April 23, 2021

ವಿ ಎ ಸ್ಮಿತ್ ಮತ್ತು ಅಕ್ಬರ್ ದ ಗ್ರೇಟ್

 

ವಿನ್ಸೆಂಟ್ ಆರ್ಥರ್ ಸ್ಮಿತ್ ಅಥವಾ ವಿ ಏ ಸ್ಮಿತ್ 1843ರಲ್ಲಿ ಇಂಗ್ಲೆಂಡ್ನ ದಬ್ಲಿನ್ ಎನ್ನುವಲ್ಲಿ ಹುಟ್ಟುತ್ತಾರೆ. 1871ರಲ್ಲಿ ಭಾರತೀಯ ಸಿವಿಲ್ ಸೇವೆಯಲ್ಲಿ ತೇರ್ಗಡೆಹೊಂದಿ ಬ್ರಿಟೀಷ್ ಸರಕಾರದ ಅಡಿಯಲ್ಲಿ ಭಾರತದಲ್ಲಿ ಉದ್ಯೋಗವನ್ನು ಕೈಗೊಳ್ಳುತ್ತಾರೆ. ಮುಂದೆ ಭಾರತದಲ್ಲಿ ಮ್ಯಾಜಿಸ್ಟ್ರೆಟ್ ಆಗುತ್ತಾರೆ, ಜಿಲ್ಲಾ ನ್ಯಾಯಾಧೀಶರಾಗಿ ಮುಂದೆ ಕಮಿಷನರ್ ಆಗಿ ನಿವೃತ್ತಿ ಹೊಂದುತ್ತಾರೆ. 1910ರಲ್ಲಿ ಅವರು ಆಕ್ಸ್ಫರ್ಡ್ನ ಇಂಡಿಯನ್ ಇನ್ಸ್ಟಿಟ್ಯೂಟ್ನಲ್ಲಿ ಕ್ಯುರೇಟರ್ ಆಗುತ್ತಾರೆ. ಭಾರತದಿಂದ ನಿರ್ಗಮಿಸಿ ಇಂಗ್ಲೆಂಡ್ನಲ್ಲಿ ವಾಸ್ತವ್ಯ ಆರಂಭಿಸಿದ ನಂತರ ಇವರು ಅನೇಕ ಪುಸ್ತಕಗಳನ್ನು ಬರೆಯುತ್ತಾರೆ. ಬೌದ್ಧ ಧರ್ಮದ ಅನೇಕ ರಾಜರ ಕುರಿತಾಗಿ, ಅಶೋಕನ ಕುರಿತಾಗಿ ಮತ್ತು ಮೊಘಲ್ ಅರಸರನ್ನು ಹೊಗಳಿ ಪುಸ್ತಕಗಳನ್ನು ಬರೆಯುತ್ತಾರೆ. ಅಕ್ಬರ್ ಇವರಿಗೆ ಅತ್ಯಂತ ಇಷ್ಟದ ದೊರೆಯಾಗಿ ಕಾಣಿಸಿಕೊಳ್ಳುತ್ತಾನೆ. ಅಕ್ಬರ್ನನ್ನು ಅಕ್ಬರ್ ದ ಗ್ರೇಟ್ ಅಂದ ಮಹಾನುಭಾವ ಇವರು.   The early history of India ಮತ್ತು The Oxford history of India ಮಹತ್ವದ ಕೃತಿಗಳು. ಭಾರತೀಯ ನ್ಯಾಯಾಂಗಕ್ಕೆ ಸಂಬಂಧಿಸಿದ ಕೃತಿಗಳನ್ನೂ ಇವರು ರಚಿಸಿದ್ದಾರೆ. 