April 12, 2021

“ನನಗೆ ದೆಹಲಿಗೆ ಬರೋಕೆ ಆಗಲ್ಲ ನನ್ನ ಬಳಿ ಅಷ್ಟು ದುಡ್ಡಿಲ್ಲ, ದಯಮಾಡಿ ನೀವೇ ಅದನ್ನ ನನಗೆ ಪೋಸ್ಟ್ ಮೂಲಕ ಕಳಿಸಿಕೊಡಿ ಮೋದಿಜೀ” ಹಲದರ್ ನಾಗ್

ಯಾವ ವ್ಯಕ್ತಿಯ ಹೆಸರಿನ ಹಿಂದೆ ಇದುವರೆಗೂ ‘ಶ್ರೀ’ ಸೇರಿಸಿಲ್ಲ, ಇದುವರೆಗೂ ಆತನ ಬಳಿ ಕೇವಲ 3 ಜೊತೆ ಬಟ್ಟೆಗಳಿವೆ, ಒಂದು ಜೊತೆ ರಬ್ಬರ್ ಚಪ್ಪಲ್, ಒಂದೇ ಒಂದು ಕನ್ನಡಕ ಅದೂ ಹಳೆಯದ್ದು ಹಾಗು ಆತ ಕೇವಲ 732 ರೂಪಾಯಿಯ ಮಾಲೀಕನಾಗಿದ್ದಾನೆ. ಹೌದು ಇದೇ ಅತೀ ಸಾಮಾನ್ಯ ವ್ಯಕ್ತಿ ಈಗ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರ ಮೂಲತಃ ಒರಿಸ್ಸಾದವರಾಗಿದ್ದು ಇವರ ಹೆಸರು ಹಲಧರ್ ನಾಗ್ ಎಂಬುದಾಗಿದೆ.
ಅಷ್ಟಕ್ಕೂ ಇವರಿಗೆ ಯಾಕೆ ಪದ್ಮಶ್ರೀ ಪ್ರಶಸ್ತಿ ಅಂತ ಯೋಚಿಸುತ್ತಿದ್ದೀರ? ಬನ್ನಿ ಅದರ ಬಗ್ಗೆ ನಿಮಗೆ ತಿಳಿಸುತ್ತೇವೆ. ಹಲಧರ್ ನಾಗ್ ರವರು ಕೋಸಲಿ ಭಾಷೆಯ ಪ್ರಸಿದ್ಧ ಕವಿಯಾಗಿದ್ದಾರೆ. ವಿಶೇಷವೆಂದರೆ ಅವರು ಇದುವರೆಗೂ ಅವರು ಬರೆದ ಕವಿತೆಗಳು ಹಾಗು 20 ಮಹಾಕವ್ಯಗಳೇನಿವೆಯೋ ಅವುಗಳೆಲ್ಲಾ ಈಗಲೂ ಅವರ ನಾಲಿಗೆಯ ಮೇಲೆಯೇ ಇವೆ. ಅವರು ಬರೆದ ಯಾವ ಕಾವ್ಯಗಳ ಬಗ್ಗೆ ಯಾವ ಕ್ಷಣದಲ್ಲಿ ಕೇಳಿದರೂ ಸುಲಲಿತವಾಗಿ ಅವರು ಅವುಗಳನ್ನ ಹೇಳುತ್ತಾರೆ. ಈಗ ಸಂಭಲಪುರ್ ವಿಶ್ವವಿದ್ಯಾಲಯಯಲ್ಲಿ ಅವರು ಬರೆದ ಒಂದು ಕಾವ್ಯ ‘ಹಲಧರ್ ಗ್ರಂಥಾವಳಿ-2’ ಅನ್ನು ಪಠ್ಯಕ್ರಮದಲ್ಲೂ ಸೇರ್ಪಡೆ ಮಾಡಲಾಗಿದೆ.
ಸದಾ ಸರಳ, ಬಿಳಿ ಲುಂಗಿ, ಮುಖಕ್ಕೆ ಟವಲ್ ಬಟ್ಟೆಯ ಮಾಸ್ಕ್ ಹಾಗು ಬನಿಯಾನ್ ಹಾಕಿಕೊಳ್ಳುವ ನಾಗ್ ರವರು ಬರಿಗಾಲಿನಲ್ಲೇ ಓಡಾಡುತ್ತಾರೆ. ಇಂತಹ ಹೀರೋನನ್ನ ಚಾನಲೆಗಳಾಗಲಿ ಮೀಡಿಯಾಗಳಲಿ ಅಲ್ಲ ಬದಲಾಗಿ ಮೋದಿ ಸರ್ಕಾರ ಪದ್ಮಶ್ರೀ ಪ್ರಶಸ್ತಿಗಾಗಿ ದೆಹಲಿಯಿಂದ ದೂರದ ಓರಿಸ್ಸಾದಿಂದ ಅವರ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಿದೆ.
