March 29, 2021

ಉಪಮನ್ಯು

ನಂದ್ಯಾದಿ ಪ್ರಮುಥಗಣದಲ್ಲಿ ಒಬ್ಬನಾದ ಉಪಮನ್ಯು ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣುವಿಗೆ ಲಿಂಗ ದೀಕ್ಷಾ ಕೊಟ್ಡಿದ್ದು ಸತ್ಯವೆ ಎಂಬ ಒಂದು ಜಿಜ್ಞಾಸೆ

ಆವಾಹನೆ ಮಾಡುವಾಗ (ಸಾಕ್ಷಾತ್ ವೃಷಭ, ನಂದಿಯ ಅವತಾರ)

 ಉಪಮನ್ಯು
 ಕೂಡ ನಂದ್ಯಾದಿ ಚತುರ್ವಿಂಶತಿ ಪ್ರಮಥಗಣ  ಜನರಲ್ಲಿ ಅವರು ಬರುತ್ತಾರೆ.

ಪ್ರಮಥಗಣಂಗಳೇ ಶರಣರು
. ಈ ಪ್ರಮತ ರಲ್ಲಿ ಬಸವಣ್ಣನವರು ಬರುತ್ತಾರೆ ನಂದಿ ಅವತಾರವಾಗಿ 
ಎಂಬುದು ಇದು ಸತ್ಯ .
ಉಪಮನ್ಯು
ಅವರು ವಿಷ್ಣುವಿಗೆ ಲಿಂಗದೀಕ್ಷೆಯನ್ನು ಕೊಟ್ಟಿದ್ದಾರೆಂದು ವಚನದಲ್ಲಿದೆ ಹೇಳಿದೆ .

ಇಲ್ಲಿ ಒಂದು ವಚನದಲ್ಲಿ ಉರಿಲಿಂಗಪೆದ್ದಿ ಅವರು ಶಿವನ ಒಡ್ಡೋಲಗದಲ್ಲಿ ಇರುವವರು ಶರಣರು ಎಂದು ಹೇಳಿದ್ದಾರೆ. ಉಪಮನ್ಯು ಶರಣ ಎಂದು ಸೂಚಿಸಿದ್ದಾರೆ.

