April 26, 2020

|| ಪುರಾಣೋಕ್ತ ಶ್ರೀ ಸರಸ್ವತೀ ಸ್ತೋತ್ರಗಳು ||

 || ಪುರಾಣೋಕ್ತ ಶ್ರೀ ಸರಸ್ವತೀ ಸ್ತೋತ್ರಮ್ ||

ಜ್ಞಾನಂ ದೇಹಿ ಸ್ಮೃತಿಂ ದೇಹಿ ವಿದ್ಯಾಂ ವಿದ್ಯಾಧಿ ದೇವತೇ |
ಪ್ರತಿಷ್ಠಾಂ ಕವಿತಾಂ ದೇಹಿ ಶಕ್ತಿಂ ಶಿಷ್ಯ ಪ್ರಭೋಧಿಕಾಮ್ ||
ಸ್ಮೃತಿಶಕ್ತಿ: ಜ್ಞಾನಶಕ್ತಿ: ಬುದ್ಧಿಶಕ್ತಿ: ಸ್ವರೂಪಿಣೀ |
ಪ್ರತಿಭಾ ಕಲ್ಪನಾಶಕ್ತಿ: ಯಾ ತಸ್ಸೈ ನಮೋ ನಮ: ||
                               [-ಬ್ರಹ್ಮ ವೈವರ್ತ ಪುರಾಣ; ; ]
ज्ञानम् देहि स्मृतिम् देहि विद्याम् विद्यादि देवते |
प्रतिष्ठाम कविताम् देहि शक्तिम्  शिष्य प्रबोधिकाम् ||
स्मृतिशक्तिः  ज्ञान:शक्तिः  बुद्धि:शक्तिः स्वारूपिणि |
प्रतिभा कल्पना: शक्तिः  या च तस्यै नमो नम: ||
                                 [ ब्रह्म वैवर्त पुराण ; 2-4.]

ಭಾವಾರ್ಥ:-ಹೇ! ವಿದ್ಯಾಧಿಮಾತೆಯೇ; ನನಗೆ ಜ್ಞಾನವನ್ನು ಕರುಣಿಸು. ನೆನಪಿನ ಶಕ್ತಿಯನ್ನು ಅನುಗ್ರಹಿಸುವಿದ್ಯೆ,ಕವಿತಾಶಕ್ತಿ, ಕೀರ್ತಿ, ಶಿಷ್ಯರಲ್ಲಿ ಅರಿವು ಮೂಡಿಸುವ ಶಕ್ತಿ, ಇವೆಗಳೆಲ್ಲವನ್ನೂ ದಯಪಾಲಿಸುತಾಯಿಯೇಯಾರು ಸ್ಮೃತಿಶಕ್ತಿಯೋ,ಯಾರು ಜ್ಞಾನ ಶಕ್ತಿಯೋ, ಬುದ್ಧಿಶಕ್ತಿಯೋ, ಪ್ರತಿಭಾಶಕ್ತಿಯೋ, ಕಲ್ಪನಾ ಶಕ್ತಿಯೋ  ಅಂತಹಾ ಮಹಾಮಾತೆ ಶಾರದೆಗೆ  ಪುನ:ಪುನ: ನನ್ನ ನಮಸ್ಕಾರಗಳು

ಮನೋ ವೃತ್ತಿರಸ್ತು ಸ್ಮೃತಿಸ್ತೇ ಸಮಸ್ತಾ
ತಥಾ ವಾಕ್ಪ್ರವೃತ್ತಿ: ಸ್ತುತಿಸ್ಸ್ಯಾನ್ಮಹೇಶಿ|
ಶರೀರಪ್ರವೃತ್ತಿ: ಪ್ರಣಾಮಕ್ರಿಯಾ ಸ್ಯಾತ್
ಪ್ರಸೀದ ಕ್ಷಮಸ್ವ ಪ್ರಭೋ ಸಂತತಂ ಮೇ ||
                        [-ಪ್ರಪಂಚ ಸಾರತಂತ್ರ , ,]

ಭಾವಾರ್ಥ:-ಹೇ! ಮಹೇಷಿ; ನನ್ನ ಮನೋವೃತ್ತಿಗಳೆಲ್ಲವೂ ನಿನ್ನ ಸ್ಮೃತಿಗಳಾಗಲಿ.ನನ್ನ ಮಾತಿನ ಒಲವುಗಳೆಲ್ಲವೂ  ನಿನ್ನದೇ ಸ್ತುತಿಗಳಾಗಲಿ. ನನ್ನ ಶರೀರದ ಸ್ವಭಾವಗಳೆಲ್ಲವೂ ನಿನಗೆನ್ನ ಪ್ರಣಾಮಗಳಾಗಲಿ. ಹೇ! ಮಾತೆ ಮಹೇಶ್ವರಿಯೇಪ್ರಸನ್ನಳಾಗು. ನನ್ನನ್ನು ಸದಾ ಕ್ಷಮಿಸುವವಳಾಗು.

