ಕರ್ಮಣಾ ರಹಿತೋ ಧರ್ಮೋ ಭೂತಲೇ ನ ಸ್ಥಿರೋ ಭವೇತ್
#ಆಚರಣೆ_ಇಲ್ಲದ_ಧರ್ಮ_ಭೂಮಿಯಲ್ಲಿ_ನೆಲೆ_ನಿಲ್ಲಲಾರದು
ಹಿಂದೆ ಕಾಂಚೀಪುರ ಎನ್ನುವ ಪಟ್ಟಣದಲ್ಲಿ ಒಬ್ಬ ಜ್ಯೋತಿಷಿಯಿದ್ದನು. ಅವನು ಆದ್ಯಾದಲ್ಲಿ ಆಸಕ್ತನಾದ ವೇದವೇದಾಂಗಗಳಲ್ಲಿ ಅತ್ಯಾಸಕ್ತಿ ಹೊಂದಿದ ಸತ್ಯದತ್ತನೆನ್ನುವ ರಾಜನಿಗೆ ಮಂತ್ರಿಯಾಗಿದ್ದನು. ಒಂದು ದಿನ ಆ ಮಂತ್ರಿಯಾಗಿದ್ದ ಜ್ಯೋತಿಷಿಯು ಸತ್ಯದತ್ತನನ್ನು ಕುರಿತು ರಾಜನೇ, ಇದು ಪುಷ್ಯ ನಕ್ಷತ್ರದಿಂದ ಕೂಡಿರುವ ಅಭಿಜಿನ್ ಮುಹೂರ್ತವಾಗಿದೆ. ಈ ಶುಭ ಯೋಗದಲ್ಲಿ ಅನೇಕ ವ್ಯಾಪಾರ ನಡೆಯಲು ಅನುಕೂಲವಾಗುವಂತೆ ಒಂದು ಜಾತ್ರೆಯನ್ನು ನಿಶ್ಚಯಿಸು ಎನ್ನುತ್ತಾನೆ. ಇದನ್ನು ಕೇಳಿದ ಮಹಾರಾಜನು ಒಂದು ಜಾತ್ರೆಯನ್ನು ನಿಗದಿಪಡಿಸಿ ಊರಿನಲ್ಲಿ ಎಲ್ಲಾ ಕಡೆ ಡಂಗುರ ಹೊಡೆಸುತ್ತಾನೆ ಮತ್ತು ಆಜ್ಞಾಪಿಸುತ್ತಾನೆ. ಈ ಜಾತ್ರೆಯಲ್ಲಿ ಯಾವ ವಸ್ತುವು ವೈಶ್ಯರಿಂದ ಮಾರಾಟವಾಗುವುದಿಲ್ಲವೋ ಅಥವಾ ಯಾರೂ ಕ್ರಯಕ್ಕೆ ತೆಗೆದುಕೊಳ್ಳಲಾರದೇ ಇರುವಂತಹ ವಸ್ತುಗಳನ್ನು ತಾನೇ ತೆಗೆದುಕೊಳ್ಳುವುದಾಗಿಯೂ ಡಂಗುರ ಹೊಡೆಸುತ್ತಾನೆ. ಇದನ್ನು ಕೇಳಿಕೊಂಡ ಊರಿನ ಜನರು ತಮ್ಮಲ್ಲಿರುವ ಅನೇಕ ವಿಧದ ವಸ್ತುಗಳನ್ನು ತೆಗೆದುಕೊಂಡು ಬಂದರು. ಅದನ್ನು ವೈಶ್ಯರು ತೆಗೆದು ಕೊಳ್ಳುತ್ತಾರೆ. ಆಗ ಅದು ವಸ್ತುಶಃ ದೊಡ್ಡ ಜಾತ್ರೆಯೇ ಆಗುತ್ತದೆ.
