June 28, 2021

ನ ಕ್ಷರತೀ ಇತಿ ನಕ್ಷತ್ರ:



ವಿದೇಶೀಯರು ಭಾರತದ ಮೇಲೆ ಯಾಕೆ ದಂಡೆತ್ತಿ ಬಂದರು ? ಭಾರತ ಒಂದು ಅನಾಗರಿಕ ದಟ್ಟ ದಾರಿದ್ರ್ಯ ಹೊಂದಿದ್ದ ದೇಶವಾಗಿದ್ದರೆ ವಿದೇಶಿಯರು ಯಾಕೆ ಬರುತ್ತಿದ್ದರು ? ಜಗತ್ತಿನ ಇತರೆಡೆಯ ಜನರಿಗೆ ಕಣ್ಣುಕುಕ್ಕಿದ್ದಕ್ಕೆ ದಾಳಿಮಾಡಿದ್ದಲ್ಲವೇ ? ನಿಜ, ಅದನ್ನೇ ಹೇಳಹೊರಟಿದ್ದು ನಾನು.

ಹೌದು ಇಡೀ ಜಗತ್ತಿನಲ್ಲಿ ಭಾರತವನ್ನು ಹೊರತು ಪಡಿಸಿ ಉಳಿದೆಡೆ ಇನ್ನೂ ಸಂಸ್ಕಾರವನ್ನೇ ಪಡೆದಿರದ ಸಮಯದಲ್ಲಿ ಜಗತ್ತು ಬೌದ್ಧಿಕ ದಿವಾಳಿಯ ಅಂಚಿನಲ್ಲಿದ್ದಕಾಲ ಅದು. ಜನರಿಗೆ ಬದುಕುವ ಕಲೆಯೇ ಗೊತ್ತಿರಲಿಲ್ಲ. ಮನುಷ್ಯ ಮತ್ತು ಪ್ರಾಣಿಗಳ ನಡತೆಯಲ್ಲಿನ ವ್ಯತ್ಯಾಸವೂ ತಿಳಿದಿರದ ಕಾಲವದು. ಅಂತಹ ಕಾಲದಲ್ಲಿ ಭಾರತ ಉಚ್ಛ್ರಾಯ ಸ್ಥಿತಿಯನ್ನು ತಲುಪಿಯಾಗಿತ್ತು. ಜಗತ್ತಿನ ವಿಸ್ಮಯಗಳಿಗೆ ಸಾಕ್ಷಿಯಾಗಿತ್ತು ಅಂದರೆ ಅದು ತಪ್ಪಲ್ಲ. ತೊದಲು ನುಡಿಗಳನ್ನೂ ಆಡಲು ಬಾರದ ಇತರ ದೇಶಗಳ ಜನರಿಗೆ ಮಾದರಿಯ ಜ್ಞಾನ ಬಂಡಾರವನ್ನು ಕೊಟ್ಟಾಗಿತ್ತು. ಹೌದು ಅದೊಂದು ಕಾಲ ಹೇಗಿತ್ತೆಂದರೆ ಇಂದು ನಾವು ಇಷ್ಟು ಪ್ರಗತಿಯ ಪಥದಲ್ಲಿದ್ದರೂ ಸಹ ಅಂದಿನ ಕಾಲದ ಹುಡುಕಾಟ ಬಿಡಿ ಅಂದಿನ ಕಾಲದ ಊಹೆಯೂ ಎಟುಕದು ಅಂತಹ ಭವ್ಯ ಭಾರತ ಇದಾಗಿತ್ತು. ನನಗೆ ಆಶ್ಚರ್ಯವಾಗುತ್ತದೆ. ಇಷ್ಟೆಲ್ಲಾ ದೊಡ್ದ ಜ್ಞಾನ ಬಂಡಾರವೇ ನಮ್ಮಲ್ಲಿತ್ತು, ಇಂದಿಗೂ ಇದೆ. ಆದರೆ ಅದರ ಸಮರ್ಪಕ ಪ್ರಯೋಜನ ನಾವು ಪಡೆದುಕೊಳ್ಳುತ್ತಿಲ್ಲವಲ್ಲಾ ಎನ್ನುವ ಕೊರಗು ಕಾಡುತ್ತದೆ.
ಭೂಮಿಯ ರಚನೆಯಿಂದ ಹಿಡಿದು ವೈದ್ಯಕೀಯ ವಿಜ್ಞಾನ, ಖಗೋಳ ವಿಜ್ಞಾನ, ಗಣಿತದ ವಿಸ್ಮಯಗಳನ್ನು ಅಂದಿನ ಜನ ತಿಳಿದಿದ್ದರು ಅಂದರೆ ನಾವೆಷ್ಟು ಧನ್ಯರು ಅನ್ನಿಸುತ್ತದೆ. ನಿನ್ನೆಯಷ್ಟೇ ನಾನು ಬರೆದೆ ಅದರಲ್ಲಿ ಸಂವತ್ಸರವನ್ನಾಧರಿಸಿ, ಸಂವತ್ಸರ ಚಕ್ರದ ಆಧಾರದಲ್ಲಿ ಮಳೆಯನ್ನು ನಿರ್ಧರಿಸುತ್ತಿದ್ದರು ಎಂದು ಬರೆದಿದ್ದೆ. ಜಗತ್ತಿನಾ ಉಳಿದಾವ ದೇಶಕ್ಕೋ ಪ್ರದೇಶಕ್ಕೋ ಹೋಗಿ ಇನ್ನು ಹತ್ತು ವರ್ಷ್ಜದ ನಂತರ ಕರಾರುವಾಕ್ಕಾಗಿ ಇಷ್ಟೇ ಮಳೆ ಬರುತ್ತದೆ. ಭೂಮಿಯ ಫಲವತ್ತತೆ ಕಡಿಮೆಯಾಗುತ್ತದೆ ಎಂದು ಹೇಳುತ್ತಾರಾ ನೋಡಿ. ಸಾಧ್ಯವಾಗದ ಮಾತದು ಆದರೆ ಭಾರತದಲ್ಲಿ ಋಗ್ವೇದದ ಒಂದನೇ ಮಂಡಲದ ೨೫ನೇ ಸೂಕ್ತದ ಹನ್ನೊಂದನೇ ಋಕ್ಕು

ಅತೋ ವಿಶ್ವಾನ್ಯದ್ಭುತಾ ಚಿಕಿತ್ವಾ ಅಭಿ ಪಶ್ಯತಿ | 
ಕೃತಾನಿ ಯಾ ಚ ಕರ್ತ್ವಾ || ಎನ್ನುವಲ್ಲಿ ನಮ್ಮನ್ನು ನಿಬ್ಬೆರಗಾಗಿಸುತ್ತದೆ. ಆ ಸೂಕ್ತದಲ್ಲಿ ಅಧಿಕಮಾಸದ ಕುರಿತಾಗಿ ಹೇಳಿರುವುದಂತೂ ವಿಜ್ಞಾನ ಲೋಕದ ವಿಸ್ಮಯ ಎನ್ನಬಹುದು. ಅಂದರೆ ಜಗತ್ತು ಇನ್ನೂ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸುವುದಕ್ಕೆ ಎಷ್ಟೋ ಸಾವಿರ ವರ್ಷಗಳಿಗೂ ಮೊದಲೇ ಹೀಗೇ ನಡೆಯುತ್ತದೆ ಮತ್ತು ಹೀಗೇ ನಡೆದಿದೆ ಎನ್ನುವುದನ್ನು ಪರಿಚಯಿಸಿದ್ದು ಭಾರತ.
ವೇದಕಾಲ ಎಂತ ನಾವು ಹೇಳುತ್ತೇವೆ ಆ ಕಾಲದಲ್ಲಿ ನಡೆದ ದಾಶರಾಜ್ಞದಿಂದ ಇಡೀ ಜಗತ್ತಿಗೆ ಭಾರತ ಅನಿವಾರ್ಯವಾಗುವಂತ್ಯೆ ಮಾಡಿತ್ತು. ನಾವಿಂದು ವಿದೇಶದ ವ್ಯಾಮೋಹದಲ್ಲಿ ಬಿದ್ದಿದ್ದೇವೆ. ಆದರೆ ದಾಶರಾಜ್ಞ ಒಂದು ನಡೆಯದಿದ್ದರೆ ಜಗತ್ತು ಇಂದು ಹೀಗಿರುತ್ತಲೇ ಇರಲಿಲ್ಲ. ಅದಕ್ಕೆ ಕಾರಣ ಬಹಳ ಇದೆ. ಒಂದು ಸಣ್ನ ಉದಾಹರಣೆಯನ್ನು ಹೇಳಬಹುದು ಜಗತ್ತಿನ ಉಳಿದೆಡೆ ವ್ಯಾಪಾರ ವಹಿವಾಟಿನಲ್ಲಿ ಎಡವಿತ್ತಿದ್ದಾಗ ಅಂದಿನ ಭಾರತೀಯ ಲಾಭ ಪಡೆದು ಹಿಂತಿರುಗುತ್ತಿದ್ದ, ಹೌದು. ಜಗತ್ತಿಗೆ ಭಾರತ ಗಣಿತಕೊಟ್ಟಿದೆ. ಜಗತ್ತಿನ ಉಳಿದ ಯಾವ ಪ್ರದೇಶದಲ್ಲಿಯೂ ಗಣಿತದಿಂದ ಉಪಯೋಗ ಪಡೆಯುತ್ತಿರಲಿಲ್ಲ. ಯಾಕೆಂದರೆ ಜಗತ್ತಿನ ಇತರೆಡೆ ಭಾಗಾಕಾರ ಎನ್ನುವ ಲೆಕ್ಕವೇ ಇರಲಿಲ್ಲ. ಭಾರತೀಯ ಸುಲಭವಾಗಿ ಭಾಗಾಕಾರದ ಲೆಕ್ಕದಿಂದ ವ್ಯವಹಾರದಲ್ಲಿ ಲಾಭ ಪಡೆಯುತ್ತಿದ್ದ. ವೇದದಲ್ಲಿನ ಗಣಿತವಂತೂ ಅವರಿಗೆ ಕೈಗೆಟುಕದಾಗಿತ್ತು. ೩೬೦ನ್ನು ೧೨ ರಿಂದ ಭಾಗಿಸುವ ಪದ್ಧತಿಯೇ ಗೊತ್ತಿರಲಿಲ್ಲ. ಅಷ್ಟೇಕೆ ಈಜಿಪ್ಟಿನ ಪಿರಮಿಡ್ಡುಗಳಿಗೆ ಇಂತಹ ಗಣಿತದ ಅವಶ್ಯಕತೆ ಇತ್ತು. ಅದು ಭಾರತದ ಎರವಲೂ ಇರಬಹುದು. ಇನ್ನೊಂದು ಮುಖ್ಯ ವಿಷಯ ಎಂದರೆ ಸುಮಾರು ೭ -೮ನೇ ಶತಮಾನದ ತನಕವೂ ಇಜಿಪ್ಟ್, ರೋಮ್, ಮತ್ತು ಪರ್ಷಿಯಾದಂತಹ ದೇಶಗಳಲ್ಲಿ ಯಾವ ರೀತಿಯ ಲೆಕ್ಕ ಇದ್ದಿತ್ತೋ ಅದು ಗಣಿತದಿಂದ ಮಾಡಲು ಸಾಧ್ಯವಿರಲಿಲ್ಲ. ಆದರೆ ಬರೀ ಭಾಗಾಕಾರ ಗೊತ್ತಿದ್ದ ಭಾರತೀಯ ಸುಲಭವಾಗಿ ವ್ಯವಹರಿಸುತ್ತಿದ್ದ. ಭಾರತದ ಹೊರತಾದ ಇತರೆಡೆ ಹಣದ ವ್ಯವಹಾರ್ತದಲ್ಲಿ ಹಂಚಿಕೆಯೂ ಕಷ್ಟವಾಗಿತ್ತು ಅಂತಹ ಕಾಲದಲ್ಲಿ ಅದನ್ನು ಸುಲಭವಾಗುವಂತೆ ಹೇಳಿಕೊಟ್ಟದ್ದು ಭಾರತ. ಜಗತ್ತಿನಲ್ಲಿ ಭಾಗಾಕಾರದಿಂದ ವ್ಯವಹರಿಸಿ ಲಾಭವನ್ನು ಪಡೆದು ಹಿಂತಿರುಗುತ್ತಿದ್ದುದನ್ನು ತಾವೂ ಕಲಿತ ಮೇಲೆಯೇ ಭಾರತದ ಮೇಲೆ ವಿದೇಶೀಯರ ಆಕ್ರಮಣ ಆಗಿದ್ದು, ಅಂದರೆ ಭಾರತೀಯರಿಗೆ ಲಾಭದ ಕುರಿತಾಗಿ ಗೊತ್ತಿತ್ತು. ಇಲ್ಲಿ ಸಂಪತ್ತು ವೃದ್ಧಿಸುವುದು ಗೊತ್ತಿತ್ತು ಎನ್ನುವ ಕಾರಣಕ್ಕೆ ವಿದೇಶೀ ಆಕ್ರಮಣ ಆಯ್ತು. ಪೊಳ್ಳು ಬ್ರಿಟೀಷರ ಇತಿಹಾಸದ ಸೃಷ್ಟಿಯಂತಲ್ಲ. ನಕ್ಷತ್ರವನ್ನು ಕುರಿತು ಹೇಳಬೇಕೆನ್ನಿಸುತ್ತಿದೆ.

ನಕ್ಷತ್ ಎನ್ನುವುದು ವ್ಯಾಪಿಸು ಅಥವಾ ವಾಸಿಸು, ವಾಸಿಸುವ ಮನೆ ಅಥವಾ ಗೃಹ ಎನ್ನುವ ಅರ್ಥವನ್ನು ಕೊಡುತ್ತದೆ.
ಆ ಪತ್ಯೇ ತಾಯವೋ ಯಥಾ ನಕ್ಷತ್ರಾ ಯನ್ತ್ಯಕ್ತುಭಿಃ |
ಸೂರಾಯ ವಿಶ್ವ ಚಕ್ಷಸೇ || ಋಗ್ವೇದದ ಒಂದನೇ ಮಂಡಲದ ಐವತ್ತನೇ ಸೂಕ್ತದ ಎರಡನೇ ಋಕ್ಕು
ಸಾಮಾನ್ಯವಾಗಿ ರಾತ್ರಿ ಕಾಲದಲ್ಲಿ ಕಳ್ಳರು ಮತ್ತು ಬೇರೆ ಬೇರೆ ಅನೈತಿಕ ವ್ಯವಹಾರದಲ್ಲಿ ತೊಡಗಿರುವ ಜನ ಜಾಗ್ರತರಾಗಿರುತ್ತಾರೆ. ಆದರೆ ಸೂರ್ಯೋದಯವಾಗುವುದನ್ನು ತಿಳಿಯುತ್ತಿದ್ದಂತೆ ಮರೆಯಾಗಿ ಓಡಿ ಹೋಗುತ್ತಾರೆ. ಅದೇ ರೀತಿ ದೇವತೆಗಳಿಗೆಲ್ಲಾ ಮನೆಯಂತಿರುವ ಈ ನಕ್ಷತ್ರಗಳು ಅಥವಾ ಸುಕೃತವನ್ನುಮಾಡಿದ ತೇಜೋಪುಂಜಗಳು ರಾತ್ರಿಕಾಲದಲ್ಲಿ ಮಿಂಚುತ್ತಿದ್ದು, ಸೂರ್ಯನ ಆಗಮನವಾದೊಡನೆ ಮರೆಯಾಗುತ್ತವೆ ಎನ್ನುವುದು ಈ ಋಕ್ಕಿನ ಭಾವಾರ್ಥ. ಹೌದು ರಾತ್ರಿಯಾದೊಡನೆ ಆಕಾಶದ ಸೊಬಗನ್ನು ಇಮ್ಮಡಿಗೊಳಿಸುವುದು ನಕ್ಷತ್ರಗಳು. ಈ ನಕ್ಷತ್ರಗಳನ್ನು ಯಜುರ್ವೇದದಲ್ಲಿಯಂತೂ ಈ ಲೋಕದಲ್ಲಿ ಲೋಕೋದ್ಧರಕ್ಕಾಗಿ ನೆರವೇರಿಸುವ ಯಜ್ಞ ಯಾಗಾದಿಗಳಿಂದ ತಮ್ಮ ಪುಣ್ಯಗಳನ್ನು ಇಮ್ಮಡಿಗೊಳಿಸಿಕೊಂಡು ಸೇರುವ ಲೋಕದಲ್ಲಿ ಪ್ರಕಾಶಮಾನರಾಗಿ ಗೋಚರಿಸುವವರೆ ನಕ್ಷತ್ರಗಳು ಎಂದು ಬಣ್ಣಿಸಿದ್ದು ಸಿಗುತ್ತದೆ. "ಸುಕೃತಾಂ ವಾ ಏತಾನಿ ಜ್ಯೋತೀಂಷಿ ಯನ್ನಕ್ಷತ್ರಾಣಿ ಎಂದು ತೈತ್ತಿರೀಯ ಸಂಹಿತೆಯ ೫:೪:೧:೩ ರಲ್ಲಿ ಹೇಳಿದೆ. ದೇವ ಗೃಹಾ ವೈ ನಕ್ಷತ್ರಾಣಿ ಎಂದು ತೈತ್ತಿರೀಯ ಬ್ರಾಹ್ಮಣದ ೧:೫:೨:೬ರಲ್ಲಿ ಹೇಳಿದೆ. ಅಂದರೆ ನಕ್ಷತ್ರಗಳು ಎಂದರೆ ದೇವತೆಗಳು ವಾಸಿಸುವ ಮನೆ ಅಥವಾ ದೇವತೆಗಳ ಮನೆ ಎಂದಿದೆ. ನಕ್ಷತಿ ಎನ್ನುವ ಪದಕ್ಕೆ ಸಂಚರಿಸು ಅಥವ ಚಲಿಸು ಎನ್ನುವ ಅರ್ಥ ಇದ್ದು ಗತಿ ಎನ್ನುವ ಅರ್ಥ ಹೊಂದಿರುವ ಧಾತುವಿನಿಂದ ಬಂದಿರುವ ಪದ. ಕ್ಷತ್ರ ಎಂದರೆ ಹಿರಣ್ಯದಂತೆ ಪ್ರಕಾಶಮಾನವಾದುದು ಎಂದು ಅರ್ಥ. ಈ ಲೋಕದಲ್ಲಿ ಸತ್ಕರ್ಮಗಳಲ್ಲಿ ನಿರತರಾದವರು ಸ್ವರ್ಗಲೋಕದಲ್ಲಿ ಬೆಳಗುತ್ತಿರುವರು ಎನ್ನುವುದು ಅರ್ಥವಾಗಿರುತ್ತದೆ.

ಸೂರ್ಯಾಯ ವಹತುಃ ಪ್ರಾಗಾತ್ಸವಿತಾ ಯಮವಾಸೃಜತ್ |
ಅಘಾಸು ಹನ್ಯಂತೇ ಗಾವೋರ್ಜುನ್ಯೋಃ ಪರ್ಯುಹ್ಯತೇ || ಋಗ್ವೇದ ೧೦. ೮೫. ೧೩
ಸೂರ್ಯನ ಮಗಳು ತನ್ನ ಪತಿಯ ಗೃಹಕ್ಕೆ ಹೋಗುವಾಗ ಗೋವುಗಳೇ ಮೊದಲಾದ ಸಂಪತ್ತುಗಳನ್ನು ಜೊತೆಗೆ ಕಳುಹಿಸುತ್ತಾನೆ. ಆ ಬಳುವಳಿಗಳ ಮೆರವಣಿಗೆಯು ಸೂರ್ಯಾದೇವಿಗಿಂತಲೂ ಮೊದಲೇ ಬಂದಿತು. ಸೂರ್ಯನಿಂದ ಕಳುಹಿಸಲ್ಪಟ್ಟ ಗೋವುಗಳು ಮಘಾ ನಕ್ಷತ್ರಗಳ ಗುಂಪಿನಲ್ಲಿ ಮುಂದೆ ಹೋಗಲ್ಪಡುತ್ತದೆ. ಸೂರ್ಯನ ಮಗಳು ಫಲ್ಗುಣೀ ನಕ್ಷತ್ರಗಳ ಗುಂಪಿನಲ್ಲಿ ಒಯ್ಯಲ್ಪಡುತ್ತಾಳೆ ಎನ್ನುವಲ್ಲಿ ನಕ್ಷತ್ರಗಳ ಹೆಸರು ಕಾಣಿಸಿಕೊಂಡಿತು ಇನ್ನು ಯಜುರ್ವೇದದಲ್ಲಿ ಸ್ಪಷ್ಟವಾಗಿ ೨೭ ನಕ್ಷತ್ರಗಳಿವೆ ಎಂದು ೪:೪:೧೦:೧, ೨, ೩ ರಲ್ಲಿ ಹೇಳಲ್ಪಟ್ಟಿವೆ. ಕೃತ್ತಿಕಾನಕ್ಷತ್ರಮಗ್ನಿರ್ದೇವತಾಗ್ನೇರುಚಃ ಎಂದು ಆರಂಭವಾಗಿ ಭರಣೀ ನಕ್ಷತ್ರಂ ಯಮೋ ದೇವತಾ ಎನ್ನುವಲ್ಲಿಗೆ ಕೊನೆಯಾಗುತ್ತದೆ ಇಲ್ಲಿ ೨೭ ನಕ್ಷತ್ರಗಳನ್ನೇ ಹೇಳಿದೆ. ಹೀಗೇ ನಾವು ಜಗತ್ತು ಕಣ್ಣು ಬಿಡುವ ಪೂರ್ವದಲ್ಲಿ ಅಥವಾ ಜಗತ್ತಿನ ಇತರ ದೇಶಗಳ ಜನ ಇನ್ನೂ ಅಂಬೆಗಾಲಿಡುವಾಗ ನಾವು ಅತ್ಯಂತ ಉಚ್ಚ್ರಾಯ ಸ್ಥಿತಿಯಲ್ಲಿ ಇತ್ತು ಎನ್ನುವುದಂತೂ ಸ್ಪಷ್ಟವಾಗುತ್ತದೆ.

#ಇದು_ಭವ್ಯ_ಭಾರತ 
ಸದ್ಯೋಜಾತರು

ಐಕ್ಯಮಂತ್ರ

|| ಐಕ್ಯಮಂತ್ರಃ ||

ಯಂ ವೈದಿಕಾ ಮಂತ್ರದೃಶಃ ಪುರಾಣಾಃ ಇಂದ್ರಂ ಯಮಂ ಮಾತರಿಶ್ವಾನಮಾಹುಃ | ವೇದಾಂತಿನೋsನಿರ್ವಚನೀಯಮೇಕಂ ಯಂಬ್ರಹ್ಮಶಬ್ಧೇನ ವಿನಿರ್ದಿಶಂತಿ ||೧||

ಶೈವಾ ಯಮೀಶಂ ಶಿವ ಇತ್ಯವೋಚನ್ ಯಂ ವೈಷ್ಣವಾ ವಿಷ್ಣುರಿತಿ ಸ್ತುವಂತಿ | ಬುದ್ಧ ಸ್ತಥಾರ್ಹನ್ನಿತಿ ಬೌದ್ಧಜೈನಾಃ ಸತ್‌ಶ್ರೀ ಅಕಾಲೇತಿ ಚ ಸಿಕ್ಖಸಂತಃ ||೨||

ಶಾಸ್ತೇತಿ ಕೇಚಿತ್ ಕತಿಚಿತ್ ಕುಮಾರಃ ಸ್ವಾಮೀತಿ ಮಾತೇತಿ ಪಿತೇತಿ ಭಕ್ತ್ಯಾ | ಯಂ ಪ್ರಾರ್ಥಯಂತೇ ಜಗದೀಶಿತಾರಂ ಸ ಏಕ ಏವ ಪ್ರಭುರದ್ವಿತೀಯಃ ||೩||

ಯಾವ ದೇವನನ್ನು ಪ್ರಾಚೀನ ಮಂತ್ರದ್ರಷ್ಟಾರರಾದ ವೈದಿಕರು, ಇಂದ್ರ-ಯಮ-ವಾಯು ಎಂದು ಹೇಳುವರೋ, ವೇದಾಂತಿಗಳು ಯಾರನ್ನು ಮಾತಿಗೆ ಸಿಲುಕದ ಬ್ರಹ್ಮ ಎಂದು ಕರೆಯುವರೋ ||೧||

ಯಾವ ದೇವನನ್ನು ವೀರಶೈವರು ಶಿವ ಎಂದೂ, ವೈಷ್ಣವರು ವಿಷ್ಣು ಎಂದೂ, ಬೌದ್ಧರು ಬುದ್ಧ ಎಂದೂ, ಜೈನರು ಅರ್ಹನೆ ಎಂದೂ, ಸಿಕ್ಖಸಂತರೂ ಸತ್ ಶ್ರೀ ಅಕಾಲ ಎಂದೂ ಸ್ತುತಿಸುವರೋ... ||೨||

ಶಾಸ್ತ (ಅಯ್ಯಪ್ಪ) ಎಂದು ಕೆಲವರು, ಕುಮಾರ (ಸುಬ್ರಹ್ಮಣ್ಯ) ಎಂದು, ಇನ್ನು ಕೆಲವರು ಭಕ್ತಿಯಿಂದ ಸ್ವಾಮಿ, ತಾಯಿ, ತಂದೆ ಎಂದು ಮತ್ತೆ ಕೆಲವರು ಯಾವ ಜಗದೊಡೆಯನನ್ನು ಪ್ರಾರ್ಥಿಸುವರೋ ಆ ಅದ್ವಿತೀಯನಾದ ಪ್ರಭುವು ಒಬ್ಬನೇ. ||೩||

ವೈದಿಕ ರಾಷ್ಟ್ರಗೀತೆ

ಏತದ್ದೇಶ ಪ್ರಸೂತಸ್ಯ ಸಕಾಶಾದಗ್ರಜನ್ಮನಃ

ಜಗತ್ತಿನ ಯಾವ ದೇಶವೂ ಸಹ ತನ್ನ ನೆಲವನ್ನು ತಾಯಿ ಎಂದು ಒಪ್ಪಿಕೊಂಡಿರದ ಕಾಲದಲ್ಲಿ ಇಡೀ ಭೂ ಮಂಡಲವನ್ನೇ ತನ್ನ ತಾಯಿ ಮತ್ತು ಆ ತಾಯಿಯ ಮಕ್ಕಳು ನಾವು ಎಂದು ಪರ್ಜನ್ಯನು ಹೇಳುವುದು ನಮ್ಮ ಅಥರ್ವ ವೇದದ ಭೂಮಿಸೂಕ್ತದಲ್ಲಿ ಸಿಗುತ್ತದೆ. ಅಲ್ಲಿ ತಾಸು ನೋ ದೇಹ್ಯಭಿ ನಃ ಪವಸ್ವ ಮಾತಾ ಭೂಮಿಃ ಪುತ್ರೋsಹಂ ಪೃಥಿವ್ಯಾಃ | ಅಥರ್ವ ವೇದ ೧೦ : ೧ : ೧೨  ಅಂದರೆ, ಭೂಮಿ ಎನ್ನುವುದು ತಾಯಿಯಾಗಿದ್ದರೆ, ಪರ್ಜನ್ಯನು ತಂದೆ ಎಂದು ಸ್ಪಷ್ಟವಾಗಿ ಹೇಳಿದ್ದು ಪರ್ಜನ್ಯ ಅವರಿಬ್ಬರ ಮಕ್ಕಳು ಮಳೆ ಮತ್ತು ಮಳೆಯನ್ನಾಶ್ರಯಿಸಿದ ಜೀವಿಗಳು ಎಂದು ಹೇಳಲಾಗಿದೆ. ಇಂತಹ ನುಡಿಗಟ್ಟುಗಳು ಮತ್ತು ಆ ರೀತಿಯ ಭಾವನೆಗಳು ಈ ನೆಲದ ಸಂಸ್ಕಾರದಿಂದ ಬರತಕ್ಕವು. ಇದನ್ನೇ ಮನು ಸ್ಮೃತಿಯಲ್ಲಿ 

ಏತದ್ದೇಶ ಪ್ರಸೂತಸ್ಯ ಸಕಾಶಾದಗ್ರಜನ್ಮನಃ |
ಸ್ವಂ ಸ್ವಂ ಚರಿತ್ರಂ ಶಿಕ್ಷೇರನ್ ಪೃಥಿವ್ಯಾಂ ಸರ್ವಮಾನವಾಃ || ಮನು : ೨ : ೨೦ ತಾವು ಮಾಡಿರತಕ್ಕ ಪೂರ್ವ ಜನ್ಮದ ಪುಣ್ಯದ ಫಲದಿಂದ ಈ ಜನ್ಮದಲ್ಲಿ ಮನುಷ್ಯರಾಗಿ ಈ ಪುಣ್ಯ ಭೂಮಿಯಲ್ಲಿ ಹುಟ್ಟುತ್ತಾರೆ ಎಂದಿರುವುದು ಈ ಭೂಮಿಯ ಮಹತ್ವ ತಿಳಿಸುತ್ತದೆ.
ಇನ್ನು ಯಜುರ್ವೇದ ನಮಗೆ ಮೊದಲು ರಾಷ್ಟ್ರಗೀತೆಯನ್ನು ಕೊಟ್ಟ ಹೆಗ್ಗಳಿಕೆಗೆ ಪಾತ್ರವಾಗಿದೆ.

ಆ ಬ್ರಹ್ಮನ್ ಬ್ರಾಹ್ಮಣೋ ಬ್ರಹ್ಮವರ್ಚಸೀ ಜಾಯತಾಮಾ ರಾಷ್ಟ್ರೇ ರಾಜನ್ಯಃ ಶೂರ
ಇಷವ್ಯೋsತಿವ್ಯಾಧೀ ಮಹಾರಥೋ ಜಾಯತಾಂ ದೋಗ್ಧ್ರೀ ಧೇನುರ್ವೋಧಾನಡ್ವಾನಾಶುಃ
ಸಪ್ತಿಃ ಪುರಂಧಿರ್ಯೋಷಾ ಜಿಷ್ಣೂ ರಥೇಷ್ಠಾಃ ಸಭೇಯೋ ಯುವಾಸ್ಯ ಯಜಮಾನಸ್ಯ
ವೀರೋ ಜಾಯತಾಂ ನಿಕಾಮೇ ನಿಕಾಮೇ ನಃ ಪರ್ಜನ್ಯೋ ವರ್ಷತು ಫಲವತ್ಯೋ ನ
ಓಷಧಯಃ ಪಚ್ಯಂತಾಂ ಯೋಗಕ್ಷೇಮೋ ನಃ ಕಲ್ಪತಾಮ್ || 
ಯಜುರ್ವೇದದ ಈ ಮಂತ್ರ ಅದೆಷ್ಟು ಅರ್ಥವತ್ತಾಗಿ ನಮ್ಮ ಜನ ಮತ್ತು ನಮ್ಮ ನೆಲವನ್ನು ಹೊಗಳಿ ಸಮೃದ್ಧವಾಗಿರಲಿ ಎಂದು ಹೇಳುತ್ತದೆ.
ಓ ಪರಮಾತ್ಮನೇ(ದೇವನೇ) ನಮ್ಮ ಈ ರಾಷ್ಟ್ರದಲ್ಲಿ ಬ್ರಹ್ಮತೇಜಸ್ಸಿನಿಂದ ಕೂಡಿದ ಬ್ರಾಹ್ಮಣನು(ಬ್ರಾಹ್ಮಣ ಎನ್ನುವುದು ಇಲ್ಲಿ ಜಾತಿವಾಚಕವಲ್ಲ, ಕರ್ಮ ಮತ್ತು ಆಚಾರದ ದೃಷ್ಟಿಯಿಂದ) ಕಾಲ ಕಾಲಕ್ಕೂ ಹುಟ್ಟಿ ಬರುತ್ತಿರಲಿ. ಕ್ಷತ್ರಿಯನಾದವನು ತನ್ನ ಕ್ಷಾತ್ರ ತೇಜಸ್ಸಿನಿಂದ ಕೂಡಿದವನಾಗಿ ಮತ್ತು ಶೂರನೂ ಶಸ್ತ್ರಾಸ್ತ್ರ ಪ್ರಯೋಗಗಳಲ್ಲಿ ನಿಪುಣನೂ, ರೋಗರುಜಿನಗಳಿಲ್ಲದವನಾಗಿಯೂ, ಮಹಾರಥಿಯಾಗಿ ಜನ್ಮವೆತ್ತಿ ಬರುತ್ತಿರಲಿ. ಗೋವುಗಳು ಯಥೇಷ್ಟವಾಗಿ ಹಾಲು ಕೊಡುತ್ತಿರಲಿ. ಎತ್ತುಗಳು ಹೊರೆ ಹೊರಲು ಸಮರ್ಥವಾಗಿರಲಿ. ಕುದುರೆಗಳು ವೇಗವಾಗಿ ಓಡುವಂತಾಗಲಿ. ನಾರಿಯು ತನ್ನ ಉತ್ತರದಾಯಿತ್ವವನ್ನು ಸಮರ್ಥವಾಗಿ ನಿರ್ವಹಿಸುವವಳಾಗಿರಲಿ. ಈ ಶುಭಕರ್ಮಕರ್ತನ ಪುತ್ರನು ಜಯಶಾಲಿಯೂ, ಉತ್ತಮ ರಥಿಕನೂ, ಸಭೆಯಲ್ಲಿ ಕುಳಿತುಕೊಳ್ಳಲು(ಸಭೆಯಲ್ಲಿ ಆಸೀನರಾಗಲು) ಅರ್ಹನೂ, ಉತ್ಸಾಹಶಾಲಿಯೂ ಆಗಿರಲಿ. ನಮಗಾಗಿ ಓಷಧಿಯು(ಈ ಗಿಡ ಮರ ಬಳ್ಳಿಗಳು), ಫಲಭರಿತವಾಗಿ ಪಕ್ವವಾಗಲಿ. ನಮಗೆ ಯೋಗಕ್ಷೇಮವು ಸದಾ ಸಿದ್ಧಿಸಲಿ. ಎನ್ನುವುದು ಎಂತಹ ಉದಾತ್ತತೆಯನ್ನು ಪ್ರತಿಬಿಂಬಿಸುತ್ತದೆ. ಇದು ಈ ನೆಲದ ಮೊದಲ ವೈದಿಕ ರಾಷ್ಟ್ರಗೀತೆ. ಇಲ್ಲಿ ಸ್ವಂತದ್ದನ್ನು ಯಾವುದನ್ನೂ ಆಶಿಸದೇ ಬೇರೆಯವರಿಗಾಗಿ ಮತ್ತು ಈ ನೆಲಕ್ಕಾಗಿ ಎಲ್ಲವನ್ನೂ ಈ ಯಜುರ್ವೇದದ ಸೂಕ್ತಕಾರರು ಕೇಳಿಕೊಳ್ಳುತ್ತಾರೆ.
ಈ ನೆಲದ ರಾಜಕೀಯ ಮತ್ತು ಧಾರ್ಮಿಕ ಸಹಿಷ್ಣುತೆ ಪ್ರಪಂಚದ ಇತರ ದೇಶಗಳಿಗೆ ಮಾದರಿಯಾಗಿತ್ತು ಎನ್ನುವುದು 
ಭಾರತ ಎನ್ನುವ ಮೂರಕ್ಷದಲ್ಲಿ ಅಡಗಿತ್ತು ಅದನ್ನೊಮ್ಮೆ ಗಮನಿಸೋಣ. 
ರಾಮಾಯಣದಲ್ಲಿ ದಶರಥನಿಗೆ ಕೈಕೇಯಿಯಲ್ಲಿ ಜನಿಸಿದವ ಭರತ. ಇಡಿ ರಾಮಾಯಣದ ಕೇಂದ್ರ ಬಿಂದು ಈತ. ಮಂಥರೆಯ ಮಾತನ್ನು ಕೇಳದೇ ಹೋಗಿದ್ದರೆ ರಾಮಾಯಣದ ಕಥೆ ಮುಂದುವರಿಯುತ್ತಿರಲಿಲ್ಲವೇನೋ. ಅದೇನೇ ಇರಲಿ. ಭರತ ಎನ್ನುವ ಹೆಸರು ರಾಮಾಯಣದಲ್ಲಿ ಸಿಗುವುದು ಇಲ್ಲಿಯೇ.

ಮಹಾಭಾರತದಲ್ಲಿ ಪುರುವಂಶದ ದುಷ್ಯಂತ ಮತ್ತು ಶಕುಂತಲೆಗೆ ಮಗನಾಗಿ ಜನಿಸುವವನೇ ಭರತ ಎನ್ನುವ ಉಲ್ಲೇಖ ಆದಿಪರ್ವ, ವಿರಾಟಪರ್ವ ಮತ್ತು ದ್ರೋಣ ಪರ್ವದಲ್ಲಿ ಸಿಗುತ್ತದೆ.
ದುಷ್ಯಂತನು ತನ್ನ ಪತ್ನಿಯಾದ ಶಕುಂತಲೆಯಲ್ಲಿ ಭರತನೆಂಬ ಪುತ್ರನನ್ನು ಪಡೆಯುತ್ತಾನೆ. ಈ ಭರತನು ಮಹಾವಿದ್ವಾಂಸನಾಗಿದ್ದ. ಪುರುವಿನ ವಂಶವು ಮುಂದೆ ಶಾಕುಂತಲನ ಶಕ್ತಿ-ಪರಾಕ್ರಮಗಳಿಂದಾಗಿ ಭರತವಂಶವೆಂಬ ಹೆಸರನ್ನು ಗಳಿಸಿ ಬಹಳ ಪ್ರಖ್ಯಾತವಾಗುತ್ತದೆ. ಭಾರತದ ರಾಜಕೀಯ ಚಿತ್ರಣ ಇಲ್ಲಿಂದ ಆರಂಭವಾಗುತ್ತದೆ. ಭರತನು ತನ್ನ ಮೂವರು ಹೆಂಡಿರಲ್ಲಿ ಒಂಬತ್ತು ಮಂದಿ ಮಕ್ಕಳನ್ನು ಪಡೆಯುತ್ತಾನೆ. ಆದರೆ ಅವರಲ್ಲಿ ಆತನಿಗೆ ತನ್ನ ನಂತರ ರಾಜ್ಯವನ್ನು ಆಳಲು ಸಮರ್ಥರಾದ ಮಕ್ಕಳು ಕಾಣಿಸುವುದಿಲ್ಲ. ಅವರಾರೂ ತನ್ನ ನಂತರ ಪಟ್ಟಕ್ಕೆ ಬರಲು ಸಮರ್ಥರಲ್ಲ ಎಂದು ಭಾವಿಸಿ ಭರತನು ಆ ಒಂಬತ್ತು ಮಂದಿ ಮಕ್ಕಳನ್ನೂ ತಿರಸ್ಕರಿಸುತ್ತಾನೆ. ಅದರಿಂದ ಕುಪಿತರಾದ ಭರತನ ಹೆಂಡತಿಯರು ತಮ್ಮ ಮಕ್ಕಳನ್ನೇ ಸಂಹರಿಸುತ್ತಾರೆ. ಅದರಿಂದಾಗಿ ಭರತನು ಸಂತಾನ ಹೀನನಾಗುತ್ತಾನೆ. ಪುತ್ರಪ್ರಾಪ್ತಿಗಾಗಿ ಅನೇಕಾನೇಕ ಯಜ್ಞ ಯಾಗಾದಿಗಳನ್ನು ಮಾಡಿ ಭರದ್ವಾಜರ ಅನುಗ್ರಹದಿಂದ ಭುಮನ್ಯುವೆಂಬ ಪುತ್ರನನ್ನು ಪಡೆಯುತ್ತಾನೆ. ಸತ್ಪುತ್ರವಂತನಾದೆನೆಂದು ಸಂತುಷ್ಟನಾದ ಭರತನು ಭುಮನ್ಯುವನ್ನು ಯುವರಾಜನನ್ನಾಗಿ ಮಾಡುತ್ತಾನೆ. ಇದೇ ಭರತ ಎನ್ನುವವನೇ ಮುಂದೆ ಭಾರತ ಎನ್ನುವ ಹೆಸರಿಗೂ ಮೂಲನಾಗುತ್ತಾನೆ ಎನ್ನುವ ಮಾತೂ ಇದೆ.

ಹಿಂದೆ ಋಷಭದೇವ ಎನ್ನುವವನೊಬ್ಬನಿದ್ದ ಆತನಿಗೆ ಜಯಂತಿ ಎನ್ನುವ ಮಡದಿ ಇದ್ದಳು. ಸಚ್ಚಾರಿತ್ರವಂತರು, ಅಪ್ರತಿಮ ದೇಶಭಕ್ತರೂ ಪ್ರಜಾಪಾಲಕರಾಗಿದ್ದ ಅವರಿಗೆ ಜನಿಸಿದ ಮಗನೇ ಭರತ. ಈತ ಪಾಲಿಸಿದ ಭೂಭಾಗವನ್ನು ಭರತಖಂಡ ಎಂದು ಕರೆಯಲಾಯಿತು ಎನ್ನುವುದು ಭಾಗವತ ಮತ್ತು ವಿಷ್ಣುಪುರಾಣದಲ್ಲಿನ ಉಲ್ಲೇಖ. ಭರತಖಂಡ ಮಾತ್ರವಲ್ಲದೇ ಅಜನಾಭವರ್ಷ ಎನ್ನುವುದಾಗಿಯೂ ಕರೆಯಲಾಗಿದೆ.
ಅಯಂತು ತೇ ನವಮಸ್ತೇಷಾಂ ದ್ವೀಪಸ್ಸಾಗರ ಸಂವೃತಃ |
ಯೋಜನಾನಾಂ ಸಹಸ್ರಂತು ದ್ವೀಪೋಯಂ ದಕ್ಷಿಣೋತ್ತರಃ ||
ಆಯತಸ್ತು ಕುಮಾರೀತಃ ಗಂಗಾಯಾಃ ಪ್ರವಹಾವಧಿಃ |
ತಿರ್ಯಗೂರ್ಧ್ವಂತು ವಿಸ್ತೀರ್ಣಃ ಸಹಸ್ರಾಣಿ ದಶೈವತು |
ದ್ವಿಪೋಹ್ಯುಪನಿವಿಷ್ಟೋಯಂ ಮ್ಲೇಚ್ಛೈರಂತೇತು ಸರ್ವತಃ ||
ಇದು ಮತ್ಸ್ಯಪುರಾಣದ ಮಾತು. ಕನ್ಯಾಕುಮಾರಿಯಿಂದ ಹಿಮಾಲಯದ ತನಕ ವ್ಯಾಪಿಸಿರುವ ಈ ದೇಶ ಪೂರ್ವ ಪಶ್ಚಿಮದ ಸಮುದ್ರಗಳ ನಡುವೆ ಇದೆ. ಕ್ರಮೇಣ ಇದು ಮೇಚ್ಚರ ಆಕ್ರಮಣಕ್ಕೆ ಗುರಿಯಾಗುತ್ತದೆ ಎಂದು ಇದರಲ್ಲಿ ಹೇಳಲಾಗಿದೆ.

ಪ್ರಿಯವ್ರತ ರಾಜನ ಮಗನಾದ ಅಗ್ನೀಧ್ರ ಎನ್ನುವವನಿಗೆ ಮಗನಾಗಿ ಜನಿಸುವವನು ಅಜನಾಭ ಎನ್ನುವವನು. ಈತನು ಪಾಲಿಸುವ ಜಂಬೂದ್ವೀಪದ ಒಂದು ಪ್ರದೇಶವನ್ನು ಅಜನಾಭವರ್ಷ ಎಂದು ಕರೆಯಲಾಗಿದೆ. ಆದರೆ ಇವೆಲ್ಲಕ್ಕೂ ಮಿಗಿಲಾದ ಮತ್ತು ನನ್ನ ಮನಸ್ಸನ್ನು ಹಿಡಿದಿರುವುದು ಭಾರತದ ಪ್ರಾಚೀನತೆ.

ಭಾರತೀಳೇ ಸರಸ್ವತಿ ಯಾ ವಃ ಸರ್ವಾ ಉಪಬ್ರುವೇ |
ತಾ ನ ಶ್ಚೋದಯತ ಶ್ರಿಯೇ || ಇದು ಋಗ್ವೇದದ ಒಂದನೇ ಮಂಡಲದಲ್ಲಿ ಬರುವ ಋಕ್ಕು. "ಹೇ ಭಾರತೀ, ಇಳಾ, ಸರಸ್ವತೀ ಎಂಬ ಮೂರು ಲೋಕಗಳ ಅಧಿದೇವತೆಗಳೇ, ನಿಮ್ಮೆಲ್ಲರನ್ನೂ ಸಮೀಪಿಸಿ ಸ್ತುತಿಸುತ್ತೇನೆ. ನೀವೆಲ್ಲರೂ ಸಂಪತ್ತನ್ನು ಪಡೆಯುವುದಕ್ಕಾಗಿ ನಮ್ಮನ್ನು ಪ್ರೇರೇಪಿಸಿ. ಎನ್ನುವ ಅರ್ಥವನ್ನು ಇದು ಧ್ವನಿಸುತ್ತದೆ. ಇಲ್ಲಿ ಈ ಮೂರೂ ದೇವತೆಗಳನ್ನು ಯಜ್ಞಕ್ಕೆ ಪ್ರಾರ್ಥಿಸಲಾಗಿದೆ.
ಋಗ್ವೇದದ ಒಂದನೇ ಮಂಡಲದಲಿ ಭಾರತೀ. ಇಳಾ ಮತ್ತು ಸರಸ್ವತಿಯರನ್ನು ತಿಸ್ರೋ ದೇವೀ ಎನ್ನುವುದಾಗಿಯೇ ಕರೆಯಲಾಗಿದೆ. ಇದರಲ್ಲಿ ಭಾರತಿಗೆ ಹೋತ್ರಾ ಮತ್ತು ಶುಚಿಃ ಮತ್ತು ಅರ್ಪಿತಾ ಎನ್ನುವುದಾಗಿ ಹೇಳಲಾಗಿದೆ. ಈ ತಿಸ್ರೋ ದೇವತೆಗಳು ಅಗ್ನಿಯನ್ನು ಪ್ರತಿಬಿಂಬಿಸುತ್ತವೆ.

