April 14, 2021

ಕರೋನಾಗೆ ವಿದುರ ನೀತಿ ಅನುಸರಿಸಿ

#ವಿದುರ_ನೀತಿ

ಮಹಾತ್ಮಾ ವಿದುರನಿಗೆ ತನ್ನ ಗುಪ್ತಚರರಿಂದ ದುರ್ಯೋಧನನಿಂದ ಪಾಂಡವರ ನಾಶಕ್ಕಾಗಿ ಮಾಡುವ ಎಲ್ಲಾ ಕುಟಿಲತೆಯ ಬಗ್ಗೆ ಸೂಚನೆ ಸಿಗುತಿತ್ತು. ಆದರೆ ಪಾಂಡವರನ್ನು ವಾರಣಾವತಕ್ಕೆ ಕಳುಹಿಸದಂತೆ ಮಾಡುವುದು ವಿದುರನ ಕೈಯಲ್ಲಿ ಸಾಧ್ಯವಿರಲಿಲ್ಲ. (ಅರಗಿನ ಮನೆಯಲ್ಲಿ ಪಾಂಡವರನ್ನು ಕೊಲ್ಲುವ ಉಪಾಯ ದುರ್ಯೋಧನ ಮಾಡಿದ್ದ). ಆದರೆ ಅವರನ್ನು ರಕ್ಷಿಸುವ ಪ್ರಯತ್ನ ಮಾಡುವುದು  ಸಾಧ್ಯವಿತ್ತು. ಅದೇ ರೀತಿ ಅವರನ್ನು ರಕ್ಷಿಸುವ ಉಪಾಯವನ್ನು ಸತತವಾಗಿ ಚಿಂತಿಸುತ್ತಿದ್ದ.

ವಾರಣಾವತಕ್ಕೆ ತೆರಳುವ ಮೊದಲು ಪಾಂಡವರು ಕುಂತೀ ಸಮೇತ ಮಹಾತ್ಮ ವಿದುರನ ಆಶೀರ್ವಾದ ಪಡೆಯುವುದಕ್ಕೆ ಬರುತ್ತಾರೆ. ಸಂಧರ್ಭ ನೋಡಿ ವಿದುರ ಧರ್ಮರಾಯನಲ್ಲಿ ವಿಚಾರಿಸುತ್ತಾನೆ. ಒಂದು ವೇಳೆ ಭಯಾನಕ  ಕಾಡ್ಗಿಚ್ಚು ಉಂಟಾದರೆ, ಕಾಡಿನಲ್ಲಿ ಯಾವ ಪ್ರಾಣಿ ಸುರಕ್ಷಿತವಾಗಿ ಉಳಿಯುವ ಸಾಧ್ಯವೆಂದು ಕೇಳುತ್ತಾನೆ. ಆಗ ಧರ್ಮರಾಯ ಕಾಡ್ಗಿಚ್ಚು ಹತ್ತಿಕೊಂಡಾಗ ಸ್ವಚ್ಛಂದವಾಗಿ, ನಿರ್ಭಯದಿಂದ ಸಂಚರಿಸುವ, ಸಿಂಹ, ಹುಲಿ, ಚಿರತೆ, ಆನೆ ಮತ್ತು ಎಲ್ಲಕ್ಕಿಂತ ವೇಗವಾಗಿ ಓಡುವ ಜಿಂಕೆ ಬೆಂಕಿಯಿಂದ ಸುಟ್ಟು ಸಾಯುತ್ತವೆ. ಆದರೆ ಬಿಲದಲ್ಲಿರುವ ಇಲಿ ಬದುಕಿ ಉಳಿಯುತ್ತದೆ. ಅದು ಬೆಂಕಿ ನಂದಿದ ಮೇಲೆ ಬಿಲದಿಂದ ಹೊರಬಂದು ಜೀವನ ಸಾಗಿಸುತ್ತದೆ. ಆಗ ವಿದುರ ಹೇಳುತ್ತಾನೆ, ಧರ್ಮರಾಯ, ನಿನ್ನ ಉತ್ತರದಿಂದ ನನಗೆ ಸಮಾಧಾನವಾಯಿತು. ಸುರಕ್ಷಿತವಾಗಿ ಹೋಗಿಬರುವಂತೆ ಆಶೀರ್ವಾದ ನೀಡುತ್ತಾನೆ.

ಇಡೀ ವಿಶ್ವಕ್ಕೆ ಬಂದಿರುವ ಅನಾರೋಗ್ಯ ಆಪತ್ತು ಕೂಡ ಒಂದು ಭಯಾನಕ ಅಗ್ನಿಯಾಗಿದೆ. ಯಾರು ತಮ್ಮ ತಮ್ಮ ಮನೆಯಲ್ಲಿರುತ್ತಾರೋ ಅವರು ಸುರಕ್ಷಿತವಾಗಿರುತ್ತಾರೆ. ದಯವಿಟ್ಟು ಈ ಅಗ್ನಿ ಶಾಂತವಾಗುವ ನಿರೀಕ್ಷೆಯಲ್ಲಿರಿ...

 || *ಸರ್ವೇ ಜನಃ ಸುಖಿನೋ ಭವಂತು* |l

No comments:

Post a Comment

If you have any doubts. please let me know...