1920ರಲ್ಲಿ ಕೊನೆಯುಸಿರೆಳೆಯುತ್ತಾರೆ. ಈಗ ವಿಷಯಕ್ಕೆ ಬರುತ್ತೇನೆ. ವಿ ಎ ಸ್ಮಿತ್ ಅವರನ್ನು ಭಾರತೀಯ ಇತಿಹಾಸದ ಪಿತಾಮಹನೆಂದು ಕರೆಯುತ್ತಾರೆ. ಅಂತಹ ಸ್ಮಿತ್ ಅವರಿಗೆ ಭಾರತೀಯ ಇತಿಹಾಸ ತನ್ನ ಪ್ರಾಚೀನತೆಯನ್ನು ಉಳಿಸಿಕೊಳ್ಳುವುದು ಸಹ್ಯವಾಗುತ್ತಿರಲಿಲ್ಲ. ದೊಡ್ಡ ಚರ್ಚ್ನ ಮಾತನ್ನು ಇವರು ಸುಳ್ಳಿದ್ದರೂ ಸತ್ಯವನ್ನಾಗಿಸಬೇಕಿತ್ತು. ಕ್ರಿಸ್ತ ಪೂರ್ವದಲ್ಲಿದ್ದ ವಿಕ್ರಮಾದಿತ್ಯನನ್ನು ಇಲ್ಲವಾಗಿಸಲು ಬಹಳ ಶ್ರಮಪಟ್ಟವರಲ್ಲಿ ಮೊದಲಿಗರು ಇವರು. ಸ್ಮಿತ್ ಅವರು ವಿಕ್ರಮ ಶಕೆಯ ಕುರಿತಾಗಿ ಹೇಳುವಾಗ ಭಾರತೀಯ ಇತಿಹಾಸದಲ್ಲಿ ಶಕ ಪೂರ್ವದ 58 - 57ರ ವಿಕ್ರಮ ಶಕೆ ಅತ್ಯಂತ ಜನಪ್ರಿಯವಾದ ಶಕೆ. ರಾಜಾವಿಕ್ರಮಾದಿತ್ಯ ಅಥವಾ ಬಿಕ್ರಮ ಎನ್ನುವವನು ಉಜ್ಜಯಿನಿಯಲ್ಲಿ ಆ ಕಾಲದಲ್ಲಿ ಆಳಿದ್ದ ಎನ್ನುವುದು ಸಹ ನಂಬಲು ಸಾಧ್ಯವೂ ಇಲ್ಲ, ಅರ್ಹವೂ ಅಲ್ಲ. ವಿಕ್ರಮನ ಆಳ್ವಿಕೆಯ ಕಾಲಮಾನವೇ ತಪ್ಪಾದ ಕಾಲಮಾನದ ನಿರ್ಧಾರ. ಈತನ ಆಳ್ವಿಕೆ ಮೊದಲು ಮಾಲವದಲ್ಲಿತ್ತು ಎನ್ನುವುದು ನಿಜವಾಗಿದ್ದರೂ, ಈತನ ಕಾಲಮಾನ ಉಜ್ಜೈನಿಯ ಕೆಲವು ಜ್ಯೋತಿಷಿಗಳ ನಂಬುಗೆಯೂ ಆಗಿರಬಹುದು. ಆದರೆ ಈ ವಿಕ್ರಮ ಶಕೆಯ ಮೊದಲಿನ ಹೆಸರು ಮಾಲವ ಶಕೆ ಎಂದೇ ಇತ್ತು. ಆಮೇಲೆ ವಿಕ್ರಮ ಶಕೆ ಎಂದು ಕರೆಯಲಾಯಿತು. ಅಂದರೆ ವಿಕ್ರಮನ ಕಾಲಾನಂತರದಲ್ಲಿ ಅನೇಕ ವಿಕ್ರಮ ಮತ್ತು ವಿಕ್ರಮಾದಿತ್ಯ ಎನ್ನುವ ಹೆಸರಿನ ರಾಜರು ಆಳಿ ಹೋಗಿದ್ದರು. ಕ್ರಿ. ಶ. 390ರಲ್ಲಿ ಉಜ್ಜೈನಿಯನ್ನು ಗೆದ್ದ ಎರಡನೇ ಚಂದ್ರಗುಪ್ತನನ್ನೇ ವಿಕ್ರಮಾದಿತ್ಯ ಎಂದು ಕರೆದು ಗುಪ್ತರು ತಮ್ಮ ಹೆಸರನ್ನು ಬದಲಿಸಿಕೊಂಡು ವಿಕ್ರಮ ಶಕೆ ಎಂದು ಕೊಟ್ಟಿರಬಹುದು ಎನ್ನುತ್ತಾ ಇದನ್ನೇ ಆನಂತರದಲ್ಲಿ ವಲ್ಲಭಿ ಮತ್ತು ಶಾಲಿವಾಹನ ಶಕೆ ಎಂದಿರಬಹುದು ಎನ್ನುತ್ತಾರೆ.

