ಶ್ರೀ ಹನೂಮತ್ಪ್ರೋಕ್ತ ಭಾಸ್ಮ ಧಾರಣ ವಿಧಿಃ ||
ಭಸ್ಮಧಾರಣಾ ವಿಧಿಯು ವೇದೋಕ್ತವಾಗಿರುವದರಿಂದಲೂ ವೇದಕಾಲದಿಂದಲೇ ಭಸ್ಮಧಾರಣವಿಧಿಯು ಹಲವಾರು ಮಹಾತ್ಮರಿಂದಲೂ ,ಋಷಿ ಮುನಿಗಳಿಂದಲೂ ,ವಿಷ್ಣುವೇ ಮೊದಲಾದ ದೇವಾನುದೇವತೆಗೆಳಿಂದಲೂ ಭಸ್ಮಧಾರಣೆಯ ಮಹತ್ವವು ತಿಳಿದುಬರುತ್ತದೆ. ವ್ಯಾಸೋಕ್ತ ಪದ್ಮಪುರಾಣದಲ್ಲಿ ಶಿವನನ್ನು ಸೇವಿಸಿ ತೃಪ್ತನಾದ ಹನುಂಮಂತನು ಶಿವಾನುಗ್ರಹೀತನಾಗಿ ಶಿವಪೂಜಾಕೈಂಕರ್ಯದ ಮುಖ್ಯ ಅಂಗವಾದ ಭಾಸ್ಮಧಾರಣೆ ವಿಧಿಯನ್ನು ಈ ರೀತಿಯಾಗಿ ಬೋಧಿಸಿದ್ದಾನೆ. ಹೀಗೇ ವೇದಗಳೂ ಪುರಾಣಸ್ಮೃತಿಗಳೂ ಭಸ್ಮಧಾರಣೆಯನ್ನು ಪ್ರಶಂಸೆ ಮಾಡುತ್ತಿದೆ.
ಶ್ರೀ ಪದ್ಮಪುರಾಣಾಂತರ್ಗತ ಹನೂಮತ್ಪ್ರೋಕ್ತ ಭಾಸ್ಮ ಧಾರಣ ವಿಧಿಃ ||
ಪಾತಾಳಖಂಡ ಅಧ್ಯಾಯ -೧೧೦
ಹನುಮಾನಥ ದೇವಾಯ ವ್ಯಜ್ಞಾಪಯದಿದಂ ವಚಃ ಅರ್ಥಯಾಮಿ ವಿನಿಷ್ಕಾಮಂ ಮಮ ಪೂಜಾವ್ರತಂ ತಥಾ ೨೭೬ ಪೂಜಾರ್ಥಮಪ್ಯಹಂ ಗಚ್ಛೇ ಮಮಾನುಜ್ಞಾತುಮರ್ಹಸಿ
ಶಂಕರ ಉವಾಚ-
ಕಸ್ಯ ಪೂಜಾ ಕ್ವ ವಾ ಪೂಜಾ ಕಿಂ ಪುಷ್ಪಂ ಕಿಂ ದಲಂ ವದ ೨೭೭ ಕೋ ಗುರುಃ ಕಶ್ಚ ಮಂತ್ರಸ್ತೇ ಕೀದೃಶಂ ಪೂಜನಂ ತಥಾ ಏವಂ ವದತಿ ದೇವೇಶೇ ಹನೂಮಾನತಿಕಂಪಿತಃ ೨೭೮ ವೇಪಮಾನಸಮಸ್ತಾಂಗಃ ಸ್ತೋತುಮೇವ ಪ್ರಚಕ್ರಮೇ
ಹನೂಮಾನುವಾಚ-