 ಗುರುವೆ ಪರಶಿವನು ಪರಶಿವನೇ ಶರಣಭರಿತನಾಗಿ ಎಮ್ಮ ಶರಣರೇ ಗುರು. ಒಂದು ದೀಕ್ಷೆಯಲ್ಲಿ ಗುರುವೆಂದಡೆ, ನಿಮಗೆಲ್ಲಕೆ ಕರ್ತನಹ ವಿಷ್ಣು ಎಮ್ಮ ಶರಣ ಉಪಮನ್ಯುವಿನ ಕೈಯಲ್ಲಿ ದೀಕ್ಷೆಯ ಪಡೆದು ಶಿಷ್ಯನಾದನು, ಅಂತಾಗೆ ಎಮ್ಮ ಶರಣರೆ ಗುರು. ಲಿಂಗಿನಾ ಸಹ ವರ್ತಿತ್ವಂ ಲಿಂಗಿನಾ ಸಹ ವಾದಿತಾ ಲಿಂಗಿನಾ ಸಹ ಚಿಂತಾ ಚ ಲಿಂಗಯೋಗೋ ನ ಸಂಶಯಃ ಲಿಂಗಾಂಗಿನಾ ಚ ಸಂಗಶ್ಶ ಲಿಂಗಿನಾ ಸಹವಾಸಿತಾ ಲಿಂಗೇನ ಸಹ ಭುಕ್ತಿಶ್ಯ ಲಿಂಗಯೊಗೋ ನ ಸಂಶಯಃ ಒಂದು ದೀಕ್ಷೆಯಲ್ಲಿ ಗುರುವೆ ನೀವು ? ನಿಮಗೆ ಕರ್ತರಹ ವಿಷ್ಣು ಬ್ರಹ್ಮ ಮೊದಲಾದವರನು ನಮ್ಮ ಶರಣರೆ ಶಿಕ್ಷಿಸಿಕೊಳ್ಳುತಿಹರಾಗಿ ನಮ್ಮ ಶರಣರೇ ಗುರು ಕಾಣಿರೋ ಸ್ವಾನುಭಾವದಲ್ಲಿ. ಗುರುವೆ ದೇವ ದಾನವ ಮಾನವರೆಲ್ಲರೂ ? ಪರಸ್ತ್ರೀಯರಿಗೆ ಅಳಪುವುದು ಹಿರಿದು ಗುರುತ್ವವೇ ? ಅಲ್ಲ. ಪರಧನ ಅನ್ಯದೈವ ಉಭಯವಿಜ್ಞಾನ ಅಜ್ಞಾನ, ದ್ವಂದ್ವಕ್ರಿಯಾ ವರ್ತಿಸುತ್ತಿಹರಾಗಿ. ಅದು ಕಾರಣ, ಸರ್ವರೂ ಲಘುವಾದರು ಅನುಭಾವಸಿದ್ಧಿಯಾದ ನಿಮ್ಮ ಶರಣರೇ ಗುರು. ಶಿವತನು ಲಿಂಗಪ್ರಾಣವಾದ ಬಳಿಕ ಉತ್ಪತ್ತಿಸ್ಥಿತಿಲಯವೆಂದು ಧ್ಯಾನಿಸುವೆ ಚಿಂತಿಸುವೆ ಅಂಜುವೆ ಮನವೇ ನೀನೊಂದು ಕ್ರಿಯಾಕರ್ಮ ಉಪಾಧಿಯಿಂದ. ತ್ರಿವಿಧಕ್ಕೆ ತತ್ಕ್ರಿಯಾಕರ್ಮ ಉಪಾಧಿಯಿಂದ ಈ ತ್ರಿವಿಧಕ್ಕೆ ತತ್ಕ್ರಿಯಾಕರ್ಮವ ಮಾಡಿ ಸಂಸಾರವ ಗೆಲಿವೆನೆಂಬೆ ಮನವೆ, ಇದು ಜ್ಞಾನವಲ್ಲ. ನಿರುಪಾಧಿಕನಾಗಿ ಮಹಾಲಿಂಗ ಕರುಣಿ ಶ್ರೀಗುರುವಾದ ಲಿಂಗವಾದ ಜಂಗಮವಾದ ಪ್ರಸಾದವಾದ ಲಿಂಗತನುವಾದ ಲಿಂಗಪ್ರಾಣವಾದ ಲಿಂಗಕ್ರೀಯಾದ. ಸರ್ವಕ್ರಿಯಾ ಕರ್ಮಂಗಳು ಲಿಂಗಕ್ರಿಯಾಕರ್ಮ, ಉತ್ಪತ್ತಿಸ್ಥಿತಿಲಯವೆಂಬುದಿಲ್ಲ ಸರ್ವವೂ ಲಿಂಗಸ್ಥಿತಿ, ದುಶ್ಚಿಂತೆಯ ಬಿಡು ನಿರುಪಾಧಿಕನಾಗು. ಗುರುಕರುಣಿಸಿದ ಲಿಂಗಕ್ಕೆ ನೀನು ಉಪಾಧಿಕ ಕ್ರೀಯ ಮಾಡದೆ ಸುಚಿತ್ತದಿಂದ ಮಹಾಲಿಂಗವನು ಧ್ಯಾನಿಸಿ ಪೂಜಿಸಿ ಚಿಂತಿಸಿ ಅಲ್ಲಿಯೇ ಸುಖಿಯಾಗು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ರಕ್ಷಿಸುವನು.

