April 15, 2021

ಆಕಳ_ಹಾಲಿನಲ್ಲಿರುವ_ಅಭಿಮಾನಿ_ದೇವತೆಗಳು

ಗೃಹ_ಪ್ರವೇಶದಲ್ಲಿ ಯಾಕೆ ಹಾಲನ್ನು ಉಕ್ಕಿಸಬೇಕು ,
ಆಕಳಹಾಲಿಗೆ ಯಾಕಿಷ್ಟು ಮಹತ್ವ  ಇದೆ ಅಂದರೆ  ಆ ಹಾಲಿನ ಪ್ರತಿಯೊಂದು ಹಂತದಲ್ಲೂ ಒಬ್ಬೊಬ್ಬ ಅಭಿಮಾನಿ ದೇವತೆಗಳಿದ್ದಾರೆ , 

ಅಗ್ನಿ ಹೋತ್ರ ,ಹವನ , ಭಗವಂತನ ನೈವೇದ್ಯಕ್ಕೆ , ಅಭಿಷೇಕಕ್ಕೆ   ಆಕಳಹಾಲು ಅಮೃತಕ್ಕೆ ಸಮಾನ
ಮೊದಲು ಹಾಲು  ಕೆಚ್ಚಲಿನಲ್ಲಿರುತ್ತದೆ. 

ಐತರೇಯ ಆರಣ್ಯಕದಲ್ಲಿ ಹೇಳುವಂತೆ ‘ರೌದ್ರಂ ಗವಿಸತ್’.
ಕೆಚ್ಚಲಲ್ಲಿರುವ ಹಾಲಿಗೆ ರುದ್ರದೇವರು ದೇವತೆ.
ನಂತರ ಹಾಲನ್ನು ಕರೆಯುವುದಕ್ಕಾಗಿ ಕರುವನ್ನು ಬಿಡುತ್ತೇವೆ. 

ಕೆಚ್ಚಲಿಗೆ ಕರು ಬಾಯಿ ಹಾಕುವಾಗ ಅದರ ದೇವತೆ ವಾಯು.

ನಂತರ ಹಾಲು ಕರೆಯುವುದು; ಕೆಚ್ಚಲಿನಿಂದ ಪಾತ್ರೆಗೆ ಹಾಲು ಬೀಳುವ ಹಂತದ ದೇವತೆ ಅಶ್ವಿನೀ ದೇವತೆಗಳು.
ಆನಂತರ ಪಾತ್ರೆಯಲ್ಲಿ ಹಾಲು ತುಂಬುತ್ತದೆ. 

‘ಸೌಮ್ಯಂ ದುಗ್ಧಂ’ – ಹಾಲುತುಂಬಿದ ಪಾತ್ರೆಯ ದೇವತೆ ಚಂದ್ರ. 

ಈ ಹಾಲನ್ನು ಒಲೆಯ ಮೇಲೆ ಇಟ್ಟೆವು; ಈ ಹಂತದ ದೇವತೆ ವರುಣ.
ಒಲೆಯ ಮೇಲಿಟ್ಟಿರುವ ಹಾಲು ಉಕ್ಕುತ್ತದೆ. ಉಕ್ಕುವ ಹಾಲಿನ ದೇವತೆ ಆದಿತ್ಯ(ಪೂಷಾ).

ಹಾಲು ಉಕ್ಕಿ ಕೆಳಕ್ಕೆ ಹರಿಯಿತು; ಈ ಉಕ್ಕಿ ಹರಿಯುವ ಹಾಲಿನ ದೇವತೆ ಮರುತ್ತು.

[ಹಾಲು ಉಕ್ಕಿ ಹರಿಯಬೇಕು, ಅದು ಪರಮ ಮಾಂಗಲಿಕ. ಇದಕ್ಕಾಗಿ ಗೃಹ ಪ್ರವೇಶಕಾಲದಲ್ಲಿ ಹಾಲನ್ನು ಉಕ್ಕಿಸುತ್ತಾರೆ].

ಹಾಲು ಉಕ್ಕಿ ಬಿದ್ದಾಗ  ಅದನ್ನು ಹಾಗೆಯೇ ಒರೆಯಿಸಬಾರದು  ಅರಿಷಿಣ ಕುಂಕುಮ ಹಾಕಿ ನಂತರ ಒರೆಸಬೇಕು 
ಹಾಲು ಉಕ್ಕಿದಮೇಲೆ ಬೆಂಕಿ ಕಡಿಮೆ ಮಾಡುತ್ತೇವೆ. 

