ವೀರಶೈವ ಶಬ್ದದಲ್ಲಿನ 'ವೀರ' ಎಂಬ ವಿಶೇಷಣವೇ ಬೇರೆ ಶೈವಮತಗಳಿಂದ ಇದನ್ನು ಉನ್ನತ ಮಟ್ಟಕ್ಕೆರಿಸಿದೆ.
"ವಿ" ಶಬ್ದವು ಶಿವ-ಜೀವರ ಐಕ್ಯರೂಪದ ವಿಧ್ಯೆಯನ್ನು ಭೋಧಿಸುತ್ತದೆ.
ಇಷ್ಟಲಿಂಗ ವನ್ನ ದೀಕ್ಷೆ ಪಡೆದಾಗಿನಿಂದ ಸಾವೀನ ಕೊನೆವರೆಗೂ ಪ್ರತಿದಿನ ಪೂಜಿಸುವ ವೃತ ವೀರವೃತವೆಂದು ಕರೆಯಲ್ಪಟ್ಟಿದೆ. ಭಕ್ತಿಯ ,ಉತ್ಸಾಹದ ವಿಶೇಷ ವೀರತ್ವವೆಂದು ಕರೆಯಲ್ಪಡುತ್ತದೆ. ನಿಯಮಪೂರ್ವಕವಾಗಿ ಅದರ ಪೂಜೆಯನ್ನು ಮಾಡಿ, ಶಿವಜೀವೈಕ್ಯವನ್ನು ಬೋಧಿಸುವ ವಿದ್ಯೆಯಲ್ಲಿ ಯಾವ ಸಾದಕನು ಸಂತೋಷದಿಂದ ಇರುವನೊ ಅವನೇ " ವೀರಶೈವ ".
ಇದಂ ಎಂಬ ಪ್ರತಿಯೋಗಿಯನ್ನು ಅಹಂನಲ್ಲಿ ಪ್ರಲಯವನ್ನಾಗಿ ಮಾಡಿ ,ಅಮಂಗಲವನ್ನು ದೂರಮಾಡುವ ತನ್ನತನವನ್ನು ಅನುಭವಿಸುತ್ತಾನೆ.
ಅಂದರೆ ಇದಂ ಎಂದು ತೋರುವ ಸಮಸ್ತ ಪ್ರಪಂಚವನ್ನು ತನ್ನ ಅಹಂತಾದಲ್ಲಿ ಸರ್ವಮಹಮೇವ(ಎಲ್ಲವೂ ನಾನೇ) ಎಂಬ ಸರ್ವಹಂತಾ ಭಾವದಿಂದ ಇರುವವನೇ ವೀರನು.
ತಾತ್ಪರ್ಯವೇನೆಂದರೆ ಎಲ್ಲವೂ ಹೋಗಿ ಕೇವಲ ಅಹಂ ಎಂದು ತಾನೊಬ್ಬನೇ ಉಳಿಯುವಂತೆ ಸಮಸ್ತ ಪ್ರಪಂಚದಲ್ಲಿ ಇದಂ ಎಂದು ತೋರುವ ಎಲ್ಲ ಪ್ರಂಪಂಚವನ್ನು ಅಹಂ ಎಂದು ಭಾವಿಸಿ ಇದಂತೆಯನ್ನು ಸಂಹರಿಸುವುದರಿಂದ ಇವನಿಗೆ "ವೀರ" ನೆಂದು ಕರೆಯುತ್ತಾರೆ.
ಲಿಂಗಾಂಗಸಾಮರಸ್ಯದಿಂದ ಇದನ್ನು ಆಚರಿಸುವ ವೀರಶೈವರು ಸತ್ಯವಾಗಿಯೂ ವೀರರು ಎಂಬಲ್ಲಿ ಯಾವ ವಿವಾದವೂ ಇಲ್ಲ.
ಸ್ಥೂಲಶರೀರದ ಮೇಲೆ ಯಾವಾಗಲೂ ತನ್ನ ಇಷ್ಟಲಿಂಗವನ್ನು ಧರಿಸುವುದು ವೀರಶೈವನ ಬಾಹ್ಯಚಿಹ್ನೆಯು,ಮತ್ತು ಶಿವಜೀವಕ್ಯಬೋಧವು ಅವನ ಆಂತರಿಕವಾದ ಚಿಹ್ನೆ.
