May 30, 2021

ತೋರಣ


"ತೋರಣ" ಇದು ಮೂಲ ಸಂಸ್ಕೃತ ಪದ. ಆದರೆ ಇಂದು ನಾವು ಕನ್ನಡದ ಪದವೇ ಇರಬೇಕೆನ್ನುವಷ್ಟು ನಮ್ಮ ಭಾಷೆಯಲ್ಲಿ ಬಳಸಿಕೊಂಡಿದ್ದೇವೆ. ತೋರಣಕ್ಕೆ ಸಮಾನ ಕನ್ನಡ ಪದ ನಮಗೆ ಹೊಳೆಯುವುದೇ ಇಲ್ಲ. ತೋರಣಕ್ಕೆ ಸಮಾನ ಪದ ಯಾವುದೆಂದು ಹುಡುಕುತ್ತಾ ಹೋದರೆ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನ ನಾಲ್ಕನೇ ಸಂಪುಟದ ೩೭೦೯ನೇ ಪುಟದ ೨ನೇ ಕಾಲಂನ ೨೩ನೇ ಪದ ತೋರಣ ಎನ್ನುವುದಕ್ಕೆ ಹೆಬ್ಬಾಗಿಲು, ಹೊರಬಾಗಿಲು ಎಂದು ಹೇಳಲಾಗಿದೆ. ಕಿಟ್ಟೆಲ್ ಶಬ್ದಕೋಶದ ೭೫೮ನೇ ಪುಟದಲ್ಲಿA festoon suspended across gateways  ಎಂದು ಅರ್ಥೈಸಲಾಗಿದೆ. ಸಂಸ್ಕೃತದ ಮೋನಿಯರ್ ವಿಲ್ಲಿಯಮ್ಸ್‌ನಲ್ಲಿ ೪೫೬ನೇ ಪುಟದಲ್ಲಿಯೂ ಹೂವಿನಿಂದಲಂಕೃತವಾದ ಬಾಗಿಲು ಎನ್ನಲಾಗಿದೆ. "ದ್ವಾರಾಗ್ರೇ ನಿಖಾತಸ್ತಂಭೋ ಪರಿನಿಬದ್ಧೋ ಧನುರಾಕಾರಃ" ಎಂದು ವಾಚಸ್ಪತ್ಯದಲ್ಲಿ ಹೇಳಲಾಗಿದೆ. ಹೀಗೇ ತೋರಣ ಎನ್ನುವುದು ಯಾಗ ಶಾಲೆಗಳಲ್ಲಿಯೂ ವಿಶೇಷತೆಯನ್ನು ಪಡೆದಿದೆ. ಮಂಗಲಕರ ಸನ್ನಿವೇಶದಲ್ಲಿ "ತೋರಣ" ಬಹುಮುಖ್ಯ. 
ರಾಮಾಯಣದಲ್ಲಿ ತೋರಣದ ಕುರಿತಾಗಿ ನೋಡುತ್ತಾ ಹೋದರೆ 
ನಿವೇದಯಿತ್ವಾಭಿಜ್ಞಾನಂ ಪ್ರವೃತ್ತಿಂ ಚ ನಿವೇದ್ಯ ಚ | ಸಮಾಶ್ವಾಸ್ಯ ಚ ವೈದೇಹೀಂ ಮರ್ದಯಾಮಾಸ ತೋರಣಮ್|| ಎನ್ನುವ ಉಲ್ಲೇಖ ಸಿಗುತ್ತದೆ.
ಪಞ್ಚಸೇನಾಗ್ರ್ಯನಿಧನಂ ಸಪ್ತಮನ್ತ್ರಿ ನಿಬರ್ಹಣಮ್ | ತಥಾಕ್ಷಸ್ಯಾಪಿ ನಿಧನಂ ತೋರಣಸ್ಯ ಚ ಭಞ್ಜನಮ್ || ತೋರಣವನ್ನು ಹಾಳು ಮಾಡಿರುವುದರ ಉಲ್ಲೇಖ ಇನ್ನೊಂದೆಡೆ ಸಿಗುತ್ತದೆ.
ರಾಮಾಯಣದ ಬಾಲಕಾಂಡ ೭೭ನೇ ಸರ್ಗದಲ್ಲಿ ಪರಶುರಾಮನು ಮಹೇಂದ್ರಪರ್ವತಕ್ಕೆ ಹೊರಟು ಹೋದನಂತರ ರಾಮನು ತನ್ನಲ್ಲಿದ್ದ ಬಾಣಸಹಿತವಾದ ವೈಷ್ಣವಧನುಸ್ಸನ್ನು ವರುಣನಿಗೆ ನಿಕ್ಷೇಪರೂಪವಾಗಿ ಕೊಡುತ್ತಾನೆ. ರಾಮನಿಗೂ ಪರಶುರಾಮನಿಗೂ ದ್ವಂದ್ವ ಯುದ್ಧ ನಡೆಯುತ್ತದೆ. ಆಮೇಲಿನ ಪ್ರಾಯಶ್ಚಿತ್ತ ನಿವಾರಣೆಗೆ ಪರಶುರಾಮ ಮಹೇಂದ್ರಪರ್ವತಕ್ಕೆ ಹೋಗುತ್ತಾನೆ. ಆ ಸಂದರ್ಭದಲ್ಲಿ ಚತುರಂಗ ಬಲಸಮೇತನಾದ ದಶರಥನು ಕೂಡಲೇ ಅಯೋಧ್ಯೆಗೆ ಬರುತ್ತಾನೆ. ಆಗ ಅಯೋಧ್ಯೆಯು ತಳಿರು ’ತೋರಣ’ಗಳಿಂದಲೂ, ಧ್ವಜಪತಾಕೆಗಳಿಂದಲೂ ಅಲಂಕೃತವಾಗಿದ್ದಿತು. ನಾನಾವಿಧವಾದ ಜಯಘೋಷಗಳಿಂದ ತುಂಬಿತ್ತು. ಎನ್ನುವ ಪದ ಬರುತ್ತದೆ.
ಅಯೋಧ್ಯಾಕಾಂಡದ ೩ನೇ ಸರ್ಗದಲ್ಲಿ ಕೈಲಾಸಶಿಖರಕ್ಕೆ ಸಮಾನವಾಗಿದ್ದ ಆ ಭವ್ಯವಾದ ಅರಮನೆಯ ಉಪ್ಪರಿಗೆಯನ್ನು ಶ್ರೀರಾಮನು ದಶರಥನನ್ನು ನೋಡುವ ಇಚ್ಫೆಯಿಂದ ಸುಮಂತ್ರನೊಡನೆ ಹತ್ತುತ್ತಾನೆ ಆಗ ಅಯೋಧ್ಯೆಯ ದಶರಥನ ಅರಮನೆಯ ವರ್ಣನೆ ಯಲ್ಲಿ 
ಭೂವೃತ್ತಪಾದೇ ಪೂರ್ವಸ್ಯಾಂ ಯವಕೋಟೀತಿ ವಿಶ್ರುತಾ | ಭದ್ರಾಶ್ವವರ್ಷೇ ನಗರೀ ಸ್ವರ್ಣಪ್ರಾಕಾರತೋರಣಾ || 
ಭೂಮಿಯ ವೃತ್ತಪಾದದಲ್ಲಿ ಪೂರ್ವದಿಕ್ಕಿನಲ್ಲಿ ಭದ್ರಾಶ್ವವರ್ಷದಲ್ಲಿ ಯವಕೋಟಿ ಎಂದು ಪ್ರಸಿದ್ಧವಾದ, ಚಿನ್ನದ ಕೋಟೆಗಳಿಂದಲೂ, ತೋರಣಗಳಿಂದಲೂ ಕೂಡಿದ ನಗರವಿದೆ ಎನ್ನುವಲ್ಲಿ ಆ ನಗರದ ಪ್ರಮುಖ ಬಾಗಿಲನ್ನು ತೋರಣ ಎಂದು ಹೇಳಲಾಗಿದೆ.
ಕಿಷ್ಕಿಂಧಾಕಾಂಡದ ೧೪ನೇ ಸರ್ಗದಲ್ಲಿ ಕಿಷ್ಕಿಂಧಾ ಪಟ್ಟಣದ ಕುರಿತಾಗಿ ಸುಗ್ರೀವನಿಂದ ಹೇಳಲ್ಪಡುವ ಮಾತು ಹರಿವಾಗುರಯಾ ವ್ಯಾಪ್ತಾಂ ತಪ್ತಕಾಞ್ಚನತೋರಣಾಮ್ | ಪ್ರಾಪ್ತಾಃ ಸ್ಮ ಧ್ವಜಯನ್ತ್ರಾಢ್ಯಾಂ ಕಿಷ್ಕಿನ್ಧಾಂ ವಾಲಿನಃ ಪುರೀಮ್ || ವಸಂತಕಾಲವು ಬಂದೊಡನೆಯೇ ಬಳ್ಳಿಯು ಪುಷ್ಪಭರಿತ ಹರಿವಾಗುರಯಾ = ವಾನರರೂಪವಾದ ಬಲೆ. ವಾನರರೂಪಮೃಗಬನ್ಧಕಪಾಶೇನ ವ್ಯಾಪ್ತಾಂ:- ವಾನರರೂಪವಾದ ಮೃಗಬಂಧಪಾಶದಿಂದ ವ್ಯಾಪ್ತವಾಗಿರುವ ಹರಯ ಏವ ವಾಗುರಾ ಮೃಗಗ್ರಹಣಪಾಶಃ ತಯಾ ವ್ಯಾಪ್ತಾಂ - ವಾನರರೇ ವಾಗುರುಗಳು ಅಥವಾ ಪ್ರಾಣಿಗಳನ್ನು ಹಿಡಿಯುವ ಬಲೆಗಳು. ಅದರಿಂದ ವ್ಯಾಪ್ತವಾಗಿರುವುದು ಕಿಷ್ಕಿಂಧೆ. ಎಂದರೆ: ವಾನರರು ಬಲೆಯು ಮಾಡುವ ಕೆಲಸವನ್ನು ಮಾಡುತ್ತಾರೆ. ವಾನರರು ಬಲೆಯ ರೂಪದಲ್ಲಿದ್ದು ಹೊರಗಿನಿಂದ ಯಾರೇ ಬಂದರೂ ಬಲೆಯು ಜಿಂಕೆಯನ್ನು ಹಿಡಿಯುವಂತೆ ಶತ್ರುಗಳನ್ನು ಹಿಡಿದುಹಾಕುತ್ತಾರೆ. ಪಟ್ಟಣಪ್ರವೇಶಕ್ಕೆ ಆಸ್ಪದ ಕೊಡುವುದಿಲ್ಲ ಎಂಬ ಅಭಿಪ್ರಾಯ. ಬಂಗಾರದ ತೋರಣ ಎನ್ನುವ ಉಲ್ಲೇಖ ಕಾಣ ಸಿಗುತ್ತದೆ.
ಸುಂದರಕಾಂಡದ ೫೫ನೇ ಸರ್ಗದಲ್ಲಿ ಲಂಕೆಗೆ ಹನುಮಂತ ಬೆಂಕಿ ಇಟ್ಟ ಸಂದರ್ಭದಲ್ಲಿ 
’ದಗ್ಧೇಯಂ ನಗರೀ ಲಙ್ಕಾ ಸಾಟ್ಟಪ್ರಾಕಾರತೋರಣಾ’ ಹೊತ್ತಿ ಉರಿಯುತ್ತಿರುವ ಲಂಕೆಯ ಜನರ ಕೋಲಾಹಲದಿಂದ ಗಡಚಿಕ್ಕುವ ಶಬ್ದಗಳಿಂದ, ಉಪ್ಪರಿಗೆ ಮನೆಗಳಿಂದಲೂ, ಪ್ರಾಕಾರಗಳಿಂದಲೂ, ಹೆಬ್ಬಾಗಿಲುಗಳಿಂದಲೂ ಕೂಡಿರುವ ಈ ಲಂಕಾ ಪಟ್ಟಣವು ಸಂಪೂರ್ಣವಾಗಿ ಸುಟ್ಟುಹೋಯಿತು. ಆದರೆ ಅಶೋಕವನದಲ್ಲಿರುವ ಸೀತಾದೇವಿಯು ಮಾತ್ರ ಸುಡಲಿಲ್ಲವೆಂಬುದು ನಮ್ಮೆಲ್ಲರಿಗೂ ಅದ್ಭುತವಾಗಿ ಕಾಣುತ್ತಿದೆ ಇದು ಅತ್ಯಾಶ್ಚರ್ಯಕರವೇ ಆಗಿದೆ. ಇಲ್ಲಿ ತೋರಣವನ್ನು ಹೆಬ್ಬಾಗಿಲಿನ ಅರ್ಥ ಬರುವಂತೆ ಹೇಳಲಾಗಿದೆ.
ಯುದ್ಧಕಾಂಡದ ೨೫ನೇ ಸರ್ಗದಲ್ಲಿ ಶುಕ-ಸಾರಣರು ರಾವಣದ ಯುದ್ಧದ ದೂತ ಕಾರ್ಯಕ್ಕೆ ಬರುತ್ತಾರೆ ಆಗ ರಾಮನು ರಾವಣನಿಗೆ ಹೇಳುವಂತೆ ಆದೇಶಿಸುವ ಮಾತು: ’ಶ್ವಃ ಕಾಲ್ಯೇ ನಗರೀಂ ಲಙ್ಕಾಂ ಸಪ್ರಾಕಾರಾಂ ಸತೋರಣಾಮ್’
ನಾಳೆ ಬೆಳಗಾಗುತ್ತಲೇ ಮಹಾದ್ವಾರ ಮತ್ತು ಪ್ರಾಕಾರಗಳಿಂದ ಕೂಡಿರುವ ಲಂಕಾಪಟ್ಟಣವೂ ಮತ್ತು ರಾಕ್ಷಸರ ಸೈನ್ಯವೂ ನನ್ನ ಬಾಣಗಳಿಂದ ಧ್ವಂಸವಾಗುವುದನ್ನು ನೋಡು ಎನ್ನುತ್ತಾನೆ. ಇಲ್ಲಿ ತೋರಣವನ್ನು ಪ್ರಾಕಾರದ ವಿಶೇಷಣವಾಗಿ ತೋರಣವನ್ನು ಬಳಸಲಾಗಿದೆ.
ಯುದ್ಧಕಾಂಡದ ೭೨ನೇಸರ್ಗದಲ್ಲಿ ’ತದ್ಭಯಾದ್ಧಿ ಪುರೀ ಲಙ್ಕಾ ಪಿಹಿತದ್ವಾರತೋರಣಾ’
ನಾನು ಅ ರಾಘವನನ್ನು ರೋಗ ಮತ್ತು ಶೋಕಗಳಿಲ್ಲದ ಶ್ರೀಮನ್ನಾರಾಯಣನೆಂದೇ ಭಾವಿಸುತ್ತೇನೆ. ಅವನ ಭಯದಿಂದಲೇ ಲಂಕಾ ಪಟ್ಟಣದ ಹೊರಬಾಗಿಲುಗಳೂ ಹೆಬ್ಬಾಗಿಲುಗಳೂ ಮುಚ್ಚಲ್ಪಟ್ಟಿವೆ. ಇಲ್ಲಿಯೂ ಸಹ ಹೊರಬಾಗಿಲನ್ನು ತೋರಣ ಎಂದು ಕರೆಯಲಾಗಿದೆ.
ಮಹಾಭಾರತದ ಆದಿಪರ್ವ ೭೩ನೇ ಅಧ್ಯಾಯದಲ್ಲಿ ದುಶ್ಯಂತನು ಶಕುಂತಲೆಯನ್ನು ತಪೋವನದಲ್ಲಿಯೇ ಬಿಟ್ಟು ಹೊರಡುವುದು ಅನಿವಾರ್ಯವಾಯಿತು. ಹೊರಡುವಾಗ ಪುನಃ ಪುನಃ ಹೇಳುತ್ತಾನೆ: ನನ್ನ ಪಟ್ಟದರಸಿಯಾಗಿರುವ ನಿನ್ನನ್ನು ಸಾಧಾರಣ ರೀತಿಯಲ್ಲಿ ನನ್ನ ಪಟ್ಟಣಕ್ಕೆ ಕರೆದೊಯ್ಯುವೆನೇ? ಸಾಧ್ಯವಿಲ್ಲ. ಮಹಾ ರಾಣಿಯಾದವಳಿಗೆ ಸಲ್ಲಬೇಕಾದ ಮರ್ಯಾದೆಗಳೆಲ್ಲವೂ ಸಾಂಗೋಪಾಂಗವಾಗಿ ಸಲ್ಲಲೇಬೇಕು. ನಾನು ಪಟ್ಟಣಕ್ಕೆ ಹೋದೊಡನೆಯೇ ತಳಿರು ತೋರಣಗಳಿಂದ ಪಟ್ಟಣವನ್ನು ಅಲಂಕರಿಸುವಂತೆ ಆಜ್ಞಾಪಿಸಿ, ನಿನ್ನನ್ನು ಕರೆತರುವ ಸಲುವಾಗಿ ಮಂತ್ರಿ ಮತ್ತು ಪುರೋಹಿತರನ್ನು ಚತುರಂಗಬಲದೊಡನೆ ಕಳುಹಿಸುವೆನು ಎನ್ನುತ್ತಾನೆ. ಇಲ್ಲಿ ತೋರಣ ಒಂದು ಆಲಂಕಾರಿಕ ಮತ್ತು ಗೌರವದ ಸೂಚಕವಾಗುತ್ತದೆ.
ಆದಿಪರ್ವದ ೮೨ನೇ ಅಧ್ಯಾಯದಲ್ಲಿ ಶಚೀಸಮೇತನಾದ ಇಂದ್ರನನ್ನು ಹೋಲುತ್ತಿದ್ದ ಯಯಾತಿಯು ದೇವಯಾನಿಯಿಂದೊಡಗೂಡಿ ಚತುರಂಗಬಲಸಮೇತನಾಗಿ ತಾಳ ಮೇಳವಾದ್ಯಗಳೊಡನೆ ತನ್ನ ಪಟ್ಟಣವನ್ನು ಪ್ರವೇಶಿಸಿದನು. ನಗರವೆಲ್ಲವೂ ತಳಿರು, ತೋರಣಗಳಿಂದ ಅಲಂಕೃತವಾಗಿತ್ತು. ಗಗನಚುಂಬಿಗಳಾದ ಸೌಧಗಳಿಂದ ಸುಮಂಗಲಿಯರು ಹೊರಬಂದು ರಾಜನಿಗೆ ಆರತಿಯನ್ನು ಎತ್ತುತ್ತಿದ್ದರು ಎನ್ನುವ ಮಾತು ಬರುತ್ತದೆ. ತೋರಣ ಎನ್ನುವುದು ಅಲಂಕಾರವನ್ನು ನಿರ್ದೇಶಿಸುತ್ತಿದೆ.
ವನಪರ್ವದ ೧೫ನೇ ಅಧ್ಯಾಯದಲ್ಲಿ ಧ್ವಜಪತಾಕೆಗಳು ಎಲ್ಲೆಲ್ಲಿಯೂ ಹಾರಾಡುತ್ತಿದ್ದುವು. ತೋರಣಗಳೂ ಕಟ್ಟಲ್ಪಟ್ಟಿದ್ದುವು. ಸೈನಿಕರೆಲ್ಲರೂ ಸಜ್ಜಾಗಿ ನಿಂತಿದ್ದರು. ಶತಘ್ನಿಗಳೂ (ಫಿರಂಗಿಗಳೂ), ಬಂದೂಕುಗಳೂ ಸಿದ್ಧವಾಗಿದ್ದುವು ಎಂದು ತೋರಣವು ಅಲಂಕಾರವನ್ನು ಸೂಚಿಸುತ್ತದೆ.
ವನಪರ್ವದ ೧೪೮ನೆಯ ಅಧ್ಯಾಯದಲ್ಲಿ ರಾಮಾಯಣದ ಉಲ್ಲೇಖ ಸಿಗುತ್ತದೆ. ’ದಗ್ಧ್ವಾ ಲಙ್ಕಾಮಶೇಷೇಣ ಸಾಟ್ಟಪ್ರಾಕಾರತೋರಣಾಮ್’ ಎಂದು ಲಂಕಾ ಪಟ್ಟಣದ ವೈಭವವನ್ನು ಸೂಚಿಸುತ್ತದೆ. 
ದ್ರೋಣಪರ್ವದ ೧೭೫ ಅಧ್ಯಾಯದಲ್ಲಿ  ತೋರಣಪ್ರತಿಮಂ ಶುಭ್ರಂ ಕಿರೀಟಂ ಮೂರ್ಧ್ನಶೋಭತ’
ಘಟೋತ್ಕಚನು ತನ್ನ ವಕ್ಷಃಸ್ಥಳದಲ್ಲಿ ಸುವರ್ಣಮಾಲೆಯನ್ನು ಧರಿಸಿದ್ದನು. ಸುವರ್ಣಮಯವಾಗಿದ್ದ, ಚಿತ್ರಿತವಾಗಿದ್ದ, ತೋರಣಸದೃಶವಾಗಿದ್ದ, ಬಹುರೂಪವಾದ, ಸುಂದರವಾದ ವಿಭಾಗಗಳಿಂದ ಶೋಭಾಯಮಾನವಾಗಿ ಕಾಣುತ್ತಿದ್ದ ಕಿರೀಟವು ರಾಕ್ಷಸನ ತಲೆಯಲ್ಲಿ ಬೆಳಗುತ್ತಿದ್ದಿತು. 
ಅನುಶಾಸನಪರ್ವ ಅಧ್ಯಾಯ ೧೭ರಲ್ಲಿ ಮಹಾಭಾರತ ಸಂರಕ್ಷಕನಾದ ಶ್ರೀ ಕೃಷ್ಣನ ಕುರಿತಾಗಿ ತೋರಣಃ = ಮುಕ್ತಿದ್ವಾರಸ್ವರೂಪನು. ತಾರಣಃ = ಸಂಸಾರಸಾಗರವನ್ನು ದಾಟಿಸುವವನು.ಎನ್ನಲಾಗಿದೆ. ಇಲ್ಲಿ ಕೃಷ್ಣನನ್ನು ನಿರ್ದೇಶಿಸಿ ಹೇಳಲಾಗಿದೆ.
ಸ್ವರ್ಗಾರೋಹಣಪರ್ವದಲ್ಲಿ 
ರತ್ನವೇದಿಕಸಮ್ಬಾಧಂ ವೈಢೂರ್ಯಮಣಿತೋರಣಮ್ | ಹೇಮಜಾಲಪರಿಕ್ಷಿಪ್ತಂ ಪ್ರವಾಲವಲಭೀಮುಖಮ್ || 
ರತ್ನಮಯವಾದ ವೇದಿಕೆಯಿಂದ ಕೂಡಿರುವ, ವೈಡೂರ್ಯಮಯವಾದ ಬಹಿರ್ದ್ವಾರದಿಂದ (ತೋರಣಗಳಿಂದ) ಕೂಡಿರುವ, ಸುವರ್ಣಮಯವಾದ ಬಲೆಗಳಿಂದ ಆಚ್ಛಾದಿತವಾಗಿರುವ, ಮುಂಭಾಗದಲ್ಲಿ ಹವಳದ ಪಟ್ಟಿಯಿಂದ ಕೂಡಿರುವ, ಎನ್ನುವ ಪ್ರಶಂಸೆ ಕಾಣ ಸಿಗುತ್ತದೆ. ಇಲ್ಲಿ ತೋರಣವನ್ನು ಹೊರಗಿನ ದ್ವಾರ ಅಥವಾ ಹೆಬ್ಬಾಗಿಲನ್ನು ಕುರಿತಾಗಿ ಹೇಳಲಾಗಿದೆ. 
ಕಾಳಿದಾಸನೂ ಸಹ ತನ್ನ ರಘುವಂಶದ ಏಳನೇ ಸರ್ಗದಲ್ಲಿ “ಇಂದ್ರಾಯುಧದ್ಯೋತಿತತೋರಣಾಂಕಮ್” ಎಂದು ವರ್ಣಿಸಿದ್ದಾನೆ. ಇಂದ್ರಾಯುಧಾನೀವ ದ್ಯೋತಿತಾನಿ ಪ್ರಕಾಶಿತಾನಿ ತೋರಣಾನಿ ಅಂಕಾ: ಚಿಹ್ನಾನಿ ಯಸ್ಯ ತಮ್ ರಾಜಮಾರ್ಗಮ್’ ಅಜನು ಇಂದುಮತಿಯೊಂದಿಗೆ ಬರುವ ರಾಜಮಾರ್ಗದಲ್ಲಿ ಕಾಮನಬಿಲ್ಲಿನಂತಿರುವ ತೋರಣಗಳನ್ನು ಕಟ್ಟಿದ್ದರು, ಅದಕ್ಕೆ ಬಹಿರ್ದ್ವಾರಾಣಿ ಎಂದು ಅರ್ಥಮಾಡಲಾಗಿದೆ. ಹದಿನಾಲ್ಕನೇ ಸರ್ಗದಲ್ಲಿ ’ಉತ್ತೋರಣಾಮನ್ವಯರಾಜಧಾನೀಂ’ ಎಂಬಲ್ಲಿಯೂ ’ಉನ್ನತಾ: ತೋರಣಾ: ಬಹಿರ್ದ್ವಾರಾಣಿ ಯಸ್ಯ’ ಎಂದು ಅರ್ಥೈಸಲಾಗಿದೆ. ಕುಮಾರ ಸಂಭವದಲ್ಲಿ "ಭಾಸೋಜ್ವತ್ಕಾಂಚನ ತೋರಣಾನಾಮ್" ಎಂದು ಹೇಳಲಾಗಿದೆ.
ಅಮರಕೋಶದಲ್ಲಿ ’ತೋರಣೋಸ್ತ್ರೀ ಬಹಿರ್ದ್ವಾರಂ’ ಎಂದು ಬರುತ್ತದೆ ಅದಕ್ಕೆ ಅರ್ಥ ಹೊರಬಾಗಿಲು, ಹೊರಬಾಗಿಲಿನ ಚೌಕಟ್ಟು ಎನ್ನುವುದು ಸೂಚಿತವಾಗಿದೆ.
ಕ್ರಿ. ಶ ೧೦೬೮ ಮತ್ತು ೧೦೮೫ ರ ಚಾಳುಕ್ಯ ಆಹವಮಲ್ಲ ಮತ್ತು ೬ನೇ ವಿಕ್ರಮಾದಿತ್ಯನ ಕಾಲದಲ್ಲಿ ಘಟಿಕಾಸ್ಥಾನ (ಮಧುಸೂದನ) ನಾಟ್ಯಶಾಲೆಯೂ ಇದ್ದ ಬಗ್ಗೆ "ನಾಟ್ಯಶಾಳಾಳಂಕೃತಮುಂ" ಎನ್ನುವುದಾಗಿ ಹೇಳಿಕೊಂಡಿದ್ದರೆ ಮುಂದೆ ಮಹಾಮಾಣಿಕ ಮದುಸೂಧನ ದೇವಾಲಯವನ್ನು ನಿರ್ಮಿಸಿ ಅದರಲ್ಲಿ "ಶುಂಭಚ್ಛಾಕುಂಬ ವೈನತೇಯ ಸ್ತಂಭಮುಮಮರರಾಜದ್ವಿಮಾನಾನುಕಾರಿಯಪ್ಪ ಮೂರು ನೆಲೆಯ ಬಾಗಿಲ್ವಾಡಮುಂ - "ಏಕದಂಡಿ" - "ತ್ರಿದಣ್ಡಿ" - ಸ್ನಾತಕ ಬ್ರಹ್ಮಚಾರಿ, ಹಂಸ ಪರಮಹಂಸಾನುಷ್ಟಾನ ಭವನಮುಂ" ಕಟ್ಟಿಸಿ ಆರ್ಷ ಧರ್ಮ ಪ್ರತಿಪಾದಕನಾಗಿದ್ದು, ಅನುಷ್ಠಾನ ನಿರತರಿಗೆ ಪ್ರತ್ಯೇಕ ಆಲಯವನ್ನು ನಿರ್ಮಿಸಿದ್ದಾಗಿ ಹೇಳಿಕೊಂಡಿದ್ದಾನೆ. ನಾಲ್ಕು ವೇದಗಳು ಮತ್ತು ಶಾಖೆಗಳ ಅಧ್ಯಯನಕ್ಕೆ "ಪಠನಮಠವಿರಾಜಿತಮುಮುತ್ತುಂಗತೋರಣ ಪ್ರಾಸಾದ" ಎನ್ನುವುದಾಗಿ ಬರುತ್ತದೆ. ವಿದ್ಯಾಕಾಂಕ್ಷಿಗಳಿಗೆ ತವರುಮನೆಯಂತೆ ಇದ್ದಿತ್ತು ಹಾಗೂ ವಿದ್ವತ್ತಿಗೆ ತಕ್ಕ ಮಾನ್ಯತೆಯೂ ಇತ್ತು ಎನ್ನುವುದಾಗಿ ತಿಳಿದು ಬರುತ್ತದೆ. ಓದುವ ವಿದ್ಯಾಲಯ ಅಥವಾ ಮಠ ಎತ್ತರದ ಅರಮನೆಯ ಬಾಗಿಲಿನಂತೆ ಶೋಭಿಸುತ್ತಿತ್ತು. 
ಕವಿ ಪಂಪ ತನ್ನ ವಿಕ್ರಮಾರ್ಜುನ ವಿಜಯದಲ್ಲಿ ತೋರಣವನ್ನು ಹೀಗೆ ಹೇಳುತ್ತಾನೆ-
ಪೊೞಲೊಳಗೊಪ್ಪೆ ಕನ್ನಡಿಯ ಕಂಚಿನ ತೋಱಣದೋಳಿಗಳ್
ತಳತ್ತಳಿಸಿ ವಿಚಿತ್ರ ಕೇತು ತತಿಗಳ್ ಮಿಳಿರ್ದಾಡೆ ಪುರಾಙ್ಗನಾ
ಜನಙ್ಗಳ ಜಯ ಜೀಯಮಾನ ರವಮಿಕ್ಕುವ ಸೇಸೆ ಮನೋನುರಾಗಮಮ್
ಬಳಿಯಿಸೆ ಪೊಕ್ಕನಾ ದ್ರುಪದ ಮನ್ದಿರಮಮ್ ಮಮ್ದಿರಮಮ್ ಪರಸೈನ್ಯಭೈರವಮ್[೩-೭೪] 
ಇದಿರೊಳ್ ಕಟ್ಟಿದ ತೋರಣಮ್ ನಿಹಿದಳಿರ್ ಪೂಗೊಂಚಲಂದೆತ್ತಮೆ
ತ್ತಿದ ಪೂಮಾಲೆ ಪರಾಗ ರಾಗಮುದಿತಾಶಾ ಭಾ ಸಮುದ್ಯನ್ಮಧೂ
ನ್ಮದ ಭೃಂಗ ಧ್ವನಿ ಮಂಗಳ ಧ್ವನಿಯೆನಲ್ ಸಾಲ್ವನ್ನೆಗಮ್ ತಾನೆ
ತಕ್ಕುದು ಕಾಮಂಗೆ ವಿವಾಹ ಮಂಟಪಮೆನಲ್ಕಾ ಮಾಧವೀ ಮಂಟಪಮ್[೫-೬] ಎಂದು ಅದು ಶುಭ ಸೂಚಕವಾಗಿಯೂ ಆಲಂಕಾರಿಕವಾಗಿಯೂ ಹೇಳಿದ್ದಾನೆ.
ಸುಮಾರು ಒಂದು ಮತ್ತು ಎರಡನೇ ಶತಮಾನದ ಕಾಲದ ಜೈನ ಶಾಸನ. ಉತ್ತರ ಪ್ರದೇಶದ ಮಥುರಾದಲ್ಲಿರುವ ಶಾಸನದ ಭಾಷೆ ಪ್ರಾಕೃತ ಮಿಶ್ರವಾದ ಸಂಸ್ಕೃತ. ಲಿಪಿ ಬ್ರಾಹ್ಮಿ.
ಇಲ್ಲಿ "ಸಹ ಮಾತಾ ಪಿತಿಹಿ ಸಹ" ಮತ್ತು "ಶಶ್ರೂ ಶಶುರೇಣ" ಎನ್ನುವುದು ತೋರಣದೊಂದಿಗೆ ಇರುವುದು. ಇಲ್ಲಿ ಶಶುರೇಣ ಎನ್ನುವಲ್ಲಿನ ಅಕ್ಷರಗಳನ್ನು ತೋರಣದ ಅಂದಕ್ಕಾಗಿ ಸ್ವಲ್ಪ ಅಸ್ತವ್ಯಸ್ಥ ಗೊಳಿಸಲಾಗಿದೆ.
#ತೋರಣ_ಪ್ರಾಸಾದ
ಸದ್ಯೋಜಾತರು

May 28, 2021

ಸ್ವಪ್ನದಲ್ಲಿ ನಡೆದಾಡುವ . .Somnambulism ಈ ಹೆಸರು ಕೇಳಿರಬಹುದು. ಇದು ವೈದ್ಯಕೀಯ ಭಾಷೆಯಲ್ಲಿ ಹೇಳಿರುವುದು.

ಸ್ವಪ್ನದಲ್ಲಿ ನಡೆದಾಡುವ . . . . . .

Somnambulism ಈ ಹೆಸರು ಕೇಳಿರಬಹುದು. ಇದು ವೈದ್ಯಕೀಯ ಭಾಷೆಯಲ್ಲಿ ಹೇಳಿರುವುದು. ಅಂದರೆ ನಿದ್ದೆಗಣ್ಣಿನಲ್ಲಿ ಅಥವಾ ಸ್ವಪ್ನಾವಸ್ಥೆಯಲ್ಲಿ ನಡೆದಾಡುವ ಒಂದು ಮನಸ್ಸಿಗೆ ಸಂಬಂಧಿಸಿದ ರೋಗ. ಸಾಮಾನ್ಯವಾಗಿ ಚಿಕ್ಕ ಮಕ್ಕಳಲ್ಲಿ ಈ ರೋಗ ಕಾಣಿಸಿಕೊಂಡರೂ, ದೊಡ್ಡವರಲ್ಲಿಯೂ ಕಾಣಿಸಿಕೊಳ್ಳುತ್ತದೆ. ಚಿಕ್ಕ ಮಕ್ಕಳು ಹೆದರಿ ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುವುದರಿಂದ ಹಿಡಿದು ಸ್ವಪ್ನಾವಸ್ಥೆಯಲ್ಲಿ ಕನವರಿಸುವುದೂ ಸಹ ಇದೇ ಕಾರಣ ಇರಬಹುದೋ ಏನೋ. ವೈದ್ಯಕೀಯ ಶಾಸ್ತ್ರದಲ್ಲಿ ಇದಕ್ಕೆ ಸೂಕ್ತವಾದ ಔಷದಗಳಿದ್ದು, ಇದನ್ನು ಹಿಪ್ನೋಟೈಸ್ ಮುಖಾಂತರವೂ ಗುಣಪಡಿಸಲು ಸಾಧ್ಯವಂತೆ. ಇದನ್ನು ಮಾನಸಿಕ ಖಾಯಿಲೆ ಎನ್ನುವುದಕ್ಕಿಂತ ಮಾನಸಿಕ ಸ್ಥಿತಿ ಅನ್ನಬಹುದೇನೋ. ವೇದಕಾಲದಲ್ಲಿ ಇಂತಹ ಒಂದು ಘಟನೆಗೆ ವಸಿಷ್ಠ ಮಹರ್ಷಿ ಸಾಕ್ಷಿಯಾಗುತ್ತಾರೆ. 
ವಸಿಷ್ಠ ಮಹರ್ಷಿ ನಿತ್ಯಾನುಷ್ಠಾನ ಪರಾಯಣರಾಗಿದ್ದರು. ತಪಸ್ವಿ, ಆದರೆ ಇವರಿಗೆ ನಿದ್ದೆಯಲ್ಲಿ ಕನಸ್ಸಿನಲ್ಲಿ ನಡೆಯುವ ಅಭ್ಯಾಸ ಇತ್ತು. ಹೀಗಿರುತ್ತಾ ಒಮ್ಮೆ ಇವರು ನಿದ್ದೆಗಣ್ಣಿನಲ್ಲಿ ನಡೆದುಕೊಂಡು ಹೋಗುತ್ತಾ ತನ್ನ ತಂದೆಯಾದ ವರುಣನ ಮನೆಯ ಸಮೀಪಕ್ಕೆ ಹೋಗುತ್ತಾರೆ. ವರುಣನ ಮನೆಯ ಕೊಟ್ಟಿಗೆಯ ಹತ್ತಿರ ನಾಯಿ ಮಲಗಿತ್ತು. ಮಧ್ಯರಾತ್ರಿಯಲ್ಲಿ ನಾಯಿ ಮಲಗಿದ್ದನ್ನು ಗಮನಿಸದೇ ಸಾಗುತ್ತಿರುವಾಗ ನಾಯಿ ಬಹಳ ಜೋರಗಿ ಕೂಗುತ್ತದೆ. ಕೂಗುವುದು ಮಾತ್ರವಲ್ಲ ಕಚ್ಚಲು ಅಟ್ಟಿಸಿಕೊಂಡು ಬರುತ್ತದೆ. ಆಗ ವಸಿಷ್ಠ. . . . 
ಯದರ್ಜುನ ಸಾರಮೇಯ ದತಃ ಪಿಶಂಗ ಯಚ್ಛಸೇ | ಎನ್ನುವ ೭ನೇ ಮಂಡಲದ ೫೫ನೇ ಸೂಕ್ತದಂತೆ
ಈ ನಾಯಿ ಬಿಳಿಯ ಬಣ್ಣದಿಂದ ಕೂಡಿದ್ದು ಅಲ್ಲಲ್ಲಿ ಚಿನ್ನದ ಲೇಪವಿದ್ದಂತೆ ಇತ್ತು. ಸರಮೆಯ ಮಗನಾದ ಸಾರಮೇಯನೇ ನಿನ್ನ ಹಲ್ಲುಗಳ ಪಂಕ್ತಿಯನ್ನು ನೋಡಿದಾಗ ಅದು ಬಿಳುಪಾದ ಆಯುಧದಂತೆ ಕಾಣಿಸುತ್ತಿತ್ತು. ನನ್ನನ್ನು ಹಿಂಸಿಸದೇ ನೀನು ಸದ್ದು ಮಾಡದೇ ನಿದ್ದೆ ಮಾಡು ಎಂದು ಸ್ತುತಿಸುವುದು ಸಿಗುತ್ತದೆ. ಇಲ್ಲಿ ಅರ್ಜುನ ಎಂದು ಬಂದಿರುವುದು ಬಿಳುಪು ಅಥವಾ ಶುಭ್ರವರ್ಣವನ್ನು ಸೂಚಿಸುವುದಕ್ಕಾಗಿ. ಅಲ್ಲಿಂದ ಮುಂದಿನ ಋಕ್ಕಿನಲ್ಲಿ ನನ್ನಿಂದ ಮತ್ತು ನಿನ್ನಿಂದ ಯಾರಿಗೂ ನಿದ್ರಭಂಗವಾಗ ಬಾರದು, ಮಲಗಿರುವವರನ್ನು ಕೂಗಿ ಎಬ್ಬಿಸ ಬೇಡ ಎಮದು ಕೇಳಿಕೊಳ್ಳುವ ಋಕ್ಕುಗಳಿವೆ. ಮುಂದೆ ನಾಯಿಯು ಸುಮ್ಮನಾಗುತ್ತದೆ ಎಂದು ಮುಂದಿನ ಋಕ್ಕುಗಳಿಂದ ತಿಳಿಯುತ್ತದೆ. ಮುಂದೆ ಸೂಕ್ತದೃಷ್ಟಾರ ಎನ್ನಿಸಿಕೊಳ್ಳುತ್ತಾರೆ. ಅದೇನೇ ಇರಲಿ ವಸಿಷ್ಠ ಮಹರ್ಷಿ ನಿದ್ದೆಯಲ್ಲಿ ನಡೆದು ಬಂದದ್ದು ಬಹುದೂರ. ನಾಯಿಯಿಂದ ಜಾಗ್ರತರಾದರು !! 

ಈ ಸೂಕ್ತದ ಮೊದಲ ಋಕ್ಕಿನಲ್ಲಿಯೇ ವಸಿಷ್ಠ ವಾಸ್ತೋಷ್ಪತಿಯನ್ನು ಕುರಿತಾಗಿ ಸ್ತೋತ್ರಮಾಡಿದ್ದಾರೆ. ಇಲ್ಲಿಯೂ ಅವರು ಸಹಜವಾಗಿ ವೈಜ್ಞಾನಿಕ ಜಾಗ್ರತಿಯನ್ನು ಎತ್ತಿಹಿಡಿದಿದ್ದಾರೆ.
ಅಮೀವಹಾ ವಾಸ್ತೋಷ್ಪತೇ ವಿಶ್ವಾ ರೂಪಾಣ್ಯಾವಿಶನ್ | ಸಖಾ ಸುಶೇವ ಏಧಿ ನಃ || ಇದು ಋಗ್ವೇದದ ಏಳನೇ ಮಂಡಲದ ೫೫ನೇ ಸೂಕ್ತ. ಅಮೀವಹ ಎನ್ನುವಲ್ಲಿಂದಲೇ ಆರಂಭಗೊಳ್ಳುತ್ತದೆ. ಅಂದರೆ ರೋಗನಾಶಕನಾದ ಹೇ ವಾಸ್ತೋಷ್ಪತಿ ದೇವನೇ ನೀನು ಬೇರೆ ಬೇರೆ ರೂಪ ಹೊಂದುತ್ತಾ ನನಗೆ ಮಿತ್ರನಾಗಿಯೂ ಸಖನಾಗಿಯೂ ಇರು ಎನ್ನುವುದು ಭಾವಾರ್ಥ.

ವಸ್ ಎನ್ನುವುದು ವಾಸ್ತು ಎನ್ನುವ ಪದದ ಧಾತು. ವಸತಿಯನ್ನು ಸೂಚಿಸುವ ಈ ಪದ ವಾಸಮಾಡಲು ಯೋಗ್ಯವಾದ ಮನೆ ಎಂದು ಅರ್ಥವನ್ನು ಕೊಡುತ್ತದೆ. ವಾಸ್ತೋಷ್ಪತಿ ಎಂದರೆ ವಾಸಮಾಡಲು ಯೋಗ್ಯವಾಗಿರುವ ಮನೆಯ ಯಜಮಾನ ಎಂದಾಗುತ್ತದೆ. ಈತನೇ ಆ ಮನೆಯ ಸಂರಕ್ಷಕನಾಗಿರುತ್ತಾನೆ. ಹಾಗಾದರೆ ಈ ವಾಸ್ತು ಎಂದರೆ ಯಾರು ? ಬೇರೆ ಬೇರೆ ವಿಧವಾಗಿ ರೂಪ ಧರಿಸಿ ಯಾವುದೇ ರೋಗ ರುಜಿನಗಳು ಬಂದರೂ ಗುಣಪಡಿಸುವ ಶಕ್ತಿಯನ್ನು ಹೊಂದಿದ ದೇವರೂಪದ ರೋಗನಿರೋಧಕ ಶಕ್ತಿಯಂತಿರುವ ದೇವನು. ಇವನೇ ವೈದ್ಯ !!

ವಾಸ್ತೋಷ್ಪತೇ ಪ್ರತಿ ಜಾನೀಹ್ಯಸ್ಮಾನ್ವೇಶ್ಸ್ತ್ವಾವೇಶೋ . . . . ಶಂ ನೋ ಭವ ದ್ವಿಪದೇ ಶಂ ಚತುಷ್ಪದೇ ||
ನಾವು ವಾಸಿಸುವ ಮನೆಯನ್ನು ಕಾಪಾಡುವ ವಾಸ್ತೋಷ್ಪತಿ ದೇವನೇ! ಮನೆಯಲ್ಲಿ ವಾಸಿಸುವ ನಮ್ಮನ್ನು ನೀನು ನಿನ್ನ ಆರಾಧಕರು ಎಂದು ತಿಳಿ. ಮನೆಯಲ್ಲಿ ನಾವು ವಾಸಿಸಲು ಉತ್ತಮವಾದ ವಾತಾವರಣವನ್ನು ನಿರ್ಮಿಸಿ ಸಕಲ ರೋಗ ನಿರೋಧಕನಾಗಿರು. ನೀನು ಸಂತುಷ್ಟನಾಗಿದ್ದು ನಾವು ಬಯಸುವ ಸುಖ ಮತ್ತು ಸಂಪತ್ತನ್ನು ನಮಗೆ ನೀಡು. ಮುಖ್ಯವಾಗಿ ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ಹಾಗೂ ನಮ್ಮ ಮನೆಯಲ್ಲಿ ವಾಸಿಸುವ ಪಶುಗಳಿಗೂ ಸುಖವನ್ನು ನೀಡು ಎನ್ನುವುದು ಈ ಋಗ್ವೇದದ ೫೪ನೇ ಸೂಕ್ತದ ಭಾವಾರ್ಥ.
ವಾಸ್ತೋಷ್ಪತೇ ಪ್ರತರಣೋ . . . .  ಪಿತೇವಪುತ್ರಾನ್ಪ್ರತಿ ನೋ ಜುಷಸ್ವ ||
ಒಬ್ಬ ತಂದೆ ತನ್ನ ಮಕ್ಕಳಿಗಾಗಿ ಎಷ್ಟೆಲ್ಲಾ ತ್ಯಾಗ ಮಾಡಿ ತನ್ನ ಜೀವನವನ್ನೇ ಮುಡುಪಾಗಿಟ್ಟು ಮೇಲಕ್ಕೆ ತರುತ್ತಾನೋ ಅದೇ ರೀತಿ ನಮ್ಮ ಮನೆಯಲ್ಲಿ ಸಂಪತ್ತು ಬೆಳಗಲಿ, ನಮ್ಮ ಗೋವುಗಳು ಅಭಿವೃದ್ಧಿಯನ್ನು ಹೊಂದಲಿ, ನಮಗೆ ಕುದುರೆಗಳನ್ನು ಸಾಕುವಷ್ಟು ಬಲವನ್ನು ನೀಡು. ನಮ್ಮ ಸಂಪತ್ತು ದಿನೇ ದಿನೇ ವೃದ್ಧಿಸಿ ನಮಗೆ ಇನ್ನೂ ಬೇರೆ ಬೇರೆ ಮನೆಗಳನ್ನು ನಿರ್ಮಿಸುವ ಶಕ್ತಿ ನೀಡು ಎಂದು ಕೇಳಿಕೊಳ್ಳುತ್ತಾರೆ.

