ಆ ಆ ಪ್ರಾಣಿಗಳಿಗೆ ಒಂದೊಂದು ವರವನ್ನು ಇತ್ತರು.  ಅದರಂತೆ ಯಮನು ಕಾಗೆಗಳಿಗೆ ದೀರ್ಘಾಯಸ್ಸನ್ನೂ ಮತ್ತು ಆ ಕಾಗೆಗಳು ಸ್ವೀಕರಿಸುವ ಉಚ್ಚಿಷ್ಟ ಪಿಂಡದಿಂದ ಪಿತೃ ದೇವತೆಗಳಿಗೆ ತೃಪ್ತರಾಗಲಿ ಎಂದು ವರವನಿತ್ತರು.  

ಅದಕ್ಕೇ ಕಾಗೆಗೆ ಉತ್ತಿಷ್ಠ ಪಿಂಡವನ್ನು ಇಡುವ ಸಂಪ್ರದಾಯ.

" *#ಕಾಕಬಲಿಏಕೆ*? "

" ಕಾಕ ಬಲಿ " ಎಂದರೆ = #ಕಾಗೆಗಳಿಗೆಅನ್ನನೀಡುವುದು ಎಂದು ಅರ್ಥ!

ಮೃತನಾದ ವ್ಯಕ್ತಿಯ ಸಲುವಾಗಿ 10ನೇ ದಿನ ಈ ಕಾಕ ಬಲಿ ಇಡುವುದುಂಟು.

ಕಾಗೆ ಆ ಬಲಿಯನ್ನು ಮುಟ್ಟದಿದ್ದರೆ ಅಥವಾ ತಿನ್ನದಿದ್ದರೆ ಮೃತನಾದ ವ್ಯಕ್ತಿಗೆ ತೃಪ್ತಿಯಾಗಲಿಲ್ಲ ಎಂದು ಭಾವಿಸುವುದುಂಟು.

ಹಾಗಾದರೆ..

#ಕಾಗೆಗೆ - ಪಿತೃಗಳಿಗೆ ಸಂಬಂಧ ಉಂಟೆ?
ಎಂಬುದಕ್ಕೆ ಉತ್ತರ ಇಲ್ಲಿದೆ.

#ಶ್ರೀರಾಮಾಯಣ ಉತ್ತರಕಾಂಡದಲ್ಲಿ ಒಂದು ಪ್ರಸಂಗ...

ಸೂರ್ಯವಂಶದ ಕ್ಷತ್ರೀಯ ವೀರ " #ಮರುತ್ ". ಅವನು ಶ್ರೀ ಬೃಹಸ್ಪತಿಯ ಸಹೋದರನಾದ ಶ್ರೀ ಸಂವರ್ತನೆಂಬ ಬ್ರಹ್ಮರ್ಷಿಯ ಪೌರೋಹಿತ್ಯದಲ್ಲಿ ದೊಡ್ಡ ಯಜ್ಞವೊಂದನ್ನು ನಡೆಸಿದ.

#ಅದುರಾವಣನಕಾಲ! ಅವನಿಗೆ ಹೆದರಿದ ದೇವತೆಗಳು ಒಬ್ಬೊಬ್ಬರು ಒಂದೊಂದು ಪಕ್ಷಿಯ ರೂಪ ತಾಳಿ ಮರುತ್ತನ ಯಜ್ಞಕ್ಕೆ ಬಂದರು!

ಶ್ರೀ ಬ್ರಹ್ಮದೇವರು " #ಹಂಸ " ರೂಪದಲ್ಲಿ;ಶ್ರೀ ದೇವೇಂದ್ರ " #ನವಿಲು " ರೂಪದಲ್ಲಿ;ಶ್ರೀ ಯಮಧರ್ಮರಾಜರು " #ಕಾಗೆ " ಯ ರೂಪದಲ್ಲಿ ಬಂದರು!

ಹೀಗೆ ಯಜ್ಞದಲ್ಲಿ ಭಾಗವಹಿಸಿದ ಅವರು ತಮ್ಮ ಗೌಪ್ಯತೆಗೆ ಕಾರಣವಾದ ಆ ಪಕ್ಷಿ ಪ್ರಾಣಿಗಳಿಗೆ ಒಂದೊಂದು ವರ ನೀಡಿದರು.

ಶ್ರೀ ಯಮಧರ್ಮರಾಜರು #ಕಾಗೆಗಳಿಗೆದೀರ್ಘಾಯುಷ್ಯವನ್ನು ನೀಡಿದರು. ಯಾವ ರೋಗ ಭಯವೂ ಕಾಗೆಗಳಿಗೆ ಇಲ್ಲ. #ಮನುಷ್ಯನುಕೊಂದರಷ್ಟೇ ಅವುಗಳಿಗೆ ಮರಣ ಬರುತ್ತದೆ.

ಶ್ರೀ ಯಮಧರ್ಮರಾಜರು ಕಾಗೆಗಳಿಗೆ ಇನ್ನೊಂದು ವರವನ್ನು ನೀಡಿದರು...

ಯೇ ಚ ಮದ್ವಿಷಯಸ್ಥಾವೈ ಮಾನವಾ ಕ್ಷುಧಯಾರ್ದಿತಾಃ ।

ತ್ವಯಿ ಭಕ್ತೇ ಸುತೃಪ್ತಾಸ್ತೇ ಭವಿಷ್ಯಂತಿ ಸ ಬಾಂಧವಾ: ।।

#ನನ್ನಲೋಕದಲ್ಲಿರುವಪಿತೃಗಳು, ನೀವು ( ಕಾಗೆಗಳು ) ಅನ್ನವನ್ನು ಸ್ವೀಕರಿಸಿದರೆ ಆ ಮೂಲಕ ಸಂತೃಪ್ತರಾಗುತ್ತಾರೆ. ಈ ಕಾರಣದಿಂದ " ಕಾಕ ಬಲಿ " ಯ ಮೂಲಕ ಪಿತೃಗಳು ತೃಪ್ತರಾಗುವರೆಂಬ ನಂಬಿಕೆ ರೂಢಿಯಲ್ಲಿ ಬಂದಿದೆ.*ಕಾಕಬಲಿ*

#ಶ್ರಾದ್ಧಸಂದರ್ಭದಲ್ಲಿ ಉತ್ತಿಷ್ಠ ಪಿಂಡ ವನ್ನು *#ಕಾಗೆಗೆ* ಇಡುವ ಸಂಪ್ರದಾಯಕ್ಕೆ ಕಾರಣ #ರಾಮಾಯಣಕಾಲದಲ್ಲಿ ಕಾಗೆಗಳಿಗೆ ಪ್ರಾಪ್ತವಾದ ವರಬಲದಿಂದ.  

ಸೂರ್ಯ ವಂಶದ ದೊರೆ ಮರುತ್ ಎಂಬುವವನು ಒಂದು ವಿಶಿಷ್ಟವಾದ ಯಜ್ಜ್ಯವನ್ನು  ಸುವರ್ತನೆಂಬ ಶ್ರೇಷ್ಠ ಮುನಿಯ ಪೌರೋಹಿತ್ಯದಲ್ಲಿ ಮಾಡಿದನು.   ಸುವರ್ತನು ಬೃಹಸ್ಪತಿಯ ಸೋದರ.    ಇಡೀ ವಿಶ್ವವೇ ತನ್ನ ಅಧೀನದಲ್ಲಿರಲಿ ಎಂಬ ಅಪೇಕ್ಷಿತನಾಗಿ ರಾವಣನು ದೇವತೆಗಳನ್ನೂ ಬ್ರಹ್ಮಬಲದಿಂದ ಹೆದರಿಸಿದ್ದನು. 

 ಆ ರಾವಣನ ಉಪಟಳಕ್ಕೆ ಹೆದರಿ ಎಲ್ಲಾ ದೇವತೆಗಳೂ  ವೇಷ ಮರೆಸಿಕೊಂಡು ಕೆಲವು ಪ್ರಾಣಿಗಳ  ರೂಪದಲ್ಲಿ ಯಜ್ಜ್ಞಕ್ಕೆ ಆಗಮಿಸಿದರು.  

ಬ್ರಹ್ಮನು ತನ್ನ ವಾಹನವಾದ ಹಂಸರೂಪದಿ ಬಂದರೆ, ದೇವೇಂದ್ರನು ನವಿಲಿನ ರೂಪದಲ್ಲೂ, ಯಮನು ಕಾಗೆಯ ರೂಪದಲ್ಲೂ, ಕುಬೇರನು ಹಲ್ಲಿಯ ರೂಪದಲ್ಲೂ ಬಂದರು.

ಹೀಗೆ ತಮ್ಮ ಗೌಪ್ಯತೆ ಕಾಪಾಡಲು ಹೊಂದಿದ ಆ ಆ ಪ್ರಾಣಿಗಳಿಗೆ ಒಂದೊಂದು ವರವನ್ನು ಇತ್ತರು.  ಅದರಂತೆ ಯಮನು ಕಾಗೆಗಳಿಗೆ ದೀರ್ಘಾಯಸ್ಸನ್ನೂ ಮತ್ತು ಆ ಕಾಗೆಗಳು ಸ್ವೀಕರಿಸುವ ಉಚ್ಚಿಷ್ಟ ಪಿಂಡದಿಂದ ಪಿತೃ ದೇವತೆಗಳಿಗೆ ತೃಪ್ತರಾಗಲಿ ಎಂದು ವರವನಿತ್ತರು.  

ಅದಕ್ಕೇ ಕಾಗೆಗೆ ಉತ್ತಿಷ್ಠ ಪಿಂಡವನ್ನು ಇಡುವ ಸಂಪ್ರದಾಯ.

Sravanam keerthanam

"Sravanam keerthanam vishnoo
  Smaranam padasevanam
  Archanam vandhyam dhasyam
  Sakhyam athma nivedhanam”

The sloka mentioned above is from Bhagavatha. It tells us about the 9 different forms of devotion and devoutness give courage to a man.

“Shanath thatwa Darshnath”

Our ancestors understood this fact and built lot of temples for us; a place where we can devote our time for god. But in the shades of modern era, we rarely makes visit to our holy places and even though we visited; We are hardly spending time there and we usually giving an excuse about a busy schedule we are running on. Diminishment of Tantric values in our temples questioning its own existence now a days. And it did lessen the values and apparently reduced its importance in our life.

“Yum yum vapi smaran bhavam
  Thyaja thya nthe Kalebharam
  Thanthame vythi kunthiee puthraa
  Sadha tat bhava bhavitha”

A devotee prays to god all the time will do the same at the time of his death as well. And it will give him a good afterlife.

A sloka in bhagavath Geetha it is mentioned below

“Eeeswara sarva bhoothanam hridhyai swee Jjuna”

Which means that god is in everywhere. It raises a question in our mind “then why should we go to our holy places, our temples. It’s because of the change in time. In Thretha Yuga we were able to understand the Divine presence directly but now’s it’s only possible through the visit to our temples and holy places.

In Rigved it’s mentioned as

“Chatwari sringa thrayo asya pada “

Means that great temples must have 4 large towers. They are the symbol of four Vedas. Indirectly the sloka gives us a meaning that the devotee should think about the Vedas while entering the temples. Vedas treat one's very life as a worship of god. Number 4 is having great importance in our tradition and life.

A few examples for the importance of 4 are

*Four Vedas
*Four directions
*Four divisions of life (asramas)
*Four Yugas
*Four Purusharthas: Dharma, artha, karma, moksha
*Four evils that take one to hell: Karma, Krodha, lobha and moha

Vedas have an answer to everything. It can give answers to the questions which are real and visible and they are also capable of giving answers to our assumptions as well. Everything in this world is going forward in particular order and nothing in this world can survive without that order .The people who did not know this system and navigating away will be led to great difficulties and that too is within this order. As an Indian it is our responsibility to help the existence of Vedas and show the world its greatness.

While doing Pooja, Pranayama is happening along. It helps to cleanse inner mind. The dedication of the karmi should transform him as a deva then only Pooja will render the desired results. The practice of this ritual brings together the three dimensions of the Vedic view: its conceptions of the world, divinity and humanity. As said before diminishment of Tantric values in our temples makes this as a rare instance. Perhaps disparage of our Vedic values in the progress of civilization could be a reason.
HERITAGE

ನಾವಿರುವಲ್ಲಿಯೇ ಸ್ವರ್ಗ ನರಕಗಳನ್ನು ಸೃಷ್ಠಿಸಿಕೊಳ್ಳಬೇಕು.

ತಾನೊಬ್ಬನೇ ತಿನ್ನಬೇಕೆನ್ನುವುದು ನರಕವಾದರೆ, ಸ್ವರ್ಗ ಯಾವುದು?

ಸ್ವರ್ಗ ನರಕಗಳ ಕತೆಗಳನ್ನು ಹೇಳುವವರನ್ನು ನೀವು ಅವುಗಳನ್ನು ನೋಡಿದ್ದೀರಾ ಎಂದು ಕೇಳಿ ನೋಡಿ. ಬೇರೆಯವರು ತಲೆ ಆಡಿಸುವಂತೆ ಕತೆ ಹೇಳುವ ಅವರು ಇಲ್ಲವೆಂದು ತಲೆ ಅಲ್ಲಾಡಿಸುತ್ತಾರೆ. ಕತೆ ಹೇಳುವವರು ಯಾರೂ ಅವುಗಳನ್ನು ಹೋಗಿ ನೋಡಿಲ್ಲ. ಹೋಗಿದ್ದಿದ್ದರೆ ಕತೆ ಹೇಳಲು ಅವರು ಇಲ್ಲಿ ಇರುತ್ತಿರಲಿಲ್ಲ. ನಮಗೂ ಅವರಿಗೂ ಗೊತ್ತಿರುವುದೆಲ್ಲ ಕಲ್ಪನೆಯ ಕತೆಗಳು ಮಾತ್ರ! ಈಗ ಅಂತಹದ್ದೇ ಒಂದು ಅರ್ಥಪೂರ್ಣ ಕಾಲ್ಪನಿಕ ಕತೆ ಇಲ್ಲಿದೆ!

ಒಮ್ಮೆ ವಿದ್ವಜ್ಜನರ ಸಮಿತಿಯಲ್ಲಿ ಸ್ವರ್ಗ–ನರಕಗಳು ಎಂದರೆ ಏನೆಂದು ಚರ್ಚೆ ನಡೆಯಿತು. ಜನ ಎಲ್ಲಿ ನರಳುತ್ತಾರೋ ಅದು ನರಕವೆಂದೂ, ಜನ ಎಲ್ಲಿ ಆನಂದದಿಂದ ಇರುತ್ತಾರೋ ಅದು ಸ್ವರ್ಗವೆಂದೂ ಸಮಿತಿ ಒಮ್ಮತದಿಂದ ಒಪ್ಪಿಕೊಂಡರಂತೆ. ಸ್ವರ್ಗ–ನರಕಗಳನ್ನು ನೋಡಿ ಬರುವ ಅಪರೂಪದ ಅವಕಾಶ ಅವರಿಗೆ ಕಲ್ಪಿಸಿಕೊಡಲಾಯಿತಂತೆ!

ಅವರ ಮೊದಲ ಭೇಟಿ ನರಕಕ್ಕೆ. ಅವರಿಗೆ ಆಶ್ಚರ್ಯ ಉಂಟುಮಾಡಿದ ವಿಷಯವೆಂದರೆ ಅದಕ್ಕೆ ನರಕವೆಂಬ ಹೆಸರಿದ್ದರೂ, ಅದೂ ಶ್ರೀಮಂತ ಪ್ರದೇಶವಾಗಿತ್ತು. ಊಟದ ಮನೆಯಲ್ಲಿ ಯಥೇಚ್ಚ ತಿಂಡಿ–ತಿನಿಸುಗಳಿದ್ದವು. ಆದರೆ ಅಲ್ಲಿದ್ದ ಜನ ಮಾತ್ರ ಹಸಿವೆಯಿಂದ ಸೊರಗಿದ್ದರು. ಯಾರ ಮುಖದ ಮೇಲೂ ಕಳೆಯೇ ಇಲ್ಲ. ಸಿಟ್ಟು ಸೆಡವು ಎದ್ದು ತೋರುತ್ತಿದ್ದವು. ಪರಸ್ಪರ ಜಗಳವಾಡುತ್ತಿದ್ದರು. ಒಬ್ಬರನ್ನೊಬ್ಬರು ಬೈದುಕೊಳ್ಳುತ್ತಿದ್ದರು. ಯಾರೂ ಊಟ ಮಾಡುತ್ತಿರಲಿಲ್ಲ. ಇದು ಹೀಗೇಕೆಂದು ಸಮಿತಿಯವರು ಗಮನಿಸಿದಾಗ, ಗಮನಕ್ಕೆ ಬಂದದ್ದೇನೆಂದರೆ ಅಲ್ಲಿದ್ದ ಜನರಿಗೆಲ್ಲ ಒಂದು ದೈಹಿಕ ದೌರ್ಬಲ್ಯವಿತ್ತು. ಎಲ್ಲರ ತೋಳುಗಳೂ ಭುಜದಿಂದ ಕೈವರೆಗೆ ನೇರವಾಗಿದ್ದವು. ಮೊಣಕೈ ಮಡಿಸಲಾಗುತ್ತಿರಲಿಲ್ಲ. ಹೀಗಾಗಿ ಕೈತುಂಬ ತಿನಿಸು ತೆಗೆದುಕೊಂಡರೂ ಅದನ್ನು ಬಾಯಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಕಷ್ಟಪಟ್ಟು ಬಾಯ ಬಳಿ ಕೈ ಬಂದರೂ ಒಂದೆರಡು ಅಗಳು ಬಾಯಿ ಸೇರುತ್ತಿತ್ತು. ಉಳಿದದ್ದೆಲ್ಲ ನೆಲದ ಮೇಲೆ ಚೆಲ್ಲಿಹೋಗುತ್ತಿತ್ತು. ಹೊಟ್ಟೆ ತುಂಬುವಷ್ಟು ತಿಂಡಿ–ತಿನಿಸು ಇದ್ದರೂ ತಿನ್ನಲಾಗುತ್ತಿರಲಿಲ್ಲ. ಎಲ್ಲರೂ ಹಸಿದುಕೊಂಡೇ ಊಟದ ಮನೆಯಿಂದ ಹೊರಗೆ ಹೋಗುತ್ತಿದ್ದರು. ‘ತಿನ್ನಲು ಬೇಕಾದಷ್ಟಿದ್ದರೂ ಇವರಿಗೆ ತಿನ್ನಲಾಗುತ್ತಿಲ್ಲವಲ್ಲ. ನಿರ್ದಯ ಅನ್ಯಾಯ’ ಎಂದು ಸಮಿತಿಯವರಿಗೆ ಬಹಳ ಬೇಸರವಾಯಿತು.

    ಸಮಿತಿಯವರು ಅಲ್ಲಿಂದ ಸ್ವರ್ಗಕ್ಕೆ ಹೋದರು. ನರಕಕ್ಕೂ ಸ್ವರ್ಗಕ್ಕೂ ಅಂತಹ ವ್ಯಾತ್ಯಾಸವೇನೂ ಕಾಣಲಿಲ್ಲ. ಎರಡೂ ಶ್ರೀಮಂತ ಸುಂದರ ಪ್ರದೇಶಗಳೇ! ಆದರೆ ಸಮಿತಿಯವರು ಎಲ್ಲೂ ನಿಲ್ಲದೆ ನೇರ ಊಟದ ಮನೆಗೆ ಹೋದರು. ಅಲ್ಲಿ ಕೂಡಾ ಊಟದ ಮೇಜಿನ ತುಂಬಾ ತಿಂಡಿ ತಿನಿಸುಗಳಿದ್ದವು. ಆದರೆ ಜನ ಅಲ್ಲಿ ಆನಂದವಾಗಿದ್ದರು. ಪರಸ್ಪರ ಸ್ನೇಹದ ಪ್ರೀತಿಯ ಮಾತುಗಳನ್ನಾಡುತ್ತ ಊಟ ಮಾಡುತ್ತಿದ್ದರು. ಇಲ್ಲಿಯೂ ಸಮಿತಿಯವರಿಗೆ ಆಶ್ಚರ್ಯ ಕಾದಿತ್ತು. ಇಲ್ಲಿನ ಮೊಣಕೈ ಬಗ್ಗುತ್ತಿರಲಿಲ್ಲ. ನೇರವಾಗಿ ತಿಂಡಿಯನ್ನು ಬಾಯಲಿಟ್ಟುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಯಾರೂ ಹಸಿವೆಯಿಂದ ಬಳಲುತ್ತಿರಲಿಲ್ಲ. ಎಲ್ಲರೂ ಆನಂದವಾಗಿ ಊಟ ಮಾಡುತ್ತಿದ್ದರು. ತಮ್ಮ ಕೈ ಬಳಸಿ ತಾವೇ ತಿನ್ನಲು ಸಾಧ್ಯವಿಲ್ಲವಾದುದರಿಂದ ಅವರು ತಮ್ಮ ಕೈ ಬಳಸಿ ಮತ್ತೊಬ್ಬರಿಗೆ ತಿನ್ನಿಸುತ್ತಿದ್ದರು. ತಿನ್ನಿಸುವಾಗ ಒಳ್ಳೆಯ ಮಾತಗಳನ್ನಾಡುತ್ತಿದ್ದರು. ಉಪಚಾರ ಮಾಡುತ್ತಿದ್ದರು. ಊಟದ ಮನೆಯಲ್ಲಿ ಆನಂದದ ವಾತಾವರಣವಿತ್ತು!

ಸಮಿತಿಯವರು ಹಿಂತಿರುಗಿ ಬಂದು ಒಂದು ಒಳ್ಳೆಯ ವರದಿ ಸಲ್ಲಿಸಿದರು. ಅದೇನೆಂದರೆ ಸ್ವರ್ಗ–ನರಕಗಳಿಗೆ ಬಹಳ ವ್ಯತ್ಯಾಸವೇನಿಲ್ಲ. ತಾನೊಬ್ಬನೇ ತಿನ್ನಬೇಕು. ಬೇರೆಯವರು ಎನಗೇಕೆ ಎಂದು ಪ್ರಯತ್ನಿಸುವ ಜನರಿದ್ದರೆ ಅದು ನರಕ! ಇತರರಿಗೆ ತಿನಿಸಿ ಸಂತೋಷ ಪಡುವುದಾದರೆ, ಅವರು ನಮಗೂ ತಿನಿಸುತ್ತಾರೆ ಎಂದು ಅರಿತು ಬಾಳುವ ಜನರಿದ್ದರೆ ಅದೇ ಸ್ವರ್ಗ! ಕತೆ ಕಾಲ್ಪನಿಕವಿರಬಹುದು! ಆದರೆ ಅದರ ಹಿಂದಿನ ತತ್ವ ಮಾತ್ರ ಸತ್ವಪೂರ್ಣ ಅಲ್ಲವೇ ? ನಾವಿರುವಲ್ಲಿಯೇ ಸ್ವರ್ಗ ನರಕಗಳನ್ನು ಸೃಷ್ಠಿಸಿಕೊಳ್ಳುವ ಹಠ ಯೋಗ ನಾವು ಬೆಳೆಸಿಕೊಳ್ಳುವುದು ನಮಗೆ ಸಾಧ್ಯವಲ್ಲವೇ?
ಕೃಪೆ: ಷಡಕ್ಷರಿ.ವಿಶ್ವ ವಾಣಿ.

ಸಪ್ತ ಋಷಿಗಳ ರಾಜ್ಯಾಡಳಿತ

ಈ ಭೂಭಾಗವನ್ನು ಯಾರ‍್ಯಾರೋ ಆಳಿದ್ದಾರೆ ಆದರೆ ಪಾವಿತ್ರ್ಯವನ್ನು ಉಳಿಸಿಕೊಂಡ ಋಷಿಗಳೂ ಆಳಿದ್ದರು, ರಾಜನಾಗಿದ್ದು ಋಷಿಚರ್ಯೆ ಹೊಂದಿದವರೂ ಆಳಿದ್ದರು. ಅವರೇ ರಾಜರ್ಷಿ ಎನ್ನಿಸಿಕೊಂಡಿದ್ದರು. ಅದರ ಕುರಿತು ಚಿಕ್ಕದಾಗಿ ಒಂದಷ್ಟು . . . 

ಮಮದ್ವಿತಾ ಇದು ಋಗ್ವೇದದ ನಾಲ್ಕನೇ ಮಂಡಲದ ೪೨ ನೇ ಸೂಕ್ತ. ಪುರುಕುತ್ಸ ಎನ್ನುವವನ ಮಗನಾದ ತ್ರಸದಸ್ಯು ಎನ್ನುವವನು ಈ ಸೂಕ್ತದ ದ್ರಷ್ಟಾರ. ಈತ ಕೇವಲ ರಾಜನಾಗಿರಲಿಲ್ಲ ರಾಜರ್ಷಿ ಎನ್ನಿಸಿಕೊಂಡಿದ್ದ. ತನ್ನನ್ನೇ ಸ್ತುತಿಸಿಕೊಂಡ ಆರು ಋಕ್ಕಿಗಳಿ ಆತ್ಮವೇ ದೇವತೆ ಮಿಕ್ಕವು ಇಂದ್ರಾವರುಣ ಮಮದ್ವಿತಾ ರಾಷ್ಟ್ರಂ ಕ್ಷತ್ರಿಯಸ್ಯ ಎಂದು ಆರಂಭವಾಗುವ  ಮೊದಲ ಋಕ್ಕಿನಲ್ಲಿ. ನಾನು ಋಷಿಯಾಗಿದ್ದೇನೆ ನನ್ನ ಈ ರಾಷ್ಟ್ರದಲ್ಲಿ ಎರಡು ವಿಧದ ಆಡಳಿತಗಳಿವೆ. ಒಂದು ಈ ಭೂಮಿಯ ಆಡಳಿತವಾದರೆ ಇನ್ನೊಂದು ಸ್ವರ್ಗದ್ದು ಎಂದು ಹೇಳುತ್ತಾನೆ. ನಾನೇ ವರುಣನಾಗಿದ್ದು, ಜನರಿಗೆ ಅತೀ ಸಮೀಪಸ್ಥನಾಗಿದ್ದೇನೆ ಎನ್ನುವ ಈತ ನಾನು ಮಾಡಿದ ಕರ್ಮವನ್ನು ದೇವತೆಗಳೆಲ್ಲಾ ಸ್ವೀಕರಿಸುತ್ತಾರೆ ಎನ್ನುತ್ತಾ ತನ್ನ ಪ್ರಭುತ್ವವನ್ನು ಅತ್ಯಂತ ಹೆಮ್ಮೆಯಿಂದ ಹೇಳುವುದು ಸಿಗುತ್ತದೆ. ಇದನ್ನೇ ಕ್ಷಿತಿಸ್ವರ್ಗಭೇದೇನ ಎನ್ನುವುದು ಸಾಯಣಾಚಾರ್ಯರು. ಅಂದರೆ ಸ್ವರ್ಗಕ್ಕೂ ಭೂಮಿಗೂ ಎನ್ನುವ ಅರ್ಥವಾದರೂ ತ್ರಸದಸ್ಯು ಸ್ವರ್ಗಾಧಿಕಾರ ಹಿಡಿದಿದ್ದನೇ ಎನ್ನುವ ಸಂಶಯ ಕಾಡುತ್ತದೆ. ಆದರೆ ಸ್ವರ್ಗ ಸದೃಶ ಆಡಳಿತವನ್ನಂತೂ ಕೊಟ್ಟಿರಬಹುದು. ಇನ್ನು ಅದೇ ಮಂಡಲದ ೩೮ನೇ ಸೂಕ್ತದ ದ್ರಷ್ಟಾರ ವಾಮದೇವ ಮಹರ್ಷಿ. ದ್ಯಾವಾ ಪೃಥಿವಿ ಮತ್ತು ದಧಿಕ್ರಾವನ್ನು ಕುರಿತಾಗಿ ಸ್ತುತಿಸುವ ಈ ಸೂಕ್ತದಲ್ಲಿ ತ್ರಸದಸ್ಯುವಿನ ತಂದೆಯ ವಿಷಯ ಸಿಗುತ್ತದೆ. ಈ ತ್ರಸದಸ್ಯುವಿನ ತಂದೆ ಪುರುಕುತ್ಸ, ತಾಯಿ ಪುರುಕುತ್ಸಾನಿ. ಈ ಪುರುಕುತ್ಸ ಪೂರು ಎನ್ನುವ ವಂಶೀಯನಾಗಿದ್ದ ಎಂದು ಅಲ್ಲಲ್ಲಿ ಹೇಳಲ್ಪಟ್ಟಿದೆ.

ಪುರುಕುತ್ಸನ ಸಮಕಾಲೀನನಾಗಿ ಸುದಾಸ ಎನ್ನುವವನಿದ್ದ. ಈ ಪುರುಕುತ್ಸ ರಾಜನೂ ಹೌದು ಋಷಿಯೂ ಸಹ ಹೌದು. ಋಗ್ವೇದದ ಒಂದನೇ ಮಂಡಲದ ೬೩ನೇ ಸೂಕ್ತದಲ್ಲಿ ಬರುವ ಯತ್ಸುದಾಸೇ ವೃಥ ವರ್ಗಂಹೋ ರಾಜನ್ ಎನ್ನುವುದನ್ನು ಗಮನಿಸಿದರೆ ಸುದಾಸ ಮತ್ತು ಪುರುಕುತ್ಸ ಸಮಕಾಲೀನರು. ಇಂದ್ರನು ಯುದ್ಧಗಳಲ್ಲಿ ಇವರಿಬ್ಬರಿಗೂ ಸಹಾಯ ಮಾಡಿದ ಎನ್ನುವುದು ಈ ಋಕ್ಕಿನಿಂದ ತಿಳಿಯುತ್ತದೆ. ಆದರೆ ಇವರಿಬ್ಬರಲ್ಲಿಯೂ ಸಹ ಆಗಾಗ ಯುದ್ಧ ನಡೆಯುತ್ತಾ ಇರುತ್ತದೆ.
ಅಸ್ಮಾಕಮತ್ರ ಪಿತರಸ್ತ ಆಸನ್ ಸಪ್ತ ಋಷಯೋ ದೌರ್ಗಹೇ ಬಧ್ಯಮಾನೇ ಎನ್ನುವುದು ಋಗ್ವೇದದ ೪ನೇ ಮಂಡಲದ ೪೨ನೇ ಸೂಕ್ತದಲ್ಲಿ ಬರುತ್ತ್ತದೆ. ಪುರುಕುತ್ಸನು ಬಂಧಿತನಾದುದರಿಂದ ಅರಾಜಕವಾದ ಈ ದೇಶದಲ್ಲಿ ಪ್ರಸಿದ್ಧರಾದ ಸಪ್ತ ಋಷಿಗಳೂ ಸಹ ಪಾಲಕರಾದರು, ಪುರುಕುತ್ಸನು ಬಂಧಿತನಾದಾಗ ಅದೇ ಋಷಿಗಳು ಇಂದ್ರಾವರುಣರ ಅನುಗ್ರಹದಿಂದ ಪುರುಕುತ್ಸನ ಪತ್ನಿಯಲ್ಲಿ ಇಂದ್ರನಿಗೆ ಸಮಾನನಾದ ಶತ್ರುನಾಶಕನೂ, ದೇವತೆಗಳ ಸಾನ್ನಿಧ್ಯವುಳ್ಳವನೂ ಆದ ತ್ರಸದಸ್ಯವು ಜನಿಸುವಂತೆ ಮಾಡಿದರು. ಎನ್ನುವಲ್ಲಿ ಗಮನಿಸ ಬೇಕಾದ್ದು ಈ ದೇಶ ಸಪ್ತರ್ಷಿಗಳಿಂದ ಸಹ ಆಳಲ್ಪಟ್ಟಿತ್ತು ಎನ್ನುವುದು. 
ಈ ಋಕ್ಕಿನಲ್ಲಿ ಈ ಸೂಕ್ತದ್ರಷ್ಟಾರನಾದ ತ್ರಿಸದಸ್ಯುವು ಹೇಗೆ ಜನಿಸಿದ ಎನ್ನುವುದು ಹೇಳಲ್ಪಟ್ಟಿದೆ. ತ್ರಸದಸ್ಯುವಿನ ಹುಟ್ಟಿನ ಕುರಿತಾಗಿ ಭಾಷ್ಯಕಾರರು ಒಂದು ಸನ್ನಿವೇಶ ಹೇಳುತ್ತಾರೆ.