ಹೀಗೆ ಉಭಯಲಕ್ಷಣಗಳಿಂದ ವಿಶಿಷ್ಟವಾಗಿರುವುದೇ "ವೀರಶೈವ"
ವೀರಶೈವ ಧರ್ಮದ ಪಂಚ ಆಚಾರಗಳಲ್ಲೊಂದಾದ ಗಣಾಚಾರ ಸ್ವರೂಪವು ನಿರೂಪಿಸಲ್ಪಟ್ಟಿದೆ. ಈ ಗಣಾಚಾರದ ಪ್ರಕಾರ ಶಿವಭಕ್ತನಾದವನು ಶಿವನಿಂದನೆಯನ್ನು ಅದೆಂದೂ ಕೇಳಕೂಡದು. ಒಂದು ವೇಳೆ ತನ್ನೆದುರಿನಲ್ಲಿ ಯಾರಾದರೂ ಶಿವನಿಂದನೆಯನ್ನು ಮಾಡಿದರೆ ತನ್ನಲ್ಲಿ ಸಾಮರ್ಥ್ಯವಿದ್ದರೆ ಇ ಶಿವನಿಂದಕನನ್ನು ಶಪಿಸಬೇಕು. ಆತನ ವಾದ ಸಂಹರಿಸಬೇಕು ಇವೆರಡೂ ಸಾಧ್ಯವಾಗದಿದ್ದಲ್ಲಿ ಆ ಸ್ಥಾನ ಬಿಟ್ಟು ತೋಲಗಬೇಕು.
ಪ್ರಾಚೀನ ಕಾಲದಲ್ಲಿ ದಕ್ಷ ಪ್ರಜಾಪತಿಯು ಶಿವನಿಗೆ ಅಪಮಾನಮಾಡುವ ಉದ್ದೇಶದಿಂದ ಒಂದು ಯಜ್ಞವನ್ನು ಹಮ್ಮಿಕೊಂಡಿರುವಾಗ ಶಿವಗಣನಾದ ಶ್ರೀ ವೀರಭದ್ರನು ಆ ಯಜ್ಞವನ್ನು ಧ್ವಂಸಗೊಳಿಸಿದನಲ್ಲದೆ ಶಿವನಿಂದಕನಾದ ದಕ್ಷ ಪ್ರಜಾಪತಿಯ ಶಿರವನ್ನು ಹರಿದು ಅವನಿಗೆ ಕುರಿದಲೆಯನಿಟ್ಟ ಪ್ರಸಂಗ ಸುಪ್ರಸಿದ್ಧವಾಗಿದೆ.
ಇದನ್ನು ಶ್ರೀ ವೀರಭದ್ರಾಚಾರವೆನ್ನುವರು.
ಇದೇ ಪ್ರಸಂಗದ ಹೋಲಿಕೆ ಮಾಡಲು ಮರಿ ತೋಂಟದಾರ್ಯರು ಮೂಲ ಸಿದ್ದಾಂತ ಶಿಖಾಮಣಿಗೆ ವ್ಯಾಖ್ಯಾನ ಗ್ರಂಥ ಬರೆದ ಗ್ರಂಥದಲ್ಲಿ ಮೊದಲ ಪುಟದ ಮೇಲುಗಡೆ ಶ್ರೀ ಬಸವಲಿಂಗಾಯ ನಮಃ ಎಂದು ಹಾಕಿ ಬರೆದರು.
