April 17, 2020

ಬಾಲಾರಿಷ್ಟ

 ಪತ್ರಿಕೆ (ಜಾತಕ) ಸಿದ್ದವಾದ ನಂತರ ಆಯುರ್ಮಾನ ತಿಳಿಯುವ ಮುಂಚೆ ಬಾಲಾರಿಷ್ಟ ಯೋಗ ತಿಳಿದುಕೊಳ್ಳಬೇಕು. ಜನ್ಮ ಪತ್ರಿಕೆಯಲ್ಲಿ ಬಾಲಾ ರಿಷ್ಟ ಯೋಗವಿದ್ದರೆ ಪತ್ರಿಕೆಯಲ್ಲಿ ಗ್ರಹ ಎಷ್ಟೇ ಉತ್ತಮವಿರಲಿ ಅದರಿಂದ ಪ್ರಯೋಜನವಾಗುವುದಿಲ್ಲ. ಇದನ್ನು ತಿಳಿಯದೆ ಕೆಲವರು ಮೋಸಹೋಗು ವರು. ಸಾಮಾನ್ಯವಾಗಿ ಮನುಷ್ಯನ ಆಯುರ್ಮಾನ 120 (ನೂರಾಇಪ್ಪತ್ತು ವರ್ಷ)ಗಳೆಂದು ತಿಳಿಯುವುದು. ಇದಕ್ಕೂ ಅಧಿಕ ಆಯುರ್ಮಾನಕ್ಕೆ ದೀರ್ಘಾಯುವೆಹನ್ನುವರು. ಅದು ಯೋಗಾಭ್ಯಾಸ, ಮಂತ್ರಶಕ್ತಿ, ಔಷಧಿ, ಕ್ಲುಪ್ತ ಆಚಾರ-ವಿಚಾರ ಹಾಗೂ ಸತ್ಕರ್ಮಗಳಿಂದ ಸಂಭವಿಸುವುವು.

         ಜನ್ಮದಿಂದ ಎಂಟು ವರುಷಗಳ ವರೆಗೆ ಬಾಲಾರಿಷ್ಟವಿರುತ್ತದೆ. ನಂತರ 20 ವರ್ಷ ಪರ್ಯ೦ತ ಯೋಗಾರಿಷ್ಟವೂ, 32 ವರುಷಗಳವರೆಗೆ ಅಲ್ಪಾಯು ಪ್ಯವೂ, 70 ವರುಷಗಳ ಪರ್ಯಂತ ಪೂರ್ಣಾಯುಷ್ಯವೂ ಇರುತ್ತದೆ.ಆಯುರ್ಮಾನಗಳಲ್ಲಿ ಅಷ್ಟೋತ್ತರೀ ಪ್ರಕಾರ (108) ನೂರಾ ಎಂಟು ವರ್ಷ ಹಾಗೂ ವಿಂ ಶೋತ್ತರೀಯ ಪ್ರಕಾರ (120) ನೂರಾ ಇಪ್ಪತ್ತು ವರ್ಷ -ಈ ಪ್ರಕಾರ ಆಯುರ್ಮಾನಗಳನ್ನು ಶಾಸ್ತ್ರದಲ್ಲಿ ವಿಭಾಗಿಸಿರುವರು. ಈ ಜನ್ಮದಿಂದ ಹನ್ನೆರಡು ವರ್ಷ ಪರ್ಯಂತ ಮೇಲಿನ ಆಯುರ್ಮಾನಗ ಳನ್ನು ನಿರ್ಣಯಿಸಲು ಬರುವುದಿಲ್ಲ. ಯಾಕೆಂದರೆ ತಂದೆ- ತಾಯಿಗಳ ಪಾಪ ಕರ್ಮಗಳ ಮೂಲಕ ಬಾಲಗ್ರಹ ರೂಪವಾದ ಪೈಶಾಚಿಕ ಬಾಧೆಗಳು ಉತ್ಪನ್ನ ವಾಗುವುವು. ಆ ಮೂಲಕ ಅನರ್ಥಗಳಾಗುವ ಸಂಭವವಿರುವುದು. ಆ ಪ್ರಕಾರ ಜನ್ಮದಿಂದ ನಾಲ್ಕು ವರುಷಗಳ ಪರ್ಯಂತ ತಾಯಿಯ ಆಹಾರ ವ್ಯವಹಾರಗಳಿಂದಲೂ, ನಂತರ ನಾಲ್ಕು ವರುಷಗಳ ಪರ್ಯಂತ ತಂದೆಯ ಅಜಾಗ್ರತೆಯಿಂದಲೂ, ಆಮೇಲೆ, ನಾಲ್ಕು ಅಂದರೆ ಜನ್ಮದಿಂದ ಹನ್ನೆರಡು ವರುಷಗಳ ಪರ್ಯಂತ ಸ್ವತಃ ಮಕ್ಕಳ ಮನಸ್ವೀ ವರ್ತನೆಗಳಿಂದಲೂ ಅನರ್ಥಗಳುಂಟಾ ಗುವುವು.

