#ಗೋಗ್ರಾಸ
ಸ್ನೇಹಿತರೇ ಇವತ್ತು ಗೋಗ್ರಾಸ ಬಗ್ಗೆ ತಿಳಿಸಿಕೊಡತೇನೆ
ಇದರ ಮಹತ್ವ ಅಂದರೆ ಒಂದು ಸಲ ಗೋಗ್ರಾಸ ಕೊಟ್ಟರೆ ಹತ್ತು ಜನ ಬ್ರಾಹ್ಮಣರಿಗೆ ಊಟ ಹಾಕಿದಷ್ಟು ಪುಣ್ಯ ಬರುತ್ತದೆ.. ಗೋವಿನ ಪೂಜೆ ಗೋವಿಗೆ ಆಹಾರ ಕೊಟ್ಟರೆ ನಿಮ್ಮ ವಂಶ ಅಭಿವೃದ್ಧಿ ಆಗುತ್ತದೆ ... ಅಷ್ಟೇ ಅಲ್ಲ ಎಲ್ಲ ದೇವತೆಗಳು ತೃಪ್ತರಾಗುತ್ತಾರೆ.. ಏನು ಈ ಗೋಗ್ರಾಸ...
ಗೋಗ್ರಾಸ ಅಂದರೆ ನಮ್ಮ ಪೂರ್ವಜರು ಮನೆಯಲ್ಲಿ ಆಕಳನ್ನು ಸಾಕುತ್ತಿದ್ದರು ..ಆಗ ದಿನವೂ ಮನೆಯಲ್ಲಿ ಮಡಿಯಲ್ಲಿ ಅಡುಗೆ ಪೂಜೆ ನೈವೇದ್ಯ ಆಗುತ್ತಿತ್ತು . ದೇವರಿಗೆ ನೈವೇದ್ಯದ ಜೊತೆಗೆ ಆಕಳಿಗೂ ಒಂದು ತಟ್ಟೆಯಲ್ಲಿ ನೈವೇದ್ಯ ಬಡಿಸಿ ಆಕಳು ಪೂಜೆ ಮಾಡಿ ಪ್ರದಕ್ಷಣೆ ನಮಸ್ಕಾರ ಮಾಡಿ ನೈವೇದ್ಯ ಆಕಳಿಗೆ ಕೊಡುತ್ತಿದ್ದರು ಅದನ್ನು ಗೋಗ್ರಾಸ ಅಂತ ಅನ್ನುತ್ತಾರೆ....
ಆದರೆ ಈಗ ಕಾಲ ಬದಲಾಗಿದೆ ಗೋವು ಸಾಕಲಾಗುವದಿಲ್ಲ ಅಡುಗೆ ಪೂಜೆ ನೈವೇದ್ಯ ಸಾದ್ಯವಾಗುತ್ತಿಲ್ಲ ಅಲ್ಲವೆ... ಆದರೂ ಸಹ ನೀವು ಈಗಲೂ ಸಹ ನೀವು ಗೋವಿನ ಪೂಜೆ ಗೋ ಗ್ರಾಸನ್ನ ದಿನವೂ ಕೊಡಬಹುದು ನಾನು ಯಾವ ರೀತಿ ಮಾಡುತ್ತೇವೆ ಅದನ್ನ ನಿಮಗೆ ಹೇಳಿಕೊಡುತ್ತೇನೆ.
ಒಂದು ಮಣೆಯ ಮೇಲೆ ಈ ರೀತಿ ಆಕಳುಕರು ರಂಗವಲ್ಲಿ ಬಿಡಿಸಿ ಅರಿಷಿಣ ಕುಂಕುಮ ಅಕ್ಷತೆ ಹೂವು ಎರಿಸಿ ಪೂಜೆ ಮಾಡಿ ತುಪ್ಪದ ಬತ್ತಿ ಹಚ್ಚಿ ಒಂದು ಬಟ್ಟಲಿನಲ್ಲಿ ಪ್ರತಿದಿನ ಒಂದು ಬಟ್ಟಲಿನಲ್ಲಿ ಅಕ್ಕಿ , ಬೆಲ್ಲದ ತುಂಡು , ಗೋದಿ , ಇಲ್ಲ ಕಡಲೆ ಬೇಳಿ ಯಾವುದಾದರೂ ಧಾನ್ಯದ ಜೊತೆಗೆ ಒಂದು ಸ್ವಲ್ಪ ಬೆಲ್ಲವನಿಟ್ಟು ನೈವೇದ್ಯ ಮಾಡಿ ಪ್ರದಕ್ಷಣೆ ಹಾಕಿ ನಂತರ ಆ ನೈವೇದ್ಯವನ್ನು ಮನೆಯ ಮುಂದೆ ಬರುವ ಆಕಳಿಗೆ ಕೊಡಿ , ಇಲ್ಲ ಆಕಳು ಬರಲ್ಲ ಅಂದರೆ ಒಂದು ಚೀಲ ಮಾಡಿ ಪ್ರತಿದಿನದ ನೈವೇದ್ಯ ವನ್ನು ಅದರಲ್ಲಿ ಹಾಕಿಡಿ ಸಾದ್ಯವಾದಾಗ ಎಲ್ಲಿ ಗೋವುಗಳನ್ನು ಸಾಕಿರುತ್ತಾರೊ ಅಲ್ಲಿ ಹೋಗಿ ಕೊಟ್ಟುಬನ್ನಿ .... ಮುವತ್ಮೂರು ಕೋಟಿ ದೇವತೆಗಳು ಗೋವಿನಲ್ಲಿ ಸನ್ನಿಹಿತರಾಗಿರುತ್ತಾರೆ. ಗೋವಿನ ಪೂಜೆ ಒಂದು ಮಹತ್ತ ಫಲದಾಯಕವಾದದ್ದು... ಗೋಗ್ರಾಸವನ್ನು ತೆಗೆದಿಟ್ಟು ನೋಡಿ ನಿಮಗೆ ಧಾನ್ಯಗಳ ಕೊರತೆ ಮನೆಯಲ್ಲಿ ಯಾವಾಗಲೂ ಆಗುವದಿಲ್ಲ .... ಮಕ್ಕಳು ಅಭಿವೃದ್ಧಿ ಹೊಂದುತ್ತಾರೆ.
ನಿಮಗೆ ಗೋವಿನ ಚಿತ್ರ ಹೇಗೆ ಸರಳವಾಗಿ ರಂಗವಲ್ಲಿ ಬಿಡಿಸುವುದು ತಿಳಿಸಿ ಕೊಡತಾರೆ ರಶ್ಮಿ ಶ್ರೀವಾಸ್ತವ್.👇👇..
ವೀಣಾ ಜೋಶಿ
No comments:
Post a Comment
If you have any doubts. please let me know...