ಜುಲೈ 17, 2021

‌ದಕ್ಷಿಣಾಯಣ ಪುಣ್ಯಕಾಲ – ಕರ್ಕಾಟಕ ಸಂಕ್ರಮಣ

🕉️ ಓಂ ಶ್ರೀ ಗುರುಭ್ಯೋ ನಮಃ 🕉️ ‌     ‌         ‌            ‌                 ‌                   ‌    ‌                                                       *‌ದಕ್ಷಿಣಾಯಣ ಪುಣ್ಯಕಾಲ – ಕರ್ಕಾಟಕ ಸಂಕ್ರಮಣ*
                                                              ‌                                                                  "ದಕ್ಷಿಣಾಯಣ ಪರ್ವಕಾಲವೆಂದರೇನು?"
                                                                                                                ಮಾನವನ ಒಂದು ವರ್ಷ ದೇವತೆಗಳ ಒಂದು ದಿನಕ್ಕೆ ಸಮ.  ದೇವತೆಗಳಿಗೆ ಉತ್ತರಾಯಣ ಹಗಲಾದರೆ ದಕ್ಷಿಣಾಯಣ ರಾತ್ರಿ ಕಾಲ.


ಉತ್ತರಾಯಣ ಸಾಮಾನ್ಯವಾಗಿ ಜನವರಿ 14, 15ರಂದು ಬರುತ್ತದೆ.  ದಕ್ಷಿಣಾಯಣ ಸಾಮಾನ್ಯವಾಗಿ ಜುಲೈ 15, 16,  ಅಥವಾ 17 ಬರುತ್ತದೆ.
 ‌                                                                                                   *ದಕ್ಷಿಣಾಯಣ ಅಥವಾ ಉತ್ತರಾಯಣ ಯಾವುದೇ ತಿಥಿಗೆ ಸಂಬಂಧಿಸಿದ್ದಲ್ಲ*
                                                                                                       ಸೂರ್ಯ ಕರ್ಕರಾಶಿಯನ್ನು ಪ್ರವೇಶಿಸುತ್ತಾನೆ.   “ತ್ರಿಂಶತಿ ಕರ್ಕಾಟಕೇ ಪೂರ್ವೇ”, ಸೂರ್ಯ ಕರ್ಕರಾಶಿಯನ್ನು ಪ್ರವೇಶಿಸುವ  30 ಘಳಿಗೆ ಮುನ್ನ ಅಂದರೆ ಉತ್ತರಾಯಣದಲ್ಲೇ ಪರ್ವಕಾಲವುಂಟಾಗುತ್ತದೆ.  ಆದ್ದರಿಂದ ಈ ಪರ್ವ ಕಾಲದಲ್ಲೇ ಸ್ನಾನ, ತರ್ಪಣ, ದಾನ ಕೊಡತಕ್ಕದ್ದು.  (ಒಂದು ಘಳಿಗೆ ಅಂದರೆ 24 ನಿಮಿಷ. ಅರ್ಥಾತ್  30 x 24 = 720 ನಿಮಿಷ.  720/60 = 12  ಘಂಟೆ)
 
