ನಮ್ಮೆಲ್ಲರ ಮನೆಗಳಲ್ಲಿ ಬೆಳಗ್ಗೆ ಮತ್ತು ಸಂಜೆ ದೀಪ ಹಚ್ಚುವ ಕ್ರಮ ಯಾಕೆ?
ದೀಪ ಹಚ್ಚುವುದು ಮನೆ ಮನಗಳಲ್ಲಿ ಅಂಧಕಾರವನ್ನು ಓಡಿಸುವುದರ ಸಂಕೇತ. ಬೆಳಗ್ಗೆ ಹಾಗೂ ಸಂಜೆ ಹೊತ್ತುದೇವರ ಮನೆಯಲ್ಲಿ ದೀಪ ಹಚ್ಚುವ ಕ್ರಮ ಅನಾದಿ ಕಾಲದಿಂದಲೂ ನಡೆದು ಬಂದ ಸಂಪ್ರದಾಯ. ದೇವರಿಗೆ ದೀಪ ಹಚ್ಚುವ ಕ್ರಮ ಹೇಗಿರಬೇಕು ಎಂಬುದರ ಕುರಿತ ಮಾಹಿತಿ ಇಲ್ಲಿದೆ.
ಓಂ ಅಸತೋಮ ಸದ್ಗಮಯ, ತಮಸೋಮ ಜ್ಯೋತಿರ್ಗಮಯ ಮೃತ್ಯೋರ್ಮ ಅಮೃತಂಗಮಯ ಓಂ ಶಾಂತಿ ಶಾಂತಿ ಶಾಂತಿಃ
ಕತ್ತಲೆಯನ್ನು ಹಿ೦ದಕ್ಕೆ ಬಿಟ್ಟು ಬೆಳಕನ್ನು ಪಡೆಯುವತ್ತ – ಪಡೆದ ಬೆಳಕನ್ನು ಎಲ್ಲರೊ೦ದಿಗೆ ಹ೦ಚಿಕೊ೦ಡು ಬದುಕಬೇಕೆ೦ಬ ಸನ್ಮಸನ್ನು ಪಡೆಯುವತ್ತ, ಸಮಸ್ತ ಜೀವಿಗಳ ಮೇಲೆ ದೃಷ್ಟಿ ನೆಟ್ಟಿರಬೇಕು. ಕತ್ತಲೆ ಋಣಾತ್ಮಕವಾದರೆ, ಬೆಳಕು ಸಕಾರಾತ್ಮಕ.
ದೀಪ ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಬೆಳಕು. ಬೆಳಕು ಜೀವನದ ಅಂಧಕಾರವನ್ನು ತೊಡೆದುಹಾಕುತ್ತದೆ. ಬೆಳಕು ಎಂದರೆ ಜ್ಞಾನದ ಸಂಕೇತ. ಬೆಳಕು ಎಂದಾಕ್ಷಣ ನಮಗೆ ನೆನಪಾಗುವುದೇ ದೀಪ. ದೀಪಕ್ಕೊಂದು ಅಗಾಧ ಶಕ್ತಿಯಿದೆ. ಬೆಳಗುವ ದೀಪ ಮನಸ್ಸಿನ ಕತ್ತಲೆಯನ್ನು ದೂರಗೊಳಿಸುತ್ತದೆ.
ದೀಪ ಎಂದರೆ ಶಾಂತಿ,
ದೀಪ ಎಂದರೆ ಸಮೃದ್ಧಿ,
ದೀಪ ಎಂದರೆ ಬೆಳಕು,
ದೀಪ ಎಂದರೆ ಆರೋಗ್ಯ,
ದೀಪ ಎಂದರೆ ಸಂಪತ್ತು,
ದೀಪ ಎಂದರೆ ಪ್ರಖರತೆ.
