April 24, 2020

ವೈಶಾಖಮಾಸದ ಮಹತ್ವ


🌷🌺ವೈಶಾಖಮಾಸದ ಹಾಗೂ ವೈಶಾಖಸ್ನಾನದ ಮಹತ್ವ🌷🌺

   ಮಾಸಾನಾo ಧರ್ಮಹೇತೂನಾo ವೈಶಾಖಶ್ಚೋತ್ತಮ ಸ್ತಥಾ
ನಾನೇನ ಸಧೃಶೋ ಲೋಕೇ ವಿಷ್ಣುಪ್ರೀತಿವಿಧಾಯಕಃ

    ಈ ವೈಶಾಖಮಾಸವು ಎಲ್ಲಾ ಮಾಸಗಳಲ್ಲಿ ಸರ್ವಶ್ರೇಷ್ಠವಾಗಿದೆ .ಧರ್ಮಕಾರ್ಯಗಳನ್ನು ಮಾಡಲು ವೈಶಾಖಮಾಸವು ಉಳಿದೆಲ್ಲ ಮಾಸಗಳಿಗಿಂತ ಉತ್ತಮವಾಗಿದೆ. ಶ್ರೀವಿಷ್ಣುವಿನ ಪ್ರೀತಿಯನ್ನು ಸಂಪಾದಿಸಲು ಲೋಕದಲ್ಲಿ ಈ ಮಾಸಕ್ಕೆ ಸಧೃಶವಾದ ಬೇರೊoದು ಮಾಸವಿಲ್ಲ . ವೈಶಾಖಮಾಸದಲ್ಲಿ ಸೂರ್ಯೋದಯದ ಮೊದಲು ಸ್ನಾನಮಾಡುವ ಸ್ತ್ರೀ ಪುರುಷರನ್ನು ಶ್ರೀಲಕ್ಷ್ಮೀಸಹಿತನಾದ ನಾರಾಯಣನು ಅನುಗ್ರಹ ಮಾಡುವನು ಆಹಾರಸೇವನೆಯಿoದ ಎಲ್ಲ ಪ್ರಾಣಿಗಳಿಗೆ ಸಂತೋಷವಾಗುವಂತೆ  ವೈಶಾಖ  ಸ್ನಾನದಿoದ ಭಗವಂತನಿಗೆ ಪ್ರೀತಿಯಾಗುತ್ತದೆ ಇದರಲ್ಲಿ ಸಂದೇಹ ಬೇಡ ವೈಶಾಖಸ್ನಾನವನ್ನು ತಪ್ಪದೇ ಮಾಡುವವವರನ್ನು  ಕಂಡು ಅವರಿಗೆ ಅನುಮೋದನೆ ಮಾಡುವವರೂ ಕೂಡ ಸಕಲಪಾಪಗಳಿoದ ಮುಕ್ತರಾಗಿ ವಿಷ್ಣುಲೋಕವನ್ನು ಹೊoದುವರು .ಸೂರ್ಯನು ಮೇಷರಾಶಿಯಲ್ಲಿರುವಾಗ ಪ್ರತಿದಿನ ಯಾರು  ಪ್ರಾತಃಸ್ನಾನಮಾಡಿ ಅಹ್ನೀಕಮಾಡುವವನು ಹಿoದೆ ತಾನು ಮಾಡಿದ ಪಾಪಗಳಿoದ ಮುಕ್ತನಾಗಿ ವಿಷ್ಣು ಸಾಯುಜ್ಯವನ್ನು ಪಡೆಯುವನು 


