🕉 *ಕರ್ಮ - ಭೋಗ* 🕉
*ನಮಗೆ ನಮ್ಮ ಪೂರ್ವ ಜನ್ಮದ ಕರ್ಮಗಳಿಂದಲೇ...*
*ಈ ಜನ್ಮದಲ್ಲಿ...*
ತಂದೆ,
ತಾಯಿ,
ಅಣ್ಣ,
ಅಕ್ಕ,
ಹೆಂಡತಿ,
ಗಂಡ,
ಪ್ರೇಯಸಿ, ಪ್ರಿಯಕರ, ಮಿತ್ರರು, ಶತ್ರುಗಳು ಎನ್ನುವ ಅನೇಕ ಸಂಬಂಧಗಳು ನಮಗೆ ಈ ಪ್ರಪಂಚದಲ್ಲಿ ಲಭಿಸುತ್ತದೆ.
ಏಕೆಂದರೆ ನಾವು ಇವರಿಗೆ...
*ಈ ಜನ್ಮದಲ್ಲಿ ಏನೋ ಒಂದು ಕೊಡಬೇಕಾಗಿರುತ್ತದೆ, ಅಥವಾ ಪಡೆಯಬೇಕಾಗಿರುತ್ತದೆ.*
*ನಮಗೆ ಸಂತಾನದ ರೂಪದಲ್ಲಿ ಯಾರು ಯಾರು ಬರುತ್ತಾರೆ...*
*ನಮಗೆ ಹಿಂದಿನ ಜನ್ಮದಲ್ಲಿ ಸಂಬಂಧ ಇರುವವರೇ...*
*ಈ ಜನ್ಮದಲ್ಲಿ ಸಂತಾನದ ರೂಪದಲ್ಲಿ ಜನಿಸುತ್ತಾರೆ,*
ಅದನ್ನೇ...
ನಮ್ಮ ಶಾಸ್ತ್ರಗಳ ಪ್ರಕಾರ ನಾಲ್ಕು ರೀತಿಯಲ್ಲಿ ಇದೆ ಎಂದು ತಿಳಿಸುತ್ತಾರೆ....
*👦🏻 ಋಣಾನುಬಂಧ:-*
ಹಿಂದಿನಜನ್ಮದಲ್ಲಿ ನಾವು ಯಾರ ಹತ್ತಿರವಾದರು ಋಣವನ್ನು ಪಡೆದಿರಬಹುದು...
ಅಥವಾ ಯಾರ ಧನವನ್ನಾದರೂ ನಷ್ಟ ಪಡಿಸಿರಬಹುದು.
ಅಂತಹವರು ನಿಮಗೆ ಸಂತಾನ ರೂಪದಲ್ಲಿ ಜನಿಸಿ ಅಥವಾ ಯಾವುದಾದರೂ ವ್ಯಾಧಿಯ ರೂಪದಲ್ಲಿ ಬಂದು...
ನಿಮ್ಮ ಹತ್ತಿರ ಇರುವ ಪೂರ್ತಿ ಧನವು ಖರ್ಚು ಆಗುವವರೆಗೆ ಇದ್ದು...
ಆ ಹಳೆಯ ಖರ್ಚುಗಳು ಸರಿಸಮಾನ ಆಗುವವರೆಗೆ ನಮ್ಮೊಂದಿಗೆ ಇರುತ್ತಾರೆ...
*👦🏻 ಶತ್ರುಗಳೇ - ಪುತ್ರರು:-*
ನಮ್ಮ ಪೂರ್ವ ಜನ್ಮದಲ್ಲಿ ಶತ್ರುಗಳು ನಮ್ಮ ಮೇಲೆ ಅವರ ಪ್ರತೀಕಾರವನ್ನು ತೀರಿಸಿಕೊಳ್ಳಲು ನಮ್ಮ ಮನೆಯಲ್ಲಿ ಸಂತಾನ ರೂಪದಲ್ಲಿ ಮತ್ತು ಹುಟ್ಟುತ್ತಾರೆ.
