*ಜಮಾತಾ ಜಠರಂ ಜಾಯಾ ಜಾತವೇದಾ ಜಲಾಶಯ |*
*ಪೂರಿತನೈವ ಪೂರ್ಯಂತೇ ಜಕಾರ ಪಂಚದುರ್ಲಭಾ ||*
1. ಜಮಾತಾ ಅಂದರೆ *'ಅಳಿಯ'**ಎಷ್ಟು ಕೊಟ್ಟರೂ ಸಾಕು ಎನ್ನುವುದಿಲ್ಲ
2 . ಜಠರಂ ಅಂದರೆ *'ಹೊಟ್ಟೆ'* ಎಷ್ಟೇ ಆಹಾರ ಸೇವಿಸಿದರೂ ಮರುದಿನ ಪುನಃ ಆಹಾರ ಕೊಡಬೇಕಾಗುತ್ತದೆ .
3 . ಜಾಯಾ ಅಂದರೆ *'ಹೆಂಡತಿ'* ಈಕೆ ಎಷ್ಟು ಸೀರೆಗಳಿದ್ದರೂ ಆಭರಣಗಳಿದ್ದರೂ ಇನ್ನೂ ಬೇಕೆನ್ನುತ್ತಾಳೆ .
4 . ಜಾತವೇದಾ ಅಂದರೆ *'ಆಗ್ನಿ'* ಬೆಂಕಿಗೆ ಏನನ್ನು ಹಾಕಿದರೂ ಎಷ್ಟು ಹಾಕಿದರೂ ಎಲ್ಲವನ್ನು ಸುಡುತ್ತದೆ .
5 . ಜಲಾಶಯ ಎಂದರೆ *'ಸಮುದ್ರ'* ಇದಕ್ಕೆ ಎಷ್ಟು ನೀರು ತುಂಬಿದರೂ (ಅರ್ಥಾತ್ ನದಿಗಳು ಬಂದು ಸೇರಿದರೂ )ಸಮುದ್ರ ತುಂಬುವುದಿಲ್ಲ
ಈ ಐದು *ಜ* ಕಾರಗಳನ್ನು ತೃಪ್ತಿ ಪಡಿಸಲು ಸಾಧ್ಯ ಆಗುವುದಿಲ್ಲ .
No comments:
Post a Comment
If you have any doubts. please let me know...