April 30, 2020

ಶ್ರೀಲಕ್ಷ್ಮೀ ಗುಣರತ್ನಕೋಶಮ್

.


Siddhi Lakshmi,
goddess of miraculous power, century, Patan Museum, Nepal

ಶ್ರಿಯೈ ಸಮಸ್ತಚಿದಚಿದ್ವಿಧಾನವ್ಯಸನಂ ಹರೇಃ |
ಅಂಗೀಕಾರಿಭಿರಾಲೋಕೈಃ ಸಾರ್ಥಯಂತ್ರೈ ಕೃತೋಂಸ್ಜಲಿಃ ||೧||

ಯಾರು ತನ್ನ ಸಮ್ಮತಿಯನ್ನು ನಿರ್ದೇಶಿಸುವ ಕೃಪಾದೃಷ್ಟಿಯಿಂದ ಶ್ರೀಮನ್ನಾರಾಯಣನ ಸಮಸ್ತ ಸಜೀವ ಹಾಗೂ ನಿರ್ಜೀವವಾಗಿರುವ ಸೃಷ್ಟಿಯ ಇಚ್ಛೆಯನ್ನು ಸಾಕಾರಗೊಳಿಸುತ್ತಿರುವಳೋ ಅಂತಹಾ ಶ್ರೀದೇವಿಯ ಸನ್ನಿಧಾನದಲ್ಲಿ ಬೊಗಸೆಯನ್ನು ಒಡ್ಡುತ್ತಿರುವೆ.

ಯದ್ಭ್ರೂಭಂಗಾಃ ಪ್ರಮಾಣಂ ಸ್ಥಿರ-ಚರ-ರಚನಾತಾರತಮ್ಯೇ ಮುರಾರೇಃ
ವೇದಾಂತಾಸ್ತತ್ವಚಿಂತಾಂ ಮುರಭಿದುರಸಿ ಯತ್ಪಾದಚಿನ್ಹೈಸ್ತರಂತಿ |
ಭೋಗೋಪೋದ್ಘಾತ-ಕೇಲೀ- ಚುಲಕಿತ-ಭಗವದ್ ವೈಶ್ವರೂಪ್ಯಾನುಭಾವಾ
ಸಾ ನಃ ಶ್ರೀರಾಸ್ತೃಣೀತಾಮಮೃತಲಹರಿಧೀಲಂಘನೀಯೈರಪಾಂಗೈಃ ||೨||

ಯಾರ ಹುಬ್ಬುಹಾರಿಸುವಿಕೆಯು ಶ್ರೀಹರಿಯ ಸ್ಥಾವರಜಂಗಮಾದಿ ಅನ್ಯಾನ್ಯ ಸೃಷ್ಟಿಗೆ ಮಾರ್ಗದರ್ಶಕಗಳಾಗಿವೆಯೋ; ಮುರಾರಿಯ ವಕ್ಷಸ್ಥಳದಲ್ಲಿರುವ ಯಾವಾಕೆಯ ಪಾದಗಳ ಗುರುತಿನಿಂದ ವೇದೋಪನಿಷತ್ತುಗಳು ಪಾರಮಾರ್ಥಿಕ ನೈಜತ್ವವನ್ನು ನಿರ್ಧರಿಸುತ್ತವೆಯೋ, ಯಾವಾಕೆಯ ದೈವೀಸ್ವರೂಪ,ಗುಣಾದಿಗಳ ಜ್ಞಾನದಿಂದ ಪರಮಾತ್ಮನ ವಿಶ್ವರೂಪದ ಸಂಪದವೆಲ್ಲವೂ ಸೇರಿದರೂ ತುಚ್ಛವಾಗುವುದೋ,ಅದನ್ನು ಆ ಶ್ರೀದೇವಿಯು ಅಮೃತ ಪ್ರವಾಹವನ್ನೂ ಮೀರಿಸುವ ತನ್ನ ಕುಡಿಗಣ್ಣೋಟಗಳಿಂದ ನಮ್ಮನ್ನು ಸಂಸ್ಕಾರಗೊಳಿಸಲಿ.

ಆಕುಗ್ರಾಮ-ನಿಯಾಮಕಾದಪಿ ವಿಭೋ-ರಾಸರ್ವ-ನಿರ್ವಾಹಕಾತ್
ಐಶ್ವರ್ಯಂ ಯದಿಹೋತ್ತರೋತ್ತರಗುಣಂ ಶ್ರೀರಂಗಭರ್ತುಃ ಪ್ರಿಯೇ |
ತುಂಗಂ ಮಂಗಲಮುಜ್ಜ್ವಲಂ ಗರಿಮವತ್ ಪುಣ್ಯಂ ಪುನಃ ಪಾವನಂ
ಧನ್ಯಂ ಯತ್ತದದಶ್ವ ವೀಕ್ಷಣಭುವಸ್ತೇ ಪಂಚಷಾ ವಿಪುಷಃ ||೩||

ಹೇ! ಶ್ರೀರಂಗನ ಪ್ರೀತಿಪಾತ್ರಳೇ; ಒಂದು ಚಿಕ್ಕ ಜಾಗದ ಅಧಿಪತ್ಯದಿಂದ ಸರ್ವ ನಿಯಾಮಕನಾಗಿರುವ ಭಗವಂತನತನಕ ಹೆಚ್ಚು ಹೆಚ್ಚು ವಿಪುಲವಾಗಿರುವ ಯಾವ್ಯಾವ ಸಂಪದಗಳಿವೆಯೋ ಅವು ಶ್ರೇಷ್ಠವಾದುದು,ಶುಭಕರವಾದುದು,ಕಾಂತಿಮಯವಾದುದು,ವಿಶಾಲವಾದುದು ,ಪುಣ್ಯಮಯವಾದುದು, ಪಾವನಮಯವಾದುದು,ಕೃತ ಕೃತ್ಯವಾದಂತಹದು ಯಾವುದೆಲ್ಲವಿದೆಯೋ ಅವೆಲ್ಲವೂ ನಿನ್ನ ದೃಷ್ಟಿಯ ಐದು ಅಥವಾ ಆರು ಬಿಂದುಗಳು.

ರತಿರ್ಮತಿ-ಸರಸ್ವತೀ-ಧೃತಿ-ಸಮೃದ್ಧಿ-ಸಿದ್ಧಿ-ಶ್ರಿಯಃ
ಸುಧಾಸಖಿ ಯತೋಮುಖಂ ಚಿಚಲಿಷೇತ್ ತವ ಭ್ರೂಲತಾ |
ತತೋಮುಖಮಥೇಂದಿರೇ ಬಹುಮುಖೀಮಹಂ-ಪೂರ್ವಿಕಾಂ
ವಿಗಾಹ್ಯ ಚ ವಶಂವದಾ: ಪರಿವಹಂತಿ ಕೂಲಂಕಷಾಃ ||೪||

ಅಮೃತದ ಒಡನಾಡಿಯಾಗಿರುವ ಇಂದಿರೆಯೇ,ನಿನ್ನ ಹುಬ್ಬಿನ ಹಂಬು ಯಾರ ಕಡೆಗೆ ಸಂಚರಿಸಬಯಸುವುದೋ ಅವನೆಡೆಗೆ ಸಂಪತ್ತು, ಜ್ಞಾನ,ಪ್ರೀತಿ, ವಿದ್ಯೆ, ಬುದ್ಧಿ,ಸಮೃದ್ಧಿ,ಇಷ್ಟಾಸಿದ್ಧಿ ಇವೆಲ್ಲವೂ ತಾ ಮೊದಲು ತಾ ಮೊದಲು ಎಂಬುದಾಗಿ ಅಂಚನ್ನು ಮೀರಿ ಹರಿವ ನದಿಯಂತೆ ಪ್ರವಹಿಸಿ ಅವನ ಕೈ ವಶವಾಗುವುದು.

