ಡಾ. ಶ್ರೀ ಇಮ್ಮಡಿ ಶಿವಬಸವ ಸ್ವಾಮಿಗಳು ನಿಜದ ನಿಲುವು ಗ್ರಂಥದಲ್ಲಿ ಸಿದ್ದಾಂತ ಶಿಖಾಮಣಿ ಹಾಗೂ ಶ್ರೀಕರಭಾಷ್ಯ' ಕುರಿತು ಎತ್ತಿದ ಸಂದೇಹಗಳಿಗೆ ಉತ್ತರಗಳು
***********************************************
ಡಾ.ಶ್ರೀ ಇಮ್ಮಡಿ ಶಿವಬಸವ ಸ್ವಾಮಿಗಳು ಬರೆದ
"ಸಿದ್ದಾಂತ ಶಿಖಾಮಣಿ ಹಾಗು" ಶ್ರೀಕರಭಾಷ್ಯ":
ನಿಜದ ನಿಲುವು'' ಎಂಬ ಗ್ರಂಥ ಬಗ್ಗೆ ಅದರಲ್ಲಿ ಇರುವ
ಸಿದ್ಧಾಂತ ಶಿಖಾಮಣಿ ಬಗೆಗಿನ ಕೆಲವು ಆಕ್ಷೇಪಗಳು ಹಾಗೂ ಅದಕ್ಕೆ ಉತ್ತರಗಳು.
ಡಾ.ಇಮ್ಮಡಿ ಶಿವಬಸವ ಸ್ವಾಮಿಗಳು" ನಿಜದ ನಿಲುವು" ಎಂಬ ಕೃತಿ ರಚನೆಮಾಡಿ ಸಿದ್ದಾಂತ ಶಿಖಾಮಣಿ ಬಗೆಗೆ ಕೆಲವಾರು ಸಂದೇಹಗಳನ್ನು ಎತ್ತುತ್ತಾರೆ ಅದರ ಮೂಲಕ ಸಿದ್ದಾಂತ ಶಿಖಾಮಣಿ ಗ್ರಂಥದ ಮಹತ್ವವನ್ನು ಅಲ್ಲಗಳೆಯುವ ಪ್ರಯತ್ನ ಮಾಡಿದರು.
ಈ ಕುರಿತು ಪ್ರಖ್ಯಾತ ವಿದ್ವಾಂಸರಾದ ಡಾ.ಎಂ. ಶಿವಕುಮಾರ ಸ್ವಾಮಿಗಳು ಸಾದ್ಯಂತ ವಿಮರ್ಶೆ ಮಾಡಿ ಆಕ್ಷೇಪ ಮತ್ತು ಸಂದೇಹಗಳನ್ನು ಸಾಧಾರಪೂರ್ವಕ ಅಲ್ಲಗಳೆದಿದ್ದಾರೆ.
ಇದನ್ನು ಡಾ.ಸಂಗಮೇಶ ಸವದತ್ತಿಮಠ ರು ಸಂಪಾಧಿಸಿ ತಮ್ಮ ವೀರಶೈವ ಆಕರಗಳು ( ರಾಷ್ಟ್ರಮಟ್ಟದ ವಿಚಾರ ಸಂಕಿರಣದ ಸಂಶೋಧನಾ ಪ್ರಬಂಧ ಸಂಕಲನ) ದಲ್ಲಿ
ಹೀಗೆ ಹೇಳಿದ್ದಾರೆ.
ಪಂಚಪೀಠಗಳ ಬಗೆಗೆ ಪೂರ್ವಗ್ರಹ ಪೀಡಿತರಾದವರು ಎತ್ತುವ ಆಕ್ಷೇಪಗಳಿಗೆ ಡಾ.ಎಂ ಶಿವಕುಮಾರ ಸ್ವಾಮಿಗಳು ತಕ್ಕುದಾಗಿ ಉತ್ತರಿಸಿದ್ದಾರೆ. ಅವುಗಳನ್ನು ಸಂಕಲಿಸಿ ಕೊಡಲಾಗಿದೆ.
ವಿವಾದವನ್ನು ಸೃಷ್ಟಿಸುವವರು ಇರುವವರೆಗೆ ವಿವಾದವು ಇದ್ದೇ ಇರುತ್ತದೆ
ಬನ್ನಿ ಏನು ನಿಜದ ನಿಲುವು ಕೃತಿ ಯಲ್ಲಿನ ಆಕ್ಷೇಪ ಎಂದು ನೋಡಿದಾಗ
ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥ
ಅದು ಕ್ರಿ. ಶ. 8ನೆಯ ಶತಮಾನಕ್ಕಿಂತ ಹಿಂದಿನದಲ್ಲ ಮತ್ತು ಎರಡು ಸಾವಿರ ವರ್ಷಗಳಷ್ಟು ಪ್ರಾಚೀನವೂ ಅಲ್ಲ, ಅದು ಬಸವಾದಿ ಶರಣರ ಕಾಲಕ್ಕಿಂತ ಹಿಂದಿನದು ಎಂದು ಶ್ರೀ ಇಮ್ಮಡಿ ಶಿವಬಸವ ಸ್ವಾಮಿಗಳು ಹೇಳಿದ್ದಾರೆ.
