April 30, 2020

ಶ್ರೀಲಕ್ಷ್ಮೀ ಗುಣರತ್ನಕೋಶಮ್

.


Siddhi Lakshmi,
goddess of miraculous power, century, Patan Museum, Nepal

ಶ್ರಿಯೈ ಸಮಸ್ತಚಿದಚಿದ್ವಿಧಾನವ್ಯಸನಂ ಹರೇಃ |
ಅಂಗೀಕಾರಿಭಿರಾಲೋಕೈಃ ಸಾರ್ಥಯಂತ್ರೈ ಕೃತೋಂಸ್ಜಲಿಃ ||೧||

ಯಾರು ತನ್ನ ಸಮ್ಮತಿಯನ್ನು ನಿರ್ದೇಶಿಸುವ ಕೃಪಾದೃಷ್ಟಿಯಿಂದ ಶ್ರೀಮನ್ನಾರಾಯಣನ ಸಮಸ್ತ ಸಜೀವ ಹಾಗೂ ನಿರ್ಜೀವವಾಗಿರುವ ಸೃಷ್ಟಿಯ ಇಚ್ಛೆಯನ್ನು ಸಾಕಾರಗೊಳಿಸುತ್ತಿರುವಳೋ ಅಂತಹಾ ಶ್ರೀದೇವಿಯ ಸನ್ನಿಧಾನದಲ್ಲಿ ಬೊಗಸೆಯನ್ನು ಒಡ್ಡುತ್ತಿರುವೆ.

ಯದ್ಭ್ರೂಭಂಗಾಃ ಪ್ರಮಾಣಂ ಸ್ಥಿರ-ಚರ-ರಚನಾತಾರತಮ್ಯೇ ಮುರಾರೇಃ
ವೇದಾಂತಾಸ್ತತ್ವಚಿಂತಾಂ ಮುರಭಿದುರಸಿ ಯತ್ಪಾದಚಿನ್ಹೈಸ್ತರಂತಿ |
ಭೋಗೋಪೋದ್ಘಾತ-ಕೇಲೀ- ಚುಲಕಿತ-ಭಗವದ್ ವೈಶ್ವರೂಪ್ಯಾನುಭಾವಾ
ಸಾ ನಃ ಶ್ರೀರಾಸ್ತೃಣೀತಾಮಮೃತಲಹರಿಧೀಲಂಘನೀಯೈರಪಾಂಗೈಃ ||೨||

ಯಾರ ಹುಬ್ಬುಹಾರಿಸುವಿಕೆಯು ಶ್ರೀಹರಿಯ ಸ್ಥಾವರಜಂಗಮಾದಿ ಅನ್ಯಾನ್ಯ ಸೃಷ್ಟಿಗೆ ಮಾರ್ಗದರ್ಶಕಗಳಾಗಿವೆಯೋ; ಮುರಾರಿಯ ವಕ್ಷಸ್ಥಳದಲ್ಲಿರುವ ಯಾವಾಕೆಯ ಪಾದಗಳ ಗುರುತಿನಿಂದ ವೇದೋಪನಿಷತ್ತುಗಳು ಪಾರಮಾರ್ಥಿಕ ನೈಜತ್ವವನ್ನು ನಿರ್ಧರಿಸುತ್ತವೆಯೋ, ಯಾವಾಕೆಯ ದೈವೀಸ್ವರೂಪ,ಗುಣಾದಿಗಳ ಜ್ಞಾನದಿಂದ ಪರಮಾತ್ಮನ ವಿಶ್ವರೂಪದ ಸಂಪದವೆಲ್ಲವೂ ಸೇರಿದರೂ ತುಚ್ಛವಾಗುವುದೋ,ಅದನ್ನು ಆ ಶ್ರೀದೇವಿಯು ಅಮೃತ ಪ್ರವಾಹವನ್ನೂ ಮೀರಿಸುವ ತನ್ನ ಕುಡಿಗಣ್ಣೋಟಗಳಿಂದ ನಮ್ಮನ್ನು ಸಂಸ್ಕಾರಗೊಳಿಸಲಿ.

