July 19, 2021

ಹಿಂದೂಧರ್ಮವನ್ನು ಮತ್ತು ವೀರಶೈವಧರ್ಮವನ್ನು ವಿರೋಧಿಸಿ ಹೊರ ಹೋಗುತ್ತಿರುವ ವಚನಾನುಯಾಯಿಗಳಿಗೆ ನೇರ ಪ್ರಶ್ನೆ

#ಹಿಂದೂಧರ್ಮವನ್ನು ಮತ್ತು#ವೀರಶೈವಧರ್ಮವನ್ನು ವಿರೋಧಿಸಿ ಹೊರ ಹೋಗುತ್ತಿರುವ ವಚನಾನುಯಾಯಿಗಳಿಗೆ ನೇರ ಪ್ರಶ್ನೆ:   

1. ಇದುವರೆಗೆ ನೀವು ಜನನಸೂತಕ, ನಾಮಕರಣ, ಗೃಹಪ್ರವೇಶ, ಮದುವೆ, ಅಂತ್ಯಸಂಸ್ಕಾರ, ತಿಥಿ-- ಈ ಸಂದರ್ಭಗಳಲ್ಲಿ ವೇದೋಕ್ತ, ವೀರಶೈವಧರ್ಮೋಕ್ತ ಪ್ರಕಾರ ವಿಧಿ-ವಿಧಾನಗಳನ್ನು ಅನುಸರಿಸುತ್ತಿರಲಿಲ್ಲವೆ? ಈ ವಿಧಿವಿಧಾನಗಳನ್ನು ಬಸವಣ್ಣ ಹೊಸದಾಗಿ ಎಲ್ಲೂ ಹೇಳಿಲ್ಲ, ಮುಂದೆ ಏನು ಮಾಡುತ್ತೀರಿ?     
2. ಪರಶಿವಬ್ರಹ್ಮನ ಸಂಕೇತವಾಗಿ ವೀರಶೈವರು ಇಷ್ಟಲಿಂಗದ ರೂಪದಲ್ಲಿ ವೇದೋಕ್ತ,ವೀರಶೈವಧರ್ಮೋಕ್ತ ಮಂತ್ರಗಳಿಂದ ಪೂಜಿಸುತ್ತಿದ್ದಾರೆ. ಐತಿಹಾಸಿಕವಾಗಿ ಈ ಪದ್ಧತಿ ಹರಪ್ಪಾ ಮೆಹೆಂಜೋದಾರೊ ಕಾಲಕ್ಕಿಂತ ಹಳೆಯದು. ಬಸವಣ್ಣ ವೀರಶೈವ ಧರ್ಮಕ್ಕೆ ಆಕರ್ಷಣೆಗೊಂಡು ಮತಾಂತರಗೊಂಡ. ಇದುವರೆಗೆ ನೀವು ಇಷ್ಟಲಿಂಗಪೂಜೆಯನ್ನು ಯಾವ ಪ್ರಕಾರ ಮಾಡುತ್ತಿದ್ದಿರಿ? ಬಸವಣ್ಣ ಪೂಜಾ ವಿಧಿವಿಧಾನಗಳನ್ನು ಚೆನ್ನಬಸವಣ್ಣನ ಕಡೆಯಿಂದ ತಿಳಿದುಕೊಂಡಿದ್ದ. ತಾನು ಹೊಸದಾಗಿ ಏನೂ ಹೇಳಿಲ್ಲ. ನೀವು ಇದುವರೆಗೆ ರುದ್ರಾಭಿಷೇಕ ಮಾಡಿಲ್ಲವೆ? ನಿಮ್ಮ ಪ್ರಕಾರ ಲಿಂಗದೇವ ಎಂದರೆ ಸ್ಥಾವರಲಿಂಗವೆ? ಅದರ ಅಂತಿಮ ರೂಪ ಏನು? ನಿಮ್ಮ ಆಚರಣೆ, ವ್ರತ, ತಪ, ಇಷ್ಟಲಿಂಗಪೂಜೆಗೇ ಸೀಮಿತವೆ?   
3. ಯಾವ ಪುರುಷಾರ್ಥಕ್ಕಾಗಿ ಇಷ್ಟಲಿಂಗಪೂಜೆ ಮಾಡುತ್ತೀರಿ? ಎಲ್ಲಾ ಧರ್ಮಗಳು ಮೋಕ್ಷಕ್ಕಾಗಿ. ವೀರಶೈವಧರ್ಮದ್ದು ಸಾಮರಸ್ಯ ಮುಕ್ತಿ. ನಿಮ್ಮದು ಯಾವ ಮೋಕ್ಷ. 
4. ವೀರಶೈವರು ಏಕದೇವೋಪಾಸಕರು. ನೀವು? ಒಂದು ಕಡೆ ಬಸವ ಪೂಜೆ ಎನ್ನುತ್ತೀರಿ, ಇನ್ನೊಂದು ಕಡೆ ಇಷ್ಟಲಿಂಗಪೂಜೆ ಎನ್ನುತ್ತೀರಿ, ಮತ್ತೊಂದು ಕಡೆ ಜಂಗಮಪೂಜೆ ಎನ್ನುತ್ತೀರಿ. "ಶರಣಸತಿ ಲಿಂಗಪತಿ" ಎನ್ನುವಲ್ಲಿ ಇದು ಪತಿವ್ರತೆಯ ಲಕ್ಷಣವೆ? ಶರಣರು ಇವರ ಬಗ್ಗೆ ಏನೆಂದು ಹೇಳಿದ್ದಾರೆ? 