ಹೀಗೆ ದೀಪ ಜೀವನದ ಒಂದು ಸಕಾರಾತ್ಮಕ ಬೆಳವಣಿಗೆ. ಇಂಥ ದೀಪವನ್ನು ಬೆಳಗಿಸುವುದು ದಿನವೂ ನಿಮ್ಮ ಜೀವನಕ್ಕೊಂದು ಸಂತೋಷ, ನೆಮ್ಮದಿ, ಶಾಂತಿಯನ್ನು ತರಬಲ್ಲುದು. ದೇವರ ಧ್ಯಾನ, ಪ್ರಾರ್ಥನೆಯಲ್ಲಿ ದೊಡ್ಡ ಶಕ್ತಿಯಿದೆ. ಪ್ರಾರ್ಥನೆಯ ಮೂಲಕ ತನ್ನ ಇಷ್ಟಾರ್ಥ ಸಿದ್ಧಿ, ಮನಸ್ಸಿಗೆ ಶಾಂತಿ, ಸೌಭಾಗ್ಯ ದೊರೆಯುತ್ತದೆ.
ಮನೆಯಲ್ಲಿ ದೀಪ ಹಚ್ಚುವುದರಿಂದ ಸಕಾರಾತ್ಮಕ ಚಿಂತನೆಗಳು ಹೆಚ್ಚುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ದೀಪಕ್ಕೆ ಪ್ರಾಮುಖ್ಯತೆ ಇದೆ. ಯಾವುದೇ ಕಾರ್ಯಕ್ರಮ ಅಥವಾ ಪೂಜಾ ಕೈಂಕರ್ಯಗಳನ್ನು ನಡೆಸಬೇಕಾದರೆ ಆ ಕಾರ್ಯಕ್ರಮ, ಪೂಜೆ ನಡೆಯುವುದು ದೀಪ ಬೆಳಗುವ ಮೂಲಕವೇ. ಮನೆಯಲ್ಲಿ ದೀಪ ಹಚ್ಚುವುದರಿಂದ ಅಲ್ಲಿನ ವಾತಾವರಣ ಶಾಂತಿ, ನೆಮ್ಮದಿ ಹಾಗೂ ಸಕಾರಾತ್ಮಕ ಚಿಂತನೆಗಳು ಹೆಚ್ಚುತ್ತದೆ, ಇದು ವೈಜ್ಞಾನಿಕವಾಗಿಯೂ ಧೃಢವಾಗಿದೆ. ದೇವರಿಗೆ ದೀಪ ಹಚ್ಚುವ ಕ್ರಮ ಹೇಗಿರಬೇಕು ಎಂಬುದರ ಕುರಿತ ಮಾಹಿತಿ ಇಲ್ಲಿದೆ.
ದೀಪದ ಪಾತ್ರೆ ಶುಭ್ರವಾಗಿದ್ದಷ್ಟೂ ದೀಪ ಹಚ್ಚುವವರ ಮನಸ್ಸು ಶುದ್ಧವಾಗಿರುತ್ತದೆ. ದೀಪವನ್ನು ಹಚ್ಚುವ ಜಾಗದಲ್ಲಿ ಗಾಳಿಯು ಮಂದಸ್ಮಿತವಾಗಿದ್ದರೆ, ತಂಗಾಳಿಯು ಬೀಸುತ್ತಿದ್ದರೆ, ಅಂತಹ ಮನೆಯಲ್ಲಿ ಶಾಂತಿಯಾದ ವಾತಾವರಣ ಇದ್ದು, ನೆನೆದ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತದೆ.
ಗಾಳಿಯು ಜೋರಾಗಿ ಬೀಸುತ್ತಿದ್ದರೆ ಆ ಮನೆಯಲ್ಲಿ ಬಂಧು ಬಳಗದವರಿಂದಲೇ ಸಮಸ್ಯೆ ಉಂಟಾಗುತ್ತವೆ,ಶತ್ರುಗಳು ಜಾಸ್ತಿ.