ಆಕುಗ್ರಾಮ-ನಿಯಾಮಕಾದಪಿ ವಿಭೋ-ರಾಸರ್ವ-ನಿರ್ವಾಹಕಾತ್
ಐಶ್ವರ್ಯಂ ಯದಿಹೋತ್ತರೋತ್ತರಗುಣಂ ಶ್ರೀರಂಗಭರ್ತುಃ ಪ್ರಿಯೇ |
ತುಂಗಂ ಮಂಗಲಮುಜ್ಜ್ವಲಂ ಗರಿಮವತ್ ಪುಣ್ಯಂ ಪುನಃ ಪಾವನಂ
ಧನ್ಯಂ ಯತ್ತದದಶ್ವ ವೀಕ್ಷಣಭುವಸ್ತೇ ಪಂಚಷಾ ವಿಪುಷಃ ||೩||

ಹೇ! ಶ್ರೀರಂಗನ ಪ್ರೀತಿಪಾತ್ರಳೇ; ಒಂದು ಚಿಕ್ಕ ಜಾಗದ ಅಧಿಪತ್ಯದಿಂದ ಸರ್ವ ನಿಯಾಮಕನಾಗಿರುವ ಭಗವಂತನತನಕ ಹೆಚ್ಚು ಹೆಚ್ಚು ವಿಪುಲವಾಗಿರುವ ಯಾವ್ಯಾವ ಸಂಪದಗಳಿವೆಯೋ ಅವು ಶ್ರೇಷ್ಠವಾದುದು,ಶುಭಕರವಾದುದು,ಕಾಂತಿಮಯವಾದುದು,ವಿಶಾಲವಾದುದು ,ಪುಣ್ಯಮಯವಾದುದು, ಪಾವನಮಯವಾದುದು,ಕೃತ ಕೃತ್ಯವಾದಂತಹದು ಯಾವುದೆಲ್ಲವಿದೆಯೋ ಅವೆಲ್ಲವೂ ನಿನ್ನ ದೃಷ್ಟಿಯ ಐದು ಅಥವಾ ಆರು ಬಿಂದುಗಳು.

ರತಿರ್ಮತಿ-ಸರಸ್ವತೀ-ಧೃತಿ-ಸಮೃದ್ಧಿ-ಸಿದ್ಧಿ-ಶ್ರಿಯಃ
ಸುಧಾಸಖಿ ಯತೋಮುಖಂ ಚಿಚಲಿಷೇತ್ ತವ ಭ್ರೂಲತಾ |
ತತೋಮುಖಮಥೇಂದಿರೇ ಬಹುಮುಖೀಮಹಂ-ಪೂರ್ವಿಕಾಂ
ವಿಗಾಹ್ಯ ಚ ವಶಂವದಾ: ಪರಿವಹಂತಿ ಕೂಲಂಕಷಾಃ ||೪||

ಅಮೃತದ ಒಡನಾಡಿಯಾಗಿರುವ ಇಂದಿರೆಯೇ,ನಿನ್ನ ಹುಬ್ಬಿನ ಹಂಬು ಯಾರ ಕಡೆಗೆ ಸಂಚರಿಸಬಯಸುವುದೋ ಅವನೆಡೆಗೆ ಸಂಪತ್ತು, ಜ್ಞಾನ,ಪ್ರೀತಿ, ವಿದ್ಯೆ, ಬುದ್ಧಿ,ಸಮೃದ್ಧಿ,ಇಷ್ಟಾಸಿದ್ಧಿ ಇವೆಲ್ಲವೂ ತಾ ಮೊದಲು ತಾ ಮೊದಲು ಎಂಬುದಾಗಿ ಅಂಚನ್ನು ಮೀರಿ ಹರಿವ ನದಿಯಂತೆ ಪ್ರವಹಿಸಿ ಅವನ ಕೈ ವಶವಾಗುವುದು.

