ಅಂಗ ಅಂದ್ರೆ ಶರೀರ. ಅಸ್ತ ಅಂದ್ರೆ ಅಡಗಿ ಕುಳಿತುಕೊಳ್ಳುವುದು. (ಸುಟ್ಟು ಹೋಗುವುದು ಅಲ್ಲ).
ಆಂಗ್ಲ ಭಾಷೆಯ ಶಬ್ದ Combustion ನ್ನು ಜನರು ಅಪಾರ್ಥ ಮಾಡಿಕೊಂಡು ಗ್ರಹ ಸೂರ್ಯನ ಅತಿ ಹತ್ತಿರದ ಡಿಗ್ರಿಯಲ್ಲಿ ಇರುವಾಗ ಸುಟ್ಟು ಹೋಗುತ್ತದೆ ಎಂದು ತಿಳಿದುಕೊಂಡಿರುತ್ತಾರೆ(It is nothing but a misconception)
ಸೂರ್ಯ ಆಸ್ತವಾಗಿದೆ ಅಂತ ನಾವು ಹೇಳುತ್ತೇವೆ ಅಂದರೆ ಸೂರ್ಯ ಪಶ್ಚಿಮದಲ್ಲಿ ಮುಳುಗಿದ್ದಾನೆ ಅಂತ ಅರ್ಥ ಸೂರ್ಯ ಸುಟ್ಟು ಹೋಗಿದ್ದಾನೆ ಅಂತ ಅರ್ಥವೇನು ಅಲ್ಲ!!!
ಒಂದು ಗ್ರಹ ಸೂರ್ಯನ ಹಿಂದೆ ಮುಂದೆ ಅಥವಾ ಸೂರ್ಯನ ಯುತಿಯಲ್ಲಿದ್ದಾಗ ಅಸ್ತವಾಗಬಹುದು ಆದರೆ ಒಂದು ನಿರ್ದಿಷ್ಟ ಡಿಗ್ರಿಯ ಒಳಗಡೆ ಇರಬೇಕು.
ಒಂದು ಗ್ರಹವನ್ನು ಸುಟ್ಟು ಹಾಕುವ ಶಕ್ತಿ ಮಂಗಳ ಗ್ರಹಕ್ಕೆ ಮಾತ್ರ ಇರುವುದು, ಬೇರೆ ಗ್ರಹಗಳಿಗೆ ಆ ಸಾಮರ್ಥ್ಯವಿಲ್ಲ. ಕೇತು ಗ್ರಹಕ್ಕೂ ಸಹ ಆ ಶಕ್ತಿ ಇದೆ.
ಕುಜ ಬೆಂಕಿಯ ಮೂಲಕ ಸುಟ್ಟು ಹಾಕಿದರೆ, ಕೇತು ಜನರ ಕಣ್ಣಿಗೆ ಕಾಣದ ಬೆಂಕಿಯಿಂದ ಗ್ರಹವನ್ನು ಸುಟ್ಟುಹಾಕುವ ಸಾಮರ್ಥ್ಯವನ್ನು ಹೊಂದಿದೆ...
ಅಮಾವಾಸ್ಯೆ ದಿನ ಚಂದ್ರ ಸೂರ್ಯನಿಂದ 12° ಡಿಗ್ರಿ ಒಳಗಡೆ ಬಂದರೆ ಚಂದ್ರ ಸಹ ಸೂರ್ಯನಿಂದ ಆಸ್ತವಾಗುತ್ತದೆ.
ಅಮಾವಾಸ್ಯೆ ದಿನ ಜನಿಸಿದವರು ದೇವಸ್ಥಾನಕ್ಕೆ ಹೋಗಿ ಯಾವ ಪೂಜೆ ಮಾಡಿದರು ಪ್ರತಿಫಲ ಕಡಿಮೆ. ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಪೂಜೆ ಮಾಡಿದರು ಫಲ ದೊರೆಯುವುದಿಲ್ಲ. ಕಾರಣವೇನು?
ಅಮಾವಾಸ್ಯೆ ದಿನ ಹುಟ್ಟಿದವರು ದೇವಸ್ಥಾನಕ್ಕೆ ಹೋಗದೆ ಗಿಡಗಳ ಬಳಿ ಹೋಗಿ ಪೂಜೆ ಮಾಡಬೇಕು ಮತ್ತು ನಿವೇದನೆ ಮಾಡಿಕೊಳ್ಳಲಿ. ಯಾವ ಗಿಡ?
ಬಿಲ್ವಪತ್ರದ ಗಿಡದ ಬಳಿ ಹೋಗಿ ಶಿವನನ್ನು ಬೇಡಿಕೊಳ್ಳಿ.
ಕದಂಬ ಗಿಡದ ಬಳಿ ಹೋಗಿ ಶ್ರೀ ಕೃಷ್ಣನನ್ನು ಬೇಡಿಕೊಳ್ಳಿ.