ಮನೆ ಎನ್ನುವುದು ಹೇಗಿರುತ್ತೆ ಎನ್ನುವುದು ಇಲ್ಲಿ ಹೇಳಲಾಗಿದೆ. ನಮಗೆ ಕಂಡೊಡನೆ ಮನಸ್ಸನ್ನು ಆಕರ್ಷಿಸುತ್ತದೆಯಂತೆ ಅದನ್ನೇ ಇಲ್ಲಿ ರಣ್ವಯಾ ಎನ್ನಲಾಗಿದೆ. ರಮಣೀಯವಾಗುವ ಎನ್ನುವ ಅರ್ಥವನ್ನು ಕೊಡುವುದು. ಇನ್ನು ಶಗ್ಮಯಾ ಎನ್ನುವುದು ಸುಖವನ್ನು ಹೇಳುತ್ತದೆ. ಮನೆಯನ್ನು ಪ್ರವೇಶಿಸಿ ಅಲ್ಲಿ ಉಳಿದಾಗ ನಮಗೆ ಸುಖದ ಅನುಭವವಾಗಬೇಕಂತೆ. ಗಾತುಮತ್ಯಾ ಎಂದು ಹೇಳಿರುವುದು ಮನೆ ಇದ್ದರೆ ಅಲ್ಲಿ ಸುಖವಿದ್ದರೆ ಮತ್ತು ಆಕರ್ಷಕವಾಗಿದ್ದರೆ ಮಾತ್ರ ಸಾಲದು ಇಲ್ಲಿ ಸಂಪತ್ತು ಶೇಖರಣೆಯಾಗುತ್ತಿದ್ದರೆ ಮಾತ್ರ ಉಳಿದವು ಸುಸೂತ್ರವಾಗಿರುತ್ತವೆ ಎನ್ನುವುದು ಶಗ್ಮಯಾ ಎನ್ನುವುದರ ತಾತ್ಪರ್ಯ. ’ಪಾಹಿ ಕ್ಷೇಮ ಉತ ಯೋಗೇ ವರಂ’ ಇಲ್ಲಿ ಇವಿಷ್ಟೂ ಅಲ್ಲದೇ ನಮಗೆ ರಕ್ಷಣೆ ಬೇಕಾಗುತ್ತದೆ ನಾವು ಮಾಡುವ ಉದ್ಯೋಗದಲ್ಲಿ, ಕಳ್ಳಕಾಕರು, ಬಿಸಿಲು, ಮಳೆ, ಶೀತಗಳಿಂದಲೂ ರಕ್ಷಣೆ ಅತ್ಯವಶ್ಯ ಅವುಗಳು ದೊರಕಲಿ, ಮತ್ತು ನಾವು ಅಪೇಕ್ಷಿಸಿದ್ದು ಅತ್ಯಂತ ಸುಲಭವಾಗಿ ದೊರಕುವಂತಾಗಲಿ ಎನ್ನುವುದನ್ನೇ ಯೋಗೇ ಎಂದಿರುವುದು. ಹೀಗೆ ಒಂದು ಮನೆಯ ಎಲ್ಲರನ್ನೂ ಸುಖ ಸಂತೋಷ ನೆಮ್ಮದಿಯಿಂದ ಬಾಳುವಂತೆ ಮಾಡಬಲ್ಲದು ಆದರೆ ಅದು ವಾಸ್ತೋಷ್ಪತಿಯ ಅಥವಾ ವಾಸ್ತು ದೇವನ ಅನುಗ್ರಹದಿಂದ ಎಂದಿರುವುದು ಅತ್ಯಂತ ಮಹತ್ವ ಪಡೆಯುತ್ತದೆ.

ವೇದದಲ್ಲಿ ಸ್ಪಷ್ಟವಾಗಿ ವಾಸ್ತುವನ್ನು ಸಾಕ್ಷಾತ್ಕರಿಸಿಕೊಂಡ ವಸಿಷ್ಟ ಹೇಳುವಂತೆ ಮನೆಯಲ್ಲಿ ವಾಸ್ತುದೇವ ನೆಲೆಸಬೇಕು, ಅಂದರೆ ಮನೆಯ ಪರಿಸರವೂ ಸ್ವಚ್ಚವಾಗಿದ್ದು ಯಾವುದೇ ರೋಗಾಣುಗಳು ಹುಟ್ಟಿಕೊಳ್ಳಬಾರದು ಅದೇ ವಾಸ್ತುವಿನ ಗುಣ ಎನ್ನುತ್ತಾರೆ. ಆದರೆ ದಿಕ್ಕು ? ಅದರ ಕುರಿತು ಉಲ್ಲೇಖಿಸಲೇ ಇಲ್ಲ. ದಿಕ್ಕು ಪ್ರತಿದಿನವೂ ಬದಲಾಗುತ್ತದೆ ಸೂರ್ಯೋದಯದ ದಿಕ್ಕನ್ನು ಪೂರ್ವ ಎಂದು ಇಟ್ಟುಕೊಂಡು ಪಶ್ಚಿಮವನ್ನು ನಿರ್ದೇಶಿಸಿದರೆ ಉತ್ತರಾಯಣ ಮತ್ತು ದಕ್ಷಿಣಾಯನಗಳಲ್ಲಿ ನೇರಕ್ಕೆ ಎಂದಿಗೂ ಸಿಗಲಿಕ್ಕಿಲ್ಲವೇನೋ, ಹಾಗಾಗಿಯೇ ವಾಸ್ತು ದೇವನ ಕುರಿತು ಸ್ತುತಿಸಲಾಗಿದೆಯೇ ವಿನಃ ವೇದದಲ್ಲಿ ವಸ್ತುವಿನ ಅಸಂಬದ್ಧತೆ ಕಾಣಿಸುತ್ತಿಲ್ಲ. ಹಾಗಾದರೆ ಇಂದಿನ ವಾಸ್ತು ? ಇಂದಿನ ವಾಸ್ತುಗಳು ವಿಪರೀತ, ಅವೈದಿಕ. ಹಾಗೊಂದು ವೇಳೆ ವಾಸ್ತುವನ್ನು ನಿರ್ಧರಿಸಲು ಜ್ಯೋತಿಷ್ಯ ಶಾಸ್ತ್ರಕ್ಕೆ ಸಾಧ್ಯವೇ ಹೊರತು ಟಿವಿಗಳಲ್ಲಿ ಕುಳಿತು ಆ ವಾಸ್ತು ಈ ವಾಸ್ತು ಎನ್ನುವುದೆಲ್ಲಾ ಬೊಗಳೆ ಅನ್ನಿಸುತ್ತದೆ.

#ಶಂ_ನೋ_ಭವ_ದ್ವಿಪದೇ_ಶಂ_ಚತುಷ್ಪದೇ
ಸದ್ಯೋಜಾತ

May 25, 2021

ಗೋಕರ್ಣ ಕ್ಷೇತ್ರ ಯಾಕೆ ಅಷ್ಟು ಪವಿತ್ರ ?


ಹಿಂದೆ ಇಕ್ಷ್ವಾಕು ವಂಶದಲ್ಲಿ ಮಿತ್ರಸಹನೆಂಬ ರಾಜನಿದ್ದನು. ಧರ್ಮಾನುಚರನಾದ ಆ ರಾಜ ಕ್ಷತ್ರಿಯರಲ್ಲೇ ಬಹು ಪ್ರತಾಪಿಯಾದವನು. ಸಕಲ ಧರ್ಮಗಳನ್ನೂ ಬಲ್ಲವನು. ವೇದ ಧರ್ಮಗಳನ್ನು ತಿಳಿದವನು. ವಿವೇಕಿ. ಕುಲಾಭಿಮಾನಿ. ಬಲಾಢ್ಯ. ದಯಾನಿಧಿ. ಪ್ರಯತ್ನಶಾಲಿ.
ಒಂದುಸಲ ಅವನು ಬೇಟೆಗೆಂದು ಹೊರಟು, ಅನೇಕ ವನ್ಯಮೃಗಗಳುಳ್ಳ ಅರಣ್ಯವನ್ನು ಪ್ರವೇಶಮಾಡಿದನು. ನಿರ್ಮಾನುಷ್ಯವಾದ ಆ ಅರಣ್ಯದಲ್ಲಿ ಮೃಗಗಳನ್ನನ್ನ್ವೇಷಿಸುತ್ತಾ ಹೊರಟ ಅವನು, ದಾರಿಯಲ್ಲಿ ಅಗ್ನಿಯಂತೆ ಜ್ವಾಲಾಕಾರವಾಗಿ ಭಯಾನಕವಾಗಿ ಕಾಣುತ್ತಿದ್ದ ಒಬ್ಬ ರಾಕ್ಷಸನನ್ನು ನೋಡಿದನು. ಆ ರಾಕ್ಷಸನನ್ನು ಕಂಡ ಆ ರಾಜ ಕ್ರುದ್ಧನಾಗಿ ಅವನಮೇಲೆ ಶರವರ್ಷವನ್ನು  ಹರಿಸಿದನು. ಶರಘಾತದಿಂದ ಆ ರಾಕ್ಷಸ ಮೂರ್ಛೆಗೊಂಡು ಭೂಶಾಯಿಯಾದನು. ಸಾಯುತ್ತಾ ಬಿದ್ದಿರುವ ಅವನನ್ನು ಕಂಡು ಬಹು ದುಃಖಿತನಾದ ಅವನ ಸಹೋದರ, ಶೋಕತಪ್ತನಾಗಿ ಅಳುತ್ತಾ ಅವನ ಬಳಿಯೇ ಕುಳಿತನು. ಸಾಯುತ್ತಿದ್ದ ಆ ರಾಕ್ಷಸ, ಸರ್ವ ಪ್ರಯತ್ನದಿಂದಲೂ ತನ್ನ ಸಾವಿಗೆ ಕಾರಣನಾದ ಆ ರಾಜನನ್ನು ಕೊಲ್ಲಬೇಕೆಂದು ತನ್ನ ಸಹೋದರನಿಗೆ ಆಣತಿಕೊಟ್ಟು, ಪ್ರಾಣಬಿಟ್ಟನು.
ಸಮಯಕಾದು, ಮಾಯಾವಿಯಾದ ಆ ರಾಕ್ಷಸನ ಸಹೋದರ, ಮಾನವರೂಪದಲ್ಲಿ, ರಾಜನ ಬಳಿಗೆ ಬಂದು ಮೃದುವಾಕ್ಯಗಳಿಂದ ರಾಜನನ್ನು ಒಲಿಸಿಕೊಂಡು, ನಮ್ರತೆಯನ್ನು ನಟಿಸುತ್ತಾ, ರಾಜನ ಸೇವೆಯಲ್ಲಿ ನಿಂತನು. ಆ ಕಪಟಿ, ತನ್ನ ಸ್ವಾಮಿಯಾದ ರಾಜನ ಮನೋಗತಗಳನ್ನರಿತು, ಅವನಿಗೆ ಅನುಕೂಲನಾಗಿ, ಅವನ ಸೇವೆ ಮಾಡುತ್ತಾ ಅವನನ್ನು ಸಂತುಷ್ಟನನ್ನಾಗಿ ಮಾಡಿ, ಅವನ ನಂಬಿಕೆಗೆ ಪಾತ್ರನಾದನು. ಒಂದುಸಲ ಪಿತೃಶ್ರಾದ್ಧ ಬರಲು, ರಾಜನು ವಸಿಷ್ಠಾದಿ ಮುನಿಗಳನ್ನು ಅಹ್ವಾನಿಸಿದನು. ಆ ದಿವಸ, ಕಪಟವನ್ನರಿಯದ ರಾಜನು ಆ ಕಪಟಿ ಸೇವಕನನ್ನು ಅಡಿಗೆಯ ಮೇಲ್ವಿಚಾರಕ್ಕೆ ನೇಮಿಸಿ, “ನೀನು ಪಾಕಶಾಲೆಯಲ್ಲಿದ್ದುಕೊಂಡು, ಅಡಿಗೆಗೆ ಬೇಕಾದ ಪದಾರ್ಥಗಳನ್ನು ತಂದುಕೊಟ್ಟು, ಅಡಿಗೆಯವನಿಗೆ ಸಹಾಯಕನಾಗಿ ನಿಂತು ಎಲ್ಲವನ್ನು ಸಿದ್ಧಪಡಿಸು.” ಎಂದು ಆಜ್ಞೆ ಮಾಡಿದನು. ರಾಜಾಜ್ಞೆಯನ್ನಂಗೀಕರಿಸಿ, ಆ ಕಪಟಸೇವಕ, ಅಡಿಗೆಯ ಪದಾರ್ಥಗಳನ್ನು ತಂದುಕೊಡುವಾಗ ಯಾರಿಗೂ ತಿಳಿಯದಂತೆ ನರಮಾಂಸವನ್ನು ಜೊತೆಗೆ ಸೇರಿಸಿ ತಂದು ಕೊಟ್ಟನು. ನಿಜವನ್ನರಿಯದ ಅಡಿಗೆಯವನು ಕಪಟಿ ತಂದುಕೊಟ್ಟಿದ್ದ ಪದಾರ್ಥಗಳನ್ನು ಉಪಯೋಗಿಸಿ ಅಡಿಗೆ ಸಿದ್ಧಪಡಿಸಿದನು.
ಭೋಜನಸಮಯದಲ್ಲಿ ತನ್ನ ದಿವ್ಯ ದೃಷ್ಟಿಯಿಂದ ಅಡಿಗೆಯಲ್ಲಿ ನರಮಾಂಸ ಬೆರೆತಿರುವುದನ್ನು ಅರಿತ ವಸಿಷ್ಠಮುನಿ, ಕ್ರೋಧಗೊಂಡು, “ಹೇ ರಾಜನ್, ಅಸ್ಪರ್ಶವಾದ ನರಮಾಂಸವನ್ನು ಉಪಯೋಗಿಸಿ ನಮಗೆ ಭೋಜನವನ್ನು ಸಿದ್ಧಪಡಿಸಿದ್ದೀಯೆ. ನೀನು ಮಾಡಿದ ಈ ಪಾಪದಿಂದ ಬ್ರಹ್ಮರಾಕ್ಷಸನಾಗು.” ಎಂದು ಶಾಪ ಕೊಟ್ಟನು. ಅದನ್ನು ಕೇಳಿದ ಆ ರಾಜ, ಪ್ರತಿಶಾಪ ಕೊಡಲು ಸಿದ್ಧನಾಗಿ, “ಮಹರ್ಷಿ, ಅಡಿಗೆಯಲ್ಲಿ ಯಾವ ಮಾಂಸವಿದೆ ಎಂಬುದರ ಅರಿವು ನನಗಿಲ್ಲ. ನನ್ನ ಆಜ್ಞೆಯಂತೆ ಅಡಿಗೆಯವನು ಅಡಿಗೆ ಮಾಡಿದ್ದಾನೆ. ಅದರಲ್ಲಿ ಏನಿದೆ ಎಂಬುದು ನನಗೆ ತಿಳಿಯದು. ಅದರಿಂದಲೇ ನೀನು ಕೊಟ್ಟ ಶಾಪ ವ್ಯರ್ಥವು. ತಿಳಿಯದೇ ಆದ ಪಾಪಕ್ಕೆ ನೀನು ಅನಾವಶ್ಯಕವಾಗಿ ಶಾಪ ಕೊಟ್ಟೆ. ಈಗ ನಿನಗೆ ನಾನು ಪ್ರತಿಶಾಪ ಕೊಡುತ್ತೇನೆ.” ಎಂದು ಹೇಳಿ, ಕೈಯಲ್ಲಿ ನೀರು ತೆಗೆದುಕೊಂಡು ಶಾಪಕೊಡಲುದ್ಯುಕ್ತನಾದನು. ಅಷ್ಟರಲ್ಲಿ, ರಾಜನ ಪತ್ನಿ, ಮದಯಂತಿ ಅಡ್ಡಬಂದು, ರಾಜನನ್ನು ತಡೆದು, “ರಾಜಗುರುವನ್ನು ಶಪಿಸುವುದರಿಂದ ಮಹಾ ದೋಷವುಂಟಾಗುತ್ತದೆ. ಗುರುವಚನವು ವೃಥಾ ಅಗುವುದಿಲ್ಲ. ಅದರಿಂದ ಅವರ ಪಾದಗಳನ್ನು ಆಶ್ರಯಿಸಿಯೇ ಉದ್ಧಾರವಾಗಬೇಕು.” ಎಂದು ಅವನನ್ನು ತಡೆದಳು. ರಾಣಿಯ ಮಾತುಗಳನ್ನು ಕೇಳಿ ರಾಜ, ಕೈಯಲ್ಲಿ ಹಿಡಿದಿದ್ದ ನೀರನ್ನು ಕೆಳಕ್ಕೆ ಬಿಟ್ಟನು. ಆ ಕಲ್ಮಷವಾದ ನೀರು ಅವನ ಪಾದಗಳ ಮೇಲೆ ಬಿತ್ತು. ಅದರಿಂದ ಆ ರಾಜ ಕಲ್ಮಷಪಾದನೆಂದು ಹೆಸರುಗೊಂಡು, ಬ್ರಹ್ಮರಾಕ್ಷಸನಾದನು. ರಾಜಪತ್ನಿ, ಮದಯಂತಿ, ಮಹರ್ಷಿಯ ಪಾದಗಳಮೇಲೆ ಬಿದ್ದು, “ಹೇ ಮಹರ್ಷಿವರ್ಯ, ನಿನ್ನ ಕೋಪವನ್ನು ಉಪಸಂಹರಿಸಿಕೊಂಡು, ತಿಳಿಯದೆ ಮಾಡಿದ ಪಾಪದಿಂದ ನನ್ನ ಗಂಡನನ್ನು ಕಾಪಾಡು.” ಎಂದು ಬೇಡಿಕೊಂಡಳು. ಶಾಂತನಾದ ವಸಿಷ್ಠಮುನಿ, ಎಲ್ಲವನ್ನು ಅರಿತವನಾಗಿ, ಶಾಪಕಾಲವನ್ನು ತಗ್ಗಿಸಿ, ಹನ್ನೆರಡು ವರ್ಷಗಳು ಶಾಪವನ್ನನುಭವಿಸಿ ಯಥಾಪೂರ್ವದಂತೆ ಮಹಾರಾಜನಾಗಿ ಬಾಳುವಂತೆ ಅವನಿಗೆ ಶಾಪ ಉಪಸಂಹಾರವನ್ನು ಹೇಳಿ, ತನ್ನ ಆಶ್ರಮಕ್ಕೆ ಹೊರಟುಹೋದನು.
ಮಿತ್ರಸಹನು ಕಲ್ಮಾಷಪಾದನೆಂಬ ಬ್ರಹ್ಮರಾಕ್ಷಸನಾಗಿ ಅರಣ್ಯದಲ್ಲಿ ಮನುಷ್ಯರನ್ನೂ, ಮೃಗಗಳನ್ನು ಭಕ್ಷಿಸುತ್ತಾ ಅಲೆದಾಡುತ್ತಿದ್ದನು. ಹೀಗಿರಲು, ಒಂದು ದಿನ, ದೈವಯೋಗದಿಂದ ವಿಪ್ರ ದಂಪತಿಗಳು ಆ ದಾರಿಯಲ್ಲಿ ಪಯಣಿಸುತ್ತ ಬಂದರು. ಅವರನ್ನು ಕಂಡ ಬ್ರಹ್ಮರಾಕ್ಷಸ ಅವರನ್ನು ತಿನ್ನಲು ಅಲ್ಲಿಗೆ ಬಂದು, ಆ ಬ್ರಾಹ್ಮಣನನ್ನು ಹಿಡಿದು ತಿನ್ನಬೇಕೆಂದುಕೊಳ್ಳುವಷ್ಟರಲ್ಲಿ ಅವನ ಹೆಂಡತಿ, ಶೋಕಗ್ರಸ್ತಳಾಗಿ, ಆ ಬ್ರಹ್ಮರಾಕ್ಷಸನನ್ನು ಕುರಿತು, “ಅಯ್ಯಾ, ರಾಕ್ಷಸ, ನನ್ನ ಸೌಭಾಗ್ಯವನ್ನು ಹಾಳುಮಾಡಬೇಡ. ನನ್ನ ಗಂಡನನ್ನು ಹಿಂಸಿಸಬೇಡ. ಅವನನ್ನು ಬಿಟ್ಟುಬಿಡು. ನನ್ನನ್ನು ಬೇಕಾದರೆ ತಿನ್ನು. ಗಂಡನಿಲ್ಲದ ಸ್ತ್ರೀ ಪಾಷಾಣಕ್ಕೆ ಸಮಾನ. ನನ್ನನ್ನು ಮೊದಲು ತಿಂದು ಅನಂತರ ಬೇಕಾದರೆ ಅವನನ್ನು ತಿನ್ನು. ಸುಂದರ ಯುವಕನಾದ ನನ್ನ ಪತಿ ವೇದಶಾಸ್ತ್ರ ವಿದ್ವಾಂಸನು. ಅವನನ್ನು ರಕ್ಷಿಸಿದರೆ ನಿನಗೆ ಜಗತ್ತನ್ನೇ ರಕ್ಷಿಸಿದ ಪುಣ್ಯ ಬರುವುದು. ನೀನು ದಯೆಮಾಡಿ ನನ್ನ ಮಾತು ನಡೆಸಿಕೊಟ್ಟರೆ ನಾನು ನಿನಗೆ ಮಗಳಾಗಿ ಹುಟ್ಟುತ್ತೇನೆ. ಅಥವಾ ನನಗೆ ಪುತ್ರಸಂತಾನವಾದರೆ ಅವನಿಗೆ ನಿನ್ನ ಹೆಸರನ್ನೇ ಇಡುತ್ತೇನೆ.” ಎಂದು ನಾನಾವಿಧವಾಗಿ ಆ ರಾಕ್ಷಸನನ್ನು ಬೇಡಿಕೊಂಡಳು. ಆದರೂ ಆ ರಾಕ್ಷಸ ಅವಳ ಮಾತಿಗೆ ಬೆಲೆ ಕೊಡದೆ ಆ ಬ್ರಾಹ್ಮಣನನ್ನು ತಿಂದುಬಿಟ್ಟನು. ಅದರಿಂದ ಕ್ರುದ್ಧಳಾದ ಆ ಹೆಂಗಸು, “ಎಲೈ ಪಾಪಿ, ನಾನು ಇಷ್ಟು ಬೇಡಿಕೊಂಡರೂ ನೀನು ನನ್ನ ಮಾತಿಗೆ ಬೆಲೆಕೊಡದೆ ನನ್ನ ಗಂಡನನ್ನು ತಿಂದುಹಾಕಿದೆ. ಇದೋ, ನನ್ನ ಶಾಪವನ್ನು ಕೇಳು. ನೀನು ಸೂರ್ಯವಂಶೀಯನಾದ ರಾಜನಾಗಿದ್ದೂ ಕೂಡ ಶಾಪಗ್ರಸ್ತನಾಗಿ ಬ್ರಹ್ಮರಾಕ್ಷಸನಾದೆ. ಹನ್ನೆರಡು ವರ್ಷಗಳು ಕಳೆದು ನೀನು ಮತ್ತೆ ರಾಜನಾದಾಗ, ನೀನು ನಿನ್ನ ರಾಣಿಯೊಡನೆ ಕೂಡಿದರೆ ಸಾಯುತ್ತೀಯೆ. ದುರಾತ್ಮ, ಅನಾಥ ವಿಪ್ರ ಭಕ್ಷಣೆಯ ಫಲವನ್ನು ಅನುಭವಿಸು.” ಎಂದು ಶಪಿಸಿ, ತನ್ನ ಗಂಡನ ಅಸ್ತಿಗಳನ್ನು ಕೂಡಿಸಿ ಅದರೊಡನೆ ಆ ಬ್ರಾಹ್ಮಣ ಸ್ತ್ರೀ ಅಗ್ನಿಪ್ರವೇಶಮಾಡಿದಳು.
ಶಾಪ ವಿಮೋಚನೆಯಾದ ಮೇಲೆ ಮತ್ತೆ ರಾಜನಾದ ಕಲ್ಮಷಪಾದನು ರಾಜಧಾನಿಗೆ ಹಿಂತಿರುಗಿದನು. ಸಂತೋಷಗೊಂಡ ರಾಣಿ, ಅವನನ್ನು ಕಂಡು ಅವನೊಡನೆ ಸೇರಲು ಬಂದಳು. ರಾಜ ಅವಳನ್ನು ತಡೆದು, ತನಗುಂಟಾದ ಬ್ರಾಹ್ಮಣ ಸ್ತ್ರೀ ಶಾಪವನ್ನು ಕುರಿತು ಹೇಳಿದನು. ರಾಣಿ, ಮದಯಂತಿ, ಗಂಡನ ಮಾತು ಕೇಳಿ, ಬಹು ದುಃಖಿತಳಾಗಿ, ಪ್ರಾಣತ್ಯಾಗ ಮಾಡಲು ಉದ್ಯುಕ್ತಳಾದಳು. ಅದರಿಂದ ದುಃಖಿತನಾದ ರಾಜನನ್ನು ಕಂಡು, ಅವಳು, “ಪ್ರಾಣನಾಥ.. ಹನ್ನೆರಡು ವರ್ಷಗಳು ನಿನಗಾಗಿ ಕಷ್ಟದಿಂದ ಕಾದಿದ್ದು, ನಿನ್ನ ಬರುವನ್ನೇ ಎದುರು ನೋಡುತ್ತಿದ್ದೆ. ಈಗ ಹೀಗಾಯಿತು. ಹೋಗಲಿ ಬಿಡು. ಸಂತಾನವಿಲ್ಲದಿದ್ದರೂ ನಷ್ಟವಿಲ್ಲ. ನಾವಿಬ್ಬರೂ ಒಟ್ಟಿಗೇ ಇರಬಹುದು.” ಏಂದು ಹೇಳಿದಳು. ಅವಳ ಮಾತನ್ನು ಕೇಳಿ ರಾಜ, ದುಃಖದಿಂದ ಕಣ್ಣೀರು ಸುರಿಸುತ್ತಾ, “ಏನು ಮಾಡಲು ಸಾಧ್ಯ? ವಿಧಿ ಬಲವತ್ತರವಾದದ್ದು.” ಎಂದು ನಿಟ್ಟುಸಿರುಬಿಟ್ಟ.
ಮತ್ತೆ ಆ ರಾಜ, ವೃದ್ಧರೂ, ಮತಿವಂತರೂ ಆದ ಪುರೋಹಿತರನ್ನೂ, ಮಂತ್ರಿವರ್ಗದವರನ್ನು ಕರೆಸಿ, ತನಗುಂಟಾದ ಅವಗಢವನ್ನು, ಬ್ರಹ್ಮಹತ್ಯಾಪಾಪವೂ ಸೇರಿದಂತೆ, ಎಲ್ಲವನ್ನೂ ವಿವರಿಸಿ ಹೇಳಿ, ಅದರಿಂದ ಪಾರಾಗುವ ಉಪಾಯವನ್ನು ಹೇಳಿ ಎಂದು ಬಿನ್ನವಿಸಿಕೊಂಡ. ಅವರು ಹೇಳಿದಂತೆ ಪಾಪವಿಮೋಚನಾರ್ಥವಾಗಿ ತೀರ್ಥಯಾತ್ರೆಗಳನ್ನು ಮಾಡುತ್ತಾ, ಹೋದಕಡೆಗಳಲ್ಲೆಲ್ಲ ಸ್ನಾನ, ಪೂಜಾರ್ಚನಾದಿಗಳನ್ನು ನಡೆಸಿ, ಬ್ರಾಹ್ಮಣರಿಗೆ ವಸ್ತ್ರ, ಧನ, ಅನ್ನ ದಾನಗಳನ್ನು ಮಾಡುತ್ತಾ, ದೇವಾದಿಗಳಿಗೆ ತರ್ಪಣಗಳನ್ನು ನೀಡುತ್ತಾಯಿದ್ದನು. ಆದರೂ, ಶ್ರದ್ಧಾಭಕ್ತಿಗಳಿಂದ ಎಲ್ಲವನ್ನೂ ಮಾಡಿದರೂ, ಬ್ರಹ್ಮಹತ್ಯಾ ಪಾಪವು ಅವನನ್ನು ಬಿಡದೆ, ಅವನ ಬೆನ್ನಂಟಿ ಬರುತ್ತಲೇ ಇತ್ತು. ಆ ರಾಜ, ಅನೇಕ ಕಷ್ಟಗಳನ್ನು ಅನುಭವಿಸುತ್ತಾ, ಚಿಂತಾಕುಲನಾಗಿ, ವಿರಕ್ತಮನಸ್ಕನಾಗಿ, ದೈವಯೋಗದಿಂದಲೋ ಎಂಬಂತೆ ಮಿಥಿಲಾಪುರಕ್ಕೆ ಬಂದನು. ಅಲ್ಲಿ ಚಿಂತಾಗ್ರಸ್ತನಾಗಿ ಒಂದು ಮರದ ನೆರಳಿನಲ್ಲಿ ಕುಳಿತಿದ್ದಾಗ, ಆ ಮಾರ್ಗದಲ್ಲಿ ಋಷೀಶ್ವರರೊಡನೆ ಕೂಡಿ, ಮಹಾರುದ್ರನಂತೆ ಪ್ರಕಾಶಿಸುತ್ತಿದ್ದ, ಗೌತಮ ಮಹರ್ಷಿ ಬಂದರು. ಅವರನ್ನು ಕಂಡ ರಾಜ ಅವರ ಪಾದಗಳಲ್ಲಿ ಬಿದ್ದು, ಭಕ್ತಿಯಿಂದ ನಮಸ್ಕರಿಸಿದನು. ಅದರಿಂದ ಸಂತುಷ್ಟನಾದ ಆ ಮುನಿಯು, ಕರುಣಾರ್ದ್ರಹೃದಯನಾಗಿ, ದುಃಖಿತನಾದ ಆ ರಾಜನನ್ನು ಆದರಿಸಿ, ಅವನಾರೆಂದು ವಿಚಾರಿಸಿದನು. ಅವನು ರಾಜನೆಂದರಿತು, “ಹೇ ರಾಜ.. ನಿನ್ನ ರಾಜ್ಯವಾವುದು? ಅದನ್ನು ಯಾರು ವಶಪಡಿಸಿಕೊಂಡರು? ನಿನ್ನ ಈ ವನವಾಸಕ್ಕೆ ಕಾರಣವೇನು? ಚಿಂತಾಗ್ರಸ್ತನಾಗಿ ಹೀಗೇಕೆ ಕಾಡಿನಲ್ಲಿ ಅಲೆಯುತ್ತಿದ್ದೀಯೆ? ನಿನ್ನನ್ನು ಕಾಡುತ್ತಿರುವ ಚಿಂತೆಯೇನು?” ಎಂದು ವಿಚಾರಿಸಿದರು. ಅದಕ್ಕೆ ಆ ರಾಜ, “ಹೇ ಮುನಿವರ್ಯ.. ವಿಧಿವಶದಿಂದ ಬ್ರಾಹ್ಮಣ ಶಾಪವು ಬ್ರಹ್ಮಹತ್ಯಾರೂಪದಲ್ಲಿ ನನ್ನ ಬೆನ್ನು ಹತ್ತಿದೆ. ಯಜ್ಞಾದಿಗಳನ್ನು ಮಾಡಿದರೂ, ಪ್ರಾಯಶ್ಚಿತ್ತಗಳನ್ನು ಮಾಡಿಕೊಂಡರೂ, ತೀರ್ಥಯಾತ್ರೆಗಳನ್ನು ಮಾಡುತ್ತಾ ದಾನ ಧರ್ಮಗಳಲ್ಲಿ ನಿರತನಾದರೂ, ನನ್ನ ಪಾಪಗಳು ಕಳೆಯುತ್ತಿಲ್ಲ. ಘೋರವಾದ ಬ್ರಹ್ಮಹತ್ಯಾಪಾಪವು ನನ್ನ ಬೆನ್ನಂಟಿ ಬರುತ್ತಲೇ ಇದೆ. ಇಂದು ನಿಮ್ಮ ಚರಣಗಳ ದರ್ಶನದಿಂದ ನನ್ನ ಜನ್ಮ ಸಾಫಲ್ಯವಾಯಿತು. ಇನ್ನು ನನ್ನ ಕಷ್ಟಗಳೆಲ್ಲಾ ತೀರಿದಂತೆಯೇ..!” ಎಂದು ಹೇಳುತ್ತಾ ರಾಜ ಮತ್ತೆ ಆ ಗೌತಮ ಮಹರ್ಷಿಯ ಚರಣಗಳಲ್ಲಿ ತಲೆಯಿಟ್ಟನು.
ರಾಜನ ಮಾತುಗಳನ್ನು ಆಲಿಸಿದ ಆ ಮಹಾಮುನಿ, ದಯಾಪೂರಿತನಾಗಿ, ಅವನನ್ನು ಕರುಣೆಯಿಂದ ನೋಡುತ್ತಾ, “ರಾಜ, ಭಯಪಡಬೇಡ. ಮೃತ್ಯುಂಜಯನಾದ ಶಂಕರನು ನಿನಗೆ ಅಭಯವಿತ್ತು ರಕ್ಷಿಸುತ್ತಾನೆ. ನಿನ್ನ ಪಾಪಗಳನ್ನೆಲ್ಲ ತೊಲಗಿಸುವ ಕ್ಷೇತ್ರವೊಂದನ್ನು ಹೇಳುತ್ತೇನೆ. *ಗೋಕರ್ಣಕ್ಷೇತ್ರ* ಪವಿತ್ರವಾದದ್ದು. ಮಹಾಪಾಪಹರವಾದದ್ದು. ಗೋಕರ್ಣ ಸ್ಮರಣೆಯಿಂದಲೇ ಬ್ರಹ್ಮಹತ್ಯಾದಿ ಪಾಪಗಳು ನಶಿಸಿಹೋಗುತ್ತವೆ. ಅಲ್ಲಿ ಶಿವನು ಮೃತ್ಯುಂಜಯನಾಗಿ ಕೂತಿದ್ದಾನೆ. ಕೈಲಾಸಪರ್ವತದಂತೆ, ಸುಂದರಕಂದರನೂ, ಕರ್ಪೂರಗೌರನೂ ಆದ ಶಿವನ ವಾಸಸ್ಥಾನ ಗೋಕರ್ಣ. ಈ ಕ್ಷೇತ್ರ  ಬ್ರಹ್ಮ ಹತ್ಯಾದಿಗಳನ್ನು ದೂರ ಮಾಡಿದಕ್ಷೇತ್ರ... ಆಗ ರಾಜನು 
ಮಹಾಪಾಪದಿಂದ ಮುಕ್ತಿಗೊಂಡವರೊಬ್ಬರ ನಿದರ್ಶನವೊಂದನ್ನು ಹೇಳುವ ಕೃಪೆ ಮಾಡಿ.” ಎಂದು ಕೋರಿದನು.
ಅದಕ್ಕೆ ಗೌತಮಮುನಿಯು, “ಮಹೀಪತಿ.. ಸಾವಿರಾರು ಜನ ಮಹಾಪಾಪಿಗಳು ಆ ಕ್ಷೇತ್ರದಲ್ಲಿ ಮುಕ್ತರಾದದ್ದನ್ನು ನಾನು ಬಲ್ಲೆ. ಅದರಲ್ಲೊಂದನ್ನು ಹೇಳುತ್ತೇನೆ ಕೇಳು. 
ಒಂದುಸಲ ಮಾಘ ಕೃಷ್ಣ ಪಕ್ಷ ಶಿವರಾತ್ರಿಯ ದಿನ ನಾನು ಗೋಕರ್ಣ ಕ್ಷೇತ್ರದಲ್ಲಿದ್ದೆ. ಆಗ ಅಲ್ಲಿ ಅನೇಕ ಯಾತ್ರಿಕರು ಸೇರಿದ್ದರು. ಮಧ್ಯಾಹ್ನ ಸಮಯದಲ್ಲಿ ಒಂದು ಗಿಡದ ನೆರಳಿನಲ್ಲಿ ಕುಳಿತಿದ್ದೆ. ಅಲ್ಲಿಗೆ ರೋಗಪೀಡಿತಳಾದ ಚಂಡಾಲಿಯೊಬ್ಬಳು ಬರುತ್ತಿರುವ ಹಾಗೆ ಕಾಣಿಸಿತು. ಅವಳು ವೃದ್ಧೆ. ಬಾಡಿದ ಮುಖ, ಹಸಿದಿದ್ದಳು. ಮೈಯೆಲ್ಲಾ ವ್ರಣಗಳಾಗಿ, ಅದರಿಂದ ಕೀವು, ರಕ್ತ ಸೋರುತ್ತಿತ್ತು. ದುರ್ವಾಸನೆ ಬರುತ್ತಿದ್ದ ಅವುಗಳ ಮೇಲೆ ನೊಣಗಳು ತುಂಬಿ ಕೂತಿದ್ದವು. ಗಂಡಮಾಲೆ ರೋಗವೂ ಆಕೆಯ ದೇಹದಲ್ಲಿ ವ್ಯಾಪಿಸಿತ್ತು. ಹಲ್ಲುಗಳು ಬಿದ್ದುಹೋಗಿದ್ದವು. ಕಫ ಪೀಡಿತಳಾದ ಅವಳು ದಿಗಂಬರೆಯಾಗಿ ಮರಣದೆಶೆಯಲ್ಲಿದ್ದಳು. ಸೂರ್ಯಕಿರಣಗಳು ತಾಕಿದರೂ ಸಾಯುವವಳೇನೋ ಎಂಬಂತಹ ಸ್ಥಿತಿಯಲ್ಲಿದ್ದಳು. ಸರ್ವಾಯವಗಳೂ ಬಾಧಾಪೀಡಿತವಾಗಿರುವಂತೆ ಕಾಣುತ್ತಿದ್ದ ಆ ವಿಧವೆಗೆ ತಲೆಯಲ್ಲಿ ಕೂದಲೂ ಉದುರಿಹೋಗಿತ್ತು. ಹೆಜ್ಜೆಹೆಜ್ಜೆಗೂ ಒದ್ದಾಡುತ್ತಾ ಮರದ ನೆರಳಿಗೆ ಬಂದಳು. ನೋಡಲು ಅವಳು ಇನ್ನೇನು ಸಾಯುತ್ತಾಳೆ ಎಂಬ ಸ್ಥಿತಿಯಲ್ಲಿದ್ದಳು. ಮೆಲ್ಲಮೆಲ್ಲಗೆ ನಡೆಯುತ್ತಾ ಆ ಮರದ ನೆರಳಿಗೆ ಬಂದು ಅಲ್ಲಿ ಕುಸಿದು ಬಿದ್ದಳು. ಹಾಗೆ ಬಿದ್ದ ಅವಳು ನಾನು ನೋಡುತ್ತಿರುವಂತೆಯೇ ಪ್ರಾಣ ಬಿಟ್ಟಳು. ಅಷ್ಟರಲ್ಲಿಯೇ ಆಕಸ್ಮಿಕವೋ ಎಂಬಂತೆ ವಿಮಾನವೊಂದು ಸೂರ್ಯನಂತೆ ಬೆಳಗುತ್ತಾ ಬಂದು ನನ್ನ ಸಮೀಪದಲ್ಲೇ ಇಳಿಯಿತು. ಕೈಲಾಸದಿಂದ ಬಂದ ಆ ವಿಮಾನದಿಂದ ಶೂಲಖಟ್ವಾಂಗ ಧಾರಿಗಳಾದ ನಾಲ್ವರು ದೂತರು ಇಳಿದರು. ಅವರೆಲ್ಲರೂ ಶೈವರು. ಕಿರೀಟಧಾರಿಗಳು. ದಿವ್ಯರೂಪರು. ಆ ದೂತರನ್ನು ನೀವು ಏತಕ್ಕೆ ಬಂದಿದ್ದೀರಿ ಎಂದು ಕೇಳಿದೆ. ಅದಕ್ಕೆ ಅವರು ಈ ಚಂಡಾಲಿಯನ್ನು ಕೈಲಾಸಕ್ಕೆ ಕರೆದುಕೊಂಡು ಹೋಗಲು ಬಂದಿದ್ದೇವೆ ಎಂದು ಹೇಳಿದರು. ಸೂರ್ಯಪ್ರಕಾಶದಂತೆ ಬೆಳಗುತ್ತಿದ್ದ ಆ ದಿವ್ಯ ವಿಮಾನ ಆ ಸತ್ತುಬಿದ್ದಿದ್ದ ಚಂಡಾಲಿಯನ್ನು ಕೈಲಾಸಕ್ಕೆ ಕರೆದುಕೊಂಡುಹೋಗಲು ಬಂದಿರುವುದನ್ನು ಕಂಡು ನಾನು ಆಶ್ಚರ್ಯಚಕಿತನಾಗಿಹೋದೆ. ಮಹದಾಶ್ಚರ್ಯಗೊಂಡ ನಾನು, ’ಇಂತಹ ಚಂಡಾಲಿ ದಿವ್ಯವಿಮಾನಕ್ಕೆ ಅರ್ಹಳೇ? ಇವಳು ಹುಟ್ಟಿದಾಗಿನಿಂದಲೇ ಮಹಾಪಾಪಗಳನ್ನು ಸೇರಿಸಿಕೊಂಡು ಬಂದಿದ್ದಾಳೆ. ಅಂತಹ ಈ ಪಾಪರೂಪಿಣಿ ಕೈಲಾಸಕ್ಕೆ ಹೇಗೆ ಸೇರಬಲ್ಲಳು? ಪಶುಮಾಂಸವನ್ನು ಆಹಾರವಾಗಿ ತಿಂದು ಇವಳು ವೃದ್ಧೆಯಾದಳು. ಜೀವಹಿಂಸಾ ಪರಾಯಣೆಯಾಗಿ, ಕುಷ್ಠುರೋಗ ಪೀಡಿತಳಾಗಿ, ಪಾಪಿನಿಯಾದ ಈ ಚಂಡಾಲಿ ಕೈಲಾಸಕ್ಕೆ ಹೇಗೆ ಅರ್ಹಳಾದಳು? ಇವಳಿಗೆ ಶಿವಜ್ಞಾನವಿಲ್ಲ. ತಪಸ್ಸು ಎಂದರೇನು ಎಂದು ತಿಳಿಯದು. ದಯೆ ಸತ್ಯಗಳು ಎನ್ನುವುವು ಇವಳಲ್ಲಿ ಇಲ್ಲವೇ ಇಲ್ಲ. ಶಿವಪೂಜೆಯನ್ನು ಎಂದೂ ಮಾಡಲಿಲ್ಲ. ಪಂಚಾಕ್ಷರಿ ಜಪ ಮಾಡಿಲ್ಲ. ದಾನ ಮಾಡಲಿಲ್ಲ. ತೀರ್ಥಗಳ ವಿಷಯ ಏನೂ ತಿಳಿಯದು. ಪರ್ವದಿನಗಳಲ್ಲಿ ಸ್ನಾನಮಾಡಲಿಲ್ಲ. ಯಾವ ವ್ರತವನ್ನೂ ಮಾಡಲಿಲ್ಲ. ಇವಳ ಪಾಪಗಳಿಂದಾಗಿ ಇವಳ ಶರೀರವೆಲ್ಲ ವ್ರಣಗಳಾಗಿ ದುರ್ಗಂಧದಿಂದ ಕೂಡಿದೆ. ವ್ರಣಗಳು ಸೋರುತ್ತಿವೆ. ದುಶ್ಚರಿತೆಯಾದ ಈ ಚಂಡಾಲಿಯ ಮುಖದಲ್ಲಾಗಿರುವ ವ್ರಣಗಳಿಂದ ಇವಳ ಪಾಪಫಲವಾಗಿ ಹುಳುಗಳು ಬೀಳುತ್ತಿವೆ. ಇವಳಿಗೆ ಗಳತ್ಕುಷ್ಠ ಎನ್ನುವ ಮಹಾ ರೋಗ ಪ್ರಾಪ್ತಿಯಾಗಿದೆ. ಚರಾಚರಗಳಲ್ಲೇ ನಿಂದ್ಯವಾದ ಇಂತಹ ಪಾಪಿಯನ್ನು ಶಿವಾಲಯಕ್ಕೆ ಸೇರಿಸಲು ಬಂದಿದ್ದೀರೇಕೆ? ಅದಕ್ಕೆ ಕಾರಣವನ್ನು ತಿಳಿಸಿ' ಎಂದು ಆ ಶಿವದೂತರನ್ನು ಪ್ರಶ್ನಿಸಿದೆ.
ಅದಕ್ಕೆ ಆ ಶಿವದೂತರು ಹೇಳಿದರು. “ಈ ಚಂಡಾಲಿಯ ಪೂರ್ವಜನ್ಮ ವೃತ್ತಾಂತವನ್ನು ಹೇಳುತ್ತೇವೆ ಕೇಳಿ. ಇವಳು ಪೂರ್ವದಲ್ಲಿ ಬ್ರಾಹ್ಮಣ ವಂಶದಲ್ಲಿ ಜನಿಸಿದಳು. ಈ ಚಂದ್ರಮುಖಿಯ ಹೆಸರು ಸೌದಾಮಿನಿ. ಆ ಬಾಲಸುಂದರಿಯನ್ನು ಅವಳ ತಂದೆ ಅವಳಿಗೆ ಅನುರೂಪನಾದ ವರನಿಗಾಗಿ ಹುಡುಕಿ ಎಲ್ಲಿಯೂ ತಕ್ಕನಾದ ವರನು ದೊರಕದೇ ಇದ್ದುದರಿಂದ ಚಿಂತಾಪರನಾಗಿ, ವಿವಾಹಕಾಲ ಮೀರಿಹೋಗುವುದು ಎಂಬ ಕಾರಣಕ್ಕಾಗಿ, ಕೊನೆಗೆ ಇವಳನ್ನು ಅತಿಸಾಮಾನ್ಯನಾದ ಒಬ್ಬ ಬ್ರಾಹ್ಮಣನನ್ನು ಕರೆತಂದು ಅವನಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿಕೊಟ್ಟ. ವಿವಾಹವಾದ ನಂತರ ಇವಳು ತನ್ನ ಗಂಡನ ಮನೆಗೆ ಹೋದಳು. ಅನತಿಕಾಲದಲ್ಲೇ ಇವಳ ಗಂಡ ಸತ್ತುಹೋದನು. ದುರದೃಷ್ಟದಿಂದ ಆ ಸುಂದರಿಯಾದ ಬಾಲಕಿ ಬಾಲ್ಯದಲ್ಲೇ ವಿಧವೆಯಾಗಿ ತೌರುಮನೆಗೆ ಹಿಂತಿರುಗಿದಳು. ಪತಿವಿರಹದಿಂದ ಖಿನ್ನಳಾಗಿ, ಕಾಮ ಪೀಡಿತಳಾಗಿದ್ದ ಆ ಸುಂದರ ಯುವತಿಗೆ, ಯುವಕರನ್ನು ಕಂಡಾಗಲೆಲ್ಲಾ ಮನಸ್ಸು ಚಂಚಲವಾಗುತ್ತಿತ್ತು. ಅದನ್ನು ತಡೆಯಲಾರದೆ ಕೊನೆಗೆ ಇವಳು ಕಾಮಾರ್ತೆಯಾಗಿ ರಹಸ್ಯವಾಗಿ ಯುವಕನೊಬ್ಬನನ್ನು ಸೇರಿ ಜಾರಿಣಿಯಾದಳು. ಇಂತಹ ರಹಸ್ಯಗಳು ಬಹಳಕಾಲ ಗುಪ್ತವಾಗಿರಲು ಸಾಧ್ಯವಿಲ್ಲವಲ್ಲವೇ? ಕಾಲಕಳೆದಂತೆ ಇವಳ ಪಾಪ ಪ್ರಕಟಗೊಂಡಿತು. ವಯಸ್ಸಿನಲ್ಲಿದ್ದ ಸುಂದರ ವಿಧವೆ. ವಿಷಯಾನ್ವಿತವಾದ ಮನಸ್ಸಿನಿಂದ ಕೂಡಿ ಚಂಚಲೆಯಾಗಿ ಜಾರಿಣಿಯಾದಳು. ಹಾಗೆ ದುಷ್ಟಾಚಾರಿಯೂ, ವ್ಯಭಿಚಾರಿಣಿಯೂ ಆದ ಇವಳನ್ನು ತಂದೆ ತಾಯಿಗಳು ಮನೆಯಿಂದ ಹೊರಕ್ಕೆ ಹಾಕಿದರು. ಬಂಧು-ಭಾಂದವರಿಂದಲೂ ಬಹಿಷ್ಕರಿಸಲ್ಪಟ್ಟಳು. ದೂಷಿತಳಾದ ಇವಳನ್ನು ಮನೆಯಿಂದ ಹೊರಕ್ಕೆ ಹಾಕಿ ತಂದೆತಾಯಿಗಳು ತಕ್ಕ ಪ್ರಾಯಶ್ಚಿತ್ತವನ್ನು ಮಾಡಿಕೊಂಡು, ಇವಳ ಸಂಪರ್ಕವನ್ನು ಕಳೆದುಕೊಂಡು, ಇವಳಿಂದುಂಟಾದ ದೋಷದಿಂದ ಮುಕ್ತರಾದರು.
ಬಂಧು-ಬಾಂಧವರಿಂದ ಪರಿತ್ಯಕ್ತಳಾದ ಸೌದಾಮಿನಿ ಸ್ವತಂತ್ರಳಾಗಿ, ಆ ಊರಿನಲ್ಲೆ ಮನೆಮಾಡಿಕೊಂಡು ತನಗಿಷ್ಟಬಂದವರೊಡನೆ ಸುಖವನ್ನನುಭವಿಸುತ್ತಾ, ಜೀವಿಸತೊಡಗಿದಳು. ತನ್ನ ಕುಲಕ್ಕೇ ಶತ್ರುವಾದ ಇವಳು, ಒಬ್ಬ ಬಹುಸುಂದರನಾದ ವೈಶ್ಯನನ್ನು ಮೋಹಿಸಿ ಅವನೊಡನೆ ಗೃಹಿಣಿಯಂತೆ ವಾಸಮಾಡಲಾರಂಭಿಸಿದಳು. ಸ್ತ್ರೀಯರು ಕಾಮದಿಂದ, ಬ್ರಾಹ್ಮಣರು ಹೀನರ ಸೇವೆಯಿಂದ, ರಾಜರು ಬ್ರಾಹ್ಮಣರನ್ನು ದಂಡಿಸುವುದರಿಂದ, ಯತಿಗಳು ಭೋಗಸಂಗ್ರಹದಿಂದ ನಾಶವಾಗುತ್ತಾರೆಯಲ್ಲವೆ? ವೈಶ್ಯ ಯುವಕನೊಡನೆ ಕೂಡಿಯಾಡುತ್ತಿದ್ದ ಇವಳಿಗೆ ಮಕ್ಕಳೂ ಆದರು. ಮಾಂಸಾಹಾರಿಯಾಗಿ, ಮದ್ಯಪಾನಾಸಕ್ತಳಾಗಿ, ವೈಶ್ಯನ ಹೆಂಡತಿಯಾಗಿ ತನ್ನ ಆಯುಷ್ಯವನ್ನು ಕಳೆಯಬೇಕೆಂದುಕೊಂಡಿದ್ದ ಇವಳು, ಒಂದುದಿನ, ಹಸುವಿನ ಕರುವೊಂದನ್ನು ಮೇಕೆಯೆಂದುಕೊಂಡು ಸಾಯಿಸಿ ಅದರ ತಲೆಯನ್ನು ಮುಚ್ಚಿಟ್ಟು, ಮಿಕ್ಕ ಮಾಂಸವನ್ನು ತಿಂದಳು. ಮದ್ಯಪಾನ ಮತ್ತಳಾಗಿ ಅಂತಹ ಅಕಾರ್ಯವನ್ನು ಮಾಡಿ, ಸುಖವಾಗಿ ನಿದ್ರಿಸಿದಳು. ಮರುದಿನ ಬೆಳಗ್ಗೆದ್ದು, ತಾನು ರಾತ್ರಿ ಮಾಡಿದ್ದ ಅಕಾರ್ಯವನ್ನು ಅರಿತು, ಭ್ರಾಂತಳಾಗಿ, ಮನೆಯೊಳಕ್ಕೆ ಬಂದು ಮುಚ್ಚಿಟ್ಟಿದ್ದ ಕರುವಿನ ತಲೆಯನ್ನು ನೋಡಿ ಭಯಪಟ್ಟಳು. ’ಅಯ್ಯೋ..! ಅಜ್ಞಾನದಿಂದ, ದುರಾತ್ಮಳಾದ ನಾನು ಎಂತಹ ಪಾಪ ಮಾಡಿದೆ. ಇದು ನನ್ನ ಗಂಡನಿಗೆ ತಿಳಿದರೆ ಅವನು ನನ್ನ ಮೇಲೆ ಕೋಪಗೊಳ್ಳುತ್ತಾನೆ ಎಂಬ ಹೆದರಿಕೆಯಿಂದ, ಆ ಕರುವಿನ ಅಸ್ಥಿಮಾಂಸಗಳನ್ನೂ, ತಲೆಯನ್ನೂ ಹಳ್ಳದೊಳಕ್ಕೆ ಬಿಸುಟು, ಮನೆಗೆ ಬಂದು, ಗಂಡನಿಗೆ ನಿಜವನ್ನು ಮುಚ್ಚಿಟ್ಟು, ಕರುವನ್ನು ಹುಲಿ ತಿಂದುಹಾಕಿತು ಎಂದು ಸುಳ್ಳು ಹೇಳಿದಳು.
ಇಂತಹ ದುರ್ಬುದ್ಧಿಯುಳ್ಳ ಈ ಸೌದಾಮಿನಿ, ಇನ್ನೂ ಅನೇಕ ಪಾಪಗಳನ್ನು ಮಾಡಿ ಮರಣಿಸಿದಳು. ಸತ್ತಮೇಲೆ, ನರಕಕ್ಕೆ ಹೋಗಿ, ಅನೇಕ ದುಸ್ತರವಾದ ಯಾತನೆಗಳನ್ನನುಭವಿಸಿ, ಈ ಜನ್ಮದಲ್ಲಿ ಚಂಡಾಲಿಯಾಗಿ ಜನ್ಮಿಸಿದಳು. ನೋಡಿ ಪರಿಶೀಲಿಸದೆ ಗೋಹತ್ಯೆ ಮಾಡಿದ ಪಾಪದಿಂದ ಇವಳು ನೇತ್ರಹೀನಳಾದಳು. ಉಪಪತಿಯೊಡನೆ ಇದ್ದುದರಿಂದ ಗಳತ್ಕುಷ್ಠುರೋಗ ಪೀಡಿತಳಾದಳು. ಬಾಲ್ಯದಲ್ಲೇ ತಂದೆ-ತಾಯಿಗಳನ್ನು ಕಳೆದುಕೊಂಡು ಅನಾಥಳಾಗಿದ್ದ ಇವಳು, ಬೆಳೆದು ದೊಡ್ಡವಳಾಗುತ್ತಾ ಬಂದಂತೆಲ್ಲ ಇವಳ ವ್ರಣಗಳೂ ದೊಡ್ಡದಾದವು. ದೀನಳಾಗಿ, ಕುಷ್ಠುರೋಗ ಪೀಡಿತಳಾಗಿ, ದುರ್ಗಂಧಪೂರಿತಳಾಗಿದ್ದ ಇವಳನ್ನು ಇವಳ ಸಹೋದರರೂ ಕೈಬಿಟ್ಟರು. ದಿನವೂ ಯಾಚನೆ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರೂ, ಅದು ಸಾಕಾಗದೆ ಹಸಿವು ಬಾಯಾರಿಕೆಗಳಿಂದ ಒದ್ದಾಡುತ್ತಿದ್ದ, ರೋಗಪೀಡಿತಳಾದ ಇವಳು, ಬೆಳೆದು ವೃದ್ಧೆಯಾದಳು. ಹೀಗೆ ತನ್ನ ಪೂರ್ವದುಷ್ಕರ್ಮ ಫಲಗಳನ್ನು ಅನುಭವಿಸುತ್ತಾ, ಇವಳು ದರಿದ್ರಳಾಗಿ, ಉಡಲು ಸರಿಯಾದ ಬಟ್ಟೆಯೂ ಇಲ್ಲದೆ, ದಾರಿಯಲ್ಲಿ ಕಂಡಕಂಡವರನ್ನೆಲ್ಲಾ ಬೇಡುತ್ತಾ ತಿರುಗುತಿದ್ದಳು. ಆದರೂ ಆಕೆಯ ಹಸಿವು ತೀರಲಿಲ್ಲ. ವ್ಯಾಧಿಗ್ರಸ್ತವಾದ ಶರೀರವು, ಸೊರಗಿ, ಹಸಿವು ತಾಳಲಾರದೆ, ರೋಗವು ಅತಿಯಾಗಿ ಭಾದಿಸುತ್ತಿರಲು, ತನ್ನ ಕರ್ಮಗಳನ್ನು ನಿಂದಿಸಿಕೊಳ್ಳುತ್ತಾ ಕಾಲಕಳೆಯುತ್ತಿದ್ದಳು.
ಹೀಗಿರುತ್ತಿರಲು ಒಂದುಸಲ ಮಾಘಮಾಸ ಬಂತು. ಅವಳಿದ್ದ ಊರಿನ ಜನರೆಲ್ಲರು, ಆಬಾಲಸ್ತ್ರೀವೃದ್ಧರಾದಿಯಾಗಿ ಗೋಕರ್ಣಕ್ಕೆ ಹೊರಟಿದ್ದರು. ಶಿವರಾತ್ರಿಗೆ, ಶಿವದರ್ಶನಕ್ಕೆಂದು ನಾನಾ ಕಡೆಗಳಿಂದ ಅನೇಕ ಜನ ಸಮೂಹಗಳು ಸೇರಿ ಹೊರಟಿದ್ದರು. ಇವಳೂ ಅವರ ಜೊತೆಯಲ್ಲಿ ಹೊರಟಳು. ಆ ಜನರಲ್ಲಿ, ಕೆಲವರು ಆನೆಗಳ ಮೇಲೆ ಕುಳಿತು, ಕೆಲವರು ಕುದುರೆಗಳ ಮೇಲೆ, ಕೆಲವರು ರಥಗಳಲ್ಲಿ, ಕೆಲವರು ಪಾದಚಾರಿಗಳಾಗಿ, ಅಲಂಕಾರ ಭೂಷಿತರಾಗಿ, ಹೀಗೆ ಅನೇಕ ರೀತಿಗಳಲ್ಲಿ, ಸಂತೋಷ ಸಂಭ್ರಮಗಳಿಂದ ಎಲ್ಲರೂ ಮಹಾಬಲೇಶ್ವರನ ದರ್ಶನಕ್ಕಾಗಿ ಹೊರಟಿದ್ದರು. ಎಲ್ಲ ವರ್ಗದ ಜನರೂ, ತಮತಮಗೆ ತೋಚಿದಂತೆ ಶಿವಸ್ಮರಣೆ ಮಾಡುತ್ತಾ ಹೊರಟಿದ್ದರು. ಅವರೊಡನೆ ಹೊರಟ ಚಂಡಾಲಿಯೂ, ಶಿವನಾಮೋಚ್ಚರಣೆಯೆಂಬ ಪುಣ್ಯದಿಂದ ಗೋಕರ್ಣ ಕ್ಷೇತ್ರವನ್ನು ಸೇರುವಂತಾಯಿತು. ಗೋಕರ್ಣವನ್ನು ಸೇರಿ ಅಲ್ಲಿ ಭಿಕ್ಷೆ ಮಾಡುತ್ತಿದ್ದಳು. “ಪೂರ್ವಜನ್ಮದಲ್ಲಿ ಮಾಡಿದ ಪಾಪಗಳಿಂದ ಪೀಡಿಸಲ್ಪಡುತ್ತಿರುವ ಈ ಪಾಪಿಗೆ ಸ್ವಲ್ಪ ಅನ್ನವನ್ನು ನೀಡಿ. ರೋಗಪೀಡಿತಳಾಗಿ, ತಿಂಡಿ ಊಟಗಳಿಲ್ಲದೆ, ಬಟ್ಟೆಯೂ ಇಲ್ಲದೆ ಇರುವ ನನ್ನನ್ನು ಛಳಿ ಬಾಧಿಸುತ್ತಿದೆ. ಈ ಕುರುಡಿಯ ಹಸಿವನ್ನು ಹೋಗಲಾಡಿಸಿ. ಸಜ್ಜನರು ಧರ್ಮ ಮಾಡಿ. ಬಹಳ ದಿನಗಳಿಂದ ಸಹಿಸುತ್ತಿರುವ ಕ್ಷುಧ್ಭಾಧೆಯಿಂದ ನನ್ನನ್ನು ಮುಕ್ತಗೊಳಿಸಿ. ನಾನು ನನ್ನ ಹಿಂದಿನ ಜನ್ಮಗಳಲ್ಲಿ ಪುಣ್ಯ ಮಾಡಿಲ್ಲದಿರುವುದರಿಂದಲೇ ಇಷ್ಟು ಕಷ್ಟಪಡುತ್ತಿದ್ದೇನೆ. ಅಯ್ಯಾ ಸಜ್ಜನರೇ ದಯವಿಟ್ಟು ಧರ್ಮ ಮಾಡಿ” ಎಂದು ಅನೇಕ ರೀತಿಗಳಲ್ಲಿ, ದೀನಳಾಗಿ, ಬೇಡಿಕೊಳ್ಳುತ್ತಾ ಆ ಜನರ ಹಿಂದೆ ಓಡಾಡುತ್ತಿದ್ದಳು.
ಅಂದು ಶಿವರಾತ್ರಿಯಾದದ್ದರಿಂದ ಯಾರೂ ಅವಳಿಗೆ ಅನ್ನ ನೀಡಲಿಲ್ಲ. ಕೆಲವರು ನಗುತ್ತಾ, “ಇಂದು ಶಿವರಾತ್ರಿ, ಉಪವಾಸವಾದದ್ದರಿಂದ ಅನ್ನವಿಲ್ಲ” ಎಂದು ತಮ್ಮ ಕೈಯಲ್ಲಿದ್ದ ಬಿಲ್ವದಳಗಳನ್ನು ಅವಳ ಕೈಯಲ್ಲಿ ಹಾಕಿದರು. ಅವಳು ಅದನ್ನು ಮೂಸಿನೋಡಿ ಅದು ತಿನ್ನುವುದಲ್ಲ ಎಂಬುದನ್ನು ತಿಳಿದು ಕೋಪದಿಂದ ಬಿಸುಟಳು. ಹಾಗೆ ಅವಳು ಬಿಸಾಡಿದ ಬಿಲ್ವದಳ ಶಿವಲಿಂಗದ ತಲೆಯಮೇಲೆ ಬಿತ್ತು. ದೈವಯೋಗದಿಂದ ಅದು ಅವಳಿಗೆ ಶಿವಪೂಜೆಯ ಪುಣ್ಯವನ್ನು ತಂದಿತು. ಯಾರೂ ಅನ್ನ ಕೊಡಲಿಲ್ಲವಾಗಿ ಅವಳಿಗೆ ಉಪವಾಸವಾಯಿತು. ಅದರಿಂದ ಅವಳಿಗೆ ಉಪವಾಸ ಮಾಡಿದ ಪುಣ್ಯ ಲಭಿಸಿತು. ಹಸಿವಿನಿಂದಾಗಿ ಅವಳಿಗೆ ರಾತ್ರಿಯೆಲ್ಲಾ ನಿದ್ರೆ ಬರಲಿಲ್ಲ. ಅದರಿಂದ ಅವಳು ಜಾಗರಣೆ ಮಾಡಿದಂತಾಗಿ ಅವಳಿಗೆ ಜಾಗರಣೆಮಾಡಿದ ಪುಣ್ಯ ಲಭಿಸಿತು. ಆ ರೀತಿಯಲ್ಲಿ, ಅವಳಿಗೆ ಅರಿವಿಲ್ಲದೆಯೇ, ಅವಳ ವ್ರತ ಸಾಂಗವಾಗಿ ಮುಗಿದಂತಾಯಿತು. ಅವಳ ಪ್ರಯತ್ನವಿಲ್ಲದೆಯೇ ಅವಳಿಗೆ ವ್ರತ ಪುಣ್ಯವು ಲಭಿಸಿ, ಶಿವನು ಸಂತುಷ್ಟನಾಗಿ, ಅವಳಿಗೆ ಭವಾರ್ಣವ ತಾರಕನಾದನು. ಈ ವಿಧದಲ್ಲಿ, ರೋಗೋಪವಾಸಗಳಿಂದ ಶ್ರಾಂತಳಾಗುವ ಮಾರ್ಗವನ್ನರಿಯದ, ಹೆಜ್ಜೆ ಇಡಲೂ ಶಕ್ತಿಯಿಲ್ಲದ, ಈ ಚಂಡಾಲಿಗೆ ಮಹಾವ್ರತಫಲ ದೊರೆತು, ಪೂರ್ವ ಕರ್ಮಗಳಿಂದ ಮುಕ್ತಿ ದೊರೆತು, ಈ ಗಿಡದ ನೆರಳಿಗೆ ಬಂದು ಪ್ರಾಣ ಬಿಟ್ಟಳು. ಅದರಿಂದ ಶಿವನ ಆದೇಶದಂತೆ ನಾವು ಇಲ್ಲಿಗೆ ಬಂದೆವು. ಶಿವರಾತ್ರಿಯ ಬಿಲ್ವಾರ್ಚನೆ, ಉಪವಾಸ ಜಾಗರಣೆಗಳಿಂದ ದೊರೆತ ಪುಣ್ಯದಿಂದ ಇವಳ ಪಾಪಗಳೆಲ್ಲಾ ನಾಶವಾದವು. ನೂರು ಜನ್ಮಗಳಲ್ಲಿ ಸಂಪಾದಿಸಿದ್ದ ಪಾಪಗಳೆಲ್ಲಾ ಕ್ಷಯವಾಗಲು, ಇವಳು ಶಿವನಿಗೆ ಪ್ರೀತಿಪಾತ್ರಳಾದಳು” ಎಂದು ಹೇಳಿ ಆ ಶಿವದೂತರು ಸೌದಾಮಿನಿಯ ಮೇಲೆ ಅಮೃತವನ್ನು ಚುಮುಕಿಸಿದರು. ತಕ್ಷಣವೇ ಅವಳು ದಿವ್ಯದೇಹಧಾರಿಯಾಗಿ, ಅವರ ಹಿಂದೆ ವಿಮಾನದಲ್ಲಿ ಹೊರಟಳು.” ಎಂದು ಗೌತಮ ಮುನಿಯು ಕಥೆಯನ್ನು ಹೇಳಿ, ”ಹೇ ರಾಜ.., ಇದನ್ನು ನಾನು ಪ್ರತ್ಯಕ್ಷವಾಗಿ ಕಂಡಿದ್ದೇನೆ. ಗೋಕರ್ಣ ಮಾಹಾತ್ಮ್ಯೆ ಅಷ್ಟು ದೊಡ್ಡದು. ಲೋಕಪಾವನವಾದದ್ದು. ಜ್ಞಾನ ಹೀನಳಾದರೂ ಚಂಡಾಲಿಗೆ ಮುಕ್ತಿ ದೊರಕಿತು. ಅದರಿಂದ, ರಾಜ.. ನೀನು ಅಲ್ಲಿಗೆ ಹೋಗು. ಅಲ್ಲಿ ನೀನು ಶುದ್ಧನಾಗಿ, ಇಹಪರಗಳೆರಡರಲ್ಲೂ ಒಳ್ಳೆಯದನ್ನು ಪಡೆಯಬಲ್ಲೆ.” ಎಂದರು.
 ಗೋಕರ್ಣ ದರ್ಶನ ಮಾತ್ರದಿಂದಲೇ ಸಕಲ ಪಾತಕಗಳೂ ನಿವಾರಿಸಲ್ಪಡುತ್ತವೆ. ಒಂದುಸಲ ಗೋಕರ್ಣ ಕ್ಷೇತ್ರವನ್ನು ದರ್ಶಿಸಿದರೂ ಸಾಕು, ಸಹಸ್ರ ಬ್ರಹ್ಮಹತ್ಯಾಪಾಪಗಳು ನಶಿಸಿಹೋಗುತ್ತವೆ. ಗೋಕರ್ಣ ಸ್ಮರಣೆಯಿಂದಲೇ ಮನುಷ್ಯರು ಪುಣ್ಯಾತ್ಮರಾಗುತ್ತಾರೆ.
*ಇಂದ್ರೋಪೇಂದ್ರವಿರಂಚಿ ಪ್ರಭೃತಿಗಳು ಸಿದ್ಧಿಹೊಂದಿದ ಇತರ ದೇವತೆಗಳೂ, ಎಲ್ಲರೂ ಅಲ್ಲಿ ತಪಸ್ಸು ಮಾಡಿಯೇ ತಮ್ಮ ತಮ್ಮ ಮನೋರಥಗಳನ್ನು ಈಡೇರಿಸಿಕೊಂಡರು. ಗೋಕರ್ಣಕ್ಕೆ ಹೋಗಿ ಅಲ್ಲಿ ತಪಸ್ಸು ಮಾಡಿದ ಜ್ಞಾನಿಗಳಿಗೆ ಕ್ಷೇತ್ರ ಪ್ರಭಾವದಿಂದ ಅವರೆಣಿಸಿದ್ದಕ್ಕಿಂತ ಅತಿಹೆಚ್ಚಾದ ಫಲ ಲಭಿಸುತ್ತದೆ. ಅಲ್ಲಿ ನಿವಸಿಸಿದ ಮಾತ್ರಕ್ಕೇ ಬ್ರಹ್ಮವಿಷ್ಣುದೇವೇಂದ್ರಾದಿಗಳು ಸಿದ್ಧಿ ಪಡೆದರು.* 
ಅದಕ್ಕಿಂತ ಇನ್ನು ಹೆಚ್ಚು ಹೇಳಬೇಕಾದದ್ದೇನಿದೆ? ಗೋಕರ್ಣವೇ ಕೈಲಾಸವೆಂದೂ, ಮಹಾಬಲೇಶ್ವರನೇ ಸಾಕ್ಷಾತ್ಪರಮೇಶ್ವರನೆಂದೂ ತಿಳಿ. ಶ್ರೀ ಮಹಾವಿಷ್ಣುವಿನ ಆಜ್ಞೆಯಿಂದ ವಿಘ್ನೇಶ್ವರ ಅಲ್ಲಿ ಮಹಾಬಲೇಶ್ವರನನ್ನು ಸ್ಥಾಪಿಸಿದ. ಗೋಕರ್ಣ ಪುಣ್ಯಕ್ಷೇತ್ರದಲ್ಲಿ ಸಮಸ್ತ ದೇವತೆಗಳೂ, ಬ್ರಹ್ಮ, ವಿಷ್ಣು, ಇಂದ್ರ, ವಿಶ್ವೇದೇವತೆಗಳು, ಮರುದ್ಗಣಗಳು, ಸೂರ್ಯ, ಚಂದ್ರ, ಅಷ್ಟವಸುಗಳು ನೆಲಸಿದ್ದಾರೆ. ಅವರೆಲ್ಲರೂ ಪ್ರತಿದಿನವೂ ಭಕ್ತಿಯುಕ್ತರಾಗಿ, ಮಹಾಬಲೇಶ್ವರನ ಪೂಜೆ ಮಾಡುತ್ತಾರೆ. ಯಮ, ಅಗ್ನಿ, ಚಿತ್ರಗುಪ್ತ, ರುದ್ರ, ಪಿತೃಗಣಗಳು, ದಕ್ಷಿಣದ್ವಾರವನ್ನು ಆಶ್ರಯಿಸಿದ್ದಾರೆ. ವರುಣಮುಖ್ಯರಾದ ದೇವತೆಗಳು ಪಶ್ಚಿಮದ್ವಾರವನ್ನು ಆಶ್ರಯಿಸಿದ್ದಾರೆ. ಕುಬೇರ, ಭದ್ರಕಾಳಿ, ವಾಯು ಸಪ್ತಮಾತೃಕೆಯರು, ಉತ್ತರದ್ವಾರವನ್ನು ಆಶ್ರಯಿಸಿದ್ದಾರೆ. ಇವರೆಲ್ಲರೂ ಪ್ರತಿದಿನವೂ ಭಕ್ತಿಶ್ರದ್ಧೆಗಳಿಂದ ಕೂಡಿ, ಪ್ರೀತ್ಯಾದರಗಳಿಂದ ಆ ಮಹಾಬಲೇಶ್ವರನನ್ನು ಉಪಾಸನೆ ಮಾಡುತ್ತಾರೆ. ವಿಶ್ವಾವಸು, ಚಿತ್ರರಥ, ಚಿತ್ರಸೇನಾದಿ ಗಂಧರ್ವರು ತಮ್ಮ ಗಾನದಿಂದ ಆ ಶಂಕರನನ್ನು ಸೇವಿಸುತ್ತಾರೆ. ಕಶ್ಯಪ, ಅತ್ರಿ, ವಸಿಷ್ಠ, ಕಣ್ವಾದಿ ನಿರ್ಮಲ ಮುನಿಶ್ರೇಷ್ಠರೆಲ್ಲರೂ ಗೋಕರ್ಣ ಕ್ಷೇತ್ರವನ್ನಾಶ್ರಯಿಸಿ ತಪಸ್ಸು ಮಾಡಿ ಪರಮೇಶ್ವರನ ಆರಾಧನೆ ಮಾಡುತ್ತಾರೆ. ಊರ್ವಶಿ, ತಿಲೋತ್ತಮೆ, ರಂಭೆ, ಘೃತಾಚಿ, ಮೇನಕಾದಿ ಅಪ್ಸರಸೆಯರು ಮಹಾಬಲೇಶ್ವರನಿಗೆ, ತಮ್ಮ ನಾಟ್ಯದಿಂದ ಸೇವೆ ಮಾಡುತ್ತಾರೆ.
ಕೃತಯುಗದಲ್ಲಿ ವಿಶ್ವಾಮಿತ್ರ ಪ್ರಮುಖರಾದ ಮಹರ್ಷಿಗಳು, ಜಾಬಾಲಿ, ಜೈಮಿನಿ, ಭಾರದ್ವಾಜಾದಿ ಮುನಿಗಳು, ಸನಕಾದಿಗಳೇ ಮೊದಲಾದ ಬಾಲತಪಸ್ವಿಗಳು, ನಾರದಾದಿ ಮಹರ್ಷಿಗಳು, ಮರೀಚ್ಯಾದಿ ಬ್ರಹ್ಮಮಾನಸಪುತ್ರರು, ಉಪನಿಷದ್ವೇತ್ತರು, ಸಿದ್ಧರು, ಸಾಧ್ಯರು, ಸನ್ಯಾಸಿಗಳು, ಬ್ರಹ್ಮಚಾರಿಗಳು, ಅಜಿನಧಾರಿಗಳಾದ ನಿರ್ಗುಣೋಪಾಸಕರು, ಮುಂತಾದವರೆಲ್ಲರೂ ಗೋಕರ್ಣದಲ್ಲಿ ಶಂಭುವಿನ ಉಪಾಸನೆ ಮಾಡುತ್ತಾರೆ. ತ್ವಗಸ್ಥಿ ಮಾತ್ರವೇ ಉಳಿದ ಶರೀರಗಳಿಂದ ಕೂಡಿದ ತಾಪಸರೂ ಭಕ್ತಿಯಿಂದ ಅಲ್ಲಿ ಚಂದ್ರಮೌಳಿಯನ್ನು ಅರ್ಚನೆ ಮಾಡುತ್ತಾರೆ. ಗಂಧರ್ವರು, ಪಿತೃಗಳು, ಸಿದ್ಧರು, ಅಷ್ಟವಸುಗಳು, ವಿದ್ಯಾಧರರು, ಕಿನ್ನರರು, ಆಗಿಂದಾಗ್ಗೆ ಗೋಕರ್ಣಕ್ಕೆ ಶಿವ ದರ್ಶನಕ್ಕೆ ಬರುತ್ತಲೇ ಇರುತ್ತಾರೆ. ಗುಹ್ಯಕರು, ಕಿಂಪುರುಷರು, ಶೇಷನಾಗ ತಕ್ಷಕರು, ಭೂತ ಭೇತಾಳ ಪಿಶಾಚಗಳೂ ಕೂಡ ಈಶ್ವರನ ದರ್ಶನಕ್ಕೆಂದು ಗೋಕರ್ಣಕ್ಕೆ ಬರುತ್ತಿರುತ್ತಾರೆ. ಅಲಂಕಾರಯುಕ್ತರಾದ ದೇವ ದೇವಿಯರೂ ಸ್ವರ್ಗದಿಂದ ವಿಮಾನ ಆರೋಹಣರಾಗಿ ಶಿವದರ್ಶನಕಾತುರರಾಗಿ ಹಗಲು ಹೊತ್ತಿನಲ್ಲಿ ಬರುತ್ತಿರುತ್ತಾರೆ. ಕೆಲವರು ಶಿವನ ಸ್ತೋತ್ರ ಮಾಡುತ್ತಾರೆ. ಕೆಲವರು ಅವನನ್ನು ಕುರಿತು ದಾನಾದಿಗಳನ್ನು ಮಾಡುತ್ತಾರೆ. ಮತ್ತೆ ಕೆಲವರು ಅವನ ಪ್ರೀತಿಗಾಗಿ ಅವನನ್ನು ನಾಟ್ಯದಿಂದ ಆರಾಧಿಸುತ್ತಾರೆ. ಇನ್ನೂ ಕೆಲವರು ಶಿವನಿಗೆ ಪೂಜಾರ್ಚನೆಗಳನ್ನು ಮಾಡಿ ನಮಸ್ಕರಿಸುತ್ತಾರೆ.
ಹೇ ರಾಜ, ಪ್ರಾಣಿಗಳ ಮಾನಸಿಕ ವಾಸನೆಗಳೂ ಇಲ್ಲಿ ನೆರವೇರಿಸಲ್ಪಡುತ್ತವೆ. ಈ ಕ್ಷೇತ್ರ ಸದೃಶವಾದ ಕ್ಷೇತ್ರ ಮತ್ತೊಂದಿಲ್ಲ. ಅಗಸ್ತ್ಯ ಮುಖ್ಯರಾದ ಮಹರ್ಷಿಗಳು, ಕಂದರ್ಪ ಅಗ್ನಿ ಮೊದಲಾದ ದಿವ್ಯರು, ಪ್ರಿಯವ್ರತಾದಿಗಳಾದ ರಾಜರು, ಈ ಕ್ಷೇತ್ರದಲ್ಲಿ ವರಗಳನ್ನು ಪಡೆದರು. ಶಿಂಶುಮಾರ, ಭದ್ರಕಾಳಿಯರು ದಿನವೂ ಮೂರುಸಲ ಇಲ್ಲಿ ಪ್ರಾಣಲಿಂಗವನ್ನು ಅರ್ಚಿಸುತ್ತಾರೆ. ರಾವಣ ಕುಂಭಕರ್ಣರು, ರಾಕ್ಷಸಪ್ರಮುಖರನೇಕರು, ವಿಭೀಷಣನೂ ಸಹ ಇಲ್ಲಿ ಧೂರ್ಜಟಿಯನ್ನು ಪೂಜಿಸಿ, ವರಗಳನ್ನು ಪಡೆದರು. ಹೀಗೆ ಸಮಸ್ತ ದೇವಲೋಕ, ಸಿದ್ಧದಾನವ ಮಂಡಲಗಳು ಪರಮೇಶ್ವರನನ್ನು ಆರಾಧಿಸಿ ಕೃತಕೃತ್ಯರಾದರು. ಕೆಲವರು ತಮ್ಮ ತಮ್ಮ ಹೆಸರಿನಲ್ಲಿ ಇಲ್ಲಿ ಲಿಂಗಗಳನ್ನು ಪ್ರತಿಷ್ಠಾಪಿಸಿ, ಚತುರ್ವಿಧ ಪಲಪುರುಷಾರ್ಥಗಳನ್ನು ಪಡೆದರು. ಬ್ರಹ್ಮ, ವಿಷ್ಣು, ಕುಮಾರಸ್ವಾಮಿ, ವಿನಾಯಕ ಮೊದಲಾದವರು ಯಮ, ಕ್ಷೇತ್ರಪತಿ ದುರ್ಗಾದೇವಿ, ಶಕ್ತಿ ಕೂಡಾ ಇಲ್ಲಿ ತಮ್ಮ ತಮ್ಮ ಹೆಸರಿನಲ್ಲಿ ಲಿಂಗಗಳನ್ನು ಸ್ಥಾಪಿಸಿದರು.
ಗೋಕರ್ಣವು ಒಂದು ಬಹು ಉತ್ತಮವಾದ ಕ್ಷೇತ್ರ. ಇಲ್ಲಿ ಹೆಜ್ಜೆ ಹೆಜ್ಜೆಗೂ ಅಸಂಖ್ಯಾತವಾದ ಲಿಂಗಗಳಿವೆ. ಕೃತಯುಗದಲ್ಲಿ ಬಿಳಿಯ ಲಿಂಗ, ತ್ರೇತಾಯುಗದಲ್ಲಿ ಲೋಹಿತ ಲಿಂಗ, ದ್ವಾಪರದಲ್ಲಿ ಪೀತ ಲಿಂಗ, ಕಲಿಯುಗದಲ್ಲಿ ಕೃಷ್ಣವರ್ಣದ ಲಿಂಗ ಇಲ್ಲಿರುತ್ತದೆ. ಸಪ್ತಪಾತಾಲಗಳವರೆಗೂ ವ್ಯಾಪಿಸಿರುವ ಮಹೋನ್ನತ ಲಿಂಗವು ಕಲಿಯುಗದಲ್ಲಿ ಮೃದುವಾಗಿ ಸೂಕ್ಷ್ಮವಾಗಿರಬಹುದು.
ಪಶ್ಚಿಮ ಸಮುದ್ರ ತೀರದಲ್ಲಿ ಗೋಕರ್ಣ ಕ್ಷೇತ್ರವಿದೆ. ಅದು ಬ್ರಹ್ಮಹತ್ಯವೇ ಮುಂತಾದ ಪಾಪಗಳನ್ನು ಹೋಗಲಾಡಿಸುವಂತಹುದು. ಪರಸ್ತ್ರೀಗಮನದಂತಹ ದುರಾಚಾರಗಳಿಂದುಂಟಾದ ಮಹಾಪಾಪಗಳೂ ಕೂಡ ಆ ಕ್ಷೇತ್ರ ದರ್ಶನಮಾತ್ರದಿಂದಲೇ ನಾಶವಾಗುವುವು. ಗೋಕರ್ಣಲಿಂಗ ದರ್ಶನಮಾತ್ರದಿಂದಲೇ ಸರ್ವಕಾಮಗಳೂ ಸಿದ್ಧಿಯಾಗಿ, ಮಾನವ ಮೋಕ್ಷವನ್ನು ಪಡೆಯುತ್ತಾನೆ. ಹೇ ರಾಜ.. ಅಲ್ಲಿಯೇ ನೆಲೆಸಿ, ಪುಣ್ಯ ದಿನಗಳಲ್ಲಿ ಭಕ್ತಿಯಿಂದ ಆ ಲಿಂಗಕ್ಕೆ ಅರ್ಚನ-ಪೂಜಾದಿಗಳನ್ನು ಮಾಡಿದವನು ರುದ್ರಲೋಕವನ್ನು ಸೇರುವುದರಲ್ಲಿ ಸಂದೇಹವೇ ಇಲ್ಲ! ದೈವಯೋಗದಿಂದ ಗೋಕರ್ಣವನ್ನು ಸೇರಿ ಅಲ್ಲಿ ಮಹೇಶನನ್ನು ಶ್ರದ್ಧಾ ಭಕ್ತಿಗಳಿಂದ ಅರ್ಚಿಸುವ ನರನು ಬ್ರಹ್ಮಲೋಕವನ್ನು ಪಡೆಯುತ್ತಾನೆ. ಭಾನು, ಸೋಮ, ಬುಧವಾರಗಳಂದು, ಹುಣ್ಣಿಮೆ ಮೊದಲಾದ ಪರ್ವದಿನಗಳಂದು, ಈ ಕ್ಷೇತ್ರದಲ್ಲಿ ಸಮುದ್ರಸ್ನಾನಮಾಡಿ ದಾನಾದಿಗಳನ್ನು ಕೊಟ್ಟು, ಶಿವಪೂಜಾವ್ರತಹೋಮಜಪಾದಿಗಳನ್ನೂ, ತರ್ಪಣಾದಿಗಳನ್ನೂ ಸ್ವಲ್ಪವೇ ಮಾಡಿದರೂ ಅದರಿಂದ ಅನಂತಫಲ ಲಭಿಸುತ್ತದೆ. ಗ್ರಹಪೀಡೆಗಳ ಸಮಯದಲ್ಲಿ, ಸೂರ್ಯಸಂಕ್ರಮಣದಲ್ಲಿ, ಶಿವರಾತ್ರಿಯಂದು ಆ ಕ್ಷೇತ್ರದಲ್ಲಿ ಪೂಜಾದಿಗಳನ್ನು ಮಾಡುವವರಿಗೆ ಉತ್ತಮೋತ್ತಮವಾದ ಪುಣ್ಯ ಲಭ್ಯವಾಗುತ್ತದೆ. ಆ ಕ್ಷೇತ್ರ ಮಹಿಮೆಯನ್ನು ಯಾರು ತಾನೇ ವರ್ಣಿಸಬಲ್ಲರು? ಭಕ್ತವತ್ಸಲನಾದ ಶಿವನು ಬರಿಯ ಪುಷ್ಪಾರ್ಚನೆಯಿಂದಲೇ ಸಂತುಷ್ಟನಾಗುತ್ತಾನೆ. ಅನೇಕರು ಅಲ್ಲಿ ಅನೇಕ ರೀತಿಯ ಪೂಜೆಗಳನ್ನು ಮಾಡಿ ವರಗಳನ್ನು ಪಡೆದಿದ್ದಾರೆ.
ಮಾಘ ಬಹುಳ ಶಿವರಾತ್ರಿಯ ದಿನ ಅಲ್ಲಿ ಬಿಲ್ವಪತ್ರೆಯನ್ನು ಅರ್ಪಿಸಿದರೆ ತ್ರೈಲೋಕ್ಯದುರ್ಲಭವಾದ ಫಲ ಲಭಿಸುತ್ತದೆ. ಅಂತಹ ಸಾಟಿಯಿಲ್ಲದ ಕ್ಷೇತ್ರದರ್ಶನ ಮಾಡದವರು ಮಾಡುವುದು ಒಳಿತು. ಗೋಕರ್ಣಕ್ಷೇತ್ರ ಮಹಿಮೆ ಚತುರ್ವಿಧ ಪುರುಷಾರ್ಥಪ್ರದವು. ಗೋಕರ್ಣದಲ್ಲಿನ ಮುಖ್ಯ ತೀರ್ಥಗಳಲ್ಲಿ ಸ್ನಾನಮಾಡಿ, ಮುಕ್ತಿಯನ್ನು ನೀಡುವ ಮಹಾಬಲೇಶ್ವರ ಲಿಂಗವನ್ನು ಭಕ್ತಿಯಿಂದ ಅರ್ಚಿಸಿದ ನರನ ಪಾಪಕ್ಷಾಳನವಾಗುತ್ತದೆ” ಎಂದು ಗೋಕರ್ಣಮಾಹಾತ್ಮ್ಯೆಯನ್ನು ಗೌತಮ ಮುನಿ ವಿವರವಾಗಿ ತಿಳಿಸಿದರು. ಅದನ್ನು ಕೇಳಿ ರಾಜ ಮಿತ್ರಸಹ ಬಹು ಸಂತೋಷಗೊಂಡವನಾಗಿ, “ಹೇ ಮಹರ್ಷಿ.. ಗೋಕರ್ಣ ಮಹಾತ್ಮ್ಯೆಯನ್ನು ವಿಸ್ತಾರವಾಗಿ ತಿಳಿಸಿದ್ದೀರಿ. 
ಹೀಗೆ ಗೌತಮ ಮುನಿಯವರು ಹೇಳಲಾಗಿ ಆ ರಾಜನು ತಡಮಾಡದೆ ಗೋಕರ್ಣ ಕ್ಷೇತ್ರವನ್ನು ಸೇರಿ, ಅಲ್ಲಿ ಮಹಾಬಲೇಶ್ವರನ ಪೂಜಾರ್ಚನೆಗಳನ್ನು ಮಾಡಿ, ಪಾಪ ವಿಮುಕ್ತನಾದನು.
🍁
ಮಹಾಜ್ಞಾನಿಗಳು ಬರೆದಿದ್ದು, ಅನಾಮಿಕರಾದ ಅವರಿಗೆ ನಮಿಸುತ್ತಾ, ಬಂಧುಗಳು ನೀಡಿದ್ದನ್ನು ನಿಮಗೆ ನೀಡಿದೆ.

