August 5, 2021

ಮ್ಯಾಕ್ಸ್ ಮುಲ್ಲರ್ ಡೈರಿಗಳಿಂದ. . .



ಲೆಫ್ಟಿನೆಂಟ್ ಕೊಲೋನಲ್ ಜೋಸೆಫ್ ಬೊಡೆನ್ ಅನ್ನುವವನ ಕುರಿತು ಕೇಳಿರಬಹುದು. ಈತ ಸೈನ್ಯದಲ್ಲಿ ಅಧಿಕಾರಿಯಾಗಿದ್ದ. ತನ್ನ ವೃತ್ತಿಯಿಂದ ನಿವೃತ್ತಿಯಾದ ನಂತರ ಪ್ರಸಿದ್ಧ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಸಂಸ್ಕೃತ ಪ್ರೊಫೆಸರ್ ಆಗಿ ನೇಮಕಗೊಳ್ಳುತ್ತಾನೆ. ಕೊಲೋನಲ್ ಜೋಸೆಫ್ ಬೊಡೆನ್ ಒಬ್ಬ ನಿವೃತ್ತ ಸೇನಾಧಿಕಾರಿ. ಮೇಲಾಗಿ ಭಾರತದ ಆಂತರ್ಯವನ್ನು ಅರಿತವ. ಭಾರತದ ಮೂಲವನ್ನು ತೆಗೆಯುವ ಹುನ್ನಾರದೊಂದಿಗೆ ಈ ಹುದ್ದೆಯನ್ನು ಅಲಂಕರಿಸುತ್ತಾನೆ. ಅಷ್ಟರ ತನಕ ಭಾರತ ವೈದಿಕ ನೆಲೆಯಲ್ಲಿಯೇ ಸಾಗುತ್ತಿತ್ತು. ಆದರೆ ಯಾವಾಗ ಆಕ್ಸ್ಫರ್ಡ್ ವಿ ವಿ ಯಲ್ಲಿ ಸಂಸ್ಕೃತ ಮತ್ತು ಇಂಡಾಲಜಿಯ ಅಧ್ಯಯನ ಆರಂಭವಾಯಿತೋ ಅಲ್ಲಿಂದ ಭಾರತ ಕ್ರೈಸ್ತ ಮತಾನುಸರಣೆಗೆ ಬದಲಾಗುತ್ತಾ ಬಂತು. ಸಂಸ್ಕೃತ ಭಾಷೆಗೆ ಅನುಕೂಲವಾಗುವ ಕೆಲಸವನ್ನು ಅವರು ಮಾಡಿದ್ದರೂ, ಈ ಕಾರ್ಯದ ಹಿಂದಿದ್ದ ಉದ್ದೇಶ ಭಯಾನಕವಾಗಿತ್ತು.