      ಓರಿಯಾ ಲೋಕ-ಕವಿ ಹಲಧರ್ ನಾಗ್ ರವರ ಬಗ್ಗೆ ನೀವು ಕೇಳಿದರೆ ನೀವು ಅವರನ್ನ ಪ್ರೇರಣಾಮೂರ್ತಿಯಾಗಿ ಕಾಣಲು ಪ್ರಾರಂಭಿಸುತ್ತೀರ. ಹಲಧರ್ ನಾಗ್ ಒಂದು ಬಡ ದಲಿತ ಕುಟುಂಬದವರಾಗಿದ್ದಾರೆ. 10 ವರ್ಷದ ವಯಸ್ಸಿನಲ್ಲೇ ಅವರ ತಂದೆ ತಾಯಿಯ ದೇಹಾಂತ್ಯವಾಗಿತ್ತು. ಅವರು ಶಿಕ್ಷಣ ಮುಂದುವರೆಸಲು ಸಾಧ್ಯವಾಗದೆ ಮೂರನೆಯ ತರಗತಿಗೇ ಶಾಲೆ ತೊರೆಯಬೇಕಾಯಿತು. ಅನಾಥನಾಗಿ ಜೀವನ ಕಳೆಯಬೇಕಾಯಿತು. ಹೊಟ್ಟೆ ತುಂಬಿಸಿಕೊಳ್ಳಲು ಢಾಬಾದಲ್ಲಿ ಮುಸುರೆ ಪಾತ್ರೆಗಳನ್ನ ತೊಳೆತುತ್ತ ಕೆಲ ವರ್ಷಗಳು ಕಳೆದರು. ಬಳಿಕ ಒಂದು ಶಾಲೆಯಲ್ಲಿ ಅಡುಗೆ ಮಾಡುವ ಕೆಲಸ ಸಿಕ್ಕಿತು. ಕೆಲ ವರ್ಷಗಳ ಬಳಿಕ ಬ್ಯಾಂಕ್ ನಿಂದ ಒಂದು ಸಾವಿರ ರೂ ಸಾಲ ಪಡೆದು ಪೆನ್-ಪೆನ್ಸಿಲ್ ಹಾಗು ಇತರ ವಸ್ತುಗಳ ಪುಟ್ಟ ಅಂಗಡಿಯನ್ನ ತಾವು ರಜಾ ದಿನಗಳಲ್ಲಿ ಯಾವ ಶಾಲೆಯಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದರೆ ಅದೇ ಶಾಲೆಯ ಎದುರು ತೆರೆದರು. ಇದು ಅವರ ಜೀವನೋಪಾಯದ ಮಾರ್ಗದ ಕಥೆ.
   ಈಗ ಅವರ ಸಾಹಿತ್ಯ ವಿಶೇಷದ ಬಗ್ಗೆ ಮಾತನಾಡುವುದಾದರೆ ಹಲಧರ್ ನಾಗ್ ರವರು 1995 ರಲ್ಲಿ ಓರಿಯಾ ಭಾಷೆ ಹಲ್ಲು “ರಾಮ-ಶಬರಿ” ನಂತಹ ಹಲವಾರು ಧಾರ್ಮಿಕ ಪ್ರಸಂಗಗಳ ಮೇಲೆ ಬರೆದು ಬರೆದು ಜನರಿಗೆ ತಿಳಿಸಲು ಶುರುಮಾಡಿದರು. ತಮ್ಮ ಭಾವನೆಗಳಿಂದ ಕೂಡಿದ ಕವಿತೆಗಳನ್ನ ಜನರಿಗೆ ತಿಳಿಸುತ್ತ ತಿಳಿಸುತ್ತ ಅವರು ಅದೆಷ್ಟು ಖ್ಯಾತನಾಮರಾದರೆಂದರೆ ಈ ವರ್ಷ ಅವರಿಗೆ ರಾಷ್ಟ್ರಪತಿಗಳಿಂದ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಪದ್ಮಶ್ರೀ ಪಡೆಯುವಂತಾದರು.