ನಿರುಕ್ತದಲ್ಲಿ "ಏತು ನೋ ಯಜ್ಞಂ ಭಾರತೀ ಕ್ಷಿಪ್ರಂ | ಭರತ ಆದಿತ್ಯಸ್ತಸ್ಯ ಭಾ ಇಳಾಚ ಎನ್ನಲಾಗಿದೆ. ಭ ಎಂದರೆ ಸೂರ್ಯನನ್ನು ನಿರ್ದೇಶಿಸಲಾಗಿದೆ. ರತ ಎನ್ನುವುದು ಪ್ರಭೆಯನ್ನು ನಿರ್ದೇಶಿಸುತ್ತದೆ. ಅಂದರೆ ಪ್ರಭಾರೂಪವಾದ ದೇವತೆ ಈಕೆ. ಈ ತಿಸ್ರೋ ದೇವತೆಗಳಲ್ಲಿ ಇಳಾ ಪಾರ್ಥಿವಾಗ್ನಿಯನ್ನು ಅಲಂಕರಿಸಿ ಆಕ್ರಮಿಸಿಕೊಂಡಳು, ಸರಸ್ವತಿಯು ಮಧ್ಯವನ್ನಾಕ್ರಮಿಸಿದಳು. ಭಾರತಿಯು ದೇವಲೋಕವನ್ನು ಪಡೆದುಕೊಂಡಳು ಎಂದು ಬೃಹದ್ದೇಶಿಯಲ್ಲಿ ಹೇಳಲಾಗಿದೆ. ಅಂದರೆ ಭೂಮಿ ಅಂತರಿಕ್ಷ ಮತ್ತು ಸ್ವರ್ಗವನ್ನು ಒಬ್ಬೊಬ್ಬರು ಸ್ವೀಕರಿಸಿಕೊಂಡರು. "ಇಳಾ ಸರಸ್ವತೀ ಮಹಿ" ಎಂದು ವೇದದಲ್ಲಿ ಬರುವುದು ಇಲ್ಲಿ ಮಹೀ ಎನ್ನುವುದು ಭಾರತಿ ಎನ್ನುವುದರ ವಿಶೇಷಣ ಎನ್ನಲಾಗಿದೆ.
ಭರತಃ ಆದಿತ್ಯಸ್ತಸ್ಯ ಭಾ ಎನ್ನುವದನ್ನು ಗಮನಿಸಿದರೆ ಇಲ್ಲಿ ಭರತ ಎನ್ನುವುದು ಸೂರ್ಯನಿಗೆ. ಜಗತ್ತಿನ ಪ್ರತಿಯೊಂದು ಪ್ರಾಣಿ ಪಕ್ಷಿಗಳೆಲ್ಲವನ್ನೂ ಚೆತನಾ ಸ್ವರೂಪರಂತೆ ಮಾಡುವವನೇ ಭರತ ಅವನೇ ಸೂರ್ಯ. ಈತ ಮಳೆಯ ಮತ್ತು ಅದರ ನೀರಿನಿಂದಲೂ ಜನರ ಅಭಿವೃದ್ಧಿಯನ್ನು ಮಾಡುವಂತವನು ಆದುದರಿಂದಲೇ ಭರತ ಎನ್ನುವುದಾಗಿ ಕರೆಯಲಾಗಿದೆ. ತಸ್ಯ ಭಾ ಎಂದರೆ ಅವನ ಪ್ರಕಾಶಕ್ಕೆ ಎಂದು ಅಂದರೆ ಸೂರ್ಯನ ಪ್ರಕಾಶವನ್ನು ಇಲ್ಲಿ ಭಾ ಎಂದು ಕರೆಯಲಾಗಿದೆ. "ಇಳಾ ಮನುಷ್ಯದಿಹ ಚೇತಯಮಾನಾ" ಅಂದರೆ ಇಳಾ ಎನ್ನುವವಳು ತಿಳಿದಿರುವವಳು ಎನ್ನುವುದಾಗಿ ಅರ್ಥ. ಅಂದರೆ ಹೇಗೆ ಹಸಿದ ಮನುಷ್ಯ ತನ್ನ ಆಹಾರ ಸಿಕ್ಕಿದೊಡನೆ ಅವಸರದಿಂದ ಬಂದು ಸ್ವೀಕರಿಸುತ್ತಾನೋ ಅದೇ ರೀತಿ ಈ ಇಳಾ ಅಗ್ನಿಗೆ ಸಮರ್ಪಿಸುವ ಆಹುತಿಯನ್ನು ಬೇಗನೇ ಬಂದು ಸ್ವೀಕರಿಸುತ್ತಾಳೆ ಎನ್ನುವ ಅರ್ಥ.
ಹೀಗೇ ಭಾರತೀ ಎಂದರೆ ದ್ವಾದಶಾದಿತ್ಯರಲ್ಲಿ ಒಬ್ಬನು. ಆದಿತ್ಯನ ದೀಪ್ತಿಗೆ ಭಾ ಎಂದು ಹೆಸರು ಆದುದರಿಂದ ಭಾರತಿ ಎಂದರೆ ಸೂರ್ಯನ ಪ್ರಕಾಶ ಮತ್ತು ಸೂರ್ಯ ಮಂಡಲದಲ್ಲಿನ ಅಗ್ನಿಯನ್ನು ಕುರಿತಾಗಿ ಹೇಳಿರುವುದು ಎನ್ನುವ ಅರ್ಥ. ಇಲ್ಲಿ ಇನ್ನೊಂದು ಗಮನಿಸ ಬೇಕಾದ ಸಂಗತಿ ಎಂದರೆ, ನಮಗೆ ಕಾಣಿಸುವ ಸೂರ್ಯನಲ್ಲದೇ ಇನ್ನೂ ಹನ್ನೊಂದು ಸೂರ್ಯರಿದ್ದಾರೆ ಎನ್ನುವ ಅಂಶ. ಇದು ಇಂದಿನ ಆಧುನಿಕ ವಿಜ್ಞಾನವೂ ಹೌದೆನ್ನುತ್ತದೆ. 
ಇಳಾ ಎಂದರೆ ಭೂಮಿಯನ್ನು ಕುರಿತಾಗಿ ಹೇಳಿರುವುದು. "ಮನುಷ್ವತ್ ಚೇತಯಂತೀ" ಎಂದರೆ ಮನುಷ್ಯರಿಗೆ ಭೂಮಿಯ ಮೇಲಿನ ಅನ್ನಾದಿ ಆಹಾರಗಳನ್ನು ಸಂಪತ್ತು ಮತ್ತು ಶಾಂತಿಯನ್ನು ಕೊಡುವುದರಿಂದ ಇವಳು ಭೂಮಿಯಲ್ಲಿನ ಅಗ್ನಿ.(ಇಲ್ಲಿ ಅಗ್ನಿ ಎನ್ನುವುದನ್ನು ಕನ್ನಡದ ಬೆಂಕಿಗೆ ಸೀಮಿತಗೊಳಿಸಿಕೊಳ್ಳಬಾರದು. ಅಗ್ನಿ ಎನ್ನುವುದು ಶಕ್ತಿಗೆ)
ಸರಸ್ವತೀ ಎನ್ನುವವಳು ಅಂತರಿಕ್ಷದ ಸಿಡಿಲು ಮತ್ತು ಮಿಂಚು ಗುಡುಗುಗಳಿಗೆ ಅಧಿದೇವತೆಯಾದ್ದರಿಂದ ಅಲ್ಲಿನ ಅಗ್ನಿಯೆಂದು ಹೇಳಲಾಗಿದೆ. ಅಗ್ನಿ ಅಥವಾ ಸೂರ್ಯ (ಶಕ್ತಿ) ಭೂಮಿಗೆ ಅನಿವಾರ್ಯ ಸಕಲ ಚರಾಚರ ವಸ್ತುಗಳು ಜೀವಿಗಳೂ ಸಹ ಈ ಶಕ್ತಿಯನ್ನು ಅವಲಂಬಿಸಿವೆ. ಇಂತಹ ಶಕ್ತಿ ಭಾರತ. ಈ ಹೆಸರೇ ಅತ್ಯಂತ ಸುಂದರ. ಈ ಸುಂದರ ಹೆಸರಿನಲ್ಲಿಯೇ ಸೂರ್ಯನಂತಹ ಪ್ರಭೆ ಹೊಂದಿದೆ. ಸೂರ್ಯನ ಶಕ್ತಿ ಈ ಭಾರತಕ್ಕಿದೆ. ಸೂರ್ಯನಿಲ್ಲದೇ ಹೇಗೆ ಭೂಮಿ ಇಲ್ಲವೋ ಅದೇ ರೀತಿ ಭಾರತವಿಲ್ಲದ ವಿಶ್ವ ಇರಲಿಕ್ಕಿಲ್ಲ. ಇಡಿಯ ಜಗತ್ತನ್ನು ಹಿಡಿದಿಡುವ ಮತ್ತು ಇಡೀ ಜಗತ್ತಿಗೆ ಬೆಳಕನ್ನು ಕೊಡುವ ಶಕ್ತಿ ಈ ಭಾರತಕ್ಕಿದೆ. ಹೌದು ನಮ್ಮ ದೇಶಕ್ಕೆ ಭಾರತ ಎನ್ನುವ ಹೆಸರು ಬಂದಿರುವುದು ಇಲ್ಲಿ ಆಳಿದ ರಾಜರುಗಳಿಂದ ಇರಬಹುದು ಆದರೆ ಜಗತ್ತಿಗೆ ಶಕ್ತಿಯನ್ನೊದಗಿಸುವ ಭಾರತ ನನ್ನ ಕಣ್ಣಿಗೆ ಕಾಣಿಸುವುದು ಇಂತಹ ಸೂರ್ಯನಾರಾಯಣನಿಂದಲೇ. 

ಸದ್ಯೋಜಾತರು

ನಾವು ದೇವರಿಗೆ ದೀಪ ಯಾಕೆ ಇಡಬೇಕು?

ಪ್ರಿಯ ಬಂದುಗಳೇ ನಾವು ದಿನ ನಿತ್ಯ ದೇವರಿಗೆ ದೀಪ ಇಟ್ಟು, ಭಕ್ತಿಯಿಂದ ದೇವರಿಗೆ ಕೈ ಮುಗಿಯುತ್ತೇವೆ. ನಮ್ಮನ್ನು ಕುತೂಹಲದಿಂದ ನೋಡಿ ಕಲಿಯುವ ಮಕ್ಕಳು' ನಾವು ದೇವರಿಗೆ ದೀಪ ಯಾಕೆ ಇಡಬೇಕು?' ಅದೊಂದು ದಿನ ನಮ್ಮನ್ನು ಕೇಳಿಯೇ ಬಿಡುತ್ತವೆ. ನೀವು ತಬ್ಬಿಬ್ಬುಗೊಳ್ಳುತ್ತಿರಿ. 'ಇದು ನಮ್ಮ ಸಂಪ್ರದಾಯ ಮಗು, ಅಜ್ಜ ಇಡುತ್ತಿದ್ದರು ಆದನಂತರ ಅಪ್ಪ ಇಡುತ್ತಿದ್ದರು ಈಗ ನಾನು ಮುಂದೆ ನೀನು' ಎನ್ನುತ್ತಾ ಮಗುವನ್ನು ಸಮಾಧಾನ ಪಡಿಸುತ್ತಿರಿ. ಮಗು ಸತ್ಯ ಎನ್ನುತ್ತಾ ನಂಬಿ ಬಿಡುತ್ತದೆ!!. ಆದರೆ ಸತ್ಯ ಅದಲ್ಲ. ನೀವು ತಿಳಿದುಕೊಳ್ಳಿ ಮತ್ತು ನಿಮ್ಮವರೊಂದಿಗೂ ಹಂಚಿಕೊಳ್ಳಿದೀಪ ಅನ್ನುವುದು ಬರೇ ಬೆಳಕಿಗಾಗಿ ಇಡುವುದಲ್ಲ. ಬದಲಿಗೆ ನಿಮ್ಮ ಪ್ರಾರ್ಥನೆ ಮತ್ತು ಹರಕೆಗನ್ನು ದೇವರಿಗೆ ತಲುಪಿಸುವ ವಾಹಕ. ದೀಪ ಅನ್ನುವುದು ಅಗ್ನಿಯಿಂದ ಪ್ರಜ್ವಲಿತವಾಗಿದೆ. ನಾವು ಮಾಡುವ ಯಾಗದ ಹವಿಸನ್ನು ಹೇಗೆ ಅಗ್ನಿಯು ಆಯ ದೇವತೆಗಳಿಗೆ ಕೊಂಡೊಯ್ದು ಒಪ್ಪಿಸುತ್ತದೋ ಅದೇ ತೆರನಾಗಿ ದೀಪವೂ ನಿಮ್ಮ ಪ್ರಾರ್ಥನೆಯನ್ನು ಭಗವಂತನ ಬಳಿಗೆ ಕೊಂಡೊಯ್ಯುವ ಸಾಧನವಾಗಿದೆ. ನೀವು ಯಾವ ದೇವರನ್ನು ಪ್ರಾರ್ಥನೆ ಮಾಡುತ್ತಿರೋ ಆ ಪ್ರಾರ್ಥನೆ ನಿಮ್ಮ ಆ ದೇವರ ಬಳಿ ತಲುಪಲು ದೀಪ ಒಂದು ಮಾಧ್ಯಮ. ದೀಪವಿಲ್ಲದೆ ನಿಮ್ಮ ಪ್ರಾರ್ಥನೆ ತಲುಪಬೇಕಾದ ಜಾಗವನ್ನು ತಲುಪುವುದಿಲ್ಲ. ಹಿಂದೊಮ್ಮೆ ನಾವು ಪ್ರಾರ್ಥನೆ ಮಾಡುವಾಗ ದೀಪ ನಂದಿ ಹೋದರೆ ಅಪಶಕುನ ಅನ್ನುತ್ತಿದ್ದರು.ಯಾಕೆಂದರೆ ನಿಮ್ಮ ಪ್ರಾರ್ಥನೆ ಭಗವಂತನನ್ನು ತಲುಪಲಿಲ್ಲ ಅನ್ನುವುದೇ ಅದರ ತಾತ್ಪರ್ಯ.ಆತ್ಮ ಮತ್ತು ಪರಮಾತ್ಮನ ಮಧ್ಯೆ ಸಂಬಂಧ ಸೇತುವೆ ಒಂದು ಪುಟ್ಟ ದೀಪವಾಗಬಲ್ಲುದು.ನೀವು ನಿತ್ಯ ಮನೆಯಲ್ಲಿ ದೇವರಿಗೆ ಅಥವಾ ಧೈವಗಳಿಗೆ ಕೈ ಮುಗಿಯುವಾಗ ಪುಟ್ಟ ದೀಪವೊಂದನ್ನು ಪ್ರಜ್ವಲಿಸುವ ಪರಿಪಾಟವನ್ನು ಇಟ್ಟುಕೊಳ್ಳಿ. ನಿಮ್ಮ ಪ್ರತಿ ಪ್ರಾರ್ಥನೆ ಮುಟ್ಟಬೇಕಾದ ಜಾಗವನ್ನು ತಟ್ಟುತ್ತದೆ. ಪ್ರಾರ್ಥನೆಗಳು ಫಲಿಸುತ್ತವೆ. ದೇವರಮತ್ತು ನಿಮ್ಮ ಸಂಬಂಧಗಳು ಹತ್ತಿರ ಮತ್ತು ಗಟ್ಟಿಯಾಗುತ್ತದೆ.ಕಾರಣಿಕಗಳು ಮಾತಾಡುತ್ತವೆ‌ಇನ್ನು ಮಕ್ಕಳ ಜನ್ಮ ದಿನಾಚರಣೆಯ ಸಮಯದಲ್ಲಿ ಕ್ಯಾಂಡಲ್ ನಂದಿಸುವುದಕ್ಕಿಂತದೀಪ ಪ್ರಜ್ವಲಿಸುವುದು ತುಂಬಾ ಸೂಕ್ತವಾದ ಆಚರವಾಗಿದೆ. ಉರಿಯುತ್ತಿರುವ ಪುಟ್ಟ ದೀಪ ನಿಮ್ಮ ಬಂಧುಗಳ ಹಾರೈಕೆಯನ್ನು ಭಗವಂತನ ಬಳಿಗೆ ಕೊಂಡೊಯ್ಯುತ್ತದೆ.ಯಾರಾದರೂ ಕೆಟ್ಟ ಹಾರೈಕೆಯನ್ನು ಮಾಡಿದರೆ ಅವನ್ನು ಅಲ್ಲೇ ಸುಟ್ಟು ಒಳ್ಳೆಯ ಆರೈಕೆಗಳನ್ನು ಮಾತ್ರ ದೇವರ ಪಾದತಳದಲ್ಲಿಡುವ ಗುಣ ಒಂದು ಪುಟ್ಟ ಹಣತೆಗಿದೆ

ಗೃಹಪ್ರವೇಶದಲ್ಲಿ ವಾಸ್ತುಶಾಂತಿಯನ್ನು ಏಕೆ ಮಾಡಬೇಕು?

~ಗೃಹಪ್ರವೇಶದಲ್ಲಿ ವಾಸ್ತುಶಾಂತಿಯನ್ನು ಏಕೆ ಮಾಡಬೇಕು?~

ಭೂಮಿಯನ್ನೇ ಮುಳುಗಿಸಹೊರಟಿದ್ದವ ದುಷ್ಠ ಹಿರಣ್ಯಾಕ್ಷ. ಕರುಣಾಳು ದೇವ ವರಾಹನಾಗಿ ಬಂದು ಧರೆಯನ್ನುದ್ಧರಿಸಿದ. ಭೂಮಿಯನ್ನು ಮತ್ತೆ ಕಕ್ಷೆಯಲ್ಲಿಟ್ಟ. ಆಗ ವರಾಹದೇವ ಬೆವರ ಹನಿಗಳನ್ನು ಭೂಮಿಗೆ ಸಿಡಿಸಿದ. ಮೂರು ಸ್ವೇದ ಬಿಂದುವಿನಿಂದ ಮೂವರು ಆವಿರ್ಭವಿಸಿದರು. 
 
• ಒಬ್ಬ ಪೀತವರ್ಣದ ನರಕಾಸುರ. 
• ಇನ್ದನೋರ್ವ ಕೆಂಪುಬಣ್ಣದ ಮಂಗಳ, ಕುಜ. 
• ಮತ್ತೊಬ್ಬ ಕಪ್ಪುಬಣ್ಣದ ವಾಸ್ತುಪುರುಷ. 

ಈ ಮೂವರೂ ಭೂಮಾತೆಯ ತನುಜರು. ಭೂವರಾಹನ ಮಕ್ಕಳು. ಆಚಾರ್ಯರು ತಮ್ಮ ತಂತ್ರಸಾರ ಸಂಗ್ರಹದಲ್ಲಿ ಹೇಳಿದರು. ‘ವಾಸ್ತುರ್ವ –ರಾಹಸ್ಯ ಹರೇಃ ಸುತಃ’ ವಾಸ್ತುಪುರುಷನು ವರಾಹರೂಪೀ ಶ್ರೀಹರಿಯ ಮಗ ಎಂದು.

‘ಅಂಧಕಾಸುರ ಸಂಗ್ರಾಮದಲ್ಲಿ ಶಿವನಿಂದಾಗಿ ಆವಿರ್ಭವಿಸಿದ ವಾಸ್ತುಪುರುಷ ನೋರ್ವನಿದ್ದಾನೆ. 

ಕಶ್ಯಪಗೃಹಿಣಿಯಾದ ಸಿಂಹಿಕೆಯಲ್ಲಿ ಹುಟ್ಟಿದ ವಾಸ್ತು ಮತ್ತೊಬ್ಬನಿದ್ದಾನೆ. ಪುರಾಣಗಳಲ್ಲಿ ಈ ಬಗ್ಗೆ ಮಾಹಿತಿಯಿದೆ. 

ವರಾಹಸುತನಾದ ಪ್ರಧಾನ ವಾಸ್ತುವಿನ ಸಹಚರರಿವರು. 

ಪ್ರಾಸಾದದ ಹಾಗೂ ಸ್ವಗೃಹದ ಸುತ್ತಮುತ್ತಲಿನ ಪ್ರಾಕಾರ ಮೊದಲಾದ ಉಪವಿಭಾಗಗಳಿಗೆ ಸಂಬಂಧಿಸಿದವರು.

ವಾಸ್ತು ಪುರುಷನು ಭೂಮಿಯ ಮಗನಾಗಿ ಸಚ್ಚೇತನವಾಗಿದ್ದರೂ ನರಕಾಸುರನಂತೆ ಅಸುರಾವೇಶಕ್ಕೆ ಒಳಗಾಗಿ ಬಿಟ್ಟ. ಜಗತ್ಪೀಡಕನಾಗಿ ದೇವಲೋಕಕ್ಕೂ ಲಗ್ಗೆಯಿಟ್ಟ. 

ದೇವೇಂದ್ರನು ವಜ್ರಾಯುಧದಿಂದ ಬಡಿದು ಭೂಮಿಯಲ್ಲಿ ಬೀಳಿಸಿಬಿಟ್ಟ. 
ಭೂಮಿಯಲ್ಲಿ ಬೋರಲಾಗಿ ಬಿದ್ದ ವಾಸ್ತು. ಈಶಾನ್ಯಕ್ಕೆ ತಲೆ, ನೈರ್ಋತ್ಯಕ್ಕೆ ಕಾಲು, ಕೆದರಿದ ಕೂದಲು, ಕರ್ರಗಿನ ದೊರಗು ಮೈ, ಕೆಂಗಡರಿಂದ ಕಣ್ಣು, ಜೋಡಿಸಿದ ಎರಡು ಕೈ, ಬೋರಲು ಬಿದ್ದೂ ಕೈ ಮುಗಿದ ವಾಸ್ತುವಿನ ಮೇಲೆ ಬ್ರಹ್ಮಾದಿದೇವತೆಗಳು ಬಂದು ಕುಳಿತರು. ವಾಸ್ತುವಿನ ಅದೃಷ್ಟ ದೊಡ್ಡದು. ಇವರ ಸ್ಪರ್ಶಮಾತ್ರದಿಂದ ವಾಸ್ತುವಿನಲ್ಲಿದ್ದ ಅಸುರ ಬೇಸ್ತುಬಿದ್ದ. 
ವಾಸ್ತು ಶುದ್ಧನಾದ. ಅಸುರಾವೇಶ ತೊಲಗಿತು.
ಕೈಮುಗಿದು ದೇವತೆಗಳಲ್ಲಿ ವಿನಂತಿಸಿದ. ‘ನನ್ನನ್ನು ಉದ್ಧರಿಸಿರಿ. ನನಗೊಂದು ಕರ್ತವ್ಯಕರ್ಮ ಆದೇಶಿಸಿರಿ’.
 
ದೇವತೆಗಳೆಂದರು “ಹೊಟ್ಟೆ ಹೊರೆಯುವುದಕ್ಕಾಗಿ ದೇವತೆಗಳೆಡೆ ದಂಡೆತ್ತಿ ಬರಬೇಡ. ನೀನು ನೆಲದ ಮಗ. ಈ ಭೂತಲಯದಲ್ಲಿಯೇ ಸ್ಥಿರನಾಗಿ ನೆಲಸು. ಭೂಮಿಯನ್ನು ಅಗೆಯುವ ಮಂದಿ ನಿನ್ನನ್ನು ಆರಾಧಿಸುತ್ತಾರೆ. 
ನಿನ್ನ ಮೇಲೆ ಸನ್ನಿಹಿತರಾದ ನಮ್ಮನ್ನು ಆಹುತಿಯನ್ನಿತ್ತು ಪೂಜಿಸುತ್ತಾರೆ. ಅವರು ಮಾಡುವ ಈ ಪೂಜೆ, ಹೋಮ, ಬಲಿಪ್ರದಾನಗಳಿಂದ ನಿನ್ನ ಜೀವನ.
 
ಇದಕ್ಕೆ ಪ್ರತಿಯಾಗಿ ನೀನು ಅವರ ನೆಲದಲ್ಲಿ 
• ಸ್ಥಿರನಾಗು, 
• ಶಿವನಾಗು, 
• ಶುಭನಾಗು. 

ಅವರ ಗೃಹವು ಶಾಂತಿ -ನೆಮ್ಮದಿಗಳಿಗೆ ತವರಾಗುವಂತೆ ನೋಡಿಕೋ. ರೋಗ ರುಜಿನಗಳಿಗೆ ಆಸಪದವಾಗದಂತೆ ರಕ್ಷೆಯಾಗು. ನೂತನಗೃಹಾದಿಗಳನ್ನು ನಿರ್ಮಿಸಿ ಈ ಬಗೆಯ ಪೂಜೆ ನಡೆಸದೆ ಒಂದೊಮ್ಮೆ ಅಲ್ಲಿ ವಾಸಿಸ ತೊಡಗಿದರೆ ಆ ಗೃಹವೇ ನಿನಗೆ ಆಹಾರ”

ಗೃಹಪ್ರವೇಶಾದಿ ಸಂದರ್ಭಗಳಲ್ಲಿ ವಾಸ್ತುಪೂಜೆಯನ್ನು ಖಡ್ಡಾಯವಾಗಿ ನಡೆಸತಕ್ಕದು ಎಂಬುದನ್ನು ಪುರಾಣಗಳು ಹೇಳುವ ಪರಿಯಿದು.
_ಸಂಗ್ರಹ: ಶ್ರೀ ವೇ ಚನ್ನೇಶಯ್ಯ ಶಾಸ್ತ್ರಿಗಳು ಹಿರೇಕೆರೂರ_

June 26, 2021

ವೇದದಲ್ಲಿ ಯಾವುದೇ ಪಶು ಹಿಂಸೆ, ಹತ್ಯೆ, ಭಕ್ಷಣೆ ಇಲ್ಲ


ಈ ಕೆಳಗೆ ಮಂಡಿಸಿರುವ ವಿಷಯವು ಪೂರ್ಣವಾಗಿ ಹಾಗು ನಿಷ್ಪಕ್ಷಪಾತವಾಗಿ ವೇದಗಳು, ಅದರ ಅನ್ವಯ, ವ್ಯಾಕರಣ, ಭಾಷೆ ಮತ್ತು ಅದಕ್ಕೆ ಸಂಬಂಧಿಸಿದ ವೇದ ಮಂತ್ರಗಳ ಹಾಗು ಅದರ ಸರಿಯಾದ ಉದ್ದೇಶವನ್ನು ಆಧರಿಸಿದ್ದಾಗಿದೆ. ಆದ್ದರಿಂದ ಇದು ಮ್ಯಾಕ್ಸ್ ಮುಲ್ಲರ್, ಗ್ರಿಫ಼ತ್, ವಿಲ್ಸನ್, ವಿಲಿಯಂಸ್ ಮತ್ತು ಇನ್ನಿತರ ಭಾರತೀಯ ಅನ್ವೇಷಕರ ಅಭಿಪ್ರಾಯವನ್ನು ಕುರುಡಾಗಿ ಪ್ರತಿಬಿಂಬಿಸುತ್ತಿಲ್ಲ. ಇವರ ಅನ್ವೇಷಣೆಯು ಪಾಶ್ಚಾತ್ಯ ದೇಶದಲ್ಲಿ ಪ್ರಸಿದ್ಧಿ ಹೊಂದಿದ್ದರೂ ನಮಗೆ ಹಲವಾರು ಬಲವಾದ ಕಾರಣಗಳಿಂದ ಅವರ ಅನ್ವೇಷಣೆಯು ಕಪೋಲಕಲ್ಪಿತ ಹಾಗು ನ್ಯಾಯಯುತವಾಗಿಲ್ಲ ಎಂದು ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ನಾವು ಹೆಚ್ಚಿನ ವಿಷಯವನ್ನು ಈ ವರದಿಯಲ್ಲಿ ವಿಮರ್ಷಿಸುತ್ತಿದ್ದೇವೆ.

ವೇದಗಳು – ಪ್ರಪಂಚದ ಮೊದಲನೆಯ ಜ್ಞಾನದ ಪುಸ್ತಕ. ನಮ್ಮ ಮೊದಲನೆ ಭಾಗವಾದ ವೇದಗಳಿಗೆ ಸಂಬಂಧಿಸಿದಂತ ತಪ್ಪು ಗ್ರಹಿಕೆಗಳ ವಿಮರ್ಷೆಗೆ ನಿಮಗೆ ಸ್ವಾಗತ.

ಭಾರತೀಯರ ಪವಿತ್ರ ಗ್ರಂಥವಾದ ವೇದವು ಶತಕಗಳಿಂದ ಹಲವಾರು ರೀತಿಯಲ್ಲಿ ಹಲವಾರು ಜನರಿಂದ ನಿಂದನೆಗೆ ಗುರಿಯಾಗಿದೆ. ಇವರ ತಪ್ಪು ಗ್ರಹಿಕೆಯಿಂದ ಬಹಳಾ ಅಪವಿತ್ರ ವಿಷಯಗಳನ್ನು ಸೇರಿಸಿ ಜನರನ್ನು ನಂಬಿಸುತ್ತಿದ್ದಾರೆ. ಇವರ ನಿಂದನೆಗಳನ್ನು ಪೂರ್ಣವಾಗಿ ನಂಬಿದರೆ ಹಿಂದುಗಳ ತತ್ವಜ್ಞಾನ, ಸಂಸ್ಕೃತಿ, ಪದ್ಧತಿ, ಕೇವಲ ಬರ್ಬರತೆ, ಅಸಭ್ಯತೆ, ಕ್ರೌರ್ಯತೆ ಹಾಗು ನರಭಕ್ಷತೆಗೆ ಮೀಸಲೆಂದು ಅನಿಸುತ್ತದೆ.

ಹಿಂದುಗಳ ಮೂಲ ಬೇರಾದ ವೇದವು, ಪ್ರಪಂಚದ ಜ್ಞಾನದ ಮೊದಲನೆಯ ಮೂಲಸ್ರೋತವಾಗಿದೆ. ಈ ವೇದಗಳು ಮನುಷ್ಯನ ಪರಮಾನಂದಕ್ಕೆ ಕೈಪಿಡಿಯಾಗಿದೆ. ಇದನ್ನು ಇಷ್ಟಪಡದ ಕೆಲವರು ವೇದಗಳ ಪಾವಿತ್ರ್ಯತೆಯನ್ನು ಹಾಳುಮಾಡುವ ಸಲುವಾಗಿ ಹುಚ್ಚುಹುಚ್ಚಾದ, ಅರ್ಥ ಗರ್ಭಿತವಲ್ಲದ ವಿಷಯಗಳಿಗೆ ವೇದಗಳೇ ಆಧಾರವೆಂದು ಹೇಳಿ ಜನರಿಗೆ ಮೋಸ ಮಾಡುತ್ತಿದ್ದಾರೆ.

ಇವರ ಈ ಪ್ರಯತ್ನದಿಂದ ಬಡವರು ಹಾಗು ಅನಕ್ಷರಸ್ಥರು ಭಾರತದ ಮೂಲ ಆಧಾರವಾದ ವೇದವು ಹೆಂಗಸರ ಮೇಲೆ ದೌರ್ಜನ್ಯ, ಮಂಸ ಭಕ್ಷಣೆ, ಬಹು ಪತ್ನಿತ್ವ, ಜಾತೀಯತೆ ಹಾಗು ಇದೆಲ್ಲಕ್ಕಿಂತ ಹೆಚ್ಚಾಗಿ ಗೋಮಾಂಸ ಭಕ್ಷಣೆಯನ್ನು ಪ್ರೋತ್ಸಾಹಿಸುತ್ತದೆ ಎಂದು ಅರ್ಥೈಸಿಕೊಳ್ಳುತ್ತಾರೆ.

ಯಜ್ಞಗಳಂತಹ ಇತರೆ ಉತ್ಸವಗಳಲ್ಲಿ ಪ್ರಾಣಿಗಳನ್ನು ಬಲಿದಾನ ಮಾಡಲು ವೇದಗಳು ಪ್ರೋತ್ಸಾಹಿಸುವುದು ಎಂಬ ಆಪಾದನೆಗೆ ವೇದಗಳು ಗುರಿಯಾಗಿವೆ. ವಿದೇಶಿಯರಷ್ಟೆ ಅಲ್ಲ, ನಮ್ಮ ದೇಶದ ಎಷ್ಟೋ ಬುದ್ಧಿಜೀವಿಗಳು ಈ ಹಿಂದೆ ಉಲ್ಲೇಖಿಸಿದ ವಿದೇಶಿ ಅನ್ವೇಷಕರ ಪುಸ್ತಕಗಳನ್ನೇ ಆಧಾರವಾಗಿಟ್ಟುಕೊಂಡು ವೇದಗಳಲ್ಲಿ ಪಾಂಡಿತ್ಯ ಹೊಂದಿದವರಂತೆ ವರ್ತಿಸಿ ವೇದಗಳ ಮೇಲೆ ಹಲವಾರು ಆಪಾದನೆ ಹೊರಸಿದ್ದಾರೆ.

ಗೋಮಾಂಸ ಭಕ್ಷಣೆಯನ್ನು ವೇದವು ಓಪ್ಪುತ್ತದೆ ಎಂಬ ಘನಘೋರ ಸುಳ್ಳನ್ನು ಹೇಳಿ, ಗೋವಿನ ಮೇಲಿರುವಂತಹ ಗೌರವವನ್ನು ಹಾಳುಮಾಡುತಿದ್ದಾರೆ. ಎಲ್ಲಿಯವರಗೆ ವೇದಗಳ ಸಂಪೂರ್ಣ ಜ್ಞಾನ ಹೊಂದಿರುವುದಿಲ್ಲವೊ ಅಲ್ಲಿಯವರೆಗೆ ಸನಾತನ ಧರ್ಮೀಯ ಅನುಯಾಯಿಗಳಾದ ಭಾರತೀಯರು ಈ ವಿದೇಶಿ ಬೇಟೆಗಾರರಿಗೆ ಸುಲಭ ತುತ್ತಾಗಬಹುದು. ಸಂಪೂರ್ಣವಾಗಿ ವೇದಗಳನ್ನರಿಯದ ಲಕ್ಷಾಂತರ ಭಾರತೀಯರು ವಿದೇಶಿಯರು ಮಂಡಿಸುವ ವಿತಂಡವಾದಗಳಿಗೆ, ಹುಚ್ಚು ತರ್ಕಗಳಿಗೆ ಹಾಗು ಸುಳ್ಳಿನ ಸರಮಾಲೆಗೆ ಸೋತು ಶರಣಾಗುತ್ತಿದ್ದಾರೆ.

ವೇದಗಳನ್ನು ಕಲ್ಮಶಗೊಳಿಸಲು ಕೇವಲ ವಿದೇಶಿಯರು ಹಾಗು ಬುದ್ದಿಜೀವಿಗಳು ಮಾತ್ರ ಹೊಣೆಯಲ್ಲ, ಇವರ ಜೊತೆಗೆ ಹಿಂದುಗಳಲ್ಲೆ ಕೆಲವು ಪಂಗಡಗಳು ಆರ್ಥಿಕ ಹಾಗು ಸಾಮಾಜಿಕ ಬಲಹೀನರಾಗಿರುವ ಹಲವು ಪಂಗಡಗಳನ್ನು ವೇದಗಳ ಕಾರಣ ಹೇಳಿ ಅನುಚಿತ ಉಪಯೋಗ ಪಡೆದುಕೊಂಡಿದ್ದಾರೆ. ವೇದಗಳನ್ನರಿತ್ತಿದ್ದ ಈ ಜನರು, ಅದರ ಜ್ಞಾನವನ್ನು ಇತರರಿಗೆ ಹಂಚದೆ ತಮ್ಮ ಸ್ವಪ್ರಯೋಜನಕ್ಕಾಗಿ ತಾವೇ ಶ್ರೇಷ್ಠರು ಎಂಬ ನಂಬಿಕೆಯನ್ನು ಇತರ ಪಂಗಡಗಳಲ್ಲಿ ಹುಟ್ಟುಹಾಕಿದ್ದಾರೆ.

ವೇದಗಳ ಈ ಎಲ್ಲಾ ಆಪಾದನೆಗಳಿಗೆ ಮುಖ್ಯಕಾರಣವೆಂದರೆ, ಮಧ್ಯಕಾಲೀನ ಬರಹಗಾರರಾದ ಮಾಹಿಧರ್, ಉವಾತ್ ಸಾಯನ ಹಾಗು ದಯಾನಂದರ ವ್ಯಾಖ್ಯಾನಗಳ ಟೇಕೆಗಳಿಂದ ಹಾಗು ವೇದಗಳು ಕೇವಲ ವಾಮಾಚಾರ, ಗೂಢಾಚಾರ, ಮಾಟಮಂತ್ರಗಳಿಗೆ ಸೀಮಿತ ಎಂದು ಹಬ್ಬಿಸಿರುವುದು ಇದಕ್ಕೆ ಕಾರಣವಾಗಿದೆ. ವೇದಗಳ ಪಾವಿತ್ರ್ಯತೆಯನ್ನು ಮತ್ತಷ್ಟು ಉಲ್ಬಣಗೊಳಿಸಲು, ಅರ್ಧಜ್ಞಾನ ಹೊಂದಿದ ವಿದೇಶಿ ಅನ್ವೇಶಕರು, ಮಾಹಿಧರ್, ಉವಾತ್ ಹಾಗು ಸಾಯನರ ವ್ಯಾಖ್ಯಾನಗಳ ಟೇಕೆಯನ್ನು ಭಾಷಾಂತರಿಸಿ ವೇದಗಳನ್ನೇ ಭಾಷಾಂತರ ಮಾಡಿದುದಾಗಿ ಹೇಳಿಕೊಂಡರು.

ಸಂಸ್ಕೃತದ ಬಗ್ಗೆ ಅರ್ಧಜ್ಞಾನ ಹೊಂದಿದಂತಹ ವಿದೇಶಿ ಭಾಷಾಂತರರು ವೇದಗಳನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಳ್ಳಲು ಬಹು ಅವಶ್ಯಕವಾಗಿರುವಂತಹ ವೇದ ಭಾಷೆ ಬ್ರಾಹ್ಮಿ(Language), ಭಾಷಾಧ್ವನಿ ರೂಪಕ(Phonetic), ನಿಘಂಟು(Vocabulary), ಛಂದಸ್ಸು(Prosody), ಜ್ಯೋತಿಷ ಶಾಸ್ತ್ರ(Astronomy), ಮತ್ತು ಇತರ ವಿಷಯಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಓಮ್ಮೆ ಮೂಲ ವೇದಗಳನ್ನು ಓದಿದರೆ ಅವರ ಈ ತಪ್ಪುಗಳನ್ನು ಬಹಳ ಸುಲಭವಾಗಿ ಕಂಡುಹಿಡಿಯಬಹುದಾಗಿದೆ.

ಈ ಪ್ರಯತ್ನದ ಹಿಂದಿರುವ ಉದ್ದೇಶವೇನೆಂದರೆ, ವೇದಗಳ ತಪ್ಪು ಗ್ರಹಿಕೆಗಳನ್ನು ಹೋಗಲಾಡಿಸಿ, ಅದರ ಪಾವಿತ್ರ್ಯತೆಯನ್ನು ಕಾಪಡುವುದು ಹಾಗು ವೇದಗಳು ಕೇವಲ ಹಿಂದುಗಳಿಗೆ ಮಾತ್ರ ಸೀಮಿತವಲ್ಲದೆ ಪ್ರಪಂಚದ ಎಲ್ಲಾ ಮಾನವರಿಗು ಅನ್ವಯಿಸುತ್ತದೆ ಎಂದು ತಿಳಿಸುವಂತದ್ದಾಗಿದೆ.

ಭಾಗ – ೧                ಪ್ರಾಣಿ ಹಿಂಸೆ ಮಹಾ ಪಾಪ
ಯಜುರ್ವೇದ ೪೦.೭
ಯಸ್ಮಿನ್ ಸರ್ವಾಣಿ ಭೂತಾನಿ ಆತ್ಮೈವಾಭೂದ್ ವಿಜಾನತಃ
ತತ್ರ ಕೋ ಮೋಹಃ ಕಃ ಶೋಕಃ ಏಕತ್ವಮನುಪಶ್ಯತಃ ||
ಯಾರು, ಎಲ್ಲಾ ಜೀವಿಗಳು ಒಂದೇ ಆತ್ಮನೆಂದು ತಿಳಿಯುತ್ತಾರೊ ಅವರು ದಡ್ಡತನದಿಂದಾಗಲಿ, ಯಾತನೆಯಿಂದಾಗಲಿ ಬಳಲುವುದಿಲ್ಲ ಏಕೆಂದರೆ ನಾವೆಲ್ಲರೂ ಒಂದೇ ಎಂಬ ಅನುಭವವನ್ನು ಹೊಂದಿರುತ್ತಾರೆ.
ಯಾವ ಮನುಷ್ಯರು ಅನಶ್ವರ (ಶಾಶ್ವತತೆ) ಹಾಗು ಪುನರ್ಜನ್ಮ ಸಿದ್ಧಾಂತಗಳನ್ನು ನಂಬುತ್ತಾರೊ, ಅವರು ಪ್ರಾಣಿಗಳನ್ನು ಯಜ್ಞಗಳಲ್ಲಿ ಕೊಲ್ಲಲು ಧೈರ್ಯವಾದರೂ ಹೇಗೆ ಮಾಡಿಯಾರು? ಏಕೆಂದರೆ ಆ ಪ್ರಾಣಿಗಳಲ್ಲಿ ಒಂದಾನೊಂದು ಸಮಯದಲ್ಲಿ ತಮಗೆ ಹತ್ತಿರವಾಗಿದ್ದ, ಪ್ರೀತಿ ಪಾತ್ರರಾಗಿದ್ದ ಆತ್ಮ – ಅಂದರೆ ಪರಮಾತ್ಮನ ಅಂಶವನ್ನೇ ನೋಡುತ್ತಾರೆ.

ಮನುಸ್ಮೃತಿ ೫.೫೧
ಅನುಮನ್ತಾ ವಿಶಸಿತಾ ನಿಹನ್ತಾ ಕ್ರಯವಿಕ್ರಯೀ
ಸಂಸ್ಕರ್ತಾ ಚೋಪಹರ್ತಾ ಚ ಖಾದಕಶ್ಚೇತಿ ಘಾತಕಾಃ ||
ಪ್ರಾಣಿಗಳನ್ನು ಕೊಲ್ಲಲು ಅನುಮತಿ ಕೊಡುವವರು, ಬಲಿಕೊಡಲೆಂದೇ ಪ್ರಾಣಿಗಳನ್ನು ತರುವವರು, ಪ್ರಾಣಿಗಳನ್ನು ಕೊಲ್ಲುವವರು, ಮಾಂಸವನ್ನು ಮಾರುವವರು, ಮಾಂಸವನ್ನು ಕೊಂಡುಕೊಂಡವರು, ಮಾಂಸದಿಂದ ಅಡುಗೆ ಮಾಡುವವರು, ಮಾಂಸದ ಅಡುಗೆಯನ್ನು ಬಡಿಸುವವರು ಮತ್ತು ಮಾಂಸವನ್ನು ತಿನ್ನುವವರನ್ನು ಕೊಲೆಗಡುಕರೆಂದೇ ಪರಿಗಣಿಸಲಾಗುವುದು.

ಅಥರ್ವ ವೇದ ೬.೧೪೦.೨
ಬ್ರೀಹಿಮತ್ತಂ ಯವಮತ್ತಮಥೋ ಮಾಷಮಥೋ ತಿಲಮ್ |
ಏಷ ವಾಂ ಭಾಗೋ ನಿಹಿತೋ ರತ್ನಧೇಯಾಯ ದಾನ್ತೌ ಮಾ ಹಿಂಸಿಷ್ಟಂ ಪಿತರಂ ಮಾತರಂ ಚ ||
ಓ ಹಲ್ಲುಗಳೇ, ನೀವು ಅಕ್ಕಿ, ಗೋಧಿ, ಎಳ್ಳು ಇತ್ಯಾದಿ ಧವಸಧಾನ್ಯಗಳ ಜೊಳ್ಳನ್ನು ತಿಂದರೂ ಹಾಲು ಇತ್ಯಾದಿ ಶ್ರೇಷ್ಠ ಉತ್ಪನ್ನಗಳನ್ನು ನಮಗಾಗಿ ಕೊಡುವಿರಿ. ತಂದೆ+ತಾಯಿಯರ ಸ್ಥಾನದಲ್ಲಿರುವ ಈ ಗೋ+ವೃಷಭಾದಿ ಪ್ರಾಣಿ ವರ್ಗವನ್ನು ಎಂದಿಗೂ ಹಿಂಸಿಸಬೇಡಿ, ಕೊಲ್ಲಬೇಡಿ.

ಅಥರ್ವ ವೇದ ೮.೬.೨೩
ಯ ಆಮಂ ಮಾಂಸಮದನ್ತಿ ಪೌರುಷೇಯಂ ಚ ಯೇ ಕ್ರವಿಃ
ಗರ್ಭನ್ ಖಾದನ್ತಿ ಕೇಶವಾಸ್ತಾನಿತೋ ನಾಶಯಾಮಸಿ ||
ಹಸಿ ಮಾಂಸವಾಗಲಿ ಅಥವ ಬೇಯಿಸಿದ ಮಾಂಸವಾಗಲಿ, ಮಾಂಸ ತಿನ್ನುವುದನ್ನು ನಾಶಪಡಿಸಬೇಕು. ಮಾಂಸವೆಂದರೆ ಗಂಡಾಗಲಿ, ಹೆಣ್ಣಾಗಲಿ, ಭ್ರೂಣವಾಗಲಿ ಅಥವ ಮೊಟ್ಟೆಯಾಗಲಿ ನಾಶಪಡಿಸುವುದನ್ನು ನಿಲ್ಲಿಸಬೇಕು.

ಅಥರ್ವ ವೇದ ೧೦.೧.೨೯
ಅನಾಗೋಹತ್ಯಾ ವೈ ಭೀಮಾ ಕೃತ್ಯೇ, ಮಾ ನೋ ಗೋಮಶ್ವಂ ಪುರುಷಂ ವಧೀಃ ||
ಅಮಾಯಕರನ್ನು ಕೊಲ್ಲುವುದು ಮಹಾಪಾಪ. ಹಸು, ಕುದುರೆ ಅಥವ ಮನುಷ್ಯರನ್ನು ಎಂದಿಗೂ ಕೊಲ್ಲಬೇಡಿ.
ವೇದಗಳು, ಪ್ರಾಣಿಹಿಂಸೆ ಮಾಡುವುದು ನಿಷೇಧಿಸಲಾಗಿದೆ ಎಂದು ಇಷ್ಟು ಪರಿಪಕ್ವವಾಗಿ ಹೇಳಿದರೂ ಸಹ ಗೋವು ಮತ್ತು ಇತರ ಪ್ರಾಣಿಗಳನ್ನು ಕೊಲ್ಲಿ ಎಂದು ಹೇಳುವುದು ಎಷ್ಟು ನ್ಯಾಯಯುತವಾಗಿದೆ? ಇದು ನಂಬುವಂತಹ ವಿಷಯವಲ್ಲ.