ದಕ್ಷಿಣಾಯಣ ಪುಣ್ಯಕಾಲ ತರ್ಪಣ ಸಂಕಲ್ಪ :-
೧.  ಆಚಮನ
೨.  ಪವಿತ್ರ ಧಾರಣ (ಪವಿತ್ರ ಮಾಡಲು ಬರದಿದ್ದರೆ ಪವಿತ್ರದ ಉಂಗುರವಿದ್ದರೂ ಪರವಾಗಿಲ್ಲ)
೩.  ಪುನರಾಚಮನ
೪.  ಪ್ರಾಣಾಯಾಮ
ನಂತರ ಸಂಕಲ್ಪ —
ಶ್ರೀ ಗೋವಿಂದ ಗೋವಿಂದ ವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ, ಅದ್ಯ ಬ್ರಹ್ಮಣ:, ದ್ವಿತೀಯ ಪರಾರ್ಧೇ, ಶ್ರೀ ಶ್ವೇತವರಾಹಕಲ್ಪೇ, ವೈವಸ್ವತ ಮನ್ವಂತರೇ, ಕಲಿಯುಗೇ, ಪ್ರಥಮಪಾದೇ, ಜಂಭೂದ್ವೀಪೇ, ದಂಡಕಾರಣ್ಯೇ, ಗೋದಾವರ್ಯಾ: ದಕ್ಷಿಣೇತೀರೇ ಶಾಲೀವಾಹನ ಶಕೇ, ಬೌದ್ಧಾವತಾರೇ, ರಾಮಕ್ಷೇತ್ರೇ (ಪರಶುರಾಮಕ್ಷೇತ್ರೇ), ಶ್ರೀ ಪರಮವೈಷ್ಣವ ಸನ್ನಿಧೌ, ಅಸ್ಮಿನ್ ವರ್ತಮಾನೇ ಚಾಂದ್ರಮಾನೇನ ______ನಾಮ ಸಂವತ್ಸರೇ, ದಕ್ಷಿಣಾಯನೇ, _____ಋತು, ______ಮಾಸೇ, ____ಪಕ್ಷೇ, _____ತಿಥೌ, _____ನಕ್ಷತ್ರೇ, ____ ಯೋಗೇ, ____ಕರಣೇ, _____ವಾಸರಯುಕ್ತಾಯಂ, ಪಿತ್ರಾದಿ ಸಮಸ್ತ ಪಿತ್ರೂಣಾಂ ಅಂತರ್ಗತ, ಮನುನಾಮಕ, ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಮನ್ಮಧ್ವವಲ್ಲಭ ಜನಾರ್ಧನ ವಾಸುದೇವ ಪ್ರೇರಣಯಾ, ಶ್ರೀಮನ್ಮಧ್ವವಲ್ಲಭ ಜನಾರ್ಧನ ವಾಸುದೇವ ಪ್ರೀತ್ಯರ್ಥಂ, ವಿಷ್ಣು ನಕ್ಷತ್ರ, ವಿಷ್ಣುಯೋಗ, ವಿಷ್ಣು ಕರಣ, ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಪುಣ್ಯತಿಥೌ., (ಪ್ರಾಚೀನಾವೀತಿ), (ಜನಿವಾರವನ್ನು ಎಡಕ್ಕೆ ಹಾಕಿಕೊಂಡು) ಸದ್ಯ: ತಿಲತರ್ಪಣಂ ಕರಿಷ್ಯೇ –
೧. ಪಿತೃ, ಪಿತಾಮಹ, ಪ್ರಪಿತಾಮಹ
೨. ಮಾತೃ, ಪಿತಾಮಹಿ, ಪ್ರಪಿತಾಮಹಿ
೩. ಮಾತಾಮಹ, ಮಾತು: ಪಿತಾಮಹ, ಮಾತು: ಪ್ರಪಿತಾಮಹ
೪. ಮಾತಾಮಹಿ, ಮಾತು: ಪಿತಾಮಹಿ, ಮಾತು: ಪ್ರಪಿತಾಮಹಿ
ಈ ಮೇಲ್ಕಂಡ ೧೨ ಜನಕ್ಕೂ ತರ್ಪಣ ಕೊಡಬೇಕು.  (ಅಕಸ್ಮಾತ್ ಇವರುಗಳಲ್ಲಿ ಯಾರಾದರೂ ಬದುಕಿದ್ದರೆ ಅವರನ್ನು ಬಿಟ್ಟು)
ಅವತ್ತು ಏಕಭುಕ್ತನಾಗಿರಬೇಕು. ಬೆಳಿಗ್ಗೆ ಎಂದಿನಂತೆ ಮುಂಜಾನೆಯೇ ಎದ್ದು, ಸ್ನಾನ, ಆಹ್ನೀಕಾದಿಗಳನ್ನು ಮಾಡಿ, ನಿರ್ಮಾಲ್ಯ ವಿಸರ್ಜಿಸಿ, ಉಪವಾಸವಿದ್ದು,
ದಕ್ಷಿಣಾಯನ ಪರ್ವಕಾಲ ಸಮಯದವರೆಗೂ ಉಪವಾಸವಿದ್ದು, ಪರ್ವಕಾಲ ಬಂದ ಮೇಲೆ ಸ್ನಾನಾದಿಗಳನ್ನು ಮಾಡಿ) ನಂತರ ತರ್ಪಣ ಕೊಡಬೇಕು. ‌  ‌     ‌    ‌    ‌            ‌                  ‌      ‌            ‌      ‌                                                       ‌ *ದಕ್ಷಿಣಾಯಣ ಪುಣ್ಯಕಾಲದ ಮಹತ್ವ*

ಜುಲೈ 16ರಿಂದ ದಕ್ಷಿಣಾಯಣ ಪುಣ್ಯಕಾಲ ಆರಂಭವಾಗುತ್ತದೆ. ಶಾಸ್ತ್ರದ ರೀತ್ಯ ದಕ್ಷಿಣಾಯಣ ಪುಣ್ಯಕಾಲದ ಮಹತ್ವ ಏನಿರಬಹುದು ನೋಡೋಣ.
    