ನಮೋ ದೇವಾಯ ಮಹತೇ ಶಂಕರಾಯಾಮಿತಾತ್ಮನೇ ೨೭೯ ಯೋಗಿನೇ ಯೋಗಧಾತ್ರೇ ಚ ಯೋಗಿನಾಂ ಗುರವೇ ನಮಃ ಯೋಗಿಗಮ್ಯಾಯ ದೇವಾಯ ಜ್ಞಾನಿನಾಂ ಪತಯೇ ನಮಃ ೨೮೦ ವೇದಾನಾಂ ಪತಯೇ ತುಭ್ಯಂ ದೇವಾನಾಂ ಪತಯೇ ನಮಃ ಧ್ಯಾನಾಯಧ್ಯನಗಮ್ಯಾಯ ಧಾತೄಣಾಂ ಗುರವೇ ನಮಃ ೨೮೧ ಶಿಷ್ಟಾಯಶಿಷ್ಟಗಮ್ಯಾಯ ಭೂಮ್ಯಾದಿ ಪತಯೇ ನಮಃ ನಮಸ್ತೇತ್ಯಾದಿನಾ ವೇದವಾಕ್ಯಾನಾಂ ನಿಧಯೇ ನಮಃ ೨೮೨
ಆತನುಷ್ವೇತಿವಾಕ್ಯೈಶ್ಚ ಪ್ರತಿಪಾದ್ಯಾಯ ತೇ ನಮಃ ಅಷ್ಟಮೂರ್ತೇ ನಮಸ್ತುಭ್ಯಂ ಪಶೂನಾಂಪತಯೇ ನಮಃ ೨೮೩ ತ್ರ್ಯಂಬಕಾಯ ತ್ರಿನೇತ್ರಾಯ ಸೋಮಸೂರ್ಯಾಗ್ನಿಲೋಚನ ಸುಭೃಂಗರಾಜಧತ್ತೂರದ್ರೋಣಪುಷ್ಪಪ್ರಿಯಾಯ ತೇ ೨೮೪ ಬೃಹತೀಪೂಗಪುಂನಾಗ ಚಂಪಕಾದಿಪ್ರಿಯಾಯ ಚ ನಮಸ್ತೇಸ್ತು ನಮಸ್ತೇಸ್ತು ಭೂಯ ಏವ ನಮೋನಮಃ ೨೮೫ ಶಿವೋ ಹರಿಮಥ ಪ್ರಾಹ ಮಾ ಭೈಷೀರ್ವದ ಮೇಽಖಿಲಮ್
ಹನುಮಾನುವಾಚ-
ಶಿವಲಿಗಾರ್ಚನಂ ಕಾರ್ಯಂ ಭಸ್ಮೋದ್ಧೂಲಿತದೇಹಿನಾ ೨೮೬ ದಿವಾಸಂಪಾದಿತೈಸ್ತೋಯೈಃ ಪುಷ್ಪಾದ್ಯೈರಪಿ ತಾದೃಶೈಃ ದೇವ ವಿಜ್ಞಾಪಯಿಷ್ಯಾಮಿ ಶಿವಪೂಜಾವಿಧಿಂ ಶುಭಮ್ ೨೮೭ ಸಾಯಂಕಾಲೇ ತು ಸಂಪ್ರಾಪ್ತೇ ಅಶಿರಃ ಸ್ನಾನಮಾಚರೇತ್ ಕ್ಷಾಲಿತಂ ವಸನಂ ಶುಷ್ಕಂ ಧೃತ್ವಾಚಮ್ಯ ದ್ವಿರಗ್ರಧೀಃ ೨೮೮ ಅಥ ಭಸ್ಮ ಸಮಾದಾಯ ಆಗ್ನೇಯಂ ಸ್ನಾನಮಾಚರೇತ್ ಪ್ರಣವೇನ ಸಮಾಮಂತ್ರ್ಯಾಪ್ಯಷ್ಟವಾರಮಥಾಪಿ ವಾ ೨೮೯ ಪಂಚಾಕ್ಷರೇಣ ಮಂತ್ರೇಣ ನಾಮ್ನಾ ವಾ ಯೇನಕೇನಚಿತ್ ಸಪ್ತಾಭಿಮಂತ್ರಿತಂ ಭಸ್ಮ ದರ್ಭಪಾಣಿಃ ಸಮಾಹರೇತ್ ೨೯೦ ಈಶಾನಃ ಸರ್ವವಿದ್ಯಾನಾಮುಕ್ತ್ವಾ ಶಿರಸಿ ಪಾತಯೇತ್ ತತ್ಪುರುಷಾಯ ವಿದ್ಮಹೇ ಮುಖೇ ಭಸ್ಮ ಪ್ರಸೇಚಯೇತ್ ೨೯೧ ಅಘೋರೇಭ್ಯೋಽಥ ಘೋರೇಭ್ಯೋ ಭಸ್ಮ ವಕ್ಷಸಿ ನಿಕ್ಷಿಪೇತ್ ವಾಮದೇವಾಯ ನಮ ಇತಿ ಗುಹ್ಯಸ್ಥಾನೇ ವಿನಿಕ್ಷಿಪೇತ್ ೨೯೨ ಸದ್ಯೋಜಾತಂ ಪ್ರಪದ್ಯಾಮಿ ನಿಕ್ಷಿಪೇದಥ ಪಾದಯೋಃ ಉದ್ಧೂಲಯೇತ್ಸಮಸ್ತಾಂಗೇ ಪ್ರಣವೇನ ವಿಚಕ್ಷಣಃ ೨೯೩ ತ್ರೈವರ್ಣಿಕಾನಾಮುದಿತಃ ಸ್ನಾನಾದಿವಿಧಿರುತ್ತಮಃ ಶೂದ್ರಾದೀನಾಂ ಪ್ರವಕ್ಷ್ಯಾಮಿ ಯದುಕ್ತಂ ಗುರುಣಾ ತಥಾ ೨೯೪ ಶಿವೇತಿ ಪದಮುಚ್ಚಾರ್ಯ ಭಸ್ಮಸಂಮಂತ್ರಯೇತ್ಸುಧೀಃ ಸಪ್ತವಾರಮಥಾದಾಯ ಶಿವಾಯೇತಿ ಶಿರಃ ಕ್ಷಿಪೇತ್ ೨೯೫ ಶಂಕರಾಯ ಮುಖೇ ಪ್ರೋಕ್ತಂ ಸರ್ವಜ್ಞಾಯ ಹೃದಿ ಕ್ಷಿಪೇತ್ ಸ್ಥಾಣವೇ ನಮ ಇತ್ಯುಕ್ತ್ವಾ ಗುಹ್ಯೇ ಚಾಪಿ ಸ್ವಯಂಭುವೇ ೨೯೮ ಉಚ್ಚಾರ್ಯ ಪಾದಯೋಃ ಕ್ಷಿಪ್ತ್ವಾ ಭಸ್ಮಶುದ್ಧಮತಃ ಪರಮ್ ನಮಃ ಶಿವಾಯೇತ್ಯುಚ್ಚಾರ್ಯ ಸರ್ವಾಂಗೋದ್ಧೂಲನಂ ಸ್ಮೃತಮ್ ೨೯೭ ಪ್ರಕ್ಷಾಲ್ಯ ಹಸ್ತಾವಾಚಮ್ಯ ದರ್ಭಪಾಣಿಃ ಸಮಾಹಿತಃ ದರ್ಭಾಭಾವೇ ಸುವರ್ಣಂ ಸ್ಯಾತ್ತದಭಾವೇ ಗವಾಲಕಃ ೨೯೮ ತದಭಾವೇ ತು ದೂರ್ವಾಃ ಸ್ಯುಸ್ತದಭಾವೇ ತು ರಾಜತಮ್
ಭಾವಾರ್ಥ :-
ಹನುಮಂತನು ಶಿವನನ್ನು ಕುರಿತು ಅರಿಕೆ ಮಾಡಿಕೊಳ್ಳುತ್ತಾನೆ.
ಸ್ವಾಮಿ, ನಾನು ನಿಷ್ಕಾಮವುಳ್ಳ ನಿನ್ನ ಪೂಜೆಯ ವ್ರತವನ್ನು ಕೇಳಿಕೊಳ್ಳುತ್ತೇನೆ. ಪೂಜೆಗೋಸ್ಕರ ನಾನು ಹೋಗುತ್ತೇನೆ. ನನಗೆ ಅಪ್ಪಣೆಯನ್ನು ಕೊಡು ಎಂದು ವಿಜ್ಞಾಪಿಸಿಕೊಂಡನು.
ಶಂಕರನು ಹೇಳಿದನು :-
ಯಾರ ಪೂಜೆ ? ಎಲ್ಲಿ ಪೂಜೆ ? ಯಾವ ಹೂ ? ಯಾವ ಪತ್ರೆ ? ಗುರುವು ಯಾರು ? ಮಂತ್ರವು ಯಾವುದು ? ಪೂಜೆಯು ಯಾವ ರೀತಿಯಾದುದು ?