ಪುರುಕುತ್ಸಸ್ಯ ಮಹಿಷಿ ದೌರ್ಗಹೇ ಬಂಧನಸ್ಥಿತೇ ಎನ್ನುವಲ್ಲಿ ಪ್ರಾಚೀನ ಕಾಲದಲ್ಲಿ ದುರ್ಗಹಪುತ್ರನಾದ ಪುರುಕುತ್ಸನೆಂಬ ರಾಜನು ಯುದ್ಧ ಮಾಡುತ್ತಿರುವಾಗ ಶತ್ರುಗಳಿಂದ ಸೆರೆಹಿಡಿಯಲ್ಪಟ್ಟು ಬಂಧನಕ್ಕೊಳಗಾಗುತ್ತಾನೆ. ಆಗ ಪುರುಕುತ್ಸನನ್ನು ಸೆರೆಯಿಂದ ಬಿಡಿಸಲು ಸಾಧ್ಯವಾಗುವುದಿಲ್ಲ. ಪುರುಕುತ್ಸ ರಾಜನಿಗೆ ಮಕ್ಕಳಿಲ್ಲದ್ದರಿಂದ ಅವನ ಮಡದಿ ಪುರುಕುತ್ಸಾನೀ ಎಂಬ ರಾಜ ಪತ್ನಿಯು ತಮ್ಮ ರಾಜ್ಯವು ಅರಾಜಕವಾಗಿ ನಾಯಕನಿಲ್ಲದೇ ಶತ್ರುಗಳ ಪಾಲಾಗುತ್ತದೆ ಎಂದು  ಚಿಂತಿಸುತ್ತಾಳೆ. ಆ ಸಮಯದಲ್ಲಿ ಅಲ್ಲಿಗೆ ಯಾವುದೋ ಕಾರಣಕ್ಕಾಗಿ ಸಪ್ತ ಋಷಿಗಳು ಬರುತ್ತಾರೆ. ಪುರುಕುತ್ಸಾನಿಯು ಅವರನ್ನು ಆದರಾತಿಥ್ಯಗಳಿಂದ ಸತ್ಕರಿಸಿ ಪೂಜಿಸಿ ತನ್ನ ಮತ್ತು ತನ್ನ ಗಂಡನಿಗೊದಗಿದ ದುರವಸ್ಥೆಯ ಕಥೆಯನ್ನು ಹೇಳಿಕೊಳ್ಳುತ್ತಾಳೆ. ಆಗ ಸಪ್ತ ಋಷಿಗಳು ಆವಳ ಪೂಜಾ ಸತ್ಕಾರಗಳಿಂದ ಸಂತುಷ್ಟರಾಗಿ ಭಕ್ತಿಯಿಂದ ಇಂದ್ರಾವರುಣರನ್ನು ಸ್ತುತಿಸು ಎಂದು ಉಪದೇಶಮಾಡುತ್ತಾರೆ. ಅದರಂತೆ ಪುರುಕುತ್ಸಾನಿಯು ಇಂದ್ರಾವರುಣರನ್ನು ಬೇಡಿಕೊಳ್ಳುತ್ತಾಳೆ. ಅವರಿಂದ ತ್ರಸದಸ್ಯು ಎನ್ನುವ ಪುತ್ರನು ಹುಟ್ಟುತ್ತಾನೆ. ಇದು ಆತನ ಜನ್ಮ ವೃತ್ತಾಂತವಾದರೆ, ತನ್ನ ಜನ್ಮ ವೃತ್ತಾಂತವನ್ನು ತನ್ನ ತಾಯಿಯಿಂದ ತಿಳಿದು ತ್ರಸದಸ್ಯುವು ಈ ಅಸ್ಮಾಕಮತ್ರ ಪಿತರಸ್ತ ಎನ್ನುವ ಋಕ್ಕೂ ಮತ್ತು ಮುಂದಿನ ಪುರುಕುತ್ಸಾನೀ ಹಿ ವಾಮದಾಶದ್ದವ್ಯೇಭಿರಿಂದ್ರಾ ವರುಣಾ ನಮೋಭಿಃ ಎನ್ನುವಲ್ಲಿ ಸಹ ಹೇಳಿಕೊಂಡಿದ್ದಾನೆ. ಇಲ್ಲಿ ಗಮನಿಸಬೇಕಾದ ಹಲವು ಅಂಶಗಳಲ್ಲಿ ಪುರುಕುತ್ಸನೂ ಸಹ ದುರ್ಗಹ ಮತ್ತು ಗಿರಿಕ್ಷಿತ್ ಎನ್ನುವ ವಂಶದವನು. ಇನ್ನು ೮ನೇ ಮಂಡಲದ ೨೨ನೇ ಸೂಕ್ತದಲ್ಲಿ ಯೇಭಿಸ್ತೃಕ್ಷಿಂ ಎಂದು ಬಂದಿರುವುದರಿಂದ ತೃಕ್ಷಿ ಅಥವಾ ತೃಕ್ಷ, ತಾರ್ಕ್ಷ್ಯ ಎನ್ನುವವನೂ ಸಹ ಇದೇ ವಂಶದಲ್ಲಿದ್ದ ಎನ್ನುವುದು ಸಹ ತಿಳಿಯುತ್ತದೆ. ಇನ್ನು ೬ನೇ ಮಂಡಲದ ೪೬ನೇ ಸೂಕ್ತದಲ್ಲಿ ಯತ್ಪೂರೌ ಕಚ್ಚ ವೃಷ್ಣ್ಯಂ ಎನ್ನುವಲ್ಲಿ ಪುರುಕುತ್ಸ ಪೂರು ಎನ್ನುವ ವಂಶದವನು ಎಂದೂ ಸಹ ಹೇಳಿದೆ. ಈ ಪೂರು ಎನ್ನುವ ಜನಾಂಗ ನೆಲೆಸಿದ್ದು ಸರಸ್ವತೀ ನದೀಯ ತೀರದಲ್ಲಿ ಎಂದು ವಶಿಷ್ಠ ಮಹರ್ಷಿಯ ಪ್ರ ಕ್ಷೋದಸಾ ಎನ್ನುವ ೭ನೇ ಮಂಡಲದ ೯೫ ಮತ್ತು ವಶಿಷ್ಠ ಮಹರ್ಷಿಯ ಬೃಹದುಗಾಯಿಷೇ ಎನ್ನುವ ೯೬ನೇ ಸೂಕ್ತದಿಂದ ತಿಳಿದುಬರುತ್ತದೆ. ಮಿತ್ರಾತಿಥಿಯ ಮಗನಾದ ಕುರುಶ್ರವಣನೆನ್ನುವ ಕುರುವಂಶಸ್ಥ ರಾಜನೂ ಸಹ ಇದೇ ತ್ರಸದಸ್ಯುವಿನ ವಂಶಸ್ಥ ಎನ್ನುವುದು ಹತ್ತನೇ ಮಂಡಲದಲ್ಲಿ ಕವಷ ಐಲೂಷನ ೩೩ನೇ ಸೂಕ್ತದ ೪ ಮತ್ತು ೫ನೇ ಋಕ್ಕಿನಲ್ಲಿ ಕುರುಶ್ರವಣ ಮತ್ತು ತ್ರಸದಸ್ಯುವನ್ನು ದೇವತೆಯನ್ನಾಗಿ ಸ್ತುತಿಸುವುದು ತಿಳಿಯುತ್ತದೆ. 
ಇಲ್ಲಿ ನಾನು ಗಮನಿಸ ಹೊರಟದ್ದು ಈ ದೇಶವನ್ನು ಕೇವಲ ಕ್ಷತ್ರಿಯ ವಂಶದವರು ಆಳಿದ್ದಿಲ್ಲ, ಇಲ್ಲಿ ಋಷಿಪರಂಪರೆಯಿಂದ ರಾಜಕೀಯ ಮತ್ತು ರಾಜಕಾರಣ ಹರಿದು ಬಂದಿದೆ ಎನ್ನುವುದಕ್ಕೆ ಸಿಗುವ ನಿದರ್ಶನಗಳಲ್ಲಿ ಇದೇ ಸಪ್ತರ್ಷಿಗಳು ಪುರುಕುತ್ಸನ ಸಾಮ್ರಾಜ್ಯವನ್ನು ಆಳಿದ ಉಲ್ಲೇಖವನ್ನು. 

#ಸದ್ಯೋಜಾತರು

September 21, 2021

ಎಡ ಮಗ್ಗಲಿಗೆ ಹೊರಳಿ ಮಲಗಿದರೆ ಹತ್ತಾರು ಅನುಕೂಲಗಳು.

ನಿಮಗಿದು ಗೊತ್ತಾ?

ಎಡ ಮಗ್ಗಲಿಗೆ ಹೊರಳಿ ಮಲಗಿದರೆ ಹತ್ತಾರು ಅನುಕೂಲಗಳು..!

ತನ್ನ ಬೆನ್ನ ಮೇಲೆ ಮಲಗುವ ಏಕೈಕ ಪ್ರಾಣಿ ಯಾವುದು ಗೊತ್ತೇ? ಅದೇ ಮನುಷ್ಯ. ನಮ್ಮ ದೇಹಕ್ಕೆ ಆಹಾರದಷ್ಟೇ ನಿದ್ರೆಯೂ ಮುಖ್ಯವಾಗಿದೆ. ಆದರೆ ನಿದ್ರಿಸುವಾಗ ಅನುಸರಿಸುವ ಭಂಗಿಯೂ ಅಗತ್ಯ. ಇದು ಸರಿಯಾಗಿದ್ದರೆ ಆರೋಗ್ಯವನ್ನು ದೃದ್ಧಿಸುತ್ತದೆ. ಅದೇ ತಪ್ಪು ಭಂಗಿ ನಿಮ್ಮ ಆರೋಗ್ಯವನ್ನು ಕೆಡಿಸಬಹುದು. ತಜ್ಞರ ಪ್ರಕಾರ ನಾವೆಲ್ಲಾರು ಇದುವರೆಗೆ ಮಲಗುವುದೇ ಹೀಗೆ ಎಂದು ತಿಳಿದುಕೊಂಡು ಬಂದಿರುವ ಬೆನ್ನ ಮೇಲೆ ಮಲಗುವುದು ತಪ್ಪು ಭಂಗಿ.

ಹೌದೇ? ಹಾಗಾದರೆ ಸರಿಯಾದ ಭಂಗಿ ಯಾವುದು ಎಂಬ ಪ್ರಶ್ನೆಗೆ ಅವರ ಉತ್ತರ ಎಡ ಮಗ್ಗಲಲ್ಲಿ ಮಲಗುವುದು ಅಂದರೆ ಎಡಗೈ ಕೆಳಗೆ ಬರುವಂತೆ ಅಡ್ಡಲಾಗಿ ಮಲಗುವುದು. ಸಾಮಾನ್ಯವಾಗಿ ಹೆಚ್ಚಿನ ಸಸ್ತನಿಗಳು ಹೊಟ್ಟೆಯಮೇಲೆ ಮಲಗಿದಂತೆ ಕಂಡುಬಂದರೂ ಕೊಂಚ ಎಡಕ್ಕೆ ಬಾಗಿರುವುದನ್ನು ಗಮನಿಸಬಹುದು. ನಮ್ಮ ಶರೀರದ ಅಂಗಗಳ ರಚನೆಯನ್ನು ಗಮನಿಸಿದರೆ ಎಡಕ್ಕೆ ಮಲಗುವುದರಿಂದ ಪಚನಾಂಗಗಳಿಗೆ ಅತಿ ಕಡಿಮೆ ಭಾರ ಬಿದ್ದು ಅವುಗಳ ಕ್ರಿಯೆ ಸರಾಗವಾಗಿ ನಡೆಯಲು ಸಾಧ್ಯವಾಗುತ್ತದೆ.

ಎಡಮಗ್ಗಲಲ್ಲಿ ಮಲಗುವುದರಿಂದ ಪಚನಕ್ರಿಯೆಗೂ ಹೊರತಾಗಿ ಇನ್ನೂ ಹಲವು ಪ್ರಯೋಜನಗಳಿವೆ. ಆದರೆ ಇದಕ್ಕೆ ವಿರುದ್ಧವಾಗಿ ಬಲಮಗ್ಗಲಿಗೆ ಮಲಗಿಕೊಂಡರೆ ಪಚನಕ್ರಿಯೆಯ ಬಳಿಕ ದೇಹದಲ್ಲಿ ಸಂಗ್ರಹವಾದ ವಿಷಕಾರಿ ವಸ್ತುಗಳು ಪೂರ್ಣವಾಗಿ ವಿಸರ್ಜನೆಯಾಗದೇ ದೇಹದಲ್ಲಿ ಸಂಗ್ರಹವಾಗುತ್ತಾ ಹೋಗುತ್ತವೆ.

ಅಲ್ಲದೇ ಹೆಚ್ಚಿನ ಭಾರ ಪಡೆದ ಪಚನಾಂಗಗಳು ಪೂರ್ಣವಾಗಿ ಕಾರ್ಯನಿರ್ವಹಿಸಲು ಹೆಚ್ಚಿನ ರಕ್ತ ಬೇಡುತ್ತವೆ. ಇದು ಹೃದಯದೊತ್ತಡ ಮೊದಲಾದ ಇತರ ತೊಂದರೆಗಳಿಗೆ ನಾಂದಿಯಾಗುತ್ತದೆ.

ನಿಮ್ಮ ಮೂತ್ರಪಿಂಡ ಮತ್ತು ಯಕೃತ್ಗಳ ಕಾರ್ಯಕ್ಷಮತೆ ಹೆಚ್ಚುತ್ತವೆ :-
ನಮ್ಮ ಶರೀರದ ಅನೈಚ್ಛಿಕ ಕಾರ್ಯದಲ್ಲಿ ಮೂತ್ರಪಿಂಡ ಮತ್ತು ಯಕೃತ್ ಪ್ರಮುಖ ಪಾತ್ರ ವಹಿಸುತ್ತವೆ. ಇವು ನಮ್ಮ ರಕ್ತವನ್ನು ಶೋಧಿಸಿ ಕಲ್ಮಶಗಳನ್ನು ಸಂಗ್ರಹಿಸಿ ಹೊರಹಾಕುವ ಕೆಲಸವನ್ನು ನಿದ್ದೆಯ ಸಮಯದಲ್ಲಿ ಹೆಚ್ಚಾಗಿ ಮಾಡುತ್ತವೆ.

ಎಡಮಗ್ಗಲಲ್ಲಿ ಮಲಗುವುದರಿಂದ ಇವುಗಳ ಮೇಲೆ ಯಾವುದೇ ಭಾರ ಬೀಳದ ಕಾರಣ ಇವುಗಳ ಕ್ಷಮತೆ ಅತಿ ಹೆಚ್ಚಾಗಿ ದೇಹದಿಂದ ಸಂಗ್ರಹವಾದ ಎಲ್ಲಾ ವಿಷಕಾರಿ ವಸ್ತುಗಳು ಹೊರಹಾಕಲು ಸಾಧ್ಯವಾಗುತ್ತದೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ :-
ಅನೈಚ್ಛಿಕ ಕಾರ್ಯಗಳಲ್ಲಿ ಇನ್ನೊಂದು ಅತಿ ಪ್ರಮುಖವಾದ ಕಾರ್ಯವೆಂದರೆ ಜೀರ್ಣಕ್ರಿಯೆ. ಎಡಮಗ್ಗಲಲ್ಲಿ ಮಲಗುವುದರಿಂದ ಜಠರ ಮತ್ತು ಮೇದೋಜೀರಕಾಂಗಗಳ ಮೇಲೆ ಯಾವುದೇ ಒತ್ತಡ ಬೀಳದೇ ಇವುಗಳು ತಮ್ಮ ಪೂರ್ಣ ಕ್ಷಮತೆಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.

ಮೇದೋಜೀರಕ ಗ್ರಂಥಿಯಿಂದ ಸ್ರವಿತವಾಗುವ ರಸಗಳೂ ಪೂರ್ಣ ಪ್ರಮಾಣದಲ್ಲಿದ್ದು ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ. ಜಠರದಲ್ಲಿ ಪೂರ್ಣಪ್ರಮಾಣದಲ್ಲಿ ಜೀರ್ಣವಾದ ಆಹಾರ ಕರುಳುಗಳ ಕೆಲಸವನ್ನು ಸುಲಭಗೊಳಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

ಸುಖವಾದ ವಿಸರ್ಜನೆಗೆ ಸಹಕರಿಸುತ್ತದೆ :-
ನಮ್ಮ ಆಹಾರದ ಬಹುಪಾಲು ಜೀರ್ಣಗೊಂಡ ಬಳಿಕ ಅಗತ್ಯ ಕೆಲಸಗಳಿಗಾಗಿ ಹೀರಿಕೊಳ್ಳಲ್ಪಡುವುದು ಸಣ್ಣಕರುಳಿನಲ್ಲಿ. ಬಳಿಕ ಉಳಿದ ತ್ಯಾಜ್ಯ ದೊಡ್ಡ ಕರುಳಿಗೆ ರವಾನೆಯಾಗುತ್ತದೆ.

ಎಡಮಗ್ಗಲಲ್ಲಿ ಮಲಗುವ ಮೂಲಕ ಈ ರವಾನೆ ಕೆಲಸಕ್ಕೆ ಗುರುತ್ವಾಕರ್ಷಣೆ ನೆರವಾಗುವುದರಿಂದ ಯಾವುದೇ ಕಷ್ಟವಿಲ್ಲದೇ ಸಣ್ಣಕರುಳಿನಿಂದ ತ್ಯಾಜ್ಯ ದೊಡ್ಡ ಕರುಳಿಗೆ ಬರುತ್ತದೆ. ಮರುದಿನ ದೊಡ್ಡ ಕರುಳಿನಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯ ಸುಲಭವಾಗಿ, ಕಡಿಮೆ ಒತ್ತಡದಲ್ಲಿ ವಿಸರ್ಜನೆಗೊಳ್ಳಲು ಸಹಕಾರಿಯಾಗಿದೆ.

ಹೃದಯದ ಕ್ಷಮತೆ ಹೆಚ್ಚುತ್ತದೆ :-
ಎಡಮಗ್ಗಲಲ್ಲಿ ಮಲಗುವುದರಿಂದ ಶರೀರದ ಅನೈಚ್ಛಿಕ ಕಾರ್ಯದಲ್ಲಿ ನಿರತರಾಗಿರುವ ಎಲ್ಲಾ ಅಂಗಗಳು ಕಡಿಮೆ ಹೊರೆ ಹೊತ್ತಿರುವ ಕಾರಣ ಇವುಗಳಿಗೆ ರಕ್ತ ಪೂರೈಸಲು ಹೃದಯಕ್ಕೆ ಹೆಚ್ಚಿನ ಶ್ರಮ ಬೇಕಾಗಿಲ್ಲ.

ಎದೆಯುರಿ ಮತ್ತು ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ತಡೆಯುತ್ತದೆ :-
ಎಡಮಗ್ಗಲಲ್ಲಿ ಮಲಗುವುದರಿಂದ ಪಚನಗೊಂಡ ಆಹಾರ ಮುಂದೆ ಸಾಗಲು ಸುಲಭವಾಗುತ್ತದೆ. ಅಲ್ಲದೇ ಹಿಂದೆ ಸರಿಯುವ ಸಾಧ್ಯತೆಗಳೂ ಕಡಿಮೆಯಾಗುತ್ತದೆ.

ಬೆಳಗಿನ ಆಯಾಸವನ್ನು ಇಲ್ಲವಾಗಿಸುತ್ತದೆ :-
ಎಡಮಗ್ಗಲಲ್ಲಿ ಮಲಗಿದ್ದಾಗ ಯಕೃತ್ ಮತ್ತು ಪಿತ್ತಕೋಶ ಸಡಿಲವಾಗಿದ್ದು ಇವುಗಳು ಯಾವುದೇ ಒತ್ತಡವಿಲ್ಲದೇ ಯಾವುದೇ ಪ್ರಮಾಣ ವ್ಯರ್ಥವಾಗದಂತೆ ಪಿತ್ತರಸವನ್ನು ಸ್ರವಿಸಬಹುದು.

ಇದು ಆಹಾರವನ್ನು ಪೂರ್ಣವಾಗಿ ಮತ್ತು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಕರಿಸುವುದರಿಂದ ಮುಂಜಾನೆ ದೇಹಕ್ಕೆ ಹೆಚ್ಚಿನ ಶಕ್ತಿ ಲಭಿಸುತ್ತದೆ. ಪರಿಣಾಮವಾಗಿ ಮುಂಜಾನೆಯ ಆಯಾಸ ಇಲ್ಲವಾಗುತ್ತದೆ.

ಕೊಬ್ಬು ಕರಗುತ್ತದೆ ಮತ್ತು ಯಕೃತ್ನಲ್ಲಿ ಕೊಬ್ಬು ಸಂಗ್ರಹವಾಗುವುದು ತಪ್ಪುತ್ತದೆ :-
ಒಂದು ವೇಳೆ ಪಿತ್ತರಸದ ಪ್ರಮಾಣ ಸಾಕಷ್ಟು ಇಲ್ಲದಿದ್ದರೆ ಕೊಬ್ಬು ಕರಗದೇ ಯಕೃತ್ ನೊಳಗೇ ಉಳಿದುಬಿಡುತ್ತದೆ. ಇದಕ್ಕೆ fatty liver ಎಂದು ಕರೆಯುತ್ತಾರೆ. ಎಡಮಗ್ಗಲಲ್ಲಿ ಮಲಗುವುದರಿಂದ ಕೊಬ್ಬು ಉಳಿಯದಿರಲು ನೆರವಾಗಿ ಈ ಸ್ಥಿತಿಗೆ ಬರುವುದರಿಂದ ತಪ್ಪಿದಂತಾಗುತ್ತದೆ.
ಸಂಗ್ರಹ: ವೇ ಶ್ರೀ ಚನ್ನೇಶ ಶಾಸ್ತ್ರಿಗಳು ಮಠದ

ಭ್ರೂ ಮಧ್ಯದಲ್ಲೇ ಕುಂಕುಮ ಇಡುವುದೇಕೆ?

ಭ್ರೂ ಮಧ್ಯದಲ್ಲೇ ಕುಂಕುಮ ಇಡುವುದೇಕೆ?
ಕೆಂಪು ಬಣ್ಣದ ಕುಂಕುಮವನ್ನೇ ಭ್ರೂ ಮಧ್ಯದಲ್ಲಿ ಇಡುವ ಹಿಂದಿನ ರಹಸ್ಯವೇನು? 
ಉಪಯುಕ್ತ ಮಾಹಿತಿ ನಿಮಗಾಗಿ..........!
------------------------------------------------------------------------
ಹಿಂದೆಲ್ಲಾ ನಮ್ಮ ತಾಯಂದಿರು ಹಣೆಯ ಮೇಲೆ ಕುಂಕುಮ ಇಟ್ಟುಕೊಳ್ಳುವುದನ್ನು" ಮುತ್ತೈದೆ ಕುಂಕುಮ ಇಟ್ಟುಕೊಂಡರೆ ಮೂರು ಗಾವುಲದ ದೂರದವರೆಗೂ ಕಾಣುತ್ತದೆ" ಎಂದು ವರ್ಣಿಸುತ್ತಿದ್ದರು

ಅದರ ಅರ್ಥ ಅಷ್ಟು ದೊಡ್ಡದಾಗಿ ಕುಂಕುಮ ಇಟ್ಟುಕೊಳ್ಳುತ್ತಾರೆ ಎಂದು.ಹಾಗಾದರೆ ಹಣೆಯ ಮೇಲೆ ಭ್ರೂ ಮಧ್ಯದಲ್ಲಿಯೇ ಕುಂಕುಮ ಇಡುವ ವೈಜ್ಞಾನಿಕ ರಹಸ್ಯವೇನೆಂದರೆ ಪ್ರತಿದಿನ ನಮ್ಮ ದೇಹದಲ್ಲಿರುವ ಎಲ್ಲಾ ನರಗಳಿಗೂ ನಾವು ಮಾಡುವ ಕೆಲಸಗಳಿಂದ ವ್ಯಾಯಾಮ ಸಿಗುತ್ತದೆ

ಆದರೆ ನಮ್ಮ ಹಣೆಯ ಮಧ್ಯದಿಂದ ಹಾದುಹೋಗಿ ಮೆದುಳನ್ನು ಸೇರುವ ಒಂದು ನರಕ್ಕೆ ಮಾತ್ರ ವ್ಯಾಯಾಮ ದೊರೆಯುವುದಿಲ್ಲ ಇದನ್ನು ಅರಿತಿದ್ದ ನಮ್ಮ ಹಿರಿಯರು ಭ್ರೂ ಮಧ್ಯದಲ್ಲಿ ದೊಡ್ಡದಾಗಿ "ಕುಂಕುಮ" ಇಡುವುದನ್ನು ಆಚರಣೆಗೆ ತಂದರು

ಕುಂಕುಮದ ಪುಡಿಯನ್ನು ಇಟ್ಟುಕೊಳ್ಳುವಾಗ ನಾವು ಭ್ರೂ ಮಧ್ಯದ ಭಾಗವನ್ನು ಗಟ್ಟಿಯಾಗಿ ಒತ್ತಬೇಕು. ಹಾಗೆ ಗಟ್ಟಿಯಾಗಿ ಬೆರಳಿನಿಂದ ಒತ್ತಿದಾಗ ನರಗಳಿಗೆ ವ್ಯಾಯಾಮ ಸಿಗುತ್ತದೆ ಮತ್ತು ಅದು ನಮ್ಮ ಮಸ್ತಿಷ್ಕಕ್ಕೆ ( ಮೆದುಳಿಗೆ) ಹೊಸ ಆಯಾಮ ನೀಡುತ್ತದೆ.ಪರಿಣಾಮ ನಮ್ಮ ಚಿಂತನಾ ಲಹರಿಗಳು ಹೆಚ್ಚು ಜಾಗೃತವಾಗುತ್ತದೆ...!

ಈಗಿನ ಹೆಣ್ಣುಮಕ್ಕಳು ಕುಂಕುಮದ ಬದಲು Plastic colour Sticker ಇಟ್ಟುಕೊಳ್ಳುವುದರಿಂದ ಇವರಿಗೆ ಈ ಲಾಭ ಸಿಗುತ್ತಿಲ್ಲ! ಕಾರಣ ಕುಂಕುಮ ಇಟ್ಟುಕೊಳ್ಳಲು ಹಣೆಯನ್ನು ಒತ್ತಬೇಕು ಆದರೆ Sticker ಅನ್ನು ಒತ್ತುವ ಅವಶ್ಯಕತೆ ಇಲ್ಲ ಮೆತ್ತಗೆ ಇಟ್ಟರೆ ಆಯಿತು...!!

ಇನ್ನು ಕೆಂಪು ಬಣ್ಣವನ್ನೇ ಕುಂಕುಮವಾಗಿ ಬಳಸಲು ಕಾರಣ ಏನೆಂದರೆ,ಕೆಂಪು ಬಣ್ಣಕ್ಕೆ ನಕಾರಾತ್ಮಕ( Negative ray's) ದೃಷ್ಟಿಯ ಕಿರಣಗಳನ್ನು ಮಣಿಸುವ ಶಕ್ತಿ ಇದೆ.ನೀವು ಸೂಕ್ಷ್ಮವಾಗಿ ಪರೀಕ್ಷಿಸಿ ನೋಡಿ ನಿಮ್ಮ ಎದುರಿಗೆ ಕೆಂಪು ಬಣ್ಣದ ಕುಂಕುಮವನ್ನು ದೊಡ್ಡದಾಗಿ ಹಣೆಗೆ ಇಟ್ಟುಕೊಂಡ ಮಹಿಳೆಯರು ಅಥವಾ ಪುರುಷರನ್ನು ನೋಡಿದಾಗ "ರೋಮಾಂಚನ" ಆಗುತ್ತದೆ.ಎಂತಹಾ ಶತ್ರುವೇ ಎದುರಿಗೆ ಬಂದರೂ ಕೆಂಪು ಬಣ್ಣದ ಕುಂಕುಮ ಹಣೆಯ ಮೇಲೆ ಕಂಡರೆ ನಿಶ್ಯಕ್ತನಾಗಿಬಿಡುತ್ತಾನೆ!

ಅರ್ಥಾತ್ ಅವನ - ಅವಳ ಕೆಟ್ಟ ದೃಷ್ಟಿಯನ್ನು ಈ ಕೆಂಪು ಬಣ್ಣದ ಕುಂಕುಮದ ನೋಟ ಸಂಹರಿಸಿಬಿಡುತ್ತದೆ!
ಈ ರಹಸ್ಯವನ್ನು ಅರಿತಿದ್ದ ನಮ್ಮ ಹಿರಿಯರು ಹೆಣ್ಣುಮಕ್ಕಳಿಗೆ ದೊಡ್ಡದಾಗಿ ಕೆಂಪು ಕುಂಕುಮವನ್ನು ಇಟ್ಟುಕೊಳ್ಳುವುದನ್ನು ಅಭ್ಯಾಸ ಮಾಡಿಸಿದ್ದರು

ಈಗ ಹೇಳಿ,ನಮ್ಮ ಹಿರಿಯರು ವೈಜ್ಞಾನಿಕವಾಗಿ ಕಂಡುಕೊಂಡಿದ್ದ ಈ ಆಚರಣೆಯನ್ನು ನೀವು ಪಾಲಿಸುತ್ತಿದ್ದೀರಾ? ಇಲ್ಲ ಎಂದಾದರೆ ನಾಳೆಯಿಂದಲೇ ಪಾಲಿಸಿ ಇದರ ಮಹತ್ವವನ್ನು ನೀವೇ ಕಂಡುಕೊಳ್ಳಿ

September 17, 2021

ಪುರೋಹಿತರಾಗೋಣ!



ಹೀಗೆ ಹೇಳಿದಾಕ್ಷಣ ಹುಬ್ಬೇರಿಸುತ್ತೀರಿ ಎಂಬುದು ಗೊತ್ತು. ಏಕೆಂದರೆ ಪುರೋಹಿತ ಎಂದರೆ ಸಾಮಾನ್ಯವಾಗಿ ನಮ್ಮ ಕಣ್ಣ ಮುಂದೆ ಬರುವ ಚಿತ್ರವೆಂದರೆ ಪೂಜೆ-ಪುನಸ್ಕಾರಗಳನ್ನು ಮಾಡುವ ಒಬ್ಬ ಅರ್ಚಕನದೇ ಆಗಿರುತ್ತದೆ. ಮತ್ತೊಂದು ಕಾರಣವೂ ಇದೆ. ಬುದ್ಧಿಜೀವಿಗಳೆನಿಸಿಕೊಂಡವರು ಸಾಮಾನ್ಯವಾಗಿ ಪುರೋಹಿತಶಾಹಿ ಎಂಬ ಪದವನ್ನು ಒಂದು ವರ್ಗದವರನ್ನು ದೂಷಿಸಲು ಕಾರಣವಾಗಿಯೋ, ಅಕಾರಣವಾಗಿಯೋ ಸುಲಭವಾಗಿ ಬಳಸುವ ಪದವಾಗಿದೆ. ಇಂದು ಅನೇಕ ಪದಗಳು ಮೂಲ ಅರ್ಥದಲ್ಲಿ ಬಳಕೆಯಾಗದೆ ವಿರುದ್ಧಾರ್ಥದಲ್ಲಿ ಬಳಕೆಯಾಗುತ್ತಿರುವುದು ವಿಪರ್ಯಾಸ. ಜಾತಿಯ ಬಲದಲ್ಲೇ ರಾಜಕಾರಣ ಮಾಡುತ್ತಿರುವವರು ಜಾತ್ಯಾತೀತತೆಯ ಮಾತನಾಡುತ್ತಾರೆ. ಯಾವುದಾದರೂ ಒಂದು ಕೋಮನ್ನು ದ್ವೇಷಿಸುವುದೇ ಬಂಡವಾಳವಾಗಿರುವವರು ಕೋಮು ಸೌಹಾರ್ದತೆಯ ಮಾತನಾಡುತ್ತಾರೆ. ಕೋಟ್ಯಾಧೀಶರಾದರೂ, ಅಧಿಕಾರಸ್ಥಾನದಲ್ಲಿದ್ದು ಇತರರನ್ನು ನಿಯಂತ್ರಿಸುವ ಶಕ್ತಿಯಿರುವವರೂ ಹಿಂದುಳಿದವರು, ದಲಿತರು, ಶೋಷಿತರು ಎನಿಸಿಕೊಳ್ಳುವವರಿದ್ದಾರೆ. ಕಡುಬಡವರಾಗಿದ್ದರೂ ಹುಟ್ಟಿನ ಜಾತಿಯ ಕಾರಣ ಮುಂದುವರೆದವರು ಎಂದೆನಿಸಿಕೊಂಡವರಿದ್ದಾರೆ. ಮೂಲ ಅರ್ಥ ಕಳೆದುಕೊಂಡು ಸವಕಲಾಗಿರುವ ಪದಗಳ ಸಾಲಿನಲ್ಲಿ ಸೇರಿರುವ ಈ ಪುರೋಹಿತ ಪದದ ಮೂಲ ಅರ್ಥ ಕುರಿತು ವಿಶ್ಲೇಷಿಸುವುದೇ ಈ ಲೇಖನದ ಉದ್ದೇಶವಾಗಿದೆ.