ಸಹ-ಸ್ಥಿರ-ಪರಿತ್ರಸ-ವ್ರಜ-ಮಂಚನಾಕಿಂಚನೈಃ
ಅನೋಕಹ-ಬೃಹಸ್ಪತಿ-ಪ್ರಬಲ-ವಿಕ್ಲಬ-ಪ್ರಕ್ರಿಯಮ್ |
ಇದಂ ಸದಸದಾತ್ಮನಾ ನಿಖಿಲಮೇವ ನಿಮ್ನೋನ್ನತಂ
ಕಟಾಕ್ಷ-ತದುಪೇಕ್ಷಯೋಸ್ತವ ಹಿ ಲಕ್ಷ್ಮಿ ತತ್ತಾಂಡಮ್ ||೫||

ಹೇ! ಲಕ್ಷ್ಮಿ,ಸ್ಥಾವರಹಾಗೂ,ಜಂಗಮ,ಸ್ಥಿತಿವಂತ ಮತ್ತು ದರಿದ್ರ,ಬೃಹಸ್ಪತಿ ಮತ್ತು ವನಸ್ಪತಿ,ಬಲಶಾಲಿ ಮತ್ತು ದುರ್ಬಲ ಈ ರೀತಿಯಾಗಿ ಸದಸದ್ರೂಪದಲ್ಲಿರುವ ಹಾಗೂ ಉಚ್ಛ ನೀಚ ಭಾವನೆಗಳನ್ನು ಹೊಂದಿರುವ ಈ ಸಮಸ್ತ ಭೂಮಂಡಲವು ನಿನ್ನ ಕರುಣೆಯಕುಡಿಗಣ್ಣೋಟವಿಲ್ಲದಿರುವ ಮತ್ತು ಕರುಣಾಕಟಾಕ್ಷದ ಫಲವಾಗಿದೆ.

ಯದ್ದೂರೇ ಮನಸೋ ಯದೇವ ತಮಸಃ ಪಾರೇ ಯದತ್ಯದ್ಭುತಂ
ಯತ್ಕಾಲಾದಪಚೇಲಿಮಂ ಸುರಪುರೀ ಯದ್ಗಚ್ಛತೋ ದುರ್ಗತಿಃ |
ಸಾಯುಜ್ಯಸ್ಯ ಯದೇವ ಸೂತಿರಥವಾ ಯದ್ದುರ್ಗ್ರಹಂ ಮದ್ಗಿರಾಂ
ತದ್ವಿಷ್ಣೋಃ ಪರಮಂ ಪದಂ ತವ ಕೃತೇ ಮಾತಃ ಸಮಾಮ್ನಾಸಿಷುಃ ||೬||

ಯಾವುದು ಮಾತು ಮನಸ್ಸುಗಳಿಗೆ ಕಾಣದಿರುವುದೋ, ಯಾವುದು ಕತ್ತಲಿನ ಆಚೆಗಿರುವುದೋ,ಯಾವುದು ಅತಿ ಭಯಂಕರವೋ,ಯಾವುದರ ಮೇಲೆ ವೇಳೆ ಪರಿಣಾಮ ಬೀರಲು ಸಾಧ್ಯವಾಗುವುದಿಲ್ಲವೋ,ಯಾವ ಜಾಗಕ್ಕೆ ಹೋಗುವವರಿಗೆ ಇಂದ್ರನ ನಗರಿಯೂ ದುರ್ಗತಿಯ ಅನುಭವನ್ನು ಒದಗಿಸುವುದೋ, ಯಾವುದು ಪರಮ ಸಾಯುಜ್ಯದ ಉಗಮ ಸ್ಥಾನವೋ,ಅಂತಹಾ ಮಹಾವಿಷ್ಣುವಿನ ಪರಮಪದವು ನಿನಗೋಸ್ಕರವೆಂದು ವೇದಶಾಸ್ತ್ರಗಳು ಹೇಳುತ್ತಿವೆಯಮ್ಮಾ!

ಮಾತರ್ಮೈಥಿಲಿ ರಾಕ್ಷಸೀಸ್ತ್ವಯಿ ತದೈವಾರ್ದ್ರಾಪರಾಧಾಸ್ತ್ವಯಾ
ರಕ್ಷಂತ್ಯಾ ಪವನಾತ್ಮಜಾಲ್ಲಘುತರಾ ರಾಮಸ್ಯ ಗೋಷ್ಟೀ ಕೃತಾ |
ಕಾಕಂ ತವ ಚ ವಿಭೀಷಣಂ ಶರಣಮಿತ್ಯುಕ್ತಿಕ್ಷಮೌ ರಕ್ಷತಃ
ಸಾ ನಃ ಸಾಂದ್ರಮಹಾಗಸಃ ಸುಖಯತು ಕ್ಷಾಂತಿಸ್ತವಾಸ್ಸ್ಕಸ್ಮಿಕೀ ||೭||