ಯಜುರ್ವೇದ ೧.೧
ಅಘ್ನ್ಯಾ ಯಜಮಾನಸ್ಯ ಪಶೂನ್ಪಾಹಿ ||
“ಓ ಮಾನವನೆ! ಪ್ರಾಣಿಗಳನ್ನು ಕೊಲ್ಲುವುದಕ್ಕಾಗಿ ಅಲ್ಲ, ಪಶುಗಳನ್ನು ರಕ್ಷಿಸು”

ಯಜುರ್ವೇದ ೬.೧೧
ಪಶೂಂಸ್ತ್ರಾಯೇಥಾಂ – ಎಲ್ಲಾ ಪಶುಗಳನ್ನು ರಕ್ಷಿಸು

ಯಜುರ್ವೇದ ೧೪.೮
ದ್ವಿಪಾದವ ಚತುಷ್ಪಾತ್ ಪಾಹಿ - ದ್ವಿಪಾದ ಹಾಗು ಚತುಷ್ಪಾದ ಜೀವಿಗಳನ್ನು ರಕ್ಷಿಸು
ಕ್ರವ್ಯಾದ  – ಕ್ರವ್ಯ (ಕೊಂದ ನಂತರ ಬರುವ ಮಾಂಸ) + ಅದ (ತಿನ್ನುವವನು) = ಮಾಂಸ ತಿನ್ನುವವನು
ಪಿಶಾಚ   – ಪಿಶಿತ (ಮಾಂಸ) + ಅಶ (ತಿನ್ನುವವನು)  = ಮಾಂಸ ತಿನ್ನುವವನು
ಅಸುತೃಪ – ಅಸು (ಉಸಿರಾಡುವ ಜೀವಿ) + ತೃಪ (ತನ್ನನ್ನು ತಾನೆ ತೃಪ್ತಿಪಡಿಸಿ ಕೊಳ್ಳುವವನು)    = ಇನ್ನೊಂದು ಜೀವಿಯನ್ನು                                                                                          ಆಹಾರಕ್ಕೆಂದು ಬಳಸುವವನು
ಗರ್ಭದಾ ಮತ್ತು ಅಂಡದಾ –  ಗರ್ಭವನ್ನು ಮತ್ತು ಮೊಟ್ಟೆಯನ್ನು ತಿನ್ನುವವನು
ವೈದಿಕ ಸಾಹಿತ್ಯದಲ್ಲಿ ಮಾಂಸ ಭಕ್ಷಕರನ್ನು ಯಾವಾಗಲೂ ತಿರಸ್ಕರಿಸಲಾಗಿದೆ. ಮಾಂಸ ತಿನ್ನುವವರನ್ನು ರಾಕ್ಷಸ, ಪಿಶಾಚಿ, ಹಾಗು ಇತರೆ ಪ್ರೇತಗಳಿಗೆ ಸಮಾನಾರ್ಥಕವಾಗಿದೆ ಹಾಗು ಇವೆಲ್ಲರನ್ನು ನಾಗರೀಕ ಸಮಾಜದಿಂದ ಬಹಿಷ್ಕರಿಸಲಾಗಿದೆ.

ಯಜುರ್ವೇದ ೧೧.೮೩
ಊರ್ಜಂ ನೋ ಧೇಹಿ ದ್ವಿಪದೇ ಚತುಷ್ಪದೇ - ಎಲ್ಲಾ ದ್ವಿಪಾದಿಗಳು ಹಾಗು ಚತುಷ್ಪಾದಿಗಳು ಶಕ್ತಿಗೊಂಡು ಬೆಳೆಯಲಿ
ಈ ಮೇಲಿನ ಮಂತ್ರವನ್ನು ಹಲವು ಕಡೆ ಸನಾತನ ಧರ್ಮೀಯರು ಪ್ರತಿ ಊಟದ ಮೂದಲು ಪಠಿಸುತ್ತಾರೆ. ಯಾವ ಶಾಸ್ತ್ರವು ಪ್ರತಿ ಆತ್ಮದ ಸೌಖ್ಯಕ್ಕಾಗಿ ಪ್ರಾರ್ಥಿಸುತ್ತದೊ ಅಂತಹ ದರ್ಶನಶಾಸ್ತ್ರವು ಪ್ರಾಣಿಗಳನ್ನು ಕೊಲ್ಲಲು ಅನುಮತಿ ನೀಡಲು ಹೇಗೆ ಸಾಧ್ಯ?

ಭಾಗ – ೨                            ಯಜ್ಞಗಳಲ್ಲಿ ಹಿಂಸೆ ಸಲ್ಲದು
ಜನಪ್ರಿಯವಾಗಿ ತಿಳಿದಿರುವಂತೆ, ಯಜ್ಞಗಳಲ್ಲಿ ಪ್ರಾಣಿ ಬಲಿಯಾಗುವುದಿಲ್ಲ. ವೇದಗಳಲ್ಲಿ ಯಜ್ಞಗಳೆಂದರೆ ಶ್ರೇಷ್ಠತಮ ಕರ್ಮ ಅಥವ ವಾತಾವರಣವನ್ನು ಅತ್ಯಂತ ಶುದ್ಧಿಗೊಳಿಸುವ ಕಾರ್ಯ.

ನಿರುಕ್ತ ೨/೭
ಅಧ್ವರ ಇತಿ ಯಜ್ಞಾನಾಮ – ಧ್ವರತಿಹಿಂಸಾ ಕರ್ಮ ತತ್ಪ್ರತಿಷೇಧಃ
ಯಾಸ್ಕ ಆಚಾರ್ಯರು ಹೇಳಿರುವಂತೆ ವೇದಗಳ ಭಾಷಾಶಾಸ್ತ್ರ ಅಥವ ನಿರುಕ್ತದ ಪ್ರಕಾರ ಯಜ್ಞದ ಇನ್ನೊಂದು ಅರ್ಥವೇ ಅಧ್ವರ. ಧ್ವರ ಎಂದರೆ ಹಿಂಸೆ ಅಥವ ದೌರ್ಜನ್ಯದ ಕೃತ್ಯ. ಅಧ್ವರ ಎಂದರೆ ಅಹಿಂಸೆ, ದೌರ್ಜನ್ಯವಿಲ್ಲದ ಕೆಲಸ. ವೇದಗಳಲ್ಲಿ ಅಧ್ವರ ಎಂಬ ಪದವನ್ನು ಬಹಳವಾಗಿ ಉಪಯೋಗಿಸಲಾಗಿದೆ.

ಮಹಾಭಾರತ ನಂತರದ ಕಾಲದಲ್ಲಿ ವೇದಗಳನ್ನು ಅಪವ್ಯಾಖ್ಯಾನಿಸಲಾಗಿದೆ, ಹಾಗು ಮೂಲ ಗ್ರಂಥಕ್ಕೆ ಹೊಸ ವಿಚಾರಗಳನ್ನು ಸೇರಿಸಿ ಅಪಮೌಲ್ಯಗೊಳಿಸಲಾಗಿದೆ. ಶಂಕರಾಚಾರ್ಯರು ವೇದದ ಮೌಲ್ಯಗಳನ್ನು ಮರುಸ್ಥಾಪಿಸಲು ಶ್ಲಾಘನೀಯ ಕೆಲಸಗಳನ್ನು ಮಾಡಿದ್ದಾರೆ. ಸ್ವಾಮಿ ದಯಾನಂದ ಸರಸ್ವತಿಯವರು, ಒಂದಿಷ್ಟು ಅಧಿಕೃತ ಸಾಕ್ಷಾಧಾರಗಳನಿಟ್ಟುಕೊಂಡು ಕೆಲವು ಭಾಷಾ ಪಂಡಿತರೊಂದಿಗೆ ಮೇಳೈಸಿದ ವಿಧಿ ವಿಧಾನಗಳೊಂದಿಗೆ ವೇದಗಳನ್ನು ವ್ಯಾಖ್ಯಾನಿಸಿದ್ದಾರೆ. ಇವರ ಸಾಹಿತ್ಯದಲ್ಲಿ ವೇದಗಳ ವಿವರಣೆ, ಸತ್ಯರ್ಥ್ ಪ್ರಕಾಶ್ ರವರು ಶಿಥಿಲವಾಗಿ ಭಾಷಾಂತರಿಸಿದ “ಸತ್ಯದ ಬೆಳಕು”(Light of truth), ವೇದಗಳ ಪರಿಚಯ ಮತ್ತು ಇತರೆ ಪಠ್ಯಗಳು ಜನಪ್ರಿಯಗೊಂಡು ವೇದ ತತ್ವಶಾಸ್ತ್ರದ ಅನ್ವಯ ಸಾಮಾಜಿಕ ಬದಲಾವಣೆ ತರುವಲ್ಲಿ ಹಾಗು ಅದಕ್ಕೆ ಅಂಟಿದ್ದಂತಹ ಕಳಂಕವನ್ನು ಗಮನಾರ್ಹವಾಗಿ ಹೋಗಲಾಡಿಸಲು ಪ್ರಯತ್ನಿಸಲಾಗಿದೆ. ಇವರ ಭಾಷ್ಯವು ಕೆಲವಾರು ಮೌಢ್ಯಗಳನ್ನು ನಿವಾರಿಸಲು ಶಕ್ಯವೇ ಹೊರತು ವೇದದ ಮೂಲ ಬ್ರಾಹ್ಮಿ ಭಾಷೆಯ ನೈಜ ವಿಚಾರಗಳಿಗೆ ಸರಿಹೊಂದುವುದಿಲ್ಲ.
ಈ ಭಾಗದಲ್ಲಿ ನಮ್ಮ ಪವಿತ್ರ ವೇದಗಳು ಯಜ್ಞದ ಬಗ್ಗೆ ಏನು ಹೇಳುತ್ತದೆ ಎಂದು ತಿಳಿದುಕೊಳ್ಳೊಣ.

ಋಗ್ವೇದ: ೧.೧.೪
ಅಗ್ನೇ ಯಂ ಯಜ್ಞಮಧ್ವರಂ ವಿಶ್ವತಃ ಪರಿ ಭೂರಸಿ, ಸ ಇದ್ದೇವೇಷು ಗಚ್ಛತಿ ||
ಓ ಕಾಂತಿಯುತವಾದ ದೇವರೆ! ನೀನು ಆಜ್ಞಾಪಿಸುವಂತಹ, ಎಲ್ಲಾ ಕಡೆಗಳಿಂದಲೂ ಮಾಡುವಂತಹ ಅಹಿಂಸೆಯ ಈ ಯಜ್ಞವು ಎಲ್ಲಾರಿಗೂ ಬಹಳ ಉಪಯೋಗಕಾರಿಯಾಗಿದೆ ಮತ್ತು ಈ ಯಜ್ಞವು ಆಧ್ಯಾತ್ಮ ತ್ರೈರಾಶಿಯನ್ನು ಹಾಗು ಕೀರ್ತಿವಂತ ಆತ್ಮಗಳನ್ನು ಮುಟ್ಟುತ್ತದೆ.

ಋಗ್ವೇದದಲ್ಲಿ, ಮೊದಲಿನಿಂದ ಕೊನೆಯವರೆಗೂ ಯಜ್ಞವನ್ನು ಅಧ್ವರ ಅಥವ ಅಹಿಂಸೆ ಎಂದು ವರ್ಣಿಸಲಾಗಿದೆ, ಅಷ್ಟೇ ಅಲ್ಲದೆ ಉಳಿದ ಮೂರು ವೇದಗಳಲ್ಲೂ ಸಹ ಪ್ರಾಣಿ ಹಿಂಸೆಯನ್ನು ವಿರೋಧಿಸಲಾಗಿದೆ. ಹೀಗಿರುವಾಗ ಹಿಂಸೆಯನ್ನಾಗಲಿ ಅಥವ ಪ್ರಾಣಿ ಬಲಿಯನ್ನಾಗಲಿ ವೇದಗಳು ನೇರವಾಗಿ ಅಥವ ಪರೋಕ್ಷವಾಗಿ ಸಮ್ಮತಿಸಲು ಹೇಗೆ ತಾನೆ ಸಾಧ್ಯ? ಹಲವಾರು ದುಷ್ಟರ ಪ್ರಯತ್ನದಿಂದ ವೇದಗಳನ್ನು ತಿರುಚಲು ಪ್ರಯತ್ನಿಸಿ, ವೇದಗಳ ಮೇಲೆ ಇಲ್ಲದ ಆರೋಪ ಹೊರಿಸುತ್ತಿದ್ದಾರೆ.

ಅತಿ ದೊಡ್ಡ ಆಘಾತಕಾರಿ ಆಪಾದನೆ ಏನೆಂದರೆ, ಯಜ್ಞಗಳಲ್ಲಿ ಜಾನುವಾರು ಬಲಿಗಳನ್ನು ಮಾಡುತ್ತಾರೆ, ಅದರಲ್ಲಿಯೂ ಅಶ್ವಮೇಧ ಯಾಗ, ಗೋಮೇಧ ಯಜ್ಞ, ಅಜಮೇಧ ಯಜ್ಞ, ಪಿತೃಮೇಧ ಯಜ್ಞ, ನರಮೇಧ ಇತ್ಯಾದಿ ಯಜ್ಞಗಳಲ್ಲಿ ಹಿಂಸೆಯು ಸರ್ವೆ ಸಾಮಾನ್ಯ ಎಂದು ತಪ್ಪು ತಿಳಿದಿದ್ದಾರೆ ಆದರೆ ಮೇಧ ಎಂಬ ಪದವು ಯಾವುದೇ ಕಾರಣದಿಂದಲು ಬಲಿ ಎಂದು ಅನ್ವಯಿಸುವುದಿಲ್ಲ. ವೇದದಲ್ಲಿ ಹೇಳಿದ ಮೇಧವೇ ಬೇರೆ ನೀವು ದೇಹಶಾಸ್ತ್ರದಲ್ಲಿ ಹೇಳುವ ಕೊಬ್ಬಿನಾಂಶವುಳ್ಳ ಮೇದ(ಧ)ಸ್ಸೇ ಬೇರೆ.
ಯಜುರ್ವೇದವು ಕುದುರೆಗಳ ಬಗ್ಗೆ ಏನು ಹೇಳುವುದೆಂದು ತಿಳಿಯುವುದು ಮುಖ್ಯ

ಯಜುರ್ವೇದ ೧೩.೪೮
ಇಮಂ ಮಾ ಹಿಂಸೀರೇಕಶಫಂ ಪಶುಂ ಕನಿಕ್ರದಂ ವಾಜಿನಂ ವಾಜಿನೇಷು ||
ಈ ಗೊರಸುಳ್ಳ, ಹೇಷಾರವ ಮಾಡುತ್ತಾ ಇತರೆ ಪ್ರಾಣಿಗಳಿಗಿಂತಲೂ ವೇಗವಾಗಿ ಚಲಿಸಿ ನಿಮಗೆ ಸಹಾಯಕವಾಗಿರುವ ಪಶುವನ್ನು ಸಂಹಾರ ಮಾಡಬೇಡಿ. ಅಶ್ವಮೇಧ ಯಾಗ ಎಂದರೆ ಕುದುರೆಯನ್ನು ಬಲಿಕೊಡುವುದಲ್ಲ. ಯಜುರ್ವೇದವು ಕುದುರೆ ಬಲಿಯನ್ನು ಮಾಡಲೇಬಾರದೆಂದು ಸ್ಪಷ್ಟವಾಗಿ ಹೇಳಿದೆ.

ಶತಪಥ ೧೩-೧-೬-೩
ರಾಷ್ಟ್ರಂ ವಾ ಅಶ್ವಮೇಧಃ, ಅನ್ನಂ ಹಿ ಗೌಃ, ಅಗ್ನಿರ್ವಾ ಅಶ್ವಃ, ಆಜ್ಯಂ ಮೇಧಾಃ ||
ಶಥಪಥದಲ್ಲಿ ಅಶ್ವ ಎಂದರೆ ದೇಶ ಅಥವ ಸಾಮ್ರಾಜ್ಯ ಎಂದರ್ಥ. ಮೇಧ ಎಂಬ ಪದದ ಅರ್ಥ ಸಂಹಾರ ಎಂದಲ್ಲ. ಅದರ ಧಾತು ಮೇಧೃ –ಸಂ –ಗಂ –ಮೇ ಎಂಬ ಮೂಲಾರ್ಥದಲ್ಲಿ ಮೇಧ ಎಂದರೆ ವಿವೇಕದಿಂದ ಮಾಡಿದಂತಹ ಕೆಲಸ ಒಟ್ಟು ಗೂಡುಸುವಿಕೆ ಎಂದು ಸ್ಪಷ್ಟವಾಗುತ್ತದೆ. ಸ್ವಾಮಿ ದಯಾನಂದ ಸರಸ್ವತಿಯವರು ತಮ್ಮ ಸತ್ಯದ ಬೆಳಕಿನಲ್ಲಿ ಹೀಗೆ ಬರೆಯುತ್ತಾರೆ “ಅಶ್ವಮೇಧ ಯಜ್ಞವು ರಾಷ್ಟ್ರದ, ದೇಶದ ಅಥವ ಒಂದು ಸಾಮ್ರಾಜ್ಯದ ವೈಭವ, ಸುಖ – ನೆಮ್ಮದಿ ಹಾಗು ಸಮೃದ್ಧಿಗೆ ಅರ್ಪಿಸಲಾಗುತ್ತದೆ.
ಗೋಮೇಧ ಯಜ್ಞ ಎಂದರೆ ನಮ್ಮ ಆಹಾರವನ್ನು ಶುಚಿಯಾಗಿಡಲಿ ಅಥವ ನಮ್ಮ ಇಂದ್ರಿಯಗಳನ್ನು ಹಿಡಿತದಲ್ಲಿಡಲು / ಸ್ಥಿತ ಪ್ರಜ್ಞರಾಗಲು ಅಥವ ಆಹಾರವನ್ನು ಶುಚಿಮಾಡಲು ಅಥವ ಸೂರ್ಯನ ಕಿರಣಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಅಥವ ಭೂಮಿಯನ್ನು ಮಲಿನತೆಯಿಂದ ಕಾಪಾಡಿಕೊಳ್ಳುವುದು. ಗೋ ಪದದ ಇನ್ನೊಂದು ಅರ್ಥ ಭೂಮಿ ಎಂದು ಹಾಗು ಗೋವಿನಿಂದ ಸ್ಥಿರತೆಯನ್ನು ಪಡೆಯುವ ಈ ಭೂಮಿಯನ್ನು, ಗೋವಿನಿಂದಲೇ ಶುಚಿಯಾಗಿಡಲು ಮಾಡುವ ಯಜ್ಞವೇ ಗೋಮೇಧ ಯಜ್ಞ.

ಅಜ ಎಂದರೆ ಧಾನ್ಯಗಳು. ಅಜಮೇಧ ಯಜ್ಞ ಎಂದರೆ ಕೃಷಿ ಉತ್ಪಾದನೆಯನ್ನು ಅಭಿವೃದ್ಧಿಗೊಳಿಸುವ ವಿಧಾನ. ಇದರಲ್ಲಿ ವಿವಿಧ ಧಾನ್ಯಗಳ ಬಳಕೆ ಮಾಡಲಾಗುತ್ತದೆ (ಶಾಂತಿ ಪರ್ವ- ೩೩೭.೪-೫).

ನರಮೇಧ/ನೃಮೇಧ ಯಜ್ಞ ಎಂದರೆ ವ್ಯಕ್ತಿ ಸತ್ತ ನಂತರ ದೇಹವನ್ನು ವೇದಗಳ ವಿಧಿ – ವಿಧಾನದ ಪ್ರಕಾರ ಅಂತ್ಯಸಂಸ್ಕಾರ ಮಾಡುವುದು. ಈ ಪುರುಷಮೇಧ ಯಜ್ಞಗಳಲ್ಲಿ ಅದು ಮಾತ್ರವಲ್ಲದೆ ಹಲವು ಜನರ ತಂಡಗಳನ್ನು ಶ್ರಮಭರಿತರಾಗುವಂತೆ, ದುಡಿಯುವತ್ತ, ದೇಶದ ಪ್ರಗತಿಯತ್ತ, ರಾಷ್ಟ್ರ ರಕ್ಷಣೆಯತ್ತ, ಉತ್ಪಾದಕತೆಯತ್ತ, ಇತ್ಯಾದಿಯಾಗಿ ಒಗ್ಗೂಡಿಸಲು ಮಾಡುವ ಪ್ರಕ್ರಿಯೆಯೂ ಸೇರಿರುತ್ತದೆ. ಪಿತೃಮೇಧದಲ್ಲಿ ಉತ್ತರ ಕ್ರಿಯಾ ಕರ್ಮದ ನಂತರ ಮಕ್ಕಳು ಆ ಆತ್ಮದ ದೈವೀಕಾಂಶವನ್ನು ಪಿತೃ ಸ್ವರೂಪದಲ್ಲಿ ಉಳಿಸಿಕೊಂಡು ಅಗ್ನಿಶ್ವಾತ್ಥಾ-ಬರ್ಹಿಷಾದಿಗಳಲ್ಲಿ ಅಗ್ನಿಯಲ್ಲಿ ಸ್ವಧಾ ಮುಖೇನ ಉಪಾಸನೆ ಗೈದು ತಮ್ಮ ಶ್ರೇಯೋಭಿಲಾಷೆನ್ನು ಪಡೆಯುವ ಶ್ರೇಷ್ಠ ಯಜ್ಞ ಪ್ರಕ್ರಿಯೆ.

ಪಂಚತಂತ್ರದಲ್ಲಿ ವಿಷ್ಣುಶರ್ಮನು ಸ್ಪಷ್ಟವಾಗಿ ಹೇಳಿದ್ದಾನೆ – ಯಜ್ಞದಲ್ಲಿ ಪಶು ಹಿಂಸೆ ಮಾಡುವವರು ವೇದವನ್ನರಿಯದ ಮೂರ್ಖರು. ಪಶು ಹತ್ಯೆಯೇ ಸ್ವರ್ಗಕ್ಕೆ ಹೋಗಲು ರಹದಾರಿಯಾದರೆ, ನರಕಕ್ಕೆ ಹೋಗಲು ಏನು ಮಾಡಬೇಕು? ಹಾಗೆಯೇ ಮಹಾಭಾರತದ ಶಾಂತಿ ಪರ್ವದಲ್ಲಿ (೨೬೩.೬, ೨೬೫.೯) ಯಜ್ಞದಲ್ಲಿ ಮತ್ಸ್ಯ, ಮದಿರ, ಮಾಂಸಗಳನ್ನು ಬಳಸಬೇಕೆನ್ನುವವರು ಪಾಖಂಡಿಗಳು, ನಾಸ್ತಿಕರು, ಶಾಸ್ತ್ರಾರ್ಥ ತಿಳಿಯದವರು ಎಂದಿದೆ.


ಭಾಗ – ೩            ವೇದಗಳಲ್ಲಿ ಗೋಮಾಂಸ ಸೇವನೆ ಇಲ್ಲ.
ವೇದಗಳು ಪ್ರಾಣಿಸಂಹಾರವನ್ನು ವಿರೋಧಿಸುತ್ತದೆ, ಅದರಲ್ಲಿಯೂ ಗೋ ಸಂಹಾರವನ್ನು ತೀವ್ರವಾಗಿ ವಿರೋಧಿಸುವುದಲ್ಲದೆ, ಗೋಸಂಹಾರವನ್ನು ನಿಷೇಧಿಸಿದೆ.

ಯಜುರ್ವೇದ ೧೩.೪೯
ಘೃತಂ ದುಹಾನಾಮದಿತಿಂ ಜನಾಯಾಗ್ನೇ ಮಾ ಹಿಂಸೀಃ ||
ಶೇಷ್ಠತ್ವದ ಪ್ರತೀಕವಾಗಿರುವಂತಹಾ, ರಕ್ಷಣೆಗೆ ಅರ್ಹರಾಗಿರುವಂತಹ ಹಸು ಹಾಗು ಎತ್ತುಗಳನ್ನು ಹಿಂಸಿಸಬೇಡಿ, ಕೊಲ್ಲಬೇಡಿ.

ಋಗ್ವೇದ ೭.೫೬.೧೭
ಆರೇ ಗೋಹಾ ನೃಹಾ ವಧೋ ವೋ ಅಸ್ತು ||
ಋಗ್ವೇದದಲ್ಲಂತೂ ಗೋ ಹತ್ಯೆಯನ್ನು ಮಾನವಹತ್ಯೆಗೆ ಸಮನಾದ ಅಪರಾಧವೆಂದು ಘೋಷಿಸಲ್ಪಟ್ಟಿದೆ. ಇಂತಹ ಹೀನ ಕೃತ್ಯ ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಹೇಳುತ್ತದೆ.

ಋಗ್ವೇದ ೧.೧೬೪.೪೦, ಅಥರ್ವ ವೇದ೭.೭೩.೧೧, ೯.೧೦.೨೦
ಸೂಯವಸಾದ್ ಭಗವತೀ ಹಿ ಭೂಯಾ ಅಥೋ ವಯಂ ಭಗವಂತಃ ಸ್ಯಾಮ
ಅದ್ಧಿ ತರ್ಣಮಘ್ನ್ಯೇ ವಿಶ್ವದಾನೀಂ ಪಿಬ ಶುದ್ಧಮುದಕಮಾಚರಂತೀ ||
ಪಾವಿತ್ರ್ಯತೆ, ಜ್ಞಾನ ಹಾಗು ಐಶ್ವರ್ಯವನ್ನು ಏತೇಚ್ಛವಾಗಿ ಪಡೆಯಲು ಅಘ್ನ್ಯಾ ಗೌ– ಅಂದರೆ ಹಸುಗಳನ್ನು ಕೊಲ್ಲದೆ ಅವುಗಳಿಗೆ ಹಸಿ ಹುಲ್ಲನ್ನು ಹಾಗು ಶುದ್ಧ ನೀರನ್ನು ನೀಡಿ ಅವುಗಳನ್ನು ಆರೋಗ್ಯಕರ ರೀತಿಯಲ್ಲಿ ರಕ್ಷಿಸತಕ್ಕದ್ದು. ವೇದಗಳ ಶಬ್ದಕೋಶದಲ್ಲಿ ಅಥವ ನಿಘಂಟಿನಲ್ಲಿ ಗೋ ಅಥವ ಹಸುವಿಗೆ ಸಮಾನಾರ್ಥಕವಾಗಿ ಅಘ್ನ್ಯಾ, ಅಹಿ ಮತ್ತು ಅದಿತಿ ಎಂದು ಬಳಸಲಾಗಿದೆ. ಯಾವುದನ್ನು ಕೊಲ್ಲಬಾರದೊ ಅದನ್ನು ಅಘ್ನ್ಯಾ ಎನ್ನುತ್ತಾರೆ. ಯಾವುದನ್ನು ಸಂಹಾರಮಾಡಬಾರದೊ ಅದನ್ನು ಅಹಿ ಎನ್ನುತ್ತಾರೆ. ಯಾವುದನ್ನು ತುಂಡುತುಂಡಾಗಿ ಕತ್ತರಿಸಬಾರದೊ ಅದನ್ನು ಅದಿತಿ ಎನ್ನುತ್ತಾರೆ. ಈ ಮೂರು ಪದಗಳು ಹಸುಗಳನ್ನು ಯಾವುದೇ ರೀತಿಯಲ್ಲಿ ಹಿಂಸಿಸುವಂತಿಲ್ಲ ಎಂದು ಅರ್ಥೈಸುತ್ತದೆ. ಹಸುಗಳಿಗೆ ಸಂಬಂಧಿಸಿದಂತೆ ವೇದಗಳಲ್ಲಿ ಈ ಪದಗಳು ಎತೇಚ್ಛವಾಗಿ ಬಳಸಲಾಗಿದೆ.

ಋಗ್ವೇದ ೧.೧೬೪.೨೭
ಅಘ್ನ್ಯೇಯಂ ಸಾ ವರ್ದ್ಧತಾಂ ಮಹತೇ ಸೌಭಗಾಯ ||
ಅಘ್ನ್ಯಾ = ಗೋವು - ನಮಗಾಗಿ ಆರೋಗ್ಯ, ಐಶ್ವರ್ಯ ಇತ್ಯಾದಿ ಮಹತ್ತರವಾದ ಸೌಭಾಗ್ಯವನ್ನು ತರುವುದು.

ಋಗ್ವೇದ ೫.೮೩.೮
ಸುಪ್ರಪಾಣಂ ಭವತ್ವಘ್ನ್ಯಾಭ್ಯಃ ||
ಆಘ್ನ್ಯಾ = ಗೋವುಗಳಿಗೆ ಶುದ್ಧ ನೀರನ್ನು ಪೂರೈಸಲು ಅತ್ಯುತ್ತಮ ಸೌಲಭ್ಯವನ್ನು ಕಲ್ಪಿಸಬೇಕು.

ಋಗ್ವೇದ ೧೦.೮೭.೧೬
ಯಃ ಪೌರುಷೇಯೇಣ ಕ್ರವಿಷಾ ಸಮಂಕ್ತೇ ಯೋ ಪಶುನಾ ಯಾತುಧಾನಃ
ಯೋ ಅಘ್ನ್ಯಾಯಾ ಭರತಿ ಕ್ಷೀರಮಗ್ನೇ ತೇಷಾಂ ಶೀರ್ಷಾಣಿ ಹರಸಾಪಿ ವೃಶ್ಚ ||
ನ್ಯಾಯಶಾಸ್ತ್ರದ ದಂಡಸಂಹಿತೆಯ ವ್ಯಾಖ್ಯಾನದಂತೆ ಯಾರು ಮಾನವರನ್ನು, ಕುದುರೆಗಳನ್ನು ಅಥವ ಇತರೆ ಪ್ರಾಣಿಗಳ ಮಾಂಸವನ್ನು ಆಹಾರಕ್ಕೆಂದು ಬಳಸುತ್ತಾರೊ ಹಾಗು ಹಾಲು ಕೊಡುವ ಆಜ್ಞ ಹಸುಗಳನ್ನು ನಾಶ ಪಡಿಸುತ್ತಾರೊ ಅವರನ್ನು ತೀವ್ರವಾಗಿ ಶಿಕ್ಷಿಸಬೇಕು.

ಋಗ್ವೇದ ೮.೧೦೧.೧೫
ಮಾ ಗಾಮನಾಂಗಾಮದಿತಿಂ ವಧಿಷ್ಟ ||
ಗೋವುಗಳನ್ನು ಕೊಲ್ಲಬೇಡಿ. ಗೋವು ಬಹಳಾ ಮುಗ್ಧ ಪ್ರಾಣಿ. ಅವುಗಳನ್ನು ತುಂಡುತುಂಡಾಗಿ ಕತ್ತರಿಸುವ ಹೇಯ ಕೃತ್ಯ ಮಾಡಬೇಡಿ. (ನೀತಿಶಾಸ್ತ್ರ ವ್ಯಾಖ್ಯಾನ)

ಯಜುರ್ವೇದ ೧೨.೭೩
ವಿಮುಚ್ಯಧ್ವಮಘ್ನ್ಯಾ ದೇವಯಾನಾ ಅಗನ್ಮ || ಅಘ್ನ್ಯಾ - ಹಸುಗಳು ಹಾಗು ಎತ್ತುಗಳು ಸಮೃದ್ಧಿತರುತ್ತದೆ.

ಯಜುರ್ವೇದ ೩೦,೧೮
ಅಂತಕಾಯ ಗೋಘಾತಂ - ಗೋವುಗಳನ್ನು ಕೊಲ್ಲುವವರನ್ನು ನಾಶ ಮಾಡು. (ರಾಜ್ಯಶಾಸ್ತ್ರದ ರಾಜನೀತಿ ವ್ಯಾಖ್ಯಾನ)

ಅಥರ್ವ ವೇದ ೧.೧೬.೪
ಯದಿ ನೋ ಗಾಂ ಹಂಸಿ ಯದ್ಯಶ್ವಮ್ ಯದಿ ಪೂರುಷಂ
ತಂ ತ್ವಾ ಸೀಸೇನ ವಿಧ್ಯಾಮೋ ಯಥಾ ನೋ ಸೋ ಅವೀರಹಾ ||
ಯಾರಾದರೊ ಹಸುಗಳನ್ನು, ಕುದುರೆಗಳನ್ನು ಅಥವ ಮನುಷ್ಯರನ್ನು ನಾಶಪಡಿಸಿದರೆ ಅವರ ವೀರತ್ವವನ್ನು ಸೀಸವಿಧ್ಯೆಯಿಂದ ಮಟ್ಟಹಾಕಬೇಕು. (ನ್ಯಾಯಶಾಸ್ತ್ರದ ದಂಡನೀತಿ ವ್ಯಾಖ್ಯಾನ)

ಅಥರ್ವ ವೇದ ೩.೩೦.೧
ವತ್ಸಂ ಜಾತಮಿವಾಘ್ನ್ಯಾ – ಎಂದಿಗೂ ಕೊಲ್ಲಬಾರದಂತಹ ಗೋವು ಹೇಗೆ ತನ್ನ ಕರುವನ್ನು ಪ್ರೀತಿಸುತ್ತದೋ ಹಾಗೆಯೇ ಒಬ್ಬರನ್ನೊಬ್ಬರು ಪ್ರೀತಿಸಿ.

ಅಥರ್ವ ವೇದ ೧೧.೧.೩೪
ಧೇನುಂ ಸದನಂ ರಯೀಣಾಮ್ - ಹಸುವು ಎಲ್ಲಾ ಐಶ್ವರ್ಯಗಳ ಉಗಮಸ್ಥಾನ.
ಋಗ್ವೇದದ, ಆರನೆಯ ಮಂಡಲದ, ೨೮ನೆಯ ಎಲ್ಲಾ ಸೂಕ್ತಗಳು ಗೋವಿನ ಕೀರ್ತಿ ಮಹಿಮೆಯನ್ನು ಹಾಡಿಹೊಗಳುತ್ತದೆ. ಅದಕ್ಕೆ ಸಂಸ್ಕೃತದ ಲೌಕಿಕಾರ್ಥ ನೀಡಲಾಗಿದೆ:

೧. ಆ ಗಾವೋ ಅಗ್ಮನ್ನುತ ಭದ್ರಮಕ್ರನ್ತ್ಸೀದಂತು - ಹಸುಗಳನ್ನು ಆರೋಗ್ಯಕರ ರೀತಿಯಲ್ಲಿದಯೇ, ಅವುಗಳು ತೊಂದರೆಗಳಿಂದ ದೂರವಿದಯೇ, ಅವುಗಳು ಸುಭದ್ರವಾಗಿದಯೇ ಎಂದು ನೋಡಿಕೊಳ್ಳುತ್ತಿರಬೇಕು.

೨. ಭೂಯೋಭೂಯೋ ರಯಿಮಿದಸ್ಯ ವರ್ಧಯನ್ನಭಿನ್ನೇ - ಹಸುಗಳ ಬಗ್ಗೆ ಕಾಳಜಿ ವಹಿಸುವವರಿಗೆ ದೇವರ ಕೃಪಾಕಟಾಕ್ಷವಿರುತ್ತದೆ.

೩. ನ ತಾ ನಶಂತಿ ನ ದಭಾತಿ ತಸ್ಕರೋ ನಾಸಾಮಾಮಿತ್ರೋ ವ್ಯಥಿರಾ ದಧರ್ಷತಿ - ಶತ್ರುಗಳು ಸಹ ಹಸುಗಳ ಮೇಲೆ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸಬಾರದು.

೪. ನ ತಾ ಅರ್ವಾ ರೇಣುಕಕಾಟೋ ಅಶ್ನುತೇ ನ ಸಂಸ್ಕೃತ್ರಮುಪ ಯಂತಿ ತಾ ಅಭಿ - ಯಾರೊಬ್ಬರು ಹಸುಗಳನ್ನು ಹತ್ಯೆಮಾಡಬಾರದು.

೫. ಗಾವೋ ಭಗೋ ಗಾವ ಇಂದ್ರೋ ಮೇ ಅಚ್ಛನ್ - ಹಸುವು ಸನ್ಮಾರ್ಗದರ್ಶಕ ಹಾಗು ಬಲಪ್ರದಾಯಕ.

೬. ಯೂಯಂ ಗಾವೋ ಮೇದಯಥಾ - ಹಸುಗಳು ಖುಷಿಯಾಗಿ ಹಾಗು ಆರೋಗ್ಯಕರ ರೀತಿಯಲ್ಲಿ ಇದ್ದಲ್ಲಿ ಗಂಡಸರು ಹಾಗು ಹೆಂಗಸರಿಗೆ ಬಾಧಿಸುವ ರೋಗ ರುಜಿನಗಳಿಂದ ದೂರವಿದ್ದು ಅಭಿವೃದ್ಧಿ ಹೊಂದುತ್ತಾರೆ.

೭. ಮಾ ವಃ ಸ್ತೇನ ಈಶತ ಮಾಘಶಂಸಃ - ಹಸುವು ಹಸಿ ಹುಲ್ಲನ್ನು ಹಾಗು ಶುದ್ಧ ನೀರನ್ನು ಸೇವಿಸಲು ಅವುಗಳನ್ನು ಯಾರು ಕೊಲ್ಲದಿರಲಿ, ಅವು ನಮಗೆ ಸಮೃದ್ಧಿಯನ್ನು ನೀಡಲಿ.

ವೇದಗಳಲ್ಲಿ ಕೇವಲ ಹಸುಗಳನಲ್ಲದೆ ಸಕಲ ಜೀವಜಂತುಗಳನ್ನು ಉತ್ತಮವಾಗಿ ಪ್ರಶಂಸಿಸಲಾಗಿದೆ ಹಾಗು ಪ್ರಾಣಿ ಹಿಂಸೆಯನ್ನು ಖಂಡಿಸಲಾಗಿದೆ ಎಂದು ಸಾಬೀತು ಪಡಿಸಲು ಯಾರಿಗಾದರೂ ಇದಕ್ಕಿಂತ ಹೆಚ್ಚಿನ ಸಾಕ್ಷ್ಯಾಧಾರಗಳನ್ನು ಬೇಕೇ? ಯಾವುದೇ ಅಮಾನವೀಯ ಕೃತ್ಯಗಳಿಗೆ ವೇದಗಳು ಸಂಪೂರ್ಣ ವಿರೋಧ ವ್ಯಕ್ತಪಡಿಸುತ್ತದೆ ಎಂಬುದನ್ನು ಈ ಎಲ್ಲಾ ಪ್ರಮಾಣಗಳು ಧೃಢಪಡಿಸುತ್ತದೆ. ಅದರಲ್ಲೂ ಗೋಮಾಂಸ ಭಕ್ಷಣೆ ಮತ್ತು ಗೋಹತ್ಯೆ ಬಗ್ಗೆ ವೇದಗಳ ಪೂರ್ಣ ವಿರೋಧವಿದೆ. ಆದ್ದರಿಂದ ವಿಧ್ಯಾವಂತ ಓದುಗರೆ, ವೇದಗಳಲ್ಲಿ ಪ್ರಾಣಿ ಹಿಂಸೆ ಇದಯೇ? ಅಥವ ಇಲ್ಲವೇ? ಎಂಬುದನ್ನು ನೀವೇ ನಿರ್ಧರಿಸಿ.

ಭಾಗ – ೪                      ವಿತಂಡವಾದಿಗಳ ಆಪಾದನೆಗಳಿಗೆ ಸತ್ಯಾಂಶದ ಉತ್ತರ

ಈ ರೀತಿಯ ಅಹಿಂಸಾ ಪ್ರಧಾನ ವಿಚಾರಗಳು ಪ್ರಕಟವಾದ ನಂತರ, ವೇದಗಳ ಪಾವಿತ್ರ್ಯತೆಯನ್ನು ಹಾಗು ನಮ್ಮ ಪುರಾತನ ಸಂಸ್ಕೃತಿಯನ್ನು ಸಹಿಸದ ಕೆಲವರು ನಾನಾ ಕಡೆಗಳಿಂದ ತೀವ್ರವಾದ ಪ್ರತಿರೋಧ ವ್ಯಕ್ತ ಪಡಿಸಿದ್ದಾರೆ. ಇದರಲ್ಲಿ ಮುಖ್ಯವಾಗಿ ಋಗ್ವೇದದ ೨ ಮಂತ್ರಗಳು, ಮನುಸ್ಮೃತಿಯ ಕೆಲವು ಶ್ಲೋಕಗಳು ಹಾಗು ಇತರೆ ಮೂಲಗಳು. ಅದಕ್ಕಾಗಿ ಈ ಕೆಳಗಂಡಂತೆ ಹೆಚ್ಚಿನೆ ವಿವರಣೆ ನೀಡಲಾಗಿದೆ.

೧. ಈ ಲೇಖನವು ಮನುಸ್ಮೃತಿಯ ಆಧಾರವನ್ನು ಉಲ್ಲೇಖಿಸಿದೆ. ಅದರಂತೆ ಯಾರಾದರು ಕೊಲ್ಲಲು ಅನುಮತಿ ಕೊಟ್ಟರೂ ಅವರನ್ನು ಕೊಲೆಗೆಡುಕರೆಂದೆ ಪರಿಗಣಿಸಲಾಗುವುದು. ಆದ್ದರಿಂದ ಈ ಹಿಂದೆಯೇ ಹೇಳಿದಂತೆ ಎಷ್ಟೊ ಶ್ಲೋಕಗಳು ಹಾಗು ವಿಷಯಗಳನ್ನು ಹೊಸದಾಗಿ ಸೇರಿಸುವ ಪ್ರಯತ್ನ ಮಾಡಿದ್ದಾರೆ. ಹಾಗೆಯೇ ಈ ನಿಮ್ಮ ಸಂಶಯವು ಕಲಬೆರಕೆ ಮನುಸ್ಮೃತಿಯನ್ನೋ ಅಥವ ತಪ್ಪು ವ್ಯಾಖ್ಯಾನ ಮಾಡಿದಂತಹ ಕೃತಿಯಿಂದಲೋ ಬಂದಂತಾಗಿದೆ. ಮೊಟ್ಟಮೊದಲಾಗಿ ಮನುಸ್ಮೃತಿಯಲ್ಲಿ ಪ್ರಾಣಿಹಿಂಸೆಯನ್ನು ತೀವ್ರವಾಗಿ ವಿರೋಧಿಸಲಾಗಿದೆ. http://www.vedicbooks.com  ನಲ್ಲಿ ಸಿಗುವಂತಹ ಡಾ. ಸುರೇಂದ್ರ ಕುಮಾರ್ ರವರ ಮನುಸ್ಮೃತಿಯನ್ನು ಓದಲು ಶಿಫ಼ಾರಸ್ಸು ಮಾಡುತ್ತೇವೆ.

೨.ಇಲ್ಲಿ ಕೆಲವರು ಗೋಮಾಂಸ ಸೇವನೆಯು ವೇದಗಳಲ್ಲಿ ಅಥವ ಸನಾತನ ಪಠ್ಯಗಳಲ್ಲಿ ಉದಾಹರಣೆಗಳನ್ನು ತೋರಿಸಲೇಬೇಕೆಂಬ ಹುಚ್ಚು ಹಠವಾದಿಗಳು ಮಾನ್ಸವನ್ನು ಮಾಂಸ ಎಂದು ಅರ್ಥೈಸಿಕೊಂಡಿದ್ದಾರೆ. ನೈಜತೆಯಲ್ಲಿ ಮಾನ್ಸ ಎಂಬ ಪದವು ಮೆತ್ತಗಿರುವ ತಿರುಳು ಎಂದರ್ಥ. ಈ ಮೆತ್ತಗಿರುವ ತಿರುಳು ಹಣ್ಣಿನದ್ದಾಗಿರಬಹುದು, ತರಕಾರಿಯದಾಗಿರಬಹುದು ಅಥವ ಮಾಂಸದಾದರೊ ಆಗಿರಬಹುದು. ವೇದಗಳಲ್ಲಿ ಪ್ರಾಣಿ ಹಿಂಸೆಯನ್ನು ಅಷ್ಟು ತೀವ್ರವಾಗಿ ವಿರೋಧಿಸಿರುವುದರಿಂದ, ಈ ಮಾನ್ಸ ಎಂಬ ಪದಾದ ಅರ್ಥ ಖಂಡಿತ ಮಾಂಸವಾಗಿರಲು ಸಾಧ್ಯವೇ ಇಲ್ಲ. ಇನ್ನು ಕೆಲವು ಕಡೆ ಮಾಂಸಃ ಎಂದರೆ ಮಾಂ + ಸಃ ಅಂದರೆ ನಾನು ಹಾಗೂ ನನ್ನ ಜೊತೆಯಲ್ಲಿರುವ ಸಮಾಜ ಎಂಬಿತ್ಯಾದಿ ಸಂದರ್ಭೋಚಿತ ವ್ಯಾಖ್ಯಾನವನ್ನು ಅಕ್ಷಸೂತ್ರದಂತೆ ಹೊಂದುತ್ತದೆ.

೩. ಇನ್ನು ಕೆಲವರು ಸತ್ಯಕ್ಕೆ ದೂರವಿರುವಂತಹ, ಪ್ರಮಾಣವಲ್ಲದ ಪಠ್ಯಗಳನ್ನೇ ಆಧಾರವಾಗಿಟ್ಟುಕೊಂಡು ಅದೇ ಉತ್ತಮ ಸಾಕ್ಷಿಗಳೆಂದು ಬಣ್ಣಿಸಿದ್ದಾರೆ. ಇವರು ಮಾಡುವಂತಹ ಕೆಲಸ ಬಹಳಾ ಸುಲಭ. ಯಾವುದಾದರೋ ಸಂಸ್ಕೃತದಲ್ಲಿ ಬರೆದಂತಹ ಪಠ್ಯಗಳನ್ನೊ, ವಾಕ್ಯಗಳನ್ನೊ ಧರ್ಮವೆಂದೇ ತಿಳಿದು ಅವರಿಗೆ ಬೇಕಾದ ರೀತಿಯಲ್ಲಿ ಭಾಷಾಂತರಿಸಿ ನಮ್ಮ ಈ ಸನಾತನ ಧರ್ಮವೇ ತಪ್ಪೆಂದು ಧೃಡಪಡಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗೆಯೇ ನಮ್ಮನ್ನು ನಮ್ಮ ಶಾಲಾ ಪಠ್ಯಪುಸ್ತಕಗಳಲ್ಲಿ ತಿರುಚಿದ ಸಾಕ್ಷಾಧಾರಗಳನ್ನು ತೋರಿಸಿ ಮೂರ್ಖರನ್ನಾಗಿ ಮಾಡುತಿದ್ದಾರೆ.

೪. ಇವರು ಹೇಳುವಂತಹಾ ೨ ಋಗ್ವೇದದ ಮಂತ್ರಗಳನ್ನು ವಿಶ್ಲೇಷಿಸೋಣ;

೧. ಋಗ್ವೇದ ೧೦.೮೫.೧೩
ಋಷಿ – ಸೂರ್ಯಾಸಾವಿತ್ರೀ, ದೇವತಾ – ಸೂರ್ಯಾವಿವಾಹಃ, ಛಂದಃ – ವಿರಾಡನುಷ್ಟುಪ್, ಸ್ವರ - ಗಾಂಧಾರ
ಸೂರ್ಯಾಯಾ ವಹತುಃ ಪ್ರಾಗಾತ್ಸವಿತಾ ಯಮವಾಸೃಜತ್ |
ಅಘಾನು ಹನ್ಯಂತೇ ಗಾವೋಽರ್ಜುನ್ಯೋಃ ಪರ್ಯುಹ್ಯತೇ ||

ಆಪಾದನೆ:- ಮಗಳ ಮದುವೆಯ ಸಮಾರಂಭದಲ್ಲಿ ಎತ್ತುಗಳನ್ನು ಹಾಗು ಹಸುಗಳನ್ನು ಬಲಿಕೊಡುತ್ತಾರೆ.
ಸತ್ಯಾಂಶ:- ಋಗ್ವೇದದ ಈ ಮಂತ್ರದಲ್ಲಿ “ಸೂರ್ಯನಕಿರಣವು ಚಳಿಗಾಲದಲ್ಲಿ ಬಲಹೀನಗೊಂಡು, ವಸಂತ ಋತುವಿನಲ್ಲಿ ಮತ್ತೆ ಬಲಶಾಲಿಯಾಗುತ್ತದೆ” ಎಂದು.