ಸಹ-ಸ್ಥಿರ-ಪರಿತ್ರಸ-ವ್ರಜ-ಮಂಚನಾಕಿಂಚನೈಃ
ಅನೋಕಹ-ಬೃಹಸ್ಪತಿ-ಪ್ರಬಲ-ವಿಕ್ಲಬ-ಪ್ರಕ್ರಿಯಮ್ |
ಇದಂ ಸದಸದಾತ್ಮನಾ ನಿಖಿಲಮೇವ ನಿಮ್ನೋನ್ನತಂ
ಕಟಾಕ್ಷ-ತದುಪೇಕ್ಷಯೋಸ್ತವ ಹಿ ಲಕ್ಷ್ಮಿ ತತ್ತಾಂಡಮ್ ||೫||

ಹೇ! ಲಕ್ಷ್ಮಿ,ಸ್ಥಾವರಹಾಗೂ,ಜಂಗಮ,ಸ್ಥಿತಿವಂತ ಮತ್ತು ದರಿದ್ರ,ಬೃಹಸ್ಪತಿ ಮತ್ತು ವನಸ್ಪತಿ,ಬಲಶಾಲಿ ಮತ್ತು ದುರ್ಬಲ ಈ ರೀತಿಯಾಗಿ ಸದಸದ್ರೂಪದಲ್ಲಿರುವ ಹಾಗೂ ಉಚ್ಛ ನೀಚ ಭಾವನೆಗಳನ್ನು ಹೊಂದಿರುವ ಈ ಸಮಸ್ತ ಭೂಮಂಡಲವು ನಿನ್ನ ಕರುಣೆಯಕುಡಿಗಣ್ಣೋಟವಿಲ್ಲದಿರುವ ಮತ್ತು ಕರುಣಾಕಟಾಕ್ಷದ ಫಲವಾಗಿದೆ.

ಯದ್ದೂರೇ ಮನಸೋ ಯದೇವ ತಮಸಃ ಪಾರೇ ಯದತ್ಯದ್ಭುತಂ
ಯತ್ಕಾಲಾದಪಚೇಲಿಮಂ ಸುರಪುರೀ ಯದ್ಗಚ್ಛತೋ ದುರ್ಗತಿಃ |
ಸಾಯುಜ್ಯಸ್ಯ ಯದೇವ ಸೂತಿರಥವಾ ಯದ್ದುರ್ಗ್ರಹಂ ಮದ್ಗಿರಾಂ
ತದ್ವಿಷ್ಣೋಃ ಪರಮಂ ಪದಂ ತವ ಕೃತೇ ಮಾತಃ ಸಮಾಮ್ನಾಸಿಷುಃ ||೬||

ಯಾವುದು ಮಾತು ಮನಸ್ಸುಗಳಿಗೆ ಕಾಣದಿರುವುದೋ, ಯಾವುದು ಕತ್ತಲಿನ ಆಚೆಗಿರುವುದೋ,ಯಾವುದು ಅತಿ ಭಯಂಕರವೋ,ಯಾವುದರ ಮೇಲೆ ವೇಳೆ ಪರಿಣಾಮ ಬೀರಲು ಸಾಧ್ಯವಾಗುವುದಿಲ್ಲವೋ,ಯಾವ ಜಾಗಕ್ಕೆ ಹೋಗುವವರಿಗೆ ಇಂದ್ರನ ನಗರಿಯೂ ದುರ್ಗತಿಯ ಅನುಭವನ್ನು ಒದಗಿಸುವುದೋ, ಯಾವುದು ಪರಮ ಸಾಯುಜ್ಯದ ಉಗಮ ಸ್ಥಾನವೋ,ಅಂತಹಾ ಮಹಾವಿಷ್ಣುವಿನ ಪರಮಪದವು ನಿನಗೋಸ್ಕರವೆಂದು ವೇದಶಾಸ್ತ್ರಗಳು ಹೇಳುತ್ತಿವೆಯಮ್ಮಾ!

ಮಾತರ್ಮೈಥಿಲಿ ರಾಕ್ಷಸೀಸ್ತ್ವಯಿ ತದೈವಾರ್ದ್ರಾಪರಾಧಾಸ್ತ್ವಯಾ
ರಕ್ಷಂತ್ಯಾ ಪವನಾತ್ಮಜಾಲ್ಲಘುತರಾ ರಾಮಸ್ಯ ಗೋಷ್ಟೀ ಕೃತಾ |
ಕಾಕಂ ತವ ಚ ವಿಭೀಷಣಂ ಶರಣಮಿತ್ಯುಕ್ತಿಕ್ಷಮೌ ರಕ್ಷತಃ
ಸಾ ನಃ ಸಾಂದ್ರಮಹಾಗಸಃ ಸುಖಯತು ಕ್ಷಾಂತಿಸ್ತವಾಸ್ಸ್ಕಸ್ಮಿಕೀ ||೭||

ಮಾತೆ ಮೈಥಿಲಿಯೇ; ನವನವೀನ ಅಪರಾಧಗಳನ್ನು ಮಾಡುತ್ತಲಿದ್ದ ರಕ್ಕಸಿಯರನ್ನು ನಾಶಪಡಿಸಲು ಹನುಮನು ಇಚ್ಚಿಸಿದಾಗ, ನೀನು ಅವರನ್ನು ರಕ್ಷಿಸಿ ರಾಮನ ಸಹವಾಸವನ್ನೂ ಹಗುರವಾಗಿ ಭಾವಿಸಿದೆ.ಏಕೆಂದರೆ "ನಿನಗೆ ಶರಣು ಬಂದಿರುವೆ"ಎಂದಾಕ್ಷಣ ಕಾಕಾಸುರನನ್ನೂ ವಿಭೀಷಣನನ್ನೂ ಶ್ರೀರಾಮನು ರಕ್ಷಿಸಿದ. ಅಂತಹಾ ನಿನ್ನ ಅಕಸ್ಮಾತ್ತಾದ ಮನ್ನಿಸುವ ಗುಣವು ನಮ್ಮೆಲ್ಲರನ್ನು ಸುಖಿಗಳಾಗಿ ಬಾಳುವಂತೆ ಮಾಡಲಿ.

ಮಾತರ್ಲಕ್ಷ್ಮಿ ಯಥೈವ ಮೈಥಿಲ-ಜನಸ್ತೇನಾಧ್ವನಾ ತೇ ವಯಂ
ತ್ವದ್ದಾಸ್ಯೈಕ-ರಸಾಭಿಮಾನ-ಸುಭಗೈರ್ಭಾವೈರಿಹಾಮುತ್ರ ಚ |
ಜಾಮಾತಾ ದಯಿತಸ್ತವೇತಿ ಭವತೀಸಂಬಂಧ-ದೃಷ್ಟ್ಯಾಹರಿಂ
ಪಶ್ಯೇಮ ಪ್ರತಿಯಾಮ ಯಾಮ ಚ ಪರೀಚಾರಾನ್ ಪ್ರಹ್ಯಷ್ಯೇಮ ಚ ||೮||

ಅಮ್ಮಾ! ಮಾತೆ ಲಕ್ಷ್ಮೀದೇವಿಯೇ; ಮಿಥಿಲಾನಗರಿಯ ಪ್ರಜೆಗಳು ನಿನಗೆ ಎಂತು ಸೇರಿದವರಾಗಿರುವರೋ,ನಿನ್ನ ಸೇವೆಯಲ್ಲಿ ಇರುವ ಶ್ರೇಷ್ಠವಾದ ಶ್ರದ್ಧೆಯಿಂದಲೂ,ನಿನ್ನ ಮೇಲಿರುವ ತಾದಾತ್ಮ್ಯ ಗೌರವದಿಂದ ಮನ್ನಣೆ ಪಡೆಯುವ ಇಂಗಿತವನ್ನು ಹೊಂದಿದರೋ ಅದೇ ತೆರನಾಗಿ ನಾವು ಕೂಡಾ ನಿನ್ನವರು. ನಿನ್ನ ಸಂಪರ್ಕದ ಉದ್ದೇಶದಿಂದ ನಾವು ಶ್ರೀಹರಿಯನ್ನು ಇಲ್ಲಿಯೂ ಶಾಶ್ವತವಾದ ದಿವ್ಯ ಶಕ್ತಿಯಲ್ಲಿ "ನಿನ್ನ ಪತಿಯು ನಮ್ಮ ಅಳಿಯನು" ಎಂದು ಕಾಣುತ್ತಿರುವೆವು.ಮತ್ತು ಆತನಲ್ಲಿ ಶರಣಾಗಿ ಸೇವೆಯನ್ನು ಮಾಡುತ್ತಾ ಸಂತಸವನ್ನು ಹೊಂದುತ್ತಿರುವೆವು.