ಮಹಾಭಾರತದ ಪುರುಷಗ್ರಹ ಜಿಜ್ಞಾಸೆ

  ರಾಮಾಯಣದಲ್ಲಿ ಕೌತುಕಗಳು ಕಡಿಮೆ ಅನ್ನಿಸುತ್ತದೆ. ಆದರೆ ಮಹಾಭಾರತ ಹಾಗಲ್ಲ, ಅದೊಂದು ಖನಿಜಗಳ ಗಣಿ. ಇಲ್ಲಿ ಅಧ್ಯಯನಶೀಲರಿಗೆ ಬೇಕಷ್ಟು ಸರಕುಗಳು ಸಿಗುತ್ತವೆ. ಮಹಾಬಾರತವನ್ನು ಒಮ್ಮೆ ಓದಿದರೆ ಒಂದು ಹೊಳಹು ಕಂಡರೆ, ಇನ್ನೊಮ್ಮೆ ಓದುವಾಗ ಅದರ ಆಯಾಮವೇ ಬೇರೆಯಾಗುತ್ತದೆ. ಇನ್ನು ಮಹಾಭಾರತದಲ್ಲಿರುವ ಸ್ಥಳಗಳನ್ನು ಸಂದರ್ಶಿಸಿದರೂ ಕೆಲವೊಮ್ಮೆ ಕೆಲವೊಂದು ಸನ್ನಿವೇಶಗಳು ಆಶ್ಚರ್ಯ ಹುಟ್ಟಿಸುತ್ತವೆ.  ಅವೆಲ್ಲ ಏನೇ ಇರಲಿ, ಇದೊಂದು ಮಹಾಬಾರತದ ಜಿಜ್ಞಾಸೆ ಹೀಗೆ ಆರಂಭವಾಗುತ್ತದೆ. ಭೀಷ್ಮ ಪರ್ವದಲ್ಲಿನ ಒಂದು ಜಿಜ್ಞಾಸೆ ಈ ರೀತಿಯಾಗಿದೆ. ಇದು ಜ್ಯೋತಿಷ್ಯ ಅಥವಾ ಖಗೋಲಕ್ಕೆ ಸಂಬಂಧಿಸಿದ್ದು. 

ಧ್ರುವಂ ಪ್ರಜ್ವಲಿತೋ ಘೋರಮಪಸವ್ಯಂ ಪ್ರವರ್ತತೇ | 
ರೋಹಿಣೀಂ ಪೀಡಯತ್ಯೇವಮುಭೌ ಚ ಶಶಿಭಾಸ್ಕರೌ |
ಚಿತ್ರಾಸ್ವಾತ್ಯನ್ತರೇ ಚೈವ ವಿಷ್ಠಿತಃ ಪುರುಷಗ್ರಹಃ || ೧೭ || 
ಚಿತ್ರಾ ಮತ್ತು ಸ್ವಾತೀನಕ್ಷತ್ರಗಳ ಮಧ್ಯದಲ್ಲಿರುವ ಪುರುಷಗ್ರಹ ರೋಹಿಣೀನಕ್ಷತ್ರವನ್ನೂ ಚಂದ್ರ ಮತ್ತು ಸೂರ್ಯರನ್ನೂ ಪೀಡಿಸುತ್ತಿದೆ. ಭಯಂಕರವಾಗಿ, ಘೋರವಾಗಿ ಪ್ರಜ್ವಲಿಸುತ್ತಾ ಧ್ರುವನಕ್ಷತ್ರವನ್ನು ಎಡಭಾಗಕ್ಕೆ ಬಿಟ್ಟು ಮುನ್ನಡೆಯುತ್ತಿದೆ. ಇಲ್ಲಿ ಯಾವುದೇ ಗ್ರಹದ ಹೆಸರಿಲ್ಲ. ಪುರುಷ ಗ್ರಹ ಎಂದು ಮಾತ್ರ ಹೇಳಲಾಗಿದೆ. ಭಾಷ್ಯಕಾರರು ಈ ಗ್ರಹವನ್ನು ‘ರಾಹು’ ಎಂದು ವ್ಯಾಖ್ಯಾನಿಸಿದ್ದಾರೆ. ಅಂಅದರೆ ಶಶಿ ಭಾಸ್ಕರೌ ಎಂದಿರುವುದು ಸೂರ್ಯನನ್ನು ಪೀಡಿಸುವ ರಾಹು ಎಂದೂ ಇರಬಹುದು. ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸೂರ್ಯ, ಗುರು ಮತ್ತು ಅಂಗಾರಕ ಈ ಮೂರು ಗ್ರಹಗಳು ಪುರುಷಗ್ರಹಗಳು ಎನ್ನುತ್ತವೆ. ಶುಕ್ರ, ಚಂದ್ರ, ರಾಹು ಇವುಗಳು ಸ್ತ್ರೀಗ್ರಹಗಳು. ಶನಿ, ಬುಧ, ಕೇತು ಇವುಗಳು ನಪುಂಸಕಗ್ರಹಗಳು. 