ಹೀಗಿರುತ್ತಾ, ಅದೇ ಊರಿನಲ್ಲಿ ಒಬ್ಬ ಕಮ್ಮಾರನಿದ್ದ, ಆತನಿಗೆ ಒಂದು ಆಲೋಚನೆ ಹೊಳೆಯಿತು. ತಾನು ಹುಟ್ಟಿನಿಂದಾರಭ್ಯ ಬಡತನ ಅನುಭವಿಸಿದವನು ಅದನ್ನೇ ಉಪಯೋಗಿಸಬೇಕು ಎಂದು ಚಿಂತಿಸುತ್ತಾ, ಒಂದು ಗೊಂಬೆಯಲ್ಲಿ ಬಡತನವನ್ನು ಬಿಂಬಿಸಿ ಅದನ್ನು ಜಾತ್ರೆಗೆ ತಂದು ಅದಕ್ಕೆ ನೂರು ವರಹಗಳನ್ನು ನಿಗದಿ ಪಡಿಸಿ ಜಾತ್ರೆಯಲ್ಲಿಡುತ್ತಾನೆ. ಸಹಜವಾಗಿ ಆ ಗೊಂಬೆಗೆ ಆ ಮೌಲ್ಯ ಜಾಸ್ತಿಯಗಿತ್ತು. ಯಾರೂ ಸಹ ಆ ಗೊಂಬೆಯನ್ನು ಖರೀದಿಸಲೇ ಇಲ್ಲ. ಆಗ ರಾಜನು ತಾನು ಹೊಡೆಸಿದ ಡಂಗುರದ ನಿಯಮದಂತೆ ಆ ಲೋಹದ ಗೊಂಬೆಯನ್ನು ಖರೀದಿಸಿ ಅರಮನೆಗೆ ಕೊಂಡೊಯ್ಯುತ್ತಾನೆ. ಅರಮನೆಯಲ್ಲಿ ಅದನ್ನು ಕೋಶಗಾರದಲ್ಲಿ ಇಡಿಸುತ್ತಾನೆ. ಕತ್ತಲು ಕವಿಯುತ್ತಾ ಇದೆ, ಇನ್ನೇನು ಎಲ್ಲೆಡೆ ಕತ್ತಲಾವರಿಸಿ ಲಾಂದ್ರದ ಬೆಳಕು ಕಾಣಿಸಬೇಕು ಆ ಸಮಯದಲ್ಲಿ ಕರ್ಮಪುರುಷ, ಧರ್ಮಪುರುಷ ಮತ್ತು ಲಕ್ಷ್ಮೀದೇವಿ ಹೊರಟು ಹೋಗುತ್ತಾರೆ. ರಾಜನು ನೋಡುತ್ತಿರುವಂತೆಯೇ ಹೊರಟು ಹೋಗುತ್ತಾರೆ. ಇವರೆಲ್ಲ ಹೋದ ಬಳಿಕ ಸತ್ಯಪುರುಷನು ರಾಜನ ಬಳಿ ಬರುತ್ತಾನೆ. ಬಂದು ಹೀಗೆ ಹೇಳುತ್ತಾನೆ.
ದರಿದ್ರೋ ಯತ್ರ ಭೂಪಾಲ ತತ್ರ ಕರ್ಮಪರೋ ನಹಿ |
ಕರ್ಮಣಾ ರಹಿತೋ ಧರ್ಮೋ ಭೂತಲೇ ನ ಸ್ಥಿರೋ ಭವೇತ್ ||
ಬಡತನವಿರುವಲ್ಲಿ ಕರ್ಮಪುರುಷನಿರುವುದಿಲ್ಲ. ಕರ್ಮವಿರದೇ ಈ ಭೂಮಿಯಲ್ಲಿ ಧರ್ಮವು ನೆಲೆನಿಲ್ಲುವುದಿಲ್ಲ. ಧರ್ಮ ಎನ್ನುವುದು ಆಚರಣೆಗೆ ಇರುವುದೇ ಹೊರತು ಅನುಭವಿಸುವುದಕ್ಕಲ್ಲ ಕರ್ಮದಿಂದ ಧರ್ಮಾಚಾರಣೆ. ಆದುದರಿಂದ ಕರ್ಮ ಮತ್ತು ಧರ್ಮ ಇದ್ದರೇನೇ ದೇಶ ಸುಭಿಕ್ಷ.