ನಾವಿಂದು ಅರ್ಥ ಕೋಶವನ್ನು ಬಳಸುವಾಗ ಅನುಕೂಲದ ದೃಷ್ಟಿಯಿಂದ ಮೋನಿಯರ್ ವಿಲ್ಲಿಯಂ ಅನುಸರಿಸುತ್ತೇವೆ. ಶಬ್ದಕಲ್ಪದ್ರುಮ, ಅಥವಾ ವಾಚಸ್ಪತ್ಯ ಮೋನಿಯರ್ ವಿಲ್ಲಿಯಂ ನಂತರ ಉಲ್ಲೇಖಗೊಳ್ಳುತ್ತದೆ. ಅಷ್ಟರ ಮಟ್ಟಿಗೆ ನಾವು ಆ ಶಬ್ದಕೋಶಕ್ಕೆ ಅವಲಂಬಿತರಾಗಿದ್ದೇವೆ. ಅಂದರೆ ಬ್ರಿಟೀಷ್ ಆಡಳಿತದ ಒಂದು ಅಜೆಂಡಾ ಅಂತಹದ್ದೇ ಆಗಿತ್ತು. ಆಕ್ಸ್ಫರ್ಡ್ನ ಮೊದಲ ಐದು ಪ್ರಾಧ್ಯಾಪಕರಲ್ಲಿ ನಾಲ್ವರು ಭಾರತದಲ್ಲಿದ್ದು ಇಲ್ಲಿ ಸೇವೆಸಲ್ಲಿಸಿ ಹೋದವರೇ ಆಗಿದ್ದರು. ಇವರಲ್ಲಿ ಮೋನಿಯರ್ ವಿಲ್ಲಿಯಮ್ ಅತೀ ಹೆಚ್ಚು ಸಮಯ ಆಕ್ಸ್ಫರ್ಡ್ನ ಪ್ರಾಧ್ಯಾಪಕರಾಗಿದ್ದರು. ಲೆಫ್ಟಿನೆಂಟ್ ಕೊಲೋನಲ್ ಜೋಸೆಫ್ ಬೊಡೆನ್ ಎನ್ನುವವ ತನ್ನ ಅವಧಿಯ ನಂತರ ತನ್ನ ಸ್ಥಾನಕ್ಕೆ ಆಯ್ಕೆ ಮಾಡಿದ್ದು ನಾವಿಂದು ಪದೇ ಪದೇ ಎತ್ತಿ ಆಡುವ ಮ್ಯಾಕ್ಸ್ ಮುಲ್ಲರ್ನನ್ನು. ಈತನೇ ಆಗಬೇಕೆಂದು ವಿಲ್ ಬರೆದು ಸತ್ತ.
ಮಾಕ್ಸ್ಮುಲ್ಲರ್ ಅಲ್ಲಿನ ಅಧಿಕಾರ ಹಿಡಿದದ್ದೇ ತಡ. ಇಲ್ಲಿನ ಅನೇಕ ಪಂಡಿತರುಗಳಿಂದ ಪಡೆದಿದ್ದ ಸಹಾಯವನ್ನು ಬಳಸಿಕೊಳ್ಳುತ್ತಾನೆ. ಇಲ್ಲಿನ ಅನೇಕ ಮೂಲ ಗ್ರಂಥಗಳನ್ನು ಕದ್ದು ಸಾಗಿಸಿದ ಎನ್ನುವ ಆಪಾದನೆ ಅವನ ಮೇಲಿದ್ದರೂ, ಅದರ ಸತ್ಯಾಸತ್ಯತೆ ಗೊತ್ತಿಲ್ಲ. ಆದರೆ ಆತನಂತೂ ಮೋಸದಿಂದ ಪಡೆದದ್ದು ನಿಜ. ಆತನ ಯೋಜನೆ ಇದ್ದುದೇ ಭಾರತದ ಜನರ ಸಾಂಸ್ಕೃತಿಕ ಮತ್ತು ಶ್ರದ್ಧೆಯಲ್ಲಿ ಬಿರುಕು ಹುಟ್ಟಿಸಬೇಕು ಎನ್ನುವುದಾಗಿತ್ತು. ಅದರಲ್ಲಿ ಸಫಲತೆ ಪಡೆಯುತ್ತಾನೆ ಮತ್ತು ಅದನ್ನು ತಾನು ತನ್ನ ಡೈರಿಯಲ್ಲಿ ಹೇಳಿಕೊಳ್ಳುತ್ತಾನೆ. ಭಾರತದ ಜನರ ನಂಬುಗೆಯನ್ನು ಅಲ್ಲಾಡಿಸಲಿಕ್ಕೆ ವೇದಗಳನ್ನು ಬಳಸಿಕೊಳ್ಳಬೇಕು. ವೇದದಲ್ಲಿರುವ ಆರ್ಯ ಪದದ ವಿಶ್ಲೇಷಣೆ ಆಕ್ಸ್ಫರ್ಡ್ನಿಂದ ಹೋಗಬೇಕು ಎನ್ನುತ್ತಾನೆ. ಇನ್ನು History of Ancient Indian Literature ನಲ್ಲಿ ಈತ ಹೇಳುವುದು ಕೇಳಿದರೆ ಆಶ್ಚರ್ಯವಾಗುತ್ತದೆ. ಜಗತ್ತಿನ ಜನರಿಗೆಲ್ಲಾ ಶಿಕ್ಷಣದ ಅವಶ್ಯಕತೆ ಮೂಲಭೂತವಾದದ್ದು, ಆದರೆ ಅದು ಕ್ರಿಶ್ಚಿಯನ್ ಧರ್ಮಕ್ಕೆ ಅನುಸಾರವಾಗಿರಬೇಕೇ ಹೊರತು ಜಗತ್ತಿಗೆ ವೇದ ಬೋಧಿಸುವಂತಿರಬಾರದು ಎನ್ನುತ್ತಾನೆ. Chips from a German Workshop, 2nd edition, 1966, page 27 ರಲ್ಲಿ Large number of Vedic Hymns are childish in the extreme; tedious, low, common place ಇದನ್ನು ಗಮನಿಸಿದರೆ ಈತನ ದೇಹವೆಲ್ಲ ವಿಷಕಾರಿಯಾಗಿರಬಹುದು. ಇನ್ನೂ ಮುಂದುವರೆದು ನಮ್ಮ ವೇದಗಳು ತೀರಾ ಬಾಲಿಶವಾಗಿವೆ ಎನ್ನುವುದು ನೋಡಿ. ಇನ್ನು ಮುಂದುವರೆದು The vedas contain, by the side of simple, natural, childish thoughts, many ideas which to us sound modern, or secondary and tertiary (India, what can it teach us). Life and Letters of Frederick Max Muller was published by Longman Geen & Co., 1902 in 2 vols. ನಲ್ಲಿ ಹೇಳುತ್ತಾನೆ.