ಅಮಲ ಕಮಲಾಧಿವಾಸಿನಿ
ಮನಸೋ ವೈಮಲ್ಯದಾಯಿನಿ ಮನೋಜ್ಞೇ |
ಸುಂದರಗಾತ್ರಿ ಸುಶೀಲೇ
ತವ ಚರಣಾಂಭೋರುಹಂ ನಮಾಮಿ ಸದಾ ||
                   [- ವಾಗೀಶ್ವರೀ ಸ್ತೋತ್ರ]

ಭಾವಾರ್ಥ:-ನಿರ್ಮಲವಾಗಿರುವ ತಾವರೆಯಲ್ಲಿ ನೆಲೆಸಿರುವ ಸರಸ್ವತಿಯೇ, ನನ್ನ ಮನಸ್ಸಿಗೆ ನಿರ್ಮಲತ್ವವನ್ನು ಕರುಣಿಸುವ  ಮನೋಜ್ಞರೂಪಿಣಿಯೇ, ಸುಶೀಲಳೂ ಸುಂದರಿಯೂ ಆಗಿರುವ ದೇವಿ ಸರಸ್ವತಿಯೇ, ನಾನು ಸದಾ ನಿನ್ನ ಅಡಿದಾವರೆಗಳಿಗೆ  ನಮಸ್ಕರಿಸುತ್ತೇನೆ.

ಪದ್ಮ ಪುರಾಣೋಕ್ತಂ -> |

{ದೇವಗುರುವಾಗಿರುವ ಬೃಹಸ್ಪತಿಯು ವಾಗ್ದೇವಿ ಶಾರದೆಯನ್ನು ತನ್ನ ವಾಕ್ಸಿದ್ಧಿಗೋಸ್ಕರವಾಗಿ ಸ್ತುತಿಸುವ ಮೂಲಕ  ಒಲಿಸಿಕೊಂಡನೆಂಬ ಕಥಾನಕವು ಪದ್ಮಪುರಾಣದಲ್ಲಿದೆ. ಇದೇ ಸ್ತೋತ್ರವು ಕೆಲವು ಪಾಠಾಂತರಗಳಲ್ಲಿ ಶಿವ-ಪಾರ್ವತಿ ಸಂವಾದ  ಕಥಾನಕವುಳ್ಳ ರುದ್ರಯಾಮಳದಲ್ಲಿಯೂ ಇದೆ. ಇಲ್ಲಿ ಕಾಣಿಸಲಾಗಿರುವುದು ಪದ್ಮ ಪುರಾಣದಲ್ಲಿನ ಪಠ್ಯ}

ಶ್ರೀ: ||ಬೃಹಸ್ಪತಿರುವಾಚ----
ಸರಸ್ವತೀಂ ನಮಸ್ಯಾಮಿ ಚೇತನಾನಾಂ ಹೃದಿ ಸ್ಥಿತಾಂ |
ಕಂಠಸ್ಥಾಂ ಪದ್ಮಯೋನೇಸ್ತು ಹಿಮಾಕರ ಪ್ರಿಯಾಂ ಸದಾ ||||

ಭಾವಾರ್ಥ:-ಬೃಹಸ್ಪತಿಯು ನುಡಿಯುತ್ತಾನೆ--
ಸಮಸ್ತ ಜೀವಿಗಳಲ್ಲಿಯೂ ನೆಲೆಸಿರುವ ವಾಗ್ದೇವಿ ಸರಸ್ವತಿಗೆ ನಾನು ನಮಸ್ಕರಿಸುವೆ.ಬ್ರಹ್ಮನ ಕಂಠ ಪ್ರದೇಶದಲ್ಲಿ  ತಂಪಾದಕಿರಣಗಳುಳ್ಳುವಳಾದ ಆಕೆಯು ಪ್ರೀತಿಯುಳ್ಳವಳಾಗಿಸದಾ ನೆಲೆಸಿರುತ್ತಾಳೆ.