ದೀಪದ ಸ್ತಂಭವು ಎರಡೂ ಒಂದೇ ಸಮನಾಗಿರಬೇಕು,ಒಂದು ಚಿಕ್ಕದು, ಒಂದು ದೊಡ್ಡದು ಇರಬಾರದು. ಹೀಗೆ ಇದ್ದರೆ, ಆ ಮನೆಯಲ್ಲಿ ಗಂಡ ಹೆಂಡತಿ ಹೊಂದಾಣಿಕೆ ಇರೋದಿಲ್ಲ. ಮಕ್ಕಳು ದಾರಿ ತಪ್ಪುವರು.
ದೀಪದ ಸ್ತಂಭ ಭಿನ್ನವಾಗಿದ್ದರೆ, ಒಡೆದಿದ್ದರೆ, ಆ ಮನೆಯಲ್ಲಿ ಇರುವವರಿಗೆ ಕೆಲಸ ಕಾರ್ಯಗಳಲ್ಲಿ ತೀವ್ರ ಅನಾನುಕೂಲವಾಗಿ, ನಿತ್ಯ ರೋಗ ಬಾಧೆ ಜಾಸ್ತಿಯಾಗಿ, ವೈದ್ಯರಿಂದಲೂ ವಾಸಿ ಮಾಡಲಿಕ್ಕೆ ಆಗದ ಕಾಯಿಲೆಯಿಂದ ನರಳುತ್ತಾರೆ. ಮನೆಯಲ್ಲಿ ಇರುವವರಿಗೆ ಶಾಂತಿ ನೆಮ್ಮದಿ ಇರುವುದಿಲ್ಲ.
ದೀಪದ ಸ್ತಂಭವು ಬೆಸುಗೆ ಮಾಡಿದ್ದರೆ, ಮನೆಯಲ್ಲಿ ಇರುವವರಿಗೆ ರಕ್ತಹೀನತೆ, B.P ಕಾಯಿಲೆಯು, ಚರ್ಮವ್ಯಾಧಿಗಳು ಜಾಸ್ತಿಯಾಗುತ್ತದೆ.
ದೇವರ ದೀಪಕ್ಕೆ ಉಪಯೋಗಿಸುವ ಎಣ್ಣೆಹೇಗಿರಬೇಕು?
ದೀಪಕ್ಕೆ ಉಪಯೋಗಿಸುವ ಎಣ್ಣೆಯು ದಪ್ಪವಿದ್ದರೆ (ಹರಳೆಣ್ಣೆಯ ತರಹ), ಮನೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಗಳೂ ಬಹಳ ನಿಧಾನವಾಗಿ ನಡೆಯುತ್ತದೆ.
ದೀಪಕ್ಕೆ ಉಪಯೋಗಿಸುವ ಎಣ್ಣೆಯು ತೆಳುವಾಗಿದ್ದರೆ(ಕೊಬ್ಬರಿ ಎಣ್ಣೆ) ಮನೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಗಳೂ ಸುಸೂತ್ರವಾಗಿ ನಡೆಯುತ್ತದೆ. ಕಷ್ಟಗಳು ನಿವಾರಣೆಯಾಗುತ್ತದೆ.
ದೀಪಕ್ಕೆ ಉಪಯೋಗಿಸುವ ಎಣ್ಣೆಯು ಒಂದೇ ಎಣ್ಣೆಯಾಗಿದ್ದರೆ ಕೆಲಸ ಕಾರ್ಯಗಳು ಸುಸೂತ್ರವಾಗಿಯೂ, ಸುಗಮವಾಗಿಯೂ ನಡೆಯುತ್ತದೆ. ದೀಪಕ್ಕೆ ಬಳಸುವ ಎಣ್ಣೆಯು ಮಿಶ್ರವಾಗಿದ್ದರೆ, ಎಲ್ಲಾ ತರಹದ ಎಣ್ಣೆ ಮಿಶ್ರ ಆಗಿದ್ದರೆ, ಆರಂಭದಲ್ಲಿ ಶುಭಸೂಚನೆ ಕಂಡರೂ ಮಧ್ಯದಲ್ಲಿ ನಿಂತು ಹೋಗಿ, ಕೊನೆಯಲ್ಲಿ ಆದರೂ ಆಗಬಹುದು ಅಥವಾ ಆಗದೆಯೂ ಇರಬಹುದು, ಹೀಗೆ ಫಲ ಬರುವುದು.