ಶ್ರೀ ಸ್ವಾಮಿಗಳು ಗುರುತಿಸಿರುವುದು, ಬಸವಣ್ಣನವರು ತಮ್ಮ ವಂದು ವಚನದಲ್ಲಿ ಉಲ್ಲೇಖಿಸಿರುವ, ಸಿದ್ಧಾಂತ ಶಿಖಾಮಣಿಯದೆಂದು ಹೇಳಲಾದ ಒಂದು ಶ್ಲೋಕ. ಆ ಶ್ಲೋಕ ಮೊದಲನೇ ಪಾದದಲ್ಲಿನ ಪಾಠಾಂತರದೊಂದಿಗೆ ಹೀಗಿದೆ.
ಪ್ರಸಾದಾದ್ದೇವತಾಭಕ್ತಿ; ಪ್ರಸಾದೊ ಭಕ್ತಿಸಂಭವಃ | ಯಥೈವಾಂಕುರತೋ ಬೀಜಂ ಬೀಜತೋ ವಾ ಯಥಾಂಕುರಃ || ಬಸವಣ್ಣನವರ ಷಟ್‌ಸ್ಥಲ ವಚನಗಳು : ವ. ಸಂ.505.
ಶ್ರೀ ಸಿದ್ಧಾಂತ ಶಿಖಾಮಣಿಯಲ್ಲಿ ಈ ಶ್ಲೋಕದ (9.11) ಪಾಠ ಹೀಗಿದೆ
"ಪ್ರಸಾದಾದೇವ ಸಾ ಭಕ್ತಿಃ ಪ್ರಸಾದೋ ಭಕ್ತಿಸಂಭವಃ |
ಯಥೈವಾಂಕುರತೋ ಬೀಜಂ ಬೀಜತೋ ವಾ ಯಥಾಂಕುರಃ
II
ಶ್ರೀ ಸ್ವಾಮಿಗಳು ಗುರುತಿಸಿದಂತೆ ಇದೇ ಪಾಠಾಂತರವು ಜ್ಯೋತಿರ್ನಾಥನ ಶೈವ ರತ್ನಾಕರದಲ್ಲಿ ಕಂಡು ಬರುತ್ತದೆ. ಅಲ್ಲಿ ಅದರ ಆಕರವನ್ನು ಲಿಂಗಪುರಾಣವೆಂದು ಹೇಳಿದೆ.
ಅದೇ ಜ್ಯೋತಿರ್ನಾಥನು ಅದೇ ಗ್ರಂಥದಲ್ಲಿ ಇನ್ನೊಂದೆಡೆ ಅದೇ ಶ್ಲೋಕವನ್ನು ವಾತುಲಾಗಮದ್ದು ಎಂದು ಗುರುತಿಸಿದ್ದಾನೆ ಎಂದು ಶ್ರೀ ಸ್ವಾಮಿಗಳೇ ಹೇಳಿದ್ದಾರೆ,
(ಪು. 7). ಅದೇ ಶ್ಲೋಕ ಇನ್ನೂ ಆನೇಕ ಕಡೆ ಬಂದಿದ್ದರೂ ಅದನ್ನು ಸಿದ್ಧಾಂತ ಶಿಖಾಮಣಿಯದ್ದೆಂದು ಯಾರೂ ಗುರುತಿಸಿ ಎಂಬುದು ಒಂದು ಅಂಶವಾದರೂ, ಕೆಲವರು ವಾತುಲಾಗಮದ್ದೆಂದೂ, ಮತ್ತೆ ಕೆಲವರು ಶಿವಪುರಾಣದ್ದೆಂದೂ, ಮಿಕ್ಕ ಕೆಲವರು ಕಾಮಿಕಾಗಮದ್ದೆಂದೂ, ಸ್ಕಾಂದಪುರಾಣದ್ದೆಂದೂ, ಸುಪ್ರಭೇದಾಗಮದ್ದೆಂದೂ ಅದರ ಆಕರವನ್ನು ವಿವಿಧ ರೀತಿಯಲ್ಲಿ ಹೇಳಿರುವುದು ಇನ್ನೊಂದು ಗಣನೀಯ ಅಂಶ. ಇದರಿಂದ ಶ್ಲೋಕವನ್ನು ಬಳಸಿಕೊಂಡಿರುವವರು ಮೂಲವನ್ನು ನೋಡಿ ಉದಾಹರಿಸಿರುವರೋ ಅಥವಾ ಒಬ್ಬರು ಮಾಡಿರುವ ಉಲ್ಲೇಖವನ್ನು ನೋಡಿ ಮತ್ತೊಬ್ಬರು ತೆಗೆದುಕೊಂಡಿರುವರೋ ಎಂಬ ಸಂದೇಹ ಬರುತ್ತದೆ
. ಶ್ರೀ ಇಮ್ಮಡಿ ಶಿವಬಸವಸ್ವಾಮಿಗಳು ಇವೆಲ್ಲ ಆಕರಗಳಲ್ಲಿ ಒಂದನ್ನು ಅಂದರೆ ವಾಯುವೀಯ ಸಂಹಿತೆಯನ್ನು ಆಯ್ದು ಅದರಿಂದಲೇ ಈ ಶ್ಲೋಕವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳುತ್ತಾರೆ. ಅದಕ್ಕೆ ಅವರು ಕೊಡುವ ಕಾರಣವೆಂದರೆ ಬಸವಣ್ಣನವರು ಕೆಲವು ವಚನಗಳಲ್ಲಿ ಶಿವಪುರಾಣ ಮತ್ತು ತದಂತರ್ಗತ ವಾಯುವೀಯ ಸಂಹಿತೆಯಿಂದ ಶ್ಲೋಕಗಳನ್ನು ಉಲ್ಲೇಖಿಸಿದ್ದಾರೆ ಎಂಬುದು.
