September 6, 2021
ವಿಜ್ಞಾನವಿಲ್ಲದ ಧರ್ಮ ಕುರುಡು
ಅನೇಕ ದಶಕಗಳ ಹಿಂದೆ ಪ್ರಸಿದ್ಧ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೀನ್ ಹೇಳಿದ ಮಾತು- "ವಿಜ್ಞಾನವಿಲ್ಲದ ಧರ್ಮ ಕುರುಡು" ಧರ್ಮವಿಲ್ಲದ ವಿಜ್ಞಾನ ಕುಂಟು "ಎಂದು. ಅಂದರೆ ಎರಡೂ ಸೇರಿದರೆ ಚೆನ್ನಾಗಿ ಹೋಗಬಹುದೆಂಬುದು ಅವನ ಮಾತಿನ ಅರ್ಥ . 1ಕಥೆಯಿದೆ. ಒಬ್ಬ ಕುರುಡ ಹಾಗೂ ಕುಂಟ ಇದ್ದರಂತೆ.ಕುರುಡನಿಗೆ ನಡೆಯುವ ಶಕ್ತಿ ಇದೆ. ಆದರೆ ಎಲ್ಲಿ ಹೆಜ್ಜೆಯಿಡಬೇಕೆಂಬುದು ಕಾಣುವುದಿಲ್ಲ. ಕುಂಟನಿಗೆ ಕಾಣುತ್ತದೆ. ಆದರೆ ನಡೆಯುವ ಸಾಮರ್ಥ್ಯವಿಲ್ಲ. ಕುರುಡನ ಹೆಗಲೇರಿ ಕುಂಟನು ಕುಳಿತು ಇಬ್ಬರೂ ಸೇರಿ ಮುಂದೆ ಹೊರಟರೆ ಸುಗಮವಾಗಿ ಹೋಗಬಹುದು. ಹಾಗೆಯೇ ವಿಜ್ಞಾನವಿಲ್ಲದ ಧರ್ಮ ಅರ್ಥವಾಗುವುದಿಲ್ಲ ಆದ್ದರಿಂದ ಅದು ಕುರುಡು. ಇದೇಕೆ ಹೀಗೆ ಹೇಳಿದ್ದಾರೆ ಎಂಬುದನ್ನು ತಿಳಿಯಲು ವಿಜ್ಞಾನ ಬೇಕು. ಕೇವಲ ಧರ್ಮವಿಲ್ಲದ ವಿಜ್ಞಾನ ಕುಂಟು.ದಯೇ, ಸತ್ಯ ,ಕ್ಷಮಾ ಮುಂತಾದ ಧರ್ಮವಿಲ್ಲದ ವಿಜ್ಞಾನ ಅನರ್ಥಕ್ಕೆ ಕಾರಣವಾಗುತ್ತದೆ .ಅದನ್ನು ಇಂದು ಕಾಣುತ್ತಿದ್ದೇವೆ . ಆದ್ದರಿಂದ ನಮ್ಮ ಪ್ರಾಚೀನ ಪರಂಪರೆಯಲ್ಲಿ ವೈಜ್ಞಾನಿಕತೆಯನ್ನು ಕಂಡುಕೊಂಡಾಗ ಜಗತ್ತಿನ ರಹಸ್ಯ ತಿಳಿಯುವುದು ಸುಲಭ. ಆದ್ದರಿಂದ ಇಹ ಪರದಲ್ಲಿ ಸುಖ ಶಾಂತಿಯನ್ನು ಹೊಂದಬಹುದು .
Subscribe to:
Post Comments (Atom)
No comments:
Post a Comment
If you have any doubts. please let me know...