        ಜನ್ಮದಿಂದ ನಾಲ್ಕು ವರುಷಗಳ ಪರ್ಯ೦ತ ಮಕ್ಕಳ ಪಾಲನೆಯ ಜವಾಬ್ದಾರಿ ತಾಯಿಯ ಮೇಲಿರುವುದು. ಬಳಿಕ ತಂದೆಯ ಮೇಲಿರುವುದು. ಆಮೇಲೆ ನಾಲ್ಕು ವರ್ಷ ಮಕ್ಕಳ ಸ್ವೇಚ್ಛಾರಗಳ ಮೂಲಕ ಅಪಘಾತಾದಿ ಅನಿಷ್ಟ ಪರಿಣಾಮಗಳುಂಟಾಗುವುವು. ಇವು ಬಹು ಪುರಾತನದಿಂದ ತಿಳಿದ ಸಂಗತಿಯಾಗಿದೆ. ಇವೆಲ್ಲ ಗ್ರಹ ಪರಿಸ್ಥಿತಿಯಿಂದಲೇ ಉತ್ಪನ್ನವಾಗುವುದು. 

        ಚಿಕ್ಕ ಮಕ್ಕಳಿಗೆ ಸ೦ಭವಿಸುವ ಪೈಶಾಚಿಕ ಬಾಧೆಗಳು ಈ ಕೆಳಗಿನಂತೆ ಇರುವುದು, ಸ್ಕಂದ, ವಿಶಾಖ, ಮೇಷ, ಶ್ವಾನ, ಪಿತರ -ಇವು ಐದು ಪುರುಷಾ ಕೃತಿಯ ಗ್ರಹಗಳಿದ್ದು, ಶಕುನಿ, ಪೂತನಾ, ದೃಷ್ಠಿಪೂತನ ಮುಖಮಂಡಲಿಕಾ, ರೇವತಿ, ಶುಷ್ಕರೇವತಿ ಇವು ಸ್ತ್ರೀ ದೇಹಧಾರಿ ಗ್ರಹಗಳೆಂದು ವಾಗ್ಭಟದಲ್ಲಿ ಹೇಳಿದೆ. ಆದರೆ ವಿಶಾಖ, ಮೇಷ, ರೇವತಿ ಅನ್ನುವ ಹೆಸರಿನವು ಆಯಾ ನಕ್ಷ ತ್ರಗಳಿರಬೇಕು. ಪಿತರ ಇದು ಮಘ ನಕ್ಷತ್ರ. ಸ್ಕಂದ ಕೃತ್ತಿಕಾ ನಕ್ಷತ್ರ, ಶ್ವಾನ ಆರಿದ್ರಾ ನಕ್ಷತ್ರ. ಮೇಷ ಅನ್ನುವ ಹೆಸರು ಅಶ್ವಿನೀ ಅಥವಾ ಪೂರ್ವಾಭಾದ್ರ. ಕಾರಣ ಆಯಾ ನಕ್ಷತ್ರಗಳಲ್ಲಿ ಜನ್ಮವಾಗುವ ಮಕ್ಕಳಿಗೆ ನಾನಾ ಪೀಡೆಗಳು ಉತ್ಪನ್ನವಾಗುವುವು. (ಮುಂದುವರಿಯುತ್ತದೆ)

No comments:

Post a Comment

If you have any doubts. please let me know...