ಪಿತೇವ ತ್ವತ್ಪ್ರೇಯಾನ್ ಜನನಿ ಪರಿಪೂರ್ಣಾಗಸಿ ಜನೇ
ಹಿತಸ್ರೋತೋ ವೃತ್ತ್ಯಾ ಭವತಿ ಚ ಕದಾಚಿತ್ ಕಲುಷಧೀಃ |
ಕಿಮೇತತ್ ನಿರ್ದೋಷಃ ಕ ಇಹ ಜಗತೀತಿ ತ್ವಮುಚಿತೈಃ
ಉಪಾಯೈರ್ವಿಸ್ಮಾರ್ಯ ಸ್ವಜನಯಸಿ ಮಾತಾ ತದಸಿ ನಃ ||೯||

ಹೇ! ತಾಯಿ; ನಿನಗೆ ಮೆಚ್ಚಿನವನಾದ ಶ್ರೀಮನ್ನಾರಾಯಣನು ಕೆಲವೊಮ್ಮೆ ತಪ್ಪು ಮಾಡಿದವರಾದ ನಮ್ಮ ಬಗ್ಗೆ ಕೋಪಿಸಿಕೊಳ್ಳುತ್ತಾನೆ. ಆಗ ನೀನು ಜಗತ್ತಿನಲಿ ತಪ್ಪು ಮಾಡದವರು ಯಾರೂ ಇಲ್ಲ ಎಂದು ತಕ್ಕುದಾದ ಮಾತುಗಳಿಂದಲೂ ಉಪಾಯದಿಂದಲೂ ನಮ್ಮ ದೋಷಗಳನ್ನು ಮರೆಯುವ ಹಾಗೆ ಮಾಡುವುದಲ್ಲದೆ ನಮ್ಮನ್ನು ನಿನ್ನವರೆಂದು ಸ್ವೀಕರಿಸುತ್ತಿರುವಿ. ಆದ ಕಾರಣದಿಂದ ನೀನು ನಮಗೆ ಸಂಶಯಾತೀತವಾಗಿ ಮಾತೃ ರೂಪಿಯಾಗಿರುವೆ.

ಔದಾರ್ಯ-ಕಾರುಣಿಕತಾಸ್ಸ್ಶ್ರಿತವತ್ಸಲತ್ವ-
ಪೂರ್ವೇಷು ಸರ್ವಮತಿಧಾಯಿತಮತ್ರ ಮಾತಃ |
ಶ್ರೀರಂಗಧಾಮ್ನಿ ಯದುತಾನ್ಯದುದಾಹರಂತಿ
ಸೀತಾವತಾರ-ಮುಖಮೇತದಮುಷ್ಯ ಯೋಗ್ಯಮ್ ||೧೦||

ತಾಯೇ! ನಿನ್ನ ಗುಣಗಳಾದ ಔದಾರ್ಯ,ಕಾರುಣ್ಯ ಭಾವ,ಆಶ್ರಿತರಬಗೆಗಿನ ವಾತ್ಸಲ್ಯತೆ, ಇತ್ಯಾದಿಗಳು ಆ ಶ್ರೀರಂಗಧಾಮದ ಮೂರ್ತ್ಯಾವತಾರದಲ್ಲಿ ಶ್ರೇಷ್ಠತೆಯನ್ನು ಪಡೆದಿವೆ. ಇದಕ್ಕಿಂತ ವಿಭಿನ್ನವಾದ ಸೀತಾವತಾರವೇ ಆದಿಯಾದ ಅವತಾರಗಳನ್ನು ಪ್ರತ್ಯೇಕವಾಗಿ ಹೇಳಿದ್ದರೆ ಅವೆಲ್ಲವೂ ಆ ಮೂರ್ತ್ಯಾವತಾರಕ್ಕೆ ಯೋಗ್ಯವಾದವುಗಳೇ ಆಗಿವೆ.
_______________________________________________________________
|| ಇತಿ ಶ್ರೀಲಕ್ಷ್ಮೀ ಗುಣರತ್ನಕೋಶಮ್ ||

April 28, 2020

ಗಣಪತಿ ಹಾಗು ಸರಸ್ವತಿ ಪ್ರಾರ್ಥನ ಘನಾಪಾಠ

ಣೇಶಾಯ’ ನಮಃ | ಸ್ವತ್ಯೈ ನಮಃ | ಶ್ರೀ ಗುರುಭ್ಯೋ ನಮಃ |

ಓಂ ಣಾನಾ”ಮ್ ತ್ವಾ ಣಪ’ತಿಗ್‍ಮ್ ಹವಾಮಹೇ ವಿಂ ಕ’ವೀನಾಮ್ ಉಮಶ್ರ’ವಸ್ತವಮ್ | ಜ್ಯೇಷ್ಠರಾಜಂ ಬ್ರಹ್ಮ’ಣಾಂ ಬ್ರಹ್ಮಣಸ್ಪ ಆ ನಃ’ ಶೃಣ್ವನ್ನೂತಿಭಿ’ಸ್ಸೀ ಸಾದ’ನಮ್ ||

ಪ್ರಣೋ’ ದೇವೀ ಸರ’ಸ್ವತೀ | ವಾಜೇ’ಭಿರ್ ವಾಜಿನೀವತೀ | ಧೀನಾಮ’ವಿತ್ರ್ಯ’ವತು ||


ಹರಃ ಓಂ ||

ಘನಾಪಾಠಃ
ಣಾನಾ”ಮ್ ತ್ವಾ ಣಾನಾ”ಮ್ ಣಾನಾ”ಮ್ ತ್ವಾ ಣಪ’ತಿಂ ಣಪ’ತಿಂ ತ್ವಾ ಣಾನಾಂ” ಣಾನಾಂ” ತ್ವಾ ಣಪ’ತಿಮ್ ||

ತ್ವಾ ಣಪ’ತಿಂ ತ್ವಾತ್ವಾ ಣಪ’ತಿಗ್‍ಮ್ ಹವಾಮಹೇ ಹವಾಮಹೇ ಣಪ’ತಿಂ ತ್ವಾತ್ವಾ ಗಣಪ’ತಿಗ್‍ಮ್ ಹವಾಮಹೇ | ಣಪ’ತಿಗ್‍ಮ್ ಹವಾಮಹೇ ಹವಾಮಹೇ ಣಪ’ತಿಂ ಣಪ’ತಿಗ್‍ಮ್ ಹವಾಮಹೇ ವಿನ್ಕವಿಗ್‍ಮ್ ಹ’ವಾಮಹೇ ಣಪ’ತಿಂ ಣಪ’ತಿಗ್‍ಮ್ ಹವಾಮಹೇ ವಿಮ್ | ಣಪ’ತಿಮಿತಿ’ಣ-ತಿಮ್ ||

ವಾಹೇ ವಿಂ ವಿಗ್ ಹ’ವಾಮಹೇ ಹವಾಮಹೇ ವಿಂ ಕ’ವೀನಾನ್ಕ’ವೀನಾಂ ವಿಗ್ಂ ಹ’ವಾಮಹೇ ಹವಾಮಹೇ ವಿನ್ಕ’ವೀನಾಮ್ ||

ವಿನ್ಕ’ವೀನಾನ್ಕವೀನಾಂ ವಿನ್ಕವಿಂ ಕ’ವೀನಾಮು’ಮಶ್ರ’ವಸ್ತಮ ಮುಮಶ್ರ’ವಸ್ತಮ ನ್ಕವೀನಾಂ ವಿನ್ಕವಿಂ ಕ’ವೀನಾಮು’ಮಶ್ರ’ವಸ್ತಮಮ್ ||

ವೀನಾಮು’ಮಶ್ರ’ವ ಸ್ತಮಮುಮಶ್ರ’ವಸ್ತಮಂ ಕವೀನಾ ನ್ಕ’ವೀನಾ ಮು’ಮಶ್ರ’ವಸ್ತಮಮ್ | ಮಶ್ರ’ವಸ್ತ ಮಿತ್ಯು’ಮಶ್ರ’ವಃ-ಮ್ ||