ಆಗಮಗಳು ಶಿವನಿಂದ ಉಪದೇಶಿಸಲ್ಪಟ್ಟವುಗಳಾಗಿವೆ. 
ಶಿವಮಹಾಪುರಾಣದ ವಾಯುಸಂಹಿತೆಯ ಅನುಸಾರ ಶೈವಾಗಮಗಳನ್ನು ಸ್ವತಂತ್ರ ಮತ್ತು ಶ್ರೌತ ಎಂದು ಎರಡು ಬಗೆಯಲ್ಲಿ ವೀಭಜಿಸಲಾಗಿದೆ. ಅವುಗಳಲ್ಲಿ ಕಾಮಿಕಾದಿ ವಾತುಲಾಂತ ಸಿದ್ದಾಂತ ವಾಚ್ಯಗಳಾದ ಇಪ್ಪತೆಂಟು ಆಗಮಗಳನ್ನು ಸ್ವತಂತ್ರಾಗಮಗಳು ಎಂದು ಕರೆಯಲಾಗುತ್ತದೆ. 
ಶ್ರೌತಾಗಮಗಳು ನೂರು ಕೋಟಿಯಷ್ಟು ವಿಸ್ತಾರವಾಗಿವೆ.
ಅವುಗಳನ್ನು ಪಾಶುಪತ , ವೃತ,ಮತ್ತು ಜ್ಞಾನ ಎಂದು ಕರೆಯಲಾಗುತ್ತದೆ.
ಅದರಲ್ಲಿ ಕ್ರೀಯಾ, ತಪ,ಜಪ,ಧ್ಯಾನ ಮತ್ತು ದಾನ ಎಂಬ ಹೆಸರಿನ ಐದು ಪರ್ವಗಳಿವೆ. 
  ಈ ಶಾಸ್ತ್ರಗಳನ್ನ ರುರು, ದಧೀಚಿ , ಅಗಸ್ತ್ಯ, #ಉಪಮನ್ಯೂ ಎಂಬ ಹೆಸರಿನ ನಾಲ್ಕು ಋಷಿಗಳು ಉಪದೇಶಿಸಿದ್ದಾರೆ.

ಧೌಮ್ಯನ ಅಣ್ಣನಾದ #ಉಪಮನ್ಯುವಿನಿಂದ ಶ್ರೀಕೃಷ್ಣನಿಗೆ  ಉಪದೇಶಿಸಲ್ಪಟ್ಟ ಜ್ಞಾನದ ಬಗ್ಗೆ 
ಮಹಾಭಾರತದ ವಾಯುಸಂಹಿತೆಯ ಉತ್ತರ ಭಾಗದಲ್ಲಿ ಸಂಗ್ರಹವಾಗಿದೆ.

ಉಮಾಪತಿರ್ಭುತಪತಿಃ ಶ್ರೀಕಂಠೋ ಬ್ರಹ್ಮಣಃ ಸುತಃ|
ಉಕ್ತವಾನಿದಮವ್ಯಗ್ರೋ ಜ್ಞಾನಂ ಪಾಶುಪತಂ ಶಿವಃ||
        (ಮಹಾಭಾರತ ಅನುಶಾಸನ ಪರ್ವ )
ವೈಷ್ಣವಾಗಮ ಮತ್ತು ಶಾಕ್ತಾಗಮಗಳ ಸ್ವರೂಪ ಮತ್ತು ದರ್ಶನವನ್ನು ಪ್ರೊ. ವಜ್ರವಲ್ಲಭ ದ್ವೀವೇದಿ ಅವರು ತಮ್ಮ
 " ಆಗಮ ಮೀಮಾಂಸಾ "ಎಂಬ ಸಂಶೋಧನಾ ಗ್ರಂಥದಲ್ಲಿ ವಿಸ್ತಾರವಾಗಿ ಹೇಳಿದ್ದಾರೆ.

ಮಾಹಿತಿ ಸಂಗ್ರಹ 
Dattatreya S Mulge

No comments:

Post a Comment

If you have any doubts. please let me know...