ಪ್ರಸ್ತುತ ಸಂದರ್ಭದಲ್ಲಂತೂ ಬಸವಣ್ಣನವರು ತಮ್ಮ ವಚನಗಳಿಗೆ ಆಕರವನ್ನು ಹೇಳಿಲ್ಲ. ಕೆಲವು ಕಡೆ ಶಿವಪುರಾಣದ ವಾಯುವೀಯ ಸಂಹಿತೆಯಿಂದ ಉಲ್ಲೇಖಿಸಿದ್ದಾರೆ ಎಂಬ ಕಾರಣದಿಂದ ಎಲ್ಲಿ ಆಕರವನ್ನು ಹೇಳಿಲ್ಲವೋ ಅಲ್ಲಿಯೂ ವಾಯುವೀಯ ಸಂಹಿತೆಯೇ ಆಕರವೆಂದು ಹೇಳಲು ಸಾಧ್ಯವೆ ?
ತಮ್ಮ ವಚನಗಳಲ್ಲಿ ಬಸವಣ್ಣನವರು ಬಹುಮಟ್ಟಿನ ಶ್ಲೋಕಗಳ ಆಕರಗಳನ್ನು ಹೇಳಿಲ್ಲ. ಪ್ರಸ್ತುತ ಶ್ಲೋಕವನ್ನು ಅವರು ಸಿ. ಶಿ.ಯಿಂದ ತೆಗೆದುಕೊಂಡಿಲ್ಲ ಎಂದು ಖಚಿತವಾಗಿ ಹೇಗೆ ಹೇಳುವದು ?
2. ಶ್ರೀ ಸಿದ್ಧಾಂತ ಶಿಖಾಮಣಿಯ ಕಾಲದ ಬಗ್ಗೆ ಚರ್ಚೆಯಲ್ಲಿ ಅದೊಂದೇ ಶ್ಲೋಕವನ್ನು ಆಧಾರವಾಗಿ ಕೆಲವರು ಇಟ್ಟುಕೊಂಡಿರಬಹುದು,
ಸಿ. ಶಿ.ಯ ಶ್ಲೋಕಗಳನ್ನು ಚನ್ನಬಸವಣ್ಣನವರ ವಚನಗಳಲ್ಲಿ
ಶಿವಭಕ್ತಿಸಮಾವೇಶೇ ಕ್ವ ಜಾತಿಪರಿಕಲ್ಪನಾ | ಇಂಧನೇಷ್ಟಗ್ನಿದಗ್ಧೇಷು ಕೋ ವಾ ಭೇದಃ ಪ್ರಕೀರ್ತ್ಯತೇ ||
(ಸಿದ್ಧಾಂತ ಶಿಖಾಮಣಿ11.55)
ಇದು ಚನ್ನಬಸವಣ್ಣನವರ ಒಂದು ವಚನದಲ್ಲಿ ವ.ಸಂ.234 ಉಲ್ಲೇಖಿಸಲ್ಪಟ್ಟಿದೆ.
ವಚನದಲ್ಲಿ ಕ್ವ ಜಾತಿಪರಿಕಲ್ಪನಾ ಎಂಬುದಕ್ಕೆ ಬದಲಾಗಿ " ನ ಜಾತಿ ಪರಿಕಲ್ಪನಾ" ಎಂಬ ಪಾಠಾಂತರವಿದೆ.
