August 6, 2021

ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ...!

ಒಬ್ಬ ರೈತನಿಗೆ ಹಳೆಯ ಒಂದು ಕೈ ಗಡಿಯಾರವಿತ್ತು. ಅದನ್ನು ಆತನ ಅಪ್ಪಾಜಿಯವರು ಗಿಫ್ಟ್ ಕೊಟ್ಟದ್ದಾಗಿತ್ತು. ಒಂದು ದಿನ ಆತ ಕೆಲಸ ಮಾಡುತ್ತಿರುವಾಗ ಆ ಗಡಿಯಾರವು ಬೈಹುಲ್ಲಿನ ರಾಶಿಯೊಳಗೆ ಕಳೆದು ಹೋಯಿತು..... ಆತ ತುಂಬಾ ಹುಡುಕಾಡಿದರೂ ಸಿಗಲೇ ಇಲ್ಲ. ದುಃಖಿತಸ್ತನಾದ ಆತ ಪಕ್ಕದ ಮನೆಯ ಮಕ್ಕಳನ್ನು ಕರೆದು ವಿಷಯ ತಿಳಿಸಿದ‌.  ಆ ಮಕ್ಕಳೆಲ್ಲರೂ ಬೈಹುಲ್ಲಿನ ರಾಶಿಯನ್ನು ತಿರುಗಿಸಿ,  ಮಗುಚಿ ಎಲ್ಲಾ ಹುಡುಕಿದರೂ ಕೂಡಾ ಗಡಿಯಾರ ಸಿಗಲೇ ಇಲ್ಲ.... 

ಹಾಗೆ ಬೇಜಾರಲ್ಲಿ ಕುಳಿತಿರುವಾಗ ಬಾಲಕನೊಬ್ಬ ಆತನ ಹತ್ತಿರ ಬಂದು ಹೇಳಿದ - ಅಂಕಲ್  ನಾನೊಮ್ಮೆ ಪ್ರಯತ್ನಿಸಲೇ?

ಆತ ಆ ಬಾಲಕನನ್ನು ಕುತೂಹಲದಿಂದ ನೋಡಿದ...
ಮತ್ತು ಹೇಳಿದ -

“ಮಗುವೇ ನಾವೆಲ್ಲರೂ ಬೈಹುಲ್ಲನ್ನು ಮಗುಚಿ ತಿಜುಕಿ ಎಲ್ಲಾ ಹುಡುಕಿದರೂ ಗಡಿಯಾರ ಸಿಗಲಿಲ್ಲ.... ಮತ್ತೆ ನೀನೊಬ್ಬನೇ .... ಅದೇನು ಮಾಡುತ್ತಿಯೋ... ?

ಬಾಲಕ - “ಆದರೂ ನಾನೊಮ್ಮೆ ಪ್ರಯತ್ನಿಸುವೆ”

ರೈತ - “ ಅದಕ್ಕೇನಂತೆ ಪ್ರಯತ್ನಿಸು ನೋಡೋಣ....”

ಆ ಬಾಲಕ ಬೈ ಹುಲ್ಲಿನ ರಾಶಿಯ ಹತ್ರ ಹೋದ.
ಸುಮಾರು ಹತ್ತು ನಿಮಿಷದ ನಂತರ ಆ ಕಳೆದು ಹೋದ ಗಡಿಯಾರದೊಂದಿಗೆ ವಾಪಾಸ್ ಬಂದ...! 

ಆ ಬಾಲಕನನ್ನು ನೋಡಿದ ರೈತನಿಗೆ ಆಶ್ಚರ್ಯವಾಯಿತು. 

ಆತ ಸಂತೋಷದಿಂದ ಕೇಳಿದ- “ ಕಂದಾ ನಿನ್ನಿಂದ ಇದೇಗೆ ಸಾಧ್ಯವಾಯಿತು?”

ಬಾಲಕ - “ನಾನು ಬೇರೇನೂ ಮಾಡಿಲ್ಲ. ಆ ಬೈ ಹುಲ್ಲಿನ ರಾಶಿಯ ಒಳಗೆ ಸುಮ್ಮನೆ ಕೂತುಕೊಂಡೆ ಮತ್ತು. ಶಬ್ದವನ್ನು ಆಲಿಸತೊಡಗಿದೆ... ಆಗ  "ಟಿಕ್ ಟಿಕ್ " ಅಂತ ಗಡಿಯಾರದ ಶಬ್ದ ಕೇಳಿಸಿತು.. ಶಬ್ದ ಕೇಳಿಸಿದ ಜಾಗವನ್ನು ಹುಡುಕಾಡಿದೆ. ಆಗ ಗಡಿಯಾರ ಸಿಕ್ಕಿತು.....!”

ನೋಡಿ ಸ್ನೇಹಿತರೆ - ಯಾವ ಸಮಸ್ಯೆಗೂ ಒಂದು ಪರಿಹಾರ ಇದ್ದೇ ಇರುತ್ತದೆ... ಕಿರುಚಾಡಿದರೋ  ಅಥವಾ ಒಬ್ಬರನ್ನೊಬ್ಬರು ದೂರುತ್ತಾ ಇದ್ದರೋ ಸಮಸ್ಯೆ ನಿವಾರಣೆಯಾಗದು.
ಶಾಂತವಾಗಿ , ನಿಶಬ್ದವಾಗಿ ಯೋಚಿಸಿ ಮತ್ತು ಎಲ್ಲವನ್ನೂ ಆಲಿಸಿ ... ಆವಾಗ ಸಮಸ್ಯೆ ನಿವಾರಣೆಯ ದಾರಿಯು ನಿಮಗೆ ಗೋಚರಿಸುವುದು.

No comments:

Post a Comment

If you have any doubts. please let me know...