August 13, 2021

ಅಮ್ಮನ ಮೇಲಿನ ಮಮತೆ

 ಮುದ್ದು ಹುಡುಗ. ಅಮ್ಮನ ಪ್ರೀತಿಯ ತೆಕ್ಕೆಯಲ್ಲೇ ಬೆಳೆದವನು. ಆಕೆಯೂ ಆ ಮಗನಿಗಾಗಿಯೇ ಹೊಟ್ಟೆ ಬಟ್ಟೆ ಕಟ್ಟಿ ಸಾಕಷ್ಟು ದುಡಿದು ಹಣ ಕೂಡಿಸಿಡುತ್ತಿದ್ದಳು. ಅಮ್ಮನ ಆ ಶ್ರಮವನ್ನರಿತು ಗೋಪಿ ತಾನೂ ಚನ್ನಾಗಿ ದುಡಿದು ಅಮ್ಮನನ್ನು ಪ್ರೀತಿಯಿಂದಲೇ ಕಾಣುತ್ತಿದ್ದ. ಒಂದು ರಾತ್ರಿ ಕ್ರೂರ ಕಳ್ಳ ಮನೆಯೊಳಗೆ ಬಂದ. ಮನೆಯೆಲ್ಲ ಚೆನ್ನಾಗಿ ಜಾಲಾಡಿದ. ಎಲ್ಲವನ್ನೂ ಒಂದೆಡೆ ಸೇರಿಸಿದ. ಅದನ್ನೆಲ್ಲ ಗಂಟು ಕಟ್ಟಲು ಅವನಿಗೊಂದು ಭದ್ರಶಾಲು ಬೇಕಿತ್ತು. ಆಚೀಚೆ ನೋಡಿದ. ಹಾಸಿಗೆಯ ಮೇಲೆ ಹರಡಿದ ಶಾಲಿತ್ತು. ಅದನ್ನೇ ಎತ್ತಿಕೊಂಡ. ಆಗ ಗೋಪಿ ಎದ್ದು ನಿಂತ. ನೋಡಪ್ಪಾ, ಈ ಶಾಲನ್ನು ಕಳಬೇಡ, ಅದಿಲ್ಲ ಎಂದರೆ ನನ್ನಮ್ಮ ಚಳಿಯಿಂದ ಸತ್ತೇ ಹೋಗುತ್ತಾಳೆ. ಮತ್ತೆ ಇರುವ ಒಂದೇ ಒಂದು ಗಂಜಿ ಚರಿಗೆಯನ್ನೂ ಬಿಟ್ಟು ಹೋಗು. ಯಾಕೆಂದರೆ ಬೇರೆ ಪಾತ್ರ ತರಲು ನನ್ನ ಬಳಿ ಹಣ ಇಲ್ಲ . ಆಗ ನಾವಿಬ್ಬರೂ ಹಸಿದು ಸತ್ತೇ ಹೋಗಬೇಕಾಗುತ್ತೆ . ದ ... ಮ್ಮ ... ಯ್ಯಾ ....

ಕಳ್ಳ ಬೆರಗಾದ. ಎಂಥ ಹುಡುಗ ! ಇಷ್ಟು ವರ್ಷ ದುಡಿದ ಹಣ ಹೋದ್ರೂ ಹೋಗಲಿ, ಅಮ್ಮನಿಗಾಗಿ ಶಾಲು ಹಾಗೂ ಪಾತ್ರೆ ಬೇಕೇ ಬೇಕೆನ್ನುತ್ತಾನೆ. ಎಂಥ ಪ್ರೀತಿ ಅಮ್ಮನ ಮೇಲೆ ? ಕಳ್ಳನ ಹೃದಯ ಕರಗಿತು. ಕಣ್ಣುಂಬಿ ಆತನೆಂದ ಮಗೂ, ನಿನ್ನಮ್ಮನ ಮೇಲಿನ ಪ್ರೀತಿಗೆ ನಾನೇ ಕರಗಿರುವೆ. ನಿನ್ನ ಯಾವ ವಸ್ತುವೂ ನನಗಿಂದು ಬೇಡ. ಅಷ್ಟೇ ಅಲ್ಲ ಇಂದಿನಿಂದ ನಾನಿನ್ನು ಕಳ್ಳತನವನ್ನೇ ಮಾಡೋಲ್ಲ . ಯಾಕೆಂದ್ರೆ ನಾನೊಂದೊಮ್ಮೆ ಜೈಲಿಗೆ ಹೋದ್ರೆ ಮನೆಯಲ್ಲಿರುವ ನನ್ನಮ್ಮನನ್ನು ನೋಡಿಕೊಳ್ಳುವವರು ಯಾರೂ ಇಲ್ಲವಲ್ಲ ... ಹಾಗೆಂದೇ ! ' ಎನ್ನುತ್ತಲೇ ಹೊರಟೇ ಹೋದ.

ನೀತಿ :--  ನಿಜವಾಗಿ ಅಮ್ಮನ ಪ್ರೀತಿ ಅಮೂಲ್ಯ. ಅಮ್ಮನ ಋಣ ತೀರಿಸುವುದು ಕಷ್ಟ.

No comments:

Post a Comment

If you have any doubts. please let me know...