ಜ್ಯೇಷ್ಟರಾಜಂ ಬ್ರಹ್ಮ’ಣಾಂ ಬ್ರಹ್ಮ’ಣಾಂ ಜ್ಯೇಷ್ಠರಾಜಂ’ ಜ್ಯೇಷ್ಠರಾಜಂ’ ಜ್ಯೇಷ್ಠರಾಜಂ ಬ್ರಹ್ಮ’ಣಾಂ ಬ್ರಹ್ಮಣೋ ಬ್ರಹ್ಮಣೋ ಬ್ರಹ್ಮ’ಣಾಂ ಜ್ಯೇಷ್ಠರಾಜಂ’ ಜ್ಯೇಷ್ಠರಾಜಂ’ ಜ್ಯೇಷ್ಠರಾಜಂ ಬ್ರಹ್ಮ’ಣಾಂ ಬ್ರಹ್ಮಣಃ | ಜ್ಯೇಷ್ಠರಾಮಿತಿ’ಜ್ಯೇಷ್ಠ ರಾಜಮ್” ||

ಬ್ರಹ್ಮ’ಣಾಂ ಬ್ರಹ್ಮಣೋ ಬ್ರಹ್ಮಣೋ ಬ್ರಹ್ಮ’ಣಾಂ ಬ್ರಹ್ಮ’ಣಾಂ ಬ್ರಹ್ಮಣಸ್ಪತೇ ಪತೇಬ್ರಹ್ಮಣೋ ಬ್ರಹ್ಮ’ಣಾಂ ಬ್ರಹ್ಮ’ಣಾಂ ಬ್ರಹ್ಮಣಸ್ಪತೇ ||

ಬ್ರಹ್ಮಸ್ಪತೇ ತೇ ಬ್ರಹ್ಮಣೋ ಬ್ರಹ್ಮಸ್ಪ ಆಪ’ತೇ ಬ್ರಹ್ಮಣೋ ಬ್ರಹ್ಮಣಸ್ಪ ಆ |  ಆ ಪ’ತೇಪ ಆನೋ’ ಆಪ’ತೇ ಪ ಆನಃ’ ||

ಆನೋ’ ಆನ’ಶ್ಶೃಣ್ವನ್ ಛೃಣ್ವನ್ನ ಆನ’ಶ್ಶೃಣ್ವನ್ |  ಶ್ಶೃಣ್ವನ್ ಛೃಣ್ವನ್ನೋ’ನ ಶ್ಶೃಣ್ವನ್ನೂತಿಭಿ’ ರೂತಿಭಿಶ್ಶೃಣ್ವನ್ನೋ’ನ ಶ್ಶೃಣ್ವನ್ನೂತಿಭಿಃ’ ||

ಶ್ಶೃಣ್ವನ್ನೂತಿಭಿ’ ರೂತಿಭಿಶ್ಶೃಣ್ವನ್ ಛೃಣ್ವನ್ನೂತಿಭಿ’ಸ್ಸೀದ ಸೀದೋತಿಭಿ’ಶ್ಶೃಣ್ವನ್ ಛೃಣ್ವನ್ನೂತಿಭಿ’ಸ್ಸೀದ ||

ತಿಭಿ’ಸ್ಸೀದ ಸೀದೋತಿಭಿ’ ರೂತಿಭಿ’ಸ್ಸೀ ಸಾದ’ಗ್ಂ ಸಾದ’ನಗ್ಂ ಸೀದೋತಿಭಿ’ರೂತಿಭಿ’ಸ್ಸೀ ಸಾದ’ನಮ್ | ತಿಭಿ ರಿತ್ಯೂತಿ-ಭಿಃ ||

ಸೀಸಾದ’ಗ್ಂ ಸಾದ’ನಗ್ಂ ಸೀದ ಸೀ ಸಾದ’ನಮ್ | ಸಾದ’ಮಿತಿ ಸಾದ’ನಮ್ ||

ಪ್ರಣೋ’ ನಃ ಪ್ರಪ್ರಣೋ’ ದೇವೀ ದೇವೀ ನಃ ಪ್ರಪ್ರಣೋ’ ದೇವೀ | ನೋ’ ದೇವೀ ದೇವೀ ನೋ’ನೋ ದೇವೀ ಸರ’ಸ್ವತೀ ಸರ’ಸ್ವತೀ ದೇವೀ ನೋ’ ನೋ ದೇವೀ ಸರ’ಸ್ವತೀ ||

ದೇವೀ ಸರ’ಸ್ವತೀ ಸರ’ಸ್ವತೀ ದೇವೀ ದೇವೀ ಸರ’ಸ್ವತೀ ವಾಜೇಭಿರ್ವಾಜೇ’ಭಿ ಸ್ಸರ’ಸ್ವತೀ ದೇವೀ ದೇವೀ ಸರ’ಸ್ವತೀ ದೇವೀ ಸಸ್ವತೀ ವಾಜೇ’ಭಿಃ ||

ಸರ’ಸ್ವತೀ ವಾಜೇ’ಭಿ ರ್ವಾಜೇ’ಭಿ ಸ್ಸರ’ಸ್ವತೀ ಸರ’ಸ್ವತೀ ವಾಜೇ’ಭಿ ರ್ವಾಜಿನೀ’ವತೀ ವಾಹಿನೀ’ವತೀ ವಾಜೇ’ಭಿ ಸ್ಸರ’ಸ್ವತೀ ಸರ’ಸ್ವತೀ ವಾಜೇ’ಭಿ ರ್ವಾಜಿನೀ’ವತೀ ||

ವಾಜೇ’ಭಿರ್ವಾಜಿನೀ’ವತೀ ವಾಜಿನೀ’ವತೀ ವಾಜೇ’ಭಿರ್ವಾಜೇ’ಭಿರ್ವಾಜಿನೀ’ವತೀ | ವಾಜಿನೀ’ತೀತಿ’ ವಾಜಿನೀ’ವತೀ ವಾಜೇ’ಭಿರ್ವಾಜೇ’ಭಿರ್ವಾಜಿನೀ’ವತೀ | ವಾಜಿನೀ’ತೀತಿ’ ವಾಜಿನೀ’-ತೀ ||

ಧೀನಾ ಮ’ವಿತ್ರ್ಯ’ವಿತ್ರೀ ಧೀನಾಂ ಧೀನಾಮ’ವಿತ್ರ್ಯ’ ವತ್ವ ವತ್ವವಿತ್ರೀ ಧೀನಾಂ ಧೀನಾಮ’ವಿತ್ರ್ಯ’ವತು | ವಿತ್ರ್ಯ’ವತ್ವವ ತ್ವವಿತ್ರ್ಯ’ವಿ ತ್ರ್ಯ’ವತು | ತ್ವಿತ್ಯ’ವತು ||

ಓಂ ಶಾಂತಿ ಶಾಂತಿ ಶಾಂತಿಃ  (ವೈದಿಕ ವಿಜ್ಞಾನಂ)

April 26, 2020

|| ಪುರಾಣೋಕ್ತ ಶ್ರೀ ಸರಸ್ವತೀ ಸ್ತೋತ್ರಗಳು ||

 || ಪುರಾಣೋಕ್ತ ಶ್ರೀ ಸರಸ್ವತೀ ಸ್ತೋತ್ರಮ್ ||

ಜ್ಞಾನಂ ದೇಹಿ ಸ್ಮೃತಿಂ ದೇಹಿ ವಿದ್ಯಾಂ ವಿದ್ಯಾಧಿ ದೇವತೇ |
ಪ್ರತಿಷ್ಠಾಂ ಕವಿತಾಂ ದೇಹಿ ಶಕ್ತಿಂ ಶಿಷ್ಯ ಪ್ರಭೋಧಿಕಾಮ್ ||
ಸ್ಮೃತಿಶಕ್ತಿ: ಜ್ಞಾನಶಕ್ತಿ: ಬುದ್ಧಿಶಕ್ತಿ: ಸ್ವರೂಪಿಣೀ |
ಪ್ರತಿಭಾ ಕಲ್ಪನಾಶಕ್ತಿ: ಯಾ ತಸ್ಸೈ ನಮೋ ನಮ: ||
                               [-ಬ್ರಹ್ಮ ವೈವರ್ತ ಪುರಾಣ; ; ]
ज्ञानम् देहि स्मृतिम् देहि विद्याम् विद्यादि देवते |
प्रतिष्ठाम कविताम् देहि शक्तिम्  शिष्य प्रबोधिकाम् ||
स्मृतिशक्तिः  ज्ञान:शक्तिः  बुद्धि:शक्तिः स्वारूपिणि |
प्रतिभा कल्पना: शक्तिः  या च तस्यै नमो नम: ||
                                 [ ब्रह्म वैवर्त पुराण ; 2-4.]