ಸ್ನಾನಾರ್ಥo ಮಾಸಿ ವೈಶಾಖೇ ಪಾದಮೆಕo ಚರೇದ್ಯದಿ
ಸೋsಶ್ವಮೇಧಾಯುತಾನಾo ಚ ಫಲಂ ಪ್ರಾಪ್ನೋತ್ಯಸಂಶಯಃ

    ವೈಶಾಖಮಾಸದಲ್ಲಿ ಪ್ರಾತಃಸ್ನಾನ ಮಾಡುವುದಕ್ಕಾಗಿ ಜಲಾಶಯಕ್ಕೆ ಹೋಗುವಾಗ ನಾವು ಇಡುವ ಒಂದೊoದು ಹೆಜ್ಜೆಗೂ ಹತ್ತು ಸಹಸ್ರ  ಅಶ್ವಮೇಧಯಾಗಗಳನ್ನು ಮಾಡಿದ ಫಲವು ಪ್ರಾತಃಸ್ನಾನದಿoದ ಪ್ರಾಪ್ತವಾಗುವುದು .ಏಕಾಗ್ರಮನಸ್ಕರಾಗಿ ಯಾರು ಪ್ರಾತಃ ಸ್ನಾನದ ಸಂಕಲ್ಪವನ್ನು ಮಾಡುವರೊ ಅಷ್ಟು ಮಾತ್ರದಿoದಲೇ ಅವರು  ನೂರು ಯಜ್ಞಗಳನ್ನು ಮಾಡಿದ ಫಲವನ್ನು ಪಡೆಯುವರು ಈ ವಿಷಯದಲ್ಲಿ ಸಂದೇಹ ಬೇಡ .

ಯೋ ಗಚ್ಛೇದ್ಧನುರಾಯಾಮಾo ಸ್ನಾತುo ಮೇಷo ಗತೇ ರವೌ
ಸರ್ವಬಂಧವಿನಿರ್ಮೂಕ್ತೋ  ವಿಷ್ಣೋಃ ಸಾಯುಜ್ಯ ಮಾಪ್ನುಯಾತ್
ತ್ರೈಲೋಕ್ಯೇ ಯಾನಿ ತೀರ್ಥಾನಿ ಬ್ರಹ್ಮಾoಡಾoತರ್ಗತಾನಿ ಚ
ತಾನಿ ಸರ್ವಾಣಿ ರಾ ಜೇoದ್ರ  ಸಂತಿ ಬಾಹ್ಯೇsಲ್ಪಕೆ ಜಲೇ
ತಾವಲ್ಲಿಖಿತಾಪಾಪಾನಿ ಗರ್ಜoತಿ ಯಮಶಾಸನೇ

ವೈಶಾಖ ಮಾಸದಲ್ಲಿ ಪ್ರಾತಃಸ್ನಾನ  ಮಾಡಲು ಜಲಾಶಯಕ್ಕೆ ಹೋಗುವಾಗ ಯಾರು ಒಂದು ಧನುಸ್ಸಿನ ಪ್ರಮಾಣದಷ್ಟು (4 ಮೊಳ)
ಮುoದಕ್ಕೆ ನಡೆಯುವನೋ ಅವನು ಸರ್ವಬಂಧಗಳಿoದ ಮುಕ್ತನಾಗಿ  ವಿಷ್ಣುವಿನ ಸಾಯುಜ್ಯವನ್ನು ಪಡೆಯುವನು ಮೂರೂಲೋಕಗಳಲ್ಲಿ ಬ್ರಹ್ಮಾoಡಾoತರ್ಗತವಾದ ತೀರ್ಥಗಳು ಎಷ್ಟಿವೆಯೋ ಅವೆಲ್ಲವೂ ಈ ವೈಶಾಖ ಮಾಸದಲ್ಲಿ ಜಲಾಶಯದಲ್ಲಿರುವ ಅಲ್ಪ ನೀರಿನಲ್ಲಿಯೂ ಸನ್ನಿಹಿತವಾಗಿರುವುವು . ವೈಶಾಖಮಾಸದಲ್ಲಿ ಇಂಥ ಜಲಾಶಯದೊಳಗೆ ಸ್ನಾನ ಮಾಡುವ ಹಿoದಿನಕಾಲದವರೆಗೆ ಮಾತ್ರ ಯಮನ ಆಜ್ಞೆಯಂತೆ ಗರ್ಜಿಸುತ್ತಿರುತ್ತವೆ .  ಪ್ರಾತಃಸ್ನಾನಮಾಡಿದ ತಕ್ಷಣ ಸ್ನಾನ ಮಾಡಿದವನ ಪಾಪಗಳು ಅಂಜಿ ಓಡಿಹೋಗುತ್ತವೆ .