ಮಾತೆ ಮೈಥಿಲಿಯೇ; ನವನವೀನ ಅಪರಾಧಗಳನ್ನು ಮಾಡುತ್ತಲಿದ್ದ ರಕ್ಕಸಿಯರನ್ನು ನಾಶಪಡಿಸಲು ಹನುಮನು ಇಚ್ಚಿಸಿದಾಗ, ನೀನು ಅವರನ್ನು ರಕ್ಷಿಸಿ ರಾಮನ ಸಹವಾಸವನ್ನೂ ಹಗುರವಾಗಿ ಭಾವಿಸಿದೆ.ಏಕೆಂದರೆ "ನಿನಗೆ ಶರಣು ಬಂದಿರುವೆ"ಎಂದಾಕ್ಷಣ ಕಾಕಾಸುರನನ್ನೂ ವಿಭೀಷಣನನ್ನೂ ಶ್ರೀರಾಮನು ರಕ್ಷಿಸಿದ. ಅಂತಹಾ ನಿನ್ನ ಅಕಸ್ಮಾತ್ತಾದ ಮನ್ನಿಸುವ ಗುಣವು ನಮ್ಮೆಲ್ಲರನ್ನು ಸುಖಿಗಳಾಗಿ ಬಾಳುವಂತೆ ಮಾಡಲಿ.

ಮಾತರ್ಲಕ್ಷ್ಮಿ ಯಥೈವ ಮೈಥಿಲ-ಜನಸ್ತೇನಾಧ್ವನಾ ತೇ ವಯಂ
ತ್ವದ್ದಾಸ್ಯೈಕ-ರಸಾಭಿಮಾನ-ಸುಭಗೈರ್ಭಾವೈರಿಹಾಮುತ್ರ ಚ |
ಜಾಮಾತಾ ದಯಿತಸ್ತವೇತಿ ಭವತೀಸಂಬಂಧ-ದೃಷ್ಟ್ಯಾಹರಿಂ
ಪಶ್ಯೇಮ ಪ್ರತಿಯಾಮ ಯಾಮ ಚ ಪರೀಚಾರಾನ್ ಪ್ರಹ್ಯಷ್ಯೇಮ ಚ ||೮||

ಅಮ್ಮಾ! ಮಾತೆ ಲಕ್ಷ್ಮೀದೇವಿಯೇ; ಮಿಥಿಲಾನಗರಿಯ ಪ್ರಜೆಗಳು ನಿನಗೆ ಎಂತು ಸೇರಿದವರಾಗಿರುವರೋ,ನಿನ್ನ ಸೇವೆಯಲ್ಲಿ ಇರುವ ಶ್ರೇಷ್ಠವಾದ ಶ್ರದ್ಧೆಯಿಂದಲೂ,ನಿನ್ನ ಮೇಲಿರುವ ತಾದಾತ್ಮ್ಯ ಗೌರವದಿಂದ ಮನ್ನಣೆ ಪಡೆಯುವ ಇಂಗಿತವನ್ನು ಹೊಂದಿದರೋ ಅದೇ ತೆರನಾಗಿ ನಾವು ಕೂಡಾ ನಿನ್ನವರು. ನಿನ್ನ ಸಂಪರ್ಕದ ಉದ್ದೇಶದಿಂದ ನಾವು ಶ್ರೀಹರಿಯನ್ನು ಇಲ್ಲಿಯೂ ಶಾಶ್ವತವಾದ ದಿವ್ಯ ಶಕ್ತಿಯಲ್ಲಿ "ನಿನ್ನ ಪತಿಯು ನಮ್ಮ ಅಳಿಯನು" ಎಂದು ಕಾಣುತ್ತಿರುವೆವು.ಮತ್ತು ಆತನಲ್ಲಿ ಶರಣಾಗಿ ಸೇವೆಯನ್ನು ಮಾಡುತ್ತಾ ಸಂತಸವನ್ನು ಹೊಂದುತ್ತಿರುವೆವು.