ಅವರ ಹೊಲಿಕೆಯ ಅಭಿಪ್ರಾಯ ಏನೆಂದರೆ ಹನ್ನೆರಡನೆಯ ಶತಮಾನದಲ್ಲಿ ಕಲ್ಯಾಣದ ಕ್ರಾಂತಿಯಾಗಿ ಶಿವಶರಣರನ್ನು ಕೊಲ್ಲುವ ಪ್ರಸಂಗ ಬಂದೊದಗಿದಾಗ ಅದನ್ನು ಪ್ರತಿಕಾರಪೂರ್ವಕ ತಡೆಯುವುದಾಗದ ಕಾರಣ ಶ್ರೀ ಬಸವೇಶ್ವರರು ಕಲ್ಯಾಣವನ್ನು ಬಿಟ್ಟು ಕೂಡಲ ಸಂಗಮಕ್ಕೆ ನಿರ್ಗಮಿಸಿದ ವಿಷಯ ಇತಿಹಾಸ ಪ್ರಸಿದ್ದ ಅದನ್ನೆ ಬಸವೇಶ್ವರರ ಈ ನಿರ್ಗಮವೇ
ಬಸವೇಶ್ವರಾಚಾರವೆಂಬುದು ಶ್ರೀ ಮರಿತೋಂಟದಾರ್ಯರ ಅಭಿಪ್ರಾಯವಾಗಿದೆ.
ಇದನ್ನ ಏಕೆ ಉಲ್ಲೇಖ ಮಾಡಿದೆನೆಂದರೆ ಅವರು ಬರೆದರು ಹೊಲಿಕೆ ಏನೆ ಇರಲಿ ಸಮಸ್ಯೆ ಅದಲ್ಲ.
ಈಗಿನ ಅಜ್ಞಾನಿ ಕೆಲ ಜನ ಕಮ್ಯುನಿಸ್ಟ್ ,ಮುಸ್ಲಿಂ ರು ಬಸವಣ್ಣ ನ ವಿಚಾರ ಅಭಿಮಾನಿ ಎಂಬಂತೆ ನಾಟಕ ಮಾಡುವ ಕೆಲ ಪ್ರತ್ಯೇಕ ಧರ್ಮದ ಹೊರಾಟ ಮಾಡುವವರಲ್ಲಿ ಕೆಲ ಕುಹಕಿಗಳು ತಿಳಿಯದ ಜನಕ್ಕೆ ದಾರಿ ತಪ್ಪಿಸುತಿದ್ದಾರೆ.
ಐದನೇ ಶತಮಾನದ ಶ್ರೀ ಶಿವಯೋಗಿ ಆಚಾರ್ಯರರು ಹನ್ನೆರಡನೆ ಶತಮಾನದವರು ಎಂದು ಬಿಂಬಿಸಲು ಹರ ಸಾಹಸ ಮಾಡುತಿದ್ದಾರೆ. ಹನ್ನೆರಡನೆ ಶತಮಾನದಲ್ಲಿ ಆಗಿಹೊದ ಶಿವಯೋಗಿ ಎಂಬ ಸಿದ್ದಿಪುರುಷನಿಗೆ ಹೊಲಿಕೆ ಮಾಡಿ ಇದೇ ಶಿವಯೋಗಿಗಳ ಸಮಾಧಿ.
ಶ್ರೀ ಮರಿತೊಂಟದಾರ್ಯರ ಮೂಲ ಸಿದ್ದಾಂತ ಶಿಖಾಮಣಿ ಮೇಲೆ ವ್ಯಾಖ್ಯಾನ ಬರೆದ ಶ್ರೀಗಳು ಬಸವಣ್ಣ ನವರ ಕಾಲದವರು ಸಹಜವಾಗಿಯೇ ತಮ್ಮ ಗ್ರಂಥದ ಮುಖಪುಟದಲ್ಲಿ ಬಸವೇಶ್ವರರ ಹೆಸರು ಹಾಕಿದ್ದಾರೆ.
ಇದನ್ನ ದುರುಪಯೋಗ ಪಡಿಸಿಕೊಳ್ಳಲು ಕಮಂಗಿ ಕುಹಕಿಗಳು ಸಿದ್ದಾಂತ ಶಿಖಾಮಣಿಯಲಿ ಬಸವಣ್ಣ ನವರ ಹೆಸರಿದೆ ಎಂದು ಅಪಪ್ರಚಾರ ಮಾಡ್ತಾರೆ.