ಭಾವಾರ್ಥ:-ಹೇ! ವಿದ್ಯಾಧಿಮಾತೆಯೇ; ನನಗೆ ಜ್ಞಾನವನ್ನು ಕರುಣಿಸು. ನೆನಪಿನ ಶಕ್ತಿಯನ್ನು ಅನುಗ್ರಹಿಸುವಿದ್ಯೆ,ಕವಿತಾಶಕ್ತಿ, ಕೀರ್ತಿ, ಶಿಷ್ಯರಲ್ಲಿ ಅರಿವು ಮೂಡಿಸುವ ಶಕ್ತಿ, ಇವೆಗಳೆಲ್ಲವನ್ನೂ ದಯಪಾಲಿಸುತಾಯಿಯೇಯಾರು ಸ್ಮೃತಿಶಕ್ತಿಯೋ,ಯಾರು ಜ್ಞಾನ ಶಕ್ತಿಯೋ, ಬುದ್ಧಿಶಕ್ತಿಯೋ, ಪ್ರತಿಭಾಶಕ್ತಿಯೋ, ಕಲ್ಪನಾ ಶಕ್ತಿಯೋ  ಅಂತಹಾ ಮಹಾಮಾತೆ ಶಾರದೆಗೆ  ಪುನ:ಪುನ: ನನ್ನ ನಮಸ್ಕಾರಗಳು

ಮನೋ ವೃತ್ತಿರಸ್ತು ಸ್ಮೃತಿಸ್ತೇ ಸಮಸ್ತಾ
ತಥಾ ವಾಕ್ಪ್ರವೃತ್ತಿ: ಸ್ತುತಿಸ್ಸ್ಯಾನ್ಮಹೇಶಿ|
ಶರೀರಪ್ರವೃತ್ತಿ: ಪ್ರಣಾಮಕ್ರಿಯಾ ಸ್ಯಾತ್
ಪ್ರಸೀದ ಕ್ಷಮಸ್ವ ಪ್ರಭೋ ಸಂತತಂ ಮೇ ||
                        [-ಪ್ರಪಂಚ ಸಾರತಂತ್ರ , ,]

ಭಾವಾರ್ಥ:-ಹೇ! ಮಹೇಷಿ; ನನ್ನ ಮನೋವೃತ್ತಿಗಳೆಲ್ಲವೂ ನಿನ್ನ ಸ್ಮೃತಿಗಳಾಗಲಿ.ನನ್ನ ಮಾತಿನ ಒಲವುಗಳೆಲ್ಲವೂ  ನಿನ್ನದೇ ಸ್ತುತಿಗಳಾಗಲಿ. ನನ್ನ ಶರೀರದ ಸ್ವಭಾವಗಳೆಲ್ಲವೂ ನಿನಗೆನ್ನ ಪ್ರಣಾಮಗಳಾಗಲಿ. ಹೇ! ಮಾತೆ ಮಹೇಶ್ವರಿಯೇಪ್ರಸನ್ನಳಾಗು. ನನ್ನನ್ನು ಸದಾ ಕ್ಷಮಿಸುವವಳಾಗು.

ಅಮಲ ಕಮಲಾಧಿವಾಸಿನಿ
ಮನಸೋ ವೈಮಲ್ಯದಾಯಿನಿ ಮನೋಜ್ಞೇ |
ಸುಂದರಗಾತ್ರಿ ಸುಶೀಲೇ
ತವ ಚರಣಾಂಭೋರುಹಂ ನಮಾಮಿ ಸದಾ ||
                   [- ವಾಗೀಶ್ವರೀ ಸ್ತೋತ್ರ]

ಭಾವಾರ್ಥ:-ನಿರ್ಮಲವಾಗಿರುವ ತಾವರೆಯಲ್ಲಿ ನೆಲೆಸಿರುವ ಸರಸ್ವತಿಯೇ, ನನ್ನ ಮನಸ್ಸಿಗೆ ನಿರ್ಮಲತ್ವವನ್ನು ಕರುಣಿಸುವ  ಮನೋಜ್ಞರೂಪಿಣಿಯೇ, ಸುಶೀಲಳೂ ಸುಂದರಿಯೂ ಆಗಿರುವ ದೇವಿ ಸರಸ್ವತಿಯೇ, ನಾನು ಸದಾ ನಿನ್ನ ಅಡಿದಾವರೆಗಳಿಗೆ  ನಮಸ್ಕರಿಸುತ್ತೇನೆ.

ಪದ್ಮ ಪುರಾಣೋಕ್ತಂ -> |

{ದೇವಗುರುವಾಗಿರುವ ಬೃಹಸ್ಪತಿಯು ವಾಗ್ದೇವಿ ಶಾರದೆಯನ್ನು ತನ್ನ ವಾಕ್ಸಿದ್ಧಿಗೋಸ್ಕರವಾಗಿ ಸ್ತುತಿಸುವ ಮೂಲಕ  ಒಲಿಸಿಕೊಂಡನೆಂಬ ಕಥಾನಕವು ಪದ್ಮಪುರಾಣದಲ್ಲಿದೆ. ಇದೇ ಸ್ತೋತ್ರವು ಕೆಲವು ಪಾಠಾಂತರಗಳಲ್ಲಿ ಶಿವ-ಪಾರ್ವತಿ ಸಂವಾದ  ಕಥಾನಕವುಳ್ಳ ರುದ್ರಯಾಮಳದಲ್ಲಿಯೂ ಇದೆ. ಇಲ್ಲಿ ಕಾಣಿಸಲಾಗಿರುವುದು ಪದ್ಮ ಪುರಾಣದಲ್ಲಿನ ಪಠ್ಯ}

ಶ್ರೀ: ||ಬೃಹಸ್ಪತಿರುವಾಚ----
ಸರಸ್ವತೀಂ ನಮಸ್ಯಾಮಿ ಚೇತನಾನಾಂ ಹೃದಿ ಸ್ಥಿತಾಂ |
ಕಂಠಸ್ಥಾಂ ಪದ್ಮಯೋನೇಸ್ತು ಹಿಮಾಕರ ಪ್ರಿಯಾಂ ಸದಾ ||||

ಭಾವಾರ್ಥ:-ಬೃಹಸ್ಪತಿಯು ನುಡಿಯುತ್ತಾನೆ--
ಸಮಸ್ತ ಜೀವಿಗಳಲ್ಲಿಯೂ ನೆಲೆಸಿರುವ ವಾಗ್ದೇವಿ ಸರಸ್ವತಿಗೆ ನಾನು ನಮಸ್ಕರಿಸುವೆ.ಬ್ರಹ್ಮನ ಕಂಠ ಪ್ರದೇಶದಲ್ಲಿ  ತಂಪಾದಕಿರಣಗಳುಳ್ಳುವಳಾದ ಆಕೆಯು ಪ್ರೀತಿಯುಳ್ಳವಳಾಗಿಸದಾ ನೆಲೆಸಿರುತ್ತಾಳೆ.

ಮತಿದಾಂ ವರದಾಂ ಶುದ್ಧಾಂ ವೀಣಾಹಸ್ತ ವರಪ್ರದಾಂ |
ಐಂ ಐಂ ಮಂತ್ರ ಪ್ರಿಯಾಂ ಹ್ರೀಂ ಹ್ರಾಂ ಕುಮತಿದ್ವಂಸಕಾರಿಣೀಮ್ ||||

ಭಾವಾರ್ಥ:-ಸಮಸ್ತರಿಗೂ ಸನ್ಮತಿಯನ್ನು ಈಯುವ,ವರದಾಯಿನಿಯಾಗಿ,ಪರಮಪವಿತ್ರಳೂ ಆಗಿ,ವೀಣೆಯನ್ನು ಕೈಯಲ್ಲಿ  ಧರಿಸಿ, ಐಂ, ಬೀಜಾಕ್ಷರದ ಮೂಲಕ ಸಿದ್ಧಿಯನ್ನು ಕರುಣಿಸುತ್ತಾ ಹ್ರೀಂ ಹಾಗೂ ಹ್ರಾಂ ಬೀಜಾಕ್ಷರ ಮಂತ್ರಗಳಿಂದ ಮನುಜರ  ಕುಬುದ್ಧಿಯನ್ನು ನಾಶಗೊಳಿಸುತ್ತಾ ಇರುವ ಸರಸ್ವತೀ ದೇವಿಗೆ ಪ್ರಣಾಮಗಳು.