ಮೂಲ ಸಂಸ್ಕೃತ ಪದವಾದ ಪುರೋಹಿತ ಎಂಬ ಪದದ ಶಬ್ದಾರ್ಥ ಪುರಸ್ ಎಂದರೆ ಮುಂದೆ ಹಿತ ಎಂದರೆ ಇಡಲ್ಪಟ್ಟವನು ಅರ್ಥಾತ್ ಮುಂದೆ ಇರಿಸಲ್ಪಟ್ಟವನು, ಅಗ್ರಣಿ, ಮುಂದಿರುವವನು ಎಂದು. ಒಬ್ಬ ವ್ಯಕ್ತಿ ಪುರೋಹಿತನೆಂದು ಗೌರವಿಸಲ್ಪಡಬೇಕಾದರೆ ಆತನಲ್ಲಿ ವಿಶೇಷವಾದ ಜ್ಞಾನ ಮತ್ತು ಗುಣಗಳು ಇರಬೇಕಾಗುತ್ತದೆ. ಸಂದಿಗ್ಧ ಸಂದರ್ಭಗಳಲ್ಲಿ, ಸಮಸ್ಯೆಗಳು ಎದುರಾದ ಸಂದರ್ಭಗಳಲ್ಲಿ ಅದಕ್ಕೆ ಸೂಕ್ತ ಪರಿಹಾರಗಳನ್ನು, ಸಮಸ್ಯೆಗಳಿಂದ ಹೊರಬರುವ ಮಾರ್ಗೋಪಾಯಗಳನ್ನು ತಿಳಿಸಬಲ್ಲ ಶಕ್ತಿ ಆತನಲ್ಲಿರಬೇಕಾಗುತ್ತದೆ. ಮುಂದಿರುವುದರಿಂದ ಹಿಂದೆ ಇರುವವರಿಗೆ ಆತ ಸಹಜವಾಗಿ ಮಾರ್ಗದರ್ಶಕನಾಗಿರಬೇಕಾಗುತ್ತದೆ. ಇತರರಿಗೆ ಬುದ್ಧಿ ಹೇಳಬೇಕಾದರೆ ಆತ ಸ್ವತಃ ಜ್ಞಾನವಂತ, ಶೀಲವಂತ, ಚಾರಿತ್ರ್ಯವಂತನಾಗಿರಬೇಕಾಗುತ್ತದೆ. ಇಂತಹ ಗುಣಗಳಿರುವವರು ಮಾತ್ರ ನೈಜ ಪುರೋಹಿತರೆನಿಸಿಕೊಳ್ಳಬಲ್ಲರು. ಪಂಡಿತರು ಎಂಬ ಪದ ಸಮಾನಾರ್ಥವನ್ನು ಕೊಡುವುದಾಗಿದೆ. ಗುರುಗಳು, ಸಾಧು-ಸಂತರು, ಸರ್ವರ ಹಿತವನ್ನು ಬಯಸುವವರೆಲ್ಲರೂ ಪುರೋಹಿತರೇ ಆಗುತ್ತಾರೆ. ಇದಕ್ಕೆ ಯಾವುದೇ ಜಾತಿಯ ಕಟ್ಟಾಗಲೀ, ಲೇಪವಾಗಲೀ ಇಲ್ಲವೆಂಬುದಕ್ಕೆ ಇತಿಹಾಸದಲ್ಲಿ ಅಸಂಖ್ಯ ಉದಾಹರಣೆಗಳಿವೆ. ವಿಶ್ವಾಮಿತ್ರ, ವಸಿಷ್ಠ, ವ್ಯಾಸ, ವಾಲ್ಮೀಕಿ ಮುಂತಾದ ಅನೇಕ ಋಷಿಮುನಿಗಳು ಒಂದು ಜಾತಿಯ ಎಲ್ಲೆಗೆ ಸೇರಿದವರಲ್ಲವೆಂಬುದನ್ನು ನೆನಪಿನಲ್ಲಿಡಬೇಕಿದೆ.
ಹೆಮ್ಮೆಯ ವಿಜಯನಗರ ಸಂಸ್ಥಾನದ ರೂವಾರಿ ವಿದ್ಯಾರಣ್ಯರು ಕಲಿಕೆಯ ಕೊನೆಯ ಹಂತದಲ್ಲಿದ್ದಾಗ ಗುರು ವಿದ್ಯಾತೀರ್ಥರು ಇತರ ಶಿಷ್ಯರಿಗೆ ಕೇಳಿದಂತೆ ಶಿಷ್ಯ ಮಾಧವನಿಗೂ (ಅರ್ಚಕರ ಮಗನಾಗಿದ್ದ ವಿದ್ಯಾರಣ್ಯರ ಪೂರ್ವಾಶ್ರಮದ ಹೆಸರು) ಕೇಳಿದ್ದರು: ಮಾಧವ, ನೀನು ಮುಂದೆ ಏನಾಗಬೇಕೆಂದಿರುವೆ?
ಮಾಧವ ಉತ್ತರಿಸಿದ್ದ: ಗುರುಗಳೇ, ಮನುಷ್ಯನಲ್ಲಿ ನಾನು ಎಂಬ ಅಹಮಿಕೆ ಇರುವವರೆಗೆ, ಏನನ್ನಾದರೂ ಸಾಧಿಸುವುದು ಕಷ್ಟ. ದೇವರ ಇಚ್ಛೆ ಇದ್ದರೆ, ಕಾಣುವ ದೇವರಾದ ಮನುಕುಲದ ಸೇವೆಗಾಗಿ, ಮೌಢ್ಯದ ಕಾರಣದಿಂದ ಮಲಗಿರುವ ದೇಶದ ಜಾಗೃತಿಗಾಗಿ ನನ್ನ ಜೀವನವನ್ನು ಉಪಯೋಗಿಸುವೆ. ನನ್ನ ದೇಶ ಮತ್ತು ಧರ್ಮದ ರಕ್ಷಣೆಗಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ನನ್ನ ಜೀವನ ಮುಡುಪಿಡಬೇಕೆಂದಿದ್ದೇನೆ.
ಈ ಉತ್ತರದಿಂದ ಆನಂದಿತರಾದ ಗುರುಗಳು ಅವನನ್ನು ಆಲಂಗಿಸಿಕೊಂಡು, ಮಗು, ಇತರರ ಒಳಿತಿಗೆ ಕೆಲಸ ಮಾಡುವುದು, ದೇಶ, ಧರ್ಮ, ಸ್ವಾತಂತ್ರ್ಯದ ಸಲುವಾಗಿ ಜೀವನ ಮೀಸಲಿಡುವುದು ಪವಿತ್ರವಾದುದು. ನಿನ್ನ ಆದರ್ಶದ ಪಾಲನೆಯಲ್ಲಿ ಯಶಸ್ವಿಯಾಗು. ನಿನ್ನ ಸೇವೆಯಿಂದ ಜಗತ್ತಿಗೆ ಒಳಿತಾಗಲಿ ಎಂದು ಹೃತ್ಪೂರ್ವಕವಾಗಿ ಆಶೀರ್ವದಿಸಿದ್ದರು. ಮುಂದಿನದು ಇತಿಹಾಸ. ಹಕ್ಕ-ಬುಕ್ಕರನ್ನು ಮುಂದಿಟ್ಟುಕೊಂಡು ದೇಶ ಮತ್ತು ಧರ್ಮದ ಹಿತ ಕಾಪಾಡುವ ಧ್ಯೇಯದ ವಿಜಯನಗರ ಸಂಸ್ಥಾನ ಸ್ಥಾಪಿಸಿದರು. ವಿದ್ಯಾರಣ್ಯರು ಕೇವಲ ಮಾರ್ಗದರ್ಶಕರಾಗಿ ಉಳಿದರು. ಇದು ಆದರ್ಶ ಪುರೋಹಿತನ ಲಕ್ಷಣ.
ಹಿಂದಿನ ರಾಜ-ಮಹಾರಾಜರುಗಳ ಆಸ್ಥಾನದಲ್ಲಿ ರಾಜಪುರೋಹಿತರುಗಳು ಇರುತ್ತಿದ್ದರು. ಅವರುಗಳು ಧಾರ್ಮಿಕ ಆಚರಣೆಗಳ ಕುರಿತಲ್ಲದೆ, ಸಮಸ್ಯೆಗಳು ಬಂದಾಗ ಅವನ್ನು ಎಲ್ಲಾ ದೃಷ್ಟಿಯಿಂದ ನೋಡಿ ಸೂಕ್ತ ಪರಿಹಾರ ರೂಪಿಸುವಲ್ಲಿ ರಾಜರಿಗೆ ನೆರವಾಗುತ್ತಿದ್ದರು. ಚಾಣಕ್ಯ, ಸಮರ್ಥ ಗುರು ರಾಮದಾಸರು ಮುಂತಾದ ನೂರಾರು ಮಾರ್ಗದರ್ಶಕರ ನೆರವಿನಿಂದ ಸನಾತನ ಸಂಸ್ಕೃತಿ ಜೀವಂತವಾಗಿದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಕೊಂಡ, ಸಾವಿರಾರು ಜನರಿಗೆ ಪ್ರೇರೇಪಣೆ ನೀಡಿದ ಸಾಧು-ಸಂತರ ಸಂಖ್ಯೆ ಗಣನೀಯವಾಗಿದೆ. ಒಮ್ಮೆ ಮಹರ್ಷಿ ದಯಾನಂದ ಸರಸ್ವತಿಯವರ ಶಿಷ್ಯ ಸ್ವಾಮಿ ಶ್ರದ್ಧಾನಂದರ ಆಶ್ರಮಕ್ಕೆ ಬ್ರಿಟಿಷ್ ಪೋಲಿಸರು ನುಗ್ಗಿ ತಪಾಸಣೆ ನಡೆಸಿದ್ದರು. ಅವರಿಗೆ ಅಲ್ಲಿ ಬಾಂಬುಗಳನ್ನು ತಯಾರಿಸಲಾಗುತ್ತಿದೆಯೆಂಬ ಗುಮಾನಿ ಇತ್ತಂತೆ. ಹುಡುಕಿದರೂ ಏನೂ ಸಿಗದೆ ಪೋಲಿಸರು ವಾಪಸಾಗಿದ್ದರು. ನಂತರದಲ್ಲಿ ಶ್ರದ್ಧಾನಂದರು ಅಲ್ಲಿದ್ದ ತಮ್ಮ ಶಿಷ್ಯರನ್ನು ಉದ್ದೇಶಿಸಿ ಕಣ್ಣ ಮುಂದೆಯೇ ಇದ್ದ ಜೀವಂತ ಬಾಂಬುಗಳನ್ನು ಪೋಲಿಸರು ಗುರುತಿಸದೇ ಹೋದರಲ್ಲಾ! ಎಂದು ತಮಾಷೆ ಮಾಡಿದ್ದರು. ಅಲ್ಲಿ ತಯಾರಾಗುತ್ತಿದ್ದುದು ಕೃತಕ ಬಾಂಬುಗಳಲ್ಲ, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಬಲ್ಲ ಜೀವಂತ ಶಿಷ್ಯರ ರೂಪದಲ್ಲಿನ ಬಾಂಬುಗಳು! ಭಾರತದ ಹಿರಿಮೆಯನ್ನು ಜಗತ್ತಿಗೆ ಸಾರಿದ ವಿವೇಕಾನಂದರು ನಮ್ಮ ಸಂಸ್ಕೃತಿಯ ಪುರೋಹಿತರು! ಸರಳತೆ, ಸಜ್ಜನಿಕೆ, ಪ್ರಾಮಾಣಿಕತೆ, ದಾರ್ಶನಿಕತೆ, ವಿದ್ವತ್ತುಗಳಿಗೆ ಹೆಸರಾದ ಸರ್ ಎಂ. ವಿಶ್ವೇಶ್ವರಯ್ಯ, ಡಿವಿಜಿ, ಡಾ. ರಾಧಾಕೃಷ್ಣನ್, ಅಬ್ದುಲ್ ಕಲಾಂ ಮುಂತಾದವರು, ನಾಡು-ನುಡಿಗಳಿಗೆ ಜೀವ ಸವೆಸಿದ ಅಸಂಖ್ಯರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಗ್ರಣಿಗಳಾಗಿದ್ದು ಇತರರಿಗೆ ಮಾರ್ಗದರ್ಶಿಯಾಗಿದ್ದುದನ್ನು ಸ್ಮರಿಸಬೇಕು. ಇಂತಹವರು ನಿಜ ಪುರೋಹಿತರು, ಪುರದ ಹಿತ ಬಯಸುವವರು!
ಪುರೋಹಿತನಾದವನ ಗುರುತರವಾದ ಹೊಣೆಗಾರಿಕೆ ಎಂದರೆ ಎಡವದೆ ನಡೆಯಬೇಕಾಗಿರುವುದು ಮತ್ತು ತಿಳಿದ ಜ್ಞಾನವನ್ನು ಸಮಾಜಕ್ಕೆ ತಿಳಿಸಿಕೊಡುವುದಾಗಿರುತ್ತದೆ. ಅಗ್ರಣಿಯಾದವನೇ ಎಡವಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುವುದಲ್ಲದೆ ಪುರೋಹಿತರೆಲ್ಲರೂ ಅಂತಹವರೇ ಎಂಬ ಭಾವನೆ ಮೂಡಲು ಕಾರಣವಾಗುತ್ತದೆ. ಕೆಸರೆರಚಲು ಕಾಯುತ್ತಿರುವ ಜನರು ಮತ್ತು ಮಾಧ್ಯಮಗಳವರು ಇದಕ್ಕೆ ನೀರೆರೆಯುತ್ತಾರೆ. ಕಾವಿ ಧರಿಸಿದವರೆಲ್ಲರೂ ಸಂತರಾಗಲಾರರು ಮತ್ತು ಸಂತರಾಗಲು ಕಾವಿಯನ್ನೇ ಧರಿಸಬೇಕೆಂದಿಲ್ಲ. ತಿಳಿದ ಜ್ಞಾನವನ್ನು ಆಸಕ್ತರಿಗೆ ಹಂಚದಿರುವುದು ಸಹ ಸ್ತೇಯ(ಕಳ್ಳತನ)ವೆನಿಸುತ್ತದೆ. ಸರ್ವೇ ಭವನ್ತು ಸುಖಿನಃ ಸರ್ವೇ ಸಂತು ನಿರಾಮಯಾಃ| ಸರ್ವೇ ಭದ್ರಾಣಿ ಪಶ್ಶಂತು ಮಾ ಕಶ್ಚಿತ್ ದುಃಖಭಾಗ್ಭವೇತ್|| ಎಂದು ಸಾರುವ ನೈಜ ಪುರೋಹಿತರು ನಾವಾಗೋಣ.
ಮೂಲ-ಕ.ವೆಂ.ನಾಗರಾಜ್.

ಮೇಧಾತಿಥಿ ಎನ್ನುವ ಋಷಿ ಕಣ್ವ ಮಹರ್ಷಿಯ ಮಗ

ತದ್ವಿಷ್ಣೋಃ ಪರಮಂಪದಂ 

ಮೇಧಾತಿಥಿ ಎನ್ನುವ ಋಷಿ ಕಣ್ವ ಮಹರ್ಷಿಯ ಮಗ ಎನ್ನುವುದು ಅನೇಕ ಸೂಕ್ತಗಳಿಂದ ತಿಳಿದು ಬರುತ್ತದೆ. ಈ ಋಷಿಯು ದೃಷ್ಟಾರನಾಗಿರುವ ಈ ಒಂದು ಸೂಕ್ತದಲ್ಲಿ ಅಶ್ವಿನೀ ದೇವತೆಗಳಿಂದ ಹಿಡಿದು ಅನೇಕ ದೇವತೆಗಳನ್ನು ಸ್ತುತಿಸುವುದು ಕಂಡು ಬರುತ್ತದೆ. ಅಂತಹ ಒಂದು ದೇವತೆಯ ಕುರಿತು ಮಾತ್ರ ನಾನಿಲ್ಲಿ ಬರೆಯುತ್ತಿದ್ದೇನೆ. 
’ಅತೋ ದೇವಾ ಅವಂತು ನೋ ಯತೋ ವಿಷ್ಣುರ್ವಿಚಕ್ರಮೇ’
ಈ ಋಕ್ಕಿನಲ್ಲಿ ವಿಷ್ಣುವಿನ ವಿಷಯವು ಮೊದಲಬಾರಿಗೆ ಉಲ್ಲೇಖವಾಗಿದೆ. ವಿಷ್ಣುವಿನ ವಿಷಯವಾಗಿ ಪುರಾಣಗಳಲ್ಲಿ ಮತ್ತು ವೇದಾಂತಗಳಲ್ಲಿ ವಿಶೇಷವಾಗಿದ್ದರೂ ಸಹ ಋಗ್ವೇದದಲ್ಲಿ ವಿಷ್ಣು ಪರವಾದ ಸೂಕ್ತಗಳು ಕೇವಲ ಐದು ಮಾತ್ರ ಇವೆ. ಇದಲ್ಲದೆ ಅನೇಕ ಕಡೆ ಇತರ ದೇವತೆಗಳೊಡನೆ ಮುಖ್ಯವಾಗಿ ಇಂದ್ರನೊಡನೆ ವಿಷ್ಣುವಿನ ಹೆಸರು ಅಲ್ಲಲ್ಲಿ ಪ್ರಸ್ತಾಪವಾಗಿದೆ. ವಿಷ್ಣುವಿನ ಮುಖ್ಯ ಪರಾಕ್ರಮವು ಮೂರು ಪದಗಳಿಂದ ಸ್ವರ್ಗ ಅಂತರಿಕ್ಷ ಭೂಮಿಗಳಲ್ಲಿ ಇರುವವು ಎನ್ನಲಾಗುತ್ತದೆ. ಇದಲ್ಲದೆ ವಿಷ್ಣುವಿನ ಪರಮಪದವೆಂಬ ಸ್ಥಾನವು ಅತ್ಯಂತ ಶ್ರೇಷ್ಠವೆಂದು ಹೇಳಲ್ಪಟ್ಟಿದೆ.

ಋಗ್ವೇದದಲ್ಲಿ ಇತರ ದೇವತೆಗಳಿಗಿಂತ ಇಂದ್ರನೊಡನೆ ವಿಷ್ಣುವಿನ ಒಡನಾಟ ಹೆಚ್ಚು. ಇಂದ್ರನು ವೃತ್ರ ಸಂಹಾರ ಕಾಲದಲ್ಲಿ ವಿಷ್ಣುವಿನ ಸಹಾಯವನ್ನು ಅಪೇಕ್ಷಿಸುತ್ತಾನೆ. ಯಜುರ್ವೇದದಲ್ಲಿ ವಿಷ್ಣುವಿನ ವಿಷಯವು ನಾನಾ ರೀತಿಯಲ್ಲಿ ವರ್ಣಿತವಾಗಿದೆ. ವಿಷ್ಣುವು ಯಜ್ಞಕ್ಕೂ ಮತ್ತು ಪರ್ವತಗಳಿಗೂ ಸಮಾನ ಅಧಿಪತಿಯೆಂದೂ, ಯಜ್ಞಸ್ವರೂಪ, ದೇವತೆಗಳಿಗೆಲ್ಲಾ ಮುಂದಾಳೆಂದೂ ವಿವರಿಸುವ ಅನೇಕ ಮಂತ್ರಗಳಿವೆ. 
ವಿಷ್ಣು ಅಥ ಯದ್ವಿತೋ ಭವತಿ ತದ್ವಿಷ್ಣುರ್ಭವತಿ, ವಿಷ್ಣುರ್ವಿಶತೇರ್ವಾ ವ್ಯತ್ಯೋತೇರ್ನಾ | ಎಲ್ಲವನ್ನೂ ವ್ಯಾಪಿಸಿರುವುದರಿಂದ ಅಥವಾ ಎಲ್ಲವನ್ನೂ ಪ್ರವೇಶಿಸಿ ವ್ಯಾಪಿಸುವುದರಿಂದ ಅಥವಾ ತನ್ನ ರಶ್ಮಿಗಳಿಂದ ಸರ್ವವನ್ನೂ ವ್ಯಾಪಿಸಿರುವವನಾದ್ದರಿಂದ ವಿಷ್ಣುವೆಂದು ಹೆಸರು. ಆದುದರಿಂದ ವಿಷ್ಣುವೆಂದರೆ ಆದಿತ್ಯನೆಂದೂ ಹೇಳಬಹುದು ಎಂದು ವಿಷ್ಣು ಶಬ್ದದ ವಿವರಣೆ. ಅಂದರೆ ಸೂರ್ಯನನ್ನು ವಿಷ್ಣು ಎಂದು ಸಹ ಕರೆಯಲಾಗಿದೆ ಎಂದು ತಿಳಿದಂತಾಯಿತು. 

ಇದಂ ವಿಷ್ಣುರ್ವಿ ಚಕ್ರಮೇ ತ್ರೇಧಾ ನಿ ದಧೇ ಪದಂ | ಸಮೂಳಮಸ್ಯ ಪಾಂಸುರೇ || 
ಈ ಋಕ್ಕಿಗೆ ಉದಾಹರಣೆಯಾಗಿ ಪುರಾಣದ ದೃಷ್ಟಾಂತವನ್ನು ತೆಗೆದುಕೊಳ್ಳುವೆ. ಅಲ್ಲಿ ಬಲಿ ಚಕ್ರವರ್ತಿಯ ಕಥೆ ಬರುತ್ತದೆ. 
ಪ್ರಹ್ಲಾದನಿಗೆ ವಿರೋಚನ ಎನ್ನುವ ಮಗನಿದ್ದ. ಆತನ ಮಗನೇ ಬಲಿ ಎಂದು ಮಹಾಭಾರತದ ಆದಿಪರ್ವದಲ್ಲಿ ಬರುತ್ತದೆ. ಬಲಿ ಇಂದ್ರನಿಂದ ಕೊಲ್ಲಲ್ಪಟ್ಟು, ಮರಳಿ ಶುಕ್ರಾಚಾರ್ಯರ ಮೃತಸಂಜೀವಿನೀ ಪ್ರಭಾವದಿಂದ ಬದುಕಿ ವಿಶ್ವಜಿತ್ತೆಂಬ ಯಾಗವನ್ನು ಮಾಡುತ್ತಾನೆ, ಅಗ್ನಿಯ ಮೂಲಕ ರಥ, ಅಶ್ವ, ಧ್ವಜಗಳನ್ನೂ, ತನ್ನ ಅಜ್ಜನಾದ ಪ್ರಹ್ಲಾದನಿಂದ ದಿವ್ಯಧನುಸ್ಸಾದ ಅಕ್ಷಯತೂಣೀರಗಳನ್ನೂ ಪಡೆದು ಇಂದ್ರನ ಮೇಲೆ ಯುದ್ಧ ಮಾಡಿ ಅವನನ್ನು ಸೋಲಿಸಿ, ಸ್ವರ್ಗವನ್ನು ವಶಪಡಿಸಿಕೊಂಡ ಎಂದು ಭಾಗವತದ ಎಂಟನೇ ಸ್ಕಂದದಲ್ಲಿ ಬರುತ್ತದೆ. ನರ್ಮದಾ ತೀರದಲ್ಲಿ ಬಲಿ ಅಶ್ವಮೇಧ ಯಾಗ ಮಾಡುತ್ತಾನೆ. ಈ ವಿಷಯ ದೇವತೆಗಳಿಗೆ ತಿಳಿದು, ದೇವತೆಗಳ ಮೊರೆಯನ್ನು ಕೇಳಿ ವಿಷ್ಣು ಅದಿತಿ ದೇವಿಯಲ್ಲಿ ವಾಮನರೂಪದಿಂದ ಅವತರಿಸಿ ಉಪನಯನಾನಂತರ ಬಲಿ ಚಕ್ರವರ್ತಿಯ ಬಳಿಗೆ ಬಂದ. ಬಲಿ ಚಕ್ರವರ್ತಿ ವಾಮನನನ್ನು ಆದರದಿಂದ ಬರಮಾಡಿಕೊಂಡು ಪೂಜಿಸಿದಾಗ, ಬಲಿ ದಾನವಾಗಿ ಏನು ಬೇಕು ಎಂದು ಕೇಳಿದಾಗ ವಾಮನ ಬಲಿಯಲ್ಲಿ ಮೂರಡಿ ಭೂಮಿಯನ್ನು ಕೇಳುತ್ತಾನೆ, ಆಗ ಶುಕ್ರಾಚಾರ್ಯ ಕೊಡಬೇಡವೆಂದು ಪರಿಪರಿಯಾಗಿ ಕೇಳಿಕೊಂಡರೂ ದಾನ ಕೊಡುತ್ತಾನೆ. ದಾನವನ್ನು ಪಡೆದ ವಾಮನ ಭೂಮ್ಯಂತರಿಕ್ಷಗಳನ್ನು ಎರಡು ಅಡಿಗಳಿಂದ ಅಳೆದು ಮೂರನೆಯ ಅಡಿಯನ್ನು ಬಲಿಯ ತಲೆಯಮೇಲಿಟ್ಟು ಆತನನ್ನು ಪಾತಾಳಕ್ಕೆ ಮೆಟ್ಟುತ್ತಾನೆ ಎಂದು ಭಾಗವತದಲ್ಲಿ ಬರುತ್ತದೆ. 

ಬಲಿ ಚಕ್ರವರ್ತಿಗೆ ಕೋಟರೆಯೆಂಬ ಮತ್ತೊಬ್ಬ ಹೆಂಡತಿಯಿದ್ದಳು. ಈತನಿಗೆ ಬಾಣ, ಧೃತರಾಷ್ಟ್ರ, ಸೂರ್ಯ, ಚಂದ್ರ, ಚಂದ್ರಾಂಶು ತಾಪನ, ನಿಕುಂಭನಾಭ, ಗುರ್ವಕ್ಷ, ಕುಕ್ಷಿ, ಭೀಮ, ವಿಭೀಷಣ ಮೊದಲಾದ ಅನೇಕ ಮಂದಿ ಮಕ್ಕಳಿದ್ದರು. ವಿಷ್ಣು ಬಲಿಯನ್ನು ರಸಾತಲಕ್ಕೆ ಕಳಿಸುವಾಗ ಬಲಿ ಖಿನ್ನನಾಗುತ್ತಾನೆ. ಖಿನ್ನನಾದ ಬಲಿಯನ್ನು ಕಂಡು “ಶ್ರೋತ್ರಿಯನಿಲ್ಲದ ಶ್ರಾದ್ಧ, ಶ್ರದ್ದೆಯಿಲ್ಲದ ದಾನ, ವಿಧಿಹೀನವಾದ ಯಜ್ಞ, ಶೌಚವಿಲ್ಲದ ದೇವ ಬ್ರಾಹ್ಮಣ ಪೂಜಾವ್ರತಗಳು, ಗುರುಭಕ್ತಿಯಿಲ್ಲದೆ ಮಾಡಿದ ಕರ್ಮ, ಈ ಐದು ವಿಧದಿಂದಲೂ ಬರತಕ್ಕ ಪುಣ್ಯಾಂಶ ಆಯಾ ಕಾರ್ಯಗಳನ್ನು ಮಾಡಿದವರಿಗೆ ಸಲ್ಲುವುದಿಲ್ಲ. ಆ ಫಲ ಸಂಪೂರ್ಣವಾಗಿ ನಿನಗೇ ಸಲ್ಲುವುದು ಎಂಬುದಾಗಿ ಬಲಿ ಚಕ್ರವರ್ತಿಗೆ ವರವನ್ನಿತ್ತ ಎನ್ನುವುದಾಗಿ ದೇವಿಭಾಗವತದಲ್ಲಿ ಬರುತ್ತದೆ. ಇನ್ನು ಬೇರೊಂದು ದೃಷ್ಟಿಯಿಂದ ಇದೇ ಕಥೆ :

ಪುರಾಣಗಳಲ್ಲಿ ಹೇಳಿರುವ ಕಥೆಯಂತೆ, ಬಲಿಚಕ್ರವರ್ತಿಯೆಂಬ ಅಸುರನು ದೇವತೆಗಳನ್ನು ಗೆದ್ದು ರಾಜ್ಯಭಾರ ಮಾಡುತ್ತಿರುವಾಗ ಸೋತುಹೋದ ದೇವತೆಗಳು ವಿಷ್ಣುವಿನಲ್ಲಿ ಮೊರೆಯಿಡಲು ವಿಷ್ಣುವು ಅವರನ್ನು ಸಂರಕ್ಷಿಸುವುದಕ್ಕಾಗಿ ವಾಮನಾವತಾರವನ್ನು ಮಾಡಿ ಬಲಿಚಕ್ರವರ್ತಿಯು ಯಾಗದೀಕ್ಷೆಯನ್ನು ಕೈಗೊಂಡಿರುವಾಗ ಅವನಲ್ಲಿಗೆ ಹೋಗಿ ತನಗೆ ಮೂರು ಪಾದದಷ್ಟು ಭೂಮಿಯನ್ನು ಕೊಡಬೇಕೆಂದು ಕೇಳಲು ಅದಕ್ಕೆ ಬಲಿಯು ಸಮ್ಮತಿಸಿ ಅದರಂತೆ ಕೊಡುವೆನೆಂದು ಹೇಳಿದನು. ಬಳಿಕ ವಾಮನಾವತಾರಿಯಾದ ವಿಷ್ಣುವು ತ್ರಿವಿಕ್ರಮಾವತಾರವನ್ನು ತಾಳಿ ಎಂದರೆ ಭೂಮ್ಯಂತರಿಕ್ಷಗಳೆಲ್ಲಾ ವ್ಯಾಪಿಸುವಂತೆ ಬೃಹದಾಕಾರವನ್ನು ತಾಳಿ ಒಂದು ಪಾದದಿಂದ ಭೂಮಿಯೆಲ್ಲವನ್ನೂ ಮತ್ತೊಂದು ಪಾದದಿಂದ ಅಂತರಿಕ್ಷವನ್ನೂ ಆಕ್ರಮಿಸಿ ಮೂರನೇ ಪಾದವನ್ನು ಎಲ್ಲಿಡಲೆಂದು ಬಲಿಯನ್ನು ಕೇಳಲು ಆ ರಾಜನು ಸತ್ಯಸಂಧನಾದುದರಿಂದ ಮೂರನೇ ಪಾದವನ್ನು ಬೇರೆ ಸ್ಥಳವಿಲ್ಲದ್ದರಿಂದ ತನ್ನ ತಲೆಯ ಮೇಲೆ ಇಟ್ಟು ಅನುಗ್ರಹಿಸಬೇಕೆಂದು ಪ್ರಾರ್ಥಿಸಲು ಅದರಂತೆ ತ್ರಿವಿಕ್ರಮನು ತನ್ನ ಮೂರನೆಯ ಪಾದವನ್ನು ಬಲಿಯ ತಲೆಯ ಮೇಲಿಟ್ಟು ಅವನನ್ನು ಪಾತಾಳಲೋಕಕ್ಕೆ ಹೋಗಿ ಅಲ್ಲಿ ರಾಜ್ಯಭಾರ ಮಾಡುತ್ತಾ ಸುಖದಿಂದಿರುವಂತೆ ಮಾಡಿ ಅವನಿಗೆ ಬೇಕಾದ ವರವನ್ನು ಕೊಟ್ಟನೆಂದು ವಿಸ್ತಾರವಾದ ವರ್ಣನೆ ಬರುತ್ತದೆ.
ಈ ಋಕ್ಕಿನಲ್ಲಿ ವಿಷ್ಣುವು ತ್ರಿವಿಕ್ರಮಾವತಾರ ಮಾಡಿ ಈ ಜಗತ್ತನ್ನು ಮೂರು ವಿಧವಾದ ಪಾದಗಳನ್ನಿಟ್ಟು ಆಕ್ರಮಿಸಿದನು. ಆ ವಿಷ್ಣುವಿನ ಧೂಲಿಯುಕ್ತವಾದ ಪಾದಸ್ಥಾನದಲ್ಲಿ ಈ ಜಗತ್ತು ಮುಚ್ಚಿ ಹೋಗಿ ಕಾಣದಾಂತಾಯಿತು ಎನ್ನುವಲ್ಲಿನ ವಿವರಣೆಗೆ ಇದಂ ವಿಷ್ಣೋರ್ವಿಚಕ್ರಮೇ ಎನ್ನಲಾಗಿದೆ. ವಿಷ್ಣು ಈ ಜಗತ್ತನ್ನು ಮೂರು ವಿಧವಾಗಿ ವಿಭಾಗಿಸಲು ಮೂರು ಪಾದಗಳನ್ನಿಟ್ಟು ಭೂಮಿ ಅಂತರಿಕ್ಷ ಮತ್ತು ಸ್ವರ್ಗ ಎಂದು ಕೆಲವು ವಿದ್ವಾಂಸರ ಅಭಿಪ್ರಾಯ. ’ತ್ರೇಧಾ’ ಎನ್ನುವುದು ಭೂಮಿಯಲ್ಲಿ ರಶ್ಮಿಗಳ ಮೂಲಕವೂ, ಅಂತರಿಕ್ಷದಲ್ಲಿ ವಿದ್ಯತಾಗ್ನಿಯಿಂದಲೂ ಮತ್ತು ಸ್ವರ್ಗದಲ್ಲಿ ಸೂರ್ಯಮಂಡಲದಿಂದಲೂ ಮಹಾ ವಿಷ್ಣು ಪ್ರಕಟವಾಗುತ್ತಾನೆ.