ಧರ್ಮೇಣ ರಹಿತಾ ಲಕ್ಷ್ಮೀರ್ನ ಶೋಭೇತ ಕದಾಚನ |
ಅಹಂ ಲಕ್ಷ್ಮ್ಯಾವಿಹೀನಶ್ಚ ನ ತಿಷ್ಠಾಮಿ ಕದಾಚನ ||
ಕರ್ಮವಿಲ್ಲದ ಧರ್ಮ ಹೇಗೆ ನೆಲೆನಿಲ್ಲುವುದಿಲ್ಲವೋ ದರ್ಮಕರ್ಮಗಳಿಲ್ಲದಲ್ಲಿ ಸಂಪತ್ತು ಇರುವುದಿಲ್ಲ. ಧರ್ಮಅದಿಂದ ಅಥವಾ ನ್ಯಾಯಯುತವಾಗಿ ಎಲ್ಲಿ ಕೆಲಸಗಳು ನಡೆಯುತ್ತವೆಯೋ ಅಲ್ಲಿ ಸಹಜವಾಗಿ ಸಂಪತ್ತು ನೆಲೆಸುತ್ತದೆ ಮತ್ತು ಅದು ಅಧಿಕವಾಗುತ್ತದೆ. ಧರ್ಮವಿಲ್ಲದ ಕಡೆಗೆ ಎಷ್ಟೇ ಸಂಪತ್ತಿದ್ದರೂ ಅದು ಶೋಭಿಸುವುದಿಲ್ಲ. ಸಂಪತ್ತು, ಧರ್ಮ ಮತ್ತು ಕರ್ಮಗಳಿಲ್ಲದಲ್ಲಿ ಸತ್ಯ ಸಹ ಇರುವುದಿಲ್ಲ ಆದುದರಿಂದ ಸತ್ಯಪರನಾದ ನಾನೂ ನಿಲ್ಲಲಾರೆ ಎಂದು ಸತ್ಯಪುರುಷನು ಹೇಳುತ್ತಾನೆ. ’ನ ತ್ಯಾಜ್ಯೋ ಹಿ ಮಯಾ ದೇವ ಭವಾನ್ ಕಿಂ ಗಂತು ಮರ್ಹತಿ’ ಎನ್ನುವುದಾಗಿ ರಾಜ ಸತ್ಯಪುರುಷನ ಕೈ ಹಿಡಿದು ಅಳುತ್ತಾ ಹೇಳುತ್ತಾನೆ. ನನಗೆ ಲಕ್ಷ್ಮಿಯೇ ತೊರೆದು ಸಂಪತ್ತು ನಾಶವಾದರೂ ನಾನು ಮರುಕ ಪಡಲಾರೆ ಆದರೆ ನನಗೆ ಎಂತಹ ಬಡತನ ಪ್ರಾಪ್ತವಾದರೂ ನಾನು ಧೃತಿಗೆಡದೇ ಇರುವುದು ನನ್ನ ಸತ್ಯವಚನಗಳಿಂದ ನನಗೆ ನೀನು ಬೇಕು. ನೀನು ತೊರೆದುಹೋಗಬೇಡ ಎಂದು ಅಂಗಲಾಚುತ್ತಾನೆ. ನಿನ್ನನ್ನು ಬಿಟ್ಟು ನಾನಿರಲಾರೆ ನನಗೆ ನೀನು ಬಿಟ್ಟಿರುವುದು ನ್ಯಾಯವೆನ್ನಿಸುವುದಿಲ್ಲ ಎನ್ನುವಾಗ ಸತ್ಯಪುರುಷನಿಗೆ ಕರುಣೆ ಉಂಟಾಗಿ ಹಿಂತಿರುಗಿ ರಾಜನ ಬಳಿ ಬರುತ್ತಾನೆ. ಸತ್ಯ ಪುರುಷ ಬಂದ ತಕ್ಷಣವೇ ಲಕ್ಷ್ಮೀ ಸಹ ಹಿಂದಕ್ಕೆ ಬರುವುದಾಗಿ ಹೇಳುತ್ತಾಳೆ. ಆಗ ರಾಜ ಅವಳಿಗೆ ಹೇಳುತ್ತಾನೆ ತಾಯೀ ನೀನು ಸದಾ ಚಂಚಲೆ ಎಂದು ಹೆಸರಾದವಳು. ನೀನು ನನ್ನಲ್ಲಿ ಚಂಚಲೆಯಾಗದೇ ಸ್ಥಿರವಾಗಿ ನೆಲೆಸುವ ಮನಸ್ಸಿನಿಂದ ಬಾ ಎನ್ನುತ್ತಾನೆ. ಲಕ್ಷ್ಮೀ ಬಂದು ಸ್ಥಿರವಾಗಿ ನೆಲೆಸುತ್ತಾಳೆ. ಭೂತಲೇ ನ ಸ್ಥಿರೋ ಭವೇತ್