ಶ್ವೇತೋ ಗ್ರಹಸ್ತಥಾ ಚಿತ್ರಾಂ ಸಮತಿಕ್ರಮ್ಯ ತಿಷ್ಠತಿ | 
ಅಭಾವಂ ಹಿ ವಿಶೇಷೇಣ ಕುರೂಣಾಂ ತತ್ರ ಪಶ್ಯತಿ || ೧೨ || ಎನ್ನುವ ಈ ಶ್ಲೋಕದಲ್ಲಿ ಚಿತ್ರಾ ಮತ್ತು ಸ್ವಾತೀನಕ್ಷತ್ರಗಳ ನಡುವೆ ಶ್ವೇತಗ್ರಹವಿದೆಯೆಂದು ಹೇಳಿದೆ. ಶ್ವೇತಗ್ರಹ ಯಾವುದಿರಬಹುದು ?. ಆದುದರಿಂದ ಪುರುಷಗ್ರಹವೆಂದರೆ ಇಂತಹುದೇ ಗ್ರಹವೆಂದು ನಿರ್ಣಯಿಸುವುದು ಕಷ್ಟ. ಇನ್ನು ಕೆಲವು ಭಾಷ್ಯ ಗ್ರಂಥಗಳಲ್ಲಿ ಪುರುಷ ಗ್ರಹ ಎಂದು ಪಾಠಾಂತರ ಸಿಗುತ್ತದೆ. ಇದು ಕ್ರೂರಗ್ರಹ ಎನ್ನುವ ಅರ್ಥವೂ ಧ್ವನಿಸುತ್ತದೆ. ಇನ್ನೊಂದು ಅಭಿಪ್ರಾಯ ನೋಡಿದರೆ ಪುರುಷ ಗ್ರಹ ಎಂದಿರುವುದು ಶುಕ್ರನಿಗೆ ಹೇಳಿರಬಹುದೇನೋ. ಏಕೆಂದರೆ ಶುಕ್ರನೂ ಸಹ ಬಿಳಿ, ಸಹಜವಾಗಿ ಶುಕ್ರ ಅಸುರ ಗುರು, ಅದಲ್ಲದೇ ಈತ ರವಿ ಮತ್ತು ಚಂದ್ರರಿಗೂ ವೈರಿ. ಇಷ್ಟಲ್ಲದೇ ಚಿತ್ರಾ ಮೂರನೆಯ, ನಾಲ್ಕನೇ ಪಾದ, ಸ್ವಾತೀ ನಕ್ಷತ್ರ ಬರುವುದು ಸಹ ಶುಕ್ರನ ಮನೆಯಾದ ತುಲಾ ರಾಶಿಯಲ್ಲಿ. ರೋಹಿಣಿಯೂ ಬರುವುದು ಶುಕ್ರನ ಅಧೀನದ ವೃಷಭದಲ್ಲೇ.
ಶುಕ್ರ, ಚಂದ್ರ, ರಾಹು ಇವರೆಲ್ಲರೂ ಆ ಸ್ತ್ರೀಯರ ಗುಣಗಳ ಲಕ್ಷಣಗಳನ್ನು ಪಡೆದುಕೊಂಡಿದ್ದಾರೆಯೇ ವಿನಃ ಅವರೇ ಸ್ತ್ರೀಯರಲ್ಲ, ಚಂದ್ರನಿಗೆ ೨೭ ಮಡದಿಯರು, ರೋಹಿಣಿ ಬಹಳ ಇಷ್ಟದವಳು ಎನ್ನಲಾಗುತ್ತದೆ. ಗುರುವಿನ ಪತ್ನಿ ತಾರಾ, ಬುಧನ ಜನನ ವೃತ್ತಾಂತ ಗಮನಿಸಿದರೂ ಚಂದ್ರ ಪುರುಷನೇ, ಶುಕ್ರನಂತೂ ಅಸುರ ಗುರು, ಹಾಗಾಗಿ ಆತನೂ ಪುರುಷನೇ, ನವಗ್ರಹರಿಗೆಲ್ಲ ಪತ್ನಿಯರಿದ್ದಾರೆ. ಪತಿಯರು ಯಾರೂ ಇಲ್ಲ. ಆದರೆ ಇದೇ ಗ್ರಹವೆಂದು ಇದಮಿತ್ಥಂ ಹೇಳಲು ಸಾಧ್ಯವಾಗುವುದಿಲ್ಲ. ಇದೊಂದು ಒಗಟಾಗಿಯೇ ಪರಿಣಮಿಸುತ್ತದೆ.

#ಯಾವುದು_ಪುರುಷಗ್ರಹ
 ಮೂಲ ಶ್ರೀ ಸದ್ಯೋಜಾತರು..

May 24, 2021

ಹನುಮಾನ್ ಚಾಲೀಸ' ಇದನ್ನು ರಚಿಸಿದವರು ಯಾರು? ರಚಿಸಲು ಸಂದರ್ಭ ಏನಿತ್ತು?

ಜಯಹನುಮಾನ್ ಜ್ಞಾನಗುಣಸಾಗರ್ ಎಂದು ಪ್ರಾರಂಭವಾಗುವ  'ಹನುಮಾನ್ ಚಾಲೀಸ' ವನ್ನು ಬಹಳಷ್ಟು ಮಂದಿ ಕೇಳಿಯೇ ಇರುತ್ತೇವೆ. ಅದನ್ನು ರಚಿಸಿದವರು ಯಾರು, ರಚಿಸಲು ಸಂದರ್ಭ ಏನಿತ್ತು, ಇದರ ಬಗ್ಗೆ ಸ್ವಾರಸ್ಯಕರ 'ಕಥೆ' ಯೊಂದಿದೆ. 

ವಾರಾಣಸಿಯಲ್ಲಿ ವಾಸ ಮಾಡುತ್ತಿದ್ದ ಸಂತ ತುಲಸೀದಾಸರು ರಾಮನಾಮ ಸಂಕೀರ್ತನದಲ್ಲಿ ನಿರತರಾಗಿ ಬ್ರಹ್ಮಾನಂದವನ್ನು ಅನುಭವಿಸುತ್ತಿದ್ದರು.
ಅವರ ಮಹಿಮೆಯನ್ನರಿತ ನೂರಾರು ಜನಗಳು ಅವರ ಆಶೀರ್ವಾದಕ್ಕಾಗಿ, ಅವರ ಹತ್ತಿರ ತಮ್ಮ ಸಂಕಷ್ಟ ಗಳನ್ನು ಹೇಳಿಕೊಂಡು ಪರಿಹಾರ ಪಡೆಯುವುದಕ್ಕಾಗಿ ನಿತ್ಯವೂ ನೆರೆಯುತ್ತಿದ್ದರು. ರಾಮನಾಮ ಉಪಾಸನೆಯಲ್ಲಿ ಅವರೆಲ್ಲರನ್ನೂ ತೊಡಗಿಸುತ್ತಿದ್ದರು 
ಶ್ರೀ ತುಲಸೀದಾಸರು. ಇವರ ಪ್ರಭಾವ, ಪವಾಡಗಳ ಮಹಿಮೆಗಳಿಂದಾಗಿ ಅನ್ಯಮತಗಳ ಜನರೂ ಇವರ ಬಳಿ ಬರುತ್ತಿದ್ದರು, ಹಾಗೂ ರಾಮನಾಮ ಜಪದಲ್ಲಿ ಭಾಗಿಯಾಗುತ್ತಿದ್ದರು.
       ಇದು ಅನ್ಯಮತದ ಗುರುಗಳಿಗೆ ಸಹನೆಯಾಗದ ವಿಷಯವಾಯಿತು. 'ಈ ತುಲಸೀದಾಸ ಏನೋ ಮೋಡಿ ಮಾಡಿ ನಮ್ಮ ಮತದವರನ್ನು ತನ್ನ ಕಡೆಗೆ ಸೆಳೆದುಕೊಂಡು ತಮ್ಮ ಮತಕ್ಕೆ ಸೇರಿಸಿಕೊಳ್ಳಲು ಹುನ್ನಾರ ನಡೆಸುತ್ತಿದ್ದಾನೆ' ಎಂದು ಡಿಲ್ಲಿ ಬಾದಶಾಹನವರೆಗೆ ದೂರು ತೆಗೆದುಕೊಂಡು ಹೋದರು.
      ಈ ಮಧ್ಯೆ ವಾರಾಣಸಿಯಲ್ಲಿನ ಸದಾಚಾರವಂತನಾದ ಗೃಹಸ್ಥನೊಬ್ಬ ತನ್ನ ಏಕಮಾತ್ರ ಪುತ್ರನ ವಿವಾಹವನ್ನು ಒಂದು ಉತ್ತಮ ಕನ್ಯೆಯೊಂದಿಗೆ ನೆರವೇರಿಸಿದ. ಮಗ ಸೊಸೆ ಆನಂದದಿಂದ ಸಂಸಾರ ನಡೆಸುತ್ತಿದ್ದರು. ಆದರೆ ವಿಧಿಯಾಟ ಬೇರೆಯೇ ಇತ್ತು. ಸ್ವಲ್ಪ ಕಾಲದಲ್ಲೇ ಮಗ ಹಟಾತ್ತನೆ ತೀರಿಕೊಂಡ. ಆ ಚಿಕ್ಕ ವಯಸ್ಸಿನ ಹೆಂಡತಿಯ ಶೋಕ ಮುಗಿಲು ಮುಟ್ಟಿತ್ತು. ಗಂಡನ ಶವದ ಮೇಲೆ ಬಿದ್ದು ಬಿದ್ದು ರೋದಿಸುತ್ತಿದ್ದಳು. ಏನು ರೋದಿಸಿದರೆ ಏನು, ಹೋದ ಜೀವ ಪುನಃ ಬಂದೀತೇ ಎಂದು ಅವಳಿಂದ ಬಿಡಿಸಿಕೊಂಡು ಶವಯಾತ್ರೆಗೆ ಸಿದ್ಧ ಮಾಡಿಕೊಂಡರು ಬಂಧುಗಳು. ಶವಯಾತ್ರೆ ಹೊರಟಿತು. ಅವಳನ್ನು, ನೆರೆದಿದ್ದ ಸ್ತ್ರೀಯರು ಹಿಡಿದುಕೊಂಡಿದ್ದರೂ ಕೊಸರಿಕೊಂಡು ತಾನೂ ಶವದ ಹಿಂದೆ ಓಡಿದಳು.
ಶವಯಾತ್ರೆ ತುಲಸೀದಾಸರ ಆಶ್ರಮದ ಹತ್ತಿರ ಬಂದಾಗ ಅವಳು ನೇರವಾಗಿ ಆಶ್ರಮದೊಳಗೆ ಹೋಗಿ ಧ್ಯಾನ ಮಗ್ನರಾಗಿದ್ದ ತುಲಸೀದಾಸರ ಚರಣಗಳನ್ನು ಗಟ್ಟಿಯಾಗಿ ಹಿಡಿದು ತನ್ನ ಪತಿಯನ್ನು ಹೇಗಾದರೂ ಬದುಕಿಸಿ ಕೊಡಬೇಕೆಂದು ಅಂಗಲಾಚಿ ಬೇಡಿದಳು.
ತುಲಸೀದಾಸರು 'ದೀರ್ಘ ಸುಮಂಗಲೀ ಭವ' ಎಂದುಬಿಟ್ಟರು ಕೂಡಾ.
ಅವಳು ಮತ್ತೂ ರೋದಿಸುತ್ತಾ ' ಇನ್ನೆಲ್ಲಿಯ ಸುಮಂಗಲಿ ಸ್ವಾಮೀಜೀ, ನನ್ನ ಪತಿಯ ಶವಯಾತ್ರೆಯೇ ನಿಮ್ಮ ಆಶ್ರಮದ ಮುಂದೆ ಹೋಗುತ್ತಿದೆ. ಹೇಗಾದರೂ ಮಾಡಿ ನನ್ನ ಪತಿಯನ್ನು ಬದುಕಿಸಿಕೊಟ್ಟು ನಿಮ್ಮ ಆಶೀರ್ವಾದ ವನ್ನು ನಿಜಮಾಡಿ ಸ್ವಾಮೀಜೀ' ಎಂದು ಭೋರಿಟ್ಟಳು.
'ಅಳಬೇಡ ತಾಯೀ, ನನ್ನ ಬಾಯಿಂದ ಶ್ರೀ ರಾಮಚಂದ್ರ ಮಹಾಪ್ರಭುವೇ ಹಾಗೆ ನುಡಿಸಿದ್ದಾನೆ. ಆ ಮಹಾಮಹಿಮನ ವಾಕ್ಕು ವ್ಯರ್ಥವಾಗಲಾರದು. ನಡೆ, ನೋಡೋಣ, ನಿನ್ನ ಪತಿಯನ್ನು' ಎಂದು ನುಡಿದು ಎದ್ದು ಹೊರಟರು. ಯಾವುದೋ ಕಾರಣಕ್ಕೆ ಶವಯಾತ್ರೆ ಅಲ್ಲಿ ನಿಂತಿತ್ತು. ಶವವನ್ನು ಇಳಿಸಿದ್ದರು. ತುಲಸೀದಾಸರು ಶವವನ್ನೊಮ್ಮೆ ದೃಷ್ಟಿಸಿ ನೋಡಿ, ರಾಮನಾಮ ಜಪಿಸಿ, ತಮ್ಮ ಕಮಂಡಲದಿಂದ ಜಲಪ್ರೋಕ್ಷಣೆ ಮಾಡಿದರು.
ಆಶ್ಚರ್ಯವೆಂಬಂತೆ ಶವದಲ್ಲಿ ಮೆಲ್ಲನೆ ಚಲನೆ ಮೂಡಿ ಚೈತನ್ಯ ಬಂದಿತು!! ಅದನ್ನು ಪ್ರತ್ಯಕ್ಷ ನೋಡುತ್ತಾ ನಿಂತಿದ್ದ ಜನಸ್ತೋಮ ಸ್ವಾಮೀಜಿ ಯವರಿಗೂ, 
ಶ್ರೀ ರಾಮಚಂದ್ರನಿಗೂ ಜೈ ಜೈ ಕಾರ ಘೋಷಣೆ ಮಾಡುತ್ತಾ ಆನಂದದಿಂದ ವಾಪಸ್ಸಾದರು.

ಈ ಪವಾಡದಂತಹ ಘಟನೆಯಿಂದಾಗಿ ತುಲಸೀದಾಸರ ಮಹಿಮೆ ಇನ್ನೂ ಹೆಚ್ಚು ಹೆಚ್ಚು ಹರಡಲಾರಂಭಿಸಿತು. ಜನಗಳಲ್ಲಿ ಶ್ರೀ ರಾಮನ ಮೇಲೆ ಭಕ್ತಿ ಹೆಚ್ಚು ಹೆಚ್ಚು ಬೆಳೆಯಲು ಅನುವಾಯಿತು.
       ಈಗಲಂತೂ ಪರಮತಸ್ಥರ ಅಸಹನೆ ಎಲ್ಲೆ ಮೀರಿತು. ಅವರೆಲ್ಲಾ ಸೇರಿ ನೇರವಾಗಿ ಡಿಲ್ಲಿ ಬಾದಶಾಹನಲ್ಲಿಗೇ ಹೋಗಿ ಈ ತುಲಸೀದಾಸ ತನ್ನ ಪವಾಡಗಳಿಂದ ನಮ್ಮ ಮತದವರನ್ನು ಮೋಸಗೊಳಿಸುತ್ತಿದ್ದಾನೆ, ಎಂದು ಫಿ಼ರ್ಯಾದು ಕೊಟ್ಟರು.
     ಬಾದಶಹಾ ವಿಚಾರಣೆ ಮಾಡುತ್ತೇನೆಂದು ಹೇಳಿ ತುಲಸೀದಾಸರನ್ನು ತನ್ನ ದರ್ಬಾರ್ ಗೆ ಕರೆಸಿ 'ತುಲಸೀದಾಸರೇ, ನೀವು ನಿಮ್ಮ ರಾಮ್ ನಾಮ್ ಎಲ್ಲಕ್ಕಿಂತ ಮಿಗಿಲು ಎಂದು ಪ್ರಚಾರ ಮಾಡುತ್ತಿದ್ದೀರಂತೆ, ಹೌದೇ?' ಎಂದು ಪ್ರಶ್ನಿಸಿದ.

ತುಲಸೀದಾಸರು ಸ್ವಲ್ಪವೂ ಅಂಜದೇ, ಅಳುಕದೇ 'ಹೌದು ಪ್ರಭೂ! ಸೃಷ್ಟಿಯಲ್ಲಿ ಸಕಲರಿಗೂ ಆಧಾರವಾಗಿರುವುದು ಶ್ರೀ ರಾಮನಾಮವೇ ಹೊರತು ಬೇರಾವುದೂ ಅಲ್ಲ' ಎಂದರು.

ಬಾದಶಹಾ: ಓಹೋ ಹಾಗೇನು? ನೀವು ನಿಮ್ಮ ರಾಮ್ ನಾಮ್ ಶಕ್ತಿಯಿಂದ ಏನು ಬೇಕಾದರೂ ಸಾಧಿಸಬಹುದು ಎನ್ನುತ್ತಿದ್ದೀರಂತೆ?

ತುಲಸೀದಾಸರು:ಸತ್ಯಸ್ಯ ಸತ್ಯ! ಶ್ರೀ ರಾಮನ ನಾಮಸ್ಮರಣೆಯಿಂದ ಸಾಧಿಸಲಾಗದ್ದು ಏನಿದೆ?'

ಬಾದಶಹಾ: ಮರಣವನ್ನು ಸಹ ಜಯಿಸಬಹುದು ಎಂದು ಹೇಳುತ್ತಿದ್ದೀರಂತೆ?

ತುಲಸೀದಾಸರು: ಹೌದು ಪ್ರಭುಗಳೇ, ರಾಮನಾಮಕ್ಕೆ ಯಾವುದೂ ಅಸಾಧ್ಯವಲ್ಲ.

ಬಾದಶಹಾ: ಹಾಗೋ, ಹಾಗಾದರೆ ನಾವು ಇಲ್ಲಿಗೆ ಒಂದು ಶವವನ್ನು ತರಿಸುತ್ತೇವೆ. ಅದಕ್ಕೆ ನೀವು ನಿಮ್ಮ ರಾಮ್ ನಾಮ್ ಶಕ್ತಿಯಿಂದ ಮತ್ತೆ ಜೀವ ಬರಿಸಿ. ಆಗ ನಿಮ್ಮ ರಾಮ್ ನಾಮ್ ಶಕ್ತಿಯನ್ನು ನಂಬುತ್ತೇವೆ.

ತುಲಸೀದಾಸರು: ಪ್ರಭುಗಳು ಕ್ಷಮಿಸಬೇಕು. ಜನನ ಮರಣಗಳು ಆ ಜಗತ್ಪತಿಯ ಆಜ್ಞೆಯಂತೆ ನಡೆಯುತ್ತವೆಯೇ ಹೊರತು ನಾವು ಬಯಸಿದಂತೆ ಅಲ್ಲ.

ಬಾದಶಹಾ: ಆಹಾಹಾ, ನೋಡಿದಿರಾ ತುಲಸೀದಾಸ್ ಅವರೇ. ನಿಮ್ಮ ಮಾತನ್ನು ನೀವೇ ನಿಲ್ಲಿಸಿ ಕೊಳ್ಳಲಾಗದೇ, ನೀವು ಪ್ರಚಾರ ಮಾಡುತ್ತಿರುವ ಸುಳ್ಳನ್ನು ಪ್ರತ್ಯಕ್ಷವಾಗಿ ಅಲ್ಲಗಳೆಯಲಾರದೇ, ಹೀಗೆಲ್ಲಾ ಹೇಳಿ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೀರಿ.
ನೀವು ಹೇಳುತ್ತಿರುವುದೆಲ್ಲಾ ಸುಳ್ಳು ಎಂದು ಎಲ್ಲರೆದುರು ಒಪ್ಪಿಕೊಳ್ಳಿ. ಇಲ್ಲವೇ ಶವಕ್ಕೆ ಜೀವ ಬರಿಸಿ ನಿಮ್ಮ ಮಾತು ಉಳಿಸಿಕೊಳ್ಳಿ. ಆಗ ನಿಮ್ಮನ್ನು ಹೋಗಲು ಬಿಡುತ್ತೇವೆ.

ಆಗ ತುಲಸೀದಾಸರು "ಶ್ರೀ ರಾಮಾ, ಇಂತಹ ವಿಪತ್ಕರ ಪರಿಸ್ಥಿತಿಯನ್ನು ನೀನೇ ಸೃಷ್ಟಿಸಿದ್ದೀಯೆ. ಈಗ ನೀನೇ ಅದನ್ನು ಪರಿಹರಿಸಬೇಕು ತಂದೇ" ಎಂದು ಮನಸ್ಸಿನಲ್ಲೇ ಶ್ರೀ ರಾಮನ ಧ್ಯಾನದಲ್ಲಿ ಮಗ್ನರಾಗುತ್ತಾರೆ. 
ಅದನ್ನು ಅವರ ಉದ್ಧಟತನವೆಂದು ಭಾವಿಸಿದ ಬಾದಶಹಾ ತುಲಸೀದಾಸರನ್ನು ಬಂಧಿಸಲು ಆಜ್ಞೆ ಮಾಡುತ್ತಾನೆ.

 ಅಷ್ಟೇ, ಎಲ್ಲಿಂದ ಬಂದವೋ ಸಾವಿರಾರು ಕೋತಿಗಳ ಸೈನ್ಯ! ದರ್ಬಾರ್ ನಲ್ಲಿ ಧುಮುಕಿ ತುಲಸೀದಾಸರನ್ನು ಬಂಧಿಸಲು ಉದ್ಯುಕ್ತರಾಗುತ್ತಿದ್ದ ರಕ್ಷಕಭಟರನ್ನೂ, ಅಲ್ಲಿದ್ದ ಎಲ್ಲರನ್ನೂ ಘಾಸಿಗೊಳಿಸಿ ಅವರ ಆಯುಧಗಳನ್ನೆಲ್ಲಾ ಕಸಿದುಕೊಂಡು ಎಲ್ಲರಲ್ಲೂ ದಿಗ್ಭ್ರಾಂತಿ ಹುಟ್ಟಿಸಿ ಚದರಿ ಓಡುವಂತೆ ಮಾಡಿದವು.
ಈ ಗಲಭೆಗೆ ಕಣ್ತೆರೆದು ನೋಡಿದ ತುಲಸೀದಾಸರಿಗೆ ಮಹದಾಶ್ಚರ್ಯ!!! ಸುತ್ತಲೂ ನೋಡಿದಾಗ ಅವರಿಗೆ ಸಿಂಹದ್ವಾರದಲ್ಲಿ ಆಸೀನನಾಗಿದ್ದ ಮಾರುತಿಯೇ ಕಂಡನಂತೆ!!! 
     ಶ್ರೀ ರಾಮಭಕ್ತ ಹನುಮಂತನೇ ಸ್ವತಃ ತಮ್ಮ ರಕ್ಷಣೆಗಾಗಿ ಬಂದಿರುವುದನ್ನು ನೋಡಿ ತುಲಸೀದಾಸರು ರೋಮಾಂಚನಗೊಂಡು ಆ ಕ್ಷಣದಲ್ಲಿ ಮನದಲ್ಲಿ ಮೂಡಿದ ' ಜಯ ಹನುಮಾನ್, ಜ್ಞಾನಗುಣಸಾಗರ್....'
ಎಂಬ 40 ದೋಹಾಗಳನ್ನು ರಚಿಸಿ ಹಾಡಿಹೊಗಳುತ್ತಾರೆ.
ಆ 40 ದೋಹಾಗಳೇ ಹನುಮಾನ್ ಚಾಲೀಸ.
                    **********
(ತೆಲುಗು ನಿಂದ ಕನ್ನಡಕ್ಕೆ: ಜೆ.ಬಿ.ಪ್ರಸಾದ್)

अस्थिरं जीवितं लोके

अस्थिरं जीवितं लोके अस्थिरे धनयौवने । 
अस्थिराः पुत्रदाराश्च धर्मकीर्तिद्वयं स्थिरम् ॥ 
                   - वैराग्यशतकम् भर्तृहरि

इस जगत में जीवन सदा नही रहने वाला है, धन और यौवन भी सदा नही रहने वाले हैं, पुत्र और पत्नी भी सदा नही रहने वाले हैं। केवल धर्म और कीर्ति (प्रसिद्धि) ही सदा रहने वाले (शाश्वत) हैं ।

या जगात जीवित अशाश्वत आहे. धन आणि तारुण्यही अशाश्वत आहे. पुत्र आणि पत्नीही अशाश्वत आहेत. फक्त धर्म आणि कीर्ती या दोन गोष्टीच शाश्वत आहेत.

In this world, the life is uncertain, wealth and youthfulness are also impermanent. (Even) son and wife are impermanent. Dharma (Righteousness) and Fame are the two things that are permanent (stable, eternal).
                  - Vairāgya-śatakam by Bhartṛhari

May 21, 2021

ಮಧುವಾತಾ ಋತಾಯತೆ

ಮೃದು ಮಧುರ. . . . 

ಮಧು ಎಂದರೆ ನಮಗೆ ಮೊದಲು ನೆನಪಾಗುವುದು ಜೇನು. ಜೇನಿನ ರಸ ಅಥವಾ ಜೇನು ತುಪ್ಪವನ್ನು ನಾವು ಮಧು ಎಂದೇ ಕರೆಯುತ್ತೇವೆ. ಈ ಮಧು ಆಯುರ್ವೇದದಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದುಕೊಂಡಿದೆ. ಔಷಧೀಯಗುಣ ಹೊಂದಿರುವ ಮಧುವಿಗೆ ಅಮೃತದ ಸ್ಥಾನ ಕಲ್ಪಸಿರುವುದು ನಮ್ಮ ಪ್ರಾಚೀನರು. ಪಂಚ ಅಮೃತಗಳಲ್ಲಿ ಮಧುವೂ ಒಂದು. ಈ ಮಧುವು ಮಧುರವಾಗಿದ್ದಾಗ ನಮಗೆ ಆಯುರಾರೋಗ್ಯ ಐಶ್ವರ್ಯಗಳು ಸಿಗುತ್ತವೆಯಂತೆ. ನಮ್ಮ ಮಾತುಗಳು ಅಮೃತದಂತೆ ಇದ್ದಾಗ ಎಂತಹ ರೋಗಿಯೂ ಔಷದಗಳ ಅವಲಂಬನೆಗಿಂತಲೂ ಜಾಸ್ತಿ ಬೇಗ ಗುಣಮುಖನಾಗುತ್ತಾನೆ. ಆದುದರಿಂದಲೇ ಮಧು ಎನ್ನುವ ಶಬ್ದ ಕೇಳಿದಾಗಲೇ ಮೈ ಮನಗಳೆಲ್ಲ ಉಲ್ಲಸಿತವಾಗುತ್ತವೆ. ಜೇನಿನಲ್ಲಿ ಮಾತ್ರವೇ ಈ ಸಿಹಿಯಾದ ಮಧು ಸಿಗುವುದು ಹೇಗೆ ಮಾತ್ತು ಯಾವಾಗ ಅನ್ನುವುದಕ್ಕೆ ಒಂದು ನಿದರ್ಶನ ಹೀಗಿದೆ. 

ಒಂದು ಕಾಲದಲ್ಲಿ ಅನಾವೃಷ್ಟಿಯುಂಟಾಗುತ್ತದೆ. ಆಗ ಅನಾವೃಷ್ಟಿಯಿಂದಾಗಿ ಮರಗಳೆಲ್ಲಾ ಒಣಗಿ ಹೋಗುತ್ತವೆ. ಆಗ ಅರಪತ್ ಮತ್ತು ಸರಘಾ ಎನ್ನುವ ಎರಡು ಜೇನು ನೊಣಗಳು ಬಹಳ ಸಂಕಷ್ಟಕ್ಕೀಡಾಗುತ್ತವೆ. ಆಗ ಹೂವುಗಳು ಸಿಕ್ಕದೇ ನೊಂದಿರುವಾಗ ಅವುಗಳು ಅಶ್ವಿನೀ ದೇವತೆಗಳನ್ನು ಪ್ರಾರ್ಥಿಸುತ್ತವೆ ಅಶ್ವಿನೀ ದೇವತೆಗಳು ಅವುಗಳಿಗೆ ಮಧುವನ್ನು ಒದಗಿಸುತ್ತಾರೆ. ಆಮೇಲಿಂದ ಅವು ಮಧುವನ್ನು ಯಥೇಚ್ಚವಾಗಿ ಕೊಡಲು ಆರಂಭಿಸಿದವು. ಹೀಗೆ ಜೇನು ನೊಣಗಳು ಅಶ್ವಿನೀ ದೇವತೆಗಳನ್ನು ಕುರಿತಾಗಿ ಪ್ರಾರ್ಥಿಸಿದ ಮಂತ್ರ ಒಂದು ಋಗ್ವೇದ ಒಂದನೇ ಮಂಡಲದ ಎಂಭತ್ತನೇ ಸೂಕ್ತದಲ್ಲಿ ಬರುತ್ತದೆ. ಅಲ್ಲಿಂದ ಮಧುವು ವಿಶಿಷ್ಟ ಸ್ಥಾನ ಪಡೆದು ಮಧುವಿದ್ಯೆ ಎನ್ನುವುದಾಗಿ ಔಷಧ ಶಾಸ್ತ್ರವಾಗಿ ಬೆಳೆಯುತ್ತದೆ. ಆದೇನೇ ಇರಲಿ ಮಧುವಿನ ಬಗ್ಗೆ ಒಂದಿಷ್ಟು ನೋಡುವೆ. 

ಮಧು ವಾತಾ ಋತಾಯತೇ ಮಧುಕ್ಷರಂತಿ ಸಿಂಧವಃ |
ಮಾಧ್ವೀರ್ನಃ ಸಂತ್ವೋಷಧೀ: | ಮಧುನಕ್ತ ಮುಷೋಸಸಿ | ಮಧುಮತ್ಪಾರ್ಥಿವಗ್ಂ ರಜಃ | ಮಧು ದ್ಯೌರಸ್ತು ನಃ ಪಿತಾ | ಮಧುಮಾನ್ನೋ ವನಸ್ಪತಿರ್ಮಧುಮಾಗ್ಂ ಅಸ್ತು ಸೂರ್ಯಃ | ಋತಎನ್ನುವ ಶಬ್ದಕ್ಕೆ ಸಾಮಾನ್ಯವಾಗಿ ನಾವು ಹೇಳುವುದು ಸತ್ಯ ಎನ್ನುವುದಾಗಿ. ಅದು ನಿಜವೂ ಹೌದು. ಸತ್ಯವೇ ಶ್ರೇಷ್ಠವಾದದ್ದು. ಋತಾಯತೇ ಎನ್ನುವುದನ್ನು ಶ್ರೇಷ್ಠವಾದ ಯಜ್ಞವನ್ನು ನೆರವೇರಿಸಲು ಇಚ್ಚಿಸುವ ಯಜಮಾನನಿಗಾಗಿ ವಾತಾ ಗಾಳಿಯು ಮಧುರವಾದ ರಸವನ್ನು(ಜೇನು) ಸುರಿಸುತ್ತವಂತೆ. ಇಲ್ಲಿ ಇನ್ನೊಂದು ರೀತಿಯಲ್ಲಿ ಸಾಯಣಾಚಾರ್ಯರು ಹೇಳುವಂತೆ ನಮ್ಮ ದೇಹದಲ್ಲಿನ ರೋಗಗಳ ಉಲ್ಬಣಕ್ಕೆ ವಾಯುವು ಪ್ರಮುಖ ಕಾರಣ. ಯಾವಾಗ ನಮ್ಮ ದೇಹದಲ್ಲಿ ವಾಯುವಿನ ಅಸಮರ್ಪಕ ಸಮತೋಲನ ಉಂಟಾದಾಗ ದೇಹವು ರೋಗಕ್ಕೆ ತುತ್ತಾಗುತ್ತದೆ. ರೋಗವು ದೇಹವನ್ನು ಬಾಧಿಸುತ್ತಿರುವಾಗ ನಮ್ಮ ಮಾನಸಿಕ ಸ್ಥಿತಿಯ ಮೇಲೆ ಸಹ ಪರಿಣಾಮ ಬೀರುತ್ತದೆ. ಆದುದರಿಂದ ಈ ಮಂತ್ರದಲ್ಲಿ ವಾಯುವನ್ನು ಕುರಿತಾಗಿ ಪ್ರಾರ್ಥಿಸಲಾಗಿದೆ. ಇನ್ನು ’ಮಧುಕ್ಷರಂತಿ ಸಿಂಧವಃ’ ಇಲ್ಲಿ ಸಿಂಧವಃ ಎನ್ನುವುದು ಸಮುದ್ರಾಶ್ಚ ಮಧುರಂ ರಸಂ ಸ್ರಾವಯಂತಿ ಎಂದು ಭಾಷ್ಯಕಾರರು ಹೇಳುತ್ತಾರೆ. ಆದರೆ ಋಗ್ವೇದದಲ್ಲಿ ಅನೇಕ ನದಿಗಳನ್ನು ಕುರಿತಾಗಿ ಹೇಳಲಾಗಿದೆ ಎನ್ನುತ್ತಾರೆ. ಆ ನದಿಗಳು ಮಧುರಾವಾದ, ಸಿಹಿಯಾದ ಮತ್ತು ಆರೋಗ್ಯಕರವಾದ ನೀರನ್ನು ಸಂಪಾದಿಸಿಕೊಂಡು ನಮಗೆ ನೀಡುವುದರಿಂದ ಮಧುಕ್ಷರಂತಿ ಸಿಂಧವಃ ಎನ್ನಲಾಗಿದೆ. ’ಮಾಧ್ವೀರ್ನಃ ಸಂತ್ವೋಷಧೀ:’ ದವಸ ಧಾನ್ಯಗಳ ಸಂಯೋಗವೇ ಬೀಜರೂಪದ ಓಷಧಿಗಳು ಎಂದು ಕರೆಸಿಕೊಳ್ಳುತ್ತವೆ. ಇವೆಲ್ಲವೂ ಸಹ ಆರೋಗ್ಯಕ್ಕೆ ಪಥ್ಯರೂಪವಾಗಿ ಸಿಕ್ಕುತ್ತವೆ ಎನ್ನುವುದು ಈ ಮಂತ್ರದ ಅರ್ಥ.

ಮಧುನಕ್ತ ಮುಷೋಸಸಿ ಎನ್ನುವುದರಲ್ಲಿ ನಕ್ತ ಎನ್ನುವುದು ರಾತ್ರಿಗೆ. ಈ ರಾತ್ರಿ ಎನ್ನುವುದು ಸಹ ನಮಗೆ ಮಧುರವೇ, ಎಲ್ಲಾ ಜಂಜಾಟಗಳನ್ನು ಮರೆತು ವಿಶ್ರಾಂತ ಸ್ಥಿತಿಗೆ ಜಾರುವ ಸಮಯ ಅದು. ಉಷೋಸಿ ಎನ್ನುವುದು ರಾತ್ರಿಯ ವಿಶ್ರಾಂತದಿಂದ ಉಷಕಾಲದ ಚೈತನ್ಯ ಸ್ಥಿತಿಗೆ ಬರುವುದು ಸಹ ನಮಗೆ ಅತ್ಯಂತ ಸಮತೋಷದಾಯಕ ಎನ್ನಲಾಗಿದೆ. ಬೆಳಗಿನ ಸೂರ್ಯ ಕಿರಣವನ್ನು ಆಸ್ವಾದಿಸುವುದು ಮಧುರ.  
ಮಧುಮತ್ಪಾರ್ಥಿವಗ್ಂ ರಜಃ ಈ ನೆಲದ ರಜೋಗುಣಗಳೆಲ್ಲವೂ ನಮಗೆ ಮಧುರವೇ. ಭೂಮಿಯ ಮೇಲಿನ ಸುಂದರ ಕಲ್ಪನೆಗಳೆಲ್ಲವೂ ಅತ್ಯಂತ ಸುಖದಾಯಕ ಮತ್ತು ಸಂತೋಷದಾಯಕ. ಸಿಹಿಯಾದ ಮಾಧುರ್ಯ ರಸದೊಂದಿಗಿರುವಂತದ್ದು. ನಮ್ಮ ತಂದೆ ಮತ್ತು ಪಿತೃ ಸ್ಥಾನೀಯರಾದವರೂ ಸಹ ಸುಖವನ್ನು ಒದಗಿಸಿ ಮಧುವಿನಂತಿರುವ ಅವರು ನಮಗೆ ಮಧುರ ರಸವನ್ನು ಒದಗಿಸುವಂತಾಗಲಿ.
ಮಧುಮಾನ್ನೋ ವನಸ್ಪತಿರ್ಮಧುಮಾಗ್ಂ ಅಸ್ತು ಸೂರ್ಯಃ ಎನ್ನುವದಕ್ಕೆ ಅಶ್ವತ್ಥವೇ ಮೊದಲಾದ ಶ್ರೇಷ್ಟ ವೃಕ್ಷಗಳೆಲ್ಲ ವನಸ್ಪತಿಗಳೆಂದು ಕರೆಸಿಕೊಂಡಿವೆ. ಅವೆಲ್ಲವೂ ನಮಗೆ ಔಷಧದ ರೀತಿಯಲ್ಲಿ ಒದಗಿ ಬಂದು ನಮಗೆ ಮಧುಮಾನವಾಗಿರಲಿ. ಸವಿಒಯಲು ಸಹ ರಸಯುಕ್ತವಾಗಿ ಹಿತಕರವಾಗಿ ಒದಗಲಿ ಎನ್ನಲಾಗಿದೆ. ಸೂರ್ಯನೂ ಸಹ ನಮ್ಮ ದುಃಖಗಳನ್ನು ದೂರಮಾಡಿ ಸಂತಾಪ ರಾಹಿತ್ಯರನ್ನಾಗಿಮಾಡಿ ಮಾಧುರ್ಯವನ್ನು ನಮ್ಮ ಆಯುರಾರೋಗ್ಯಗಳನ್ನು ಕೊಟ್ಟು ಸುಖವನ್ನು ಒದಗಿಸಲಿ ಎಂದಿರುವುದು ಸಿಗುತ್ತದೆ. 

#ಮಧು_
ಸದ್ಯೋಜಾತರು

ನಿನಗೆ‌ ಯಜಮಾನ ಇದ್ದಾನಾ?

ಒಮ್ಮೆ, ಮೇಯಲು ಹೋಗಿದ್ದ ಹಸುವೊಂದು, ಹಸಿದ ಹುಲಿಯ ಕಣ್ಣಿಗೆ ಬಿತ್ತು.‌ 

ಹುಲಿ ಹಸುವನ್ನು ಕೊಂದು ತಿನ್ನಲೆಂದು ಮುಂದಡಿ ಇಟ್ಟಾಗ, ತನ್ನ‌ ಪ್ರಾಣ ರಕ್ಷಣೆಗಾಗಿ ಹಸು ಓಡ ತೊಡಗಿತು. ಹುಲಿ ಅದರ ಬೆನ್ನಟ್ಟಿತು. 

ಹಸು ಓಡುತ್ತಾ ಓಡುತ್ತಾ ಒಂದು ಖಾಲಿಯಾದ ಕೆರೆಯ ಬಳಿಗೆ ಬಂದಿತು. ಬೇರೆ ದಾರಿ ಕಾಣದೇ ಆ ಕೆರೆಗೆ ಧುಮುಕಿತು. ಅದರ ಹಿಂದೆ ಬಂದಿದ್ದ ಹುಲಿಯೂ ಆ ಕೆರೆಗೆ ಧುಮುಕಿತು. 

ನೀರಿಲ್ಲದ ಆ ಕೆರೆ ಖಾಲಿಯಾಗಿದ್ದಿದ್ದರೂ, ದಪ್ಪವಾದ ಕೆಸರು ಮಣ್ಣಿನಿಂದ ತುಂಬಿತ್ತು.

ಹಸು ಮತ್ತು ಹುಲಿ ಎರಡೂ ಅಲುಗಾಡಲಾಗದ ರೀತಿ ಆ ಕೆಸರಿನಲ್ಲಿ‌ ಅಲ್ಲಲ್ಲೇ ಸಿಲುಕಿಕೊಂಡವು. ಎಷ್ಟು ‌ಒದ್ದಾಡಿ ಯತ್ನಿಸಿದರೂ ಕೊಂಚವೂ ಮುಂದೆ ಸರಿಯಲು ಸಾಧ್ಯವಾಗುತ್ತಿರಲಿಲ್ಲ. 

ಎರಡೂ ಪ್ರಾಣಿಗಳು, ತಮ್ಮ ತಲೆಗಳಷ್ಟೇ ಹೊರಗೆ ಕಾಣಿಸುವಷ್ಟು ಆ ಕೆಸರಿನಲ್ಲಿ ಹೂತುಹೋಗಿದ್ದವು.‌

ಹುಲಿ‌ ಹಸುವಿನತ್ತ ಕ್ರೂರ ದೃಷ್ಟಿ ಬೀರುತ್ತಾ, "ನಿನ್ನನ್ನು ತಿಂದು‌ ಮುಗಿಸುವೆ ನಾನು, ಇನ್ನು ಹೇಗೆ ಬಚಾವಾಗುವೆ?"  ಎಂದು‌ ಸವಾಲೊಡ್ಡಿತು.

ಹಸು ಹುಲಿಯತ್ತ ನೋಡಿ ನಗುತ್ತಾ  "ನಿನಗೆ‌ ಯಜಮಾನ ಇದ್ದಾನಾ?"  ಎಂದು‌ ಕೇಳಿತು.

"ನಾನೇ ಈ ಕಾಡಿನ ರಾಜ.‌ ನನಗೆ ಬೇರೆ ಯಜಮಾನ ಯಾರು?" 

"ನೀನು ಕಾಡಿನ ರಾಜನೇ ಆದರೂ, ನಿನ್ನನ್ನು ಇನ್ನು ಯಾರೂ ಬದುಕುಳಿಸಲು ಸಾಧ್ಯವಿಲ್ಲ. ನಿನ್ನ ಕತೆ ಮುಗಿಯಿತು" ಎಂದು ಹಸು ತಮಾಷೆ ಮಾಡಿತು. 

"ಅರೆ, ನಿನ್ನ‌ ಕತೆಯೂ ಅಷ್ಟೇ. ನಿನ್ನನ್ನು ಯಾರು ಬದುಕಿಸುತ್ತಾರೆ ಇನ್ನು? ಸಾಮಾನ್ಯ ಪಶು ನೀನು"  ಎಂದು ಹುಲಿ ವ್ಯಂಗ್ಯದಿಂದ ಕೇಳಿತು. 

"ನಾನು ಬದುಕುಳಿಯುತ್ತೇನೆ.‌ ನೋಡ್ತಾ ಇರು.‌ ನನಗೆ ಯಜಮಾನ ಇದ್ದಾನೆ. ಸೂರ್ಯಾಸ್ತಮಾನದ ನಂತರ ನಾನು ಹಟ್ಟಿಗೆ ಹಿಂದಿರುಗದೇ ಇರುವುದನ್ನು ಕಂಡು, ಆತ ನನಗಾಗಿ ಹುಡುಕಾಡಿಕೊಂಡು ಇಲ್ಲಿಗೆ ಬಂದೇ ಬರುತ್ತಾನೆ." ಎಂದಿತು ಹಸು.

ಕತ್ತಲಾದಾಗ ಹಸು ನುಡಿದಂತೆಯೇ ಆಯ್ತು. 

ಹಟ್ಟಿಗೆ ಹಿಂದಿರುಗದ ಹಸುವಿಗಾಗಿ, ಅದರ ಯಜಮಾನ ಊರಿನ ಜನರನ್ನೆಲ್ಲಾ ಒಟ್ಟುಗೂಡಿಸಿಕೊಂಡು, ಕೊಳ್ಳಿಗಳನ್ನು ಹಿಡಿದುಕೊಂಡು, ಹಸುವಿಗಾಗಿ ಹುಡುಕಾಡುತ್ತಾ, ಅದೇ ಕೆರೆಯ ಬಳಿಗೆ ಬಂದನು.

ಎಲ್ಲರೂ ಸೇರಿ ಹಸುವನ್ನು ಬಚಾವು ಮಾಡಿ ಊರಿನತ್ತ ಸಾಗಿದರು. 

"ನಾನೇ ಈ ‌ಕಾಡಿನ ರಾಜ, ನನಗ್ಯಾರೂ ಯಜಮಾನರೇ ಇಲ್ಲ" ಅನ್ನುವ ಅಹಂಕಾರದಿಂದ ಮೆರೆದ ಆ ಹುಲಿ‌ ಮಾತ್ರ, ಕೆಸರಿನಲ್ಲಿಯೇ ಪ್ರಾಣ ಬಿಡಬೇಕಾಯ್ತು. 

"ನನ್ನ ಯಜಮಾನ ಇದ್ದಾನೆ, ಆತ ನನ್ನನ್ನು ಹೇಗಾದರೂ ರಕ್ಷಿಸುತ್ತಾನೆ" ಅನ್ನುವ ಸಂಪೂರ್ಣ ನಂಬಿಕೆಯಲ್ಲಿ‌ ಇದ್ದ ಹಸು ಬಚಾವಾಯಿತು. Sp

ಹೀಗೆಯೇ, ನಾವು ಕೂಡ, ಪರಮಾತ್ಮನೆಂಬ ನಮ್ಮೆಲ್ಲರ ಯಜಮಾನನ ಮೇಲೆ ಸಂಪೂರ್ಣ ನಂಬಿಕೆಯನ್ನು ಹೊಂದಿರಬೇಕು.

ನಮ್ಮ ಬಾಳಿನ ಒಳಿತು ಕೆಡುಕುಗಳ ಜವಾಬ್ದಾರಿಗಳನ್ನೆಲ್ಲ ಆತನಿಗೆ ಬಿಟ್ಟುಬಿಡಬೇಕು.

ಕರ್ಮ ಮತ್ತು ಕರ್ಮ ಯೋಗದ ಕುರಿತು ಉದಾಹರಣೆಯ ಒಂದು ಕಥೆ



ರಮಣ ಮಹರ್ಷಿಗಳು  ಒಮ್ಮೆ  ಬೆಟ್ಟ ಹತ್ತಿ ಹೊರಟಿರುವಾಗ, ವಿದೇಶಿ ಯಾತ್ರಿಕರೂಬ್ಬರು ಬಂದು ಅವರಿಗೆ ನಮಸ್ಕರಿಸಿದರು. ಹಾಗೆ, ಸ್ವಾಮಿ ನೆನ್ನೆ ನೀವು ಉಪನ್ಯಾಸದಲ್ಲಿ ಕರ್ಮ ಮತ್ತು ಕರ್ಮಯೋಗದ ಕುರಿತಾಗಿ ಹೇಳಿದಿರಿ.  ಇದರ ಅರ್ಥ ಏನು ಎಂದು ಕೇಳಿದರು. ಆಗ ಮಹರ್ಷಿಗಳು ನನ್ನ ಜೊತೆ ಬೆಟ್ಟಹತ್ತಿ ಬನ್ನಿ ನಿಮಗೆ ಗೊತ್ತಾಗುತ್ತದೆ ಎಂದರು. ಸರಿ ಯಾತ್ರಿಕರು ಅವರೊಟ್ಟಿಗೆ ಬೆಟ್ಟ ಹತ್ತುತ್ತಿದ್ದರು. ಸುಮಾರು ಅರ್ಧ-ಮುಕ್ಕಾಲು ದಾರಿ ಹೋಗಿದ್ದರು. ಆಗ ಅಲ್ಲೊಬ್ಬಳು ಅಜ್ಜಿ ಕಟ್ಟಿಗೆ ಆರಿಸಲು ಕಾಡಿಗೆ ಬಂದಿದ್ದಳು. ಅಜ್ಜಿಗೆ  ವಯಸ್ಸಾಗಿದೆ, ಮೈಯಲ್ಲಿ ಶಕ್ತಿ ಇಲ್ಲ. ಹಾಗಾಗಿ ಕಟ್ಟಿಗೆಗಳನ್ನು ಕಡಿಯುವುದಾಗಲಿ, ಮುರಿಯುವುದಾಗಲಿ  ಮಾಡದೆ ಒಣಗಿ  ಬಿದ್ದಿರುವ  ಸಣ್ಣ ಪುರಲೆಯಂಥ  ಕಟ್ಟಿಗೆಗಳ ತುಂಡುಗಳನ್ನೆ ಆರಿಸಿಕೊಂಡು  ಎಲ್ಲವನ್ನು  ಒಟ್ಟಿಗೆ  ಮಾಡಿ, ಬರುವಾಗಲೇ ತಂದಿದ್ದ ಸಣ್ಣ ಸಣ್ಣ ತುಂಡಾದ ಹಗ್ಗಗಳನ್ನು  ಸೇರಿಸಿ ಗಂಟುಕಟ್ಟಿ ಕಟ್ಟಿಗೆಯ ಹೊರೆ ಮಾಡಿದಳು. 