ಮತಿದಾಂ ವರದಾಂ ಶುದ್ಧಾಂ ವೀಣಾಹಸ್ತ ವರಪ್ರದಾಂ |
ಐಂ ಐಂ ಮಂತ್ರ ಪ್ರಿಯಾಂ ಹ್ರೀಂ ಹ್ರಾಂ ಕುಮತಿದ್ವಂಸಕಾರಿಣೀಮ್ ||||

ಭಾವಾರ್ಥ:-ಸಮಸ್ತರಿಗೂ ಸನ್ಮತಿಯನ್ನು ಈಯುವ,ವರದಾಯಿನಿಯಾಗಿ,ಪರಮಪವಿತ್ರಳೂ ಆಗಿ,ವೀಣೆಯನ್ನು ಕೈಯಲ್ಲಿ  ಧರಿಸಿ, ಐಂ, ಬೀಜಾಕ್ಷರದ ಮೂಲಕ ಸಿದ್ಧಿಯನ್ನು ಕರುಣಿಸುತ್ತಾ ಹ್ರೀಂ ಹಾಗೂ ಹ್ರಾಂ ಬೀಜಾಕ್ಷರ ಮಂತ್ರಗಳಿಂದ ಮನುಜರ  ಕುಬುದ್ಧಿಯನ್ನು ನಾಶಗೊಳಿಸುತ್ತಾ ಇರುವ ಸರಸ್ವತೀ ದೇವಿಗೆ ಪ್ರಣಾಮಗಳು.

ಸುಪ್ರಕಾಶಾಂ ನಿರಾಲಂಬಾಂ ಅಜ್ಞಾನ ತಿಮಿರಾಪಹಾಂ |
ಶುಕ್ಲಾಂ ಮೋಕ್ಷಪ್ರದಾಂ ರಮ್ಯಾಂ ಶುಭಾಂಗಾಂ ಶೋಭನಪ್ರದಾಮ್ ||||

ಭಾವಾರ್ಥ:-ಅಜ್ಞಾನವನ್ನು ದೂರೀಕರಿಸಿ, ಜ್ಞಾನದ ಬೆಳಕನ್ನು ಒದಗಿಸುವ ಬಿಳಿಯವರ್ಣದಿಂದ ಕೂಡಿ  ಮೋಕ್ಷದಾಯಕಳಾಗಿಯೂ, ಮನೋಹರವಾಗಿರುವ ಸುಂದರವಾದ ಶರೀರವನ್ನು ಹೊಂದಿದಶುಭಪ್ರದಾಯಳಾಗಿರುವ ಸರಸ್ವತಿಗೆ  ನಾನು ನಮಸ್ಕರಿಸುವೆ.

ಪದ್ಮೋಪವಿಷ್ಠಾಂ ಕುಂಡಲಿನೀಂ ಶುಕ್ಲವರ್ಣಾಂ ಮನೋರಮಾಂ|
ಆದಿತ್ಯಮಂಡಲೇ ಲೀನಾಂ ಪ್ರಣಮಾಮಿ ಹರಿ ಪ್ರಿಯಾಮ್  ||||

ಭಾವಾರ್ಥ:-ಪದ್ಮಾಸನೆಯಾಗಿ, ಕುಂಡಲಿನೀ ಶಕ್ತಿಯನ್ನು ಹೊಂದಿ, ಬಿಳಿಯ ವರ್ಣವನಾಂತು, ಮನಸ್ಸಿಗೆ ಆನಂದವನ್ನು  ಒದಗಿಸುತ್ತಾ, ಸೂರ್ಯಮಂಡಲವಾಸಿಯಾಗಿ, ಮಹಾವಿಷ್ಣುವಿಗೆ ಪ್ರಿಯಳಾದವಳಾಗಿರುವ ಸರಸ್ವತೀದೇವಿಗೆ ನನ್ನ  ಪ್ರಣಾಮಗಳು.