ಯಾವನ್ನ ಕುರುತೇಜಂತು ರ್ವೈಶಾಖೇ ಸ್ನಾನಮಂಭoಸಿ
ತೀರ್ಥಾದಿದೇವತಾಃ ಸರ್ವಾಃ ವೈಶಾಖೇ ಮಾಸಿ ಭೂಮಿಪ
ಬಹಿರ್ಜಲo ಸಮಾಶ್ರಿತ್ಯ  ಸದಾ ಸನ್ನಿಹಿತಾ  ನೃಪ
ಸೂರ್ಯೋದಯo ಸಮಾರಭ್ಯ ಯಾವತ್ ಷಡ್ ಘಟಿಕಾವಧಿ
ತಿಷ್ಠoತಿ ಚಾssಜ್ಞಯಾ  ವಿಷ್ಣೋನರಾಣಾo ಹಿತಕಾಮ್ಯಯ
ತಾವನ್ನಾಗಚ್ಛತಾo ಪುoಸಾo ಶಾಪo ದತ್ವಾ ಸುದಾರುಣಮ್

    ವೈಶಾಖಮಾಸದಲ್ಲಿ ತೀರ್ಥಾದಿದೇವತೆಗಳೆಲ್ಲರೂ  ಬಹಿರ್ಜಲಶಯವನ್ನು ಆಶ್ರಯಿಸಿಕೊoಡು ಅಲ್ಲಿರುವ ಜಲದಲ್ಲಿ ಸದಾ ಸನ್ನಿಹಿತರಾಗಿರುವರು ಸೂರ್ಯೋದಯದಿoದ ಹಿಡಿದು ಆರುಘಳಿಗೆ (2ಘoಟೆ24ನಿಮಿಷ)ಯವರೆಗೆ  ಈ ತೀರ್ಥಾದಿ ದೇವತೆಗಳು ಭಗವಂತನ ಆಜ್ಞಾನುಸಾರ ಮನುಷ್ಯರೆಲ್ಲರಿಗೆ ಕಲ್ಯಾಣವನ್ನುoಟುಮಾಡುವ ಉದ್ದೇಶದಿoದ ಜಲಾಶಯದಲ್ಲಿ  ಸನ್ನಿಹಿತರಾಗಿರುವರು .ಈ ಅವಧಿಯೊಳಗೆ ಜಲಶಯದಲ್ಲಿ  ಸ್ನಾನಮಾಡಲು ಬಾರದಿರುವ ಮನುಷ್ಯರಿಗೆ ಘೋರವಾದ ಶಾಪವನ್ನು ಕೊಟ್ಟು ತಮ್ಮ ತಮ್ಮ ಸ್ಥಾನಕ್ಕೆ ಹೊರಟುಹೋಗುವರು .ಆದ್ದರಿoದ ಆ ಅವಧಿಯೊಳಗೆ ಬಹಿರ್ಜಲಶಯದಲ್ಲಿ ತಪ್ಪದೆ ಪ್ರಾತಃಸ್ನಾನವನ್ನು ಮಾಡಬೇಕು ಎಂದು ನಾರದರು ಅಂಬರೀಷಮಹಾರಾಜನಿಗೆ ವೈಶಾಖಸ್ನಾನದ  ಫಲವನ್ನು  ವೈಶಾಖಮಾಸ ಮಹಾತ್ಮೆಯಲ್ಲಿ  ಹೇಳಿದ್ದಾರೆ .

1 comment:

If you have any doubts. please let me know...