ಭಾದ್ರಪಸದ ಮಾಸದ ಪಿತೃ
ಪಕ್ಷದಲ್ಲಿ ಪಿತೃಗಳಿಗೆ ಋಣ ಕಾರ್ಯ
ಮಾಡಿದ ಮೇಲೆ ......ರವಿ ಹಾಗೂ ಚಂದ್ರರು ಮುಂದಿನ ರಾಶಿಯಾದ ತುಲಾಗೆ ಬರುತ್ತಾರೆ..
ರವಿಯು - *ಪಿತೃ* ಲೋಕಕ್ಕೆ ಕಾರಕ
ಚಂದ್ರನು - *ಚಂದ್ರ* ಲೋಕಕ್ಕೆ ಕಾರಕ
*ರವಿ* - ತಂದೆಯ ಕಡೆಯ ಮರಣ ಹೊಂದಿದ ಪುರುಷ ಪಿತೃಗಳು
*ಚಂದ್ರ* - ತಾಯಿಯ ಕಡೆ ಮರಣ ಹೊಂದಿದ ಸ್ತ್ರೀ ಯರ ಪಿತೃಗಳು
ತುಲಾದಲ್ಲಿ ರವಿ ನೀಚನಾಗಿ ಚಂದ್ರನೊಂದಿಗೆ ಅಮಾವಾಸ್ಯೆ ಬಂದರೆ ಅದು ರವಿ ಹಾಗು ಚಂದ್ರರಿಗೆ *ಶಕ್ತಿ ಹೀನ* ವಾಗುವ ಪರಿಸ್ತಿತಿ ..
ಅಂದರೆ ಪಿತೃದೇವತೆಗಳು ಪಂಚಭೂತವಾದ ಭೂಮಿಯ ಜಗತ್ತಿನಲ್ಲಿ ಶಕ್ತಿಹೀನರಾಗಿ ಬಲ ಕಳೆದುಕೊಂಡು ತಮ್ಮ ಲೋಕವಾದ ಪಿತೃಲೋಕಕ್ಕೆ ತೆರಳುತ್ತಾರೆ.ಪಿತೃಗಳು ಅವರ ಲೋಕಕ್ಕೆ ಶಾಂತರಾಗಿ ಹೋದರೆ ಇಲ್ಲಿರುವ ಅವರ ವಂಶಸ್ಥರಿಗೆ *ಶಾಪವಿಮೋಚನೆಯಾಗುತ್ತದೆ* ಕಷ್ಡ ಕಾರ್ಪಣ್ಯ ಬಗೆಹರಿದು ನಿವಾರಣೆಯಾಗಿ *ಹಣ ಸುಖ ಸೌಭಾಗ್ಯಗಳು* ಲಭಿಸುತ್ತವೆ..
ಸುಖ - ಹಣಕ್ಕೆ ಕಾರಕ- ಶುಕ್ರ ಶುಕ್ರನ ಅಧಿದೇವತೆ - ಲಕ್ಷ್ಮೀ
ವ್ಯವಹಾರ ಚೆನ್ನಾಗಿ ನಡೆದರೆ ಅಪಾರ ಹಣ ಪ್ರಾಪ್ತಿ. ತುಲಾ ರಾಶಿಯು ವ್ಯವಹಾರದ ರಾಶಿಯಾಗಿದೆ ವ್ಯವಹಾರಕ್ಕೆ ಪ್ರತೀಕವಾದ ತಕ್ಕಡಿ ಅದರ ಸಂಕೇತವಾಗಿದೆ. ಅದರ ಸಂಕೇತವಾಗಿ ಅಮಾವಾಸ್ಯೆಯಲ್ಲಿ *ಲಕ್ಷ್ಮಿಪೂಜೆ* ಆಚರಿಸಲಾಗುತ್ತದೆ.
ಪಿತೃಗಳ ಆತ್ಮವು
*ಜ್ಯೋತಿಯ*
ರೂಪದಲ್ಲಿ ಇರುತ್ತದೆ . ಆ ಜ್ಯೋತಿಯು ಪಿತೃಲೋಕಕ್ಕೆ ತೆರಳುವ ಸಂಕೇತವಾಗಿ *ದೀಪ* ಹಚ್ಚಲಾಗುತ್ತದೆ.
💐 *ಸೂರ್ಯ + ಚಂದ್ರ ಸಂಯೋಗ*.
