#ಜಾತಕತಿಲಕಂ #ಗ್ರಂಥಾಧಾರಿತವಾಗಿ_
ವಾಸ್ತು ದೇವಾಂಶ ನಾದ ಸಂಕರ್ಷಣನು ಮೊದಲು ಜಲವನ್ನು ನಿರ್ಮಿಸಿ ಆ ಜಲದಲ್ಲಿ ಶಕ್ತಿ ವಿಶೇಷ (ವೀರ್ಯ) ಬಿಟ್ಟನು.. ಆ ಶಕ್ತಿಯಿಂದ ಕೂಡಿದ ಜಲವು ಚಿನ್ನದ ಚೆಂಡಿನಂತೆ ಗುಂಡಾದ ಒಂದು ವಸ್ತುವಾಯಿತು....ಕತ್ತಲೆಯಿಂದ ಆವೃತವಾದ ಆ ಚಿನ್ನದ ಗೋಳಾಕೃತಿಯಲ್ಲಿ ಸಂಕರ್ಷಣಾಂಶದಿಂದ ಅನಿರುದ್ಧನು ಕಾಣಿಸಿಕೊಂಡನು.. ಮೊದಲು ಕಾಣಿಸಿಕೊಂಡಿದ್ದರಿಂದ ,ಈ ಅನಿರುದ್ಧನನ್ನ *ಆದಿತ್ಯ* ನೆಂದು ಕರೆಯುತ್ತಾರೆ...ಆದಿತ್ಯನ ಜಗತ್ತಿನ ಸೃಷ್ಟಿ ಸ್ಥಿತಿ ಲಯಗಳಿಗೆ ಕಾರಣನು ಲೋಕ ಪ್ರಕಾಶಕರೂ ಆಗಿ ಸುವರ್ಣ ಮಧ್ಯದಲ್ಲಿ ಸದಾ ಕಾಲದಲ್ಲೂ ಸುತ್ತುತ್ತಾ ಇರುತ್ತಾನೆ ..ಈ ಆದಿತ್ಯನ ಮಂಡಲವೇ ಋಗ್ವೇದ ಮಂತ್ರಗಳು ;ಸಾಮವೇದ ಮಂತ್ರಗಳೇ ಆ ಮಂಡಲದ ಕಿರಣಗಳು ;ಯಜುರ್ವೇದ ಮಂತ್ರಗಳು ಆ ಮಂಡಲದ ಸ್ವರೂಪ ;ಈ ವಿಧವಾಗಿ ಮೂರು ವೇದಗಳ ಸ್ವರೂಪದಂತಿರುವ ಈ ಆದಿತ್ಯನೇ ಕಾಲಕ್ಕೇ ಕಾರಣನೂ; ಮತ್ತು ಜಗತ್ತಿನ ಸೃಷ್ಟಿ, ಸ್ಥಿತಿ, ಲಯ,ಗಳನ್ನು ಮಾಡುವುದರಲ್ಲಿ ಸಮರ್ಥನು... ಜಗತ್ತೆಲ್ಲ ಈತನಲ್ಲೇ ಅಡಗಿದೆ..ಜಗತ್ತೇ ಈತನ ರಥ.. ಇದಕ್ಕೆ ೧೨ ತಿಂಗಳುಗಳಿಂದ ಕೂಡಿದ ವರ್ಷವೇ ಚಕ್ರ ..ಗಾಯತ್ರೀ ಮೊದಲಾದ ಏಳು ಛಂದಸ್ಸುಗಳೇ ಕುದುರೆಗಳು.. ಈ ಅನಿರುದ್ಧನ ಅಹಂಕಾರ ತತ್ವದಿಂದ ಕೂಡಿದ ಬ್ರಹ್ಮನನ್ನು ಜಗತ್ ಸೃಷ್ಟಿ ಮಾಡಲು ಸೃಜಿಸಿ ಆತನಿಗೆ ಶ್ರೇಷ್ಠವಾದ ವೇದಗಳನ್ನು ಕೊಟ್ಟು ಸುವರ್ಣಾಂಡ ಮದ್ಯದಲ್ಲಿಟ್ಟಿರುವುದು..
