September 12, 2021

ಹಲ್ಲು ಮತ್ತು ನಾಲಿಗೆ

  ಒಂದು ಸಲ ನಾಲಿಗೆ ಮತ್ತು ಹಲ್ಲು ಗಳಿಗೆ ಜಗಳ ಆಗುತ್ತೆ ನಾನು ಹೆಚ್ಚು ಅಂಥ ಹಲ್ಲು ಆದರೆ ತಾನು ಹೆಚ್ಚು ಅಂಥ ನಾಲಿಗೆ ಹೀಗೆ ಇಬ್ಬರಿಗೂ ಜಗಳ ಆಗ ಬೇಕಾದರೆ ತುಟಿಯು ಒಣಗಿದೆ ಇಗ ನಾಲಿಗೆ ಬಂದು ಅದನ್ನು ಒದ್ದೆ ಮಾಡಿ ಹೋಗಬೇಕು ಅದು ನಾಲಿಗೆ ಡ್ಯುಟಿ ಹಾಗೆ ನಾಲಿಗೆ ಹೊರಗೆ ಬಂದಾಗ ಹಲ್ಲುಗಳು ಅದನ್ನು ಗಟ್ಟಿಯಾಗಿ ಹಿಡಿದು ಇಗ ಹೇಳು ನೀನು ಹೆಚ್ಚೊ ನಾ ಹೆಚ್ಚೊ ಅಂಥ ಕೇಳುತ್ತೆ ನಾಲಿಗೆಗೆ ಪಾಪ ನೋವಾಗುತ್ತಿರುತ್ತೆ ಮತ್ತೆ ಹೇಳು ನೀ ದೊಡವನೊ ನಾವು ಎಂದು ಇನ್ನೂ ಬಿಗಿ ಮಾಡಿದವು ನಾಲಿಗೆಗೆ ಉರಿ ಹೆಚ್ಚಾಯಿತು ಗಾಯ ಆಯ್ತು ರಕ್ತ ಬಂತು ಹಲ್ಲುಗಳು ಕೇಳಿದವು ಮರ್ಯಾದೆ ಇಂದ ಒಪ್ಪುಕೊತ್ತಿಯೋ ಇಲ್ವೊ ಒಪ್ಪಿಕೊಳ್ಳದೆ ಇದ್ದರೆ ಹೊರಗಿನ ನಾಲಿಗೆ ಹೊರಗೆ ಒಳಗಿನ ನಾಲಿಗೆ ಒಳಗೆ ದಮ್ಮಕಿ ಹಾಕಿದ್ವಂತೆ ಹಲ್ಲುಗಳು ಬೇರೆ ದಾರಿ ಇಲ್ಲದೆ ಶರಣಾಯಿತಂತೆ ಹಲ್ಲುಗಳು ನಾಲಿಗೆಯನ್ನು ಬಿಟ್ವು  ಬದುಕಿದೆಯಾ ಬಡ ಜೀವವೆ ಎಂದು ಒಳಗೆ ಹೋಯಿತು . ಅದಕ್ಕೆ ನೋವಾಗಿತ್ತು ಅವಮಾನ ಆಗಿತ್ತು ಯಾರು ದೊಡ್ಡವರು ಯಾರು ಸಣ್ಣವರು ಅನ್ನುವುದು ಇಗ ತಿರ್ಮಾನ ಆಗಬೇಕಾ ನಾಲಿಗೆಗೆ ಬಹಳ ಅವಮಾನ ಆಗಿತ್ತು ಗಾಯಗುಣ ಆಗುವವರೆಗೆ ಸುಮ್ಮನೆ ಇತ್ತಂತೆ ಅದು ಲೆಕ್ಕಚಾರ ಹಾಕಿ ಸಂದರ್ಭಕ್ಕೆ ಕಾಯುತ್ತಿತ್ತು ಒಂದು ಸಂದರ್ಭ ಬಂತು ಏನೆಂದರೆ ಎದುರು ಗಡೆಯಿಂದ ಒಬ್ಬ ದಾಂಡಿಗ ಬರುತ್ತಿದ್ದ ಗಟ್ಟಿ ಮಸ್ತಾದ ಆಳು ಎಲ್ಲಾ ನರ ನಾಡಿ ಕಾಣುತ್ತಿತ್ತು ಅವರ ದೇಹದ ಹಾಗೆ ಇದ್ದ ಒಬ್ಬ ಮನುಷ್ಯ ಬಹಳ ಕೋಪಿಷ್ಠ ಅವನು ಇಗ ನಾಲಿಗೆಗೆ ಒಳ್ಳೆಯ ಅವಕಾಶ ಸಿಕ್ಕಿದೆ ಕೆಟ್ಟ ಶಬ್ದ ದಿಂದ ಅವನನ್ನು ಅವಹೇಳನ ಮಾಡಿತು ಅವನಿಗೆ ಕೋಪ ಬಂತು ಒಂದು ಗುದ್ದಿದ ಆಗ ಹಲ್ಲುಗಳಿಗೆ ಪೆಟ್ಟು ಬಿದ್ದು ಕೆಲವು ಹಲ್ಲುಗಳು ಉದುರಿ ರಕ್ತ ಬಂದಿದೆ.ಕೆಲವು ಮುರಿದು ಬಿದ್ದಿದೆ ಆಗ ನಾಲಿಗೆ ಮೆತ್ತಗೆ ಹೊರಗೆ ಬಂದು ಇಗ ಹೇಳಿ ಯಾರು ದೊಡ್ಡವರು ಅಂಥ ಎಂದು ಕೇಳಿತು ಆದರೆ ಅವುಗಳು ಹೇಳುವ ಸ್ಥಿತಿಯಲ್ಲಿ ಇರಲಿಲ್ಲ . ಇದನ್ನು ಹಂಚಿಕೊಂಡ ಉದ್ಧೇಶ ಏನು ಅಂದರೆ ಕೆಟ್ಟ ಮಾತಿನಿಂದ ಆಗುವ ಪರಿಣಾಮ ಏನು ನಾಲಿಗೆಯ ಮಾತಿನಿಂದ ತಲೆ ಒಡಿಬಹುದು ಕಾಲು ಮುರಿಯ ಬಹುದು ಪ್ರಾಣ ಕೂಡ ಹೋಗಬಹುದು