ತದ್ವಿಷ್ಣೋಃ ಪರಮಂಪದಂ ಸದಾ ಪಶ್ಯಂತಿ ಸೂರಯಃ |
ದಿವೀವ ಚಕ್ಷುರಾತತಂ ಎಂದು ಹೇಳಲಾಗಿದೆ. 
ಸೂರಯಃ ಎಂದು ಹೇಳುವಲ್ಲಿ ಪ್ರಾಜ್ಞರಾದವರು ಅಥವಾ ವಿದ್ವಾಂಸ ಜನರು ಮಹಾವಿಷ್ಣುವಿನ ಕುರಿತಾಗಿ ಹೇಳುವಾಗ, ವಿಸ್ತಾರವಾದ ಆಕಾಶದಲ್ಲಿ ನೆಟ್ಟ ದೃಷ್ಟಿಯು ಹೇಗೆ ವಿಸ್ತಾರವಾಗಿ ಎಲ್ಲವನ್ನೂ ನೋಡುವಂತೆ ವಿದ್ವಾಂಸರಾದ ಜನರು ವಿಷ್ಣುಪದ ಎನ್ನುವ ಸ್ವರ್ಗಲೋಕ ಅಥವಾ ವೈಕುಂಠವನ್ನು ಯಾವಾಗಲೂ ನೋಡುತ್ತಿರುತ್ತಾರೆ ಎನ್ನುವುದನ್ನು ಹೇಳಲಾಗಿದೆ. ಅಂದರೆ ಮಹಾವಿಷ್ಣುವು ಮೂರುಲೋಕಗಳನ್ನು ವ್ಯಾಪಿಸಿ ಜಗತ್ತಿನ ರಕ್ಷಣೆಯಲ್ಲಿ ಪ್ರಮುಖ ದೇವನಾಗಿದ್ದಾನೆ ಅದನ್ನು ಅರಿತು ಕೊಳ್ಳುವವರು ಸೂರಿಗಳು ಅಥವಾ ಸೂರಯಃ ಎಂದಿರುವುದು.
ತದ್ವಿಪ್ರಾಸೋ ವಿಪನ್ಯವೋ ಜಾಗೃವಾಂಸಃ ಸಮಿಂಧತೇ | ವಿಷ್ಣೋರ್ಯತ್ಪರಮಂ ಪದಂ || ೨ ||
ಇಲ್ಲಿ ವಿಪ್ರಾಸಃ ಎಂದು ಬಂದಿರುವುದು ಬುದ್ಧಿವಂತರಾದ ಜನರನ್ನು ಕುರಿತಾಗಿ, ವೀವೇಕವನ್ನು ಹೊಂದಿರುವ ಜ್ಞಾನವಂತರಾದ ಜನರು ವಿಷ್ಣುವಿನ ಶ್ರೇಷ್ಠವಾದ ಸ್ಥಾನವನ್ನು ಸ್ತೋತ್ರಗಳಿಂದ ಸ್ತುತಿಸುತ್ತಾರೆ ಎನ್ನುವ ಅರ್ಥವನ್ನು ಈ ಋಕ್ಕು ಕೊಡುತ್ತದೆ. ಜಾಗೃವಾಂಸಃ ಎಂದರೆ ಜಾಗರೂಕರು, ಎಚ್ಚರಿಕೆಯಿಂದ ಇರುವವರು ಎನ್ನುವ ಅರ್ಥವನ್ನು ಧ್ವನಿಸುತ್ತದೆ.

ಉತ್ಕೃಷ್ಟವಾದ ಸ್ಥಾನವನ್ನು ಕುರಿತಾಗಿ ಹೇಳುವಾಗ ಪರಮಂ ಪದಂ ಎನ್ನಲಾಗಿದೆ. ವಿಷ್ಣುಪದವನ್ನು ಸಾಯಣಾಚಾರ್ಯರು ಸ್ವರ್ಗವೆಂದು ಅರ್ಥ ಮಾಡಿರುವರು. ಇನ್ನು ಕೆಲವರು ಪುರಾಣಗಳಲ್ಲಿ ವಿಷ್ಣುವಿನ ಪರಮಪದವೆಂದರೆ ವೈಕುಂಠಲೋಕವೆಂದು ಅಭಿಪ್ರಾಯ ಪಡುವರು. ಆದರೆ ಪುರಾಣ ಪ್ರಸಿದ್ಧವಾದ ಆ ಅರ್ಥವು ಇಲ್ಲಿ ಸರಿ ಬರುವುದಿಲ್ಲ. ಇಲ್ಲಿ ವಿಷ್ಣುಪದವೆಂದರೆ ಭೂಮಿ ಸ್ವರ್ಗ ಮತ್ತು ಅಂತರಿಕ್ಷ ಸೇರಿದ ತ್ರಿಲೋಕ ಅಥವಾ ತ್ರಿವಿಕ್ರಮ ಲೋಕ. ಅದಕ್ಕಾಗಿಯೇ ವಿಷ್ಣು ವಾಮನನಾಗಿ ಬೃಹದಾಕಾರ ತ್ರಿವಿಕ್ರಮನಾಗಿದ್ದು. ಆತನ ಅದೃಶ್ಯವೂ ತ್ರಿವಿಕ್ರಮದಲ್ಲಿಯೇ ಆಗಿದ್ದು ಅಂದರೆ ಮೂರೂ ಲೋಕವನ್ನು ಒಂದು ಅಗಾಧ ಶಕ್ತಿ ಸೆಳೆದುಕೊಂಡ ತತ್ವ ಇಲ್ಲಿದೆ. 

#ಇದಂ_ವಿಷ್ಣುರ್ವಿ_ಚಕ್ರಮೇ 
ಮೂಲ: ಸದ್ಯೋಜಾತರು

September 16, 2021

ಸನಾತನ ಧರ್ಮದ ತಿರುಳು ತಿಳಿಬೇಕಾ? ದೇವರು ಇದ್ದಾನ ಇಲ್ಲವಾ ಅನ್ನೋದು ಗೊತ್ತಾಗಬೇಕಾ?

ಈ ಪೋಸ್ಟನ್ನ ಯಾರೇ ಬರೆದಿದ್ದರೂ ಅವರಿಗೇ ಅದರ ಕ್ರೆಡಿಟ್ ಸಿಗಲಿ ಯಾಕಂದ್ರೆ ಇದು ನನಗೆ Whatsapp  ನಿಂದ ಸಂಗ್ರಹಿಸಿದ್ದು.

ಸನಾತನ ಧರ್ಮದ ತಿರುಳು ತಿಳಿಬೇಕಾ? ದೇವರು ಇದ್ದಾನ ಇಲ್ಲವಾ ಅನ್ನೋದು ಗೊತ್ತಾಗಬೇಕಾ

ಓದಿ!!!!

ಆಗತಾನೆ ಸೇರ್ಪಡೆ ಆದ ಒಬ್ಬ ವಿದ್ಯಾರ್ಥಿಗೆ Philosophy Professor ದೇವರ ಬಗ್ಗೆ ಕೇಳುವ ಪ್ರಶ್ನೆಗಳು ಮತ್ತು ಅವನ ಉತ್ತರ :

ಪ್ರೊಫೆಸರ್ : ನೀನು ದೇವರನ್ನು ನಂಬುತ್ತಿಯ?

ವಿದ್ಯಾರ್ಥಿ : ಖಂಡಿತವಾಗಿಯೂ

ಪ್ರೊಫೆಸರ್ : ಹಾಗಾದರೆ ದೇವರು ಒಳ್ಳೆಯವನ?

ವಿದ್ಯಾರ್ಥಿ : ಹೌದು

ಪ್ರೊಫೆಸರ್ : ದೇವರು ಶಕ್ತಿವಂತನ?

ವಿದ್ಯಾರ್ಥಿ : ಹೌದು

ಪ್ರೊಫೆಸರ್ : ನನ್ನ ತಮ್ಮ ದೇವರ ದೊಡ್ಡ ಭಕ್ತ , ಅವನಿಗೆ ಕ್ಯಾನ್ಸರ್ ಬಂದು ತೀರಿಕೊಂಡ. ದೇವರಲ್ಲಿ ತುಂಬಾ ನಂಬಿಕೆ ಇದ್ದವನು. ನಾವೆಲ್ಲರೂ ರೋಗದಿಂದ ನರಳುತ್ತಿರುವವರಿಗೆ ಸಹಾಯ ಮಾಡುತ್ತವೆ, ದೇವರು ಎಂದಾದರು ಮಾಡಿದ್ದಾನ? ಹಾಗಾದರೆ ದೇವರು ಹೇಗೆ ಒಳ್ಳೆಯವನು?

ವಿದ್ಯಾರ್ಥಿ : ಮೌನ

ಪ್ರೊಫೆಸರ್ : ಹೋಗಲಿ ಬಿಡು ಇದಕ್ಕೆ ನಿನ್ನ ಬಳಿ ಉತ್ತರವಿಲ್ಲ. ಇನ್ನೊಮ್ಮೆ ಶುರುಮಾಡೋಣ, ಮತ್ತೆ ಕೇಳುತ್ತಿದ್ದೇನೆ ದೇವರು ಒಳ್ಳೆಯವನ?

ವಿದ್ಯಾರ್ಥಿ : ಹೌದು

ಪ್ರೊಫೆಸರ್ : ಹಾಗಾದರೆ ಸೈತಾನ್(ಭೂತ/ದೆವ್ವ) ಒಳ್ಳೆಯವನ?

ವಿದ್ಯಾರ್ಥಿ : ಅಲ್ಲ

ಪ್ರೊಫೆಸರ್ : ಅವನು ಎಲ್ಲಿಂದ ಬಂದ?

ವಿದ್ಯಾರ್ಥಿ : ದೇವರಿಂದ

ಪ್ರೊಫೆಸರ್ : ಸರಿ, ಈ ಜಗತ್ತಿನಲ್ಲಿ ಕೆಟ್ಟದ್ದು ಇದೆ ಅಲ್ವಾ?

ವಿದ್ಯಾರ್ಥಿ : ಹೌದು

ಪ್ರೊಫೆಸರ್ : ದೇವರು ಎಲ್ಲವನ್ನು ಸರಿ ಮಾಡುತ್ತಾನೆ ಅಲ್ವಾ?

ವಿದ್ಯಾರ್ಥಿ : ಹೌದು

ಪ್ರೊಫೆಸರ್ : ಹಾಗಾದರೆ ಕೆಟ್ಟದ್ದನ್ನು ಸೃಷ್ಟಿಸಿದ್ದು ಯಾರು?

ವಿದ್ಯಾರ್ಥಿ :ಮೌನ

ಪ್ರೊಫೆಸರ್ : ವಿಜ್ಞಾನದ ಪ್ರಕಾರ ಮನುಷ್ಯನಿಗೆ ತನ್ನ ಸುತ್ತಮುತ್ತಲಿದನ್ನು ನೋಡಲು ಮತ್ತು ಅನುಭವಿಸಲು ಪಂಚೆದ್ರಿಯಗಳಿವೆ, ಹೌದು ತಾನೇ. ಹಾಗಾದರೆ ನೀನು ಎಂದಾದರು ದೇವರನ್ನು ನೋಡಿದ್ದಿಯ?

ವಿದ್ಯಾರ್ಥಿ : ಇಲ್ಲ

ಪ್ರೊಫೆಸರ್ : ನೀನು ಎಂದಾದರೂ ದೇವರ ಮಾತನ್ನು ಆಲಿಸಿದ್ದಿಯ?

 ವಿದ್ಯಾರ್ಥಿ : ಇಲ್ಲ

ಪ್ರೊಫೆಸರ್ : ನೀನು ಎಂದಾದರೂ ದೇವರ ಸ್ಮೆಲ್ ಅಥವಾ ರುಚಿ ನೋಡಿದ್ದಿಯ? ಎಂದಾದರೂ ನೀನು ಮಾಡುವ ಕೆಲಸಗಳಿಗೆ ದೇವರು ಸಲಹೆ ನೀಡಿದ್ದಾನ?

ವಿದ್ಯಾರ್ಥಿ : ಇಲ್ಲ

ಪ್ರೊಫೆಸರ್ : ಆದರು ಕೂಡ ನೀನು ದೇವರನ್ನು ನಂಬುತ್ತಿಯಾ?

ವಿದ್ಯಾರ್ಥಿ : ಹೌದು

ಪ್ರೊಫೆಸರ್ : ವಿಜ್ಞಾನದ ಹಾಗೂ ಸಂಶೋಧನೆಗಳ ಪ್ರಕಾರ ದೇವರು ಇಲ್ಲ, ಈ ಮಾತಿಗರ ನೀನು ಏನು ಹೇಳುತ್ತಿಯ?

ವಿದ್ಯಾರ್ಥಿ : ನನಗೆ ನಂಬಿಕೆ ಇದೆ

ಪ್ರೊಫೆಸರ್ : ಅದೇ ವಿಜ್ಞಾನದ ಮುಂದೆ ಇರುವ ದೊಡ್ಡ ತಲೆನೋವು

ವಿದ್ಯಾರ್ಥಿ : ಪ್ರೊಫೆಸರ್, ಶಾಖ ಎಂಬ ವಸ್ತು ಇದೆಯೇ?

ಪ್ರೊಫೆಸರ್ :ಹೌದು

ವಿದ್ಯಾರ್ಥಿ : ಹಾಗೆಯೇ ಕೋಲ್ಡ್ ಅಂತ ಇದೆಯೇ?

ಪ್ರೊಫೆಸರ್ :ಎಸ್

ವಿದ್ಯಾರ್ಥಿ : ಇಲ್ಲ, ಅಂತದ್ದು ಏನೂ ಇಲ್ಲ
 ಸರ್, "ತುಂಬಾ ತರಹದ Heat (ಶಾಖ) ಇದೆ Super Heat , ಮೆಗಾ ಹೀಟ್, White Heat, a Little Heat or No Heat ಆದರೆ Cold ಅಂತ ಹೇಳುವಂತ ವಸ್ತುವೇ ಇಲ್ಲ.  -458 ಡಿಗ್ರಿ ವರೆಗೂ Heat ಇರುತ್ತೆ , ಅದಕ್ಕಿಂತ ಮುಂದೆ No Heat. ಆದರೆ Cold ಅನ್ನುವಂತದ್ದು ಏನು ಇಲ್ಲ. Heat ನ Absence ಅನ್ನು ವಿವರಿಸಲು Cold ಅನ್ನೋ ಪದ ಬಳಸುತ್ತೇವೆ ಅಷ್ಟೇ. Cold ಅನ್ನು ಅಳೆಯಲು ಸಾಧ್ಯವಿಲ್ಲ

Heat ಎನ್ನುವುದು Energy(ಶಕ್ತಿ ). Cold ಎನ್ನುವುದು Heat ನ ವಿರುದ್ಧ ಪದ ಅಲ್ಲ , ಕೇವಲ ಅದರ absence ಅಷ್ಟೇ".(ಇಡೀ ತರಗತಿಯಲ್ಲಿ ಸೂಜಿ ಬಿದ್ದರೂ ಕೇಳುವಷ್ಟು ಮೌನ)

ವಿದ್ಯಾರ್ಥಿ : ಕತ್ತಲು ಎನ್ನುವುದು ಇದೆಯೇ ಪ್ರೊಫೆಸರ್?

ಪ್ರೊಫೆಸರ್ : ರಾತ್ರಿ ಏನು ಕಾಣುತ್ತೇವೋ ಅದೇ ಕತ್ತಲು.

ವಿದ್ಯಾರ್ಥಿ : ಮತ್ತೊಮ್ಮೆ ನೀವು ತಪ್ಪು ಹೇಳುತ್ತಿದ್ದೀರಿ, ಕತ್ತಲು ಎನ್ನುವುದು ಯಾವುದೋ ವಸ್ತುವಿನ absence  ಅಷ್ಟೇ. ಬೆಳಕಿನಲ್ಲಿಹಲವು ವಿಧಗಳಿವೆ , ಮಂದ ಬೆಳಕು , ಸಾಧಾರಣ ಬೆಳಕು , ಮಿನುಗುವ ಬೆಳಕು , ಗಾಢ ಬೆಳಕು ,ಬೆಳಕು ಇಲ್ಲದೇ ಇರುವುದು ಹೀಗೆ.....ಆದರೆ ಏನು ನಿಯಮಿತವಾಗಿ ಬೆಳಕೆ ಇಲ್ಲದೇ ಇರುವುದನ್ನು ಕತ್ತಲು ಅನ್ನುತ್ತೇವೆ ಅಲ್ಲವೇ? ಕತ್ತಲನ್ನು ಇನ್ನೂ ಗಾಢವಾಗಿ ಮಾಡಲು ನಿಮ್ಮಿಂದ ಸಾಧ್ಯವೇ?

ಪ್ರೊಫೆಸರ್ : ಹಾಗಾದರೆ ನೀನು ಏನು ಹೇಳ ಹೊರಟಿಡ್ದೀಯ?

ವಿದ್ಯಾರ್ಥಿ : ನಿಮ್ಮ ಆಧ್ಯಾತ್ಮಿಕ ಚಿಂತನೆ ದುಷ್ಟವಾಗಿದೆ ಅಂತ.

ಪ್ರೊಫೆಸರ್ : ದುಷ್ಟವೆ? ವಿವರಿಸುತ್ತಿಯ?

ವಿದ್ಯಾರ್ಥಿ : ನಿಮಗೆ ನಿಮ್ಮಲ್ಲೇ ದ್ವಂದ್ವ ಇದೆ. ನಿಮ್ಮ ಪ್ರಕಾರ ಬದುಕು ಮತ್ತು ಸಾವು 2 ಇದೆ ಹಾಗೆ ಒಳ್ಳೇ ದೇವರು ಮತ್ತು ಕೆಟ್ಟ ದೇವರಿದ್ದಾರೆ. ನೀವು ದೇವರನ್ನು ಒಂದು ವಸ್ತು, ನಾವು ಅದನ್ನು ಅಳೆಯಬಹುದು ಅನ್ನುತ್ತಿದ್ದೀರ. ಸಾವು ಎಂಬುದು ಬದುಕಿನ ವಿರುದ್ಧಪದ ಅಲ್ಲ ಕೇವಲ ಬದುಕಿನ absence ಅಷ್ಟೇ. ಹಾಗೆ ಅದು ವಿರುದ್ಧ ಅಂತ ಹೇಳಬೇಕಾದರೆ ನೀವದನ್ನ ಅನುಭವಿಸಿರಬೇಕು. ನಿಮ್ಮ ಪ್ರಕಾರ ಈಗ ಹೇಳಿ ಸರ್ ನೀವು ನಿಮ್ಮ ವಿಧ್ಯಾರ್ಥಿಗಳಿಗೆ ಮಾನವನ ಉಗಮ ಮಂಗಗಳಿಂದ ಆಯಿತು ಅಂತ ಭೋದಿಸುತ್ತೀರ?

ಪ್ರೊಫೆಸರ್ :ನೀನು ನೈಸರ್ಗಿಕ ಬದಲಾವಣೆಯ ಬಗ್ಗೆ ಹೇಳುವುದಾದರೆ , ಹೌದು ನಾನು ಹಾಗೆ ಭೋದಿಸುತ್ತೇನೆ.

ವಿದ್ಯಾರ್ಥಿ : ನಿಮ್ಮ ಕಣ್ಣಿನಿಂದ ಎಂದಾದರೂ ಈ ಬದಲಾವಣೆಯನ್ನು ನೋಡಿದ್ದೀರಾ ಸರ್?(ನಿಧಾನವಾಗಿ ಪ್ರೊಫೆಸರ್ ಗೆ ಗೊತ್ತಾಗತೊಡಗಿತ್ತು ಈ ವಾದ ಎತ್ತ ಕಡೆ ಸಾಗುತ್ತಿದೆ ಎಂದು)

ಹಾಗಾಗಿ ಈ ಮಾನವನ ವಿಕಾಸವನ್ನು ಯಾರು ತಮ್ಮ ಕಣ್ನಿಂದ ನೋಡಿಲ್ಲ ಮತ್ತು ಹೀಗೆ ಆಗಿದೆ ಅಂತ ವಾದಿಸುವ ಹಾಗೆ ಕೂಡ.

ವಿದ್ಯಾರ್ಥಿ : ಇನ್ನೊಂದು, ಈ ತರಗತಿಯಲ್ಲಿರುವ ಯಾರಾದರೂ ನಮ್ಮ ಪ್ರೊಫೆಸರ್ ಮೆದುಳು ನೋಡಿದ್ದೀರ? (ಇಡೀ ತರಗತಿಯಲ್ಲಿರುವ ವಿದ್ಯಾರ್ಥಿಗಳು ಒಮ್ಮೆ ಜೋರಾಗಿ ನಗುತ್ತಾರೆ)

ವಿದ್ಯಾರ್ಥಿ : ಯಾರಾದರೂ ಅವರ ಮೆದುಳಿನ ಮಾತು ಕೇಳಿದ್ದೀರ?  ಮುಟ್ಟಿದ್ದೀರ? ಪರಿಮಳ ಅನುಭವಿಸಿದ್ದೀರ? ಇಲ್ಲ ಎನ್ನುವುದಾದರೆ ಅವರದೇ ವಿಜ್ಞಾನದ ಪ್ರಕಾರ ನಮ್ಮ ಪ್ರೊಫೆಸರ್ ಗೆ ಮೆದುಳೇ ಇಲ್ಲ.

ಸರ್ ನಾವೆಲ್ಲರೂ ನಿಮ್ಮನ್ನು ಗೌರವಿಸುತ್ತೇವೆ ,ಆದರೆ ಮೆದುಳೆ ಇಲ್ಲದಿದ್ದರೆ ನಿಮ್ಮನ್ನು ನಂಬುವುದು ಹೇಗೆ?

ಪ್ರೊಫೆಸರ್ : ಹೌದು, ನಿನ್ನ ನಂಬಿಕೆ ನನ್ನನ್ನು ಸೋಲಿಸಿತು

ವಿದ್ಯಾರ್ಥಿ : ಅದೇ ಸರ್ ಮನುಷ್ಯ ಮತ್ತು ದೇವರ ನಡುವಿನ ಕೊಂಡಿಯೇ ನಂಬಿಕೆ , ಅದೇ ಈ ಬದುಕನ್ನು ಜೀವಂತವಾಗಿರುಸುತ್ತೆ ಮತ್ತು ಮುನ್ನೆಡೆಸುತ್ತೆ.
--------------------------------------------------------------------------

ಆದರೆ ಕಥೆಯಲ್ಲಿ ಉಲ್ಲೇಖಿಸಿರುವ ವಿದ್ಯಾರ್ಥಿ ಸ್ವಾಮಿ ವಿವೇಕಾನಂದರವರು.
ಸಂಗ್ರಹ: ವೇ ಚನ್ನೇಶ ಶಾಸ್ತ್ರಿಗಳು

ನಿಮ್ಮ ಸ್ವಂತ ಮಹಿಮೆಯಿಂದ ಸತ್ಯವನ್ನು ಆವಿಷ್ಕರಿಸಿ...ಯೂಯಂ ತತ್ ಸತ್ಯಶವಸ

  ಧರ್ಮದ ಆಚರಣೆ ಎಂದರೆ ಯಾವುದು ತಲೆತಲಾಂತರದಿಂದ ನಡೆದು ಬಂದಿದೆ, ಅದನ್ನು ಪ್ರಶ್ನೆ ಮಾಡದೆ ಅನುಸರಿಸುವುದು-ಎಂಬುದು ಸಾಮಾನ್ಯ ಅಭಿಪ್ರಾಯ. ಇದಕ್ಕೆ ವಿದ್ಯಾವಂತ-ಅವಿದ್ಯಾವಂತ ಎಂಬ ಭೇದವಿಲ್ಲ. ಹಾಗೆ ನೋಡಿದರೆ ವಿದ್ಯಾವಂತರೆನಿಸಿಕೊಂಡು ಪದವಿಗಳ ಸರಮಾಲೆಯನ್ನು ಹಾಕಿಕೊಂಡವರೇ ಪ್ರಶ್ನೆ ಮಾಡದೆ ಕುರುಡಾಗಿ ಅನುಸರಿಸುವುದನ್ನು ನಾವು ಸಮಾಜದಲ್ಲಿ ಹೆಚ್ಚು ಕಾಣಬಹುದು.ಇದಕ್ಕೆ ಕಾರಣ ಸ್ಪಷ್ಟ.ಅದುವೇ ಭಯ.
ಹೆಸರಿನ ಮುಂದೆ ಹಲವು ಪದವಿಗಳಿವೆ. ಒಳ್ಳೆಯ ಉದ್ಯೋಗ ಸಿಕ್ಕಿದೆ. ಲಕ್ಷಕ್ಕೆ ಕಮ್ಮಿ ಇಲ್ಲದಂತೆ ದುಡಿಮೆ ಇದೆ. ವಾಸಕ್ಕೆ ಸುಸಜ್ಜಿತ ಮನೆ.ಅದರಲ್ಲಿ ಪತ್ನಿ ಮತ್ತು ಮುದ್ದಾದ ಮಗುವಿನೊಡನೆ ಹಾಯಾಗಿ ಜೀವನ ಸಾಗಿರುವಾಗ ಯಜಮಾನನಿಗೆ ಅವನಿಗೆ ಅರಿವಿಲ್ಲದಂತೆ ಭಯ,ಅಭದ್ರತೆ ಕಾಡುತ್ತದೆ. ಭಗವಂತ! ಪತ್ನಿ ಮತ್ತು ಮಗುವಿನೊಡನೆ ನನ್ನನ್ನು ಸುಖವಾಗಿ ಕಾಪಾಡೆಂದು ಎಲ್ಲಾ ದೇವರಿಗೂ ಪ್ರಾರ್ಥಿಸಿ ಮನೆ ಮುಂದೆ ಬಂದ ಬುಡುಬುಡುಕೆಯವನ ಬಾಯಲ್ಲಿ ಏನಾದರೂ ಕೆಟ್ಟ ಮಾತು ಬಂದೀತೆಂದು ಮನೆಯಲ್ಲಿದ್ದ ಬಟ್ಟೆಯನ್ನೋ ಹತ್ತಿಪ್ಪತ್ತು ರೂಪಾಯಿ ದುಡ್ದನ್ನೋ ಕೊಟ್ಟು ಅವನು ಹೋದಮೇಲೆ ನಿರಾಳನಾಗುತ್ತಾನೆ.
ಇಂತಾ ಉಧಾಹರಣೆಗಳಿಗೇನೂ ಕೊರತೆ ಇಲ್ಲ. ಜೀವನ ದುಸ್ತರವಾಗಿದ್ದಾಗ ಕಾಡದಿದ್ದ ಅಭದ್ರತೆ ಜೀವನವು ಸುಖವಾಗಿರುವಾಗ ಕಾಡಲಾರಂಭಿಸುವುದೇಕೇ? ಜೀವನದಲ್ಲಿ ಕಷ್ಟವಿದ್ದಾಗ ಇಲ್ಲದಿದ್ದ ಭಯ ಸುಖದಲ್ಲಿ ಕಾಡುವುದಾದರೂ ಏಕೇ? ಸತ್ಯದ ಅರಿವಾಗದಿರುವುದೇ ಜೀವನದಲ್ಲಿ ಭಯಕ್ಕೆ ಕಾರಣ. ಅಭದ್ರತೆಯ ಭಾವನೆಗೆ ಕಾರಣ.
ಧರ್ಮಾಚರಣೆಯ ಹೆಸರಲ್ಲಿ ಮೌಢ್ಯದಿಂದ ವರ್ತಿಸುವ ಹಲವು ಉಧಾಹರಣೆಗಳಿವೆ.ಸಾಮಾನ್ಯವಾಗಿ ಬಳಕೆಯಲ್ಲಿರುವ ಒಂದು ಕಥೆ ಎಲ್ಲರಿಗೂ ತಿಳಿದದ್ದೇ.ಆದರೂ ನೆನಪು ಮಾಡುವೆ.
ಬ್ರಾಹ್ಮಣನೊಬ್ಬನ ಮನೆಯಲ್ಲಿ ಅವನ ತಂದೆಯ ಶ್ರಾದ್ಧದ ದಿನ ಮನೆಯಲ್ಲಿದ್ದ ಬೆಕ್ಕಿನ ಮೇಲೆ ಕುಕ್ಕೆಯೊಂದನ್ನು ಮುಚ್ಚಿ ನಂತರ ಶ್ರಾದ್ಧ ಮಾಡುತ್ತಿದ್ದ. ಕಾರಣ ಬಲು ಸರಳ. ಮನೆಯಲ್ಲಿ ಬೆಕ್ಕು ಓಡಾಡುತ್ತಿದ್ದರೆ ಶ್ರಾದ್ಧದ ಊಟ ಮಾಡುತ್ತಿದ್ದವರ ಎಲೆಗೆ ಬೆಕ್ಕಿನ ಕೂದಲು ಬಿದ್ದೀತೆಂಬ ಮುನ್ನೆಚ್ಚರಿಕೆ. ಹೀಗೇ ಹಲವು ವರ್ಷಗಳು ನಡೆಯಿತು. ಮನೆಯ ಯಜಮಾನ ಮರಣ ಹೊಂದಿದ. ಅವನ ಮಗ ಈಗ ಅವನ ಶ್ರಾದ್ಧಮಾಡಬೇಕು. ಶ್ರಾದ್ಧದ ದಿನ ಬಂತು. ತನ್ನ ಅಪ್ಪ ಶ್ರಾದ್ಧ ಮಾಡುವಾಗ ಬೆಕ್ಕಿನ ಮೇಲೆ ಕುಕ್ಕೆ ಮುಚ್ಚಿ ನಂತರ ಶ್ರಾದ್ಧ ಮಾಡುತ್ತಿದ್ದ. ಆದರೆ ಇವನ ಕಾಲಕ್ಕೆ ಮನೆಯಲ್ಲಿ ಬೆಕ್ಕು ಇಲ್ಲದಂತಾಗಿದೆ. ಏನು ಮಾಡುವುದು? ಊರೆಲ್ಲಾ ಸುತ್ತಿ ಒಂದು ಬೆಕ್ಕು ತಂದ. ಅದರ ಮೇಲೆ ಕುಕ್ಕೆ ಮುಚ್ಚಿದ. ಶ್ರಾದ್ಧ ಮಾಡಿದ್ದಾಯ್ತು. ಎಲ್ಲರೂ ಊಟವನ್ನೂ ಮಾಡಿದರು. ರಾತ್ರಿಯಾಯ್ತು. ಆ ದಿನ ಕಳೆದು ಹೋಯ್ತು. ಬೆಳಿಗ್ಗೆ ಎದ್ದಾಗ ಕುಕ್ಕೆ ಮುಚ್ಚಿದ್ದ ಬೆಕ್ಕಿನ ಬಗ್ಗೆ ನೆನಪಾಯ್ತು. ಕುಕ್ಕೆ ಎತ್ತುತ್ತಾನೆ. ಬೆಕ್ಕು ಉಸಿರಾಡದೆ ಮಲಗಿದೆ. ಗಾಳಿಯೇ ಆಡದ ಪ್ಲಾಸ್ಟಿಕ್ ಕುಕ್ಕೆಯನ್ನು ಮುಚ್ಚಿ ಅದರ ಮೇಲೆ ಅಲುಗಾಡದಂತೆ ತೂಕವನ್ನು ಇಟ್ಟಿದ್ದ ಪರಿಣಾಮ ಉಸಿರಾಡಲೂ ಸಾಧ್ಯವಿಲ್ಲದೆ ಬೆಕ್ಕು ಕೊನೆ ಉಸಿರೆಳೆದಿತ್ತು!! ಇಂತಾ ಘೋರ ಕೃತ್ಯಕ್ಕೆ ಕಾರಣವಾದರೂ ಏನು? ಹಿಂದಿನ ಉದ್ಧೇಶವನ್ನೇ ತಿಳಿಯದೆ ಆಚರಿಸಿದ ಕುರುಡು ಆಚರಣೆಯಲ್ಲವೇ?