ಹಸುವನ್ನು ಕೂಡ ಗೋ ಎಂದು ಕರೆಯಲಾಗುವುದು. ಆದ್ದರಿಂದ ಸೂರ್ಯನ ಕಿರಣಗಳಿಗೆ ಬದಲಾಗಿ ಗೋವು ಎಂದೇ ಮಂತ್ರದಲ್ಲಿ ಭಾಷಾಂತರಿಸಿದ್ದಾರೆ. ಈ ಮಂತ್ರದಲ್ಲಿ ಬಲಹೀನ ಎಂಬುದಕ್ಕೆ ಸಂಸ್ಕೃತದಲ್ಲಿ ಹನ್ಯತೆ ಎಂಬ ಪದ ಉಪಯೋಗಿಸಲಾಗಿದೆ. ಇದರ ಇನ್ನೊಂದರ್ಥ ಕೊಲ್ಲುವುದು ಎಂದು. ಕೆಲವರು ಬೇಕೆಂತಲೆ ಈ ಮಂತ್ರವನ್ನು ಸಂಪೂರ್ಣವಾಗಿ ಹೇಳದೆ, ಅವರಿಗೆ ಬೇಕಾದ ಹಾಗೆ ಅರ್ಥೈಸಿಕೊಳ್ಳುತ್ತಾರೆ. ಇಂತಹ ಅಜ್ಞಾನಿ ಮೋಸಗಾರರಿಗೆ ಕೇಳುವುದಿಷ್ಟೇ, ಚಳಿಗಾಲದಲ್ಲಿ ಕೊಂದಂತಹ ಹಸುವು ಪುನಃ ವಸಂತ ಋತುವಿನಲ್ಲಿ ಬಲಶಾಲಿಯಾಗಲು ಹೇಗೆ ತಾನೆ ಸಾಧ್ಯ?

೨. ಋಗ್ವೇದ ೬.೧೭.೧
ಋಷಿ - ಭರದ್ವಾಜೋ ಬಾರ್ಹಸ್ಪತ್ಯಃ, ದೇವತಾ – ಇಂದ್ರಃ, ಛಂದಃ – ತ್ರಿಷ್ಟುಪ್, ಸ್ವರ – ಧೈವತಃ
ಪಿಬಾ ಸೋಮಮಭಿ ಯಮುಗ್ರ ತರ್ದ ಊರ್ವಂ ಗವ್ಯಂ ಮಹಿ ಗೃಣಾನ ಇಂದ್ರ |
ವಿ ಯೋ ಧೃಷ್ಣೋ ವಧಿಷೋ ವಜ್ರಹಸ್ತ ವಿಶ್ವಾ ವೃತ್ರಮಮಿತ್ರಿಯಾ ಶವೋಭಿಃ ||

ಆಪಾದನೆ:- ಇಂದ್ರನು ಹಸು, ಕುರಿ, ಕುದುರೆ ಹಾಗು ಎಮ್ಮೆಗಳ ಮಾಂಸವನ್ನು ತಿನ್ನುತ್ತಿದ್ದ.
ಸತ್ಯಾಂಶ:- ಋಗ್ವೇದದ ಈ ಮಂತ್ರವು “ಹೇಗೆ ಮರದ ಸೌದೆಯು ಯಜ್ಞದ ಬೆಂಕಿಯನ್ನು ಹೆಚ್ಚಿಸುತ್ತದೊ ಹಾಗೆಯೇ ಉತ್ತಮ ವಿದ್ವಾಂಸರು ಪ್ರಪಂಚವನ್ನು ಪ್ರಾಕಾಶಿಸುತ್ತಾರೆ” ಎಂದು ಹೇಳುತ್ತದೆ.

ಈ ಮಂತ್ರದಲ್ಲಿ ಅದು ಹೇಗೆ ಇಂದ್ರನು, ಹಸು, ಕುರಿ, ಕುದುರೆ ಹಾಗು ಎಮ್ಮೆಗಳು ಬಂದವೊ ಇವರ ದಡ್ಡತಲೆಗಳಿಗೆ ಮಾತ್ರ ತಿಳಿದಿರುವಂತದ್ದು.

೫. ಆಪಾದನೆ:- ಯಜುರ್ವೇದ ೨೪.೨೯ “ಹಸ್ತಿನಾ ಆಲಂಭತೇ” ಎಂದು ಆನೆಯನ್ನು ಆಹುತಿ ನೀಡುವುದಾಗಿ ಹೇಳಿದೆಯಲ್ಲ?
ಸತ್ಯಾಂಶ:- ಲಭ್ ಧಾತುವಿನಿಂದ ಉತ್ಪನ್ನ ಆಲಂಭ ಶಬ್ದವು ಆಹುತಿ ಅಥವಾ ಹತ್ಯೆ ಎಂದು ಯಾರು ನಿಮಗೆ ಹೇಳಿದರು? ಲಭ ಎಂದರೆ ಗ್ರಹಿಸುವುದು. ಇಲ್ಲಿ ಹಸ್ತಿನಾ ಎಂದರೆ ಆನೆ ಎನ್ನುವ ಪ್ರಾಣಿಯ ವ್ಯಾಪ್ತಿಯನ್ನು ಮೀರಿದ ಬೇರೆಯೇ ಅರ್ಥ ಉಳ್ಳದ್ದು. ಹೋಗಲಿ ಪಾಮರರು ನಾವು ಪಾರಮಾರ್ಥಿಕ ಬೇಡವೆಂದರೆ ರಾಜನು ತನ್ನ ಗಜಸೇನಾ ಬಲವೃದ್ಧಿಗೆ ಆನೆಗಳನ್ನು ಗ್ರಹಿಸಬೇಕು ಎಂದು ರಾಜ್ಯಶಾಸ್ತ್ರ ವ್ಯಾಖ್ಯಾನ. ಇದರಲ್ಲಿ ಹಿಂಸೆ ಎಲ್ಲಿದೆ? ಆಲಂಭ ಶಬ್ದವು ಬೇರೆ ಬೇರೆ ವಾಕ್ಯ ಪ್ರಯೋಗದಲ್ಲಿ ಕಂಡುಬರುತ್ತದೆ. ಮನುಸ್ಮೃತಿಯಲ್ಲಿ ಬ್ರಹ್ಮಚಾರಿಯು “ವರ್ಜಯೇತ್ ಸ್ತ್ರೀನಾಮ್ ಆಲಂಭಮ್” ಎಂದಿದೆ. ಆಲಂಭತೇ ಎನ್ನುವುದು ಕೊಲ್ಲುವುದೇ ಎಂದು ಪ್ರತಿಪಾದಿಸುವವರು ಪ್ರಾಯಶಃ ಪ್ರಾಣಿಭಕ್ಷಕರಾಗಿದ್ದು ತಮ್ಮನ್ನು ಸರ್ಮರ್ಥಿಸಿಕೊಳ್ಳಲು ವೇದಾರ್ಥವನ್ನೇ ತಿರುಚಿದ್ದಾರೆ.

೬. ಆಪಾದನೆ:- ಬ್ರಾಹ್ಮಣ ಹಾಗೂ ಶ್ರೌತ ಗ್ರಂಥಗಳಲ್ಲಿ ಯಜ್ಞದಲ್ಲಿ ಸಂಜ್ಞಾಪನಾ ಎಂದು ಹತ್ಯೆಯನ್ನು ಸೂಚಿಸಿದೆ.
ಸತ್ಯಾಂಶ:- ಅಥರ್ವವೇದ ೬.೧೦.೯೪-೯೫ ಇದರಲ್ಲಿ ಮನಸ್ಸು, ದೇಹ, ಹೃದಯಾದಿಗಳ ಸಂಜ್ಞಾಪನೆಯನ್ನು ಹೇಳಿದೆ. ಅಂದರೆ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಅರ್ಥವೇ? ಸಂಜ್ಞಾಪನಾ ಎಂದರೆ ಸಂಯೋಗ + ಪೋಷಣೆ ಎಂದರ್ಥ. ಈ ಮಂತ್ರ ಹೇಳುವುದೇನೆಂದರೆ ನಾವು ನಮ್ಮ ಮನಸ್ಸು, ದೇಹ ಮತ್ತು ಹೃದಯಗಳನ್ನು ಸದೃಢಗೊಳಿಸಿಕೊಂಡು ಎಲ್ಲವೂ ಒಟ್ಟಾಗಿ ಚಟುವಟಿಕೆ ಮಾಡಲು ಪೋಷಣೆ ಒದಗಿಸಿಕೊಳ್ಳಬೇಕು ಎಂಬ ಭಾವನೆ ಇದೆ. ಸಂಜ್ಞಾಪನಾ ಎಂದರೆ ತಿಳಿಸುವುದು ಎಂಬ ಅರ್ಥವೂ ಇದೆ.

೭.  ಆಪಾದನೆ:- ಯಜುರ್ವೇದ ೨೫.೩೪-೩೫ ಭೂಮಿ ಅಥವ ಹುಲ್ಲುಗಾವಲಲ್ಲಿದ್ದ ಸಾವಿರಾರು ಕಾಯವನ್ನು ಕುದಿಸಿ, ಮಾಂಸವ ರೋಸ್ಟ್ ಮಾಡಿ ಸುಟ್ಟು ಭಗವಂತನಿಗೆ ಅರ್ಪಿಸುವುದು. ಋಗ್ವೇದ ೧.೧೬೨.೧೧-೧೨ ಅಶ್ವಪಾಲಕರನ್ನು ಕರೆದು ಹೇಳು- ಅದರ ದುರ್ಗಂಧವನ್ನು ತೆಗೆದು, ಮಾಂಸ ಬಗೆದು, ಹಂಚಲಿಕ್ಕೆ ಕಾಯಿರಿ, ಪ್ರಧಾನರಿಂದ ಆಜ್ಞೆ ದೊರೆತೊಡನೆ ಹಂಚಿರಿ. ಇವುಗಳಿಂದ ಯಜ್ಞದಲ್ಲಿ ಅಶ್ವ ಹತ್ಯೆಯು ಸಿದ್ಧವಾಗುತ್ತದೆ.
ಸತ್ಯಾಂಶ:- ಇದು ವೇದವನ್ನು ಇಂಗ್ಲಿಷಿಗೆ ಭಾಷಾಂತರಿಸಿದ ಗ್ರಿಫಿತ್‌ನ ಕಪೋಲ ಕಲ್ಪಿತ ವಾಕ್ಯಗಳು. ಮೊದಲನೆಯ ಮಂತ್ರದಲ್ಲಿ ಅಶ್ವದ ಉಲ್ಲೇಖವೇ ಇಲ್ಲ. ಅದೊಂದು ಚಿಕಿತ್ಸಾ ಪ್ರಕ್ರಿಯೆ. ಏರಿದ ಜ್ವರವನ್ನು ಉಪಶಮನ ಗೈಯಲು ಬೇಕಾದ ಪರಿಹಾರೋಪಾಯಗಳನ್ನು ವೈದ್ಯನಿಗಾಗಿ ಹೇಳಲಾಗಿದೆಯೇ ಹೊರತು ಅಲ್ಲ್ಯಾವುದೇ ಪ್ರಾಣಿ ವಿಚಾರವೇ ಇಲ್ಲ. ಎರಡನೆಯ ಮಂತ್ರದಲ್ಲಿ ವಾಜಿನಮ್ ಎಂದರೆ ಕುದುರೆ ಮಾತ್ರವಲ್ಲದೆ ವೀರತ್ವ, ಶೂರತ್ವ, ಧೀರತ್ವ, ಖಗ, ಮನುಷ್ಯತ್ವ, ಯೋಧ, ಬಾಣ ಪ್ರಯೋಗ, ಪೌರುಷತ್ವ, ವೇಗ ಇತ್ಯಾದಿ ಹಲವು ಅರ್ಥ ಕೊಡುತ್ತದೆ. ಹಾಗಾಗಿ ವೇಗ, ವೀರ, ಶೂರತ್ವಕ್ಕೆ ಸರಿಸಾಟಿಯಾದ ಕುದುರೆಯನ್ನೂ ವಾಜಿನಮ್ ಎಂದರು. ನಿರುಕ್ತದ ಯಾವುದೇ ಅರ್ಥವನ್ನು ನೋಡಿದರೂ ಯಜ್ಞದಲ್ಲಿ ಅಶ್ವ ಹತ್ಯೆ ಎನ್ನುವ ಅಪಾರ್ಥವನ್ನು ಬಿಂಬಿಸುವುದೇ ಇಲ್ಲ.

ಎರಡನೆಯ ಮಂತ್ರದಲ್ಲಿ ಅದನ್ನು ಕುದುರೆ ಎಂದೇ ಗ್ರಹಿಸಿದರೆ ಅಲ್ಲಿ ಅಶ್ವವಧೆಯನ್ನು ಹತ್ತಿಕ್ಕಬೇಕು ಎಂಬ ಭಾವ ಬಿಂಬಿತವಾಗುತ್ತದೆಯೇ ಹೊರತು ಕೊಲ್ಲಲಿಕ್ಕಲ್ಲ.

೮. ಆಪಾದನೆ:- ಗೋಘ್ನ ಎಂದು ಗೋಹತ್ಯೆಯನ್ನು ವೇದದಲ್ಲಿ ಹೇಳಿದೆ. ಅತಿಥಿಗ್ವ/ಅತಿಥಿಘ್ನ – ಗೋಮಾಂಸವನ್ನು ಅತಿಥಿಗಳಿಗೆ ಉಣಬಡಿಸುವವ ಎಂದಿದೆ.
ಸತ್ಯಾಂಶ:- ಈ ಲೇಖನದ ಒಂದನೇ ಭಾಗದಲ್ಲಿ ಅಘ್ನ್ಯ ಹಾಗೂ ಅದಿತಿ ಎಂದರೆ ಕೊಲ್ಲಲರ್ಹವಲ್ಲದ್ದು ಎಂದು ಸಾಧಿಸಲಾಗಿದೆ. ಗೋನಾಶಕರಿಗೆ ನ್ಯಾಯಶಾಸ್ತ್ರವು ಕಠಿಣ ಸಜೆ ವಿಧಿಸಲು ಹೇಳಿದೆ. ಗಮ್ ಧಾತುವು ‘ಹೋಗುವುದು’ ಎಂಬ ಶಬ್ದವಾಗಿ ಪ್ರಯೋಗವಾಗುತ್ತದೆ. ಆದ್ದರಿಂದ ಗ್ರಹಗಳನ್ನೂ ಗೋ ಎಂದಿದೆ. ಅತಿಥಿಗ್ವ/ಅತಿಥಿಘ್ನ ಎಂದರೆ ಅತಿಥಿಗಳ ಹತ್ತಿರ ಹೋಗಿ ಅವರ ಕುಶಲೋಪರಿಯನ್ನು ವಿಚಾರಿಸುವವ.

ಗೋಘ್ನ ಎಂದರೆ ಹಲವು ಅರ್ಥಗಳನ್ನು ಬಿಂಬಿಸುತ್ತದೆ. ಗೋ + ಹನ್ = ಗೋವಿನ ಹತ್ತಿರ ಹೋಗುವುದು, ಗೋ + ಅಘ್ + ಹನ್ = ಗೋವು ಪಾಪ ಕರ್ಮಗಳನ್ನು ನಾಶಮಾಡುತ್ತದೆ. ವೇದದಲ್ಲಿ ಹನ್ ಧಾತುವು ಹತ್ತಿರ ಹೋಗುವುದು ಎಂದು ಎಷ್ಟೋ ಕಡೆ ಬಳಕೆಯಾಗಿದೆ. ಅಥರ್ವವು ಪತಿಯು ಪತ್ನಿಯನ್ನು ಹನ್ – ಎಂದರೆ ಹತ್ಯೆಯಲ್ಲ, ಹತ್ತಿರ ಇರುವುದು. ಆದ್ದರಿಂದ ಈ ಎಲ್ಲಾ ಮಂಡನೆಗಳು ಆಧಾರ ರಹಿತವಾದ ವಿತಂಡ ವಾದಗಳು.

೯. ಆಪಾದನೆ:- ವೇದಗಳು ಬಾಲ, ಯುವ, ಪ್ರೌಢ ಹಸುಗಳನ್ನು ಕೊಲ್ಲಬಾರದೆಂದಿದೆ. ಆದರೆ ವಶಾ ಗೋ = ವಯೋವೃದ್ಧವಾದ, ಬರಡಾದ ಹಸುಗಳನ್ನು, ಊಕ್ಷ = ಎತ್ತುಗಳನ್ನು ಕೊಲ್ಲಬೇಕು ಎಂದಿದೆ.
ಸತ್ಯಾಂಶ:- ಇದು ಅರೆ ಬೆಂದ ಕಾಳಿನಂತಹಾ ವಿದ್ವಾನ್ ಡಿ. ಎನ್ ಜಾಹ್ ಎನ್ನುವವ ಗೋಹತ್ಯೆ ವಿರುದ್ಧ ಸನಾತನ ಧರ್ಮೀಯರಿಂದ ನೀಡಲ್ಪಟ್ಟ ವೇದಾಧಾರಗಳನ್ನು ಪೊಳ್ಳಾಗಿಸಲು ಮಾಡಿದ ಪ್ರಯತ್ನ. ಇಂತಹಾ ವಿದ್ವಾಂಸರು ನಮ್ಮಲ್ಲೇ ಇದ್ದು ನಮಗೇ ಬೆನ್ನಿಗೆ ಚೂರಿ ಹಾಕುತ್ತಿರುವಾಗ ಅನ್ಯ ಧರ್ಮೀಯರ ಆಕ್ರಮಣ ಏನೂ ಅಲ್ಲ! ಇಲ್ಲಿ ಬೇಲಿಯೇ ಎದ್ದು ಹೊಲ ಮೇಯುತಿದೆ. ಆದರೆ ಹೊಲದ ಮಾಲೀಕನಿಗೆ ಬೇಲಿಯನ್ನೂ ಕತ್ತರಿಸಲು ತಿಳಿದಿದೆ ಎಂದು ಅದಕ್ಕೆ ತಿಳಿದಿರುವುದಿಲ್ಲ.
ಊಕ್ಷ ಎಂದರೆ ಒಂದು ಓಷಧಿ ಸಸ್ಯ. ಅದನ್ನು ಸೋಮ ಎಂದು ಮೊನಿಯರ್ ವಿಲಿಯಮ್ಸ್‍ನಂತಹಾ ಕೆಲ ಸಂಸ್ಕೃತ-ಆಂಗ್ಲ ಶಬ್ದಕೋಶ ರಚನಾಕಾರರೂ ಹೆಸರಿಸಿದ್ದಾರೆ.

ವಶಾ ಎಂದರೆ ಪರಮಾತ್ಮನ ಹಿಡಿತದಲ್ಲಿರುವ ಶಕ್ತಿಗಳೇ ಹೊರತು ಬರಡು ಹಸುಗಳಲ್ಲ. ಅಥರ್ವವೇದ ೧೦.೧೦.೪ ವಶಾಮ್ ಸಹಸ್ರಧಾರಾಮ್ ಎಂದು ಧಾರಾಕಾರವಾಗಿ ಅಮೃತಸುಧೆಯನ್ನು ತನ್ನ ದೇಹದ ಕಣ ಕಣಗಳಿಂದ ಹೊರಸೂಸುವ ಶಕ್ತಿ ಪುಂಜಗಳು ಎಂದಿದೆ. ಹೀಗಿರುವಾಗ ವಶಾ ಎಂದರೆ ಬರಡು ಎಂದಾಗುವುದೇ ಇಲ್ಲ.
ಋಗ್ವೇದ ೧೦.೧೯೦ – ವಶೀ ಎಂದರೆ ಭಗವಂತನ ಹಿಡಿತದಲ್ಲಿರುವ ಶಕ್ತಿಯನ್ನು ಸಂಧ್ಯಾಕಾಲದಲ್ಲಿ ಉಪಾಸಿಸಲಾಗುತ್ತದೆ. ಮತ್ತೆ ಕೆಲವು ಋಕ್ಕುಗಳಲ್ಲಿ ವಶಾ ಎನ್ನುವುದನ್ನು ಸಮೃದ್ಧ ಭೂಮಿ, ತಾಯಿಯು ಮಗುವನ್ನು ಹೇಗೆ ತನ್ನ ಹಿಡಿತದಲ್ಲಿ ಪೋಷಿಸುತ್ತಾಳೆ (ಅಥರ್ವ ೨೦.೧೩೦.೧೫), ಒಂದು ಓಷಧೀ ಸಸ್ಯ, ಇತ್ಯಾದಿಯಾಗಿ ಬಳಕೆಯಾಗಿದೆ.
ಯಾವ ರಾಕ್ಷಸೀ ಪ್ರೇರಣೆಯು ಬರಡು ಹಸುವನ್ನು ಕೊಲ್ಲಿರೆಂದು ವಿದ್ವಾಂಸರಿಂದ ಹೇಳಿಸಿತೋ ಗೊತ್ತಿಲ್ಲ!!

೧೦. ಆಪಾದನೆ:- ಬೃಹದಾರಣ್ಯಕ ಉಪನಿಷತ್ತು ೬.೪.೧೮ ಹೇಳುವುದೇನೆಂದರೆ ಸುಪುತ್ರ ಪ್ರಾಪ್ತಿಗಾಗಿ ದಂಪತಿಗಳು ಮಾಂಸಾನ್ನ (ಮಾಂಸೌದನಂ) ಅಥವಾ ಎತ್ತು (ಆರ್ಷಭಃ) ಅಥವಾ ಕರುವನ್ನು (ಊಕ್ಷ) ಭುಂಜಿಸಬೇಕು.

ಸತ್ಯಾಂಶ:-
ಪ್ರತಿಪಾದನೆ ೧:- ಈಗ ವಿತಂಡವಾದಿಗಳು ವೇದಗಳನ್ನು ಬಿಟ್ಟು ಉಪನಿಷತ್ ಭಾಗಕ್ಕೆ ಇಳಿದಿದ್ದಾರೆ. ಯಾರಾದರೂ ಉಪನಿಷತ್ತಿನಲ್ಲಿ ಮಾಂಸಭಕ್ಷಣೆ ಇದೆ ಎಂದು ಒಂದು ಪಕ್ಷ ಸಾಧಿಸಿ ತೋರಿಸಿದರೂ ವೇದದಲ್ಲಿ ಇದೆ ಎಂದು ಸಾಧಿಸಿದಂತೆ ಆಗುವುದಿಲ್ಲ. ಸನಾತನ ಧರ್ಮದ ತಳಹದಿಯೇ ವೇದಗಳು ಹೊರತು ಉಪನಿಷತ್ತಲ್ಲ. ಇದನ್ನು  ಪೂರ್ವ ಮೀಮಾಂಸಾ ೧.೩.೩, ಮನುಸ್ಮೃತಿ ೨.೧೩ + ೧೨.೯೫, ಜಾಬಾಲ ಸ್ಮೃತಿ, ಭವಿಷ್ಯ ಪುರಾಣ ಇತ್ಯಾದಿಗಳ ಮತದಂತೆ ವೇದ ಮತ್ತು ಶಾಸ್ತ್ರಗಳಲ್ಲಿ ಭಿನ್ನತೆಯಿಂದ ಶಂಕೆ ಉಂಟಾದಲ್ಲಿ ವೇದವೇ ಸರ್ವಮಾನ್ಯ, ಸರ್ವಗ್ರಾಹ್ಯ, ಸಾರ್ವಕಾಲಿಕ, ಸಾರ್ವದೇಶಿಕ ಸತ್ಯ ಎಂದು ಪರಿಗಣಿಸಬೇಕು. ಉಪನಿಷತ್ತುಗಳು ಯಾವುದೋ ಒಂದು ಮಂತ್ರವನ್ನು ವ್ಯಾಖ್ಯಾನಿಸಲು ಹೊರಟು ಹಲವು ಪರಿಷ್ಕರಣೆಗಳನ್ನು ಹೊಂದಿ ಇಂದು ಮೂಲ ಉಪನಿಷತ್ತುಗಳು ಮರೆಯಾಗಿ ವ್ಯಾಖ್ಯಾನವೇ ಮೂಲವೆಂಬ ಅಯೋಮಯ ಉತ್ಪನ್ನವಾಗಿದೆ.
ಪ್ರತಿಪಾದನೆ ೨:- ಪ್ರತಿವಾದಕ್ಕೆ ಪ್ರತಿಪಾದನೆ ೧ ಸಾಕಾದರೂ ನೀಡಲ್ಪಟ್ಟಿರುವ ಉಪನಿಷತ್ ವಾಕ್ಯವನ್ನು ಪರಾಮರ್ಷಿಸಿ ಆಧಾರ ರಹಿತವೆಂದು ಸಾಧಿಸಿ ತೋರಿಸುತ್ತೇವೆ.
ಪ್ರತಿಪಾದನೆ ೨.೧:- ಮಾಷೋದನಮ್ – ಈ ಶಬ್ದವುಳ್ಳ ಶ್ಲೋಕವು ಬರುವ ಮುನ್ನ ಇನ್ನೂ ೪ ಶ್ಲೋಕಗಳುಂಟು. ಅದರಲ್ಲಿ ಅನ್ನದೊಂದಿಗೆ ಅಗ್ನಿಯಲ್ಲಿ ವಿವಿಧ ಆಹುತಿ ಸಂಯೋಜನೆಗಳಿಂದ ಉಳಿದ ಸರ್ಪಿಷ ಪ್ರಸಾದವನ್ನು ಸ್ವೀಕರಿಸುವ ಮುಖೇನ ವೇದದ ವಿವಿಧ ಜ್ಞಾನವುಳ್ಳ ಮಗುವನ್ನು ಪಡೆಯುವ ವಿಚಾರ ಹೇಳಿದೆ. ಆ ವಿವಿಧ ವಸ್ತುಗಳೆಂದರೆ:
·         ಕ್ಷೀರೌದನಮ್ (ಹಾಲು+ಅನ್ನ) – ಶುಕ್ಲೋ ಜಾಯತೇ ಏಕವೇದಜ್ಞ,
·         ದಧ್ಯೋದನಮ್ (ಮೊಸರು+ಅನ್ನ) – ಕಪಿಲಃ ಪಿಂಗಲೋ ಜಾಯತೇ ದ್ವಿವೇದಿ,
·         ಉದೌದನಮ್ (ನೀರು+ಅನ್ನ) – ಶ್ಯಾಮೋ ಲೋಹಿತಾಕ್ಷೋ ಜಾಯತೇ ತ್ರಿವೇದಿ,
·         ತಿಲೌದನಮ್ (ತಿಲ+ಅನ್ನ)  - ದ್ಯುಹಿತಾ ಮೇ ಪಂಡಿತಾ ಜಾಯತೇ,
·         ಮಾಂÆಸೌದನಮ್ (ಮಾಂಸ ಅಲ್ಲ ಅದು ಮಾಂÆಸ ಅಂದರೆ) – ಪಂಡಿತೋ ವಿಗೀತಃ ಸಮಿತಿಂಗಮಃ ಶುಶ್ರೂಷಿತಾಂ ವಾಚಂ ಭಾಷಿತಾ ಜಾಯೇತ ಸರ್ವಾನ್ ವೇದಾನನುಬ್ರುವೀತ.
ಅಂದರೆ ಮನಸ್ಸಿಗೇ ಬೇಕಾದ ಸರಿಯಾದ ಅನ್ನವನ್ನು ಅಗ್ನಿಯಲ್ಲಿ ಆಹುತಿ ನೀಡಿ ಸರ್ಪಿಷವನ್ನು ೬೪ ಲಕ್ಷ ಮನೋ ಕೇಂದ್ರಗಳಲ್ಲಿ ವಿನ್ಯಸಿತಗೊಳಿಸಿದರೆ ಸರ್ವವೇದಗಳನ್ನೂ ಬಲ್ಲವನಾದ ಪುತ್ರ ಪ್ರಾಪ್ತಿ ಸಾಧ್ಯ ಎಂದು ವಿವರಿಸುವ ಪುಷ್ಟಿ ಯಜ್ಞ ಪ್ರಕ್ರಿಯೆ ಇದು. 

[ಗಮನಿಸಿ:-  ಮಾಂÆಸ ಎಂಬಲ್ಲಿ Æ ಎಂಬುದು ಚಂದ್ರ ಬಿಂದು ವಿರಾಮ ಎಂಬ ಚಿಹ್ನೆ. ಯೂನಿಕೂಡ್ ಫಾಂಟಿನಲ್ಲಿ ಇದು ಇನ್ನೂ ಸರಿಯಾಗಿ ದಾಖಲಾಗಿಲ್ಲ.]

ಪ್ರತಿಪಾದನೆ ೩:- ಇನ್ನು ಇದೇ ವಿಚಾರವನ್ನು ಆಯುರ್ವೇದದಲ್ಲಿ ವಿಸ್ತರಿಸುತ್ತಾ ಚರಕ ಸಂಹಿತೆಯಲ್ಲಿ ಈ ಶಬ್ದವನ್ನು ಮಾಷೋದನ ಎಂಬ ಭಾವ ಮೂಡುವಂತೆ ಬಳಸಲಾಗಿದೆ. ಮಾಷವೆಂದರೆ ಒಂದು ಉದ್ದು ಧಾನ್ಯ. ಇದರಲ್ಲಿ ಯಾವುದೇ ಮಾಂಸಭಾಗವಿಲ್ಲ. ಗರ್ಭಿಣೀ ಸ್ತ್ರೀಗೆ ಮಾಂಸಾಹಾರವು ನಿಷಿದ್ಧವೆಂದು ಆಯುರ್ವೇದ ಹೇಳುತ್ತದೆ (ಸುಶ್ರುತ ಸಂಹಿತೆ). ಸುಶ್ರುತರ ಒಂದು ಶ್ಲೋಕವು ದಂಪತಿಗಳಿಗೆ ಸುಪುತ್ರ ಪ್ರಾಪ್ತಿಗೆ ಮಾಷ ಧಾನ್ಯವನ್ನು ಹೇಳುತ್ತದೆ.
ಪ್ರತಿಪಾದನೆ ೪:- ಇದನ್ನೂ ಒಪ್ಪದ ಮತ್ತ ವಿದ್ವಾಂಸರಿಗೆ ಅದು ಮಾಷ ಅಥವಾ ಮಾಂÆಸವಲ್ಲ, ಮಾಂಸವೇ ಎಂದು ವಾದಿಸಿದರೆ – ಮಾಂಸವೆಂದರೆ ಚೆನ್ನಾಗಿ ಕಳೆತ ಭಾಗ ಎಂದೂ ಅರ್ಥ ನೀಡುತ್ತದೆ ಎಂಬುದು ತಿಳಿದಿರಲೇಬೇಕು. ಈ ರೀತಿ ಸಸ್ಯದಲ್ಲಿ ಸಂಗ್ರಹಿತ ಚೆನ್ನಾಗಿ ಕಳೆತ ಧಾನ್ಯವನ್ನು / ತಿರುಳನ್ನು ಮಾಂಸವೆಂದು ಎಷ್ಟೋ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ಆಮ್ರಮಾಂಸ ಎಂದರೆ ಮಾವಿನ ತಿರುಳು, ಖರ್ಜೂರಮಾಂಸ ಎಂದರೆ ಖರ್ಜೂರದ ತಿರುಳು, ಎಂದು ಚರಕ ಸಂಹಿತೆಯಲ್ಲಿ ಹಲವು ಉದಾಹರಣೆ ಸಿಗುತ್ತದೆ. ತೈತ್ತರೀಯ ಸಂಹಿತೆ ೨.೩೨.೮ ಮೊಸರು, ಜೇನುತುಪ್ಪ ಹಾಗೂ ಧಾನ್ಯಕಗಳಿಗೆ ಮಾಂಸವೆಂದು ಹೇಳಿದೆ.
ಪ್ರತಿಪಾದನೆ ೫:- ಮೊನೆರ್ ವಿಲಿಯಮ್ಸ್‌ನ ಶಬ್ದಕೋಶ ರೀತ್ಯಾ ಊಕ್ಷವೆಂದರೆ ಓಷಧೀ ಸಸ್ಯ ಅಥವಾ ಸೋಮ ಎಂದು ಹಿಂದೆಯೇ ತಿಳಿಸಲಾಗಿದೆ. ಅದೇ ಶಬ್ದಕೋಶವು ಋಷಭ (ಇದರಿಂದ ಆರ್ಷಭ) ಎಂದರೂ ಒಂದು ಓಷಧಿ ಸಸ್ಯ (Carpopogan pruriens). ಚರಕ ಸಂಹಿತಾ ೧.೪-೧೩ ಋಷಭವನ್ನು ಒಂದು ಓಷಧೀಯ ಸಸ್ಯವೆಂದು ಪಟ್ಟಿಮಾಡಿದೆ. ಅದನ್ನೇ ಸುಶ್ರುತ ಸಂಹಿತಾ ೩೮ ಮತ್ತು ಭಾವಪ್ರಕಾಶದ ಪೂರ್ಣಕಾಂಡದಲ್ಲಿ ಉಲ್ಲೇಖಿಸಲಾಗಿದೆ.
ಪ್ರತಿಪಾದನೆ ೬:- ಆರ್ಷಭ (ಋಷಭ) ಮತ್ತು ಊಕ್ಷ ಎರಡೂ ಎತ್ತು ಎಂಬ ಅರ್ಥವನ್ನೂ ಕೊಡುತ್ತದೆಯೇ ಹೊರತು ಕರು ಎಂದಲ್ಲ. ಏಕೆ ಒಂದೇ ವಸ್ತು/ವಿಚಾರವನ್ನು ಸೂಚಿಸಲು ಸಮಾನಾರ್ಥಕ ಶಬ್ದಗಳನ್ನು ಬೃಹದಾರಣ್ಯಕದ ಶ್ಲೋಕದಲ್ಲಿ ಹೇಳಲಾಗಿದೆ? ಅಂದರೆ ಒಂದು ಕಡೆ ದಧಿ ಅಥವಾ ಮೊಸರನ್ನು ತಿನ್ನಬೇಕು ಎಂದಾಗ “ಅಥವಾ” ಪ್ರಯೋಗದಿಂದ ಪರ್ಯಾಯವಾಚಕವಲ್ಲದೆ ೨ ಪ್ರತ್ಯೇಕ ಶಬ್ದಗಳುಳ್ಳ ಪ್ರತ್ಯೇಕ ಗುಣವಾಚಕ ಏಕೆ ಆಗಿರಬಾರದು? ಆದ್ದರಿಂದ ಈ ೨ ಶಬ್ದಗಳೂ ೨ ಬೇರೆಯ ವಿಚಾರಗಳನ್ನೇ ಹೇಳುತ್ತಿವೆ. ಹಿಂದಿನ ಶ್ಲೋಕಗಳಲ್ಲಿ ಓಷಧೀಯ ಧಾನ್ಯಗಳನ್ನೇ ಹೇಳಿರುವುದರಿಂದ ಯಥಾ ಪೂರ್ವಮಕಲ್ಪಯತ್ ಎಂಬಂತೆ ಈ ಶಬ್ದಗಳೂ ಧಾನ್ಯವನ್ನೇ ಹೇಳುತ್ತಿವೆ ಎಂದಾಗುತ್ತದೆ.
೧೧. ಆಪಾದನೆ:- ಮಹಾಭಾರತ ವನ ಪರ್ವ ೨೦೭ – ರಾಜಾ ರಂತಿದೇವನು ಯಜ್ಞಗಳನ್ನು ಮಾಡುವಾಗ ಸಾವಿರಾರು ಗೋಹತ್ಯೆಯಾಗುತ್ತಿತ್ತು ಎಂದು ಬಹಿರಂಗ ಪಡಿಸಿದೆಯಲ್ಲಾ?
ಸತ್ಯಾಂಶ:-
ಹಿಂದಿನ ಪ್ರತಿಪಾದನೆಯಲ್ಲಿ ತಿಳಿಸಿದಂತೆ ವೇದ ಮತ್ತು ಇನ್ನಿತರೆ ಸಾಹಿತ್ಯದಲ್ಲಿ ವಿವಾದ ಕಂಡುಬಂದರೆ ವೇದವೇ ಸರ್ವೋಚ್ಛ ಎಂಬುದು ನಿರ್ವಿವಾದ. ಈಗಿರುವ ಮಹಾಭಾರತ ಎನ್ನುವುದು ಅತ್ಯಂತ ಕಲುಷಿತ ಪ್ರಕ್ಷಿಪ್ತಗಳುಳ್ಳದ್ದಾಗಿದೆ. ಅದನ್ನು ಆಧಾರ ಗ್ರಂಥವೆಂದೇ ಹೇಳಲಾಗುವುದಿಲ್ಲ. ವ್ಯಾಸೋಕ್ತ ಗಣೇಶ ಲಿಖಿತ ಮೂಲ ಜಯಭಾರತಕ್ಕೆ ಮಾತ್ರ ಪಂಚಮ ವೇದ ಎಂದದ್ದೇ ಹೊರತು ಈಗಿನ ಮಹಾಭಾರತಕ್ಕಲ್ಲ!

ಆದರೂ ರಾಜ ರಂತಿದೇವನ ಆಸ್ಥಾನದಲ್ಲಿ ಗೋಹತ್ಯೆ ನಡೆಯುತ್ತಿದ್ದಿತು ಎನ್ನುವುದು ಸುಳ್ಳು ಆಪಾದನೆ ಎಂದು ದಶಕಗಳ ಹಿಂದೆಯೇ ಹಲವು ವಿದ್ವಾಂಸರು ಸಾಧಿಸಿ ತೋರಿಸಿದ್ದಾರೆ.

ಪ್ರತಿಪಾದನೆ ೧:- ಮಹಾಭಾರತ ಅನುಶಾಸನ ಪರ್ವ ೧೧೫ರ ಪ್ರಕಾರ ರಾಜಾ ರಂತಿದೇವನು ಮಾಂಸವನ್ನೇ ಭಕ್ಷಿಸದ ರಾಜರ ಪಟ್ಟಿಯಲ್ಲಿ ಹೆಸರಿಸಲ್ಪಟ್ಟಿದ್ದಾನೆ. ಅವನ ಆಸ್ಥಾನದಲ್ಲಿ ಹೇರಳವಾಗಿ ಮಾಂಸ ಲಭ್ಯವಿದ್ದರೂ ತಿನ್ನಲಿಲ್ಲವೇ?

ಪ್ರತಿಪಾದನೆ ೨:- ಮಾಂಸವೆಂದರೆ ಪಶುವಿನ ದೇಹದ್ದೇ ಅಲ್ಲವೆಂದು ಹಿಂದೆಯೇ ಸಾಧಿಸಲಾಗಿದೆ.

ಪ್ರತಿಪಾದನೆ ೩:- ಆ ಶ್ಲೋಕವು ದಿನಕ್ಕೆ ೨೦೦೦ ಗೋವುಗಳನ್ನು ಕೊಲ್ಲುತ್ತಿದ್ದರು ಎಂದು ಹೇಳುತ್ತದೆ. ಅಂದರೆ ವರ್ಷಕ್ಕೆ ೭,೨೦,೦೦೦ ಗೋಹತ್ಯೆ ನಡೆಯುತ್ತಿತ್ತೇ? ಹಾಗಾಗಿ ಈ ಶ್ಲೋಕವು ತರ್ಕ ಹಾಗೂ ಅರ್ಥ ಬದ್ಧವೇ?

ಪ್ರತಿಪಾದನೆ ೪:- ಮಹಾಭಾರತ ಶಾಂತಿಪರ್ವ ೨೬೨.೪೭ರ ಪ್ರಕಾರ ಗೋವೃಷಭ ಹಂತಕರು ಅತೀ ಪಾಪಿಗಳು ಎಂದಿದೆ. ಅದೇ ಮಹಾಭಾರತವು ರಂತಿದೇವನನ್ನು ಒಬ್ಬ ದೊಡ್ಡ ತಪಸ್ವಿ, ತ್ಯಾಗಿ ಎಂದೂ ಹೇಳಿದೆ. ಹೇಗೆ ಪರಸ್ಪರ ವಿರುದ್ಧ ಶ್ಲೋಕಗಳು ಹೇಗೆ ಇರಲು ಸಾಧ್ಯ? ಇದು ಪ್ರಕ್ಷಿಪ್ತವಲ್ಲವೇ? ಸ್ವಲ್ಪ ಚಿಂತಿಸಿ.

ಪ್ರತಿಪಾದನೆ ೫:- ನೈಜವಾಗಿ ಈ ಶ್ಲೋಕಗಳನ್ನು ದಾರಿತಪ್ಪಿಸಲೆಂದೇ ಇದ್ದ ರಾಹುಲ್ ಸಂಕೃತ್ಯಾಯನರಂತಹಾ ವಿದ್ವಾಂಸರು ವೇದ ವಿಧ್ವಂಸಕರಾಗಿ ಮೆರೆದಿದ್ದಾರೆ. ರಾಹುಲ್ ಸಂಕೃತ್ಯಾಯನನು ಉದ್ದೇಶ ಪೂರ್ವಕವಾಗಿ ಶ್ಲೋಕದ ಮೊದಲ ೩ ಪಾದಗಳನ್ನು ಹೇಳಿ, ದ್ರೋಣ ಪರ್ವ ಅಧ್ಯಾಯ ೬೭ರ ಮೊದಲೆರಡು ಶ್ಲೋಕದಿಂದ ಒಂದು ಪಾದವನ್ನು ಊನಗೊಳಿಸಿದನು. ಹಾಗೆಯೇ ದ್ವಿಶತಸಹಸ್ರವೆಂದರೆ ನೈಜವಾಗಿ ೨೦೦ ಸಾವಿರ ಎಂದಾಗ್ಯೂ, ೨೦೦೦ ಎಂದು ತಪ್ಪು ವ್ಯಾಖ್ಯಾನ ಮಾಡಿದನು. ಇಷ್ಟು ಸಾಕು ಆತನ ಸಂಸ್ಕೃತ ವಿದ್ವತ್ ವರ್ಣಿಸಲು!

ಈ ಶ್ಲೋಕಗಳ ಯಾವುದೇ ಸಾಲುಗಳಲ್ಲಿ ಗೋಮಾಂಸದ ಉಲ್ಲೇಖವಿಲ್ಲ. ಮತ್ತೆ ಆತನು ಬಿಟ್ಟ ಒಂದು ಪಾದವನ್ನು ಸೇರಿಸಿ ಓದಿದರೆ ರಂತಿದೇವನು ೨,೦೦,೦೦೦ ಬಾಣಸಿಗರನ್ನು (ಪಾಕಶಾಸ್ತ್ರಿ) ಉತ್ತಮ ಪಾಕ ತಯಾರಿಸಿ ಪ್ರಜೆಗಳು, ಸೇನೆ, ಅತಿಥಿಗಳು, ಅಭ್ಯಾಗತರು, ವಿದ್ವಾಂಸರಾದಿಯಾಗಿ ಸರ್ವರಿಗೂ ಚೆಂದದಿಂದ ಉಣಬಡಿಸಲು ಹಗಲು-ರಾತ್ರಿ ಎನ್ನದೆ ಶ್ರದ್ಧೆಯಿಂದ ಕಾರ್ಯಗೈಯ್ಯಲು ನೇಮಿಸಲ್ಪಟ್ಟಿದ್ದರು ಎಂದು ತಿಳಿದುಬರುತ್ತದೆ. ನಂತರದಲ್ಲಿ ಮಾಷವನ್ನು ತಿದ್ದಿ ಮಾಂಸವೆಂದು ಮಾಡಿ ಅದನ್ನು ಗೋಹತ್ಯಾ ಪ್ರಸಂಗವಾಗಿ ಕಾಣುವಂತೆ ಬಣ್ಣಗೆಡಿಸಿದರು.

ಪ್ರತಿಪಾದನೆ ೬:- ಇದಕ್ಕೆ ವಿಪರೀತ ಎಂಬಂತೆ ಮಹಾಭಾರತದಲ್ಲಿ ಅಹಿಂಸೆ ಮತ್ತು ಮಾಂಸ ಭಕ್ಷಣೆಯನ್ನು ಖಂಡಿಸುವ ವಿಪುಲ ಶ್ಲೋಕಗಳು ದೊರಕುತ್ತವೆ. ಅದಲ್ಲದೆ ಗೋವುಗಳ ಮಹತ್ವ ಸಾರುವ, ಅವುಗಳನ್ನು ಪೋಷಿಸುವ, ಸ್ತುತಿ ಗೈಯ್ಯುವ ಶ್ಲೋಕಗಳಿವೆ.

ಪ್ರತಿಪಾದನೆ ೭:- ಬಾಧ್ಯತೇ ಎಂದರೆ ಕೊಲ್ಲುವುದು ಎಂದು ಅರ್ಥ ಮಾಡಿದ್ದು ಮೂರ್ಖರೇ ಸರಿ. ಯಾವುದೇ ಸಂಸ್ಕೃತ ವ್ಯಾಕರಣ ಸಾಹಿತ್ಯ ಅಥವಾ ಪ್ರಯೋಗಗಳಲ್ಲಿ ಇಂತಿಲ್ಲ. ಬಾಧ್ಯತೇ ಎಂದರೆ ಹತೋಟಿಯಲ್ಲಿಡುವುದು. ಆದ್ದರಿಂದ ಯಾವುದೇ ರೀತಿಯಲ್ಲಿ ರಾಜಾ ರಂತಿದೇವನು ಗೋಹತ್ಯೆಗೆ ಕುಮ್ಮಕ್ಕು ನೀಡುತ್ತಿದ್ದ ಎಂದು ಸಾಧಿಸಲು ಸಾಧ್ಯವಿಲ್ಲ.

ಕೊನೆಯದಾಗಿ ನಾನು ಎಲ್ಲಾರಿಗೂ ಸವಾಲು ಹಾಕುತ್ತೇನೆ, ವೇದಗಳ ಯಾವುದಾದರೋ ಮಂತ್ರಗಳಲ್ಲಿ ಗೋಮಾಂಸ ಸೇವನೆಯನ್ನು ಪರೋಕ್ಷವಾಗಾದರೋ ಸಮ್ಮತಿಸಿದ್ದು ಅದು ಧೃಡಪಟ್ಟಲ್ಲಿ ಅವರು ಹೇಳಿದಂತಹ ಧರ್ಮಕ್ಕೆ ಮತಾಂತರಗೊಳ್ಳುತ್ತೇನೆ, ಇಲ್ಲವಾದಲ್ಲಿ ಅವರು ವೇದಗಳ ನಿಜಸಾರವನ್ನು ಬೆಂಬಲಿಸಲು  ಒಪ್ಪಿಕೊಂಡು ವೇದಗಳ ಅನುಯಾಯಿಯಾಗಬೇಕು. 