ದೀಪದ ಎಣ್ಣೆಯು ಮಲಿನವಾಗಿದ್ದರೆ ಮನೆಯಲ್ಲಿ ಇರುವವರಿಗೆ ರೋಗ ಬಾಧೆ ಬರುತ್ತದೆ.ದೀಪದ ಎಣ್ಣೆಯು ಕಪ್ಪಾಗಿದ್ದರೆ ಮನೆಯಲ್ಲಿ ಇರುವವರಿಗೆ ತೇಜಸ್ಸು ಕಡಿಮೆಯಾಗುತ್ತದೆ. ಎಣ್ಣೆಯು ಪರಿಮಳದ ವಾಸನೆಯಿಂದ ಕೂಡಿದ್ದರೆ ಮನೆಯಲ್ಲಿ ಅಷ್ಟೈಶ್ವರ್ಯ ಹಾಗೂ ನವನಿಧಿಗಳು ಪ್ರಾಪ್ತಿಯಾಗುತ್ತದೆ. ದೀಪದ ಎಣ್ಣೆಯನ್ನು ಕಿಲುಬಿರುವ, ಬೆಸುಗೆ ಹಾಕಿಸಿರುವ, ಭಿನ್ನವಾಗಿರುವ ದೀಪಸ್ತಂಭಕ್ಕೆ ಹಾಕಿದರೆ, ಅನಾರೋಗ್ಯ ಸಮಸ್ಯೆ, B.P. ಸಮಸ್ಯೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ, ರಕ್ತದ ಕಾಯಿಲೆಗಳು ಜಾಸ್ತಿಯಾಗುತ್ತದೆ. ದೀಪಕ್ಕೆ ಬಿಸಿಎಣ್ಣೆ ಅಥವಾ ಬಿಸಿತುಪ್ಪ ಹಾಕಿದರೆ, ಮನೆಯಲ್ಲಿ ಕೂಗಾಟ, ಕೋಪ ಹಠ ಜಾಸ್ತಿಯಾಗುತ್ತದೆ.ದೀಪದ ಎಣ್ಣೆಯು ತಂಪಾಗಿದ್ದರೆ ಮನೆಯಲ್ಲಿ ಶಾಂತಿ ವಾತಾವರಣ, ಇದ್ದು ಸುಖ ಸಂತೋಷ ನೆಮ್ಮದಿ ಇರುತ್ತದೆ.
ದೀಪದ ಎಣ್ಣೆಯು ಕಲ್ಮಶವಿಲ್ಲದೆ ಎಷ್ಟು ಶುದ್ಧಿಯಾಗಿರುವುದೋ ಅಷ್ಟೂ ಶುಭಫಲ ಉಂಟಾಗುತ್ತದೆ. ಅಂತಾ ಎಣ್ಣೆಯಿಂದ ಮನೆಯಲ್ಲಿ ದೀಪ ಹಚ್ಚಿದರೆ, ಆ ಮನೆಗೆ ದೇವರ ಹಾಗೂ ಗುರುಗಳ ಅನುಗ್ರಹ ಉಂಟಾಗಿ, ಬಹಳ ಚೆನ್ನಾಗಿ ನಡೆಯುತ್ತದೆ.ಯಾವುದೇ ತರಹದ ಗಲಾಟೆ, ಗಂಡಾಂತರಗಳು ಅಪಮೃತ್ಯುಗಳು ಬರುವುದಿಲ್ಲ.
No comments:
Post a Comment
If you have any doubts. please let me know...