" ಯದಾ ಶಿವಕಲಾಯುಕ್ತಂ ಲಿಂಗಂ ದದ್ಯಾನ್ಮಹಾಗುರುಃ|
ತದಾರಭ್ಯ ಶಿವಸ್ತತ್ರ ತಿಷ್ಯತ್ಯಾಹ್ವಾನಮತ್ರ ಕಿಮ್||
ಸಸಂಸ್ಕಾರೇಷು ಲಿಂಗೇಷು ಸದಾ ಸನ್ನಿಹಿತಃ ಶಿವಃ|
ತತ್ರಾಹ್ವಾನಂ ಕರ್ತವ್ಯಂ ಪ್ರತಿಪತ್ರಿವಿರೋಧಕಮ್||
ನಾಹ್ವಾನಂ ನ ವಿಸರ್ಗಂ ಚ ಸ್ವೇಷ್ಟಲಿಂಗೇ ತು ಕಾರಯೇತ್
ಲಿಂಗಾನಿಷ್ಠಾಪರೋ ನಿತ್ಯಮಿತಿ ಶಾಸ್ತ್ರ ವಿನಿಚ್ಛಯಃ
ಸಿ.ಶಿಖಾಮಣಿ (10.45-47).
ಈ ಮೂರೂ ಶ್ಲೋಕಗಳು ಒಂದಾದ ಮೇಲೆ ಒಂದರಂತೆ ಚನ್ನಬಸವಣ್ಣನವರ ಒಂದು ವಚನದ ಆರಂಭದಲ್ಲಿ ಬಂದಿವೆ ನೋಡಿ, ಚನ್ನಬಸವಣ್ಣನವರ ವಚನಗಳು, ಹೆಚ್ಚಿನ ವ. ಸಂ. 33. (ಮೊದಲನೆಯ ಶ್ಲೋಕದ ಮೂರನೇ ಪಾದದಲ್ಲಿ 'ತದಾರಭ್ಯ' ಎಂಬುದಕ್ಕೆ ಬದಲಾಗಿ “ತದಾರಾಧ್ಯ' ಎಂದಿದೆ. ಇದು ಲೇಖನ ದೋಷವಾಗಿದೆ. ಎರಡನೆಯ ಶ್ಲೋಕದ ಆರಂಭದಲ್ಲಿ “ಸಸಂಸ್ಕಾರೇಷು' ಎಂಬುದಕ್ಕೆ ಬದಲಾಗಿ 'ಸುಸಂಸ್ಕೃತೇಷು' ಎಂದೂ ಅಂತ್ಯದಲ್ಲಿ ' ಎಂದೂ “ಪ್ರತಿಪತ್ತಿನಿರೋಧಕಮ್' ಎಂಬುದಕ್ಕೆ ಬದಲಾಗಿ ಪ್ರತಿಪತಿವಿರೋಧಃ ಪಾಠಾಂತರಗಳಿವೆ. ಕಡೆಯದು ಮತ್ತೆ ಲೇಖನ ದೋಷವೇ. ಮೂರನೇ ಶ್ಲೋಕದ ಪೂರ್ವಾರ್ಧ 'ನಾಹ್ವಾನಂ ನ ವಿಸರ್ಗಂ ಚ ಸ್ವೇಷ್ಟಲಿಂಗೇ ತು ಕಾರಯೇತ್' ಎಂಬುದಕ್ಕೆ ಬದಲಾಗಿ 'ಆಹ್ಮಾನಂ ಚ ವಿಸರ್ಗ ಚ ಸ್ವೇಷ್ಟಲಿಂಗೇ ತು ಕಾರಯೇತ್' ಎಂಬುದಕ್ಕೆ ಬದಲಾಗಿ 'ಅಹ್ವಾನಂ ಚ ವಿಸರ್ಗಂ ಚ ಸ್ವೇಷ್ಟಲಿಂಗೇ ನ ಕಾರಯೇತ್' ಎಂಬ ಪಾಠಾಂತರವಿದೆ) ಶ್ರೀ ಸ್ವಾಮಿಗಳು ಈ ಮೂರೂ ಶ್ಲೋಕಗಳಿಗೆ ಶಿವತತ್ತ್ವರತ್ನಾಕರ 11 186-(ಮೂರನೇ ಸಂಪುಟ, 186ನೇ ಪುಟ, ಮೈಸೂರು ಪ್ರಾಚ್ಯ ವಿದ್ಯಾ ಸಂಶೋಧನಾಲಯ, 1988) ಎಂದು ಆಧಾರ ಗ್ರಂಥವನ್ನೂ ಮೂಲವೆಂದು ಪುರಾಣಗಳು, ಶೈವಸಿದ್ದಾಂತ ದೀಪಿಕೆಗಳನ್ನು ಗುರುತಿಸಿದ್ದಾರೆ. (ನೋಡಿ ಪು. 