April 26, 2020

ಅಕ್ಷಯ ತೃತಿಯ

ಅಕ್ಷಯ ತದಿಗೆ


"ಅಕ್ಷಯ ತೃತೀಯ " ಬಂಗಾರ ಒಡವೆ ತಗೊಬೇಕು, ಉಂಗುರ ತಗೋಬೇಕು, ಬರೀ ಇದೇ ಎಲ್ಲಿ ನೋಡಿದರೂ..?

ಏನು ಅಕ್ಷಯವಾದರೆ ನಮ್ಮ ಜೀವನ ಚೆನ್ನಾಗಿರುತ್ತೆ ಅಂಥ ಸ್ವಲ್ಪ ಯೋಚನೆ ಮಾಡಿ..

  • ಮುಖ್ಯವಾಗಿ ಸ್ತ್ರೀಯರಿಗೆ ..

"ಅರಿಸಿನ, ಕುಂಕುಮ, ಹೂವು ಮೊದಲು ತಗೋಳಿ..!
ಇವು ಅಕ್ಷಯವಾಗಬೇಕು, ಇದರ ಬಲ ಅಕ್ಷಯವಾಗಬೇಕು..
ಇವು ಆಭರಣಗಳು ನಿಮಗೆ..

ಮನೆಯಲ್ಲಿ ದೇವರ ಪೂಜೆ ಮಾಡಿ, ದೇವಿ ಪೂಜೆ ಮಾಡಿ , ತಾಂಬೂಲದಾನ ಮಾಡಿ ತುಂಬಾ ತುಂಬಾ ಒಳ್ಳೆಯದು....

  • ಪುರುಷರಿಗೆ........

ಯಾರಾದರು ಬಡಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಪುಸ್ತಕ ಕೊಡಿಸಿ ಅದರ ಶಕ್ತಿ ನಿಮ್ಮ ಮಕ್ಕಳಿಗೆ ಬರುತ್ತೆ, ನಿಮ್ಮ ಮಕ್ಕಳ ವಿದ್ಯಾಭ್ಯಾಸ ಹೆಚ್ಚಾಗುತ್ತೆ..

ಹೂವು, ಹಣ್ಣು, ಹಾಲು, ಜೇನುತುಪ್ಪ,  ವಸ್ತ್ರ ದೇವಾಲಯಕ್ಕೆ ಕೊಟ್ಟು ಪೂಜೆ ಮಾಡಿಸಿ, ಈ ವಸ್ತುಗಳು ನಿಮ್ಮ ಮನೆಯಲ್ಲಿ ಅಕ್ಷಯವಾಗಿ ಸರ್ವದಾರಿದ್ರ್ಯ ನಿವಾರಣೆಯಾಗುತ್ತದೆ ..

ಯಾರಾದರೂ ಬಡವರಿಗೆ ಅನ್ನದಾನ ಮಾಡಿ ಮನೆಯಲ್ಲಿ " ಅನ್ನಪೂರ್ಣೇಶ್ವರೀ ಅಕ್ಷಯವಾಗುತ್ತಾರೆ..

No comments:

Post a Comment

If you have any doubts. please let me know...