ಪಿತೇವ ತ್ವತ್ಪ್ರೇಯಾನ್ ಜನನಿ ಪರಿಪೂರ್ಣಾಗಸಿ ಜನೇ
ಹಿತಸ್ರೋತೋ ವೃತ್ತ್ಯಾ ಭವತಿ ಚ ಕದಾಚಿತ್ ಕಲುಷಧೀಃ |
ಕಿಮೇತತ್ ನಿರ್ದೋಷಃ ಕ ಇಹ ಜಗತೀತಿ ತ್ವಮುಚಿತೈಃ
ಉಪಾಯೈರ್ವಿಸ್ಮಾರ್ಯ ಸ್ವಜನಯಸಿ ಮಾತಾ ತದಸಿ ನಃ ||೯||

ಹೇ! ತಾಯಿ; ನಿನಗೆ ಮೆಚ್ಚಿನವನಾದ ಶ್ರೀಮನ್ನಾರಾಯಣನು ಕೆಲವೊಮ್ಮೆ ತಪ್ಪು ಮಾಡಿದವರಾದ ನಮ್ಮ ಬಗ್ಗೆ ಕೋಪಿಸಿಕೊಳ್ಳುತ್ತಾನೆ. ಆಗ ನೀನು ಜಗತ್ತಿನಲಿ ತಪ್ಪು ಮಾಡದವರು ಯಾರೂ ಇಲ್ಲ ಎಂದು ತಕ್ಕುದಾದ ಮಾತುಗಳಿಂದಲೂ ಉಪಾಯದಿಂದಲೂ ನಮ್ಮ ದೋಷಗಳನ್ನು ಮರೆಯುವ ಹಾಗೆ ಮಾಡುವುದಲ್ಲದೆ ನಮ್ಮನ್ನು ನಿನ್ನವರೆಂದು ಸ್ವೀಕರಿಸುತ್ತಿರುವಿ. ಆದ ಕಾರಣದಿಂದ ನೀನು ನಮಗೆ ಸಂಶಯಾತೀತವಾಗಿ ಮಾತೃ ರೂಪಿಯಾಗಿರುವೆ.

ಔದಾರ್ಯ-ಕಾರುಣಿಕತಾಸ್ಸ್ಶ್ರಿತವತ್ಸಲತ್ವ-
ಪೂರ್ವೇಷು ಸರ್ವಮತಿಧಾಯಿತಮತ್ರ ಮಾತಃ |
ಶ್ರೀರಂಗಧಾಮ್ನಿ ಯದುತಾನ್ಯದುದಾಹರಂತಿ
ಸೀತಾವತಾರ-ಮುಖಮೇತದಮುಷ್ಯ ಯೋಗ್ಯಮ್ ||೧೦||

ತಾಯೇ! ನಿನ್ನ ಗುಣಗಳಾದ ಔದಾರ್ಯ,ಕಾರುಣ್ಯ ಭಾವ,ಆಶ್ರಿತರಬಗೆಗಿನ ವಾತ್ಸಲ್ಯತೆ, ಇತ್ಯಾದಿಗಳು ಆ ಶ್ರೀರಂಗಧಾಮದ ಮೂರ್ತ್ಯಾವತಾರದಲ್ಲಿ ಶ್ರೇಷ್ಠತೆಯನ್ನು ಪಡೆದಿವೆ. ಇದಕ್ಕಿಂತ ವಿಭಿನ್ನವಾದ ಸೀತಾವತಾರವೇ ಆದಿಯಾದ ಅವತಾರಗಳನ್ನು ಪ್ರತ್ಯೇಕವಾಗಿ ಹೇಳಿದ್ದರೆ ಅವೆಲ್ಲವೂ ಆ ಮೂರ್ತ್ಯಾವತಾರಕ್ಕೆ ಯೋಗ್ಯವಾದವುಗಳೇ ಆಗಿವೆ.
_______________________________________________________________
|| ಇತಿ ಶ್ರೀಲಕ್ಷ್ಮೀ ಗುಣರತ್ನಕೋಶಮ್ ||

No comments:

Post a Comment

If you have any doubts. please let me know...