August 8, 2021

ಇಷ್ಟೇನಾ ನಿನ್ನ ಕಿಮ್ಮತ್ತು

 *" ಜೀವನದ ನಿನ್ನ ಕಿಮ್ಮತ್ತು"* 

*ಇಷ್ಟೇನಾ ನಿನ್ನ ಕಿಮ್ಮತ್ತು?* 
       --------------
ತುಪ್ಪದ ಡಬ್ಬಿ, 
ಕಟ್ಟಿಗೆಯ ರಾಶಿ,
ಕೆಲವೇ ನಿಮಿಷಗಳಲ್ಲಿ
ಬೂದಿ..ಬೂದಿ, 
ನಿನ್ನ ಶರೀರ....
 *ಇಷ್ಟೇನಾ ನಿನ್ನ ಕಿಮ್ಮತ್ತು...?* 

ಅಂದು ಸಂಜೆ  ,
ಪ್ರಾಣ ಪಕ್ಷಿ ಹಾರಿ ಹೋಯಿತು.
ತಾನು ಗಳಿಸಿದ್ದು,
ಯಾರದ್ದೋ ಪಾಲಾಯಿತು.
ಕೆಲವರು ದುಃಖ ವ್ಯಕ್ತಪಡಿಸುತ್ತಿದ್ದಾರೆ,
ಉಳಿದವರು ತಮಾಷೆ  ನೋಡುತ್ತಿದ್ದಾರೆ,
ಅರೇ, *ಬೇಗನೇ ಎತ್ತಿರಿ,* 
ಕತ್ತಲಾಗುತ್ತ ಬಂತು.....!
ಹೊಟ್ಟೆ  ಬೆರೆ ಹಸಿದಿದೆ,
 *ಯಾರು ರಾತ್ರಿಯೆಲ್ಲಾ ಕಾಯುವರು?* 
ಇದು ನೆಂಟರ ನಡುವಿನ ಸಂಭಾಷಣೆ...
*ಇಷ್ಟೇನಾ ನಿನ್ನ ಕಿಮ್ಮತ್ತು..?*

ನಾ ಸತ್ತು ಆತ್ಮ ಮೇಲಕ್ಕೆ ಹಾರುತ್ತಿದೆ,
ನಕ್ಷತ್ರಗಳ ಮೇಲೆ.
ಕೆಳಗೆ ಇಣುಕಿ ನೋಡಿದೆ.
ಮನೆಯವರು  *ಹರಟೆ
ಹೊಡೆಯುತ್ತಾ ಇದ್ದಾರೆ,
ಮೊಮ್ಮಕ್ಕಳು  ಮೊಬೈಲ್ ನಲ್ಲಿ ತಲ್ಲೀನ,* ....
      'ಇನ್ನೂ ನಾಲ್ಕು ಒಪ್ಪತ್ತು ಇರಬೇಕಾಗಿತ್ತು....'
ಇಷ್ಟೇ ನಾ ಕೇಳಿದ ಸಾಂತ್ವನದ ಮಾತು..
*ಇಷ್ಟೇನಾ ನಿನ್ನ ಕಿಮ್ಮತ್ತು..?*

ಮಗ ಒಂದು *ದೊಡ್ಡ ಫೋಟೋ* 
ತೂಗು ಹಾಕಿದ.
ನನ್ನ ಫೋಟೋ ಅದು,
ಅದಕ್ಕೊಂದು *ಹಾರ* ಹಾಕಿದ,
ಕೆಲವೊಂದು ದಿನ, 
ಅಗರ ಬತ್ತಿ  ಉರಿಸಿದ,
ದಿನ 
*ಪತ್ರಿಕೆಯಲ್ಲಿ ಭಾವಪೂರ್ಣ
ಶೃದ್ಧಾoಜಲಿ...* 
ಆಮೇಲೆ ಕೆಲವು ದಿನಗಳ 
ನಂತರ,
ನನ್ನ ಫೋಟೋ ಮೇಲೆ 
ಜಮಾಯಿಸಿದ  ಧೂಳನ್ನು ಕೂಡಾ
ನೋಡಲಿಲ್ಲ ಆತ..
*ಇಷ್ಟೇನಾ ನಿನ್ನ ಕಿಮ್ಮತ್ತು?..*

ಜೀವನವೆಲ್ಲಾ ದುಡಿದೆ,
ದಣಿದೆ.
ದುಡ್ಡು ಗಳಿಸಿ ಜಮಾ ಮಾಡಿಸಿದೆ,
ಎಲ್ಲವೂ, ನನ್ನದು, ನನ್ನದು..
ಏನೋ ಒಣ ಜಂಭ ...
ತನ್ನವರಿಗೆಲ್ಲ ಮಾಡಿದೆ
ಆದರೆ..
ತನಗಾಗಿ ..???
 *ಶೂನ್ಯ.. ಬರೀ ಶೂನ್ಯ
ಹೊರಟಿರುವೆ ಖಾಲಿ ಬೊಗಸೆಯಲ್ಲಿ,* 
ಇಂದುಬಒಂದು ಹುಲ್ಲು ಕಡ್ಡಿಯೂ,
ಜೊತೆಗಿಲ್ಲ,
*ಇಷ್ಟೇನಾ ನಿನ್ನ ಕಿಮ್ಮತ್ತು?*

ಆವರಿಸಿದ ಅಹಂಕಾರ,
ಎಷ್ಟೊಂದು ಪದವಿ,
ಎಷ್ಟೊಂದು ದುಡ್ಡು,

ಕೊನೆಗೆ ಹೋಗುವ ದಿನ ಬಂತು,
ಆದರೆ ಜೊತೆಗೆ ಒಯ್ಯುವುದು,
ಏನನ್ನು?

 *ನಾವು ಗಳಿಸಿದ ಪಾಪ ಪುಣ್ಯ
ಕರ್ಮಗಳನ್ನೆ ಇನ್ನೇನೂ ಇಲ್ಲ..
ಮತ್ತೇಕೆ ಈ ಸೊಕ್ಕು?* 
ಯೋಚಿಸು ಮನುಜ,
*ನಿನ್ನ ಕಿಮ್ಮತ್ತು ಇಷ್ಟೇ*

No comments:

Post a Comment

If you have any doubts. please let me know...