ಸುಪ್ರಕಾಶಾಂ ನಿರಾಲಂಬಾಂ ಅಜ್ಞಾನ ತಿಮಿರಾಪಹಾಂ |
ಶುಕ್ಲಾಂ ಮೋಕ್ಷಪ್ರದಾಂ ರಮ್ಯಾಂ ಶುಭಾಂಗಾಂ ಶೋಭನಪ್ರದಾಮ್ ||||

ಭಾವಾರ್ಥ:-ಅಜ್ಞಾನವನ್ನು ದೂರೀಕರಿಸಿ, ಜ್ಞಾನದ ಬೆಳಕನ್ನು ಒದಗಿಸುವ ಬಿಳಿಯವರ್ಣದಿಂದ ಕೂಡಿ  ಮೋಕ್ಷದಾಯಕಳಾಗಿಯೂ, ಮನೋಹರವಾಗಿರುವ ಸುಂದರವಾದ ಶರೀರವನ್ನು ಹೊಂದಿದಶುಭಪ್ರದಾಯಳಾಗಿರುವ ಸರಸ್ವತಿಗೆ  ನಾನು ನಮಸ್ಕರಿಸುವೆ.

ಪದ್ಮೋಪವಿಷ್ಠಾಂ ಕುಂಡಲಿನೀಂ ಶುಕ್ಲವರ್ಣಾಂ ಮನೋರಮಾಂ|
ಆದಿತ್ಯಮಂಡಲೇ ಲೀನಾಂ ಪ್ರಣಮಾಮಿ ಹರಿ ಪ್ರಿಯಾಮ್  ||||

ಭಾವಾರ್ಥ:-ಪದ್ಮಾಸನೆಯಾಗಿ, ಕುಂಡಲಿನೀ ಶಕ್ತಿಯನ್ನು ಹೊಂದಿ, ಬಿಳಿಯ ವರ್ಣವನಾಂತು, ಮನಸ್ಸಿಗೆ ಆನಂದವನ್ನು  ಒದಗಿಸುತ್ತಾ, ಸೂರ್ಯಮಂಡಲವಾಸಿಯಾಗಿ, ಮಹಾವಿಷ್ಣುವಿಗೆ ಪ್ರಿಯಳಾದವಳಾಗಿರುವ ಸರಸ್ವತೀದೇವಿಗೆ ನನ್ನ  ಪ್ರಣಾಮಗಳು.

ಇತಿ ಮಾಸಂ ಸ್ತುತಾಸ್ನೇನ ವಾಗೀಶೇನ ಮಹಾತ್ಮನಾ |
ಆತ್ಮಾನಂ ದರ್ಶಯಾ ಮಾಸ ಶರದಿಂದು ಸಮ ಪ್ರಭಾಮ್  ||||

ಭಾವಾರ್ಥ:- ರೀತಿಯಾಗಿ ಶ್ರೀಸರಸ್ವತೀದೇವಿಯನ್ನು ಒಂದು ತಿಂಗಳ ಕಾಲ ಪ್ರಾರ್ಥನೆಯನ್ನು ಮಾಡಿದ ನಂತರ ಬೃಹಸ್ಪತಿಗೆ  ವಾಗ್ದೇವಿಯು ಸಂತಸಗೊಂಡು ಒಲಿದು ಪ್ರತ್ಯಕ್ಷಳಾಗಿ ತನ್ನ ಅತ್ಯದ್ಭುತ ರೂಪವನ್ನು ಕಾಣಿಸಿದಳು.

ಸರಸ್ವತ್ಯುವಾಚ--
ವರಂ ವೃಣೀಷ್ಟ ಭದ್ರಂ ತೇ ಯಸ್ತೇ ಮನಸಿ ವರ್ತತೇ ||

ಬೃಹಸ್ಪತಿರುವಾಚ----
ವರದಾ ಯದಿ ಮೇ ದೇವಿ ಸಮ್ಯಕ್ ಜ್ಞಾನಂ ಪ್ರಯಚ್ಛಮೇ  ||||

ಸರಸ್ವತಿಯು ಹೇಳುವಳು "ಮಗೂ; ನಿನಗೇನು ಬೇಕಾಗಿದೆ; ಬೇಡಿಕೊ"
ಬೃಹಸ್ಪತಿ ಅನ್ನುತ್ತಾನೆ "ನನಗೆ ಪರಿಪೂರ್ಣವಾದಂತಹಾ ಜ್ಞಾನವನ್ನು ಅನುಗ್ರಹಿಸುವವಳಾಗು"

ಸರಸ್ವತ್ಯುವಾಚ---
ಇದಂ ತೇ ನಿರ್ಮಲಂ ಜ್ಞಾನಂ ಅಜ್ಞಾನ ತಿಮಿರಾಪಹಮ್ |
ಸ್ತೋತ್ರೇಣಾನೇನ ಮಾಂ ಸ್ರೌತಿ ಸಮ್ಯಗ್ವೇದವಿದೋ ನರ:
ಲಭತೇ ಪರಮಂ ಜ್ಞಾನಂ ಮಮ ತುಲ್ಯ ಪರಾಕ್ರಮಂ  ||||

ಸರಸ್ವತಿಯು ಅನ್ನುವಳು---
ಇದೋ ನೀನು ಬೇಡಿಕೊಂಡಂತೆ ನಿನಗೆ ಪರಿಪೂರ್ಣವಾಗಿರುವ ಜ್ಞಾನವನ್ನು ಅನುಗ್ರಹಿಸುತ್ತಿರುವೆ. ಜ್ಞಾನವನ್ನು  ಪಡೆದವನಾದ ನೀನು ನನಗೆ ಸರಿಸಾಟಿಯಾದ ಜ್ಞಾನಿಯಾಗುವೆ.

ತ್ರಿ ಸಂಧ್ಯಂ : ಪಠೇನ್ನಿತ್ಯಂ ಯಸ್ತ್ವಿದಂ ಜಪತೇ ಸದಾ |
ತೇಷಾಂ ಕಂಠೇ ಸದಾ ವಾಸಂ ಕರಿಷ್ಯಾಮಿ ಸಂಶಯ:  ||||

ಭಾವಾರ್ಥ:-ಯಾರು ನೀನು ಮಾಡುವ ಸ್ತೋತ್ರವನ್ನು  ದಿನದ ಮೂರು ಸಂಧ್ಯಾಕಾಲಗಳಲ್ಲಿಯೂ ಶ್ರದ್ಧಾಭಕ್ತಿಯಿಂದ  ಪಠಿಸುತ್ತಾರೋ,ಜಪಿಸುತ್ತಾರೋ ಅಂತಹವರ ಕಂಠದಲ್ಲಿ ನಾನು ಸದಾ ನೆಲೆಸಿರುತ್ತೇನೆ. ಇದು ನಿಸ್ಸಂಶಯ ಎಂಬುದಾಗಿ  ಬೃಹಸ್ಪತಿಗೆ ವಚನವನ್ನಿತ್ತಳು.

                 || ಇತಿ ಪುರಾಣೋಕ್ತ ಶ್ರೀ ಸರಸ್ವತೀ ಸ್ತೋತ್ರಮ್ ||

ಅಕ್ಷಯ ತೃತಿಯ

ಅಕ್ಷಯ ತದಿಗೆ


"ಅಕ್ಷಯ ತೃತೀಯ " ಬಂಗಾರ ಒಡವೆ ತಗೊಬೇಕು, ಉಂಗುರ ತಗೋಬೇಕು, ಬರೀ ಇದೇ ಎಲ್ಲಿ ನೋಡಿದರೂ..?

ಏನು ಅಕ್ಷಯವಾದರೆ ನಮ್ಮ ಜೀವನ ಚೆನ್ನಾಗಿರುತ್ತೆ ಅಂಥ ಸ್ವಲ್ಪ ಯೋಚನೆ ಮಾಡಿ..

  • ಮುಖ್ಯವಾಗಿ ಸ್ತ್ರೀಯರಿಗೆ ..

"ಅರಿಸಿನ, ಕುಂಕುಮ, ಹೂವು ಮೊದಲು ತಗೋಳಿ..!
ಇವು ಅಕ್ಷಯವಾಗಬೇಕು, ಇದರ ಬಲ ಅಕ್ಷಯವಾಗಬೇಕು..
ಇವು ಆಭರಣಗಳು ನಿಮಗೆ..