ಹಾಗೆ ಹುಟ್ಟಿದ ಮೇಲೆ ದೊಡ್ಡವರಾದ ನಂತರ ತಂದೆ ತಾಯಿಯರೊಂದಿಗೆ ಜಗಳಗಳನ್ನು ಮಾಡುತ್ತಾರೆ.
ಜೀವನಪೂರ್ತಿ ಯಾವುದೋ ಒಂದು ವಿಷಯಕ್ಕೆ ಪೀಡಿಸುತ್ತಲೇ ಇರುತ್ತಾರೆ.
ಯಾವಾಗಲೂ ತಂದೆ ತಾಯಿಯರನ್ನು ... ನಾ ನಾ ರೀತಿಯ ಯಾತನೆಗಳನ್ನು ನೀಡುತ್ತಾ...
ಅವರ ಮರ್ಯಾದೆಯನ್ನು ತೆಗೆದು ಅವರನ್ನು ದುಃಖಕ್ಕೆ ಒಳಮಾಡುತ್ತಾ.... ಆನಂದ ಪಡುತ್ತಿರುತ್ತಾರೆ.
*👳🏻 ತಟಸ್ಥ ಪುತ್ರರು:-*
ಇವರು ತಂದೆ ತಾಯಿಗೆ ಸೇವೆಯನ್ನು ಮಾಡುವುದಿಲ್ಲ...
ಹಾಗೂ ಅವರನ್ನು ಸುಖವಾಗಿ ಇಡುವುದಿಲ್ಲ...
ತಂದೆ ತಾಯಿಗಳನ್ನು ಬಿಟ್ಟು ಹೊರಟು ಹೋಗುತ್ತಾರೆ.
ಅವರ ಮದುವೆಯ ನಂತರ ತಂದೆ ತಾಯಿಗಳಿಂದ ದೂರವಾಗಿ ಬಿಡುತ್ತಾರೆ.
*👩🏻 ಸೇವಾ ತತ್ಪರತೆ ಇರುವ ಪುತ್ರರು:-*
ಹಿಂದಿನ ಜನ್ಮದಲ್ಲಿ ನೀವು ಯಾರಿಗಾದರೂ ಚೆನ್ನಾಗಿ ಸೇವೆಯನ್ನು ಮಾಡಿರಬಹುದು,
ಆ ಋಣವನ್ನು ತೀರಿಸಿಕೊಳ್ಳಲು ಅವರು ಈ ಜನ್ಮದಲ್ಲಿ ಮಗ ಅಥವಾ ಮಗಳ ರೂಪದಲ್ಲಿ ಬರಬಹುದು.
ಹಾಗೆ ಬಂದು ಚೆನ್ನಾಗಿ ಸೇವೆ ಮಾಡುತ್ತಾರೆ.
ನೀವು ಹಿಂದಿನ ಜನ್ಮದಲ್ಲಿ ಏನು ಮಾಡಿಕೊಂಡಿರುತ್ತೀರೋ ಅದೇ ಈಗ ನಿಮಗೆ ಸಿಗುತ್ತದೆ.
ನೀವು ಹಿಂದಿನ ಜನ್ಮದಲ್ಲಿ ಯಾರಿಗಾದರೂ ಸೇವೆ ಮಾಡಿದರೆ, ಈ ಜನ್ಮದಲ್ಲಿ ಅವರು ನಮ್ಮ ವೃದ್ಧಾಪ್ಯದಲ್ಲಿ ನಮಗೆ ಸೇವೆ ಮಾಡುತ್ತಾರೆ.
ಇಲ್ಲದಿದ್ದರೆ, ನಮಗೆ ನಮ್ಮ ವೃದ್ಧಾಪ್ಯದಲ್ಲಿ ಗುಟುಕು ನೀರು ಕೊಡುವವರು ನಮ್ಮ ಹತ್ತಿರ ಇರುವುದಿಲ್ಲ.