ಮ್ಯಾಕ್ಸ್ ಮುಲ್ಲರ್ನ ಮಡದಿ Georgina Adelaide Grenfell ಗೆ 1866ರಲ್ಲಿ ಒಂದು ಪತ್ರ ಬರೆಯುತ್ತಾನೆ. ಆ ಪತ್ರದಲ್ಲಿ ಈ ಭಾರತದಲ್ಲಿನ ಮೂರು ಸಾವಿರವರ್ಷಗಳಷ್ಟು ಪ್ರಾಚೀನವಾದ ನಂಬುಗೆ ಮತ್ತು ಅಸ್ತಿತ್ವವನ್ನೇ ನಾಶಪಡಿಸುವ ಮಾತನ್ನು ಬರೆಯುತ್ತಾನೆ. This edition of mine and the translation of the Veda will hereafter tell to a great extent on the fate of India.... it is the root of their religion and to show what the root is, I feel sure, is the only way of uprooting all that has sprung from it during the last three thousand years. ಆತ ತನ್ನ ಮಗನಿಗೂ ಪತ್ರ ಬರೆಯುತ್ತಾನೆ ಅದರಲ್ಲಿ ವೇದಕ್ಕೆ ಕೊನೆಯಸ್ಥಾನ ಕೊಡಬೇಕು ಎಂದು ಪ್ರತಿಪಾದಿಸುತ್ತಾನೆ. ಈ ಜಗತ್ತಿನಲ್ಲಿ ಅತೀ ಪ್ರಾಚೀನ ಗ್ರಂಥ ಯಾವುದು ಎಂದು ಕೇಳಿದರೆ ನಿವ್ಟೆಸ್ಟಾಮೆಂಟ್, ನಂತರದಲ್ಲಿ ಕುರಾನ್, ನಂತರದಲ್ಲಿ ದಕ್ಷಿಣದ ಬೌದ್ಧ ತ್ರಿಪಿಟಿಕಾಗಳು ಆಮೇಲೆ ವೇದ ಮತ್ತು ಅವೆಸ್ತಾ ಗ್ರಂಥಗಳು ಎನ್ನುತ್ತಾನೆ. Would you say that any one book is superior to all others in the world ?... I say the new Testament. After that, I should place the Koran, which in its moral teachings, is hardly more than a later edition of the New Testament. Then would follow ... the Old Testament, the Southern Buddhist Tripiṭaka, . . . The Veda and the Avesta.