ಆಗ ಹಾಲಿನ ಮೇಲೆ ಸಣ್ಣಸಣ್ಣ ಬಿಂದುಗಳು ಕಾಣಿಸಿಕೊಳ್ಳುತ್ತವೆ. ಈ ರೀತಿ ಚುಕ್ಕೆಬಿದ್ದ ಹಾಲಿಗೆ ದೇವತೆ ವಿಶ್ವೇದೇವತೆಗಳು.

ಆ ನಂತರ ಚುಕ್ಕೆ ಹೋಗಿ ಕೆನೆ ಕಾಣಿಸಿಕೊಳ್ಳುತ್ತದೆ. ಕೆನೆ ಕಟ್ಟಿದ ಹಾಲಿಗೆ ಮಿತ್ರ ನಾಮಕ ಆದಿತ್ಯ ದೇವತೆ.

ಇಂತಹ ಹಾಲನ್ನು ಒಲೆಯಿಂದ ಕೆಳಗಿಳಿಸುತ್ತೇವೆ. ಹೀಗೆ ಕೆಳಕ್ಕಿಟ್ಟ ಹಾಲಿಗೆ ದ್ಯಾವಾ-ಪ್ರಥ್ವೀ ದೇವತೆಗಳು.

ಹಾಲು ತಣ್ಣಗಾದ ಮೇಲೆ ಅದನ್ನು ಎತ್ತಿಕೊಂಡು ಹೋಗುತ್ತೇವೆ. ಆ ಹಂತದಲ್ಲಿ ಸವಿತ್ರ ಅದರ ದೇವತೆ.

ಈ ಹಾಲನ್ನು ಯಜ್ಞಶಾಲೆಯೊಳಗೆ ಒಯ್ಯುತ್ತೇವೆ. ಆಗ ಸ್ವಯಂ ವಿಷ್ಣು ಅದರ ದೇವತೆ.

ಇಂತಹ ಹಾಲನ್ನು ಪುರೋಹಿತರ ಪಕ್ಕದಲ್ಲಿ ಇಟ್ಟೆವು. ಆಗ ಅದಕ್ಕೆ ಬೃಹಸ್ಪತಿ ದೇವತೆ.

ನಂತರ ಮೊದಲನೇ ಆಹುತಿ. ಆ ಆಹುತಿಯ ದೇವತೆ ಅಗ್ನಿ [ಅಗ್ನಯೇ ಪೂರ್ವಾಹುತಿಃ].

‘ಅಗ್ನಯೇ ಸ್ವಾಹಾ-ಅಗ್ನಯ ಇದಂ ನ ಮಮ’ ಎಂದು ಆಹುತಿ ಕೊಡುವುದು.

ನಂತರ – ಪ್ರಜಾಪತೆಯೇ ಸ್ವಾಹ ಪ್ರಜಾಪತಯ ಇದಂ ನ ಮಮ ಎಂದು ಆಹುತಿ ಕೊಡುತ್ತಾರೆ.

ಕೊನೆಯದಾಗಿ ‘ಇಂದ್ರಮ್ ಹುತಮ್’- ಎಂದು ಇಂದ್ರನಿಗೆ ಆಹುತಿ ಕೊಡುತ್ತಾರೆ.

ಈತ ಹದಿನಾರನೇ ದೇವತೆ.

ಹೀಗೆ ಯಜ್ಞ ,ಹೋಮ ,ಹವನ ಎಲ್ಲವೂ ಆಕಳ ಹಾಲಿಲ್ಲದೆ ಅಪೂರ್ಣ , ಗೋಮಾತೆಗೆ ಪ್ರತಿದಿನ  ಪೂಜೆ ಪ್ರದಕ್ಷಣೆ ನಮಸ್ಕಾರ ಮಾಡಿದರೆ ಮೂವತ್ತಮೂರು ಕೋಟಿ ದೇವತೆಗಳು ಸಂತ್ರಪ್ತರಾಗುತ್ತಾರೆ...

▬▬▬ஜ۩۞۩ஜ▬▬▬*▬▬▬ஜ۩۞۩ஜ▬▬
*ಸರ್ವೇಷಾಂ ಸಮಸ್ತ ಸನ್ಮಂಗಳಾನಿ ಭವಂತು*
*'ಸರ್ವೇ ಜನಾಃ ಸುಖಿನೋ ಭವಂತು'*
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬

No comments:

Post a Comment

If you have any doubts. please let me know...