ವೇದದ ಹೆಸರು ಕೇಳಿದೊಡನೆ ಒಂದು ಜಾತಿಗೆ ಸೀಮಿತಗೊಳಿಸಿ ಹರಿಹಾಯುವ ಜನರು ತಾವು ನಿರ್ಭೀತ ಜೀವನ ಮಾಡಬೇಕಾದರೆ ವೇದದ ಮಾರ್ಗದರ್ಶನವನ್ನೇ ಪಡೆಯಬೇಕು. ವೇದವು ಜನರಲ್ಲಿ ಎಂತಹಾ ನಿರ್ಭೀತ ಸ್ಥಿತಿಯನ್ನು ಉಂಟುಮಾಡುತ್ತದೆಂಬುದನ್ನು ತಿಳಿಯಲು ಈ ವೇದಮಂತ್ರದ ಅರ್ಥವನ್ನು ಒಮ್ಮೆ ವಿಚಾರ ಮಾಡೋಣ.


ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ | ವಿಧ್ಯತಾ ವಿದ್ಯುತಾ ರಕ್ಷ: ||
[ಋಕ್-೧.೮೬.೯]


ಸತ್ಯಶವಸ: = ಸತ್ಯವನ್ನೇ ಶಕ್ತಿಯಾಗಿ ಹೊಂದಿರುವ ಧೀರರೇ
ಯೂಯಮ್ = ನೀವು
ಮಹಿತ್ವನಾ = ನಿಮ್ಮ ಸ್ವಂತ ಮಹಿಮೆಯಿಂದ
ತತ್ ಆವಿಷ್ಕರ್ತ =ಆ ಸತ್ಯವನ್ನು ಆವಿಷ್ಕರಿಸಿರಿ
ರಕ್ಷ: = ದುಷ್ಕಾಮನೆಗಳನ್ನು
ವಿದ್ಯುತಾ = ನಿಮ್ಮ ಜ್ಞಾನಜ್ಯೋತಿಯಿಂದ
ವಿಧ್ಯತಾ = ಸೀಳಿಹಾಕಿರಿ
ಭಾವಾರ್ಥ:-
ಓ ಧೀರರೇ, ನಿಮ್ಮ ಸ್ವಂತ ಮಹಿಮೆಯಿಂದ ಸತ್ಯವನ್ನು ಆವಿಷ್ಕರಿಸಿ. ದುಷ್ಕಾಮನೆಗಳನ್ನು ನಿಮ್ಮ ಜ್ಞಾನಜ್ಯೋತಿಯಿಂದ ಸೀಳಿ ಹಾಕಿರಿ.
ಒಂದೊಮ್ಮೆ ಈ ಮಂತ್ರದ ಅರಿವಿದ್ದಿದ್ದರೆ ಬೆಕ್ಕನ್ನು ಕೊಲ್ಲುವ ಮೌಢ್ಯದ ಕೆಲಸವನ್ನು ಯಾರೂ ಮಾಡುತ್ತಿರಲಿಲ್ಲ. ಬೆಕ್ಕಿನ ಕಥೆಯಲ್ಲಿ ಅತಿರೇಕವಿರ ಬಹುದು. ಆದರೆ ಸತ್ಯವಿಲ್ಲದೆ ಇಲ್ಲ!
ಈ ಮಂತ್ರವನ್ನು ಆಳವಾಗಿ ಅರ್ಥೈಸುತ್ತಾ ಹೋದರೆ ನನ್ನ ಕಣ್ಮುಂದೆ ಒಬ್ಬ ಗುರು ತನ್ನ ಯುವ ಶಿಷ್ಯನಿಗೆ ಸಿಡಿಲಿನಂತಹ ಮಾತುಗಳಿಂದ ಉಪದೇಶ ಮಾಡುತ್ತಿದ್ದಾನೇನೋ ಎಂದು ಭಾಸವಾಗುತ್ತದೆ. ಒಬ್ಬ ತಂದೆ ತನ್ನ ಮಗನಿಗೆ, ಗುರು ತನ್ನ ಶಿಷ್ಯನಿಗೆ ಈ ಮಂತ್ರದ ಅರ್ಥವನ್ನು ತಿಳಿಸಿದರೆ ಅವನಲ್ಲಿ ಅದೆಂತಹಾ ಅದ್ಭುತ ಶಕ್ತಿ ಮೂಡೀತು! ಭಯವೆಂಬುದಕ್ಕೆ ಆಸ್ಪದವೇ ಇಲ್ಲ. ಅಭದ್ರತೆಯ ಭಯವು ಕಾಡಲಾರದು. ಸತ್ಯದ ದರುಶನವಾದಾಗ ನಿರ್ಭೀತ ಜೀವನ ನಮ್ಮ ದಾಗುತ್ತದೆ.
ಮಂತ್ರವಾದರೂ ಏನು ಹೇಳುತ್ತದೆ? ಹೇ ಧೀರರೇ, ನಿಮ್ಮ ಸ್ವಂತ ಸಾಮರ್ಥ್ಯದಿಂದ, ನಿಮ್ಮ ವಿವೇಕದಿಂದ, ನಿಮ್ಮ ಬುದ್ಧಿಯಿಂದ, ಸತ್ಯವನ್ನು ಆವಿಷ್ಕರಿಸಿ.ನಿಮ್ಮ ಜ್ಞಾನಜ್ಯೋತಿಯಿಂದ ದುಷ್ಕಾಮನೆಗಳನ್ನು ಸೀಳಿಹಾಕಿರಿ
ಇಲ್ಲಿ ಕುರುಡು ಆಚರಣೆಗೆ ಅವಕಾಶವಿದೆಯೇ? ವೇದವಾದರೂ ಮಂತ್ರದಲ್ಲಿ ಬಳಸಿರುವ ಪದಗಳ ತೀವ್ರತೆಯನ್ನು ಗಮನಿಸಿದಿರಾ? ನಿಮ್ಮ ಜ್ಞಾನಜ್ಯೋತಿಯಿಂದ ದುಷ್ಕಾಮನೆಗಳನ್ನು ಸೀಳಿಹಾಕಿರಿ- ಇಂತಹ ವಿಶ್ವಾಸ ತುಂಬುವ ಮಾತುಗಳನ್ನು ವೇದವು ಮಾತ್ರವೇ ಹೇಳಲು ಸಾಧ್ಯ.


ಅರ್ಥವನ್ನು ಸರಿಯಾಗಿ ತಿಳಿಯದೆ ಆಚರಿಸಿದಾಗ ಅನರ್ಥಕ್ಕೆ ಕಾರಣವಾಗುತ್ತದೆ
ಇಂದು ಸಮಾಜದಲ್ಲಿ ಕಾಣುವ ಸಾಮರಸ್ಯದ ಕೊರತೆಗೆ ಧರ್ಮವನ್ನು ಸರಿಯಾಗಿ ತಿಳಿಯದೆ ತಪ್ಪು ತಪ್ಪಾಗಿ ಆಚರಿಸುವ ಕಂದಾಚಾರಗಳೂ ಕೂಡ ಹಲವು ಸಂದರ್ಭಗಳಲ್ಲಿ ಕಾರಣವಾಗುತ್ತವೆ, ಯಜ್ಞ ಯಾಗಾದಿಗಳನ್ನು ಮಾಡುವಾಗ ಪ್ರಾಣಿಬಲಿಗೆ ಅವಕಾಶವೇ ಇಲ್ಲದಿದ್ದರೂ ಅಶ್ವಮೇಧ, ಅಜಮೇಧದಂತಹ ಯಜ್ಞಗಳನ್ನು ಮಾಡುವಾಗ ಕುದುರೆಯನ್ನು /ಮೇಕೆಯನ್ನು ಬಲಿಕೊಡಬೇಕೆನ್ನುವ ಒಂದು ವರ್ಗ ಈಗಲೂ ಇರುವಾಗ ಅದನ್ನು ವಿರೋಧಿಸುವ ಒಂದು ವರ್ಗ ಸಹಜವಾಗಿ ಇರುತ್ತದೆ. ಆಗ ಸಾಮಾಜಿಕ ಸಾಮರಸ್ಯವು ಹಾಳಾಗುವುದಕ್ಕೆ ಧರ್ಮದ ಹೆಸರಿನಲ್ಲಿ ನಡೆವುವ ಅಧರ್ಮದ ಕ್ರಿಯೆಗಳು ಕಾರಣವಾಗುತ್ತವೆ.
ಯಜ್ಞಕ್ಕೆ ಮತ್ತೊಂದು ಹೆಸರು ಅಧ್ವರ ಎಂದು. ಧ್ವರ ಎಂದರೆ ಹಿಂಸೆ. ಅಧ್ವರ ಎಂದರೆ ಅಹಿಂಸೆ ಎಂದು ಅರ್ಥ. ಹೀಗೆ ಯಜ್ಞಕ್ಕೆ ಅಹಿಂಸೆ ಎಂಬ ಅರ್ಥವಿದ್ದರೂ ಕೂಡ ಅಲ್ಲಿ ಪ್ರಾಣಿಬಲಿ ಮಾಡಲೇ ಬೇಕೆನ್ನುವ ಗುಂಪಿನಿಂದ ಅದನ್ನು ವಿರೋಧಿಸಿದವರನ್ನು ಧರ್ಮದ್ರೋಹಿಗಳೆಂಬ ಹಣೆ ಪಟ್ಟಿ ಕಟ್ಟುವ ಪ್ರಯತ್ನ ನಡೆಯುತ್ತದೆ.
ನಾವು ಧರ್ಮದ ಹೆಸರಿನಲ್ಲಿ ಆಚರಿಸುವ ಪ್ರತಿಯೊಂದು ಕೆಲಸವನ್ನೂ ಆಚರಣೆಗೆ ಮುಂಚೆ ಅದರಲ್ಲಿ ಸತ್ಯವನ್ನು ಆವಿಷ್ಕರಿಸುವ ಪ್ರಯತ್ನವನ್ನು ಮಾಡಿದ್ದೇ ಆದರೆ ಯಾವ ಧರ್ಮಕಾರ್ಯವೂ ಮಾನವತೆಯ ವಿರೋಧಿಯಾಗಿರುವುದಿಲ್ಲ. ಆದ್ದರಿಂದ ನಾವು ಮಾಡುವ ಎಲ್ಲಾ ಕಾರ್ಯದಲ್ಲೂ ಸತ್ಯವನ್ನು ಆವಿಷ್ಕರಿಸುವಂತಹ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಅಶ್ವಮೇಧ ಯಾಗದ ನಿಜವಾದ ಅರ್ಥ ತಿಳಿದಾಗ ಅದನ್ನು ವಿರೋಧಿಸುವ ಪ್ರಸಂಗವೇ ಎದುರಾಗುವುದಿಲ್ಲ. ಶತಪಥ ಬ್ರಾಹ್ಮಣದಲ್ಲಿ ಅಶ್ವಮೇಧದ ಬಗ್ಗೆ ಹೇಳಿದೆ........ "ಅಶ್ವಂ ಇತಿ ರಾಷ್ಟ್ರಂ" ಅದರ ವಿವರಣೆ ಹೀಗಿದೆ. ಶ್ವ: ಅಂದರೆ ನಾಳೆ. ಅಶ್ವ: ಅಂದರೆ ಯಾವುದಕ್ಕೆ ನಾಳೆ ಇಲ್ಲವೋ ಅದು.ಯಾವುದಕ್ಕೆ ನಾಳೆ ಎನ್ನುವುದು ಇಲ್ಲವೋ ಅದಕ್ಕೆ ನಿನ್ನೆ ಎಂಬುದೂ ಇಲ್ಲ. ಅಂದರೆ ಯಾವುದು ನಿರಂತರವಾಗಿ ಇದ್ದೇ ಇರುತ್ತದೋ ಅದಕ್ಕೆ ನಿನ್ನೆ ನಾಳೆಗಳಿಲ್ಲ. ಯಾವುದು ಶಾಶ್ವತವಲ್ಲವೋ ಅದಕ್ಕೆ ನಿನ್ನೆ ನಾಳೆಗಳಿರುತ್ತದೆ. ನಿನ್ನೆ ಇತ್ತು, ಇವತ್ತು ಇದೆ. ನಾಳೆ ಗೊತ್ತಿಲ್ಲ ಅಂದರೆ ಅದು ಶಾಶ್ವತವಲ್ಲ ಎಂದಾಯ್ತು.ಯಾವುದು ನಿನ್ನೆ ಇತ್ತು, ಇವತ್ತೂ ಇದೆ, ನಾಳೆಯೂ ಇರುತ್ತದೋ ಅದು ಮಾತ್ರ ಶಾಶ್ವತ.ಯಾವುದು ನಿರಂತರವಾಗಿರುತ್ತದೆ, ಅದು ಅಶ್ವ.ಆದ್ದರಿಂದಲೇ "ಅಶ್ವಂ ಇತಿ ರಾಷ್ಟ್ರಂ" ನಾನು ಇವತ್ತು ಇದ್ದೀನಿ, ನಾಳೆ ಗೊತ್ತಿಲ್ಲ.ಆದರೆ ರಾಷ್ಟ್ರಶಾಶ್ವತ.["ದೇಹ ನಶ್ವರ-ದೇಶ ಶಾಶ್ವತ] ನಾವೆಲ್ಲಾ ಪ್ರಜೆಗಳು ಇಂದು ಇದ್ದೀವಿ. ಇನ್ನೊಂದು ಐವತ್ತು ವರ್ಷ ನಾವು ಇರಬಹುದೇನೋ , ಮತ್ತೆ ಬೇರೆ ಪ್ರಜೆಗಳ ಹುಟ್ಟು, ಸಾವು, ಇದೆಲ್ಲಾ ನಡೆಯುತ್ತಲೇ ಇರುತ್ತದೆ.ಎಷ್ಟೋ ತಲೆಮಾರು ಕಳೆಯುತ್ತಲೇ ಇರುತ್ತದೆ ,ಅದರೆ ರಾಷ್ಟ್ರ ಮಾತ್ರ ನಿರಂತರ. ಇಂದು ಇದ್ದು ನಾಳೆ ಇಲ್ಲಾವಾಗುವವರು ನಾವು ನೀವು.
ಇನ್ನು "ಮೇಧ" ಎಂದರೆ " ಸಂಗಮೇ" ಅಂದರೆ ಒಟ್ಟು ಗೂಡಿಸು.ಎಂದಾಗ ರಾಷ್ಟ್ರವನ್ನು ಒಟ್ಟು ಗೂಡಿಸಲು ಮಾಡುವ ಕಾರ್ಯಕ್ರಮಗಳೆಲ್ಲಾ " ಅಶ್ವಮೇಧ ಯಾಗವೇ" ಎಂದಂತಾಯ್ತು. ಎಂತಹಾ ಶ್ರೇಷ್ಠವಾದ ಅರ್ಥ ಇದೆಯಲ್ಲವೇ?. ಸತ್ಯವನ್ನು ಆವಿಷ್ಕಾರ ಮಾಡಿದಾಗ ಮಾತ್ರವೇ ಇಂತಹ ಅದ್ಭುತಗಳು ಗೋಚರವಾಗಲು ಸಾಧ್ಯ.


-ಹರಿಹರಪುರಶ್ರೀಧರ್

ದೇಹವೇ ದೇಗುಲ.. ಅಷ್ಟಾಚಕ್ರಾ ನವದ್ವಾರಾ

ಅಷ್ಟಾಚಕ್ರಾ ನವದ್ವಾರಾ ದೇವಾನಾಂ ಪೂರಯೋಧ್ಯಾ|
ತಸ್ಯಾಂ ಹಿರಣ್ಯಃ ಕೋಶಃ ಸ್ವರ್ಗೋ ಜ್ಯೋತಿಷಾವೃತಃ ||

[ಅಥರ್ವ ೧೦.೨.೩೧]
ಅನ್ವಯ :
ಅಷ್ಟಾಚಕ್ರಾ ನವದ್ವಾರಾ = ಎಂಟು ಚಕ್ರಗಳು ಒಂಬತ್ತು ದ್ವಾರಗಳಿಂದ ಯುಕ್ತವಾದ
ದೇವಾನಾಂ ಅಯೋಧ್ಯಾ = ದೇವತೆಗಳಿಂದ ಜಯಿಸಲಾಗದ
ಪೂಃ = ಪುರ [ಪುರ ಒಂದಿದೆ.ಅದೇ ಶರೀರ]
ತಸ್ಯಾಂ ಹಿರಣ್ಯಃ ಕೋಶಃ = ಅದರಲ್ಲಿರುವ ಕೋಶವು ಹಿತಕರವೂ ರಮಣೀಯವಾದವೂ ಆದ [ಹೃದಯ]
ಸ್ವರ್ಗಃ = ಸುಖಮಯವಾದುದೂ
ಜ್ಯೋತಿಷಾ ಆವೃತಃ = ಪರಮಜ್ಯೋತಿಯಿಂದ ಆವೃತವಾಗಿದೆ.

ಅರ್ಥ :
ಎಂಟು ಚಕ್ರಗಳಿಂದ ನವದ್ವಾರಗಳಿಂದ ಯುಕ್ತವಾದ ಈ ದೇಹವೆಂಬ ನಗರಿಯನ್ನು ಜಯಿಸಲು ದಿವ್ಯಶಕ್ತಿಗಳಿಂದಲೂ ಸಾಧ್ಯವಿಲ್ಲ. ಈ ನಗರಿಯಲ್ಲಿ ಪರಮ ಚಿನ್ಮಯನಾದ ಆತ್ಮನು ದಿವ್ಯ ಜ್ಯೋತಿಯಿಂದ ಸಮಲಂಕೃತನಾಗಿ ವಾಸಿಸುತ್ತಾನೆ.
ಈಗೊಮ್ಮೆ ನಮ್ಮ ದೇಹದ ವ್ಯವಸ್ಥೆಯನ್ನು ಮನದಲ್ಲಿಯೇ ವೀಕ್ಷಿಸೋಣ.ಎಷ್ಟು ಅದ್ಭುತ! ಎಂಟು ಚಕ್ರಗಳು! ನವದ್ವಾರಗಳು!! ಇವುಗಳ ಬಗ್ಗೆ ನಾನಿಲ್ಲಿ ಚರ್ಚಿಸುವ ಪ್ರಯತ್ನವನ್ನು ಮಾಡುವುದಿಲ್ಲ.ಯೋಗಾಭ್ಯಾಸದಲ್ಲಿ ಇವೆಲ್ಲದರ ಸರಿಯಾದ ಪರಿಚಯವಾಗುತ್ತದೆ. ನಾವು ಕೇವಲ ಹೊರನೋಟದಿಂದಲೇ ಗಮನಿಸಿದರೂ ಅದೆಂತಹ ಅದ್ಭುತ ವ್ಯ್ವಸ್ಥೆಯಲ್ಲವೇ , ಈ ಶರೀರ!! ಆ ಭಗವಂತನ ವ್ಯವಸ್ಥೆಯ ಮುಂದೆ ಮನುಷ್ಯರು ಕಂಡು ಹಿಡಿದಿರುವ ಯಾವುದೇ ಯಂತ್ರವೂ ಸಾಟಿಯಿಲ್ಲ! ಅಲ್ಲವೇ?
ಸ್ವಾಮೀಜಿಯೊಬ್ಬರ ಮಾತು ನೆನಪಾಗುತ್ತದೆ ನಾನು ಕೋಟ್ಯಾಧಿಪತಿ, ಆದರೆ ನನ್ನ ಕಿಸೆಯಲ್ಲಿ ನೂರು ರೂಪಾಯಿ ಇಲ್ಲ!! ಆದರೆ ನನ್ನೆರಡು ಕೈಗಳು ಎರಡು ಕೋಟಿಗಿಂತ ಹೆಚ್ಚಿನ ಬೆಲೆಯವು! ನನ್ನೆರಡು ಕಾಲುಗಳು ಮತ್ತೆರಡು ಕೋಟಿ! ನನ್ನ ತಲೆಗೆ ಬೆಲೆಯನ್ನು ಕಟ್ಟುವುದಾದರೂ ಹೇಗೆ?
ಯೋಚಿಸಿ ನೋಡಿ ,ಕೈಗಳೇ ಇಲ್ಲದೆ ಹುಟ್ಟಿದ ಹೆಣ್ಣು ಮಗಳೊಬ್ಬಳು ಪಾದದಿಂದಲೇ ಚಿತ್ರ ಬಿಡಿಸುವುದನ್ನು ಕಂಡಿದ್ದೇವೆ. ಕಾಲುಗಳೇ ಇಲ್ಲದೆ ಹುಟ್ಟಿದ ವ್ಯಕ್ತಿಯೊಬ್ಬ ತನ್ನ ಕೈಗಳಿಂದಲೇ ನಡೆದು ಜೀವಿಸುತ್ತಾನೆ ! ಆದರೆ ನಮಗೆಲ್ಲವೂ ಇವೆಯಲ್ಲಾ! ಆದರೂ ನಾವು ಬಡವರು!! - ಈ ಯೋಚನೆಯೇ ನಮ್ಮ ದಾರಿದ್ರ್ಯವಲ್ಲವೇ? ಭಗವಂತನು ಕೊಟ್ಟಿರುವ ಈ ಅದ್ದ್ಭುತ ಶರೀರ ಪಡೆದ ನಾವು ಶ್ರೀಮಂತರಲ್ಲವೇ?
ಈ ಶ್ರೀಮಂತದೇಹವನ್ನು ಸುಂದರವಾಗಿ ಕಾಪಾಡಿಕೊಳ್ಳಬೇಕಾದವರು ನಾವೇ ಅಲ್ಲವೇ? ನಾವು ಈ ದೇಹವನ್ನು ದೇವಾಲಯದಂತ ಪವಿತ್ರಭಾವದಿಂದ ಕಂಡಿದ್ದೇವೆಯೇ? ಒಮ್ಮೊಮ್ಮೆ ನನಗೆ ಅನ್ನಿಸುತ್ತದೆ ಈ ದೇಹವನ್ನು ಲೊಡಾಸ್ ಗಾಡಿಯನ್ನಾಗಿ [ ಕೆಟ್ಟು ನಿಂತಿರುವ ವಾಹನ] ಮಾಡಿ ಅದರ ದುರಸ್ತಿಗಾಗಿ ಅದೆಷ್ಟು ವರ್ಕ್ ಶಾಪ್ ಗಳು! [ಆಸ್ಪತ್ರೆಗಳು! ] ನಮ್ಮ ಶರೀರದ ಬಗ್ಗೆ ಸ್ವಲ್ಪ ಚಿಂತನೆ ಮಾಡಬೇಕಲ್ಲವೇ? ಒಮ್ಮೊಮ್ಮೆ ಹೀಗೂ ಆಗುವುದುಂಟು. ನಮ್ಮ ಶರೀರಕ್ಕೆ ಲಾಲನೆ ಪೋಷಣೆ ಹೆಚ್ಚಾಗಿ ಆಗಲೂ ಯಂತ್ರ ಕೆಡುವ ಅವಕಾಶಗಳು! ನಮ್ಮ ಶರೀರಕ್ಕೆ ಗಮನ ಕೊಡುವುದೆಂದರೆ ಅದು ಭೋಗ ಭಾವದಿಂದಲ್ಲ. ನಮ್ಮ ಶರೀರವು ಸುಂದರ ದೇವಾಲಯದಂತಿರಬೇಕಾದರೆ ನಮ್ಮ ಪರಂಪರೆಯಂತೆ ನಮ್ಮ ನಿತ್ಯ ಜೀವನ ಶಿಸ್ತು ಬದ್ಧವಾಗಿ ಸಾಗಬೇಕು. ಕಾಲಕಾಲಕ್ಕೆ ಶರೀರಕ್ಕೆ ವ್ಯಾಯಾಮ, ನಿಯಮಿತವಾಗಿ ಧ್ಯಾನ,ಪ್ರಾಣಾಯಾಮ,ಕಾಲಕಾಲಕ್ಕೆ ಆಹಾರ-ವಿಹಾರ, ಸಚ್ಚಿಂತನೆ, ಸದ್ವ್ಯವಹಾರ, ಸನ್ನಡೆ, ಸತ್ಕರ್ಮಾಚರಣೆ, ಇನ್ನೊಬ್ಬರಿಗೆ ನೋವು ಕೊಡದ ಮಾತು ಎ॒ಲ್ಲವೂ ಗಣನೆಗೆ ಬರುತ್ತದೆ. ನಮ್ಮ ದೇಹವನ್ನು ದೇವಾಲವನ್ನಾಗಿ ಉಳಿಸಿಕೊಳ್ಳುವುದು ನಮ್ಮದೇ ಹೊಣೆ ಅಲ್ಲವೇ?
ಮೂಲ...ವೇದಸುಧೆ

ದೇಹವೇ ದೇವಾಲಯ... ಯೋ ವೈ ತಾಂ

ಯೋ ವೈ ತಾಂ ಬ್ರಹ್ಮಣೋ ವೇದಾಮೃತೇನಾವೃತಾಂ ಪುರಂ|ತಸ್ಮೈ ಬ್ರಹ್ಮ ಚ ಬ್ರಹ್ಮಾಶ್ಚ ಚಕ್ಷುಃ ಪ್ರಾಣಂ ಪ್ರಜಾಂ ದದುಃ ||
[ಅಥರ್ವ ೧೦.೨.೨೯]
ಅನ್ವಯ :
ಯಃ = ಯಾವನು
ಅಮೃತೇನ ಆವೃತಾಂ = ಅಮರನಾದ ಭಗವಂತನಿಂದ ಆವೃತವಾಗಿರುವ
ಬ್ರಹ್ಮಣಃ ತಾಂ ಪುರಂ = ಆ ಭಗವಂತನ ಪುರವಾದ ಈ ದೇಹವನ್ನು
ವೈ ವೇದ = ಸರಿಯಾಗಿ ತಿಳಿದು ಉಪಯೋಗಿಸಿಕೊಳ್ಳುತ್ತಾನೋ
ತಸ್ಮೈ = ಅವನಿಗೆ
ಬ್ರಹ್ಮ ಚ = ಪರಮಾತ್ಮನು ಮತ್ತು
ಬ್ರಹ್ಮಾಶ್ಚ = ಪರಮಾತ್ಮನ ಮಕ್ಕಳಾದ ಜೀವಾತ್ಮರು
ಚಕ್ಷು = ಸತ್ಯ ದರ್ಶನ ಶಕ್ತಿಯನ್ನೂ
ಪ್ರಾಣಂ = ಜೀವನ ಶಕ್ತಿಯನ್ನೂ
ಪ್ರಜಾಂ = ಸತ್ ಸಂತತಿಯನ್ನೂ
ದದುಃ = ನೀಡುತ್ತಾರೆ
ಅರ್ಥ :
ಯಾವನು ಅಮರನಾದ ಭಗವಂತನಿಂದ ಆವೃತವಾಗಿರುವ ಆ ಭಗವಂತನ ಪುರವಾದ ಈ ದೇಹವನ್ನು ಸರಿಯಾಗಿ ತಿಳಿದು ಉಪಯೋಗಿಸಿಕೊಳ್ಳುತ್ತಾನೋ ಅವನಿಗೆ ಪರಮಾತ್ಮನು ಸತ್ಯ ದರ್ಶನ ಶಕ್ತಿಯನ್ನೂ ಜೀವನ ಶಕ್ತಿಯನ್ನೂ ಸತ್ ಸಂತತಿಯನ್ನೂ ನೀಡುತ್ತಾನೆ.
ಅನೇಕ ಪುರೋಹಿತರು ಈ ಮಂತ್ರವನ್ನು ಆಶೀರ್ವಾದ ರೂಪದಲ್ಲಿ ಪಠಿಸುವುದನ್ನು ನಾನು ಕೇಳಿದ್ದೇನೆ.ಕಿವಿಗೆ ಹಿತವಾಗುತ್ತಿತ್ತು.ಅರ್ಥ ತಿಳಿಯುತ್ತಿರಲಿಲ್ಲ. ಅರ್ಥ ತಿಳಿಯುವ ಪ್ರಯತ್ನ ಮಾಡಿದಾಗ ಸಂತೋಷವಾಯ್ತು. ಈ ಮಂತ್ರದ ಬಗ್ಗೆ ವಿಚಾರ ಮಾಡೋಣ.
ಈ ದೇಹವನ್ನು ಹಲವರು ತಮ್ಮ ವಯಸ್ಸಾದ ಕಾಲದಲ್ಲಿ, ಅಥವಾ ರೋಗಪೀಡಿತವಾದಾಗ ಈ ಪಾಪಿದೇಹ ಎಂದು ಜರಿಯುವುದನ್ನು ಕಂಡಿದ್ದೇವೆ. ಈ ದೇಹವನ್ನು ಪೋಷಿಸಬೇಕಾಗಿದೆಯಲ್ಲಾ! ಎಂದು ತೊಳಲಾಡುವವರಿಗೇನೂ ಕಮ್ಮಿ ಇಲ್ಲ. ಆದರೆ ವೇದವು ಏನು ಹೇಳುತ್ತದೆ? ಈ ದೇಹವು ಭಗವಂತನಿಂದ ಆವೃತವಾಗಿವಾಗಿದೆ, ಎಂದು ಹೇಳುತ್ತದೆ. ಇಂತಾ ದೇಹವನ್ನು ನಾನು ಹೇಗೆ ಕಾಪಾಡಬೇಕು? ಭಗವಂತನ ಆವಾಸ ಸ್ಥಾನವಾಗಿರುವ ದೇಹವನ್ನು ದೇವಾಲಯವೆಂದು ಭಾವಿಸಿದಾಗ ನಮ್ಮ ಶರೀರದ ಬಗ್ಗೆ ನಮಗೆ ಹೇಗೆನಿಸುತ್ತದೆ?
ಈ ದೇಹವನ್ನು ದೇವಾಲಯವೆಂದು ಭಾವಿಸಿದಾಗ ಅದನ್ನು ಅಡ್ಡಾದಿಡ್ಡಿ ಬೆಳೆಸುತ್ತೇವೆಯೇ? ಸುಂದರವಾಗಿ .ಪವಿತ್ರಭಾವನೆಯಿಂದ ಬೆಳೆಸಬೇಕಾಗುತ್ತದೆ. ನಾವು ಈ ದೇಹಕ್ಕಾಗಿ ಮಾಡುವ ಪ್ರತಿಯೊಂದು ಕರ್ಮವೂ ಯಜ್ಞಭಾವನೆಯಿಂದ ಮಾಡಬೇಕಾಗುತ್ತದೆ.ನಾವು ಈಗ ಸಧ್ಯದ ಪರಿಸ್ಥಿತಿಯಲ್ಲಿ ಹೇಗಿದ್ದೇವೆಂದು ಸ್ವಲ್ಪ ವಿಚಾರ ಮಾಡಿದರೆ ನಮಗೆ ಹೇಗೆನ್ನಿಸೀತು!
ಪ್ರಾತಃಕಾಲದಲ್ಲಿ ಏಳುವಾಗಲೇ ಕಾಫಿ ಕೊಡಮ್ಮಾಎಂದು ಕೇಳುತ್ತಲೇ ಹಾಸಿಗೆಯಿಂದ ಏಳುವ ಮಗ ಕಾಫಿ ಆಗಿದೆಯಾ? ಎಂದು ಹಾಸಿಗೆಯಿಂದಲೇ ಕೇಳುವ ಮನೆಯ ಯಜಮಾನ, ಮುಖಕ್ಕೆ ನೀರೆರಚಿ ದರ್ಶಿನಿ ಗೆ ಧಾವಿಸುವ ಜನರು!! ಇದೆಲ್ಲಾ ನಿತ್ಯ ದೃಶ್ಯವಲ್ಲವೇ? ಸಾಮಾನ್ಯವಾಗಿ ನಮ್ಮ ದೇಹವನ್ನು ನಾವು ಯಂತ್ರವೆಂದು ಭಾವಿಸಿಲ್ಲವೇ? ಹಲವರು ಹೇಳುವುದುಂಟು ಪೆಟ್ರೋಲ್ [ಕಾಫಿ] ಹಾಕದೆ ತಲೆಯೇ ಓಡುವುದಿಲ್ಲ ಈ ಯಂತ್ರವನ್ನು ಚಾಲನೆಯಲ್ಲಿರಿಸಲು ಇಂಧನ ಬೇಕಾಗಿದೆ, ಅದಕ್ಕಾಗಿ ಸಿಕ್ಕಿದ ಬಂಕ್‌ಗಳಲ್ಲಿ [ಹೊಟೆಲ್] ಇಂಧನ ತುಂಬಿಸಿಕೊಂಡರಾಯ್ತು. ನಮ್ಮ ಜೀವನ ಇಷ್ಟು ಯಾಂತ್ರಿಕವಾಗಿಲ್ಲವೇ?