ಸಂಯೋಗವಾಗುವುದು ಚಿತ್ತಾ ನಕ್ಷತ್ರದಲ್ಲಿ... ಚಿತ್ತಾ ನಕ್ಷತ್ರವು ವಿಶ್ವಕರ್ಮನ ನಕ್ಷತ್ರ
*ವಾಸ್ತುಶಿಲ್ಪ ವಿದ್ಯೆಯ* ಅಧಿದೇವತೆ. ಈ ವಿದ್ಯೆಯು *ಬೆಳಕು ಹಾಗೂ ಜ್ಯೋತಿಯ* ಸಂಕೇತವಾಗಿದೆ.ನೈಸರ್ಗಿಕ *ಬೆಳಕಿನ ಗ್ರಹಗಳಾದ ರವಿ ಹಾಗೂ ಚಂದ್ರರು ವಿದ್ಯೆ ಎಂಬ ಬೆಳಕಿನೊಡನೆ ಚಿತ್ತಾ ನಕ್ಷತ್ರದಲ್ಲಿ ಸಂಯೋಗವಾಗುವುದರಿಂದ ಅದರ ಸಂಕೇತವಾಗಿ ದೀಪ* ಹಚ್ಚಲಾಗುತ್ತದೆ.
💐 *ರಾಕ್ಷಸ ಹಾಗು ದೇವತೆಗಳು*
ತುಲಾರಾಶಿಯ ಒಡೆಯ ಶುಕ್ರ ರಾಕ್ಷಸರ ಪಕ್ಷ .ಸೂರ್ಯ ಚಂದ್ರರು ದೇವತೆಗಳ ಪಕ್ಷ. ಅಸುರತ್ವ ನಿಗ್ರಹಿಸಲು ಬೇಕಾದ ಶಕ್ತಿಯನ್ನು ವಿದ್ಯೆಯು ನೀಡುತ್ತದೆ
ಅದರ ಸಂಕೇತವಾಗಿ *ದೀಪ* ಹಚ್ಚಲಾಗುತ್ತದೆ.
💐 *ರಾಮಾಯಣ..ಹಾಗೂ ದೀಪಾವಳಿ*
ರವಿ - ರಾಮ
ಚಂದ್ರ -ಸೀತೆ
ಸೀತೆಯನ್ನು ಅಸುರನಾದ ರಾವಣ ಶನಿ ಅಪಹರಿಸುತ್ತಾನೆ ಅಪಹರಣ ಆರನೇ ಮನೆ .
ನಂತರ ರಾಮನು ಹನುಮಂತ ಹಾಗೂ ವಾನರರ ಕುಜ ನ ಸಹಾಯ ಪಡೆದು ಯುದ್ದ ಮಾಡಿ ರಾವಣನನ್ನು ವಧೆ ಮಾಡುತ್ತಾನೆ.ವಧೆ ಹಾಗೂ ಯುದ್ದವು "ಅಷ್ಡಮ " ಅಂದರೆ " ವೃಶ್ಚಿಕ" . ವೃಶ್ಚಿಕಕ್ಕೆ ವ್ಯಯ ರಾಶಿ ತುಲಾ
ಸೀತೆಯನ್ನು ರಾಮನು ಅಯೋದ್ಯೆಗೆ ಕರೆತರುವಾಗ ತುಲಾರಾಶಿಯ ಅಮಾವಾಸ್ಯೆ ಆಗಿದ್ದಾಗ ಅವರಿಗೆ ದಾರಿ ಕಾಣಲೆಂದು ಪ್ರಜೆಗಳು *ದೀಪ* ಹಚ್ಚಿ ಇಟ್ಟಿದ್ದರು.
💐 *ಭಾಗವತ ಹಾಗು ದೀಪಾವಳಿ*
ನರಕಾಸುರನ ವಧೆ
ನರಕಾಸುರನ ನರಕದ ಮನೆ ಅಷ್ಟಮ ಅಂದರೆ ವೃಶ್ಚಿಕ ರಾಶಿ ನರಕಾಸುರನ್ನು ವಧೆ ಮಾಡಿದ್ದು
ಕೃಷ್ಣ ವೃಶ್ಚಿಕಕ್ಕೆ ಮಾರಕ
ಸ್ತಾನವಾದ ವೃ಼ಷಭ ರಾಶಿಯ ಸಂಜಾತ
ವಧೆಗೆ ಆರಿಸಿಕೊಂಡ ದಿನ ತುಲಾರಾಶಿಯ ಅಮಾವಾಸ್ಯೆ ಕಾರಣ ವೃಶ್ಚಿಕಕ್ಕೆ ತುಲಾ *ದ್ವಾದಶ* ವ್ಯಯ .ಅಂದರೆ ನಾಶ .ನರಕದ ಅಧಿಪತಿಗೆ ನಾಶದ ದಿನವನ್ನಾಗಿ ಆರಿಸಿ *ವಧೆ* ಮಾಡಿದ ಕೃಷ್ಣ
ರಾಕ್ಷಸರು - *ಕತ್ತಲೆ ಸಂಕೇತ ಅಸುರತ್ವ ನಾಶವಾದರೆ ಅದು ಬೆಳಕು ಆ ಕಾರಣ ಇಂದು ದೀಪ* ಹಚ್ಚುತ್ತಾರೆ.
ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ *ಅಭೀಂದ್ರ*🙏🏻🙏🏻🙏🏻🙏🏻
No comments:
Post a Comment
If you have any doubts. please let me know...