|| ಐಕ್ಯಮಂತ್ರಃ ||
ಯಂ ವೈದಿಕಾ ಮಂತ್ರದೃಶಃ ಪುರಾಣಾಃ ಇಂದ್ರಂ ಯಮಂ ಮಾತರಿಶ್ವಾನಮಾಹುಃ | ವೇದಾಂತಿನೋsನಿರ್ವಚನೀಯಮೇಕಂ ಯಂಬ್ರಹ್ಮಶಬ್ಧೇನ ವಿನಿರ್ದಿಶಂತಿ ||೧||
ಶೈವಾ ಯಮೀಶಂ ಶಿವ ಇತ್ಯವೋಚನ್ ಯಂ ವೈಷ್ಣವಾ ವಿಷ್ಣುರಿತಿ ಸ್ತುವಂತಿ | ಬುದ್ಧ ಸ್ತಥಾರ್ಹನ್ನಿತಿ ಬೌದ್ಧಜೈನಾಃ ಸತ್‌ಶ್ರೀ ಅಕಾಲೇತಿ ಚ ಸಿಕ್ಖಸಂತಃ ||೨||
ಶಾಸ್ತೇತಿ ಕೇಚಿತ್ ಕತಿಚಿತ್ ಕುಮಾರಃ ಸ್ವಾಮೀತಿ ಮಾತೇತಿ ಪಿತೇತಿ ಭಕ್ತ್ಯಾ | ಯಂ ಪ್ರಾರ್ಥಯಂತೇ ಜಗದೀಶಿತಾರಂ ಸ ಏಕ ಏವ ಪ್ರಭುರದ್ವಿತೀಯಃ ||೩||
ಯಾವ ದೇವನನ್ನು ಪ್ರಾಚೀನ ಮಂತ್ರದ್ರಷ್ಟಾರರಾದ ವೈದಿಕರು, ಇಂದ್ರ-ಯಮ-ವಾಯು ಎಂದು ಹೇಳುವರೋ, ವೇದಾಂತಿಗಳು ಯಾರನ್ನು ಮಾತಿಗೆ ಸಿಲುಕದ ಬ್ರಹ್ಮ ಎಂದು ಕರೆಯುವರೋ ||೧||
ಯಾವ ದೇವನನ್ನು ವೀರಶೈವರು ಶಿವ ಎಂದೂ, ವೈಷ್ಣವರು ವಿಷ್ಣು ಎಂದೂ, ಬೌದ್ಧರು ಬುದ್ಧ ಎಂದೂ, ಜೈನರು ಅರ್ಹನೆ ಎಂದೂ, ಸಿಕ್ಖಸಂತರೂ ಸತ್ ಶ್ರೀ ಅಕಾಲ ಎಂದೂ ಸ್ತುತಿಸುವರೋ... ||೨||
ಶಾಸ್ತ (ಅಯ್ಯಪ್ಪ) ಎಂದು ಕೆಲವರು, ಕುಮಾರ (ಸುಬ್ರಹ್ಮಣ್ಯ) ಎಂದು, ಇನ್ನು ಕೆಲವರು ಭಕ್ತಿಯಿಂದ ಸ್ವಾಮಿ, ತಾಯಿ, ತಂದೆ ಎಂದು ಮತ್ತೆ ಕೆಲವರು ಯಾವ ಜಗದೊಡೆಯನನ್ನು ಪ್ರಾರ್ಥಿಸುವರೋ ಆ ಅದ್ವಿತೀಯನಾದ ಪ್ರಭುವು ಒಬ್ಬನೇ. ||೩||
No comments:
Post a Comment
If you have any doubts. please let me know...