ಯದ್ ವದಾಮಿ..ನಮ್ಮಿಂದ ಮಧುರವಾದ ಮಾತುಗಳೇ ಹೊರಬರಲಿ

  ಅಥರ್ವ ವೇದದದ ೧೨ನೇ ಕಾಂಡದ ಮೊದಲನೇ ಸೂಕ್ತದ ೫೮ನೇ ಮಂತ್ರದಲ್ಲಿ ಈ ಬಗ್ಗೆ ಏನು ಹೇಳಿದೆ, ವಿಚಾರ ಮಾಡೋಣ.

ಯದ್ ವದಾಮಿ ಮಧುಮತ್ ತದ್ ವದಾಮಿ ಯದೀಕ್ಷೇ ತದ್ ವನಂತಿ ಮಾ| ತ್ವಿಷೀಮಾನಸ್ಮಿ ಜೂತಿಮಾನವಾನ್ಯಾನ್ ಹನ್ಮಿ ದೋಧತಃ ||

ಅನ್ವಯ:
ಯದ್ ವದಾಮಿ = ಯಾವಾಗ ನುಡಿಯುತ್ತೀನೋ
ತತ್ ಮಧುವತ್ ವದಾಮಿ = ಆಗೆಲ್ಲಾ ಮಧುರವಾದ ಸುಂದರವಾದ ಮಾತನ್ನೇಆಡುತ್ತೇನೆ
ಯತ್ ಈಕ್ಷೇ = ಯಾವಾಗ ನೋಡುತ್ತೇನೋ
ತತ್ ಮಾ ವನಂತಿ = ಆಗೆಲ್ಲಾ ಜನರು ನನ್ನನ್ನು ಪ್ರೀತಿಯಿಂದಲೇ ಕಾಣಲಿ
ತ್ವಿಷೀಮಾನ್ = ಆಕರ್ಷಣೀಯನೂ
ಜೂತಿಮಾನ್ = ಪ್ರೀತನೂ
ಅಸ್ಮಿ = ಆಗಿದ್ದೇನೆ
ದೋಧತಃ ಅನ್ಯಾನ್ ಅವಹನ್ಮಿ = ನನ್ನನ್ನು ಪೀಡಿಸುವವರನ್ನು ನಾನು ಸೆದೆಬಡೆದುಹಾಕುತ್ತೇನೆ

ಭಾವಾರ್ಥ:
ನಾನು ಮಾತನಾಡುವಾಗಲೆಲ್ಲಾ ನನ್ನ ಬಾಯಲ್ಲಿ ಮಧುರವಾದ ಮಾತುಗಳೇ ಹೊರಬರಲಿ.ನಾನು ನೋಡುವಾಗಲೆಲ್ಲಾ ಜನರು ನನ್ನನ್ನು ಪ್ರೀತಿಯಿಂದಲೇ ಕಾಣುವಂತಾಗಲಿ.ಎಲ್ಲರಿಗೂ ಆಕರ್ಷಣೀಯನೂ, ಪ್ರೀತನೂ ಆದ ನನ್ನನ್ನು ಪೀಡಿಸುವವರನ್ನು ನಾನು ಸದೆಬಡಿಯುವಂತಾಗಲಿ.

ಆಪೋ ಹಿ ಷ್ಠಾ ಮಯೋ... ಜಲಧಾರೆಗಳು ನಮಗೆ ಆಸರೆಯಾಗಲಿ


 ದೇವತಾರ್ಚನೆ ಮಾಡುವಾಗ ಹೇಳುವ ಮಾರ್ಜನ ಮಂತ್ರದ ಬಗ್ಗೆ ವಿಚಾರ ಮಾಡೋಣ.
ಅಥರ್ವ ವೇದದ ಮೊದಲ ಕಾಂಡದ ಐದನೇ ಸೂಕ್ತ:
ಮಂತ್ರ-೧
ಆಪೋ ಹಿ ಷ್ಠಾ ಮಯೋ ಭುವಸ್ತಾ ನ ಊರ್ಜೇ ದಧಾತನ |
ಮಹೇ ರಣಾಯ ಚಕ್ಷಸೇ ||
ಅರ್ಥ:
ಆಪ: = ಜಲಧಾರೆಗಳೇ
ಮಯೋಭುವ: = ನೀವು ಕಲ್ಯಾಣದಾಯಿನಿಯರು
ಸ್ಥ = ಆಗಿದ್ದೀರಿ
ತಾ: = ಆ ಜಲಧಾರೆಗಳು
ನ: = ನಮ್ಮನ್ನು
ಊರ್ಜೇ = ಬಲಯುತರನ್ನಾಗಿಸಲಿ
ಮಹೇ ರಣಾಯ ಚಕ್ಷಸೇ = ಮಹಾ ರಮಣೀಯವಾದ ದೃಷ್ಟಿಗಾಗಿ
ದಧಾತನ = ಒದಗಲಿ
ಭಾವಾರ್ಥ:-
ಕಲ್ಯಾಣದಾಯಿನಿಯರಾದ ಈ ನದೀನದಾದಿಗಳು ನಮ್ಮನ್ನು ಸುಂದರರನ್ನಾಗಿಯೂ, ಬಲಶಾಲಿಗಳನ್ನಾಗಿಯೂ ಮಾಡಲಿ. ಸಂಧ್ಯಾವನೆ ಆರಂಭದಲ್ಲಿ ಉದ್ಧರಣೆಯಲ್ಲಿ ನೀರು ತುಂಬಿ ಬೆರಳುಗಳನ್ನು ಅದರಲ್ಲಿ ಅದ್ದಿ ಈ ಮಂತ್ರವನ್ನು ಹೇಳುತ್ತಾ ದೇಹದ ಅಂಗಾಂಗಗಳಮೇಲೆ ಚುಮುಕಿಸಿಕೊಳ್ಳುತ್ತೇವೆ. ಉಪನಯನ ಸಂಸ್ಕಾರವಾಗುವ ವಟುಗಳಿಗೆ ಸಾಮಾನ್ಯವಾಗಿ ಈ ಮಂತ್ರದ ಲಾಭವನ್ನು ಹೇಳುವಾಗ ಹೀಗೆ ಹೇಳುವುದನ್ನು ಕೇಳಿದ್ದೇನೆ - ನಿಮಗರಿವಿದ್ದೋ ಅಥವಾ ಅರಿವಿಲ್ಲದೆಯೋ ಶಾರೀರಿಕವಾಗಿ ಮಾಡಿದ ಪಾಪವು ಈ ಮಂತ್ರಹೇಳಿ ನೀರನ್ನು ಪ್ರೋಕ್ಷಣೆಮಾಡಿಕೊಳ್ಳುವುದರಿಂದ ನಿವಾರಣೆಯಾಗಿ ಶರೀರವು ಶುದ್ಧಿಯಾಗುತ್ತದೆ
ವೇದಮಂತ್ರಗಳನ್ನು ಹೀಗೆ ಅರ್ಥೈಸುವುದು ಎಷ್ಟು ಸರಿ? ಈ ಮಂತ್ರವನ್ನು ಹೇಳುತ್ತಾ ನೀರನ್ನು ಪ್ರೋಕ್ಷಿಸಿಕೊಳ್ಳುವುದರಿಂದ ನೀನು ಮಾಡಿದ ಪಾಪವು ಪರಿಹಾರವಾಗುತ್ತದೆಂದು ಈ ಮಂತ್ರದಲ್ಲಿ ಎಲ್ಲಿ ಹೇಳಿದೆ? ವೇದವಾದರೋ ಪಾಪಕೃತ್ಯವನ್ನು ಮಾಡಲು ಆಸ್ಪದವನ್ನೇ ಕೊಡುವುದಿಲ್ಲ.ಒಂದು ವೇಳೆ ಪಾಪಕೃತ್ಯವನ್ನು ಮಾಡಿದರೆ ಅದರ ಪ್ರತಿಫಲವನ್ನು ಅವನು ಎದುರಿಸಲೇ ಬೇಕಾಗುತ್ತದೆ.
ಹಾಗಾದರೆ ಈ ಮಂತ್ರವು ಏನು ಹೇಳುತ್ತದೆ?
ಈ ಮಂತ್ರದ ಸರಿಯಾದ ಅರ್ಥವನ್ನು ತಿಳಿದು ಸಂಧ್ಯಾವಂದನೆ ಮಾಡಿದರೆ! ನೀರನ್ನು ಮೈ ಮೇಲೆ ಪ್ರೋಕ್ಷಣೆ ಮಾಡಿಕೊಳ್ಳುವಾಗ ಅದನ್ನು ನೀಡಿರುವ ಭಗವಂತನನ್ನು ಮನದಲ್ಲಿ ಸ್ಮರಿಸಿಕೊಂಡು “ ಆ ಭಗವಂತನು ನನಗೆ ಶಕ್ತಿ ಕೊಡಲಿ, ಕಾಂತಿ ಕೊಡಲಿ” ಎಂದು ಪ್ರಾರ್ಥಿಸುತ್ತಾ ಕ್ರಿಯೆಯನ್ನು ಮಾಡಿದರೆ ಮನಸ್ಸಿನಲ್ಲಿ ನಾವು ಏನು ಭಾವಿಸುತ್ತೇವೆಯೋ ಅದರಂತೆಯೇ ಆಗುತ್ತೇವೆ. ಆದ್ದರಿಂದ ನೀರನ್ನು ಪ್ರೋಕ್ಷಿಸಿಕೊಳ್ಳುವುದು ಒಂದು ನೆಪ ಅಷ್ಟೆ. ಆದರೆ ನೀರನ್ನು ಪ್ರೋಕ್ಷಿಸಿಕೊಳ್ಳುವಾಗ ನಮ್ಮಲ್ಲಿ ಈ ಅಂಶಗಳು ಮೂಡಿದರೆ ನಾವು ಆರೋಗ್ಯವಂತರೂ, ರಮಣೀಯರೂ, ಬಲಶಾಲಿಗಳೂ ಆಗುವುದರಲ್ಲಿ ಸಂದೇಹವಿಲ್ಲ. ಆದರೆ ಯಾಂತ್ರಿಕವಾಗಿ ನೀರನ್ನು ಪ್ರೋಕ್ಷಿಸಿಕೊಳ್ಳುತ್ತಾ ಮನದಲ್ಲಿ ಅನ್ಯ ಚಿಂತೆಗಳು ಮೂಡಿದರೆ ನಾವು ಹೇಳುವ ಮಾರ್ಜನ ಮಂತ್ರದ ಪ್ರಭಾವವು ನಮ್ಮ ಶರೀರ ಮನಸ್ಸುಗಳ ಮೇಲೆ ಯಾವ ಪರಿಣಾಮವನ್ನೂ ಬೀರಲಾರದು. ಅಲ್ಲದೆ ಕೇವಲ ನೀರನ್ನು ಪ್ರೋಕ್ಷಿಸಿಕೊಂಡರೆ ಮಾಡಿದ್ದ ಪಾಪವು ಪರಿಹಾರವಾಗಲಾರದು.
ಮಂತ್ರ-೨
ಯೋ ವ: ಶಿವತಮೋ ರಸಸ್ತಸ್ಯ ಭಾಜಯತೇಹ ನ: |
ಉಶತೀರಿವ ಮಾತರ: ||

ಅರ್ಥ:
ಯ: = ಯಾವ
ವ: = ಆ ಜಲವು
ಶಿವತಮ: ರಸ: = ಅತ್ಯಂತ ಕಲ್ಯಾಣಕಾರವಾದ ರಸವಿದೆಯೋ
ಉಶತೀ: ಮಾತರ: ಇವ = ಮಮತೆಯ ಮಾತೆಯರಂತೆ
ನ: ಇಹ ತಸ್ಯ ಭಾಜಯತೇ = ನಮಗೆ ಅದರ ಭಾಗವು ಲಭಿಸಲಿ
ಭಾವಾರ್ಥ: ತಾಯಂದಿರು ವಾತ್ಸಲ್ಯದಿಂದ ತಮ್ಮ ಮಕ್ಕಳಿಗೆ ನೆಲೆ ನೀಡುವಂತೆ, ಆಸರೆಯಾಗುವಂತೆ ಅಮೃತಮಯ ಜಲಧಾರೆಗಳ ಆಶ್ರಯದಲ್ಲಿ ನಮಗೆ ಬದುಕು ಲಭಿಸಲಿ.
ಈ ಮಂತ್ರದ ಅರ್ಥ ಎಷ್ಟು ಸೊಗಸಾಗಿದೆ! ಎಂತಹಾ ಅದ್ಭುತ ಹೋಲಿಕೆ! ತಾಯಾಂದಿರು ತಮ್ಮ ಮಕ್ಕಳಿಗೆ ಮಮಕಾರದಿಂದ ಆಶ್ರಯ ಕೊಡುವಂತೆ ನಮಗೆ ಭಗವಂತನು ಸೃಷ್ಟಿಸಿರುವ ಜಲಧಾರೆಗಳು ಆಶ್ರಯ ಕೊಡಲಿ. ಇಲ್ಲಿ ನೀರಿನ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಪ್ರೋಕ್ಷಿಸಿಕೊಳ್ಳುತ್ತಿರುವ ನೀರು ಅಂತಿಂತಾ ನೀರಲ್ಲ. ಅದು ಪವಿತ್ರ ಗಂಗೆ! ಅದು ನನಗೆ ಆಶ್ರಯ ಕೊಡಲಿ, ಎಂದರೆ ನಮ್ಮ ಆರೋಗ್ಯಭಾಗ್ಯ ನಮಗೆ ಲಭಿಸಿರುವುದೇ ಈ ಪವಿತ್ರವಾದ ನೀರಿನಿಂದ. ನೀರಿಲ್ಲದ ಒಂದು ದಿನವನ್ನು ಕಲ್ಪಿಸಿಕೊಳ್ಳಿ. ಮನುಶ್ಯನಿಗೆ ಏನಿಲ್ಲದಿದ್ದರೂ ಗಾಳಿ, ನೀರು ಮಾತ್ರ ಅತ್ಯಗತ್ಯವಾಗಿ ಬೇಕು. ನಮಗೆ ಅದರ ಮಹತ್ವ ಗೊತ್ತಿದೆಯೇ? ಎಲ್ಲವೂ ನಮಗೆ ಯಾವ ಸಮಸ್ಯೆಇಲ್ಲದೆ ದೊರಕುತ್ತಿದ್ದಾಗ ಅದರ ಮಹತ್ವ ಗೊತ್ತಾಗುವುದಿಲ್ಲ. ಆದರೆ ಅದರ ಲಭ್ಯತೆ ಕಷ್ಟವಾದಾಗ ಆ ವಸ್ತುವಿನ ಮಹತ್ವ ಗೊತ್ತಾಗುತ್ತದೆ. ನಮ್ಮ ಆರೋಗ್ಯದ ವಿಚಾರದಲ್ಲೂ ಅಷ್ಟೆ. ಮನುಶ್ಯನು ಮಾನಸಿಕವಾಗಿ ದೈಹಿಕವಾಗಿ ಆರೋಗ್ಯವಾಗಿದ್ದಾಗ ಆರೋಗ್ಯದ ಮಹತ್ವ ಗೊತ್ತಾಗುವುದೇ ಇಲ್ಲ. ಆದರೆ ಒಂದುವಾರ ಹಾಸಿಗೆ ಹಿಡಿದು ಮಲಗಿ ಪುನ: ಸುಧಾರಿಸಿಕೊಂಡು ಹಾಸಿಗೆಯಿಂದ ಎದ್ದಾಗ ಮನುಶ್ಯನ ಮಾನಸಿಕತೆ ಹೇಗಿರುತ್ತದೆ? ಮನುಶ್ಯನು ಬಲು ಸಂತಸಗೊಂಡು ಸ್ನೇಹಿತರೊಡನೆಲ್ಲಾ ತನ್ನ ಸಂತಸವನ್ನು ಹಂಚಿಕೊಳ್ಳುತ್ತಾನೆ. ಈಗ ಯೋಚಿಸೋಣ. ಆರೋಗ್ಯ ಕೆಡುವುದಕ್ಕಿಂತ ಒಂದು ದಿನ ಹಿಂದೆ ಇವತ್ತು ಪಡುತ್ತಿರುವ ಸಂತೋಷ ಅನುಭವಿಸಿದ್ದಿರಾ? ಇಲ್ಲ, ಎನ್ನುವುದಾದರೆ ಯಾಕೇ? ಏಕೆಂದರೆ ಆರೋಗ್ಯವಂತ ಬದುಕಿನ ಮಹತ್ವ ನಮಗೆ ಗೊತ್ತಿಲ್ಲ. ಯಾವಾಗ ಆರೋಗ್ಯ ಕೆಡುತ್ತದೆಯೋ ಆಗ ಅದರ ಮಹತ್ವದ ಅರಿವಾಗುತ್ತದೆ.
ನೀರಿನ, ಗಾಳಿಯ ವಿಷಯದಲ್ಲೂ ಅಷ್ಟೆ. ನಾವು ನೀರನ್ನು ಅದೆಷ್ಟು ಪೋಲು ಮಾಡುತ್ತೇವೋ! ವಾತಾವರಣವನ್ನು ಅದೆಷ್ಟು ಕಲುಶಿತಗೊಳಿಸುತ್ತೇವೆಯೋ! ಕಾರಣ ಗಾಳಿ ಮತ್ತು ನೀರನ್ನು ಹಣಕೊಟ್ಟು ಕೊಳ್ಳಲಿಲ್ಲವಲ್ಲಾ! [ನಗರಗಳಲ್ಲಿ ವಾಟರ್ ಟ್ಯಾಕ್ಸ್ ಕಟ್ಟಿದರೂ ಅದು ಬಲು ಕಡಿಮೆ] ರಸ್ತೆಯಲ್ಲಿ ತಿರುಗಾಡುವಾಗ ನಾಲ್ಕಾರು ಮನೆಗಳಿಂದ ಓವರ್ ಹೆಡ್ ಟ್ಯಾಂಕ್ ತುಂಬಿ ಚಿರಂಡಿಗೆ ಅದೆಷ್ಟು ನೀರು ಹರಿದು ಹೋಗುತ್ತದೋ! ಅಂತೆಯೇ ಗಾಳಿಯನ್ನು ನಾವು ಅದೆಷ್ಟು ಕಲುಶಿತಗೊಳಿಸುತ್ತೇವೆಯೋ!
ಈ ಮಂತ್ರವನ್ನು ಹೇಳುವಾಗ ನೀರು ಮತ್ತು ಗಾಳಿಯ ಮಹತ್ವವು ನಮಗೆ ಅರ್ಥವಾಗಬೇಕು. ಮಹತ್ವವರಿತು ಅದರಂತೆ ನಡೆದರೆ ನೀರು ನಮಗೆ ಆರೋಗ್ಯವನ್ನೂ , ಜೀವನದಲ್ಲಿ ನೆಮ್ಮದಿ, ಶಾಂತಿಯನ್ನೂ ನೀಡುತ್ತದೆ.
ಮಂತ್ರ-೩
ತಸ್ಮಾ ಅರಂ ಗಮಾಮ ವೋ ಯಸ್ಯ ಕ್ಷಯಾಯ ಜಿನ್ವಥ|ಆಪೋ ಜನಯಥಾ ಚ ನ:||
ಅರ್ಥ:
ಯಸ್ಯ ಕ್ಷಯಾಯ ಜಿನ್ವಥ = ಯಾವನನ್ನು ನೆಲೆಗೊಳಿಸಲು ಅವು ಹರಿದುಬರುತ್ತವೋ
ತಸ್ಮೈ = ಅವನಿಗಾಗಿ
ಅರಂ ಗಮಾಮ = ಸೂಕ್ತವಾಗಿ ಬಳಸಿಕೊಳ್ಳುತ್ತೇವೆ [ಅವು]
ನ: = ನಮ್ಮನ್ನು
ಜನಯಥ = ಬಲಪಡಿಸಲಿ
ಭಾವಾರ್ಥ:
ನಮ್ಮ ಕಲ್ಯಾಣಕ್ಕೆಂದೇ ಹರಿಯುವ ಜಲರಾಶಿಯನ್ನು ಸಂಪೂರ್ಣವಾಗಿ ಆಶ್ರಯಿಸುತ್ತೇವೆ. ಅವು ನಮ್ಮ ಬದುಕನ್ನು ನಿರಂತರ ಸಂಮೃದ್ಧಗೊಳಿಸಲಿ.
ಮಂತ್ರ-೪
ಈಶಾನಾ ವಾರ್ಯಾಣಾಂ ಕ್ಷಯಂತೀಶ್ಚರ್ಷಣೀನಾಮ್ |
ಅಪೋ ಯಾಚಾಮಿ ಭೇಷಜಮ್ ||

ಅರ್ಥ:
ವಾರ್ಯಾಣಾಂ = ಅಭಿಲಾಷೆ ಪಟ್ಟ ಇಷ್ಟಾರ್ಥಗಳ
ಈಶಾನಾ ಆಪ: = ಗಂಗಾ ಮಾತೆಯಿಂದ
ಚರ್ಷಣೀನಾಂ = ಜೀವಕೋಟಿಗಳ
ಕ್ಷಯಂತೀ: = ರೋಗಗಳನ್ನು ನಾಶಮಾಡುವ
ಭೇಷಜಂ ಯಾಚಾಮಿ = ಔಷಧಿಯು ದೊರಕಲಿ
ಭಾವಾರ್ಥ:
ಇಷ್ಟಾರ್ಥಗಳನ್ನು ನೀಡುವ ಜಲಧಾರೆಗಳು ನಮಗೆ ದಿವ್ಯ ಔಷಧಿಗಳನ್ನು ನೀಡಲಿ.
ಈ ಎರಡು ಮಂತ್ರಗಳು ನೀರಿನ ವಿಶೇಷ ಗುಣಗಳನ್ನು ವಿವರಿಸುತ್ತಾ ,ಇಂತಾ ಪವಿತ್ರ ನೀರು ನಮ್ಮ ಬದುಕನ್ನು ಸಂಮೃದ್ಧ ಗೊಳಿಸಲೆಂದೂ, ನೀರಿನ ಔಷಧ ಗುಣವು ನಮ್ಮ ಆರೋಗ್ಯವನ್ನು ಚೆನ್ನಾಗಿಟ್ಟಿರಲಿ ಎಂದೂ ಭಗವಂತನನ್ನು ನಾವು ಈ ಮಂತ್ರದ ಮೂಲಕ ಪ್ರಾರ್ಥಿಸುವಾಗಲೇ ನೀರಿನ ಪಾವಿತ್ರ್ಯವನ್ನು ಹಾಳುಗೆಡವದಂತೆ ನಾನು ಜೀವನ ನಡೆಸುತ್ತೇನೆಂದೂ ಸಹ ಸಂಕಲ್ಪ ಮಾಡಿದಾಗ, ನಮ್ಮ ಸಂಧ್ಯಾವಂದನೆಯು ನಮ್ಮ ಆರೋಗ್ಯದ ಮೇಲೆ ಸತ್ಪ್ರಭಾವವನ್ನು ಬೀರುವುದಲ್ಲದೆ ನಮ್ಮ ಬದುಕಿನಲ್ಲಿ ನೆಮ್ಮದಿಯೂ ಶಾಂತಿಯೂ ನೆಲೆಸುವುದು.

-ಹರಿಹರಪುರಶ್ರೀಧರ್

ಎಲ್ಲಕ್ಕಿಂತ ಅಗ್ಗದ ಆಹಾರ ಮಾಂಸ !?

🐮  *ಮಾಂಸದ ಬೆಲೆ* 💰

ಮಗಧ ಸಾಮ್ರಾಟ ಬಿಂದುಸಾರನು ಒಮ್ಮೆ ತನ್ನ ಆಸ್ಥಾನದಲ್ಲಿ ಕೇಳಿದನು:
ದೇಶದ ಆಹಾರ ಸಮಸ್ಯೆಯನ್ನು ಪರಿಹರಿಸಲು
*ಎಲ್ಲಕ್ಕಿಂತ ಅಗ್ಗದ ವಸ್ತು ಯಾವುದು?*

ಮಂತ್ರಿಗಳು ಮತ್ತು ಇತರ ಸದಸ್ಯರು ಯೋಚನೆಯಲ್ಲಿ ಮುಳುಗಿದರು. ಅಕ್ಕಿ, ಗೋಧಿ, ಜೋಳ, ನವಣೆ, ಸೆಜ್ಜೆ, ಮುಂತಾದವು ಬಹಳ ಪರಿಶ್ರಮದಿಂದ ಸಿಗುತ್ತವೆ, ಅದು ಕೂಡ ಪ್ರಕೃತಿ ವಿಕೋಪ ಇಲ್ಲವಾದರೆ. ಇಂತಹ ಸ್ಥಿತಿಯಲ್ಲಿ ಆಹಾರ ಅಗ್ಗವಾಗಲಾರದು.

ಆಗ ಬೇಟೆಯ ಹುಚ್ಚು ಇರುವ ಸಾಮಂತನೊಬ್ಬ ಹೇಳಿದ:
ರಾಜಾ,
*ಎಲ್ಲಕ್ಕಿಂತ ಅಗ್ಗದ ಆಹಾರ ಮಾಂಸ!*

ಇದನ್ನು ಪಡೆಯಲು ಪರಿಶ್ರಮ ಕಡಿಮೆ ಸಾಕು ಮತ್ತು ಪೌಷ್ಟಿಕ ಆಹಾರವೂ ತಿನ್ನಲು ಸಿಗುತ್ತದೆ. ಎಲ್ಲರೂ ಇದನ್ನು ಸಮರ್ಥಿಸಿದರು.

ಆದರೆ ಪ್ರಧಾನ ಮಂತ್ರಿ ಚಾಣಕ್ಯ ಸುಮ್ಮನಿದ್ದನು.

ಸಾಮ್ರಾಟನು ಅವನನ್ನು ಕೇಳಿದ:
ತಾವು ಇದರ ಬಗ್ಗೆ ಏನು ಹೇಳುತ್ತೀರಾ?

ಚಾಣಕ್ಯನು ಹೇಳಿದ:  ನಾನು ನನ್ನ ವಿಚಾರವನ್ನು ನಾಳೆ ತಮ್ಮ ಮುಂದೆ ಇಡುವೆನು.

ರಾತ್ರಿಯಾದ ಮೇಲೆ ಪ್ರಧಾನ ಮಂತ್ರಿ ಚಾಣಕ್ಯನು ಆ ಸಾಮಂತನ ಮನೆಗೆ ಹೋದ. ಸಾಮಂತ ಬಾಗಿಲು ತೆರೆದು ಇಷ್ಟು ರಾತ್ರಿಯಲ್ಲಿ ಪ್ರಧಾನ ಮಂತ್ರಿ ತನ್ನ ಮನೆಗೆ ಬಂದುದನ್ನು ನೋಡಿ ಗಾಬರಿಗೊಂಡನು!

ಚಾಣಕ್ಯನು ಹೇಳಿದನು:
ಸಂಜೆ ಹೊತ್ತಿಗೆ ಮಹಾರಾಜರು ಒಮ್ಮೆಲೆ ಕಾಯಿಲೆ ಬಿದ್ದರು. ರಾಜವೈದ್ಯರು ಅವರ ಔಷಧಕ್ಕೆ ಯಾರಾದರೂ ದೊಡ್ಡ ಮನುಷ್ಯರ ಹೃದಯದ ಮಾಂಸ ಎರಡು ತೊಲೆ ಸಿಕ್ಕಿದರೆ ರಾಜರ ಪ್ರಾಣ ಉಳಿಯಬಹುದೆಂದು ಹೇಳಿದ್ದಾರೆ.
ಆದ್ದರಿಂದ ನಿಮ್ಮ ಹೃದಯದ 💓 ಕೇವಲ ಎರಡು ತೊಲೆ ಮಾಂಸ ಪಡೆಯಲು ಬಂದಿದ್ದೇನೆ. ಇದಕ್ಕಾಗಿ ಒಂದು ಲಕ್ಷ ಚಿನ್ನದ ನಾಣ್ಯಗಳನ್ನು ನೀವು ಪಡೆಯಬಹುದು.

ಇದನ್ನು ಕೇಳುತ್ತಲೇ ಸಾಮಂತನ ಮುಖ ಬಿಳುಚಿಕೊಂಡಿತು! ಅವನು ಚಾಣಕ್ಯನ ಕಾಲು ಹಿಡಿದು ಕ್ಷಮೆ ಕೇಳಿದ.
*ಅದಕ್ಕೆ ಬದಲಾಗಿ ಒಂದು ಲಕ್ಷ ಚಿನ್ನದ ನಾಣ್ಯಗಳನ್ನು ಕೊಟ್ಟು ಈ ಹಣದಿಂದ ಬೇರೆ ಯಾರಾದರೂ ಸಾಮಂತರ ಹೃದಯದ ಮಾಂಸ ತೆಗೆದುಕೊಳ್ಳಲು ಹೇಳಿದ.*

ಅದೇ ರೀತಿ ಚಾಣಕ್ಯನು ಅವನನ್ನು ಸಮರ್ಥಿಸಿದ ಎಲ್ಲಾ ಸಾಮಂತರ ಮತ್ತು ಸೇನಾಧಿಕಾರಿಗಳ ಹತ್ತಿರ ಹೋಗಿ ಕೇಳಿದ.

*ಎಲ್ಲರ ಹತ್ತಿರವೂ ಅವರ ಹೃದಯದ ಎರಡು ತೊಲೆ ಮಾಂಸ ಕೇಳಿದ. ಆದರೆ ಯಾರೂ ಕೊಡಲು ತಯಾರಿರಲಿಲ್ಲ. ಬದಲಾಗಿ ಎಲ್ಲರೂ ತಮ್ಮನ್ನು ಪಾರು ಮಾಡಲು ಚಾಣಕ್ಯನಿಗೆ ಒಂದು ಲಕ್ಷ, ಎರಡು ಲಕ್ಷ, ಐದು ಲಕ್ಷ, ಹೀಗೆ ಚಿನ್ನದ ನಾಣ್ಯಗಳನ್ನು ಕೊಟ್ಟರು.*

ಈ ರೀತಿ ಸುಮಾರು ಎರಡು ಕೋಟಿ ಚಿನ್ನದ ನಾಣ್ಯಗಳನ್ನು ಕಲೆ ಹಾಕಿ ಚಾಣಕ್ಯನು ಬೆಳಗಾಗುವುದರೊಳಗೆ ತನ್ನ ಮನೆಗೆ ತಲುಪಿದ. 

ಮರುದಿನ ಆಸ್ಥಾನದಲ್ಲಿ ಚಾಣಕ್ಯನು ಸಾಮ್ರಾಟನ ಮುಂದೆ ಎರಡು ಕೋಟಿ ಚಿನ್ನದ ನಾಣ್ಯಗಳನ್ನು ಇಟ್ಟುಬಿಟ್ಟ.

ಸಾಮ್ರಾಟನು ಕೇಳಿದ: ಇದೆಲ್ಲಾ ಏನು?

ಚಾಣಕ್ಯನು ಹೇಳಿದನು: ಎರಡು ತೊಲೆ ಮಾಂಸ ಕೊಂಡುಕೊಳ್ಳಲು
*ಇಷ್ಟು ಹಣ ಸಂಗ್ರಹವಾಯಿತು. ಆದರೂ ಎರಡು ತೊಲೆ ಮಾಂಸ ಸಿಗಲಿಲ್ಲ!*

ರಾಜಾ, ಈಗ ನೀವೇ ಸ್ವತಃ ವಿಚಾರ ಮಾಡಿ ಮಾಂಸ ಎಷ್ಟು ಅಗ್ಗವೆಂದು!

*ಜೀವನ ಅಮೂಲ್ಯ. ಯಾವ ರೀತಿ ನಮಗೆ ನಮ್ಮ ಜೀವದ ಮೇಲೆ ಆಸೆ ಇದೆಯೋ ಅದೇ ರೀತಿ ಎಲ್ಲಾ ಜೀವಿಗಳಿಗೂ ತಮ್ಮ ಜೀವದ ಮೇಲೆ ಆಸೆಯಿದೆ, ಆದರೆ ಅವು ತಮ್ಮ ಪ್ರಾಣ ಉಳಿಸಲು ಅಸಮರ್ಥವಾಗಿವೆ ಎಂಬುದನ್ನು ನಾವು ಮರೆಯಬಾರದು.*

ಮತ್ತೆ ಮನುಷ್ಯ ತನ್ನ ಪ್ರಾಣ ಉಳಿಸಲು ಎಲ್ಲಾ ರೀತಿಯಿಂದ ಪ್ರಯತ್ನಿಸುತ್ತಾನೆ. ಹೇಳಿ, ಸಂತಸ ಪಡಿಸಿ, ಹೆದರಿಸಿ, ಲಂಚ ಕೊಟ್ಟು, ಇತ್ಯಾದಿ!