ಬ್ರಹ್ಮನಿಗೆ ಸೃಷ್ಟಿಸುವ ಇಚ್ಛೆ ಯಾದ ಮೇಲೆ ಕೂಡಲೇ ಆತನ ಮನಸ್ಸಿನಿಂದ *ಚಂದ್ರನು* ಕಣ್ಣಿನಿಂದ ತೇಜೋ ರೂಪಿಯಾದ ಸೂರ್ಯನೂ ಹುಟ್ಟಿದರು.. ಸೂರ್ಯನು ತೇಜೋ ರೂಪಿ ;ಚಂದ್ರನು ಜಲರೂಪಿ;ಅನಂತರ ಮನಸ್ಸಿನಿಂದ ಆಕಾಶ; ಆಕಾಶದಿಂದ ವಾಯು; ವಾಯುವಿನಿಂದ ಅಗ್ನಿ; ಅಗ್ನಿಯಿಂದ ನೀರು; ನೀರಿನಿಂದ ಪೃಥ್ವಿ ;ಈ ಕ್ರಮದಲ್ಲಿ ಪಂಚಭೂತ ಸೃಷ್ಟಿಯಾದ ಮೇಲೆ ಇವುಗಳಿಂದ *ಕುಜ ಬುಧ ಗುರು ಶುಕ್ರ ಶನಿ* ಈ ಐದು ಗ್ರಹಗಳ ಸೃಷ್ಟಿ ಆಗಿದೆ.. ಚಂದ್ರ ಬುಧ ಶುಕ್ರ ಸೂರ್ಯ ಕುಜ ಗುರು ಶನಿ ಈ ಕ್ರಮದಲ್ಲಿ ಗ್ರಹಗಳು ಈ ಕ್ರಮದಲ್ಲಿ ಗ್ರಹಗಳು ಮೇಲೆ ಮೇಲೆ ಇದ್ದು ತಮ ತಮಗೆ ನಿಯತವಾದ ಮಾರ್ಗಗಳಲ್ಲಿ ಭೂಮಿಯ ಸುತ್ತಲೂ ಸುತ್ತುತ್ತಿದ್ದಾರೆ ಎಂದು *ಸೂರ್ಯ ಸಿದ್ಧಾಂತ* ಗ್ರಂಥದಲ್ಲಿದೆ...
ಗ್ರಹಗಳ ಅಧಿಪತಿ *ಸೂರ್ಯ*, ನಕ್ಷತ್ರಗಳಿಗೆ ಒಡೆಯ *ಚಂದ್ರ* ಸುರ ಸೇನಾಧಿಪತಿಯಾದ ಸ್ಕಂದನೇ *ಅಂಗಾರಕ* ನಾರಾಯಣನೇ *ಬುಧ* ದೇವಗುರು ವೇ *ಗುರು* ಅಸುರಗುರುವೇ *ಶುಕ್ರ* ಯಮನೇ *ಶನಿ* ...
ಸಹಸ್ರ ರಶ್ಮಿ ಯಾದ ಸೂರ್ಯನ ಕಿರಣಗಳಲ್ಲಿ ಸುಷುಮ್ನಾ ಕಿರಣವೂ ಚಂದ್ರನಿಗೂ; ,ಹರಿಕೇಶವು ನಕ್ಷತ್ರಗಳಿಗೂ; ವಿಶ್ವ ಕರ್ಮವೂ ಬುದನಿಗೂ; ವಿಶ್ವಶ್ರವೆಯು ಶುಕ್ರನಿಗೂ; ಸಂಪದ್ವಸುವು ಕುಜನಿಗೂ; ಅರ್ವಾವಸುವೂ ಗುರುವಿಗೂ; ಸ್ವರಾಟ್ ಕಿರಣವು ಶನಿಗೂ; ಪ್ರಕಾಶವಾಗಿದೆ.. ತೇಜಸ್ಸು ಮತ್ತು ಜಲವನ್ನು ಹರಿಯುವಂತೆ ಮಾಡುವುದರಿಂದ ಸೂರ್ಯನನ್ನು *_ಸವಿತೃ_* ಎಂದು ಕರೆಯುತ್ತಾರೆ...