ಸ್ವಾಮಿಯು ಹೀಗೆನ್ನಲು, ಹನುಮಂತನು ಭಯಭಕ್ತಿಗಳಿಂದ ನಡುಗುತ್ತ ಈ ರೀತಿ ಸ್ತೋತ್ರ ಮಾಡಿದನು.
ಹನುಮಂತನು ಹೇಳಿದನು :-- ಮಹಾದೇವನಾದ ನಿನಗೆ ನಮೋನಮಃ . ಮಹಾನುಭಾವನೂ ಯೋಗಧಾರಿಯೂ ಆದ ಶಂಕರನಿಗೆ ನಮಸ್ಕಾರವು, ಯೋಗಿಗಳಿಗೂ ಗುರುವಾದ ನಿನಗೆ ನಮಸ್ಕಾರವು.
೨೭೬. ಯೋಗಿಗಳಿಗೆ ಸಿಕ್ಕುವ ನಿನಗೆ ನಮಸ್ಕಾರವು, ಜ್ಞಾನಿಗಳ ಒಡೆಯನಾದ ನಿನಗೆ ನಮಸ್ಕಾರವು, ವೇದಗಳಿಗೆ ಅಧಿಪತಿಯಾದ ನಿನಗೆ ನಮಸ್ಕಾರವು, ದೇವತೆಗಳಿಗೆ ಒಡೆಯನಾದ ನಿನಗೆ ನಮಸ್ಕಾರವು.
೨೭೭. ಧ್ಯಾನರೂಪನಾದ, ಧ್ಯಾನದಿಂದ ಸಿಕ್ಕುವ, ಧ್ಯಾನಮಾಡುವವರಿಗೆ ಗುರುವಾದ ನಿನಗೆ ನಮಸ್ಕಾರವು, ನಿಷ್ಟನಾದ ಶಿಷ್ಯರಿಗೆ ಕಾಣಿಸಿಕೊಳ್ಳುವ, ಭೂಮ್ಯಾದಿಗಳಿಗೆ ಒಡೆಯನಾದ ನಿನಗೆ ನಮಸ್ಕಾರವು.
೨೭೮. ಅಂಭಸ್ಯ ಪಾರೆ ಮುಂತಾದ ವೇದವಾಕ್ಯಗಳಿಗೆ ಒಡೆಯನಾದ ನಿನಗೆ ನಮಸ್ಕಾರವು, ಆತನುಷ್ವ ಪ್ರತನುಷ್ವ ಎಂಬ ವಾಕ್ಯದಲ್ಲಿ ವರ್ಣಿತನಾದ ನಿನಗೆ ನಮಸ್ಕಾರವು.
೨೭೯. ಅಷ್ಟಮೂರ್ತಿಯಾದ ನಿನಗೆ ನಮಸ್ಕಾರವು, ಸೂರ್ಯ ಚಂದ್ರರೇ ಕಣ್ಣುಗಳಾಗಿ ಉಳ್ಳ ನಿನಗೆ ನಮಸ್ಕಾರವು, ಮೂರು ಕಣ್ಣುಗಳು ನಿನಗೆ ನಮಸ್ಕಾರಗಳು. ಪಶುಗಳಿಗೆ ಪತಿಯಾದ ನಿನಗೆ ನಮಸ್ಕಾರವು.
೨೮೦, ಗರುಗ, ಉಮ್ಮತ್ತ, ತುಂಬೆ ಹೂಗಳಲ್ಲಿ ಪ್ರೀತಿಯುಳ್ಳ ನಿನಗೆ ನಮಸ್ಕಾರವು. ಗುಳ್ಳ, ಅಡಕೆ, ಸುರಹೊನ್ನೆ, ಸಂಪಿಗೆ ಹೂಗಳಲ್ಲಿ ಪ್ರೀತಿಯುಳ್ಳ ನಿನಗೆ ನಮಸ್ಕಾರವು.
೨೧. ನಿನಗೆ ನಮಸ್ಕಾರ, ನಿನಗೆ ನಮಸ್ಕಾರ, ಮತ್ತೂ ನಿನಗೆ ನಮಸ್ಕಾರವು.
ಆಗ ಶಿವನು ಕಪಿರಾಜನನ್ನು ಕುರಿತು ಹೆದರಬೇಡ ನನಗೆ ಎಲ್ಲವನ್ನೂ ಹೇಳು ಎಂದನು.
