ದಿನಕ್ಕೊಂದು ಕಥೆ
ದುರಾಸೆಯ ದುಷ್ಪರಿಣಾಮ
ಓರ್ವ ಭಿಕ್ಷುಕ. ಅವನು ದೇವರ ಮೇಲೆ ಶ್ರದ್ಧೆ ಇದ್ದ ಕಾರಣ ಅವನು ದಿನವಿಡೀ ನಾಮಜಪ ಮಾಡುತ್ತಿದ್ದ. ಭಗವಂತನು ಅವನ ನಾಮಜಪದಿಂದ ಪ್ರಸನ್ನನಾಗಿ ಪ್ರತಕ್ಷನಾದ. "ನಾನು ನಿನ್ನ ನಾಮಜಪದಿಂದ ಬಹಳ ಪ್ರಸನ್ನನಾಗಿದ್ದೇನೆ, ನಿನಗೆ ಬೇಕಾದದ್ದನ್ನು ಕೇಳು" ಎಂದು ಭಗವಂತ ಕೇಳಿದ. ಆಗ ಭಿಕ್ಷುಕನು ದುರಾಸೆಯಿಂದ ಚಿನ್ನದ ನಾಣ್ಯಗಳನ್ನು ಕೇಳಿದ. ಭಗವಂತನು 'ಚಿನ್ನದ ನಾಣ್ಯಗಳನ್ನು ಯಾವ ಪಾತ್ರೆಯಲ್ಲಿ ತೆಗೆದುಕೊಳ್ಳುವೆ ?' ಎಂದು ಕೇಳಿದಾಗ ಭಿಕ್ಷುಕನು ತನ್ನ ಅಂಗಿಯನ್ನು ಮುಂದೆಮಾಡಿದ.
ಭಗವಂತನು ಚಿನ್ನದ ನಾಣ್ಯಗಳನ್ನು ಕೊಡುವ ಮೊದಲು "ಎಲ್ಲಿಯ ವರೆಗೆ ನೀನು ಚಿನ್ನದ ನಾಣ್ಯಗಳನ್ನು ಕೇಳುವುದು ಬಿಡುವುದಿಲ್ಲ ಅಲ್ಲಿಯವರೆಗೆ ನಾನು ನಿನ್ನ ಅಂಗಿಯಲ್ಲಿ ಚಿನ್ನದ ನಾಣ್ಯಗಳನ್ನು ಹಾಕುತ್ತಲೇ ಇರುವೆ, ಆದರೆ ಭೂಮಿಯ ಮೇಲೆ ಚಿನ್ನದ ನಾಣ್ಯಗಳು ಬೀಳಬಾರದು. ನೆಲದ ಮೇಲೆ ಬಿದ್ದರೆ ಈ ನಾಣ್ಯಗಳು ಮಣ್ಣಾಗುವವು" ಎಂದು ಹೇಳಿದನು. ಭಿಕ್ಷುಕನು ಒಪ್ಪಿಕೊಂಡ. ಭಗವಂತನು ಭಿಕ್ಷುಕನ ಅಂಗಿಯಲ್ಲಿ ಚಿನ್ನದ ನಾಣ್ಯಗಳನ್ನು ಹಾಕತೊಡಗಿದ. ಅಂಗಿಯು ತುಂಬುತ್ತ ಹೋಯಿತು ಹಾಗೂ ಭಿಕ್ಷುಕನ ದುರಾಸೆಯು ಹೆಚ್ಚುತ್ತ ಹೋಯಿತು. ಅವನು ‘ಸಾಕು’ ಎಂದು ಹೇಳಲಿಲ್ಲ, ದೇವರು ಕೊಡುವುದನ್ನು ನಿಲ್ಲಿಸಲಿಲ್ಲ. ಕೊನೆಯಲ್ಲಿ ಚಿನ್ನದ ನಾಣ್ಯಗಳ ಭಾರವನ್ನು ಆ ಅಂಗಿಯು ತಡೆದುಕೊಳ್ಳಲಿಲ್ಲ, ಅಂಗಿಯು ಹರಿದು ಹೋಯಿತು. ಅದರಿಂದ ಎಲ್ಲ ನಾಣ್ಯಗಳು ನೆಲದ ಮೇಲೆ ಬಿದ್ದು ಮಣ್ಣಾದವು.
ನೀತಿ :-- ಮನಸ್ಸಿನಲ್ಲಿ ದುರಾಸೆ ಇರುವುದರಿಂದ ಇಷ್ಟೊಂದು ನಾಣ್ಯಗಳು ದೊರೆತರೂ ಭಿಕ್ಷುಕನು ಬಡವನಾಗಿಯೇ ಉಳಿದ...
No comments:
Post a Comment
If you have any doubts. please let me know...