ಎಳ್ಳಷ್ಟು ಇತಿಹಾಸ ಪ್ರಜ್ಞೆ ಇರದ ಅವೀವೇಕಿಗಳು ಇಷ್ಟು ಅರ್ಥ ಆಗದೇ ಬಸವಣ್ಣ ನವರು ಹುಟ್ಟಿರಲಿಲ್ಲ ಉಲ್ಲೇಖ ಹೇಗೆ ಇರಲು ಸಾಧ್ಯ.
ಸಾಮಾನ್ಯ ಜನ ಅಜ್ಞಾನಿಗಳು ಎನ್ನಬಹುದು ಆದರೆ ದೇಶದ ಒಬ್ಬ ಮಹಾ ಪಂಡಿತರೊಬ್ಬರು ಇಂಥಾ ಒಂದು ಪ್ರಮಾದ ಮಾಡಿದ್ದು ಇತಿಹಾಸ ಇದೆ ಈಗಲೂ ಏನೆಂದರೆ
ಭಾರತೀಯ ತತ್ವಜ್ಞಾನದ ಇತಿಹಾಸವನ್ನು ಬರೆದಿರುವ ಶ್ರೀ .ಎಸ್. ಎನ್. ದಾಸಗುಪ್ತರು
"A history of Indian Philosophy" ಎಂಬ ಹೆಸರಿನ ಗ್ರಂಥವನ್ನು ಐದು ಖಂಡಗಳಲ್ಲಿ ಪ್ರಕಟಪಡಿಸಿದ್ದಾರೆ.
ಅವುಗಳಲ್ಲಿ ಐದನೆಯದಾದ ಖಂಡವೇ "Southern Schools Of Shivism" ಎಂಬುದಾಗಿರುತ್ತದೆ.
ಇದರಲ್ಲಿ ಉಳಿದ ಶೈವ ಪರಂಪರೆಗಳ ಇತಿಹಾಸವನ್ನು ಹೇಳುವದರ ಜೋತೆಗೆ, ವೀರಶೈವ ದರ್ಶನದ ಇತಿಹಾಸ ಮತ್ತು ಸಾಹಿತ್ಯದ ಬಗ್ಗೆ ವಿವೇಚನೆಯನ್ನು ಮಾಡಲಾಗಿದೆ.
ಈ ಸಂದರ್ಭದಲ್ಲಿ ಶ್ರೀ ದಾಸಗುಪ್ತರು ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥದ ಕಾಲನಿರ್ಣಯವನ್ನು ಮಾಡುವ ಪ್ರಸಂಗದಲ್ಲಿ "Siddhanta Shikhamani refers to Basava and is itself refered to by sripati. This shows that the book must have been written between the dates of Basava and Sripati ಎಂಬುದಾಗಿ ಬರೆದಿದ್ದಾರೆ
ತಾತ್ಪರ್ಯವೇನೆಂದರೆ ಶ್ರೀ ಸಿದ್ದಾಂತ ಶಿಖಾಮಣಿಯಲ್ಲಿ ಬಸವೇಶ್ವರರ ಉಲ್ಲೇಖವಿದ್ದು ಶ್ರೀಪತಿ ಪಂಡಿತಾರಾಧ್ಯರು ತಮ್ಮ ಶ್ರೀಕರ ಭಾಷ್ಯದಲ್ಲಿ ಶ್ರೀ ಸಿದ್ದಾಂತ ಶಿಖಾಮಣಿಯನ್ನು ಪ್ರಮಾಣರೂಪದಲ್ಲಿ ಉಲ್ಲೇಖಿಸಿದ್ದಾರೆ.
ಅಂದರೆ ಇವರ ಪ್ರಕಾರ ಅವಲೋಕಿಸಿದಾಗ ಶ್ರೀ ಸಿದ್ದಾಂತ ಶಿಖಾಮಣಿಯು ಬಸವೇಶ್ವರರ ನಂತರ ರಚಿಸಲ್ಪಟ್ಟಿರಬಹುದು ಎಂಬುದು ದಾಸಗುಪ್ತರ ಆಶಯವಾಗಿರುತ್ತದೆ.