೨೮೨. ಹನುಮಂತನು ಹೇಳಿದನು
:-ಮೈಯ್ಯಿಗೆ ವಿಭೂತಿಯನ್ನಿಟ್ಟುಕೊಂಡು ಹಗಲು ತಂದ ಹೂವು, ನೀರು ಮುಂತಾದುವುಗಳಿಂದ ರಾತ್ರಿ ಶಿವನಾದ ನಿನ್ನ ಪೂಜೆಯನ್ನು ಮಾಡಬೇಕು,
೨೮೩. ಎಲೈ ಸ್ವಾಮಿಯೇ, ನೀನೇ ನೀನಾದ ಶಿವನ ಪೂಜೆಯ ವಿಧಿಯನ್ನು ವಿಜ್ಞಾಪಿಸಿಕೊಳ್ಳುತ್ತೇನೆ. ಸಾಯಂಕಾಲವಾಗಲು ಕಂಠದವರೆಗೂ ಸ್ನಾನಮಾಡಬೇಕು.
೨೮೪, ಒಗೆದು ಒಣಗಿಸಿದ ಬಟ್ಟೆಯನ್ನು ಉಟ್ಟುಕೊಂಡು ಎರಡುಬಾರಿ ಆಚಮನಮಾಡಬೇಕು. ಅನಂತರ ಭಸ್ಮವನ್ನು ಮೈಗೆ ಬಳಿದುಕೊಳ್ಳಬೇಕು. ಅದೇ ಆಗ್ನೆಯ ಸ್ನಾನವೆನ್ನಿಸಿಕೊಳ್ಳುತ್ತದೆ.
೨೮೫. ಓಂ ಎಂಬ ಪ್ರಣವದಿಂದ ಆ ಭಸ್ಮವನ್ನು ಮಂತ್ರಿಸಬೇಕು, ಅದಿಲ್ಲದಿದ್ದರೆ ಅಷ್ಟಾಕ್ಷರಿಯಿಂದ ಮಂತ್ರಿಸಬೇಕು. ಅದೂ ಇಲ್ಲದಿದ್ದರೆ ಪಂಚಾಕ್ಷರಿಯಿಂದಮಂತ್ರಿಸಬೇಕು.
ಅದೂ ಆಗದಿದ್ದರೆ ಶಿವನ ಯಾವುದಾದರೂ ಒಂದು ನಾಮವನ್ನು ಹೇಳಿ ಮಂತ್ರಿಸಬೇಕು.
೨೮೬, ಹೀಗೆ ಏಳುಸಾರಿ ಆ ಭಸ್ಮವನ್ನು ಮಂತ್ರಿಸಿ, ಪವಿತ್ರವನ್ನಿಟ್ಟು ಕೊಂಡು ಆ ಭಸ್ಮವನ್ನು ತೆಗೆದುಕೊಳ್ಳಬೇಕು. ಈಶಾನಸ್ಸರ್ವವಿದ್ಯಾನಾಂ ಎಂಬ ಮಂತ್ರವನ್ನು ಹೇಳಿ ತಲೆಗೆ ಇಟ್ಟುಕೊಳ್ಳಬೇಕು.
೨೮೬. ತತ್ಪುರುಷಾಯ ವಿದ್ಮಹೇ ಎಂಬ ಮಂತ್ರವನ್ನು ಹೇಳಿ ಹಣೆಗೆ ಭಸ್ಮ ವನ್ನು ಹಚ್ಚಿಕೊಳ್ಳಬೇಕು. ಅಘೋರೇಭ್ಯೋಥಘೋರೇಭ್ಯಃ ಎಂಬ ಮಂತ್ರದಿಂದೆ ಎದೆಗೆ ಭಸ್ಮವನ್ನು ಹಚ್ಚಿಕೊಳ್ಳಬೇಕು.
೨೮೮, ವಾಮದೇವಾಯನಮಃ ಎಂಬ ಮಂತ್ರದಿಂದ ಗುಹ್ಯಸ್ಥಾನಕ್ಕೆ ಭಸ್ಮವನ್ನು ಹಚ್ಚಿಕೊಳ್ಳಬೇಕು. ಸದ್ಯೋಜಾತಂ ಪ್ರಪದ್ಯಾಮಿ ಎಂಬುವದರಿಂದ ಪಾದಗಳಿಗೆ ಹಚ್ಚಿಕೊಳ್ಳಬೇಕು.
