September 27, 2021

ಒಬ್ಬರು ನಿವೃತ್ತ ಶಿಕ್ಷಕಇನ್ನೋರ್ವ ಜೀವವಿಮಾ ಕಂಪನಿಯ ನೌಕರ..

*ಒಂದು ನೀತಿ ಕಥೆ.....✍🏼*

ಒಂದಾನೊಂದು ಕಾಲದಲ್ಲಿ ಇಬ್ಬರು ನೆರೆಹೊರೆಯಲ್ಲಿ ವಾಸವಾಗಿದ್ದರು..
ಒಬ್ಬರು ನಿವೃತ್ತ ಶಿಕ್ಷಕ
ಇನ್ನೋರ್ವ ಜೀವವಿಮಾ ಕಂಪನಿಯ ನೌಕರ..

ಜೀವ ವಿಮಾ ಕಂಪನಿ ನೌಕರನಿಗೆ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಒಲವಿತ್ತ.. ಇವರಿಬ್ಬರೂ ತಮ್ಮ ಮನೆಯ ಹೂದೊಟದಲ್ಲಿ ಸಸಿಗಳನ್ನು ನೆಟ್ಟರು..

ನಿವೃತ್ತ ಶಿಕ್ಷಕ ತನ್ನ ಸಸಿಗಳಿಗೆ ಸ್ವಲ್ಪ ಪ್ರಮಾಣದಲ್ಲಿ ನೀರು ಗೊಬ್ಬರವನ್ನು ನೀಡುತ್ತಿದ್ದ . ಅವುಗಳ ಬಗ್ಗೆ ಹೆಚ್ಚಿನ ಗಮನ ಸಹ ನೀಡುತ್ತಿರಲಿಲ್ಲ..
 *ಆದರೆ* ಜೀವ ವಿಮಾ ನೌಕರ ತನ್ನ ಸಸಿಗಳಿಗೆ ಯಥೇಚ್ಛವಾಗಿ ನೀರು ಗೊಬ್ಬರವನ್ನು ನೀಡಿ ಅವುಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದ..

ನಿವೃತ್ತ ಶಿಕ್ಷಕನ ಸಸ್ಯಗಳು ಸಾಧಾರಣವಾಗಿ, ಪರವಾಗಿಲ್ಲ ಅನ್ನುವ ರೀತಿಯಲ್ಲಿ ಬೇಳೆದಿದ್ದವು..
 *ಆದರೆ* ಜೀವ ವಿಮಾ ನೌಕರನ ಸಸ್ಯಗಳು ಸಮೃದ್ಧವಾಗಿ, ಹಚ್ಚು ಹಸಿರಾಗಿ ಬೇಳೆದಿದ್ದವು..

ಒಂದು ರಾತ್ರಿ ಚಂಡಮಾರುತದ ಪರಿಣಾಮವಾಗಿ ಬಾರಿ ಮಳೆ ಮತ್ತು ಬಿರುಗಾಳಿ ಯ ಉಂಟಾಯಿತು.. ಮರುದಿನ ಬೆಳಿಗ್ಗೆ ಇಬ್ಬರೂ ತಮ್ಮ ತಮ್ಮ ಸಸಿಗಳಿಗೆ ಆದ ಹಾನಿ ನೋಡಲು ತಮ್ಮ ಹೂದೋಟಕ್ಕೆ ಹೋದರು..

ಜೀವ ವಿಮಾ ನೌಕರನ ಸಸ್ಯಗಳು ಬೇರು ಸಮೇತ ಹಾರಿ ಬಿದ್ದು ಸಂಪೂರ್ಣವಾಗಿ ನಾಶವಾಗಿದ್ದವು..
 *ಆದರೆ* ನಿವೃತ್ತ ಶಿಕ್ಷಕಕನ ಸಸ್ಯಗಳು ದೃಡವಾಗಿ ಭದ್ರವಾಗಿ ನಿಂತಿದ್ದವು...