*ಪ್ರಾಣಿಗಳು ಪಾಪ! ಹೇಳಲಾರವು, ತಮ್ಮ ದುಃಖವನ್ನು ತಿಳಿಸಲಾರವು!*

*ಹಾಗಾದರೆ ಈ ಕಾರಣಕ್ಕೆ ನಾವು ಅವುಗಳು ಜೀವಿಸುವ ಅಧಿಕಾರವನ್ನು ಕಸಿಯಬಹುದೇ?*

*ಶುದ್ಧ ಆಹಾರ, ಸಸ್ಯಾಹಾರ!*
🍏🍎🍐🍊🍌🍉🍇🍓🍈🍒🍑🍍🥝🥑🍅🍊🍋🍆🥒🥕🌽🌶🥔🍠🌰🌱🌿☘🍀🍃🌾
*ಮಾನವ ಆಹಾರ, ಸಸ್ಯಾಹಾರ!*

ವಿ. ಸೂ.: ಒಳ್ಳೆಯ ಸಂದೇಶವಿದೆ.

ಈ ಲೇಖನ ನಿಮಗೆ ಇಷ್ಟವಾದರೆ ಬೇರೆಯವರಿಗೆ ತಲುಪಿಸಿ.

*ಪ್ರಾಣಿಗಳ ಜೀವ ಉಳಿಸಲು ಸಹಾಯ ಮಾಡಿ!* 
🙏🏻🙏🏻🙏🏻
🌾💥🌾💥🌾💥💥💥

September 15, 2021

ವೇದದಲ್ಲಿ ಎಲ್ಲಾ ಸಮಸ್ಯೆಗೂ ಪರಿಹಾರ ಇದೆ!

ಸಮಸ್ಯೆ ಎದುರಾದ ಮೇಲೆ ಪರಿಹಾರ ಹುಡುಕುವುದು, ಮನೆಗೆ ಬೆಂಕಿ ಬಿದ್ದಮೇಲೆ ಬಾವಿಯನ್ನು ತೋಡಲು ಪ್ರಾರಂಭಿಸಿದಂತೆ. ನಾಳೆ ಬರಬಹುದಾದ ಸಮಸ್ಯೆ ಬಾರದಂತೆ ಇಂದೇ ತಡೆಯೊಡ್ಡುವುದೇ ಜಾಣತನ. ಒಂದು ವೇಳೆ ತಡೆಯಲಾಗದಿದ್ದರೆ ಅದಕ್ಕೆ ಇಂದೇ ಪರಿಹಾರವನ್ನು ಹುಡುಕಿ ತೆಗೆಯುವುದೂ ಜಾಣತನವೇ. ಇಷ್ಟಂತೂ ಸತ್ಯ. ಸಮಸ್ಯೆಗೆ ಹೆದರಿ ಓಡುವುದಾಗಲಿ, ಕೈಚೆಲ್ಲಿ ಕೂಡುವುದಾಗಲಿ, ಕುಸಿದು ಮಡಿಯುವುದಾಗಲೀ ಸಮಸ್ಯೆಗೆ ಪರಿಹಾರವಲ್ಲ. ಖಚಿತವಾಗಿ ಪರಿಹಾರ ದೊರೆಯುವ ಎಡೆಯನ್ನು ತಿಳಿಯದೇ, ‘ಹೇಗೋ ಒಂದು, ಸಮಸ್ಯೆ ಪರಿಹಾರವಾದರೆ ಸಾಕಪ್ಪಾ’ ಎನ್ನುವ ಮನೋಭಾವದಿಂದ ಸಿಕ್ಕಸಿಕ್ಕಲ್ಲಿ ಅಲೆದು ಪರದಾಡುವುದೂ ಪರಿಹಾರವಲ್ಲ.



ನಮ್ಮ ಯಾವುದೇ ಸಮಸ್ಯೆಯ ಮೂಲ ಇರುವುದು ನಮ್ಮಲ್ಲೇ! ಈ ಅರಿವು ನಮಗಿಲ್ಲದಿದ್ದಲ್ಲಿ ಹೊರಗಿನಿಂದ, ಯಾರಿಂದಲೋ ಪರಿಹಾರವನ್ನು ನಿರೀಕ್ಷಿಸುತ್ತಿರುತ್ತೇವೆ, ಇಲ್ಲವೇ, ಸಮಸ್ಯೆಯ ಮೂಲವನ್ನು ಹೊರಗಿನ ಯಾವುದೋ ಸನ್ನಿವೇಶದಲ್ಲಿಯೋ, ಯಾರಲ್ಲೋ ಗುರುತಿಸಿ ಶಪಿಸುತ್ತಿರುತ್ತೇವೆ. ಇದರಿಂದ ಸಮಸ್ಯೆ ಬಿಗಡಾಯಿಸುವುದೇ ಹೊರತು ಪರಿಹಾರವಂತೂ ಕಾಣುವುದಿಲ್ಲ. ಸಮಸ್ಯೆಯ ಮೂಲ ನಮ್ಮಲ್ಲಿರುವುದನ್ನು ಗುರುತಿಸಿದಾಗ, ಪರಿಹಾರವೂ ನಮ್ಮಲ್ಲೇ ಇರುವುದು ಸ್ಪಷ್ಟವಾಗುತ್ತದೆ. ಸಮಸ್ಯೆಯ ಪರಿಹಾರಕ್ಕಾಗಿ ಮೊದಲ ಹೆಜ್ಜೆ ನಮ್ಮಿಂದಲೇ ಆರಂಭವಾಗುತ್ತದೆ.

ಯಾವುದೇ ಸಮಸ್ಯೆಯ ಮೂಲವಿರುವುದು ಅಜ್ಞಾನದಲ್ಲಿ! ಸರಿಯಾದ ತಿಳಿವಿನೊಂದಿಗೆ ಆಲೋಚಿಸಿ ಕೆಲಸ ಮಾಡಿದಾಗ ಸಮಸ್ಯೆಗೆ ಅವಕಾಶವೇ ಇಲ್ಲ. ಆ ‘ಸರಿಯಾದ ತಿಳಿವೇ’ ಜ್ಞಾನ. ಅದೇ ‘ವೇದ’. ವೇದವನ್ನು ಜ್ಞಾನವೆಂದು ತಿಳಿದಾಗ, ಸಾರ್ವಕಾಲಿಕವೂ, ಸಾರ್ವಜನಿಕವೂ, ಸಾರ್ವದೇಶಿಕವೂ ಆದ ಜ್ಞಾನವೆಂದು ತಿಳಿದಾಗ ಪರಿಹಾರ ಖಚಿತವಾಗಿ ದೊರೆಯುವುದು. ಈ ವೇದವನ್ನು ಇನ್ನೇನೆಂದೋ ತಿಳಿದಲ್ಲಿ, ಅಜ್ಞಾನದಿಂದಲೋ ಅಥವಾ ಪೂರ್ವಾಗ್ರಹದಿಂದಲೋ, ಕೈಗೆಟಕುವ ಗಟ್ಟಿ ಪರಿಹಾರವನ್ನು ನಾವೇ ದೂರಕ್ಕೆಸೆದು ಸಮಸ್ಯೆಯನ್ನು ಜಟಿಲ ಮಾಡಿಕೊಂಡಂತೆ ಆಗುತ್ತದೆ. ಮುಕ್ತಮನಸ್ಸಿನಿಂದ ವೇದಗಳಲ್ಲಿರುವ ಸೂಚನೆಗಳನ್ನು ಅನುಸರಿಸಿದಲ್ಲಿ ‘ಯಾವುದೇ ಸಮಸ್ಯೆಗೂ ಇಲ್ಲಿದೆ ಪರಿಹಾರ’ ಎಂಬುದು ಮನದಟ್ಟಾಗುತ್ತದೆ. ವೇದಗಳು ಯಾವುದೇ ಜಾತಿ-ಮತ-ಪಂಥ-ಪಂಗಡಗಳ ಸ್ವತ್ತಲ್ಲ. ಗಂಡು-ಹೆಣ್ಣು ಎಂಬ ಭೇದವೂ ಇಲ್ಲದೇ ಇದರಲ್ಲಿರುವ ಜ್ಞಾನ ಎಲ್ಲರಿಗಾಗಿದೆ ಎಂಬ ಸ್ಪಷ್ಟ ದೃಢನಿಲುವಿನೊಂದಿಗೆ, ಎಲ್ಲ ರೀತಿಯ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಹೇಗಿದೆ ಎಂಬುದನ್ನು ವಿಶ್ಲೇಷಿಸೋಣ.


ಮೊದಲಿಗೆ ಜಾಗತಿಕ ಸಮಸ್ಯೆಗಳು. ದೇಶದೇಶಗಳ ನಡುವೆ ವೈರತ್ವ, ಗಡಿ-ರೇಖೆಗಳಿಂದಾಗಿ ನಿರಂತರ ಘರ್ಷಣೆ, ಇತರ ದೇಶಗಳಿಗೆ ಹಾನಿಯುಂಟಾದರೂ ಸರಿಯೇ ತಮ್ಮ ದೇಶದ ಅಭಿವೃದ್ಧಿ ಸಾಧಿಸಬೇಕೆಂಬ ಪೈಪೋಟಿ, ಈ ಪ್ರವೃತ್ತಿಗಳನ್ನೇ ಬಂಡವಾಳವಾಗಿಸಿಕೊಂಡು ಶಸ್ತ್ರಾಸ್ತ್ರಗಳ ನಿರ್ಮಾಣ, ವ್ಯಾಪಾರವನ್ನೇ ಪ್ರಧಾನ ಉದ್ದಿಮೆಯನ್ನಾಗಿಸಿಕೊಂಡಿರುವ ದೇಶಗಳು, ಓಜೋನ್ ಪದರಕ್ಕೆ ತೂತು, ಆಮ್ಲವರ್ಷ, ವಾಯುಮಾಲಿನ್ಯ, ಜಲಮಾಲಿನ್ಯ, ಭೂಮಾಲಿನ್ಯ, ಭಯಂಕರ ವಿಕಿರಣಗಳನ್ನು ಸೂಸುವ ಅಣುತ್ಯಾಜ್ಯ, ಭೂಮಿಯ ಉಷ್ಣತೆ ನಿರಂತರವಾಗಿ ಏರುತ್ತಿರುವುದು, ಒಂದೇ ಎರಡೇ. ಒಂದೊಂದು ಸಮಸ್ಯೆಯೂ ಇಡೀ ಭೂಮಂಡಲವನ್ನೇ ನಾಶಗೈಯುವಷ್ಟು ತೀಕ್ಷ್ಣವಾಗಿದೆ. ಇವು ಜಗತ್ತಿನ ಹಿತವನ್ನು ಕುರಿತು ಚಿಂತಿಸುವವರ ನಿದ್ದೆಯನ್ನು ಸಾಕಷ್ಟು ಕೆಡಿಸಿದೆ, ಕೆಡಿಸುತ್ತಿದೆ. ನಮ್ಮ ನಾಶವನ್ನು ನಾವೇ ಸಿದ್ಧಪಡಿಸಿಕೊಂಡಂತಾಗಿದೆ. ಯಾವುದೇ ಕ್ಷಣದಲ್ಲೂ ಈ ನಾಶವು ನಮ್ಮ ಮೇಲೆರಗಬಹುದು. ಹಲವಾರು ಕಡೆಗಳಲ್ಲಿ ಇವುಗಳಿಗೆ ‘ಕಾರ್ಬನ್ ಟ್ರೇಡಿಂಗ್’ನಂತಹ ಪರಿಹಾರ ಕಂಡುಹಿಡಿಯುವ ಪ್ರಯತ್ನ ನಡೆಯುತ್ತಿರುವುದು ನಿಜವಾದರೂ, ಪರಿಣಾಮಕಾರಿ ಪ್ರಾಮಾಣಿಕ ಪರಿಹಾರ ಕೈಗೆಟುಕದಿರುವುದೂ ಅಷ್ಟೇ ದಿಟವಾಗಿದೆ.


ವೇದಗಳಲ್ಲಿ ಇವಕ್ಕೆ ಸ್ಪಷ್ಟವೂ, ಖಚಿತವೂ ಆದ ಪರಿಹಾರಗಳಿರುವುದು ನಿಚ್ಚಳವಾಗಿದೆ. ಅಷ್ಟೇ ಅಲ್ಲ ಅವುಗಳು ಸತ್ಯಪೂರ್ಣವೂ, ವೈಜ್ಞಾನಿಕವೂ, ತರ್ಕಬದ್ಧವೂ, ಸಾಮಾನ್ಯಜ್ಞಾನಕ್ಕೆ ನಿಲುಕುವಂತೆಯೂ ಇರುವುದನ್ನೂ ಗಮನಿಸಿಕೊಳ್ಳಬಹುದು.


ಮೊದಲಿಗೆ ಯುದ್ಧಸಂಬಂಧೀ ಸಮಸ್ಯೆಗಳು. ಇದರ ಮೂಲದಲ್ಲಿರುವುದು ಪ್ರಕೃತಿಯ ಮೇಲಿನ ಹಕ್ಕಿಗಾಗಿ, ಅಲ್ಲಿಯ ಪ್ರಕೃತಿಸಂಪತ್ತಿನ ಮೇಲಿನ ಒಡೆತನಕ್ಕಾಗಿ ನಡೆಸುವ ಪೈಪೋಟಿ. ಮೂಲದಲ್ಲೇ ಸಮಸ್ಯೆಯಿದೆ. ನಾವೆಲ್ಲರೂ ಈ ಜಗತ್ತಿಗೆ ಬರುವಾಗ ಬರಿಕೈ, ಹೋಗುವಾಗಲೂ ಬರಿಕೈ! ಯಾವುದರ ಮೇಲೂ ನಮಗೆ ಒಡೆತನವಿಲ್ಲ. ನಾವೆಲ್ಲರೂ ಈ ಜಗತ್ತಿನಲ್ಲಿ ಕೆಲಕಾಲ ನಿಂತು ಹೋಗುವವರೇ! ಹಿಂದಿನ ತಲೆಮಾರಿನವರು ಈ ಪ್ರಕೃತಿಸಂಪತ್ತನ್ನು ನಮಗಾಗಿ ಉಳಿಸಿಹೋಗಿದ್ದರಿಂದ ನಮಗೆ ಅವು ಲಭ್ಯವಾಗಿವೆ. ಅಂತೆಯೇ ಮುಂದಿನ ಜನಾಂಗಕ್ಕೆ ಅವನ್ನು ಬಿಟ್ಟುಹೋಗುವುದೂ ನಮ್ಮ ಕರ್ತವ್ಯವಾಗಿದೆ. ಬಡಿದು, ಕಿತ್ತುತಿನ್ನುವ ಪ್ರವೃತ್ತಿಯನ್ನು ನಾವಿಂದು ಪ್ರೋತ್ಸಾಹಿಸುವುದಕ್ಕೆ ಮುಖ್ಯ ಕಾರಣ ನಾವಿಂದು ಬಲಶಾಲಿಗಳಾಗಿದ್ದೇವೆ. ನಮಗಿಂತ ಬಲಶಾಲಿಗಳು ನಮ್ಮನ್ನು ಬಡಿದು, ಕಿತ್ತುಕೊಂಡೊಯ್ಯುವಾಗ ನಮ್ಮ ನಿಲುವೇನಿರುತ್ತದೆ?! ಒಟ್ಟಾರೆ ನಾವೆಲ್ಲರೂ ಶಾಂತಿ, ನೆಮ್ಮದಿಯಿಂದ ಪ್ರಕೃತಿಸಂಪತ್ತನ್ನು ಅನುಭವಿಸಬೇಕಾದರೆ ಬಡಿದು, ಕಿತ್ತುತಿನ್ನುವ ಪ್ರವೃತ್ತಿ ಅಣಗಲೇಬೇಕು, ನಾವು ಈ ಪ್ರಕೃತಿಸಂಪತ್ತಿನ ವಿಶ್ವಸ್ತರೇ ಹೊರತು ಮಾಲೀಕರಲ್ಲ ಎಂಬ ಪ್ರಜ್ಞೆಯೂ ಇರಬೇಕು. ಈ ವೇದಮಂತ್ರಭಾಗದ ಭಾವವಾದರೂ ಅದೇ ತಾನೇ - “ಮಾ ಗೃಧಃ ಕಸ್ಯ ಸ್ವಿದ್ಧನಮ್?” (ಯಜುರ್ವೇದ.೪೦.೧.) - ಕಸಿಯಬೇಡ. ಯಾರದೀ ಸಂಪತ್ತು?! ಹಾಗಾದರೆ ನಮ್ಮ ಬದುಕುವಿಕೆಗೆ ಏನೂ ಬೇಡವೇ?!! ಬೇಕು. ಪ್ರಕೃತಿಸಂಪತ್ತನ್ನು ಪಾಲಿಸಿ ಪೋಷಿಸಿದಾಗ ಅದು ಬೆಳೆಯುತ್ತದೆ. ಬೆಳೆದ ಭಾಗ ನಮಗೆ, ಮೂಲ ಮುಂದಿನ ಪೀಳಿಗೆಗೆ!


ಇಂದು ರಾಷ್ಟ್ರ ರಾಷ್ಟ್ರಗಳ ನಡುವೆ ನಾವು ಕಾಣುತ್ತಿರುವ ಗಡಿ-ರೇಖೆಗಳೆಲ್ಲ ಕೃತಕ, ಮಾನವನಿರ್ಮಿತ. ಯಾವುದೇ ಪ್ರಕೃತಿಯ ನಿಯಮ ಈ ಗಡಿ-ರೇಖೆಗಳನ್ನು ಒಪ್ಪುವುದಿಲ್ಲ, ಗೌರವಿಸುವುದೂ ಇಲ್ಲ!! ಒಂದು ದೇಶದ ಕಾರ್ಖಾನೆಯ ಕೆಟ್ಟಹೊಗೆ ಆ ದೇಶದ ಗಡಿ ಬಂದ ತಕ್ಷಣ ಅಲ್ಲಿಯೇ ನಿಲ್ಲುವುದಿಲ್ಲ. ಗಡಿ ಮೀರಿ ಹರಡುತ್ತದೆ. ಒಂದು ದೇಶದಲ್ಲಿ ಹರಿಯುವ ನದಿಯ ನೀರು ಆ ದೇಶದ ಗಡಿ ಬಂದ ತಕ್ಷಣ ನಿಂತುಬಿಡುವುದಿಲ್ಲ. ಗಡಿ ದಾಟಿ ಸಮುದ್ರದೆಡೆಗೆ ಹರಿಯುತ್ತದೆ. ಯಾವುದೇ ಪ್ರಾಣಿ, ಪಕ್ಷಿ ಇಂತಹ ಗಡಿಗಳನ್ನು ಗಮನಿಸಿಕೊಂಡು ಓಡುವುದಿಲ್ಲ, ಹಾರುವುದಿಲ್ಲ!! ಯಾವುದೇ ಜಲಚರ ದೇಶದ ಗಡಿಯಲ್ಲಿಯೇ ಈಸುವುದಿಲ್ಲ. ಇಡೀ ಸಮುದ್ರ, ಸಾಗರವೇ ಅದರ ಸಾಮ್ರಾಜ್ಯ!! ವೇದಗಳ ದೃಷ್ಟಿಯಲ್ಲಿ ರಾಷ್ಟ್ರವೆಂದರೆ ಇಡೀ ಜಗತ್ತು. ಒಂದೆಡೆಯ ಪ್ರಕೃತಿ ವಿಕೋಪ ಜಗತ್ತಿನ ಇತರ ಭಾಗಗಳ ಮೇಲೂ ಪ್ರಭಾವ ಬೀರುತ್ತದೆ. ಇಂದು ನಾವು ಮಾಡಿಕೊಂಡಿರುವ ಯಾವುದೇ ದೇಶ ಸುಭಿಕ್ಷವಾಗಿ, ಶಾಂತವಾಗಿರಬೇಕಾದರೆ ಇಡೀ ಜಗತ್ತು ಸುಭಿಕ್ಷವಾಗಿ, ಶಾಂತವಾಗಿ ಇರಲೇಬೇಕು.


ಜಗತ್ತಿನಲ್ಲಿಯ ಒಂದೊಂದು ದೇಶವೂ ತನ್ನದೇ ಆದ ಸಂವಿಧಾನವನ್ನು ಹೊಂದಿರುವುದು ತಿಳಿದ ವಿಷಯವೇ ಆಗಿದೆ. ಈ ಸಂವಿಧಾನಗಳ ನಡುವೇ ವೈರುಧ್ಯಗಳಿರುವುದೂ ತಿಳಿದದ್ದೇ. ಇವುಗಳಿಂದಾಗಿ ಜಾಗತಿಕ ಹಂತದಲ್ಲಿ ಘರ್ಷಣೆಗಳು ತಪ್ಪಿದ್ದಲ್ಲ. ಇಡೀ ಜಗತ್ತಿಗೇ, ಇಡೀ ಮನುಕುಲಕ್ಕೇ ಒಂದು ಸಂವಿಧಾನದ ಅಗತ್ಯವಿದೆ. ವಿಶ್ವಂ ಭವತ್ಯೇಕ ನೀಡಮ್|| (ಯಜುರ್ವೇದ.೩೨.೮) - ಇಡೀ ಜಗತ್ತು ಒಂದು ಪುಟ್ಟ ಗೂಡಾಗಿದೆ. ಈ ಜ್ಞಾನ ನಮ್ಮದಾದ ದಿನವೇ ಇಡೀ ವಿಶ್ವದಲ್ಲಿಯ ಎಲ್ಲ ಯುದ್ಧಸಂಬಂಧೀ ಸಮಸ್ಯೆಗಳೂ ಪರಿಹಾರವಾದಂತೆಯೇ!!


ಇನ್ನು ಪಂಚಭೂತಗಳ ಮಾಲಿನ್ಯ. ಎಂದಿನವರೆಗೂ ಈ ಪಂಚಭೂತಗಳನ್ನು ನಮ್ಮ ಭೋಗಕ್ಕಿರುವ ಸಾಧನಗಳೆಂದು ತಿಳಿಯುತ್ತಿರುತ್ತೇವೋ ಅಲ್ಲಿಯವರೆಗೂ ಅವುಗಳ ಶೋಷಣೆ, ಅರ್ಥಾತ್ ಅವುಗಳ ಮೇಲಿನ ಅತ್ಯಾಚಾರ ತಪ್ಪುವುದಿಲ್ಲ. ಅವು ನಮ್ಮ ಉಳಿವಿಗೆ ಅತ್ಯಾವಶ್ಯಕ, ಅವುಗಳ ಕೊಡುಗೆಗಳು ನಮಗೆ ಅನಿವಾರ್ಯ ಎಂಬ ಪ್ರಜ್ಞೆ ಬರುವವರೆಗೂ, ಕುಳಿತ ರೆಂಬೆಯನ್ನೇ ಕಡಿಯುವ ನಮ್ಮ ಮೂರ್ಖತನ ಕೊನೆಗೊಳ್ಳುವುದಿಲ್ಲ. ಈ ಪಂಚಭೂತಗಳೆಲ್ಲವೂ ‘ದೇವ’, ನಮ್ಮ ಬಾಳ್ವೆಗೆ ಬೇಕಾದ್ದನ್ನು ಕೊಡುವಂತಹವು ಎಂಬ ಅರಿವು ಮೂಡಿ, ಅವುಗಳ ‘ಪೂಜೆ’ ಅರ್ಥಾತ್ ಸತ್ಕಾರ, ಸದುಪಯೋಗ ಮಾಡಿಕೊಂಡಾಗ ಮಾತ್ರ ಸಕಲವಿಧ ಮಾಲಿನ್ಯಗಳು ನಿಲ್ಲುವುದು ಸಾಧ್ಯ. ಆಗಿರುವು ಮಾಲಿನ್ಯಗಳ ದುಷ್ಪರಿಣಾಮಗಳನ್ನು ಹೋಗಲಾಡಿಸಿಕೊಳ್ಳಲು ಸಾಧ್ಯ. ಅಗ್ನಿರ್ದೇವತಾ ವಾತೋ ದೇವತಾ ...... ವರುಣೋ ದೇವತಾ ..... || (ಯಜುರ್ವೇದ.೧೪.೨೦.) - ಅಗ್ನಿ, ವಾಯು, ನೀರು ಮೊದಲಾದವು ದೇವತೆಗಳು. ಈಗಾಗಲೇ ಆಗಿರುವ ಮಾಲಿನ್ಯಗಳನ್ನು ಹೋಗಲಾಡಿಸಲು ವೇದಗಳ ಪರಿಹಾರ ‘ಯಜ್ಞ’. ವಾಯು ಮೊದಲಾದವುಗಳ ಶುದ್ಧಿಗಾಗಿ ಮಾಡುವ ‘ದ್ರವ್ಯಯಜ್ಞ’ವೂ ಹೌದು. ಅದರಲ್ಲಿ ಔಷಧೀಯ ಗುಣಗಳಿಂದ ಕೂಡಿದ ವಸ್ತುಗಳನ್ನು ಮಾತ್ರ ಬಳಸುವುದರಿಂದ ಶುದ್ಧತೆಯನ್ನು ಸಾಧಿಸಬಹುದು. ವಿಶಾಲವಾದ ಅರ್ಥದಲ್ಲಿ ‘ಯಜ್ಞ’ವೆಂದರೆ ಶ್ರೇಷ್ಠತಮ ಕರ್ಮವೆಂದರ್ಥ. ನಾವು ಮಾಡುವ ಯಾವುದೇ ಕಾರ್ಯವನ್ನು ಅತ್ಯುತ್ತಮ ರೀತಿಯಲ್ಲಿ ಮಾಡಿದ್ದಾದರೆ ಅದು ಯಜ್ಞವೆನಿಸುತ್ತದೆ. ದೇವೋ ವಃ ಸವಿತಾ ಪ್ರಾರ್ಪಯತು ಶ್ರೇಷ್ಠತಮಾಯ ಕರ್ಮಣೇ|| (ಯಜುರ್ವೇದ.೧.೧.) - ಪ್ರೇರಕನಾದ ಜ್ಯೋತಿಸ್ವರೂಪ ಭಗವಂತನು ನಿಮ್ಮನ್ನು ಶ್ರೇಷ್ಠತಮ ಕರ್ಮಕ್ಕೆ ಪ್ರೇರೇಪಿಸಲಿ. ಒಂದು ಎಚ್ಚರಿಕೆಯ ಮಾತು. ಯಜ್ಞದಲ್ಲಿ ಸಾಮಾನ್ಯವಾಗಿ ನಾವು ತಿಳಿದಿರುವಂತೆ ಪ್ರಾಣಿಬಲಿ ಮೊದಲಾದ ಹಿಂಸಾಕಾರ್ಯಗಳಿಲ್ಲ. ಅಹಿಂಸಾಕರ್ಮಗಳಿಗೆ ‘ಅಧ್ವರ’ ಎಂದು ಹೆಸರು. ಇದು ಯಜ್ಞಕ್ಕಿರುವ ಮತ್ತೊಂದು ಹೆಸರು.


ಇನ್ನು ಸಾಮಾಜಿಕ ಸಮಸ್ಯೆಗಳು. ಒಂದಾಗಿರಬೇಕಾಗಿದ್ದ ಮಾನವ ಸಮಾಜವು ಇಂದು ಜಾತಿ-ಮತ, ಪಂಥ-ಪಂಗಡ, ಪಕ್ಷಗಳ ಹೆಸರಿನಲ್ಲಿ ಒಡೆದು ನುಚ್ಚುನೂರಾಗಿದೆ. ಮೇಲು-ಕೀಳುಗಳ ಜೇಡರಬಲೆಯಲ್ಲಿ ಸಿಕ್ಕು ತೊಳಲುತ್ತಿದೆ. ಇವುಗಳಿಂದಾಗಿ ಇನ್ನಿತರ ಸಾಮಾಜಿಕ ಸಮಸ್ಯೆಗಳು ಉದ್ಭವವಾಗಿವೆ. ಇವೆರಡನ್ನೂ ಪರಿಹರಿಸಿಕೊಂಡರೆ ಉಳದ ಸಮಸ್ಯೆಗಳು ತಮ್ಮಂತೆ ತಾವೇ ಮರಣವನ್ನಪ್ಪುತ್ತವೆ.


ವೇದಗಳಲ್ಲಿ ಎಲ್ಲಿಯೂ ಇಂದು ನಾವು ಕಾಣುತ್ತಿರುವ ಜಾತಿಪದ್ಧತಿಯ ಲವಲೇಶವೂ ಕಂಡುಬರುವುದಿಲ್ಲ. ಅದು ಹೇಳುವ ಜಾತಿ ಹುಟ್ಟಿನಿಂದ ಬಂದು, ಸಾಯುವವರೆಗೂ ಬದಲಾಗದ, ನೋಡಿದ ಕೂಡಲೇ ತಿಳಿದುಬರುವ ಲಕ್ಷಣಗಳನ್ನು ಹೊಂದಿದ (ಜಾತಿ ಪದದ ಮೂಲವಾದ ಜನೀ ಪ್ರಾದುರ್ಭಾವೇ ಧಾತುವಿನ ಅರ್ಥದ ಆಧಾರದ ಮೇಲೆ) ಇಂದಿನ ಯಾವ ಜಾತಿಯೂ ಈ ವಿವರಣೆಗೆ ಹೊಂದುವುದಿಲ್ಲ. ಹುಟ್ಟಿದ ಮಗು ಯಾವ ಜಾತಿಯೆಂದು ಯಾರೂ ಹೇಳಲಾಗುವುದಿಲ್ಲ. ಮಧ್ಯದಲ್ಲಿ ಜಾತಿ-ಮತಗಳನ್ನು ಬೇಕಾದಂತೆ ಬದಲಾಯಿಸಿಕೊಳ್ಳಬಹುದು. ಹಾಗಾಗಿ ಜಾತಿ = ಇಂದಿನ Caste ಅಲ್ಲ. ಜಾತಿ ಪದದ ನಿಜವಾದ ಅರ್ಥ ಪ್ರಾಣಿಪ್ರಭೇದ, ಪ್ರಾಣಿವರ್ಗ, Species ಎಂಬುದೇ ಆಗಿದೆ. ಹಾಗಾಗಿ ನಮ್ಮೆಲ್ಲ ಜಾತಿ ಒಂದೇ ‘ಮಾನವಜಾತಿ’. ಮಾನವಜಾತಿಗೆ ಒಂದೇ ಧರ್ಮ, ‘ಮಾನವಧರ್ಮ’. ಮತಗಳನ್ನು ಧರ್ಮಗಳೆಂದು ತಪ್ಪು ತಿಳಿದಾಗ ಗೊಂದಲ, ಘರ್ಷಣೆಗಳು ತಪ್ಪುವುದೇ ಇಲ್ಲ. ಎಲ್ಲ ಮತಗಳೂ ವ್ಯಕ್ತಿಗಳಿಂದ ಪ್ರಾರಂಭವಾದರೆ, ಧರ್ಮವು ಅರ್ಥಾತ್ ಎಲ್ಲರನ್ನೂ ಧರಿಸಿ, ಉಳಿಸಿ, ಬೆಳೆಸುವ ತತ್ತ್ವಗಳು (ಯದ್ಧಾರ್ಯತೇ ತದ್ಧರ್ಮಮ್; ಮೂಲ ಧಾತು ಡುಧಾಞ ಧಾರಣಪೋಷಣಯೋಃ) ಪ್ರಕೃತಿನಿಯಮಗಳನ್ನನುಸರಿಸುತ್ತವೆಯೇ ಹೊರತು ವ್ಯಕ್ತಿಗಳನ್ನು ಆಶ್ರಯಿಸುವುದಿಲ್ಲ.