ಈ ಗ್ರಹ (ಜೋತಿರ್ಮಂಡಲ)ರೂಪವಾದ ಸ್ಥಾನಗಳು ದೇವ ಗೃಹಗಳು.. ದೇವಗೃಹಗಳ ಹೆಸರಿನಿಂದಲೇ ಅಲ್ಲಿ ವಾಸ ಮಾಡುವ ದೇವತೆಗಳನ್ನು ಕರೆಯುತ್ತಾರೆ.ಈ ಎಲ್ಲಾ ತೇಜ :ಸ್ಥಾನಗಳೂ ಪುಣ್ಯವಂತರಿಗೆ ಪುಣ್ಯಫಲ ಭೋಗಕ್ಕಾಗಿ ಸೃಷ್ಟ್ಯಾದಿಯಲ್ಲಿ ರಚಿಸಲ್ಪಟ್ಟಿವೆ.. ಇವು ಪ್ರಳಯ ಕಾಲದವರೆಗೂ ಶಾಶ್ವತವಾಗಿರುತ್ತವೆ.. ಒಂದೊಂದು ಮನ್ವಂತರದಲ್ಲೂ ಬೇರೆ ಬೇರೆಯವರು ಈ ಸ್ಥಾನಗಳಿಗೆ ಅಧಿಕಾರಿಗಳಾಗಿರುತ್ತಾರೆ ...ಈಗಿನ ವೈವಸ್ವತ ಮನ್ವಂತರದಲ್ಲಿ ಅದಿತಿ ಪುತ್ರನಾದ ವಿವಸ್ವಾನ್ ಎಂಬುವನು ಸೂರ್ಯನಾಗಿಯೂ ;ಧರ್ಮ ಪುತ್ರನಾದ ತ್ಯಿಷಿ ಅಥವಾ ವಸು ಎಂಬುವನು ಚಂದ್ರನಾಗಿಯೂ; ರಾಕ್ಷಸ ಗುರುವಾದ ಭೃಗು ಮುನಿಯ ಪುತ್ರನು ಶುಕ್ರ ನಾಗಿಯೂ ;ಅಂಗೀರಸನ ಪುತ್ರನಾದ ಬೃಹತ್ತೇಜನು ದೇವಗುರುವಾಗಿಯೂ; ತ್ಯಿಷಿ ಎಂಬುವನ ಪುತ್ರನು ಬುಧನಾಗಿಯೂ ;ಸೂರ್ಯನಿಗೆ "ಸಂಜ್ಞಾ "ಎಂಬ ಪತ್ನಿಯಲ್ಲಿ ಹುಟ್ಟಿದ ವಿರೂಪ ನಾದ ಪುತ್ರನು ಶನಿಯಾಗಿಯೂ; ಅಗ್ನಿಗೆ "ವಿಕೇಶಿ "ಎಂಬ ಪತ್ನಿಯಲ್ಲಿ ಹುಟ್ಟಿದ ಯುವಕನಾದ ಪುತ್ರನು ಅಂಗಾರಕನಾಗಿಯೂ; ದಕ್ಷ ಬ್ರಹ್ಮನ ಪುತ್ರಿಯರು ವೃಕ್ಷ ಅಂದರೆ ನಕ್ಷತ್ರಗಳಾಗಿಯೂ ಆಯಾ ಗೃಹಗಳಲ್ಲಿ ರಾರಾಜಿಸುತ್ತಿರುವರು....
ಸೂರ್ಯನ ಗೃಹ ಶುಭ್ರವೂ ಅಗ್ನಿಮಯವೂ ಆಗಿದೆ... ಚಂದ್ರನ ಗೃಹ ಶುಕ್ಲ ವರ್ಣದಿಂದ ಕೂಡಿ ಜಲಮಯವಾಗಿದೆ. ಬುಧನ ಗೃಹ ಶಾಮ ವರ್ಣದಿಂದ ಕೂಡಿ ಜಲ ಮಯವಾಗಿದೆ.. ಶುಕ್ರನ ಗೃಹ ಶುಭ್ರವೂ ಜಲಮಯವೂ ಪದ್ಮಾಕೃತಿಯುಳ್ಳದ್ದು ಆಗಿದೆ... ಅಂಗಾರಕನ ಗೃಹ ಲೋಹಿತ ವರ್ಣದಿಂದ ಕೂಡಿ ಜಲಮಯವಾಗಿದೆ ..ಗುರುವಿನ ಗೃಹ ಹಸಿರು ವರ್ಣದಿಂದ ಕೂಡಿ ಜಲಮಯವಾಗಿದೆ...ಶನಿಯ ಗೃಹ ಕೃಷ್ಣ ವರ್ಣದಿಂದ ಕೂಡಿ ಜಲಮಯಯವಾಗಿದೆ..
ಸೂರ್ಯನಲ್ಲಿ ಮಾಸ ಭೇದದಿಂದ *ವಿಷ್ಣು ,ಧಾತೃ, ಭಗ ,ಪೂಷಾ, ಮಿತ್ರ ,ಇಂದ್ರ, ವರುಣ ,ಆರ್ಯಮ ,ವಿವಸ್ವಾನ್,ಅಂಶುಮಾನ್, ಪರ್ಜನ್ಯ ,ತ್ವಷ್ತ್ಠ್ರು;* ಈ ೧೨ ಮಂದಿ ದೇವತೆಗಳ ಅಂಶವಿರುತ್ತದೆ..ಇದರಿಂದ ಸೂರ್ಯನ ಕಿರಣ ಸಂಖ್ಯೆಯಲ್ಲೂ ವ್ಯತ್ಯಾಸವಿರುತ್ತದೆ...