ಇತಿ ಮಾಸಂ ಸ್ತುತಾಸ್ನೇನ ವಾಗೀಶೇನ ಮಹಾತ್ಮನಾ |
ಆತ್ಮಾನಂ ದರ್ಶಯಾ ಮಾಸ ಶರದಿಂದು ಸಮ ಪ್ರಭಾಮ್  ||||

ಭಾವಾರ್ಥ:- ರೀತಿಯಾಗಿ ಶ್ರೀಸರಸ್ವತೀದೇವಿಯನ್ನು ಒಂದು ತಿಂಗಳ ಕಾಲ ಪ್ರಾರ್ಥನೆಯನ್ನು ಮಾಡಿದ ನಂತರ ಬೃಹಸ್ಪತಿಗೆ  ವಾಗ್ದೇವಿಯು ಸಂತಸಗೊಂಡು ಒಲಿದು ಪ್ರತ್ಯಕ್ಷಳಾಗಿ ತನ್ನ ಅತ್ಯದ್ಭುತ ರೂಪವನ್ನು ಕಾಣಿಸಿದಳು.

ಸರಸ್ವತ್ಯುವಾಚ--
ವರಂ ವೃಣೀಷ್ಟ ಭದ್ರಂ ತೇ ಯಸ್ತೇ ಮನಸಿ ವರ್ತತೇ ||

ಬೃಹಸ್ಪತಿರುವಾಚ----
ವರದಾ ಯದಿ ಮೇ ದೇವಿ ಸಮ್ಯಕ್ ಜ್ಞಾನಂ ಪ್ರಯಚ್ಛಮೇ  ||||

ಸರಸ್ವತಿಯು ಹೇಳುವಳು "ಮಗೂ; ನಿನಗೇನು ಬೇಕಾಗಿದೆ; ಬೇಡಿಕೊ"
ಬೃಹಸ್ಪತಿ ಅನ್ನುತ್ತಾನೆ "ನನಗೆ ಪರಿಪೂರ್ಣವಾದಂತಹಾ ಜ್ಞಾನವನ್ನು ಅನುಗ್ರಹಿಸುವವಳಾಗು"

ಸರಸ್ವತ್ಯುವಾಚ---
ಇದಂ ತೇ ನಿರ್ಮಲಂ ಜ್ಞಾನಂ ಅಜ್ಞಾನ ತಿಮಿರಾಪಹಮ್ |
ಸ್ತೋತ್ರೇಣಾನೇನ ಮಾಂ ಸ್ರೌತಿ ಸಮ್ಯಗ್ವೇದವಿದೋ ನರ:
ಲಭತೇ ಪರಮಂ ಜ್ಞಾನಂ ಮಮ ತುಲ್ಯ ಪರಾಕ್ರಮಂ  ||||

ಸರಸ್ವತಿಯು ಅನ್ನುವಳು---
ಇದೋ ನೀನು ಬೇಡಿಕೊಂಡಂತೆ ನಿನಗೆ ಪರಿಪೂರ್ಣವಾಗಿರುವ ಜ್ಞಾನವನ್ನು ಅನುಗ್ರಹಿಸುತ್ತಿರುವೆ. ಜ್ಞಾನವನ್ನು  ಪಡೆದವನಾದ ನೀನು ನನಗೆ ಸರಿಸಾಟಿಯಾದ ಜ್ಞಾನಿಯಾಗುವೆ.

ತ್ರಿ ಸಂಧ್ಯಂ : ಪಠೇನ್ನಿತ್ಯಂ ಯಸ್ತ್ವಿದಂ ಜಪತೇ ಸದಾ |
ತೇಷಾಂ ಕಂಠೇ ಸದಾ ವಾಸಂ ಕರಿಷ್ಯಾಮಿ ಸಂಶಯ:  ||||

ಭಾವಾರ್ಥ:-ಯಾರು ನೀನು ಮಾಡುವ ಸ್ತೋತ್ರವನ್ನು  ದಿನದ ಮೂರು ಸಂಧ್ಯಾಕಾಲಗಳಲ್ಲಿಯೂ ಶ್ರದ್ಧಾಭಕ್ತಿಯಿಂದ  ಪಠಿಸುತ್ತಾರೋ,ಜಪಿಸುತ್ತಾರೋ ಅಂತಹವರ ಕಂಠದಲ್ಲಿ ನಾನು ಸದಾ ನೆಲೆಸಿರುತ್ತೇನೆ. ಇದು ನಿಸ್ಸಂಶಯ ಎಂಬುದಾಗಿ  ಬೃಹಸ್ಪತಿಗೆ ವಚನವನ್ನಿತ್ತಳು.

                 || ಇತಿ ಪುರಾಣೋಕ್ತ ಶ್ರೀ ಸರಸ್ವತೀ ಸ್ತೋತ್ರಮ್ ||

No comments:

Post a Comment

If you have any doubts. please let me know...