ಗೋಮಾತೆಯೇ ವೇದಮಾತೆಯಹುದು, ಆಕೆಯಿಂದ ತರಣಿಯ ಜ್ಞಾನ ಕಿರಣವು ಎಲ್ಲರ ಮನಸ್ಸಿನಲ್ಲಿ ಪಸರಿಸಲಿ, 
ತನ್ಮುಖೇನ ಎಲ್ಲ ಲೋಕಗಳಲ್ಲಿನ ಎಲ್ಲ ಜೀವಿಗಳಿಗೂ ಬದುಕಲು ಅನುಕೂಲವಾಗುವಂತೆ 
ಘೋಟಿಸಲಿ ಎಂದು ವೇದಪುರುಷನಲ್ಲಿ ಪ್ರಾರ್ಥಿಸುತ್ತೇನೆ.
ಸಂಗ್ರಹ:-ವಾಟ್ಸಪ್ ನಿಂದ 

June 24, 2021

ಇಮಂ ಮೇ ಗಂಗೇ ಯಮುನೇ ಸರಸ್ವತೀ


ಸರಸ್ವತಿಗೆ ನದೀ ಎನ್ನುವ ಪೂಜ್ಯಭಾವನೆಯೊಂದಿಗೆ ಅಂತರಿಕ್ಷದಲ್ಲಿರುವ ವಾಗ್ದೇವತೆ ಎಂದು ಸಹ ಭಾವಿಸುತ್ತೇವೆ. ಋಗ್ವೇದ ಒಂದರಲ್ಲಿಯೇ ಸರಸ್ವತಿಯನ್ನು ಕುರಿತು ಅನೇಕ ಬಾರಿ ಹೇಳಲಾಗಿದೆ. ಹತ್ತನೇ ಮಂಡಲದ ೭೫ನೇ ಸೂಕ್ತವಂತೂ ನದೀ ಸೂಕ್ತ ಎಂದೇ ಕರೆಸಿಕೊಂಡಿದೆ. ಋಗ್ವೇದದಲ್ಲಿ ಅನೇಕ ನದಿಗಳ ಹೆಸರುಗಳ ಉಲ್ಲೇಖ ಸಿಗುತ್ತಿದ್ದರೂ ಸಹ ಪ್ರಮುಖವಾಗಿ ಸರಸ್ವತೀ, ಸಿಂಧೂ ಮತ್ತು ಸರಯೂ ನದಿ ಹೆಚ್ಚು ಕಡೆ ಉಲ್ಲೇಖಿತವಾಗಿದೆ. ನದೀ ಸೂಕ್ತದಲ್ಲಿ ಎಲ್ಲಾ ನದಿಗಳ ಹೆಸರು ಪಠಿತವಾಗದೇ ಇದ್ದರೂ ಸರಸ್ವತೀ ಸಿಂಧು ಮತ್ತು ಸರಯೂ ಪಠಿತವಾಗಿದೆ. ನದೀ ಎನ್ನುವುದಕ್ಕೆ ಯಾಸ್ಕ ಮಹರ್ಷಿಗಳು ಹೇಳುವುದು "ನದ್ಯಃ ಕಸ್ಮಾನ್ನದನಾ ಭವಂತಿ ಶಬ್ದವತ್ಯಃ" ಎಂದು ಹರಿಯುವಾಗ ಇವುಗಳು ಜುಳು ಜುಳು ಶಬ್ದಮಾಡುವುದರಿಂದ ನದನಾಃ - ನದ್ಯಃ ಎಂದು ಕರೆಯಲ್ಪಡುತ್ತವೆ ಎನ್ನುತ್ತಾರೆ. ನದಿಗೆ ಪರ್ಯಾಯವಾಚಿ ಪದವಾಗಿ ೩೭ ಶಬ್ದಗಳನ್ನು ನಿರುಕ್ತಕಾರರು ಕಂಡುಕೊಂಡಿದ್ದಾರೆ. ಇವುಗಳಲ್ಲಿ ಊರ್ಜಸ್ವತ್ಯಃ, ಸರಸ್ವತ್ಯಃ, ತರಸ್ವತ್ಯಃ ಹರಸ್ವತ್ಯಃ ರೋಧಸ್ವತ್ಯಃ ನನಗೆ ತುಂಬಾ ಇಷ್ಟವಾದ ಹೆಸರುಗಳು. ಎಲ್ಲವೂ ಬಹುವಚನದಲ್ಲಿ ನಿರ್ದೇಶಿತವಾಗಿವೆ. ಸರಯೂ ಸಿಂಧು ಮತ್ತು ಸರಸ್ವತೀ ನದಿಗಳು ತುಂಬಿ ಹರಿಯುತ್ತಿದ್ದ ನದಿಗಳಾಗಿದ್ದವಂತೆ. ವೇದಗಳಲ್ಲಿ ಕಾಣಬರುವ ಪಣಿಗಳೆನ್ನುವ ಜನಾಂಗದವರು ಗೋವುಗಳನ್ನು ಕದ್ದೊಯ್ದಾಗ ಅದನ್ನು ಬಿಡಿಸಿತರಲು ಸರಮೆ ಎನ್ನುವ ದೇವ ನಾಯಿಯೊಂದು ನದಿಯೊಂದನ್ನು ದಾಟಿ ಅವರಿದ್ದಲ್ಲಿ ತೆರಳುವ ಪ್ರಸಂಗದಲ್ಲಿ ನೀನು ಹೇಗೆ ರಸಾ ನದಿಯನ್ನು ದಾಟಿ ಬಂದೆ ಎಂದು ಆಶ್ಚರ್ಯದಿಂದ ಪಣಿಗಳು ಕೇಳುತ್ತಾರೆ. ಅಂದರೆ ಇಲ್ಲಿ ರಸಾ ಎನ್ನುವ ನದಿಯೊಂದು ಅತ್ಯಂತ ರಭಸ ಮತ್ತು ಆಳವನ್ನು ಹೊಂದಿದ್ದು ಕಂಡು ಬರುತ್ತದೆ. ಇದನ್ನೇ ಹತ್ತನೇ ಮಂಡಲದ ನೂರ ಎಂಟನೇ ಸೂಕ್ತದಲ್ಲಿ "ಕಾಸ್ಮೇಹಿತಿಃ ಕಾ ಪರಿತಕ್ಮ್ಯಾಸೀತ್ಕಥಂ ರಸಾಯಾ ಅತರಃ ಪಯಾಂಸಿ" ಎನ್ನಲಾಗಿದೆ. ಅಂದರೆ ಅಂತಹ ನೀರಿನಿಂದ ತುಂಬಿ ಹರಿಯುತ್ತಿದ್ದ ನೀರಿನಿಂದ ಹೇಗೆ ಬಂದಿರಬಹುದೆನ್ನುವ ಆಶ್ಚರ್ಯ ಕಾಡುತ್ತದೆ. 

ಕಣ್ವ ಋಷಿಗೆ ಶೋಭರಿ ಎನ್ನುವ ಒಬ್ಬ ಮಗನಿದ್ದ. ಅವನು ಇದೇ ಸರಸ್ವತೀ ನದಿಯ ದಡದಲ್ಲಿ ಚಿತ್ರ ಎನ್ನುವ ರಾಜನು ಯಾಗ ಒಂದನ್ನು ಮಾಡಿ ದಾನವನ್ನು ಮಾಡಿದ ಪ್ರಂಶಸೆಯನ್ನು ಎಂಟನೇ ಮಂಡಲದಲ್ಲಿ ೨೧ನೇ ಸೂಕ್ತದಲ್ಲಿ ಹೇಳಿದ್ದಾನೆ. ಆದರೆ ಬೃಹದ್ದೇವತಾದಲ್ಲಿ ಚಿತ್ರರಾಜನು ಯಾಗ ಮಾಡಿದ್ದು ಕುರುಕ್ಷೇತ್ರದಲ್ಲಿ ಎಂದು ಬಂದಿರುವುದರಿಂದ ಸರಸ್ವತಿ ಕುರುಕ್ಷೇತ್ರಕ್ಕೆ ಸಮೀಪದಲ್ಲಿಯೇ ಹರಿದಿರಬೇಕು. 

ಇಮಂ ಮೇ ಗಂಗೇ ಯಮುನೇ ಸರಸ್ವತೀ ಶುತುದ್ರಿ ಸ್ತೋಮಂ ಸಚತಾ ಪರುಷ್ಣ್ಯಾ |
ಅಸಿಕ್ನ್ಯಾ ಮರುದ್ವೃಧೇ ವಿತಸ್ತಯಾರ್ಜೀಕೀಯೇ ಶೃಣುಹ್ಯಾ ಸುಷೋಮಯಾ ||
ಈ ಮುಖ್ಯ ನದಿಗಳ ಜೊತೆಗೆ ಉಪನದಿಗಳನ್ನೂ ಸ್ತುತಿಸಲಾಗಿದೆ ಇದರಲ್ಲಿ. ಗಂಗೆ, ಯಮುನೆ, ಸರಸ್ವತಿ, ಶುತುದ್ರಿ, ಪರುಷ್ಣಿ, ಅಸಿಕ್ನಿ, ಮರುದ್ವೃಧೇ, ವಿತಸ್ತೀ, ಆರ್ಜೀಕೀ, ಸುಷೋಮಾ ಹೀಗೆ ಹತ್ತು ನದಿಗಳ ಹೆಸರನ್ನು ಉಲ್ಲೇಖಿಸಲಾಗಿದೆ. 
ಗಮ್ಲೃ ಎನ್ನುವ ಮೂಲ ಧಾತುವಿನಿಂದ ಹುಟ್ಟಿರುವ ಗಂಗೆ ಎನ್ನುವ ಹೆಸರಿಗೆ ಪ್ರವಹಿಸುವಂತವಳು ಎನ್ನುವ ಅರ್ಥವಿದೆ. ಯಮುನೆ ಅತ್ಯಂತ ಶಾಂತ ಸ್ವಭಾವದ ನದಿ. ಪ್ರವಾಹ ಕಾಣಿಸುವುದೇ ಇಲ್ಲ. ಅದಕ್ಕೇ ಅದನ್ನು ಯಮುನಾ ಎನ್ನಲಾಗಿದೆ. ಅತ್ಯಂತ ವೇಗವಾಗಿ ಪ್ರವಹಿಸುವುದರಿಂದ ಅದನ್ನು ಶುತುದ್ರಿ ಎನ್ನಲಾಗಿದೆ. ಇರಾವತಿ ನದಿಯನ್ನೇ ಪರುಷ್ಣಿ ಎಂದು ಕರೆಯುವುದು ಇದು ಅನೇಕ ಮೂಲಿಕೆಗಳಿಂದ ಕೂಡಿರುವುದರಿಂದ ಪರುಷ್ಣಿಯಾಗಿದೆ. ಅಸಿಕ್ನಿಯ ನೀರು ಕಪ್ಪಾಗಿದೆ ಅದಕ್ಕೇ ಕಪ್ಪಾದ ನೀರನ್ನು ಹೊಂದಿದ ಅಸಿಕ್ನೀ. ಎಲ್ಲಾ ಉಪನದಿ ಮತ್ತು ಗಾಳಿಯಿಂದ ತುಂಬಿ ಹರಿಯುವ ನದಿ ಮರುದ್ವೃಧೇ. ಋಜುಕ ಎನ್ನುವ ದೇಶದಲ್ಲಿ ಹುಟ್ಟಿ ಹರಿಯುವುದರಿಂದ ಆರ್ಜೀಕೀಯಾ ಎನ್ನಲಾಗಿದೆ ಇದು ಎತ್ತರದ ದಂಡೆಗಳನ್ನು ಹೊಂದಿದ್ದರಿಂದ ವಿತಸ್ತಾ ಎಂದು ಕರೆಯಲಾಗುತ್ತದೆ. 
ಒಮ್ಮೆ ವಶಿಷ್ಠ ಮಹರ್ಶಿಯ ಮಕ್ಕಳೆಲ್ಲಾ ಸಾವಿಗೀಡಾಗುತ್ತಾರೆ ಆಗ ಜುಗುಪ್ಸಿತರಾದ ವಶಿಷ್ಠ ತನ್ನನ್ನು ಹಗ್ಗದಿಂದ ಬಂಧಿಸಿ ಈ ನದಿಗೆ ಧುಮುಕಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ಆದರೆ ಈ ನದಿ ಅವರ ಹಗ್ಗವನ್ನು ಬಿಡಿಸಿ ಬಂಧಮುಕ್ತನನ್ನಾಗಿಸಿ ಬದುಕಿಸುತ್ತದೆ ಅದಕ್ಕೆ ಅದನ್ನು ವಿಪಾಶಾ ಎಂದೂ ಕರೆಯಲಾಗುತ್ತದೆ ಎನ್ನುವ ಇತಿಹಾಸವಿದೆ. ಹೀಗೇ ನದಿಗಳ ಹೆಸರು ಅವುಗಳ ಮೂಲ ಸ್ವರೂಪವನ್ನೂ ನಿರ್ದೇಶಿಸುತ್ತವೆ. 
ಎಂಟನೇ ಮಂಡಲದ ೨೧ನೇ ಸೂಕ್ತದಲ್ಲಿ "ಚಿತ್ರಾ ಇದ್ರಾಜಾ ರಾಜಕಾ ಇದನ್ಯಕೇ ಯಕೇ ಸರಸ್ವತೀ ಮನು" ಚಿತ್ರ ಎನ್ನುವ ರಾಜ ಅನೇಕ ಅಂದರೆ ನೂರಾರು ಜನ ರಾಜರೊಂದಿಗೆ ಸರಸ್ವತೀ ನಡಿ ದಡದಲ್ಲಿದ್ದನಂತೆ. ಅಲ್ಲಿ ದೊಡ್ಡ ಯಾಗವೊಂದನ್ನು ಮಾಡಿ ಸಾವಿರಾರು ದಾನಗಳನ್ನು ಜನರಿಗೆ ಕೊಟ್ಟ ಎನ್ನುವುದಾಗಿ ಹೇಳಿದ್ದು ಗಮನಿಸಿದರೆ ಸರಸ್ವತೀ ನದೀ ದಡದಲ್ಲಿ ಜನವಸತಿ ಅಗಾಧವಾಗಿದ್ದು ಕಂಡು ಬರುತ್ತದೆ.

ಸರಸ್ವತ್ಯಭಿನೋ ನೇಷಿ ವಸ್ಯೋ ಮಾಪ ಸ್ಫರೀಃ ಪಯಸಾ ಮಾ ನ ಆ ಧಕ್ | ಎಂದು ಆರನೇ ಮಂಡಲದಲ್ಲಿ ಬರುತ್ತದೆ. ಸರಸ್ವತೀ ನದೀ ತಟದಲ್ಲಿ ವಾಸಿಸುತ್ತಿದ್ದ ಜನ ಸರಸ್ವತಿಯನ್ನು ಕುರಿತಾಗಿ ನೀನು ಉಕ್ಕಿ ಹರಿದು ಪ್ರವಾಹ ಬಂದು ನಮ್ಮ ವಸತಿಗಳನ್ನು ಹಾಳು ಮಾಡಬೇಡ. ನಮ್ಮ ವಾಸ್ತವ್ಯವನ್ನು ಅಭದ್ರವಾದ ಯಾವುದೋ ಒಂದು ಕ್ಷೇತ್ರಕ್ಕೆ ಒಯ್ಯಬೇಡ ಎಂದು ಕೇಳಿಕೊಳ್ಳುತ್ತಾರೆ. 

ಸರಸ್ವತಿಗೆ ಏಳು ಜನ ಅಕ್ಕ ತಂಗಿಯರಂತೆ ಅದನ್ನು ಋಗ್ವೇದದ ಆರನೇ ಮಂಡಲದ ಅರವತ್ತೊಂದನೆ ಸೂಕ್ತದಲ್ಲಿ ಅತ್ಯಂತ ಮಾರ್ಮಿಕವಾಗಿ ಹೇಳಲಾಗಿದೆ. 
ಉತ ನಃ ಪ್ರಿಯಾ ಪ್ರಿಯಾ ಸು ಸಪ್ತ ಸ್ವಸಾ ಸುಜುಷ್ಟಾ |
ಸರಸ್ವತೀ ಸ್ತೋಮ್ಯಾ ಭೂತ್ || ನಮಗೆಲ್ಲಾ ಯಾರು ಅತ್ಯಂತ ಪ್ರೀತಿ ಪಾತ್ರರೋ ಅಂತವರ ಮಧ್ಯೇ ನೀನು ಹೆಚ್ಚು ಪ್ರೀತಿಗೆ ಅರ್ಹಳಾದವಳೋ, ಗಂಗೆಯೇ ಮೊದಲಾದ ಏಳುಜನ ಸಹೋದರಿಯರನ್ನು ಹೊಂದಿರುವವಳೂ ಅನೇಕ ಮಹರ್ಷಿಗಳಿಂದ ಸೇವಿತಳಾದವಳೂ ಆದ ಸರಸ್ವತಿಯೇ ನಮಗೆ ದಿನವೂ ಸ್ತುತಿಗೆ ಅರ್ಹಳಾಗಿರು ಎಂದು ಕೇಳಿಕೊಳ್ಳಲಾಗಿದೆ. 
ಇಂತಹ ಮೈದುಂಬಿ ಹರಿಯುತ್ತಿದ್ದ ಸರಸ್ವತಿ, ಪೂಜ್ಯಳಾದ ಸರಸ್ವತಿ ಕಣ್ಮರೆಯಾದದ್ದು ಪುರಾಣದ ಕಾಲದಲ್ಲಿ. ಋಗ್ವೇದದಲ್ಲಿ ಸುಮಾರು ೯೯ ನದಿಗಳ ಕುರಿತಾದ ಉಲ್ಲೇಖ ಕಾಣ ಸಿಗುತ್ತದೆ. ಇವುಗಳಲ್ಲಿ ೩೧ ನದಿಗಳಿಗೆ ಪ್ರತ್ಯೇಕವಾದ ಹೆಸರುಗಳಿವೆ. ಸೂಕ್ತಗಳಲ್ಲಿ ೨೫ ನದಿಗಳನ್ನು ಹೇಳಲಾಗಿದೆ. ಸುಮಾರು ಕಡಿಮೆ ಎಂದರೂ ೬೫ ಕ್ಕೂ ಹೆಚ್ಚುಬಾರಿ ಋಗ್ವೇದದಲ್ಲಿ ಸರಸ್ವತಿಯ ಉಲ್ಲೇಖ ಸಿಗುತ್ತದೆ. ಆದರೆ ಸರಸ್ವತಿಯ ಕುರಿತು ಬರುವ ಉಲ್ಲೇಖಗಳೆಲ್ಲವನ್ನೂ ನದಿ ಎಂದು ತೆಗೆದುಕೊಳ್ಳುವಂತಿಲ್ಲ. ವಾಗ್ದೇವತೆಯಾಗಿಯೂ ಆಕಾಶಾಭಿಮಾನಿ ದೇವತೆಯಾಗಿಯೂ ನೋಡಲಾಗಿದೆ.

#ನದೀ_ಸರಸ್ವತಿ
ಸದ್ಯೋಜಾತರು

ಶಾಸ್ತ್ರಗಳು ಮನುಷ್ಯನಿಗೆ ಒಳಿತನ್ನು ಮಾಡುತ್ತವೆ.

ಯಸ್ಯ ನಾಸ್ತಿ ಸ್ವಯಂ ಪ್ರಜ್ಞಾ ಶಾಸ್ತ್ರಂ ತಸ್ಯ ಕರೋತಿ ಕಿಮ್ | ಲೋಚನಾಭ್ಯಾಂ ವಿಹೀನಸ್ಯ ದರ್ಪಣ: ಕಿಂ ಕರಿಷ್ಯತಿ |

ಅಂದರೆ, ಯಾವಾತನಿಗೆ ಸ್ವಯಂ ಪ್ರಜ್ಞೆ ಇರುವುದಿಲ್ಲವೋ, ಅವನಿಗೆ ಶಾಸ್ತ್ರವು ಏನನ್ನು ತಾನೇ ಮಾಡುತ್ತದೆ. ೨ ಕಣ್ಣುಗಳೂ ಇಲ್ಲದವನಿಗೆ ಕನ್ನಡಿಯು ತಾನೇ ಏನನ್ನು ಮಾಡುತ್ತದೆ. ಮನುಷ್ಯನಿಗೆ ಶಾಸ್ತ್ರಜ್ಞಾನವು ಅತ್ಯವಶ್ಯಕ, ಸ್ವಂತ ಬುದ್ಧಿಯಿಂದ ಶಾಸ್ತ್ರವನ್ನು ವಿವೇಚಿಸಿ, ಮುಕ್ತವಾಗಿ ಒಪ್ಪಿಕೊಳ್ಳುವಂತಹ ಮನೋಧರ್ಮವನ್ನು ಬೆಳಸಿಕೊಳ್ಳಬೇಕು. ಶಾಸ್ತ್ರಗಳು ಮನುಷ್ಯರಿಗೆ ಒಳಿತನ್ನು ಮಾಡುವುದಕ್ಕಾಗಿಯೇ ಹೊರಟಿವೆ. ಶಾಸ್ತ್ರಗ್ರಂಥಗಳು ಋಷಿಗಳ ತಪಸ್ಸಿನ ಫಲರೂಪಗಳು. ಮುಮುಕ್ಷುಗಳಿಗೆ ಇವು ದಾರಿದೀಪಗಳಾಗಿವೆ. ಮೋಕ್ಷವು ಒಂದೆರಡು ಜನ್ಮಗಳಲ್ಲಿ ಸಿದ್ಧಿಸುವಂತಹದ್ದಲ್ಲ,
ಮನುಷ್ಯನು ಅದನ್ನು ಪಡೆಯಲು ಪ್ರತಿಜನ್ಮದಲ್ಲಿಯೂ ಪ್ರಯತ್ನಶೀಲನಾಗಿರಬೇಕು. ಹೀಗೆ ಪ್ರಯತ್ನಶೀಲನಾಗಬೇಕಾದರೆ ಶಾಸ್ತ್ರಗಳು ಅತ್ಯವಶ್ಯಕ. ಅವುಗಳನ್ನು ಧಿಕ್ಕರಿಸಿದರೆ, ಕುರುಡನು ಕನ್ನಡಿಯನ್ನು ತಿರಸ್ಕರಿಸಿದಂತೆ ಆಗುತ್ತದೆ. ಸರ್ವಸ್ಯ ಲೋಚನಂ ಶಾಸ್ತ್ರಂ - ಎನ್ನುವಂತೆ ನಮ್ಮ ಬದುಕಿನ ಸಾರ್ಥಕತೆಗೆ ಶಾಸ್ತ್ರವೆಂಬ ಕಣ್ಣು ಬೇಕು, ಅದಿಲ್ಲದಿದ್ದರೆ ಅವನು ಕುರುಡನೇ ಸರಿ.
'ಅವಶ್ಯಂ ಪಿತರಾಚಾರಂ!' ಹೌದು ಕರ್ಮಮಾರ್ಗದ ವಿಷಯದಲ್ಲಿ ಅವಶ್ಯವಾಗಿ ನಮ್ಮ ಪಿತೃಗಳ ಆಚಾರವನ್ನು, ನಡವಳಿಕೆಗಳನ್ನು ಅನುಸರಿಸಬೇಕು, ಅದೇ ಸಂಪ್ರದಾಯ-ಆಚಾರ. ಆದರೆ ಯಾವ ಪಿತೃಗಳ?, ಅಂದರೆ ಕರ್ಮಪಿತೃಗಳಾದ ಋಷಿಗಳ ವಚನಗಳನ್ನು ಮೊದಲು ಅಧ್ಯಯನ ಮಾಡಿ, ಹಾಗೆಯೇ ಅರ್ಥಜ್ಞಾನ ತಿಳಿದು, ನಂತರ ನಿಷ್ಕಾಮವಾಗಿ ಕರ್ಮಾಚರಣೆಯನ್ನು ಮಾಡಿದರೆ, ಅದರಿಂದ ಚಿತ್ತಶುದ್ಧಿ, ತನ್ಮೂಲಕ ಶಿವಜ್ಞಾನ, ಬ್ರಹ್ಮಜ್ಞಾನ (ಸಚ್ಚಿದಾನಂದ ಸ್ವರೂಪ) ಪ್ರಾಪ್ತಿಯಾಗುತ್ತದೆ.
ಸಂ.. ವೇ ಶ್ರೀ ಚನ್ನೇಶ ಶಾಸ್ತ್ರಿಗಳು ಮಠದ

June 21, 2021

ಸ್ವಾಹಾಕಾರ ಕ್ರಮ

*ಆಹುತಿ ಪ್ರಕ್ಷೇಪಣ ಕ್ರಮಃ*
    ~~~~~~~~~~~~~~~
*ಸಕಾರೋ ಸೂತಕಂ ವಿದ್ಯಾತ್ ವಕಾರೇ ರಿಪುವರ್ಧನಂ*| *ಹಕಾರೇ ವ್ಯಾಧಿ ಪೀಡಾ ಚ ಆಹುತಿಃ ಕುತ್ರ ದೀಯತೇ*||?
 'ಸ್ವಾಹಾ' ಎಂಬ ಶಬ್ದದಲ್ಲಿ 'ಸ'ಕಾರ ಉಚ್ಛಾರಣೆ ಮಾಡುವಾಗಲೇ ಹೋಮಿಸಿದರೆ ಸೂತಕ ದೋಷವು ಸಂಭವಿಸು ವುದು.' ವ'ಕಾರ ಹೇಳುವಾಗಲೇ ಹೋಮಿಸಿದರೆ ಶತ್ರು ವೃದ್ಧಿಯಾಗುತ್ತದೆ.'ಹ'ಕಾರ ಹೇಳುವಾಗಲೇ ಹೋಮಿಸಿದರೆ ವ್ಯಾಧಿಯುಂಟಾಗುವುದು. ಹಾಗಾದರೆ ಯಾವಾಗ ಹೋಮಿಸಬೇಕು.?
*ತ್ರೀನ್ ವರ್ಣಾನ್ ಸಮ್ಯಗುಚ್ಛಾರ್ಯ ಆಕಾರೇ ಚಾಹುತಿಂ ಹುನೇತ್*|
*ತಸ್ಯಾಯುಷ್ಯಂ ಶ್ರಿಯಂ ವಿದ್ಯಾತ್ ಬ್ರಹ್ಮ ಲೋಕೇ ಮಹೀಯತೇ*||
 ಮೂರೂ ವರ್ಣಗಳನ್ನು ಚೆನ್ನಾಗಿ ಉಚ್ಛರಿಸಿ 'ಸ್ವಾಹಾ'ಶಬ್ಧದ ಕೊನೆಯ 'ಆ'ಕಾರ ಉಚ್ಚರಿಸುವ ಸಮಯದಲ್ಲಿ ಆಹುತಿಯನ್ನು ಅಗ್ನಿಯಲ್ಲಿ ಸಮರ್ಪಿಸಬೇಕು. ಈ ರೀತಿ ಆಹುತಿ ಕೊಡುವವರಿಗೆ ಆಯುಷ್ಯ, ಐಶ್ವರ್ಯ ಅಭಿವೃದ್ಧಿ ಯಾಗುವೂದಲ್ಲದೇ ಮೋಕ್ಷ ವೂ ಸಿದ್ಧಿಸುತ್ತದೆ.
               🦚

June 19, 2021

ಗ್ರಹ ಚರಿತ್ರೆ


#ಜಾತಕತಿಲಕಂ #ಗ್ರಂಥಾಧಾರಿತವಾಗಿ_

ವಾಸ್ತು ದೇವಾಂಶ ನಾದ ಸಂಕರ್ಷಣನು ಮೊದಲು ಜಲವನ್ನು ನಿರ್ಮಿಸಿ ಆ ಜಲದಲ್ಲಿ ಶಕ್ತಿ ವಿಶೇಷ (ವೀರ್ಯ)  ಬಿಟ್ಟನು.. ಆ ಶಕ್ತಿಯಿಂದ ಕೂಡಿದ ಜಲವು ಚಿನ್ನದ ಚೆಂಡಿನಂತೆ ಗುಂಡಾದ ಒಂದು ವಸ್ತುವಾಯಿತು....ಕತ್ತಲೆಯಿಂದ ಆವೃತವಾದ ಆ ಚಿನ್ನದ ಗೋಳಾಕೃತಿಯಲ್ಲಿ ಸಂಕರ್ಷಣಾಂಶದಿಂದ ಅನಿರುದ್ಧನು ಕಾಣಿಸಿಕೊಂಡನು.. ಮೊದಲು ಕಾಣಿಸಿಕೊಂಡಿದ್ದರಿಂದ ,ಈ ಅನಿರುದ್ಧನನ್ನ *ಆದಿತ್ಯ*  ನೆಂದು ಕರೆಯುತ್ತಾರೆ...ಆದಿತ್ಯನ ಜಗತ್ತಿನ ಸೃಷ್ಟಿ ಸ್ಥಿತಿ ಲಯಗಳಿಗೆ ಕಾರಣನು ಲೋಕ ಪ್ರಕಾಶಕರೂ ಆಗಿ ಸುವರ್ಣ ಮಧ್ಯದಲ್ಲಿ ಸದಾ ಕಾಲದಲ್ಲೂ ಸುತ್ತುತ್ತಾ ಇರುತ್ತಾನೆ ..ಈ ಆದಿತ್ಯನ ಮಂಡಲವೇ ಋಗ್ವೇದ ಮಂತ್ರಗಳು ;ಸಾಮವೇದ ಮಂತ್ರಗಳೇ ಆ ಮಂಡಲದ ಕಿರಣಗಳು ;ಯಜುರ್ವೇದ ಮಂತ್ರಗಳು ಆ ಮಂಡಲದ ಸ್ವರೂಪ ;ಈ ವಿಧವಾಗಿ ಮೂರು ವೇದಗಳ ಸ್ವರೂಪದಂತಿರುವ ಈ ಆದಿತ್ಯನೇ ಕಾಲಕ್ಕೇ ಕಾರಣನೂ; ಮತ್ತು ಜಗತ್ತಿನ ಸೃಷ್ಟಿ, ಸ್ಥಿತಿ, ಲಯ,ಗಳನ್ನು ಮಾಡುವುದರಲ್ಲಿ ಸಮರ್ಥನು... ಜಗತ್ತೆಲ್ಲ ಈತನಲ್ಲೇ ಅಡಗಿದೆ..ಜಗತ್ತೇ ಈತನ ರಥ.. ಇದಕ್ಕೆ ೧೨ ತಿಂಗಳುಗಳಿಂದ ಕೂಡಿದ ವರ್ಷವೇ ಚಕ್ರ ..ಗಾಯತ್ರೀ  ಮೊದಲಾದ ಏಳು ಛಂದಸ್ಸುಗಳೇ ಕುದುರೆಗಳು.. ಈ ಅನಿರುದ್ಧನ ಅಹಂಕಾರ ತತ್ವದಿಂದ ಕೂಡಿದ ಬ್ರಹ್ಮನನ್ನು ಜಗತ್ ಸೃಷ್ಟಿ ಮಾಡಲು ಸೃಜಿಸಿ ಆತನಿಗೆ ಶ್ರೇಷ್ಠವಾದ ವೇದಗಳನ್ನು ಕೊಟ್ಟು ಸುವರ್ಣಾಂಡ ಮದ್ಯದಲ್ಲಿಟ್ಟಿರುವುದು..

ಬ್ರಹ್ಮನಿಗೆ ಸೃಷ್ಟಿಸುವ ಇಚ್ಛೆ ಯಾದ ಮೇಲೆ ಕೂಡಲೇ ಆತನ ಮನಸ್ಸಿನಿಂದ *ಚಂದ್ರನು* ಕಣ್ಣಿನಿಂದ ತೇಜೋ ರೂಪಿಯಾದ ಸೂರ್ಯನೂ ಹುಟ್ಟಿದರು.. ಸೂರ್ಯನು ತೇಜೋ ರೂಪಿ ;ಚಂದ್ರನು ಜಲರೂಪಿ;ಅನಂತರ ಮನಸ್ಸಿನಿಂದ ಆಕಾಶ; ಆಕಾಶದಿಂದ ವಾಯು; ವಾಯುವಿನಿಂದ ಅಗ್ನಿ; ಅಗ್ನಿಯಿಂದ ನೀರು; ನೀರಿನಿಂದ ಪೃಥ್ವಿ ;ಈ ಕ್ರಮದಲ್ಲಿ ಪಂಚಭೂತ ಸೃಷ್ಟಿಯಾದ ಮೇಲೆ ಇವುಗಳಿಂದ *ಕುಜ ಬುಧ ಗುರು ಶುಕ್ರ ಶನಿ* ಈ ಐದು ಗ್ರಹಗಳ ಸೃಷ್ಟಿ ಆಗಿದೆ.. ಚಂದ್ರ ಬುಧ ಶುಕ್ರ ಸೂರ್ಯ ಕುಜ ಗುರು ಶನಿ ಈ ಕ್ರಮದಲ್ಲಿ ಗ್ರಹಗಳು ಈ ಕ್ರಮದಲ್ಲಿ ಗ್ರಹಗಳು ಮೇಲೆ ಮೇಲೆ ಇದ್ದು ತಮ ತಮಗೆ ನಿಯತವಾದ ಮಾರ್ಗಗಳಲ್ಲಿ ಭೂಮಿಯ ಸುತ್ತಲೂ ಸುತ್ತುತ್ತಿದ್ದಾರೆ ಎಂದು *ಸೂರ್ಯ ಸಿದ್ಧಾಂತ* ಗ್ರಂಥದಲ್ಲಿದೆ...  

ಗ್ರಹಗಳ ಅಧಿಪತಿ *ಸೂರ್ಯ*, ನಕ್ಷತ್ರಗಳಿಗೆ ಒಡೆಯ *ಚಂದ್ರ* ಸುರ ಸೇನಾಧಿಪತಿಯಾದ ಸ್ಕಂದನೇ *ಅಂಗಾರಕ* ನಾರಾಯಣನೇ *ಬುಧ* ದೇವಗುರು ವೇ *ಗುರು* ಅಸುರಗುರುವೇ *ಶುಕ್ರ* ಯಮನೇ *ಶನಿ* ...

ಸಹಸ್ರ ರಶ್ಮಿ ಯಾದ ಸೂರ್ಯನ ಕಿರಣಗಳಲ್ಲಿ ಸುಷುಮ್ನಾ ಕಿರಣವೂ ಚಂದ್ರನಿಗೂ; ,ಹರಿಕೇಶವು ನಕ್ಷತ್ರಗಳಿಗೂ; ವಿಶ್ವ ಕರ್ಮವೂ ಬುದನಿಗೂ; ವಿಶ್ವಶ್ರವೆಯು  ಶುಕ್ರನಿಗೂ; ಸಂಪದ್ವಸುವು ಕುಜನಿಗೂ; ಅರ್ವಾವಸುವೂ ಗುರುವಿಗೂ; ಸ್ವರಾಟ್ ಕಿರಣವು ಶನಿಗೂ; ಪ್ರಕಾಶವಾಗಿದೆ.. ತೇಜಸ್ಸು ಮತ್ತು ಜಲವನ್ನು ಹರಿಯುವಂತೆ ಮಾಡುವುದರಿಂದ ಸೂರ್ಯನನ್ನು *_ಸವಿತೃ_* ಎಂದು ಕರೆಯುತ್ತಾರೆ...

ಈ ಗ್ರಹ (ಜೋತಿರ್ಮಂಡಲ)ರೂಪವಾದ ಸ್ಥಾನಗಳು ದೇವ ಗೃಹಗಳು.. ದೇವಗೃಹಗಳ ಹೆಸರಿನಿಂದಲೇ ಅಲ್ಲಿ ವಾಸ ಮಾಡುವ ದೇವತೆಗಳನ್ನು ಕರೆಯುತ್ತಾರೆ.ಈ ಎಲ್ಲಾ ತೇಜ :ಸ್ಥಾನಗಳೂ ಪುಣ್ಯವಂತರಿಗೆ ಪುಣ್ಯಫಲ ಭೋಗಕ್ಕಾಗಿ ಸೃಷ್ಟ್ಯಾದಿಯಲ್ಲಿ  ರಚಿಸಲ್ಪಟ್ಟಿವೆ.. ಇವು ಪ್ರಳಯ ಕಾಲದವರೆಗೂ ಶಾಶ್ವತವಾಗಿರುತ್ತವೆ.. ಒಂದೊಂದು ಮನ್ವಂತರದಲ್ಲೂ ಬೇರೆ ಬೇರೆಯವರು ಈ ಸ್ಥಾನಗಳಿಗೆ ಅಧಿಕಾರಿಗಳಾಗಿರುತ್ತಾರೆ ...ಈಗಿನ ವೈವಸ್ವತ ಮನ್ವಂತರದಲ್ಲಿ ಅದಿತಿ ಪುತ್ರನಾದ ವಿವಸ್ವಾನ್ ಎಂಬುವನು ಸೂರ್ಯನಾಗಿಯೂ ;ಧರ್ಮ ಪುತ್ರನಾದ ತ್ಯಿಷಿ ಅಥವಾ ವಸು ಎಂಬುವನು ಚಂದ್ರನಾಗಿಯೂ; ರಾಕ್ಷಸ ಗುರುವಾದ ಭೃಗು ಮುನಿಯ ಪುತ್ರನು ಶುಕ್ರ ನಾಗಿಯೂ ;ಅಂಗೀರಸನ ಪುತ್ರನಾದ ಬೃಹತ್ತೇಜನು  ದೇವಗುರುವಾಗಿಯೂ; ತ್ಯಿಷಿ ಎಂಬುವನ ಪುತ್ರನು ಬುಧನಾಗಿಯೂ ;ಸೂರ್ಯನಿಗೆ "ಸಂಜ್ಞಾ "ಎಂಬ ಪತ್ನಿಯಲ್ಲಿ ಹುಟ್ಟಿದ ವಿರೂಪ ನಾದ ಪುತ್ರನು ಶನಿಯಾಗಿಯೂ; ಅಗ್ನಿಗೆ "ವಿಕೇಶಿ "ಎಂಬ ಪತ್ನಿಯಲ್ಲಿ ಹುಟ್ಟಿದ ಯುವಕನಾದ ಪುತ್ರನು ಅಂಗಾರಕನಾಗಿಯೂ; ದಕ್ಷ ಬ್ರಹ್ಮನ ಪುತ್ರಿಯರು ವೃಕ್ಷ ಅಂದರೆ ನಕ್ಷತ್ರಗಳಾಗಿಯೂ ಆಯಾ ಗೃಹಗಳಲ್ಲಿ ರಾರಾಜಿಸುತ್ತಿರುವರು....

ಸೂರ್ಯನ ಗೃಹ ಶುಭ್ರವೂ ಅಗ್ನಿಮಯವೂ ಆಗಿದೆ... ಚಂದ್ರನ ಗೃಹ ಶುಕ್ಲ ವರ್ಣದಿಂದ ಕೂಡಿ ಜಲಮಯವಾಗಿದೆ. ಬುಧನ ಗೃಹ ಶಾಮ ವರ್ಣದಿಂದ ಕೂಡಿ ಜಲ ಮಯವಾಗಿದೆ.. ಶುಕ್ರನ ಗೃಹ ಶುಭ್ರವೂ ಜಲಮಯವೂ ಪದ್ಮಾಕೃತಿಯುಳ್ಳದ್ದು ಆಗಿದೆ... ಅಂಗಾರಕನ ಗೃಹ ಲೋಹಿತ ವರ್ಣದಿಂದ ಕೂಡಿ ಜಲಮಯವಾಗಿದೆ ..ಗುರುವಿನ ಗೃಹ ಹಸಿರು ವರ್ಣದಿಂದ ಕೂಡಿ ಜಲಮಯವಾಗಿದೆ...ಶನಿಯ  ಗೃಹ ಕೃಷ್ಣ ವರ್ಣದಿಂದ ಕೂಡಿ ಜಲಮಯಯವಾಗಿದೆ..

ಸೂರ್ಯನಲ್ಲಿ ಮಾಸ ಭೇದದಿಂದ *ವಿಷ್ಣು ,ಧಾತೃ, ಭಗ ,ಪೂಷಾ, ಮಿತ್ರ ,ಇಂದ್ರ, ವರುಣ ,ಆರ್ಯಮ ,ವಿವಸ್ವಾನ್,ಅಂಶುಮಾನ್, ಪರ್ಜನ್ಯ ,ತ್ವಷ್ತ್ಠ್ರು;* ಈ ೧೨ ಮಂದಿ ದೇವತೆಗಳ ಅಂಶವಿರುತ್ತದೆ..ಇದರಿಂದ ಸೂರ್ಯನ ಕಿರಣ ಸಂಖ್ಯೆಯಲ್ಲೂ ವ್ಯತ್ಯಾಸವಿರುತ್ತದೆ... 
 ಸೂರ್ಯನಲ್ಲಿ ವಿಷ್ಣಂಶವಿದ್ದಾಗ ೧೨೦,ಆರ್ಯಮಾಂಶದಲ್ಲಿ ೧೩೦೦,ವಿವಸ್ವಂತ , ತ್ವಷ್ಟೃ ಮತ್ತು ಧಾತ್ರಂಶಗಳಲ್ಲಿ೧೧೦೦,ಅಂಶುಮಂತನ ಅಂಶದಲ್ಲಿ ೧೫೦೦,ಪರ್ಜನ್ಯ(ವರುಣ)ನ ಅಂಶದಲ್ಲಿ ೧೪೦೦,ಭಗ ಮತ್ತು ಮಿತ್ರಾಂಶದಲ್ಲಿ ೧೧೦೦,ಇಂದ್ರಾಂಶದಲ್ಲಿ ೧೬೦೦,ಪೂಷಾಂಶದಲ್ಲಿ ೯೦೦ ಕಿರಣಗಳಿರುತ್ತವೆ...ಎಂದು *ಬ್ರಹ್ಮಾಂಡಪುರಾಣ* ದಲ್ಲಿ ಗ್ರಹಚರಿತ್ರೆ ವರ್ಣಿತವಾಗಿದೆ...

ಅಷ್ಟ ಮೂರ್ತಿಗಳಾದ *ಭವ ಶರ್ವ, ಈಶಾನ ,ಶಿವ ,ಪಶುಪತಿ , ಭೀಮಾ ,ಉಗ್ರ ಮಹಾದೇವ* ಸ್ವರೂಪಗಳಾಗಿ ಸೂರ್ಯ ,ನೀರು ,ಭೂಮಿ ,ಬೆಂಕಿ ,ಗಾಳಿ ,ಆಕಾಶ ,ದೀಕ್ಷಿತಾ ಚಂದ್ರ ,ಈ ಎಂಟೂ ಇವೆ.. 
ಇವುಗಳಲ್ಲಿ ಸೂರ್ಯನಿಗೆ ಸುವರ್ಚಲೆಯಲ್ಲಿ ಶನಿಯೂ, ನೀರಿಗೆ ಉಷೆಯಲ್ಲಿ ಶುಕ್ರನೂ, ಭೂಮಿಗೆ ವಿಕೇಶಿಯಲ್ಲಿ ಅಂಗಾರಕನೂ, ಚಂದ್ರನಿಗೆ ರೋಹಿಣಿಯಲ್ಲಿ ಬುಧನು ಹುಟ್ಟಿದವರೆಂದು *ಪದ್ಮಪುರಾಣ* ದಲ್ಲಿದೆ ...

ಇದಲ್ಲದೆ ಕಶ್ಯಪ ಬ್ರಹ್ಮನಿಂದ ಅದಿತಿಯಲ್ಲಿ ಸೂರ್ಯನೂ, ಬ್ರಹ್ಮ ಪುತ್ರನಾದ ಅತ್ರಿಯ ನೇತ್ರದಿಂದ ಚಂದ್ರನೂ, ಚಂದ್ರನಿಂದ ತಾರೆಯಲ್ಲಿ ಬುಧನೂ ಹುಟ್ಟಿರುವರೆಂದೂ, ಅಮೃತಮಥನಕಾಲದಲ್ಲಿ ಚಂದ್ರನು ಹುಟ್ಟಿದನೆಂದೂ,ಮತ್ತೇ ಕೆಲವು ಗ್ರಂಥಗಳಲ್ಲಿದೆ..ಹೀಗೆ ಎಲ್ಲ ಗ್ರಂಥಗಳಿಂದಲೂ,ಗ್ರಹಚರಿತ್ರೆಯನ್ನ ಸಂಗ್ರಹಿಸಿ ಅವುಗಳಲ್ಲಿ ಕಂಡುಬರುವ ವಿರೋಧವನ್ನು ಶಾಸ್ರ್ತಕಾರರು ಹೇಳುವಂತೆ ಯುಗಭೇಧ ವ್ಯವಸ್ಥೆಯಿಂದ ಪರಿಹರಿಸಿಕೊಳ್ಳಬಹುದು.... 

#ಸಂಗ್ರಹ:-ವೇ॥ #ಕೆ #ಎಸ್‌ #ವೀರಪ್ಪಶಾಸ್ತ್ರಿ (#ಕಂಬಾಳು)#ತುಮಕೂರು..

June 16, 2021

ಸುಸ್ಥಿತಿಯ ಅಂಗಾಂಗದಾನ ಶ್ರೇಷ್ಠ ಪರಂಪರೆ

ಸುಸ್ಥಿತಿಯ ಅಂಗಾಂಗದಾನ ಶ್ರೇಷ್ಠ ಪರಂಪರೆ

ಋಗ್ವೇದದಲ್ಲಿ ಮೈನಂ ಎನ್ನುವ ಸೂಕ್ತವೊಂದಿದೆ. ಆಗಾಗ ಈ ಸೂಕ್ತದ ನೆನಪಾಗುತ್ತದೆ. ಯಮನ ಮಗ ದಮನ ಎನ್ನುವವನೇ ಈ ಸೂಕ್ತದ ದೃಷ್ಟಾರ. ಇಲ್ಲಿ ಅಗ್ನಿಯನ್ನು ಸ್ತುತಿಸುತ್ತಾನೆ.

’ಮೈನಮಗ್ನೇ ವಿ ದಹೋ ಮಾಭಿ ಶೋಚೋ ಮಾಸ್ಯ ತ್ವಚಂ ಚಿಕ್ಷಿಪೋ ಮಾ ಶರೀರಂ’ ಎಂದು ಆರಂಭವಾಗುವ ಸೂಕ್ತದಲ್ಲಿ ಅಗ್ನಿಯನ್ನು ಕುರಿತಾಗಿ ಪ್ರಾರ್ಥಿಸುತ್ತಾ ಹೇ ಅಗ್ನಿಯೇ ನಿನ್ನ ಗುಣವೇ ಸುಡುವುದು. ಈ ಪ್ರೇತವನ್ನು ತುಂಬಾ ಹಿಂಸೆಯನ್ನೂ ಕೊಡಬಾರದು. ಪ್ರೇತಕ್ಕೆ ಸಂಪೂರ್ಣವಾಗಿ ಹಿಂಸೆಯೂ ಆಗಬಾರದು. ಈ ಪ್ರೇತದ ಶರೀರವನ್ನಾಗಲೀ ಅಥವಾ ಚರ್ಮವನ್ನಾಗಲೀ ಚದುರಿಸಬೇಡ. ಎಲ್ಲೆಡೆ ಅದು ಹೋಗಬಾರದು. ನೀನು ಯಾವಾಗ ಈ ಶರೀರವನ್ನು ಪಕ್ವವನ್ನಾಗಿ ಮಾಡುವೆಯೋ ಕೂಡಲೇ ಪ್ರೇತವನ್ನು ಪಿತೃಲೋಕಕ್ಕೆ ಕಳುಹಿಸಿಕೊಡು ಎನ್ನುತ್ತಾನೆ. ಅಂದರೆ ಶವವನ್ನು ಸುಡುವ ಕಾಲದಲ್ಲಿ ಅದರ ಅವಯವಗಳು ಚದುರಬಾರದು ಎನ್ನುವ ಆಶಯ. ಮುಂದಿನ ಋಕ್ಕಿನಲ್ಲಿ ಈ ಪ್ರೇತ ಪಿತೃಲೋಕಕ್ಕೆ ಹೋಗುವಾಗ ದೇಹರಹಿತವಾಗಿ ಹೋಗುವುದರಿಂದ ದೇವತೆಗಳಿಗೆ ಅಧೀನವಾಗಿ ಬಿಡುತ್ತದೆ. ದಹನವಾದ ನಂತರ ಶರೀರಕ್ಕೆ ಅಸ್ತಿತ್ವ ಇಲ್ಲ. ಆದರೆ ಪ್ರೇತ ಪಿತೃಲೋಕಕ್ಕೆ ಹೋಗಿ ದೇವತೆಗಳ ಅಧೀನವಾದಾಗ ಸಹ ಪ್ರೇತ ನಮ್ಮ ಅಧೀನದಲ್ಲಿ ಸಹ ಇಲ್ಲ. ಅಂದರೆ ಆ ಪಿತೃರೂಪಿಗೂ ನಮಗೂ ನೇರವಾದ ಸಂಬಂಧ ಇಲ್ಲ. ಆ ಪಿತೃ ನಮಗೆ ಹಿತವನ್ನು ಬಯಸಿ ಆಶೀರ್ವದಿಸಬಹುದು. ಆದರೆ ಇಲ್ಲಿ ಪಿತೃರೂಪಿ ಚಿಕ್ಕವನಾದರೂ ಆತನ ವಯಸ್ಸು ಗಣನೆಗೆ ಬಾರದು. ಯಾಕೆಂದರೆ ಪಿತೃರೂಪಿಯು ಇರುವುದು ಭೂಮಿಯಲ್ಲಲ್ಲ.
ಮುಂದೆ ಅದೇ ದಮನ ಮಹರ್ಷಿ ಕೇಳಿಕೊಳ್ಳುವ ಅಂಶ ಬಹಳ ಮಹತ್ವದ್ದು. 

