March 5, 2021

ಮಂತ್ರ ದೇವತೆಯ ಸ್ವರೂಪ

 ಮಂತ್ರ ದೇವತೆಗೆ ಪಲ್ಲವವೇ ಪಾದ. ಪ್ರಣವವೇ ಶಿರಸ್ಸು. ಶಿರಸ್ಸು ಮತ್ತು ಪಲ್ಲವಗಳಿಂದ ಕೂಡಿದ ಮಂತ್ರವು ಬಯಸಿದ ಫಲವನ್ನು ನೀಡುತ್ತದೆ. ನ್ಯಾಸವಿಲ್ಲದ ಮಂತ್ರವು ಮೂಕ. ಆಸನವಿಲ್ಲದ್ದು ಸುಪ್ತ. ಪಲ್ಲವವಿಲ್ಲದಲ್ಲಿ ಅದು ನಗ್ನ. ಶಿರಸ್ಸೇ ಇಲ್ಲದ ಮೇಲೆ ಮೃತವೇ ಸರಿ! ಇದಿಷ್ಟು ಇದ್ದು ಅದನ್ನು ಗುರುಮುಖದಿಂದ ಪಡೆಯದಿದ್ದರೆ ಅದು ವ್ಯರ್ಥ.

ಮಂತ್ರಾಣಾಂ ಪಲ್ಲವಃಪಾದಃ ಪ್ರಣವಃ ಶಿರ ಉಚ್ಯತೇ|
ಶಿರಃಪಲ್ಲವಸಂಯುಕ್ತೋ ಮಂತ್ರೋಭೀಷ್ಟಫಲಪ್ರದಃ||

ನ್ಯಾಸಂ ವಿನಾ ಭವೇನ್ಮೂಕಃ ಸುಪ್ತಸ್ಯಾದಾಸನಂ ವಿನಾ|
ಪಲ್ಲವೇನ ವಿನಾ ಮಂತ್ರೋ ನಗ್ನಸ್ತು ಪರಿಕೀರ್ತಿತಃ||

ಶಿರೋ ಹೀನೋ ಮೃತಃ ಪ್ರೋಕ್ತೋ ವೃಥಾ ಮಂತ್ರೋ ಗುರುಂ ವಿನಾ|
ಋಷಿದೈವತ ಛಂದೋಭಿರ್ವರ್ಜಿತಸ್ತು ಭುಜಂಗಮಃ||
         ‌‌(ಮಂತ್ರಮಹೋದಧಿ)
*೧) ಪಲ್ಲವಗಳು*
*ನಮಃ-ಸ್ವಾಹಾ-ವಷಟ್-ಹುಂ-ವೌಷಟ್-ಫಟ್* ಮತ್ತು ದಿಗ್ಬಂಧಗಳು. ಇವು ಮಂತ್ರದೇವತೆಯ ಷಡಂಗಗಳು.
ಉದಾ : "ನ-ಮಃ-ಶಿ-ವಾ-ಯ"
ಎಂಬುದು ಮಂತ್ರ. ಈ ಮಂತ್ರ ದೇಹದ ಪ್ರತಿಯೊಂದು ಅಕ್ಷರವನ್ನು ಉಪಾಸಕನ ಹೃದಯಾದಿ ಅಂಗಗಳಲ್ಲಿ ನ್ಯಾಸ (ಇಡು) ಮಾಡಿದಾಗ ಆ ಉಪಾಸಕನು ಮಂತ್ರಮಯ ದೇಹವೆನಿಸುತ್ತಾನೆ.
ಓಂ ನಂ ಓಂ....ಹೃದಯಾಯನಮಃ|
ಓಂ ಮಂ ಓಂ...ಶಿರಸೇ ಸ್ವಾಹಾ|
ಓಂ ಶಿಂ ಓಂ...ಶಿಖಾಯೈ ವಷಟ್|
ಓಂ ವಾಂ ಓಂ..ಕವಚಾಯ ಹುಂ|
ಓಂ ಯಂ ಓಂ..ನೇತ್ರತಯಾಯ ವೌಷಟ್|
ಓಂ ಓಂ ಓಂ ...ಅಸ್ತ್ರಾಯ ಪಟ್ 
ಓಂ ಭೂಃ ಭುವಃ ಸುವಃ ಓಂ ಎಂದು ದಿಗ್ಭಂದ ಮಾಡಬೇಕು. ಇದರಿಂದ ದೇವತೋಪಾಸನ ಮತ್ತು ಜಪಕಾಲದಲ್ಲಿ ವಿಘ್ನಕರವಾದ ದುಷ್ಟ ಶಕ್ತಿಗಳು ಪೂಜಾಗೃಹ ಮತ್ತು ಮನಸ್ಸನ್ನು ಪ್ರವೇಶ ಮಾಡಬಾರದೆಂಬುದು ಉದ್ದೇಶ.

#ಚನ್ನೇಶಶಾಸ್ತ್ರಿಗಳು #ಹಿರೇಕೆರೂರ

No comments:

Post a Comment

If you have any doubts. please let me know...