The popular belief which associates the Vikrama era of 58 - 57 B.C. with a Rājā Vikramāditya or Bikram of Ujjain at that date may be erroneous. No such person is known. It is, however, true that the earliest known use of the era was in Mālwā and it may have been invented by the astronomers of Ujjain. - The Oxford History of India.

ಇವರ The Early History of India  ೧೪೨ರಲ್ಲಿ ಹೇಳಿದ್ದು ಹೀಗೆ. . .
Unfortunately no monuments have been discovered which can be referred with certainty to the period of Chandragupta or his son, and the archaeologist is unable to bring the tangible evidence afforded by excavation to support the statements of the Greek observers. 

ಎಲ್ಲವಕ್ಕೂ ಪುರಾವೆಗಳನ್ನು ಕೇಳುವ ಈ ಜನರಿಗೆ ನಮ್ಮಲ್ಲಿನ ಸಂಸ್ಕೃತಿ, ಪರಂಪರೆಯ ಪರಿಚಯ ಇಲ್ಲ. ತಮ್ಮ ಮೂಗಿನ ನೇರಕ್ಕೆ ಕಂಡದ್ದು ಮಾತ್ರ ಇತಿಹಾಸವೋ ಅಥವಾ ಘಟಿತ ಘಟನೆಯೋ ಅನ್ನಿಸಿ ಅದೂ ಸಹ ತಪ್ಪಾದ ಕಾಲವನ್ನು ಕೊಡುವ ಮಹಾನ್ ಕೆಲಸ ಮಾಡಿ ಅದನ್ನೇ ಇಂದಿಗೂ ಸತ್ಯವೆಂದು ನಂಬುವಂತೆ ಮಾಡಿದ ಪುಣ್ಯಾತ್ಮರು. ಅದೆಷ್ಟೋ ಹಿಂದಿದ್ದ ಬಿಂದುಸಾರನನ್ನು ಅದ್ಯಾವುದೋ ಕಾಲಕ್ಕೆ ತಂದು ನಿಲ್ಲಿಸಿದ ಕೀರ್ತಿ ವಿ ಎ ಸ್ಮಿತ್ ರಂತವರಿಗೆ ಸಲ್ಲುತ್ತದೆ. ಇತಿಹಾಸದಲ್ಲಿ ಪಂಥಗಳನ್ನು ಹುಟ್ಟುಹಾಕುವಲ್ಲಿ ಇಂಥವರ ಪಾತ್ರ ಪ್ರಮುಖ. ನಿಜ ಇತಿಹಾಸದ ಜೊತೆ ಇಲ್ಲ ಸಲ್ಲದನ್ನು ಬೆರೆಸುವ ಇತಿಹಾಸ ಯಾವತ್ತಿಗೂ ಆರೋಗ್ಯದಾಯಕವಲ್ಲ. ವಿಕ್ರಮಾದಿತ್ಯ ಇಷ್ಟವಾಗದ, ಅವನನ್ನು ಇಲ್ಲವಾಗಿಸುವ ಸ್ಮಿತ್ ಅವರಿಗೆ ಅಕ್ಬರ್ ಗ್ರೇಟ್ ಆಗುತ್ತಾನೆ. ಆಗಲೇ ಬೇಕು. ಯಾಕೆಂದರೆ ಬ್ರಿಟೀಷ್ ಆಡಳಿತದ ಕೆಳಗೆ ಕೆಲಸ ಮಾಡಿದವರು !!!
#ಮಿಹಿರಕುಲಿಯಿಂದ
ಸದ್ಯೋಜಾತರು

No comments:

Post a Comment

If you have any doubts. please let me know...