ಬಸವೇಶ್ವರರ ಉಲ್ಲೇಖವು ಶಿದ್ದಾಂತ ಶಿಖಾಮಣಿಯಲ್ಲಿ ಬಂದಿರೋಣದರಿಂದ ಇದು ಬಸವೇಶ್ವರ ನಂತರದು ಎಂಬ ವಿಚಾರ ತರ್ಕಸಂಗತವಾಗಿರುವುದಿಲ್ಲ.
ಶ್ರೀ ದಾಸಗುಪ್ತರು ಸಿದ್ದಾಂತ ಶಿಖಾಮಣಿಯಲ್ಲಿ ಬಸವೇಶ್ವರರ ಉಲ್ಲೇಖವು ಬಂದ ಪ್ರಸಂಗವನ್ನು ಎತ್ತಿ ತೋರಿಸಲು
" ಅಥ ವೀರಭದ್ರಾಚಾರ- ಬಸವೇಶ್ವರಾಚಾರಂ ಸೂಚಯನ್ ಭಕ್ತಾಚಾರ ಭೇದಂ ಪ್ರತಿಪಾದಯತಿ".
ಶ್ರೀ ಸಿದ್ದಾಂತ ಶಿಖಾಮಣಿಯಲ್ಲಿ ಈ ಅಂಶವಿದೆ ಎಂದು ಉಲ್ಲೇಖಿಸಿದ್ದಾರೆ.
ಮೇಲಿನ ಬಸವೇಶ್ವರರ ಹೆಸರು ಶ್ಲೋಕದಲ್ಲಿ ಎಲ್ಲೂ ಕಂಡುಬರುವುದಿಲ್ಲ.
ಏಕೆಂದರೆ ಈ ಮಹಾಶಯರು ನೋಡಿದ್ದು
ಮೂಲ ಸಿದ್ದಾಂತ ಶಿಖಾಮಣಿ ಗ್ರಂಥಕ್ಕೆ ಸಂಸ್ಕೃತ ವ್ಯಾಖ್ಯಾನ ಬರೆದ ಮರಿತೋಂಟದಾರ್ಯರ ಅವತರಣಿಕೆಯಲ್ಲಿ ವೀರಭದ್ರ ಹಾಗೂ ಬಸವೇಶ್ವರರ ಉಲ್ಲೇಖಗಳು ಬಂದಿರುವುದು ಕಾಣಬಹುದು.
ಬಸವೇಶ್ವರರ ಉಲ್ಲೇಖವು ಮೂಲ ಸಿದ್ದಾಂತ ಶಿಖಾಮಣಿಯಲ್ಲಿ ಬಂದಿರದೆ ವ್ಯಖ್ಯಾನಕಾರರಾದ ಶ್ರೀ ಮರಿತೊಂಟದಾರ್ಯರು ಬರೆದ ಅವತರಣಿಕೆಯಲ್ಲಿ ಬಂದುದಾಗಿರುತ್ತದೆ. ಗಮನಿಸುವ ಅಂಶವೆಂದರೆ ವ್ಯಾಖ್ಯಾನಕಾರರಾದ ಮರಿತೊಂಟದಾರ್ಯರು ಬಸವೇಶ್ವರರ ನಂತರದವರೆಂದು ಹೇಳಬಹುದಲ್ಲದೆ, ಮೂಲ ಗ್ರಂಥಕಾರರಾದ ಶ್ರೀ ಶಿವಯೋಗಿ ಶಿವಾಚಾರ್ಯರು ಶ್ರೀ ಬಸವೇಶ್ವರರ ನಂತರದವರೆಂಬುದಾಗಿ ಹೇಳಲು ಅವಕಾಶವೇಯಿಲ್ಲವೆನ್ನಬಹುದು.
ಶ್ರೀ ದಾಸಗುಪ್ತರು ಮೂಲಗ್ರಂಥ ಹಾಗೂ ವ್ಯಾಖ್ಯಾನದ ಲೇಖಕರು ಭಿನ್ನ ಭಿನ್ನರೆಂದು ತಿಳಿದುಕೊಳ್ಳದೆ ಭ್ರಮೆಗೊಂಡು ಈ ರೀತಿಯಾಗಿ ಉಲ್ಲೇಖಿಸಿರುವುದು ಐತಿಹಾಸಿಕ ಕ್ಷೇತ್ರದಲ್ಲಿ ಅಕ್ಷಮ್ಯ ಅಪರಾಧವಾಗಿರುತ್ತದೆ.