ಆ ಕಟ್ಟಿಗೆ ಹೊರೆಯನ್ನು ತಲೆಯ ಮೇಲೆ ಇಟ್ಟುಕೊಳ್ಳಲು ತುಂಬಾ ಪ್ರಯತ್ನ ಪಡುತ್ತಿದ್ದಳು. ಅರ್ಧ ಎತ್ತುತ್ತಿದ್ದಂತೆ ತಲೆ ಮೇಲೆ ಇಟ್ಟು ಕೊಳ್ಳಲಾಗಿದೆ, ಮತ್ತೆ ಕೆಳಗಿಡುತ್ತಿದ್ದಳು. ದೂರದಲ್ಲಿ ನಿಂತ ರಮಣ ಮಹರ್ಷಿಗಳು, ಯಾತ್ರಿಕರು ನೋಡುತ್ತಲೇ ಇದ್ದರು. ಇದೇ ರೀತಿ  ಹರಸಾಹಸ  ಮಾಡಿ  ಅಂತೂ ತಲೆಯಮೇಲೆ ಇಟ್ಟುಕೊಂಡಳು. ಮೇಲೆ ಹೋಗಬೇಕು ಅಜ್ಜಿಗೆ ಒಬ್ಬಳೇ ಹತ್ತುವುದೇ  ಕಷ್ಟವಾಗಿತ್ತು, ಹೀಗಿರುವಾಗ ಕಟ್ಟಿಗೆ ಹೊರೆಯನ್ನು ತಲೆಯಮೇಲೆ ಇಟ್ಟುಕೊಂಡು ಬೆಟ್ಟ ಹತ್ತುವುದು ಎಂದರೆ  ತುಂಬಾ ಕಷ್ಟದ ಕೆಲಸ, ಆದರೂ ಅಜ್ಜಿಯು  ಕಷ್ಟಪಟ್ಟು ಹೆಜ್ಜೆ ಇಡುತ್ತಾ ಬೆಟ್ಟ ಹತ್ತುವುದನ್ನು ನೋಡುತ್ತಿದ್ದ ಮಹರ್ಷಿಗಳು, ಅಜ್ಜಿಯನ್ನು ಕೂಗಿ ಒಂದು ನಿಮಿಷ ನಿಂತ್ಕೋ ತಾಯಿ ಎಂದು ನಿಲ್ಲಿಸಿದರು. ಹತ್ತಿರ ಹೋಗಿ ಅವಳು ಹೊತ್ತಿದ್ದ ಕಟ್ಟಿಗೆ ಹೊರೆಯೊಳಗಿಂದ ಒಂದು ಉದ್ದನೆಯ ಕಟ್ಟಿಗೆಯನ್ನು ತೆಗೆದು ಅಜ್ಜಿಯ  ಕೈಗೆ ಕೊಟ್ಟು ," ನೋಡು ತಾಯಿ  ಈ ಕಟ್ಟಿಗೆಯನ್ನು ಊರುಗೋಲು ಮಾಡಿಕೊಂಡು ಬೆಟ್ಟ ಹತ್ತು ಸ್ವಲ್ಪ ಹಗುರ ಆಗುತ್ತೆ ಎಂದರು. ಅಜ್ಜಿ ಅವರು ಹೇಳಿದಂತೆ ಕಟ್ಟಿಗೆಯನ್ನು ನೆಲದ ಮೇಲೆ ಊರಿ ನೋಡಿದಳು, ಆಗ ಅವಳಿಗೆ  ಹಗುರ ಎನಿಸಿತು. ಆಕೆ ಮಹರ್ಷಿಗಳಿಗೆ "ಹೌದು ಕಣಪ್ಪ ಬೆಟ್ಟ ಹತ್ತಲು ಹಗುರವಾಗುತ್ತದೆ" ಎಂದು ಸಂತೋಷದಿಂದ ನಕ್ಕು ಮುಂದೆ ಸಾಗಿದಳು. 

ಮಹರ್ಷಿಗಳು  ಯಾತ್ರಿಕರಿಗೆ, ಈಗ ನಿಮಗೆ ಕರ್ಮ, ಕರ್ಮಯೋಗದ ಅರ್ಥವಾಯಿತಾ ಎಂದರು. ಆದರೆ ಆತ  ನನಗೆ ಅರ್ಥ ಆಗಿಲ್ಲ ಎಂದರು. ಮಹರ್ಷಿಗಳು ಅವರಿಗೆ ಹೇಳಿದರು, ಅಜ್ಜಿ ಬದುಕಿಗಾಗಿ ಕಟ್ಟಿಗೆಯನ್ನು ಹೊರಲೇಬೇಕು ಅದು ಕರ್ಮ ಹಾಗೂ ಅನಿವಾರ್ಯ. ಆದರೆ ನಾನು ಆ ಕರ್ಮದ ಕಟ್ಟಿಗೆ ಹೊರೆಯಿಂದ, ಒಂದು ಕಟ್ಟಿಗೆ ತೆಗೆದು ಅವಳಿಗೆ ಊರುಗೋಲು ಮಾಡಿಕೊಟ್ಟೆ. ಹೀಗಾಗಿ  ಕಷ್ಟಪಡದೆ ಕರ್ಮ ಮಾಡಿದಳು. ಕಟ್ಟಿಗೆ ಹೊರುವುದು ಕರ್ಮ, ಆದರೆ ಆ ಕಟ್ಟಿಗೆ ಹೊರೆಯೊಳಗಿಂದ ಒಂದು ಕಟ್ಟಿಗೆ ತೆಗೆದು ಊರುಗೋಲು ಮಾಡಿಕೊಂಡು ಸಂತೋಷದಿಂದ ಕರ್ಮ ಮಾಡುವುದು ಕರ್ಮಯೋಗ ಎಂದರು. ಕರ್ಮ ತಪ್ಪಿಸಲು ಸಾಧ್ಯವಿಲ್ಲ. ಕಷ್ಟ, ಅಯ್ಯೋ ಕಷ್ಟ, ಎಂದು ಹಲುಬುವುದಕ್ಕಿಂತ ಅದನ್ನೇ ಊರುಗೋಲಿನಂತೆ  ಮಾಡಿಕೊಂಡು ಕರ್ಮ ಮಾಡಿದರೆ ಅದೇ ಕರ್ಮಯೋಗ ಎಂದರು. 

ಯಾರು  ತಮ್ಮ ಕರ್ಮಗಳನ್ನು ಉಪಾಸನೆಗಳನ್ನು ಸರಿಯಾಗಿ ಮಾಡುತ್ತಾ ಇರುತ್ತಾರೋ, ಅವರಲ್ಲಿ ಆತ್ಮ ಹೆಚ್ಚು ಸ್ಥಿರವಾಗಿರುತ್ತದೆ. 

"ಯೋಗಸ್ಥಹ  ಕುರು ಕರ್ಮಾಣಿ  ಸಂಗಂ ತ್ಯಕ್ತ್ವಾ ಧನಂಜಯ!
ಸಿದ್ಧ್ಯಸಿದ್ಧ್ಯೋಹ  ಸಮೋ  ಭೂತ್ವಾ  ಸಮತ್ವಂ ಯೋಗ ಉಚ್ಯತೇ!" 

ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.

May 18, 2021

ರುದ್ರಾಂಶ ಸಂಭೂತ ಆಜನ್ಮಬ್ರಹ್ಮಚಾರೀ ಹನುಮಂತ:- ಭಾಗ-೦೨

ರುದ್ರಾಂಶ ಸಂಭೂತ ಆಜನ್ಮಬ್ರಹ್ಮಚಾರೀ  ಹನುಮಂತ:- ಭಾಗ-೦೨

ಹನುಮಂತ ಜನನ ರಾಮಯಣ.

ಸನಾತನ ಧರ್ಮವನ್ನು ಪರಿಪಾಲಿಸುವವರಿಗೆ ರಾಮಾಯಣ ಮತ್ತು ಪುರಾಣಮಹಾಭಾರತಗಳು ಧರ್ಮಬೋಧಿಸುವ ಮೂಲ ಗ್ರಂಥಗಳಾಗಿವೆ.ಆದರೂ ಈ ಸನಾತನ ಧರ್ಮವನ್ನು ಅನುಸರಿಸುವ ಧರ್ಮಿಗಳನ್ನು ಏತಕ್ಕಾಗಿ ಮನಸೋ ಇಚ್ಛೆ ಮೂದಲಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಾದರೇ ಇಂದಿಗೆ ಉಪಲಬ್ಧವಿರುವ ಈ ಗ್ರಂಥಗಳನ್ನೇ ಆಮೂಲಾಗ್ರ ಅಧ್ಯಯನ ಮಾಡಿದರೇ ನಮಗೆ ಉತ್ತರ ಸಿಗುತ್ತದೆ. 

ಪಂಥೀಯ ಮತೀಯ ದ್ವೇಷಗಳನ್ನು  ಮೈದುಂಬಿಕೊಂಡು ಈ ದಿವ್ಯಗ್ರಂಥಗಳನ್ನು ತಮ್ಮ ಕುಪಾಂಡಿತ್ಯದಿಂದ ಆತ್ಯಂತಿಕವಾಗಿ ಹೊಲಗೆಡಸಿ , ದೇವತೆಗಳನ್ನೇ ಅತ್ಯಾಚಾರಿಗಳಾಗಿ ಮಾಡಿದ್ದೂ ಅಲ್ಲದೇ ಇಂಥ ದುರ್ಮೇಧಗಳನ್ನು ಪ್ರಮಾಣವಾಗಿ ಬಳಸುತ್ತಿರುವವರ ದುರ್ಮೇಧಿಗಳಾದ ಹಿರಣ್ಯಕಶಿಪುವಿನ ವಂಶಸ್ಥರನ್ನು ಈ ಸನಾತನ ಧರ್ಮಗಳಲ್ಲಿ ಹುಟ್ಟುಹಾಕಿರುವ ದುರ್ಮೇಧಗಳ ಸಹಿತ  ನಿರ್ಮೂಲನಮಾಡದೇ ಇದ್ದರೇ ಇಡೀ ಸನಾತಾನ ಧರ್ಮವೇ ಕೊರೋನಾ ಎಂಬ ವೈರಾಣುಗಳಿಗಿಂತ ಅತೀ ಹೆಚ್ಚಿನದಾದ ಅಪಾಯ ಎದುರಿಸುವದು ಕಟ್ಟಿಟ್ಟಬುತ್ತಿ. ದುರ್ಮೇಧಿಗಳೂ ನಿತ್ಯನಾರಕಿಗಳೂ ಆದ ಇವರ  ಅನುಯಾಯಿಗಳಲ್ಲಿರುವ ಹುಟ್ಟುಕುರುಡುತನ ಎಂದಿಗೇ ದೂರವಾಗುವದೋ ಅಥವಾ ಇದರಲ್ಲೇ ಅವಸಾನ ಹೊಂದುವರೋ ಆ ಭಗವಂತನೇ ಬಲ್ಲ.  ಇಂಥವರು ಸ್ವಮತದ ಅಧ್ಯಯನ ಮಾಡಿದರೇ ದಿಗ್ಭ್ರಾಂತಿ ನಿಶ್ಚಯ.ಆದ್ದರಿಂದಲೇ ಇವರ ಅಂಜುಬುರುಕುತನದಿಂದ ಪರಮತಗಳ ದೂಷಣೆ ಅವ್ಯಾಹತವಾಗಿ ರೂಢಿಸಿಕೊಂಡುಬಿಟ್ಟಿದ್ದಾರೆ.ಆದರೂ ನೈಜವಾದ ಸನಾತನ ಧರ್ಮವನ್ನು ಉಳಿಸುವದಕ್ಕೆ ನನ್ನ ಕೈಲಾದ ಪ್ರಯತ್ನಮಾಡುತ್ತೇನೆ.ಈ ದಿವ್ಯಗ್ರಂಥಗಳು ಇಷ್ಟುಮಟ್ಟಿಗೆ ಕಲುಷಿತವಾಗಿರುವದು, ಕಲಿಯುಗದ ಅವನತಿ ಸೂಚಕವಾಗಿದೆ.

ವೇದಗಳಲ್ಲು ಹೇಳಿರುವ ಮರುದ್ದೇವತೆಗಳ ಗುಣಗಳೂ ರಾಮಾಯಣದಲ್ಲಿ ಪ್ರತಿಬಿಂಬಿಸಿರುವ ಹನುಮಂತನ ಸಾಮರ್ಥ್ಯವನ್ನೂ ಹೊಂದಿಕೆ ಮಾಡಿನೋಡೋಣ.ಮೊದಲಿಗೆ ಹನುಮಂತನ ಜನ್ಮದ ವಿಷಯ ನೋಡೋಣ.

ರಾಮಾಯಣ ಬಾಲಕಾಂಡ :- ೧೭

ಮಾರುತಸ್ಯಾತ್ಮಜಃ ಶ್ರೀಮಾನ್ ಹನುಮಾನ್ನಾಮ ವಾನರಃ | ವಜ್ರಸಂಹನನೋಪೇತೋ ವೈನತೇಯಸಮೋ ಜವೇ || ೧೬ || 

ಕ್ಷಿಪ್ತಮಿನ್ದ್ರೇಣ ತೇ ವಜ್ರಂ ಕ್ರೋಧಾವಿಷ್ಟೇನ ಧೀಮತಾ | ತತಃ ಶೈಲಾಗ್ರಶಿಖರೇ ವಾಮೋ ಹನುರಭಜ್ಯತ | ತತೋ ಹಿ ನಾಮಧೇಯಂ ತೇ ಹನುಮಾನಿತಿ ಕೀರ್ತ್ಯತೇ ||೪.೦೬೫.೦೨೨||

ಬ್ರಹ್ಮನ ಆದೇಶದ ಮೇರೆಗೆ ಇಂದ್ರ,ಸೂರ್ಯ,ಅಗ್ನಿ,ವಾಯು ಮೊದಲಾದ ದೇವತೆಗಳು ವಾನರ ಸ್ತ್ರೀಯರಲ್ಲಿ ತಂತಮ್ಮ ಅಂಶಗಳಿಂದ ಹುಟ್ಟಿದರು.

ಮರುತ ಅರ್ಥಾತ್ ವಾಯುವಿನ(**ತುಂಡು** ಈ ಪದವು ಕೆಲವರಿಗೆ ಆಪ್ಯಾಯಮಾನವಾಗಿದೆ)  ಅಂಶದಿಂದ ಹನುಮಂತನೆಂಬುವನು ಹುಟ್ಟಿದನು.ಇವನು ತನ್ನ ಶಕ್ತಿಸಾಮರ್ಥ್ಯಗಳಲ್ಲಿ ವೈನತೇಯನ ಸಮನೇ ಆಗಿದ್ದನು.

ಒಮ್ಮೆ ಈತನು ಕುಪಿತನಾದ ಇಂದ್ರನ ವಜ್ರಾಯುಧದಿಂದ ಕಪೋಲ-ದವಡೆಯ ಮೇಲೆ ಹೊಡೆಯಲ್ಪಟ್ಟವಾನಾಗಿ ಅವನು ಹನುಮಂತ ಎಂಬ ಹೆಸರಾಯಿತು.

*ಅಯೋನಿಜರಾಗಿ* ಎಂಬುದಾಗಿ ಪಾರ್ವತಿಯಿಂದ ಶಪಿಸಲ್ಪಟ್ಟ ದೇವತೆಗಳು ಅರ್ಥಾತ್ ಅವರು *ತೇ=ದೇವತೆಗಳು , ಸರ್ವೇ= ಎಲ್ಲರೂ  ಅಪ್ರಜಾಃ= ಸಂತಾನಹೀನರು* ಎಂಬ ವಾಕ್ಯದಂತೆ ತಾವೇ ಸಂತಾನ ಉಂಟುಮಾಡಲು ಅಸಮರ್ಥರಾದರು. ಅವರು ಗಂಧರ್ವಕನ್ಯೆ ,ಮನುಷ್ಯಕನ್ಯೆ, ಯಕ್ಷಿಣಿ , ದೈತ್ಯಕನ್ಯೆಯರು ಅಥವಾ  ಅಪ್ಸರೆಯರ ಯೋನಿಗಳಲ್ಲಿ , ಪರಪುರುಷರ ವೀರ್ಯಗಳಲ್ಲಿ ಅರ್ಥಾತ್ ದೇವತೆಗಳ ಹೊರತುಪಡಿಸಿ  ಯಕ್ಷ, ಕಿನ್ನರ,ಗಂಧರ್ವ,ಮನುಷ್ಯರೇ ಮುಂತಾದವರಲ್ಲಿ  ಅಂಶರೂಪದಲ್ಲಿ ಸೇರಿಕೊಳ್ಳಬಲ್ಲರೇ ಹೊರತು ತಮ್ಮಂತೆ ದೇವತೆಗಳನ್ನು ಸೃಷ್ಟಿಮಾಡಲು ಅಸಮರ್ಥರು.ಇವರು ಯಾರಿಗೂ ಯಾವ ಫಲಗಳನ್ನೂ ಕೊಡಲೂ ಅಸಮರ್ಥರು ಎಂಬ ಶ್ರುತಿವಾಕ್ಯವೂ ಇದೆ.

ಮೇಲಿನವಾಲ್ಮೀಕಿ ರಾಮಾಯಣದ ಶ್ಲೋಕದಲ್ಲಿ *ಮಾರುತಸ್ಯಾತ್ಮಜ* ಎಂಬಲ್ಲಿ ಮಾರುತ ಅರ್ಥಾತ್ ವಾಯುವಿನ ಅಂಶ ಎಂಬುದಾಗಿಯೇ ತಿಳಿಯಬೇಕೇ ಹೊರತು ವಾಯುವೇ ಮೊದಲಾದ ದೇವತೆಗಳು ಸ್ವವೀರ್ಯ ರಹಿತರಾದ್ದರಿಂದ ವಾಯುವಿನ ವೀರ್ಯದಿಂದ ಹುಟ್ಟಿದವನು ಎಂಬುದಾಗಿ ತಿಳಿಯಬಾರದು.ಆದ್ದರಿಂದ ಮೇಲಿನ ಶ್ಲೋಕಕ್ಕೆ ವೇದವ್ಯಾಸರ ಮಹಾಭಾರತದಲ್ಲಿ ಹನುಮಂತನ ವಾಕ್ಯದ ಮೂಲಕವೇ ಅರ್ಥೈಸಬೇಕು.

ಮಹಾಭಾರತ:

ಅಹಂ ಕೇಶರಿಣಃ ಕ್ಷೇತ್ರೇ ವಾಯುನಾ ಜಗದಾಯುನಾ | ಜಾತಃ ಕಮಲಪತ್ರಾಕ್ಷ ಹನೂಮಾನ್ನಾಮ ವಾನರಃ ||೦೩.೧೪೭.೨೭||

ಹೇ ಕಮಲದಂತೆ ಕಣ್ಣುಗಳುಳ್ಳ ರಾಮನೇ ,  ಹನುಂಮಂತನೆಂಬ  ವಾನರನಾದ ನಾನು ಕೇಸರೀ ಎಂಬ ವಾನರನ ವೀರ್ಯದಿಂದ , ಜಗತ್ತಿಗೆ ಉಸಿರಾಟದ ಮೂಲಕ ಆಯುಷ್ಯವನ್ನು ನೀಡುವಂಥ ವಾಯುವಿನ ಅನುಗ್ರಹದಿಂದ ಅರ್ಥಾತ್ ವಾಯ್ವಾಂಶದಿಂದ ಹುಟ್ಟಿದೆನು. 

ರಾಮಾಯಣದಲ್ಲೇ ಕಿಷ್ಕಿಂಧಾಕಾಂಡದಲ್ಲಿ ಜಾಂಬವಂತನಿಂದ ಹೇಳಲ್ಪಟ್ಟ ಹನುಮಂತನ ಚರಿತ್ರೆ ನೋಡೋಣ.ಮುಂದಿನ ಸಂಚಿಕೆಯಲ್ಲಿ ಮಹಾಭಾರತದಲ್ಲೂ ಪ್ರಕ್ಷಿಪ್ತ ರೂಪದಲ್ಲಿರುವ  ಇದೇ ಕಥೆಯ ಅಪಭ್ರಂಶವನ್ನು ನೋಡೋಣ. 

ಸೂಚನೆ:- 

ರ್ವಾಲ್ಮೀಕಿಯ ಅನುಯಾಯಿಗಳು ರಾಮಾಯಣದ ಕಥೆಯನ್ನು ನಂಬಿಕೊಳ್ಳಿ ,ವ್ಯಾಸರಲ್ಲಿ ನಂಬಿಕೆ ಇರುವವರು ಮಹಾಭಾರತದ ಕಥೆಯನ್ನು ನಂಬಿಕೊಳ್ಳಿ. 

ನಾನು ಈ ಎರಡೂ ಇತಿಹಾಸಗಳಲ್ಲಿನ ಮುಖ್ಯಭಾಗವನ್ನು ಆರಿಸಿಕೊಂಡು ಆ ಮುಖ್ಯಭಾಗವನ್ನು ವೇದಗಳಲ್ಲಿ ಉಲ್ಲೇಖವಾಗಿರುವ ಅರ್ಥವಾದದೊಡನೆ ಸೇರಿಸಿಕೊಂಡು ಈ ಕಥೆಯು ನೈಜಧರ್ಮದ ಸಂಕೇತಾವಾಗಿರುವಂತೆ ತಿಳಿಸುವ ಪ್ರಯತ್ನಮಾಡುತ್ತೇನೆ.  

ರಾಮಾಯಣ ಕಿಷ್ಕಿಂಧಾಕಾಂಡ:- ಸರ್ಗ ೬೫- ಶ್ಲೋಕ ಸಂಖ್ಯೆ ೦೭ ರಿಂದ ೨೨

ಅಪ್ಸರಾಪ್ಸರಸಾಂ ಶ್ರೇಷ್ಠಾ ವಿಖ್ಯಾತಾ ಪುಞ್ಜಿಕಸ್ಥಲಾ | ಅಂಜನೇತಿ ಪರಿಖ್ಯಾತಾ ಪತ್ನೀ ಕೇಸರಿಣೋ ಹರೇಃ || ೪.೦೬೫.೦೦೮ ||

ಸಮುದ್ರೋಲ್ಲಂಘನ ಸಮಯದಲ್ಲಿ ಶಾಂತಚಿತ್ತನಾಗಿ ಕುಳಿತಿದ್ದ , ತನ್ನ ಸಾಮರ್ಥ್ಯದ ವಿಸ್ಮೃತಿಯನ್ನು ಹೊಂದಿದ್ದ ಹನುಮಂತನನ್ನು ಕುರಿತು ಜಾಂಬವಂತನು ಅವನ ಪೂರ್ವಚರಿತ್ರೆ ಹಾಗೂ ಅವತಾರದ ಕಾರಣವನ್ನು ಹೇಳುತ್ತಾನೆ.

ಪುಂಜಿಕಸ್ಥಲಾ ಎಂಬ ಅಪ್ಸರೆಯು ಕಾರಣಾಂತರದಲ್ಲಿ ( ಮುಂದಿನ ಸಂಚಿಕೆಯಲ್ಲಿ ಈ ಕಾರಣದ ವಿಮರ್ಶೆ ಮಾಡುತ್ತೇನೆ.)  ಒಂದಾನೊಂದು ಕಾಲದಲ್ಲಿ ಭೂಮಿಯಲ್ಲಿ ಕೇಶರೀ ಎಂಬ ವಾನರ ರಾಜನಿಗೆ  ಅಂಜನಾ ಎಂಬ ಹೆಸರಿನ ಪತ್ನಿಯಾಗಿದ್ದಳು.  

ಅಭಿಶಾಪಾದಭೂತ್ತಾತ ವಾನರೀ ಕಾಮರೂಪಿಣೀ | ದುಹಿತಾ ವಾನರೇನ್ದ್ರಸ್ಯ ಕುಞ್ಜರಸ್ಯ ಮಹಾತ್ಮನಃ || ೪.೦೬೫.೦೦೯ || 

ಯಾವುದಾದರೊಂದು ಶಾಪದಿಂದ ಕಾಮರೂಪದ ವಾನರ ಸ್ತ್ರೀಯಾಗಿ ಕುಂಜರ ಎಂಬ ವಾನರ ರಾಜನ ಮಗಳಾಗಿ ಹುಟ್ಟಿದ್ದಳು.

ಕಪಿತ್ವೇ ಚಾರುಸರ್ವಾಙ್ಗೀ ಕದಾ ಚಿತ್ಕಾಮರೂಪಿಣೀ | ಮಾನುಷಂ ವಿಗ್ರಹಂ ಕೃತ್ವಾ ಯೌವನೋತ್ತಮಶಾಲಿನೀ || ೪.೦೬೫.೦೧೦ || 

ಇವಳಾದರೋ ತನ್ನ ಅಪ್ಸರತ್ವಾ ಗುಣದಿಂದ ಮನುಷ್ಯಳ ರೂಪವನ್ನು ತಾಳಿ ಸರ್ವಾಲಂಕಾರ ಭೂಷಣಳಾಗಿ , ತನ್ನ ಯೌವ್ವನವನ್ನು ಮೆರೆಯುತ್ತಾ ಅಲೆದಾಡುತ್ತಿದ್ದಳು.

ಅಚರತ್ಪರ್ವತಸ್ಯಾಗ್ರೇ ಪ್ರಾವೃಡಮ್ಬುದಸಂನಿಭೇ | ವಿಚಿತ್ರಮಾಲ್ಯಾಭರಣಾ ಮಹಾರ್ಹಕ್ಷೌಮವಾಸಿನೀ ||  ೪.೦೬೫.೦೧೧ || 

ವಿಚಿತ್ರವಾದ ಆಭರಣಗಳನ್ನೂ ಬಟ್ಟೆಯನ್ನೂ ಧರಿಸಿದ್ದ ಇವಳು  ಪರ್ವತಶಿಖರಗಳಿಗೆ ಹೊಂದುಕೊಂಡಿರುಂಥ ವರ್ಷಮೇಘದಂತೆ ಸಂಚರಿಸುತ್ತಿದ್ದಳು.   

 

ತಸ್ಯಾ ವಸ್ತ್ರಂ ವಿಶಾಲಾಕ್ಷ್ಯಾಃ ಪೀತಂ ರಕ್ತದಶಂ ಶುಭಮ್ | ಸ್ಥಿತಾಯಾಃ ಪರ್ವತಸ್ಯಾಗ್ರೇ ಮಾರುತೋಽಪಹರಚ್ಛನೈಃ || ೪.೦೬೫.೦೧೨||

ವಿಶಾಲಾಕ್ಷಿಯೂ ,ಕೆಂಪುರೇಷ್ಮೆಬಟ್ಟೆಯುಟ್ಟಿರುವದರಿಂದ ಶುಭವನ್ನುಂಟುಮಾಡುವಳಂತೆಯೂ ಕಾಣಿಸುತ್ತಿದ್ದ ಇವಳನ್ನು ಕಂಡು ವಾಯು ದೇವನು ಮೋಹಿತನಾಗಿ ತನ್ನ ಮೃದುವಾದ ಬೀಸುವಿಕೆಯಿಂದ ಅವಳನ್ನು ವಿವಸ್ತ್ರಮಾಡಿದನು.

ಸ ದದರ್ಶ ತತಸ್ತಸ್ಯಾ ವೃತ್ತಾವೂರೂ ಸುಸಂಹತೌ | ಸ್ತನೌ ಚ ಪೀನೌ ಸಹಿತೌ ಸುಜಾತಂ ಚಾರು ಚಾನನಮ್ || ೪.೦೬೫.೦೧೩ ||

ಯೌವ್ವನದಿಂದ ತುಂಬಿತುಳುಕುತ್ತಿದ್ದ ಅವಳ ಅಂಗಸೌಷ್ಟವಗಳನ್ನು , ಅದನ್ನು ಪ್ರದರ್ಶಸಲು ಉತ್ಸುಕಳಾಗಿರುವಳೋ ಎಂಬ ಮುಖಭಾವವನ್ನೂ ನೋಡಿದನು. 

 

ತಾಂ ವಿಶಾಲಾಯತಶ್ರೋಣೀಂ ತನುಮಧ್ಯಾಂ ಯಶಸ್ವಿನೀಮ್ | ದೃಷ್ಟ್ವೈವ ಶುಭಸರ್ವಾಗ್ನೀಂ ಪವನಃ ಕಾಮಮೋಹಿತಃ || ೪.೦೬೫.೦೧೪ || 

ವಿಶಾಲವಾಗಿಯೂ ಎತ್ತರವಾಗಿಯೂ ಇದ್ದ ಅವಳ ಕಟಿಪ್ರದೇಶದಲ್ಲಿ ಕಂಡರೂ ಕಾಣದಂತಿದ್ದ ತೆಳುವಾದ ಸೊಂಟವನ್ನು ನೋಡಿದೊಡನೆಯೇ  ವಾಯುದೇವನು ಕಾಮಪೀಡೆಯಿಂದ ನರಳಿದನು.

ಸ ತಾಂ ಭುಜಾಭ್ಯಾಂ ಪೀನಾಭ್ಯಾಂ ಪರ್ಯಷ್ವಜತ ಮಾರುತಃ | ಮನ್ಮಥಾವಿಷ್ಟಸರ್ವಾಙ್ಗೋ ಗತಾತ್ಮಾ ತಾಮನಿನ್ದಿತಾಮ್ || ೪.೦೬೫.೦೧೫ ||

ಎಲ್ಲಾ ಅಂಗಗಳನ್ನೂ ಆಕ್ರಮಿಸಿದ್ದ ಕಾಮದೇವನ ಹೊಡೆತಕ್ಕೆ ನಲುಗಿದ ವಾಯುದೇವನು ಅನಿಂದಿತಳಾದ ಅಂಜನಾದೇವಿಯನ್ನು ತನ್ನ ಬಾಹುಗಳಿಂದ ಆವರಿಸಿಕೊಂಡುಬಿಟ್ಟನು. 

ಸಾ ತು ತತ್ರೈವ ಸಂಭ್ರಾನ್ತಾ ಸುವೃತ್ತಾ ವಾಕ್ಯಮಬ್ರವೀತ್ | ಏಕಪತ್ನೀವ್ರತಮಿದಂ ಕೋ ನಾಶಯಿತುಮಿಚ್ಛತಿ || ೪.೦೬೫.೦೧೬ ||

ಏಕಾಏಕೀ ತನಗರಿವಿಲ್ಲದಿರುವಂತೇ ಪರ ಪುರುಷನಿಂದ ಆವರಿಸಲ್ಪಟ್ಟಾ ಅಂಜನಾದೇವಿಯು ದಿಗ್ಭ್ರಾಂತಿಯಿಂದ *ಏಕಪತ್ನೀವ್ರತಸ್ಥಳಾದ ಅರ್ಥಾತ್  ಒಬ್ಬನಿಗೇ ಹೆಂಡತಿಯಾಗಿರುತ್ತೇನೆ ಎಂಬುದಾಗಿ ಪ್ರಮಾಣಮಾಡಿಕೊಂಡಿರುವ( ಒಬ್ಬಳನ್ನೇ ಮದುವೆಯಾಗುತ್ತೇನೆ ಎಂಬುದಾಗಿ ಕೇಸರಿಯ ಏಕಪತ್ನೀವ್ರತವನ್ನೂ ಹೇಳಬಹುದು)  ಈ ವ್ರತವನ್ನು ನಾಶಮಾಡಲು  ಪ್ರಯತ್ನಿಸುತ್ತಿರುವ ನೀನು ಯಾರು ? ಎಂಬುದಾಗಿ ಉದ್ಗಾರಮಾಡಿದಳು.

ಅಞ್ಜನಾಯಾ ವಚಃ ಶ್ರುತ್ವಾ ಮಾರುತಃ ಪ್ರತ್ಯಭಾಷತ | ನ ತ್ವಾಂ ಹಿಂಸಾಮಿ ಸುಶ್ರೋಣಿ ಮಾ ಭೂತ್ತೇ ಸುಭಗೇ ಭಯಮ್ || ೪.೦೬೫.೦೧೭ ||

ಅಂಜನಾದೇವಿಯ ಮಾತುಗಳನ್ನು ಕೇಳಿದ ಕಾಮಪೀಡೀತನಾದ ವಾಯುದೇವನು *ನಾನು ನಿನ್ನನ್ನು ಹಿಂಸಿಸುವದಿಲ್ಲ. ನಿನ್ನ ಪಾತಿವ್ರತ್ಯಕ್ಕೂ ನಾನು ಹಾನಿಮಾಡುವದಿಲ್ಲ. ನನ್ನಿಂದ ಭಯಭೀತಳಾಗದಿರು* ಎಂದನು

  

ಮನಸಾಸ್ಮಿ ಗತೋ ಯತ್ತ್ವಾಂ ಪರಿಷ್ವಜ್ಯ ಯಶಸ್ವಿನಿ | ವೀರ್ಯವಾನ್ ಬುದ್ಧಿಸಂಪನ್ನಃ ಪುತ್ರಸ್ತವ ಭವಿಷ್ಯತಿ || ೪.೦೬೫.೦೧೮  ||

ನಾನು ಯಶೋವಂತಳಾದ ನಿನ್ನನ್ನು ಮನಸ್ಸಿನಮೂಲಕ ಪ್ರವೇಶಮಾಡಿಕೊಂಡೇ ನಿನ್ನಲ್ಲಿ ಈ ಆಲಿಂಗನದ ಭಾವವನ್ನು ಉಂಟುಮಾಡಿದ್ದೇನೆ.ನನ್ನ ಮನಸ್ಸಿನ ವಾಸನೆಯ ಮೂಲಕ ಉಂಟಾದ ಅಂಶದ ಪ್ರಭಾವದಿಂದ ಮುಂದೆ ನಿನ್ನಲ್ಲಿ ನನ್ನಷ್ಟೇ ಶಕ್ತಿಯುಳ್ಳ , ಬುದ್ಧಿವಂತನಾದ ಮಗನನ್ನು ನೀನು ಪಡೆಯುತ್ತಿಯೇ.

ಅಭ್ಯುತ್ಥಿತಂ ತತಃ ಸೂರ್ಯಂ ಬಾಲೋ ದೃಷ್ಟ್ವಾ ಮಹಾವನೇ | ಫಲಂ ಚೇತಿ ಜಿಘೃಕ್ಷುಸ್ತ್ವಮುತ್ಪ್ಲುತ್ಯಾಭ್ಯಪತೋ ದಿವಮ್ || ೪.೦೬೫.೦೧೯ ||

ನಂತರ ಅಂಜನಾ ದೇವಿಯು ನಿನ್ನನ್ನು ಹಡೆದಳು. ಜಾಂಬವಂತನು ಹೇಳುತ್ತಾನೆ ,ಆದ್ದರಿಂದಲೇ ನಿನ್ನನ್ನು ವಾಯುಪುತ್ರ ಎಂಬುದಾಗಿ ಕರೆಯುತ್ತಾರೆ. ಒಮ್ಮೆ ನೀನು ಬಾಲಕನಾಗಿದ್ದಾಗ ಸಂಧ್ಯಾಕಾಲದ ತಾಮ್ರವರ್ಣದ ಸೂರ್ಯನನ್ನು ನೋಡೀ ಅದನ್ನು ಫಲವೆಂದು ತಿಳಿದು ಆ ಫಲವನ್ನು ಸವಿಯ ಬೇಕೆಂದು ಆಕಾಶಕ್ಕೆ ನೆಗೆದುಬಿಟ್ಟೆ. 

ಶತಾನಿ ತ್ರೀಣಿ ಗತ್ವಾಥ ಯೋಜನಾನಾಂ ಮಹಾಕಪೇ | ತೇಜಸಾ ತಸ್ಯ ನಿರ್ಧೂತೋ ನ ವಿಷಾದಂ ತತೋ ಗತಃ || ೪. ೦೬೫.೦೨೦ ||

ಮುನ್ನೂರು ಯೋಜನಗಳಷ್ಟು ಎತ್ತರ ಹಾರಿದಾಗ ಸೂರ್ಯನ ತೀಕ್ಷ್ಣ ಹಾಗೂ ಪ್ರಜ್ವಲವಾದ ತೇಜಸ್ಸಿನಿಂದ ನಿನಗೆ ಸ್ವಲ್ಪವೂ ಆಯಾಸವಾಗಲಿಲ್ಲ. 

  

ತಾವದಾಪತತಸ್ತೂರ್ಣಮನ್ತರಿಕ್ಷಂ ಮಹಾಕಪೇ | ಕ್ಷಿಪ್ತಮಿನ್ದ್ರೇಣ ತೇ ವಜ್ರಂ ಕ್ರೋಧಾವಿಷ್ಟೇನ ಧೀಮತಾ || ೪.೦೬೫.೦೨೧ ||

ಸೂರ್ಯನಕಡೆಗೆ ಅತೀವೇಗದಿಂದ ಹೋಗುತ್ತಿದ್ದ ನಿನ್ನನ್ನು ಕಂಡ ಇಂದ್ರನು ಕೋಪದಿಂದ ತನ್ನ ವಜ್ರಾಯುಧವನ್ನು ನಿನ್ನ ಮೇಲೆ ಪ್ರಯೋಗಿಸಿದನು.

ತತಃ ಶೈಲಾಗ್ರಶಿಖರೇ ವಾಮೋ ಹನುರಭಜ್ಯತ | ತತೋ ಹಿ ನಾಮಧೇಯಂ ತೇ ಹನುಮಾನಿತಿ ಕೀರ್ತ್ಯತೇ || ೪.೦೬೫.೦೨೨ ||

ವಜ್ರಾಯುಧವು  ನಿನ್ನ ಕೆಳದವಡೆಯ ಮೇಲೆ ಪ್ರಹಾರಮಾಡಿತು. ಹೊಡೆತದಿಂದ ನೀನು ಪರ್ವತದ ಮೇಲಿಂದ ಉರುಳುತ್ತಾ ಕೆಳಗೆ ಬಿದ್ದೆ. ಆದ್ದರಿಂದಲೇ ನಿನಗೆ ಹನುಮಂತನೆಂಬ ಹೆಸರು.

ಕಥೆಯ ಸಾರಾಂಶ.:- 

ಸಮುದ್ರೋಲ್ಲಂಘನ ಸಮಯದಲ್ಲಿ ಶಾಂತಚಿತ್ತನಾಗಿ ಕುಳಿತಿದ್ದ , ತನ್ನ ಸಾಮರ್ಥ್ಯದ ವಿಸ್ಮೃತಿಯನ್ನು ಹೊಂದಿದ್ದ ಹನುಮಂತನನ್ನು ಕುರಿತು ಜಾಂಬವಂತನು ಅವನ ಪೂರ್ವಚರಿತ್ರೆ ಹಾಗೂ ಅವತಾರದ ಕಾರಣವನ್ನು ಹೇಳುತ್ತಾನೆ.

ಪುಂಜಿಕಸ್ಥಲಾ ಎಂಬ ಅಪ್ಸರೆಯು ಕಾರಣಾಂತರದಲ್ಲಿ ( ಮುಂದಿನ ಸಂಚಿಕೆಯಲ್ಲಿ ಈ ಕಾರಣದ ವಿಮರ್ಶೆ ಮಾಡುತ್ತೇನೆ.)  ಒಂದಾನೊಂದು ಕಾಲದಲ್ಲಿ ಭೂಮಿಯಲ್ಲಿ ಕೇಶರೀ ಎಂಬ ವಾನರ ರಾಜನಿಗೆ  ಅಂಜನಾ ಎಂಬ ಹೆಸರಿನ ಪತ್ನಿಯಾಗಿದ್ದಳು.ಯಾವುದಾದರೊಂದು ಶಾಪದಿಂದ ಕಾಮರೂಪದ ವಾನರ ಸ್ತ್ರೀಯಾಗಿ ಕುಂಜರ ಎಂಬ ವಾನರ ರಾಜನ ಮಗಳಾಗಿ ಹುಟ್ಟಿದ್ದಳು.ಇವಳಾದರೋ ತನ್ನ ಅಪ್ಸರತ್ವಾ ಗುಣದಿಂದ ಮನುಷ್ಯಳ ರೂಪವನ್ನು ತಾಳಿ ಸರ್ವಾಲಂಕಾರ ಭೂಷಣಳಾಗಿ , ತನ್ನ ಯೌವ್ವನವನ್ನು ಮೆರೆಯುತ್ತಾ ಅಲೆದಾಡುತ್ತಿದ್ದಳು.ವಿಚಿತ್ರವಾದ ಆಭರಣಗಳನ್ನೂ ಬಟ್ಟೆಯನ್ನೂ ಧರಿಸಿದ್ದ ಇವಳು ಪರ್ವತಶಿಖರಗಳಿಗೆ ಹೊಂದುಕೊಂಡಿರುಂಥ ವರ್ಷಮೇಘದಂತೆ ಸಂಚರಿಸುತ್ತಿದ್ದಳು.ವಿಶಾಲಾಕ್ಷಿಯೂ ,ಕೆಂಪುರೇಷ್ಮೆಬಟ್ಟೆಯುಟ್ಟಿರುವದರಿಂದ ಶುಭವನ್ನುಂಟುಮಾಡುವಳಂತೆಯೂ ಕಾಣಿಸುತ್ತಿದ್ದ ಇವಳನ್ನು ಕಂಡು ವಾಯು ದೇವನು ಮೋಹಿತನಾಗಿ ತನ್ನ ಮೃದುವಾದ ಬೀಸುವಿಕೆಯಿಂದ ಅವಳನ್ನು ವಿವಸ್ತ್ರಮಾಡಿದನು.ಯೌವ್ವನದಿಂದ ತುಂಬಿತುಳುಕುತ್ತಿದ್ದ ಅವಳ ಅಂಗಸೌಷ್ಟವಗಳನ್ನು , ಅದನ್ನು ಪ್ರದರ್ಶಸಲು ಉತ್ಸುಕಳಾಗಿರುವಳೋ ಎಂಬ ಮುಖಭಾವವನ್ನೂ ನೋಡಿದನು. ವಿಶಾಲವಾಗಿಯೂ ಎತ್ತರವಾಗಿಯೂ ಇದ್ದ ಅವಳ ಕಟಿಪ್ರದೇಶದಲ್ಲಿ ಕಂಡರೂ ಕಾಣದಂತಿದ್ದ ತೆಳುವಾದ ಸೊಂಟವನ್ನು ನೋಡಿದೊಡನೆಯೇ  ವಾಯುದೇವನು ಕಾಮಪೀಡೆಯಿಂದ ನರಳಿದನು.ಎಲ್ಲಾ ಅಂಗಗಳನ್ನೂ ಆಕ್ರಮಿಸಿದ್ದ ಕಾಮದೇವನ ಹೊಡೆತಕ್ಕೆ ನಲುಗಿದ ವಾಯುದೇವನು ಅನಿಂದಿತಳಾದ ಅಂಜನಾದೇವಿಯನ್ನು ತನ್ನ ಬಾಹುಗಳಿಂದ ಆವರಿಸಿಕೊಂಡುಬಿಟ್ಟನು. ಏಕಾಏಕೀ ತನಗರಿವಿಲ್ಲದಿರುವಂತೇ ಪರ ಪುರುಷನಿಂದ ಆವರಿಸಲ್ಪಟ್ಟಾ ಅಂಜನಾದೇವಿಯು ದಿಗ್ಭ್ರಾಂತಿಯಿಂದ *ಏಕಪತ್ನೀವ್ರತಸ್ಥಳಾದ ಅರ್ಥಾತ್  ಒಬ್ಬನಿಗೇ ಹೆಂಡತಿಯಾಗಿರುತ್ತೇನೆ ಎಂಬುದಾಗಿ ಪ್ರಮಾಣಮಾಡಿಕೊಂಡಿರುವ( ಒಬ್ಬಳನ್ನೇ ಮದುವೆಯಾಗುತ್ತೇನೆ ಎಂಬುದಾಗಿ ಕೇಸರಿಯ ಏಕಪತ್ನೀವ್ರತವನ್ನೂ ಹೇಳಬಹುದು)  ಈ ವ್ರತವನ್ನು ನಾಶಮಾಡಲು  ಪ್ರಯತ್ನಿಸುತ್ತಿರುವ ನೀನು ಯಾರು ? ಎಂಬುದಾಗಿ ಉದ್ಗಾರಮಾಡಿದಳು.ಅಂಜನಾದೇವಿಯ ಮಾತುಗಳನ್ನು ಕೇಳಿದ ಕಾಮಪೀಡೀತನಾದ ವಾಯುದೇವನು *ನಾನು ನಿನ್ನನ್ನು ಹಿಂಸಿಸುವದಿಲ್ಲ. ನಿನ್ನ ಪಾತಿವ್ರತ್ಯಕ್ಕೂ ನಾನು ಹಾನಿಮಾಡುವದಿಲ್ಲ. ನನ್ನಿಂದ ಭಯಭೀತಳಾಗದಿರು* ಎಂದನು.ಯಶೋವಂತಳದ ನಿನ್ನನ್ನು ಮನಸ್ಸಿನ ಮೂಲಕ ಪ್ರವೇಶಮಾಡಿಕೊಂಡೇ ನಿನ್ನಲ್ಲಿ ಈ ಆಲಿಂಗನದ ಭಾವವನ್ನು ಉಂಟುಮಾಡಿದ್ದೇನೆ(ಪರಕಾಯ ಪ್ರವೇಶ) .ನನ್ನ ಮನಸ್ಸಿನ ವಾಸನೆಯ ಮೂಲಕ ಉಂಟಾದ ಅಂಶದ ಪ್ರಭಾವದಿಂದ ಮುಂದೆ ನಿನ್ನಲ್ಲಿ ನನ್ನಷ್ಟೇ ಶಕ್ತಿಯುಳ್ಳ , ಬುದ್ಧಿವಂತನಾದ ಮಗನನ್ನು ನೀನು ಪಡೆಯುತ್ತಿಯೇ. ನಂತರ ಅಂಜನಾ ದೇವಿಯು ನಿನ್ನನ್ನು ಹಡೆದಳು. ಜಾಂಬವಂತನು ಹೇಳುತ್ತಾನೆ ,ಆದ್ದರಿಂದಲೇ ನಿನ್ನನ್ನು ವಾಯುಪುತ್ರ ಎಂಬುದಾಗಿ ಕರೆಯುತ್ತಾರೆ. ಒಮ್ಮೆ ನೀನು ಬಾಲಕನಾಗಿದ್ದಾಗ ಸಂಧ್ಯಾಕಾಲದ ತಾಮ್ರವರ್ಣದ ಸೂರ್ಯನನ್ನು ನೋಡೀ ಅದನ್ನು ಫಲವೆಂದು ತಿಳಿದು ಆ ಫಲವನ್ನು ಸವಿಯ ಬೇಕೆಂದು ಆಕಾಶಕ್ಕೆ ನೆಗೆದುಬಿಟ್ಟೆ. ಮುನ್ನೂರು ಯೋಜನಗಳಷ್ಟು ಎತ್ತರ ಹಾರಿದಾಗ ಸೂರ್ಯನ ತೀಕ್ಷ್ಣ ಹಾಗೂ ಪ್ರಜ್ವಲವಾದ ತೇಜಸ್ಸಿನಿಂದ ನಿನಗೆ ಸ್ವಲ್ಪವೂ ಆಯಾಸವಾಗಲಿಲ್ಲ. ಸೂರ್ಯನಕಡೆಗೆ ಅತೀವೇಗದಿಂದ ಹೋಗುತ್ತಿದ್ದ ನಿನ್ನನ್ನು ಕಂಡ ಇಂದ್ರನು ಕೋಪದಿಂದ ತನ್ನ ವಜ್ರಾಯುಧವನ್ನು ನಿನ್ನ ಮೇಲೆ ಪ್ರಯೋಗಿಸಿದನು.ವಜ್ರಾಯುಧವು  ನಿನ್ನ ಕೆಳದವಡೆಯ ಮೇಲೆ ಪ್ರಹಾರಮಾಡಿತು. ಹೊಡೆತದಿಂದ ನೀನು ಪರ್ವತದ ಮೇಲಿಂದ ಉರುಳುತ್ತಾ ಕೆಳಗೆ ಬಿದ್ದೆ. ಆದ್ದರಿಂದಲೇ ನಿನಗೆ ಹನುಮಂತನೆಂಬ ಹೆಸರು.