5. ಸೃಷ್ಟಿ, ಸ್ಥಿತಿ, ಲಯವನ್ನು ಪ್ರಪಂಚದ ಎಲ್ಲಾ ಧರ್ಮಗಳು ಒಪ್ಪುತ್ತವೆ. ನೀವು? ನಿಮ್ಮ ಧರ್ಮ ಒಪ್ಪುತ್ತದೆಯೆ? ಸೃಷ್ಟಿ, ಸ್ಥಿತಿ, ಲಯದ ವ್ಯಾಖ್ಯಾನವನ್ನು ಬಸವಣ್ಣ ಎಲ್ಲಿ ಹೇಳಿದ್ದಾರೆ? 
6. ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯ ಈ ನಾಲ್ಕು ವಿಧವಾದ ಮುಕ್ತಿಗಳು ಹಿಂದೂಧರ್ಮದಲ್ಲಿ ಹೇಳಲಾಗಿದೆ. ವೀರಶೈವ ಧರ್ಮದಲ್ಲಿ ಅವುಗಳನ್ನು ಮೀರಿದ ಸಾಮರಸ್ಯ ಮುಕ್ತಿ ಉಕ್ತವಾಗಿದೆ. ನಿಮ್ಮದು ಯಾವ ಮುಕ್ತಿ? ಲಿಂಗದೇವನನ್ನು ನೋಡಿಕೊಂಡೇ ಇರುವುದೆ? 
7. ಹಾಗಾದರೆ ನೀವು ಇದುವರೆಗೆ ವೀರಶೈವಧರ್ಮದಲ್ಲಿ ಉಕ್ತವಾದ ಆಚರಣೆಗಳನ್ನು ಮಾಡಿಲ್ಲವೆ? ಇನ್ನು ಮುಂದೆ ಹಿಂದೂ ಹಾಗೂ ವೀರಶೈವ ಧರ್ಮದಲ್ಲಿ ಉಕ್ತವಾದ ವಿಧಿವಿಧಾನಗಳನ್ನು ಅನುಸರಿಸುವುದಿಲ್ಲವೆಂದು ಪ್ರಮಾಣ ಮಾಡುತ್ತೀರಾ?  
8. ವೀರಶೈವ ಧರ್ಮಗ್ರಂಥಗಳಲ್ಲಿ ಎಲ್ಲೂ ಕಾಣಸಿಗದ, ನೀವೇ ಹೊಸದಾಗಿ ಕಂಡುಹಿಡಿದ(ಜೈನ,ಬೌದ್ಧರಂತೆ) ವಿಧಿವಿಧಾನಗಳನ್ನು ಬಹಿರಂಗಗೊಳಿಸಿ. 
9. ಲಿಂಗ ಬಿಟ್ಟು ಪರಶಿವನನ್ನು ಒಪ್ಪುವುದಿಲ್ಲವೆಂದಾದರೆ, ನಿಮ್ಮದು ಜೈನ, ಬೌದ್ಧರಂತೆ ನಾಸ್ತಿಕ ಮತವೆ? ಏಕೆಂದರೆ, ಪರಬ್ರಹ್ಮ, ಈಶ್ವರ, ಪರಶಿವ, ಅಥವಾ ಮಹಾವಿಷ್ಣುವನ್ನು ಯಾರು ನಂಬುವುದಿಲ್ಲವೊ ಅಥವಾ ಆ ದೇವತೆಗಳು ಇಲ್ಲವೇ ಇಲ್ಲ ಎಂದು ಯಾರು ವಾದಿಸುತ್ತಾರೊ ಅಂಥವರಿಗೆ ದಾರ್ಶನಿಕವಾಗಿ ನಾಸ್ತಿಕರು ಎನ್ನುತ್ತಾರೆ. ದೇವರ ಇರುವಿಕೆಯನ್ನು(ಅಣುತೃಣಕಾಷ್ಠಾದಿಗಳಲ್ಲಿ) ಯಾರು ಒಪ್ಪುತ್ತಾರೊ ಅಂಥವರು ಆಸ್ತಿಕರು. ಆಸ್ತಿಕರಾದರೆ ನೀವು ವೀರಶೈವಧರ್ಮದ ಅನುಯಾಯಿಗಳೇ ಆಗಿರುತ್ತೀರಿ. ಈ ಅಪಕ್ವತೆ ಏಕೆ? 