ಶ್ಲೋಕ ( ಸುಭಾಷೀತ) 

ಜಿಹ್ವಾಗ್ರೇ ವಸತೇ ಲಕ್ಷ್ಮೀ
ಜಿಹ್ವಾಗ್ರೇ ಮಿತ್ರ ಬಂಧವಹಃ
ಜಿಹ್ವಾಗ್ರೇ ಬಂಧನಂ ಪ್ರಾಪ್ತನಂ
ಜಿಹ್ವಾಗ್ರೇ ಮರಣಂ ಧ್ರುವಂ

ನೀನು ಆಡೋ ಮಾತಿನಿಂದ ಲಕ್ಷ್ಮೀ ಒಲಿದು ಬರಬಹುದು ನಾಲಿಗೆಯ ತುದಿಯಲ್ಲಿ ಸಂಪತ್ತಿನ ಆಗಮನ ಇದೆ ನಾವು ಒಳ್ಳೆಯ ಮಾತುಗಳನ್ನು  ಆಡಿದರೆ ಸಂಪತ್ತು ಬರುತ್ತೆ

ಜಿಹ್ವಾಗ್ರೇ ಮಿತ್ರ ಬಂಧಾವಃ
ಒಳ್ಳೆಯ ಮಾತಿನಿಂದ ಮಿತ್ರರನ್ನು ಸಂಪಾದನೆ ಮಾಡಿಕೊಳ್ಳ ಬಹುದು ತಾಯಿ ತಂದೆ ಎಲ್ಲಾ ಅಣ್ಣ ತಮ್ಮಂದಿರನ್ನು ಚೆನ್ನಾಗಿ ಇಟ್ಟುಕೊಬೇಕು ಅಂದರೆ ಬಾಂದತ್ವ ಚೆನ್ನಾಗಿ ಉಳಿಯಬೇಕು ಅಂದರೆ ಅದಕ್ಕೆ ನಾಲಿಗೆನೆ ಕಾರಣ ನಾಲಿಗೆ ಚೆನ್ನಾಗಿದ್ದರೆ ಬದುಕು ಚೆನ್ನಾಗಿರುತ್ತೆ

ಜಿಹ್ವಾಗ್ರೇ ಮರಣಂ ಧ್ರುವಂ
ಏನಾದರೂ ಕೆಟ್ಟ ಮಾತು ಆಡಿದರೆ ಅದರ  ಪರಿಣಾಮ ಸೆರಮನೆಯು ಆಗಬಹುದು ನಾಲಿಗೆ ತುದಿಯಿಂದ ಸಾವನ್ನು ತಂದುಕೊಬಹುದು ಕೆಟ್ಟ ಮಾತಿನಿಂದ ಜೀವನವೆಲ್ಲಾ ಹಾಳಗ ಬಹುದು  ಹಾಗಾಗಿ ಮಾತಿನಿಂದ ಎಷ್ಟೇಲ್ಲಾ ಸಾಧನೆಗಳಾಗುತ್ತೆ  ವಿದ್ಯಾಭ್ಯಾಸ ಅಂದರೆ ಇಂದ್ರಿಯ ಮನಸ್ಸು  ಶರೀರ ಮಾತು ಇವನ್ನೇಲ್ಲಾ ಹೇಗೆ ಬಳಸಬೇಕು ಅನ್ನುವುದು ಕಲಿಯಬೇಕು.

No comments:

Post a Comment

If you have any doubts. please let me know...