ಇದು ಪೂರ್ತಿಯಾಗಿ ಮನುಷ್ಯರಿಗೆ ಮಾತ್ರ ವರ್ತಿಸುತ್ತದೆ,
ಎಂದು ಭಾವಿಸಬೇಡಿರಿ.
ಈ ಕೆಳಗಡೆ ತಿಳಿಸಿರುವಂತೆ ಯಾವ ವಿಧದಲ್ಲಿ ಆದರೂ ಹುಟ್ಟಬಹುದು.
ಒಂದು ವೇಳೆ ನೀವೇನಾದರೂ ಒಂದು ಹಸುವಿಗೆ ನಿಸ್ವಾರ್ಥವಾದ ಸೇವೆ ಮಾಡಿದ್ದರೆ,
ಆ ಹಸು ನಿಮಗೆ ಮಗ ಅಥವಾ ಮಗಳಾಗಿ ನಿಮ್ಮ ಮನೆಯಲ್ಲಿ ಹುಟ್ಟಬಹುದು.
ಒಂದು ಕರುಗೆ ಅದರ ತಾಯಿಯ ಹತ್ತಿರ ಸರಿಯಾಗಿ ಹಾಲು ಕುಡಿಯಲು ಬಿಡದಿದ್ದರೆ, ಹಸುವಿನಿಂದ ಕರುವನ್ನು ದೂರವಿಟ್ಟ ಪಾಪಕ್ಕೆ ಅವರೇ ಮಗ ಅಥವಾ ಮಗಳಾಗಿ ನಿಮ್ಮ ಮನೆಯಲ್ಲಿ ಹುಟ್ಟಬಹುದು.
ಅಥವಾ ನೀವೇನಾದರೂ ನಿರಪರಾಧಿಯನ್ನು ಸತಾಯಿಸಿದ್ದರೇ, ಅವರು ನಿಮಗೆ ಶತ್ರುವಿನ ರೂಪದಲ್ಲಿ ಹುಟ್ಟಿ ನಿಮ್ಮೊಂದಿಗೆ ಅವರ ಗತ ಜನ್ಮದ ಶತ್ರುತ್ವವನ್ನು ತೀರಿಸಿಕೊಳ್ಳುತ್ತಾರೆ.
ಆದುದರಿಂದಲೇ, ಜೀವನದಲ್ಲಿ ಯಾರಿಗೂ ಸಹ ಕೆಡಕನ್ನು, ಹಾನಿಯನ್ನು ಮಾಡಬಾರದು.
ಏಕೆಂದರೆ ಪ್ರಕೃತಿ ನಿಯಮದ ಪ್ರಕಾರ ನೀವು ಏನು ಮಾಡಿದರೆ..
ಅದಕ್ಕೆ...
ಈ ಜನ್ಮದಲ್ಲಿ ಅಥವಾ ಬರುವ ಜನ್ಮದಲ್ಲಿ ನೂರಕ್ಕೆ ನೂರು ಪಟ್ಟು ಅಧಿಕ ಮಾಡಿ...ಅನುಭವಕ್ಕೆ ತರುತ್ತದೆ.
ನೀವೇನಾದರೂ ಒಂದು ರೂಪಾಯಿಯನ್ನು ದಾನ ಮಾಡಿದರೆ...
ಅದನ್ನು ನಿಮ್ಮ ಖಾತೆಯಲ್ಲಿ ನೂರು ರೂಪಾಯಿಯ ಹಾಗೆ ಜಮಾ ಮಾಡಲಾಗುತ್ತದೆ.
ಒಂದು ವೇಳೆ ನೀವು ಯಾರ ಹತ್ತಿರವಾದರೂ ಒಂದು ರೂಪಾಯಿಯನ್ನು ಕಿತ್ತುಕೊಂಡರೆ..
ನಿಮ್ಮ ಖಾತೆಯಿಂದ ನೂರು ರೂಪಾಯಿಯನ್ನು ಕಿತ್ತುಕೊಳ್ಳಲಾಗುತ್ತದೆ.
