March 27, 2021

ಹಳತು ಹೊಸತು

> ನೀತಿ
 ಹಳತು ಹೊಸತು

ಹಳತೆಂಬ ಕಾರಣಕೆ ಒಳಿತಾಗಬೇಕಿಲ್ಲ
ಹೊಸತಿದು ಎಂಬುದಕೆ ಹೊರದೂಡಬೇಕಿಲ್ಲ
ಅರಿತವರು ಒರೆಗಿರಿಸಿ ಬಳಿಕವೇ ಹೊಗಳುವರು
ಮರುಳರವರಿವರಮಾತನೇ ತಲೆಗೇರಿಸುವರು

ಸಂಸ್ಕೃತ ಮೂಲ: 

ಪುರಾಣಮಿತ್ಯೇವ ನ ಸಾಧು ಸರ್ವಂ
ನ ಚಾಪಿ ಕಾವ್ಯಂ ನವಮಿತ್ಯವದ್ಯಂ |
ಸಂತಃ ಪರೀಕ್ಷ್ಯಾನ್ಯತರದ್ಭಜಂತೇ
ಮೂಢಃ ಪರಪ್ರತ್ಯಯನೇನಬುದ್ಧಿಃ ||

 ಕಾಳಿದಾಸ ಇದನ್ನು ಕಾವ್ಯದ ವಿಷಯವಾಗಿ ಹೇಳಿದ್ದು ಕಡಿಮೆಯೆಂದರೆ ಹದಿನೈದು ಶತಮಾನಗಳ ಹಿಂದೆ. ಆದರೆ, ಅಂದಿಗೂ, ಇಂದಿಗೂ, ಎಂದಿಗೂ, ಎಲ್ಲ ವಿಷಯಕ್ಕೂ ಹೊಂದುವ ನಲ್ನುಡಿ!

No comments:

Post a Comment

If you have any doubts. please let me know...