ಇನ್ನು ಮುಂದೆ ಇಂದ್ರನ ಕಾರ್ಯದಿಂದ ವಾಯು ಕೋಪಗೊಂಡು ತನ್ನ ಚಲನೆಯನ್ನು ನಿಲ್ಲಿಸಿ ಅಲ್ಲೋಲಕಲ್ಲೋಲ ಉಂಟುಮಾಡಿದನು ಎಂಬುಗಾಗಿ ಕಥೆಯು ಮುಂದುವರೆಯುತ್ತದೆ. ಮುಂದಿನ ಭಾಗದಲ್ಲಿ ಮಹಾಭಾರತದಲ್ಲಿರುವ ಇದೇ ಕಥೆಯ ಅಪಭ್ರಂಶಭಾಗವನ್ನು ತಿಳಿಸಿಕೊಡುತ್ತೇನೆ. 

ಹರಿ ಓಮ್ ತತ್ ಸತ್

ಸತ್ಯಪ್ರಕಾಶ.

ಮುಂದಿನ ಭಾಗ 

ರುದ್ರಾಂಶ ಸಂಭೂತ ಆಜನ್ಮಬ್ರಹ್ಮಚಾರೀ  ಹನುಮಂತ:- ಭಾಗ-೦೩

ಹನುಮಂತ ಜನನ ಮಹಾಭಾರತ ಹಾಗೂ ಇತರ ರಾಮಾಯಣಗಳಲ್ಲಿರುವ ವಿಷಯ.

ರುದ್ರಾಂಶ ಸಂಭೂತ ಆಜನ್ಮಬ್ರಹ್ಮಚಾರೀ ಹನುಮಂತ:- ಭಾಗ-೦೧

ರುದ್ರಾಂಶ ಸಂಭೂತ ಆಜನ್ಮಬ್ರಹ್ಮಚಾರೀ  ಹನುಮಂತ:- ಭಾಗ-೦೧

ಇಂದಿನ ಬರಹದಲ್ಲಿ ಹನುಮಂತನಿಗೆ ಮದುವೇಯಾಗಿದೆ ಮುಂತಾದ ಅಪಭ್ರಂಶಗಳ ನಿವಾರಣೆ ಮಾಡುವದಕ್ಕೋಸಕರ ಹಾಗೂ ಹನುಮಂತನ ಜನ್ಮಸಂಬಂಧ ವೇದದಲ್ಲಿ ಹೇಳಿರುವದಕ್ಕೂ ಪುರಾಣ ಸ್ಮೃತಿಗಳಲ್ಲಿ ಹೇಳಿರುವದಕ್ಕೂ ಹೇಗೆ ಸರಿಹೊಂದಿಸುವದು ಎಂಬ ಸಣ್ಣ ಪ್ರಯತ್ನ.ಮೊದಲಿಗೆ ಪುರಾಣಸ್ಮೃತಿಗಳಲ್ಲಿ ಹೇಳಲ್ಪಟ್ಟ  ಪ್ರಸಿದ್ಧವಾದ ಕಥೆ ನಂತರ ಹನುಮಂತನಿಗೆ ಮದುವೆಯಾಗಿದೆ ಎಂಬ ಅಪ್ರಭ್ರಂಶ ನಿವಾರಣೆ ಮತ್ತು ಕೊನೆಯ ಭಾಗದಲ್ಲಿ ಹನುಮಂತನ ಜನ್ಮ ಸಂಬಂಧ ವೇದಗಳಲ್ಲಿರುವ ವಿಚಾರ ವಿಮರ್ಶೆ.   

ಪುರಾಣಗಳಲ್ಲಿ ಹೆಚ್ಚು ಕಡಿಮೆ ಈ ಕೆಳಗಿನ ಕಥೆಯೇ ಹೆಚ್ಚು ಪ್ರಚಲಿತವಾಗಿದೆ.ಇದರ ಪ್ರಮಾಣಪ್ರತಿಪಾದನೆಗೆ ನಾನು ಕೈ ಹಾಕುವದಿಲ್ಲ.ಏಕೆಂದರೇ ಹನುಮಂತನ ಜನನ ವಿಷಯದಲ್ಲಿ ಸಾಕಷ್ಟು ವ್ಯತಿರಿಕ್ತವಾದ ಕಥೆಗಳಿವೆ. ಆದರೇ ಹನುಮಂತನು ರುದ್ರಾಂಶ ಸಂಭೂತ ವಾಯುಪುತ್ರ (ವಾಯು ಕೂಡ ರುದ್ರಾಂಶ ಸಂಭೂತನೇ ,ವಾಯುವಿಗೆ ವೇದಗಳಲ್ಲಿ ರುದ್ರನ ಮಗ ಎಂಬುದಾಗಿ ನೇರವಾಗಿಯೇ ಹೇಳಿದೆ)  ಮತ್ತೂ ಕೇಸರೀ ಅಂಜನಾದೇವಿಯರ ಮಗ ಎಂಬುವದು ನಿರ್ವಿವಾದವಾಗಿರುವ  ಸಾರ್ವಕಾಲಿಕ ಸತ್ಯ

ಶಿವನು ರಾಮಾವತಾರದಲ್ಲಿ ಸೀತೆಯನ್ನು ಹುಡುಕುವ ಕೆಲಸದಲ್ಲಿ ಸಹಾಯಮಾಡುವ ಸಲುವಾಗಿ  ಹನುಮಂತನರೂಪದಲ್ಲಿ ಹುಟ್ಟಿ ನಾನಾಲೀಲೆಗಳನ್ನು ತೋರಿಸಿದನು. ಸಮುದ್ರಮಂಥನದ ಸಮಯದಲ್ಲಿ ಮೋಹಿನೀ ರೂಪಧರಿಸಿದ ವಿಷ್ಣುವಿನಲ್ಲಿ ಮೋಹಿತನಾಗಿ ತನ್ನ ರೇತಸ್ಸನ್ನು ಚೆಲ್ಲಿದನು.ಈ ರೇತಸ್ಸನ್ನು ಗೌತಮ ಮಹರ್ಷಿಗಳು ತಪೋನಿರತಳಾದ ಅಂಜನಾದೇವಿಯ ಗರ್ಭದಲ್ಲಿ ಸೇರಿಸಿದರು.ಇದು ಒಂದು ಕಥೆ. ಅಂಜನಾದೇವಿಯ ಗರ್ಭದಿಂದ ಜನಿಸಿದ ರುದ್ರಾಂಶ ಸಂಭೂತನು  ಒಮ್ಮೆ ಹಸಿವಿನಿಂದ ಕೂಡಿದಾಗ ಸಂಧ್ಯಾಕಾಶದಲ್ಲಿರುವ ಸೂರ್ಯನನ್ನು ನೋಡಿ ಅದನ್ನು ಹಣ್ಣೆಂದು ತಿಳಿದು ಹಿಡಿಯಲು ಹೋದಾಗ ಇಂದ್ರನ ವಜ್ರಾಯುಧದ ಪೆಟ್ಟಿನಿಂದ ಮೂರ್ಛೆ ಹೊಂದಿ ಕೆಳಗೆ ಬಿದ್ದನು.ನಂತರ ಈಶ್ವರನು ಇವನನ್ನು ಸಂತೈಸುತ್ತಾ  ಬ್ರಹ್ಮಾಸ್ತ್ರ ,ನಾರಾಯಣಾಸ್ತ್ರ ಪಾಶುಪತಾಸ್ತ್ರ ಮುಂತಾದ ಯಾವುದೇ ಅಸ್ತ್ರಗಳಿಂದಲೂ ಪರಾಜಿತನಾಗದಂತೆ ಅನುಗ್ರಹಿಸಿ ಚಿರಂಜೀವತ್ವವನ್ನೂ ದಯಪಾಲಿಸಿದನು. ನಂತರ ಈಶ್ವರನ ಆಜ್ಞೆಯ ಮೇರೆಗೆ ಸೂರ್ಯನಿಂದಲೇ ನಾಲ್ಕೂ ವೇದಗಳು ಸರ್ವ ಶಾಸ್ತ್ರಗಳ ಬೋಧನೆ  ಎಂಬ ಕಥೆ.ಶಿವಪುರಾಣದಲ್ಲಿ ಇದೆ. ಶಿವಪುರಾಣದಲ್ಲಿಯೇ  ಹನುಮಂತನಿಗೆ  ಹರಿಹರ ಪುತ್ರ ,ಕುಮಾರ , ಅಗ್ನಿ , ವಿಭಾವಸು ಎಂಬ ಹೆಸರಿನಿಂದಲೂ ಹೇಳಲಾಗಿದೆ.ಇದನ್ನು ಹನುಮಂತನ ಸಹಸ್ರ ನಾಮಾವಳಿಯಲ್ಲಿ ಕುಮಾರ ಎಂಬ ಹೆಸರೂ ಇದೆ.ಹಾಗೆಯೇ ಗಣೇಶನ ಭ್ರಾತೃ ಎಂಬುದಾಗಿಯೂ ಕರೆದಿರುವದೂ  ಇದೇ ಸಹಸ್ರನಾಮಗಳಲ್ಲಿ ಕಂಡುಬರುತ್ತದೆ. 

ಹನೂಮತ್ಸಹಸ್ರನಾಮಾವಳಿ :-

ಅಗ್ನಿರ್ವಿಭಾವಸುರ್ಭಾಸ್ವಾನ್ ಯಮೋ ನಿರೃತಿರೇವ ಚ ॥ 35॥ ಮೇಘನಾದೋ ಮೇಘರೂಪೋ ಮೇಘವೃಷ್ಟಿನಿವಾರಣಃ ॥ 83॥

ಕಾಳಿಕಾರಹಸ್ಯ :-

ಕುಮಾರಬ್ರಹ್ಮಚಾರೀ ಚ ರತ್ನಕುಂಡಲದೀಪ್ತಿಮಾನ್ ॥ 7॥ ವಜ್ರದಂಷ್ಟ್ರೋ ವಜ್ರನಖೋ ರುದ್ರವೀರ್ಯಸಮುದ್ಭವಃ ॥ 19॥

ಇವುಗಳು ಹೇಗಾದರೂ ಇರಲಿ ಹನುಮಂತನು ರುದ್ರಾಂಶಸಂಭೂತನೆಂಬುದಾಗಿ ಎಲ್ಲಿಯೂ ಸಂಶಯವಿಲ್ಲ.ಇದಕ್ಕೆ ವೇದಗಳ ಪ್ರಮಾಣವನ್ನೂ ಇದೆ ಬರಹದ ಕೊನೆಯಲ್ಲಿ ಕೊಡುತ್ತೇವೆ.  

ಪಲ್ಲವರು ತಮ್ಮ  ಮೂಲದೇವರುಗಳಲ್ಲಿ ಹನುಮಂತ  ,ಪಾರ್ವತೀ ಮತ್ತು ಗಣೇಶನ ವಿಗ್ರಹವನ್ನು ಒಂದೇ ಪೀಠದಲ್ಲಿ ನಿರ್ಮಿಸಿರುವದು ಇಂದಿಗೇ ಸಿಕಂದರಾಬಾದಿನಲ್ಲಿ ಸುವರ್ಚಲಾ ದೇವಿ ಎಂಬ ದೇವಸ್ಥಾನದ ಹೆಸರಿನಲ್ಲಿ ಪ್ರಖ್ಯಾತವಾಗಿದೆ.ಹಿಂದೆ ಈ ಸ್ಥಳದಲ್ಲಿ ಕೆಲವು ಮೂರ್ಖಜನರು  ತಾಯಿ ಮಕ್ಕಳು,ಅರ್ಥಾತ್ ಪಾರ್ವತೀ ಸಮೇತ ಹನುಮಂತ ಮತ್ತು ಗಣೇಶನನ್ನು ಈಶ್ವರನ ಮಕ್ಕಳಾಗಿ ಪ್ರತಿಬಿಂಬಿಸಿರುವ ಈ   ಮೂರ್ತಿಯಲ್ಲಿರುವ ಹೆಣ್ಣು ದೇವತೆ ಹನುಮಂತನ ಪತ್ನಿಯಾದ ಸುವರ್ಚಲಾದೇವಿ ಎಂಬುದಾಗಿ ಚರಿತ್ರೆಯನ್ನು ತಿರುಚಿ ಅಕ್ಷಮ್ಯ ಅಪರಾಧ ಮಾಡಿದ್ದಾರೆ.  ಇದಕ್ಕೆ ಮೂಲಕಾರಣ ಶೈವದ್ವೇಷಿಯಾದ ಯಾರೋ ಒಬ್ಬರು  ಸುವರ್ಚಲಾ ಎಂಬುವವಳು ಸೂರ್ಯನ ಮಗಳು ಎಂಬುದಾಗಿ ಹೇಳಿ , ವಿಗ್ರಹದಲ್ಲಿರುವ ಹೆಣ್ಣು ದೈವ ಹನುಮಂತನ ಹೆಂಡತಿ ಸುವರ್ಚಲಾ ಎಂಬುದಾಗಿ ಹೇಳಿ ಹೊಸದಾದ ಕಟ್ಟುಕಥೆಯನ್ನು ಸೃಷ್ಟಿಸಿದ್ದಾರೆ. 

ಸುಮಾರು ಹದಿನೈದನೆಯ ಶತಮಾನದಲ್ಲಿ ಈ ದೇವಸ್ಥಾನವನ್ನು ಪುನಸ್ಸ್ಥಾಪಿಸಿದ್ದಾರೆ. ಇದಕ್ಕೆ ಮರುಳುಮಾಡುವಂಥ ಕಥೆಯನ್ನೂ ಸೂರ್ಯನ ಬಳಿ ನವ-ವ್ಯಾಕರಣ ಕಲಿಯುವದಕ್ಕಾಗಿ ತನ್ನ ಬ್ರಹ್ಮಚರ್ಯವನ್ನು ತ್ಯಾಗಮಾಡಿದನು , ನಂತರ ಹನುಮಂತನು ಬ್ರಹ್ಮ ಪದವಿಯನ್ನು ಪಡೆದ ನಂತರ ಈ ಸುವರ್ಚಲಾ ಎಂಬುವಳೇ ಸರಸ್ವತಿಯಾಗುತ್ತಾಳೆ (ಶಿವದ್ವೇಷಿಗಳ ಮೂಲ ಇಲ್ಲಿದೆ) ,  ಎಂಬುದಕ್ಕೇ ಯಾವುದೇ ಆಧಾರವಿಲ್ಲದ ಅಸಂಬದ್ಧ  ಕಥೆಯನ್ನು ಸೃಷ್ಟಿಮಾಡಿದ್ದಾರೆ.  ಹನುಮಂತನಿಗೂ ರುದ್ರನಿಗೂ ಸಂಬಂಧ ಕಡಿಯುವದೇ ಇವರ ಮುಖ್ಯ ಉದ್ದೇಶ.  ಆಜನ್ಮ ಬ್ರಹ್ಮಚಾರೀ ಮತ್ತು  ರುದ್ರಾಂಶಸಂಭೂತನಾದ ಹನುಮಂತನನ್ನು ಹಡೆದ  ತಾಯಿ ಅಂಜನಾದೇವಿಯಾದರೂ ಮೂಲದಲ್ಲಿ ಹನುಂತನ ಗರ್ಭಧರಿಸಿದ್ದು ಪಾರ್ವತಿಯೇ ಎಂಬುದಾಗಿ ಕಂಬ ರಾಮಾಯಣದ ಪೂರ್ವಖಂಡದಲ್ಲಿ ಕಥೆಯಿದೆ.ತಮಿಳು ಭಾಷೆಯಲ್ಲಿರುವ ಈ ರಾಮಾಯಣವು  ಹನ್ನೊಂದನೆಯ ಶತಮಾನದಲ್ಲಿ ತಂಜಾವುರು ಪ್ರಾಂತ್ಯದಿಂದ ಗುಳೇ ಬಂದ ಪಲ್ಲವರ ಆಸ್ಥಾನ ಕವಿಯಾದ  ಕಂಬರನಿಂದ ರಚಿಸಲ್ಪಟ್ಟಿದ್ದು ,ಇಂದಿನ ಇದೇ ಅಂಧ್ರಪ್ರದೇಶದಲ್ಲೇ ಈ ಕಥೆಯು ಹೆಚ್ಚು ಪ್ರಚಲಿತವಾಗಿದೆ. ಇಂದಿಗೂ ಅಲ್ಲಿಯ ಜನಪದಗೀತೆಗಳಲ್ಲಿ ಈ ಕಂಬ ರಾಮಾಯಣದ ಹನುಮಂತನೂ ಗಣೇಶನೂ ಅಣ್ಣತಮ್ಮಂದಿರು , ಅವರ ತಂದೆತಾಯಿಗಳು ಶಿವಪಾರ್ವತಿಯರೇ ಎಂಬ ಕುರುಹನ್ನು ಪ್ರತಿಬಿಂಬಿಸುವ ಕಥೆಯು  ಜೀವಂತ ಸತ್ಯವಾಗಿ ಜನಪ್ರಿಯವಾಗಿದೆ.  

ಈ ಪ್ರಾಂತ್ಯದಲ್ಲೇ ಇದ್ದುಕೊಂಡಿದ್ದ ಈ ವಿಗ್ರಹವನ್ನು ಅದರ ಚಾರಿತ್ರ್ಯವನ್ನೂ ಧ್ವಂಸ ಮಾಡಿದ ಅಪಕೀರ್ತಿ ಈ ಕುತ್ಬ್ -ಷಾಹಿ ನಡುವೆ ನಿಕಟ ಸಂಬಂಧ ಇದ್ದ ಯಾದೋ ಒಂದು ಶಿವದ್ವೇಷಿಗಳೇ ಎಂಬುದರಲ್ಲಿ ಸಂದೇಹವಿಲ್ಲ. ಈ ದೇವಸ್ಥಾನ  ರಜಪುತ , ಮುಘಲರ  ಹಾಗೂ ಕುತ್ಬ್ ಷಾಹಿ ಮೂರೂ ಪ್ರಾಕಾರಗಳನ್ನು ಹೊಂದಿದೆ. ಇದೇ ಸಂಕೇತ ಈ ದಿವ್ಯಸ್ಥಾನದ ಚರಿತ್ರೆಯು ಎಷ್ಟುಬಾರಿ ಪುನರ್ನಿಮಿಸಲ್ಪಟ್ಟಿದೆ ಎಂದು. 

ರಾಮಾಯಣ ,ವಿಷ್ಣುಪುರಾಣ , ಮಹಾಭಾರತದಲ್ಲಿ ಸುವರ್ಚಲಾ ಎನ್ನುವದೂ ಸೂರ್ಯನ ಪತ್ನಿಯೇ ಎಂಬುದಾಗಿ ಸುಸ್ಪಷ್ಟವಾಗಿ ಹೇಳಿದೆ.

ರಾಮಾಯಣ

ಧರ್ಮಸ್ತು ಗಜನಾಸೋರು ಸದ್ಭಿರಾಚರಿತಃ ಪುರಾ  | ತಂ ಚಾಹಮನುವರ್ತೇಽದ್ಯ ಯಥಾ ಸೂರ್ಯಂ ಸುವರ್ಚಲಾ ||೨.೦೨೭.೦೨೮||

ಕಥಯನ್ತೀವ ಚನ್ದ್ರೇಣ ಸೂರ್ಯೇಣೇವ ಸುವರ್ಚಲಾ | ಮತ್ಪೃಷ್ಠಮಧಿರುಹ್ಯ ತ್ವಂ ತಾರಾಕಾಶಮಹಾರ್ಣವಮ್ | ೫.೦೩೫.೦೨೭||

ಎಲೈ ಸೀತೇ , ಹಿಂದೆ ಧರ್ಮಜ್ಞರು ಪಿತೃವಾಕ್ಯಪರಿಪಾಲನೆಯನ್ನು ಅನುಸರಿಸುವಾಗ ಆನೆಗಳು ಇಡುವ ಹೆಜ್ಜೆಯಂತೆ ದೃಢಮಾರ್ಗಾನುವ್ರತರಾದರೋ ಹಾಗೆಯೇ ಇಂದಿನಿಂದ, ಪತಿಯು ಹೇಗೆ ಯಾವರೀತಿಯಲ್ಲಿ ತನ್ನ ಸಹಧರ್ಮಿಣಿಯಲ್ಲಿ ಧರ್ಮವನ್ನಾಚರಿಸಬೇಕು ಎಂಬುದಾಗಿ ಸೂರ್ಯನ ಪತ್ನಿಯಾದ ಸುವರ್ಚಲಾ ಎಂಬುವಳು ತೋರಿಸಿಕೊಟ್ಟಿದ್ದಾಳೋ ,  ಅದೇ ರೀತಿಯಲ್ಲಿ ಆಯಾ ಧರ್ಮಗಳಲ್ಲಿ ನಾನು ನನ್ನ ಸಹಧರ್ಮಿಣಿಯಾದ ನಿನ್ನನ್ನು ಅನುಸರಿಸುತ್ತೇನೆ. 

ರಾಮಾಯಣ :-

ಅಸೌ ಪುರಾ ವ್ಯಾಕರಣಂ ಗ್ರಹೀಷ್ಯನ್ ಸೂರ್ಯೋನ್ಮುಖಃ ಪೃಷ್ಠಗಮಃ ಕಪೀನ್ದ್ರಃ || ೭.೦೩೬.೦೪೨ ||

ಶ್ರೀರಾಮನು ಹನುಮಂತನ ಭೇಟಿಯಲ್ಲೇ ಹನುಮಂತನಿಗೆ ಈ ಹಿಂದೆಯೇ ವ್ಯಾಕರಣಾದಿ ಶಾಸ್ತ್ರಗಳು ಸೂರ್ಯನಿಂದಲೇ ಹೇಳಿಕೊಡಲ್ಪಟ್ಟಿದೆ ಎಂಬ ವಿಷಯವು ಇದೆ. ಹಾಗಾಗಿ ಇಲ್ಲಿ ನವ-ವ್ಯಾಕರಣ ಎಂಬ ಯಾವ ಉಲ್ಲೇಖವೂ ಇಲ್ಲ.ಅದನ್ನು ಹೇಳಿಕೊಟ್ಟಿದಕ್ಕಾಗಿ ಸೂರ್ಯನು ಗುರುದಕ್ಷಿಣೆಯ ರೂಪದಲ್ಲಿ ಹೆಂಡತಿಯನ್ನೇ ಮದುವೆ ಆಗು ಎಂದೂ ಕೇಳುವ ಅಸಂಬದ್ಧವೂ ಇಲ್ಲ. 

ವಿಷ್ಣುಪುರಾಣ:- 

ಸುವರ್ಚಲಾ ತಥೈವೋಮಾ ಸುಕೇಶೀ ಚಾಪರಾ ಶಿವಾ| ಸ್ವಾಹಾ ದಿಶಸ್ತಥಾ ದೀಕ್ಷಾ ರೋಹಣೀ ಚ ಯಥಾಕ್ರಮಮ್ ||೮||

ಸೂರ್ಯಾದೀನಾಂ ನರಶ್ರೇಷ್ಠ ರುದ್ರಾಧೈರ್ನಾಮಭಿಃ ಸಹ| | ಪತ್ನ್ಯಃ ಸ್ಮೃತಾ ಮಹಾಭಾಗ ತದಪತ್ಯಾನಿ ಮೇ ಶೃಣು| | ೧೦||

ಹಿಂದೆಯೇ ರುದ್ರಾವಲೋಕನದಲ್ಲಿ ಸಾಕ್ಷಾತ್ ಪರಮೇಶ್ವರನೇ ಚತುರ್ಮುಖ ಬ್ರಹ್ಮನ ಮಗನಾಗಿ ಹುಟ್ಟುತ್ತೇನೆಂದು ವರಕೊಟ್ಟು ಏಕಾದಶ ರುದ್ರರಾಗಿ ವ್ಯಕ್ತವಾದನು ಎಂಬ ವಿಷಯ ವೇದಮಂತ್ರಗಳ ಮೂಲಕ ವಿಸ್ತಾರವಾಗಿ ತಿಳಿಸಿದ್ದೆವು. 

ಅದಕ್ಕೆ ಅನುಬಂಧಿಯಾಗಿ ವಿಷ್ಣುಪುರಾಣದಲ್ಲಿಯೂ ಸಹ ಈ ರುದ್ರನು ಅಷ್ಟಮೂರ್ತಿಗಳ ರೂಪದಲ್ಲಿ (ಬ್ರಹ್ಮನಿಗೆ ನೀಡಿದ ವರದಂತೆ ಶಿವನು *ಶತರುದ್ರೀಯಮ್*  ಅರ್ಥಾತ್ ರುದ್ರನ ನೂರು ಅವತಾರಗಳಗಳನ್ನು ತಾಳಿದನು) ವ್ಯಕ್ತವಾಗಿ  ಸೂರ್ಯ, ಜಲ,ಭೂಮಿ,ವಾಯು,ಅಗ್ನಿ,ಆಕಾಶ, ಬ್ರಾಹ್ಮಣ ಮತ್ತು ಚಂದ್ರ ಎಂಬ ಶರೀರಗಳನ್ನು ಧಾರಣೆ ಮಾಡಿದನು. ಮತ್ತು ಆಯಾ ಸ್ಥಾನಗಳಲ್ಲಿ ಅರ್ಥಾತ್ ಸೂರ್ಯಾದಿಗಳಿಗೇ   ಸುವರ್ಚಲಾ,ಉಮಾ  ಮುಂತಾದ ಪತ್ನಿಯರೂ ಸೇರಿಕೊಂಡರು. 

ಮಹಾಭಾರತ: ಶಾಂತಿಪರ್ವ:- 

ಶ್ಯಾಮಾಕಮಶನಂ ತತ್ರ ಸೂರ್ಯಪತ್ನೀ ಸುವರ್ಚಲಾ  || ೧೨.೨೬೪.೦೦೪ ||

ಅನುಶಾಸನಿಕ ಪರ್ವ:-

ವರುಣಸ್ಯ ತತೋ ಗೌರೀ ಸೂರ್ಯಸ್ಯ ಚ ಸುವರ್ಚಲಾ | ರೋಹಿಣೀ ಶಶಿನಃ ಸಾಧ್ವೀ ಸ್ವಾಹಾ ಚೈವ ವಿಭಾವಸೋಃ|| ೧೩.೧೩೪.೦೦೪ ||

ತ್ರಿಕಾಂಡಶೇಷದಲ್ಲೂ ಸೂರ್ಯನ ಹದಿನಾಲ್ಕು ಪತ್ನಿಯರ ಹೆಸರ ಮತ್ತು ಅವರಿಂದ ಹುಟ್ಟಿದ ಮಕ್ಕಳ ಹೆಸರನ್ನೂ ಹೇಳುವಂಥ ಈ ಕೆಳಗಿನ ಮಂತ್ರವಿದೆ.

ಛಾಯಾ ಸ್ಯಾತ್ತಪತೀ ಮಂದಜನನೀ ಭೂಮಯೀವರೀ | ಸಂಜ್ಞಾತು ಯಮಕಾಲಿಂದೀರೇವಂತ ಮನುದಸ್ಸ್ರಸೂಃ ||೦೧.೧೯ ||

ತ್ರಸರೇಣುರ್ಮಹಾವೀರ್ಯಾ ಸ್ವಾತಿ ಸೂರ್ಯಾ ಸುವರ್ಚಲಾ | ಸುರೇಣುರ್ದ್ಯುಮಯೀ ತ್ವಾಷ್ಟ್ರೀ ಪ್ರಿಯೇಚೇತೇ ವಿವಸ್ವತಃ || ೦೧.೨೦||

ಸೂರ್ಯನಿಗೆ ಛಾಯಾ ಸಂಜ್ಞಾ ಎನ್ನುವ ಪತ್ನಿಯರ ಜೊತೆಗೆ  ತ್ರಸರೇಣು ,ಮಹಾವೀರ್ಯಾ , ಸ್ವಾತಿ, ಸೂರ್ಯಾ , ಸುರೇಣು,ದ್ಯುಮಯೀ , ತ್ವಾಷ್ಟ್ರೀ  ಪ್ರಿಯಾ ಮುಂತಾದ ಪತ್ನಿಯರೂ ಇದ್ದರು

ಹೀಗಾಗಿ ಹನುಂತನು ಆಜನ್ಮ ಬ್ರಹ್ಮಚಾರಿಯೇ ಆಗಿದ್ದನು.ಎಂಬುವದು ನಿಶ್ಚಯವಾಯಿತು. ಶಿವದ್ವೇಷಿಗಳು ಪಲ್ಲವರ ಕಾಲದ ಹಾಗೂ ಕಂಬರಾಮಾಯಣದ ಪ್ರತೀಕವಾದ  ಒಂದೇ ಪೀಠದಲ್ಲಿರುವ  ಗಣೇಶ,ಹನುಮಂತ ಹಾಗೂ ಪಾರ್ವತಿ  ಮೂರ್ತಿಯ ಹಿಂದಿರುವ ಚರಿತ್ರೆಯ ನಾಶಾಕ್ಕಾಗಿಯೇ ಈ ಅಸಂಬದ್ಧವಾದ ಹನುಮಂತನ ಮದುವೆಯ ವಿಷಯವನ್ನು ಮುಗ್ಧರಲ್ಲಿ ಪ್ರಚಾರ ಮಾಡಿದ್ದಾರೆ ಎಂಬುವದನ್ನೂ ನಿರೂಪಿಸಿದಂತಾಯಿತು. ಈ ಕುಧರ್ಮಿಗಳ ಮೂಲವನ್ನೂ ಜಾಲಾಡುತ್ತೇನೆ ಸದ್ಯದಲ್ಲೆ.    

 

ಹರಿ ಓಮ್ ತತ್ ಸತ್

ಸತ್ಯಪ್ರಕಾಶ.

ಮುಂದಿನ ಭಾಗ

ರುದ್ರಾಂಶ ಸಂಭೂತ ಆಜನ್ಮಬ್ರಹ್ಮಚಾರೀ  ಹನುಮಂತ:- ಭಾಗ-೦೨

ವೇದಗಳಲ್ಲಿ ಅರ್ಥವಾದ ರೂಪದಲ್ಲಿ ಉಲ್ಲೇಖವಾಗಿರುವ ವಿಷಯಗಳು.

May 17, 2021

ಹನುಮಂತನ ಸ್ವರೂಪವಿಚಾರ

ಹನುಮಂತನ ಸ್ವರೂಪವಿಚಾರ :- 

ಕೈ ತೋರಿಸಿ ಅವಲಕ್ಷಣ ಮಾಡಿಕೊಳ್ಳಬೇಡಿ.

ನಿಮಲ್ಲಿರುವ ಅಪ್ರಾಮಾಣಿಕ ವಾಕ್ಯಗಳನ್ನು ನಿಮ್ಮ ಪ್ರವಚನಗಳಿಗೆ ಮಾತ್ರ ಸೀಮಿತವಾಗಿಟ್ಟುಕೊಳ್ಳಿ. ಪ್ರಕ್ಷಿಪ್ತ ಪುರಾಣವಾಕ್ಯಗಳು ನಿಮಗೆ ಆಧಾರವಾಗಿರ ಬಹುದು. ಆದರೇ ನಾನು ಕೊಟ್ಟಿರುವಂಥ ಪ್ರಮಾಣಗಳು ಮೂಲ ವಾಲ್ಮೀಕಿ ರಾಮಾಯಣ ,ವೇದದ ಹಿನ್ನೆಲೆ ಮತ್ತು ಮಹಾಭಾರತದ ವಾಕ್ಯಗಳು. ಇವುಗಳಲ್ಲಿರುವ ಸಾಮ್ಯತೆಗಳನ್ನು ಮುಂದಿಟ್ಟುಕೊಂಡು ಹನುಮಂತನು ಶಿವಾಂಶ ಎನ್ನುವದು ಶಾಸ್ತ್ರೀಯವೇ ಆಗಿದೆ.ಏಕೆಂದರೇ ತೇಜಸ್ಸಿನಿಂದ ಆಕಾಶವೂ ,ಆಕಾಶದಿಂದ ವಾಯುವೂ  ಉತ್ಪತ್ತಿ ಎಂದು ಹೇಳಿದೆ.ತೇಜಸ್ಸು (ಮೂಲ ಅಗ್ನಿಯ ಅವ್ಯಕ್ತ ರೂಪ) ವಾಯುವೇ ಮೊದಲಾದ ಮರುದ್ದೇವತೆಗಳಿಗೆ ರುದ್ರನೇ ಪಿತನು ಎಂದು ಸಾರುತ್ತಿರುವ  ಶೃತಿವಾಕ್ಯಗಳಿಂದಲೇ ನಿಮ್ಮೆಲ್ಲಾ ಸ್ಮೃತಿಪುರಾಣವಾಕ್ಯಗಳು ನೆಲಕಚ್ಚುತ್ತವೆ.

ಇನ್ನು ವಾಯುವಿನ ಅಂಶ ಹನುಮಂತ ಎನ್ನುವದರಲ್ಲಿ ನಾವು ಯಾವುದೇ ನಿರಾಕರಣೆಯನ್ನೂ ಮಾಡಿಲ್ಲ. ರುದ್ರನೇ ವಾಯುವಿನ ತಂದೆಯೂ ಎಂದು ವೇದಗಳಲ್ಲಿ ಹೇಳಿರುವದರಿಂದಲೂ ಅನುವಂಶೀಯತೆಯ ಕಾರಣದಿಂದಲೂ ,ಪುರಾಣಗಳಲ್ಲಿಯೂ ಹನುಂತನು ರುದ್ರಾಂಶಸಂಭೂತವೆಂದು ಹೇಳಿರುವದರಿಂದಲೂ ಈ ಅನುವಂಶೀಯತೆಯ ಆಧಾರದ ಮೇಲೇ ಹನುಂತನು ವಾಯುವಿನ ಅಂಶವಾಗಿದ್ದರೂ ,ವಾಯು ರುದ್ರನ ಅಂಶವಾಗಿರುವದರಿಂದಲೂ , ಮತ್ತೂ ವೇದಗಳೇ ವಾಯು ಮೊದಲಾದ ದೇವತೆಗಳು ಅಪ್ರಜಾಃ ಅರ್ಥಾತ್ ಅವೀರ್ಯವಂತರೂ ಆಗಿರುವದರಿಂದ ಇವರು ತಮ್ಮ ಅಂಶಗಳನ್ನು ಗುಣಗಳ ರೂಪದಲ್ಲಿ ದಯಪಾಲಿಸಬಾಹುದಾಗಿದೆ.

ಈ ಗುಣಾಂಶವೇ ರುದ್ರನ ಅಂಶವಾಗಿರುವದರಿಂದ ರುದ್ರನ ಅಂಶವನ್ನೇ ವಾಯು ಹನುಮಂತನಿಗೆ ವರ್ಗಾಯಿಸಿದ್ದಾನೆ ಎಂಬುದೂ ವೈಜ್ಞಾನಿಕವೂ ಶಾಸ್ತ್ರೋಕ್ತವೂ ಆಗಿದೆ. 

ಈ ಅನುವಂಶೀಯತೆ ನಿರಾಕರಿಸಿದರೇ ಮಧ್ವಾಚಾರ್ಯರ ಅವತಾರವೂ ಅಸಂಬದ್ಧ ಎಂದೇ ನೀವು ಹೇಳಿದಂತಾಗಿ , ಮಧ್ವಯತಿಗಳೆಲ್ಲರೂ ಯಾವುದೋ ದೇವತೆಗಳ ಅಂಶವೆಂದು ಈಗಲೂ ಪ್ರತಿಬಿಂಬಿಸುತ್ತಿರುವ ನಿಮ್ಮ ಕಟ್ಟುಕಥೆಗಳಿಗೂ ಎಳ್ಳುನೀರು ಬಿಡ ಬೇಕಾಗುತ್ತದೆ.

ಇನ್ನು ಸುಗ್ರೀವನಿಗೆ ಯಾರು ಹಾರ ಹಾಕಿದರೇ ನಮಗೇನು ,ಬಾಣ ಬಿಟ್ಟಿದ್ದು ರಾಮ ಸತ್ತಿದ್ದು ವಾಲಿಯೇ ಅಲ್ಲವೇ ? ಸಂಪೂರ್ಣ ಉತ್ತರ ಭಾರತದಲ್ಲಿ ಹನುಂತನು ಮುಖ್ಯದೇವತೆ ಆಗಿರುವದರಿದಲೂ , ಎಲ್ಲರೂ ಅಲ್ಲಿ ಹನುಮಂತನು ರುದ್ರಾಂಶ ಸಂಭೂತನೆ ಎಂಬುವದೇ ಪುರಾಣಗಳಿಂದಲೂ ವೇದಗಳಿಂದಲೂ ಸಮರ್ಥಿತವಾಗಿ ಸಿದ್ಧಾಂತವಾಗಿದೆ. ಆದ್ದರಿಂದ ನೀವು ಹನುಮಂತನು ವಾಯುವಿನ ಅಂಶ ಎಂದು ಒಪ್ಪಿಕೊಳ್ಳುವದರಿಂದಲೇ ವೇದೋಕ್ತ ಹಾಗೂ ವೈಜ್ಞಾನಿಕವಾಗಿಯೂ ಹನುಮಂತನೂ ರುದ್ರಾಂಶನೇ ಎನ್ನುವದರಲ್ಲಿ ಯಾವುದೇ ಸಂಶಯವಿಲ್ಲ. 

ಇನ್ನು ನೀವು ರಾಮಯಣದಲ್ಲಿದೆ ಎಂದು ಹೇಳಿರುವ ಮತ್ತೊಂದು ಅಸಂಬದ್ಧ ವಾಕ್ಯ

 *ಹನುಮಂತನ ಬಗ್ಗೆ ರಾಮನಲ್ಲಿ ಅಗಸ್ತ್ಯರು " ಬ್ರಹ್ಮಾ ಭವಿಷ್ಯತಿ ತೇ ಪ್ರಸಾದಾತ್" ಎಂದು ಹೇಳುತ್ತಾರೆ. ಮುಂದಿನ ಕಲ್ಪದಲ್ಲಿ ನಿನ್ನ ಅನುಗ್ರಹದಿಂದ ಬ್ರಹ್ಮನಾಗುವವನು ಎಂಬುದು ಇದರ ಅರ್ಥ* ಇದು ಭೀಮಸೇನನಿಗೂ ಕೃಷ್ಣನಿಗೂ ಕಲ್ಪಿಸಿರುವ ಕಟ್ಟುಕಥೆ. ಅಥವಾ ಮುಂದೆ ಮಧ್ವಾಚಾರ್ಯರ ಪದವಿ ಪ್ರಾಪ್ತಿ ಇದ್ದರೂ ಇರಬಹುದು. ಏಕೆಂದರೇ ಹನುಮಂತನೇ ಒಂದು ಅಂಶ. ಅವನೇ ಚಿರಂಜೀವಿ ಎಂದು ವರ ಪಡೆದಿರುವದರಿಂದಲೇ ಬ್ರಹ್ಮತ್ವ ಪ್ರಾಪ್ತಿ ಇಲ್ಲ. ಇದ್ದರೂ  ಪ್ರಳಯದಲ್ಲೇ ಎಂಬುದೂ ಜಗದ್ವಿಖ್ಯಾತ ಆಗಿದೆ. ಮುಂದಿನ ಕಲ್ಪದಲ್ಲಿ ಹನುಮಂತ ಅಥವಾ ಅವನ ಅಂಶಕ್ಕೆ ಬ್ರಹ್ಮ ಪದವಿ ಪ್ರಾಪ್ತಿ ಎಂದರೇ ಹನುಮಂತನ ಚಿರಂಜೀವತ್ವಕ್ಕೆ ಎಳ್ಳುನೀರು ಬಿಡಿ. ಏಕೆಂದರೇ ಜಿವನಿಗೆ ಬ್ರಹ್ಮ ಪದವಿ ಇದ್ದರೇ ಜೀವತ್ವವನ್ನು ಬಿಟ್ಟಮೇಲೇ ಎಂಬುದೂ ಯುಕ್ತಿಯುಕ್ತವೇ. 

ಈಗ  ಮೇಲಿನ ವಾಕ್ಯವನ್ನು ಹಗಲುದೀಪ ಹಿಡಿದು ಹುಡುಕಿದರೂ ಮೂಲ ರಾಮಾಯಣದಲ್ಲಿ ಸಿಗುವದಿಲ್ಲ. (ನಿಮ್ಮಿಂದ ಮುದ್ರಿತವಾದ ಪುಸ್ತಕಗಳಲ್ಲಿ ಸಿಗಬಹುದೇನೋ ನಾನರಿಯೆ) ಇಲ್ಲಿಯೂ ನಿಮ್ಮ ಶಾಸ್ತ್ರತಿರಿಚುವಿಕೆಯೇ ಎದ್ದು ಕಾಣುತ್ತಿದೆ.ಹೋಗಲೀ ಅದನ್ನಾದರೂ ಪೂರ್ವಾಪರ ಯೋಚಿಸಿ ಮಾಡಿದ್ದೀರೋ .ಅಲ್ಲೂ ನಿಮ್ಮ ಪೆದ್ದುತನ ತಾಂಡವವಾಡುತ್ತಿದೆ. ನೀವೇ ಯೊಚಿಸಿ ಹನುಮಂತನಿಗೆ ಬ್ರಹ್ಮ ಪದವಿ ಕೊಡುತ್ತೀರೋ ಅಥವಾ ಚಿರಂಜೀವತ್ವ ಹೇಳುತ್ತೀರೋ.ಮುಂದಿನ ಕಲ್ಪ ಎಂದರೇ ಇತಿಹಾಸಪುರಾಣಗಳು ಅನಿತ್ಯವಾಗಿರುವದರಿಂದ ,ಪ್ರತಿಕಲ್ಪದ ಆದಿಯಲ್ಲೂ ಇವುಗಳು ಸೃಷ್ಟವಾಗಿ ಕಲ್ಪಾಂತದಲ್ಲಿ ನಾಶವಾಗುತಿರುವದರಿಂದ ಈ ಅಭಿಪ್ರಾಯವೂ ಕಲ್ಪಾಂತದಲ್ಲಿ ನಾಶವಾಗಿಯೇ ತೀರುತ್ತದೆ.ಈ ಕಲ್ಪಾಂಟ ಯುಕ್ತಿಯಿಂದಲೂ ಹನುಮಂತನ ಚುರಂಜೀವತ್ವ ನಾಶ ಇಲ್ಲ. ಏಕೆಂದರೇ ಜೀವನಿಗೆ ಉತ್ಪತ್ತಿ ಹೇಳಿಲ್ಲ . ನಿಮ್ಮ ಪ್ರಕಾರ ಜೀವನಿಗೆ ಬ್ರಹ್ಮಪದವಿ ಎಂದರೇ ಜೀವತ್ವಬಿಡಬೇಕು ಎಂದರ್ಥ ಮಾಡುವ ಹಾಗೂ ಇಲ್ಲ. ಏಕೆಂದರೆ ಅದಕ್ಕೂ ಮುಂಚೇ ತನೇ ವಾಯುವೂ ಆಗಬೇಕು. ಮತ್ತು ನಿಮ್ಮ ಸಿದ್ಧಾಂತದಲ್ಲಿ ಪದವಿಯು ಸಂಪಾದಿಸಿಕೊಳ್ಳುವಂಥದ್ದು ಎನ್ನುವದರಲ್ಲಿ ಪರಮಾತ್ಮನ ಕೃಪೆ ಹೇಳಿರುವದರಿಂದ ಪುರುಷಪ್ರಯತ್ನ ಅಲ್ಲಗಳೆದಂತೆಯೂ ಆಯಿತು.ಇಂಥ ಎಡಬಿಡಂಗಿತನ ನಿಮ್ಮ ಪ್ರಕ್ಷಿಪ್ತಗಳಿಂದ. 

ಇನ್ನಾದರೂ ನಿಮ್ಮ ದುಶ್ಚಟಗಳನ್ನು ದೂರವಿಟ್ಟು ಪ್ರಾಮಾಣಿಕವಾದ ನಿರೂಪಣೆ ಮಾಡುವದನ್ನು ಕಲಿತುಕೊಳ್ಳಿ. ಶಾಸ್ತ್ರೋಕ್ತ ವಾಕ್ಯಗಳ ಮೂಲಕ ನಿಮ್ಮ ಅಭಿಪ್ರಾಯವನ್ನು ತಿಳಿಸುವ ಪ್ರಯತ್ನ ಮಾಡಿ. ಕಟ್ಟುಕಥೆಗಳು, ಬಾಯಿಮಾತಿನ ಕುರುಡು ಅಭಿಮಾನ ತಾತ್ಪರ್ಯನಿರ್ಣಯ ಮತ್ತಿತರ ಕುಗ್ರಂಥಗಳು ನಿಮಗೆ ಪ್ರಮಾಣ ಇರಬಹುದು,ವೈದೀಕರಿಗಲ್ಲ.  

ಇಂಥ ಕ್ಷುಲ್ಲಕ ನಿರೂಪಣೆಗೆ ನನ್ನ ಸಮಯ ಹಾಳು ಮಾಡಬೇಡಿ. ಇನ್ನು ಇಂಥವರ ಉಪನ್ಯಾಸಪದವಿ ...ದೇವರೇ ಗತಿ.

ಶುಭಮ್ 

ಸತ್ಯಪ್ರಕಾಶ.

ಹನುಮಂತ ರುದ್ರಾಂಶನಲ್ಲ

ಹನುಮಂತ ರುದ್ರಾಂಶನಲ್ಲ ಎಂಬುದಾಗಿ ನಂಬಿರುವ ಮಿತ್ರರಲ್ಲಿ ಕೆಲವು ಪ್ರಶ್ನೆಗಳು.

ಹನುಮಂತನು ಮುಖ್ಯಪ್ರಾಣನ ಮಗನೋ ಅಥವಾ ವಾಯುವಿನ ಮಗನೋ ?

ಮುಖ್ಯಪ್ರಾಣ ಮತ್ತು ವಾಯು ಒಂದೇ ಎಂದರೇ *ಪ್ರಾಣಾತ್ ವಾಯುರಜಾಯತ* ಎಂಬ ಅರ್ಥವೇನು?ಅಥವಾ ಆಕಾಶಾದ್ವಾಯುಃ ಎಂಬ ವ್ಯತ್ಯಾಸ ಏಕೆ ? 

ವಾಯು ಮತ್ತು ಪ್ರಾಣ ಒಂದೇ ಎಂದರೇ ಹೇಗೆ? ಪ್ರಾಣಾಂಶರೂಪದಲ್ಲಿ ಹನುಮಂತನು ಹುಟ್ಟಿದನೋ ಅಥವಾ ವಾಯ್ವಾಂಶರೂಪದಲ್ಲಿ ಹುಟ್ಟಿದನೋ ?

ಪಂಚ ತತ್ತ್ವಗಳಲ್ಲಿರುವ ವಾಯು ಯಾರು ? 

ದಶ ಅಥವಾ ಪಂಚಪ್ರಾಣಗಳು ಮತ್ತು ಪಂಚವಾಯುಗಳೂ ಒಂದೇಯೋ ಅಥವಾ ಬೇರೆಬೇರೆಯೋ ?