ಆಶ್ಚರ್ಯ ಚಕಿತನಾಗಿ ಜೀವ ವಿಮಾ ನೌಕರ ನಿವೃತ್ತ ಶಿಕ್ಷಕನ ಬಳಿ ಹೋಗಿ ಕೇಳಿದ,
"ನಾವಿಬ್ಬರು ಒಟ್ಟಾಗಿ ಸಸಿಗಳನ್ನು ನೆಟ್ಟಿದ್ದೆವು, ನಿಮಗಿಂತ ಹೆಚ್ಚಾಗಿ ನೀರು ಗೊಬ್ಬರವನ್ನೂ ನಾ ನೀಡಿ ಹೆಚ್ಚಿನ ಗಮನ ಹರಿಸಿದೆ, ಆದರೂ ನನ್ನ ಸಸ್ಯಗಳು ನಾಶವಾದವು, ನಿಮ್ಮ ಸಸ್ಯಗಳು ದೃಡವಾಗಿ ನಿಂತಿವೆ ಯಾಕೆ"...?

ಆಗ ಶಿಕ್ಷಕ ಹೇಳಿದ
"ನೀನು ಸಸಿಗಳಿಗೆ ಹೆಚ್ಚು ನೀರು ಗೊಬ್ಬರವನ್ನು ನೀಡಿದೆ, ಹೆಚ್ಚು ಕಾಳಜಿವಹಿಸಿದೆ ಆ ಕಾರಣ ಆ ಸಸಿಗಳಿಗೆ ಯಾವುದೇ ಜವಾಬ್ದಾರಿ ಸ್ವಪ್ರಯತ್ನದ ಅರಿವಾಗಲಿಲ್ಲ.. ಆದರೆ ನಾನು ಸ್ವಲ್ಪ ಪ್ರಮಾಣದಲ್ಲಿ ನೀರು ಗೊಬ್ಬರವನ್ನು ನೀಡಿದೆ, ಆ ಬೇರುಗಳು ನೀರಿನ ಹುಡುಕಾಟದಲ್ಲಿ ಹೆಚ್ಚಿನ ಆಳಕ್ಕೆ ಮತ್ತು ಅಗಲವಾಗಿ ಹುಡುಕಾಟದಲ್ಲಿ ತಮ್ಮ ಸ್ಥಾನ ಭದ್ರ ಮಾಡಿಕೊಂಡವು. ಅದಕ್ಕಾಗಿ ಅವು ಯಾವುದೆ ಬಿರುಗಾಳಿ, ಮಳೆಗೆ ಬಗ್ಗದೆ ದೃಡವಾಗಿ ನಿಂತಿವು"....!

*ಈ ಕಥೆಯ ಮೌಲ್ಯ ಇಷ್ಟೆ*
ಪಾಲಕರು/ಶಿಕ್ಷಕರಿಗೆ ಮಕ್ಕಳು ಸಸಿಗಳಿದ್ದ  ಹಾಗೆ.. ಎಲ್ಲವನ್ನೂ ಅವರಿಗೆ ಸುಲಭವಾಗಿ ನೀಡಿದರೆ ಅವರಿಗೆ ಪರಿಶ್ರಮದ ಬೆಲೆ ಗೊತ್ತಾಗುವುದಿಲ್ಲ.. ಅವರು ನಿರ್ವಹಿಸಬೇಕಾದ ಕಾಯಕಕ್ಕೆ ಗೌರವ, ಬೆಲೆ ನೀಡುವುದಿಲ್ಲ.. ಅವರಿಗೆ ಎಲ್ಲವನ್ನು ಸುಲಭವಾಗಿ ನೀಡುವ ಬದಲು ಮಾರ್ಗದರ್ಶನ ಮಾಡೋಣಾ.. ಸಲಹೆ ನೀಡೊಣಾ.. ಅವರಿಗೆ ನಡೆಯುವದನ್ನು ಕಲಿಸೋಣ...!

No comments:

Post a Comment

If you have any doubts. please let me know...