Neem Tree ಬಳಿ ಹೋಗಿ ಕಾಳಿ ದೇವಿಯ ಆರಾಧನೆ ಮಾಡಿದರೆ ದೇವಿಯ ಆಶೀರ್ವಾದ ಸಿಗುತ್ತದೆ.
ಈಗ ಈ ಗಿಡಗಳು ಸಹಾಯ ಮಾಡದಿದ್ದರೆ ಅಮಾವಾಸ್ಯೆ ದಿನ ಹುಟ್ಟಿದವರನ್ನು ರಕ್ಷಿಸುವವರು ಯಾರು?
ಸೂರ್ಯನ ಸ್ವಲ್ಪ ಹಿಂದೆ ಹೋಗಿ ಗೃಹ ಆಸ್ತವಾಗಿದ್ದಾರೆ, ಗಿಡಗಳ ಸಹಾಯ ಪಡೆಯಬೇಕು.
ಸೂರ್ಯನ ಸ್ವಲ್ಪ ಮುಂದೆ ಹೋಗಿ ಗ್ರಹ ಅಸ್ತವಾಗಿದ್ದಾರೆ ನದಿಯ ತೀರದಲ್ಲಿ ಹೋಗಿ ಬೇಡಿಕೊಳ್ಳಬೇಕು.
ಲಗ್ನ ಸಹ ಕೆಲವೊಮ್ಮೆ ಆಸ್ತವಾಗುತ್ತದೆ. ಲಗ್ನದಿಂದ ಸೂರ್ಯ ಸಪ್ತಮದಲ್ಲಿದ್ದರೆ ಲಗ್ನ ಆಸ್ತವಾಗಿದೆ ಅಂತ ಅರ್ಥ. ಆದರೆ ಲಗ್ನದ ಡಿಗ್ರಿ ಸಮೀಪದಲ್ಲಿ ಸೂರ್ಯನ ಡಿಗ್ರಿ ಇರಬೇಕು. ನೀವೇ ಕಳೆದು ಹೋಗಿದ್ದೀರಿ ಅಂತ ಅರ್ಥ.
ಆತ್ಮಕಾರಕನನ್ನು ಸಹ ಅದೇ ರೀತಿ ನೋಡಬೇಕು. ಆತ್ಮಕಾರಕ ಯಾವಾಗಲೂ ರವಿಯಿಂದ ಆಸ್ತವಾಗಿರಬಾರದು. ಆತ್ಮಕಾರಕ ಆಸ್ತವಾಗಿರುವಾಗಲೂ ಸಹ ನೀವು ಮಾಡಿರ ಪೂಜೆಗೆ ತಕ್ಕ ಪ್ರತಿಫಲ ದೊರೆಯುವುದಿಲ್ಲ.
ನೀವು ಯಾರ ಮೇಲೆಯಾದರೂ ಸಿಟ್ಟಾದಾಗ ನೀವು ಹೊರಗಿನಿಂದ ಸುಡುತ್ತೀರಿ (Outburst) ಅದು ಕುಜ.
ಕೆಲವೊಮ್ಮೆ ಸಿಟ್ಟನ್ನು ಒಳಗೇ ನುಂಗಿಕೊಳ್ಳುತ್ತೀರಿ ಅದು ಕೇತು ( ಸ್ತ್ರೀ ಗ್ರಹ).
ನೀವು ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಲು ಯಾವಾಗ ಶುರು ಮಾಡುತ್ತೀರಿ ಅವಾಗ ನೀವು ಮೋಕ್ಷಕ್ಕೆ ತೀರ ಹತ್ತಿರವಾಗುತ್ತಿದ್ದೀರಿ ಅಂತ ಅರ್ಥ. ಆದ್ದರಿಂದ ಜಲರಾಶಿಗಳನ್ನು ಮೋಕ್ಷ ತ್ರಿಕೋಣ ಅಂತ ಹೇಳುತ್ತೇವೆ. ಮೋಕ್ಷಕಾರಕ ಕೇತು ಅಂದರೆ ನಿಮ್ಮನ್ನು ಒಳಗಿನಿಂದ ಸುಡುವ ಬೆಂಕಿ. *ಆದ್ದರಿಂದ ಕೇತು ಜಲ ನವಂಶದಲ್ಲಿದ್ದಾಗ ಜಾತಕರು ಮೋಕ್ಷಕ್ಕೆ ಅತ್ಯಂತ ಹತ್ತಿರವಾಗುತ್ತಾರೆ* ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸರ ಕೇತು ನಮಾಂಶದಲ್ಲಿ ಜಲ ರಾಶಿಯಲ್ಲಿದೆ.
No comments:
Post a Comment
If you have any doubts. please let me know...