June 4, 2021

ಪಂಚಾಂಗ

🕉️ ಓಂ ಶ್ರೀ ಗುರುಭ್ಯೋ ನಮಃ 🕉️ ‌   ‌      ‌        ‌                                                                        ‌                                                                                     *‌ನಿತ್ಯ ಪಂಚಾಂಗ ನೋಡುವುದರಿಂದ  ನಮಗೇನು ಲಾಭ ? ಎಂದು  ಮನಸ್ಸಿನಲ್ಲಿ ಇರಬಹುದು*

ಅಂತಹ ಪ್ರಶ್ನೆಯನ್ನು  ನಿರ್ಮೂಲನೆ ಮಾಡಲು ಈ ಉತ್ತರ...

ಮೊದಲು ಪಂಚಾಂಗ  ವೆಂದರೆ, 

ದಿನನಿತ್ಯವೂ ಬದಲಾಗುವ ಪಂಚ  ಅಂಗಗಳಿಂದ ಕೂಡಿದ ಗಣಿತದ ಗಣಿ. ಅದು ಪಂಚಾಂಗವೆಂದು  ಕರೆಯಲ್ಪಡುತ್ತದೆ.
 ಆ  ಪಂಚ  ಅಂಗಗಳು -----
☀️ ತಿಥಿ
☀️ವಾರ
☀️ ನಕ್ಷತ್ರ
☀️ಯೋಗ
☀️ಕರಣ
ಇವು ದಿನನಿತ್ಯವೂ ಬದಲಾವಣೆ ಆಗುತ್ತದೆ.
ಇದರೊಟ್ಟಿಗೆ ವಿಷ ಮತ್ತು ಅಮೃತ ಘಳಿಗೆಗಳು
ಸೇರಿರುತ್ತವೆ.
ಅದನ್ನು ಸ್ಮರಣೆ ಮಾಡುವುದರಿಂದ,  ಅಥವಾ ಮತ್ತೊಬ್ಬರ  ಬಾಯಿಯಿಂದ ಕೇಳುವುದರಿಂದ  ತುಂಬಾ ಉಪಯೋಗವಿದೆ. 

ಅದು ಏನೆಂದರೆ-
"ತಿಥ್ಯೈಶ್ವರ್ಯ ಮವಾಪ್ನೊತಿ ವಾರದಾಯುಷ್ಯ ವರ್ಧನಂ|
ನಕ್ಷತ್ರಾತ್ ಹರತೇ ಪಾಪಂ ಯೋಗಾದ್ರೋಗ ನಿವಾರಣಮ್||
ಕರಣಾತ್ ಕಾರ್ಯಸಿದ್ದಿಂ ಚ ಗರಲಾತ್ ಶತ್ರುನಾಶನಂ|
ಅಮೃತಾತ್ ಸರ್ವಸೌಖ್ಯಂ ಚ ಪಂಚಾಂಗ ಫಲಮುತ್ತಮಮ್||

☀️ತಿಥಿಯನ್ನು ಉಚ್ಚರಿಸುವುದರಿಂದ ಅಥವಾ ಕೇಳುವುದರಿಂದ ಸಂಪತ್ತು ಸ್ಥಿರವಾಗಿರುತ್ತದೆ.

☀️ವಾರದಿಂದ ಆಯುಷ್ಯ ಅಭಿವೃದ್ಧಿಯಾಗುತ್ತದೆ.

☀️ ನಕ್ಷತ್ರದಿಂದ ನಾವು ಮಾಡಿದ  ಪಾಪಗಳು ನಾಶವಾಗುತ್ತದೆ.
(ಹಾಗೆಂದು ಹೆಚ್ಚಿನ ಪಾಪ  ಮಾಡುವುದು ಬೇಡ)

☀️ಯೋಗದಿಂದ ನಮ್ಮಲ್ಲಿ  ಅಡಗಿರುವ ರೋಗವನ್ನು  ನಿಯಂತ್ರಿಸುತ್ತದೆ.

☀️ ಕರಣದಿಂದ ಆ ದಿನ ನಾವು  ಸಂಕಲ್ಪಿಸಿದ ಕಾರ್ಯದಲ್ಲಿ   ಜಯವನ್ನು  ಸಾಧಿಸಬಹುದು.

ನಮಗಿಂತಲೂ ಮೊದಲು ಆ  ಸ್ಥಳದಲ್ಲಿ ನಮಗೆ ವಿಜಯವನ್ನು  ಸಾಧಿಸಿ ಕೊಡಲು ನಮಗಾಗಿ  ಕಾಯುತ್ತಾ ಇರುತ್ತದೆ. ಅದಕ್ಕೆ ಕರಣವೆಂಬ ಹೆಸರು.

☀️ವಿಷ ಘಳಿಗೆಯಿಂದ ಶತ್ರು ನಿವಾರಣೆ ಮತ್ತು ಮನಸ್ಸಿನ ಕಹಿ ನಿವಾರಣೆ.
☀️ ಅಮೃತ ಘಳಿಗೆಯಿಂದ ಸರ್ವರಿಗೂ ಸುಖ ದೊರಕುತ್ತದೆ ಮತ್ತು ಮನಸ್ಸಿಗೆ ನೆಮ್ಮದಿ ಸಿಗುತ್ತದೆ.

ಈ ರೀತಿಯಾಗಿ ಪಂಚಾಂಗದ ಫಲವು ಉತ್ತಮವಾಗಿದೆ.

ಸ್ವಸ್ತಿ  ಪ್ರಜಾಭ್ಯಃ ಪರಿಪಾಲಯಂತಾಂ
ನ್ಯಾಯ್ಯೇನ  ಮಾರ್ಗೆನ ಮಹಿಂ ಮಹಿಷಾಃ|
ಗೋ ಬ್ರಾಹ್ಮಣೆಭ್ಯಃ ಶುಭಮಸ್ತು ನಿತ್ಯಂ
ಲೋಕಾನ್ ಸಮಸ್ತಾನ್ ಸುಖಿನೋ ಭವಂತು||

No comments:

Post a Comment

If you have any doubts. please let me know...