152, 158, 163) ಶಿವತತ್ತ್ವ ರತ್ನಾಕರದಲ್ಲಿ ಅವು 9ನೇ ಕಲ್ಲೋಲ, 8ನೇ ತರಂಗದ 87, 88 ಮತ್ತು89ನೇ ಶ್ಲೋಕಗಳಾಗಿ ಬಂದಿವೆ. ಅವುಗಳ ಮೂಲ ಆಕರವನ್ನು ಶ್ರೀ ಸ್ವಾಮಿಗಳು ಪುರಾಣಗಳು, ಶೈವಸಿದ್ದಾಂತ ದೀಪಿಕೆಯೆಂದು ಯಾವ ಆಧಾರದ ಮೇಲೆ ಗುರುತಿಸಿದರೋ ತಿಳಿಯದು. ಏನೇ ಇರಲಿ ಈ ಮೂರು ಶ್ಲೋಕಗಳು ಶ್ರೀ ಸಿದ್ದಾಂತ ಶಿಖಾಮಣಿಯ ಮಹೇಶ್ವರ ಸ್ಥಲಾಂತರ್ಗತ ಆಹ್ವಾನನಿರಸನ ಸ್ಟಲಕ್ಕೆ ಸಂಬಂಧಿಸಿದವುಗಳು. ಚನ್ನಬಸವಣ್ಣನವರ ವಚನದಲ್ಲಿಯೂ ಇದೇ ಸಂದರ್ಭದಲ್ಲಿ ಬಂದಿವೆಯೆಂಬುದು ವಚನದ ಅಂತಿಮ ಭಾಗದಿಂದ ಸ್ಪಷ್ಟ. ನೋಡಿ
ಅದು ಕಾರಣ, ನಮ್ಮ ಕೂಡಲ ಚನ್ನಸಂಗಯ್ಯನ ಶರಣರು ಆಹ್ವಾನ ನಿಸರ್ಜನವೆಂಬ ಉಭಯ ಜಡತೆಯ ಬಿಟ್ಟು
ತಮ್ಮ ತಮ್ಮ ಕರಸ್ಥಲದಲ್ಲಿ ನಿಶ್ಚಯಿಸಿದರಾಗಿ
ಸ್ವಯಲಿಂಗವಾದರು ಕಾಣಿರೋ !
ಈ ಹಿನ್ನಲೆಯಲ್ಲಿ ಇವು ಶ್ರೀ ಸಿದ್ಧಾಂತ ಶಿಖಾಮಣಿಯ ಶ್ಲೋಕಗಳೇ, ಇವುಗಳನ್ನು ಶಿವತತ್ತ್ವ ರತ್ನಾಕರದಲ್ಲಿಯೂ ಉಲ್ಲೇಖಿಸಿದ್ದಾರೆ.
ಶ್ರೀ ಸಿದ್ದಾಂತ ಶಿಖಾಮಣಿಯೇ ನೂರೊಂದು ಸ್ಥಲ ಪರಿಕಲ್ಪನೆಯ ಮೂಲ ಆಕರ ಎಂಬುದು ಸಾಭಿತು ಆಗಿರುವ ವಿಷಯ.
***********************************************
ಭಾಷಾ ಪ್ರಬಂಧವೆಂದರೆ ಕನ್ನಡ ವಚನ ಸಾಹಿತ್ಯ.
ಇದನ್ನು ಸಾಧಿಸಲು ಶ್ರೀ ಇಮ್ಮಡಿ ಶಿವಬಸವ ಸ್ವಾಮಿಗಳು ತಮ್ಮ ನಿಜದ ನಿಲುವು ಕೃತಿಯಲ್ಲಿ ನೋಡಿ ಪು.43_5 ಅವರು ಅದಕ್ಕಾಗಿ ಅವಲಂಬಿಸಿದ ಪ್ರಮುಖ ಆಧಾರ ಕ್ರೀಯಾಸಾರದ ಈ ಕೆಳಗೆ ಕೊಟ್ಟ ಉಕ್ತಿ.
"ಏಕೋತ್ತರಶತಸ್ಥಲಾನಾಂ ಷಟ್ ಸ್ಥಲಾಂತರ್ಗತತ್ತ್ವೇನ
ನ ತೇಷಾಂ ಪೃಥಗುಪದೇಶಃ
ತದ್ಭೇದಸ್ತು ಭಾಷಾ ಪ್ರಬಂಧಾದೇವ ಅವಗಂತವ್ಯಃ"
(ಕ್ರೀಯಾಸಾರ, ಮೈಸೂರು ಪ್ರಾಚ್ಯ ವಿದ್ಯಾ ಸಂಶೋಧನಾಲಯ) ಭಾಗ 3 ಪು.118)
ಇಲ್ಲಿ ಶ್ರೀ ಸ್ವಾಮಿಗಳು ಹೇಳುತ್ತಾರೆ "ಇಲ್ಲಿ ಭಾಷಾ ಪ್ರಬಂಧವೆಂದರೆ ಕನ್ನಡ ವಚನ ಸಾಹಿತ್ಯ. ಏಕೆಂದರೆ ನೀಲಕಂಠ ಶಿವಾಚಾರ್ಯರು ತಮ್ಮ ಭಾಷಾ ಪ್ರಬಂಧದಲ್ಲಿ ಒಂದು ಗ್ರಂಥವನ್ನು ರಚಿಸಿದ್ದೇನೆಂದು ಹೇಳಿಕೊಂಡಿದ್ದಾನೆ.ಎಂದು ಹಾಗೆ ಹೇಳಿಕೊಂಡಿದ್ದಾನೆಂದು
ಶ್ರೀ ಇಮ್ಮಡಿ ಶಿವಬಸವ ಸ್ವಾಮಿಗಳು ಹೇಳುವ ವಾಕ್ಯ ಹೀಗಿದೆ.