10. ಅಷ್ಟಾವರಣ, ಪಂಚಾಚಾರ, ಷಟ್ ಸ್ಥಲ ಸಿದ್ಧಾಂತವನ್ನು ವೀರಶೈವರು ಅನಾದಿ ಕಾಲದಿಂದಲೂ ಆಚರಿಸುತ್ತಾ ಬಂದಿದ್ದಾರೆ. ಆಗಿನ ಕಾಲದಲ್ಲಿ ಕನ್ನಡ ಬೆಳೆದಿಲ್ಲದ ಕಾರಣ ಸಂಸ್ಕೃತಭಾಷೆಯಲ್ಲಿ ಧರ್ಮಗ್ರಂಥಗಳನ್ನು ಬರೆಯಲಾಗಿದೆ. ಅಷ್ಟಕ್ಕೂ ವೀರಶೈವರು ಕರ್ನಾಟಕ ಒಂದಕ್ಕೇ ಸೀಮಿತರಲ್ಲ.  ‌ಸಂಸ್ಕೃತದಲ್ಲಿದ್ದುದನ್ನು ಸರಳವಾಗಿ ಕನ್ನಡದಲ್ಲಿ ಬಸವಾದಿ ಪ್ರಮಥರು ಜನಸಮೂಹಕ್ಕೆ ತಿಳಿ ಹೇಳಿ ವೀರಶೈವ ಧರ್ಮವನ್ನು ಪ್ರಚುರಪಡಿಸಿದರು. ಸಂಸ್ಕೃತ ಶ್ಲೋಕಗಳೇ ತುಂಬಿಕೊಂಡಿರುವ ವೀರಶೈವಧರ್ಮವಿಚಾರಗಳೇ ಹಾಸುಹೊಕ್ಕಾಗಿರುವ ವಚನಗಳನ್ನು ತಮ್ಮ ಸ್ವಂತದ್ದು ಎನ್ನುವ ರೀತಿಯಲ್ಲಿ ಬಸವಣ್ಮನನ್ನೂ, ವೀರಶೈವಧರ್ಮ ವಿಚಾರಗಳನ್ನೂ ಹೈಜಾಕ್ ಮಾಡಿ ಹೊಸ ಧರ್ಮಸ್ಥಾಪನೆಗೆ ಹೊರಟಿರುವುದು ಬಾಲಿಶವಲ್ಲವೆ? ಮೋಸವಲ್ಲವೆ?  
11. ಬಸವಣ್ಣ ಭಕ್ತಿಭಂಡಾರಿ ಅಷ್ಟೇ ಆಗಿದ್ದು ಐಕ್ಯಸಾಧನೆ ಮಾಡಿರಲೇ ಇಲ್ಲ, ಅಷ್ಟರಲ್ಲಿ ಮಹಾಸಂಗ್ರಾಮವಾಗಿ ಮಾಯವಾದದ್ದು ನಿಜ ತಾನೆ? ಐಕ್ಯಸ್ಥತಿಯನ್ನೇ ಮುಟ್ಟಿಲ್ಲದವರು ಧರ್ಮಸ್ಥಾಪಕರು ಹೇಗಾಗುತ್ತಾರೆ?  
12. ಶ್ರೀ ರೇಣುಕಾಚಾರ್ಯರನ್ನು ಕಲ್ಲಿನಲ್ಲಿ ಹುಟ್ಟಲು ಸಾಧ್ಯವೆ? ಎಂದು ಹಾಸ್ಯ ಮಾಡುತ್ತೀರಾ? ಬಸವಣ್ಣನನ್ನು ಕಲ್ಲಿನ ಪ್ರತಿಮೆ ಮಾಡಿ ಪೂಜಿಸುವ ನಿಮಗೆ ನಾಚಿಕೆಯಾಗಬೇಕು. ಜಂಗಮರನ್ನು ನಿಂದಿಸುತ್ತೀರಾ? "ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ"  ಎಂದು ಯಾರು ಹೇಳಿದ್ದು ಗೊತ್ತು ತಾನೆ? ಸ್ಥಾವರಲಿಂಗದ ಪ್ರತಿರೂಪವೇ ನಿಮ್ಮ ಲಿಂಗದೇವ ಅಲ್ಲವೆ? 
13. ಪ್ರಪಂಚದ ಎಲ್ಲಾ ಧರ್ಮಸಂಸ್ಥಾಪಕರು ಸಾಮಾನ್ಯವಾಗಿ ಸಂನ್ಯಾಸಿಗಳೇ ಆಗಿರುತ್ತಾರೆ. ಇಬ್ಬರು ಹೆಂಡಿರನ್ನು ಹೊಂದಿರುವವರು ಧರ್ಮಸ್ಥಾಪಕರಾಗಲು ಹೇಗೆ ಸಾಧ್ಯ?  ನಿಮ್ಮ ತೆವಲಿಗೆ ಬಸವಣ್ಣನ ವ್ಯಕ್ತಿತ್ವಕ್ಕೆ ಮಸಿ ಬಳಿಯುತ್ತಿರುವುದನ್ನು ಲಕ್ಷಾಂತರ ಜನ ಖಂಡಿಸುತ್ತೇವೆ. ಉಘೇ ಉಘೇ ಶ್ರೀ ರೇಣುಕಾಚಾರ್ಯ*****

No comments:

Post a Comment

If you have any doubts. please let me know...