ಅಷ್ಟೇ ಅಲ್ಲ ಕೇವಲ 3 ನೆಯ ತರಗತಿಯವರೆಗೆ ಓದಿರುವ ಹಲಧರ್ ನಾಗ್ ರವರ ಕೃತಿಗಳ ಮೇಲೆ ಈಗ 5 ಜನರು PHd ಮಾಡುತ್ತಿದ್ದಾರೆ‌. ಇಂತಹ ಅತ್ಯದ್ಭುತ ಎಲೆಮರೆ ಕಾಯಿಯಂತಿರುವ ವ್ಯಕ್ತಿಯನ್ನ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ ಮೋದಿ ಸರ್ಕಾರಕ್ಕೆ ಧನ್ಯವಾದಗಳು.

The President, Shri Pranab Mukherjee presenting the Padma Shri Award to Shri Haladhar Nag, at a Civil Investiture Ceremony, at Rashtrapati Bhavan, in New Delhi on March 28, 2016.

ಇಲ್ಲಿ ಗಮನಿಸುವ ಮತ್ತೊಂದು ಅಂಶವೇನೆಂದರೆ ಹಲಧರ್ ನಾಗ್ ರವರಿಗೆ ತಾವು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿ ಪ್ರಶಸ್ತಿ ಪಡೆಯಲು ದೆಹಲಿಗೆ ಹೋಗಬೇಕು ಎಂದಾಗ ದೆಹಲಿಗೆ ಹೋಗಲು ನನ್ನ ಬಳಿ ಅಷ್ಟು ಹಣವಿಲ್ಲ, ನೀವು ಅದನ್ನ ಪೋಸ್ಟ್ ಮೂಲಕವೇ ನನಗೆ ಕಳಿಸಿಕೊಡಿ ಎಂದಿದ್ದರಂತೆ‌. ಬಳಿಕ ಅಧಿಕಾರಿಗಳು ಹಾಗು ರಾಜ್ಯ ಸರ್ಕಾರ ಅವರ ವೆಚ್ಚವನ್ನು ಭರಿಸುವ ಮೂಲಕ ಅವರನ್ನ ದೆಹಲಿಗೆ ಕಳಿಸಿಕೊಟ್ಟರು.


ನಾವು ಪುಸ್ತಕಗಳಲ್ಲಿ ಪ್ರಕೃತಿಯನ್ನ ಆಯ್ಕೆಮಾಡಿಕೊಳ್ಳುತ್ತೇವೆ ಆದರೆ ಪದ್ಮಶ್ರೀ ಪ್ರಶಸ್ತಿಯಂತೂ ಪ್ರಕೃತಿಯಿಂದಲೇ ಪುಸ್ತಕವನ್ನ ಆಯ್ಕೆ ಮಾಡಿಕೊಂಡಿದೆ 

No comments:

Post a Comment

If you have any doubts. please let me know...