ಸೂರ್ಯಂ ಚಕ್ಷುರ್ಗಚ್ಛತು ವಾತಮಾತ್ಮಾ ದ್ಯಾಂ ಚ ಗಚ್ಛ ಪೃಥಿವೀಂ ಚ ಧರ್ಮಣಾ |
ಅಪೋ ವಾ ಗಚ್ಛ ಯದಿ ತತ್ರ ತೇ ಹಿತಮೋಷಧೀಷು ಪ್ರತಿ ತಿಷ್ಠಾ ಶರೀರೈಃ || 
 ಹೇ ಪ್ರೇತವೇ ನಿನ್ನ ಕಣ್ಣುಗಳೆರಡೂ ಸೂರ್ಯನನ್ನು ಸೇರಲಿ. ನಿನ್ನ ಶರೀರಕ್ಕೆ ಚೈತನ್ಯ ಒದಗಿಸಿದ ಪ್ರಾಣವು ವಾಯುವನ್ನು ಸೇರಲಿ. ನಿನ್ನ ಕರ್ಮಕ್ಕನುಸಾರವಾಗಿ ನೀನು ದೇವಲೋಕವನ್ನೋ ಅಥವಾ ಇದೇ ಭೂಮಿಯನ್ನೋ ಸೇರಿಕೋ. ಅನುಕೂಲವಾದಲ್ಲಿ ನೀನು ಅಂತರಿಕ್ಷದಲ್ಲಿ ನೆಲೆಸು. ಹಿತಮೋಷಧೀಷು ಪ್ರತಿ ತಿಷ್ಠಾ ಶರೀರೈಃ ನಿನ್ನ ದೇಹದ ಅವಯವಗಳು ಓಷಧಿಗಳಲ್ಲಿ(ಸಸ್ಯಗಳಲ್ಲಿ) ನೆಲೆಸಲಿ. ಇಲ್ಲಿ ಅನೇಕ ಅಂಶಗಳನ್ನು ಗಮನಿಸಬೇಕು. ಬರಿಗಣ್ಣಿನಿಂದ ಸೂರ್ಯನನ್ನು ನೋಡುವುದಾದರೆ ಬೆಳಗಿನ ಉಷಸ್ಸಿನ ಸೂರ್ಯನನ್ನು ನೋಡಬೇಕು ಮತ್ತು ಅಸ್ತಮಾನದ ಸೂರ್ಯನನ್ನು ನೋಡಬೇಕು. ನೆತ್ತಿಯ ಮೇಲಕ್ಕೆ ಬಂದ ಪ್ರಖರನಾದ ಸೂರ್ಯನನ್ನು ನೋಡ ಬಾರದು. ಅದು ಸಾಧ್ಯವೂ ಇಲ್ಲ. ಕಣ್ಣು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಇದು ಗ್ರಹಣ ಕಾಲದಲ್ಲೂ ಹೇಳಲಾಗುತ್ತದೆ. ಇಂದಿನ ವೈದ್ಯಕೀಯ ವಿಜ್ಞಾನವೂ ಬರಿಗಣ್ಣಿನಿಂದ ಸೂರ್ಯಗ್ರಹನ ನೋಡಬಾರದು ಎಂದೇ ಹೇಳುತ್ತದೆ. ಅಂದರೆ ಸೂರ್ಯನಿಗೂ ಕಣ್ಣಿಗೂ ನೇರವಾದ ಸಂಬಂದವಿದೆ. ಸೂರ್ಯ ನಮ್ಮ ನೇತ್ರಗಳನ್ನು ಸುಸ್ಥಿತಿಯಲ್ಲಿಡಬಲ್ಲ ಎಂದು ಅರ್ಥ. ಇನ್ನು ಮೃತ ಶರೀರದಲ್ಲಿನ ಪ್ರಾಣ ಹೋಗುವುದು ದಹನದಲ್ಲಿ ಎನ್ನುವುದನ್ನೇ ಪ್ರಾಣವು ವಾಯುವಿನಲ್ಲಿ ಸೇರಲಿ ಎಂದಿರುವುದು. ದಮನ ಎನ್ನುವ ಋಷಿ ಒಮ್ಮೆ ಯಾಗವೊಂದನ್ನು ನೆರವೇರಿಸುತ್ತಿದ್ದ. ಯಜ್ಞದ ಯಜಮಾನ ಯಾಗದ ಪೂರ್ಣಾಹುತಿಗೂ ಮುನ್ನವೇ ದೀಕ್ಷೆಯಲ್ಲಿರುವಾಗಲೇ ಮೃತನಾದ. ಆಗ ಈ ಋಷಿ ಈ ಋಕ್ಕುಗಳನ್ನು ಪಡೆದು ಯಜಮಾನನ ಅಪರಕ್ರಿಯೆಯನ್ನೂ ಮಾಡಿಸಿದ. ಇಂದಿಗೂ ಯಜ್ಞದ ಮಧ್ಯದಲ್ಲಿ ಯಜಮಾನ ಮೃತನಾದಲ್ಲಿ ಇದೇ ಸೂಕ್ತಗಳನ್ನು ಉಪಯೋಗಿಸಬೇಕು. ಇಲ್ಲಿ ಇನ್ನೊಂದು ಮಹತ್ವವನ್ನು ಗಮನಿಸಬಹುದು. ಋಷಿಯು ಸೂಕ್ಷ್ಮವಾಗಿ ನಮ್ಮ ದೇಹದ ಅಂಗಾಂಗಗಲನ್ನು ದಾನಮಾಡುವುದನ್ನು ಕಾಣಬಹುದು. ಅದು ಸೂರ್ಯ ಎಂದು ಇದ್ದರೂ ದಹನಕ್ಕೂ ಮೊದಲೇ ಈ ಶರೀರದ ಅಂಗಾಂಗಗಳು ಸಹ ಇನ್ನೊಬ್ಬರಿಗೆ ಸೇರಿದ್ದು ಎನ್ನುವುದೇ ಈ ಸೂಕ್ತದ ಮಹತ್ವ ಪಡೆಯುತ್ತದೆ. ಅಂಗಾಂಗ ದಾನ ಎಂದು ನೇರವಾಗಿ ಋಷಿಯು ಹೇಳಿರದಿದ್ದರೂ ಕಣ್ಣುಗಳನ್ನು ಸೂರ್ಯನಿಗೆ ದಾನಮಾಡಿದಂತೆಯೇ ಅಲ್ಲವೇ. ಇನ್ನು ಪ್ರಾಣವಾಯುವಿರುವುದು ಹೃದಯದಲ್ಲಿ ಅಲ್ಲವೆ. ನಮ್ಮ ಅವಯವಗಳೆಲ್ಲ ಪ್ರಕೃತಿಗೆ ಸೇರಲಿ ಎನ್ನುವ ಮಹದಾಕಾಂಕ್ಷೆಯ ಈ ಋಷಿಯ ಚಿಂತನೆ ಅದೆಷ್ಟು ಮಹತ್ವದ್ದು. ’ಅಜೋ ಭಾಗಸ್ತಪಸಾ ತಂ ತಪಸ್ವ’ ಎನ್ನುವ ಮುಂದಿನ ಮಂತ್ರವಂತೂ ಅದೆಷ್ಟು ವಿಷಯ ಒಳಗೊಂಡಿದೆ. ಸುಸ್ಥಿತಿಯಲ್ಲಿರುವ ಶವದ ಅಂಗವು ಉಪಯೋಗಕ್ಕೆ ಬರಲಿ. ಆದರೆ ನಿಷ್ಕ್ರಿಯಗೊಂಡ ಅಥವಾ ನಷ್ಟವಾಗಿರುವ ಅಂಗಗಳನ್ನು ದಹಿಸು ಎನ್ನುವಲ್ಲಿ ಸತ್ತ ನಂತರವೂ ಹಾನಿಗೊಳಗಾಗದ ಅಂಗವನ್ನು ದಾನಮಾಡಬಹುದು ಎನ್ನುವ ಅಂಶ ಅಡಕವಾದಂತೆ ಅನ್ನಿಸುತ್ತದೆ. 
ಹಾಗಾದರೆ ಮೃತದೇಹದ ಕೆಲವೊಂದು ಅಂಗಾಂಗಗಳನ್ನು ದಾನ ಮಾಡುವುದು ಸಹ ವೈದಿಕ ಮಾರ್ಗವೇ, ಒಂದು ದೇಹ ಚೈತನ್ಯ ಕಳೆದುಕೊಂಡಾಗ ಮಿಕ್ಕ ಜೀವಿಗಳಿಗೆ ಆಸರೆಯಾದರೆ ಸಾರ್ಥಕ ಜೀವನ. 

#ಕಾಲಯಾನದಿಂದ
ಸದ್ಯೋಜಾತರು

June 15, 2021

ನವೋನವೋ ಭವತಿ

ನವೋನವೋ ಭವತಿ ಜಾಯಮಾನೋಹ್ನಾಂ ಕೇತುರುಷ ಸಾಮೇತ್ಯಗ್ರಂ | 
ಭಾಗಂ ದೇವೇಭ್ಯೋ ವಿ ದಧಾತ್ಯಾನ್ಪ್ರಚಂದ್ರಮಾಸ್ತಿರತೇ ದೀರ್ಘಮಾಯುಃ || 

ಈ ಜಗತ್ತಿನಲ್ಲಿ ಸಂಗೀತ ಆರಂಭವಾಗಿದ್ದು ವೇದಗಳಿಂದ. ಋಗ್ವೇದದಲ್ಲಿ ಸಹ ಸಂಗೀತ ಉಪಕರಣಗಳ ಉಲ್ಲೇಖ ಸಿಗುತ್ತದೆ. ಇನ್ನು ಯಜುರ್ವೇದದಲ್ಲಿ ಸಂಗೀತದ ಛಾಯೆ ಕಾಣಿಸಿದರೂ ರಾಗಗಳ ಒಂದು ಜೋಡಣೆ ಸಾಮವೇದದಲ್ಲಿ. ಹೀಗೇ ಅತ್ಯಂತ ಪ್ರಾಚೀನ ಕಾಲದ ಜನರಿಂದ ಬಳುವಳಿಯಾಗಿ ಬಂದ ಸಂಗೀತ ಆಸ್ವಾದಿಸದ ಜನ ಇಲ್ಲವೇ ಇಲ್ಲವೇನೋ ಎನ್ನುವಷ್ಟು ವಿರಳ. ಸಂಗೀತ ಎಂದಾಕ್ಷಣ ಒಂದು ಪರಂಪರೆಯ ನೆಲಗಟ್ಟು ಕಾಣಿಸಿಕೊಳ್ಳುತ್ತದೆ. ನಾನು ಹಿಂದುಸ್ಥಾನಿ ಮತ್ತು ಕರ್ನಾಟಕ ಶೈಲಿಯ ಸಂಗೀತವನ್ನೂ ಇಷ್ಟಪಡುವವನು. ಅದರಲ್ಲೂ ನನಗೆ ಕರ್ನಾಟಕ ಸಂಗೀತದ ರಾಗಗಳಲ್ಲಿ ಅತ್ಯಂತ ಹೆಚ್ಚು ಇಷ್ಟವಾಗಿದ್ದು ಬಹುದಾರಿ ರಾಗ. ಅದು ಯಾಕೋ ಈ ರಾಗದ ಹಾಡುಗಳನ್ನು ಕೇಳುತ್ತಿದ್ದರೆ ಪುನಃ ಪುನಃ ಕೇಳಬೇಕು, ಕೇಳುತ್ತಾ ಇರಬೇಕು ಅನ್ನಿಸುತ್ತದೆ. ಕರನಾಟಕ ಸಂಗೀತದ ಪ್ರಮುಖ ವಾಗ್ಗೇಯಕಾರರಲ್ಲಿ ಶ್ರೀ ಶ್ಯಾಮಶಾಸ್ತ್ರಿಗಳು, ಮುತ್ತುಸ್ವಾಮಿ ದೀಕ್ಷಿತರ ಜೊತೆ ಜೊತೆಗೆ ಗುರುತಿಸಿಕೊಂಡವರು ಶ್ರೀ ತ್ಯಾಗರಾಜರು. ಈ ತ್ಯಾಗರಾಜರು ಈ ರಾಗವನ್ನು ಬೆಳಕಿಗೆ ತಂದವರು ಎನ್ನುವ ಉಲ್ಲೇಖಗಳು ಹಲವೆಡೆ ದೊರಕುತ್ತವೆ. 
ಕರ್ನಾಟಕ ಸಂಗೀತದಲ್ಲಿ ಆರೋಹಣ ಮತ್ತು ಅವರೋಹಣಗಳಲ್ಲಿ ಏಳೂ ಸ್ವರಗಳನ್ನು ಹೊಂದಿರುವ ರಾಗಗಳನ್ನು ಸಂಪೂರ್ಣ ರಾಗಗಳು ಎಂದು ಕರೆಯಲಾಗುತ್ತದೆ. ಸಂಪೂರ್ಣ ರಾಗಗಳನ್ನು ಮೇಳಕರ್ತ ವ್ಯವಸ್ಥೆಯಲ್ಲಿ ವರ್ಗೀಕರಿಸಲಾಗಿದೆ. ಒಟ್ಟು ೭೨ ಮೇಳಕರ್ತ ರಾಗಗಳಿವೆ. ಇವುಗಳ ಕುರಿತು ನಾನೇನೂ ಹೆಚ್ಚು ಬರೆಯಲಾರೆ. 
ಕರ್ನಾಟಕ ಸಂಗೀತದ ೨೮ನೇ ಮೇಳಕರ್ತ ಹರಿಕಾಂಭೋಜಿಯ ಷಾಡವ ಔಡವ ಜನ್ಯರಾಗ ಇದು. ಇದರ ಸ್ವರ ಸ್ಥಾನದಲ್ಲಿ ಷಡ್ಜ, ಪಂಚಮ, ಅಂತರಗಾಂಧಾರ, ಶುದ್ಧಮಧ್ಯಮ, ಚತುಶ್ರುತಿ ಧೈವತ, ಮತ್ತು ಕೈಶಿಕೀನಿಷಾದ ಸೇರಿವೆ. ಇದೊಂದು ಸಾರ್ವಕಾಲಿಕ ರಾಗ ಎಂದು ಪ್ರಸಿದ್ಧಿ ಪಡೆದಿದೆ. ಈ ರಾಗದ ಬ್ರೋವಬಾರಮ ಎನ್ನುವ ರಚನೆ ತ್ಯಾಗರಾಜರದ್ದು. ಅದು ಪುನಃ ಪುನಃ ಕೇಳಿಸಿಕೊಳ್ಳುತ್ತದೆ. ಅಷ್ಟು ಸಂತೋಷವನ್ನು ಕೊಡುತ್ತದೆ.
ಹರಿಕಾಂಭೋಜಿಮೇಲಾಚ್ಚ ಬಹುದಾರೀ ಹ್ಯಜಾಯತ |
ಸನ್ಯಾಸಂ ಸಾಂಶಕಂ ಚೈವ ಸಷಡ್ಜಗ್ರಹಮುಚ್ಯತೇ ||
ರಿವರ್ಜ್ಯವಕ್ರಮಾರೋಹೇ ಪೂರ್ಣವಕ್ರಾವರೋಹಕಮ್ |
ಸಗಮಾಧಪಧಾನೀಸಾ ಸನಿಪಾಮಗಸಾನಿಸಾ || ಸಂಗೀತ ಚೂಡಾಮಣಿಯ ಶ್ಲೋಕ ಬಹುದಾರೀ ರಾಗದ ಛಾಯೆಯನ್ನು ಹೇಳುತ್ತದೆ. 
ಇಲ್ಲಿ ನಾನು ಈಗ ಹಾಕಿರುವ ಹಾಡು ’ಭಜಮಾನಸ ವಿಘ್ನೇಶ್ವರಮನಿಷಮ್’ ಎನ್ನುವುದು. ಹಾಡಿರುವವರು ಡಾ. ದೀಪ್ತಿ ನವರತ್ನ. Deepti Navaratna 
ಡಾ. ದೀಪ್ತಿ ನವರತ್ನ ಹಾಡುಗಾರಿಕೆಯಲ್ಲಿ ಅಪ್ರತಿಮ ಸಾಹಸಿಗರು. ಎಂ ಎಸ್ ಸುಬ್ಬುಲಕ್ಷ್ಮೀಯವರ ಕುರಿತಾಗಿಯೇ ಒಂದು ಆಲ್ಬಂ ಅನ್ನು ಹೊರತಂದದ್ದಲ್ಲದೇ ಮೈಸೂರು ಜಯಚಮರಾಜ ಒಡೆಯರ್ ಅವರ ಕೃತಿಗಳನ್ನಾಧರಿಸಿ ಮತ್ತು ಅವರ ಕುರಿತಾಗಿಯೂ ಒಂದು ಆಲ್ಬಂ ಹೊರತಂದಿದ್ದಾರೆ. 
ಸದ್ಯೋಜಾತರು

ಅಗ್ನಿಮುಖ ಪ್ರಯೋಗ

“ಅಗ್ನ ಆಯೂಂಷಿ ಪವಸ ಆಶುವೋರ್ಜಮಿಷಂ ಚ ನಃ | ಆರೇ ಬಾಧಸ್ವ ದುಚ್ಛುನಾಮ್” || 

ಅಗ್ನಿ ಒಂದು ತತ್ವ. ಸ್ವಯಂ ಪ್ರಕಟವಿಲ್ಲ. ಅವಲಂಬನೆ ಬೇಕು. ಅವಲಂಬನೆಯಿಂದ ಪ್ರಕಟಗೊಳ್ಳಬೇಕಾದ ತತ್ವವಾದ ಜೀವಶಕ್ತಿಗೆ ದೇಹವೇ ಅವಲಂಬನೆಯಾಗಿರುತ್ತದೆ. ಪ್ರಕೃತಿಯ ಯಾವುದಾದರೊಂದು ಚರ ಸ್ಥಿರ, ಜಡವಸ್ತುಗಳ ಅವಲಂಬನೆ ಸಿಕ್ಕಿದಲ್ಲಿ ಕರ್ಷಣಭೂತನಾಗಿ ಪ್ರಕಟಗೊಂಡು ಪ್ರಕೃತಿಯಲ್ಲಿ ರೂಪು ಪಡೆಯುತ್ತದೆ. ಹಾಗಾಗಿ “ಅಗ್ನ ಆಯೂಂಷಿ”. ಪ್ರಕಟಗೊಂಡಾ ದಹ್ಯ ಇತರೆ ಆಶ್ರಿತ ವಸ್ತು, ಜೀವಿ, ಜಡಗಳನ್ನು ಪರಿವರ್ತನೆ ಮಾಡುತ್ತದೆ. “ಪವಸ” ವೆಂದರೆ ಇದೇ ರೂಪಾಂತರ ಮಾಡುತ್ತದೆಯೇ ವಿನಃ ನಾಶಕಾರಕವಲ್ಲ. ಇದರಿಂದಾಗಿ ಅದರ ವಿಶಿಷ್ಟಗುಣವನ್ನು ಸಪ್ರಯೋಜಕವಾಗಿ ಬಳಸುವಂತೆ ಮಾಡುವ ಕೆಲ ಉಪಾಯಗಳ ಕ್ರೋಢೀಕರಣವೇ ಆಶು, ಊರ್ಜಾ, ಆಮಿಷ, ಮೂರು ತಂತ್ರಗಳು. ಅದನ್ನೇ ಆಘಾರ, ಆಕೂತಿ, ವಷಟ್ಕಾರಗಳೆಂಬ ಪ್ರಭೇದಗಳು. ಅದರ ಪ್ರವರ್ತನೆಯಿಂದ ಅಂದರೆ ಅದರ ದಹ್ಯ ಶಕ್ತಿಯಿಂದ ಬಾಧಕವನ್ನು ಬೇರ್ಪಡಿಸಿ ಸಮ್ಮುಖಗೊಳಿಸುವ ಸೂತ್ರವೇ “ಅಗ್ನಿಮುಖ ಪ್ರಯೋಗ”.
ಋ.ಮಂ.1, ಸೂಕ್ತ 66, ಮಂತ್ರ 1-2
ರಯಿರ್ನ ಚಿತ್ರಾ ಸೂರೋ ನ ಸಂದೃಗಾಯುರ್ನ ಪ್ರಾಣೋ ನಿತ್ಯೋ ನ ಸೂನುಃ | 
ತಕ್ವಾ ನ ಭೂರ್ಣಿರ್ವನಾ ಸಿಷಕ್ತಿ ಪಯೋ ನ ಧೇನುಃ ಶುಚಿರ್ವಿಭಾವಾ || 1 ||
ದಾಧಾರಕ್ಷೇಮಮೋಕೋ ನ ರಣ್ವೋ ಯವೋ ನ ಪಕ್ವೋ ಜೇತಾ ಜನಾನಾಮ್ | 
ಋಷಿರ್ನ ಸ್ತುಭ್ವಾ ವಿಕ್ಷು ಪ್ರಶಸ್ತೋ ವಾಜೀ ನ ಪ್ರೀತೋ ವಯೋ ದಧಾತಿ || 2 ||

ದೇಹದಲ್ಲಿ ಪರಿಪೂರ್ಣ ವ್ಯಾಪಿಸಿರುವ ಅಗ್ನಿಯು ಜೀವಿಯ ಆಯುಃ ರಕ್ಷಕವಾಗಿದ್ದು ತನ್ನ ಪ್ರಯತ್ನದಲ್ಲಿ ಅಗ್ನಿ ನಿತ್ಯ ನೂತನ, ನಿರಂತರ. ಹಾಗಾಗಿ ಜೀವಿಗೆ ಭಾಸದಿಂದ ಹೊಸತು ನಿರಂತರ. ಕ್ಷಣಕ್ಷಣಕ್ಕೂ ಬದಲಾವಣೆ ಶತಸ್ಸಿದ್ಧ. ಅದನ್ನಾಧರಿಸಿದ ಅಗ್ನಿ ಸ್ವರೂಪದಂತೆ ಜೈವಿಕಾಧಾರಿತ ಜೀವನ ವ್ಯವಸ್ಥೆಯನ್ನು ಸಮ್ಮುಖಗೊಳಿಸುವುದೇ ಅಗ್ನಿಮುಖ. ತನ್ಮೂಲಕ ಅಂತಃಶುದ್ಧಿ, ದೇಹಶುದ್ಧಿ, ವಿಚಾರಶುದ್ಧಿಯೊಂದಿಗೆ ಅಗ್ನಿಯ ಮುಖೇನ ಆರೋಗ್ಯ, ಜ್ಞಾನ, ಆನಂದ ಸಂಪಾದನೆಯೊಂದಿಗೆ ಸಾಧಿಸುವ ಸಾಧನೆಯಾಗಿರುತ್ತದೆ. ಅದನ್ನು ಸಾಧಿಸಲು ಅಗ್ನಿಮುಖ ಪ್ರಯೋಗದರಿವು ಅಗತ್ಯ. 

ಇಷ್ಟಲಿಂಗದ ಮೇಲೆ ಕಂತೆ ಏಕೆ ಕೂಡಿಸಬೇಕು ?

ಇಷ್ಟಲಿಗದ ಮೇಲೆ ಕಂತೆ ಏಕೆ ಕೊಡಿಸಬೇಕು 
****************************

ಇಷ್ಟಲಿಂಗ ಪೂಜೆಯಿಂದ ಅಧ್ಯಾತ್ಮಿಕ ಪ್ರಗತಿಯ ಜೋತೆಗೆ ಮನುಷ್ಯನ ಶಾರೀರಿಕ ಹಾಗೂ ಮಾನಸಿಕ ಸ್ವಾಸ್ಥ್ಯವು ಸುಧಾರಣೆಯಾಗಿ ಜೀವನವೆಲ್ಲ ಆನಂದಮಯವಾಗಿರುತ್ತದೆ. 

ಇಷ್ಟಲಿಂಗ ದ ಮೇಲೆ ಚಿದ್ರಸ ಕಂತೆ ಏಕೆ ಎಂಬ ಪ್ರಶ್ನೆ ಬಹಳ ಜನರ ಮನಸಿನಲ್ಲಿ ಬಂದಿರುತ್ತದೆ. ಸಂಪೂರ್ಣ ಮಾಹಿತಿ ಇರಲ್ಲ.
    
ಕಂತೆಯಲ್ಲಿ ಗೇರೆಣ್ಣೆಯನ್ನೆ ಏಕೆ ಬಳಸುತ್ತಾರೆಂಬುದು ಸಹ ವಿಚಾರಯೋಗ್ಯ ಅಂಶವೇ. 

ಇಷ್ಟಲಿಂಗಕ್ಕೆ ಮೇಲೆ ಲೇಪಿಸಲು ನಿರ್ಮಿಸಿದ ಕಂಥೆಯು ಭಲ್ಲಾತಕೀ(ಗೇರೆಣ್ಣೆ)ಯಿಂದ ತಯಾರಿಸಲ್ಪಟ್ಟಿರುತ್ತದೆ. 
 
"ಆಯಸ್ಕಾಂತ ಭಲ್ಲಾತಕೀ....... ಇತ್ಯೇನಾನಿ ರಸಾಯನಿ (ವೈದ್ಯಶತಶ್ಲೋಕಿ ಪುಟ(109) 
ಎಂಬ ಉಕ್ತಿಯಲ್ಲಿ ಆಯಸ್ಕಾಂತ ಹಾಗೂ ಗೇರೆಣ್ಣೆಗಳು ರಸಾಯನ ಔಷಧಗಳೆಂದು ಪ್ರತಿಪಾದಿಸಲ್ಪಟ್ಟಿವೆ.

ಗೇರು ಅಥವಾ ಭಲ್ಲಾತಕಕ್ಕೆ ಆಯುರ್ವೇದ ಶಾಸ್ತ್ರದಲ್ಲಿ ಬಹಳ ಮಹತ್ವವಿದೆ. 
"ಭಲ್ಲಾತಕ ಕ್ಷೀರಂ ತತ್ಪ್ರಯೋಗಾತ್ ವರ್ಷಶತಂ ಅಜರಂ ವಯಸ್ತಿಷ್ಠತೀತಿ ಸಮಾನಂ (ಚರಕ ಸಂಹಿತೆ, ಚಿಕಿತ್ಸಾಧ್ಯಾಯ)

ವಿಶುದ್ದಗೊಳಿಸದೇ ಬಳಸಿದಾಗ ಹಲವಾರು ಬಾರಿ ಸುಡುವ ಗಾಯಗೊಳಿಸುವ ಗೇರು, ನೂರುಕಾಲ ಬಾಳು ನೀಡುವ ಅಮೃತೌಷಧವೆಂದೂ ಪರಿಗಣಿತವಾಗಿದೆ. ಇಂತಹ  ಸುಡುವ ಅಗ್ನಿಯ ತೆರದಿ ಇರುವ ಗೇರು ಯಥೋಚಿತವಾಗಿ ಬಳಸಿದಾಗ ಅಮೃತಸದೃಶವಾಗಿ ಮಾನವ ಶರೀರಕ್ಕೆ ಉಪಕರಿಸುತ್ತದೆ.

ಬಯಲು ಸೀಮೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಕೇರುಮರದ ಔಷಧ ಪ್ರಭಾವ ಮೂರು ಸಾವಿರ ವರ್ಷಗಳಿಂದ ನಮ್ಮ ಜನರಿಗೆ ಚಿರಪರಿಚಿತ.
ಕೇರುಕಾಯಿ (ಕ್ಯಾರು ಅಂತಾರೆ ಹಳ್ಳಿಕಡೆ)  
ಕೇರುಕಾಯಿಯನ್ನು ನೋಡಿದರೆ ತಟ್ಟನೇ ನಮಗೆ ಪಾಣಿಪೀಠದ ಮೇಲಿನ (ಕೈಯಲ್ಲಿ) ಲಿಂಗದ ನೆನಪಾಗುತ್ತದೆ. ದುಂಡನೆಯ ಮಾಂಸಲ ಹಣ್ಣು ಪಾಣಿಪೀಠದಂತಿದೆ.  ನಡುವೆ ಬಾಣದಾಕಾರದ ಲಿಂಗವನ್ನು ಹೋಲುವ ಬೀಜ. ಜನಪದೀಯರಲ್ಲಿ ಒಂದು ಸಾದೃಶ್ಯ ಸಿದ್ದಾಂತ ಬಹಳ ಮಹತ್ವ ಪಡೆದಿದೆ. ಅಥರ್ವ ವೇದದ ಕಾಲದಿಂದಲೂ ಈ ಸಿದ್ದಾಂತವು ಸಾಧಿತವಾಗಿದೆ.  ಲಿಂಗಾಕಾರದ ಕೇರುಹಣ್ಣನ್ನು ಕೇವಲ ಆಕಾರದ ದೃಷ್ಟಿಯಿಂದ ಮಾತ್ರ ಲಿಂಗದ ಕಂತೆಗೆ ಬಳಸಲಾಗಿದೆಯೆಂದರೆ ಅಸಮರ್ಥನೀಯವೆನಿಸುತ್ತದೆ.

ಭಲ್ಲಾತಕ ಅಥವಾ ಕೇರು ಬಹಳ ಶಕ್ತಿಶಾಲಿ ಔಷಧ, ಉತ್ತಮ ರಸಾಯನವಾಗಿಯೂ ಕಾರ್ಯನಿರ್ವಹಿಸುತ್ತದೆ. ದೇಹದ ಅಕಾಲ ಮುಪ್ಪನ್ನು ನಿವಾರಿಸುತ್ತದೆ. ರೋಗದ ಕ್ಷಮತೆಯನ್ನು ವರ್ಧಿಸುತ್ತದೆ. ಇನ್ನು ಲಿಂಗವನ್ನು ಅಗ್ನಿ, ತೇಜಸ್ಸು ಎಂಬ ವಿಶೇಷಣಗಳಿಂದಲೂ ಕರೆಯಲಾಗುತ್ತದೆ.  
ಭಲ್ಲಾತಕವನ್ನೂ ಅಗ್ನಿ ಎಂಬ ಪರ್ಯಾಯ ನಾಮದಿಂದ ಕರೆಯಲಾಗುತ್ತದೆ.  ಗುಣ, ಕರ್ಮದಲ್ಲಿ ಅದು ಅಗ್ನಿಸಮನಾಗಿಯೇ ಇದೆ.  ಪಾಪರಾಶಿ ಮತ್ತು ರೋಗರಾಶಿಗಳನ್ನು ಅದು ಭಸ್ಮೀಕರಿಸುವುದೆಂದು ಕಂತೆಗೆ ಬಳಸಿದರು. ಕಾಮಾಲೆ ರೋಗದಲ್ಲಿ 'ಚಿತ್ರಮೂಲ' ವೆಂಬ ಹೆಸರಿನ ದ್ರವ್ಯವನ್ನು ಬಳಸಲಾಗುತ್ತದೆ. ಅದೂ ಕೂಡ ಸುಡುವ ಗುಣವುಳ್ಳದ್ದಾಗಿದ್ದರೂ ಅದನ್ನು ಕಂತೆಗೆ ಬಳಸುವುದಿಲ್ಲ.
ಕೇರನ್ನು ಬಳಸಿ ಲಿಂಗದ ಆಯುಷ್ಯ ಮತ್ತು ಆ ಲಿಂಗವನ್ನು ಧರಿಸುವವನ ಆಯುಷ್ಯವನ್ನು ವೃದ್ಧಿಸುವುದು ಪ್ರಾಚೀನರ ಪ್ರಧಾನ ಗುರಿಯಾಗಿತ್ತು. 
ಹೀಗಾಗಿ ಕಂತೆಯಲ್ಲಿ ಗೇರೆಣ್ಣೆಯನ್ನೇ ಆಧ್ಯ ಪದಾರ್ಥವಾಗಿ ಬಳಸಲಾಗುತ್ತದೆ.
     ಗೇರೆಣ್ಣೆಯನ್ನು ಶುದ್ಧಗೊಳಿಸಿ ಶೂಲ, ಮೂಲವ್ಯಾಧಿ ಮತ್ತು ಅತಿಸಾರ ಮುಂತಾದ ರೋಗಗಳಿಗೆ ಉಪಯೋಗಿಸುವ ವಿಧಾನವು "ಗುಣ ಭೂಷಣ" ವೈಧ್ಯನಿಘಂಟುವಿನಿಂದ ತಿಳಿದುಬರುತ್ತದೆ. ಚರಕಸಂಹಿತೆ ಚಿಕಿತ್ಸಾಸ್ಥಾನ 1 ನೇ ಅಧ್ಯಾಯದಲ್ಲಿ ಭಲ್ಲಾತಕೀ ಅಂದರೆ ಗೇರೆಣ್ಣೆಯನ್ನು ಶುದ್ಧಗೊಳಿಸಿ ಯೋಗ್ಯ ರೀತಿಯಿಂದ ಉಪಯೋಗಿಸಿದರೆ ಅಮೃತ ಸದೃಶವಾಗುತ್ತದೆ ಎಂಬುದನ್ನು ತಿಳಿಸಿ, ಅದರಿಂದ ಭಲ್ಲಾತಕಘೃತ, ಭಲ್ಲಾತಕಕ್ಷೀರ, ಭಲ್ಲಾತಕಕ್ಷೌದ್ರ, ಭಲ್ಲಾತಕಗುಡ, ಭಲ್ಲಾತಕಯೂಷ, ಭಲ್ಲಾತಕತೈಲ, ಭಲ್ಲಾತಕಪಲಲ, ಭಲ್ಲಾತಕಸಕ್ತು, ಭಲ್ಲಾತಕ ಲವಣ ಮತ್ತು ಭಲ್ಲಾತಕ ತರ್ಪಣವೆಂಬ ಹತ್ತು ವಿಧವಾದ ಔಷಧವನ್ನು ತಯಾರಿಸಿ ಉಪಯೋಗಿಸುವ ರೀತಿಯನ್ನು ತಿಳಿಸಲಾಗಿದೆ ಎಂಬ ವಿಷಯವನ್ನು ಶ್ರೀ ಜಿ.ಟಿ. ಅಕ್ಕುಲಯ್ಯ ದೀಕ್ಷಿತರು " ಇಷ್ಟಲಿಂಗ ವಿಜ್ಞಾನ" ಪುಸ್ತಕದಲ್ಲಿ ವಿಶದಪಡಿಸಿದ್ದಾರೆ.

ಸಸ್ಯಾಶಾಸ್ತ್ರದನುಸಾರ Semecarpus anacardium Linn ಎಂದು ಕರೆಯಲ್ಪಡುವ ಭಲ್ಲಾತಕವು ಭಲ್ಲಿ, ಅರುಸ್ಕರ, ಅಗ್ನಿಕ, ಅಗ್ನಿಮುಖ, ವೀರವೃಕ್ಷ ಇತ್ಯಾದಿ ಪರ್ಯಾಯವಾದ ನಾಮಗಳಿಂದ ಗುರುತಿಸಲ್ಪಡುವ ಇದು ಆಂಗ್ಲಭಾಷೆಯಲ್ಲಿ Marking Nut ಎಂಬ ನಾಮದಿಂದ ಪ್ರಸಿದ್ಧವಾಗಿದೆ. Anacardiac acid, cardol, Catechol, Anacardol and Bhilwanol oil ಗಳನ್ನು ಹೊಂದಿರುವ ಇದರ ಹಣ್ಣುಗಳು ಕುಷ್ಠ, ಉಪದಂಶ, ಶುಕ್ರದೌರ್ಬಲ್ಯ, ಮಸ್ತಿಷ್ಕ, ನರದೌರ್ಬಲ್ಯ, ಅಪಸ್ಮಾರ, ಅರ್ಶ, ಯಕೃತ್ - ಪ್ಲೀಹ ವಿಕಾರ, ಹೃದ್ರೋಗ, ಗ್ರಹಣಿ, ಸರ್ಪದಂಶ, ವಾತವಿಕಾರ,ಜ್ವರ ಮುಂತಾದ ರೋಗಗಳಲ್ಲಿ ಅತ್ಯುಪಯುಕ್ತವಾಗಿವೆ. ಮಧುರ -ಕಷಾಯ ರಸದ, ಲಘು ಗುಣವುಳ್ಳ ಸ್ನೀಗ್ಯ- ತೀಕ್ಷ್ಣ ವೀರ್ಯದ, ಮಧುರ ವಿಪಾಕದ ಈ ದ್ರವ್ಯವು ಕಫವಾತ ಶಾಮಕವಾಗಿ , ಪಿತ್ತಸಂಶೋಧಕವಾಗಿಯೂ ಕೆಲಸ ಮಾಡುತ್ತದೆ. ಮೂಲವ್ಯಾಧಿ, ಅಜಿರ್ಣದಿಂದ ಬಳಲುವವರಿಗೆ ಇದು ಉತ್ತಮ ಔಷಧಿಯಾಗಿದೆ.  ಮತವ್ಯಾಧಿ ( Rheumatoid Arthritis ಯಲ್ಲಿ, ಉಳುಕುನೋವುಗಳಿಗೆ , ಕೆಮ್ಮು- ದಮ್ಮುಗಳಿಗೆ ಪ್ರಯೋಜನಕಾರಿಯಾಗಿದೆ. Syphilis, Epilepsy ಗಳಂಥ ಕಷ್ಟಸಾಧ್ಯ ರೋಗಗಳಿಗೂ ಇದು ದಿವ್ಯೌಷದವಾಗಿದೆ. 
ಕೆಲವರಿಗೆ ಅಲರ್ಜಿ ಸಮಸ್ಯೆ ಇರುವವರಿಗೆ ಇದರ ರಸ ತಗುಲಿದರೆ ಕೆಲವರಿಗೆ ವಿಪರೀತ ಕೆರೆತ,ಗಂಧೆಗಳುತ್ಪನ್ನವಾಗಬಹುದು ಇಂತಹವರು ವೈದ್ಯರ ಮಾರ್ಗದರ್ಶನದಲ್ಲಿಯೇ ಇದನ್ನು ಉಪಯೋಗಿಸಬೇಕು. ಇದರ ನೇರ ಬಳಕೆ ನಿಷಿದ್ಧ ವಿದ್ದು ಸೂಕ್ತ ಶೋಧನವಿಧಿಯಿಂದ ಸಂಸ್ಕರಿಸಿದ ನಂತರವೇ ಇದನ್ನು ಬಳಸಬೇಕು.

ಕಂಥೆ:-

ಇಷ್ಟಲಿಂಗವನ್ನು ಸಿದ್ದಪಡಿಸಲು, ಶಿಲಾಲಿಂಗದ ಹೊರಗವಚದ ನಿರ್ಮಾಣಕ್ಕೆ ಬೇಕಾಗುವ ವಸ್ತುವನ್ನು ಕಂತೆ, ಕಾಂಥೆ, ಕಂತಿ ಇತ್ಯಾದಿ ಕರೆಯಲಾಗುತ್ತದೆ. ಈ ಕಂಥೆಯನ್ನು ಕೇರು, ಮಣ್ಣಿನ ಗಡಿಗೆ,ಮುಚ್ಚಳ,ಕೊಡ, ಆಕಳ ಬೆರಣಿ,ಹಾಸುಗಲ್ಲು, ರುಬ್ಬುಗಲ್ಲು, ಚಮಟಿಗೆ, ಕಡಾಯಿ ,ಕಡಚಗಿ, ಹಣತೆ, ರಾಳ , ಜಾಲ್ದೋಪ, ಬತ್ತಿ, ಕುಸುಬಿ ಎಣ್ಣೆ, ಆಕಳತುಪ್ಪ, ಕರ್ಪೂರ, ಶುದ್ಧ ಧೋತರ, ಬಟ್ಟೆ ಇತ್ಯಾದಿ ವಸ್ತುಗಳ ಸಹಾಯದಿಂದ ತಯಾರಿಸಲ್ಪಟ್ಟಿರುತ್ತದೆ. 
ಕಂಥೆಗೆ ಕೇರೆಣ್ಣೆ/ ಗೇರೆಣ್ಣೆಯೇ ಮುಖ್ಯವಾದ ಕಚ್ಛಾಸಾಮಗ್ರಿ. ಇದರೊಂದಿಗೆ ಸೇರಿಸುವ ಪದಾರ್ಥಕ್ಕನುಗುಣವಾಗಿ ನಾಲ್ಕು ಪ್ರಕಾರದ ಕಂಥೆಗಳನ್ನು ಹೇಳಲಾಗುತ್ತದೆ.  ಸಾದಾ ಕಂಥೆ, ಎಣ್ಣೆಕಂಥೆ, ತುಪ್ಪದಕಂಥೆ, ಕರ್ಪೂರದ ಕಂಥೆ ಎಂದು ನಾಲ್ಕು ವಿಧದ ಕಂಥೆಗಳು ಬಳಕೆಯಲ್ಲಿವೆ. ಎಣ್ಣೆ, ಕರ್ಪೂರ ,ತುಪ್ಪ, ದಟ್ಟಕಾಡಿಗೆಯ ಮಸಿಯನ್ನು ಮೂಲಕಂಥೆಯೊಡನೆ ಮಿಶ್ರ ಮಾಡಿದಾಗ ಆಯಾ ಮೂಲವಸ್ತುವಿನ ಕಂಥೆಯೆಂಬ ಪರಿಭಾಷೆಯೊಂದಿಗೆ ಗುರುತಿಸಲಾಗುತ್ತದೆ.
    ಇಷ್ಟಲಿಂಗ ಪೂಜೆಯಲ್ಲಿ ಹೇಳಿದ ಪಿಷ್ಠಾದಿ ಲೇಪನಗಳು ,ಪಂಚಾಮೃತಾದಿ ಅಭೀಷೇಕಗಳು ಕಂಥೆಯಲ್ಲಿ ಉಪಯೋಗಿಸಲ್ಪಟ್ಟ ಗೇರೆಣ್ಣೆಯನ್ನು ಆಯುರ್ವೇದ ಪದ್ದತಿಯಂತೆ ಸಹಜವಾಗಿ ಪ್ರತಿದಿವಸ ಶುದ್ಧಗೊಳಿಸುತ್ತವೆ.
ಒಂದು

ಹೀಗೆ ಪೂಜಿಸಲ್ಪಟ್ಟ ಇಷ್ಟಲಿಂಗದ ಅಭಿಷೇಕೋದಕ ಪ್ರೋಕ್ಷಣ ಹಾಗೂ ಲಿಂಗೋದಕವನ್ನು ಪ್ರತಿದಿನ ಪ್ರಾಶನ ಮಾಡುವುದರಿಂದ ಶಾರೀರಿಕ ರೋಗಗಳೆಲ್ಲ ಸಹಜವಾಗಿ ನಿವೃತ್ತಿಯಾಗಿ ಉತ್ತಮ ಆರೋಗ್ಯ ಲಾಭವು ಪ್ರಾಪ್ತವಾಗುವುದು.

ದೇಹದ ಮೇಲೆ ಇಷ್ಟಲಿಂಗ ಧರಿಸಬೇಕೆಕೆ ?
***********************************
 ಆಕಳಿಗೆ ಮೈಮೇಲೆ ಹುಣ್ಣು ಆದಾಗ ಪಶುವೈದ್ಯನು ಬಂದು ಔಷಧ ಕೊಟ್ಟು ಅದನ್ನು ಆಕಳ ತುಪ್ಪದಲ್ಲಿ ಬೆರೆಸಿ ಗಾಯಕ್ಕೆ ಲೇಪಿಸಲು ಹೇಳುತ್ತಾನೆ. ಜಾಣನಾದ ಆಕಳ ಯಜಮಾನನು "ಅದು ಕರೆವ ಹಸು, ಅದರ ಕೆಚ್ಚಲಲ್ಲಿ ಹಾಲಿದೆ, ಆ ಹಾಲಿನಲ್ಲಿ ತುಪ್ಪವಿದ್ದೇ ಇದೆ. ಆದ್ದರಿಂದ ಔಷಧವನ್ನು ಮಾತ್ರ ಹುಣ್ಣಿಗೆ ಹಚ್ಚಿದರೆ ಸಾಕು" ಎಂದು ತಿಳಿದರೆ ಆ ಹುಣ್ಣು ಮಾಯದು. ಅದಕ್ಕಾಗಿ ಹಾಲು ಕರೆದು, ಕಾಯಿಸಿ, ಹೆಪ್ಪು ಹಾಕಿ, ಮೊಸರು ಕಡೆದು, ಬೆಣ್ಣೆ ತೆಗೆದು, ಅದನ್ನು ಕಾಯಿಸಿ ತುಪ್ಪ ಮಾಡಿ ಅದನ್ನು ಔಷಧಕ್ಕೆ ಬೆರೆಸಿ ಗಾಯಕ್ಕೆ ಬಳಿದಾಗಲೇ ಅದು ವಾಸಿಯಾದೀತು! ಅದರಂತೆ ಮಾನವನ ಶರೀರದಲ್ಲಿ ಶಿವಕಲೆ ಇರುವುದು ನಿಜ. ಮಾನವನಿಗೆ ಬಂದಿರುವ ಹುಟ್ಟುಸಾವು ಎಂಬ "ಭವರೋಗ"ವು ವಾಸಿಯಾಗಬೇಕಾದರೆ ಸದ್ಗುರು ಎಂಬ ಭವರೋಗವೈದ್ಯನು ಇಷ್ಟಲಿಂಗವೆಂಬ ಔಷಧಕ್ಕೆ ಅವ(ಆ ಶಿಷ್ಯ)ನಲ್ಲಿಯೇ ಇರುವ ಶಿವಕಲೆಯನ್ನು ಆಕರ್ಷಿಸಿ, ಇಷ್ಟಲಿಂಗದಲ್ಲಿ ಸ್ಥಾಪಿಸಿ, ಅದನ್ನು ಶಿಷ್ಯನಿಗೆ ಧರಿಸಿ, ವಿಧ್ಯುಕ್ತವಾಗಿ ಭಕ್ತಿಯಿಂದ ಆರಾಧಿಸಲು ಹೇಳುತ್ತಾನೆ. ಗುರುವಿನ ಆದೇಶದಂತೆ ಆ ಲಿಂಗವನ್ನು ಪೂಜಿಸಿ, ಅನುಸಂಧಾನ ಮಾಡುವುದರಿಂದ ಮಾನವನು ಭವರೋಗದಿಂದ ಬಿಡಲ್ಪಟ್ಟು ಮುಕ್ತನಾಗುತ್ತಾನೆ. ಆದ್ದರಿಂದ ಇಷ್ಟಲಿಂಗವನ್ನು ದೇಹದ ಮೇಲೆ ಅವಶ್ಯವಾಗಿ ಧರಿಸಬೇಕು.