ವೇದದೆಲ್ಲಿ ಮತ್ತು ಮಹಾಭಾರತದಲ್ಲಿ ವಾಯು ದಿತಿಯ ಮಗನೆಂಬ ಉಲ್ಲೇಖವೂ ಇದೆ. ಅಳುತ್ತಿದ್ದ ವಾಯುವಿಗೆ *ಮಾ ರುತ* ಅಳಬೇಡ ಎಂಬುದಾಗಿ ಹೇಳಿ ಸಂತೈಸುತ್ತಾ    ಇಂದ್ರನು ದೈವ ಪದವಿಯನ್ನು ಕೊಟ್ಟನು ಎಂಬ ಉಲ್ಲೇಖವೂ ಇದೆ ?

ವಾಯುವಿಗೆ *ಮಾರುತ* ಅಥವಾ *ಮರುತ* ಎಂಬ ಹೆಸರು ಏಕೆ.? 

ವಾಯು ತನ್ನ ಅಂಶವನ್ನು ಹೇಗೆ ಅಂಜನಾ ದೇವಿಯ ಗರ್ಭದಲ್ಲಿ ಸ್ಥಾಪಿಸಿದನು ? 

ವಾಯುವಿನ ಹೆಂಡತಿಯ ಹೆಸರೇನು ?

ಇಷ್ಟು ವಿಷಯಗಳು ತಿಳಿ ಹೇಳಿದರೇ ನಿಮ್ಮ ಪ್ರಶ್ನೆಗೆ ಉತ್ತರ ಕೊಡಲು ಅನುಕೂಲ.ನಾವು ಹನುಮಂತ ವಾಯುವಿನ ಅಂಶ ಎಂದು ನಿರಾಕರಿಸುತ್ತಿಲ್ಲ.ಅನುವಂಶೀಯತೆಯಿಂದ ರುದ್ರಾಂಶ ಎನ್ನುತ್ತಿದ್ದೇವೆ.

ಶ್ರೀ ಹನೂಮತ್ಪ್ರೋಕ್ತ ಭಾಸ್ಮ ಧಾರಣ ವಿಧಿಃ ||

ಶ್ರೀ ಹನೂಮತ್ಪ್ರೋಕ್ತ ಭಾಸ್ಮ ಧಾರಣ ವಿಧಿಃ ||

ಭಸ್ಮಧಾರಣಾ ವಿಧಿಯು ವೇದೋಕ್ತವಾಗಿರುವದರಿಂದಲೂ ವೇದಕಾಲದಿಂದಲೇ ಭಸ್ಮಧಾರಣವಿಧಿಯು ಹಲವಾರು ಮಹಾತ್ಮರಿಂದಲೂ ,ಋಷಿ ಮುನಿಗಳಿಂದಲೂ ,ವಿಷ್ಣುವೇ ಮೊದಲಾದ ದೇವಾನುದೇವತೆಗೆಳಿಂದಲೂ ಭಸ್ಮಧಾರಣೆಯ ಮಹತ್ವವು ತಿಳಿದುಬರುತ್ತದೆ. ವ್ಯಾಸೋಕ್ತ ಪದ್ಮಪುರಾಣದಲ್ಲಿ ಶಿವನನ್ನು ಸೇವಿಸಿ ತೃಪ್ತನಾದ ಹನುಂಮಂತನು ಶಿವಾನುಗ್ರಹೀತನಾಗಿ ಶಿವಪೂಜಾಕೈಂಕರ್ಯದ ಮುಖ್ಯ ಅಂಗವಾದ ಭಾಸ್ಮಧಾರಣೆ ವಿಧಿಯನ್ನು ಈ ರೀತಿಯಾಗಿ ಬೋಧಿಸಿದ್ದಾನೆ. ಹೀಗೇ ವೇದಗಳೂ ಪುರಾಣಸ್ಮೃತಿಗಳೂ ಭಸ್ಮಧಾರಣೆಯನ್ನು ಪ್ರಶಂಸೆ ಮಾಡುತ್ತಿದೆ.

ಶ್ರೀ ಪದ್ಮಪುರಾಣಾಂತರ್ಗತ ಹನೂಮತ್ಪ್ರೋಕ್ತ ಭಾಸ್ಮ ಧಾರಣ ವಿಧಿಃ ||

ಪಾತಾಳಖಂಡ ಅಧ್ಯಾಯ -೧೧೦ 

ಹನುಮಾನಥ ದೇವಾಯ ವ್ಯಜ್ಞಾಪಯದಿದಂ ವಚಃ ಅರ್ಥಯಾಮಿ ವಿನಿಷ್ಕಾಮಂ ಮಮ ಪೂಜಾವ್ರತಂ ತಥಾ ೨೭೬ ಪೂಜಾರ್ಥಮಪ್ಯಹಂ ಗಚ್ಛೇ ಮಮಾನುಜ್ಞಾತುಮರ್ಹಸಿ 

ಶಂಕರ ಉವಾಚ-

ಕಸ್ಯ ಪೂಜಾ ಕ್ವ ವಾ ಪೂಜಾ ಕಿಂ ಪುಷ್ಪಂ ಕಿಂ ದಲಂ ವದ ೨೭೭ ಕೋ ಗುರುಃ ಕಶ್ಚ ಮಂತ್ರಸ್ತೇ ಕೀದೃಶಂ ಪೂಜನಂ ತಥಾ ಏವಂ ವದತಿ ದೇವೇಶೇ ಹನೂಮಾನತಿಕಂಪಿತಃ ೨೭೮ ವೇಪಮಾನಸಮಸ್ತಾಂಗಃ ಸ್ತೋತುಮೇವ ಪ್ರಚಕ್ರಮೇ

ಹನೂಮಾನುವಾಚ-

ನಮೋ ದೇವಾಯ ಮಹತೇ ಶಂಕರಾಯಾಮಿತಾತ್ಮನೇ ೨೭೯ ಯೋಗಿನೇ ಯೋಗಧಾತ್ರೇ ಚ ಯೋಗಿನಾಂ ಗುರವೇ ನಮಃ ಯೋಗಿಗಮ್ಯಾಯ ದೇವಾಯ ಜ್ಞಾನಿನಾಂ ಪತಯೇ ನಮಃ ೨೮೦ ವೇದಾನಾಂ ಪತಯೇ ತುಭ್ಯಂ ದೇವಾನಾಂ ಪತಯೇ ನಮಃ ಧ್ಯಾನಾಯಧ್ಯನಗಮ್ಯಾಯ ಧಾತೄಣಾಂ ಗುರವೇ ನಮಃ ೨೮೧ ಶಿಷ್ಟಾಯಶಿಷ್ಟಗಮ್ಯಾಯ ಭೂಮ್ಯಾದಿ ಪತಯೇ ನಮಃ ನಮಸ್ತೇತ್ಯಾದಿನಾ ವೇದವಾಕ್ಯಾನಾಂ ನಿಧಯೇ ನಮಃ ೨೮೨

ಆತನುಷ್ವೇತಿವಾಕ್ಯೈಶ್ಚ ಪ್ರತಿಪಾದ್ಯಾಯ ತೇ ನಮಃ ಅಷ್ಟಮೂರ್ತೇ ನಮಸ್ತುಭ್ಯಂ ಪಶೂನಾಂಪತಯೇ ನಮಃ ೨೮೩ ತ್ರ್ಯಂಬಕಾಯ ತ್ರಿನೇತ್ರಾಯ ಸೋಮಸೂರ್ಯಾಗ್ನಿಲೋಚನ ಸುಭೃಂಗರಾಜಧತ್ತೂರದ್ರೋಣಪುಷ್ಪಪ್ರಿಯಾಯ ತೇ ೨೮೪ ಬೃಹತೀಪೂಗಪುಂನಾಗ ಚಂಪಕಾದಿಪ್ರಿಯಾಯ ಚ ನಮಸ್ತೇಸ್ತು ನಮಸ್ತೇಸ್ತು ಭೂಯ ಏವ ನಮೋನಮಃ ೨೮೫ ಶಿವೋ ಹರಿಮಥ ಪ್ರಾಹ ಮಾ ಭೈಷೀರ್ವದ ಮೇಽಖಿಲಮ್

ಹನುಮಾನುವಾಚ-

ಶಿವಲಿಗಾರ್ಚನಂ ಕಾರ್ಯಂ ಭಸ್ಮೋದ್ಧೂಲಿತದೇಹಿನಾ ೨೮೬ ದಿವಾಸಂಪಾದಿತೈಸ್ತೋಯೈಃ ಪುಷ್ಪಾದ್ಯೈರಪಿ ತಾದೃಶೈಃ ದೇವ ವಿಜ್ಞಾಪಯಿಷ್ಯಾಮಿ ಶಿವಪೂಜಾವಿಧಿಂ ಶುಭಮ್ ೨೮೭ ಸಾಯಂಕಾಲೇ ತು ಸಂಪ್ರಾಪ್ತೇ ಅಶಿರಃ ಸ್ನಾನಮಾಚರೇತ್ ಕ್ಷಾಲಿತಂ ವಸನಂ ಶುಷ್ಕಂ ಧೃತ್ವಾಚಮ್ಯ ದ್ವಿರಗ್ರಧೀಃ ೨೮೮ ಅಥ ಭಸ್ಮ ಸಮಾದಾಯ ಆಗ್ನೇಯಂ ಸ್ನಾನಮಾಚರೇತ್ ಪ್ರಣವೇನ ಸಮಾಮಂತ್ರ್ಯಾಪ್ಯಷ್ಟವಾರಮಥಾಪಿ ವಾ ೨೮೯ ಪಂಚಾಕ್ಷರೇಣ ಮಂತ್ರೇಣ ನಾಮ್ನಾ ವಾ ಯೇನಕೇನಚಿತ್ ಸಪ್ತಾಭಿಮಂತ್ರಿತಂ ಭಸ್ಮ ದರ್ಭಪಾಣಿಃ ಸಮಾಹರೇತ್ ೨೯೦ ಈಶಾನಃ ಸರ್ವವಿದ್ಯಾನಾಮುಕ್ತ್ವಾ ಶಿರಸಿ ಪಾತಯೇತ್ ತತ್ಪುರುಷಾಯ ವಿದ್ಮಹೇ ಮುಖೇ ಭಸ್ಮ ಪ್ರಸೇಚಯೇತ್ ೨೯೧ ಅಘೋರೇಭ್ಯೋಽಥ ಘೋರೇಭ್ಯೋ ಭಸ್ಮ ವಕ್ಷಸಿ ನಿಕ್ಷಿಪೇತ್ ವಾಮದೇವಾಯ ನಮ ಇತಿ ಗುಹ್ಯಸ್ಥಾನೇ ವಿನಿಕ್ಷಿಪೇತ್ ೨೯೨ ಸದ್ಯೋಜಾತಂ ಪ್ರಪದ್ಯಾಮಿ ನಿಕ್ಷಿಪೇದಥ ಪಾದಯೋಃ ಉದ್ಧೂಲಯೇತ್ಸಮಸ್ತಾಂಗೇ ಪ್ರಣವೇನ ವಿಚಕ್ಷಣಃ ೨೯೩ ತ್ರೈವರ್ಣಿಕಾನಾಮುದಿತಃ ಸ್ನಾನಾದಿವಿಧಿರುತ್ತಮಃ ಶೂದ್ರಾದೀನಾಂ ಪ್ರವಕ್ಷ್ಯಾಮಿ ಯದುಕ್ತಂ ಗುರುಣಾ ತಥಾ ೨೯೪ ಶಿವೇತಿ ಪದಮುಚ್ಚಾರ್ಯ ಭಸ್ಮಸಂಮಂತ್ರಯೇತ್ಸುಧೀಃ ಸಪ್ತವಾರಮಥಾದಾಯ ಶಿವಾಯೇತಿ ಶಿರಃ ಕ್ಷಿಪೇತ್ ೨೯೫ ಶಂಕರಾಯ ಮುಖೇ ಪ್ರೋಕ್ತಂ ಸರ್ವಜ್ಞಾಯ ಹೃದಿ ಕ್ಷಿಪೇತ್ ಸ್ಥಾಣವೇ ನಮ ಇತ್ಯುಕ್ತ್ವಾ ಗುಹ್ಯೇ ಚಾಪಿ ಸ್ವಯಂಭುವೇ ೨೯೮ ಉಚ್ಚಾರ್ಯ ಪಾದಯೋಃ ಕ್ಷಿಪ್ತ್ವಾ ಭಸ್ಮಶುದ್ಧಮತಃ ಪರಮ್ ನಮಃ ಶಿವಾಯೇತ್ಯುಚ್ಚಾರ್ಯ ಸರ್ವಾಂಗೋದ್ಧೂಲನಂ ಸ್ಮೃತಮ್ ೨೯೭ ಪ್ರಕ್ಷಾಲ್ಯ ಹಸ್ತಾವಾಚಮ್ಯ ದರ್ಭಪಾಣಿಃ ಸಮಾಹಿತಃ ದರ್ಭಾಭಾವೇ ಸುವರ್ಣಂ ಸ್ಯಾತ್ತದಭಾವೇ ಗವಾಲಕಃ ೨೯೮ ತದಭಾವೇ ತು ದೂರ್ವಾಃ ಸ್ಯುಸ್ತದಭಾವೇ ತು ರಾಜತಮ್

ಭಾವಾರ್ಥ :-

ಹನುಮಂತನು ಶಿವನನ್ನು ಕುರಿತು ಅರಿಕೆ ಮಾಡಿಕೊಳ್ಳುತ್ತಾನೆ.

ಸ್ವಾಮಿ, ನಾನು ನಿಷ್ಕಾಮವುಳ್ಳ ನಿನ್ನ ಪೂಜೆಯ ವ್ರತವನ್ನು ಕೇಳಿಕೊಳ್ಳುತ್ತೇನೆ. ಪೂಜೆಗೋಸ್ಕರ ನಾನು ಹೋಗುತ್ತೇನೆ. ನನಗೆ ಅಪ್ಪಣೆಯನ್ನು ಕೊಡು ಎಂದು ವಿಜ್ಞಾಪಿಸಿಕೊಂಡನು. 

ಶಂಕರನು ಹೇಳಿದನು :- 

ಯಾರ ಪೂಜೆ ? ಎಲ್ಲಿ ಪೂಜೆ ? ಯಾವ ಹೂ ? ಯಾವ ಪತ್ರೆ ? ಗುರುವು ಯಾರು ? ಮಂತ್ರವು ಯಾವುದು ? ಪೂಜೆಯು ಯಾವ ರೀತಿಯಾದುದು ? 

ಸ್ವಾಮಿಯು ಹೀಗೆನ್ನಲು, ಹನುಮಂತನು ಭಯಭಕ್ತಿಗಳಿಂದ  ನಡುಗುತ್ತ ಈ ರೀತಿ ಸ್ತೋತ್ರ ಮಾಡಿದನು. 

ಹನುಮಂತನು ಹೇಳಿದನು :-- ಮಹಾದೇವನಾದ ನಿನಗೆ ನಮೋನಮಃ . ಮಹಾನುಭಾವನೂ ಯೋಗಧಾರಿಯೂ ಆದ ಶಂಕರನಿಗೆ ನಮಸ್ಕಾರವು, ಯೋಗಿಗಳಿಗೂ ಗುರುವಾದ ನಿನಗೆ ನಮಸ್ಕಾರವು. 

೨೭೬. ಯೋಗಿಗಳಿಗೆ ಸಿಕ್ಕುವ ನಿನಗೆ ನಮಸ್ಕಾರವು, ಜ್ಞಾನಿಗಳ ಒಡೆಯನಾದ ನಿನಗೆ ನಮಸ್ಕಾರವು, ವೇದಗಳಿಗೆ ಅಧಿಪತಿಯಾದ ನಿನಗೆ ನಮಸ್ಕಾರವು, ದೇವತೆಗಳಿಗೆ ಒಡೆಯನಾದ ನಿನಗೆ ನಮಸ್ಕಾರವು. 

೨೭೭. ಧ್ಯಾನರೂಪನಾದ, ಧ್ಯಾನದಿಂದ ಸಿಕ್ಕುವ, ಧ್ಯಾನಮಾಡುವವರಿಗೆ ಗುರುವಾದ ನಿನಗೆ ನಮಸ್ಕಾರವು, ನಿಷ್ಟನಾದ ಶಿಷ್ಯರಿಗೆ ಕಾಣಿಸಿಕೊಳ್ಳುವ, ಭೂಮ್ಯಾದಿಗಳಿಗೆ ಒಡೆಯನಾದ ನಿನಗೆ ನಮಸ್ಕಾರವು. 

೨೭೮. ಅಂಭಸ್ಯ ಪಾರೆ  ಮುಂತಾದ ವೇದವಾಕ್ಯಗಳಿಗೆ ಒಡೆಯನಾದ ನಿನಗೆ ನಮಸ್ಕಾರವು, ಆತನುಷ್ವ ಪ್ರತನುಷ್ವ ಎಂಬ ವಾಕ್ಯದಲ್ಲಿ ವರ್ಣಿತನಾದ ನಿನಗೆ ನಮಸ್ಕಾರವು. 

೨೭೯. ಅಷ್ಟಮೂರ್ತಿಯಾದ ನಿನಗೆ ನಮಸ್ಕಾರವು, ಸೂರ್ಯ ಚಂದ್ರರೇ ಕಣ್ಣುಗಳಾಗಿ ಉಳ್ಳ ನಿನಗೆ ನಮಸ್ಕಾರವು, ಮೂರು ಕಣ್ಣುಗಳು ನಿನಗೆ ನಮಸ್ಕಾರಗಳು. ಪಶುಗಳಿಗೆ ಪತಿಯಾದ ನಿನಗೆ ನಮಸ್ಕಾರವು. 

೨೮೦, ಗರುಗ, ಉಮ್ಮತ್ತ, ತುಂಬೆ ಹೂಗಳಲ್ಲಿ ಪ್ರೀತಿಯುಳ್ಳ ನಿನಗೆ ನಮಸ್ಕಾರವು. ಗುಳ್ಳ, ಅಡಕೆ, ಸುರಹೊನ್ನೆ, ಸಂಪಿಗೆ ಹೂಗಳಲ್ಲಿ ಪ್ರೀತಿಯುಳ್ಳ ನಿನಗೆ ನಮಸ್ಕಾರವು. 

೨೧. ನಿನಗೆ ನಮಸ್ಕಾರ, ನಿನಗೆ ನಮಸ್ಕಾರ, ಮತ್ತೂ ನಿನಗೆ ನಮಸ್ಕಾರವು. 

ಆಗ ಶಿವನು ಕಪಿರಾಜನನ್ನು ಕುರಿತು ಹೆದರಬೇಡ ನನಗೆ ಎಲ್ಲವನ್ನೂ ಹೇಳು ಎಂದನು. 

೨೮೨. ಹನುಮಂತನು ಹೇಳಿದನು 

:-ಮೈಯ್ಯಿಗೆ ವಿಭೂತಿಯನ್ನಿಟ್ಟುಕೊಂಡು ಹಗಲು ತಂದ ಹೂವು, ನೀರು ಮುಂತಾದುವುಗಳಿಂದ ರಾತ್ರಿ ಶಿವನಾದ ನಿನ್ನ ಪೂಜೆಯನ್ನು ಮಾಡಬೇಕು, 

೨೮೩. ಎಲೈ ಸ್ವಾಮಿಯೇ, ನೀನೇ ನೀನಾದ ಶಿವನ ಪೂಜೆಯ ವಿಧಿಯನ್ನು ವಿಜ್ಞಾಪಿಸಿಕೊಳ್ಳುತ್ತೇನೆ. ಸಾಯಂಕಾಲವಾಗಲು ಕಂಠದವರೆಗೂ ಸ್ನಾನಮಾಡಬೇಕು. 

೨೮೪, ಒಗೆದು ಒಣಗಿಸಿದ ಬಟ್ಟೆಯನ್ನು ಉಟ್ಟುಕೊಂಡು ಎರಡುಬಾರಿ ಆಚಮನಮಾಡಬೇಕು. ಅನಂತರ ಭಸ್ಮವನ್ನು ಮೈಗೆ ಬಳಿದುಕೊಳ್ಳಬೇಕು. ಅದೇ ಆಗ್ನೆಯ ಸ್ನಾನವೆನ್ನಿಸಿಕೊಳ್ಳುತ್ತದೆ. 

೨೮೫. ಓಂ ಎಂಬ ಪ್ರಣವದಿಂದ ಆ ಭಸ್ಮವನ್ನು ಮಂತ್ರಿಸಬೇಕು, ಅದಿಲ್ಲದಿದ್ದರೆ ಅಷ್ಟಾಕ್ಷರಿಯಿಂದ ಮಂತ್ರಿಸಬೇಕು. ಅದೂ ಇಲ್ಲದಿದ್ದರೆ ಪಂಚಾಕ್ಷರಿಯಿಂದಮಂತ್ರಿಸಬೇಕು. 

ಅದೂ ಆಗದಿದ್ದರೆ ಶಿವನ ಯಾವುದಾದರೂ ಒಂದು ನಾಮವನ್ನು ಹೇಳಿ ಮಂತ್ರಿಸಬೇಕು. 

೨೮೬, ಹೀಗೆ ಏಳುಸಾರಿ ಆ ಭಸ್ಮವನ್ನು ಮಂತ್ರಿಸಿ, ಪವಿತ್ರವನ್ನಿಟ್ಟು ಕೊಂಡು ಆ ಭಸ್ಮವನ್ನು ತೆಗೆದುಕೊಳ್ಳಬೇಕು. ಈಶಾನಸ್ಸರ್ವವಿದ್ಯಾನಾಂ ಎಂಬ ಮಂತ್ರವನ್ನು ಹೇಳಿ ತಲೆಗೆ ಇಟ್ಟುಕೊಳ್ಳಬೇಕು. 

೨೮೬. ತತ್ಪುರುಷಾಯ ವಿದ್ಮಹೇ ಎಂಬ ಮಂತ್ರವನ್ನು ಹೇಳಿ ಹಣೆಗೆ ಭಸ್ಮ ವನ್ನು ಹಚ್ಚಿಕೊಳ್ಳಬೇಕು. ಅಘೋರೇಭ್ಯೋಥಘೋರೇಭ್ಯಃ ಎಂಬ ಮಂತ್ರದಿಂದೆ ಎದೆಗೆ ಭಸ್ಮವನ್ನು ಹಚ್ಚಿಕೊಳ್ಳಬೇಕು. 

೨೮೮, ವಾಮದೇವಾಯನಮಃ ಎಂಬ ಮಂತ್ರದಿಂದ ಗುಹ್ಯಸ್ಥಾನಕ್ಕೆ ಭಸ್ಮವನ್ನು ಹಚ್ಚಿಕೊಳ್ಳಬೇಕು. ಸದ್ಯೋಜಾತಂ ಪ್ರಪದ್ಯಾಮಿ ಎಂಬುವದರಿಂದ ಪಾದಗಳಿಗೆ ಹಚ್ಚಿಕೊಳ್ಳಬೇಕು. 

೨೮೯: ಅನಂತರ ಪ್ರಣವದಿಂದ ಚಲನವುಳ್ಳ ದೇಹದ ಎಲ್ಲಾ  ಅಂಗಗಳಿಗೂ ಭಸ್ಮವನ್ನು ಹಚ್ಚಿಕೊಳ್ಳಬೇಕು. ಈ ಭಸ್ಮ ಸ್ನಾನಾದಿವಿಧಿಯು ತ್ರಿವರ್ಣದವರಿಗೂ ಅದರಲ್ಲೂ ವಿಶೇಷವಾಗಿ ದ್ವಿಜರಿಗೆ ಹೇಳಲ್ಪಟ್ಟಿದೆ.

೨೯೦ : ಶೂದ್ರರಿಗಿರುವ ವಿಧಿಯನ್ನು ದಕ್ಷಿಣಾಮೂರ್ತಿಯೂ ಗುರುಸ್ವರೂಪನೂ ಆದ ನಿನ್ನಿಂದ  ಹೇಳಲ್ಪಟ್ಟ ರೀತಿಯಿಂದ ಹೇಳುತ್ತೇನೆ. ಶಿವ ಎಂಬ ಪದವನ್ನು ಉಚ್ಚರಿಸಿ ಶೂದ್ರನು ಭಸ್ಮವನ್ನು ಮಂತ್ರಿಸಬೇಕು. 

೨೯೧. ಅನಂತರ ಏಳುಬಾರಿ ತೆಗೆದುಕೊಳ್ಳಬೇಕು. ಶಂಕರಾಯ ನಮಃ ಎಂದು ಮುಖಕ್ಕೂ ತತ್ತಜ್ಞಾಯ ನಮಃ ಎಂದು ಎದೆಗೂ ಹಚ್ಚಿಕೊಳ್ಳಬೇಕು. 

೨೯೨. ಸ್ಥಾಣವೇ ನಮಃ ಎಂದು ಗುಹ್ಯಕ್ಕೂ, ಸ್ವಯಂಭುವೆ ನಮಃ ಎಂದು ಪಾದಗಳಿಗೂ, ಹಚ್ಚಿಕೊಳ್ಳಬೇಕು. ಅನಂತರ ಉಳಿದ ಭಸ್ಮವನ್ನು *ಓಂ ನಮಃ ಶಿವಾಯ*  ಎಂದು ಹೇಳುತ್ತಾ ಮೈಗೆಲ್ಲಾ ಪೂಸಿಕೊಳ್ಳಬೇಕು. 

೨೯೩. ಅನಂತರ ಕೈಗಳನ್ನು ತೊಳೆದುಕೊಂಡು ನಿಯಮದಿಂದ ಪವಿತ್ರವನ್ನು ಧರಿಸಿಕೊಳ್ಳಬೇಕು. 

೨೯೪, ದರ್ಭೆಯ ಪವಿತ್ರವಿಲ್ಲದಿದ್ದರೆ ಚಿನ್ನದ ಪವಿತ್ರದ ಉಂಗುರವನ್ನು ಇಟ್ಟುಕೊಳ್ಳಬೇಕು, ಅದೂ ಇಲ್ಲದಿದ್ದರೆ ಪಂಚಲೋಹದ ಪವಿತ್ರದುಂಗುರವಾಗ ಬಹುದು. ಅಥವಾ ಗರಿಕೆಯಾದರೂ ಆಗಬಹುದು. ಅದೂ ಸಿಕ್ಕದಿದ್ದರೆ ಬೆಳ್ಳಿಯ ಪವಿತ್ರದುಂಗುರವಾಗಬಹುದು. 

ಇಲ್ಲಿಗೆ ಶ್ರೀ ಹನೂಮತ್ ಪ್ರೋಕ್ತ ಭಸ್ಮಧಾರಣಾ ವಿಧಿಯು ಸಂಪೂರ್ಣವು.

ಹರಿ ಓಮ್ ತತ್ ಸತ್.

ಸತ್ಯಪ್ರಕಾಶ.

ರುದ್ರಾಂಶ ಸಂಭೂತ ಹನುಮಂತ ಭಾಗ-೦೪

ರುದ್ರಾಂಶ ಸಂಭೂತ ಹನುಮಂತ  ಭಾಗ-೦೪

ಹನುಮದ್ರಹಸ್ಯ ನಿರ್ಣಯ :- 

ಸೂಚನೆ : ಭಕ್ತಿಯಿಂದ ಬೇಕಾದಾಷ್ಟು ಹಂಚಿಕೊಳ್ಳೀ

ಹನೂಮಂತನು ರುದ್ರಾಂಶ ಸಂಭೂತನೆಂಬುದು ನಿರ್ವಿವಾದ.ಬಹುಷಃ ವೇದಸ್ಮೃತಿಗಳ ಮೂಲಬಲ್ಲವರಿಗೆ ಇದು ಸಮಸ್ಯೆಯಾಗುವದಿಲ್ಲ.ಈ ಬರಹದಲ್ಲಿ ಹಲವಾತು ಗ್ರಂಥಗಳಲ್ಲಿ ಹನುಮಂತನ ಜನ್ಮದ ಬಗ್ಗೆ ಉಲ್ಲೇಖಿಸಿರುವ  ವಿಷಯಗಳನ್ನು ತಿಳಿಸಿಕೊಡುತ್ತೇನೆ.

ಲಿಂಗ ಪುರಾಣ:- 

ಪವನಾತ್ಮಾ ಬುಧೈರ್ದೇವ ಈಶಾನ ಇತಿ ಕೀರ್ತ್ಯತೇ  | ಈಶಾನಸ್ಯ ಜಗತ್ಕರ್ತುರ್ದೇವಸ್ಯ ಪವನಾತ್ಮನಃ  || ೨,೧೩.೯ ||

ಶಿವಾ ದೇವೀ ಬುಧೈರುಕ್ತಾ ಪುತ್ರಶ್ಚಾಸ್ಯ ಮನೋಜವಃ  | ಚರಾಚರಾಣಾಂ ಭೂತಾನಾಂ ಸರ್ವೇಷಾಂ ಸರ್ವಕಾಮದಃ  || ೨,೧೩.೧೦ ||

ಜ್ಞಾನಿಗಳು ಸಕಲಜಗತ್ಕರ್ತೃ,ಸಕಲ ಸೃಷ್ಟಿಯನ್ನೂ ಪ್ರವೇಶಿಸಿ , ಅವುಗಳ ಹೃದಯದೊಳಗಿರುವವನೂ ಆದ ,ಅಷ್ಟಮೂರ್ತಿಗಳಲ್ಲಿ ಒಂದಾದ ಈಶಾನನೂ  ಶ್ರೀ ಮಹಾದೇವನೇ ಆಗಿದ್ದಾನೆ. ಈ ಪವನದೇವ ಎಂದು ಪ್ರಸಿದ್ಧನಾದ ಹನೂಮಂತ ಎಂಬುವನು   ಶಿವೆಯನ್ನು ಪತ್ನಿಯಾಗಿ ಹೊಂದಿರುವ ಈ ಪರಮೇಶ್ವರನ ಮಗನೇ ಆಗಿದ್ದಾನೆ. ಈ ಪವನ ಎಂಬುವಾತನ  ಅಂತರ್ಯಾಮಿಯಾದ ಆತ್ಮನೇ ಶಿವನು. ಈತನೇ ಚರಾಚರಗಳಿಗೂ ಸರ್ವಕಾಮನೆಗಳನ್ನೂ ಕರುಣಿಸುವವನಾಗಿದ್ದಾನೆ. 

ವಾಯುಪುರಾಣ:- 

ಆಶ್ವಿನಸ್ಯಾಽಸಿತೇ ಪಕ್ಷೇ ಸ್ವಾತ್ಯಾಂ ಭೌಮೇ ಚತುರ್ದಶೀ | ಮೇಷಲಗ್ನೇಽಞ್ಜನೀಗರ್ಭಾತ್ ಸ್ವಯಂ ಜಾತೋಹರಃ ಶಿವಃ || 

ಆಶ್ವಯುಜ ಮಾಸದ (ಅಥವಾ ಶುಭಸೂಚನೆಗಳುಳ್ಳ ಎಂಬ ಅರ್ಥವೂ ಬರುತ್ತದೆ ) ಸ್ವಾತೀ ನಕ್ಷತ್ರವುಳ್ಳ  ಕೃಷ್ಣಪಕ್ಷದ ಚತುರ್ದಶೀ ಮೇಷಲಗ್ನದಲ್ಲಿ  ಅಂಜನಿಯ ಗರ್ಭದಲ್ಲಿ ಹರನೂ ಶಿವನೂ ಎನಿಸಿಕೊಳ್ಳುವನು ತನ್ನ ಅಂಶದಿಂದ ಭೂಲೋಕದಲ್ಲಿ ಅವತರಿಸಿದನು.

ಅಗಸ್ತ್ಯ ಸಂಹಿತಾ :- 

ಊರ್ಜೇ ಕೃಷ್ಣಚತುರ್ದಶ್ಯಾಂ  ಭೌಮೇ ಸ್ವಾತ್ಯಾಂ ಕಪೀಶ್ವರಃ |  ಮೇಷಲಗ್ನೇಽಞ್ಜನೀಗರ್ಭಾತ್  ಪ್ರಾದುರ್ಭೂತಂ ಸ್ವಯಂ ಶಿವಃ || 

ಕಾರ್ತೀಕಮಾಸ (ಪುರಾಣದಲ್ಲಿ ಹೇಳಿರುವ ಆಶ್ವಯುಜಮಾಸ ಎನ್ನುವ ವ್ಯತ್ಯಾಸ)  ಸ್ವಾತೀ ನಕ್ಷತ್ರವುಳ್ಳ  ಕೃಷ್ಣಪಕ್ಷದ ಚತುರ್ದಶೀ ಮೇಷಲಗ್ನದಲ್ಲಿ  ಅಂಜನಿಯ ಗರ್ಭದಲ್ಲಿ ಶಿವನು ತನ್ನ ಅಂಶದಿಂದ ಭೂಲೋಕದಲ್ಲಿ ಪ್ರಾದುರ್ಭವಿಸಿದನು.

ಬ್ರಹ್ಮಾಂಡ ಪುರಾಣ: 

ಕೇಸರೀ ಕುಞ್ಜರಸ್ಯಾಥ ಸುತಾಂ ಭಾರ್ಯಾಮವಿನ್ದತ  || ೨,೭.೨೨೩ ||

ಅಞ್ಜನಾ ನಾಮ ಸುಭಾಗಾ ಗತ್ವಾ ಪುಂಸವನೇ ಶುಚಿಃ  | ಪರ್ಯುಪಾಸ್ತೇ ಚ ತಾಂ ವಾಯುರ್ಯೌಂವನಾದೇವ ಗರ್ವಿತಾಮ್  || ೨,೭.೨೨೪ ||

ತಸ್ಯಾಂ ಜಾತಸ್ತು ಹನುಮಾನ್ವಾಯುನಾ ಜಗದಾಯುನಾ  | ಯೇ ಹ್ಯನ್ಯೇ ಕೇಸರಿಸುತಾ ವಿಖ್ಯಾತಾ ದಿವಿ ಚೇಹ ವೈ  || ೨,೭.೨೨೫ ||

ಜ್ಯೇಷ್ಠಸ್ತು ಹನುಮಾಂಸ್ತೇಷಾಂ ಮತಿಮಾಂಸ್ತು ತತಃ ಸ್ಮೃತಃ  | ಶ್ರುತಿಮಾನ್ಕೇತುಮಾಂಶ್ಚೈವ ಮತಿಮಾನ್ಧೃತಿಮಾನಪಿ  || ೨,೭.೨೨೬ ||

ಶ್ಲೋಕ ಭಾವಾರ್ಥ .

ಕೇಸರೀ ಎಂಬುವ ರಾಜನು ಕುಂಜರ ಮಹರ್ಷಿಯ ಮಗಳಾದ ಅಂಜನಾ ಎಂಬುವವಳನ್ನು ಮದುವೆಯಾದನು. ಅತ್ಯಂತ ಸುಂದರಳಾದ ಅಂಜನಾದೇವಿಯಿಂದ ಪುತ್ರಾಕಾಂಕ್ಷೆಯನ್ನು ಹೊಂದಿದ್ದ ವಾಯುದೇವನು  ಅಂಜನಾ ದೇವಿಯ ದೇಹವನ್ನು ಮನಸ್ಸಿನ ಮೂಲಕ ಪ್ರವೇಶಿಸಿದನು. ಅನ್ನದಿಂದ ರುದ್ರಪುತ್ರನಾದ ಅಗ್ನಿಯು ಪ್ರಕರ್ಷಣ ಗುಣವಾದ  ಶುಚಿ ಎಂಬ ರೂಪದಿಂದ (ಶುಚಿ ,ಪಾವಕ ಮತ್ತು ಪವನ ಎಂಬುವದು ಅಗ್ನಿಯ ಮೂರು ಗುಣಗಳು,ಅಗ್ನಿಯ ಮೂರನೇ ಗುಣದಿಂದಲೇ ವಾಯುವಿನ ಉತ್ಪತ್ತಿ ಎಂಬುದಾಗಿ ವೇದಗಳು ಹೇಳುತ್ತಿವೆ. ಅಗ್ನಿಯ ಮೊದಲ ಗುಣ ಪಾವಕ ಎಂಬುವದು ದ್ಯುಲೋಕದಲ್ಲಿ ತೇಜಸ್ಸಿನ ಗುಣದಿಂದ ಇರುತ್ತದೆ. ಶುಚಿ ಎಂಬುವದು ಕ್ಷೇತ್ರ ಅರ್ಥಾತ್ ಭೂಮಿಯಲ್ಲಿ ಇರುವ ಗುಣ , ದ್ಯುಲೋಕ ಮತ್ತು ಭೂಲೋಕದ ನಡುವಿನ ಐಶ್ವರ್ಯಕ್ಕಾಗಿ ವಾಯುವನ್ನು ದ್ಯಾವಾಪೃಥಿವೀಗಳು ಸೃಷ್ಟಿಸಿ ಕೊಂಡವು ಎಂಬುದಾಗಿ ವೇದಗಳು ಹೇಳುತ್ತಿವೆ. ಅಗ್ನಿಯು ತೇಜಸ್ಸು ಎಂಬ ಅಗ್ನಿಯ ಮೂರನೇ ರೂಪದಿಂದ ದ್ಯುಲೋಕ ಮತ್ತು ಭೂಲೋಕವನ್ನೂ ಮೀರಿ ಸೂರ್ಯಲೋಕದವರೆಗೂ ವ್ಯಾಪಿಸಿ ಕೊಂಡಿರುವ ಸೃಷ್ಟಿ ವೈಚಿತ್ರವನ್ನು ಋಗ್ವೇದದ ಬಳಿತ್ಥಾ ಸೂಕ್ತದಲ್ಲಿ ಕಾಣಬರುತ್ತ್ದೆ.ಅಜ್ಞರು ಈ ಮೂರನೆಯ ತತ್ತ್ವವನ್ನು ಪ್ರಾಣಾಗ್ನಿ ಎಂಬುದಾಗ್ನಿ ಕರೆಯುತ್ತಾರಾದರೂ ಇದು ಯಾವ ಭೂಲೋಕದ ಅವತಾರವನ್ನೂ ಹೇಳುತ್ತಿಲ್ಲ ಎಂಬುವದನ್ನು ನಮ್ಮ ರುದ್ರಾವಲೋಕನದಲ್ಲಿ ಈಗಾಗಗಲೇ ಸಾಧಾರ ತೋರಿಸಿಕೊಟ್ಟಿದ್ದೇವೆ )    ಕೇಸರೀ ವೀರ್ಯದಲ್ಲಿ ಸೇರಿಕೊಂಡು ಅಂಜನಾದೇವಿಯ ಯೋನಿಯನ್ನು ಸೇರಿ  ಜಗತ್ತಿಗೆ ಆಯುಃ ಕಾರಕನಾದ ವಾಯುವಿನ ಅಂಶವನ್ನು ಸಮ್ಮಿಲೀಕರಿಸಿಕೊಂಡು ಹನೂಮಾನ್ ಎಂಬುವನಾಗಿ ಹುಟ್ಟಿದನು. ಹನುಂತನಿಗೆ ,ಮತಿಮಾನ್, ಶ್ರುತಿಮಾನ್,ಕೇತುಮಾನ್ ಮತ್ತು ಧೃತಿಮಾನ್ ಎಂಬ ಸಹೋದರರೂ ಇದ್ದಾರೆ.

ಭವಿಷ್ಯ ಪುರಾಣದಲ್ಲಿಯೂ ಬ್ರಹ್ಮಾದಿ ದೇವತೆಗಳು ಶ್ರೀವಿಷ್ಣುವಿನ ಸಹಾಯಕ್ಕಾಗಿ ತ್ರೇತಾಯುಗದಲ್ಲಿ ಅವತರಿಸುವಂತೆ ರುದ್ರನನ್ನು ಪ್ರಾರ್ಥಿಸುತ್ತಾರೆ ಎಂಬವಿಷಯವನ್ನೂ ವ್ಯಾಸರೇ ಹೇಳಿದ್ದಾರೆ.

 

ಹನೂಮಂತನು ರುದ್ರಾಂಶ ಸಂಭೂತನೋ ಅಲ್ಲವೋ ಎಂಬ ಪ್ರಶ್ನೆ.  ಇದಕ್ಕೆ ಪುರಾಣಗಳಲ್ಲಿ ಸಾಕಷ್ಟು ಪ್ರಮಾಣಗಳಿವೆ. ರುದ್ರನೇ ಪ್ರಾಣನು ಎಂಬುದಾಗಿ ವೇದೋಪನಿಷತ್ತುಗಳು ಸಾರುತ್ತಿವೆ. ರುದ್ರನೇ ಮರುದ್ದೇವತೆಗಳ ಪಿತನು *ಆ ತೇ ಪಿತಃ ಮರುತಾಂ* ಎಂಬುದನ್ನೂ ವೇದಗಳೂ ಪುರಾಣೇತಿಹಾಸಗಳೂ ಘಂಟಾಘೋಷವಾಗಿ ಸಾರುತ್ತಿವೆ.

ವಾಲ್ಮೀಕಿ ರಾಮಾಯಣದಲ್ಲಿ ಹನೂಮಂತನು ವಾಯು ಅಂಶದಿಂದ  ಕೇಸರೀ ಅಂಜನಾದೇವಿಯರ ಕ್ಷೇತ್ರದಲ್ಲಿ ಜನಿಸಿದವನೆಂದೂ ಹೇಳುತ್ತಿರುವದರಲ್ಲಿ ಯಾವುದೇ ಸಂಶಯವಿಲ್ಲ. 

ಈಗ ಕೆಲವು ವೇದೋಕ್ತ ಯುಕ್ತಿಗಳನ್ನು ನೋಡೋಣ. ವೇದಗಳು ರುದ್ರನೇ ನಾನಾ ರೂಪಗಳಿಂದ ಅವತರಿಸಿದ್ದಾನೆ ಎಂಬುದಾಗೀ ಸಾರುತ್ತಿರುವದು ಶತರುದ್ರೀಯದಲ್ಲಿ ಸುಪ್ರಸಿದ್ಧವಾಗಿದೆ. ಇಲ್ಲಿ ರುದ್ರನೇ ಜಲವು ,ಆಕಾಶವು,ಓಷಧಿವನಸ್ಪತಿ ,ವಾಯು, ಅಗ್ನಿ , ರುದ್ರನು ಪೂರ್ವವೇ ಮೊದಲಾದ ದಿಕ್ಕುಗಳು ,ಈತನೇ ದೇವಾದಿದೇವತೆಗಳ ಹೃದಯಲ್ಲಿ ಪ್ರವೇಶಿಸಿದ್ದಾನೆ , ಇವನೇ ಕ್ಷೇತ್ರಪತಿಯು, ಗುಣ ಮತ್ತು ಅಭಿಮಾನ ಸಂಬಂಧ ದೈವತ್ವದ ಸಕಲ ಕಕ್ಷೆಗಳಿಗೂ ರುದ್ರನೇ  ಅಧಿಪತಿಯು (ಯಾವುದೇ ತಾರತಮ್ಯವಿದ್ದರೂ ಅಂಥ ಪದವಿಗಳೆಲ್ಲಕ್ಕೂ ಈತನೇ ಅಧಿಪತಿ , ಅರ್ಥಾತ್ ಅವರವರ ಯೋಗ್ಯತೆಗನುಗುಣವಾಗಿ ಬ್ರಹ್ಮ,ಇಂದ್ರ,ಅಗ್ನಿ,ವಾಯು,ವರುಣ ,ಗರುಡ,ಶೇಷ ,ಪ್ರಕೃತಿ ಮುಂತಾದವುಗಳೆಲ್ಲಕ್ಕೂ ಪದವಿಯನ್ನು ಕೊಡುವಂಥವನೇ ರುದ್ರನು ಎಂದರ್ಥ.ಈತನೇ ನಾರಾಯಣನು.  ಈ ಪದವಿಯಲ್ಲಿ ಈತನೇ ಮೊದಲು , ಈತನೇ ಕೊನೆಯಲ್ಲೂ  ಈತನೇ ಮಧ್ಯದಲ್ಲಿಯೂ ಇರುವವನು. ಇರುವನೊಬ್ಬನೇ ರುದ್ರನು ,ಅಸಂಖ್ಯಾತ ಸಹಸ್ರನಾಗಿರುವನು ,ಇವನ ರೂಪಗಳಾಗಲೀ ,ನಾಮಗಳಾಗಲೀ ಯಾರ ಸ್ಮೃತಿಯಲ್ಲಿರಲೂ ಸಾಧ್ಯವೇ ಇಲ್ಲ ಹೀಗೆ ವೇದಗಳು ಸಾರುತ್ತಿವೆ) 

ಪ್ರಾಣ ಎಂದರೇ ಯಾರು ಎಂಬ ಪ್ರಶ್ನೆಗೆ ಏಕಾದಶ ರುದ್ರರೇ ಪ್ರಾಣಗಳು  *ಪ್ರಾಣಾ ವೈ ರುದ್ರಾಃ*  ಎಂದು ವೇದಗಳು ಉತ್ತರ ಹೇಳುತ್ತವೆ. ಆಕಾಶ ಎಂದರೇ ಯಾರು ಎಂಬುದಕ್ಕೂ ರುದ್ರನ ಶರೀರವೇ ಆಕಾಶ *ಆಕಾಶ ಶರೀರಂ ಬ್ರಹ್ಮ*  ಎಂದೂ ಇದೇ ವೇದಗಳು ಘೋಷವನ್ನು ಮಾಡುತ್ತಿವೆ. ರುದ್ರನೇ ಪ್ರಾಣನು,ರುದ್ರನ ಶರೀರವೇ ಆಕಾಶವು ಎಂದ ಮೇಲೇ ಪುರುಷ ಸೂಕ್ತದಲ್ಲಿ *ಪ್ರಾಣಾದ್ವಾಯುರಜಾಯತ* ಎಂದು ಹೇಳಿದರೇ ಉಪನಿಷತ್ತುಗಳು *ಆಕಾಶಾದ್ವಾಯುಃ*  * ಅಗ್ನಿರ್ವಾಯುಃ-ವಾಯೋರಗ್ನಿಃ * ಎಂಬ ಪರಸ್ಪರ ಅನುಲೋಮ ವಿಲೋಮ ತತ್ತ್ವವನ್ನು ಹೇಳುತ್ತಿದೆ. ವಾಯುವಿನ ನೆಲೆ ಮಧ್ಯಲೋಕ ಅರ್ಥಾತ್ ಭೂಲೋಕ ಮತ್ತು ದ್ಯುಲೋಕದಲ್ಲೇ ಮಾತ್ರವೇ ಇವನ ಸಂಚಾರ. ವಾಯುವಿಗೆ ತೇಜೋಗ್ನಿಗಳಿಗಿರುವಂತೆ ಸರ್ವವ್ಯಾಪಕತ್ವ ಇಲ್ಲ,ವೈಜ್ಞಾನಿಕವಾಗಿಯೂ ಇದು ಸತ್ಯವೇ ಆಗಿದೆ. ವಾಯು ಇಲ್ಲದ ನೆಲಯನ್ನು ನಿರ್ವಾತ ಅಥವಾ ವ್ಯಾಕ್ಯೂಮ್ ಎನ್ನುತ್ತಾರೆ.ಹೀಗಾಗಿ ವಾಯು ಎಂದರೇ ಎಲ್ಲಿಯೂ ರುದ್ರಾಂಶದಿಂದ ಬಿಡುಗಡೆಯೇ ಇಲ್ಲ,ಆದ್ದರಿಂದ ಹನುಮಂತನು ವಾಯುಪುತ್ರ ಎಂದರೇ ರುದ್ರಾಂಶ ಸಂಭೂತನೇ ಎಂಬುವದರಲ್ಲಿ ಸಂಶಯವೇ ಇಲ್ಲ. 

ಇನ್ನೊಂದು ಆಯಾಮ ನೋಡೋಣ.