ವ್ಯಕ್ತಿ ವ್ಯಕ್ತಿಗಳ ನಡುವೆ ಅಭಿಪ್ರಾಯ ಭೇದ ಇರುವುದು ಸಹಜವೇ. ಮತಗಳಲ್ಲಿ ಭಿನ್ನತೆ ಅನಿವಾರ್ಯ. ಆದರೆ, ಇದು ಘರ್ಷಣೆಗೆ, ಮೇಲು-ಕೀಳಿಗೆ ಕಾರಣವಾಗಬಾರದು. ಹಾಗೆ ಕಾರಣವಾದರೆ, ಒಂದು ಮತವನ್ನು ಸ್ವೀಕರಿಸುವವರು ತಾವು ಶ್ರೇಷ್ಠರೆಂದು ಇತರರ ಮೇಲೆ ತಮ್ಮ ಅಭಿಪ್ರಾಯವನ್ನು ಹೇರಿದರೆ, ಅದು ಗುಂಪುಗಾರಿಕೆ ಎನಿಸುತ್ತದೆ. ಪಂಥ, ಪಂಗಡ, ಪಕ್ಷಗಳ ಕಥೆಯೂ ಇಷ್ಟೇ. ಮತಭೇದವಿದ್ದಾಗ ಆರೋಗ್ಯಕರ ಚರ್ಚೆ, ಸತ್ಯಾನ್ವೇಷಣೆಗಳನ್ನು ಮುಕ್ತಮನಸ್ಸಿನಿಂದ ಮಾಡುವುದೊಂದೇ ಪರಿಹಾರ. ಅದು ನಮಗೂ ಸಮಾಜಕ್ಕೂ ಬಲವನ್ನೀಯುತ್ತದೆ. ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ|| (ಋಗ್ವೇದ.೧.೮೬.೯.) - ಸತ್ಯವನ್ನೇ ಶಕ್ತಿಯನ್ನಾಗಿ ಹೊಂದಿರುವ ಮಾನವರೇ! ನೀವು ನಿಮ್ಮೆಲ್ಲ ಶಕ್ತಿಗಳನ್ನು ಬಳಸಿಕೊಂಡು ಆ ಸತ್ಯವನ್ನು ಅನ್ವೇಷಿಸಿರಿ. ಹುಟ್ಟಿನಿಂದ ಹಿಡಿದು, ಬಹುಮತ ಸೇರಿ, ಚರ್ಮದ ಬಣ್ಣದವರೆಗೆ ಯಾವುದೇ ಕಾರಣವನ್ನು ಮುಂದೊಡ್ಡಿ ಜನಜನರ ನಡುವೆ ಮೇಲು-ಕೀಳೆಂಬ ಭಾವನೆಯನ್ನು ಪ್ರೋತ್ಸಾಹಿಸುವುದು ಅಮಾನವೀಯವೇ ಸರಿ. ಅಜ್ಯೇಷ್ಠಾಸೋ ಅಕನಿಷ್ಠಾಸಃ ಏತೇ ಸಂ ಭ್ರಾತರೋ ವಾವೃಧುಃ ಸೌಭಗಾಯ|| (ಋಗ್ವೇದ.೫.೬೦.೫.) - ಈ ಮಾನವರಲ್ಲಿ ಯಾರೂ ಜ್ಯೇಷ್ಠರಲ್ಲ, ಯಾರೂ ಕನಿಷ್ಠರಲ್ಲ. ಸಹೋದರರಾದ ನೀವೆಲ್ಲರೂ ಒಂದುಗೂಡಿ ನಿಮ್ಮ ಸೌಭಾಗ್ಯವನ್ನು ಸಾಧಿಸಿಕೊಳ್ಳಿ. ವೇದಗಳಲ್ಲಿ ಇಂತಹ ವಿಶ್ವಭ್ರಾತೃತ್ವದ, ಸಹಬಾಳ್ವೆಯ ಮಾತುಗಳಿಗೆ ಲೆಕ್ಕವೇ ಇಲ್ಲ. ಸುಜಾತಾಸೋ ಜನುಷಾ|| (ಋಗ್ವೇದ.೫.೫೯.೬.) - ಜನ್ಮದಿಂದ ಎಲ್ಲರೂ ಕುಲೀನರೇ. ಸಮಾನೀ ಪ್ರಪಾ ಸಹ ವೋsನ್ನಭಾಗಃ|| (ಅಥರ್ವವೇದ.೩.೩೦.೬.) - ನಿಮ್ಮೆಲ್ಲರ ಜಲಮೂಲಗಳು ಒಂದಾಗಿರಲಿ, ನಿಮ್ಮ ಆಹಾರಭಾಗಗಳೂ ಒಂದಿಗೇ ಇರಲಿ.

ಜ್ಯಾಯಸ್ವಂತಶ್ಚಿತ್ತಿನೋ ಮಾ ವಿ ಯೌಷ್ಟ ಸಂರಾಧಯಂತಃ ಸಧುರಾಶ್ಚರಂತಃ| ಅನ್ಯೋ ಅನ್ಯಸ್ಮೈ ವಲ್ಗು ವದಂತ ಏತ ಸಧ್ರೀಚೀನಾನ್ವಃ ಸಂಮನಸಸ್ಕೃಣೋಮಿ|| (ಅಥರ್ವವೇದ.೩.೩೦.೫.) - ಮಾನವರೇ! ಉನ್ನತ ಆದರ್ಶಗಳನ್ನು ಹೊಂದಿದವರಾಗಿರಿ. ತಿಳಿದವರೂ, ಜಾಗರೂಕರೂ ಆಗಿರಿ. ಒಬ್ಬರಿಂದೊಬ್ಬರು ಬೇರೆಯಾಗಬೇಡಿರಿ. ಒಗ್ಗಟ್ಟಾಗಿ ಸಂಪತ್ತನ್ನು ಸಂಪಾದಿಸಿರಿ. ಒಂದೇ ಮಾನವಧರ್ಮದ ನೊಗವನ್ನು ಹೊತ್ತು ಸಾಗಿರಿ. ಪರಸ್ಪರರ ನಡುವೆ ಒಳ್ಳೆಯ ಮಾತುಗಳನ್ನೇ ಆಡುವವರಾಗಿ ಉನ್ನತಿಯನ್ನು ಸಾಧಿಸಿರಿ. ನೀವೆಲ್ಲರೂ ಒಂದೇ ಮಾನವಪಥದಲ್ಲಿ ನಡೆಯುವಂತೆಯೂ, ಸಮಾನಮನಸ್ಕರಾಗಿರುವಂತೆಯೂ ಮಾಡಿರುತ್ತೇನೆ. ಅನ್ಯೋ ಅನ್ಯಮಭಿ ಹರ್ಯತ|| (ಅಥರ್ವವೇದ.೩.೩೦.೭.) - ಒಬ್ಬರನ್ನೊಬ್ಬರು ಪ್ರೀತಿಸಿರಿ, ಒಬ್ಬರು ಇನ್ನೊಬ್ಬರ ಮನವನ್ನು ಗೆಲ್ಲಿರಿ. ಇಂತಹ ಅನೇಕ ಉದಾಹರಣೆಗಳನ್ನು ನೀಡಬಹುದು.
ವೇದಗಳಲ್ಲಿ ಇಂದು ಜಾತಿಯ ಹೆಸರಿನಲ್ಲಿ ಬಳಕೆಯಾಗಿರುವ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಮೊದಲಾದ ಪದಗಳ ಪ್ರಯೋಗವಿದೆ. ಆದರೆ, ಅಲ್ಲೆಲ್ಲಿಯೂ ಅವುಗಳನ್ನು ಇಂದು ನಾವು ಕೃತಕವಾಗಿ ನಿರ್ಮಿಸಿಕೊಂಡಿರುವ ಜಾತಿ = Cast ಎಂದು ಅಪ್ಪಿತಪ್ಪಿಯೂ ಹೇಳಿಲ್ಲ. ವೇದಗಳು ಅವನ್ನು ಅತ್ಯಂತ ಸ್ಪಷ್ಟವಾಗಿ ವರ್ಣಗಳೆಂದು ಕರೆದಿವೆ. ವರ್ಣವೆಂದರೆ ಆರಿಸಿಕೊಳ್ಳಲು ಸಂಪೂರ್ಣ ಅವಕಾಶವಿರುವ ಜೀವನ ಪದ್ಧತಿ. ನಮ್ಮ ನಮ್ಮ ಗುಣ, ಕರ್ಮ, ಸ್ವಭಾವ, ಸಾಮರ್ಥ್ಯಗಳಿಗನುಸಾರವಾಗಿ ಆಯ್ಕೆಮಾಡಿಕೊಳ್ಳಲು ನಮಗೆ ಸ್ವಾತಂತ್ರ್ಯವಿರುವುದಕ್ಕೇ ವರ್ಣವೆಂದು ಹೆಸರು. ಈಗಾಗಲೇ ಹೇಳಿರುವಂತೆ ಈ ವರ್ಣಗಳ ನಡುವೆ ಹೆಚ್ಚು-ಕಡಿಮೆ ಎಂಬುದಿಲ್ಲ. ಎಲ್ಲದಕ್ಕೂ ಸಮಾನವಾದ ಪ್ರಾಶಸ್ತ್ಯ.


ಮುಂದಿನ ಹಂತದಲ್ಲಿ ದಾಂಪತ್ಯ, ಪಾರಿವಾರಿಕ, ಕೌಟುಂಬಿಕ, ಸಾಂಸಾರಿಕ ಸಮಸ್ಯೆಗಳು. ಕುಟುಂಬ, ಸಂಸಾರ ಪ್ರಾರಂಭವಾಗುವುದೇ ‘ವಿವಾಹ’ ಸಂಸ್ಕಾರದಿಂದ. ಆ ಸಂದರ್ಭದಲ್ಲೇ ವಧೂ-ವರರ ಬಾಯಿಯಲ್ಲಿ ಈ ಮಾತನ್ನು ಹೇಳಿಸಲಾಗುತ್ತದೆ. ವಧೂ-ವರರು ಅರ್ಥ ತಿಳಿದೇ ಹೇಳಬೇಕು. ಸಮಾಪೋ ಹೃದಯಾನಿ ನೌ|| (ಋಗ್ವೇದ.೧೦.೮೫.೪೭.) - ಎರಡು ನೀರುಗಳು ಬೆರೆತ ಮೇಲೆ ಅವುಗಳನ್ನು ಪ್ರತ್ಯೇಕವಾಗಿ ಗುರಿತಿಸಲಾಗದಂತೆ, ನಮ್ಮಿಬ್ಬರ ಹೃದಯಗಳನ್ನು ಒಂದಾಗಿ ಬೆಸೆಯುವ ಸಂಕಲ್ಪ ನಮ್ಮದಾಗಿದೆ. ಈ ಸಂಕಲ್ಪವು ಇಬ್ಬರಲ್ಲೂ ದೃಢವಾಗಿದ್ದಲ್ಲಿ ಎಷ್ಟೋ ದಾಂಪತ್ಯ ಸಮಸ್ಯೆಗಳು ಉಂಟಾಗುವುದೇ ಇಲ್ಲ. ಪತಿ-ಪತ್ನಿಯರ ನಡುವೆ ನೂರಕ್ಕೆ ನೂರು ಹೊಂದಾಣಿಕೆ ಎಂಬುದು ವಾಸ್ತವವಲ್ಲ. ಹೊಂದಿಸಿಕೊಂಡು ಹೋಗುವ ಮನೋಭಾವ ಇಬ್ಬರಲ್ಲೂ ಇರಬೇಕು. ಸಂಬಂಧವನ್ನು ಕಡಿದುಕೊಳ್ಳುವ ಧೋರಣೆಗೆ ಇಲ್ಲಿ ಅವಕಾಶವಿಲ್ಲ. ಪಾಣಿಗ್ರಹಣ ಸಂದರ್ಭದಲ್ಲಿ ವರನು ವಧುವಿಗೆ ಇದನ್ನೇ ಹೇಳುತ್ತಾನೆ. ಗೃಭ್ಣಾಮಿ ತೇ ಸೌಭಗತ್ವಾಯ ಹಸ್ತಂ ಮಯಾ ಪತ್ಯಾ ಜರದಷ್ಟಿರ್ಯಥಾಸಃ|| (ಋಗ್ವೇದ.೧೦.೮೫.೩೬.) - ಪತಿಯಾಗುವ ನನ್ನೊಂದಿಗೆ ನೀನು ಮುಪ್ಪಿನ ಕಾಲದವರೆಗೂ ಬಾಳುವಂತೆ, ಆಧ್ಯಾತ್ಮಿಕ ಮತ್ತು ಭೌತಿಕ ಸೌಭಾಗ್ಯಪ್ರಾಪ್ತಿಗಾಗಿ ನಾನು ನಿನ್ನ ಕೈ ಹಿಡಿಯುತ್ತಿದ್ದೇನೆ. ಇಂದು ದಾಂಪತ್ಯದಲ್ಲಿ ಒಡಕುಂಟಾಗುತ್ತಿರುವುದಕ್ಕೆ ಪ್ರಮುಖ ಕಾರಣ ಅನೈತಿಕ ಹಾಗೂ ವಿವಾಹೇತರ ಸಂಬಂಧಗಳು. ಇವುಗಳನ್ನು ಮೂಲದಲ್ಲಿಯೇ ಚಿವುಟಿಹಾಕುವಂತಹ ಮಾರ್ಗದರ್ಶನ ವೇದಗಳಲ್ಲಿವೆ. ವರನು ವಧುವಿಗೆ ತಾನು ಗೃಹಸ್ಥನಾಗಿ ಬಾಳುವೆ ಮಾಡುವ ಸಂದರ್ಭದಲ್ಲಿ ತನ್ನ ನಡತೆ ಹೇಗಿರುತ್ತದೆ ಎಂಬುದನ್ನು ತಿಳಿಸುವಾಗ, ನ ಸ್ತೇಯಮದ್ಮಿ ಮನಸೋದಮುಚ್ಯೇ|| (ಅಥರ್ವ.೧೪.೧.೫೭.) - ನಾನು ನಿನಗೆ ಕಾಣದಂತೆ ಕಳ್ಳತನದಿಂದ ಯಾವ ಭೋಗವನ್ನೂ ಅನುಭವಿಸೆನು, ಮನದಿಂದ ಕಳ್ಳತನದ ಭಾವನೆಯನ್ನೇ ಕಿತ್ತು ಬಿಸಾಡುವೆನು, ಎಂದು ಆಶ್ವಾಸನೆಯನ್ನು ನೀಡುತ್ತಾನೆ. ಅರಿತು ಈ ಮಾತುಗಳನ್ನಾಡಿದಾಗ ಎಷ್ಟೋ ಸಮಸ್ಯೆಗಳು ಹುಟ್ಟುವುದೇ ಇಲ್ಲ. ಇಂತಹ ವರನ ಅನೇಕ ಮಾತುಗಳಿಗೆ ಪ್ರತಿಕ್ರಿಯಿಸುತ್ತಾ ವಧುವು ಲಾಜಾಹೋಮದಲ್ಲಿ, ದೀರ್ಘಾಯುರಸ್ತು ಮೇ ಪತಿಃ|| (ಅಥರ್ವವೇದ.೧೪.೨.೬೩.) - ನನ್ನ ಪತಿಯು ದೀರ್ಘಾಯುವಾಗಲಿ, ಎನ್ನುತ್ತಾಳೆ. ದಾಂಪತ್ಯದ ಸೌಖ್ಯಕ್ಕಾಗಿ ಅನೇಕ ಮಾರ್ಗದರ್ಶನಗಳಿವೆ. ಉದಾಹರಣೆಗೆ, ಜಾಯಾ ಪತ್ಯೇ ಮಧುಮತೀಂ ವಾಚಂ ವದತು ಶಂತಿವಾಮ್|| (ಅಥರ್ವವೇದ.೩.೩೦.೨.) - ಪತ್ನಿಯು ಪತಿಯ ವಿಚಾರದಲ್ಲಿ ಮಧುರವೂ, ಶಾಂತಿದಾಯಕವೂ ಆದ ಮಾತುಗಳನ್ನಾಡಲಿ. ಈ ಸೂಚನೆ ಇಬ್ಬರಿಗೂ ಹೊಂದುತ್ತದೆ. ಪತಿಯು ಪತ್ನಿಯ ವಿಚಾರದಲ್ಲಿ ಮಧುರವೂ, ಶಾಂತಿದಾಯಕವೂ ಆದ ಮಾತುಗಳನ್ನಾಡಲಿ. ತಂದೆ, ತಾಯಿ, ಮಕ್ಕಳ ನಡುವಿನ ಸಂಬಂಧಗಳು ಹೇಗಿರಬೇಕು ಎಂಬುದನ್ನು ಸೂಚಿಸುತ್ತಾ, ಅನುವ್ರತಃ ಪಿತುಃ ಪುತ್ರೋ ಮಾತ್ರಾ ಭವತು ಸಂಮನಾಃ|| (ಅಥರ್ವವೇದ.೩.೩೦.೨.) - ತಂದೆಯ ಸಂಕಲ್ಪಗಳಿಗೆ ಅನುಗುಣವಾದ ಸಂಕಲ್ಪಗಳು ಮಗ/ಮಗಳಲ್ಲಿ ಮೂಡಲಿ. ತಾಯಿಯೊಂದಿಗೆ ಸಮಾನಚಿತ್ತವಿರಲಿ. ಇನ್ನು ಸಹೋದರ, ಸಹೋದರಿಯರ ನಡುವಣ ಬಾಂಧವ್ಯಕ್ಕೆ ಸಂಬಂದಿಸಿದಂತೆ ಈ ಮಾತುಗಳು ಸ್ಪಷ್ಟವಾಗಿಯೇ ಇವೆ. ಮಾ ಭ್ರಾತಾ ಭ್ರಾತರಂ ದ್ವಿಕ್ಷನ್ಮಾ ಸ್ವಸಾರಮುತ ಸ್ವಸಾ|| (ಅಥರ್ವವೇದ.೩.೩೦.೩.) - ಸೋದರನು ಸೋದರನನ್ನು, ಅಂತೆಯೇ ಸೋದರಿಯು ಸೋದರಿಯನ್ನು ದ್ವೇಷಿಸದಿರಲಿ. ಪರಸ್ಪರರ ನಡುವೆ ದ್ವೇಷಭಾವನೆ ಇಲ್ಲದಿರಲಿ. ಅತ್ತೆ, ಮಾವ, ಸೊಸೆ, ಅಳಿಯಂದಿರ ನಡುವಣ ನೆಂಟಸ್ತಿಕೆ ಹೇಗಿರಬೇಕೆಂಬುದಕ್ಕೆ ಒಂದು ಉದಾಹರಣೆ. ಸಮ್ರಾಜ್ಞೀ ಶ್ವಶುರೇ ಭವ ಸಮ್ರಾಜ್ಞೀ ಶ್ವಶ್ವ್ರಾಂ ಭವ|| (ಋಗ್ವೇದ.೧೦.೮೫.೪೬.) - ಅತ್ತೆ-ಮಾವ ಇವರುಗಳಿಗೆ ಸಾಮ್ರಾಜ್ಞಿಯೆನಿಸು/ಸಮ್ರಾಜನೆನಿಸು.. ತನ್ನ ಸೇವೆ, ಪ್ರೀತಿ, ಆದರಗಳಿಂದ ಉನ್ನತವಾದ ಸ್ಥಾನವನ್ನು ಗಳಿಸಿಕೊಳ್ಳಬೇಕೆಂಬುದು ತಾತ್ಪರ್ಯ. ಇಂದು ಇಂತಹ ವೇದಮಾರ್ಗದರ್ಶನ, ಶಿಕ್ಷಣಗಳಿಲ್ಲದ ಕಾರಣ ನೂರಾರು ಸಮಸ್ಯೆಗಳುಂಟಾಗಿವೆ. ಈ ಸಾಮರಸ್ಯದ ಮಾರ್ಗದರ್ಶನ ಎಷ್ಟು ವಿಶಾಲವಾಗಿದೆಯೆಂದರೆ ಸಕಲ ಜೀವರಾಶಿಗಳ ಬಗ್ಗೆಯೂ ಮೈತ್ರೀಭಾವನೆಯಿರಲಿ ಎನ್ನುತ್ತದೆ ವೇದ. ಮಿತ್ರಸ್ಯ ಮಾ ಚಕ್ಷುಷಾ ಸರ್ವಾಣಿ ಭೂತಾನಿ ಸಮೀಕ್ಷಂತಾಮ್| ಮಿತ್ರಸ್ಯಾಹಂ ಚಕ್ಷುಷಾ ಸರ್ವಾಣಿಭೂತಾನಿ ಸಮೀಕ್ಷೇ ಮಿತ್ರಸ್ಯ ಚಕ್ಷುಷಾ ಸಮೀಕ್ಷಾಮಹೇ|| (ಯಜುರ್ವೇದ.೩೬.೧೮.) - ಮೈತ್ರೀಭಾವನೆಯಿಂದಲೇ ಸಕಲಜೀವರಾಶಿಗಳೂ ನನ್ನೊಡನೆ ವ್ಯವಹರಿಸಲಿ. ನಾನೂ ಕೂಡ ಮೈತ್ರೀಭಾವನೆಯಿಂದಲೇ ಸಕಲಜೀವರಾಶಿಗಳೊಂದಿಗೆ ವ್ಯವಹರಿಸುತ್ತೇನೆ. ಸಕಲಜೀವರಾಶಿಗಳು ಮೈತ್ರೀಭಾವನೆಯಿಂದಲೇ ಪರಸ್ಪರರ ವಿಷಯದಲ್ಲಿ ವ್ಯವಹರಿಸಲಿ.


ಕೊನೆಯದಾಗಿ ವ್ಯಕ್ತಿಗತ ಸಮಸ್ಯೆಗಳು. ಶಾರೀರಿಕ ಆರೋಗ್ಯಸಾಧನೆಗೆ ಮಾರ್ಗಸೂಚಿಗಳಿವೆ. ಅಶ್ಮಾ ಭವತ ನಸ್ತನೂಃ|| (ಅಥರ್ವವೇದ.೨.೧೩.೪.) - ನಮ್ಮ ಶರೀರವು ಕಲ್ಲಿನಂತಾಗಲಿ. ಬಲಂ ಧೇಹಿ ತನೂಷು ನಃ|| (ಋಗ್ವೇದ.೩.೫೩.೧೮.) - ನಮ್ಮ ಶರೀರಗಳಲ್ಲಿ ಬಲವನ್ನು ಧಾರಣೆ ಮಾಡಿಸು. ಶಾರೀರಿಕ, ಮಾನಸಿಕ ಆರೋಗ್ಯ ಸಾಧನೆಯ ಸಂಕಲ್ಪಕ್ಕೆ ಪ್ರೇರಣೆಯಿದೆ. ಅದೀನಾಃ ಸ್ಯಾಮ ಶರದಃ ಶತಮ್|| (ಯಜುರ್ವೇದ.೩೬.೩೪.) - ದೈನ್ಯತೆ ಇಲ್ಲದೆ ನೂರ್ಕಾಲ ಬಾಳೋಣ. ಮಾನಸಿಕ ಆರೋಗ್ಯಸಿದ್ಧಿಗಾಗಿ ನಮ್ಮಲ್ಲಿ ಮಂಗಳಕರವಾದ ಚಿಂತನೆಗಳು ಅತ್ಯಗತ್ಯ. ಭಗವಂತನಲ್ಲಿ ನಮ್ಮ ಪ್ರಾರ್ಥನೇ ಅದೇ ಆಗಿರಬೇಕು. ತನ್ಮೇ ಮನಃ ಶಿವಸಂಕಲ್ಪಮಸ್ತು|| (ಯಜುರ್ವೇದ.೩೪.೧.) - ನನ್ನ ಮನಸ್ಸು ಮಂಗಳಕರ ಸಂಕಲ್ಪಗಳನ್ನು ಉಳ್ಳದ್ದಾಗಲಿ. ಧಿಯೋ ಯೋ ನಃ ಪ್ರಚೋದಯಾತ್|| (ಯಜುರ್ವೇದ.೩.೩೫.) - ನಮ್ಮ ಪ್ರಜ್ಞಾ-ಕರ್ಮಗಳನ್ನು (ಆ ವಿಶ್ವಚೇತನನು) ಪ್ರಚೋದಿಸಲಿ. ಪರೋsಪೇಹಿ ಮನಸ್ಪಾಪ|| (ಅಥರ್ವವೇದ.೬.೪೫.೧.) - ಹೇ ಪಾಪವೇ! ನನ್ನ ಮನಸ್ಸಿನಿಂದ ದೂರಹೋಗು. ವಿಶ್ವಾಯುರ್ಧೇಹ್ಯಕ್ಷಿತಮ್|| (ಋಗ್ವೇದ.೧.೯.೭.) - ಕೊರತೆಗಳಿಲ್ಲದ ಪೂರ್ಣ ಆಯಸ್ಸನ್ನು ಧಾರಣೆ ಮಾಡಿಸು.

ಈ ಶಾರೀರಿಕ, ಮಾನಸಿಕ ಆರೋಗ್ಯಗಳ ಹಿಂದಿರುವುದು ಆಧ್ಯಾತ್ಮಿಕ ಆರೋಗ್ಯ. ಅಲ್ಲಿ ‘ಸಂಸ್ಕಾರ’ಗಳದೇ ಸಾಮ್ರಾಜ್ಯ. ಅವುಗಳ ಶುದ್ಧತೆಗಾಗಿ ಪ್ರಾರ್ಥನೆಗಳಿವೆ. ಪ್ರಾರ್ಥನೆಯೆಂದರೆ ಬರೀ ಬೇಡುವುದಲ್ಲ, ಅದರಂತೆ ನಡೆಯುವ ಸಂಕಲ್ಪ, ಆನುಷ್ಠಾನ. ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ ಭದ್ರಂ ಪಶ್ಯೇಮಾಕ್ಷಿಭಿರ್ಯಜತ್ರಾಃ| ಸ್ಥಿರೈರಂಗೈಸ್ತುಷ್ಟುವಾಗ್ ಮ್ ಸಸ್ತ ನೂಭಿಃ ವ್ಯಶೇಮ ದೇವಹಿತಂ ಯದಾಯುಃ|| (ಯಜುರ್ವೇದ.೨೫.೨೧.) - ಮಂಗಳಕರವಾದುದನ್ನೇ ಕಿವಿಗಳಿಂದ ಕೇಳೋಣ, ಕಲ್ಯಾಣಕರವಾದುವನ್ನೇ ಕಣ್ಣುಗಳಿಂದ ನೋಡೋಣ. ಸ್ಥಿರವಾದ ಅಂಗಾಗಗಳನ್ನು ಹೊಂದಿದವರಾಗಿ, ನಮ್ಮೀ ಶರೀರವನ್ನು ಸಂಪೂರ್ಣ ಆಯುವಿರುವವರೆಗೆ ಸಾಧನೆಗಾಗಿ ಬಳಸಿಕೊಳ್ಳೋಣ. ಜಹಿ ರಕ್ಷಾಂಸಿ ಸುಕ್ರತೋ|| (ಋಗ್ವೇದ.೬.೧೬.೨೯.) - ಸತ್ಕರ್ಮಶೀಲನೇ! ರಾಕ್ಷಸೀಗುಣಗಳನ್ನು ನಾಶಮಾಡು. ಉಲೂಕಯಾತುಂ ಶುಶುಲೂಕಯಾತುಂ ಜಹಿ ಶ್ವಯಾತುಂ ಉತ ಕೋಕಯಾತುಮ್| ಸುಪರ್ಣಯಾತುಂ ಉತ ಗೃಧ್ರಯಾತುಂ ದೃಶದೇವ ಪ್ರಮೃಣ ರಕ್ಷ ಇಂದ್ರ|| (ಅಥರ್ವವೇದ.೮.೪.೨೨.) - ಹೇ ಭಗವಂತ! ನನ್ನಲ್ಲಿರುವ ಗೂಬೆಯ ಗುಣ (ಮೋಹ), ತೋಳನ ಗುಣ (ಕ್ರೋಧ), ನಾಯಿಯ ನಡೆ (ಮತ್ಸರ), ಕೋಕಪಕ್ಷಿಯ ರೀತಿ (ಕಾಮ), ಗರುಡನ ಗುಣ (ಮದ), ಹದ್ದಿನ ನಡೆ (ಲೋಭ), ಇವುಗಳನ್ನು ಕಲ್ಲಿನಿಂದೆಂಬಂತೆ ತಿಕ್ಕಿ ತೀಡಿಬಿಡು. ನನ್ನಲ್ಲಿರುವ ಪಶುತ್ವವು ಇಲ್ಲವಾಗಲಿ. ನಮ್ಮೊಳಗಿನ ‘ಸಂಸ್ಕಾರ’ಗಳ ಶುದ್ಧಿಗಾಗಿ ಇಂತಹ ನೂರಾರು ಮಂತ್ರಗಳಿವೆ.


ಮೇಲಿನವೆಲ್ಲವೂ ಪ್ರಾರ್ಥನೆ, ಸಂಕಲ್ಪಗಳ ರೂಪದಲ್ಲಿದ್ದರೆ, ಇನ್ನೂ ಅನೇಕ ಮಂತ್ರಗಳು ಅವನ್ನು ಸಾಧಿಸಲು ಬೇಕಾದ ಅನುಷ್ಠಾನಪರವಾದ ಮಾತುಗಳನ್ನೂ ನೇರವಾಗಿಯೇ ಆಡಿವೆ. ಅಕ್ಷೈರ್ಮಾ ದೀವ್ಯಃ|| (ಋಗ್ವೇದ.೧೦.೩೪.೧೩.) - ದಾಳ ಮೊದಲಾದವುಗಳಿಂದ ಜೂಜಾಡಬೇಡ. ಅನಾಗೋ ಹತ್ಯಾ ವೈ ಭೀಮಾ|| (ಅಥರ್ವವೇದ.೧೦.೧.೨೯.) - ನಿಷ್ಪಾಪ ಪ್ರಾಣಿಗಳನ್ನು ಕೊಲ್ಲುವುದು ಭಯಾನಕವು. ಅನೃಣಾಃ ಸ್ಯಾಮ|| (ಋಗ್ವೇದ.೬.೧೧೭.೩.) - ಸಾಲವಿಲ್ಲದವರಾಗೋಣ. ಉಪಸರ್ಪ ಮಾತರಂ ಭೂಮಿಮೇತಾಮ್|| (ಋಗ್ವೇದ.೧೦.೧೮.) - ಈ ತಾಯಿನೆಲದ ಬಳಿ ಸಾರು. ಕೇವಲಾಘೋ ಭವತಿ ಕೇವಲಾದೀ|| (ಋಗ್ವೇದ.೧೦.೧೧೭.೬.) - ಒಬ್ಬನೇ ತಿನ್ನುವವನು ಶುದ್ಧ ಪಾಪಿಯೆನಿಸುತ್ತಾನೆ. ಮನುರ್ಭವ|| (ಋಗ್ವೇದ.೧೦.೫೩.೬.) - ಮನನಶೀಲನಾಗು. ಮರ್ಯಾದೇ ಪುತ್ರಮಾಧೇಹಿ|| (ಅಥರ್ವವೇದ.೬.೮೧.೨.) - ಮಿತಿಯಲ್ಲಿ ಸಂತಾನವನ್ನು ಹೊಂದಿರಿ. ಮಾ ಕ್ರುಧಃ|| (ಅಥರ್ವವೇದ.೧೧.೨.೨೦.) - ಕೋಪಿಸಿಕೊಳ್ಳಬೇಡ. ಮಾ ನಿಂದತಃ|| (ಋಗ್ವೇದ.೪.೫.೨.) - ನಿಂದೆಯನ್ನು ಮಾಡಬೇಡ. ಮಾ ರುವಣ್ಯಃ|| (ಋಗ್ವೇದ.೮.೯೬.೧೨.) - ಅಳಲೇಬೇಡ. ಇಂತಹ ಉದಾಹರಣೆಗಳನ್ನು ನೂರಾರು ಕೊಡಬಹುದು.


ಒಂದೊಂದು ಮಾರ್ಗದರ್ಶನವೂ ಎಷ್ಟು ಗಂಭೀರವಾಗಿದೆ ಮತ್ತು ಅವುಗಳ ಪಾಲನೆಯಿಂದ ಇಂದು ಜಗತ್ತನ್ನು, ಸಮಾಜವನ್ನು, ಪರಿವಾರಗಳನ್ನು, ವ್ಯಕ್ತಿಗಳನ್ನು ಕಾಡುತ್ತಿರುವ ಎಷ್ಟೋ ಸಮಸ್ಯೆಗಳು ಮೂಲದಲ್ಲಿಯೇ ಇಲ್ಲವಾಗುತ್ತವೆ ಎಂಬುದನ್ನು ಯಾರು ಬೇಕಾದರೂ ಕಾಣಬಹುದಾಗಿದೆ. ಈಗಲಾದರೂ ಯಾವುದೇ ಸಮಸ್ಯೆಗೂ ವೇದಗಳಲ್ಲಿ ಪರಿಹಾರವಿದೆ ಎಂಬುದನ್ನು ಒಪ್ಪುತ್ತೀರಿ ತಾನೇ!!!


- ವೇದಾಧ್ಯಾಯೀ ಸುಧಾಕರ ಶರ್ಮಾ