ಆದ್ದರಿಂದ ಇವರ "siddhanta Shikamani refers to Basava ಎಂಬ ಈ ಉಕ್ತಿಯು ಪ್ರಮಾದಪೂರ್ಣವು ಪ್ರಮಾಣಶೂನ್ಯವು ಆಗಿರುತ್ತದೆ.
ಶ್ರೀ ಕಾಶಿ ವೀರಶೈವ ಪಂಚಪಿಠಾಧಿಶ್ವರರು ಇದನ್ನ ಖಂಡಿಸಿ ಅವರೆ ದಾಸಗುಪ್ತರ ಇನ್ನೊಂದು ಪ್ರಮಾದ ಉಲ್ಲೇಖಿಸಿ ಹೇಳಿದ್ದಾರೆ.
ಶ್ರೀ ಬಸವೇಶ್ವರರು ಜನ್ಮಸ್ಥಳ ಬಾಗೇವಾಡಿಯನ್ನಃ ಬಿಟ್ಟು ಮಾವ ಬಲದೇವರ ಕಡೆಗೆ ಬರುತ್ತಾರೆ ಕಲ್ಯಾಣದ ಕಡೆಗೆ.ಈ ಇತಿಹಾಸ ಪ್ರಸಿದ್ಧ ಎಲ್ಲರಿಗೂ ತಿಳಿದ ವಿಷಯ.
ಶ್ರೀ ದಾಸಗುಪ್ತರು ಈ ಪ್ರಸಂಗವನ್ನು ಹೇಳುವ ಸಂದರ್ಭದಲ್ಲಿ ಶ್ರೀ ದಾಸಗುಪ್ತರು
"From his native place Bagewadi he went to kalyan near Bombay at a comparatively young age when Bijjal was reigning there as king (A.D.1157)
ಇದು ನೋಡಲು ( A.H.I.P vol. P-42) ನೋಡಬಹುದು.
ಇಲ್ಲಿ ಕಲ್ಯಾಣ ವೆಂದರೆ ಕರ್ನಾಟಕ ಪ್ರಾಂತದ ಬೀದರ್ ಜಿಲ್ಲೆಯಲ್ಲಿ ಬರುವ ಕಲ್ಯಾಣವೆಂಬುದಾಗಿ ಹೇಳದೆ ಮುಂಭೈ ಸಮೀಪದಲ್ಲಿರುವ ಕಲ್ಯಾಣವೆಂಬುದಾಗಿ ಹೇಳಿರುವುದನ್ನು ನೋಡಿದರೆ ಶ್ರೀ ದಾಸಗುಪ್ತರಿಗೆ ಅದೇಷ್ಟರಮಟ್ಟಿಗೆ ಕರ್ನಾಟಕದ ಭೌಗೋಲಿಕ ಜ್ಞಾನವಿತ್ತೆಂಬುದು ತಿಳಿದುಬರುತ್ತದೆ.
ಆದ್ದರಿಂದ ಇವರ ಇಂತಹ ನಿರ್ಣಯಗಳು ಅಪಹಾಸ್ಯದಿಂದ ಕೂಡಿದ್ದು ವಿದ್ವಾಂಸರು ಸ್ವೀಕರಿಸಿಲ್ಲ ಎಂಬುದು ಗಮನಿಸಬೇಕು.
ದೊಡ್ಡ ದೊಡ್ಡ ವ್ಯಕ್ತಿಗಳು ಸಹ ಅವಧಾನಶೂನ್ಯರಾದಾಗ ಇಂತಹ ಅಪರಾಧಗಳನ್ನು ಎಸಗುವುದು ಸಹಜವಾಗಿರುತ್ತದೆ.
Dattatreya S Mulge
No comments:
Post a Comment
If you have any doubts. please let me know...