" ಅಧ್ವನಾಮಧ್ವಪತೇ ಶ್ರೇಷ್ಠಸ್ಯಾಧ್ವನ: ಪಾರಮಶಿಯೇ?" ತಿಮಂತ್ರೇಣ ಕೃತಕಲಾ ಸಂವಿಧಾನಸ್ಯ
ಲಿಂಗಸ್ಯ ದೀಕ್ಷಾಪೂರ್ವಕಂ ಧಾರಣಮಿತ್ಯಾಗಮ ಪ್ರಕಾರೋ ಭಾಷಾ ಪ್ರಬಂಧೇಶಸ್ಮತ್ ಕೃತೇsವ ಲೋಕನೀಯ: (ಕ್ರಿಯಾಸಾರ, ಭಾಗ 3, ಪು. 49)
ಈ ಎರಡೂ ವಾಕ್ಯಗಳನ್ನು ಗಮನವಿಟ್ಟು ನೋಡಿ. ಮೊದಲ ವಾಕ್ಯದಲ್ಲಿ ಭಾಷಾ ಪ್ರಬಂಧಾತ್?' ಎಂಬುದು ಪಂಚಮೀ ವಿಭಕ್ತಿ ಏಕವಚನದಲ್ಲಿದೆ. ಅದರ ಅರ್ಥ 'ಭಾಷಾ ಪ್ರಬಂಧದಿಂದ' ಎಂದು. ಇನ್ನು ಎರಡನೇ ವಾಕ್ಯದಲ್ಲಿ ಭಾಷಾ ಪ್ರಬಂಧೇ ಅಸ್ಮತ್ ಕೃತೇ” ಶಬ್ದಗಳು ಸಪ್ತಮೀ ವಿಭಕ್ತಿಯಲ್ಲಿವೆ. "ಭಾಷಾ ಪ್ರಬಂಧೇ'' ಎಂಬುದು ವಿಶೇಷ್ಯ ಮತ್ತು “ಅಸ್ಮತ್ ಕೃತೇ” ಎಂಬುದು ವಿಶೇಷಣ. ಅವುಗಳ ಅರ್ಥವೆಂದರೆ ನಾನು ರಚಿಸಿದ ಭಾಷಾ ಪ್ರಬಂಧದಲ್ಲಿ'' ಎಂದು. ಅವುಗಳಿಂದ ಶ್ರೀ ಸ್ವಾಮಿಗಳು ಹೇಗೆ “ಭಾಷಾ ಪ್ರಬಂಧದಲ್ಲಿ ಒಂದು ಗ್ರಂಥವನ್ನು ಆತನು ರಚಿಸಿದ್ದ 'ನೆಂದು ಅರ್ಥವನ್ನು ಹೊರಡಿಸುತ್ತಾರೋ ಕಾಣೆ,
ಎರಡೂ ವಾಕ್ಯಗಳಲ್ಲಿ ಕ್ರಿಯಾಸಾರದ ಕರ್ತೃ ನೀಲಕಂಠ ಶಿವಾಚಾರ್ಯರು ಹೇಳುತ್ತಿರುವುದು ಆವರು ಬರೆದ ಒಂದು ಭಾಷಾ ಪ್ರಬಂಧದ' ಬಗ್ಗೆ, ಗ್ರಂಥದಲ್ಲಿ ಮೊದಲಿಗೆ ಬರುವ ಎರಡನೇ ವಾಕ್ಯದಲ್ಲಿ ದೀಕ್ಷಾಪೂರ್ವಕ ಲಿಂಗಧಾರಣೆಯ ಬಗ್ಗೆ ತಾವು ಬರೆದ 'ಭಾಷಾ ಪ್ರಬಂಧ'ದಲ್ಲಿ ನೋಡಲು ಹೇಳಿದರೆ ಅನಂತರ ಬರುವ ಮೊದಲನೇ ವಾಕ್ಯದಲ್ಲಿ ಏಕೋತ್ತರ ಶತಸ್ಥಲಗಳ ವಿವರಗಳ ಬಗ್ಗೆ ಅದೇ `ಭಾಷಾ ಪ್ರಬಂಧ'ದಿಂದ ತಿಳಿದುಕೊಳ್ಳಲು ಸೂಚಿಸುತ್ತಾರೆ. ಭಾಷಾ ಪ್ರಬಂಧ'ವೆಂದರೆ ನೀಲಕಂಠ ಶಿವಾಚಾರ್ಯರು ಕನ್ನಡಿಗರಾದ್ದರಿಂದ ಒಂದು ಕನ್ನಡ ಗ್ರಂಥವೆಂದು ತಿಳಿದುಕೊಳ್ಳಲು ಕಸರತ್ತು ಮಾಡಬೇಕಾಗಿಲ್ಲ. ಆದರೆ “ಭಾಷಾ ಪ್ರಬಂಧ'ವೆಂದರೆ ಕನ್ನಡ ವಚನ ಸಾಹಿತ್ಯವೆಂದು ಸಾಧಿಸಲು ಶ್ರೀಇಮ್ಮಡಿ ಶಿವಬಸವ ಸ್ವಾಮಿಗಳು ಮಾಡಿದ ಕಸರತ್ತು ವ್ಯರ್ಥವೆಂದು ವಿಷಾದದಿಂದ ಹೇಳಬೇಕಾಗುತ್ತದೆ.
