ಶಾಸನಾತ್ ಶಂಸನಾತ್ ಶಾಸ್ತ್ರಂ ಶಾಸ್ತ್ರಮಿತ್ಯಭಿಧೀಯತೇ”
ಎಂಬ ಆಗಮದ ವಾಕ್ಯದಂತೆ, “ಹೀಗೇ ಮಾಡಬೇಕು, ಹೀಗೆ ಮಾಡಬಾರದು” ಎಂಬ ಶಾಸನ / ಕಾನೂನು ರೀತಿಯ ವಿಧಿ-ನಿಷೇಧಗಳನ್ನು ಹೇಳುವ / ವಿಧಿಸುವ / ಆಜ್ಞಾಪಿಸುವ ಗ್ರಂಥಗಳೇ ಶಾಸ್ತ್ರಗಳು. “ಶಾಸ್ ಅನುಶಿಷ್ಟೌ” ಎಂಬ ಶಾಸನ, ಆಜ್ಞೆಮಾಡು ಎಂಬರ್ಥದ “ಶಾಸ್” ಧಾತುವಿನಿಂದ ನಿಷ್ಪನ್ನವಾಗಿದೆ ಶಾಸ್ತ್ರಶಬ್ದ. ಹಾಗೆಯೇ, ಇದರ ಇನ್ನೊಂದು ಆಯಾಮದಲ್ಲಿ, “ಶಂಸ್ ಸ್ತುತೌ” ಎಂಬ ವರ್ಣನೆ ಮಾಡು, ಹೊಗಳು, ಸ್ತುತಿ ಮಾಡು ಎಂಬರ್ಥದ “ಶಂಸ್” ಧಾತುವಿನಿಂದ ಶಾಸ್ತ್ರಶಬ್ದವು ಹುಟ್ಟಿದೆ. ಅಂದರೆ, ಶಾಸ್ತ್ರಗಳು ವಿಧಿ-ನಿಷೇಧಗಳನ್ನು ವರ್ಣನಾತ್ಮಕವಾಗಿ ತಿಳಿಸುತ್ತವೆ ಅಥವಾ ತತ್ತ್ವಗಳನ್ನು ವರ್ಣಿಸುತ್ತಾ ಪ್ರಶಂಸಿಸುತ್ತವೆ, ಸತ್ಯ ಸಂಗತಿಯಾದ ನಿತ್ಯತತ್ತ್ವಗಳನ್ನು ಪ್ರತಿಪಾದಿಸುತ್ತವೆ.

ಮೂರು ರೀತಿಯ ಶಾಸ್ತ್ರಗಳಿವೆ— ಪ್ರಭುಸಮ್ಮಿತ, ಮಿತ್ರಸಮ್ಮಿತ ಹಾಗೂ ಕಾಂತಾಸಮ್ಮಿತ ಎಂಬುದಾಗಿ. ರಾಜಶಾಸನದಂತೆ ಧರ್ಮ-ಕರ್ಮಗಳನ್ನು ವಿಧಿಸುವ ವೇದಗಳು, ವೇದಾಂಗಗಳು, ಸ್ಮೃತಿಗಳು ಪ್ರಭುಸಮ್ಮಿತ. ರಾಮಾಯಣ-ಮಹಾಭಾರತದಂತಹ ಇತಿಹಾಸಗಳು ಹಾಗೂ ಪುರಾಣಾದಿಗಳು ಮಿತ್ರನು ಸಲಹೆ ನೀಡುವಂತೆ ಹೇಳುವುದರಿಂದ ಮಿತ್ರಸಮ್ಮಿತ. ಕಾಳಿದಾಸಾದಿ ಮಹಾಕವಿಗಳ ನೀತಿಯುತಕಾವ್ಯಗಳು, ಸುಭಾಷಿತಸಾಹಿತ್ಯಾದಿಗಳು ಪತ್ನಿಯು ಪ್ರೀತಿಯಿಂದ, ಪ್ರೇಮದಿಂದ ರಮಿಸಿ ತಿಳಿಹೇಳುವಂತೆ ರಮ್ಯವಾಗಿ ವರ್ಣಿಸುವುದರಿಂದ ಕಾಂತಾಸಮ್ಮಿತ ಶಾಸ್ತ್ರಗಳೆನಿಸಿವೆ.
No comments:
Post a Comment
If you have any doubts. please let me know...