                            1)ಇಷ್ಟಲಿಂಗದ  ಒಳಗಡೆ ಇರುವ ಚಿಕ್ಕದಾದ ಪೀಠಿಕೆಯು ತುಂಬಾ  ಸೂಕ್ಷ್ಮವಾಗಿ ( ಸೂಕ್ಷ್ಮ ವಸ್ತು ಗ ಳಿಂದ ) ರೂಪಿತವಾಗಿರುತ್ತದೆ..!!              ಇಷ್ಟಲಿಂಗಕ್ಕೆ  ವಿವಿಧ  ಪೂಜಾ ವಿಧಾನದ  ಅಭಿಷೇಕದ ವಸ್ತು ಗಳಿಂದ  ಹಾನಿಯಾಗುವ  ಸಂ ಭವವಿರುತ್ತದೆ  -  ಹಾಗಾಗಿ  ಅದ ರ  ರಕ್ಷಣಾ  ಕವಚವಾಗಿ -  ಗೋ ಳಾಕಾರದಲ್ಲಿ  ಕಂತಿ ( ಕಾಂತಿ)   ಕಟ್ಟಿರುತ್ತಾರೆ  ಹಾಗೂ  ಅದಕ್ಕೆ  ಹೊಳಪು  ನೀಡಲಾಗಿರು ತ್ತದೆ ..!!!

2) ಇಷ್ಟ ಲಿಂಗ ಅಸ್ತ ಧಾತುವಿಂದ ತಯಾರಿಸುತ್ತಾರೆ, ಆಕಳ ತುಪ್ಪವನ್ನು ಸುತ್ತು ಅದರಿಂದ ಬರುವ ಕಾಡಿಗೆ ಇಂದ ತಯಾರಿಸುತ್ತಾರೆ,

      ಇಷ್ಟ ಲಿಂಗ ಎಡ ಕೈಲಿ ಇಟ್ಟುಕೊಂಡೆ ಪೂಜಿಸುತ್ತಾರೆ, ಯಾಕೆ ಅಂದ್ರೆ, ನಮ್ಮ ದೇಹದ ಬಲ ಮೆದುಳು ಎಡ ಹಾಗೂ ಎಡ ಮೆದುಳು ದೇಹದ ಬಲಭಾಗವನ್ನು ನಿಯಂತ್ರಿಸುತ್ತದೆ.
ದೇಹದ ಬಳ ಮೆದುಳು ಪ್ರೀತಿ , ಕರುಣೆ, ಸ್ನೇಹ etc... ಅದರ ಕೆಲಸ.

       ಇಷ್ಟಲಿಂಗ ಕಪ್ಪಾಗಿರುವುದರಿಂದ, ನಮ್ಮ ಕಣ್ಣು ಕಪ್ಪಿರುವುದರಿಂದ ಕಪ್ಪು  ಬೇಗನೆ observing capacity  ಹೊಂದುವುದು.
ಇದರಿಂದ ಮೆದುಳಿನ ಹಿಂಭಾಗದಲ್ಲಿ ಮೇಲಟೋನ್ ರಸ ಉತ್ಪತ್ತಿಯಾಗುತ್ತದೆ, ಮೇಲಟೋನ್ ರಸದಿಂದ  ಮನುಷ್ಯ ಅತ್ಯಂತ ಚೈತ್ಯನ್ಯದಿಂದ ಇರಲು ಸಾಧ್ಯಲಿಂಗಾಯತ ಧರ್ಮದ ವ್ಯೆಶಿಷ್ಟ್ಯ ಪೂರ್ಣ ಉಪಾಸನಾ ಸಾಧನ ಇಷ್ಟಲಿಂಗ.  ಜಗತ್ತಿನ ಮತ್ತಾವ ಧರ್ಮಗಳಲ್ಲಿಯೂ ಇರದ ದೇವನನ್ನು ವಿಶ್ವದ ಆಕಾರದಲ್ಲಿ ತಾತ್ವಿಕವಾಕವಾಗಿ ರೂಪಿಸಿ ಪೂಜಿಸುವ ಪರಿಪೂರ್ಣತೆಯನ್ನ ಇಲ್ಲಿ ಕಾಣಬಹುದು. ನಿರಾಕಾರವನ್ನು ಸಾಕಾರ ಮೂಲಕ ಗ್ರಹಿಸಿಕೊಳ್ಳುವ ಪರಿಪಾಠ ಆಧ್ಯಾತ್ಮಿಕ, ವ್ಯೆವಹಾರಿಕ ಎರಡು ಪ್ರಪಂಚದಲ್ಲಿ ಉಂಟು, ನಿರಕಾರವಾದ ವೇಳೆಯನ್ನ ಅರಿಯಲಿಕ್ಕೆ ಸಾಕಾರವಾದ ಗಡಿಯಾರವು ಸಾಧನಗುವಂತೆ ನಿರಕಾರವಾದ ದೇವನನ್ನ ಅರಿಅಯಲಿಕ್ಕೆ ಇಷ್ಟಲಿಂಗವು ಸಾಕಾರ ಕುರುಹು.  ಗುಡಿಯಲ್ಲಿನ ಲಿಂಗದಂತೆ  ಶಿವನನ್ನು ಸಂಕೇತಿಸುವ ಜಗತ್ತನ್ನೆಲ್ಲ ತುಂಬಿಕೊಂಡಿರುವ ಪರಮಾತ್ಮನ ಶರಿರವವಾದ ಬ್ರಹ್ಮಾಂಡವು ಗೋಲಾಕಾರದಲ್ಲಿ ಇರುವದರಿಂದ ಆ ಆಕಾರದಲ್ಲಿ ರೂಪಿಸಿಕೊಂಡ ಕುರುಹು. 

        ಇಷ್ಟಲಿಂಗಕ್ಕೆ ಕಪ್ಪಾದ ಕಾಂತಿಯುಕ್ತವಾದ ಕಂಥೆಯ ಕವಚವು ಇರುವ ಕಾರಣ  ಕಪ್ಪು- ಕಂಥೆಯ ಕಪ್ಪು ಪರಸ್ಪರ ಆಕರ್ಶಿಸಲ್ಪಟ್ಟು ಬೇಗನೆ ಚಿತ್ತ ಏಕಾಗ್ರತೆಯ ಅನುಭವವಾಗುವುದು.ಆಧ್ಯಾತ್ಮಿಕವಾಗಿ ಇದು ಭಾವಸಾಗರವನ್ನು ದಾಂಟಿಸುವ ಹಡಗಿನಂತೆ. ಹಸುವಿನ ಕೆಚ್ಚಲಿನಲ್ಲಿರುವ ಹಾಲಿನಲ್ಲಿ ತುಪಾವಿರುವುದು ಸತ್ಯಾಂಶ. ಒಂದು ವೇಳೆ ಹಸುವು ಬಿದ್ದು ಪೆಟ್ಟದರೆ, ಬಿಸಿ ತುಪ್ಪವನ್ನ ಹಚ್ಚಿ ಆದ ಗಾಯ ಅಥವಾ ಪೆಟ್ಟನ್ನ ವಾಸಿ ಮಾಡುವುದು ಸರಿಯಾದುದು. ಆದರೆ "ಕೆಚ್ಚಲಿನಲ್ಲಿ ಹಾಲಿದೆ, ಹಾಲಿನಲ್ಲಿ ತುಪ್ಪವಿದೆ" ಎಂದು ಅತಿ ಬುದ್ದಿವಂತರಂತೆ(ಅಹಂ ಬ್ರಹ್ಮಾಸ್ಮಿ) ಕೂತರೆ ಹೇಗೆ ಹಸುವನ್ನ ಪೋಷಿಸಿ, ಕೆಚ್ಚಲಿಂದ ಹಾಲನ್ನ ಕರೆದು, ಹಾಲಿಗೆ ಸಂಸ್ಕಾರಕೊಟ್ಟು ತುಪ್ಪಮಾಡಿದಂತೆ ಇದು ಬಾಹ್ಯ ಲಿಂಗ ಪೂಜೆ ಯಿಂದ ಅಂತರಂಗದ ಪರಮಾತ್ಮನ ಪೂಜೆ ಆಗಿದೆ.
       ಇಷ್ಟಲಿಂಗ ಪೂಜೆಯನ್ನು ಜ್ಞಾನ ಮುದ್ರೆಯಲ್ಲಿ ಮಾಡಬೇಕು. 
ಜ್ಞಾನ ಮುದ್ರೆ
ಎರಡೂ ಕೈಗಳನ್ನು ಮೇಲ್ಮುಖವಾಗಿ ಇಟ್ಟು ಆಯಾ ಕೈಗಳ ತೋರು ಬೆರಳಿಗೆ ಹೆಬ್ಬೆರಳಿನ ತುದಿಯನ್ನು ತಾಗಿಸಿ. ಉಳಿದ ಮೂರು ಬೆರಳುಗಳು ನೇರವಾಗಿ ಇರಲಿ. ಒತ್ತಡ ನೀಡಬೇಕಾದ ಅಗತ್ಯ ಇಲ್ಲ. 

#ಪ್ರಯೋಜನ: ಮೆದುಳಿನ ಶಕ್ತಿ, ಏಕಾಗ್ರತೆ, ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ. ನಾಡಿಗಳಲ್ಲಿ ಶಕ್ತಿ ಬಲವಾಗಿ ಸಂಚರಿಸುತ್ತದೆ. ಇದು ವಿಶೇಷವಾಗಿ ವಿದ್ಯಾರ್ಥಿಗಳಿಗೆ ಸಹಕಾರಿ. ನಿದ್ರಾಹೀನತೆ, ಉದ್ವೇಗ, ಭಯ, ಒತ್ತಡ, ಮಾನಸಿಕ ಚಂಚಲತೆ ದೂರವಾಗುತ್ತದೆ. ಅಧಿಕವಾದ ಸಿಟ್ಟನ್ನು ಶಮನಗೊಳಿಸುವುದರ ಜೊತೆಗೆ ಮನುಷ್ಯ ಸ್ವಭಾವಗಳಾದ ಹಟಮಾರಿತನ, ಆಲಸ್ಯ, ಸಂಶಯ, ಅತಿ ನಿದ್ರೆಯನ್ನು ಹೋಗಲಾಡಿಸುತ್ತದೆ.

        ಅಧ್ಯಾತ್ಮ ಶಕ್ತಿಯ ವೃದ್ಧಿಗೆ ಜ್ಞಾನ ಮುದ್ರೆ ಸಹಾಯಕ. ಪಿಟ್ಯುಟರಿ ಗ್ರಂಥಿಗಳ ಕಾರ್ಯಕ್ಷಮತೆ ಹೆಚ್ಚಿಸುವುದರೊಂದಿಗೆ ದೇಹಕ್ಕೆ ಹೊಸ ಚೈತನ್ಯವನ್ನು ತುಂಬಿಸುತ್ತದೆ. ಎಷ್ಟು ಹೊತ್ತು ಬೇಕಾದರೂ ಮಾಡಬಹುದು.

 ಪಂಚಸೂತ್ರ ಕಿರುಪೀಠಗ ಷಟ್ಕಳೆಹೊಂದಿದ ಪುರ್ಣರಂದ್ರ ರಹಿತ ಭಾನಸ್ಥಾಪಿಸಿದ ಕಾರಣ ಪಂಚಸೂತ್ರ ಶಿವಶಕ್ತಿ ಸಮ್ಮಿಲನ ಹೊಂದಿದ ಪರಿಣಾಮ ಮೆಲೆ (ಚಿದ್ಲೇಪ) ಕಂತೆ ಇರಸಿದೆ ಇದಕ್ಕೆ ಇಷ್ಟಲಿಂಗ ಎಂದು ನಾಮಕರಣ ಮಾಡಿ ಗುರು ಪಾದೋದಕ ಪ್ರಸಾದ ಕ್ರಿಯೆಗೆ ಅನುಮೋದನೆ ಮಾಡಿ ಶಿವ ಶಕ್ತಿಯರಲ್ಲಿ ಹೇಗೆ ಬೇದಬಾವ ವಿಲ್ಲವೊ ಹಾಗೆ ಗುರುಶಿಷ್ಯರಲ್ಲಿಯೋ ಬೇದಬಾವವನ್ನು ಹರನ ಮಾಡಲು ಶಕ್ತಿವಿಶಿಷ್ಟಾದ್ವೈತ ತತ್ವ ನಿರ್ಣಯ ಆದರ್ಶನಿಯ ವಾಗಿದೆ.

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.

            - ಶ್ರೀಬಸವೇಶ್ವರರು  

ವೀರಶೈವ ಧರ್ಮದ  ಅಷ್ಟಾವರಣ ಗಳಲ್ಲಿ ಆರೋಗ್ಯ
ಡಾ. ಸಿ. ಎ .ಹೀರೇಮಠ ರ ಕೃತಿಯಿಂದ ಹಾಗೂ ಇತರೆ ಮೂಲಗಳಿಂದ  ಲೇಖನ

June 10, 2021

ಪುರಾಣಗಳನ್ನು ನೆನಪಿನಲ್ಲಿಡುವ ಪರಿ

ಯಾವ ಯಾವ ಪುರಾಣದಲ್ಲಿ ಏನಿದೆ ? 

ಅಷ್ಟಾದಶ ಪುರಾಣಗಳೆಂದು ಪ್ರಖ್ಯಾತ ವಾಗಿರುವ ಹದಿನೆಂಟು ಪುರಾಣಗಳನ್ನು ಭಗವಾನ್ ವೇದವ್ಯಾಸ ಮಹರ್ಷಿಗಳು ಬರೆದಿದ್ದಾರೆ ಹದಿನೆಂಟು ಪುರಾಣಗಳು ಹೀಗಿವೆ 

ಮದ್ವಯಂ ಭದ್ವಯಂಚೈವ ಬ್ರತ್ರಯಂ ವ ಚತುಷ್ಟಯಂ  ಅ ನಾ ಪ ಲಿಂ ಗ ಕೂ ಸ್ಕಾ ನಿ ಪುರಾಣಾನಿ ಪ್ರಚಕ್ಷತಃ 

ಮ  ಕಾರದಿಂದ ಎರಡು ಪುರಾಣಗಳು 
ಭ ಕಾರದಿಂದ ಎರಡು ಪುರಾಣಗಳು
ಬ್ರ ಕಾರದಿಂದ ಮೂರು ಪುರಾಣಗಳು
ವ ಕಾರದಿಂದ ನಾಲ್ಕು ಪುರಾಣಗಳು
ಅ ಕಾರದಿಂದ ಒಂದು 
ನ ಕಾರದಿಂದ ಒಂದು
ಪ ಕಾರದಿಂದ ಒಂದು 
ಲಿಂ ಕಾರದಿಂದ ಒಂದು 
ಗ ಕಾರದಿಂದ ಒಂದು 
ಕೂ ಕಾರದಿಂದ ಒಂದು 
ಸ್ಕಾ ಕಾರದಿಂದ ಒಂದು ಒಟ್ಟು ಹದಿನೆಂಟು ಪುರಾಣಗಳಿವೆ 

೧ ಮತ್ಸ್ಯ ಪುರಾಣ 
 ೨ ಮಾರ್ಕಂಡೇಯ ಪುರಾಣ 
೩ ಭಾಗವತ ಪುರಾಣ  
೪ ಭವಿಷ್ಯತ್ ಪುರಾಣ 
೫ ಬ್ರಹ್ಮ ಪುರಾಣ
೬ ಬ್ರಹ್ಮಾಂಡ ಪುರಾಣ
೭ ಬ್ರಹ್ಮ ವೈವರ್ತ ಪುರಾಣ
೮ ವರಹ ಪುರಾಣ
೯ ವಾಮನ ಪುರಾಣ
೧೦ ವಾಯು ಪುರಾಣ
೧೧ ವಿಷ್ಣು ಪುರಾಣ
೧೨ ಅಗ್ನಿ ಪುರಾಣ
೧೩ ನಾರದ ಪುರಾಣ
೧೪ ಪದ್ಮ ಪುರಾಣ
೧೫ ಲಿಂಗ ಪುರಾಣ
೧೬ ಗರುಡ ಪುರಾಣ
೧೭ ಕೂರ್ಮ ಪುರಾಣ
೧೮ ಸ್ಕಂದ ಪುರಾಣ

೧ ಮತ್ಸ್ಯ ಪುರಾಣ. 

 ಈ ಮತ್ಸ್ಯ ಪುರಾಣದಲ್ಲಿ ೧೪೦೦೦ ಶ್ಲೋಕಗಳಿವೆ ಮತ್ಸ್ಯಾವತಾರವನ್ನು ಧರಿಸಿದ ಶ್ರೀಮನ್ನಾರಾಯಣನು ಈ ಪುರಾಣವನ್ನು ಮನುವಿಗೆ ಬೋಧಿಸಿದ್ದಾನೆ ಸಾವಿತ್ರಿ ಚರಿತ್ರೆ ಕಾರ್ತಿಕೇಯ ಚರಿತ್ರೆ ಯಯಾತಿ ಚರಿತ್ರೆ ಮತ್ತು ಮಾನವ ಧರ್ಮಾಚರಣೆಯ ವಿಷಯಗಳು ವಾರಣಾಸಿ ಪ್ರಯಾಗ ಮುಂತಾದ ಕ್ಷೇತ್ರ ವಿವರಗಳು ಈ ಪುರಾಣದಲ್ಲಿವೆ 

೨ ಮಾರ್ಕಂಡೇಯ ಪುರಾಣ.  

ಈ ಪುರಾಣದಲ್ಲಿ ೯೦೦೦ ಶ್ಲೋಕಗಳಿವೆ ಮಾರ್ಕಂಡೇಯ ಮಹಾಮುನಿಗಳಿಂದ ವಿವರಿಸಲ್ಪಟ್ಟ ಪುರಾಣವಿದು ಶಿವ ವಿಷ್ಣುಗಳ ಮಹಾತ್ಮಗಳು ಮತ್ತು ಇಂದ್ರ ಅಗ್ನಿ ಸೂರ್ಯರ ಮಹಿಮೆಗಳು ಮತ್ತು ಸಪ್ತಪತಿ ಎಂಬ ದೇವಿ ಮಹಾತ್ಮ ಮುಂತಾದ ವಿಷಯಗಳಿವೆ ಈಗ ನಾವು ಮಾಡುತ್ತಿರುವ ಚಂಡಿಯಾಗ ಶತ ಚಂಡಿಕಾ ಹೋಮ ಸಹಸ್ರ ಚಂಡಿಯಾಗ ಮುಂತಾದ ಯಾಗಗಳಿಗೆ ಮಾರ್ಕಂಡೇಯ ಪುರಾಣವೇ ಆಧಾರವಾಗಿದೆ 

೩ ಭಾಗವತ ಪುರಾಣ 

  ಈ ಮಹಾ ಪುರಾಣದಲ್ಲಿ ೧೮೦೦೦ ಶ್ಲೋಕಗಳಿವೆ ಈ ಪುರಾಣವನ್ನು ವ್ಯಾಸ ಮಹರ್ಷಿ ಶುಕಮಹರ್ಷಿಗೆ ಬೋಧಿಸಿದ್ದಾರೆ ಶುಕ ಮಹರ್ಷಿಗಳು ಪರೀಕ್ಷಿತ್ ಮಹಾರಾಜ  ( ಅಭಿಮನ್ಯುಮಗ ) ನಿಗೆ ಬೋಧಿಸಿದ್ದಾನೆ ಈ ಭಾಗವತ ಪುರಾಣದಲ್ಲಿ ಹನ್ನೆರಡು ಸ್ಕಂದಗಳಿವೆ ಶ್ರೀಮನ್ನಾರಾಯಣನ ದಶಾವತಾರ ಕಥೆಗಳು ಈ ಪುರಾಣದಲ್ಲಿವೆ ರಾಮಾಯಣ ಮಹಾಭಾರತಗಳಿಗಿರುವ ಪ್ರಾಶಸ್ತ್ಯವೆ ಈ ಭಾಗವತ ಪುರಾಣಕ್ಕಿದೆ ವಿಷ್ಣು ಭಕ್ತರಿಗೆ ಈ ಪುರಾಣ ಅಮೃತ ಸಮಾನವಾಗಿದೆ 

೪  ಭವಿಷ್ಯತ್ ಪುರಾಣ  

ಈ ಪುರಾಣದಲ್ಲಿ ೧೪೫೦೦ ಶ್ಲೋಕಗಳಿವೆ ಮನು ಬ್ರಹ್ಮ ನಿಗೆ ಸೂರ್ಯ ದೇವನು ಈ ಪುರಾಣವನ್ನು ಬೋಧಿಸಿದ್ದಾನೆ ಈ ಪುರಾಣದಲ್ಲಿ ಸೂರ್ಯದೇವೋಪಾಸನೆ ಅಗ್ನಿದೇವೋಪಾಸನೆ ಮತ್ತು ಚತುರ್ವಿಧ ವರ್ಣಾಶ್ರಮ ಧರ್ಮಗಳು ತಿಳಿಸಲಾಗಿದೆ ಮುಖ್ಯವಾಗಿ ಭವಿಷ್ಯತ್ ಕಾಲದಲ್ಲಿ ನಡೆಯಲಿರುವ ಅನೇಕ ಆಶ್ಚರ್ಯಕರ ವಿಷಯಗಳು ಈ ಪುರಾಣದಲ್ಲಿ ನಿಕ್ಷಿಪ್ತವಾಗಿವೆ 

೫ ಬ್ರಹ್ಮ ಪುರಾಣ  

ಈ ಪುರಾಣದಲ್ಲಿ ೧೦,೦೦೦ ಶ್ಲೋಕಗಳಿವೆ ಈ ಬ್ರಹ್ಮ ಪುರಾಣವನ್ನು ಆದಿ ಪುರಾಣವೆಂದು ಸೂರ್ಯ ಪುರಾಣ ವೆಂದು ಕರೆಯುವ ರೂಡಿಇದೆ ಬ್ರಹ್ಮ ದೇವರು ಈ ಪುರಾಣವನ್ನು ದಕ್ಷ ಬ್ರಹ್ಮ ( ಪಾರ್ವತಿಯ ತಂದೆ) ನಿಗೆ ಬೋಧಿಸಿದ್ದಾನೆ ಈ ಪುರಾಣದಲ್ಲಿ ಕೃಷ್ಣ ಮಾರ್ಕಂಡೇಯ ಕಶ್ಯಪರ ಚರಿತ್ರೆಗಳು ವರ್ಣಾಶ್ರಮ ಧರ್ಮದ ವಿಷಯಗಳು ಧರ್ಮ ಮಾರ್ಗದ ವಿಷಯಗಳು ಸ್ವರ್ಗ ನರಕಲೋಕದ ವಿಷಯಗಳು ಈ ಪುರಾಣದಲ್ಲಿವೆ 

೬ ಬ್ರಹ್ಮಾಂಡ ಪುರಾಣ  

 ಈ ಪುರಾಣದಲ್ಲಿ ೧೨,೦೦೦ ಶ್ಲೋಕಗಳಿವೆ ಮರೀಚಿ ಬ್ರಹ್ಮನಿಗೆ ಸೃಷ್ಟಿಕರ್ತ ಬೋಧಿಸಿದ ಪುರಾಣವಿದು ಈ ಪುರಾಣದಲ್ಲಿ ರಾಧಾಕೃಷ್ಣ ವೃತ್ತಾಂತಗಳು ರಾಮ ಪರಶುರಾಮ ಚರಿತ್ರೆಗಳು ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರ ಶಿವ ಸ್ತೋತ್ರ ಕೃಷ್ಣ ಸ್ತೋತ್ರ ಗಂಧರ್ವ ಶಾಸ್ತ್ರ ಖಗೋಳ ಶಾಸ್ತ್ರ ಪಾಪ ಪುಣ್ಯಗಳ ವಿವರಣೆಗಳು ಈ ಪುರಾಣದಲ್ಲಿವೆ  

೭  ಬ್ರಹ್ಮ ವೈವರ್ತ ಪುರಾಣ. 

   ಈ ಪುರಾಣದಲ್ಲಿ ೧೮,೦೦೦ ಶ್ಲೋಕಗಳಿವೆ   ಸಾವರ್ಣೀ ಬ್ರಹ್ಮನಿಂದ ನಾರದ ಮಹರ್ಷಿಗಳಿಗೆ ಉಪದೇಶ ಮಾಡಿರುವ ಪುರಾಣವಿದು   ಸ್ಕಂದ ಗಣೇಶ ರುದ್ರ ಕೃಷ್ಣ ವೈಭವಗಳು ದುರ್ಗಾ ಲಕ್ಷ್ಮಿ ಸರಸ್ವತಿ ಸಾವಿತ್ರಿ ರಾಧ ಮುಂತಾದವರ ಚರಿತ್ರೆಗಳು ಈ ಪುರಾಣದಲ್ಲಿವೆ ಪಂಚ ಶಕ್ತಿಗಳ ( ಪೃಥ್ವಿ ಅಪ್  ತೇಜೋ ವಾಯು ಆಕಾಶಗಳು )ಪ್ರಭಾವ ಮತ್ತು ಸೃಷ್ಟಿಗೆ ಕಾರಣವಾದ ಭೌತಿಕ ಜಗತ್ತು ಮುಂತಾದ ವಿಷಯಗಳು ಈ ಪುರಾಣದಲ್ಲಿವೆ 

೮ ವರಹ ಪುರಾಣ.  

 ಈ ಪುರಾಣದಲ್ಲಿ ೨೪,೦೦೦ ಶ್ಲೋಕಗಳಿವೆ
ವರಹಾವತಾರ ಧರಿಸಿ ಶ್ರೀ ವಿಷ್ಣು ಭೂದೇವಿಗೆ ಬೋಧಿಸಿದ ಪುರಾಣವಿದು ನಾರಾಯಣ ಉಪಾಸನಾ ವಿಧಾನ ಮತ್ತು ಪಾರ್ವತಿ ಪರಮೇಶ್ವರರ ಚರಿತ್ರೆಗಳು ಧರ್ಮಶಾಸ್ತ್ರ ಮತ್ತು ವ್ರತಕಲ್ಪಗಳು ಪುಣ್ಯ ಕ್ಷೇತ್ರಗಳ ವಿವರಣೆಗಳು ಈ ಪುರಾಣದಲ್ಲಿವೆ 

೯  ವಾಮನ ಪುರಾಣ. 

 ಈ ಪುರಾಣದಲ್ಲಿ ೧೦,೦೦೦ ಶ್ಲೋಕಗಳಿವೆ
ಪುಲಸ್ತ್ಯ ಋಷಿ ನಾರದರಿಗೆ ಉಪದೇಶ ಮಾಡಿದ ಪುರಾಣವಿದು ಶಿವಲಿಂಗೋಪಾಸನೆ ಶಿವಪಾರ್ವತಿಯರ ಕಲ್ಯಾಣ ಶಿವ ಚರಿತ್ರೆ ಗಣೇಶ್ವರ ಚರಿತ್ರೆ ಕಾರ್ತಿಕೇಯ ಚರಿತ್ರೆ ಭೂಗೋಳ ಚರಿತ್ರೆ ಋತು ವಿಶೇಷಗಳು ಈ ಪುರಾಣದಲ್ಲಿವೆ 

೧೦. ವಾಯು ಪುರಾಣ. 

ಈ ಪುರಾಣದಲ್ಲಿ ೨೪,೦೦೦ ಶ್ಲೋಕಗಳಿವೆ ಮಹಾ ಶಕ್ತಿಶಾಲಿಯಾದ ವಾಯುದೇವನಿಂದ ಹೇಳಲಾಗಿರುವುದರಿಂದ ಈ ಪುರಾಣಕ್ಕೆ ವಾಯು ಪುರಾಣವೆಂದು ಹೆಸರು ಬಂದಿದೆ ಮಹೇಶ್ವರನ ಮಹಾತ್ಮ ಕಾಲಮಾನ ವಿವರಣೆ ಮತ್ತು ಭೂಮಂಡಲ ಸೌರಮಂಡಲ ವಿಶೇಷಗಳು ರಹಸ್ಯಗಳು ಈ ಪುರಾಣದಲ್ಲಿವೆ 

೧೧ ವಿಷ್ಣು ಪುರಾಣ 

ಈ ಪುರಾಣದಲ್ಲಿ ೨೩,೦೦೦ ಶ್ಲೋಕಗಳಿವೆ ಪರಾಶರ ಮಹರ್ಷಿ ( ವ್ಯಾಸರ ತಂದೆ ) ತನ್ನ ಶಿಷ್ಯನಾದ ಮೈತ್ರೇಯ ಮುನಿಗೆ ಬೋಧಿಸಿದ ಪುರಾಣವಿದು ಶ್ರೀ ಮಹಾವಿಷ್ಣುವಿನ ಮಹಾತ್ಮಯ ಬಗ್ಗೆ ವಿಸ್ತಾರವಾಗಿ ವಿವರಿಸಲಾಗಿದೆ  ಶ್ರೀ ಕೃಷ್ಣ ಧೃವ ಪ್ರಹ್ಲಾದ ಭರತರಾಜನ ಚರಿತ್ರೆಗಳು ಈ ಪುರಾಣದಲ್ಲಿವೆ 

೧೨ ಅಗ್ನಿ ಪುರಾಣ 

ಈ ಪುರಾಣದಲ್ಲಿ ೧೫,೪೦೦ ಶ್ಲೋಕಗಳಿವೆ ಅಗ್ನಿದೇವರಿಂದ ವಶಿಷ್ಠ ಮಹರ್ಷಿಗಳಿಗೆ ಈ ಪುರಾಣವನ್ನು ಬೋಧಿಸಲಾಗಿದೆ  ಇದರಲ್ಲಿ ಶಿವ ಗಣೇಶ ದುರ್ಗಾ ಉಪಾಸನಾ ವಿಷಯಗಳಿವೆ ಮತ್ತು ವ್ಯಾಕರಣ ಛಂದಸ್ಸು ಜ್ಯೋತಿಷ್ಯ ಆಯುರ್ವೇದ ರಾಜಕೀಯ ಲೌಕಿಕ ಭೂಗೋಳ ಖಗೋಳ ವಿಷಯಗಳನ್ನು ವಿಶದೀಕರಿಸಲಾಗಿದೆ 

೧೩  ನಾರದ ಪುರಾಣ 

 ಈ ಪುರಾಣದಲ್ಲಿ ೨೫,೦೦೦ ಶ್ಲೋಕಗಳಿವೆ ಬ್ರಹ್ಮ ಮಾನಸ ಪುತ್ರರಾಗಿರುವ ಸನಕ ,ಸನಂದನ , ಸನತ್ಕುಮಾರ , ಸನಾತನ ಎಂಬ ನಾಲ್ಕು ಜನರಿಗೆ ನಾರದ ಮಹರ್ಷಿಗಳು ಬೋಧಿಸಿದ ಪುರಾಣವಿದು ಅತಿ ಪವಿತ್ರ ಪ್ರಸಿದ್ದವಾದ ವೇದ ಪಾದಸ್ತವಂ ( ಶಿವ ಸ್ತೋತ್ರ) ಈ ಪುರಾಣದಲ್ಲಿದೆ ವೇದಾಂಗ ವಿಷಯಗಳು ವ್ರತ ನಿಯಮ ವಿಷಯಗಳು ಪುಣ್ಯ ಕ್ಷೇತ್ರ ಮಹಿಮೆಗಳು ಈ ಪುರಾಣದಲ್ಲಿವೆ 

೧೪ ಸ್ಕಂದ ಪುರಾಣ 

ಹದಿನೆಂಟು ಪುರಾಣಗಳಲ್ಲಿ ಈ ಪುರಾಣವೇ ವಿಸ್ತೃತವಾಗಿದೆ ಸ್ಕಂದ ಪುರಾಣದಲ್ಲಿ ೮೧,೦೦೦ ಶ್ಲೋಕಗಳಿವೆ ಸ್ಕಂದನೆಂದರೆ ಕುಮಾರಸ್ವಾಮಿ ಈ ಪುರಾಣದೊಳಗೆ ಕಾಶೀಖಂಡ ಕೇದಾರಖಂಡ ರೇವಖಂಡ ವೈಷ್ಣವಖಂಡ ಉತ್ಕಳಖಂಡ ಕುಮಾರಿಕಾಖಂಡ ಬ್ರಹ್ಮ ಖಂಡ ಬ್ರಹ್ಮೋತ್ತರಖಂಡ  ಅವಂತಿಕಾಖಂಡ ಮುಂತಾದ ಖಂಡಗಳಿವೆ ಅನೇಕಾನೇಕ ವಿಷಯಗಳು ಸ್ಕಂದ ಪುರಾಣದಲ್ಲಿವೆ ಅಷ್ಟಾದಶ ಪುರಾಣಗಳಲ್ಲಿ ಈ ಪುರಾಣಕ್ಕೆ ಪ್ರತ್ಯೇಕ ಪ್ರಾಮುಖ್ಯತೆಯಿದೆ ವೆಂಕಟಾಚಲ ಮಹಾತ್ಮ (ತಿರುಮಲ ) ವೈಷ್ಣವ ಖಂಡದಲ್ಲಿದೆ ಜಗನ್ನಾಥ ಕ್ಷೇತ್ರದ ಬಗ್ಗೆ ಉತ್ಕಳ ಖಂಡದಲ್ಲಿದೆ ಅರುಣಾಚಲದ ಬಗ್ಗೆ ಕುಮಾರಿಕಾ ಖಂಜದಲ್ಲಿದೆ ಸತ್ಯ ನಾರಾಯಣ ಸ್ವಾಮಿಯ ಬಗ್ಗೆ ರೇವಾ ಖಾಂಡದಲ್ಲಿದೆ 

೧೫ ಲಿಂಗ ಪುರಾಣ

ಲಿಂಗ ಪುರಾಣದಲ್ಲಿ ಶಿವದೇವನ ಉಪದೇಶಗಳು ಇವೆ ಲಿಂಗ ರೂಪದ ಶಿವನ ಮಹಿಮೆ ಆರಾಧನೆ ವ್ರತಗಳು ಈ ಪುರಾಣದಲ್ಲಿವೆ ಖಗೋಳ ಜ್ಯೋತಿಷ್ಯ ಶಾಸ್ತ್ರಗಳು ಸಹ ಈ ಪುರಾಣದಲ್ಲಿವೆ 

೧೬ ಗರುಡ ಪುರಾಣ

 ಈ ಪುರಾಣದಲ್ಲಿ  ೧೯,೦೦೦ ಶ್ಲೋಕಗಳಿವೆ ಈ ಪುರಾಣವನ್ನು ಶ್ರೀ ಮಹಾವಿಷ್ಣು ಗರುಡನಿಗೆ ಉಪದೇಶ ಮಾಡಿದ್ದಾನೆ  ಜನನ ಮರಣದ ವಿಷಯಗಳು ಮತ್ತು ಮರಣದ ನಂತರ ಮನುಷ್ಯನಿಗೆ ಸಿಗುವ ಸ್ವರ್ಗ ನರಕಗಳು ನರಕ ಲೋಕದಲ್ಲಿ ಯಾವ ಯಾವ ತಪ್ಪು ಮಾಡಿದವರಿಗೆ ಯಾವ ಯಾವ ಶಿಕ್ಷೆಗಳನ್ನು ವಿಧಿಸುತ್ತಾರೆಂಬುದು ಈ ಪುರಾಣದಲ್ಲಿ ತಿಳಿಯಬಹುದು

೧೭ ಕೂರ್ಮ ಪುರಾಣ

ಈ ಪುರಾಣದಲ್ಲಿ ೧೭,೦೦೦ ಶ್ಲೋಕಗಳಿವೆ ಕೂರ್ಮಾವತಾರ ವರಹ ನರಸಿಂಹ ಅವತಾರ ವಿಷಯಗಳು ಲಿಂಗರೂಪದಲ್ಲಿ ಶಿವನನ್ನು ಪೂಜಿಸುವ ವಿಷಯ  ಖಗೋಳ ಭೂಗೋಳ ವಿಷಯಗಳು ಕಾಶಿ ಪ್ರಯಾಗಾದಿ ಪುಣ್ಯ ಕ್ಷೇತ್ರ ಮಹಿಮೆಗಳು ಈ ಪುರಾಣದಲ್ಲಿವೆ

೧೮ ಪದ್ಮ ಪುರಾಣ

ಈ ಮಹಾ ಪುರಾಣದಲ್ಲಿ  ಈ ಮಹಾ ಪುರಾಣದಲ್ಲಿ ೮೫,೦೦೦ ಶ್ಲೋಕಗಳಿವೆ ಪದ್ಮ ಪುರಾಣವನ್ನು ಓದಿದರೂ ಕೇಳಿದರೂ ಅನೇಕ ಜನ್ಮಗಳ ಪಾಪಗಳು ನಾಶವಾಗುತ್ತವೆ ಎಂದು ಹಿರಿಯರು ಹೇಳುತ್ತಾರೆ ಹದಿನೆಂಟು ಪುರಾಣಗಳಲ್ಲಿ ಪದ್ಮಪುರಾಣವೇ ದೊಡ್ಡದು.

June 9, 2021

ಶಿಲ್ಪದ ಮೊದಲ ಉಲ್ಲೇಖ


ವೇದಕಾಲದಲ್ಲಿ ನಿರಾಕಾರ ದೇವರ ಪೂಜೆ ಇತ್ತು, ಆಕಾರವನ್ನು ಎಲ್ಲಿಯೂ ಹೇಳಿಲ್ಲ ಎನ್ನುವ ಮಾತಿದೆ. ಸಂಪೂರ್ಣವಾಗಿ ಪ್ರಕೃತಿಯ ಆರಾಧನೆಯೇ ವೇದಗಳಲ್ಲಿ ಅಡಗಿದೆ ಎನ್ನುವುದು ಸಹ ವಿದ್ವದ್ವಲಯದಲ್ಲಿರುವ ಚರ್ಚೆಗಳೋ ಅಥವಾ ಅನಿಸಿಕೆಯೋ, ಅಭಿಪ್ರಾಯಗಳೋ ಇರಬಹುದು. ಇಲ್ಲಿ ಅದರ ಕುರಿತಾಗಿ ನಾನು ಹೇಳುತ್ತಲೂ ಇಲ್ಲ. ಇಲ್ಲಿ ನಾನು ಹೇಳುವುದು ಕೇವಲ ಒಂದು ಶಬ್ದದ ಕುರಿತು. ಆದು ಶಿಲ್ಪ!. ಈ ಶಿಲ್ಪ ಎನ್ನುವ ಪದ ಯಾವಾಗಿನಿಂದ ಬಳಕೆಗೆ ಬಂತು. ಇದರ ಪ್ರಾಚೀನತೆಯ ಕುರಿತಾಗಷ್ಟೇ ಸೀಮಿತವೇ ಹೊರತು ಅದಕ್ಕೂ ಹೊರತಾದದ್ದಲ್ಲ. 

ವೇದಗಳಲ್ಲಿ ರಥ ನಿರ್ಮಾಣ ಆದದ್ದರ ಕುರಿತಾದ ಮಾಹಿತಿಗಳಿವೆ. ಮೂರು ಚಕ್ರದ ರಥವನ್ನು ಸಹ ಮಾಡಿದ್ದನ್ನೂ ನಾನು ಈ ಮೊದಲೊಮ್ಮೆ ಬರೆದಾಗಿದೆ. ಯೂಪಸ್ತಂಭದ ನಿರ್ಮಾಣವನ್ನು ಮಾಡುತ್ತಿದ್ದರು. ಯಜ್ಞಗಳ ಆಹುತಿಗೆ ಬೇಕಾದ ಸೃಕ್‌ಸ್ರುವಾಗಳನ್ನು ಮಾಡುತ್ತಿದ್ದರು. ಇನ್ನು ಮೊನ್ನೆಯಷ್ಟೇ ಬಾರ್ಲಿ ಅಥವಾ ಅರಳಿನಹಿಟ್ಟಿನ ಪೇಯವೊಂದನ್ನು ಪಾತ್ರೆಯೊಂದರಲ್ಲಿ ಮಾಡುತ್ತಿದ್ದುದರ ವಿಷಯವನ್ನೂ ಬರೆದಿದ್ದೆ. ಅಂದರೆ ಆ ಕಾಲಕ್ಕಾಗಲೇ ಆಕಾರಗಳ ನಿರ್ಮಾಣವಾಗುತ್ತಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಆದರೆ ಶಿಲ್ಪ ? ಈ ಶಿಲ್ಪದ ಕುರಿತಾಗಿ ಸ್ವಲ್ಪ ಗಮನಿಸುವೆ. 
ಋಗ್ವೇದದ ೯ನೇ ಮಂಡಲದಲ್ಲಿ ಸಮಿದ್ಧಃ ಎನ್ನುವ ಸೂಕ್ತವೊಂದಿದೆ. ಕಶ್ಯಪನ ವಂಶೀಯನಾದ ಅಥವಾ ಕಶ್ಯಪನ ಮಗನಾದ ಅಸಿತ ಅಥವಾ ದೇವಲ ಎನ್ನುವ ಋಷಿಯು ಹನ್ನೊಂದು ದೇವತೆಗಳನ್ನು ಸ್ತುತಿಸುತ್ತಾ ದೃಷ್ಟಾರನೆನ್ನಿಸಿಕೊಂಡ ಮಂತ್ರದಲ್ಲಿಯೇ ಮೊದಲಬಾರಿಗೆ ಶಿಲ್ಪ ಎನ್ನುವ ಪದ ಪ್ರಯೋಗವಾಗುತ್ತದೆ. ಇಲ್ಲಿ ಸಮಿದ್ಧೋ ವಿಶ್ವತಸ್ಪತಿ ಎಂದು ಮೊದಲ ಋಕ್ಕಿನ ಆರಂಭವಾಗುತ್ತದೆ. ಸಮಿದ್ಧವನ್ನು ಸಮ್ಯಗ್ದೀಪ್ತೋ ಎಂದು ಬಾಷ್ಯಕಾರರು ಕರೆದಿದ್ದಾರೆ. ಅತ್ಯಂತ ಹೆಚ್ಚು ಪ್ರಕಾಶಮಾನವಾದ ಮತ್ತು ವಿಶ್ವಕ್ಕೆ ಒಳಿತನ್ನು ಬಯಸುವ ಶ್ರೇಷ್ಠವಾದ ಸೋಮವು ಕನಿಕ್ರದತ್ ಅಂದರೆ ಶಬ್ದ ಮಾಡುತ್ತಾ ದೇವತೆಗಳಿಗೆ ತೃಪ್ತಿಯನ್ನುಂಟುಮಾಡಿ ಯಜ್ಞದಲ್ಲಿ ಪ್ರಕಾಶಿಸುತ್ತದೆ ಎನ್ನುವ ಅರ್ಥವಿದೆ. ಇಲ್ಲಿಂದ ಆರನೇ ಋಕ್ಕಿಗೆ ನೇರವಾಗಿ ಹೋಗುವೆ.

ಸುಶಿಲ್ಪೇ ಬೃಹತೀ ಮಹೀ ಪವಮಾನೋ ವೃಷಣ್ಯತಿ |ನಕ್ತೋಷಾಸಾ ನ ದರ್ಶತೇ|| ಎನ್ನುವ ಈ ಮಂತ್ರ ನಕ್ತೋ ಉಷಸಾ ಎನ್ನುವ ದೇವತೆಯನ್ನು ಕುರಿತಾದದ್ದು. ಇಲ್ಲಿ ಆರಂಭವಾಗುವುದೇ ಶಿಲ್ಪದಿಂದ. ಸುಶಿಲ್ಪೇ ಎನ್ನುವುದನ್ನು ಭಾಷ್ಯಕಾರರು ಸುರೂಪೇ ಎಂದು ಹೇಳಿದ್ದಾರೆ. ಎಂದರೆ ಶ್ರೇಷ್ಠವಾದ ಆಕಾರವನ್ನು ಹೊಂದಿರುರುವವರು ಎಂದು ಅರ್ಥೈಸಿದ್ದಾರೆ. ಅಂದರೆ ಇಲ್ಲಿ ರಾತ್ರಿ ಮತ್ತು ಹಗಲಿನ ಅಭಿಮಾನಿ ದೇವತೆಗಳನ್ನು ಪವಮಾನ ಸೋಮನು ಅಪೇಕ್ಷಿಸುವ ಕುರಿತಾಗಿ ಹೇಳಿದ್ದರೂ ಈ ಹಗಲು ಮತ್ತು ರಾತ್ರಿಯ ಅಭಿಮಾನ ದೇವತೆಗಳ ಆಕಾರವನ್ನು ಹೊಗಳಿದ್ದು ಸಿಗುತ್ತದೆ. ಶಿಲ್ಪ ಶಬ್ದದ ಮೊದಲ ಉಲ್ಲೇಖ ಇದೇ ಇರಬಹುದು ಎನ್ನುವ ಅಭಿಪ್ರಾಯ ನನ್ನದು.

ಯೇಭಿಃ ಶಿಲ್ಪೈಃ ಪಪ್ರಥಾನಮದೃಂಹತ್ | ಯೇಭಿರ್ದ್ಯಾಮಭ್ಯಪಿಶತ್ ಎನ್ನುವ ತೈತ್ತಿರೀಯ ಬ್ರಾಹ್ಮಣದ ೨:೭:೧೫:೨ರಲ್ಲಿ ಶಿಲ್ಪದ ಕುರಿತಾಗಿ ಹೇಳಲಾಗಿದೆ. ದಿವಃ ಶಿಲ್ಪಮವತತಂ ಪೃಥಿವ್ಯಾಃ ಕಕುಭಿಃಶ್ರಿತಮ್ ಎನ್ನುವುದಾಗಿ ತೈತ್ತಿರೀಯ ಬ್ರಾಹ್ಮಣದ ೩:೩:೨:೧ರಲ್ಲಿ ಹೇಳಲಾಗಿದೆ. ಯದ್ವೈ ಪ್ರತಿರೂಪಂ ತಚ್ಛಿಲ್ಪಂ ಎಂದು ಶತಪಥ ಬ್ರಾಹ್ಮಣ ೩:೨:೧:೫ರಲ್ಲಿ ಶಿಲ್ಪವು ರೂಪದ ಪ್ರತಿರೂಪದಂತಿರುವುದು ಎಂದು ಬಣ್ಣಿಸುತ್ತದೆ. ಸರ್ವಶಿಲ್ಪ ಪ್ರವರ್ತಕ ಎಂದು ವಿಶ್ವಕರ್ಮ ಮತ್ತು ಮಯನಿಗೆ ಮಹಾಭಾರತ ಹೇಳುತ್ತದೆ. ಇನ್ನು ರಾಮಾಯಣದಿಂದ ಹಿಡಿದು ಮಿಕ್ಕೆಲ್ಲಾ ಪುರಾಣಗಳಲ್ಲೂ ಶಿಲ್ಪವನ್ನು ಹೇಳಲಾಗಿದ್ದರೂ ಅದೊಂದು ಕಲೆಯ ಗುಂಪಿಗೆ ಸೇರಿದ್ದು ವಾತ್ಸ್ಯಾಯನನ ಕಾಲಕ್ಕೆ. 