ಇದರ ನೆಲೆಯನ್ನು 'ಯುಕ್ತಿ'ಯಿಂದ ಅಲುಗಾಡಿಸಲು ಪ್ರಯತ್ನಿಸಿ ಸೋತಿದ್ದಾರೆ.
, ಹೀಗೆ ನೀಲಕಂಠ ಶಿವಾಚಾರ್ಯರು ನೂರೂಂದು ಸ್ಥಲಗಳ ಬಗ್ಗೆ ತಿಳಿದುಕೊಳ್ಳಲು ತಮ್ಮ ಕನ್ನಡ ಗ್ರಂಥವನ್ನು ನೋಡಲು ಸೂಚಿಸುತ್ತಾರೆಯೇ ಹೊರತು, ಕನ್ನಡ ವಚನ ಸಾಹಿತ್ಯವನ್ನಲ್ಲ.
ಅಂದರೆ ಅವರು ಕನ್ನಡದಲ್ಲಿ ಒಂದು ಗ್ರಂಥವನ್ನು ಬರೆದಿದ್ದರು, ಅದರಲ್ಲಿ ನೂರೊಂದು ಸ್ಥಲಗಳ ವಿವರಣೆ ಇತ್ತು ಹಾಗೆಂದ ಮಾತ್ರಕ್ಕೆ ನೂರೊಂದು ಸ್ಥಲಗಳ ಕಲ್ಪನೆ ಅವರಿಂದಾಗಲಿ, ಕನ್ನಡ ವಚನ ಸಾಹಿತ್ಯದಿಂದಾಗಲಿ ಬಂದದ್ದೆಂದು ಹೇಳಲು ಸಾಧ್ಯವೇ ಇಲ್ಲ .
ನೀಲಕಂಠ ಶಿವಾಚಾರ್ಯರು ತಮ್ಮ ಕ್ರಿಯಾಸಾರದಲ್ಲಿ "ಪಿಂಡಾದಿಜ್ಞಾನಶೂನ್ಯಾಂತಮ್ ಏಕೋತ್ತರಶತಸ್ಥಲಮ್' (ಸಾ., ಭಾಗ 1, ಪು. 11, ಶ್ಲೋಕ 6) ಎಂದು ಅಧಿಕಾರಿಯ ಲಕ್ಷಣವನ್ನು ತಿಳಿಸುವ ಸಂದರ್ಭದಲ್ಲಿ ಹೇಳಿರುವುದು ತಮಗೆ ಹಿಂದಿನಿಂದಲೂ ಬಂದ ಪಿಂಡಸ್ಥಲದಿಂದ ಹಿಡಿದುಜ್ಞಾನಶೂನ್ಯ ಸ್ಥಲದವರೆಗಿನ ನೂರೊಂದು ಸ್ಥಲಗಳ ಪರಿಕಲ್ಪನೆಯ ಬಗ್ಗೆ ಆ ಪರಿಕಲ್ಪನೆ ಮತ್ತುನೂರೊಂದು ಸ್ಥಲಗಳ ಸಂಪೂರ್ಣ ಹಾಗೂ ವ್ಯವಸ್ಥಿತ ವಿವರಣೆ ಮೊಟ್ಟ ಮೊದಲಿಗೆ ಬಂದಿರುವುದು ನಿಸಂದಿಗ್ಧವಾಗಿ ಶ್ರೀ ಸಿದ್ಧಾಂತ ಶಿಖಾಮಣಿಯಲ್ಲಿಯೇ.
-------------------------------------------------
. ಅದು ಖಂಡಿತವಾಗಿಯೂ ಬಸವಾದಿ ಶರಣರ ವಚನಗಳಲ್ಲಿ ರೂಪಿತವಾದದ್ದಲ್ಲ, ಶ್ರೀ ಇಮ್ಮಡಿ ಶಿವಬಸವ ಸ್ವಾಮಿಗಳೇ ಗುರುತಿಸಿದಂತೆ (ನೋಡಿ ಪು 47)
ಬಸವಪೂರ್ವ ಕಾಲದ ಜೇಡರ (ದೇವರ) ದಾಸಿಮಯ್ಯನವರ “ಸಾಗರದೊಳಗಣ ಕಿಚ್ಚಿನ ಸಾಕಾರದಂತೆ'' ಎಂದು ಆರಂಭವಾಗುವ ವಚನದಲ್ಲಿ "
"ಒಂದಂಗದೂಳಡಗಿದ ನೂರೊಂದರ ಪರಿ, ರಾಮನಾಥಾ” ಎಂದು ನೂರೊಂದು ಸ್ಥಲದ ಉಲ್ಲೇಖವಿರುವುದಾದರೆ, ಅದು ಅವರಿಗಿಂತ ಹಿಂದೆ ಇದ್ದ ಕಲ್ಪನೆ ಎಂದು ಸ್ಪಷ್ಟವಾಗುತ್ತಿರುವಾಗ
“ಶಿವಶರಣರೇ ಪ್ರಪ್ರಥಮವಾಗಿ ನೂರೂಂದು ಸ್ಥಲದ ವಿವರವನ್ನು ನೀಡಿದ ಮಹಾನುಭಾವರು'' ಎಂದೆನ್ನುವುದು ಹೇಗೆ ?