ನಮ್ಮ ಪಂಚಾಂಗಗಳ ಪ್ರಕಾರ ಸಂವತ್ಸರವನ್ನು ಎರಡು ಭಾಗವಾಗಿ ಗುರುತಿಸಲಾಗಿದೆ. ಅದೆಂದರೆ, ಉತ್ತರಾಯಣ ಮತ್ತು ದಕ್ಷಿಣಾಯಣ. ರವಿ ಗ್ರಹ ಮಕರ ರಾಶಿಗೆ ಪ್ರವೇಶಿಸಿದ ಆರು ತಿಂಗಳ ಕಾಲ ಅಂದರೆ ಕುಂಭ, ಮೀನ, ಮೇಷ, ವೃಷಭ, ಮಿಥುನ ರಾಶಿಯಲ್ಲಿದ್ದು ಸಾಮಾನ್ಯವಾಗಿ 15 ಅಥವಾ 16ರ ಜುಲೈ ತಿಂಗಳಲ್ಲಿ ಕಟಕ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಕಾಲವನ್ನು ದಕ್ಷಿಣಾಯಣ ಪುಣ್ಯಕಾಲ ಎನ್ನುತ್ತಾರೆ. ಬಹುತೇಕರಲ್ಲಿ ಒಂದು ತಪ್ಪು ಅಭಿಪ್ರಾಯವಿದೆ. ಉತ್ತರಾಯಣ ಸ್ವರ್ಗದ ಬಾಗಿಲು ತೆರೆಯುವ ಕಾಲವಾದರೆ ದಕ್ಷಿಣಾಯನ ಆ ಬಾಗಿಲನ್ನು ಮುಚ್ಚುವ ಕಾಲ ಎನ್ನುತ್ತಾರೆ. ಅದು ಸರಿಯಲ್ಲ. ನಮ್ಮ ಶಾಸ್ತ್ರಗಳು ದಕ್ಷಿಣಾಯನ ಕಾಲವನ್ನು ನಮ್ಮ ಶಾಸ್ತ್ರಗಳು ಪರಮಪುಣ್ಯ ಸಂಚಯನ ಕಾಲ ಎಂದು ಅಭಿಪ್ರಾಯಿಸುತ್ತವೆ. ಕಾರಣ ಈ ಸಮಯದಲ್ಲಿ ಸಾಕಷ್ಟು ಮಹತ್ತರ ಘಟನೆಗಳು ಸಂಭವಿಸಿವೆ. ಅವೆಂದರೆ, ದಾಕ್ಷಾಯಿಣಿ ಪುನರ್‌ಜನ್ಮ ಪಡೆದು ಪರ್ವತರಾಜನ ಮಗಳಾಗಿ ಜನಿಸಿ ಪಾರ್ವತಿಯಾದದ್ದು. ಶಿವನನ್ನು ತಪಸ್ಸಿನಿಂದ ಮೆಚ್ಚಿಸಿ ಅವನನ್ನು ವಿವಾಹವಾದ ಸಮಯವಿದು. ಗಣಪತಿಯ ಜನನವಾದದ್ದು ದಕ್ಷಿಣಾಯಣದ ಭಾದ್ರಪದ ಮಾಸದಲ್ಲಿ. ದ್ವಾಪರಯುಗದಲ್ಲಿ ಶ್ರೀಕೃಷ್ಣ ಜನಿಸಿದ್ದು ಶ್ರಾವಣ ಮಾಸದಲ್ಲಿ. ಭೂದೇವಿಯ ಮಗನಾದ ನರಕಾಸುರನನ್ನು ಶ್ರೀಕೃಷ್ಣ ಸಂಹರಿಸಿದ್ದು ಕಾರ್ತಿಕ ಮಾಸದಲ್ಲಿ. ಮಹಾವಿಷ್ಣು ವರಾಹ ಅವತಾರವನ್ನು ತಾಳಿದ್ದು ದಕ್ಷಿಣಾಯನದಲ್ಲಿ. ಬಲಿ ಪಾಡ್ಯಮಿ ಸಹ ಈ ಸಮಯದಲ್ಲೇ ಬರುತ್ತದೆ. ‌      ‌                    ‌                 ‌              ‌      ‌                                                                                   *ಕಟಕ ಸಂಕ್ರಮಣ* :  ಜುಲೈ ‌16, 2021 ಶುಕ್ರವಾರ ಸಂಜೆ‌ 04:52 pm.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

If you have any doubts. please let me know...