೨೮೯: ಅನಂತರ ಪ್ರಣವದಿಂದ ಚಲನವುಳ್ಳ ದೇಹದ ಎಲ್ಲಾ ಅಂಗಗಳಿಗೂ ಭಸ್ಮವನ್ನು ಹಚ್ಚಿಕೊಳ್ಳಬೇಕು. ಈ ಭಸ್ಮ ಸ್ನಾನಾದಿವಿಧಿಯು ತ್ರಿವರ್ಣದವರಿಗೂ ಅದರಲ್ಲೂ ವಿಶೇಷವಾಗಿ ದ್ವಿಜರಿಗೆ ಹೇಳಲ್ಪಟ್ಟಿದೆ.
೨೯೦ : ಶೂದ್ರರಿಗಿರುವ ವಿಧಿಯನ್ನು ದಕ್ಷಿಣಾಮೂರ್ತಿಯೂ ಗುರುಸ್ವರೂಪನೂ ಆದ ನಿನ್ನಿಂದ ಹೇಳಲ್ಪಟ್ಟ ರೀತಿಯಿಂದ ಹೇಳುತ್ತೇನೆ. ಶಿವ ಎಂಬ ಪದವನ್ನು ಉಚ್ಚರಿಸಿ ಶೂದ್ರನು ಭಸ್ಮವನ್ನು ಮಂತ್ರಿಸಬೇಕು.
೨೯೧. ಅನಂತರ ಏಳುಬಾರಿ ತೆಗೆದುಕೊಳ್ಳಬೇಕು. ಶಂಕರಾಯ ನಮಃ ಎಂದು ಮುಖಕ್ಕೂ ತತ್ತಜ್ಞಾಯ ನಮಃ ಎಂದು ಎದೆಗೂ ಹಚ್ಚಿಕೊಳ್ಳಬೇಕು.
೨೯೨. ಸ್ಥಾಣವೇ ನಮಃ ಎಂದು ಗುಹ್ಯಕ್ಕೂ, ಸ್ವಯಂಭುವೆ ನಮಃ ಎಂದು ಪಾದಗಳಿಗೂ, ಹಚ್ಚಿಕೊಳ್ಳಬೇಕು. ಅನಂತರ ಉಳಿದ ಭಸ್ಮವನ್ನು *ಓಂ ನಮಃ ಶಿವಾಯ* ಎಂದು ಹೇಳುತ್ತಾ ಮೈಗೆಲ್ಲಾ ಪೂಸಿಕೊಳ್ಳಬೇಕು.
೨೯೩. ಅನಂತರ ಕೈಗಳನ್ನು ತೊಳೆದುಕೊಂಡು ನಿಯಮದಿಂದ ಪವಿತ್ರವನ್ನು ಧರಿಸಿಕೊಳ್ಳಬೇಕು.
೨೯೪, ದರ್ಭೆಯ ಪವಿತ್ರವಿಲ್ಲದಿದ್ದರೆ ಚಿನ್ನದ ಪವಿತ್ರದ ಉಂಗುರವನ್ನು ಇಟ್ಟುಕೊಳ್ಳಬೇಕು, ಅದೂ ಇಲ್ಲದಿದ್ದರೆ ಪಂಚಲೋಹದ ಪವಿತ್ರದುಂಗುರವಾಗ ಬಹುದು. ಅಥವಾ ಗರಿಕೆಯಾದರೂ ಆಗಬಹುದು. ಅದೂ ಸಿಕ್ಕದಿದ್ದರೆ ಬೆಳ್ಳಿಯ ಪವಿತ್ರದುಂಗುರವಾಗಬಹುದು.
ಇಲ್ಲಿಗೆ ಶ್ರೀ ಹನೂಮತ್ ಪ್ರೋಕ್ತ ಭಸ್ಮಧಾರಣಾ ವಿಧಿಯು ಸಂಪೂರ್ಣವು.
ಹರಿ ಓಮ್ ತತ್ ಸತ್.
ಸತ್ಯಪ್ರಕಾಶ.
No comments:
Post a Comment
If you have any doubts. please let me know...