ಇಲ್ಲಿ ಡಾ.ಎಂ ಶಿವಕುಮಾರ ಸ್ವಾಮಿಗಳು ಉತ್ತರಿಸುತ್ತಾ ಹೇಳುತ್ತಾರೆ
ನಾನು ಕರ್ನಾಟಕ ವಿಶ್ವವಿದ್ಯಾಲಯದ ಶ್ರೀ ಬಸವೇಶ್ವರ ಪೀಠದಲ್ಲಿ 2001ರಲ್ಲಿ ನೀಡಿದ 'ಶೈವಾಗಮಗಳು ಮತ್ತು ವಚನ ಸಾಹಿತ್ಯ' ಎಂಬ ಉಪನ್ಯಾಸ ಮಾಲೆಯಲ್ಲಿ ಉಲ್ಲೇಖಿಸಿದಂತೆ ಚನ್ನಬಸವಣ್ಣನವರ ಒಂದು ವಚನದಲ್ಲಿ ಮತ್ತು ಪ್ರಭುದೇವರ ಒಂದು ವಚನದಲ್ಲಿ ಬಂದಿರುವ 57 ಲಿಂಗಸ್ಥಲಗಳ ಹೆಸರುಗಳು ಶ್ರೀ ಸಿದ್ಧಾಂತ ಶಿಖಾಮಣಿಯಲ್ಲಿ ಬಂದಿರುವ 57 ಲಿಂಗಸ್ಥಳಗಳ ಹೆಸರುಗಳೇ ಆಗಿವೆ, ಅದೇ ಕ್ರಮದಲ್ಲಿ ಹೆಸರಿಸಲ್ಪಟ್ಟಿವೆ. (ನೋಡಿ 'ಶೈವಾಗಮಗಳು ಮತ್ತು ವಚನ ಸಾಹಿತ್ಯ', 2003, . 112-113; ವಚನಗಳು, ವ. ಸಂ. 104 ಮತ್ತು ಅಲ್ಲಮ ಪ್ರಭುದೇವರ ವಚನ ಸಂಪುಟ, ವ. ಸಂ. 789). ಶ್ರೀ ಸ್ವಾಮಿಗಳು ಹೇಳಿದಂತೆ (ಪು, 46) ಚನ್ನಬಸವಣ್ಣನವರ ವಚನದಲ್ಲಿ ಲಿಂಗಸ್ಥಲದ ಸಂಪೂರ್ಣ ವಿವರಗಳೇನೂ ದೊರೆಯುತ್ತಿಲ್ಲ. ಕೇವಲ 57 ಲಿಂಗಸ್ಥಲಗಳ ಹೆಸರುಗಳು ಮಾತ್ರ ದೊರೆಯುತ್ತವೆ. ಅವುಗಳ ಸ್ವರೂಪವನ್ನು ವಚನ ಸಾಹಿತ್ಯದಲ್ಲಿ ಆಯಾ ಸ್ಥಲದ ಹೆಸರನ್ನಿತ್ತು ಎಲ್ಲಿಯೂ ವಿವರಿಸಿಲ್ಲ, ಅಲ್ಲಮಪ್ರಭುಗಳು ತಮ್ಮ ವಚನದಲ್ಲಿ ಕಡೆಯ ಮೂರು ಸ್ಥಲಗಳಿಗೆ (ಸ್ವಪರಾಜ್ಞಾಸ್ಥಲ ಅಥವಾ ಸ್ವಯಪರವರಿಯದ ಸ್ಥಲ, ಭಾವಾಭಾವಲಯ ಸ್ವಲ ಅಥವಾ ಭಾವ ಭಾವನಷ್ಟ ಸ್ಥಲ ಮತ್ತು ಜ್ಞಾನ ಶೂನ್ಯ ಸ್ಥಲಗಳಿಗೆ) ಮಾತ್ರ ತಮ್ಮದೇ ಆದ ವಿವರಣೆ ಯನ್ನು ಕೊಟ್ಟಿದ್ದಾರೆ.
ಮುಂದುವರಿದಿದೆ ಭಾಗ ಎರಡು
Dattatreya S Mulge
No comments:
Post a Comment
If you have any doubts. please let me know...