ಕರ್ಮವಿಲ್ಲದ ಧರ್ಮ ಹೇಗೆ ನೆಲೆನಿಲ್ಲುವುದಿಲ್ಲವೋ ದರ್ಮಕರ್ಮಗಳಿಲ್ಲದಲ್ಲಿ ಸಂಪತ್ತು ಇರುವುದಿಲ್ಲ. ಧರ್ಮಅದಿಂದ ಅಥವಾ ನ್ಯಾಯಯುತವಾಗಿ ಎಲ್ಲಿ ಕೆಲಸಗಳು ನಡೆಯುತ್ತವೆಯೋ ಅಲ್ಲಿ ಸಹಜವಾಗಿ ಸಂಪತ್ತು ನೆಲೆಸುತ್ತದೆ ಮತ್ತು ಅದು ಅಧಿಕವಾಗುತ್ತದೆ. ಧರ್ಮವಿಲ್ಲದ ಕಡೆಗೆ ಎಷ್ಟೇ ಸಂಪತ್ತಿದ್ದರೂ ಅದು ಶೋಭಿಸುವುದಿಲ್ಲ. ಸಂಪತ್ತು, ಧರ್ಮ ಮತ್ತು ಕರ್ಮಗಳಿಲ್ಲದಲ್ಲಿ ಸತ್ಯ ಸಹ ಇರುವುದಿಲ್ಲ ಆದುದರಿಂದ ಸತ್ಯಪರನಾದ ನಾನೂ ನಿಲ್ಲಲಾರೆ ಎಂದು ಸತ್ಯಪುರುಷನು ಹೇಳುತ್ತಾನೆ. ’ನ ತ್ಯಾಜ್ಯೋ ಹಿ ಮಯಾ ದೇವ ಭವಾನ್ ಕಿಂ ಗಂತು ಮರ್ಹತಿ’ ಎನ್ನುವುದಾಗಿ ರಾಜ ಸತ್ಯಪುರುಷನ ಕೈ ಹಿಡಿದು ಅಳುತ್ತಾ ಹೇಳುತ್ತಾನೆ. ನನಗೆ ಲಕ್ಷ್ಮಿಯೇ ತೊರೆದು ಸಂಪತ್ತು ನಾಶವಾದರೂ ನಾನು ಮರುಕ ಪಡಲಾರೆ ಆದರೆ ನನಗೆ ಎಂತಹ ಬಡತನ ಪ್ರಾಪ್ತವಾದರೂ ನಾನು ಧೃತಿಗೆಡದೇ ಇರುವುದು ನನ್ನ ಸತ್ಯವಚನಗಳಿಂದ ನನಗೆ ನೀನು ಬೇಕು. ನೀನು ತೊರೆದುಹೋಗಬೇಡ ಎಂದು ಅಂಗಲಾಚುತ್ತಾನೆ. ನಿನ್ನನ್ನು ಬಿಟ್ಟು ನಾನಿರಲಾರೆ ನನಗೆ ನೀನು ಬಿಟ್ಟಿರುವುದು ನ್ಯಾಯವೆನ್ನಿಸುವುದಿಲ್ಲ ಎನ್ನುವಾಗ ಸತ್ಯಪುರುಷನಿಗೆ ಕರುಣೆ ಉಂಟಾಗಿ ಹಿಂತಿರುಗಿ ರಾಜನ ಬಳಿ ಬರುತ್ತಾನೆ. ಸತ್ಯ ಪುರುಷ ಬಂದ ತಕ್ಷಣವೇ ಲಕ್ಷ್ಮೀ ಸಹ ಹಿಂದಕ್ಕೆ ಬರುವುದಾಗಿ ಹೇಳುತ್ತಾಳೆ. ಆಗ ರಾಜ ಅವಳಿಗೆ ಹೇಳುತ್ತಾನೆ ತಾಯೀ ನೀನು ಸದಾ ಚಂಚಲೆ ಎಂದು ಹೆಸರಾದವಳು. ನೀನು ನನ್ನಲ್ಲಿ ಚಂಚಲೆಯಾಗದೇ ಸ್ಥಿರವಾಗಿ ನೆಲೆಸುವ ಮನಸ್ಸಿನಿಂದ ಬಾ ಎನ್ನುತ್ತಾನೆ. ಲಕ್ಷ್ಮೀ ಬಂದು ಸ್ಥಿರವಾಗಿ ನೆಲೆಸುತ್ತಾಳೆ.
sadyOjAtharu
No comments:
Post a Comment
If you have any doubts. please let me know...