*(ಅಂದರೆ ಪಾಪ ಪುಣ್ಯ ಗಳನ್ನು)*
ಸ್ವಲ್ಪ ಆಲೋಚಿಸಿರಿ.
"ನೀವು ನಿಮ್ಮೊಂದಿಗೆ ಎಷ್ಟು ಧನವನ್ನು ತಂದುಕೊಂಡಿದ್ದಿರಿ,
ಮತ್ತು ನಿಮ್ಮ ಹಿಂದೆ ಎಷ್ಟು ಧನವನ್ನು ತೆಗೆದುಕೊಂಡು ಹೋಗುತ್ತೀರಿ ?
ಇವತ್ತಿವರೆಗೂ ಹೋದವರೆಲ್ಲಾ
ಎಷ್ಟು ಬಂಗಾರ, ಬೆಳ್ಳಿಯನ್ನು ತೆಗೆದುಕೊಂಡು ಹೋದರು?
ನೀವು ಹೋಗುವ ಮೊದಲು ನಿಮ್ಮ ಬ್ಯಾಂಕ್ ನಲ್ಲಿ ಇರುವ
ಹಣ,
ಒಡವೆ ಎಷ್ಟು ಗೊಣಗುತ್ತದೆಯೋ....
ಅದು ಸ್ವಲ್ಪವೂ ಕೆಲಸಕ್ಕೆ ಬರದ ಸಂಪಾದನೆ ಅಲ್ಲವೇ.
ಒಂದು ವೇಳೆ ನಿಮ್ಮ
ಸಂತಾನವು ಸಮರ್ಥರಾದರೆ...
ನೀವು ಬಿಟ್ಟಂತಹ ಹಣ, ಆಸ್ತಿ ಎಲ್ಲಾ ಅವರಿಗೆ ಅನವಶ್ಯಕವಾದ ವಸ್ತುಗಳಲ್ಲವೇ...
ಅದರ ಅವಶ್ಯಕತೆ ಅವರಿಗೆ ಇರುವುದಿಲ್ಲ.
ಒಂದು ವೇಳೆ ಅವರೇನಾದರೂ..
ಆ ಹಣ, ಆಸ್ತಿಗಳನ್ನು ಉಪಯೋಗಿಸಿದರೆ, ಅವರು ಏತಕ್ಕೂ ಕೆಲಸಕ್ಕೆ ಬಾರದವರ ಹಾಗೆ ಆಗುತ್ತಾರೆ ಅಲ್ಲವೇ...
ಅವರು ಆ ಹಣ, ಒಡವೆಗಳನ್ನು ಉಪಯೋಗಿಸಿಕೊಂಡು.. ಕೆಲವು ದಿನಗಳಲ್ಲಿಯೇ ..ಅವರನ್ನು ಅವರೇ ನಾಶ ಮಾಡಿಕೊಳ್ಳುತ್ತಾರೆ
ಆ ನಂತರವೇ ಅವರಿಗೆ ಶಾಂತಿ ಲಭಿಸುತ್ತದೆ.
ನಾನು,
ನನ್ನದು,
ನಿಮ್ಮದು ಎನ್ನುವುದು
ಎಲ್ಲವೂ ಇಲ್ಲೇ ಕೆಲಸಕ್ಕೆ ಬಾರದಂತೆ ಆಗುತ್ತದೆ.
*ಯಾವುದು ಸಹ...*
*ಹಿಂದೆ ಬರುವುದಿಲ್ಲ...*
ಒಂದು ವೇಳೆ ನಿಮ್ಮ ಹಿಂದೆ ಬಂದರೇ..
*ನಿಮ್ಮ ಪುಣ್ಯ ಫಲ ನಿಮ್ಮ ಹಿಂದೆ ಬರುತ್ತದೆ.*
ಆದುದರಿಂದ, ಎಷ್ಟು ಸಾಧ್ಯವಾದರೇ ಅಷ್ಟು *ಒಳ್ಳೆಯ ಕರ್ಮಗಳನ್ನು* ಮಾಡಿರಿ....
No comments:
Post a Comment
If you have any doubts. please let me know...