ಮನೆಯಲ್ಲಿ ದೇವರ ಪೂಜೆ ಮಾಡಿ, ದೇವಿ ಪೂಜೆ ಮಾಡಿ , ತಾಂಬೂಲದಾನ ಮಾಡಿ ತುಂಬಾ ತುಂಬಾ ಒಳ್ಳೆಯದು....

  • ಪುರುಷರಿಗೆ........

ಯಾರಾದರು ಬಡಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಪುಸ್ತಕ ಕೊಡಿಸಿ ಅದರ ಶಕ್ತಿ ನಿಮ್ಮ ಮಕ್ಕಳಿಗೆ ಬರುತ್ತೆ, ನಿಮ್ಮ ಮಕ್ಕಳ ವಿದ್ಯಾಭ್ಯಾಸ ಹೆಚ್ಚಾಗುತ್ತೆ..

ಹೂವು, ಹಣ್ಣು, ಹಾಲು, ಜೇನುತುಪ್ಪ,  ವಸ್ತ್ರ ದೇವಾಲಯಕ್ಕೆ ಕೊಟ್ಟು ಪೂಜೆ ಮಾಡಿಸಿ, ಈ ವಸ್ತುಗಳು ನಿಮ್ಮ ಮನೆಯಲ್ಲಿ ಅಕ್ಷಯವಾಗಿ ಸರ್ವದಾರಿದ್ರ್ಯ ನಿವಾರಣೆಯಾಗುತ್ತದೆ ..

ಯಾರಾದರೂ ಬಡವರಿಗೆ ಅನ್ನದಾನ ಮಾಡಿ ಮನೆಯಲ್ಲಿ " ಅನ್ನಪೂರ್ಣೇಶ್ವರೀ ಅಕ್ಷಯವಾಗುತ್ತಾರೆ..

April 24, 2020

ವೇದಮಂತ್ರವು ಯಾವುದೋ ಒಂದು ಜಾತಿಗಾಗಿ ಹೇಳಿದೆಯೇ?

ಮನುಷ್ಯನ ಜೀವನಕ್ಕೆ ಉತ್ಸಾಹ ತುಂಬುವ ಒಂದು ವೇದ ಮಂತ್ರದ ಬಗ್ಗೆ ಇಂದು ವಿಚಾರ ಮಾಡೋಣ.

ಶುಕ್ರೋsಸಿ ಭ್ರಾಜೋsಸಿ ಸ್ವರಸಿ ಜ್ಯೋತಿರಸಿ|

ಆಪ್ನುಹಿ ಶ್ರೇಯಾಂಸಮತಿ ಸಮಂ ಕ್ರಾಮ||

[ಅಥರ್ವ: -೧೧-]

ಅರ್ಥ:

ಶುಕ್ರ: ಅಸಿ= ಮಾನವ ನೀನು ನಿರ್ಮಲ ನಾಗಿದ್ದೀಯೇ

ಭ್ರಾಜ: ಅಸಿ = ನೀನು ತೇಜಸ್ವಿಯಾಗಿದ್ದೀಯೇ

ಸ್ವ: ಅಸಿ = ಸ್ವಸಾಮರ್ಥ್ಯಶಾಲಿಯಾಗಿದ್ದೀಯೇ

ಜ್ಯೋತಿ: ಅಸಿ = ಜ್ಞಾನ ಪ್ರಕಾಶದಿಂದ ಬೆಳಗುವನಾಗಿದ್ದೀಯೇ

ಶ್ರೇಯಾಂಸಂ ಆಪ್ನುಹಿ = ಶ್ರೇಯಸ್ಸನ್ನು ಸಾಧಿಸಿಕೋ

ಸಮಂ ಅತಿಕ್ರಾಮ = ಸಮನಾದವನನ್ನು ಮೀರಿಸಿ ಮುಂದೆ ನಡೆ

     ಮಂತ್ರದ ಹಿರಿಮೆ ನೋಡಿ, ಹೇಗಿದೆ! ಮನುಷ್ಯನನ್ನು ನೀನು ಪಾಪಿಎನಲಿಲ್ಲ. ಬದಲಿಗೆ ನೀನು ನಿರ್ಮಲನಾಗಿದ್ದೀಯೆ, ನೀನು ಪ್ರಕಾಶಮಾನವಾಗಿದ್ದೀಯೇ, ನೀನು ತೇಜಸ್ವಿಯಾಗಿದ್ದೀಯೇನೀನು ಸ್ವಸಾಮರ್ಥ್ಯಶಾಲಿಯಾಗಿದ್ದೀಯೇನೀನು ಜ್ಞಾನ ಪ್ರಕಾಶದಿಂದ ಬೆಳಗುವನಾಗಿದ್ದೀಯೇ,  ಶ್ರೇಯಸ್ಸನ್ನು ನೀನೇ ಸ್ವತ: ಸಾಧಿಸಿ ಅಧ್ಯಾತ್ಮ ಮಾರ್ಗದಲ್ಲಿ ನಿನ್ನ ಸಮ ಇರುವವರನ್ನು ಮೀರಿಸಿ ಮುಂದೆ ನಡೆ. ವೇದದ ಮಂತ್ರವನ್ನು ಅರ್ಥಮಾಡಿಕೊಳ್ಳುವಾಗ ಒಮ್ಮೆ ನನ್ನ ಮೈ ಝುಮ್ ಎಂದಿತು. ಮಂತ್ರದ ಅರ್ಥವನ್ನು ಮನಸ್ಸಿಟ್ಟು ಓದಿ ನಿಮಗೂ ಹಾಗನ್ನಿಸದೆ ಇರದು.

     ಮಂತ್ರವು ಯಾವುದೋ ಒಂದು ಜಾತಿಗಾಗಿ ಹೇಳಿದೆಯೇ? ವೇದ ಮಂತ್ರಗಳು ಸಕಲ ಮಾನವನ ಅಭ್ಯುದಯಕ್ಕಾಗಿ ಇರುವ  ಮಾರ್ಗದರ್ಶನ. ಒಂದು ವೇಳೆ ಒಬ್ಬ ಮನುಷ್ಯನು ಇನ್ನೊಬ್ಬನಿಗಿಂತ     ಅವನು ಕೆಳಗಿದ್ದೀನಿ, ಎಂದು ಕೀಳರಿಮೆ ಹೊಂದಿದ್ದರೆ, ಅವನಿಗೆ ಎಂತಾ ಆತ್ಮವಿಶ್ವಾಸವನ್ನು ತುಂಬುತ್ತದೆಂದರೆ ನಿನ್ನಲ್ಲಿ ಚೈತನ್ಯವಿದೆ, ನೀನು ಸಾಮರ್ಥ್ಯವನ್ನು ಹೊಂದಿದ್ದೀಯ, ಮುನ್ನಡೆ ಎಂದು ಹುರಿದುಂಬಿಸುತ್ತದೆ.