#ಪ್ರತಿರೂಪ_ಶಿಲ್ಪ
ಸದ್ಯೋಜಾತರು

June 7, 2021

ಸಕ್ತುವಿನಂತೆ ಬುದ್ಧಿವಂತರು

.

ಅಂಗೀರಸನ ಮಗನಾದ ಬೃಹಸ್ಪತಿಯು ಜ್ಞಾನವನ್ನೇ ದೇವತೆಯನ್ನಾಗಿ ಸ್ತುತಿಸುವ ಸೂಕ್ತದಲ್ಲಿ ಬೃಹಸ್ಪತೇ ಸೂಕ್ತ ಎಂದೇ ಋಗ್ವೇದದದಲ್ಲಿ ಕರೆಯಲಾಗಿದೆ. ಸಕ್ತುಮಿವ ತಿತಉನಾ ಪುನಂತೋ ಯತ್ರ ಧೀರಾ ವಾಚಮಕ್ರತ ಎಂದು ಬರುವ ಎರಡನೇ ಋಕ್ಕನ್ನು ಮಾತ್ರ ಗಮನಿಸುವೆ. ಇಲ್ಲಿ ಸಕ್ತು ಎನ್ನುವ ಪದ ಪ್ರಯೋಗವಾಗಿದೆ. 

ಸಕ್ತು ಎನ್ನುವುದು ಒಂದು ಧಾನ್ಯಕ್ಕೆ ಇರುವ ಹೆಸರು. ಅಂದರೆ ಈ ಧಾನ್ಯವನ್ನು ಋಗ್ವೇದ ಭಾಷ್ಯದಲ್ಲಿ ಯವ ಎನ್ನುವ ಧಾನ್ಯವನ್ನು ಕುರಿತಾಗಿ ಹೇಳಿದ್ದಾರೆ. ಅಂದರೆ ಬಾರ್ಲಿ ಎನ್ನುವ ಧಾನ್ಯವನ್ನು ಕುರಿತಾಗಿ. ಇಲ್ಲಿ ತಿತಉ ಎಂದರೆ ಸಾರಣೆ ಅಥವಾ ಶೋಧಿಸುವ ಸಲಕರಣೆ. ಧಾನ್ಯ ಅಥವಾ ಹಿಟ್ಟನ್ನು ಸಾರಣೆಯಲ್ಲಿ ಹಾಕಿ ಶೋಧಿಸುವದನ್ನೇ ಪುನಂತಃ ಎನ್ನಲಾಗಿದೆ. ಯಾವುದಾದರೂ ಲೋಹವನ್ನು ಬಳಸಿ ಅದರ ತಗಡಿಗೆ ಚಿಕ್ಕ ಚಿಕ್ಕ ರಂಧ್ರಗಳನ್ನು ಮಾಡಿ ಸುತ್ತಲೂ ಚರ್ಮದಿಂದ ಸುತ್ತುವುದನ್ನು ತಿತಉ ಎನ್ನಲಾಗುತ್ತದೆ. ತಿಲಮಾತ್ರದಷ್ಟು ಚಿಕ್ಕ ರಂಧ್ರಗಳಿರುವುದರಿಂದಲೂ ಸಹ ತಿತಉ ಎಂದು ಕರೆಯಲಾಗಿದೆ. ಸಚತೇ ದುರ್ಧಾವೋ ಭವತಿ ಇತಿ ಸಕ್ತುಃ ಈ ಸಕ್ತು ಎನ್ನುವ ಧಾನ್ಯವು ಶೋಧಿಸಿ ತೆಗೆಯುವುದು ಸಹ ಅತ್ಯಂತ ಕಷ್ಟಕರ ಮತ್ತು ಈ ಸಕ್ತುವನ್ನು ನೀರಿನಿಂದ ತೊಳೆದರೆ ಅದು ಒಂದಕ್ಕೊಂದು ಅಂಟಿಕೊಳ್ಳುತ್ತಂತೆ. ಅದನ್ನು ತೊಳೆದು ಉಪಯೋಗಿಸುವುದೇ ಕಷ್ಟದ ಕೆಲಸ ಎನ್ನಲಾಗಿದೆ. ಇನ್ನೊಂದು ವಿಷೇಶವೆಂದರೆ ನೀರು ತಾಗಿದಾಕ್ಷಣ ಅದು ವಿಕಸಿತವಾಗಿ ದೊಡ್ಡದಾಗುತ್ತದಂತೆ. ಹೀಗಾಗಿಯೇ ವಿಕಸಿತ ಎನ್ನುವ ಶಬ್ದವೇ ಹಿಂದುಮುಂದಾಗಿ ಸಕ್ತು ಎನ್ನುವ ಪದ ಉಂಟಾಗಿದೆ ಎನ್ನುವ ಅಭಿಪ್ರಾಯವೂ ಭಾಷ್ಯಕಾರರದ್ದು. 

ಜರಡಿಯಲ್ಲಿ ಯವಧಾನ್ಯವನ್ನು ಹಾಕಿ ಸೋಸಿ ಶುದ್ಧವಾದದ್ದನ್ನು ಪಡೆಯುವಂತೆ ಬುದ್ಧಿವಂತಾರದ ಜನ ಮನಸ್ಸೆಂಬ ಜರಡಿಯಲ್ಲಿ ವಾಕ್ಯವೆಂಬ ಧಾನ್ಯವನ್ನು ಹಾಕಿ ಧಾನ್ಯವೆಂಬ ಚಲನೆಯಿಂದ ವಾಕ್ಯವು ಶುದ್ಧವಾಗುವುದು ಎಂದರೆ ಬುದ್ಧಿವಂತರ ಮಾತುಗಳು ಚೆನ್ನಾಗಿ ಆಲೋಚಿಸಲ್ಪಟ್ಟಿರುತ್ತವೆ. ಎಂದರೆ ಸೋಸಲು ಕಷ್ಟವಾಗುವುದೂ ಚೂಪಾದ ಉಗುರಿದ್ದರೂ ಆಯ್ದುಕೊಳ್ಳಲು ಸಾಧ್ಯವಾಗದೇ ಇರುವ ಧಾನ್ಯದಂತೆ ಅತ್ಯಂತ ಜಾಣ್ಮೆಯನ್ನು ಮೆರೆಯುವ ಗುಣ ಇರುವುದು ಬುದ್ಧಿವಂತರಲ್ಲಿ ಮಾತ್ರ ಎನ್ನುವುದು ಈ ಋಕ್ಕಿನ ಭಾವಾರ್ಥ.
ಯವತ್ವಂ ಯದ್ವೈಕಂಕತಂ ಮಂಥಿ ಪಾತ್ರಂ ಭವತಿ ಸಕ್ತುಭಿಃ ಎಂದು ತೈತ್ತಿರೀಯ ಸಂಹಿತೆಯ ೬:೪:೧೦:೬ರಲ್ಲಿ ಬರುತ್ತದೆ. 
ಇಲ್ಲಿನ ವಿವರಣೆ ಭಾಷ್ಯಕಾರರದು ಬಹಳ ಮಹತ್ವ ಪಡೆಯುತ್ತದೆ. ಇಲ್ಲಿ ಈ ಸಕ್ತು ಎನ್ನುವುದು ಬತ್ತವನ್ನು ಹುರಿದಾಗ ಅರಳಿ ಅದು ಹೊಟ್ಟು ಕಳಚಿ ಬಂದ ಲಾಜಾ ಅಥವಾ ಹೊದಲು ಎಂದು ನಮ್ಮಲ್ಲಿ ಕರೆಯುತ್ತೇವೆ ಅಥವಾ ಅರಳು ಎಂದು ಸಹ ಕರೆಯಲಾಗುತ್ತೇವೆ. ಮಂಥಿಪಾತ್ರ ಎಂದರೆ ಸೋಮರಸವನ್ನು ಹಿಂಡುವ ಪಾತ್ರ. ಅದರಲ್ಲಿ ತಯಾರಿಸುವ ಪೇಯ ಒಂದರ ಕುರಿತಾಗಿದೆ. ಈ ಪೇಯ ಅತ್ಯಂತ ರುಚಿಕರವಾಗಿದ್ದು. ಶಕ್ತ್ತಿಭರಿತವಾಗಿದೆ ಎನ್ನುವುದು ಒಂದು ಕಡೆಯಾದರೆ. ಇನ್ನೊಂದು ಅರ್ಥದಲ್ಲಿ ಇದೇ ಸಕ್ತು ಎನ್ನುವುದು ಯವ ಅಥವಾ ಬಾರ್ಲಿಗೆ ಹೇಳಿದ್ದು, ಈ ಬಾರ್ಲಿಯನ್ನು ಹುಡಿಯನ್ನಾಗಿಮಾಡಿ ಅದರಿಂದ ತಯಾರಸಿಸುವ ಪೇಯವೊಂದು ಮನುಷ್ಯನ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುತ್ತದಂತೆ. ಅಲ್ಲದೇ ಇದು ಒಂದು ರೀತಿಯಲ್ಲಿ ಮತ್ತು ಭರಿಸುವಂತಿರುತ್ತದೆ ಮತ್ತು ಇದರ ಸೇವನೆಯಿಂದ ವೀರ್ಯವೃದ್ಧಿಯಾಗುತ್ತದೆ ಎನ್ನಲಾಗಿದೆ. ಅದೇನೇ ಇರಲಿ ಸಕ್ತು ಎನ್ನುವುದು ಅರಳು ಅಥವಾ ಬಾರ್ಲಿಯನ್ನು ಕುರಿತಾಗಿ ಹೇಳಿರುವುದು ತಿಳಿಯುತ್ತದೆ.

ಯವತ್ವಂ ಯದ್ವೈಕಂಕತಂ ಮಂಥಿ ಪಾತ್ರಂ ಭವತಿ ಸಕ್ತುಭಿಃ ಪಾಲಾಶದಂತಹ ಒಂದು ಮರದಿಂದ ಮಾಡಿದ ಪಾತ್ರೆಯಲ್ಲಿ ಎನ್ನುವುದನ್ನೇ ಇಲ್ಲಿ ವಿಕಂಕತ ಎಂದು ಹೇಳಿರುವುದು. ಯವದಿಂದ ಕೂಡಿರುವ ಅರಳಿನ ಹುಡಿಯನ್ನು ಸೋಮರಸವನ್ನು ಹಿಂಡುವಂತಹ ಪಾತ್ರೆಯಲ್ಲಿ ಮಿಶ್ರಣಮಾಡಿದಾಗ ಅದು ಅತ್ಯಂತ ರುಚಿಕರವಾದ ಹಾಗೂ ಮತ್ತು ಭರಿಸುವ ಪೇಯವಾಗುತ್ತದೆ ಎನ್ನುವುದು ಭಟ್ಟ ಭಾಸ್ಕರಾಚಾರ್ಯರ ಭಾಷ್ಯದಲ್ಲಿ. ಇದನ್ನು ಸಾಮಾನ್ಯವಾಗಿ ಸೋಮಯಾಗದ ಕೊನೆಯಲ್ಲಿ ಮಾಡುವ ಸಂಪ್ರದಾಯವಿದೆ ಎನ್ನುವ ಅಭಿಪ್ರಾಯವೂ ಅವರದ್ದು. ಶತಪಥ ಬ್ರಾಹ್ಮಣ ಮತ್ತು ವಾಜಸನೇಯೀ ಸಂಹಿತೆಯಲ್ಲೂ ಇದೇ ಸಕ್ತುವಿನ ವಿಷಯ ಬಂದಿದೆ. ಕಾಠಕ ಸಂಹಿತೆಯಲ್ಲಿ ಕರ್ಕಂದು, ಕುವಲ ಮತ್ತು ಅಪಾಮಾರ್ಗದ ಕುರಿತು ಹೇಳುವಾಗ ಸಕ್ತುವಿನ ವಿಷಯ ಬಂದಿದೆ. ಇನ್ನು ವೇದಿಕ್ ರಿಚುವಲ್ಸ್ ಎನ್ನುವ ಹಿಂದಿಯ ಪುಸ್ತಕದಲ್ಲಿ ಈ ಸಕ್ತು ಎನ್ನುವ ಧಾನ್ಯದ ಹುಡಿಯ ಉಪಯೋಗವನ್ನು ಯಜ್ಞ ದೀಕ್ಷಿತನಾದ ಯಜಮಾನನು ವ್ರತದ ಪಥ್ಯದಂತೆ ಬಳಸುತ್ತಾನೆ ಎನ್ನಲಾಗಿದೆ. ಬೌಧಾಯನ ಶ್ರೌತಸೂತ್ರದಲ್ಲಿ ಇದನ್ನು ಯಜ್ಞಾಹುತಿಯಾಗಿ ಬಳಸಲಾಗುತ್ತದೆ ಎಂದು ಹೇಳಲಾಗಿದೆ. ಆಪಸ್ತಂಭದಲ್ಲಿಯೂ ಅದನ್ನೆ ಹೇಳಲಾಗಿದೆ. ಇದು ಆಯುವೇದದ ಅಷ್ಟಾಂಗಹೃದಯ ಸಂಹಿತೆ, ಸುಶ್ರುತ ಸಂಹಿತೆ, ಮಹಾಭಾರತ, ಚರಕ ಸಂಹಿತೆ, ಹಿತೋಪದೇಶ, ವಿಷ್ಣುಸ್ಮೃತಿ, ಮತ್ತು ಇನ್ನೂ ಅನೇಕ ಕಡೆ ಇದರ ಪ್ರಸ್ತಾಪವಿದ್ದು ಇದು ಮಾನವನ ದೇಹದ ಆರೋಗ್ಯಕ್ಕೆ ಪೂರಕವಾಗಿ ದೊರಕಿದ ಉದಾಹರಣೆ ಸಿಗುತ್ತದೆ. ಬಾರ್ಲಿಯನ್ನು ಹುರಿದು ಅದನ್ನು ಹಿಟ್ಟು ಮಾಡಿ ನೆಲದಲ್ಲಿ ಹರಡುವುದನ್ನು ಸಕ್ತು ಎನ್ನಲಾಗುತ್ತದೆ ಎನ್ನುವ ಅರ್ಥವನ್ನು ಆಪ್ಟೆಯವರು ಕೊಡುತ್ತಾರೆ. ಸಕ್ತು ಎನ್ನುವುದು ನೆಲದಮೇಲೆ ಹರಡಿರುವ ಒಣಗಿದ ಧಾನ್ಯ ಎಂದು ಸಹ ಶಬ್ದಕೋಶವೊಂದರಲ್ಲಿ ಹೇಳಲಾಗಿದೆ. ಅಕ್ಕಿಯಿಂದ ಮಾಡಿದ ಪೇಯವೇ ಇರಲಿ ಬಾರ್ಲಿಯಿಂದಲೇ ಮಾಡಿರಲಿ ಅದು ಆರೊಗ್ಯದಾಯಿಯಂತೂ ಹೌದು.

#ಬಾರ್ಲಿಯ_ಪೇಯ
ಸದ್ಯೋಜಾತರು

June 4, 2021

ಸೀತಾ ಪರಿತ್ಯಾಗ ನಿಜವೇ ?



ರಾಮಾಯಣದ ಉತ್ತರಕಾಂಡದ ೪೩ನೆಯ ಸರ್ಗದಲ್ಲಿ ಬರುವ ಈ ಉಲ್ಲೇಖ ನಮ್ಮ ಬುದ್ಧಿ ಜೀವಿಗಳಿಗೆ ಯಾಕೆ ಗೋಚರಿಸುತ್ತಿಲ್ಲ ? ಇದನ್ನೇ ತಿರುಚಿ ರಾಮ ಹೆಂಡತಿಯನ್ನು ನಿಷ್ಕರುಣೆಯಿಂದ ಕಾಡಿಗೆ ಅಟ್ಟಿದ ಎನ್ನುವ ಕೂಗು ಯಾಕೆ ?? ಈ ಕಥೆಯಲ್ಲಿ ಎಲ್ಲಿಯೂ ರಾಮ ಕ್ರೋಧದಿಂದ ಸೀತೆಯನ್ನು ಕಾಡಿಗೆ ಬಿಟ್ಟಿಲ್ಲ. ಆತ ಅಲ್ಲಿಯೂ ಆಶ್ರಮದಲ್ಲಿ ಬಿಡಲು ತಿಳಿಸಿದ. ಆದರೆ ಆತ ನಿಜ ಕಾರಣವನ್ನು ಸೀತೆಗೂ ತಿಳಿಸಿಲ್ಲ, ಮತ್ತು ಲಕ್ಷ್ಮಣನೂ ತಿಳಿಸಿಲ್ಲ, ರಾಮ ನೊಂದುಕೊಳ್ಳುತ್ತಾನೆ. ಮರುಗುತ್ತಾನೆ. ಅಳುತ್ತಾನೆ ವ್ಯಾಕುಲನಾಗುತ್ತಾನೆ. ತನ್ನ ಪ್ರಜೆಗಳ ಹಿತದೃಷ್ಟಿಯನ್ನು ಕಾಣುತ್ತಾನೆ. ಹಾಗಾದರೆ ಬಾಯಿಗೆ ಬಂದಂತೆ ಕೂಗುವವರಿಗೆ ಏನನ್ನೋಣ ?

ತತ್ರೋಪವಿಷ್ಟಂ ರಾಜಾನಮುಪಾಸನ್ತೇ ವಿಚಕ್ಷಣಾಃ |
ಕಥಾನಾಂ ಬಹುರೂಪಾಣಾಂ ಹಾಸ್ಯಕಾರಾಃ ಸಮನ್ತತಃ || ರಾಮನು ತನ್ನ ಅರಮನೆಯ ಮಧ್ಯದ ಕೊಠಡಿಯಲ್ಲಿ ಕುಳಿತಿದ್ದ. ಆತನ ಪರಿವಾರದವರು ಆಪ್ತೇಷ್ಟರು ಕುಳಿತಿದ್ದರು. ವಿವಿಧ ಕಥೆಗಳನ್ನು ಹೇಳುವುದರಲ್ಲಿ ನಿಪುಣರಾದ ಹಾಸ್ಯ ಮತ್ತು ವಿನೋದಗಳನ್ನು ಮಾಡುವ ಸ್ನೇಹಿತರು ಕುಳಿತುಕೊಳ್ಳುತ್ತಾರೆ. ವಿಜಯ, ಮಧುಮತ್ತ, ಕಾಶ್ಯಪ, ಮಂಗಲ, ಕುಲ, ಸುರಾಜಿ, ಕಾಲಿಯ, ಭದ್ರ, ದಂತವಕ್ತ್ರ ಮತ್ತು ಸುಮಾಗಧ ಮೊದಲಾದ ಸ್ನೇಹಿತರು ಶ್ರೀರಾಮನನ್ನು ಸುತ್ತುವರಿದು ಕುಳಿತಿದ್ದರು. ಎಲ್ಲರೂ ಹಾಸ್ಯಭರಿತ ಕಥೆಗಳನ್ನು ಹೇಳುತ್ತಿದ್ದರು. ಹೀಗೆ ಕಥೆಯನ್ನು ಹೇಳುತ್ತಿದ್ದ ಸಂದರ್ಭದಲ್ಲಿ ಶ್ರೀರಾಮನು ಭದ್ರನೆಂಬುವವನನ್ನು ಪ್ರಶ್ನಿಸುತ್ತಾನೆ : “ಭದ್ರ ! ಅಯೋಧ್ಯೆಯಲ್ಲಿ ಮತ್ತು ನಮ್ಮ ರಾಷ್ಟ್ರದ ಇತರೆಡೆಗಳಲ್ಲಿ ಯಾವ ವಿಶೇಷವಾದ ಕಥೆಯನ್ನು ಜನರು ಪರಸ್ಪರವಾಗಿ ಆಡಿಕೊಳ್ಳುತ್ತಿದ್ದಾರೆ? ನಮ್ಮಲ್ಲಿರುವ ಹಳ್ಳಿಗಳಲ್ಲಿ ನನ್ನ ವಿಷಯವಾಗಿ ಹಾಗೂ ಸೀತೆಯ ವಿಷಯವಾಗಿ, ಭರತ, ಲಕ್ಷ್ಮಣ, ಶತ್ರುಘ್ನರ ವಿಷಯವಾಗಿ ಮತ್ತು ತಾಯಿ ಕೈಕೇಯಿಯ ವಿಷಯವಾಗಿ ಏನೆಂದು ಮಾತನಾಡಿಕೊಳ್ಳುತ್ತಿದ್ದಾರೆ ? ಎಂದು ಪ್ರಶ್ನಿಸುತ್ತಾನೆ.

ವಕ್ತವ್ಯತಾಂ ಚ ರಾಜಾನೋ ವನೇ ರಾಜ್ಯೇ ವ್ರಜನ್ತಿ ಚ || ಒಂದು ವೇಳೆ ರಾಜನು ಆಚಾರ ವಿಚಾರಗಳಿಂದ ಹೀನನಾಗಿ ಬಿಟ್ಟರೆ ಅವನು ತನ್ನ ರಾಜ್ಯದಲ್ಲಿ ಮತ್ತು ಋಷಿ, ಮುನಿಗಳು ವಾಸಮಾಡುವ ಆಶ್ರಮಗಳಲ್ಲಿಯೂ ನಿಂದೆಯ ಮಾತುಗಳಿಗೆ ಗುರಿಯಾಗುತ್ತಾನೆ. ಅವನು ಮಾಡಿರಬಹುದಾದ ಕೆಟ್ಟ ಕೆಲಸಗಳನ್ನೇ ಜನರು ಯಾವಾಗಲೂ ಚರ್ಚಿಸುತ್ತಿರುತ್ತಾರೆ.” ಶ್ರೀರಾಮನು ಹೀಗೆ ಕೇಳಲು ಭದ್ರನು ಹೇಳುತ್ತಾನೆ : “ಮಹಾರಾಜ ! ನಿನ್ನ ವಿಷಯದಲ್ಲಿ ನಾಗರಿಕರು ಒಳ್ಳೆಯ ಮಾತನ್ನೇ ಆಡಿಕೊಳ್ಳುತ್ತಿದ್ದಾರೆ. ರಾವಣವಧೆಯ ಕುರಿತಾಗಿ ನೀನು ಸಾಧಿಸಿದ ವಿಜಯದಿಂದ ಜನರು ಪ್ರಶಂಸೆ ಮಾಡುತ್ತಿದ್ದಾರೆ.” ಭದ್ರನ ಮಾತನ್ನು ಕೇಳಿ ಶ್ರೀರಾಮನು ಪುನಃ ಮತ್ತೇನು ಹೇಳಿದರು ಅದು ಶುಭವಾಗಿರಲಿ ಅಶುಭವಾಗಿರಲಿ ನಿರ್ದಾಕ್ಷಿಣ್ಯದಿಂದ ಹೇಳು ಎನ್ನುತ್ತಾನೆ. ಶುಭವಾದುದನ್ನು ಅವರು ಹೇಳಿದ್ದರೆ ಅದನ್ನೇ ನಾನು ಮುಂದುವರಿಸುತ್ತೇನೆ. ಅಶುಭವಾದುದನ್ನು ಹೇಳಿದ್ದರೆ ಅವರ ಅಭಿಪ್ರಾಯದಂತೆ ಅಂತಹ ಕಾರ್ಯವನ್ನು ಪರಿತ್ಯಜಿಸುತ್ತೇನೆ. ನಿಶ್ಚಿಂತನಾಗಿ ನಿರ್ಭಯನಾಗಿ ಯಾವ ವಿಧವಾದ ಆತಂಕವೂ ಇಲ್ಲದೇ ಎಲ್ಲ ವಿಷಯಗಳನ್ನೂ ಹೇಳು ಎನ್ನುತ್ತಾನೆ. ಅದಕ್ಕೆ ಪ್ರತಿಯಾಗಿ ಭದ್ರನು ಹೀಗೆ ಹೇಳುತ್ತಾನೆ.

ದುಷ್ಕರಂ ಕೃತವಾನ್ರಾಮಃ ಸಮುದ್ರೇ ಸೇತುಬನ್ಧನಮ್ |
ಅಶ್ರುತಂ ಪೂರ್ವಕೈಃ ಕೈಶ್ಚಿದ್ದೇವೈರಪಿ ಸದಾನವೈಃ || “ಶ್ರೀರಾಮನು ಸಮುದ್ರಕ್ಕೆ ಸೇತುವೆಯನ್ನು ನಿರ್ಮಿಸಿ ಅದ್ಭುತವಾದ ಮತ್ತು ಅತಿಕಷ್ಟವಾದ ಕಾರ್ಯವನ್ನು ಮಾಡಿದ್ದಾನೆ. ಹಿಂದಿನ ಯಾವ ರಾಜರೂ, ದೇವ ದಾನವರೂ ಇಂತಹ ಕಾರ್ಯವನ್ನು ಮಾಡಿರುವುದನ್ನು ನಾವು ಕೇಳಿಲ್ಲ.  ದೇವ ದಾನವ ಯಕ್ಷ, ಗಂಧರ್ವರಿಂದಲೂ ಎದುರಿಸಲು ಅಸಾಧ್ಯನಾಗಿದ್ದ ರಾವಣನು ಸೈನ್ಯದೊಡನೆಯೂ ವಾಹನದೊಡನೆಯೂ ಶ್ರೀರಾಮನಿಂದ ಹತನಾದನು. ಋಕ್ಷ ವಾನರ ರಾಕ್ಷಸರೂ ಶ್ರೀರಾಮನಿಗೆ ಅಧೀನರಾದರು.

ಹತ್ವಾ ಚ ರಾವಣಂ ಸಂಖ್ಯೇ ಸೀತಾಮಾಹೃತ್ಯ ರಾಘವಃ |
ಅಮರ್ಷಂ ಪೃಷ್ಠತಃ ಕೃತ್ವಾ ಸ್ವವೇಶ್ಮ ಪುನರಾನಯತ್ || ಆದರೆ ಇಲ್ಲೊಂದು ದೋಷವಿದೆ. ಯುದ್ಧದಲ್ಲಿ ಶ್ರೀರಾಮನು ರಾವಣನನ್ನು ಸಂಹರಿಸಿ ಸೀತೆಯನ್ನೇನೋ ಅರಮನೆಗೆ ಕರೆತಂದನು. ಆದರೆ ಶ್ರೀರಾಮನ ಮನಸ್ಸಿನಲ್ಲಿ ಸೀತೆಯ ಚಾರಿತ್ರ್ಯದ ವಿಷಯವಾಗಿ ಕೋಪವಾಗಲೀ ಸಂದೇಹವಾಗಲೀ ಉಂಟಾಗಲೇ ಇಲ್ಲ.
ಅಸ್ಮಾಕಮಪಿ ದಾರೇಷು ಸಹನೀಯಂ ಭವಿಷ್ಯತಿ |
ಯಥಾ ಹಿ ಕುರುತೇ ರಾಜಾ ಪ್ರಜಾಸ್ತಮನುವರ್ತತೇ || ಸೀತಾಸಮಾಗಮದಿಂದ ಅವನಿಗೆ ಎಂತಹ ಸುಖವು ಸಿಕ್ಕಿತು ? ರಾವಣನಾದರೂ ಸೀತೆಯನ್ನು ಬಲಾತ್ಕಾರದಿಂದ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಅಪಹರಿಸಿಕೊಂಡು ಲಂಕೆಗೆ ಹೋದ. ಅಲ್ಲಿ ತನ್ನ ಅಂತಃಪುರದ ಕ್ರೀಡಾವನವಾಗಿದ್ದ ಅಶೋಕವನದಲ್ಲಿ ಅವಳನ್ನು ಇಟ್ಟಿದ್ದನು. ಹೀಗೆ ಅವಳು ಬಹಳ ದಿವಸಗಳವರೆಗೆ ರಾಕ್ಷಸರ ವಶದಲ್ಲಿಯೇ ಇದ್ದಳು. ಅಂತಹವಳನ್ನೇಕೆ ಶ್ರೀರಾಮನು ನಿಂದೆಗೆ ಗುರಿಪಡಿಸಲಿಲ್ಲ ? ನಮ್ಮ ಹೆಂಡತಿಯರ ವಿಷಯದಲ್ಲೂ ಅಂಥಾದ್ದನ್ನು ಸಹಿಸಿಕೊಳ್ಳಬೇಕಾಗುತ್ತದೆ. ಏಕೆಂದರೆ : ರಾಜನು ಹೇಗೆ ಮಾಡಿದರೆ ಪ್ರಜೆಗಳೂ ಹಾಗೆಯೇ ಮಾಡುತ್ತಾರೆ. ಮಹಾರಾಜ ! ಹೀಗೆ ನಗರದಲ್ಲಿರುವ ಮತ್ತು ಹಳ್ಳಿಗಳಲ್ಲಿರುವ ಜನರು ಅನೇಕ ಪ್ರಕಾರವಾಗಿ ಮಾತನಾಡಿಕೊಳ್ಳುತ್ತಿದ್ದಾರೆ.” ಎನ್ನುತ್ತಾನೆ. ಭದ್ರನು ಹೇಳಿದ ಮಾತನ್ನು ಕೇಳಿ ಶ್ರೀರಾಮನು ಪರಮದುಃಖಿತನಾಗಿ ಉಳಿದೆಲ್ಲವರೊಡನೆ ಹೇಳುತ್ತಾನೆ. "ಮಿತ್ರರೇ ಈ ವಿಷಯ ದಲ್ಲಿ ನಿಮ್ಮ ಅಭಿಪ್ರಾಯವೇನು ? ಈ ಮಾತು ಎಷ್ಟು ಸತ್ಯವಾಗಿದೆ ? ಎಂಬುದನ್ನು ಹೇಳಿರಿ.”ಶ್ರೀರಾಮನ ಮಾತಿಗೆ ಎಲ್ಲ ಜನರೂ "‘ಏವಮೇತತ್ ನ ಸಂಶಯಃ’ ಭದ್ರನು ಹೇಳಿದುದು ವಾಸ್ತವವಾಗಿದೆ. ಇದರಲ್ಲಾವ ಸಂಶಯವೂ ಇಲ್ಲ. ಪ್ರಜೆಗಳೆಲ್ಲರೂ ಹೀಗೆ ಆಡಿಕೊಳ್ಳುತ್ತಿರುವುದಂತೂ ನಿಜ.” ಶ್ರೀರಾಮನು ಎಲ್ಲರಿಂದಲೂ ಇದೇ ಮಾತನ್ನು ಕೇಳಿ ಅವರೆಲ್ಲರನ್ನೂ ಅವರವರ ಮನೆಗಳಿಗೆ ಕಳುಹಿಸಿಕೊಟ್ಟನು.

ಎಲ್ಲರನ್ನೂ ಕಳುಹಿಸಿಕೊಟ್ಟನಂತರ ಶ್ರೀರಾಮನು ಮುಂದೆ ತಾನು ಮಾಡಬೇಕಾಗಿರುವ ಕಾರ್ಯವನ್ನು ನಿಶ್ಚಯಿಸಿ ಹತ್ತಿರದಲ್ಲಿದ್ದ ದ್ವಾರ ಪಾಲಕನಿಗೆ ಹೇಳುತ್ತಾನೆ. “ದ್ವಾರಪಾಲಕನೇ ಲಕ್ಷ್ಮಣನನ್ನೂ, ಭರತನನ್ನೂ, ಶತ್ರುಘ್ನನನ್ನೂ ಕರೆದುಕೊಂಡು ಬಾ.ಎನ್ನುತ್ತಾನೆ. ” ದ್ವಾರಪಾಲಕನು ಲಕ್ಷ್ಮಣನ ಮನೆಗೆ ಹೋಗಿ :
ದ್ರಷ್ಟುಮಿಚ್ಛತಿ ರಾಜಾ ತ್ವಾಂ ಗಮ್ಯತಾಂ ತತ್ರ ಮಾ ಚಿರಮ್ || “ರಾಜಕುಮಾರನೇ ! ಮಹಾರಾಜನು ನಿನ್ನನ್ನು ನೋಡಲು ಅಪೇಕ್ಷಿಸಿದ್ದಾನೆ. ತಡಮಾಡದೆ ರಾಜನ ಬಳಿಗೆ ಹೋಗು.ಲಕ್ಷ್ಮಣನು ಶ್ರೀರಾಮನ ಅರಮನೆಗೆ ಧಾವಿಸುತ್ತಾನೆ. ದ್ವಾರಪಾಲಕನು ಭರತನ ಅರಮನೆಗೆ “ರಾಜಾ ತ್ವಾಂ ದ್ರಷ್ಟುಮಿಚ್ಛತಿ" ರಾಜನು ನಿನ್ನನ್ನು ನೋಡಲು ಬಯಸಿದ್ದಾನೆ” ಎಂದು ಹೇಳಿದನು. ಭರತನು ಕಾಲ್ನಡಿಗೆಯಲ್ಲಿಯೇ ಶ್ರೀರಾಮನ ಅರಮನೆಗೆ ತೆರಳುತ್ತಾನೆ. ದ್ವಾರಪಾಲಕನು ಶತ್ರುಘ್ನನ ಅರಮನೆಗೆ ಬಂದು "ಏಹ್ಯಾಗಚ್ಛ ರಘುಶ್ರೇಷ್ಠ ರಾಜಾ ತ್ವಾಂ ದ್ರಷ್ಟುಮಿಚ್ಛತಿ | ಗತೋ ಹಿ ಲಕ್ಷ್ಮಣಃ ಪೂರ್ವಂ ಭರತಶ್ಚ ಮಹಾಯಶಾಃ ||೯|| ಮಹಾರಾಜನಾದ ಶ್ರೀರಾಮನು ನಿನ್ನನ್ನು ನೋಡಲು ಬಯಸಿದ್ದಾನೆ. ಲಕ್ಷ್ಮಣ, ಭರತ ಈಗಾಗಲೇ ಹೋಗಿದ್ದಾರೆ. ಆದುದರಿಂದ ನೀನೂ ಹೊರಟುಬಿಡು.” ಎನ್ನುತ್ತಾನೆ. ದ್ವಾರಪಾಲಕನ ಮಾತನ್ನು ಕೇಳಿ ರಾಮನಿದ್ದೆಡೆಗೆ ಧಾವಿಸುತ್ತಾನೆ. ರಾಜಕುಮಾರರೆಲ್ಲರೂ ಆಗಮಿಸಿರುವುದನ್ನು ಕೇಳಿ ಚಿಂತಾಕ್ರಾಂತನಾಗಿದ್ದ ಶ್ರೀರಾಮನು ಪ್ರಭಾಶೂನ್ಯನಾಗಿದ್ದ.  ಶ್ರೀರಾಮನ ಎರಡು ಕಣ್ಣುಗಳೂ ಕಂಬನಿಯಿಂದ ತುಂಬಿಕೊಂಡಿದ್ದುವು. ಶ್ರೀರಾಮನ ಮುಖವನ್ನು ಎಲ್ಲರೂ ನೋಡಿದರು. ಅವರೆಲ್ಲರೂ ಶ್ರೀರಾಮನ ಪಾದಗಳನ್ನು ತಲೆಗಳಿಂದ ಮುಟ್ಟಿ ನಮಸ್ಕರಿಸಿ ಆಜ್ಞೆಯನ್ನು ನಿರೀಕ್ಷಿಸುತ್ತಾ ನಿಂತರು. ಶ್ರೀರಾಮನು ಕಣ್ಣೀರು ಸುರಿಸುತ್ತಲೇ ಸಿಂಹಾಸನದಿಂದ ಮೇಲೆದ್ದು ಒಬ್ಬೊಬ್ಬರನ್ನಾಗಿ ತಬ್ಬಿಕೊಂಡು ಎಲ್ಲರಿಗೂ ಆಸನಗಳಲ್ಲಿ ಕುಳಿತುಕೊಳ್ಳುವಂತೆ ಹೇಳಿ ಮೂವರೂ ಆಸನಾರೂಢರಾದ ನಂತರ ಹೇಳತೊಡಗಿದನು :

ಭವನ್ತೋ ಮಮ ಸರ್ವಸ್ವಂ ಭವನ್ತೋ ಜೀವಿತಂ ಮಮ |
ಭವದ್ಭಿಶ್ಚ ಕೃತಂ ರಾಜ್ಯಂ ಪಾಲಯಾಮಿ ನರೇಶ್ವರಾಃ || “ನೀವೇ ನನ್ನ ಸರ್ವಸ್ವವೂ. ನೀವೇ ನನ್ನ ಜೀವಿತವೂ. ನೀವು ಸಂಪಾದಿಸಿರುವ ಈ ರಾಜ್ಯವನ್ನು ನಾನು ಪರಿಪಾಲನೆ ಮಾಡುತ್ತಿದ್ದೇನೆ. ನೀವೆಲ್ಲರೂ ಎಲ್ಲ ಶಾಸ್ತ್ರಾರ್ಥಗಳನ್ನೂ ಬಲ್ಲವರು. ಒಳ್ಳೆಯ ಬುದ್ಧಿಯುಳ್ಳವರು. ಶಾಸ್ತ್ರಗಳಲ್ಲಿ ಹೇಳಿರುವಂತೆ ನಡೆದುಕೊಳ್ಳುವವರು. ಈಗ ನಾನು ನನಗೆ ಸಂಬಂಧಿಸಿದಂತೆ ಸಮಸ್ಯೆಯೊಂದನ್ನು ನಿಮ್ಮ ಮುಂದಿಡುತ್ತಿದ್ದೇನೆ. ನೀವೆಲ್ಲರೂ ಸೇರಿ ನನ್ನ ಸಮಸ್ಯೆಗೆ ಒಂದು ಮಾರ್ಗವನ್ನು ಹುಡುಕಬೇಕಾಗಿದೆ.” ಶ್ರೀರಾಮನು ಹೀಗೆ ಹೇಳಲು ಅವನು ಹೇಳುತ್ತಿರುವುದನ್ನೇ ಏಕಾಗ್ರತೆಯಿಂದ ಕೇಳಿಸಿಕೊಳ್ಳುತ್ತಿದ್ದ ಮೂವರು ತಮ್ಮಂದಿರೂ ಉದ್ವಿಗ್ನಚಿತ್ತರಾಗಿ ರಾಜನೇನು ಹೇಳಲಿರುವನೆಂಬುದನ್ನು ಕಾತರದಿಂದ ನಿರೀಕ್ಷಿಸುತ್ತಿದ್ದರು.

ಪೌರಾಪವಾದಃ ಸುಮಹಾಂಸ್ತಥಾ ಜನಪದಸ್ಯ ಚ |
ವರ್ತತೇ ಮಯಿ ಬೀಭತ್ಸಾ ಸಾ ಮೇ ಮರ್ಮಾಣಿ ಕೃನ್ತತಿ || ಪಟ್ಟಣಿಗರೂ ಮತ್ತು ಪ್ರಾಂತೀಯಜನರೂ ನಮ್ಮ ವಿಷಯದಲ್ಲಿ ಕುತ್ಸಿತವಾದ ಭಾವನೆಯನ್ನು ಹೊಂದಿದ್ದಾರೆ. ಇದು ನನ್ನ ಮರ್ಮಸ್ಥಾನ ಕತ್ತರಿಸಿ ಹಾಕುತ್ತಿದೆ.
ಅಹಂ ಕಿಲ ಕುಲೇ ಜಾತ ಇಕ್ಷ್ವಾಕೂಣಾಂ ಮಹಾತ್ಮನಾಮ್ | ಸೀತಾಪಿ ಸತ್ಕುಲೇ ಜಾತಾ ಜನಕಾನಾಂ ಮಹಾತ್ಮನಾಮ್ ||೪|| ನಾನಾದರೋ ಮಹಾತ್ಮರಾದ ಇಕ್ಷ್ವಾಕುಗಳ ಶ್ರೇಷ್ಠರಾದ ಕುಲದಲ್ಲಿ ಜನಿಸಿದವನು. ಅಂತೆಯೇ ಸೀತೆಯೂ ಮಹಾತ್ಮರಾದ ಜನಕನ ಉತ್ತಮ ಕುಲದಲ್ಲಿ ಹುಟ್ಟಿದವಳು. ಲಕ್ಷ್ಮಣ ! ನಿರ್ಜನವಾಗಿದ್ದ ದಂಡಕಾರಣ್ಯದಲ್ಲಿ ಸೀತೆಯನ್ನು ರಾವಣನು ಅಪಹರಿಸಿದ ವಿಷಯವೂ ನಾನು ರಾವಣನನ್ನು ಸಂಹರಿಸಿ ಪತಿವ್ರತೆಯಾದ ಸೀತೆಯನ್ನು ಕರೆತಂದ ವಿಷಯವೂ ನಿನಗೆ ತಿಳಿದಿದೆ. ರಾವಣನ ಅರಮನೆಯಲ್ಲಿಯೇ ಬಹಳ ದಿವಸಗಳವರೆಗೆ ವಾಸವಾಗಿದ್ದ ಸೀತೆಯನ್ನು ಹೇಗೆ ಕರೆದೊಯ್ಯಲೆಂಬ ಬುದ್ಧಿಯು ನನಗೆ ಅಲ್ಲಿಯೇ ಹುಟ್ಟಿದ್ದಿತು. ತಾನು ಪರಿಶುದ್ಧಳೆಂಬ ವಿಶ್ವಾಸವನ್ನು ಹುಟ್ಟಿಸುವ ಸಲುವಾಗಿ ಸೀತೆಯು ನಿನ್ನೆದುರಿನಲ್ಲಿಯೇ ಅಗ್ನಿಪ್ರವೇಶ ಮಾಡಿದಳು. ನಿನ್ನೆದುರಿನಲ್ಲಿ ಮತ್ತು ಎಲ್ಲ ದೇವತೆಗಳ ಸಮಕ್ಷದಲ್ಲಿ ಅಗ್ನಿದೇವನು ಪ್ರತ್ಯಕ್ಷನಾಗಿ ಮೈಥಿಲಿಯು ನಿಷ್ಪಾಪಳೆಂದು ಹೇಳಿದನು. ಆಕಾಶದಲ್ಲಿ ಸಂಚರಿಸುವ ವಾಯುವೂ ಮತ್ತು ಚಂದ್ರಾದಿತ್ಯರು ಕೂಡ ದೇವತೆಗಳ ಮತ್ತು ಋಷಿಗಳ ಸನ್ನಿಧಿಯಲ್ಲಿ ಸೀತೆಯು ನಿಷ್ಪಾಪಿ ಎಂದು ಸಾರಿ ಹೇಳಿದನು. ಹೀಗೆ ಎಲ್ಲರೂ ನಿಶ್ಚಯಮಾಡಿ ಸೀತಾದೇವಿಯು ಪವಿತ್ರಳೆಂದು ಹೇಳಿದ ಅತ್ಯಂತ ಶುದ್ಧ ಚಾರಿತ್ರಳಾದ ಸೀತಾದೇವಿಯನ್ನು ಲಂಕೆಯಲ್ಲಿ ದೇವ ಗಂಧರ್ವರ ಸಮ್ಮುಖದಲ್ಲಿ ಇಂದ್ರನೇ ನನ್ನ ವಶಕ್ಕೊಪ್ಪಿಸಿದನು. ಈ ಕಾರಣದಿಂದಲೇ ನಾನು ಸೀತೆಯನ್ನು ಅಯೋಧ್ಯೆಗೆ ಕರೆತಂದೆ. ಆದರೆ ಸೀತೆಯ ವಿಷಯವಾಗಿ ಉವಾಗಿ ಅಪವಾದ ಹರಡಿಬಿಟ್ಟಿದೆ. ಪುರವಾಸಿಗಳೂ ಮತ್ತು ದೇಶವಾಸಿಗಳೂ ನನ್ನ ಮೇಲೆ ಮಹತ್ತರವಾದ ಆಪಾದನೆಯನ್ನೂ ಹೊರೆಸುತ್ತಿದ್ದಾರೆ. ಇದು ನನ್ನ ಮನಸ್ಸಿನಲ್ಲಿ ಮಹತ್ತರವಾದ ವ್ಯಥೆಯನ್ನುಂಟುಮಾಡಿದೆ.

ಅಕೀರ್ತಿರ್ಯಸ್ಯ ಗೀಯೇತ ಲೋಕೇ ಭೂತಸ್ಯ ಕಸ್ಯಚಿತ್ | ಪತತ್ಯೇವಾಧಮಾನ್ ಲೋಕಾನ್ ಯಾವಚ್ಛಬ್ದಃ ಪ್ರಕೀರ್ತ್ಯತೇ ||
ಯಾವ ಪ್ರಾಣಿಯ ಅಪಕೀರ್ತಿಯು ಲೋಕದಲ್ಲಿ ಚರ್ಚೆಗೆ ವಿಷಯ ವಾಗುವುದೋ -ಅಂತಹವನು ತನ್ನ ಅಪಕೀರ್ತಿಯ ಚರ್ಚೆಯು ಲೋಕದಲ್ಲಿ ನಡೆಯುತ್ತಿರುವವರೆಗೂ ನರಕದಲ್ಲಿ ಬಿದ್ದಿರಬೇಕಾಗುತ್ತದೆ.
ಅಪಕೀರ್ತಿ ಅಥವಾ ಅಪವಾದ ಬಂದಲ್ಲಿ ನಾನು ಪ್ರಾಣಗಳನ್ನಾದರೂ ತೊರೆದೇನು. ನಿಮ್ಮನ್ನಾದರೂ ಪರಿತ್ಯಜಿಸಿಯೇನು. ಹೀಗಿರುವಾಗ ಸೀತೆಯ ತ್ಯಾಗದಲ್ಲಿ ಹೇಳುವುದೇನಿದೆ. ಇದಕ್ಕಿಂತಲೂ ಅಧಿಕತರವಾದ ದುಃಖವನ್ನು ನಾನು ಹಿಂದೆಂದೂ ಅನುಭವಿಸಿದ ಸ್ಮರಣೆಯು ನನಗಿಲ್ಲ. ಲಕ್ಷ್ಮಣ ! ನೀನು ನಾಳೆ ಬೆಳಗಾಗುತ್ತಲೇ ಸುಮಂತ್ರನೇ ಸಾರಥಿಯಾಗಿರುವ ರಥದಲ್ಲಿ ಸೀತೆಯನ್ನು ಕುಳ್ಳಿರಿಸಿಕೊಂಡು ನಮ್ಮ ರಾಜ್ಯದ ಗಡಿಯಿಂದಾಚೆಗೆ ಬಿಟ್ಟು ಬಾ. ಗಂಗಾನದಿಯ ಆಚೆಯ ದಡದಲ್ಲಿ ಮಹಾತ್ಮರಾದ ವಾಲ್ಮೀಕಿಗಳ ದಿವ್ಯಾಶ್ರಮವಿದೆ. 

ತಮಸಾನದೀತೀರದಲ್ಲಿರುವ ಆ ದಿವ್ಯಾಶ್ರಮದಲ್ಲಿ ನೀನು ಅವಳನ್ನು ಬಿಟ್ಟು ಶೀಘ್ರವಾಗಿ ಬಂದುಬಿಡು. ಹಾಗಾದರೆ ಇಲ್ಲಿ ರಾಮನ ಯಾವ ಭಾವನೆ ವ್ಯಕ್ತವಾಗುತ್ತದೆ.? ನಾನು ಇತಿಹಾಸದಲ್ಲಿ ಇದೇ ಭಾವನೆಗಳನ್ನು ಕಪ್ಪೆ ಅರಭಟ್ಟನ ಶಾಸನದಲ್ಲಿಯೂ ಕಾಣುತ್ತೇನೆ.

#ಉತ್ತರಕಾಂಡ
ಸದ್ಯೋಜಾತರು