ಹನುಂತನಿಗೆ *ರುದ್ರವೀರ್ಯಸಮುದ್ಭವಃ* ಎಂಬ ನಾಮಧೇಯ  ಪರಾಣದಲ್ಲಿನ ಉಲ್ಲೇಖವನ್ನೂ ಪರೀಕ್ಷಿಸೋಣ.

ವಾಲ್ಮೀಕಿ ರಾಮಾಯಣ.

ಅಹಂ ಕೇಸರಿಣಃ ಕ್ಷೇತ್ರೇ ವಾಯುನಾ ಜಗದಾಯುಷಾ | ಜಾತಃ ಕಮಲಪತ್ರಾಕ್ಷ ಹನೂಮಾನ್ನಾಮ ವಾನರಃ  || ೦೩೧೪೭೦೨೪ ||

ಕೇಸರಿ ಎಂಬ ಕ್ಷೇತ್ರ ಅರ್ಥಾತ್ ವೀರ್ಯದಿಂದ ವಾಯುವಿನ ಅಂಶದಲ್ಲಿ ನಾನು ಹುಟ್ಟಿದೆನು ಎಂಬುದಾಗಿ ಹನುಮಂತನು ಹೇಳುತ್ತಾನೆ. ಇದೇ ವಾಲ್ಮೀಕಿ ರಾಮಾಯಣದಲ್ಲಿ ಕೇಸರೀ ಎಂಬ ವಾನರ ರಾಜನ ಬಗ್ಗೆ ಸ್ವಾರಸ್ಯಕರ ವಿಚಾರವನ್ನೂ ಕೊಟ್ಟಿದೆ.

ವಾಲ್ಮೀಕಿ ರಾಮಾಯಣ.

ಪಿತಾ ಹನುಮತಃ ಶ್ರೀಮಾನ್ ಕೇಸರೀ ಪ್ರತ್ಯದೃಶ್ಯತ || ೪.೦೩೮.೦೧೭|| 

ಗದ್ಗಸ್ಯೈವ ಪುತ್ರೋಽನ್ಯೋ ಗುರುಪುತ್ರಃ ಶತಕ್ರತೋಃ | ಕದನಂ ಯಸ್ಯ ಪುತ್ರೇಣ ಕೃತಮೇಕೇನ ರಕ್ಷಸಾಮ್  || ೬.೦೨೧.೦೨೧ ||

ರಾವಣನು ತನ್ನ ಗೂಢಾಚಾರರನ್ನು ಕಳುಹಿಸಿ ಶತ್ರುಸೈನ್ಯದ ವಿಚಾರವನ್ನು ತಿಳಿದುಕೊಳ್ಳುವಾಗ ಗೂಢಚಾರರು ವಾನರರ ಪರಿಚಯ ಮಾಡಿಕೊಡುತ್ತಾ ಈ ಮಾತುಗಳನ್ನು ಹೇಳುತ್ತಾರೆ. 

ಈ ಕೇಸರೀ ಎಂಬುವವನು ಹನುಮಂತನ ತಂದೆಯಾಗಿರುವನು. ಗದ್ಗದ ಎಂಬ ಬಲಿಷ್ಠ ವಾನರರ ಪುತ್ರರೂ ಇದ್ದಾರೆ.ಇದರಲ್ಲಿ ಪ್ರಮುಖನಾದ ದೇವೇಂದ್ರನ(ಶತಕ್ರತು) ಗುರುವಾದ ಬೃಹಸ್ಪತಿ ಎಂಬುವರ ಮಗನಾದ ಕೇಸರೀ ಎಂಬ ವಾನರನ ಮಗನೇ ಹನುಮಂತನು. ಈ ವಾನರಸಿಂಹನೇ ಏಕಾಂಗಿಯಾಗಿ ಹಿಂದೆ ಅಶೋಕವನವನ್ನು ಭೇದಿಸಿ ಸಹಸ್ರಾರು ರಾಕ್ಷಸರನ್ನು ಕೊಂದುಹಾಕಿದನು.

ಮೇಲೆ ತಿಳಿಯುವ ವಿಷಯ ಏನೆಂದರೇ ಮಹಾಭಾರತದಲ್ಲಾಗಲೀ ,ಪುರಾಣಗಳಲ್ಲಾಗಲೀ ಎಲ್ಲಿಯೂ ಕೇಸರಿಯ ತಂದೆಯ ಹೆಸರು ಉಲ್ಲೇಖವೇ ಆಗಿಲ್ಲ. ಆದರೂ ವಾಲ್ಮೀಕಿ ಮಹರ್ಷಿಗಳು ಹೀಗೆ ಏಕಾ ಏಕಿ  ಕೇಸರೀ ಎಂಬ ವಾನರನಿಗೆ ಬೃಹಸ್ಪತಿಗಳೇ ತಂದೇ ಎಂದು ಹೇಳುವದಕ್ಕೂ ಏನು ಸಂಬಂಧ ಎಂದು ನೋಡಿದಾಗ *ತೈತ್ತಿರೀಯ ಅರಣ್ಯಕದಲ್ಲಿ *ಪುತ್ರೋ ಬೃಹಸ್ಪತೀ ರುದ್ರಃ* ಅರ್ಥಾತ್ ಬೃಹಸ್ಪತಿಯು ರುದ್ರನ ಮಗನೇ ಆಗಿದ್ದಾನೆ ಎಂಬ ವಿಷಯ ತಿಳಿಯುತ್ತದೆ

ಇದೆಲ್ಲಕ್ಕಿಂತ ಸಾಕ್ಷಾತ್  ನಾರಾಯಣ ಪಂಡಿತನೇ ಕೇಸರೀ ಎಂಬುವವನು ಪೂರ್ವದಲ್ಲಿ ಒಂದಾನೊಂದು ಮರುದ್ದೇವತೆಯೇ ಆಗಿದ್ದನು ಎಂಬುದಾಗಿ ಹೇಳಿರುವದು ಸಮಂಜಸವೇ ಆಗಿದೆ. ಹಾಗಾಗಿ ದೇವತಾ ತಾರತಮ್ಯ ಎಂಬ ವೇದವಿರುದ್ಧ ವೈಷಮ್ಯಕ್ಕೆ ಗಂಟು ಬಿದ್ದು ಒಂದು ವೇಳೇ ವಾಯು ರುದ್ರಾಂಶ ಅಲ್ಲ ಎಂಬ ವೇದವಿರುದ್ಧ ಅಭಿಪ್ರಾಯ ಹೇಳಿದರೂ ,ಕೇಸರಿಯೇ ಪುರ್ವದಲ್ಲಿ ಒಂದಾನೊಂದು ಮರುದ್ದೇವತೆ ಆಗಿದ್ದನು ಎಂಬ ವೇದೋಕ್ತ ನೆಲೆಯಲ್ಲೀ ಯಾವ ಸಂಶಯವೂ ಇಲ್ಲದೇ ಹನುಮಂತನು ಮರುದ್ದೇವತೆಯ ಅವತಾರವಾದ ಕೇಸರಿಯ ಪುತ್ರನೇ ಆಗಿದ್ದಾನೆ ಎಂಬುವದೂ ತಾನೇ ಶತಸ್ಸಿದ್ಧವಾಯಿತು.ಮರುದ್ದೇವತೆಗಳಿಗೆ ರುದ್ರನೇ ತಂದೆಯು ಎಂಬುವದೂ ವೇದಸಿದ್ಧವೇ ಆಗಿರುವದರಿಂದ ಇನ್ನು ಸಂಶಯಕ್ಕೆ ಹೆಚ್ಚು ಅವಕಾಶವಿಲ್ಲ. ಒಂದಿವೇಳೆ ಅಂಥಾ ನಿರೂಪಣೆಯು ಇದ್ದರೇ ಅವು ವೇದಶಾಸ್ತ್ರ ವಿರುದ್ಧ ಆಘಿರುವದರಿಂದ ಸರ್ವಥಾ ತಿರಸ್ಕಾರಯೋಗ್ಯವೇ ಆಗಿರುತ್ತದೆ. 

ಆದರೇ ಇಂಥ ಯಾವುದೇ ವಿಷಯಗಳು ಭಕ್ತಿಭಾವಕ್ಕೆ ತೊಡಕಾಗದಂತೆ ನೋಡಿಕೊಳ್ಳುವದೇ ಸರ್ವಧರ್ಮ ಸಮನ್ವಯದ ಭಾವ.ಹನುಮಂತನು ರುದ್ರಾಂಶ ಸಂಭೂತನಾದರೇ ಅವನು  ಮತೀಯನಾಗುವದೂ , ವಾಯುವಿನ ಅವತಾರ ಎಂದರೇ ಅವನ ಶಕ್ತಿಯು ಕುಂದುವದೂ ಇಲ್ಲ. ಇಂಥ ಬರಹವನ್ನು *ಏಕಮ್ ಸತ್* ಎಂಬ ನೆಲೆಯಲ್ಲಿ ಬರೆದಿದ್ದೇನೆ ಹೊರತೂ ಯಾರ ಭಾವವನ್ನೂ ಕೀಳಾಗಿ ಕಾಣಲು ಪ್ರೋತ್ಸಾಹಿಸಲು ಬರೆದಿಲ್ಲ. ಆದರೇ ನಿಮ್ಮ ಭಾವನೆಯನ್ನು ಇನ್ನೊಬ್ಬರ ಮೇಲೆ ಹೇರುವ ಅವಶ್ಯಕೆತೆಯೇ ಇಲ್ಲ. ನಾನೂ ಕೂಡ ಯಾರೊಬ್ಬರ ಮೇಲೂ ಈ ಶಾಸ್ತ್ರೀಯವಾದ ನಿರೂಪಣೆಯನ್ನು ಹೇರುತ್ತಿಲ್ಲ,  *ಏಕಂ ಸತ್*  ಎಂಬ ಸತ್ಯದ ಪರಿಚಯದಲ್ಲಿ ಮಾತ್ರವೇ ಹೆಚ್ಚಿನ ಅಭಿನಿವೇಶ. ದೇವತಾ ತಾರತಮ್ಯ ಪ್ರತಿಪಾದನೆ ಸಮಾಜ ಘಾತುಕ.ಅನುಷ್ಠಾನ ವೈಯಕ್ತಿಕ ವಿಷಯ.

ಹರಿ ಓಮ್ ತತ್ ಸತ್

ಸತ್ಯಪ್ರಕಾಶ.

ಅಟ್ಲಾಂಟಾ ವಿಮಾನ ಪತನ.. ಥಿಂಕ್ ಪಾಸಿಟಿವ್

*#ಥಿಂಕ್_ಪಾಸಿಟಿವ್‌.* 

        ಅಟ್ಲಾಂಟಿಕ್ ಮಹಾಸಾಗರದಲ್ಲಿ ಸುಮಾರು ವರ್ಷಗಳ ಹಿಂದೆ ಒಂದು ವಿಮಾನ ಪತನ ಆಯಿತು...
ವಿಮಾನ ನಾಪತ್ತೆ ಆದ ಸುದ್ದಿ ತಿಳಿದರು ಅದು ಎಲ್ಲಿ ಪತನ ಆಯಿತು ಎಂದು ತಿಳಿಯದೇ ಹುಡುಕಾಟ ನಡೆಸಿದರು ನಾಲ್ಕು ಐದು ದಿನಗಳ ನಂತರ
ವಿಮಾನ ಅಟ್ಲಾಂಟಿಕ್ ಮಹಾಸಾಗರದಲ್ಲಿ ಪತನ ಆಗಿದೆ ಎಂದು ತಿಳಿದುಬಂತು..
ಅದರಲ್ಲಿ ಯಾರಾದರೂ ಬದುಕಿ ಉಳಿಯುವ ಸಾಧ್ಯತೆ ಎಲ್ಲರೂ ಕೈ ಬಿಟ್ಟಿದ್ದರು
ಸೈನಿಕರ ಸರ್ಚ್ ಟೀಂ ಸಾಗರದಲ್ಲಿ ಹುಡುಕಾಟ ಶುರು ಮಾಡಿದರು
ಕೊನೆಗೂ ಸರ್ಚ್ ಟೀಂ ವಿಮಾನದ ಅವಶೇಷ ಪತ್ತೆ ಹಚ್ಚಿದರು
ಎಲ್ಲಿ ನೋಡಿದರೂ ಹೆಣಗಳು ಕಾಣುತ್ತಿದ್ದವು
ಅನತಿ ದೂರದಲ್ಲಿ ಅವರಿಗೆ ಕಂಡು ಬಂದ ದೃಶ್ಯ ನೋಡಿ ಸೈನಿಕರಿಗೆ ತಮ್ಮ ಕಣ್ಣುಗಳನ್ನೇ ನಂಬಲು ಆಗಲಿಲ್ಲ
ತೇಲುತ್ತಿರುವ ವಿಮಾನದ ಒಂದು ತುಂಡು ಮೇಲೆ ಒಬ್ಬಳು ಮಹಿಳೆ ಒಂದು ಸಣ್ಣ ಮಗುವನ್ನು ಎದೆಗೆ ಅಪ್ಪಿಕೊಂಡು ಮಲಗಿರುವ ದೃಶ್ಯ ಕೂಡಲೇ ಅಲ್ಲಿಗೆ ಹೋಗಿ ಅವರನ್ನು ಪರೀಕ್ಷೆ ಮಾಡಿ ನೋಡಿದರು ತಾಯಿ ಮಗು ಇನ್ನೂ ಉಸಿರಾಡುತ್ತಿದ್ದರು..
ಅವರು ಜೀವಂತ ಇರುವುದು ಖಾತ್ರಿ ಮಾಡಿಕೊಂಡು ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಬದುಕಿಸಿಸಿದರು..
ಇಡೀ ಜಗತ್ತಿಗೆ ಇದೊಂದು ಪವಾಡ ಎಂದು ಅನಿಸಿತು..
ಮೈ ಹೆಪ್ಪುಗಟ್ಟಿಸುವ ಚಳಿ ಸುತ್ತಲೂ ನೀರು ತೇಲುತ್ತಿರುವ ಹೆಣಗಳು ಆಹಾರ ಇಲ್ಲ ನೀರು ಇಲ್ಲ ಎಂತಹ ಗಟ್ಟಿ ಗುಂಡಿಗೆ ಇದ್ದರೂ ಅಂತಹ ಸನ್ನಿವೇಶದಲ್ಲಿ ಬದುಕಿ ಉಳಿಯುವುದು ನಿಜಕ್ಕೂ ಒಂದು ಪವಾಡ..
ಆಕೆ ಚೇತರಿಸಿಕೊಂಡ ಬಳಿಕ ಅವಳನ್ನು ಸಂದರ್ಶನ ಮಾಡಿದಾಗ ಆಕೆ ಹೇಳಿದ ಮಾತು
ಆಕಾಶದಲ್ಲಿ ವಿಮಾನ ಸ್ಪೋಟ ಆಯಿತು ಏನಾಯಿತು ಎಂದು ಅರಿವು ಆಗುವಷ್ಟರಲ್ಲಿ ನಾವು ವಿಮಾನದಿಂದ ಸಿಡಿದು ಗಾಳಿಯಲ್ಲಿ ತೇಲುತ್ತಾ ನೀರಿಗೆ ಬಂದು ಬಿದ್ದೆವು
ಸುತ್ತಲೂ ನೋಡಿದಾಗ ಬರೀ ನೀರು ಕೆಲವರು ಈಜಲು ಪ್ರಯತ್ನಿಸಿದರು ಕೆಲವರು ಆದ ಅಪಘಾತಕ್ಕೆ ನೀರಿಗೆ ಬೀಳುವ ಮೊದಲೇ ಮೃತಪಟ್ಟಿದ್ದರು
ಮಗು ನನ್ನ ತೊಡೆ ಮೇಲೆ ಇದ್ದುದರಿಂದ ನೀರಿಗೆ ಬೀಳುವ ವರೆಗೆ ಮಗುವನ್ನು ಅಪ್ಪಿಕೊಂಡೆ ಇದ್ದೆ ನಾನು ಈಜಲು ಪ್ರಯತ್ನಿಸಿದೆ ಮಗು ಹಿಡಿದುಕೊಂಡು ಈಜಲು ಆಗಲಿಲ್ಲ..
ತೇಲುತ್ತಿರುವ ವಿಮಾನದ ತುಣುಕು ಕಣ್ಣಿಗೆ ಬಿತ್ತು ಏನಾದರೂ ಆಗಲಿ ನಾನು ಸಾಯುವುದಿಲ್ಲ ಬದುಕಿಯೇ ಬದುಕುತ್ತೇನೆ ಎಂದು ಕಷ್ಟಪಟ್ಟು ಈಜಿ ಅದರ ಮೇಲೆ ಏರಿ ಕುಳಿತೆ 
ನನಗೆ ಭರವಸೆ ಇತ್ತು ಯಾರಾದರೂ ಕಾಪಾಡುತ್ತಾರೆ ಎಂದು
ನನ್ನ ಧೈರ್ಯವೇ ನನ್ನನ್ನು ಬದುಕಿಸಿತು ...

ಇದನ್ನು ನಾನು ಎಲ್ಲೂ ಓದಿದ್ದು ಯಾವಾಗ ಎಂದು ನೆನಪಿಲ್ಲ
ಸಾವನ್ನು ಎದುರಿಸುವ ಶಕ್ತಿ ಇರುವುದು ಮನಸ್ಸಿಗೆ ಮಾನಸಿಕ ಧೈರ್ಯ ಇದ್ದರೆ ಎಂತಹ ಕಾಯಿಲೆ ಬಂದರೂ ಸಾವನ್ನು ಎದುರಿಸಬಹುದು
ಕೊನೆಯ ಕ್ಷಣದವರೆಗೂ ಧೈರ್ಯ ಕಳೆದುಕೊಳ್ಳಬಾರದು 
ಮನಸ್ಸಿನಲ್ಲಿ ಭಯ ಭೀತಿ ಉಂಟಾದರೆ ಉಸಿರಾಟ ಏರುಪೇರು ಆಗುತ್ತದೆ 
ಉದ್ವೇಗ ಉಂಟಾಗುತ್ತದೆ ನನಗೆ ಏನೂ ಆಗುತ್ತದೆ ನಾನು ಸಾಯುತ್ತೇನೆ ಎಂಬ ಭಾವನೆ ಮನಸ್ಸಿನಲ್ಲಿ ಬಂದರೆ ಯಾವುದೇ ಔಷಧಿ ಕೂಡ ಬದುಕಿಸಲು ಸಾಧ್ಯವಿಲ್ಲ..
ಮಾನಸಿಕ ಧೈರ್ಯ ಇದ್ದರೆ ಎಂತಹ ಮಾರಣಾಂತಿಕ ಕಾಯಿಲೆ ಬಂದರೂ ಗುಣ ಆಗಬಹುದು ಇಲ್ಲವೇ ಕಾಯಿಲೆ ತೀವ್ರತೆ ಕಡಿಮೆ ಮಾಡುತ್ತದೆ..
ಹುಟ್ಟಿದ ಮನುಷ್ಯ ಸಾಯಲೇ ಬೇಕು ನಿಜ ಆದ್ರೆ ಭಯ ಭೀತಿ ಸಾವಿಗೆ ಬೇಗ ಆಹ್ವಾನ ಕೊಡುತ್ತದೆ.
ನಿಮ್ಮ ಸುತ್ತಮುತ್ತ ನೋಡಿ ಪುಟ್ ಪಾತ್ ಮೇಲೆ ರೈಲ್ವೆ ಪ್ಲಾಟ್ಫಾರ್ಮ್ ಮೇಲೆ ಮಲಗುವ ನಿರ್ಗತಿಕರನ್ನು 
ಯಾವುದೇ ಕಾಯಿಲೆ ಕಸಾಲೆ ಭಯ ಇಲ್ಲದೆ ನಾಳಿನ ಜೀವನದ ಬಗ್ಗೆ ಚಿಂತೆ ಇಲ್ಲದೆ ನೆಮ್ಮದಿಯಾಗಿ ಮಲಗುತ್ತಾರೆ ಬದುಕುತ್ತಾರೆ. ಮನೆಯಲ್ಲಿ ಒಬ್ಬ ಸದಸ್ಯ ಭಯ ಪಟ್ಟರೆ ಭಯ ಸಾಂಕ್ರಾಮಿಕ ರೋಗದಂತೆ ಮನೆಯ ಸದಸ್ಯರೆಲ್ಲರೂ ಭಯ ಪಡುತ್ತಾರೆ. 
ನೀವು ಭಯಪಟ್ಟುಕೊಳ್ಳುವುದು ಬಿಟ್ಟು ಎಲ್ಲರಿಗೂ ಧೈರ್ಯ ತುಂಬಿ
ಎಂತಹ ಸನ್ನಿವೇಶ ಬಂದರೂ ಧೈರ್ಯ ಕಳೆದುಕೊಳ್ಳಬೇಡಿ

ಹಾಗಂತ ಧೈರ್ಯ ತಂದುಕೊಳ್ಳಲು ದುಶ್ಚಟಗಳಿಗೆ ದಾಸರಾಗಬೇಡಿ. ದುಶ್ಚಟಗಳು ಯಾವತ್ತಿಗೂ ಶರೀರಕ್ಕೆ ಹಾನಿ ಮಾಡುತ್ತದೆ

#ಥಿಂಕ್_ಪಾಸಿಟಿವ್‌ 
🙏🙏🙏🙏🙏 

( ವಾಟ್ಸ್‌ಅಪ್‌‌ನಲ್ಲಿ ಬಂದಿದ್ದು )

May 16, 2021

ಸ್ವಸ್ತಿನ ಇಂದ್ರೋ ವೃದ್ಧಶ್ರವಾಃ


ವಿಶ್ವದ ಎಲ್ಲ ಕಡೆಯ ಒಳ್ಳೆಯ ಅಂಶಗಳೂ ನಮಗೆ ಸಿಗಲಿ ಅಥವಾ ನಮ್ಮನ್ನು ಸೇರಿಕೊಳ್ಳಲಿ ಎನ್ನುವುದು ಮೊನ್ನೆ ಬರೆದಿದ್ದೆ. ನಾವು ಯಾವುದನ್ನೂ ನಿರಾಕರಿಸಲಿಲ್ಲ. ನಮಗೆ ಯಾವುದು ಸ್ವೀಕಾರಾರ್ಹವೊ ಅವೆಲ್ಲ ನಮ್ಮನ್ನು ಸೇರಲಿ ಎನ್ನುವವರು ನಾವು. ಅದೇ ರೀತಿ ನಾವು ಎಲ್ಲರಿಗೂ ಒಳಿತನ್ನೆ ಬಯಸಿದವರು. ಜಗತ್ತಿನ ಅನೇಕ ದೇಶಗಳ ರಾಜರುಗಳು ಮತ್ತು ವಂಚಕರು ನಮ್ಮ ದೇಶದ ನಮ್ಮ ಭೂಭಾಗದ ಮೇಲೆ ದಾಳಿ ಮಾಡಿದರು. ಇನ್ನು ಅನೇಕರು ಲೂಟಿ ಮಾಡಿದರು. ಆದರೆ, ನಾವು ಬೇರೆ ದೇಶಗಳ ವಿರುದ್ಧವಾಗಿ ಅಲ್ಲಿನ ಸಂಪತ್ತಿನ ಲೂಟಿಗಾಗಿ ಎಂದೂ ದಾಳಿ ಮಾಡಿದ್ದಿಲ್ಲ. ನಾವು ಎಲ್ಲರಿಗೂ ಒಳಿತನ್ನೇ ಬಯಸಿದ್ದು ಪ್ರಾಚೀನ ಕಾಲದಿಂದ ಕಂಡು ಬರುತ್ತದೆ. ವೇದಾದಿಗಳಲ್ಲಿ ಶುಭವನ್ನು ಕೋರುವುದನ್ನೇ ಸ್ವಸ್ತಿ ಎಂದು ಕರೆಯಲಾಗಿದೆ. ಸಾಯಣಾಚಾರ್ಯರು ಅದನ್ನು ಸ್ವಸ್ತ್ಯವಿನಾಶಂ ಎಂದು ಹೇಳುತ್ತಾರೆ. ಅಂದರೆ ಯಾವುತ್ತೂ ನಾಶ ಹೊಂದದಿರುವ ಅಥವಾ ಅವಿನಾಶಿ ಮಂಗಲ ಅಥವಾ ಚಿರಂತನ ಎನ್ನುವುದು. ಸಮಾರಂಭಾನ್ನವಿಭೂಷೇತ ಹತಸ್ವಸ್ತಿರಕಿಂಚನಃ ಎಂದು ಈ ಶುಭದಾಯಕವಾದುದನ್ನು ಮಹಾಭಾರತದ ಶಾಂತಿಪರ್ವದಲ್ಲಿ ಹೇಳಲಾಗಿದೆ. ಅಲ್ಲಿ ಸ್ವಸ್ತಿಯನ್ನು ಹೇಳದೇ ಸಮಾರಂಭವು ಶೋಭಿಸುವುದಿಲ್ಲ ಎನ್ನಲಾಗಿದೆ. ನಮ್ಮ ದೇಶದಲ್ಲಿ ಸ್ವಸ್ತಿಗಿರುವ ಮಹತ್ವ ತಿಳಿಯುತ್ತದೆ. ಜಿತಂ ತ ಆತ್ಮವಿದ್ಧುರ್ಯ ಸ್ವಸ್ತಯೇ ಸ್ವಸ್ತಿರಸ್ತು ಮೇ ಎಂದು ಭಾಗವತ ಪುರಾಣದ ೪ನೇ ಸ್ಕಂದದಲ್ಲಿ ಬರುತ್ತದೆ. ನನಗೆ ಮಂಗಲವಾಗಲಿ ಎನ್ನುವ ಆಶಯ ಅದು. ಸ್ವಸ್ತಿ ತೇ ಅಸ್ತ್ವಾಂತರಿಕ್ಷೇಭ್ಯಃ ಪಾರ್ಥಿವೇಭ್ಯಶ್ಚ ಭಾರತ ಎಂದು ವನಪರ್ವದಲ್ಲಿ ಸ್ವಸ್ತಿವಾಚನ ಬರುತ್ತದೆ. 

ಚಾನ್ವಾಚಯಸಮಾಹಾರೇತರೇತರಸಮುಚ್ಚಯೇ |
 ಸ್ವಸ್ತ್ಯಾಶೀಃ ಕ್ಷೇಮಪುಣ್ಯಾದೌ ಪ್ರಕರ್ಷೇ ಲಙ್ಘನೇಽಪ್ಯತಿ || ಎಂದು ಅಮರಕೋಶದಲ್ಲಿ ಸ್ವಸ್ತಿಯ ಕುರಿತು ಹೇಳುತ್ತಾ ಮಂಗಲಕರ, ಶುಭ, ಕ್ಷೇಮ ಎಂದು ಹೇಳಿದ್ದಾರೆ.
ಈ ಸ್ವಸ್ತಿಗಳೆಲ್ಲಾ ಹೇಗೆ ಬರಬೇಕು ಎನ್ನುವುದನ್ನು ಋಗ್ವೇದದಲ್ಲಿ ಬಹಳ ಸೊಗಸಾಗಿ ಹೇಳಲಾಗಿದೆ. ವೃದ್ಧಶ್ರವಾಃ ಎನ್ನಲಾಗಿದೆ. ವೃದ್ಧಶ್ರವಾಃ ಎನ್ನುವುದರಲ್ಲಿ ವೃದ್ಧಃ ಅಂದರೆ ಪ್ರಭೂತವಾದ ಅಥವಾ ಹೇರಳವಾದ ಎಂದು ಅರ್ಥ. ವೃದ್ಧ ಎನ್ನುವುದು ಮಾಗಿದ ಎನ್ನುವ ಅರ್ಥವೇ ಹೊರತು ವಯಸ್ಸಿಗೆ ಅಲ್ಲ. ಶ್ರವಃ ಎಂದರೆ ಶ್ರವಣಂ, ಸ್ತೋತ್ರಂ ಎನ್ನುತ್ತಾರೆ. ಅಂದರೆ ಮಾತು ಅಥವಾ ಸ್ತುತಿರೂಪ ಎಂದು ಅರ್ಥ. ಯಥೇಚ್ಚವಾದ ಹವಿಸ್ಸಿನ ರೂಪವಾದ ಸಂಪತ್ತುಳ್ಳ ಅಥವಾ ಅನ್ನವುಳ್ಳ ಇಂದ್ರನು ನಮಗೆ ಒಳ್ಳೆಯದನ್ನು ಮಾಡಲಿ. ನಮಗೆ ಮಂಗಲವನ್ನು ಮಾಡಲಿ. 
ಇದನ್ನೇ ಋಗ್ವೇದದ ಒಂದನೇ ಮಂಡಲದ 89ನೇ ಸೂಕ್ತದಲ್ಲಿ. . . . 
 
ಸ್ವಸ್ತಿನ ಇಂದ್ರೋ ವೃದ್ಧಶ್ರವಾಃ ಸ್ವಸ್ತಿ ನಃ ಪೂಷಾ ವಿಶ್ವವೇದಾಃ |
ಸ್ವಸ್ತಿ ನಸ್ತಾರ್ಕ್ಷ್ಯೋ ಅರಿಷ್ಟನೇಮಿಃ ಸ್ವಸ್ತಿ ನೋ ಬೃಹಸ್ಪತಿರ್ದಧಾತು ||
 ಎನ್ನುವಲ್ಲಿ ಪೋಷಕನಾದ ನಮ್ಮನ್ನು ಸಲಹುವ ದೇವನಾದ ಪೂಷದೇವನನ್ನು ನಮಗೆ ಒಳ್ಳೆಯದನ್ನು ಮಾಡು ಎಂದು ಸ್ತುತಿಸಲಾಗಿದೆ. ವಿಶ್ವವೇದಾಃ ವಿಶ್ವವನ್ನೇ ಹೊತ್ತಿರುವ ವಿಶ್ವವೇದ, ಅಂದರೆ ವೇದ ಎನ್ನುವುದು ಜ್ಞಾನಕ್ಕೆ, ಲೋಕವನ್ನೇ ಆವರಿಸಿರುವ ಈ ಜ್ಞಾನವು ನಮಗೆ ಶುಭವನ್ನು ಉಂಟುಮಾಡಲಿ. ಇಲ್ಲಿ ಬಂದಿರುವ ಅರಿಷ್ಟನೇಮಿ ಎನ್ನುವುದನ್ನು ನೇಮಿರಿತ್ಯಾಯುಧನಾಮ ನೇಮಿ ಎನ್ನುವುದು ಆಯುಧದ ಹೆಸರು ಎನ್ನುತ್ತಾರೆ. ಅಕುಂಠಿತವಾದ ಆಯುದವುಳ್ಳ ಅಥವಾ ಸವೆಯದಿರುವ ರಥದ ಚಕ್ರವುಳ್ಳ ಎನ್ನುವ ಅರ್ಥ ಕೊಡುತ್ತಾ ತಾರ್ಕ್ಷ್ಯಃ ಎನ್ನುತ್ತಾರೆ. ಅಂದರೆ ಅಕುಂಠಿತವಾದ ಆಯುಧವುಳ್ಳ ಅಥವಾ ಸವೆಯದಿರುವ ರಥದ ಚಕ್ರವುಳ್ಳ ತಾರ್ಕ್ಷ್ಯನು. ತಾರ್ಕ್ಷ್ಯ ಎನ್ನುವುದನ್ನು ಸೂರ್ಯನಿಗೂ ಹೇಳಲಾಗುತ್ತದೆ. ತೃಕ್ಷನ ಮಗ ಸೂರ್ಯ. ದೇವಲೋಕದ ಕುದುರೆಯನ್ನೂ ಹಾಗೆ ಕರೆಯಲಾಗುತ್ತದೆ. ಪಕ್ಷಿಯೊಂದಕ್ಕೆ ಮತ್ತು ತ್ರಸದಸ್ಯುವಿನ ಮಗನೂ ತಾರ್ಕ್ಷ್ಯ ಎಂದು ಹೇಳಲಾಗುತ್ತದೆ. ನಾಶರಹಿತವಾದ ಮಂಗಳವನ್ನು ಇವರೆಲ್ಲರ ಜೊತೆಗೆ ದೇವಗುರು ಬೃಹಸ್ಪತಿಯೂ ಮಾಡಲಿ ಎನ್ನಲಾಗಿದೆ. ಅಂಅದರೆ ನಾವಿಲ್ಲಿ ಇಡೀ ವಿಶ್ವದ ಜ್ಞಾನವು ನಮ್ಮನ್ನು ರಕ್ಷಿಸಲಿ ಎನ್ನುತ್ತೇವೆಯೇ ಹೊರತು ನಮ್ಮಲ್ಲಿ ಮಾತ್ರ ಜ್ಞಾನ ಎನ್ನುವುದಿಲ್ಲ. ಹಾಗೂ ಇಡೀ ವಿಶ್ವದ ಎಲ್ಲಾ ಬಗೆಯ ಜ್ಞಾನ ನಮ್ಮನ್ನು ರಕ್ಷಿಸುತ್ತದೆ ಎನ್ನುವುದು ಎಷ್ಟೊಂದು ವಿಶಾಲವಾದ ಆಶಯವನ್ನು ಕೊಡುತ್ತದೆ. ನಮ್ಮ ರಾಜರುಗಳ ಆಸ್ಥಾನಗಳಲ್ಲಿ ಸ್ವಸ್ತಿವಾಚಕನೆನ್ನುವವನು ದಿನಾ ಸ್ವಸ್ತಿವಾಚನ ಮಾಡಬೇಕಿತ್ತು. ಓಂ ಸ್ವಸ್ತಿ.

#ಓಂ_ಸ್ವಸ್ತಿ
ಸದ್ಯೋಜಾತರು

ಶಿವನ ವಾಹನ ನಂದಿ ಯಾರು..? ನಂದಿ ಶಿವನ ಮಗನೇ..?



ಭೋಲೇನಾಥನ ಕೃಪೆಯನ್ನು ಪಡೆಯಲು ಕೇವಲ ದೇವಾನು ದೇವತೆಗಳು ಮಾತ್ರವಲ್ಲ ರಾಕ್ಷಸ ವರ್ಗವೂ ಕೂಡ ಕಠಿಣ ಪೂಜೆ, ವ್ರತವನ್ನು ಮಾಡುತ್ತಿತ್ತು. ಅವನು ತನ್ನ ಆಶ್ರಯಕ್ಕೆ ಬರುವ ಎಲ್ಲ ಭಕ್ತರನ್ನು ಆಶೀರ್ವದಿಸುವುದಲ್ಲದೆ, ಅವರಿಗೆ ಅಪೇಕ್ಷಿತ ಫಲಿತಾಂಶವನ್ನೂ ನೀಡುತ್ತಾನೆ. ಅಂತಹ ಒಂದು ದಂತಕಥೆಯಿದೆ. ಈ ದಂತಕಥೆಯು ಸಾವಿನ ದೇವರು ಯಮರಾಜನೊಂದಿಗೆ ಸಂಬಂಧ ಹೊಂದಿದೆ. ಬೋಲೇನಾಥನು ವಾಹನವಿಲ್ಲದೇ ಸಂಚಾರ ಮಾಡುತ್ತಿರುವುದನ್ನು ನೋಡಿದಾಗ ಯಮಧರ್ಮರಾಜನ ಮನಸ್ಸಿನಲ್ಲಿ ಒಂದು ಆಸೆ ಹುಟ್ಟಿಕೊಂಡಿತು. ಸ್ವಲ್ಪ ಸಮಯದ ನಂತರ ಯಮರಾಜನು ಭಗವಾನ್ ಶಂಕರನಿಗೆ ತನ್ನ ಆಶಯವನ್ನು ವ್ಯಕ್ತಪಡಿಸಿದನು. ಇದರಿಂದ ಮುಂದೆ ಏನಾಯಿತು..?

ಪೌರಾಣಿಕ ಕಥೆಗಳ ಪ್ರಕಾರ, ಶಿವನು ಯಾವುದೇ ವಾಹನವಿಲ್ಲದೆ ಇಡೀ ಜಗತ್ತಿನಲ್ಲಿ ಸಂಚರಿಸುತ್ತಿದ್ದನು. ಒಂದು ದಿನ ಯಮ ಅವರು ಜಗತ್ತಿನಲ್ಲಿ ಪ್ರಯಾಣಿಸುತ್ತಿದ್ದಾಗ ಅವರನ್ನು ನೋಡಿದರು. ಅವನು ಭೋಲೇನಾಥನ ವಾಹನವಾಗಬೇಕು ಎಂಬುದು ಅವನ ಮನಸ್ಸಿಗೆ ಬಂದಿತು. ಆದರೆ ಅದು ಅಷ್ಟು ಸುಲಭವಲ್ಲ, ಆದ್ದರಿಂದ ಅವನು ಶಿವನನ್ನು ಮೆಚ್ಚಿಸಲು ಕಠಿಣ ತಪಸ್ಸು ಮಾಡಿದನು.

ಶಿವ ಶಂಭು ಯಮನ ತಪಸ್ಸಿನಿಂದ ಸಂತಸಗೊಂಡನು ಮತ್ತು ಅವನು ಯಮನನ್ನು ಎತ್ತಿನ ರೂಪದಲ್ಲಿ ತನ್ನ ವಾಹನವೆಂದು ಒಪ್ಪಿಕೊಂಡನು. ಬೋಲೇನಾಥನು ಎತ್ತಿನ ರೂಪವನ್ನು ಆರಿಸಿಕೊಂಡ ಕಾರಣ ಎತ್ತು ತುಂಬಾ ಮುಗ್ಧ ಪ್ರಾಣಿ. ಅದರ ಮನಸ್ಸಿನಲ್ಲಿ ಯಾವುದೇ ವಂಚನೆ ಇರುವುದಿಲ್ಲ. ಭೋಲೇನಾಥನು ಎತ್ತು ಅಂದರೆ ನಂದಿಯನ್ನು ತನ್ನ ವಾಹನವಾಗಿ ನೇಮಿಸಲು ಇದು ಕಾರಣವಾಗಿದೆ. ಅಷ್ಟೇ ಅಲ್ಲ, ಶಿವನು ನಂದಿಯನ್ನು ತನ್ನ ಮುಖ್ಯ ಕಮಾಂಡರ್‌ನನ್ನಾಗಿ ಮಾಡಿಕೊಂಡನು. ನಂದಿಯ ಆಜ್ಞೆಯ ಮೇರೆಗೆ ಶಿವನ ಸೈನ್ಯವು ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತದೆ.

ಪುರಾಣದ ಪ್ರಕಾರ, ಪ್ರಾಚೀನ ಕಾಲದಲ್ಲಿ ಶಿಲಾದಾ ಎಂಬ ಋಷಿ ಇದ್ದನು. ಅವನು ದೇವರ ಆರಾಧನೆಯಲ್ಲಿ ಸಂಪೂರ್ಣವಾಗಿ ತನ್ನನ್ನು ಲೀನವಾಗಿಸಿಕೊಂಡಿದ್ದನು. ಅಂತಹ ಪರಿಸ್ಥಿತಿಯಲ್ಲಿ, ಕುಟುಂಬ ಸದಸ್ಯರು ತಮ್ಮ ವಂಶಾವಳಿಯ ಬಗ್ಗೆ ಚಿಂತಿತರಾಗಿದ್ದರು. ಕುಟುಮಬದ ಪ್ರತಿಯೊಬ್ಬರು ಶಿಲಾದಾ ಋಷಿಯನ್ನು ಭೇಟಿಯಾಗಿ ಕೌಟುಂಬಿಕ ಜೀವನಕ್ಕೆ ಮರಳಿ ಬರುವಂತೆ ಬೇಡಿಕೊಂಡರು. ಅವರು ಒಪ್ಪದಿದ್ದಾಗ, ಅವರು ದೇವರಾಜ ಇಂದ್ರನನ್ನು ಜನನ ಮತ್ತು ಮರಣಗಳನ್ನು ಮೀರಿ ಸಂತಾನೋತ್ಪತ್ತಿಗಾಗಿ ಪೂಜಿಸಿದರು. ಇಂದ್ರನು ಸಂತೋಷವಾಗಿದ್ದರೂ ಅಂತಹ ಮಕ್ಕಳನ್ನು ಆಶೀರ್ವದಿಸಲು ತನ್ನ ಅಸಾಮರ್ಥ್ಯವನ್ನು ವ್ಯಕ್ತಪಡಿಸಿದನು.

ಇಂದ್ರದೇವನು ಶಿಲಾದಾ ಮುನಿಗೆ ಆಶಯಕ್ಕೆ ತಕ್ಕಂತೆ ಮಕ್ಕಳನ್ನು ಪಡೆಯುವ ಆಶೀರ್ವಾದವನ್ನು ನೀಡಿದ್ದಾಗ ಶಿಲಾದಾ ಮುನಿ ಶಿವನನ್ನು ಪೂಜಿಸಿದನು. ಶಿವನು ಮುನಿಯ ಕಠಿಣ ತಪಸ್ಸಿನಿಂದ ತುಂಬಾ ಸಂತೋಷಗೊಂಡನು ಮತ್ತು ನಾನು ನಿನ್ನ ಸ್ವಂತ ಮಗನಾಗಿ ಜನಿಸುತ್ತೇನೆಂದು ಶಿಲಾದಾ ಮುನಿಗೆ ಭರವಸೆಯನ್ನು ನೀಡಿದನು. ಒಂದು ದಿನ ಶಿಲಾದಾ ಮುನಿ ಹೊಲವನ್ನು ಉಳುಮೆ ಮಾಡುತ್ತಿದ್ದಾಗ, ಅದೇ ಜಮೀನಿನಲ್ಲಿ ಮಗುವನ್ನು ಕಂಡುಕೊಂಡನು. ಅವನು ಆ ಮಗುವನ್ನು ಮನೆಗೆ ಕರೆತಂದನು ಮತ್ತು ಅವಳಿಗೆ ನಂದಿ ಎಂದು ಹೆಸರಿಸಿದನು.

ಭಗವಾನ್‌ ಭೋಲೇನಾಥನು ಮಿತ್ರ ಮತ್ತು ವರುಣ ಎಂಬ ಇಬ್ಬರು ಋಷಿಮುನಿಗಳನ್ನು ನಂದಿಯ ಬಳಿ ಕಳುಹಿಸಿದರು. ಈ ಇಬ್ಬರು ನಮದಿಯ ಬಲಿ ಹೋಗಿ ನೀನು ಅಲ್ಪಾಯುಷಿ ಎಂದು ಹೇಳುತ್ತಾರೆ. ಇದನ್ನು ಕೇಳಿದ ನಂದಿಯು ಕಾಡಿಗೆ ಹೋಗಿ ಮಹಾದೇವನನ್ನು ಪೂಜಿಸಲು ಪ್ರಾರಂಭಿಸಿದನು. ನಂದಿಯ ಪೂಜೆಯಿಂದ ಭೋಲೇನಾಥನು ಸಂತಸಗೊಂಡನು. ಮತ್ತು ಸಾವಿನ ಭಯದಿಂದ ಮುಕ್ತನಾದ ನಂದಿಯನ್ನು ಅಜರಾಮರ ಎಂದು ಆಶೀರ್ವದಿಸಿದನು. ಇದಲ್ಲದೆ ಅವರನ್ನು ಗಣಗಳ ಆಡಳಿತಗಾರನನ್ನಾಗಿ ನೇಮಿಸಲಾಯಿತು.

ಅಸುರರು ಮತ್ತು ದೇವರುಗಳ ನಡುವೆ ಸಮುದ್ರ ಮಂಥನ ನಡೆಯುತ್ತಿರುವಾಗ ವಿಷ ಮತ್ತು ಅಮೃತ ಎರಡೂ ಕೂಡ ಹೊರಹೊಮ್ಮಿತು ಎನ್ನುವ ಉಲ್ಲೇಖವಿದೆ. ಆ ಸಂದರ್ಭದಲ್ಲಿ ಶಿವನು ವಿಷವನ್ನು ತಾನು ಸೇವಿಸುತ್ತಾನೆ. ಆದರೆ ವಿಷವನ್ನು ಸೇವಿಸುವ ಸಮಯದಲ್ಲಿ, ಕೆಲವು ಹನಿಗಳು ನೆಲದ ಮೇಲೆ ಬಿದ್ದವು ಮತ್ತು ಅವುಗಳನ್ನು ನಂದಿಯು ತನ್ನ ನಾಲಿಗೆಯಿಂದ ನೆಕ್ಕಿತು. ನಂದಿಯ ಈ ಗುಣದಿಂದ ಶಿವನು ತುಂಬಾ ಸಂತೋಷಪಟ್ಟನು. ಇದರ ನಂತರ ಶಿವನು ನಂದಿಗೆ ತನ್ನ ಶ್ರೇಷ್ಠ ಭಕ್ತ ಎಂಬ ಬಿರುದನ್ನು ಕೊಟ್ಟನು. ಅದೇ ಸಮಯದಲ್ಲಿ, ತನಗೆ ಸೇರಿದ ಅಧಿಕಾರಗಳು ಸಹ ನಂದಿಗೆ ಸೇರಿವೆ ಎಂದು ಹೇಳಿದರು. ಭೋಲೆನಾಥನ ಆಶೀರ್ವಾದ ಪಡೆಯಲು ವಿಷದ ಹನಿಗಳನ್ನು ತಾನು ನೆಕ್ಕುವುದು ನಂದಿಯ ಮಹಿಮೆ ಮತ್ತಷ್ಟು ಹೆಚ್ಚಾಯಿತು.

ಶಿವನಿಗೆ ಈ 2 ರಾಶಿಯವರೆಂದರೆ ಬಲು ಪ್ರೀತಿ..! ನಿಮ್ಮ ರಾಶಿಗಿದೆಯೇ ಪರಶಿವನ ಕೃಪೆ..?

4. ನಮ್ಮ ಆಶಯಗಳನ್ನು ಮೊದಲು ನಂದಿಯ ಬಳಿ ಹೇಳಿಕೊಳ್ಳಬೇಕು:
ನಮ್ಮ ಆಶಯಗಳನ್ನು ಮೊದಲು ನಂದಿಯ ಬಳಿ ಹೇಳಿಕೊಳ್ಳಬೇಕು

ಶಿವನನ್ನು ಪೂಜಿಸುವ ಮೊದಲು ನಂದಿಯನ್ನು ಪೂಜಿಸಲಾಗುವುದು ಎಂದು ನಂದಿಗೆ ಶಿವನು ಆಶೀರ್ವಾದವನ್ನು ನೀಡಿದನು.

ಪ್ರತಿ ಶಿವನ ದೇವಾಲಯದಲ್ಲೂ ನಂದಿ ಬಾಬಾ ಅವರ ವಿಗ್ರಹ ಖಂಡಿತವಾಗಿಯೂ ಇರಲು ಇದೇ ಕಾರಣ. 

ಇದು ಮಾತ್ರವಲ್ಲ, ನೀವು ಭೋಲೇನಾಥನ ಬಳಿ ಏನನ್ನಾದರೂ ಕೇಳಲು ಬಯಸಿದರೆ ನಿವು ಮೊದಲು ನಮದಿಯ ಕಿವಿಯಲ್ಲಿ ನಿಮ್ಮೆಲ್ಲಾ ಆಸೆಗಳನ್ನು ಈಡೇರಿಸುವಂತೆ ಶುದ್ಧ ಮನಸ್ಸಿನಿಂದ ಕೇಳಿಕೊಳ್ಳಬೇಕು.

ಆಗ ನಂದಿ ನಿಮ್ಮ ಆಶಯಗಳನ್ನು ಶಿವನ ಬಳಿ ಇಟ್ಟು ಅವುಗಳು ಈಡೇರುವಂತೆ ಮಾಡುತ್ತಾನೆ.