    ನೀನು ಪಾಪಿ! ನಿನಗೆ ಪುಣ್ಯ  ಸಿಗಬೇಕಾದರೆ ಇಂತಾ ದೇವರನ್ನು ನಂಬು, ಗ್ರಂಥವನ್ನು ಓದು, ಪ್ರವಾದಿಯನ್ನು ನಂಬು ಎಂದು ಹೇಳುವ, ಮನುಷ್ಯನನ್ನು ಭೀತಿಯಲ್ಲಿ ತಳ್ಳುವ ಮತಗಳ ಬಗ್ಗೆ ನಮಗೆ ಅರಿವಿದೆ. ಆದರೆ ಹಾಗೆ   ವೇದವು  ಹೇಳಲೇ ಇಲ್ಲ. ವೇದವನ್ನು ನಂಬು ಎಂದೂ ಕೂಡ ವೇದವು ಹೇಳಲಿಲ್ಲ. ಮನುಷ್ಯನು ಯಾವ ಮಾರ್ಗದಲ್ಲಿ ನಡೆಯಬೇಕೆಂಬುದನ್ನು ವೇದಮಂತ್ರ ಒಂದು ಹೇಳುತ್ತದೆ ಯಾವುದು ಪ್ರಾಚೀನದಿಂದ ಬಂದಿದೆಯೋ, ಯಾವುದು ಇಂದಿನ ನವೀನ ಜ್ಞಾನವಿದೆಯೋ, ಯಾವುದು ಶಾಸ್ತ್ರಗಳಲ್ಲಿ ಹೇಳಿದೆಯೋ, ಯಾವುದು ನಿನ್ನ ಅಂತರಂಗದಲ್ಲಿ ಹುಟ್ಟುತ್ತದೋ, ಎಲ್ಲವಕ್ಕೂ ಕಿವಿಗೊಡು, ಆದರೆ ಯಾವುದು ನಿನ್ನನ್ನು  ಕಲ್ಯಾಣಮಾರ್ಗದಲ್ಲಿ ಕರೆದುಕೊಂಡು ಹೋಗಬಲ್ಲದೆಂದು ನಿನ್ನ ವಿವೇಕ ಹೇಳುತ್ತದೆಯೋ, ಮಾರ್ಗದಲ್ಲಿ ನಿನ್ನ ಜೀವನರಥ ಸಾಗಲಿ ಮಂತ್ರದ ಬಗ್ಗೆ ಪ್ರತ್ಯೇಕವಾಗಿಯೇ ವಿಚಾರ ಮಾಡೋಣ. ಆದರೆ ಸಧ್ಯಕ್ಕೆ ಇಷ್ಟನ್ನು ನಾವು ಅರ್ಥ ಮಾಡಿಕೊಳ್ಳಬಹುದು. ವೇದದಲ್ಲಿ ನಮ್ಮ ಬದುಕಿಗೆ ಅಗತ್ಯವಾದ ಎಲ್ಲಾ ಮಾರ್ಗದರ್ಶನ ಲಭ್ಯವಿದ್ದರೂ ವೇದವು ತನ್ನನ್ನೇ ನಂಬಿ ಎಂದು ಎಲ್ಲೂ ಹೇಳಿಲ್ಲ.

ಮನುಷ್ಯನಿಗೆ ಉನ್ನತಿಹೊಂದಲು ಇದಕ್ಕಿಂತ ಇನ್ನೇನು ಬೇಕು? ಇಂತಹಾ ಆತ್ಮಸ್ಥೈರ್ಯವನ್ನು ತುಂಬುವಂತಹ ವೇದಮಂತ್ರವನ್ನು ಬದಿಗಿಟ್ಟು ಅದನ್ನು ಪಂಡಿತರ ಮಡಿವಂತ ಪಟ್ಟಿಗೆ ಸೇರಿಸಿ ಅದರಿಂದ ದೂರವಿದ್ದೀವಲ್ಲಾ! ಇದಕ್ಕಿಂತ ದೌರ್ಭಾಗ್ಯ ಮತ್ತೊಂದಿದೆಯೇ?

ಮಂತ್ರವನ್ನು ಅರ್ಥಮಾಡಿಕೊಳ್ಳುವಾಗ ನಮ್ಮ ಶಾಲೆಗಳಲ್ಲಿ ಮಕ್ಕಳಿಗೆ ನಮ್ಮ ಶಿಕ್ಷಕರುಗಳು ಪಾಠಮಾಡುವ ಚಿತ್ರವು ನನ್ನ ಕಣ್ಮುಂದೆ ಬಂತು.ಎಲ್ಲರಿಗೂ ವಿಚಾರ ಗೊತ್ತಿದೆಯಾದರೂ ಸಂದರ್ಭದಲ್ಲಿ ನಾನು ನನ್ನೆಲ್ಲಾ ಮಿತ್ರರ ಗಮನವನ್ನು ಇತ್ತ ಸೆಳೆಯಲು ಬಯಸುತ್ತೇನೆ.

    ನಮ್ಮ ಪ್ರೈಮರಿ ಶಾಲೆಗಳಿಗೆ ಹೋಗಿ ನೋಡಿ [ಕೆಲವು ಶಾಲೆಗಳು ಅಪವಾದವಿರಬಹುದು] ಅಲ್ಲಿನ ಶಿಕ್ಷಕರುಗಳ ಬಾಯಲ್ಲಿ ಬರುವ ಮಾತುಗಳನ್ನು ಕೇಳಿ ಇನ್ನು ಹತ್ತು ಜನ್ಮ ಎತ್ತಿ ಬಂದರೂ ನಿನಗೆ ಬುದ್ಧಿ ಬರುಲ್ಲಾ  ಅಂತಾ  ದಡ್ಡಾ ನೀನು. ಅವನನ್ನು ನೋಡು ಎಷ್ಟು ಸೊಗಸಾಗಿ ಇಂಗ್ಲೀಷಲ್ಲಿ  ಮಾತನಾಡುತ್ತಾನೆ! ಎಷ್ಟು ಶಿಸ್ತಾಗಿ ಅವರ ಮನೆಯಲ್ಲಿ ಬೆಳೆಸಿದ್ದಾರೆ, ನೋಡು! ನೀನು ಇದೀಯ ಮಂಕು ಮುಂಡೇದು!!

ವೇದವು ಹೇಳುತ್ತಿದೆ  ನೀನು ಸಮರ್ಥ, ನೀನು ತೇಜಸ್ವೀ, ನೀನು ಪರಿಶುದ್ಧ

    ಆದರೆ ನಮ್ಮ ಶಾಲೆಯ ಕೆಲವು ಶಿಕ್ಷಕರುಗಳು ಹೇಳುತ್ತಾರೆ  ನೀನು ದಡ್ಡ, ನೀನು ಪೆದ್ದ, ನೀನು ನಿಶ್ಪ್ರಯೋಜಕ ನೋಡಿ ಗ್ರಹಚಾರ ಹೇಗಿದೆಶಿಕ್ಷಕರುಗಳ ಹತ್ತಿರ ಛೀಮಾರಿ  ಹಾಕಿಸಿಕೊಳ್ಳುವ ವಿದ್ಯಾರ್ಥಿಯ ಮಾತಾ ಪಿತೃಗಳು ಶಾಲೆಯ ಭವ್ಯವಾದ ಕಟ್ಟಡ, ಫುಲ್ಸೂಟ್ ಹಾಕಿರುವ ಪ್ರಿನ್ಸಿಪಾಲ್ [ನಮ್ಮ ಕಾಲದಲ್ಲಿ ಕಾಲೇಜುಗಳಲ್ಲಿ ಮಾತ್ರ ಪ್ರಿನ್ಸಿಪಾಲರಿರುತ್ತಿದ್ದರು. ಹೈಸ್ಕೂಲ್ಗಳಿಗೆ ಇರುತ್ತಿದ್ದವರೂ ಹೆಡ್ ಮಾಸ್ಟರ್ ಮಾತ್ರವೇ. ಈಗೆಲ್ಲಾ ಪ್ರೈಮರಿ ಶಾಲೆಗೂ ಪ್ರಿನ್ಸಿಪಾಲರಿರುತ್ತಾರೆ] ಶಾಲೆಯ ಗೇಟ್ನಲ್ಲೊಬ್ಬ ಮಿಲಿಟರಿ ಉಡುಪು ಧರಿಸಿರುವ  ಗಾರ್ಡ್ಇವೆಲ್ಲಾ ಚಿತ್ರಣವನ್ನು ನೋಡಿ ಕೇಳಿದಷ್ಟು ಡೊನೇಶನ್ ಕೊಟ್ಟು ಮಕ್ಕಳನ್ನು ಶಾಲೆಗೆ ಸೇರಿಸಿ ನಂತರ ಶಿಕ್ಷಕರುಗಳಿಂದ ಮಕ್ಕಳಿಗೆ ಮಾನಸಿಕ ಹಿಂಸೆ ಕೊಡುವಂತಹ ಕೆಟ್ಟ ಶಿಸ್ತನ್ನು ಹೇರಿಸಿಕೊಳ್ಳುವುದು!! ಇದು  ಬೇಕಿತ್ತಾ? ಯಾವಾಗ ನಮ್ಮ ಪೋಷಕರುಗಳಿಗೆ ಬುದ್ಧಿ ಬರುತ್ತೋ ಗೊತ್ತಿಲ್ಲ.

ಮಕ್ಕಳನ್ನು ಅಯೋಗ್ಯರೆಂದು ಯಾರಾದರೂ ಶಿಕ್ಷಕರು ಹೇಳಿದರೆ ಅಂತವರು ಸುಭಾಷಿತವನ್ನು ಮೊದಲು ಅರ್ಥಮಾಡಿಕೊಳ್ಳಬೇಕು.