ಸೂರ್ಯನಲ್ಲಿ ವಿಷ್ಣಂಶವಿದ್ದಾಗ ೧೨೦,ಆರ್ಯಮಾಂಶದಲ್ಲಿ ೧೩೦೦,ವಿವಸ್ವಂತ , ತ್ವಷ್ಟೃ ಮತ್ತು ಧಾತ್ರಂಶಗಳಲ್ಲಿ೧೧೦೦,ಅಂಶುಮಂತನ ಅಂಶದಲ್ಲಿ ೧೫೦೦,ಪರ್ಜನ್ಯ(ವರುಣ)ನ ಅಂಶದಲ್ಲಿ ೧೪೦೦,ಭಗ ಮತ್ತು ಮಿತ್ರಾಂಶದಲ್ಲಿ ೧೧೦೦,ಇಂದ್ರಾಂಶದಲ್ಲಿ ೧೬೦೦,ಪೂಷಾಂಶದಲ್ಲಿ ೯೦೦ ಕಿರಣಗಳಿರುತ್ತವೆ...ಎಂದು *ಬ್ರಹ್ಮಾಂಡಪುರಾಣ* ದಲ್ಲಿ ಗ್ರಹಚರಿತ್ರೆ ವರ್ಣಿತವಾಗಿದೆ...
ಅಷ್ಟ ಮೂರ್ತಿಗಳಾದ *ಭವ ಶರ್ವ, ಈಶಾನ ,ಶಿವ ,ಪಶುಪತಿ , ಭೀಮಾ ,ಉಗ್ರ ಮಹಾದೇವ* ಸ್ವರೂಪಗಳಾಗಿ ಸೂರ್ಯ ,ನೀರು ,ಭೂಮಿ ,ಬೆಂಕಿ ,ಗಾಳಿ ,ಆಕಾಶ ,ದೀಕ್ಷಿತಾ ಚಂದ್ರ ,ಈ ಎಂಟೂ ಇವೆ..
ಇವುಗಳಲ್ಲಿ ಸೂರ್ಯನಿಗೆ ಸುವರ್ಚಲೆಯಲ್ಲಿ ಶನಿಯೂ, ನೀರಿಗೆ ಉಷೆಯಲ್ಲಿ ಶುಕ್ರನೂ, ಭೂಮಿಗೆ ವಿಕೇಶಿಯಲ್ಲಿ ಅಂಗಾರಕನೂ, ಚಂದ್ರನಿಗೆ ರೋಹಿಣಿಯಲ್ಲಿ ಬುಧನು ಹುಟ್ಟಿದವರೆಂದು *ಪದ್ಮಪುರಾಣ* ದಲ್ಲಿದೆ ...
ಇದಲ್ಲದೆ ಕಶ್ಯಪ ಬ್ರಹ್ಮನಿಂದ ಅದಿತಿಯಲ್ಲಿ ಸೂರ್ಯನೂ, ಬ್ರಹ್ಮ ಪುತ್ರನಾದ ಅತ್ರಿಯ ನೇತ್ರದಿಂದ ಚಂದ್ರನೂ, ಚಂದ್ರನಿಂದ ತಾರೆಯಲ್ಲಿ ಬುಧನೂ ಹುಟ್ಟಿರುವರೆಂದೂ, ಅಮೃತಮಥನಕಾಲದಲ್ಲಿ ಚಂದ್ರನು ಹುಟ್ಟಿದನೆಂದೂ,ಮತ್ತೇ ಕೆಲವು ಗ್ರಂಥಗಳಲ್ಲಿದೆ..ಹೀಗೆ ಎಲ್ಲ ಗ್ರಂಥಗಳಿಂದಲೂ,ಗ್ರಹಚರಿತ್ರೆಯನ್ನ ಸಂಗ್ರಹಿಸಿ ಅವುಗಳಲ್ಲಿ ಕಂಡುಬರುವ ವಿರೋಧವನ್ನು ಶಾಸ್ರ್ತಕಾರರು ಹೇಳುವಂತೆ ಯುಗಭೇಧ ವ್ಯವಸ್ಥೆಯಿಂದ ಪರಿಹರಿಸಿಕೊಳ್ಳಬಹುದು....
#ಸಂಗ್ರಹ:-ವೇ॥ #ಕೆ #ಎಸ್ #ವೀರಪ್ಪಶಾಸ್ತ್ರಿ (#ಕಂಬಾಳು)#ತುಮಕೂರು..
No comments:
Post a Comment
If you have any doubts. please let me know...