Duke of Argyl, Minister of India, ಎನ್ನುವವನಿಗೆ 16.12.1868 ರಲ್ಲಿ ವೈದಿಕ ಸಾಹಿತ್ಯದ ಪ್ರಕಟಣೆಗಾಗಿ ಗ್ರಾಂಟ್ ಬಿಡುಗಡೆಗಾಗಿ ಪತ್ರ ಬರೆಯುತ್ತಾನೆ. ಅದರಲ್ಲಿ ಒಂದೊಮ್ಮೆ ಭಾರತದಲ್ಲಿ ವೈದಿಕಧರ್ಮ ಅಳಿಯದೇ ಕ್ರಿಶ್ಚಿಯನ್ ಧರ್ಮ ವಿಫಲವಾದರೆ ಅದಕ್ಕೆ ಯಾರ ತಪ್ಪು ಎನ್ನುತ್ತಾರೆ. His letter to Duke of Argyl, Minister of India, on 16-12-1868 in context of grant for Vedic publication-The ancient religion of India is doomed and if Christianity does not step in, whose fault will it be ?
ಬೈರಾಮ್ಜಿ ಮಲಬಾರಿ ಎನ್ನುವವರಿಗೆ 1882ರ ಜನವರಿ 29 ರಂದು ಒಂದು ಪತ್ರ ಬರೆಯುತ್ತಾನೆ. ಅದರಲ್ಲಿ ಪ್ರಾಚೀನ ಭಾರತದ ಯಾವುದೇ ಮೌಲ್ಯಯುತ ನಿರ್ಧಾರಗಳು ಯೂರೋಪ್ ಅಥವಾ ಕ್ರಿಶ್ಚಿಯಾನಿಟಿಯಿಂದ ಬಂದದ್ದಲ್ಲ. ಈ ದೇಶದ ಇತಿಹಾಸದ ಶ್ರೀಮಂತಿಕೆಯೇ ಹಾಗಿದೆ. ಇಲ್ಲಿನ ಜನಕ್ಕೆ ಆ ಸಂಸ್ಕೃತಿಯೇ ಬೆಳೆದು ಬಂದಿದೆಯೇ ಹೊರತು ನಮ್ಮ ಕೊಡುಗೆಗಳಾದ ಮೆಷಿನರಿಗಳಿಂದಲ್ಲ ಅಥವಾ ಇಲೆಕ್ಟ್ರಿಸಿಟಿಯಿಂದಲ್ಲ ಎನ್ನುತ್ತಾನೆ.

ಮ್ಯಾಕ್ಸ್ಮುಲ್ಲರ್ ಅದೆಷ್ಟೋ ಕೆಲಸಗಳನ್ನು ಮಾಡಿರಬಹುದು. ಆದರೆ ಅವುಗಳ ಹಿಂದಿರುವ ಉದ್ದೇಶ ಭಾರತದ ಅಂತಃಸತ್ವವನ್ನು ಹಾಳುಮಾಡುವುದಾಗಿತ್ತು. ಮ್ಯಾಕ್ಸ್ಮುಲ್ಲರ್ ಗೆ ಧನಾರ್ಜನೆ ಮುಖ್ಯವಾಗಿತ್ತು. ಕೊನೆಗೆ ತನ್ನ ತಪ್ಪಿನ ಅರಿವಾಗಿತ್ತು. ತಾನು ಮಾಡಿದ ದುರಾಚಾರಗಳ ಬಗ್ಗೆ ಕೆಲವರಲ್ಲಿ ಹೇಳಿಕೊಂಡಿದ್ದ. ಆದರೆ ಅದಾಗಲೇ ಅವನ ವ್ಯಾಖ್ಯಾನಗಳು ಪ್ರಸಿದ್ಧಿಯನ್ನ ಪಡೆದಾಗಿತ್ತು. ಹಾಗಾಗಿ ತಿರುಚಿದ ಸಿದ್ಧಾಂತಗಳನ್ನು ಸರಿಪಡಿಸುವಷ್ಟು, ಪುನಃ ಬರೆಯುವಷ್ಟು, ಅವನಲ್ಲಿ ಶಕ್ತಿ ಉಳಿದಿರಲಿಲ್ಲ.

#ವೇದಾಂತದ_ಪುನರ್ಮನನ

No comments:

Post a Comment

If you have any doubts. please let me know...